RSS Camp – Peepal Media

ಹೋದಲ್ಲೆಲ್ಲ ಆತ್ಮಹತ್ಯೆ ಅಸ್ತ್ರ ಬಳಸುವ ಚೈತ್ರಾ ಗ್ಯಾಂಗ್: ಗೋವಿಂದ ಪೂಜಾರಿ ಕಚೇರಿಯಲ್ಲೂ ಹೈಡ್ರಾಮಾ
ಟಿಕೆಟ್ ವಂಚನೆಯ 5 ಕೋಟಿ ಡೀಲ್ ಪ್ರಕರಣದ ವಿಡಿಯೋ ಸಾಕ್ಷಿಯೊಂದು ಪ್ರಕರಣದ ತನಿಖೆ ವೇಳೆ ಹೊರಬಿದ್ದಿದೆ. ವಂಚಕಿ ಚೈತ್ರ ಕುಂದಾಪುರ ಗ್ಯಾಂಗ್ ಸಂತ್ರಸ್ತ ಗೋವಿಂದ ಪೂಜಾರಿ ಕಚೇರಿಯಲ್ಲಿ ನಡೆಸಿದ್ದಾರೆ ಎನ್ನಲಾದ ಸಂಧಾನದ ಸಿಸಿ ಕ್ಯಾಮರಾದ ವಿಡಿಯೋ ಇದಾಗಿದ್ದು, ಆ ವಿಡಿಯೋದಲ್ಲೂ ಚೈತ್ರ ಗ್ಯಾಂಗ್ ನಡೆಸಿದ ಆತ್ಮಹತ್ಯೆ ನಾಟಕ ಹೊರಬಿದ್ದಿದೆ.

ಹಣ ಕಳೆದುಕೊಂಡ ಸಂಘಪರಿವಾರದ ಕಾರ್ಯಕರ್ತ, ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಟಿಕೆಟ್ ವಂಚನೆಯ ಜಾಲದ ಬಗ್ಗೆ ಅರಿವಾಗುತ್ತಲೇ ಪ್ರಕರಣದ ಪ್ರಮುಖ ಆರೋಪಿಗಳನ್ನು ತನ್ನ ಕಛೇರಿಗೆ ಕರೆಸಿಕೊಂಡಿದ್ದಾರೆ. ಏಪ್ರಿಲ್ 24 ಕ್ಕೆ ಗೋವಿಂದ ಪೂಜಾರಿ ಕಚೇರಿಯಲ್ಲಿ ಸಂಧಾನದ ಮಾತುಕತೆ ನಡೆದಿದೆ. ಈ ಸಂದರ್ಭದಲ್ಲಿ ಗೋವಿಂದ ಬಾಬು ಪೂಜಾರಿ ತಾನು ಕೊಟ್ಟ 5 ಕೋಟಿ ವಾಪಸ್ ಕೊಡಬೇಕೆಂದು ತಾಕೀತು ಮಾಡಿದ್ದಾರೆ.

ಬೆಂಗಳೂರಿನ ಬಂಡೆಪಾಳ್ಯದಲ್ಲಿರುವ ಗೋವಿಂದ ಬಾಬು ಪೂಜಾರಿ ಕಚೇರಿಗೆ ಪ್ರಕರಣದಲ್ಲಿ ಭಾಗಿಯಾದ ಪ್ರಮುಖರನ್ನು ಏಪ್ರಿಲ್ 24 ಕ್ಕೆ ಕರೆಸಲಾಗಿತ್ತು. ಈ ಸಂದರ್ಭದಲ್ಲಿ ಚೈತ್ರಾ, ಗಗನ್, ಪ್ರಸಾದ್ ಬೈಂದೂರು, ಶ್ರೀಕಾಂತ್ ಹಾಗೂ ಪ್ರಮುಖರು ಹಾಜರಿದ್ದರು.

ಈ ಸಂದರ್ಭದಲ್ಲಿ ಚೈತ್ರಾ ಗ್ಯಾಂಗ್ ಮೇಲೆ ತಿರುಗಿ ಬಿದ್ದ ಗೋವಿಂದ ಬಾಬು ಪೂಜಾರಿ “ದುಡ್ಡು ತೆಗೆದುಕೊಂಡು ಮೋಸ ಮಾಡಿದ್ದೀರ. 3 ಕೋಟಿ ಹಣ ಕುಮಾರಕೃಪಾದಲ್ಲಿ ಕೊಟ್ಟಿದ್ದೆ. ನೀವು ಕೇಳಿದಂತೆ ಹಣ ಕೊಟ್ಟರೂ ಕೆಲಸವಾಗಿಲ್ಲ. ದುಡ್ಡು ತೆಗೆದುಕೊಂಡು ನೀವು ಮೋಸ ಮಾಡಿದ್ದೀರ ಅನ್ನೋದು ಗೊತ್ತಾಗಿದೆ. ಮುಂಬೈನಲ್ಲಿ ಸಂತೋಷ್ ಶೆಟ್ಟಿ ಜೊತೆ ಮಾತಾಡಿದ್ದೇನೆ. RsS ಹಿನ್ನೆಲೆಯ ವಿಶ್ವನಾಥ್ ಅನ್ನೋರು ಇದಾರಾ ಇಲ್ವಾ ಎಂಬುದು ನನ್ನ ಪ್ರಶ್ನೆ? ಎಲ್ಲಾ ಕಡೆ ವಿಚಾರಿಸಿದ್ದೀನಿ. ನೀವು ನನಗೆ ಮೋಸ ಮಾಡಿರುವುದು ಸ್ಪಷ್ಟವಾಗಿದೆ” ಎಂದು ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕೆ.ಆರ್.ಪುರ ವ್ಯಾಪ್ತಿಯಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯನ್ನು ಚೈತ್ರ ಮತ್ತು ಗ್ಯಾಂಗ್ RSS ಹಾಗೂ BJP ಯ ಪ್ರಭಾವಿ ನಾಯಕರು ಇವರು, ಇವರಿಂದ ಬಿಜೆಪಿ ಟಿಕೆಟ್ ಪಡೆಯಬಹುದು ಎಂದು ಹೇಳಿ ಯಾಮಾರಿಸಲಾಗಿತ್ತು. ಇದನ್ನು ಅರಿತ ಪೂಜಾರಿ, ‘ವಿಶ್ವನಾಥ್ ಅನ್ನೋರು ಯಾರಿಲ್ಲ, ಸತ್ಯ ಒಪ್ಪಿಕೊಳ್ಳಿ.’ ಎಂದು ಗದರಿಸಿದ್ದಾರೆ.

ಆಗ ಅಲ್ಲೇ ಇದ್ದ ಚೈತ್ರ ಕುಂದಾಪುರ ಆಪ್ತ ಗಗನ್ ಕಡೂರಿಗೆ ಚೈತ್ರ ಬೈದಂತೆ ಹೈಡ್ರಾಮ ಸೃಷ್ಟಿ ಮಾಡಿದ್ದಾಳೆ. ಈ ವೇಳೆ ಪೂಜಾರಿ ಎದುರಲ್ಲೇ ಚೈತ್ರ ಹಾಗೂ ಗಗನ್ ಕಡೂರು ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ 3.5 ಕೋಟಿ ಕೇಳಿದ ನಂತರ ಗಗನ್ ಕಡೂರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ನಾಟಕವಾಡಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಿಸಿ ಕ್ಯಾಮರಾದಲ್ಲಿ ಪೂಜಾರಿ-ಚೈತ್ರಾ ನಡುವಿನ ಚರ್ಚೆ. ಪೂಜಾರಿ ಮುಂದೆ ಚೈತ್ರಾ ಅಂಡ್ ಟೀಂ ನಾಟಕ. ಗಗನ್ ಕಡೂರು ವಿಷ ಕುಡಿದ ರೀತಿ ನಾಟಕ ಎಲ್ಲವೂ ಸೆರೆಯಾಗಿದ್ದು ಪೊಲೀಸರಿಗೆ ಸಿಕ್ಕ ಮಾಹಿತಿ ಲಭ್ಯವಾಗಿದೆ. ಯಾಮಾರಿಸುವ ಪ್ರತೀ ಸಂದರ್ಭದಲ್ಲಿಯೂ ಚೈತ್ರ ಅಂಡ್ ಗ್ಯಾಂಗ್ ಈ ರೀತಿ ವಿಷ ಕುಡಿದು ಬ್ಲಾಕ್ಮೇಲ್ ಮಾಡುವ ನಾಟಕವಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ‌.

ಪ್ರಕರಣದ ತನಿಖೆ ವೇಳೆಯಲ್ಲೂ ಸೋಪಿನ ನೊರೆ ಬಾಯಲ್ಲಿ ಹಾಕಿಕೊಂಡು ಹೈಡ್ರಾಮ ಸೃಷ್ಟಿ ಮಾಡಿದ್ದು ಇಲ್ಲಿ ನೆನೆಸಿಕೊಳ್ಳಬೇಕು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಆರ್‌ಎಸ್‌ಎಸ್‌ ಶಿಬಿರ: ದುರ್ಬಳಕೆಗೆ ಸರ್ಕಾರದ ಕುಮ್ಮಕ್ಕು
ರಾಜ್ಯ ಸರ್ಕಾರ ನಡೆಸುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ತನ್ನ ತಾಲೀಮು ಶಿಬಿರವನ್ನು ಹಮ್ಮಿಕೊಂಡಿದ್ದು ರಾಜಕೀಯ ಸಿದ್ದಾಂತ ಪ್ರಚಾರದ ಉದ್ದೇಶಕ್ಕೆ ಶಿಕ್ಷಣ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲಸಕ್ಕೆ ಸರ್ಕಾರವೇ ಬೆಂಬಲ ಒದಗಿಸಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಉತ್ತರಕನ್ನಡ ಜಿಲ್ಲೆಯ ಕಲ್ಲಿ ಶಿರಸಿ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೊತಾಂಡಹಳ್ಳಿ ಮುರಾರ್ಜಿ ಶಾಲೆಯಲ್ಲಿ, ಮೇಲಿನಂತೆ ಶಿಬಿರ ನಡೆಸಲು ಸ್ಥಳಾವಕಾಶ ಕಲ್ಪಿಸುವಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಜಿಲ್ಲೆಯ ಸಮಾಜ ಇಲಾಖೆಯ ಉಪನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಇದಕ್ಕೆ ಸರ್ಕಾರವು ಕೂಡ ಸಮ್ಮತಿ ನೀಡಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕರಪತ್ರ

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೆ.ಜಿ.ಲಕ್ಷ್ಮೀಸಾಗರದಲ್ಲಿ (ಕೂತಾಂಡಹಳ್ಳಿ) ಅ.9 ರಿಂದ ಅ.17ರವರೆಗೆ ಆರ್‌ ಎಸ್‌ ಎಸ್‌ ನ ಕೋಲಾರ ವಿಭಾಗದ ಉದ್ಯೋಗಿ ಪ್ರಾಥಮಿಕ ಶಿಕ್ಷಾ ವರ್ಗವು ನಡೆಯಲಿದ್ದು, ಈ ವರ್ಗದಲ್ಲಿ ಕರಾಟೆ, ದೊಣ್ಣೆವರೆಸೆ, ಯೋಗಾಸನ, ಇತ್ಯಾದಿ ಶಾರೀರಿಕ ಅಭ್ಯಾಸಗಳನ್ನು ಕಲಿಸಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೋಲಾರ ವಿಭಾಗ ಪ್ರಾಥಮಿಕ ಶಿಕ್ಷಾ ವರ್ಗದವರು ಹೊರಡಿಸಿರುವ ಕರಪತ್ರದಲ್ಲಿ ತಿಳಿಸಲಾಗಿದೆ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕೂತಾಂಡಹಳ್ಳಿಯಲ್ಲಿರುವ ಕರ್ನಾಟಕ ಸರ್ಕಾರದ ಕ್ರೈಸ್ ಸಂಸ್ಥೆಯ ವಸತಿ ನಿಲಯವನ್ನು ನಾಳೆಯಿಂದ(ದಿ:9:10:2022 ರಿಂದ :17/10/2022ರ ವರಗೆ ) ಒಟ್ಟು 9 ದಿನಗಳ ಕಾಲ ಸಂಘ ಪರಿವಾರದ ತಾಲೀಮು ಶಿಬಿರ ನಡೆಸಲು ಸ್ವತಃ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರೇ ವಸತಿ ಶಾಲೆಯನ್ನು ಹಿಂದುತ್ವ ಕಾರ್ಯಗಳಿಗೆ ಬಳಕೆಗೆ ಬಿಟ್ಟು ಕೊಡಲು ಶಿಫಾರಸ್ಸು ಮಾಡಿದ್ದಾರೆ.

ʼಆರ್‌ ಎಸ್‌ ಎಸ್‌ ಸಂಘಟನೆಯು ಹಿಂದುತ್ವ ರಾಜಕೀಯ ಸಿದ್ಧಾಂತ ಹೊಂದಿರುವ ಸಂಘಟನೆಯಾಗಿದ್ದು ದೇಶವನ್ನು ಮತ ಧರ್ಮಗಳ ಹೆಸರಿನಲ್ಲಿ ಛಿದ್ರಗೊಳಿಸುವ ಉದ್ದೇಶ ಹೊಂದಿರುವುದಲ್ಲದೇ ದೇಶಭಕ್ತಿಯ ಹೆಸರಿನಲ್ಲಿ ಅಮಾಯಕ ತರುಣರನ್ನು ವಿಚ್ಛಿದ್ರಕಾರಿ ಕೃತ್ಯಗಳಿಗೆ ಪ್ರೇರೇಪಣೆ ನಡೆಸುತ್ತದೆಯಾದ್ದರಿಂದ ಸರ್ಕಾರವೇ ಶಿಕ್ಷಣ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲಸಕ್ಕೆ ಅವಕಾಶ ನೀಡಿರುವುದನ್ನು ಕೂಡಲೇ ಹಿಂಪಡೆಯಬೇಕುʼ ಎಂದು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಕಾರ್ಯದರ್ಶಿ ವಾಸುದೇವ ರೆಡ್ಡಿ ಆಗ್ರಹಿಸಿದ್ದಾರೆ. ʼಸರ್ಕಾರ ಅವಕಾಶ ನೀಡಿದಲ್ಲಿ ಶಿಬಿರ ನಡೆಯುವ ವಸತಿ ಶಾಲೆ ಎದುರು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದೇವೆʼ ಎಂದು ಸಹ ಅವರು ಎಚ್ಚರಿಕೆ ನೀಡಿದ್ದಾರೆ.

ದಲಿತ ಚಿಂತಕ ವಿಠ್ಠಲ ವಗ್ಗನ್‌ ಅವರು ತಮ್ಮ ಫೇಸ್ಬುಕ್‌ ಪುಟದಲ್ಲಿ ಪ್ರತಿಕ್ರಿಯಿಸಿ “ಸರಕಾರಿ ಶಾಲೆಗಳು ಮತ್ತು ಸರಕಾರಿ ವಸತಿ ನಿಲಯಗಳು ಆರ್‌ ಎಸ್‌ ಎಸ್‌ ತರಬೇತಿ ಕೇಂದ್ರಗಳಾಗಿವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಠ್ಠಲ ವಗ್ಗನ್‌ ಅವರು ಫೇಸ್ಬುಕ್‌ ನಲ್ಲಿ ಪ್ರತಿಕ್ರಿಯಿಸಿರುವುದು