samudayakundapura – Peepal Media

‘ಘನತೆಯ ಬದುಕು; ಸಾಂಸ್ಕೃತಿಕ ಮಧ್ಯ ಪ್ರವೇಶ’ : ಸಮುದಾಯ ಕರ್ನಾಟಕದ ಎಂಟನೇ ಸಮಾವೇಶದ ಘೋಷಣೆ
ಸಮುದಾಯ ಕರ್ನಾಟಕದ ಎಂಟನೇ ರಾಜ್ಯ ಸಮ್ಮೇಳನವು ‘ಘನತೆಯ ಬದುಕು; ಸಾಂಸ್ಕೃತಿಕ ಮಧ್ಯ ಪ್ರವೇಶ’ ಎಂಬ ಘೋಷಣೆಯೊಂದಿಗೆ ಡಿಸೆಂಬರ್ 16,17 ರಂದು ಕುಂದಾಪುರದ ಆಶೀರ್ವಾದ ಸಭಾಂಗಣದಲ್ಲಿ ನಡೆಯಿತು.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ರಾಜಾರಾಂ ತಲ್ಲೂರ್ ಅವರು ಪ್ರಾಸ್ತವಿಕ ಮಾತುಗಳನ್ನು ಆಡಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಾಂಸ್ಕೃತಿಕ ಪ್ರಾಕಾರಗಳ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧನೆಗಳ ಮಾಹಿತಿ ನೀಡಿ, ಘನತೆಯ ಬದುಕಿಗೆ ಇವು ಹೇಗೆ ಪೂರಕವಾಗಬೇಕು ಎನ್ನುವ ವಿಶ್ಲೇಷಣೆಯ ಮಾತುಗಳನ್ನು ಆಡಿ, ಸಮ್ಮೇಳನಕ್ಕೆ ಸ್ವಾಗತ ಕೋರಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಶ್ರೀ. ಪುರುಷೋತ್ತಮ ಬಿಳಿಮಲೆ, ಪ್ರಸ್ತುತ ಸಮಯದಲ್ಲಿ ಸಮುದಾಯ ಸಂಘಟನೆ ಮುಂತಾದ ಸಾಂಸ್ಕೃತಿಕ ಚಳುವಳಿಗಳ ಚಟುವಟಿಕೆಗಳ ಅವಶ್ಯಕತೆಯನ್ನು ಒತ್ತಿ ಹೇಳಿದರು.

ಸಮ್ಮೇಳನದನ ಉದ್ಘಾಟನೆಯ ಭಾಗವಾಗಿ “ರಾಮಧಾನ್ಯ ಚರಿತ್ರೆ” ಎಂಬ ಯಕ್ಷಗಾನ ತಾಳಮದ್ದಳೆಯು ಜೆ ಎನ್ ಯು ನಿವೃತ್ತ ಉಪನ್ಯಾಸಕರದ ಪುರುಷೋತ್ತಮ ಬಿಳಿಮಲೆಯವರ ಉಪಸ್ಥಿತಿಯಲ್ಲಿ ನಡೆಯಿತು. ಸಮ್ಮೇಳನದ ಮೊದಲ ದಿನ ಜರ್ನಿ ಥೇಟರ್ ಮಂಗಳೂರು ಇವರ ರಂಗಗೀತೆಗಳ ಗಾಯನ, ಸಮುದಾಯ ಧಾರವಾಡ ಘಟಕ ಪ್ರಸ್ತುತಿಯ ಕುಂ. ವೀರಭದ್ರಪ್ಪ ರಚನೆಯ ವಾಸು ಗಂಗೆರ ನಿರ್ದೇಶನದ “ದೇವರ ಹೆಣ” ನಾಟಕ ಪ್ರದರ್ಶನಗೊಂಡಿತು. ಜೊತೆಗೆ ಮಹಿಳಾ ಹೋರಾಟಗಾರ್ತಿ ಕೆ.ಎಸ್ ಲಕ್ಷ್ಮಿ,ಸಿನಿಮಾ ನಿರ್ದೇಶಕ ಮನ್ಸೋರೇ, ಆದಿವಾಸಿ ಹಕ್ಕುಗಳ ಹೋರಾಟಗಾರ ಶ್ರೀಧರ್ ನಡ, ರಂಗಭೂಮಿ ಕಲಾವಿದೆ ಎನ್ ಮಂಗಳ ಮೊದಲದವರು ತಮ್ಮ ತಮ್ಮ ಕ್ಷೇತ್ರದ ಘನತೆಯ ಬದುಕಿನ ಕುರಿತು ವಿಚಾರಗಳನ್ನು ಮಂಡಿಸಿದರು.

ಎರಡು ದಿನ ನಡೆದ ಸಮ್ಮೇಳನವು ಹಲವು ಮಹತ್ವದ ನಿರ್ಣಯಗಳನ್ನು ಸಭೆಯಲ್ಲಿ ಚರ್ಚಿಸಿ, ಸರ್ವಾನುಮತದಿಂದ ತೆಗೆದುಕೊಂಡಿತು.
ನಿರ್ಣಯಗಳು:
೧. ರಂಗಾಯಣ ಸಂಸ್ಥೆಗಳು ಸರಕಾರವೇ ಸ್ಥಾಪಿಸಿರುವ ಸಾರ್ವಜನಿಕ ವಲಯದ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ರಂಗ ಸಮಾಜವು ಇದರ ಉನ್ನತ ಸಮಿತಿಯಾಗಿದೆ. ಅಂತಹ ರಂಗ ಸಮಾಜವನ್ನು ಈಗಿನ ಕರ್ನಾಟಕ ಸರ್ಕಾರ ದೇಶದ ಸಂವಿಧಾನ ಮತ್ತು ಬಹುತ್ವ, ಬಹು ಸಂಸ್ಕೃತಿಯನ್ನು ಕಾಪಾಡುವಂತಹ ವ್ಯಕ್ತಿಗಳನ್ನು ಮಾತ್ರವೇ ರಂಗ ಸಮಾಜದ ಸದಸ್ಯರನ್ನಾಗಿ ನೇಮಿಸಬೇಕು ಅಲ್ಲದೇ ಅಲೆಮಾರಿ ಬುಡಕಟ್ಟು ರಂಗಾಯಣವನ್ನು ಸ್ಥಾಪಿಸುವ ಮುಖಾಂತರ ರಾಜ್ಯದ ಮೂಲ ನಿವಾಸಿಗಳ ಸಾಂಸ್ಕೃತಿಕ ಅಭಿವ್ಯಕ್ತಿಗೆ ಮತ್ತು ಅವರ ಆಸ್ಮಿತೆಗೆ ಅವಕಾಶ ಕಲ್ಪಿಸಿ ಕೊಡಬೇಕು. ಕಾರ್ಕಳದ ಯಕ್ಷರಂಗಯವನ್ನು ಜನಪದ ರಂಗಾಯಣವನ್ನಾಗಿ ಪರಿವರ್ತಿಸಬೇಕು ಎಂದು ನಿರ್ಣಯವನ್ನು ಕೈಗೊಳ್ಳಲಾಯಿತು.
ನಿರ್ಣಯ ೨:
ಬೆಂಗಳೂರು ಚಿತ್ರೋತ್ಸವಕ್ಕೆ ಸೂಕ್ತ ಶಾಶ್ವತ ರೂಪ ಕಲ್ಪಿಸಿಕೊಡಲು ಕರ್ನಾಟಕ ಸರ್ಕಾರವು ಕ್ರಮ ಕೈಗೊಳ್ಳಬೇಕು. ಚಲನಚಿತ್ರೋತ್ಸವಕ್ಕೆ ಒಂದು ಸೂಕ್ತ ದಿನಾಂಕ ನಿಗದಿಗೊಳಿಸಬೇಕು.ಶಾಶ್ವತ ನಿರ್ದೇಶನಾಲಯವನ್ನು ಸ್ಥಾಪಿಸಿ ಆ ನಿರ್ದೇಶನಾಲಯಲ್ಲಿ ಸೃಜನಶೀಲ ಚಲನಚಿತ್ರ ಕಲಾವಿದರು, ವಿಮರ್ಶಕರು ಫಿಲಂ ಸೊಸೈಟಿಗಳ ಸಕ್ರಿಯ ಪ್ರತಿನಿಧಿಗಳು,ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಇರಬೇಕು ಮತ್ತು ಸಿನಿಮಾಗಳ ಆಯ್ಕೆಯಲ್ಲಿ ಮತ್ತು ಪ್ರಶಸ್ತಿಗಳಲ್ಲಿ ಈ ಹಿಂದೆ ಕೇಳಿ ಬಂದಿರುವ ರಾಜಕೀಯ ಮಧ್ಯ ಪ್ರವೇಶ, ವಶೀಲಿಬಾಜಿ ಮತ್ತಿತರ ಆರೋಪಗಳು ಬಾರದಂತೆ ಸೂಕ್ತ ಜ್ಯೂರಿ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿರ್ಣಯವನ್ನು ಮಂಡಿಸಲಾಯಿತು.
ನಿರ್ಣಯ ೩:
ನಾಡಿನ ಸೌಹಾರ್ದ ಪರಂಪರೆಯನ್ನು ಉಳಿಸುವತ್ತ-ಸಾಮರಸ್ಯವನ್ನು ಬೆಳೆಸಲು ಚಟುವಟಿಕೆ ರೂಪಿಸಲು ನಿರ್ಣಯವನ್ನು ಕೈಗೊಂಡಿದ್ದು ಕರ್ನಾಟಕದ ಶರಣ,ಸಂತ,ಸೂಫಿ,ದಾಸರು ತತ್ವಪದಕಾರರು ಕಟ್ಟಿಕೊಟ್ಟ ಸೌಹಾರ್ದತೆಯನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕದ ಪ್ರಜ್ಞಾವಂತ ಜನರು ಮತ್ತು ಸಂಘಟನೆಗಳ ಜೊತೆಯಾಗಿ ಸಮುದಾಯ ಕಾರ್ಯಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ ಗಾಂಧಿ ಹುತಾತ್ಮ ದಿನವಾದ ಜನವರಿ 30ರಂದು ಸೌಹಾರ್ದ ಮನೋಭಾವವನ್ನು ಜನರ ಮಧ್ಯೆ ಕೊಂಡೊಯ್ಯಲು ಸಹಕಾರಿಯಾಗುವಂತಹ ವಿಚಾರ ಗೋಷ್ಠಿಗಳು, ಮಾನವ ಸರಪಳಿ ಮುಂತಾದ ಕಾರ್ಯಕ್ರಮಗಳನ್ನು ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಿ
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು, ಸಮುದಾಯ ಕರ್ನಾಟಕ ರಾಜ್ಯ ಸಮ್ಮೇಳನ ಕರೆ ನೀಡಿದೆ.

ಅಕ್ಟೋಬರ್‌ ಒಂದರಂದು ಕುಂದಾಪುರದಲ್ಲಿ ಮೌನ ಮೆರವಣಿಗೆ
ಕುಂದಾಪುರ: ದೇಶ ಮತ್ತು ರಾಜ್ಯದ ಹಲವೆಡೆ ನಡೆಯುತ್ತಿರುವ ಮಹಿಳೆಯರು ಮತ್ತು ಶೋಷಿತ ಜನರ ಮೇಲಿನ ದೌರ್ಜನ್ಯವನ್ನು ವಿರೋಧಿಸುವ ನಿಟ್ಟಿನಲ್ಲಿ ಕುಂದಾಪುರದ ಹಲವು ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಅಕ್ಟೋಬರ್‌ 1ನೇ ತಾರೀಖಿನಂದು ಸಂಜೆ 6:30ಕ್ಕೆ ಮೌನ ಮೆರವಣಿಗೆಯನ್ನು ಹಮ್ಮಿಕೊಂಡಿವೆ.

ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯು ಸಾರ್ವಜನಿಕರಿಗೆ ಭಾಗವಹಿಸುವಂತೆ ಆಹ್ವಾನವನ್ನು ನೀಡಿದ್ದು, ಅಂದು ಪ್ರಜ್ಞಾವಂತ ನಾಗರಿಕರು ಜೊತೆಗಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡಿರುತ್ತಾರೆ.

ಸಮಿತಿಯ ಪ್ರಕಟಣಾ ಹೇಳಿಕೆ ಹೀಗಿದೆ:

ಮೋಂಬತ್ತಿಯ ಬೆಳಕಿನಲ್ಲಿ ಆತ್ಮಸಾಕ್ಷಿಯನ್ನು ಶೋಧಿಸಿಕೊಳ್ಳೋಣ!

ದೇಶಪ್ರೇಮಿ ಬಂಧುಗಳೆ,
ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿವೆ. ದಲಿತ ಮಹಿಳೆಯರ ಮೇಲಿನ ಪ್ರತಿವರ್ಷ ವರದಿಯಾಗುವ ಅತ್ಯಾಚಾರ ಪ್ರಕರಣಗಳು ಹತ್ತು ವರ್ಷಗಳ ಹಿಂದಿಗಿಂತ ಈಗ ನಲವತ್ತೈದು ಶೇಕಡಾದಷ್ಟು ಹೆಚ್ಚಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯ ಅಂಕಿಸಂಖ್ಯೆಗಳು ತಿಳಿಸುತ್ತವೆ. ಅಸ್ಪ್ರಶ್ಯತೆ, ಜಾತಿ ನಿಂದನೆಯ ಪ್ರಕರಣಗಳೂ ಹೆಚ್ಚುತ್ತಿವೆ. ತನ್ನ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ಉತ್ತರ ಪ್ರದೇಶದ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಹೊಡೆದು ಕೊಂದಿದ್ದಾನೆ. ದೇವರ ಗುಜ್ಜು ಕೋಲನ್ನು ಎತ್ತಿದ್ದಕ್ಕಾಗಿ ಕರ್ನಾಟಕದಲ್ಲಿ ದಲಿತ ಹುಡುಗನೊಬ್ಬನನ್ನು ತಳಿಸಿ ಆ ಕುಟುಂಬಕ್ಕೆ ದಂಡ ವಿಧಿಸಿದ ಘಟನೆ ನಡೆದಿದೆ. ನಿತ್ಯವೂ ಇಂತಹ ನೂರಾರು ಘಟನೆಗಳು ನಡೆಯುತ್ತವೆ. ಎಲ್ಲವೂ ವರದಿಯಾಗುವುದಿಲ್ಲ. ಜಾತಿ- ಮತಗಳ ನಡುವೆ ಅಪನಂಬಿಕೆ ಉಂಟಾಗುವಂತಹ ದ್ವೇಷದ ವಾತಾವರಣವು ಉಂಟಾಗಿದೆ. ಸಹಬಾಳ್ವೆಯ ಭಾರತವನ್ನೀಗ ಮರುಕಟ್ಟಬೇಕಿದೆ. ಅಂತಹ ದೌಡೇನಿಲ್ಲ. ನಿಧಾನವಾಗಿ ಆದರೆ, ನಿಖರವಾಗಿ ನೆಮ್ಮದಿಯ ನಾಡನ್ನು ಕಟ್ಟುವ ಗುರಿ ತಲುಪುವುದಕ್ಕಾಗಿ, ನಾವು ಆತ್ಮಸಾಕ್ಷಿಯನ್ನು‌ ಪ್ರಶ್ನಿಸಿಕೊಳ್ಳಬೇಕಾಗಿದೆ. ಅಸಮಾನತೆ, ಅಸ್ಪ್ರಶ್ಯತೆ, ಅಸಹಿಷ್ಣುತೆ, ಅತ್ಯಾಚಾರಗಳು ನಮ್ಮನ್ನು ತಲೆತಗ್ಗಿಸುವಂತೆ ಮಾಡಿವೆ ಎಂಬುದನ್ನು ಬಹಿರಂಗವಾಗಿ ಹೇಳಿಕೊಳ್ಳಬೇಕಾಗಿದೆ.
ಈ ದೇಶದ ಜನರು ಸಂವಿಧಾನದ ಪೀಠಿಕೆಯಲ್ಲಿ ನೀಡಿರುವ ವಾಗ್ದಾನದಂತೆ ಸಮಾನತೆಯ, ಶೋಷಣೆರಹಿತ ಸಮಾಜವನ್ನು ಕಟ್ಟಲು ನಾವು ಕಟಿಬದ್ಧರಾಗಬೇಕಿದೆ. ಭ್ರಾತೃತ್ವದ ಭಾರತವನ್ನು ಹಂಬಲಿಸುವ ಎಲ್ಲರೂ ಶನಿವಾರ, ಅಕ್ಟೋಬರ್ 1 ರಂದು ಸಂಜೆ 6.30 ಕ್ಕೆ ಮೋಂಬತ್ತಿ ಹಿಡಿದು ಮೌನ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಾಗಿ ಕೋರಿಕೆ.
ಸ್ಥಳ: ಶಾಸ್ತ್ರಿ ವೃತ್ತದಿಂದ ಪಾರಿಜಾತ ಸರ್ಕಲ್, ಕುಂದಾಪುರ

ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಜೊತೆಗೂಡಿ.

ಸಮುದಾಯ ಕುಂದಾಪುರ: ಅಮೃತ ಘಳಿಗೆ ಅಭಿಯಾನದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಂಸಾ ಪತ್ರ ವಿತರಣೆ
“ಅವಕಾಶಗಳು ನಮ್ಮನ್ನು ಎಷ್ಟು ಎತ್ತರಕ್ಕೂ ಕೊಂಡೊಯ್ಯಬಲ್ಲವು”
ಕುಂದಾಪುರ ಸಮುದಾಯದ ಅಮೃತ ಘಳಿಗೆ ಕಾರ್ಯಕ್ರಮದಲ್ಲಿ ಯಾಕೂಬ್ ಖಾದರ್ ಗುಲ್ವಾಡಿ.

ಕುಂದಾಪುರ: ಸಮುದಾಯ ಕುಂದಾಪುರವು ಸ್ವಾತಂತ್ರದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅಮೃತ ಘಳಿಗೆ ಹೆಸರಿನ ವಿಡಿಯೋ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಇದರ ಬಹುಮಾನ ವಿತರಣಾ ಸಮಾರಂಭ ಸ್ಪರ್ಧೆಯಲ್ಲಿ ಮಾತನಾಡಿದ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ ಯಾಕೂಬ್ ಗುಲ್ವಾಡಿ “ನನಗೆ ನನ್ನದೇ ಗುಜರಿ ಅಂಗಡಿಯಲ್ಲಿ ದೊರೆಯುತ್ತಿದ್ದ ತುಷಾರ, ತರಂಗ ವಾರಪತ್ರಿಕೆಗಳು ಓದುವ ಅವಕಾಶ ನೀಡಿದವು. ಆಗ ಬಹುಮಾನ ಪಡೆಯಲು ಸಾಧ್ಯವಾಗಿರದಿದ್ದರೂ ಈಗ ಇಲ್ಲಿ ಬಹುಮಾನ ವಿತರಿಸಲು ಸಾಧ್ಯವಾಗಿರುವುದು ಆ ಓದು ಬಿತ್ತಿದ ಕನಸುಗಳಿಂದಲೆ” ಎಂದರು.

ವಿಡಿಯೋ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮುನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಬಹುಮಾನವನ್ನು ಅಂಚೆಯ ಮೂಲಕ ಕಳುಹಿಸುತ್ತಿದ್ದು, ಅವರಲ್ಲಿ ಮೂವತ್ತು ವಿದ್ಯಾರ್ಥಿಗಳಿಗೆ ಕುಂದಾಪುರದ ಜೇಸಿ ಭವನದಲ್ಲಿ ಇಂದು ಬಹುಮಾನ ವಿತರಿಸಲಾಯಿತು. ಜೇಸಿಐ ಕುಂದಾಪುರದ ಸಹಯೋಗದಲ್ಲಿ ನಡೆದ ಈ ಸಮಾರಂಭದಲ್ಲಿ ಡಿ.ಎಸ್.ಎಸ್ ಕುಂದಾಪುರ ಘಟಕದ ಅಧ್ಯಕ್ಷರಾದ ಶ್ರೀ ರಾಜು ಬೆಟ್ಟಿನ ಮನೆ, ಕ್ಯಾಥೋಲಿಕ್ ಸಭಾದ ಕಾರ್ಯದರ್ಶಿ ಶಾಂತಿ ಕ್ವಾಡ್ರೆಸ್, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ರಾಘವೇಂದ್ರ ಉಡುಪಿ, ಜೇಸಿಐ ಅಧ್ಯಕ್ಷೆ ನಾಗರತ್ನಾ ಹೇರ್ಳೆ ಉಪಸ್ಥಿತರಿದ್ದರು. ಸಮುದಾಯ ಕುಂದಾಪುರದ ಅಧ್ಯಕ್ಷರಾದ ಉದಯ ಗಾಂವಕಾರ ಎಲ್ಲರನ್ನೂ ಸ್ವಾಗತಿಸಿದರು. ಸಚಿನ್ ಅಂಕೋಲಾ ವಂದಿಸಿದರು. ರವೀಂದ್ರ ಕೋಡಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ನಂತರದ ಅನಿಸಿಕೆ
ಪರಿಕ್ಷಿತ್
3 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲಕಟ್ಟೆ