Russia-Ukraine Border – Peepal Media

ರಷ್ಯಾ ನಿರ್ಬಂಧ ಮಸೂದೆಯಿಂದ ಭಾರತಕ್ಕೆ ‘ಆರ್ಥಿಕ ಹೊಡೆತ’- ಅಮೆರಿಕಾ ಸೆನೆಟರ್ ಲಿಂಡ್ಸೆ ಗ್ರಹಾಂ
ಉಕ್ರೇನ್ ಪರವಾಗಿ ದೀರ್ಘಕಾಲದಿಂದ ಬೆಂಬಲಿಸಿಕೊಂಡು ಬರುತ್ತಿರುವ ಅಮೆರಿಕಾದ ಸೆನೆಟರ್ ಲಿಂಡ್ಸೆ ಗ್ರಹಾಂ, ರಷ್ಯಾ ವಿರುದ್ಧ ಹೇರಲಾದ ತಮ್ಮ ನಿರ್ಬಂಧಗಳ ಮಸೂದೆಯು ಮಾಸ್ಕೋ ಮತ್ತು ಭಾರತದ ಜೊತೆಗೆ ವ್ಯಾಪಾರ ಮಾಡುವ ಇತರ ದೇಶಗಳ ವಿರುದ್ಧ “ಆರ್ಥಿಕ ಬಂಕರ್ ಬಸ್ಟರ್ – Economic Bunker Buster” (ಆರ್ಥಿಕ ಹೊಡೆತ) ಆಗಲಿದೆ ಎಂದು ಹೇಳಿದ್ದಾರೆ.

ಜೂನ್ 22 ರಂದು ದೂರದರ್ಶನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಗ್ರಹಾಂ ಅವರು ಈ ಮಸೂದೆಗೆ 84 ಸಹ-ಪ್ರಾಯೋಜಕರನ್ನು ಹೊಂದಿದ್ದಾರೆ ಎಂದು ಹೇಳಿದ್ದರು, “ಇದು ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಕ್ರೂರ ಆಕ್ರಮಣಕ್ಕಾಗಿ ಚೀನಾ, ಭಾರತ ಮತ್ತು ರಷ್ಯಾ ವಿರುದ್ಧ ನಡೆಸುವ ಆರ್ಥಿಕ ಬಂಕರ್ ಬಸ್ಟರ್ ಆಗಿದೆ. ಆ ಮಸೂದೆ ಅಂಗೀಕಾರವಾಗಲಿದೆ ಎಂದು ನಾನು ಭಾವಿಸುತ್ತೇನೆ… ಆ ಮಸೂದೆಯ ಪರ ಮತ ಚಲಾಯಿಸುವ ಸಮಯ ಬಂದಿದೆ,” ಎಂದು ಅವರು ಹೇಳಿದ್ದಾರೆ.

2025 ರ ರಷ್ಯಾ ನಿಷೇಧ ಕಾಯ್ದೆಯನ್ನು ಈ ವರ್ಷದ ಏಪ್ರಿಲ್‌ನಲ್ಲಿ ಅಮೇರಿಕಾ ಸೆನೆಟ್‌ನಲ್ಲಿ ಮಂಡಿಸಲಾಯಿತು.

ಮಸೂದೆಯೊಂದಿಗೆ ಗ್ರಹಾಂ ಅವರ ನಡೆಗಳ ಕುರಿತು ಪೊಲಿಟಿಕೊ ಮಾಡಿದ ವರದಿಯು, ರಷ್ಯಾದ ಶಕ್ತಿಯನ್ನು ಖರೀದಿಸುವ ಯಾವುದೇ ದೇಶದ ಮೇಲೆ 500% ಸುಂಕಗಳನ್ನು ವಿಧಿಸುವುದು ಸೌತ್ ಕೆರೊಲಿನಾ ರಿಪಬ್ಲಿಕನ್ ಪಕ್ಷದ ಪ್ರಸ್ತಾಪವಾಗಿ ಎಂದು ಉಲ್ಲೇಖಿಸಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಇರುವ ಪ್ರಸಿದ್ಧ ಸ್ನೇಹದಿಂದಾಗಿ ಈ ಮಸೂದೆಯನ್ನು ಅಮೆರಿಕ ಸೆನೆಟ್‌ನಲ್ಲಿ ಅಂಗೀಕರಿಸುವುದು ಕಷ್ಟವಾಗಿದೆ. ಹಾಗಿದ್ದೂ, ಇತ್ತೀಚೆಗೆ, ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪುಟಿನ್ ಅವರನ್ನು “CRAZY” ಎಂದು ಕರೆದಿದ್ದರು. ಇದು ಅವರ ಮಧ್ಯೆ ಇರುವ ದೋಸ್ತಿತನ ಅಷ್ಟೇನೂ ಚೆನ್ನಾಗಿಲ್ಲ ಎಂಬುದನ್ನು ತೋರಿಸುತ್ತದೆ.

ಕಳೆದ ವಾರಗಳಲ್ಲಿ, ಶ್ವೇತಭವನದ ಮತ್ತು ಇತರ ಆಡಳಿತ ಅಧಿಕಾರಿಗಳು “ಸದ್ದಿಲ್ಲದಂತೆ ಗ್ರಹಾಂ ಅವರ ಕಚೇರಿಯನ್ನು ಸಂಪರ್ಕಿಸಿ”, ಟ್ರಂಪ್ ಅವರೇ ಯಾರಿಗೆ ಅನುಮತಿ ನೀಡಬೇಕೆಂದು ಆಯ್ಕೆ ಮಾಡಲು ಅವಕಾಶ ನೀಡಬೇಕು ಮತ್ತು ವಾಗ್ದಂಡನೆಗಳ ಪಟ್ಟಿಯಲ್ಲಿ “shall” ಬದಲಿಗೆ “may” ಎಂದು ಬದಲಾಯಿಸುವ ಮೂಲಕ ಅವರ ಮಸೂದೆಯನ್ನು ಪ್ರಭಾವವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಜೂನ್‌ನಲ್ಲಿ ವರದಿ ಮಾಡಿತ್ತು .

ಪೊಲಿಟಿಕೊ ಪ್ರಕಾರ, ಗ್ರಹಾಂ ಉಕ್ರೇನ್‌ಗೆ ಸಹಾಯ ಮಾಡಿದ ದೇಶಗಳಿಗೆ ವಿನಾಯಿತಿ ನೀಡಲು ಯೋಜಿಸಿದ್ದಾರೆ, ಇದು ಯುರೋಪಿಯನ್ ಒಕ್ಕೂಟವು ಮಸೂದೆಯ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯನ್ನು ಸೂಚಿಸುತ್ತದೆ.

ಈ ಕ್ರಮವು ಸ್ವಾಭಾವಿಕವಾಗಿಯೇ ಭಾರತದಂತಹ ಪ್ರಮುಖ ಆರ್ಥಿಕತೆಗಳು ಅಮೆರಿಕದೊಂದಿಗೆ ಸಂಬಂಧ ಕಡಿತಗೊಳಿಸುವಂತೆ ಮಾಡುತ್ತದೆ, ಏಕೆಂದರೆ ಚೀನಾದೊಂದಿಗೆ ಭಾರತವೂ ರಷ್ಯಾದ ಇಂಧನ ರಫ್ತಿನ ಸರಿಸುಮಾರು 70% ಖರೀದಿಸುತ್ತದೆ. ರಷ್ಯಾದಿಂದ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಅಮೆರಿಕವೂ ಸೇರಿದೆ, ಇದು ತನ್ನ ಪರಮಾಣು ರಿಯಾಕ್ಟರ್‌ಗಳಿಗೆ ಇಂಧನವಾಗಿ ಬಳಕೆಯಾಗುವ ಪುಷ್ಟೀಕರಿಸಿದ ಯುರೇನಿಯಂಗಾಗಿ ರಷ್ಯಾದಿಂದ ಖರೀದಿಸುತ್ತದೆ.

ಈ ಮಸೂದೆಯು ಅಮೆರಿಕದ ಸೆನೆಟ್ ಮತ್ತು ಕಾಂಗ್ರೆಸ್ ಮೂಲಕ ಪಾಸ್‌ ಆಗಲು ಸಮಯ ತೆಗೆದುಕೊಳ್ಳುತ್ತದೆಯಾದರೂ, ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಾಲ್ಕನೇ ವರ್ಷದಲ್ಲಿ ಈ ದೇಶಕ್ಕೆ ದ್ವಿಪಕ್ಷೀಯ ಮತ್ತು ವ್ಯಾಪಕವಾದ ಬೆಂಬಲ ಸಿಗಬೇಕು ಎಂದು ವಿವರಿಸಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ರಷ್ಯಾ ಭಾರತದ ಅಗ್ರ ಮೂರು ಕಚ್ಚಾ ತೈಲ ಪೂರೈಕೆದಾರರಲ್ಲಿ ಒಂದಾಗಿದೆ. ಮೇ 2025 ರಲ್ಲಿ, ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ ವರದಿಯ ಪ್ರಕಾರ, ರಷ್ಯಾದ ಮಾಸಿಕ ಪಳೆಯುಳಿಕೆ ಇಂಧನ ರಫ್ತು ಆದಾಯವು ತಿಂಗಳಿಂದ ತಿಂಗಳಿಗೆ 3% ರಷ್ಟು ಕುಸಿದು ದಿನಕ್ಕೆ 565 ಮಿಲಿಯನ್ ಯುರೋಗಳಿಗೆ ತಲುಪಿದೆ – ಇದು ಆಕ್ರಮಣದ ನಂತರದ ಕಂಡು ಬಂದ ಅತ್ಯಂತ ದೊಡ್ಡ ಇಳಿಕೆಯಾಗಿದೆ. ಆದರೆ ಭಾರತ ಮಾಡಿಕೊಳ್ಳುತ್ತಿರುವ ರಷ್ಯಾದ ಕಲ್ಲಿದ್ದಲಿನ ಆಮದು ತಿಂಗಳಿನಿಂದ ತಿಂಗಳಿಗೆ 34% ರಷ್ಟು ಏರಿಕೆಯಾಗಿದೆ – ಇದು ಸಾರ್ವಕಾಲಿಕ ಹೆಚ್ಚಳವಾಗಿದೆ. ಭಾರತವು ರಷ್ಯಾದ ಕಚ್ಚಾ ತೈಲ ರಫ್ತಿನ 38% ಅನ್ನು ಖರೀದಿಸಿದೆ.

ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ಭಾರತವು ಸಾರ್ವಜನಿಕವಾಗಿ ಟೀಕಿಸಲು ಹಿಂಜರಿಯುತ್ತಿರುವುದು ಮತ್ತು ಇತ್ತೀಚಿನ ದಿನಗಳಲ್ಲಿ ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಖರೀದಿದಾರರಲ್ಲಿ ಒಂದಾಗಿ ಅದರ ಸ್ಥಿರ ಸ್ಥಾನವನ್ನು ಉಳಿಸಿಕೊಂಡಿರುವುದು ಉಕ್ರೇನ್ ಯುದ್ಧ ಪ್ರಾರಂಭವಾದ 2022 ರ ಆರಂಭದಿಂದಲೂ ಅಮೆರಿಕದೊಂದಿಗೆ ಆಗಾಗ ಘರ್ಷಣೆಗೆ ಒಳಗಾಗುವಂತೆ ಮಾಡಿದೆ.

ಭಾರತಕ್ಕೆ ಕರೆತರಲು ಸತತ ಮನವಿ ಮಾಡಿದ್ದ ರಷ್ಯಾದ ಸೇನೆಯಲ್ಲಿರುವ ಕೇರಳದ ವ್ಯಕ್ತಿ ರಷ್ಯಾ-ಉಕ್ರೇನ್‌ ಯುದ್ದದಲ್ಲಿ ಸಾವು
ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಭಾರತಕ್ಕೆ ವಾಪಾಸು ಕರೆತರಲು ನೆರವಾಗುವಂತೆ ಹಲವಾರು ಮನವಿಗಳನ್ನು ಮಾಡಿದ್ದ ರಷ್ಯಾದ ಸೇನೆಯಲ್ಲಿ ಹೋರಾಡುತ್ತಿದ್ದ ಕೇರಳದ ವ್ಯಕ್ತಿ ರಷ್ಯಾ ಮತ್ತು ಉಕ್ರೇನ್ ಯುದ್ಧದ ಮುಂಚೂಣಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮೃತ ವ್ಯಕ್ತಿಯನ್ನು ಕೇರಳದ ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿ ನಿವಾಸಿ 32 ವರ್ಷದ ಬಿನಿಲ್ ಟಿಬಿ ಎಂದು ಗುರುತಿಸಲಾಗಿದೆ. ಇದೇ ದಾಳಿಯಲ್ಲಿ ಬಿನಿಲ್ ಅವರ ಸಂಬಂಧಿ 27 ವರ್ಷದ ಜೈನ್ ಟಿಕೆ ಕೂಡ ಗಾಯಗೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಡ್ರೋನ್ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂಬ ಸಂದೇಶ ಬಿನಿಲ್ ಕುಟುಂಬಕ್ಕೆ ಬಂದಿತ್ತು. ಕುಟುಂಬಕ್ಕೆ ಬಿನಿಲ್ ಅಥವಾ ಜೈನ್ ರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ ನಂತರ ಬಿನಿಲ್ ಅವರ ಪತ್ನಿ ಜೋಯ್ಸಿ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡರು ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ, ಬಿನಿಲ್ ಮತ್ತು ಜೈನ್ ಟಿಕೆ ಮನೆಗೆ ವಾಪಾಸು ಬರಲು ಪ್ರಯತ್ನಿಸಿ ಹತಾಶರಾಗಿದ್ದರು. ಬಿನಿಲ್ ಕಳೆದ ತಿಂಗಳಷ್ಟೇ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಸರಣಿ ಧ್ವನಿ ಸಂದೇಶಗಳ ಮೂಲಕ ಮಾತನಾಡಿದ್ದರು ಎಂದು ಆ ಪತ್ರಿಕೆ ಉಲ್ಲೇಖಿಸಿದೆ.

“ಮನೆಗೆ ಮರಳುವ ಪ್ರಯತ್ನದಲ್ಲಿ ಸೆಪ್ಟೆಂಬರ್‌ನಿಂದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಬಾಗಿಲುಗಳನ್ನು ಬಡಿದು ವಿಫಲರಾಗಿದ್ದೇವೆ ಎಂದು ಬಿನಿಲ್ ಹೇಳಿದ್ದಾರೆ” ಎಂದು ವರದಿ ಹೇಳಿದೆ.

“ಮಾನಸಿಕವಾಗಿ ಮತ್ತು ದೈಹಿಕವಾಗಿ ನಾವು ದಣಿದಿದ್ದೇವೆ” ಎಂದು ಬಿನಿಲ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ತಮ್ಮ ಕೊನೆಯ ಸಂದೇಶದಲ್ಲಿ ಬಿನಿಲ್ ಅವರು ತನ್ನನ್ನು ಯುದ್ಧದ ಮುಂಚೂಣಿಗೆ ತೆರಳಲು ಒತ್ತಾಯಿಸುತ್ತಿದ್ದಾರೆ ಎಂದಿರುವುದು ವರದಿಯಾಗಿದೆ.

“ನಾವು ಈಗ ರಷ್ಯಾ ಆಕ್ರಮಿತ ಉಕ್ರೇನ್ ಪ್ರದೇಶದಲ್ಲಿ ಕಷ್ಟಕರವಾದ ಭೂಪ್ರದೇಶದಲ್ಲಿದ್ದೇವೆ. ಒಪ್ಪಂದವು ಒಂದು ವರ್ಷಕ್ಕೆ ಇತ್ತು ಎಂದು ನಮ್ಮ ಕಮಾಂಡರ್ ಹೇಳುತ್ತಾರೆ. ನಮ್ಮ ಬಿಡುಗಡೆಗಾಗಿ ನಾವು ಸ್ಥಳೀಯ ಕಮಾಂಡರ್‌ಗಳಿಗೆ ಮನವಿ ಮಾಡುತ್ತಿದ್ದೇವೆ. ರಷ್ಯಾದ ಸೇನೆ ನಮಗೆ ಪರಿಹಾರ ನೀಡದ ಹೊರತು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಭಾರತೀಯ ರಾಯಭಾರಿ ಕಚೇರಿ ಅಭಿಪ್ರಾಯಪಟ್ಟಿದೆ. ರಾಯಭಾರ ಕಚೇರಿಯು ನಮ್ಮನ್ನು ರಷ್ಯಾದ ಪ್ರದೇಶಕ್ಕೆ ಹಿಂತಿರುಗಿಸಬೇಕೆಂದು ಹೇಳುತ್ತದೆ,” ಎಂದು ಅವರು ಹೇಳಿದ್ದರು.

ಘಟನೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಡಿಸೆಂಬರ್ 6, 2024 ರಂದು ಸಂಸತ್ತಿನ ಉತ್ತರದಲ್ಲಿ, ರಷ್ಯಾದಲ್ಲಿ ಇಲ್ಲಿಯವರೆಗೆ 10 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ . ಅವರಲ್ಲಿ ತಲಾ ಇಬ್ಬರು ಉತ್ತರ ಪ್ರದೇಶ ಮತ್ತು ಗುಜರಾತ್‌ನವರು; ಹರಿಯಾಣ, ಪಂಜಾಬ್, ಉತ್ತರಾಖಂಡ, ತೆಲಂಗಾಣ, ಕೇರಳ ಮತ್ತು ಒಡಿಶಾದಿಂದ ತಲಾ ಒಬ್ಬರು. ಇದು 11ನೇ ಸಾವು ಆಗಿರುವ ಸಾಧ್ಯತೆ ಇದೆ.

ಕಳೆದ ವರ್ಷ ಜುಲೈನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ರಷ್ಯಾದ ಸೈನ್ಯದಲ್ಲಿ ಹೋರಾಡುತ್ತಿರುವ ಭಾರತೀಯರ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ನಂತರ, ರಷ್ಯಾ ತನ್ನ ಸೇನೆಯಲ್ಲಿ ಹೋರಾಡುತ್ತಿರುವ ಅಂತಹ ಎಲ್ಲ ಭಾರತೀಯರನ್ನು ಶೀಘ್ರವಾಗಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಭಾರತೀಯರು ಉದ್ದೇಶಪೂರ್ವಕವಾಗಿ ರಷ್ಯಾದ ಸೇನೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ರಷ್ಯಾದ ಹೇಳಿಕೆಯನ್ನು ಸರ್ಕಾರ ಅನುಮೋದಿಸುವುದಿಲ್ಲ ಎಂದು ಆಗಸ್ಟ್‌ನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಂಸತ್ತಿನಲ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ರಷ್ಯಾದ ರಾಯಭಾರ ಕಚೇರಿಯು ಭಾರತೀಯ ನಾಗರಿಕರನ್ನು ಮಿಲಿಟರಿ ಸೇವೆಗೆ ಸೇರಿಸಿಕೊಳ್ಳಲು ತಾನು ಯಾವುದೇ ನೇಮಕಾತಿ ಪ್ರಯತ್ನಗಳಲ್ಲಿ, ವಿಶೇಷವಾಗಿ “ಮೋಸದ ಯೋಜನೆಗಳಲ್ಲಿ” ತೊಡಗಿಸಿಕೊಂಡಿಲ್ಲ ಎಂದು ಹೇಳಿದೆ.

ರಷ್ಯಾದ ರಕ್ಷಣಾ ಸಚಿವಾಲಯವು ಏಪ್ರಿಲ್ 2024 ರಿಂದ “ಭಾರತ ಸೇರಿದಂತೆ ಹಲವಾರು ವಿದೇಶಿ ದೇಶಗಳ ನಾಗರಿಕರನ್ನು ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಮಿಲಿಟರಿ ಸೇವೆಗೆ ಸೇರಿಸುವುದನ್ನು ನಿಲ್ಲಿಸಿದೆ” ಎಂದು ಹೇಳಿಕೊಂಡಿದೆ.

ರಷ್ಯಾ-ಉಕ್ರೇನ್ ಗಡಿ ಯುದ್ಧ ವಲಯದಲ್ಲಿ ಹಲವಾರು ಭಾರತೀಯರು ಕಾಣೆ
ನವದೆಹಲಿ: ರಷ್ಯಾದ ಸೇನೆಗೆ ಅಕ್ರಮವಾಗಿ ಸೇರ್ಪಡೆಗೊಂಡ ಬಳಿಕ ಉಕ್ರೇನ್-ರಷ್ಯಾ ಗಡಿಗೆ ಕಳುಹಿಸಲಾಗಿರುವ ಹಲವಾರು ಭಾರತೀಯರು ನಾಪತ್ತೆಯಾಗಿದ್ದಾರೆ.

ಇಬ್ಬರು ನಾಪತ್ತೆಯಾದವರ ಕುಟುಂಬದ ಸದಸ್ಯರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾತುಕತೆ ನಡೆಸಿದ್ದು, ಕನಿಷ್ಠ 15 ಭಾರತೀಯರು ಇನ್ನೂ ಪತ್ತೆಯಾಗಿಲ್ಲ ಎಂದು ದಿ ಹಿಂದೂ ವರದಿ ಮಾಡಿದೆ .

ನಾಪತ್ತೆಯಾದವರಲ್ಲಿ ಒಬ್ಬರು ಜಹೂರ್ ಶೇಖ್ (27) ಡಿಸೆಂಬರ್ 31, 2023 ರಂದು ಕೊನೆಯ ಬಾರಿಗೆ ತಮ್ಮ ಕುಟುಂಬದೊಂದಿಗೆ ಮಾತನಾಡಿದ್ದರು ಎಂದು ಅವರ ತಂದೆ ಜಮ್ಮು ಮತ್ತು ಕಾಶ್ಮೀರದ ತಂಗ್‌ಧಾರ್‌ನ ಕುಪ್ವಾರ ನಿವಾಸಿ ಮೊಹಮ್ಮದ್ ಅಮೀನ್ ಶೇಖ್ (65) ಹೇಳಿದ್ದಾರೆ.

“ತಾನು ತರಬೇತಿಗೆ ಹೋಗುತ್ತಿದ್ದೇನೆ ಮತ್ತು ಮುಂದಿನ ಮೂರು ತಿಂಗಳು ಫೋನ್‌ನಲ್ಲಿ ಲಭ್ಯವಿರುವುದಿಲ್ಲ ಎಂದು ಅವರು ಹೇಳಿದರು. ಆದರೆ ಜನವರಿಯಲ್ಲಿ ರಷ್ಯಾದಲ್ಲಿ ಭಾರತೀಯರ ಸಾವಿನ ಬಗ್ಗೆ ನಮಗೆ ಸುದ್ದಿ ಬರಲು ಪ್ರಾರಂಭಿಸಿದ ಮೇಲೆ, ನಾವು ಆತಂಕಗೊಂಡಿದ್ದೇವೆ ಮತ್ತು ಅವರಿಗೆ ಫೋನ್ ಮಾಡಿದೆವು. ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅವರಿಂದ ಇನ್ನೂ ಕರೆ ಬಂದಿಲ್ಲ,” ಎಂದು ನಿವೃತ್ತ ಸರ್ಕಾರಿ ಅಧಿಕಾರಿ ಶೇಖ್ ಹೇಳಿದ್ದಾರೆ.

“ನಾವು ರಷ್ಯಾದ ರಾಯಭಾರ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಕನಿಷ್ಠ 15 ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಎಂಇಎ ಅಧಿಕಾರಿಗಳು ತಿಳಿಸಿದ್ದಾರೆ ಮತ್ತು ರಷ್ಯಾ ಸರ್ಕಾರವು ಸಹಕಾರ ನೀಡಿದರೂ, ಗ್ರೌಂಡಿನಲ್ಲಿರುವ ಅವರ ಕಮಾಂಡರ್‌ಗಳು ಸ್ಪಂದಿಸುತ್ತಿಲ್ಲ,” ಎಂದು ಜಹೂರ್ ಅವರ ಹಿರಿಯ ಸಹೋದರ ಐಜಾಜ್ ಅಮೀನ್ (31) ಹೇಳಿದ್ದಾರೆ.

ರಷ್ಯಾದಲ್ಲಿ ಭದ್ರತಾ ಸಹಾಯಕನ ಉದ್ಯೋಗದ ಭರವಸೆ ನೀಡಿದ್ದ ಯೂಟ್ಯೂಬ್ ವೀಡಿಯೊವನ್ನು ನೋಡಿದ ನಂತರ ಜಹೂರ್ ಅವರು ರಷ್ಯಾಕ್ಕೆ ಹೋಗಿದ್ದಾರೆ, ಆ ನಂತರ ಅವರು ರಷ್ಯಾದ ಸೈನ್ಯಕ್ಕೆ ಸೇರಲು ವಂಚನೆಗೆ ಒಳಗಾದರು ಎಂದು ಐಜಾಜ್‌ ಹೇಳಿದ್ದಾರೆ.

ಇದೇ ರೀತಿಯ ಪ್ರಕರಣದಲ್ಲಿ ಪಂಜಾಬ್‌ನ ಜಲಂಧರ್ ನಿವಾಸಿ ಮಂದೀಪ್ (30) ಎಂಬವರ ಜೊತೆಗೆ ಅವರ ಕುಟುಂಬ ಸದಸ್ಯರು ಮಾರ್ಚ್ 3 ರಂದು ಕೊನೆಯದಾಗಿ ಮಾತನಾಡಿದ್ದರು.

“ನಾವು ಕೊನೆಯದಾಗಿ ಮಾರ್ಚ್ 3 ರಂದು ಮಾತನಾಡಿದ್ದೆವು. ಅವರು ಮೊದಲು ಅರ್ಮೇನಿಯಾಗೆ ಹೋದರು ಮತ್ತು ಕೆಲಸ ಹುಡುಕಿಕೊಂಡು ಅಲ್ಲಿಂದ ಇಟಲಿಗೆ ಹೋಗಬೇಕಿತ್ತು. ಅದರ ಬದಲಾಗಿ, ಅವರು ರಷ್ಯಾಕ್ಕೆ ಹೋಗುವಂತೆ ಏಜೆಂಟ್ ಮೋಸ ಮಾಡಿದ. ರಷ್ಯಾದ ಸೈನ್ಯಕ್ಕೆ ಸೇರಲು ಒತ್ತಾಯಿಸಲಾಯಿತು. ಕೆಲವು ದಿನಗಳ ತರಬೇತಿಯ ನಂತರ ಅವರನ್ನು ಯುದ್ಧ ಬೂಮಿಗೆ ಕಳುಹಿಸಲಾಯಿತು” ಎಂದು ಮಂದೀಪ್‌ ಅವರ ಸಹೋದರ ಜಗದೀಪ್ ಕುಮಾರ್ ಹೇಳಿದರು.