RCB – Peepal Media

ಕಾಲ್ತುಳಿತ ಪ್ರಕರಣ ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಗಳಿಗೆ ಹೈಕೋರ್ಟ್‌ ನೋಟಿಸ್‌ ಜಾರಿ
ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನರು ಬಲಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್‌ನಲ್ಲಿ ಪಿಐಎಲ್‌ ವಿಚಾರಣೆ ನಡೆದಿದೆ.

ಈ ವೇಳೆ ರಾಜ್ಯ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿದೆ. ವಿಚಾರಣೆಯ ಬಳಿಕ ಹೈಕೋರ್ಟ್‌ ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಡಿಎನ್ಎ ಸಂಸ್ಥೆಗಳಿಗೆ ನೋಟಿಸ್‌ ನೀಡಿ ವಿಚಾರಣೆಯನ್ನು ಜೂನ್‌ 23ಕ್ಕೆ ನಿಗದಿಪಡಿಸಿದೆ.

ವಿಚಾರಣೆಯ ಆರಂಭದಲ್ಲಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ್ದು ಏಕೆ ಎಂದು ಹೈಕೋರ್ಟ್ ಪ್ರಶ್ನಿಸಿತು. ಇದಕ್ಕೆ ಸರ್ಕಾರದ ಪರವಾಗಿ ಹಾಜರಿದ್ದ ವಕೀಲರಾದ ಎಜಿ ಶಶಿಕಿರಣಶೆಟ್ಟಿ ಉತ್ತರಿಸಿ, ಮೂರನೇ ವ್ಯಕ್ತಿಗಳ ವಿರುದ್ಧ ಅಭಿಪ್ರಾಯವೆಂದು ಭಾವಿಸಬಾರದು ಹಾಗಾಗಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದೆ. ದಾಖಲೆಗಳನ್ನು ಹಂಚಿಕೊಳ್ಳುವುದಕ್ಕೆ ಸರ್ಕಾರದ ಆಕ್ಷೇಪವಿಲ್ಲ. ಆದರೆ ನ್ಯಾಯಾಂಗ ತನಿಖೆ ಬಾಕಿ ಇರುವುದರಿಂದ ವರದಿ ಬಹಿರಂಗ ಅಗುವುದು ಬೇಡ ಎಂದು ಹೇಳಿದ್ದಾರೆ.

IPL 2024 : ಕಿಂಗ್ ಕೋಹ್ಲಿ ಮತ್ತೊಂದು ದಾಖಲೆ
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಅತ್ಯದ್ಭುತ ಆಟಗಾರ ಕಿಂಗ್ ಕೋಹ್ಲಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮತ್ತೊಂದು ದಾಖಲೆಗೆ ಕಾರಣರಾಗಿದ್ದಾರೆ.

ಚೆನ್ನೈ ಮತ್ತು ಆರ್‌ಸಿಬಿ ನಡುವಿನ ಇಂದಿನ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಿದ್ದು ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ.

ಈ ಪಂದ್ಯ ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದ್ದು ಕ್ರಿಕೆಟ್ ಅಭಿಮಾನಿಗಳು ಯಾವ ತಂಡ ಫ್ಲೇ ಆಫ್ ಸೇರಲಿದೆ ಎಂದು ಕಾತುರದಲ್ಲಿ ಕಾದಿದ್ದಾರೆ.

ಈ ಪಂದ್ಯದಲ್ಲಿ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ದಾಖಲೆಗಳ ಗುಚ್ಚಕ್ಕೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಒಟ್ಟಾರೆ ಕಿಂಗ್ ಕೋಹ್ಲಿ ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟಾರೆ 84 ಪಂದ್ಯಗಳನ್ನ ಆಡಿದ್ದು 113 ರನ್‌ಗಳ ಅತ್ಯಧಿಕ ಸ್ಕೋರ್ ಇವರ ಖಾತೆಯಲ್ಲಿದೆ.

ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಕಿಂಗ್ ಕೋಹ್ಲಿ ಆಡಿರುವಂತಹ 84 ಪಂದ್ಯಗಳಲ್ಲಿ ಒಟ್ಟಾರೆ ರನ್ ಮೊತ್ತ 3000 ಸಾವಿರ ದಾಟಿಸಿ ಕೋಹ್ಲಿ ಮತ್ತೊಂದು ದಾಖಲೆಯನ್ನ ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ.

ಆರ್‌ ಸಿ ಬಿ ಪ್ಲೇಆಫ್‌ ಸ್ಥಾನ ಈಗ ಇನ್ನೂ ಸುಲಭ
ಬೆಂಗಳೂರು: ಆರ್ಸಿಬಿ ಅಭಿಮಾನಿಗಳಿಗೆ ಸಂತಸದ ಸುದ್ದಿ. ಆರ್ಸಿಬಿ ಪ್ಲೇ ಆಫ್‌ ಸ್ಥಾನಕ್ಕೆ ಏರತ್ತಾ ಇಲ್ವಾ ಎಂಬ ಲೆಕ್ಕಾಚಾರಗಳಲ್ಲಿ ಮುಳುಗಿದ್ದ ಆರ್ಸಿಬಿ ಅಭಿಮಾನಿಗಳಿಗೆ ಈಗ ನಂಬಿಕೆ ದುಪ್ಪಟ್ಟಾಗಿದೆ. ನೆನ್ನೆ ನಡೆದ ದೆಹಲಿ ಕ್ಯಾಪಿಟಲ್ಸ್‌ ಹಾಗು ಲಕ್ನೋ ನಡುವಿನ ಪಂದ್ಯ ಆರ್ಸಿಬಿ ಪ್ಲೇಆಫ್‌ ಗೆ ಹೊಗೊದಕ್ಕೆ ಅನುಕೂಲವಾಯ್ತು ಅಂತ ಹೇಳಬಹುದಾಗಿದೆ.

ಈ ಐಪಿಎಲ್‌ ಸರಣಿಯಲ್ಲಿ ಫ್ಲೈಆಫ್‌ ಸ್ಥಾನ ಗಟ್ಟಿಗೊಳಿಸಿಕೊಳ್ಳುವುದಕ್ಕಾಗಿ ಒಟ್ಟು ಗೆಲುವಿನ ಅಂಕಗಳ ಜೊತೆ ರನ್‌ ರೇಟ್‌ ಸಹಾ ಬಹಳ ಮುಖ್ಯವಾಗಿ ಎಲ್‌ ಎಸ್‌ ಜಿ , ಆರ್ಸಿಬಿ , ದೆಹಲಿ ಕ್ಯಾಪಿಟಲ್ಸ್‌ ಈ ಮೂರೂ ತಂಡಗಳಿಗೆ ತಲೆ ನೋವಾಗಿ ಪರಿಣಮಿಸಿತ್ತು.
ಮೂರು ತಂಡಗಳು ಸರಾಸರಿಯಾಗಿ ಆರು ಪಂದ್ಯಗಳನ್ನ ಗೆದ್ದಿದ್ದರೂ ನೆನ್ನೆಯ ದೆಹಲಿಯ ಕೊನೆಯ ಪಂದ್ಯದಲ್ಲಿ ಗುಜರಾತ್‌ ತಂಡವನ್ನು ಮಣಿಸುವುದರ ಮೂಲಕ ತನ್ನ 7ನೇ ಪಂದ್ಯ ಗೆದ್ದು 5ನೇ ಸ್ಥಾನಕ್ಕೇರಿದ್ದಾರೆ. ಆದರೆ ರನ್‌ ರೇಟ್‌ ವಿಚಾರಕ್ಕೆ ಬಂದರೆ ಈ ಮೂರೂ ತಂಡಗಳಲ್ಲಿ ಆರ್ಸಿಬಿ +0.387 ರನ್‌ ರೇಟ್‌ ಹೊಂದಿದೆ.

ರನ್‌ ರೇಟ್‌ ಲೆಕ್ಕಾ ಚಾರದಲ್ಲಿ ಅರ್ಸಿಬಿ ಈ ಎರಡೂ ತಂಡಗಳಿತಿಂತಲೂ ಮುಂದಿದ್ದರೆ ಚೆನ್ನೈ ತಂದ +0.528 ರನ್‌ ರೇಟ್‌ ಪಡೆದು ಮತ್ತು ಏಳು ಪಂದ್ಯಗಳನ್ನ ಗೆದ್ದು ಈಗಾಗಲೇ 3 ನೇ ಸ್ಥಾನದಲ್ಲಿದೆ.

ಹೈದರಾಬಾದ್‌ ತಂಡ 12 ಪಂದ್ಯಗಳನ್ನ ಆಡಿದ್ದು ಇನ್ನೂ ಎರಡು ಪಂದ್ಯಗಳು ಬಾಕಿ ಉಳಿಸಿಕೊಂಡಿದ್ದು ಈ ಎರಡೂ ಪಂದ್ಯಗಳನ್ನ ತಮ್ಮ ತವರಿನಲ್ಲಿಯೇ ಆಡಲಿದ್ದಾರೆ. ಆ ಎರಡೂ ಪಂದ್ಯಗಳನ್ನ ಗೆಲ್ಲುವ ವಿಶ್ವಾಸದಲ್ಲಿದ್ದು ಅದರಲ್ಲಿ ಒಂದು ಪಂದ್ಯವನ್ನ ಗೆದ್ದರೂ ಹೈದರಾಬಾದ್‌ ತಂಡ ಮೂರನೇ ಸ್ಥಾನವನ್ನ ಭದ್ರಪಡಿಸಿಕೊಳ್ಳಲಿದೆ.

ಇನ್ನು ನಾಲ್ಕನೇ ಸ್ಥಾನಕ್ಕಾಗಿ ಉಳಿದಿರುವುದು ಚೆನ್ನೈ ಮತ್ತು ಬೆಂಗಳೂರು ಎರಡು ತಂಡಗಳು ಮಾತ್ರ. ಚೆನ್ನೈ ತಂಡಕ್ಕೆ ಗೆಲುವು ಮಾತ್ರವೇ ಅನಿವಾರ್ಯವಾಗಿದ್ದು ಹಾಗೊಂದುವೇಳೇ ಸೋತರೂ ರನ್‌ ರೇಟ್‌ ಉಳಿಸಿಕೊಂಡರೆ ಸಾಕು. ಆದರೆ ಆರ್ಸಿಬಿ ತಂಡಕ್ಕೆ ರನ್‌ ರೇಟ್‌ ಹೆಚ್ಚಿಸುವುದೂ ಸವಾಲ್‌ ಆಗಿದೆ.

ಈ ಸರಣಿಯಲ್ಲಿ ಆರ್ಸಿಬಿ ತಂಡ ಫ್ಲೈ ಆಫ್‌ ಸ್ಥಾನಕ್ಕೇರಲು 11 ಬಾಲ್‌ ಉಳಿದಿರುವಂತರೇ ಗೆಲುವನ್ನ ಸಾಧಿಸಬೇಕು ಅಥವಾ 18 ರನ್‌ ಗಳ ಅಂತರದಿಂದ ಗೆಲುವನ್ನ ಸಾಧಿಸಬೆಕಿದೆ. ಒಟ್ಟಾರೆ ಆರ್ಸಿಬಿ ಅಭಿಮಾನಿಗಳ ಆಸೆ ಈಡೇರಲಿದೆಯಾ? ಕಾದು ನೋಡಬೇಕಿದೆ.

ಆರ್ ಸಿ ಬಿ ಹೀನಾಯ ಸೋಲಿನ ಹಿಂದಿದೆ ಜೈ ಶಾ ಕುತಂತ್ರ!!
ಈ ಬಾರಿ ಐಪಿಎಲ್ ಪಂದ್ಯಾವಳಿಯಲ್ಲಿ ಆರ್ ಸಿ ಬಿ ಸತತ ಏಳು ಸೋಲುಗಳಿಂದ ಜರ್ಝರಿತಗೊಂಡು ಕಪ್ ಆಸೆಯನ್ನು ಸಂಪೂರ್ಣ ಕೈಚೆಲ್ಲಿದೆ. ಆದರೆ ಆರ್ ಸಿ ಬಿ ಯ ಈ ಸೋಲುಗಳು ನ್ಯಾಯಯುತವಾಗಿದ್ದವೇ? ಆರ್ ಸಿ ಬಿ ಅಷ್ಟು ಕಳಪೆ ತಂಡವೇ? ಅಂಪೈರಿಂಗ್ ನಲ್ಲಿ ಆರ್ ಸಿ ಬಿ ತಂಡಕ್ಕಾದ ಪದೇಪದೇ ಅನ್ಯಾಯಗಳು ಕೇವಲ ಕಾಕತಾಳೀಯವೇ ಅಥವಾ ವ್ಯವಸ್ಥಿತ ಹುನ್ನಾರದ ಭಾಗವೇ? ಐ ಪಿ ಎಲ್ ಎಂಬ ಕ್ರೀಡೆಯ ಹಿಂದೆಯೂ ರಾಜಕಾರಣ ಬೆಸೆದುಕೊಂಡಿದೆಯೇ? ಈ ಅನುಮಾನಗಳು ಆರ್ ಸಿ ಬಿ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ದಟ್ಟವಾಗುತ್ತಿವೆ.

ಹೌದು, ಐಪಿಎಲ್ ಇನ್ನರ್ ಸರ್ಕಲ್ ನಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಆರ್ ಸಿ ಬಿ ಯನ್ನು ಹೀಗೆ ಸತತವಾಗಿ ವಂಚಿಸಿ ಹೀನಾಯವಾಗಿ ಸೋಲಿಸಿ, ಪಂದ್ಯಾವಳಿಯಿಂದ ಹೊರಗಟ್ಟಬೇಕೆಂಬುದು ಬಿಸಿಸಿಐನ ಸೆಕ್ರೆಟರಿಯಾಗಿರುವ ಜಯ್ ಶಾ ನೀಡಿರುವ ಖಾಸಗಿ ಆದೇಶವಂತೆ. ಅದಕ್ಕಾಗಿಯೇ ಅಂಪೈರ್ ಗಳು, ಥರ್ಡ್ ಅಂಪೈರ್ ಗಳು, ಮ್ಯಾಚ್ ರೆಫರಿಗಳು ಆರ್ ಸಿ ಬಿ ವಿಚಾರದಲ್ಲಿ ಪ್ರಮಾದಕರ ತೀರ್ಪು ನೀಡುತ್ತಲೇ ಬಂದಿದ್ದಾರೆ. ಆರ್ ಸಿ ಬಿ ಗೆಲ್ಲಬಹುದಾಗಿದ್ದ ಮ್ಯಾಚಿನಲ್ಲೂ ಈ ತೀರ್ಪುಗಳ ಅದನ್ನು ಸೋಲಿಸಿ ಹೊರಗಟ್ಟಿವೆ. ಜಯ್ ಶಾ, ಅದೆಷ್ಟು ಕಟ್ಟುನಿಟ್ಟಾಗಿ ಈ ಫರ್ಮಾನು ಹೊರಡಿಸಿದ್ದಾನೆಂದರೆ, ಕೊನೆಗೆ ಟಾಸ್ ಆಯ್ಕೆಯಲ್ಲೂ ಲಕ್ಷಾಂತರ ಅಭಿಮಾನಿಗಳೆದುರಿಗೇ ಆರ್ ಸಿ ಬಿ ಗೆ ಮೋಸ ನಡೆಯುತ್ತದೆ!

ಜಯ್ ಶಾನ ಇಂಥಾ ಒಳರಾಜಕಾರಣಕ್ಕೆ ಬೇಸತ್ತೇ ಅವತ್ತು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂಪೈರ್ ಮೇಲೆ ಮೈದಾನದಲ್ಲೇ ಕಾಲುಕೆರೆದು ಜಗಳಕ್ಕೆ ಹೋದದ್ದು. ನೀವೇ ಯೋಚಿಸಿ, ಮುಂಬೈ ವಿರುದ್ಧದ ಪಂದ್ಯದಲ್ಲಿ ಟಾಸ್ ತಿರುಚಲಾಯ್ತು, ಸ್ಪಷ್ಟ ನೋ ಬಾಲ್ ಇದ್ದರೂ ನೀಡಲಾಗಲಿಲ್ಲ. ಹೈದ್ರಾಬಾದ್ ವಿರುದ್ಧದ ಮ್ಯಾಚ್ ನಲ್ಲೂ ಇಂತದ್ದೇ ಮೋಸ. ಕೆಕೆಆರ್ ಮ್ಯಾಚಿನಲ್ಲಂತೂ ಇದು ವಿಪರೀತಕ್ಕೆ ಹೋಯ್ತು ಎನ್ನಬಹುದು. ಯಾಕೆಂದರೆ, ಆ ಪಂದ್ಯದಲ್ಲಿ ಗೆದ್ದಿದ್ದರೆ ಆರ್ ಸಿ ಬಿ ಮುಂದಿನ ಹಂತದ ಆಸೆ ಜೀವಂತವಾಗಿ ಉಳಿಯುತ್ತಿತ್ತು. ಯಾವ ಕಾರಣಕ್ಕೂ ಆರ್ ಸಿ ಬಿಗೆ ಅಂತಹ ಸಣ್ಣ ಅವಕಾಶವೂ ಸಿಗಬಾರದೆಂದು ನಿರ್ಧರಿಸಿದ್ದ ಜೈ ಶಾ ಹಠದಿಂದಾಗಿಯೇ ಇಡೀ ಮ್ಯಾಚಿನ ತುಂಬಾ ಅನ್ಯಾಯದ ತೀರ್ಪುಗಳು ಹೊರಬಂದವು.

ಕೊಹ್ಲಿ ಔಟ್ ಆದದ್ದು ಸ್ಪಷ್ಟ ನೋ ಬಾಲ್ ಆಗಿದ್ದರೂ ಅದನ್ನು ನೋಬಾಲ್ ಕೊಡಲಿಲ್ಲ. ಸೊಂಟದಿಂದ ಮೇಲ್ಮಟ್ಟಕ್ಕೆ ಬಾಲ್ ಇದ್ದದ್ದು ರಿಪ್ಲೇಯಲ್ಲಿ ಎದ್ದು ತೋರುತ್ತಿತ್ತು. ಕೊಹ್ಲಿಯ ಬ್ಯಾಕ್ ಫೂಟ್ ಸಹಾ ಸ್ಕ್ರೀಜ್ ನ ಗೆರೆಗೆ ಸನಿಹದಲ್ಲೇ ಇತ್ತು. ಅಷ್ಟಾದರು ಅದನ್ನು ಲೀಗಲ್ ಡೆಲಿವರಿ ಎಂದು ತೀರ್ಮಾನಿಸಿದ ಅಂಪೈರ್ ಗಳು ಕೊಹ್ಲಿಯನ್ನು ಔಟ್ ಮಾಡಿಸಿದರು. ಇನ್ನು ಇನ್ನಿಂಗ್ಸ್ ನ 17ನೇ ಓವರ್ ನಲ್ಲಿ ಆರ್ ಸಿ ಬಿ ತಂಡದ ಆಟಗಾರ ಪ್ರಭುದೇಸಾಯ್ ಸ್ವೀಪ್ ಶಾಟ್ ನಲ್ಲಿ ದಂಡಿಸಿದಾಗ ಬಾಲ್ ಸೀದಾ, ಬೌಂಡರಿ ಲೈನ್ ನ ಗೆರೆಗೆ ಹೋಗಿ ತಾಕಿತು. ಇದನ್ನು ನಿಯಮಗಳ ಪ್ರಕಾರ ಸಿಕ್ಸರ್ ಎಂದು ಪರಿಗಣಿಸಬೇಕಾಗುತ್ತದೆ. ಆದರೆ ಅಂಪೈರ್ ರಿಪ್ಲೇಯ ಮೊರೆ ಹೋಗದೆ ಫೋರ್ ಎಂದು ಘೋಷಿಸಿದರು. ತಂಡಕ್ಕೆ ಎರಡು ರನ್ ಗಳು ಕಡಿಮೆಯಾದವು. ಕೊನೆಗೆ ವೀರಾವೇಷದ ಆಟದ ಹೊರತಾಗಿಯು ಆರ್ ಸಿ ಬಿ ಸೋತದ್ದು ಕೇವಲ ಒಂದು ರನ್ ನಿಂದ. ಅಕಸ್ಮಾತ್ ಅಂಪೈರ್ ಅದನ್ನು ಸಿಕ್ಸ್ ಎಂದು ಘೋಷಿಸಿದ್ದರೆ, ಆರ್ ಸಿ ಬಿ ಆ ಪಂದ್ಯ ಗೆಲ್ಲುವ ಎಲ್ಲಾ ಸಾಧ್ಯತೆ ಇತ್ತು. ಅಷ್ಟೆ ಏಕೆ, ವಿರಾಟ್ ಕೊಹ್ಲಿಯವರ ಅನ್ಯಾಯದ ಔಟ್ ತೀರ್ಪನ್ನು ಅಂಪೈರ್ ನೀಡದೆ ಹೋಗಿದ್ದರೆ ಮ್ಯಾಚ್ ನ ಗತಿಯೇ ಬದಲಾಗುವ ಸಾಧ್ಯತೆ ಇತ್ತು. ಆದರೆ ಇದ್ಯಾವುದಕ್ಕೂ ಅವಕಾಶವನ್ನೇ ಕೊಡಲಿಲ್ಲ.

ಇದೆಲ್ಲ ಕೇವಲ ಕಾಕತಾಳೀಯ ಎಂದು ನಂಬಲು ಸಾಧ್ಯವೇ? ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಚೇಸಿಂಗ್ ರನ್ ಕಲೆಹಾಕಿದ ದಾಖಲೆ ಸೃಷ್ಟಿಸಿದ ತಂಡವೊಂದು ಇಷ್ಟು ಹೀನಾಯವಾಗಿ ಟೂರ್ನಿಯಿಂದ ಹೊರಬೀಳುತ್ತದೆಂದರೆ, ಕಳಪೆ ಆಟ ಎನ್ನಲು ಕಾರಣವುಂಟೆ. ಇದೆಲ್ಲಾ ಅಮಿತ್ ಶಾನ ಮಗ ಜೈ ಶಾನ ಕರಾಮತ್ತು ಎಂಬ ಮಾತಿಗೆ ಪುಷ್ಠಿ ನೀಡುತ್ತವೆ.

ಜಯ್ ಶಾ ಗೆ ಆರ್ ಸಿ ಬಿ ಮೇಲೆ ಯಾಕಿಷ್ಟು ಜಿದ್ದು! ಇದಕ್ಕೆ ಎರಡು ಕಾರಣಗಳಿವೆ ಎನ್ನುತ್ತವೆ ಮೂಲಗಳು. ಮೊದಲನೆಯದ್ದು, ಜೈ ಶಾಗೆ ಕೊಹ್ಲಿ ಮೇಲೆ ಇರುವ ವೈಯಕ್ತಿಕ ದುಷ್ಮನಿ. ಎರಡನೆಯದ್ದು ಜೈ ಶಾ ತಂದೆ ಅಮಿತ್ ಶಾಗೆ ಕನ್ನಡಿಗರ ಮೇಲಿರುವ ಸೇಡು!

ಹೌದು, ನಂಬಲು ಸಂಕೀರ್ಣ ಎನಿಸಿದರೂ ಇದು ಸತ್ಯ! ಜೈ ಶಾಗೆ ಕ್ರಿಕೆಟ್ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗುವುದಿರಲಿ, ಸದಸ್ಯನಾಗುವುದಕ್ಕೂ ಅರ್ಹತೆಯಿಲ್ಲ. ಅಂತಹ ಯಾವ ಕ್ರಿಕೆಟ್ ಕೌಶಲ್ಯವಾಗಲಿ, ಸಾಧನೆಯಾಗಲಿ ಅಥವಾ ನೈಪುಣ್ಯತೆಯಾಗಲಿ ಆತನಿಗೆ ಇಲ್ಲ. ಕೇವಲ ತನ್ನ ತಂದೆಯ ಹೆಸರಿನ ಅಧಿಕಾರ ಪ್ರಭಾವ ಬಳಸಿ ಬಿಸಿಸಿಐ ಹೊಕ್ಕಿದ್ದಾನೆ. ಇದು ವಿರಾಟ್ ಕೊಹ್ಲಿಯೂ ಸೇರಿದಂತೆ ಅನೇಕ ಹಾಲಿ ಮತ್ತು ಮಾಜಿ ಕ್ರಿಕೆಟ್ ದಿಗ್ಗಜರ ಅಸಹನೆಗೆ ಕಾರಣವಾಗಿತ್ತು. ದಾದಾ ಎಂದೇ ಗುರುತಿಸಲ್ಪಡುವ ಸೌರವ್ ಗಂಗೂಲಿಗೆ ಎರಡನೇ ಸಲ ಬಿಸಿಸಿಐ ಅಧ್ಯಕ್ಷನಾಗುವ ಅವಕಾಶವಿದ್ದರೂ, ಈ ಜಯ್ ಶಾ ನ ಉಪಟಳ ತಾಳದೆ ಆಡಳಿತ ಮಂಡಳಿಯಿಂದಲೇ ನಿರ್ಗಮಿಸಿದ್ದರು. ಅಷ್ಟೇ ಅಲ್ಲ, ಕಳೆದ ವರ್ಷ ಐಸಿಸಿ ವರ್ಲ್ಡ್ ಕಪ್ ಭಾರತದಲ್ಲಿ ನಡೆದಾಗ, ಅದರ ಉದ್ಘಾಟನೆ ಪಂದ್ಯಕ್ಕಾಗಲಿ ಅಥವಾ ಫೈನಲ್ ಗಾಗಲಿ, 1983ರ ವರ್ಲ್ಡ್ ಕಪ್ ವಿಜೇತ ತಂಡದ ಕಫ್ತಾನ ಕಪಿಲ್ ದೇವ್ ಅವರನ್ನು ಜೈ ಶಾ ಉದ್ದೇಶಪೂರ್ವಕವಾಗಿ ಆಹ್ವಾನಿಸಿರಲಿಲ್ಲ. ಈ ಕುರಿತು ಆ ಮಾಜಿ ಆಟಗಾರ ನೋವಿನಿಂದ ತಮ್ಮ ಬೇಸರ ಹಂಚಿಕೊಂಡಿದ್ದುಂಟು. ಅರ್ಹತೆ ಇಲ್ಲದಿದ್ದರೂ ಬಿಸಿಸಿಐ ಹೊಕ್ಕು ಮೆರೆಯುತ್ತಿರುವ ಮತ್ತು ಹಿರಿಯ ಆಟಗಾರರನ್ನು ಅವಮಾನಿಸುವ ಜಯ್ ಶಾ ಬಗ್ಗೆ ಬಹಳಷ್ಟು ಕ್ರಿಕೆಟ್ ದಿಗ್ಗಜರಿಗೆ ಅಸಮಾಧಾನ ಇದೆ. ಆದರೆ ಅಮಿತ್ ಶಾ ಎಂಬ ದರ್ಪಿಷ್ಟ ರಾಜಕಾರಣಿಯ ಕಾರಣಕ್ಕೆ ಯಾರೂ ನೇರವಾಗಿ ಹೇಳಿಕೊಳ್ಳುತ್ತಿಲ್ಲ ಅಷ್ಟೆ. ಆದರೆ ಬಿಸಿರಕ್ತದ ಕೊಹ್ಲಿ ಇದಕ್ಕೆ ಹೊರತಾದವರು.

ಕ್ರಿಕೆಟ್ ನಲ್ಲಿ ತನ್ನ ತಂದೆಯ ರಾಜಕಾರಣದ ಐಡಿಯಾಲಜಿ ತಂದು ತುರುಕುವ ಜೈ ಶಾನ ಯತ್ನಗಳನ್ನು ಆಗಿಂದಾಗ್ಗೆ ಕೊಹ್ಲಿ ವಿರೋಧಿಸುತ್ತಲೇ ಬಂದಿದ್ದಾರೆ. ಕ್ರೀಡೆಗೆ ಧರ್ಮವಿಲ್ಲ. ಭಾರತದ ಮಟ್ಟಿಗೆ ಕ್ರಿಕೆಟ್ ಎನ್ನುವುದೇ ಒಂದು ಸ್ವತಂತ್ರ ಧರ್ಮದಂತಾಗಿದೆ. ಇಲ್ಲಿ ಇಡೀ ಭಾರತೀಯರು ಜಾತಿ, ಧರ್ಮಗಳ ಹಂಗು ಮರೆತು ಬೆರೆತು ಸಂಭ್ರಮಿಸುತ್ತಾರೆ. ಆದರೆ ಜೈ ಶಾ ಬಿಸಿಸಿಐ ಹೊಕ್ಕ ನಂತರ ತನ್ನ ತಂದೆಯ ಕೋಮುವಾದಿ ರಾಜಕಾರಣವನ್ನು ಇಲ್ಲಿಗೂ ಎಳೆತರುವ ಪ್ರಯತ್ನ ಮಾಡಿದ. ಆ ಕಾರಣಕ್ಕೇ ಮುಸ್ಲಿಂ ಆಟಗಾರರ ಮೇಲೆ ನಿಂದನೆ ದಾಳಿಗಳನ್ನು ಸಂಘಟಿಸಲಾಯ್ತು. 2021ರ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಸೋತಾಗ, ಅದನ್ನೇ ನೆಪ ಮಾಡಿಕೊಂಡ ಜಯ್ ಶಾನ ಸೋಷಿಯಲ್ ಮೀಡಿಯಾದ ಸೋಲ್ಜರ್ ಗಳು ಮಹಮದ್ ಶಮಿಯ ಧರ್ಮವನ್ನು ಆ ಸೋಲಿಗೆ ಥಳುಕು ಹಾಕಿ ಆತನ ಮೇಲೆ ಹೀನಾಯ ದಾಳಿ ಮಾಡಿದ್ದರು. ಇದು ಜಯ್ ಶಾ ಕುತಂತ್ರ ಎಂಬುದು ತಿಳಿಯುತ್ತಿದ್ದಂತೆಯೇ ಕೊಹ್ಲಿ, ಶಮಿ ಬೆಂಬಲಕ್ಕೆ ನಿಂತು “ನಾವು ಕ್ರಿಕೆಟಿಗರು, ಅಪ್ಪಟ ಭಾರತೀಯರು. ನಮಗೆ ಧರ್ಮ ಮುಖ್ಯವಲ್ಲ. ದೇಶ ಮುಖ್ಯ, ಕ್ರೀಡಾಮನೋಭಾವ ಮುಖ್ಯ. ಶಮಿಯ ಧರ್ಮವನ್ನು ಹಂಗಿಸುತ್ತಿರುವವರು ಬೆನ್ನುಮೂಳೆಯಿಲ್ಲದವರು” ಎಂದು ಟ್ವೀಟ್ ಮಾಡಿ ತಿರುಗೇಟು ನೀಡಿದ್ದರು.

ಜೈಶಾಗೆ ಕೊಹ್ಲಿ ತಿರುಗೇಟು ನೀಡುತ್ತಾ ಬಂದ ಇಂತಹ ಹಲವು ನಿದರ್ಶನಗಳಿವೆ. ಅದೇ ಕಾರಣಕ್ಕೆ ಜೈಶಾಗೆ ಕೊಹ್ಲಿ ಮೇಲೆ ಸಿಟ್ಟು. ಕೊಹ್ಲಿಯನ್ನು ವೈಯಕ್ತಿಕವಾಗಿ ಮಟ್ಟಹಾಕಬೇಕೆಂದು ಆತ ಪ್ರಯತ್ನಪಟ್ಟಷ್ಟು ಕೊಹ್ಲಿ ತನ್ನ ಆಟದ ಸಾಮರ್ಥ್ಯದಿಂದ ಅದಕ್ಕೆ ಉತ್ತರ ನೀಡುತ್ತಾ ಬಂದಿದ್ದಾರೆ. ಈಗ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಯನ್ನು ಆರಾಧಿಸುವ, ಅಭಿಮಾನಿಸುವ ಮತ್ತು ಅವರ ಅಸ್ಮಿತೆಯೊಂದಿಗೆ ಬೆಸೆದುಕೊಂಡ ಆರ್ ಸಿ ಬಿ ತಂಡವನ್ನು ಹೀನಾಯಗೊಳಿಸಿ, ಕೊಹ್ಲಿ ಮೇಲಿನ ತನ್ನ ಸಿಟ್ಟು ತೀರಿಸಿಕೊಳ್ಳಬೇಕೆಂಬುದು ಜೈ ಶಾ ಉದ್ದೇಶ. ಅದಕ್ಕೇ ಆರ್ ಸಿ ಬಿ ವಿರುದ್ಧ ಇಂತಹ ಅನ್ಯಾಯದ ತೀರ್ಪುಗಳು, ಮೋಸದಾಟಗಳು ನಡೆಯುತ್ತಿವೆ.

ಆರ್ ಸಿ ಬಿ ತಂಡವನ್ನು ಅವಮಾನಿಸಬೇಕೆಂಬುದು ಕೇವಲ ಜೈ ಶಾನ ತಿಕ್ಕುಲತನವಷ್ಟೇ ಆಗಿದ್ದರೆ, ಈ ಪರಿ ಹಗಲುವಂಚನೆ ಮಾಡಲು ಅಂಪೈರ್ ಗಳಿಗೆ, ಆಡಳಿತ ಮಂಡಳಿಗೆ ಧೈರ್ಯ ಬರುತ್ತಿರಲಿಲ್ಲವೇನೊ, ಆದರೆ ಇದರ ಹಿಂದೆ ಜೈ ಶಾನ ತಂದೆ ಅಮಿತ್ ಶಾನ ಹುಕುಂ ಕೂಡಾ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಅದಕ್ಕೆ ಕಾರಣ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕರ್ನಾಟಕದ ಜನ ಅಮಿತ್ ಶಾನ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ್ದು. ಆಗಿನಿಂದಲೂ ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ಎಲ್ಲಾ ಹಕ್ಕುಗಳಿಗೆ ಅಡ್ಡಿಗಾಲು ಹಾಕುತ್ತಲೇ ಬಂದಿರುವ ಮೋದಿ-ಅಮಿತ್ ಶಾ ನೇತೃತ್ವದ ಕೇಂದ್ರ ಸರ್ಕಾರ, ಆ ಚುನಾವಣಾ ಸೋಲಿಗೆ ಸೇಡು ತೀರಿಸಿಕೊಳ್ಳುವಂತೆ ವರ್ತಿಸುತ್ತಿದೆ. ಅನ್ನಬಾಗ್ಯಕ್ಕೆ ಅಕ್ಕಿ ಕೊಡಲು ನಿರಾಕರಿಸಿದ್ದು, ತೆರಿಗೆ ಹಂಚಿಕೆಯಲ್ಲಿ ವಂಚನೆ ಮಾಡಿದ್ದು, ಕರ್ನಾಟಕಕ್ಕೆ ಮಂಜೂರಾಗಿದ್ದ ಹಲವು ಯೋಜನೆಗಳನ್ನು ವಾಪಾಸ್ ತೆಗೆದುಕೊಂಡಿದ್ದು, ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯದ ಪರವಾಗಿ ನಿಲ್ಲದಿದ್ದು, ಬರ ಪರಿಹಾರದ ಮನವಿಗೆ ಪುರಸ್ಕಾರ ನೀಡದೇ ಇದ್ದದ್ದು, ಮಹಾದಾಯಿ ಯೋಜನೆಗೆ ಅಡ್ಡಗಾಲು ಹಾಕಿದ್ದು…. ಅಷ್ಟೇ ಏಕೆ? ತಮ್ಮದೇ ಪಕ್ಷದ ಕರ್ನಾಟಕ ಘಟಕಕ್ಕೆ ನೂತನ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವುದಕ್ಕೂ ಸತಾಯಿಸುತ್ತಲೇ ಬಂದರು.

ಈ ಸಲದ ಐಪಿಎಲ್ ಪಂದ್ಯಾವಳಿಯಲ್ಲಿ ಅಕಸ್ಮಾತ್ ಆರ್ ಸಿ ಬಿ ಗೆದ್ದರೆ ಅದು ಸಮಸ್ತ ಕನ್ನಡಿಗ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗುತ್ತದೆ. ಅಸೆಂಬ್ಲಿ ಸೋಲಿನ ಕಾರಣಕ್ಕೆ ಕನ್ನಡಿಗರನ್ನು ದ್ವೇಷಿಸುತ್ತಿರುವ ಅಮಿತ್ ಶಾಗೆ ಕನ್ನಡಿಗರ ಸಂಭ್ರಮವನ್ನು ಯಾವ ಕಾರಣಕ್ಕೂ ಸಹಿಸಲಾಗುವುದಿಲ್ಲ. ಹೇಗಾದರೂ ಮಾಡಿ, ಆರ್ ಸಿ ಬಿ ಹೀನಾಯವಾಗಿ ಸೋಲುವಂತೆ ಮಾಡಿ, ಕರ್ನಾಟಕದ ಅಭಿಮಾನಿಗಳು ಪರಿತಪಿಸುವಂತೆ ಮಾಡಿ ಸೇಡು ತೀರಿಸಿಕೊಳ್ಳುವ ಅಮಿತ್ ಶಾ ಯೋಚನೆಯೂ ಜೈ ಶಾನ ಜಿದ್ದಿಗೆ ಸಾಥ್ ನೀಡಿರುವುದರಿಂದಲೇ ಆರ್ ಸಿ ಬಿ.ಗೆ ಇಡೀ ಪಂದ್ಯಾವಳಿಯಲ್ಲಿ ಹೀಗೆ ಸಾಲುಸಾಲು ಅನ್ಯಾಯವಾಗಲು ಕಾರಣ. ಚಿನ್ನಸ್ವಾಮಿ ಅಂಗಳದ ಆಡಳಿತ ಮಂಡಳಿಯ ಆವಳರಣದೊಳಗೆ ಕಾಲಿಟ್ಟರೆ ಇದೇ ಚರ್ಚೆಗಳು ಕಿವಿಗಪ್ಪಳಿಸುತ್ತವೆ.

ಕ್ರಿಕೆಟ್ ಎಂದರೆ ಅನ್ನನೀರು ಬಿಟ್ಟು ಅಭಿಮಾನಿಸುವ ಕಾಲವೊಂದಿತ್ತು. ಕಪಿಲ್, ಸಚಿನ್, ಅಝರುದ್ದೀನ್, ಗವಾಸ್ಕರ್ ಥರದವರನ್ನು ದೇವರೆಂದು ಪೂಜಿಸುವ ಅಭಿಮಾನಿಗಳೂ ಇದ್ದರು. ಈಗಲೂ ಇದ್ದಾರೆ. ಕೊಹ್ಲಿ, ಧೋನಿ ತರಹದ ಸ್ಟಾರ್ ಆಟಗಾರರ ಬೆನ್ನಿಗೆ ನಿಂತಿರುವ ಅಭಿಮಾನಿಗಳ ಪಡೆಯೇ ಇದಕ್ಕೆ ಸಾಕ್ಷಿ. ಆದರೆ ಇಂತಹ ಯಾವ ಸಾಧನೆ, ಸಾಮರ್ಥ್ಯ, ಅರ್ಹತೆಯಿಲ್ಲದೆ ಕ್ರಿಕೆಟ್ ಮಂಡಳಿ ಹೊಕ್ಕ ಜೈ ಶಾ ಮತ್ತು ಅವನ ತಂದೆ ಅಮಿತ್ ಶಾನ ಸೇಡಿನ ರಾಜಕಾರಣಕ್ಕೆ ಕ್ರಿಕೆಟ್ ತನ್ನ ಘನತೆಯನ್ನು ಕಳೆದುಕೊಂಡು ಜೂಜಿನ, ಬೆಟ್ಟಿಂಗ್ ನ ಸಾಧನವಾಗಿ ಹಲವರ ಜೀವವನ್ನೇ ಬಲಿತೆಗೆದುಕೊಳ್ಳಲಾರಂಭಿಸಿದೆ. ಈ ಸಲ ಆರ್ ಸಿ ಬಿ ಗೆ ಆದ ಗತಿ ಮುಂದಿನ ಸಲ ಮತ್ತ್ಯಾವ ತಂಡಕ್ಕೆ ಕಾದಿದೆಯೋ? ಹೀಗೇ ಮುಂದುವರೆದರೆ ಕ್ರೀಡೆಯ ಘನತೆ ಉಳಿಯುವುದಾದರು ಹೇಗೆ?

ಆದಷ್ಟು ಬೇಗ ಜೈ ಶಾ ಎಂಬ ಕ್ರೀಡಾಪೀಡಕನನ್ನು ಕ್ರಿಕೆಟ್ ಅಂಗಳದಿಂದಲೇ ಹೊರದಬ್ಬಬೇಕು. ಇದಕ್ಕೆ ಆರ್ ಸಿ ಬಿ ಅಭಿಮಾನಿಗಳಿಂದಲೇ ಚಾಲನೆ ಸಿಗಬೇಕು…

– ಮಾಚಯ್ಯ ಎಂ ಹಿಪ್ಪರಗಿ