rape case – Peepal Media

ಗಂಗಾವತಿಯಲ್ಲಿ ಪ್ರವಾಸಿಗರ ಮೇಲೆ ದಾಳಿ , ಇಬ್ಬರು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ, ಸ್ನೇಹಿತನ ಹತ್ಯೆ
ಗಂಗಾವತಿ: ಇಸ್ರೇಲ್ ಮೂಲದ ಯುವತಿ ಹಾಗೂ ತಮಿಳುನಾಡು ಮೂಲದ ಯುವತಿಯ ಮೇಲೆ ದಾಳಿ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಭೀಕರ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಮಾರ್ಚ್ 6, ಗುರುವಾರ ಮಧ್ಯರಾತ್ರಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯುವತಿಯರ ಜೊತೆಗೆ ಇದ್ದ ಮೂವರು ಯುವಕರ ಮೇಲೂ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಹತ್ತಿರದ ಕಾಲುವೆಗೆ ಎಸೆದಿದ್ದಾರೆ. ಮೂವರಲ್ಲಿ ಇಬ್ಬರು ಈಜಿ ಬಚಾಗಿದ್ದು, ಒಬ್ಬ ಯುವಕನ ಶರೀರ ಮಾರ್ಚ್ 8ರ ಬೆಳಗ್ಗೆ ಪತ್ತೆಯಾಗಿದೆ.

ಗುರುವಾರ ತಡರಾತ್ರಿ ಸಾನಾಪುರ ಬಳಿಯ ಹನುಮನಹಳ್ಳಿ ಸಮೀಪದ ದುರ್ಗಮ್ಮ ಗುಡಿಯ ಬಳಿಯಲ್ಲಿರುವ ತುಂಗಭದ್ರಾ ಕಾಲುವೆ ಸಮೀಪ ನಕ್ಷತ್ರ ವೀಕ್ಷಣೆಗೆಂದು ಒಬ್ಬ ಅಮೆರಿಕದ ಯುವಕ, ಇಸ್ರೇಲ್‌ನ ಯುವತಿ ಹಾಗೂ ಭಾರತದ ಇಬ್ಬರು ಪ್ರವಾಸಿಗರೊಂದಿಗೆ ಸ್ಥಳೀಯವಾಗಿ ಹೋಮ್ ಸ್ಟೇ ನಡೆಸುತ್ತಿರುವ ಯುವತಿ ಕೂಡ ತೆರಳಿದ್ದರು.

ಈ ವೇಳೆ ಸ್ಥಳಕ್ಕೆ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು, ‘ಪೆಟ್ರೋಲ್ ಬಂಕ್ ಎಲ್ಲಿದೆ?’ ಎಂದು ಕನ್ನಡದಲ್ಲಿ ಸ್ಥಳೀಯ ಯುವತಿಯೊಂದಿಗೆ ಪ್ರಶ್ನಿಸಿದ್ದಾರೆ‌.‌ ಈ ವೇಳೆ ಉತ್ತರಿಸಿದ್ದ ಯುವತಿ, ಸಾನಾಪುರಕ್ಕೆ ಹೋಗುವಂತೆ ಸಲಹೆ ನೀಡಿದ್ದಾರೆ. ಆದರೆ, ಆ ಬಳಿಕವೂ ಅಲ್ಲಿಂದ ಕದಲದೆ, ₹100 ಕೊಡುವಂತೆ ಒತ್ತಾಯಿಸಿದ್ದಾರೆ.

ನಮ್ಮಲ್ಲಿ ದುಡ್ಡಿಲ್ಲ ಎಂದು ಸಮಜಾಯಿಷಿ ನೀಡಿದಾಗ ತಗಾದೆ ತೆಗೆದ ಮೂವರು ದುಷ್ಕರ್ಮಿಗಳು, ತಂಡದಲ್ಲಿದ್ದ ವಿದೇಶಿ ಯುವಕನ ಸಹಿತ ಮೂವರು ಯುವಕರಿಗೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಆ ಬಳಿಕ ಕಾಲುವೆಗೆ ದೂಡಿದ್ದಾರೆ.

ಯುವಕರನ್ನು ಕಾಲುವೆಗೆ ದೂಡಿದ ಬಳಿಕ ವಿದೇಶಿ ಯುವತಿ ಹಾಗೂ ಸ್ಥಳೀಯ ಯುವತಿಗೂ ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿದ್ದಲ್ಲದೇ, ಇಬ್ಬರ ಮೇಲೂ ಅತ್ಯಾಚಾರ ನಡೆಸಿದ್ದಾರೆ.

ಕಾಲುವೆಗೆ ಬಿದ್ದಿದ್ದ ವಿದೇಶಿ ಯುವಕನ ಸಹಿತ ಇಬ್ಬರು ಭಾರತೀಯ ಪ್ರವಾಸಿಗರ ಪೈಕಿ ಓರ್ವ ಯುವಕ ಹಾಗೂ ವಿದೇಶಿ ಪ್ರವಾಸಿಗ ಈಜಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಆದರೆ, ಒಡಿಶಾ ಮೂಲದ ಡಿ ಬಾಸ್ ಎಂಬ ಶುಕ್ರವಾರದ ವರೆಗೂ ನಾಪತ್ತೆಯಾಗಿದ್ದು, ಶನಿವಾರ ಬೆಳಗ್ಗೆ ಅವರ ಶರೀರ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಇಸ್ರೇಲ್‌ ಪ್ರಜೆಯಾದ ಯುವತಿಯು 27 ವರ್ಷದವರಾಗಿದ್ದು, ಇನ್ನೊಬ್ಬ ಯುವತಿಯು 29 ವರ್ಷದ ತಮಿಳುನಾಡು ಮೂಲದವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು.

ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಸಂತ್ರಸ್ತ ಸ್ಥಳೀಯ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಾಲುವೆಗೆ ಬಿದ್ದಿದ್ದ ವಿದೇಶಿ ಯುವಕರಲ್ಲಿ ಒಬ್ಬರು ಅಮೆರಿಕದವರಾಗಿದ್ದು, ಇನ್ನೊಬ್ಬ ಯುವಕ ಮಹಾರಾಷ್ಟ್ರ ಮೂಲದವರಾಗಿದ್ದಾರೆ ಎಂದು ಪೊಲೀಸರು ಗುರುತಿಸಿದ್ದಾರೆ. ಸದ್ಯ ಕಾಲುವೆಗೆ ಬಿದ್ದು ಬಳಿಕ ನಾಪತ್ತೆಯಾಗಿದ್ದ ಯುವಕ ಒಡಿಶಾ ರಾಜ್ಯದ ಯುವಕ ಎಂದು ಗುರುತಿಸಲಾಗಿದೆ.

ಗುರುವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ನಗರಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಪ್ರಕಾಶ್ ಮಾಳೆ, ಶ್ವಾನದಳ ಬಂದಿದ್ದು ತಪಾಸಣೆ ನಡೆಸಿದ್ದಾರೆ.

ಘಟನಾ ಸ್ಥಳದಲ್ಲಿ ದ್ವಿಚಕ್ರ ವಾಹನ, ಹ್ಯಾಂಡ್ ಬ್ಯಾಗ್‌ ಲಭಿಸಿವೆ. ಹ್ಯಾಂಡ್‌ಬ್ಯಾಗ್‌ನಲ್ಲಿ ಕ್ಯಾಮೆರಾ, ಪವರ್‌ ಬ್ಯಾಂಕ್, ಪೆನ್ನು, ಮುರಿದು ಬಿದ್ದ ಗಿಟಾರ್, ಕೈ ವಸ್ತ್ರ, ಸಿಗರೇಟ್, ರಕ್ತದ ಕಲೆ ಇರುವ ಬಟ್ಟೆ ಲಭ್ಯವಾಗಿವೆ. ಆರೋಪಿಗಳ ಪತ್ತೆಗಾಗಿ ಆರುತಂಡಗಳನ್ನು ರಚಿಸಿರುವುದಾಗಿ ಕೊಪ್ಪಳ ಎಸ್ಪಿ ತಿಳಿಸಿದ್ದಾರೆ.

ಯಾದಗಿರಿ ಅತ್ಯಾಚಾರ ಪ್ರಕರಣ| ಅತ್ಯಾಚಾರ ವಿಚಾರದಲ್ಲೂ ಬಡವರಿಗೆ ಒಂದು ನ್ಯಾಯ, ಉಳ್ಳವರಿಗೆ ಮತ್ತೊಂದು ನ್ಯಾಯ: ಜಿ. ರಾಮಕೃಷ್ಣ
ಯಾದಗಿರಿ ಜಿಲ್ಲೆಯಲ್ಲಿ ಚಿಂದಿ ಆಯಲು ತೆರಳಿದ್ದ ಬುಡ್ಗ ಜಂಗಮ ಅಲೆಮಾರಿ ಸಮುದಾಯದ ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಫೆಬ್ರವರಿ 25, ಮಂಗಳವಾರ ಸಂಜೆ 5ಗಂಟೆಗೆ ವಿವಿಧ ಜನಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಹಿರಿಯ ಚಿಂತಕ ಜಿ ರಾಮಕೃಷ್ಣ ಅವರು ಮಾತನಾಡಿ, “ಈ ದೇಶದಲ್ಲಿ ನಡೆಯುತ್ತಿರುವ ಅನಾಚಾರ, ಅತ್ಯಾಚಾರ ಗಮನಿಸಿದರೆ ನಾವು ಮನುಷ್ಯರಾಗಿ ಬದುಕುತ್ತಿದ್ದೇವಾ ಎಂಬ ಅನುಮಾನ ಮೂಡುತ್ತಿದೆ.

ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣು ಮಗಳು ನದಿಯಲ್ಲಿ ಸ್ನಾನ ಮಾಡಲು ಇಳಿದಳೆಂದು ಕ್ರೂರಿಗಳು ಆಕೆಯನ್ನು ಬಡಿಗೆಗಳಿಂದ ಹೊಡೆದು ಸಾಯಿಸಿದ್ದರು. ಇಂಥವರಿಗೆ ರಕ್ಷಣೆ ಕೊಡುವ ಸಂಸ್ಕೃತಿ ನಮ್ಮ ದೇಶದಲ್ಲಿ ಇದೆ. ಇಂತಹ ಸಮಾಜದಲ್ಲಿ ನಾವಿನ್ನೂ ಫ್ಯಾಸಿಸ್ಟ್‌ ಆಗಿದ್ದೀವಾ, ಅರೆ ಫ್ಯಾಸಿಸ್ಟ್ ಆಗಿದ್ದೀವಾ, ಸೆಮಿ ಫ್ಯಾಸಿಸ್ಟ್ ಆಗಿದ್ದೀವಾ ಎಂದು ಚರ್ಚೆ ಮಾಡುತ್ತಿದ್ದೇವೆ.

ದೇಶದೆಲ್ಲೆಡೆ ಈಗ ಪುನೀತರಾದ ಜನರೇ ಇರುವುದು. ಗಂಗೆಯಲ್ಲಿ ಸ್ನಾನ ಮಾಡಿ ಬಂದಿದ್ದಾರೆ. ಐವತ್ತು ಕೋಟಿ ಜನರಲ್ಲಿ ನಲುವತ್ತು ಕೋಟಿ ಜನರಿಗೆ ಒಂದು ತರಹದ ನೀರು, ಇನ್ನು ಹತ್ತು ಕೋಟಿ ಜನರಿಗೆ ಒಂದು ತರಹದ ನೀರು. ನಾರಾಯಣ ಮೂರ್ತಿ, ಸುಧಾಮೂರ್ತಿ ತರದವರಿಗೆ ಬೇಲಿ ಕಟ್ಟಿ ಚೆನ್ನಾಗಿ ನೀರು ಹರಿಯುವ ಜಾಗ, ಸಾಮಾನ್ಯ ಜನರಿಗೆ ಚರಂಡಿ ನೀರು ಸೇರುವ ಜಾಗ.

ಇದೇ ರೀತಿ ಈ ಅತ್ಯಾಚಾರ ವಿಚಾರದಲ್ಲೂ ಬಡವರಿಗೆ ಒಂದು ನ್ಯಾಯ, ಉಳ್ಳವರಿಗೆ ಮತ್ತೊಂದು ನ್ಯಾಯ ಎಂಬಂತಾಗಿದೆ. ಯಾದಗಿರಿಯೇನು ಬೆಂಗಳೂರಲ್ಲ, ಪುಟ್ಟ ಹಳ್ಳಿ. ಆರೋಪಿಗಳನ್ನು ಪತ್ತೆ ಹಚ್ಚುವುದು ಅಷ್ಟೇವೇನು ಕಷ್ಟ ಅಲ್ಲ. ಆದರೆ, ಇದು ಅಧಿಕಾರಿಗಳಿಗೆ ಬಡವರ ಮೇಲೆ ಇರುವ ಅಸಡ್ಡೆ ತೋರಿಸುತ್ತದೆ” ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ದಲಿತ ಮುಖಂಡ ವಡ್ಡಗೆರೆ ನಾಗರಾಜಯ್ಯ, “ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆ ನಡೆದು ಹತ್ತು ದಿನಗಳಾಗಿವೆ. ಆದರೆ, ಈವರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ, ಇದು ಹಲವು ಅನುಮಾನಗಳಿವೆ ಎಡೆ ಮಾಡಿಕೊಟ್ಟಿದೆ.

ಕರ್ನಾಟಕ ಎಂದಲ್ಲ, ಇಡೀ ದೇಶದಲ್ಲಿ ಪ್ರಸ್ತುತ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ನಡೆಯುತ್ತಿದೆ. ಆದರೆ, ಸರ್ಕಾರಗಳು, ಪೊಲೀಸರು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಗಳ ಪರ ನಿಲ್ಲಬೇಕು. ಅತ್ಯಾಚಾರವೆಸಗಿ, ಕೊಲೆಗೈದವರನ್ನು ತಕ್ಷಣ ಬಂಧಿಸಬೇಕು” ಎಂದು ಒತ್ತಾಯಿಸಿದರು.

ಬರಹಗಾರ, ದಲಿತ ಮುಖಂಡ ಹುಲಿಕುಂಟೆ ಮೂರ್ತಿ ಮಾತನಾಡಿ, “ಆರೋಪಿಗಳು ಸಂತ್ರಸ್ತರ ಮನೆಗಳ ಬಳಿ ಹೋಗಿ ಧಮ್ಕಿ ಹಾಕಿರುವುದು ಗೊತ್ತಾಗಿದೆ. ಆದರೆ, ಪೊಲೀಸರು ಆರೋಪಿಗಳು ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮಗೆ ಬಾಬಾ ಸಾಹೇಬರ ಮೇಲೆ ನಿಜಕ್ಕೂ ಗೌರವ ಇದ್ದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಮನವಿ ಮಾಡಿದರು.

“ಇಡೀ ದೇಶದಲ್ಲಿ ಯಾವುದೇ ಸರ್ಕಾರ, ಅಲೆಮಾರಿಗಳಿಗೆ ಇದುವರೆಗೆ ಯಾವುದೇ ರೀತಿಯಲ್ಲಿ ರಕ್ಷಣೆ ಕೊಟ್ಟಿಲ್ಲ, ಮನೆ ಕೊಟ್ಟಿಲ್ಲ. ಯಾಕೆ ಅಲೆಮಾರಿಗಳಾಗಿದ್ದಾರೆ ಎಂಬ ಮೂಲ ಪ್ರಶ್ನೆ ಕೇಳಬೇಕಾಗಿದೆ. ಯಾರೂ ಸರ್ಕಾರಗಳ ಮೇಲೆ ಒತ್ತಡ ಹಾಕುತ್ತಿಲ್ಲ.

ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ನಾವು ಯಾಕೆ ಹೀಗಿದ್ದೇವೆ? ನಾವೀಗ ಒಟ್ಟಾಗಿ ಅಲೆಮಾರಿಗಳಿಗೆ ಭೂಮಿ ಕೊಡಿ ನೌಕರಿ ಕೊಡಿ ಎಂದು ಕೇಳಬೇಕಿದೆ. ಯಾದಗಿರಿಯ ಅತ್ಯಾಚಾರ ಪ್ರಕರಣದಲ್ಲಿ ಅರೋಪಿಗಳ ಬಂಧನ ಸರ್ಕಾರದ ಕೈಯಲ್ಲಿ ಆಗಲ್ಲ ಅಂತಲ್ಲ, ಪೊಲೀಸರು ಮನಸ್ಸು ಮಾಡಿದರೆ ಆರೋಪಿಗಳನ್ನು ಬಂಧಿಸುವುದು ಕಷ್ಟವೇನಲ್ಲ. ಹಾಗಾಗಿ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು” ಎಂದು ಅಲೆಮಾರಿ ಸಮುದಾಯಗಳ ಹೋರಾಟಗಾರರು ಎಚ್ಚರಿಸಿದರು.

ಜೊತೆಗೆ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ದೇಶದೆಲ್ಲೆಡೆ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದ ಆಕ್ರೋಶ ಮತ್ತು ಅದಕ್ಕೆ ಸರ್ಕಾರ ಸ್ಪಂದಿಸಿ ರೀತಿಯಲ್ಲಿ ಬಡ, ದಲಿತ ಸಮುದಾಯಗಳ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಕೊಲೆ ನಡೆದಾಗ ಸ್ಪಂದಿಸದಿರುವುದು ದುರದೃಷ್ಟಕರ ಎಂದು ವಿವಿಧ ಸಂಘಟನೆಗಳ ಮುಖಂಡರು ವಿಷಾಧ ವ್ಯಕ್ತಪಡಿಸಿದರು.

ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ; ಪುರೋಹಿತ ತಂದೆ ವೆಂಕಟೇಶ್ ಕಾರಂತ ಪೊಲೀಸರ ವಶಕ್ಕೆ
ಪುರೋಹಿತ ಕಸುಬು ಮಾಡಿಕೊಂಡಿದ್ದ ವೆಂಕಟೇಶ ಕಾರಂತ ಎಂಬಾತ ತನ್ನ ಮಗಳ ಮೇಲೆಯೇ ನಿರಂತರ ಅತ್ಯಾಚಾರ ಎಸಗಿದ ಪ್ರಕರಣದ ಅಡಿಯಲ್ಲಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಭಾಗದ ತುಂಬೆ ಎಂಬಲ್ಲಿ ಇಂತಹದ್ದೊಂದು ಪೈಶಾಚಿಕ ಕೃತ್ಯ ನಡೆದಿದೆ.

ವೆಂಕಟೇಶ್ ಕಾರಂತ ಎಂಬ ವ್ಯಕ್ತಿ ಸಂತ್ರಸ್ತ ಬಾಲಕಿಯ ಮಲತಂದೆ ಆಗಿದ್ದಾನೆ. ಬಾಲಕಿಯ ತಂದೆ ಅಪಘಾತದಲ್ಲಿ ಮೃತರಾದ ಹಿನ್ನೆಲೆಯಲ್ಲಿ ವೆಂಕಟೇಶ ಕಾರಂತ ಎಂಬ ಪುರೋಹಿತನನ್ನು ಬಾಲಕಿಯ ತಾಯಿ ವಿವಾಹವಾಗಿದ್ದಾರೆ. ಹಾಗಾಗಿ ತಾಯಿಯ ಆಸರೆಯಲ್ಲಿದ್ದ ಬಾಲಕಿಯನ್ನೂ ಎರಡನೇ ಮದುವೆಯ ನಂತರವೂ ತಾಯಿ ತನ್ನ ಜೊತೆಗೇ ಬಿಟ್ಟುಕೊಂಡಿದ್ದರು.

ಮಲತಂದೆ ವೆಂಕಟೇಶ ಕಾರಂತ ಅಪ್ರಾಪ್ತ ಬಾಲಕಿಯನ್ನು ನಿರಂತರ 4 ತಿಂಗಳುಗಳಿಂದಲೂ ಅತ್ಯಾಚಾರ ಎಸಗುತ್ತಿರುವುದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಸಹಜವಾಗಿ ಗರ್ಭವತಿಯಾದ ಹಿನ್ನೆಲೆಯಲ್ಲಿ ಮಲತಂದೆಯ ಇಂತಹ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.

ಸಧ್ಯ ಅತ್ಯಾಚಾರಿ ತಂದೆ ವೆಂಕಟೇಶ ಕಾರಂತ ಬಂಟ್ವಾಳ ಪೊಲೀಸರ ಅತಿಥಿಯಾಗಿದ್ದಾನೆ. ಸಂಬಂಧಿಗಳು ಕೊಟ್ಟ ದೂರಿನ ಅನ್ವಯ ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯುಪಿ| ಅತ್ಯಾಚಾರದ ಬಳಿಕ ವಿದ್ಯಾರ್ಥಿನಿ ಸಾವು: ಆರೋಪಿ ಬಂಧನ
ಉತ್ತರ ಪ್ರದೇಶ: ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯನ್ನು ಬಂಧಿಸಿರುವ ಘಟನೆ, ಉತ್ತರ ಪ್ರದೇಶದ ಉನ್ನಾವೊ ನಗರದಲ್ಲಿ ನಡೆದಿದೆ.

ಪೊಲೀಸರ ಪ್ರಕಾರ, ಬಂಧಿತ ವ್ಯಕ್ತಿ ರಾಜ್ ಗೌತಮ್, ಸಂತ್ರಸ್ತೆಯು ಒಬ್ಬಳೇ ಇದ್ದಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿಸಿದ್ದಾರೆ.

ಈ ಕುರಿತು ತನಿಖೆ ನಡೆಸಿದಾಗ, ಆ ವ್ಯಕ್ತಿಯು ಕೃತ್ಯಕ್ಕೆ ಮೊದಲು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮಾತ್ರೆಯನ್ನು ತೆಗೆದುಕೊಂಡಿದ್ದಾನೆ ಎಂದು ಹೇಳಿಕೊಂಡಿದ್ದಾನೆ. ಸಂತ್ರಸ್ತೆಯ ಪ್ರತಿಭಟನೆಯ ಹೊರತಾಗಿಯೂ, ಅವಳು ಮೂರ್ಛೆಹೋಗುವವರೆಗೆ ಮತ್ತು ಅವಳ ಖಾಸಗಿ ಭಾಗಗಳಿಂದ ರಕ್ತಸ್ರಾವವಾಗುವವರೆಗೂ ಅವನು ಆಕೆಯ ಮೇಲೆ ಅತ್ಯಾಚಾರವನ್ನು ಮುಂದುವರಿಸಿದ್ದು, ನಂತರ ಭಯಭೀತನಾಗಿ ಬಿಟ್ಟು ಓಡಿ ಹೋಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಘಟನೆ ನಡೆದು ಸ್ವಲ್ಪ ಸಮಯದ ನಂತರ ಅವಳ ತಂಗಿ ಮನೆಗೆ ಹಿಂತಿರುಗಿದ್ದು, ನೋಡಿದಾಗ ಸಂತ್ರಸ್ತೆಯು ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅತಿಯಾದ ರಕ್ತಸ್ರಾವದಿಂದ ಮಹಿಳೆಯು ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.

ಘಟನೆ ಬಳಿಕ ಸಂತ್ರಸ್ತೆಯ ಮೊಬೈಲ್ ಫೋನ್ ಡೇಟಾದ ಆಧಾರದ ಮೇಲೆ ಗೌತಮ್ ನನ್ನು ಬಂಧಿಸಲಾಗಿದ್ದು, ಸಂತ್ರಸ್ತೆ ಒಬ್ಬಳೇ ಇದ್ದಾಳೆ ಎಂದು ತಿಳಿದ ನಂತರ, ಅವನು ಅವಳ ಮನೆಗೆ ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವದಾಗಿ  ಗೌತಮ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಮಾಹಿತಿ ನೀಡಿದ್ದಾರೆ.

ಅತ್ಯಾಚಾರ: ಸಿಡ್ನಿಯಲ್ಲಿ ಧನುಷ್ಕ ಗುಣತಿಲಕ ಬಂಧನ
ಸಿಡ್ನಿ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಕಪ್ಪುಚುಕ್ಕೆಯೆಂಬಂತೆ, ಶ್ರೀಲಂಕ ಆಟಗಾರ ಧನುಷ್ಕ ಗುಣತಿಲಕ ಅತ್ಯಾಚಾರದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

ಸಿಡ್ನಿಯ ಮಹಿಳೆಯೊಬ್ಬರು ನೀಡಿರುವ ದೂರಿನ ಆಧಾರದಲ್ಲಿ 29 ವರ್ಷದ ಶ್ರೀಲಂಕ ಬ್ಯಾಟ್ಸ್ ಮನ್ ಧನುಷ್ಕ ಗುಣತಿಲಕ ಅವರನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ.

ಧನುಷ್ಕ ಅವರು ಡೇಟಿಂಗ್ ಆಪ್ ಮೂಲಕ ಮಹಿಳೆಯೊಬ್ಬರ ಸಂಪರ್ಕ ಪಡೆದಿದ್ದು, ನಂತರ ಈ ಅತ್ಯಾಚಾರ ಪ್ರಕರಣ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಗುಣತಿಲಕ ಶ್ರೀಲಂಕ ತಂಡದ ಆರಂಭಿಕ ಆಟಗಾರ. ಶ್ರೀಲಂಕ ತಂಡಕ್ಕಾಗಿ ಟೆಸ್ಟ್, ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಆಡಿದ್ದಾರೆ.

ಶ್ರೀಲಂಕ ತಂಡ ಲೀಗ್ ಹಂತದಿಂದ ಹೊರಗೆ ಬಿದ್ದಿದ್ದು, ಆಟಗಾರರು ವಾಪಾಸ್ ಶ್ರೀಲಂಕ ತೆರಳುತ್ತಿದ್ದಾರೆ. ಈ ನಡುವೆ ತಂಡದ ಆಟಗಾರನೊಬ್ಬ ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದರಿಂದ ತಂಡ ಮುಜುಗರಕ್ಕೆ ಸಿಲುಕಿದೆ.

ಶಿಕ್ಷಕರೇ ರಾಕ್ಷಸರಾದಾಗ ಮಕ್ಕಳಿಗೆ ರಕ್ಷಣೆ ಯಾರು? : ಅತ್ಯಾಚಾರದ ವಿರುದ್ದ ಮಕ್ಕಳ ಪ್ರತಿಭಟನೆ
ಮಂಡ್ಯ: ಅಕ್ಟೋಬರ್‌ 11, 2022ರಂದು ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಹಾಗೂ ಕೊಲೆ ಮಾಡಿರುವ ಘಟನೆ ನಡೆದಿದ್ದು, ಅಪರಾಧಿಗೆ ಕಠಿಣ ಆಗಬೇಕು ಎಂದು ಶಾಲಾ ಮಕ್ಕಳು ಸೇರಿದಂತೆ ಹಲವರು ಚನ್ನಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೂರು ದಿನದ ಹಿಂದೆ ನಡೆದ ಹತ್ತು ವರ್ಷದ ಚಿಕ್ಕ ಹುಡುಗಿ, ದಿವ್ಯಾಳ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ್ದರ ವಿರುದ್ಧ ಕನ್ನಡ ಹಿತರಕ್ಷಣಾ ವೇದಿಕೆ ಮತ್ತು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಸಹಯೋಗದೊಂದಿಗೆ ನೂರಾರು ಹೆಣ್ಣುಮಕ್ಕಳು ವಿದ್ಯಾರ್ಥಿಗಳು, ಸಂಘಟನೆಗಳು, ಹೋರಾಟಗಾರರು ಸೇರಿ ಚನ್ನಪಟ್ಟಣದಲ್ಲಿ ಇಂದು ಪೋಸ್ಟಾಫೀಸ್ ವೃತ್ತದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಅಕ್ಟೋಬರ್‌ 11, 2022ರಂದು ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಹಾಗೂ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಕೊಲೆ ಬಳಿಕ ಆಕೆಯ ಮೃತದೇಹವನ್ನು ನಿರ್ಮಾಣ ಹಂತದ ಕಟ್ಟಡದ ಸಂಪ್‌ ಒಳಗೆ ಎಸೆದಿರುವ ಅಮಾನವೀಯ ಘಟನೆ ನಡೆದಿದೆ. ಇಂತಹ ನೀಚ ಕೃತ್ಯಗಳನ್ನು ಪಾಠ ಹೇಳಿಕೊಡುವ ಶಿಕ್ಷಕರೇ ಮಾಡಿದಾಗ ಸಮಾಜದಲ್ಲಿ ಮತ್ಯಾರನ್ನು ನಂಬಬೇಕು ಎನ್ನುವುದು ಮಕ್ಕಳ ಪ್ರಶ್ನೆಯಾಗಿದೆ. ಈ ವಿರುದ್ದ ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ಇಂತಹ ದುರ್ಘಟನೆಗಳಿಗೆ ಮತ್ತಷ್ಟು ಹೆಣ್ಣು ಮಕ್ಕಳು ಬಲಿಯಾಗಬೇಕಾಗುತ್ತದೆ ಎಂದು ರಾಜ್ಯದ ಹಲವಾರು ಕಡೆಯಿಂದ ಹೆಣ್ಣು ಮಕ್ಕಳ ಕೂಗು ಕೇಳಿಬರುತ್ತಿದೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಆರೋಪಿಗಳ ಮೇಲೆ ಪೋಕ್ಸೋ ಪ್ರಕರಣ ದಾಖಲು
ಮಂಬೈ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಹಿನ್ನಲೆ ಆರೋಪಿಗಳ ವಿರುದ್ಧ ಮುಂಬೈನ ಕಲಾಂಬೋಲಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿಸಿದೆ ಎಂದು ಸುದ್ದಿ-ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ಎಎನ್‌ಐ, ಮುಂಬೈನ ವಡಾಲಾ ಪ್ರದೇಶದಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ನವಿ ಮುಂಬೈನ ಕಲಾಂಬೋಲಿ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ, ಈ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 376, 323, ಮತ್ತು 506 ಹಾಗೂ ಪೋಕ್ಸೋ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಎಎನ್‌ಐ ತಿಳಿಸಿದೆ.

ಯುಪಿ: ದಲಿತ ಸಹೋದರಿಯರ ಅತ್ಯಾಚಾರ- ಕೊಲೆ , 6 ಜನರ ಬಂಧನ
ಉತ್ತರ ಪ್ರದೇಶ : ಯುಪಿಯ ಲಖೀಮ್‌ಪುರದಲ್ಲಿ ಇಬ್ಬರು ದಲಿತ ಸಹೋದರಿಯರ ಮೇಲೆ ಅತ್ಯಾಚಾರವನ್ನೆಸಗಿ ದಾರುಣವಾಗಿ ಹತ್ಯೆ ಮಾಡಿ ಕೊಲೆ ಮಾಡಿದ ಆರೋಪದಲ್ಲಿ 6 ಮಂದಿ ಅತ್ಯಾಚಾರಿಗಳನ್ನು ಅಲ್ಲಿನ ಪೋಲೀಸರು ಬಂಧಿಸಿದ್ದಾರೆ.

ಲಖೀಮ್ ಪುರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಇಬ್ಬರು ದಲಿತ ಸಹೋದರಿಯರ ಶವ ಪತ್ತೆಯಾಗಿದ್ದು ಘಟನೆಯ ಬಗ್ಗೆ ತನಿಖೆ ಮಾಡಿದಾಗ ಚೋಟು, ಜುನಾಯಿದ್‌, ಸುಹೇಲ್‌, ರಹೀಮ್‌, ಕರೀಮುದ್ದೀನ್‌, ಆರೀಫ್‌ ಈ ಆರು ಮಂದಿ ಈ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.  ಅಪ್ರಾಪ್ತ ಹುಡುಗಿಯರ ತಾಯಿ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಆದರೆ ಅಲ್ಲಿನ ಪ್ರತ್ಯಕ್ಷದರ್ಶಿಗಳು ಇದು ಬಲವಂತದ ಅಪಹರಣ ಅಲ್ಲವೆಂದು ಸಾಬೀತುಪಡಿಸಲು ಪ್ರಯತ್ನಿಸುತಿದ್ದಾರೆ ಆದ್ದರಿಂದ ಮರಣೋತ್ತರ ಪರೀಕ್ಷೆ ನಡೆದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಲಖೀಮ್‌ಪುರದ ಎಸ್ ಪಿ ಸಂಜೀವ್‌ ಸುಮನ್‌ ಮಾಹಿತಿ ನೀಡಿದ್ದಾರೆ.

ಪ್ರಕರಣದ ಹಿನ್ನಲೆ : ಶವವಾಗಿ ಪತ್ತೆಯಾದ ಇಬ್ಬರು ಹೆಣ್ಣು ಮಕ್ಕಳು ಚೋಟುವಿನ ಸ್ನೇಹಿತೆಯರಾಗಿದ್ದರು. ಚೋಟು ಇವರಿಬ್ಬರನ್ನು ಅವನ 3 ಜನ ಗೆಳೆಯರಿಗೆ ಪರಿಚಯ ಮಾಡಿಸಿದ್ದ. ನೆನ್ನೆ ಆ ಗೆಳೆಯರೇ ಮೋಟರ್‌ ಬೈಕ್‌ನಲ್ಲಿ ಇಬ್ಬರು ಹುಡುಗಿಯರನ್ನು ಬಿಟ್ಟಿದ್ದರು. ತದನಂತರ ಹುಡುಗಿಯರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ಕೊಟ್ಟಿದ್ದರು. ಹುಡುಗಿಯರು ಮದುವೆ ಮಾಡಿಕೊಳ್ಳಲು ಕೇಳಿದಾಗ ಅದಕ್ಕೆ ಒಪ್ಪದ ಕೊಲೆಗಡುಕರು ಮತ್ತಿಬ್ಬರು ಸ್ನೇಹಿತರನ್ನು ಕರೆಸಿ ಅತ್ಯಾಚಾರ ಮಾಡಿ ಆ ಹುಡುಗಿಯರ ದುಪ್ಪಟ್ಟದಿಂದಲೇ ಅವರನ್ನು ಬಿಗಿದು ಮರಕ್ಕೆ ನೇಣಿಗೆ ಹಾಕಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಎಸ್ಪಿ ಸಂಜಯ್‌ ಸುಮನ್‌ ಸದ್ಯದ ಮಾಹಿತಿ ನೀಡಿದ್ದಾರೆ.

ಅತ್ಯಾಚಾರ ಆರೋಪ : MNS ಸದಸ್ಯ ವೃಶಾಂತ್‌ ವಾಡ್ಕೆ ಬಂಧನ
ಮಹಾರಾಷ್ಟ್ರ : ಮುಂಬರುವ ಬೃಹನ್‌ಮುಂಬೈ ಮುನಿಸಿಪಲ್‌ ಕಾರ್ಪೋರೇಶನ್(ಬಿಎಮ್‌ಸಿ) ಚುನಾವಣೆ ಪಕ್ಷದ ಟಿಕೆಟ್‌ ನೀಡುವ ನೆಪದಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಮ್‌ ಎನ್‌ ಎಸ್) ಸದಸ್ಯರಾದ ವೃಶಾಂತ್‌ ವಾಡ್ಕೆ ಅವರು 42 ವರ್ಷದ ಮಹಿಳೆಯ ಮೇಲೆ ಸೆಪ್ಟಂಬರ್‌ 2021 ರಿಂದ ಜುಲೈ 2022 ರ ನಡುವೆ  ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ಮಹಿಳೆಯ ದೂರಿನ ಆಧಾರದ ಮೇಲೆ ವಿಪಿ ರಸ್ತೆಯ ಪೋಲೀಸರು ಎಫ್‌ಐಆರ್‌ ದಾಖಲು ಮಾಡಿದ್ದು, ಅತ್ಯಾಚಾರದ ಅರೋಪದಡಿ ವೃಶಾಂತ್‌ ವಾಡ್ಕೆ ಅವರನ್ನು  ಬಂಧನ ಮಾಡಲಾಗಿದೆ ಎಂದು ಮುಂಬೈ ಪೋಲೀಸರು ಮಾಹಿತಿ ನೀಡಿದ್ದಾರೆ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಾಂಶುಪಾಲರ ಮೇಲೆ ಪ್ರಕರಣ ದಾಖಲು
ಗುಜರಾತ್‌ : ಸೆಪ್ಟಂಬರ್‌ 10ರಂದು ಭರೂಚ್‌ ನಗರದಲ್ಲಿನ ಬಿ-ವಿಭಾಗದ ಪೊಲೀಸ್‌ ಠಾಣೆಯಲ್ಲಿ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಅಡಿಯಲ್ಲಿ ಅತ್ಯಾಚರ ಪ್ರಕರಣ ದಾಖಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಭರೂಚ್‌ ಎಎಸ್ಪಿ ವಿಕಾಸ್‌ ಸುಂದ ಅವರು ಮಾತನಾಡಿ, ಬಂಬಾಖಾನಾದ ಸರಸ್ವತಿ ವಿದ್ಯಾಮಂದಿರ ಶಾಲೆಯ ಪ್ರಾಂಶುಪಾಲ ರಂಜಿತ್‌ ಅಲಿಯಾಸ್‌ ರಾಕೇಶ್‌ ಪರ್ಮಾರ್‌ ಎಂಬಾತ, 9 ನೇ ತರಗತಿಯ ವಿದ್ಯಾರ್ಥಿನಿಯನ್ನು ತನ್ನ ಕಚೇರಿಯಲ್ಲಿ ಎರೆಡು ಬಾರಿ ಅತ್ಯಾಚಾರವೆಸೆಗಿದ್ದು, ಈ ಕುರಿತು ಯಾರಿಗಾದರು ಮಾಹಿತಿ ನೀಡಿದ್ದಲ್ಲಿ ವಿದ್ಯಾರ್ಥಿನಿಯನ್ನು ಪರೀಕ್ಷೆಯಲ್ಲಿ ಪೇಲ್‌ ಮಾಡುವುದಾಗಿ ಬೆದರಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.