Rename – Peepal Media

ಮರುನಾಮಕರಣ : ‘ಇಂಡಿಯಾ’ (India) ಹೆಸರನ್ನು ತನ್ನದಾಗಿಸಿಕೊಳ್ಳುತ್ತಾ ಪಾಕಿಸ್ತಾನ?
‘ಇಂಡಿಯಾ’ ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿರುವ ಬೆನ್ನಲ್ಲೇ, ಮುಂದೆ ಆಗಬಹುದಾದ ಪರಿಣಾಮದ ಬಗ್ಗೆ ಹೊಸ ಚರ್ಚೆಯೊಂದು ಹುಟ್ಟಿದೆ. ಈ ಬಗ್ಗೆ ದಕ್ಷಿಣ ಏಷ್ಯಾ ಇಂಡೆಕ್ಸ್ ತನ್ನ ಟ್ವಿಟ್ಟರ್ ನಲ್ಲಿ ಇದರ ದುಷ್ಪರಿಣಾಮ ಮತ್ತು ಭಾರತಕ್ಕೆ ಈ ಬಗ್ಗೆ ಎದುರಾಗುವ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದೆ.

ದಕ್ಷಿಣ ಏಷ್ಯಾ ಇಂಡೆಕ್ಸ್‌ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ “ಇಂಡಿಯಾ ಯುಎನ್ ಮಟ್ಟದಲ್ಲಿ ಅಧಿಕೃತವಾಗಿ “ಇಂಡಿಯಾ” ಹೆಸರನ್ನು ರದ್ದುಗೊಳಿಸಿದರೆ ಪಾಕಿಸ್ತಾನವು ಅದರ ಮೇಲೆ ಹಕ್ಕು ಸಾಧಿಸಬಹುದು.” ಎಂದು ತನ್ನ ಖಾತೆಯಲ್ಲಿ ಬರೆದುಕೊಂಡಿದೆ‌.

“ಪಾಕಿಸ್ತಾನದ ರಾಷ್ಟ್ರೀಯವಾದಿಗಳು ಸಿಂಧೂ ಪ್ರದೇಶದ ಜನರು ನಾವು ಎಂದು ಉಲ್ಲೇಖಿಸುವುದರಿಂದ ಪಾಕಿಸ್ತಾನಕ್ಕೂ ‘ಇಂಡಿಯಾ’ ಹೆಸರಿನ ಮೇಲೆ ಹಕ್ಕುಗಳಿವೆ ಎಂದು ಬಹಳ ಹಿಂದಿನಿಂದಲೂ ವಾದಿಸಿದ್ದಾರೆ.”

Just IN:— Pakistan may lay claim on name "India" if India derecongnises it officially at UN level. – local media

— Nationalists in Pakistan have long argued that Pakistan has rights on the name as it refers to Indus region in 🇵🇰.
— South Asia Index (@SouthAsiaIndex) September 5, 2023

ಇದೇ ಟ್ವಿಟ್ಟರ್ ಹ್ಯಾಂಡಲ್ ನ ಹಿಂದಿನ ಟ್ವೀಟ್‌ನಲ್ಲಿ ‘ಭಾರತ ಸರ್ಕಾರವು ಭಾರತವನ್ನು “ಅವಸಾಹತೀಕರಣ” ಮಾಡುವ ಪ್ರಯತ್ನದಲ್ಲಿ ಭಾರತದ ಹೆಸರನ್ನು ಇಂಡಿಯಾದಿಂದ ಭಾರತಕ್ಕೆ ಬದಲಾಯಿಸಲು ಸಿದ್ಧವಾಗಿದೆ ಎಂದು ಹೇಳಿಕೊಂಡಿದೆ.

ಅಷ್ಟೇ ಅಲ್ಲದೆ ‘ಇದು ಸಂಸ್ಕೃತ ಭಾಷೆಯ ಬೇರು ಹೊಂದಿರುವ ಹಿನ್ನೆಲೆಯಲ್ಲಿ ಹಾಗೂ ಇದು ಮಧ್ಯಕಾಲೀನ ಯುಗದ ರಾಜನ ಹೆಸರನ್ನು ಹೊಂದಿರುವ ಹಿನ್ನೆಲೆಯಲ್ಲಿ ಈ ಹೆಸರು ಇಡಲು ಕಾರಣವಿರಬಹುದು’ ಎಂದೂ ಸಹ ಹೇಳಿಕೊಂಡಿದೆ‌.

ಸಿಂಧೂ ನದಿ ತಟದಲ್ಲಿ ವಾಸಿಸುವ ಜನರೆಂದು ಕರೆಯಲ್ಪಡುವ ಜನರನ್ನು ವಾಸಸ್ಥಾನಕ್ಕೆ ‘India’ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಎಂಬ ವಾದ ಹಿಂದಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಸಿಂಧೂ ನದಿಯ ಬಹುಭಾಗ ಪಾಕಿಸ್ತಾನದಲ್ಲಿ ಹರಿಯುತ್ತಿರುವ ಕಾರಣ ಪಾಕಿಸ್ತಾನ ‘India’ ಹೆಸರಿನ ಮೇಲೆ ಹೆಚ್ಚಿನ ಭಾಗ ಹಕ್ಕು ಸಾಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಸ್ವಾತಂತ್ರ್ಯ ಪೂರ್ವದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಅವರು ಹೊಸದಾಗಿ ಸ್ವತಂತ್ರ ದೇಶಕ್ಕೆ “ಇಂಡಿಯಾ” ಅನ್ನು ಅದರ ಹೆಸರಾಗಿ ಬ್ರಿಟಿಷ್ ಇಂಡಿಯಾ ಅಳವಡಿಸಿಕೊಳ್ಳುವುದನ್ನು ವಿರೋಧಿಸಿದ್ದರು ಮತ್ತು ಬದಲಿಗೆ ಹಿಂದೂಸ್ತಾನ್ ಅಥವಾ ಭಾರತ ಎಂದು ಇಡುವುದಾಗಿ ಸೂಚಿಸಿದ್ದರು. ಇದೂ ಸಹ ಈ ಹೆಸರಿನ ಹಿಂದೆ ಪಾಕಿಸ್ತಾನ ಹಕ್ಕು ಸಾಧಿಸುವ ಸಾಧ್ಯತೆಯನ್ನು ಹೊಂದಿದೆ.

ಗಮನಿಸಬೇಕಾದ ಅಂಶವೆಂದರೆ ದೇಶದ ಹೆಸರನ್ನು ಬದಲಾಯಿಸುವ ಬಗ್ಗೆ ಭಾರತ ಸರ್ಕಾರ (Governement of India) ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಇನ್ನು ಈ ಹೆಸರು ಬದಲಾವಣೆ ಒಂದು ಅನವಶ್ಯಕ ವಿಚಾರ ಎಂದು ಬಣ್ಣಿಸಿರುವ ಅನೇಕರು, ಕೇಂದ್ರ ಸರ್ಕಾರ ಅಭಿವೃದ್ಧಿ ವಿಚಾರದ ಬಗೆಗಿನ ಚರ್ಚೆಯನ್ನು ಹಾದಿ ತಪ್ಪಿಸಲು ಇಂತಹ ಚರ್ಚೆ ಹುಟ್ಟು ಹಾಕಿದೆ ಎಂದಿದ್ದಾರೆ. ಜೊತೆಗೆ ಇದರಿಂದ ಭಾರತೀಯರು ತಮ್ಮ ಮೂಲ ದಾಖಲೆಗಳಾದ ಆಧಾರ್, PAN card, ಸೇರಿದಂತೆ RBI, ಪಾಸ್ಪೋರ್ಟ್ ನಂತಹ ದಾಖಲೆಗಳ ಬದಲಾವಣೆ ವಿಚಾರದಲ್ಲಿ ತೀರಾ ಕೆಟ್ಟ ಪರಿಣಾಮ ಎದುರಿಸುವ ಸಾಧ್ಯತೆ ಇದೆ ಎಂಬ ಚರ್ಚೆ ಶುರುವಾಗಿದೆ.

Since BJP has changed name from India to old Bharat, So all these documents will be invalid? pic.twitter.com/BR6sBCtYZ3
— KRK (@kamaalrkhan) September 5, 2023

ಜೊತೆಗೆ ಮರುನಾಮಕರಣ ಆಗಿದ್ದೇ ಆದರೆ ಪಾಕಿಸ್ತಾನ India ಹೆಸರಿನ ಮೇಲೆ ಹಕ್ಕು ಸಾಧಿಸುತ್ತದೆ. ಆ ನಂತರ ದಾಖಲೆ ಬದಲಾವಣೆಯ ಗೊಂದಲ ಭಾರತದ ಆರ್ಥಿಕತೆ ಮೇಲೂ ಭಯಾನಕ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಭಾರತದಲ್ಲಿ ನೋಟು ಅಮಾನ್ಯೀಕರಣ (Demonetization) ಸಂದರ್ಭದಲ್ಲಿ ಆದ ದುಷ್ಪರಿಣಾಮದ ಹತ್ತು ಪಟ್ಟು ಕೆಟ್ಟ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.