rocking star – Peepal Media

ಯಶ್ ಅಭಿಮಾನಿಗಳ ದುರ್ಮರಣ : ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದಂದು ಬ್ಯಾನರ್ ಕಟ್ಟುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಮೃತರ ಬಗ್ಗೆ ಬರೆದುಕೊಂಡಿದ್ದು, “ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಚಿತ್ರನಟ ಯಶ್ ಅವರ ಜನ್ಮದಿನದ ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಪ್ರವಹಿಸಿ ಮೂವರು ಯುವಕರು ಮೃತಪಟ್ಟ ಸುದ್ದಿ ತಿಳಿದು ಬೇಸರವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ಅಷ್ಟೆ ಅಲ್ಲದೆ “ಬದುಕಿ ಬಾಳಬೇಕಿದ್ದ ಹುಡುಗರು ಹೀಗೆ ಅಚಾತುರ್ಯದಿಂದ ಸಾವಿಗೀಡಾಗಿದ್ದಾರೆ, ಅವರನ್ನು ನಂಬಿದ್ದ ಕುಟುಂಬವೀಗ ಸಂಕಷ್ಟಕ್ಕೆ ಸಿಲುಕಿದ್ದು ಆ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಮೃತ ದುರ್ದೈವಿಗಳಿಗೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದ್ದೇನೆ” ಎಂದು ತಿಳಿಸಿದ್ದಾರೆ.

ಇತ್ತ ರಾಕಿಂಗ್ ಸ್ಟಾರ್ ಯಶ್ ಕೂಡಾ ತಮ್ಮೆಲ್ಲಾ ತುರ್ತು ಕಾರ್ಯಗಳನ್ನು ಬದಿಗೊತ್ತಿ ಗದಗದ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಮಾನಿಗಳ ದಂಡೇ ನಟ ಯಶ್ ಅವರನ್ನು ಕಾಣಲು ನೆರೆದಿತ್ತು.

ಟಾಕ್ಸಿಕ್‌ನಲ್ಲಿ ಯಶ್‌ ಜೊತೆ ಕರೀನಾ!
ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ ಚಿತ್ರ ‘ಟಾಕ್ಸಿಕ್’ ನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್  ಇರಲಿರುವ ಸಾದ್ಯತೆಗಳ ಬಗ್ಗೆ ಬಾಲಿವುಡ್‌ನಲ್ಲಿ ಮಾತುಗಳು ಕೇಳಿಬರುತ್ತಿವೆ. ಇದು ಕರೀನಾ ಅವರ ಚೊಚ್ಚಲ ದಕ್ಷಿಣ ಭಾರತೀಯ ಭಾಷೆಯ ಚಿತ್ರವಾಗಲಿದೆ.

ಯಶ್ ಸೋಶಿಯಲ್ ಮೀಡಿಯಾದಲ್ಲಿ ಆಕರ್ಷಕ ಟೈಟಲ್ ಟೀಸರ್ ಅನ್ನು ಹಂಚಿಕೊಂಡಾಗಿನಿಂದ ‘ಟಾಕ್ಸಿಕ್’ ಸುತ್ತಲಿನ ನಿರೀಕ್ಷೆಯು ಹೆಚ್ಚಾಗುತ್ತಿದೆ. ಈಗ, ಕರೀನಾ ಕಪೂರ್ ಅವರನ್ನು ಪಾತ್ರವರ್ಗಕ್ಕೆ ಸೇರಿಸುವ ಮಾತುಕತೆಯೊಂದಿಗೆ, ನಿರೀಕ್ಷೆಗಳು ಇನ್ನೂ ಹೆಚ್ಚಾಗುತ್ತಿವೆ.

‘ಟಾಕ್ಸಿಕ್’ ಚಿತ್ರದ ಟೈಟಲ್ ಟೀಸರ್ ಈಗಾಗಲೇ ಪ್ರೇಕ್ಷಕರಲ್ಲಿ ಹೊಸಯಿಂದಾಗಿ ಛಾಪು ಮೂಡಿಸಿದೆ. ಈ ಚಿತ್ರದ ನಿಗೂಢ ಶೀರ್ಷಿಕೆ ಮತ್ತು ಆಕರ್ಷಕ ನಿರೂಪಣೆಯಿಂದಾಗಿ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ ಮತ್ತು ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ‘ಟಾಕ್ಸಿಕ್’ ಅನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಲಿದ್ದು,  ಏಪ್ರಿಲ್ 10, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಕರೀನಾ ಕಪೂರ್ ಅವರ ಸಂಭಾವ್ಯ ದಕ್ಷಿಣ ಚೊಚ್ಚಲ ಚಿತ್ರ:

ಕರೀನಾ ಕಪೂರ್ ಅವರೊಂದಿಗಿನ ಮಾತುಕತೆಗಳು ಕಾರ್ಯರೂಪಕ್ಕೆ ಬಂದರೆ, ಇದು ದಕ್ಷಿಣ ಭಾರತದ ಚಿತ್ರರಂಗಕ್ಕೆ ಅವರ ಮೊದಲ ಹೆಜ್ಜೆಯಾಗಲಿದೆ. ಇಬ್ಬರು ಪವರ್‌ಹೌಸ್ ಕಲಾವಿದರು ಪರದೆಯನ್ನು ಹಂಚಿಕೊಳ್ಳುತ್ತಿರುವ ಬಗೆಗಿನ ಮಾತುಗಳು ಈಗಾಗಲೇ ಅಪಾರ ನಿರೀಕ್ಷೆ ಸೃಷ್ಟಿಸಿದೆ. ಏಪ್ರಿಲ್ 10, 2025 ರಂದು ಟಾಕ್ಸಿಕ್‌ ಬಿಡುಗಡೆಯಾಗಲಿದ್ದು ಯಶ್, ಕರೀನಾ ಕಪೂರ್ ಕಮಾಲ್‌ ಮಾಡಲಿದ್ದಾರೆ.