Randeep Singh Surjewala – Peepal Media

ಕೆಪಿಸಿಸಿ ಪುನಾರಚನೆ ಪ್ರಸ್ತಾವನೆ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ಧಾರವೇನು?
ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಪದಾಧಿಕಾರಿಗಳ ಪುನಾರಚನೆಯ ಚರ್ಚೆ ನಡೆದಿದೆ. ಹೊಸ ಮತ್ತು ಪಕ್ಷ ಕಟ್ಟುವ ಆಸಕ್ತಿ ಇರುವ ಮುಖಗಳಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಕೆಪಿಸಿಸಿ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆದಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ( KPCC) ಈಗಾಗಲೇ ಹಳೆಯ ಮುಖಗಳಿಗೆ ಮಣೆ ಹಾಕಿದ್ದು, ಸಮಿತಿ ಹಾಗೂ ಉಪ ಸಮಿತಿಗಳ ಪುನರ್ ರಚನೆ ಬಗ್ಗೆ ಚರ್ಚೆ ನಡೆಯಲಿದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಕೆಪಿಸಿಸಿ ಪುನರ್ ರಚನೆ ಪ್ರಸ್ತಾವನೆ ಇಡುತ್ತೇವೆ ಎಂದು ಸುರ್ಜೇವಾಲಾ ಹೇಳಿದ್ದಾರೆ.

ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಕೆಪಿಸಿಸಿ ಸಂಘಟನಾ ವಿಭಾಗದ ಪ್ರಮುಖ ಪದಾಧಿಕಾರಿ ಸ್ಥಾನಗಳಲ್ಲಿ ಇರುವ ಅನೇಕರು ಶಾಸಕರಾಗಿದ್ದಾರೆ. ಸಚಿವ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಪಕ್ಷದಲ್ಲಿ ಎರಡೆರಡು ಅಧಿಕಾರ ಅನುಭವಿಸುವುದಕ್ಕಿಂತ ಹೊಸ ಆಸಕ್ತಿ ಇರುವ ಯುವ ಮುಖಗಳಿಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

ಪಕ್ಷ ಬೆಳೆಸುವ ನಿಟ್ಟಿನಲ್ಲಿ ಕೆಪಿಸಿಸಿ ಪುನರ್ ರಚನೆ ಅನಿವಾರ್ಯ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಮುಂದಿನ ದಿನಗಳಲ್ಲಿ ಪಕ್ಷದ ವ್ಯಾಪ್ತಿ ವಿಸ್ತರಿಸುವ ಹಿನ್ನೆಲೆಯಲ್ಲಿ ಚರ್ಚೆ ನಡೆದಿದೆ. ಇದು ಅನಿವಾರ್ಯ ಎಂಬುದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆಗೆ ಚರ್ಚಿಸಿದ್ದೇನೆ ಎಂದು ಅವರು ಹೇಳಿದರು.

ಈ ಎಲ್ಲಾ ಕಾರಣದಿಂದ ಶೀಘ್ರವೇ ಕೆಪಿಸಿಸಿ ಪುನಾರಚನೆ ಆಗಲಿದ್ದು, ಯುವ ಮುಖಗಳಿಗೆ ಹೊಣೆಗಾರಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ನೀಡಲಿದೆ ಎಂಬುದಾಗಿ ತಿಳಿದು ಬಂದಿದೆ. ಅಲ್ಲದೇ ಪಕ್ಷದ ಹುದ್ದೆಯಿಂದ ಜನಪ್ರತಿನಿಧಿಗಳಿಗೆ ಕೋಕ್ ಕೂಡ ನೀಡಲಾಗುತ್ತಿದೆ.