sandalwood – Peepal Media

Me too ಗೆ ಹೆದರಿತೇ ಕನ್ನಡ ಚಿತ್ರರಂಗ? ಯಾವುದೇ ಆಂತರಿಕ ಸಮಿತಿ ಬೇಡ ಎಂದ ಕನ್ನಡ ಚಲನಚಿತ್ರ ನಿರ್ಮಾಪಕರು!
ಬೆಂಗಳೂರು: ಕೆಲಸದ ಸ್ಥಳದಲ್ಲಿ ಮಹಿಳಾ ಸುರಕ್ಷತೆಯನ್ನು ಖಾತ್ರಿ ಮಾಡುವ ವಿಚಾರದಲ್ಲಿ ಆಂತರಿಕ ಸಮಿತಿ (ಇಂಟರ್ನಲ್‌ ಕಮಿಟಿ) ರಚಿಸುವ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ (ಕೆಎಫ್‌ಸಿಸಿ) ನಿರ್ಮಾಪಕರು ಮತ್ತು ನಟರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದು ಉದ್ಯಮಕ್ಕೆ ಅನಗತ್ಯ ಮತ್ತು ಸಂಭಾವ್ಯ “ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು” ಎಂದು ಹೇಳಿದ್ದಾರೆ.

ಮಲಯಾಳಂ ಚಲನಚಿತ್ರೋದ್ಯಮದಲ್ಲಿರುವ ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸಿದ ಹೇಮಾ ಸಮಿತಿಯ ವರದಿಯ ಬಿಡುಗಡೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಇತ್ತೀಚೆಗೆ ಚಲನಚಿತ್ರೋದ್ಯಮದಲ್ಲಿ ಐಸಿ ಸ್ಥಾಪನೆಗೆ ಪ್ರಸ್ತಾಪಿಸಿತ್ತು. ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (PoSH) ಕಾಯಿದೆಯ ಪ್ರಕಾರ ಕೆಲಸದ ಸ್ಥಳಗಳಲ್ಲಿ IC ಗಳ ರಚನೆಯನ್ನು ಕಡ್ಡಾಯಗೊಳಿಸಲಾಗಿದೆ.

ಸೋಮವಾರ, ಸೆಪ್ಟೆಂಬರ್ 16 ರಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ನಡುವಿನ ಸಭೆಯಲ್ಲಿ, ನಿರ್ಮಾಪಕರು ಕೇರಳದ ಹೇಮಾ ಸಮಿತಿಯನ್ನು ಹೋಲುವ ಸಮಿತಿಯು ಉದ್ಯಮದ ಹಣಕಾಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಸಭೆಯಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, “ಕೇರಳದ ಹೇಮಾ ಸಮಿತಿಯಂತಹ ಸಮಿತಿಯನ್ನು ಕರ್ನಾಟಕದಲ್ಲಿ ರಚಿಸಿದರೆ ಆರ್ಥಿಕ ನಷ್ಟವಾಗುತ್ತದೆ” ಎಂದು ಹೇಳಿದರು. ಮತ್ತೊಬ್ಬ ನಿರ್ಮಾಪಕ ವೆಂಕಟೇಶ್ ಅವರು ಬಂದ್‌ಗೆ ಕರೆ ನೀಡಿದ್ದು, ” ಪೋಷ್ (POSH) ಬಂದ್ರೆ ಮುಗಿಯಿತು ನಮ್ ಕಥೆ” ಎಂದು ಹೇಳಿದರು.

ಆದಾಗ್ಯೂ ಮಹಿಳಾ ಆಯೋಗವು ಉದ್ಯಮದಲ್ಲಿ POSH ಸಮಿತಿಯ ರಚನೆಗೆ ಪಟ್ಟು ಹಿಡಿದಿದೆ. ಆಯೋಗವು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಕಿರುಕುಳದ ಪ್ರಮಾಣವನ್ನು ನಿರ್ಣಯಿಸಲು ಸಮಗ್ರ ಸಮೀಕ್ಷೆಯನ್ನು ಕೋರಿದೆ ಮತ್ತು ಅವರ ಮನವಿಗೆ ಪ್ರತಿಕ್ರಿಯಿಸಲು ಕೆಎಫ್‌ಸಿಸಿಗೆ 15 ದಿನಗಳ ಕಾಲಾವಕಾಶ ನೀಡಿದೆ.

ಸಭೆಯಲ್ಲಿದ್ದ ಅನೇಕ ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ತೊಂದರೆ ಎದುರಿಸಿರುವುದಾಗಿ ಹೇಳಿದ್ದಾರೆ. ಸಭೆಯಲ್ಲಿ ಕೆಲವರನ್ನು ಮೌನವಾಗಿರುವಂತೆ ಎನ್ನಲಾಗಿದೆ. ಈ ಬಗ್ಗೆ ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.

ನಟಿ ನೀತು ಶೆಟ್ಟಿ ಅವರು ತಾವು Film Industry for Rights and Equality  (FIRE) ಯ ಸದಸ್ಯರಾಗಿರುವ ಕಾರಣಕ್ಕೆ “ಕುಳಿತುಕೊಳ್ಳುವಂತೆ” ಹೇಳಿದರು ಎಂದು ಹೇಳಿದ್ದಾರೆ. “ನಾನು ಒಬ್ಬ ನಟಿಯಾಗಿ ಸಭೆಗೆ ಬಂದಿದ್ದೇನೆ ಮತ್ತು ಉದ್ಯಮದಲ್ಲಿ ಬೈಗುಳದಂತ ಕಿರುಕುಳವು ಚಾಲ್ತಿಯಲ್ಲಿದೆ ಎಂದು ನಾನು ಹೇಳಿದ್ದೇನೆ. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ಗಮನ ಸೆಳೆದಿದ್ದರು,” ಎಂದು ಅವರು ಹೇಳಿದರು.

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಸಭೆಗೆ ಹೆಚ್ಚಿನ ಮಹಿಳೆಯರು ಹಾಜರಾಗಲಿಲ್ಲ. ನಿರ್ದೇಶಕಿ ಕವಿತಾ ಲಂಕೇಶ್, ನಟಿಯರಾದ ತಾರಾ, ಭಾವನಾ, ನೀತು ಶೆಟ್ಟಿ, ಸಿಂಧು ಲೋಕನಾಥ್, ಸಂಜನಾ ಗಲ್ರಾನಿ ಮತ್ತು ವಾಣಿಶ್ರೀ ಸೇರಿದಂತೆ ಚಿತ್ರರಂಗದ ಸುಮಾರು 14 ಮಹಿಳೆಯರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಬಗ್ಗೆ ವರದಿ ಮಾಡಿರುವ ದಿ ನ್ಯೂಸ್‌ ಮಿನಿಟ್‌ (TNM) ಮಹಿಳೆಯರ ಸಮಸ್ಯೆಗಳ ವಿಷಯವನ್ನು ತಿರುಚಲು ಸಾಕಷ್ಟು ಪ್ರಯತ್ನಗಳು ನಡೆದಿವೆ ಎಂದು ಸಭೆಯಲ್ಲಿ ಭಾಗವಹಿಸಿದವರ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.

ಹಿರಿಯ ನಟಿ ಪುಷ್ಪಾ ಸ್ವಾಮಿ ಈ ಸಭೆಯನ್ನು “ಟೈಮ್‌ ವೇಸ್ಟ್” ಎಂದು ಕರೆದರು, ಅಂತಹ ಸಮಿತಿ ಏಕೆ ಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು. “ನಾನು 40 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದೇನೆ. ಮಹಿಳೆಯರು ಖ್ಯಾತಿ ಮತ್ತು ಐಷಾರಾಮಿ ಕಾರುಗಳಿಗಾಗಿ‌ ಕೆಲ ಕೆಲಸಗಳನ್ನು ಮಾಡಲು ಒಪ್ಪಿಕೊಳ್ಳುವುದನ್ನು ನಾನು ನೋಡಿದ್ದೇನೆ. ಅವರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅವರು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಬೇಕಿತ್ತು. ಮುಖ್ಯಮಂತ್ರಿ ಬಳಿಗೆ ಏಕೆ ಹೋಗಬೇಕು?” ಎಂದು ಪುಷ್ಪಾ ಸ್ವಾಮಿ ಪ್ರಶ್ನಿಸಿದ್ದಾರೆ.

ಸಭೆಯ ನಂತರ ಕೆಎಫ್‌ಸಿಸಿ ಪತ್ರಿಕಾಗೋಷ್ಠಿಯನ್ನೂ ನಡೆಸಿತು, ನಂತರ ಕೆಎಫ್‌ಸಿಸಿಯ ಕೆಲವು ಸದಸ್ಯರು ಮತ್ತು ನಟಿ ಸಂಜನಾ ನಡುವೆ ನಾಟಕೀಯ ವಾಗ್ವಾದವೂ ನಡೆಯಿತು.

ಕೆಎಫ್‌ಸಿಸಿಯ ಪತ್ರಿಕಾಗೋಷ್ಠಿ ಮುಗಿದ ನಂತರ ಸಂಜನಾ ಅವರು ಮಾಧ್ಯಮಗಳೊಂದಿಗೆ ವೈಯಕ್ತಿಕವಾಗಿ ಮಾತನಾಡಬಹುದು ಎಂಬ ಕಾರಣಕ್ಕೆ ಕೆಎಫ್‌ಸಿಸಿ ಅಧ್ಯಕ್ಷ ಎನ್‌ಎಂ ಸುರೇಶ್ ಅವರು ಕುಳಿತು ಎದ್ದು ಹೋಗಿದ್ದ ಖುರ್ಚಿಯಲ್ಲಿ ಕುಳಿತುಕೊಂಡರು. ಇದರಿಂದ  ಕೆಲವು ಕೆಎಫ್‌ಸಿಸಿ ಸದಸ್ಯರು ಕೋಪಗೊಂಡರು, ಅವರು ಸಂಜನಾ ಅವರನ್ನು “ಪ್ರೋಟೋಕಾಲ್” ಅನುಸರಿಸಿ ಮತ್ತು “ನಿಮ್ಮ ಜಾಗವನ್ನು ತಿಳಿಯಲು” ಎಂದು ಕಿರುಚಿದರು. “ಯಾರೇ ಇರ್ಲಿ, ಅವ್ರ ಅವ್ರ ಜಾಗದಲ್ಲಿ, ಅವ್ರು ಅವ್ರು ಇರ್ಬೇಕು!” ಸದಸ್ಯರು ಹೇಳಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಕೆಎಫ್‌ಸಿಸಿಗೆ ಉದ್ಯಮದಲ್ಲಿ ಆಂತರಿಕ ಸಮಿತಿಯನ್ನು ರಚಿಸಲು ಒತ್ತಾಯಿಸಿ ಪತ್ರ ನೀಡಿದ ನಂತರ ಈ ವಿವಾದಾತ್ಮಕ ಸಭೆ ನಡೆದಿದೆ.

‘ಟೋಬಿ’ ; ಸ್ಯಾಂಡಲ್ವುಡ್ ನ ಹೊಸ ಸೆನ್ಸೇಷನ್!
ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಮತ್ತು ಕನ್ನಡದ ಖ್ಯಾತ ಕಥೆಗಾರ ದಯಾನಂದ್ ಟಿ.ಕೆ ಅವರ ಅದ್ಭುತ ಕಾಂಬಿನೇಷನ್ ಸ್ಯಾಂಡಲ್ವುಡ್ ನಲ್ಲಿ ಕುತೂಹಲ ಹುಟ್ಟಿಸಿದೆ. ಕಥೆಗಾರ ದಯಾನಂದ್ ಟಿ.ಕೆ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಂತೆ ಇಂದು (12.06.2023) ಮಂಗಳವಾರ ಬೆಳಿಗ್ಗೆ 11.07 ಕ್ಕೆ ಟೈಟಲ್ ಮತ್ತು ಬಿಡುಗಡೆ ದಿನಾಂಕ ಹೊರಬಿದ್ದಿದೆ.

ಟೋಬಿ (Toby) ಹೆಸರಿನ ಸಿನೆಮಾದ ಫಸ್ಟ್ ಲುಕ್ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಟಗರಿನ ವಿಡಿಯೋ ಮೂಲಕ ಅದ್ಭುತ ಸಂಕಲನ ಮಾಡಿದ ಫಸ್ಟ್ ಲುಕ್ ನಲ್ಲಿ ಸಿನಿಮಾ ಬಗ್ಗೆ ಗಾಂಧಿನಗರದ ಮಂದಿಯ ಚರ್ಚೆ ಮತ್ತಷ್ಟು ರಂಗೇರಿದೆ‌.

ಸ್ಟಾರ್ ನಟ ನಿರ್ದೇಶಕ ಮತ್ತು ಸ್ಟಾರ್ ಕಥೆಗಾರನ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು ಚಿತ್ರಕ್ಕೆ ವಚನ್ ಶೆಟ್ಟಿ ಮತ್ತು ರವಿ ರೈ ನಿರ್ಮಾಣದ ಹೊರೆ ಹೊತ್ತಿದ್ದಾರೆ. ರಾಜ್ ಬಿ ಶೆಟ್ಟಿ ಅವರ ಲೈಟರ್ಸ್ ಬುದ್ಧ ಫಿಲ್ಮ್ ಅಡಿಯಲ್ಲಿ ಸಿನಿಮಾ ಬರುತ್ತಿದ್ದು ಇದಕ್ಕೆ ಅಗಸ್ತ್ಯ ಫಿಲ್ಮ್ ಜಂಟಿಯಾಗಿ ಜವಾಬ್ದಾರಿ ಹೊತ್ತುಕೊಂಡಿದೆ.

ಮಾರಿ.. ಮಾರಿ.. ಮಾರಿಗೆ ದಾರಿ!
‘ಟೋಬಿ’ ಆಗಸ್ಟ್ 25ರಂದು ನಿಮ್ಮ ಮುಂದೆ 😊
Make way for Maari 💥
The beast that got the best out of us! Presenting to you, #TOBY

https://twitter.com/RajbShettyOMK/status/1668492950731653120?t=bHOWxQFWLD-mbKvHMdpvHg&s=19

ಮೇಲಿನ ಕ್ಯಾಪ್ಷನ್ ಮೂಲಕ ರಾಜ್ ಬಿ ಶೆಟ್ಟಿ ಸಿನೆಮಾದ ಫಸ್ಟ್ ಲುಕ್ಕನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ತಮ್ಮ Instagram ಖಾತೆಯಲ್ಲಿ ಲೈವ್ ಮೂಲಕ ಸಿನಿಮಾ ಬಗ್ಗೆ ಹೆಚ್ಚಿನ ಅಪ್ಡೇಟ್ ನೀಡಿದ್ದಾರೆ.

https://www.instagram.com/tv/CtT2dbhBta7/?igshid=MzRlODBiNWFlZA==

‘ಟೋಬಿ’ ಆಗಸ್ಟ್ 25 ಕ್ಕೆ ತೆರೆಗೆ ಅಪ್ಪಳಿಸಲಿದೆ. ಉಳಿದ ಮಾಹಿತಿ ಸಧ್ಯದಲ್ಲೇ ಹೊರಬೀಳಲಿದೆ. ‘ಟೋಬಿ’ಗೆ ಅದ್ಭುತ ಯಶಸ್ಸು ಸಿಗಲೆಂದು ಪೀಪಲ್ ಟಿವಿ ಹಾರೈಸುತ್ತದೆ.

ಸ್ಯಾಂಡಲ್‌ವುಡ್‌ನ ಕಾಸ್ಟ್ಯೂಮ್‌ ಡಿಸೈನರ್‌, ಹಾಸ್ಯ ನಟ ಗಂಡಸಿ ನಾಗಾರಾಜ್‌ ನಿಧನ
ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಕಾಸ್ಟ್ಯೂಮ್‌ ಡಿಸೈನರ್‌ ಮತ್ತು ಹಾಸ್ಯ ನಟ ಗಂಡಸಿ ನಾಗಾರಾಜ್‌ ಇಂದು ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ ಖ್ಯಾತ ಹಾಸ್ಯ ನಟ ಗಂಡಸಿ ನಾಗರಾಜ್‌ ಅವರು  ಸೋಮವಾರದಂದು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

ಕನ್ನಡದ ಸಾವಿರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟ ನಾಗಾರಾಜ್‌ ಅನಾರೋಗ್ಯದ ಕಾರಣ ತನ್ನ 65ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

K3 ಸಿನೆಮಾದಲ್ಲಿ ಇವರ ನಟಿಸಿರುವ ಕೊನೆಯ ಚಿತ್ರವಾಗಿದ್ದು, ಸರ್ವರ್‌ ಸೋಮಣ್ಣ, ಬಂಡ ನನ್ನ ಗಂಡ, ರಾಜಾಹುಲಿ, ರಾಯರ ಮಗ, ಗುಂಡನ ಮನೆ, ಹಬ್ಬ, ಮಾತಾಡ್‌ ಮಾತಾಡು ಮಲ್ಲಿಗೆ, ಪರ್ವ, ಕೋಟಿಗೊಬ್ಬ-3 ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ನಟನೆಯಲ್ಲಿ ಖ್ಯಾತ ಗಳಿಸಿದ್ದರು.

ವಸ್ತ್ರಾಲಂಕಾರ ಮಾಡುವುದರಲ್ಲಿಯೂ ಹೆಚ್ಚು ಹೆಸರು ಮಾಡಿರುವ ಗಂಡಸಿ ಅವರು ನಾಗರಾಜ್‌ ಇಂದು ಅಗಲಿದ್ದಾರೆ.

ಹೆಡ್‌ ಬುಷ್: ಗೆಳೆಯನ ಬೆನ್ನಿಗೆ ನಿಂತ “ಕ್ವಾಟ್ಲೆ ಸತೀಶ”
ನಿನ್ನೆಯಿಂದ ಕಾವು ಪಡೆದುಕೊಂಡಿದ್ದ ಹೆಡ್‌ ಬುಷ್‌ ಸಿನೆಮಾದ ವಿವಾದವು ಸಿನೆಮಾ ಇಂದು ತುಂಬಿದ ಗೃಹಗಳಿಗೆ ಪ್ರದರ್ಶಗೊಳ್ಳುವುದರ ಜೊತೆ ಜೊತೆಗೆ ವಿವಾದವೆಬ್ಬಿಸಿದ್ದ ಕಿಡಿಗೇಡಿ ದನಿಗಳೂ ಉಡುಗಿ ಹೋಗಿವೆ. ಆದರೆ “ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ” ಎಂದು ತನ್ನ ಮುಗ್ಧ ನಗುವಿನೊಡನೆ ಜನರ ಮನಸ್ಸು ಗೆದ್ದಿದ್ದ ಧನಂಜಯ ಅವರಿಗೆ ಹರಿದು ಬರುತ್ತಿರುವ ಬೆಂಬಲದ ಮಹಾಪೂರ ಇನ್ನೂ ನಿಂತಿಲ್ಲ.

ಬೆಂಬಲದ ಪ್ರವಾಹದಲ್ಲಿ ಮುಳುಗೇಳುತ್ತಿರುವ ಧನಂಜಯ ಅವರಿಗೆ ಈಗ ಅವರ ಗೆಳೆಯ ನೀನಾಸಂ ಸತೀಶ್‌ ಅವರು ಸಾಥ್‌ ನೀಡಿದ್ದು, ಗೆಳೆಯನ ಜೊತೆ ನಾನಿದ್ದೇನೆ ಎಂದು ಸಾರಿದ್ದಾರೆ. ಈ ಕುರಿತು ತನ್ನ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಸತೀಶ್‌, “ಧನು ನನ್ನ ಗೆಳೆಯ,ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವಿಯತೆ ಜೊತೆ ನಾನಿದ್ಡೇನೆ. ನನ್ನಂತೆ ಊರು ಬಿಟ್ಟು ಬ್ಯಾಗು ಹಿಡಿದು ಬಂದವನು,ಸುಮ್ಮನೆ ಸಣ್ಣ ಕಾರಣ ಹಿಡಿದು ಅವನ ತೇಜೊ ವಧೆ ಮಾಡುವ ಗೆಳೆಯರೆ, ನೀವು ನಮ್ಮ ಏಳಿಗೆಯನ್ನು ಬಯಸಿದವರೇ. ವೈಷಮ್ಯ ಬಿಡಿ,” ಎಂದಿದ್ದಾರೆ.

ಧನು ನನ್ನ ಗೆಳೆಯ,ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವಿಯತೆ ಜೊತೆ ನಾನಿದ್ಡೇನೆ. ನನ್ನಂತೆ ಊರು ಬಿಟ್ಟು ಬ್ಯಾಗು ಹಿಡಿದು ಬಂದವನು,ಸುಮ್ಮನೆ ಸಣ್ಣ ಕಾರಣ ಹಿಡಿದು ಅವನ ತೇಜೊ ವಧೆ ಮಾಡುವ ಗೆಳೆಯರೆ, ನೀವು ನಮ್ಮ ಏಳಿಗೆಯನ್ನು ಬಯಸಿದವರೇ. ವೈಷಮ್ಯ ಬಿಡಿ. @Dhananjayaka #WeStandWithDhananjaya pic.twitter.com/tuR9mko5tF
— Sathish Ninasam (@SathishNinasam) October 27, 2022

ನೀನಾಸಂ ಸತೀಶ ಅವರ ಟ್ವೀಟ್

ನಿನ್ನೆ ವಿವಾದ ಆರಂಭಗೊಂಡಾಗಿನಿಂದ ಧನಂಜಯ ಅವರ ಚಿತ್ರಕ್ಕೆ ವಿದೇಶದಲ್ಲಿರುವವರು ಕೂಡಾ ಟಿಕೆಟ್‌ ಬುಕ್ ಮಾಡಿ ಬೆಂಬಲ ತೋರಿದ್ದರು. ಇಂದು ಬಹಳಷ್ಟು ಜನರು ಟಾಕೀಸಿಗೆ ಹೋಗಿ ಸಿನೆಮಾ ನೋಡಿ ತಮ್ಮ ಫೇಸ್ಬುಕ್‌ ಟ್ವಿಟರ್‌ ಖಾತೆಗಳಲ್ಲಿ ಫೋಟೊ ಹಾಕುತ್ತಿದ್ದಾರೆ. ಎಲ್ಲದಕ್ಕೂ ಧಾರ್ಮಿಕ ತಿರುವು ನೀಡುತ್ತಿದ್ದ ಕಿಡಿಗೇಡಿಗಳಿಗೆ ಜನರೇ ಸರಿಯಾಗಿ ಉತ್ತರಿಸುತ್ತಿದ್ದಾರೆನ್ನುವುದು ಜನರ ಅಂಬೋಣ.

ಡಾಲಿ ಧನಂಜಯರ ಮೇಲಿನ ಅಭಿಮಾನ: ಟಿಕೆಟ್ ಬುಕ್ ಮಾಡಲು ಮುಂದಾದ ಫ್ಯಾನ್ಸ್
ಬೆಂಗಳೂರು: ಡಾಲಿ ಧನಂಜಯ್ ಅವರ ಹೊಸ ಚಲನಚಿತ್ರ ಹೆಡ್ ಬುಷ್ ಬಿಡುಗಡೆಯಾದ ನಂತರ, ಆ ಚಿತ್ರದಲ್ಲಿ ಧನಂಜಯ್‌ ಅವರು ವೀರಗಾಸೆ ಕಲಾವಿದರನ್ನು ಅವಮಾನ ಮಾಡಿದ್ದಾರೆ ಎನ್ನುವ ಹೊಸ ವಿವಾದ ಸೃಷ್ಟಿಯಾಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಧನಂಜಯ್‌ ಅವರು, ನಮಗೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಚಿತ್ರವನ್ನು ಕೇವಲ ಚಿತ್ರವಾಗಿ ನೋಡಬೇಕು. ಹಾಗೇನಾದರು ವೀರಗಾಸೆ ಕಲಾವಿದರಿಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದರು.

ಈ ವಿವಾದ ಕುರಿತು ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಾ ಇದ್ದಹಾಗೆ ಡಾಲಿ ಧನಂಜಯ್‌ ಅವರಿಗೆ ಬೆಂಬಲವಾಗಿ ಅವರ ಅಭಿಮಾನಿಗಳು ಅವರ ಜೊತೆ ನಿಂತಿದ್ದಾರೆ.

ಒಬ್ಬರಿಂದ ಒಬ್ಬರು ಸ್ಫೂರ್ತಿಗೊಂಡು ಹೆಡ್ ಬುಷ್ ಚಿತ್ರಕ್ಕೆ ಟಿಕೆಟ್ ಬುಕ್ ಮಾಡ್ತಿರೋ ಅಭಿಮಾನಿಗಳು, ಸೋಷಿಯಲ್ ಮಿಡಿಯಾದಲ್ಲಿ ಹೊಸ ಅಭಿಯಾನವನ್ನು ಹುಟ್ಟುಹಾಕಿದ್ದಾರೆ.

“ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ” ಎನ್ನುವ ಡಾಲಿ ಧನಂಜಯ್‌ ಅವರ ಡೈಲಾಗ್‌ ಈಗ ಎಲ್ಲೆಡೆ ವೈರಲ್‌ ಆಗಿದೆ.

ಈ ಅಭಿಯಾನದಿಂದ ಬುಕ್ ಮೈ ಶೋ ನಲ್ಲಿ ಹೆಡ್ ಬುಷ್ ಚಲನಚಿತ್ರದ ಟಿಕೆಟ್‌ ಬುಕ್ಕಿಂಗ್‌ ನಲ್ಲಿ 9.3/10 ರೇಟಿಂಗ್ ಏರಿಕೆ ಕಂಡಿದೆ.

ಬಿಳಿಮಲೆ ಕಂಡ ಕಾಂತಾರ: ಎಂಚಿನಲಾ ಆವಡ್‌, ಸಿನೇಮಾ ಎಡ್ಡೆ ಉಂಡುಯೇ, ಒರೊ ತೂವೊಲಿ
ಕಾಂತಾರ ಚಿತ್ರದ ಕುರಿತ ವಿಮರ್ಶೆಗಳ ಸುರಿಮಳೆ ನಿಲ್ಲುತ್ತಿಲ್ಲ. ಕರಾವಳಿಯ ಬೂತಾರಾಧನೆಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲ, ಸಾಹಿತಿ-ಸಂಶೋಧಕ ಡಾ.ಪುರುಷೋತ್ತಮ ಬಿಳಿಮಲೆ ಕಾಂತಾರ ನೋಡಿದ ನಂತರ ಬರೆದಿರುವ ಬರೆಹ ಇಲ್ಲಿದೆ.

ಕೊನೆಗೂ ಕಾಂತಾರ ಸಿನೇಮಾವನ್ನು ಕನ್ನಡದಲ್ಲಿಯೇ ನೋಡಿದೆ. ನನಗೆ ಖುಷಿಯಾಯಿತು. ಕರಾವಳಿಯ ಬದುಕಿನ ಎರಡು ಕಣ್ಣುಗಳಂತಿರುವ ಭೂತಾರಾಧನೆ ಮತ್ತು ಯಕ್ಷಗಾನಗಳನ್ನು ಅತ್ಯಂತ ಸೃಜನಶೀಲವಾಗಿ ಮರು ಸೃಷ್ಟಿಸಿದವರು ಕಡಿಮೆ ಎಂದೇ ಹೇಳಬೇಕು. ಎಷ್ಟೋ ಬಾರಿ ಈ ಪ್ರಕಾರಗಳು ಎಷ್ಟು ಸಶಕ್ತವಾಗಿರುತ್ತವೆ ಎಂದರೆ ಸೃಜನಶೀಲತೆಯ ಅನೇಕ ಸಾಧ್ಯತೆಗಳನ್ನು ಅವುಗಳೇ ಸೂರೆಗೊಂಡಿರುತ್ತವೆ. ಈ ನಿಟ್ಟಿನಲ್ಲಿ ಕಾಂತಾರವು ಕರಾವಳಿಯ ಬದುಕಿನ ಕೆಲವು ಆಯಾಮಗಳನ್ನು ಮೊದಲಬಾರಿಗೆ ತೆರೆಯಮೇಲೆ ತಂದಿದೆ.

ಪಂಜುರ್ಲಿ ದೈವ, ಅದರ ಗಗ್ಗರದ ನಿಗೂಢ ದನಿ, ಸೂಟೆ ( ದೊಂದಿ), ಹಸಿರು ಕಾಡು, ಕಂಬಳ, ಹೊಡೆದಾಟ, ಬೀಡಿ, ಶರಾಬು, ಕೋಳಿಕಟ್ಟ, ಯಕ್ಷಗಾನ, ಮೀನು, ವಿಭಿನ್ನ ಕನ್ನಡ ಇತ್ಯಾದಿಗಳನ್ನು ನಿರ್ದೇಶಕ_ರಿಷಭ್ ಶೆಟ್ಟಿಯವರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಕರಾವಳಿಯ ಕಡಲಿನ ಅಬ್ಬರ, ದೈವ ನರ್ತಕರೇ ಸೃಷ್ಟಿಸುವ ಸಂಗೀತ, ಕಾಡೇ ಹುಟ್ಟಿಸುವ ನಿಗೂಢ ಧ್ವನಿ ಇತ್ಯಾದಿಗಳನ್ನು ಇಲ್ಲಿ ಹೆಚ್ಚಾಗಿ ಬಳಸಿಕೊಂಡಿಲ್ಲ. ಪಾಡ್ದನದ, ಕಬಿತಗಳ ಲಯಗಾರಿಕೆಯ ಮಾಧುರ್ಯವನ್ನು ಇಲ್ಲಿ ಕೇಳಲಾರೆವು. ಮೂಲತ: ಈ ಲಯಗಳು ದೈವವೊಂದರ ದುರಂತಕ್ಕೆ ಪರಿಣಾಮಕಾರಿಯಾದ ಹಿನ್ನೆಲೆಯನ್ನು ಒದಗಿಸಿಕೊಡುತ್ತವೆ. ಬಹುಶ: ಕಮರ್ಶಿಯಲ್‌ ಸಿನೇಮಾವೊಂದು ಇವನ್ನೆಲ್ಲ ಬಳಸಿಕೊಳ್ಳುವುದೂ ಕಷ್ಟ.

ಈ ಚಿತ್ರವು 1870, 1970 ಮತ್ತು 1990 ರ ಮೂರು ಅವಧಿಗಳಲ್ಲಿ ಕರಾವಳಿ ಕಂಡ ಸ್ತಿತ್ಯಂತರಗಳನ್ನು ಒಂದು ಚೌಕಟ್ಟಾಗಿ ಇರಿಸಿಕೊಂಡಿದೆ. ವಸಾಹತು ಕಾಲಘಟ್ಟದಲ್ಲಿ ಥಾಮಸ್‌ ಮುನ್ರೋ ಮೊದಲ ಬಾರಿಗೆ ಕಾಡಿನ ಮೇಲೆ ಪ್ರಭುತ್ವ ಸಾಧಿಸುವಂತ ಕಾನೂನುಗಳನ್ನು ತಂದ. ಈಸ್ಟ್‌ ಇಂಡಿಯಾ ಕಂಪೆನಿಯ ಹಡಗುಗಳು ಮರಗಳನ್ನು ಹೊತ್ತು ಸಾಗಿಸಲು ಸದಾ ಸಿದ್ಧವಾಗಿರುವಾಗ ಅದಕ್ಕೆ ಬೇಕಾದ ಕಾನೂನನ್ನು ಅವರೇ ತಂದುಕೊಂಡಿರುವುದು ಆಶ್ಚರ್ಯದ ವಿಷಯವೇನೂ ಅಲ್ಲ. ಕಾಡಿನ ಒತ್ತುವರಿ, ಕಾಡಿನ ಮಕ್ಕಳು ತಮ್ಮದೇ ಕಾಡಿನಲ್ಲಿ ಅನಾಥರಾಗುವುದು ಈ ಸಿನೇಮಾದಲ್ಲಿಯೂ ಬಂದಿದೆ.

೧೯೭೦ರ ದಶಕದಲ್ಲಿ ಭೂಮಸೂದೆ ಜ್ಯಾರಿಗೆ ಬಂದಾಗ ಭೂ ಸಂಬಂಧಗಳಲ್ಲಿ ಅಮೂಲಾಗ್ರ ಬದಲಾವಣೆಯಾಯಿತು. ದೈವ ನರ್ತಕರೂ ಅದರಿಂದ ಕೆಲವು ತೊಂದರೆಗಳಿಗೆ ಒಳಗಾದರು. ಸಿನೇಮಾದಲ್ಲಿ ಗುರುವನ ಕೊಲೆ ಅಂಥದ್ದರ ಒಂದು ಸಂಕೇತ. ಆ ಕಾಲದಲ್ಲಿ ಸ್ವಲ್ಪ ಬಿಕ್ಕಟ್ಟನ್ನೆದುರಿಸಿದ ಭೂತಾರಾಧನೆಯು, ೧೯೯೦ರ ಆನಂತರ ಮತ್ತೆ ವೈಭವದ ದಿನಗಳನ್ನು ಕಂಡಿತು. ತುಳುನಾಡಿನ ಹೊರಗಡೆಗೆ, ಮುಖ್ಯವಾಗಿ ಮುಂಬೈಗೆ ವಲಸೆ ಹೋದ ತುಳುವರು ಕಷ್ಟ ಪಟ್ಟು ದುಡಿದು ಶ್ರೀಮಂತರಾಗಿ ಮತ್ತೆ ಹುಟ್ಟಿದೂರಿನ ಭೂತಾರಾಧನೆ ಮತ್ತು ನಾಗಾರಾಧನೆಗೆ ಹಣದ ತೊಂದರೆಯಾಗದಂತೆ ನೋಡಿಕೊಂಡರು. ಇದರಿಂದ ಅವರಿಗೆಲ್ಲ ಊರಿನಲ್ಲೊಂದು ಗುರುತು ಕೂಡಾ ಪ್ರಾಪ್ತಿಸಿತು. ಈ ಹಿನ್ನಲೆಯಲ್ಲಿ ಕಾಂತಾರವು ಆಯ್ದುಕೊಂಡ ಕಾಲದ ಚೌಕಟ್ಟು ಅರ್ಥಪೂರ್ಣವಾಗಿದೆ.

ಸಿನೇಮಾವನ್ನು ಈಗಾಗಲೇ ಬಹುತೇಕ ಎಲ್ಲರೂ ನೋಡಿರುವುದರಿಂದ ಮತ್ತೆ ನಾನು ಕತೆ ಹೇಳುವುದಿಲ್ಲ.
ಚಿತ್ರದ ಕೊನೆಯಲ್ಲಿ ರಿಷಭ್ ಶೆಟ್ಟಿಯವರು ಮಾಡಿದ ಅಭಿನಯ ಅಮೋಘ. ದೈವಾರಾಧನೆಯಲ್ಲೂ ನಾಯಕರು ಅರ್ಧವಯಸ್ಸಿನಲ್ಲಿ ಸತ್ತು, ಆಮೇಲೆ ಮಾಯಕಗಳಾಗಿ ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಉದಾಹರಣಗೆ ಕಲ್ಕುಡ -ಕಲ್ಲುರ್ಟಿಯವರು, ʼಜೀವ ಇರುವಾಗ ನೋಡಲಿಕ್ಕೆ ಆಗಲಿಲ್ಲ, ಸತ್ತು ನೋಡಿಕೊಳ್ಳುತ್ತೇವೆ; ಎಂದು ಹೇಳಿ ಮಾಯಕದಲ್ಲಿ ಅರಸನ ಮನೆಗೆ ಬೆಂಕಿ ಇಡುತ್ತಾರೆ, ಅರಸಿಯರಿಗೆ ಹುಚ್ಚು ಹಿಡಿಸುತ್ತಾರೆ. ಪಾಡ್ದನಗಳಲ್ಲಿ ಈ ಭಾಗ ಉಗ್ರವೇ ಆಗಿರುತ್ತದೆ. ಈ ವಿಷಯದಲ್ಲಿ ಅದು ಹಿಂದೂ ದೇವರುಗಳಿಗಿಂತ ಭಿನ್ನವೇ ಹೌದು. ನನಗೆ ಗೊತ್ತಿರುವ ಯಾವ ಹಿಂದೂ ದೇವರು ಕೂಡಾ ಅರ್ಧ ವಯಸ್ಸಿನಲ್ಲಿ ಸತ್ತು ಆನಂತರ ಮಾಯಕದಲ್ಲಿ ಸೇಡು ತೀರಿಸಿಕೊಳ್ಳುವುದನ್ನು ನಾನು ಓದಿಲ್ಲ. ದೈವವೊಂದರ ಮಾಯಕದ ಸೇಡಿನ ಭಾಗ , ಅದನ್ನು ಶೆಟ್ಟಿ ಅಭಿನಯಿಸಿದ ರೀತಿ ಕಾಂತಾರದ ಉತ್ಕೃಷ್ಟ ಭಾಗ ಎಂದು ನನ್ನ ಭಾವನೆ.

ಸಿನೇಮಾ ನೋಡಿ ಬಂದ ಮೇಲೆ ಈ ಸಿನೇಮಾ ಯಾಕಿಷ್ಟು ಚರ್ಚೆಗೆ ಒಳಗಾಯಿತು ಎಂಬುದು ನನಗೆ ಸ್ಪಷ್ಟವಾಗಲಿಲ್ಲ. ಪಂಜುರ್ಲಿಯನ್ನು ಕೊನೆಗೆ ವರಾಹ ರೂಪಿ ಎಂದು ಸಂಸ್ಕೃತದಲ್ಲಿ ನುತಿಸಿದ್ದು ಮತ್ತು ಅದಕ್ಕೆ ಪೂರಕವಾಗಿ ಪಾಡ್ದನಗಳಲ್ಲಿ ಇಲ್ಲದೇ ಇರುವ ಶಾಸ್ತ್ರೀಯಕ್ಕೆ ಹತ್ತಿರವಿರುವ ಸಂಗೀತ ಬಳಸಿದ್ದು ವಾಸ್ತವವಾಗಿ ಸಿನೇಮಾದ ಅತ್ಯಂತ ದುರ್ಬಲ ಭಾಗ. ಅದು ಆ ಕತೆಯ ಅಲ್ಲಿವರೆಗಣ ಬೆಳವಣಿಗೆಗೆ ಹೊಂದುವುದೇ ಇಲ್ಲ‌. ಆದರೆ ಈ ನಿಟ್ಟಿನಲ್ಲಿ ಸೃಜನಶೀಲ ಕಲಾವಿದನಿಗೆ ಇರಬೇಕಾದ ಸ್ವಾತಂತ್ರ್ಯವನ್ನು ನಾನಂತೂ ಪ್ರಶ್ನಿಸಲಾರೆ.

ಹೊಡೆದಾಟ, ಬಡಿದಾಟ, ಕೊಲೆ ಇತ್ಯಾದಿಗಳೆಲ್ಲ ಕರಾವಳಿಯಲ್ಲಿ ಸ್ವಲ್ಪ ಹೆಚ್ಚೇ ಇರುವುದರಿಂದಾಗಿ ರಿಷಭ ಶೆಟ್ಟಿಯವರು ಅದನ್ನು ಸ್ವಲ್ಪ ಜಾಸ್ತೀಯೇ ತೋರಿಸಿದಂತಿದೆ.
ಎಂಚಿನಲಾ ಆವಡ್‌, ಸಿನೇಮಾ ಎಡ್ಡೆ ಉಂಡುಯೇ, ಒರೊ ತೂವೊಲಿ

‘ವಾಸಂತಿ ನಲಿದಾಗ’ ಬಿಡುಗಡೆ ದಿನಾಂಕ ಮುಂದೂಡಿಕೆ
ಬೆಂಗಳೂರು: ‘ವಾಸಂತಿ ನಲಿದಾಗ’ ಎಂಬ ಕಾಲೇಜ್ ಯೂತ್ ಲವ್ ಸ್ಟೋರಿ ಒಳಗೊಂಡ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಗೆ ಸಿದ್ದವಾಗಿದೆ. ಟೈಟಲ್ ಮೂಲಕವೇ ಸಖತ್ ಸುದ್ದಿಯಲ್ಲಿರುವ ಚಿತ್ರ ಈ ಹಿಂದೆ ‘ಕೇಳ್ರಪ್ಪೋ ಕೇಳಿ’ ವೀಡಿಯೋ ಸಾಂಗ್ ಬಿಡುಗಡೆ ಮಾಡಿ ಸೌಂಡ್ ಮಾಡಿತ್ತು. ಇದೀಗ ನಾಗೇಂದ್ರ ಪ್ರಸಾದ್ ಬರೆದ ‘ಕಾಲೇಜ್ ಗೆ ಕಾಲು ಇಟ್ಟರೆ ಕನಸುಗಳು ಜೋರು’ ಎಂಬ ಮತ್ತೊಂದು ಯೂತ್ ಫುಲ್ ಸಾಂಗ್ ರಿಲೀಸ್ ಮಾಡಿದೆ.

ಅಂದಹಾಗೆ ಈ ಚಿತ್ರ ಅಕ್ಟೋಬರ್ 14ರಂದೇ ಬಿಡುಗಡೆಯಾಗಬೇಕಿತ್ತು. ಆದ್ರೆ ಚಿತ್ರಮಂದಿರದ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಇದೆಲ್ಲದರ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಇಂದು ಸಿನಿಮಾ ತಂಡ ಮಾಧ್ಯಮದೆದುರು ಬಂದಿತ್ತು.

ನಿರ್ದೇಶಕ ರವೀಂದ್ರ ವೆಂಶಿ ಮಾತನಾಡಿ ಅಕ್ಟೋಬರ್ 14ರಂದೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಅದಕ್ಕಾಗಿ ಪ್ರಚಾರ ಕಾರ್ಯವನ್ನು ಮಾಡಿ ಮುಗಿಸಿದ್ದೆವು. ಆದ್ರೆ ಚಿತ್ರಮಂದಿರದ ಸಮಸ್ಯೆಯಿಂದ ಅಕ್ಟೋಬರ್ 14ರಂದು ಬಿಡುಗಡೆ ಮಾಡಲಾಗಲಿಲ್ಲ. ಇದು ಸ್ಟಾರ್ ಸಿನಿಮಾ ಅಲ್ಲ ಹೊಸಬರ ಸಿನಿಮಾ ಆದ್ರಿಂದ ದೊಡ್ಡ ಸಿನಿಮಾದ ಜೊತೆ ಕಾಂಪಿಟೇಶನ್ ಬೇಡ ಎಂದು ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಡಿಸೆಂಬರ್ ನಲ್ಲಿ ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ, ಸದ್ಯದಲ್ಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಲಿದ್ದೇವೆ ಎಂದು ರವೀಂದ್ರ ವೆಂಶಿ ತಿಳಿಸಿದ್ರು.

ನಾಯಕ ರೋಹಿತ್ ಶ್ರೀಧರ್ ಮಾತನಾಡಿ ಅಕ್ಟೋಬರ್ 14ರಂದು ನಮ್ಮ ಸಿನಿಮಾ ಬಿಡುಗಡೆ ಆಗಬೇಕಿತ್ತು. ಚಿತ್ರಮಂದಿರದಲ್ಲಿ ಕಾಂತಾರ, ಗುರು ಶಿಷ್ಯರು ಸಿನಿಮಾಗಳು ಚೆನ್ನಾಗಿ ಓಡುತ್ತಿದ್ದರಿಂದ ಸಿನಿಮಾ ಬಿಡುಗಡೆಯನ್ನು ಹಿಂತೆಗೆದುಕೊಂಡ್ವಿ. ಡಿಸೆಂಬರ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಲ್ಲರೂ ಸಪೋರ್ಟ್ ಮಾಡಿ ಎಂದು ತಿಳಿಸಿದ್ದರು.

ಪುಟಾಣಿ ಸಫಾರಿ, ವರ್ಣಮಯ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ರವೀಂದ್ರ ವೆಂಶಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸಿನಿಮಾವಿದು. ಹೊಸ ಪ್ರತಿಭೆಗಳೊಂದಿಗೆ ಕಾಲೇಜ್ ಯೂತ್ ಲವ್ ಸ್ಟೋರಿ ಸಬ್ಜೆಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸಿನಿ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಮೊದಲೇ ಹೇಳಿದ ಹಾಗೆ ವಾಸಂತಿ ನಲಿದಾಗ ಚಿತ್ರ ನವ ಹಾಗೂ ಯುವ ಪ್ರತಿಭೆಗಳಿಂದ ಕೂಡಿದೆ. ರೋಹಿತ್ ಶ್ರೀಧರ್, ಭಾವನ ಶ್ರೀನಿವಾಸ್, ಜೀವಿತ ವಸಿಷ್ಠ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಕೆ. ಎನ್ ಶ್ರೀಧರ್ ಜೇನುಗೂಡು ಬ್ಯಾನರ್ ನಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಶ್ರೀ ಗುರು ಸಂಗೀತ ನಿರ್ದೇಶನ, ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣ ಚಿತ್ರಕ್ಕಿದೆ. ಹಾಡುಗಳಿಗೆ ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಫೀರ್ ಸಾಹಿತ್ಯವಿದೆ. ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಒಳಗೊಂಡ ಅನುಭವಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

‘ಗಂಧದ ಗುಡಿ’ ಮುಂದಿನ ಪೀಳಿಗೆಗೆ ದಂತಕತೆಯಾಗಲಿದೆ: ಸಿಎಂ ಬೊಮ್ಮಾಯಿ
ಬೆಂಗಳೂರು: ನಿನ್ನೆ ಪುನೀತ್ ರಾಜ್ ಕುಮಾರ್ ಅವರ ‘ಗಂಧದ ಗುಡಿ’ ಚಿತ್ರ ಬಿಡುಗಡೆಯ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ಅಪ್ಪು ಅವರಂತೆ ಈ ಸಿನೆಮಾ ಮುಂದಿನ ಪೀಳಿಗೆಗೆ ಒಂದು ದಂತಕಥೆಯಾಗಲಿದೆ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ನಾಡು ಮತ್ತು ಗಂಧದ ಗುಡಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅಂತಹ ವಿಚಾರದೊಂದಿಗೆ, ಕಾಡು, ನಿಸರ್ಗ, ಪ್ರಾಣಿಗಳನ್ನು ಇಟ್ಟುಕೊಂಡು ಅಪ್ಪು ಮಾಡಿದ ಈ ಸಿನೆಮಾ ಅತ್ಯಂತ ಪ್ರಸ್ತುತವಾಗಿದೆ. ನಿಸರ್ಗವನ್ನು ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುವ ಅವಶ್ಯಕತೆ ಇದೆ. ಇಲ್ಲವಾದರೆ ಮುಂದಿನ ಜನಾಂಗದ ಭವಿಷ್ಯದಲ್ಲಿ ಕಳ್ಳತನ ಮಾಡಿದಂತೆ ಎಂದು ಅಭಿಪ್ರಾಯ ಪಟ್ಟರು.

ಅಪ್ಪು ನಮ್ಮ ಜೊತೆಗೆ ಇದ್ದಾರೆ. ಪ್ರತಿ ಕ್ಷಣ ನಮ್ಮನ್ನು ನೋಡ್ತಾ ಇರ್ತಾರೆ. ಇರುವಾಗ ಹೊಗಳುವುದು ಸಹಜ. ಇಲ್ಲದೇ ಇರುವಾಗ ನೆನಪು ಮಾಡಿಕೊಳ್ಳುವುದು ದೈವದ ಆಶೀರ್ವಾದ ಇದ್ದರೆ ಮಾತ್ರ ಸಾಧ್ಯ. ಅಂತಹ ಆಶೀರ್ವಾದ ಅಪ್ಪು ಮೇಲಿತ್ತು ಎಂದು ಮುಖ್ಯಮಂತ್ರಿ ಬೊಮ್ಮಾಯಿ ನುಡಿದರು.

ರಾಜ್ ಕುಮಾರ್ ಅವರ ಎಲ್ಲ ಗುಣಧರ್ಮಗಳನ್ನು ನೂರಕ್ಕೆ ನೂರರಷ್ಟು ಹೊಂದಿದವರು ಪುನೀತ್ ರಾಜಕುಮಾರ್, ಎಷ್ಟೇ ದೊಡ್ಡ ಸ್ಟಾರ್ ಆದರೂ ನಯ, ವಿನಯವನ್ನು ಒಂದು ಕ್ಷಣವೂ ಮರೆತಿರಲಿಲ್ಲ. ಅಪ್ಪು ಅತ್ಯಂತ ಸಣ್ಣ ವಯಸ್ಸಿನಲ್ಲೇ ಬಾಲನಟನಾಗಿ ದೊಡ್ಡ ಹೆಸರು ಮಾಡಿದಾಗ ಸಂತೋಷವಾಗಿತ್ತು. ಆದರೆ ಸಣ್ಣ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋದಾಗ ದುಃಖ ತಡೆಯಲು ಆಗಲಿಲ್ಲ. ಶ್ರೇಷ್ಠ ವ್ಯಕ್ತಿಗಳು ಅಲ್ಪಾಯುಗಳು. ಅಮೂಲ್ಯವಾದುದು ಸ್ವಲ್ಪವೇ ಇರುತ್ತದೆ (Anything precious is very little) ಎಂದರು.

ಅಪ್ಪು ನೆನಪನ್ನು ಇಷ್ಟು ವಿಜೃಂಭಣೆಯಿಂದ ಆಯೋಜಿಸಿರುವ ಡಾ. ರಾಜ್ ಕುಮಾರ್ ಕುಟುಂಬದ ಶ್ರೀಮಂತಿಕೆಯನ್ನು ಕೊಂಡಾಡಿದ ಮುಖ್ಯಮಂತ್ರಿಗಳು ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಅಭಿನಂದಿಸಿದರು.

ʼಇದೇ ನವೆಂಬರ್ 1 ರಂದು ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕದ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದುʼ. ಅಭಿಮಾನಿಗಳು, ನಾಡಿನ ಜನತೆ ಕಾರ್ಯಕ್ರಮದಲ್ಲಿ ಭಾಗ ವಹಿಸುವಂತೆ ಆಹ್ವಾನ ನೀಡಿದರು.

ಅಪ್ಪು ಮೇಲಿನ ಅಭಿಮಾನದ ಕುರಿತು ತಮ್ಮ ಅನುಭವ ಹಂಚಿಕೊಂಡ ಮುಖ್ಯಮಂತ್ರಿಗಳು ತಮ್ಮ ಔರಾದ್ ಪ್ರವಾಸ ಸಂದರ್ಭದಲ್ಲಿ ಯುವಕರು ಅಪ್ಪು ಭಾವಚಿತ್ರದೊಂದಿಗೆ ಬಂದು ತಮ್ಮೊಡನೆ ಚಿತ್ರ ತೆಗೆಸಿಕೊಳ್ಳಲು ಮುಂದಾಗಿದ್ದನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸಚಿವರಾದ ಮುರುಗೇಶ್ ನಿರಾಣಿ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೆ.ಸಿ. ನಾರಾಯಣಗೌಡ, ಆನಂದ್ ಸಿಂಗ್, ಶಾಸಕ ರಾಜೂಗೌಡ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

ಅಮೇಜಾನ್ ಪ್ರೈಮ್ ಗೆ ಲಗ್ಗೆ ಇಟ್ಟ ರಾಷ್ಟ್ರಪ್ರಶಸ್ತಿ ವಿಜೇತ ‘ಡೊಳ್ಳು’ ಸಿನಿಮಾ
ಬೆಂಗಳೂರು: ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಸ್ಯಾಂಡಲ್ ವುಡ್ ಅಂಗಳಕ್ಕೆ ನೀಡಿರುವ ಪ್ರತಿಭಾವಂತ ನಿರ್ದೇಶಕ ಪವನ್ ಒಡೆಯರ್, ನಿರ್ದೇಶನ, ಬರವಣಿಗೆ ಜೊತೆಗೆ ಸಿನಿಮಾ ನಿರ್ಮಾಣವನ್ನು ಆರಂಭಿಸಿರುವ ಇವರು ನಿರ್ಮಾಣ ಮಾಡಿದ ಮೊದಲ ಸಿನಿಮಾದಲ್ಲೇ ಸಂಚಲನ ಸೃಷ್ಟಿಸಿದ್ದರು.

ಚೊಚ್ಚಲ ನಿರ್ಮಾಣದ ‘ಡೊಳ್ಳು’ ಸಿನಿಮಾ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆದುಕೊಂಡಿದೆ. ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಕನ್ನಡಿಗರ ಕೀರ್ತಿಯನ್ನು ಹೆಚ್ಚಿಸಿತ್ತು.

ಹೀಗೆ ಎಲ್ಲರ ಹೆಮ್ಮೆಗೆ ಪಾತ್ರವಾದ ‘ಡೊಳ್ಳು’ ಸಿನಿಮಾ ಚಿತ್ರಮಂದಿರದಲ್ಲೂ ಸಿನಿ ಪ್ರೇಮಿಗಳ ಮನಗೆದ್ದಿತ್ತು. ಇದೀಗ ಒಟಿಟಿಗೂ ಲಗ್ಗೆ ಇಟ್ಟಿದ್ದು ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡಿದೆ.

ಹೆಸರೇ ಹೇಳುವಂತೆ ಡೊಳ್ಳು ಕುಣಿತದ ಸುತ್ತ ನಮ್ಮ ನೆಲದ ಜಾನಪದ ಸೊಗಡನ್ನು ಮುಖ್ಯವಾಗಿಟ್ಟುಕೊಂಡು ಹೆಣೆದ ಕಥೆ ಈ ಚಿತ್ರದ ಜೀವಾಳ. ಒಡೆಯರ್ ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಣವಾದ ಈ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆಯುದರೊಂದಿಗೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಮಾಮೂಲಿ ಕಮರ್ಶಿಯಲ್ ಸಿನಿಮಾಗಳ ನಡುವೆ ಜಾನಪದ ಕಲೆಯ ಕಾಳಜಿ ಕುರಿತಾದ ಈ ಚಿತ್ರ ಸಾಗರ್ ಪುರಾಣಿಕ್ ನಿರ್ದೇಶನದ ಮೊದಲ ಸಿನಿಮಾ.

ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಬಾಬು ಹಿರಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಒಳಗೊಂಡ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಅನಂತ್ ಕಾಮತ್ ಎಂ ಸಂಗೀತ, ಅಭಿಲಾಶ್ ಕಲಥಿ ಕ್ಯಾಮೆರಾ ನಿರ್ದೇಶನ, ಬಿ ಎಸ್ ಕೆಂಪರಾಜು ಸಂಕಲನ ಡೊಳ್ಳು ಚಿತ್ರಕ್ಕಿದೆ. ಚಿತ್ರಮಂದಿರದಲ್ಲಿ ಡೊಳ್ಳು ಸಿನಿಮಾ ಮಿಸ್ ಮಾಡಿಕೊಂಡವರು ಅಮೇಜಾನ್ ಪ್ರೈಮ್ ನಲ್ಲಿ ನೋಡಬಹುದಾಗಿದೆ.

ಸಮಂತಾ ‘ಯಶೋದಾ’ ಗಾಥೆ, ನವೆಂಬರ್ 11ಕ್ಕೆ ಚಿತ್ರ ಬಿಡುಗಡೆ
ಸಮಂತಾ ಅಭಿನಯದ ‘ಯಶೋದಾ’ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಪ್ರೇಕ್ಷಕರಿಗೆ ಹಲವು ದಿನಗಳಿಂದ ಇತ್ತು. ಈಗ ಬಿಡುಗಡೆ ದಿನಾಂಕವು ಕೊನೆಗೂ ಘೋಷಣೆಯಾಗಿದ್ದು, ನವೆಂಬರ್ 11ರಂದು ಜಗತ್ತಿನಾದ್ಯಂತೆ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.

ಈ ಚಿತ್ರವನ್ನು ಶಿವಲೆಂಕ ಕೃಷ್ಣ ಪ್ರಸಾದ್ ಅವರು ತಮ್ಮ ಶ್ರೀದೇವಿ ಮೂವಿ ಪ್ರೊಡಕ್ಷನ್ಸ್ ಬ್ಯಾನರ್ನಡಿ 14ನೇ ಚಿತ್ರವಾಗಿ ನಿರ್ಮಿಸುತ್ತಿದ್ದರೆ, ಹರಿ-ಹರೀಶ್ ಅವರು ನಿರ್ದೇಶನ ಮಾಡಿದ್ದಾರೆ.

ಇದೊಂದು ಹೊಸ ಶೈಲಿಯ ಆಕ್ಷನ್ ಥ್ರಿಲ್ಲರ್ ಎನ್ನುವ ನಿರ್ಮಾಪಕ ಶಿವಲೆಂಕ ಕೃಷ್ಣಪ್ರಸಾದ್, ಈ ಚಿತ್ರದಲ್ಲಿ ಸಸ್ಪೆನ್ಸ್ ಮತ್ತು ಎಮೋಷನ್ಗಳು ಸಮವಾಗಿ ಬೆರೆತಿದ್ದು, ‘ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸುವ ಶಕ್ತಿ ಹೊಂದಿದೆ. ಸಮಂತಾ ಈ ಚಿತ್ರದ ಆಕ್ಷನ್ ದೃಶ್ಯಗಳಿಗಾಗಿ ಅವರು ಬೆವರು ಮತ್ತು ರಕ್ತವನ್ನೇ ಹರಿಸಿದ್ದಾರೆ ಎಂದರೆ ತಪ್ಪಿಲ್ಲ. ಬರೀ ತೆಲುಗು ಅವತರಣಿಕೆಯಷ್ಟೇ ಅಲ್ಲ, ತಮಿಳಿನಲ್ಲೂ ಅವರು ಡಬ್ಬಿಂಗ್ ಮಾಡಿದ್ದಾರೆ. ಇನ್ನು. ಮಣಿಶರ್ಮ ಅವರ ಹಿನ್ನೆಲೆ ಸಂಗೀತ ಈ ಚಿತ್ರದ ಹೈಲೈಟ್ ಆಗಿ ಮೂಡಿಬಂದಿದೆ. ಈಗಾಗಲೇ ತೆಲುಗು ಚಿತ್ರದ ಅವತರಣಿಕೆಯು ಸೆನ್ಸಾರ್ ಆಗಿತ್ತು, ಸದ್ಯದಲ್ಲೇ ಬೇರೆ ಭಾಷೆಗಳ ಸೆನ್ಸಾರ್ ಆಗಲಿದೆ. ತಾಂತ್ರಿಕ ಸೇರಿದಂತೆ ಯಾವುದೇ ವಿಷಯದಲ್ಲೂ ರಾಜಿಯಾಗದೇ, ಈ ಚಿತ್ರವನ್ನು ಅದ್ದೂರಿ ಬಜೆಟ್ ನಿರ್ಮಿಸಲಾಗಿದೆ. 100ಕ್ಕೂ ಹೆಚ್ಚು ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಹೊಸ ಶೈಲಿಯ ಸಿನಿಮಾಗಳಿಗೆ ಹಾತೊರೆಯುತ್ತಿರುವ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚುತ್ತಾರೆ ಎಂಬ ನಿರೀಕ್ಷೆ ಇದೆ. ಯಶೋದಾ, ನವೆಂಬರ್ 11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ’ ಎನ್ನುತ್ತಾರೆ.

ಸಮಂತಾ ಜತೆಗೆ ಈ ಚಿತ್ರದಲ್ಲಿ ವರಲಕ್ಷ್ಮೀ ಶರತ್ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಯಶೋದಾ’ ಚಿತ್ರಕ್ಕೆ ಎಂ. ಸುಕುಮಾರ್ ಛಾಯಾಗ್ರಹಣ ಮಾಡಿದ್ದು, ಪುಲಗಂ ಚಿನ್ನಾರಾಯಣ ಮತ್ತು ಡಾ ಚಲ್ಲ ಭಾಗ್ಯಲಕ್ಷ್ಮೀ ಅವರ ಸಂಭಾಷಣೆ ಮತ್ತು ರಾಮಜೋಗಯ್ಯ ಶಾಸ್ತ್ರಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ.