school bus driver – Peepal Media

ಶಾಲಾ ವಾಹನ ಚಾಲಕರಿಗೆ ಪೊಲೀಸ್ ಪ್ರಮಾಣ ಪತ್ರ ಕಡ್ಡಾಯ
ರಾಜ್ಯದ ಎಲ್ಲಾ ಶಾಲಾ ವ್ಯಾನ್ ಮತ್ತು ಬಸ್ ಗಳ ಚಾಲಕರಿಗೆ ಪೊಲೀಸ್ ದೃಢೀಕರಣ ಪ್ರಮಾಣಪತ್ರವನ್ನು ಖಾಸಗಿ ಶಾಲೆಗಳು ಪಡೆಯಬೇಕು ಎಂಬ ನಿಯಮವನ್ನು ಶಾಲಾ ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. ಕೇವಲ ಬಸ್ ಚಾಲಕರು ಮಾತ್ರವಲ್ಲದೆ ಪ್ರತಿ ಬಸ್ ಮತ್ತು ವ್ಯಾನ್ ಗೆ ಒಬ್ಬ ಮಹಿಳಾ ಸಹಾಯಕಿ ಇರಬೇಕು, ಆ ಮಹಿಳಾ ಸಹಾಯಕಿಗೂ ಪೊಲೀಸ್ ದೃಢೀಕರಣ ಪ್ರಮಾಣ ಪತ್ರ ಇರಬೇಕು ಎಂದು ಇಲಾಖೆ ತಿಳಿಸಿದೆ.

ಶಾಲಾ ವಾಹನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಪ್ರಮಾಣಪತ್ರಗಳನ್ನು ಪಡೆಯುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಇಲಾಖೆಯ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

“ನಾವು ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಸುತ್ತೋಲೆಯನ್ನು ಹೊರಡಿಸಿದ್ದೇವೆ. ಪ್ರಮಾಣೀಕರಣದ ಜತೆಗೆ ಶಾಲಾ ವಾಹನಗಳಿಗೆ ಮಹಿಳಾ ಸಹಾಯಕಿಯರನ್ನೇ ನೇಮಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗೆಯೇ ಎರಡು ವರ್ಷಗಳಿಗೊಮ್ಮೆ ಈ ಪ್ರಮಾಣ ಪತ್ರವನ್ನು ನವೀಕರಿಸಬೇಕು” ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುತ್ತೋಲೆಯಲ್ಲಿ ಚಾಲಕರು ಮತ್ತು ಸಹಾಯಕರು ದಿನಕ್ಕೆ ಎರಡು ಬಾರಿ ಶಾಲಾ ನೋಂದಣಿಗೆ ಸಹಿ ಹಾಕಬೇಕು. ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಬಿಡುವಾಗ ಅವರು ರಿಜಿಸ್ಟರ್‌ಗೆ ಸಹಿ ಹಾಕಬೇಕು. ಮತ್ತೆ, ಅವರನ್ನು ಮನೆಗೆ ಬಿಟ್ಟ ನಂತರ, ಅವರು ಮತ್ತೆ ಶಾಲೆಗೆ ಬಂದು ರಿಜಿಸ್ಟರ್‌ಗೆ ಸಹಿ ಹಾಕಬೇಕು ಎಂಬ ನಿಯಮ ತರಲಾಗಿದೆ.

ಸಾರಿಗೆ ಸೇವೆಗಳಿಗಾಗಿ ಶಾಲೆಗಳು ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿವೆಯೇ ಎಂದು ಪರಿಶೀಲಿಸುವುದು ಬ್ಲಾಕ್ ಶಿಕ್ಷಣ ಅಧಿಕಾರಿಗಳ (BEO) ಜವಾಬ್ದಾರಿಯಾಗಿದೆ. ಇತರ ಸುರಕ್ಷತಾ ಸೂಚನೆಗಳಲ್ಲಿ ಶಾಲಾ ವಾಹನಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವುದು. ಮತ್ತು 2012 ರಲ್ಲಿ ತಿದ್ದುಪಡಿ ಮಾಡಿದ ಕರ್ನಾಟಕ ಮೋಟಾರು ವಾಹನ ಕಾಯ್ದೆ 1989 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಪ್ರತಿ ವಾಹನಕ್ಕೆ ಮಕ್ಕಳ ಸಂಖ್ಯೆಯನ್ನು ನಿರ್ಬಂಧಿಸುವುದು ಸೇರಿವೆ.

ಸರ್ಕಾರದ ಈ ಕ್ರಮವನ್ನು ಖಾಸಗಿ ಶಾಲಾ ಆಡಳಿತ ಮಂಡಳಿ ಸ್ವಾಗತಿಸಿವೆ. ಇನ್ನು ಖಾಸಗಿ ಶಾಲೆಗಳ ನೌಕರರದು ತಾತ್ಕಾಲಿಕ ನೌಕರಿ ಆಗಿರುವುದರಿಂದ ಕೆಲವು ಸಮಯಗಳ ನಂತರ ಕೆಲಸ ಬಿಡಬಹುದು. ಹೀಗಾಗಿ ಆಗೊಮ್ಮೆ ಈಗೊಮ್ಮೆ ಪ್ರಮಾಣಪತ್ರಗಳನ್ನು ಪಡೆಯುವುದು ಸಂಸ್ಥೆಗಳಿಗೆ ಹೊರೆಯಾಗುತ್ತದೆ. ಇದನ್ನು ಉಚಿತವಾಗಿ ಮಾಡುವಂತೆ ನಾವು ಸರ್ಕಾರವನ್ನು ಕೋರುತ್ತೇವೆ ಎಂದು ತಿಳಿಸಿದ್ದಾರೆ.

ಸಹೋದ್ಯೋಗಿಯ ಮೇಲೆ ಅತ್ಯಾಚಾರ: ಶಾಲಾ ಬಸ್‌ ಚಾಲಕನ ಬಂಧನ
ಬೆಂಗಳೂರು: ತನ್ನ ಸಹೋದ್ಯೋಗಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಶಾಲಾ ಬಸ್‌ ಚಾಲಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಶಾಲೆಯಲ್ಲಿ ಜವಾನರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಮಂಗಳವಾರ ಸುಮಾರು 5.30 ವೇಳೆ ನಾಯಂಡನಹಳ್ಳಿ ಜಂಕ್ಷನ್‌ ಬಳಿ ಬಸ್‌ಗಾಗಿ ಕಾಯುತ್ತಿದ್ದಾಗ ಬಂದ ಅದೇ ಶಾಲೆಯ ಬಸ್‌  ಚಾಲಕ ಡ್ರಾಪ್‌ ಕೊಡುವುದಾಗಿ ಕೇಳಿದ್ದು, ಅದಕ್ಕೆ ಒಪ್ಪಿ ಬಸ್‌ ಹತ್ತಿದ ವೇಳೆ ಈ ಕೃತ್ಯ ನಡದಿದೆ ಎಂದು ಪೊಲೀಸರು ಹೇಳಿದ್ದಾರೆ.

ʼಮಹಿಳೆ ಬಸ್‌ ಹತ್ತಿದ ನಂತರ ಬಸ್‌ನಲ್ಲಿ ಯಾರೂ ಇಲ್ಲದನ್ನು ನೋಡಿದ ಶಾಲಾ ಬಸ್‌ ಚಾಲಕ  32 ವರ್ಷದ ಶಿವಕುಮಾರ್‌  ಬಸ್‌ನಲ್ಲಿ ಮಲೈ ಮಹದೇಶ್ವರ ದೇವಸ್ಥಾನದ ಬಳಿಯ ನಾಗರಬಾವಿ ಸರ್ವಿಸ್ ರಸ್ತೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆ ಸಮಯದಲ್ಲಿ ಸಂತ್ರಸ್ಥೆ ಚಾಲಕನ ಫೋಟೋ ತೆಗೆದುಕೊಂಡಿದ್ದು, ಆಕೆಯ ಮಗ ಬಸ್‌ ಮತ್ತು ಚಾಲಕ ಇರುವ ಸ್ಥಳವನ್ನು ಕಂಡುಕೊಂಡಿದ್ದಾನೆʼ ಎಂದು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಲಕ್ಷ್ಮಣ್ ಬಿ ನಿಂಬರಗಿಯವರು ತಿಳಿಸಿದ್ದಾರೆ.

ಈ ವಿಚಾರದ ಕುರಿತು ಸಂತ್ರಸ್ಥೆಯ ಮಗ ಬಸ್‌ ಚಾಲಕನ ಬಳಿ ಜಗಳವಾಡಿದಾಗ ಅಲ್ಲಿನ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಿವಕುಮಾರನ್ನು ಪೊಲೀಸ್‌ ಠಾಣೆಗೆ ಕರೆತಂದಾಗ ಘಟನೆ ಬೆಳಕಿಗೆ ಬಂದಿದ್ದು, ಆತನ ಮೇಲೆ ತಕ್ಷಣವೇ FIR ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಗುರುವಾರದಂದು  ತಿಳಿಸಿದ್ದಾರೆ.

ಶಾಲಾ ಬಸ್‌ ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್‌ನ ಅಡಿ ಅತ್ಯಾಚಾರ, ಕೊಲೆ ಯತ್ನ ಮತ್ತು  ಕ್ರಿಮಿನಲ್‌ ಬೆದರಿಕೆ ಆರೋಪದಡಿ ಪ್ರಕರಣ  ದಾಖಲಿಸಲಾಗಿದೆ.