Safina Nabi – Peepal Media

“ಕೇಂದ್ರದ ಜೊತೆ ನಿಮ್ಮ ನಿಲುವು ಹೊಂದಿಕೆಯಾಗುವುದಿಲ್ಲ”: ಪತ್ರಕರ್ತೆ ಸಫೀನಾರಿಗೆ ಪ್ರಶಸ್ತಿ ರದ್ದುಗೊಳಿಸಿದ MIT-WP ವಿಶ್ವವಿದ್ಯಾನಿಲಯ
ಬೆಂಗಳೂರು,ಅಕ್ಟೋಬರ್.‌20: ಕಾಶ್ಮೀರಿ ವರದಿಗಾರ್ತಿ ಸಫೀನಾ ನಬಿ ಅವರಿಗೆ ಪುಣೆ ಮೂಲದ ಖಾಸಗಿ ಸಂಸ್ಥೆ MIT-WPU (MIT World Peace University) ನೀಡಿದ್ದ  ಪತ್ರಿಕಾಂಗದ ಪ್ರಶಸ್ತಿಯನ್ನು ಘೋಷಿಸಿದ ಎರಡು ದಿನಗಳ ನಂತರ ಹಿಂತೆಗೆದುಕೊಂಡಿದೆ. ಸಫೀನಾರವರ ನಿಲುವುಗಳು ಭಾರತ ಸರ್ಕಾರದ ವಿದೇಶಾಂಗ ನೀತಿಗೆ ಹೊಂದಿಕೆಯಾಗುವುದಿಲ್ಲ ಎಂಬ ಕಾರಣವನ್ನು ಸಂಘಟಕರು ನೀಡಿದ್ದಾರೆ.

ನಬಿ ಅವರ ‘The half widows of Kashmir’ ವರದಿಯು ಈ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಮೂವರು ಸದಸ್ಯರು ಮತ್ತು ನಾಲ್ವರು ಹೊರಗಿನ ಸದಸ್ಯರನ್ನು ಒಳಗೊಂಡ ತೀರ್ಪುಗಾರರ ತಂಡವು ‘ಸಮಾಜದಲ್ಲಿ ಸಹಾನುಭೂತಿ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಪತ್ರಿಕೋದ್ಯಮ’ ವಿಭಾಗದಲ್ಲಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಅಲ್ಲದೇ, ನಬಿಯವರಿಗೆ ಪ್ರಶಸ್ತಿಯ ಬಗ್ಗೆ ಅಧಿಕೃತವಾಗಿ ತಿಳಿಸಿ, ವಿಮಾನದ ಟಿಕೆಟ್ ಅನ್ನು ಕೂಡ ನೀಡಲಾಗಿತ್ತು. ಅಕ್ಟೋಬರ್ 18 ರಂದು ಪ್ರಶಸ್ತಿಯನ್ನು ಸ್ವೀಕರಿಸಲು ಪುಣೆಗೆ ಪ್ರಯಾಣಿಸಲು ಸಿದ್ಧರಾಗಿದ್ದರು, ಆದರೆ, ಆ ಪ್ರಶಸ್ತಿಯನ್ನು ರದ್ದುಗೊಳಸಿ, ಪ್ರಾಯಾನ ಮಾಡದಂತೆ ಅಕ್ಟೋಬರ್ 16 ರಂದು ಅವರಿಗೆ ತಿಳಿಸಲಾಯಿತು.

ಬಲಪಂಥೀಯ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ಪ್ರಶಸ್ತಿಯನ್ನು ರದ್ದುಗೊಳಿಸಿದೆ ಎಂದು ಸಂಘಟಕರು ದೂರವಾಣಿ ಮೂಲಕ ತಿಳಿಸಿದ್ದರು.

ಈ ಪ್ರಶಸ್ತಿ ರದ್ದಾಗುತ್ತಿದ್ದಂತೆ ಮೂವರು ಸ್ವತಂತ್ರ ತೀರ್ಪುಗಾರರು ಪ್ರಶಸ್ತಿ ಸಮಾರಂಭವನ್ನು ಬಹಿಷ್ಕರಿಸಿದ್ದಾರೆ. ಈ ಸದಸ್ಯರಲ್ಲೊಬ್ಬರಾದ  ದಿ ವೈರ್‌ನ ಸಂಸ್ಥಾಪಕ ಸಂಪಾದಕ ಎಂಕೆ ವೇಣು, ಇನ್‌ಸ್ಟಿಟ್ಯೂಟ್ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವು ಆಘಾತ ತಂದಿದೆ ಎಂದು ಹೇಳಿದ್ದಾರೆ. “ನಾವು ನಮ್ಮ ನಡುವೆ ಚರ್ಚಿಸಿ, ಕಾರ್ಯಕ್ರಮಕ್ಕೆ ಹಾಜರಾಗದಿರುವುದು ನಿರ್ಧರಿಸಿದೆವು … ಕಾಶ್ಮೀರಿ ಪತ್ರಕರ್ತರು ಬೇರೆಯೇ ರೀತಿಯ ಸೆನ್ಸಾರ್‌ಶಿಪ್ ಮತ್ತು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ,” ಎಂದು ತಿಳಿಸಿದ್ದಾರೆ.

“ಕಮ್ಯುನಿಕೇಷನ್‌ ಗ್ಯಾಪ್‌”ನಿಂದಾಗಿ ಇದು ರದ್ದಾಗಿದ್ದು, ನಬಿಯವರನ್ನು ‘ಭಾರತೀಯ ಛಾತ್ರ ಸಂಸದ್’ʼನ ಇನ್ನೊಂದು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಇನ್ಸ್ಟಿಟ್ಯೂಟ್ ಆಡಳಿತ ಹೇಳಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಗುರುವಾರ ವರದಿ ಮಾಡಿದೆ.