ramesh hassan – Peepal Media

ಹಾಸನದಲ್ಲಿ 2 ತಿಂಗಳಲ್ಲಿ ಹೃದಯಾಘಾತಕ್ಕೆ 15ಕ್ಕೂ ಹೆಚ್ಚು ಮಂದಿ ಸಾವು
ಹಾಸನ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಸತತ 12 ಜನರು ಹೃದಯಾಘಾತಕ್ಕೆ ಬಲಿಯಾಗಿರುವುದು ಇಡೀ ರಾಜ್ಯವನ್ನು ಬಿಚ್ಚಿ ಬೀಳಿಸಿದೆ‌ ಮತ್ತು ಹಾಸನದ ಜನತೆಯೂ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ವಯಸ್ಸು 12ರಲ್ಲಿ 20ರಲ್ಲಿ 30 ರಲ್ಲಿ ಸಣ್ಣ ವಯಸ್ಸಿನ ಯುವಜನತೆ ಹೃದಯಘಾತಕ್ಕೆ ಬಲಿಯಾಗುತ್ತಿರುವುದು ಎಲ್ಲರ ನಿದ್ದೆಗೆಡಿಸಿದೆ, ಹೃದಯಾಘಾತ ಸಾಮಾನ್ಯವಾಗಿ ವಯಸ್ಕರಲ್ಲಿ ಬಿಪಿ, ಅತಿ ಹೆಚ್ಚು ಮಧ್ಯಪಾನ, ಧೂಮಪಾನ ಇಂತಹ ಸಮಸ್ಯೆಗಳಲ್ಲಿ ಬಲಿಯಾಗಿರುವ ಉದಾರಣೆಗಳಿವೆ ಆದರೆ 20 ವರ್ಷಕ್ಕಿಂತ ಒಳಪಟ್ಟ ಮಕ್ಕಳು ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಜಿಲ್ಲೆಯಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಹೃದಯಾಘಾತದಿಂದ 15 ಜನರ ಸಾವಾದಂತಾಗಿದೆ. ಈ ಹೃದಯಾಘಾತಗಳು ಹಾಸನ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಆಗಿರುವುದಂತೂ ಸತ್ಯ ಆದರೆ ಈ ಹೃದಯಗತಕ್ಕೆ ಸಂಬಂಧಿಸಿದಂತೆ ಸಂಸದರ ನೇತೃತ್ವದಲ್ಲಿ Himes ಅಧಿಕಾರಿಗಳು ಸಂಶೋಧನಾ ವರದಿಯನ್ನು ನೀಡಿದ್ದಾರೆ, ಆ ವರದಿಯ ಪ್ರಕಾರ

ಹೃದಯಾಘಾತದ ಸಾವಿಗೆ ಕಾರಣಳೇನೆಂದರೆ

ಧೂಮಪಾನ

ಮದ್ಯಪಾನ

ಕುಟುಂಬದಲ್ಲಿನ ಅನುವಂಶಿಯ ಖಾಯಿಲೆಗಳು

ಬೇರೆ ಬೇರೆ ಖಾಯಿಲೆಗಳಿಂದ ಬಳಲುತ್ತಾ ಇದ್ದದ್ದು ಹೃದಯಾಘಾತಕ್ಕೆ ಕಾರಣ

ವಿಮಲ್, ಗುಟ್ಕಾ ಸೇವನೆ

ಈ ಮೇಲ್ಕಂಡ ಕಾರಣಗಳನ್ನು hims ಅಧಿಕಾರಿಗಳು ನೀಡಿರುತ್ತಾರೆ

ಬಾಳಿ ಬದುಕಬೇಕಾದವರೇ ಅರ್ಧಕ್ಕೇ ಜೀವನದ ಆಟ ಮುಗಿಸುತ್ತಿದ್ದಾರೆ ಬೇಲೂರು ಪಟ್ಟಣದಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿದ್ದ ನಿಶಾದ್ (35) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಹಾಸನ ನಗರದ ಸತ್ಯಮಂಗಲ ಬಡಾವಣೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ಚೇತನ್ (38) ಊಟ ಮಾಡುತ್ತಿದ್ದಾಗಲೇ ಕುಸಿದುಬಿದ್ದು ಇಹಲೋಕ ತ್ಯಜಿಸಿದ್ದಾರೆ. ಅನಾಥ ಶವಗಳ ಅಂತ್ಯಕ್ರಿಯೆ ಮಾಡಿ ಹೃದಯವೈಶಾಲ್ಯತೆ ಮೆರೆದಿದ್ದ ನಿಶಾದ್ ನಿಶಾದ್ ಅಹ್ಮದ್ ಸಮಾಜ ಸೇವಕರಾಗಿದ್ದು, ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅನಾಥ ಶವಗಳ ಅಂತ್ಯಕ್ರಿಯೆ ಮಾಡಿ ಹೃದಯವೈಶಾಲ್ಯತೆ ಮೆರೆದಿದ್ದರು. ಅಂಥಾ ಯವಕನೇ ಈಗ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಬೇಲೂರು ಪಟ್ಟಣದಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿದ್ದ ನಿಶಾದ್ ಕುಟುಂಬಕ್ಕೆ ಆಧಾರವಾಗಿದ್ದ.

ಊಟ ಮಾಡುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್

ಇನ್ನು ಚೇತನ್ ಎಂಬವರು ರಾತ್ರಿ ಮನೆಯಲ್ಲಿ ಊಟ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾಸನ ಜಿಲ್ಲೆಯಲ್ಲಿ ಸಾಲು ಸಾಲು ಯುವಕ ಯುವತಿಯರು ಹಾಗೂ ಮಧ್ಯ ವಯಸ್ಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಆತಂಕ ಹೆಚ್ಚಿಸಿದೆ.

ಹೃದಯಾಘಾತ ಪ್ರಕರಣಗಳನ್ನು ಗಮನಿಸುವುದಾದರೆ

ಮೇ 20: ಅರಕಲಗೂಡು ತಾಲೂಕಿನ ಅಭಿಷೇಕ್ ಸಾವು
ಮೇ 20: ಹೊಳೆನರಸೀಪುರದ 20 ವರ್ಷದ ವಿದ್ಯಾರ್ಥಿನಿ ಸಂದ್ಯಾ ಸಾವು.
ಮೇ 28: ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕವನ ಸಾವು.
ಜೂನ್ 11: ಹೊಳೆನರಸೀಪುರದ ಯುವಕ ನಿಶಾಂತ್ ಬಲಿ.
ಜೂನ್ 12: ಬಸ್ನಲ್ಲಿ ಸಾರಿಗೆ ಸಿಬ್ಬಂದಿ ನಾಗಪ್ಪ ಸಾವು .
ಜೂನ್ 12: ನಗರಸಭೆ ಮಾಜಿ ಸ. ನೀಲಕಂಠಪ್ಪ, ಸಾವು
ಜೂನ್ 13: ಕಾರಲ್ಲೇ ದೇವರಾಜ್ ಎಂಬವರು ಸಾವು.
ಜೂನ್ 13: ಸತೀಶ್ ಎಂಬವರ ಹಠಾತ್ ಸಾವು.
ಜೂನ್ 14: ಕಾಂತರಾಜು ಎಂಬವರ ಸಾವು.
ಜೂನ್ 18: ಅರಣ್ಯ ಇಲಾಖೆ ನೌಕರ ನವೀನ್ ಸಾವು.
ಜೂನ್ 21: ನಿಶಾದ್ ಅಹ್ಮದ್, ಚೇತನ್ ಸಾವು
ನೆನ್ನೆಯಷ್ಟೆ ಪೆನ್ಷನ್‌ ಮೊಹಲ್ಲಾದ ಮಂಜುನಾಥ್ (51) ಇವರು ಕೂಡ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಒಟ್ಟಾರೆ ಹಾಸನ ಜಿಲ್ಲೆಯಲ್ಲಿ 15 ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವುದು ದುರಂತದ ಸಂಗತಿಯಾಗಿದೆ.

ಹಾಸನ ಜಿಲ್ಲಾ ಆರೋಗ್ಯಾಧಿಕಾರಿ ಪ್ರಕಾರ

ಹಾಸನ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 507 ಜನರಿಗೆ ಹೃದಯಾಘಾತ ಸಂಭವಿಸಿದೆ. ಈ ಪೈಕಿ 20 ರಿಂದ 30 ವರ್ಷ ವಯಸ್ಸಿನ 14 ಜನರು ಮೃತಪಟ್ಟಿದ್ದಾರೆ. 30-40 ವಯಸ್ಸಿನ 40 ಜನ ಹಾಗೂ 40 ವರ್ಷ ಮೇಲ್ಪಟ್ಟ 136 ಜನರಿಗೆ ಹೃದಯಾಘಾತ ಸಂಭವಿಸಿದೆ. ಎರಡು ವರ್ಷಗಳಲ್ಲಿ ಹೃದಯಾಘಾತ ದಿಂದ ಒಟ್ಟು 140 ಜನರು ಸಾವಿಗೀಡಾಗಿದ್ದಾರೆ.
ಯುವ ಜನರಲ್ಲಿ ಹೃದಯಾಘಾತ ತಡೆಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅರೋಗ್ಯ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಯುವ ಜನರಲ್ಲಿ ಹೆಚ್ಚುತ್ತಿರುವ ದುಶ್ಚಟಗಳು, ಅಸಮತೊಲನದ ಅಹಾರ ಸೇವನೆ, ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಹೃದಯಾಘಾತ ತಡೆಗೆ ಅರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಮಾಡಲು ಸಿದ್ಧತೆ ನಡೆಸಲಾಗಿದೆ. ಅರೋಗ್ಯ ಕಾರ್ಯಕರ್ತೆಯರ ಮೂಲಕ ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಶಾಲೆ ಕಾಲೇಜುಗಳಲ್ಲಿ ಕೂಡ ಹೃದಯ ಅರೋಗ್ಯದ ತಪಾಸಣೆ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅದಿಕಾರಿ ಡಾ. ಅನಿಲ್ ತಿಳಿಸಿದ್ದಾರೆ.

ಹಿಮ್ಸ್ ಅಧಿಕಾರಿಗಳ ಪ್ರಕಾರ ಧೂಮಪಾನ, ಮಧ್ಯಪಾನ ಲೈಫ್ ಸ್ಟೈಲ್ ಇವೆಲ್ಲವೂ ಹೃದಯಾಘಾತಕ್ಕೆ ಕಾರಣ ಎಂದು ಹೇಳುತ್ತಿದ್ದಾರೆ ಆದರೆ ಇಲ್ಲಿ ಗಮನ ಗಮನಿಸಬೇಕಾದ ಅಂಶ ಏನೆಂದರೆ ಕೇವಲ 12 ವರ್ಷ ಮತ್ತು 20 ವರ್ಷದೊಳಗಿನ ವರ ಸಾವುಗಳು ಚಿಂತೆಗೀಡು ಮಾಡಿದೆ ಏಕೆಂದರೆ ಸಣ್ಣ ಮಕ್ಕಳ ಮಕ್ಕಳಲ್ಲಿ ಯಾವುದೇ ಧೂಮಪಾನ ಮಧ್ಯಪಾನ ಬೇರೆ ಸಮಸ್ಯೆಗಳು ಕಾಣುವುದಿಲ್ಲ ಆದರೆ ಸಣ್ಣ ಮಕ್ಕಳ ಮತ್ತು ಯುವಜನತೆಯಲ್ಲಿ ಕಾಣುತ್ತಿರುವ ಹೃದಯಘಾತ ಸಮಸ್ಯೆಗಳು ಹೃದಯಘಾತಗಳು ಆಗುತ್ತಿವೆ ಎಂದರೆ ಅದು ಅನುಮಾನದ ಸಂಗತಿ ಆಗಿದೆ ಜೊತೆಗೆ ಕಳೆದ ಎರಡು ತಿಂಗಳಗಳಲ್ಲಿ ಸಾವಿಗೀಡಾದ 15 ಜನರ ಪಿಎಮ್ ರಿಪೋರ್ಟ್ ಅಥವಾ ಪೋಸ್ಟ್ ಮಟನ್ ರಿಪೋರ್ಟ್ ಕೂಡ ನಾವು ಗಮನಿಸಬೇಕಾಗುತ್ತದೆ.
ಜಿಲ್ಲೆಯಾದ್ಯಂತ ಯುವಜನತೆಯ ಹಾಗೂ ಶಾಲಾ-ಕಾಲೇಜುಗಳಲ್ಲಿ ಅಧ್ಯಯನ ನಡೆಸುವುದು ಮತ್ತು ಆರೋಗ್ಯ ತಪಾಸಣೆ ನಡೆಸಿ ಹೃದಯಘಾತಕ್ಕೆ ಕಾರಣಗಳು ಏನೆಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕಿದೆ.

ರಮೇಶ್‌ ಹಾಸನ್‌
7204959902