sc/st – Peepal Media

ಅಸ್ಪೃಶ್ಯತೆ ಆಚರಣೆ : ʼಮೇಲ್ಜಾತಿʼ ವ್ಯಕ್ತಿಯ ವಿರುದ್ದ SC/ST ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು
ಚಾಮರಾಜನಗರ : ದಲಿತ ಮಹಿಳೆ ಮೇಲೆ ಅಸ್ಪೃಶ್ಯತೆ ಆಚರಣೆ ಮಾಡಿ, ಜಾತಿ ನಿಂದನೆ ಮಾಡಿದ ಮೇಲ್ಜಾತಿ ವ್ಯಕ್ತಿಯ ವಿರುದ್ಧ ಪರಿಶಿಷ್ಟ ಜಾತಿ/ವರ್ಗದ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಪಂಚಾಯತ್‌ ಉಪ ನಿರ್ದೇಶಕರು ಅಲ್ಲಿನ ಆಯುಕ್ತರಿಗೆ ಈ ಪ್ರಕರಣದ  ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ʼಈ ಅಸ್ಪೃಶ್ಯತೆ ಆಚರಣೆಯ ಕುರಿತು ತಹಶಿಲ್ದಾರರು, ಉಪ ವಿಭಾಗಾಧಿಕಾರಿಗಳು, ಪೊಲೀಸ್‌ ಅಧಿಕಾರಿಕಾರು ಸೇರಿದಂತೆ ಎಲಾ ಜಾತಿಯ ಮುಖಂಡರುಗಳೊಡನೆ ಸಭೆ ನಡೆಸಿದ್ದು, ಹೆಗ್ಗೋಠಾರಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಖುದ್ದು ಕರೆದೊಯ್ದು ನೀರು ಕುಡಿಸಿರುವ ಬಗ್ಗೆ ತಿಳಿಸಿದ್ದಾರೆ.

ಹೆಗ್ಗೊಠಾರ ಗ್ರಾಮದಲ್ಲಿ ಅಂದಾಜು ಪರಿಶಿಷ್ಟ ಜನಾಂಗದವರ 200 ಮನೆಗಳು, 650 ಜನ ಪರಿಶಿಷ್ಟ ಜಾತಿಯ ಜನಸಂಖ್ಯೆ (ಪರಿಶಿಷ್ಟ ಪಂಗಡದ 180 ಕುಟುಂಬ , ಜನಸಂಖ್ಯೆ 500) ಪರಿಶಿಷ್ಟಜಾತಿ ಕುಟುಂಬದ ಗ್ರಾಮಕ್ಕೆ ಪೂರ್ಣವಾಗಿ ನೀರಿನ ಮೂಲ ಒಂದೇ ಆಗಿರುತ್ತದೆ ಆದರೆ ಸದರಿ ನೀರು ವಿವಿಧ ಸ್ವರೂಪದಲ್ಲಿ ಹರಿಯುತ್ತದಿರುವ ನೀರನ್ನು ವಿವಿಧ ಸಮುದಾಯದವರು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಗ್ರಾಮದಲ್ಲಿನ ಒಟ್ಟು 42 ನೀರಿನ ತೊಂಬೆಗಳಲ್ಲಿ ಪಂಚಾಯತ್‌ ವತಿಯಿಂದ ಸಾರ್ವಜನಿಕರು ಉಪಯೋಗಿಸುವ ನೀರಿನ ಟ್ಯಾಂಕರ್‌ ಎಂದು ನಾಮಫಲಕ ಹಾಕಿಸಲು ಕ್ರಮ ವಹಿಸಲಾಗಿದ್ದು, ಈ ಕುರಿತು ಗ್ರಾಮಸ್ಥ ಗಿರಿಯಪ್ಪನವರ ದೂರಿನ ಆಧಾರದಲ್ಲಿʼಮೇಲ್ಜಾತಿʼಯ ಮಹದೇವಪ್ಪನವರ ಮೇಲೆ ಪರಿಶಿಷ್ಟ ಜಾತಿ/ವರ್ಗದ ದೌರ್ಜನ್ಯ ಕಾಯ್ದೆಯಡಿಯಲ್ಲಿ The SC/ST(Prevention of Atrocities) Amendent Act 2015(U/s-3(1)(za)(A)) ರಂತೆ ಚಾಮರಾಜನಗರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ತಿಳಿಸಿದ್ದಾರೆ.

ಚಾಮರಾಜನಗರದ ಹೆಗ್ಗೊಠಾರ ಗ್ರಾಮದಲ್ಲಿ ಸಂಬಂಧಿಕರ ಮದುವೆಗೆಂದು ದಲಿತ ಮಹಿಳೆಯೊಬ್ಬಳು ಬಾಯಾರಿಕೆಯಿಂದ  ಅಲ್ಲಿಯೇ ಇದ್ದ ಟ್ಯಾಂಕರ್‌ನ ನಲ್ಲಿಯಲ್ಲಿ ನೀರು ಕುಡಿದಿದ್ದಳು. ಅದನ್ನು ಗಮನಿಸಿದ ವೀರಶೈವ ಮುಖಂಡನಾದ ಮಹದೇವಪ್ಪ(ಪಟ್ಟವಾಡಿ) ಎಂಬ ವ್ಯಕ್ತಿಯು, ʼನೀನು ಯಾವ ಜನಾಂಗದ ಮಹಿಳೆʼ ಎಂದು ಕೇಳಿದಾಗ ʼನಾನು ಪರಿಶಿಷ್ಟ ಜನಾಂಗದ ಮಹಿಳೆʼ ಎಂದು ಉತ್ತರಿಸಿದ್ದು, ʼ ಇದು ವೀರಶೈವರಿಗೆ ಸೇರಿದ ತೊಂಬೆ. ನೀವು ದಲಿತರು. ಇಲ್ಲಿಗೆ ಬಂದು ನೀರು ಕುಡಿದು ನಮ್ಮ ತೊಂಬೆಗಳನ್ನು ಮಲೀನ ಮಾಡಿದ್ದೀರಾʼ ಎಂದು ಗಲಾಟೆ ಮಾಡಿ ಜಾರಿ ನಿಂದನೆ ಮಾಡಿದ್ದನು. ಈ ಬಗ್ಗೆ ಚಾಮಾರಾಜನಗರದ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ FIR ದಾಖಲಿಲಾಗಿತ್ತು.

SC-ST ಮೀಸಲಾತಿ ಹೆಚ್ಚಳ: ಸಾಮಾಜಿಕ ನ್ಯಾಯ ನೀಡುವ ಕಳಕಳಿಯ ನಿರ್ಣಯ ಸಿಎಂ ಬೊಮ್ಮಾಯಿ
ಬೆಂಗಳೂರು: ಎಸ್ ಸಿ  ಎಸ್ ಟಿ ಮೀಸಲಾತಿ ಹೆಚ್ಚಳದ ಐತಿಹಾಸಿಕ ನಿರ್ಣಯ ಸಾಮಾಜಿಕ ನ್ಯಾಯ ನೀಡುವ ಮನದಾಳದ ಕಳಕಳಿಯ ನಿರ್ಣಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಎಸ್ಸಿ ಎಸ್ಟಿ ಸಮುದಾಯದ ಮುಖಂಡರು ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಮಾತನಾಡಿದರು.

ಮೀಸಲಾತಿ ಹೆಚ್ಚಳದ ಬೇಡಿಕೆ ಕಳೆದ 50 ವರ್ಷದಿಂದ ಇತ್ತು. ಹತ್ತು ಹಲವಾರು ಸರ್ಕಾರಗಳು ಬಂದಿದ್ದರೂ, ವಿವಿಧ ಕಾರಣಗಳಿಂದಾಗಿ ಈ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೂ ನಮ್ಮ ಸರ್ಕಾರದ ಇಚ್ಛಾಶಕ್ತಿಯಿಂದ , ಸಚಿವ ಸಂಪುಟ ಸಹೋದ್ಯೋಗಿಗಳು, ಭಾಜಪ ಕೋರ್ ಕಮಿಟಿ , ಕಾರ್ಯಕಾರಿ ಸಮಿತಿ ಎಲ್ಲವೂ ಒಕ್ಕೊರಲಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಎಸ್ ಸಿ ಮೀಸಲಾತಿಯನ್ನು ಶೇ. 15 ರಿಂದ 17 ಹಾಗೂ ಎಸ್ ಟಿ ಮೀಸಲಾತಿಯನ್ನು 3 ರಿಂದ 7 ಕ್ಕೆ ಹೆಚ್ಚಿಸಿರುವುದು ಐತಿಹಾಸಿಕ ನಿರ್ಣಯವಾಗಿದ್ದು, ಇದು ನಮ್ಮ ಸರ್ಕಾರದ ಬದ್ಧತೆಯನ್ನು ಬಿಂಬಿಸುತ್ತದೆ ಎಂದು ತಿಳಿಸಿದರು.

“ಸಮಾಜದಲ್ಲಿನ ದುರ್ಬಲ ವರ್ಗದವರು, ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿತರಾದವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ತೀರ್ಮಾನವಾಗಿದೆ. ಇದಕ್ಕೆ ಹಲವರು ಹಲವಾರು ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಸರ್ಕಾರದ ನಿರ್ಣಯವನ್ನು ರಾಜ್ಯದ ಎಲ್ಲ ಎಸ್ ಸಿ ಎಸ್ ಟಿ ಜನಾಂಗದವರು ಸ್ವಾಗತಿಸುತ್ತಿದ್ದಾರೆ”. ಬಳ್ಳಾರಿ, ಹೊಸಪೇಟೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ , ದೊಡ್ಡ ಪ್ರಮಾಣದಲ್ಲಿ ಸೇರಿದ್ದ ಅಲ್ಲಿನ ಜನರು ಈ ನಿರ್ಣಯದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದರು. ಮುಂದಿನ ದಿನಗಳಲ್ಲಿ ಈ ಸಮುದಾಯದಗಳಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುವ ಇಚ್ಛಾಶಕ್ತಿ ನನ್ನದಾಗಿದೆ. ಹಿಂದುಳಿದ ವರ್ಗದ ಹತ್ತು ಹಲವಾರು ಸಮುದಾಯಗಳಿಗೂ ನ್ಯಾಯವನ್ನು ಒದಗಿಸುವ ಕೆಲಸವನ್ನು ಅತ್ಯಂತ ನಿಷ್ಟೆ ಹಾಗೂ ಪ್ರಾಮಾಣಿಕತೆಯಿಂದ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹಾಜರಿದ್ದರು.

ಪ.ಜಾತಿ/ವರ್ಗ ಮೀಸಲಾತಿ ಹೆಚ್ಚಳಕ್ಕೆ ನಿರ್ಧಾರ : ಸಿಎಂ ಬೊಮ್ಮಾಯಿ
ಬೆಂಗಳೂರು : ಇಂದು ನಡೆದ ಸರ್ವಪಕ್ಷ  ಸರ್ವಪಕ್ಷ ಸಭೆಯಲ್ಲಿ ಪ. ಜಾತಿ/ವರ್ಗ ದವರಿಗೆ ಮೀಸಲಾತಿ ಹೆಚ್ಚಿಸುವಂತೆ ಸಿಎಂ ಬೊಮ್ಮಾಯಿ ಮಹತ್ವದ ನಿರ್ಧಾರವನ್ನು ಘೋಷಿಸಿದ್ದಾರೆ.

ಪ.ಜಾತಿ ಮತ್ತು ಪ.ವರ್ಗ ಜನಾಂಗದವರಿಗೆ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಉಭಯ ಸದನಗಳ ನಾಯಕರು ಸೇರಿ ಶುಕ್ರವಾರದಂದು  ನಡೆಸಿದ ಸರ್ವಪಕ್ಷ ಸಭೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರ ವರದಿಗಳನ್ನು ಆಧರಿಸಿ ಪ.ಜಾತಿ ಜನಾಂಗದವರ ಶೇ.15 ರಿಂದ ಶೇ 17 ಹಾಗೆಯೇ ಪ.ವರ್ಗ ದವರಿಗೆ ಶೇ.3 ರಿಂದ ಶೇ 7 ಮೀಸಲಾತಿಯನ್ನು ಹೆಚ್ಚಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿಯವರು ಘೋಷಣೆ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಯಿಯವರು ʼನಾಗಮೋಹನ್‌ ದಾಸ್‌ ವರದಿ ಅನುಷ್ಠಾನಕ್ಕೆ ಸರ್ಕಾರ ಒಪ್ಪಿದೆ. ಇದರ ಸಲುವಾಗಿ ನಾಳೆಯೇ ಸಂಪುಟ ಸಭೆ ಕರೆಯಲಾಗುವುದು. ಸರ್ಕಾರಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಾಳೆ ಅಧಿಕೃತ ಆದೇಶ ನೀಡಲಾಗುತ್ತದೆʼ ಎಂದು ತಿಳಿಸಿದರು.

ಹಾಗೆಯೇ ʼಈಗ ಇರುವ ಯಾವುದೇ  ಸಮುದಾಯಗಳ ಮೀಸಲಾತಿಯನ್ನು ಕಡಿಮೆ ಮಾಡುವುದಿಲ್ಲ. ಯಾವುದೇ ಜಾತಿಗೂ ಸಮಸ್ಯೆ ಆಗದಂತೆ, ಅನ್ಯಾಯ ಆಗದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆʼ ಎಂದು  ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.

ಇದನ್ನೂ ನೋಡಿ: ರಾಹುಲ್‌ ಗಾಂಧಿಯವರೇ ಕನ್ನಡಿಗರ ಈ ಸೊಲ್ಲು ಆಲಿಸಿ
ಭಾರತವನ್ನು ಜೋಡಿಸಲು ಚಾರಿತ್ರಿಕ “ಬಾರತ್‌ ಜೋಡೋ” ಪಾದಯಾತ್ರೆ ಹಮ್ಮಿಕೊಂಡಿರುವ ರಾಹುಲ್‌ ಗಾಂಧಿಯವರು ಕನ್ನಡಿಗರ ಆತಂಕಗಳನ್ನು ನಿವಾರಿಸುವ ಬದ್ಧತೆ ತೋರುರೆ, ಕನ್ನಡಿಗರ ಈ ಸೊಲ್ಲನ್ನು ಆಲಿಸುವವರೆ? ಪತ್ರಕರ್ತ, ಲೇಖಕ ಹರ್ಷಕುಮಾರ್‌ ಕುಗ್ವೆ ಕನ್ನಡಿಗರ ಹಕ್ಕೊತ್ತಾಯವೇನು ಎಂದು ಇಲ್ಲಿ ತಿಳಿಸಿದ್ದಾರೆ.

https://www.facebook.com/peepaltvkannada/videos/1200412170521513

ಪ.ಜಾತಿ/ಪಂಗಡಕ್ಕೆ 12 ಜಾತಿಗಳು : ಸಂಪುಟ ನಿರ್ಧಾರ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಕರ್ನಾಟಕದ ಬೆಟ್ಟ ಕುರುಬ ಸೇರಿದಂತೆ ದೇಶದ ಹಲವು ರಾಜ್ಯಗಳ 12 ಜಾತಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸೇರ್ಪಡೆಗೊಳಿಸುವಂತೆ ಸರ್ಕಾರ ಅನುಮೋದನೆ ಮಾಡಿದೆ.

ದೇಶದ ವಿವಿಧೆಡೆಯಿಂದ ಕೆಲವು ಸಮುದಾಯದ ಜನಾಂಗದವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ವರ್ಷಗಳಿಂದ ಸರ್ಕಾರದ ಮುಂದೆ ಬೇಡಿಕೆ ಇಟ್ಟಿತ್ತು ಇದೀಗ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಬೇಡಿಕೆಗೆ ಮುಕ್ತಿ ನೀಡಿದೆ.

ಸೇರ್ಪಡೆಯಾಗಿರುವ ಪಟ್ಟಿಯಲ್ಲಿ ಪರಿಶಿಷ್ಟ ಪಂಗಡಕ್ಕೆಯಾವ ಸಮುದಾಯಗಳೆಲ್ಲಾ ಇವೆ ಎನ್ನುವ ಮಾಹಿತಿಯನ್ನು ನೋಡುವುದಾದರೆ, ಕರ್ನಾಟಕದಲ್ಲಿ ಕಾಡು ಕುರುಬಕ್ಕೆ ಸಮಾನರಾದ ಬೆಟ್ಟ ಕುರುಬರು, ಉತ್ತರ ಪ್ರದೇಶದಲ್ಲಿ ಸುಮಾರು 13 ಜಿಲ್ಲೆಗಳಲ್ಲಿನ ಗೊಂಡರು.ದುರಿಯಾ, ನಾಯಕ್‌, ಓಜಾ, ಪಠಾರಿ, ರಾಜ್ ಗೋಂಡ ಇವುಗಳು ಗೊಂಡರ ಉಪಜಾತಿಗಳಾಗಿವೆ. ಹಿಮಾಚಲ ಪ್ರದೇಶದ ಹಟ್ಟಿ ಸಮುದಾಯದವರು, ಇದರಲ್ಲಿ ಸುಮಾರು 1 ಲಕ್ಷ 60 ಸಾವಿರ ಜನರು ಈ ಪಟ್ಟಿಯಲ್ಲಿದ್ದಾರೆ. ಛತ್ತೀಸ್ ಗಢದ ಬಿಂಜ್ಹಿಯಾ ಜಾತಿಗಳನ್ನೂ 12 ಪರಿಶಿಷ್ಟ ಜಾತಿಗಳನ್ನು ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನೀಡಲಾಗಿದೆ. ತಮಿಳುನಾಡಿನ ನರಿಕೊರವನ್‌ಗೆ ಸಮಾನಾಂತರವಾದ ಕುರಿವಿಕ್ಕರನ್‌ ಸಮುದಾಯವನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

ಸರ್ಕಾರದ ನಿರ್ಧಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಸ್ವಾಗತಾರ್ಹ ಕೋರಿದ್ದಾರೆ.