RRR – Peepal Media

ರಾಜಮೌಳಿಗೆ RRR ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
ಹೊಸದಿಲ್ಲಿ: ಶುಕ್ರವಾರ ನಡೆದ ನ್ಯೂಯಾರ್ಕ್‌ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ನಲ್ಲಿ ಚಿತ್ರ ನಿರ್ಮಾಪಕ ಎಸ್‌.ಎಸ್‌ ರಾಜಮೌಳಿ ಅವರು ತನ್ನ ಆರ್‌ಆರ್‌ಆರ್‌(RRR) ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

ಪ್ರಶಸ್ತಿ ಗೆಲುವಿಗೆ ಪ್ರತಿಸ್ಪರ್ಧಿಗಳಾದ ಸ್ಟೀವನ್‌ ಸ್ಟೀಲ್‌ಬರ್ಗ್‌, ಡರಾನ್‌ ಆರೋನೋಫ್ಸ್ಕಿ, ಸಾರಾ ಪೊಲ್ಲಿ ಮತ್ತು ಗಿನಾ ಪ್ರಿನ್ಸ್‌- ಬ್ಲೈಥ್ವುಡ್‌ ಅವರಲ್ಲಿ ಎಸ್.ಎಸ್ ರಾಜಮೌಳಿ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ವಿದೇಶಿ ಮಾರುಕಟ್ಟೆಗಳಲ್ಲಿ ಆರ್‌ಆರ್‌ಆರ್‌ ಚಿತ್ರಕ್ಕೆ ಭರ್ಜರಿ ಸ್ವಾಗತ ದೊರೆತಿದ್ದು, ರಾಮ್‌ ಚರಣ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ಮುಖ್ಯ ಪಾತ್ರಗಲ್ಲಿ ನಟಿಸಿರುವ ಈ ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ , ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ ಸೇರಿದಂತೆ ಹಲವು ಪ್ರಮುಖ ವಿಭಾಗಗಳಲ್ಲಿ ನಾಮನಿರ್ದೇಶನದಲ್ಲಿ ಸ್ಥಾನ ಪಡೆಯಲು ಸ್ಪರ್ಧಿಸುತ್ತಿದೆ.

ವಿಶ್ವಾದ್ಯಂತ ತನ್ನ ಗಲ್ಲಾಪೆಟ್ಟಿಗೆಯಲ್ಲಿ 1200 ಕೋಟಿ ರೂ.ಗಳಿಗಿಂತಲೂ ಹೆಚ್ಚು ಗಳಿಸಿರುವ ಈ RRR ಚಿತ್ರವು ಭಾರತದಲ್ಲಿ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಅಲ್ಲದೇ ಭಾರತೀಯ ಚಲನಚಿತ್ರ ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಸಹ ಪಡೆದಿದೆ.

ಅಲ್ಲದೇ ಶುಕ್ರವಾರದ ನ್ಯೂಯಾರ್ಕ್‌ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ನಲ್ಲಿ, ಕೊಗೊನಾಡಾ ಅವರ ʼಫ್ಯೂ‌ಚರ್‌ ಸೆಟ್ ಸೈ-ಫೈ ಆಫ್ಟರ್‌ ಯಾಂಗ್ʼ ನಾಟಕ ಮತ್ತು ಮಾರ್ಟಿನ್‌ ಮೆಕ್ಡೊನಾಗ್‌ ಅವರ ʼದಿ ಬನ್ಶೀಸ್‌ ಆಫ್‌ ಇನಿಶೇರಿನ್‌ʼ ಎಂಬ ಈ ವರ್ಷದ ಎರಡು ಪ್ರದರ್ಶನಗಳಿಗಾಗಿ ಕಾಲಿನ್‌ ಫಾರೆಲ್‌ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.

ʼಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್ʼ ಚಿತ್ರದಲ್ಲಿನ ಅಭಿನಯಕ್ಕಾಗಿ ಕೆ.ಹ್ಯೂಯ್ ಕ್ವಾನ್ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಕೆಕೆ ಪಾಮರ್ ಅವರು ತಮ್ಮ ʼನೋಪ್ʼ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗೆದ್ದು ಸಂಭ್ರಮ ಪಟ್ಟಿದ್ದಾರೆ.

ದೇಶದ ಗಡಿ ದಾಡಿ ರಿಮೇಕ್ ಆಗುತ್ತಾ ಆರ್ ಆರ್ ಆರ್, ಕೊರಿಯಾದಲ್ಲಿ ರಾಜಮೌಳಿ ಹವಾ
ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾದ ನಿರ್ದೇಶಕ, ನಿರ್ಮಾಪಕ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರ, ಇದುವರೆಗಿನ ಅತಿದೊಡ್ಡ ಭಾರತೀಯ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಅಭಿನಯದ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿಗಳನ್ನು ಸಂಗ್ರಹಿಸಿದೆ ಮತ್ತು ಈಗ ಆಸ್ಕರ್ 2023 ಗೆ ಭಾರತದ ಅಧಿಕೃತ ಪ್ರವೇಶವಾಗಿ ಸ್ಪರ್ಧಿಗಳಲ್ಲಿ ಒಂದಾಗಿದೆ.

ರಾಜಮೌಳಿಯ ಈ ಆಕ್ಷನ್ ಡ್ರಾಮಾ ಚಿತ್ರವನ್ನು ಪ್ಯಾನ್-ಇಂಡಿಯಾ ಚಿತ್ರ ಎಂದು ಕರೆಯಲಾಯಿತು. ಈ ಚಿತ್ರ  OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಶಂಸೆ ಗಳಿಸಲು ಪ್ರಾರಂಭಿಸಿತು. ಹಲವಾರು ಹಾಲಿವುಡ್ ಚಲನಚಿತ್ರ ನಿರ್ಮಾಪಕರು ಚಲನಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಿದರು. ಅನೇಕ ಅಂತರರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರು ಇದರ ಬಗ್ಗೆ ಮಾತನಾಡಿದರು. ಹಾಗಾಗಿ ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆಯೂ ದೊರಕಿತು.

ಈಗ ಇತ್ತೀಚಿನ ವರದಿಯ ಪ್ರಕಾರ ಎಸ್‌ಎಸ್ ರಾಜಮೌಳಿ ಅವರ ಚಿತ್ರ ಆರ್‌ಆರ್‌ಆರ್ ಕೊರಿಯಾದಲ್ಲಿ ರೀಮೇಕ್ ಆಗಲಿದೆ. ಗುರು ಫಿಲ್ಮ್‌ನ ಸುನೀತಾ ತಾಟಿ ಅವರು ಸಖಿನಿ ದಖಿನಿ ಚಿತ್ರವನ್ನು ಸಹ-ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ನಿವೇತಾ ಥಾಮಸ್ ಮತ್ತು ರೆಜಿನಾ ಕಸ್ಸಂದ್ರ ನಟಿಸಿದ್ದು, ಇದು ಕೊರಿಯನ್ ಚಲನಚಿತ್ರ ಮಿಡ್‌ನೈಟ್ ರನ್ನರ್ಸ್‌ನ ಅಧಿಕೃತ ರಿಮೇಕ್ ಆಗಿದೆ. ಅವರು ರಾಮ್ ಚರಣ್, ಜೂನಿಯರ್ ಎನ್ಟಿಆರ್ ಅಭಿನಯದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು.

ಸಖಿನಿ ದಖಿನಿ ಚಿತ್ರದ ಪ್ರಚಾರ ಮಾಡುವಾಗ ಸುನಿತಾ ತಾಟಿ, ಇಡೀ ಜಗತ್ತು ಕೊರಿಯನ್ ಚಲನಚಿತ್ರಗಳ ಹಿಂದೆ ಇದೆ, ಆದರೆ, ಕೊರಿಯನ್ನರು RRR ಹಿಂದೆ ಇದ್ದಾರೆ ಎಂದು ಹೇಳಿದ್ದರು. ಜೊತೆಗೆ ಆರ್ ಆರ್ ಆರ್ ಚಿತ್ರದ ರಿಮೇಕ್ ಹಕ್ಕುಗಳಿಗಾಗಿ ಕೊರಿಯನ್ ಚಿತ್ರರಂಗದಿಂದ ದೊಡ್ಡ ಬೇಡಿಕೆ ಇದೆ ಎಂದೂ ಹೇಳಿದ್ದರು. ರಾಜಮೌಳಿ ಅವರಿಗೆ ಇದರ ಬಗ್ಗೆ ತಿಳಿದಾಗ ಅವರು ಇದರ ಬಗ್ಗೆ ಆಸಕ್ತಿ ಹೊಂದಿದ್ದರಂತೆ. ಹಾಗಾಗಿ ಕೆಲವು ಕೊರಿಯನ್ ಸಿನಿಮಾ ಮೇಕರ್ಸ್ ಈಗಾಗಲೇ ಆರ್ ಆರ್ ಆರ್ ಅನ್ನು ಕೊರಿಯಾಗೆ ಕೊಂಡೊಯ್ಯಲು ತಯಾರಿ ನಡೆಸಿದ್ದಾರಂತೆ. ಸೋ, ಆರ್ ಆರ್ ಆರ್ ಮತ್ತು ರಾಜಮೌಳಿ ಪ್ರೇಮಿಗಳಿಗೆ ಈ ಸಿನಿಮಾ ಭಾರತದ ಗಡಿ ಮೀರಿ ಇನ್ನೊಂದು ಭಾಷೆಗೆ ರಿಮೇಕ್ ಆಗುವ ಸಾಧ್ಯತೆ ಇದೆ ಅನ್ನೋ ಸುದ್ದಿ ಸಾಕಷ್ಟು ಖುಷಿ ತಂದಿದೆ.