RELIANCE INDUSTRIES – Peepal Media

RELIANCE INDUSTRIES : ಆಪರೇಷನ್ ಸಿಂಧೂರ್ ಟ್ರೇಡ್​ಮಾರ್ಕ್​ – ಅರ್ಜಿ ವಾಪಸ್ಸು ಪಡದ ರಿಲಯನ್ಸ್
ನವದೆಹಲಿ : ಪರೇಷನ್ ಸಿಂಧೂರ್’ ಈ ಪದ ಭಾರತ, ಪಾಕಿಸ್ತಾನ ಎರಡೂ ದೇಶಗಳಲ್ಲಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್​ನಲ್ಲಿದೆ. ಯಾವಾಗ ಭಾರತವು ಪಾಕಿಸ್ತಾನದ 9 ಉಗ್ರ ಶಿಬಿರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ಮಾಡಿ ಕಾರ್ಯಾಚರಣೆ ನಡೆಸಿತೋ ಅಂದಿನಿಂದ ಆಪರೇಷನ್ ಸಿಂಧೂರ್ ಹೆಸರು ಸದ್ದು ಮಾಡುತ್ತಿದೆ.

ಕೆಲವರು ಆಪರೇಷನ್ ಸಿಂಧೂರ್ ಒಳ್ಳೆಯ ಸಿನಿಮಾ ಆಗುತ್ತದೆ ಎಂದು ಹೇಳುತ್ತಿದ್ದರು. ಇದರ ಮಧ್ಯೆ ಆಪರೇಷನ್ ಸಿಂಧೂರ್ ಹೆಸರನ್ನು ಟ್ರೇಡ್​​ಮಾರ್ಕ್ ಆಗಿ ನೊಂದಾಯಿಸಲು ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿದ್ದವು. ರಿಲಯನ್ಸ್ ಇಂಡಸ್ಟ್ರೀಸ್​​​ನ ಜಿಯೋ ಸ್ಟುಡಿಯೋಸ್​​ನಿಂದಲೂ ಒಂದು ಅರ್ಜಿ ಬಂದಿತ್ತು. ಇಷ್ಟೊಂದು ಗಂಭೀರ ವಿಷಯಕ್ಕೆ ಸಂಬಂಧಿಸಿದ ಆಪರೇಷನ್ ಸಿಂಧೂರ್​​ ಹೆಸರನ್ನು ಟ್ರೇಡ್ ಮಾರ್ಕ್ ಆಗಿ ಉಪಯೋಗಿಸಲು ಯತ್ನಿಸುತ್ತಿರುವ ವಿಚಾರ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ಯಾವಾಗ ಆಕ್ರೋಶ ಹೆಚ್ಚಾಯ್ತೋ ರಿಲಯನ್ಸ್ ಇಂಡಸ್ಟ್ರೀಸ್ ಎಚ್ಚೆತ್ತಿದೆ, ತನ್ನ ಅರ್ಜಿಯನ್ನು ಹಿಂಪಡೆದುಕೊಂಡಿರುವುದಾಗಿ ಘೋಷಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ‘ಆಪರೇಷನ್ ಸಿಂಧೂರ್ ಹೆಸರನ್ನು ಟ್ರೇಡ್​​ಮಾರ್ಕ್​ ಆಗಿ ನೊಂದಾಯಿಸಲು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದೇವೆ. ಕಂಪನಿಯ ಕಿರಿಯ ಉದ್ಯೋಗಿಯೊಬ್ಬರು ಯಾರ ಜೊತೆಗೂ ಚರ್ಚೆ ಮಾಡದೇ ಟ್ರೇಡ್​​​ಮಾರ್ಕ್​​ಗೆ ಅರ್ಜಿ ಹಾಕಿದ್ದರು. ಅದು ಗಮನಕ್ಕೆ ಬಂದ ಕೂಡಲೇ ಅರ್ಜಿ ಹಿಂಪಡೆಯಲಾಗಿದೆ’ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.