SDPI – Peepal Media

ದಕ್ಷಿಣ ಕನ್ನಡದಲ್ಲಿ SDPI ಕೈ ಹಿಡಿದ BJP: ರಾಜ್ಯಾದ್ಯಂತ ತೀವ್ರ ಮುಖಭಂಗ ಎದುರಿಸುತ್ತಿರುವ ಬಿಜೆಪಿ
ಮಂಗಳೂರು: ತಲಪಾಡಿ ಗ್ರಾಪಂ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ಬದ್ಧ ರಾಜಕೀಯ ವೈರಿ ಎಸ್ ಡಿಪಿಐ ಅಭ್ಯರ್ಥಿಗೆ ಬೆಂಬಲ ನೀಡಿರುವ ಬಿಜೆಪಿ ಸದಸ್ಯರು ಸ್ವಪಕ್ಷದ ಅಭ್ಯರ್ಥಿಯನ್ನೇ ಸೋಲುವಂತೆ ಮಾಡಿದ್ದಾರೆ. ಈ ಸಮಬಲದ ಪೈಪೋಟಿಯಲ್ಲಿ ಟಾಸ್‌ ಗೆಲ್ಲುವ ಮೂಲಕ ತಲಪಾಡಿ ಗ್ರಾಪಂನ ಅಧ್ಯಕ್ಷ ಸ್ಥಾನವು SDPI ಗೆ ಒಲಿದಿದೆ.

ರಾಜಕೀಯ ರಂಗದಲ್ಲಿ ಪಂಚಾಯತ್‌ ಮಟ್ಟದ ರಾಜಕಾರಣದಷ್ಟು ಕುತೂಹಲ ಹುಟ್ಟಿಸುವ ರಾಜಕಾರಣ ಇನ್ಯಾವುದೂ ಇಲ್ಲ. ಈಗ ಅಂತಹದ್ದೇ ಒಂದು ಘಟನೆ ದಕ್ಷಿಣಕನ್ನಡದಲ್ಲಿ ನಡೆದಿದ್ದು, ಇದರಿಂದಾಗಿ ಬಿಜೆಪಿ ರಾಜ್ಯಾದ್ಯಂತ ಮುಜುಗರ ಎದುರಿಸುತ್ತಿದೆ.

ಈ ಗ್ರಾಪಂನಲ್ಲಿ ಒಟ್ಟು 24 ವಾರ್ಡುಗಳ ಸದಸ್ಯರ ಪೈಕಿ 13 ಬಿಜೆಪಿ ಬೆಂಬಲಿತ ಸದಸ್ಯರಿದ್ದು, 1 ಕಾಂಗ್ರೆಸ್ ಹಾಗೂ 10 ಎಸ್ ಡಿಪಿಐ ಬೆಂಬಲಿತ ಸದಸ್ಯರಿದ್ದಾರೆ. ಆದರೆ ಇಂದು ನಡೆದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ವೈಭವ್ ಶೆಟ್ಟಿ ಮತ್ತು SDPI ಬೆಂಬಲಿತ ಹಬೀಬಾ ಡಿ.ಬಿ  ಹಾಜರಾಗಿದ್ದರು. SDPI ಅಭ್ಯರ್ಥಿ ಟಿ.ಇಸ್ಮಾಯಿಲ್ ಮತ್ತು ಬಿಜೆಪಿಯ ಸತ್ಯರಾಜ್ ನಡುವೆ ಅಧ್ಯಕ್ಷ ಸ್ನಾನಕ, ಪೈಪೋಟಿಯಿತ್ತು. ಆದರೆ ಇಬ್ಬರು ಬಿಜೆಪಿ ಸದಸ್ಯರು SDPI ಅಭ್ಯರ್ಥಿ ಪರ ಮತ ಚಲಾಯಿಸಿದ್ದಾರೆ. ಪರಿಣಾಮSDPI ಹಾಗೂ ಬಿಜೆಪಿ ಸಮಬಲದ ಮತಪಡೆದುಕೊಂಡಿದೆ. ಬಳಿಕ ಚುನಾವಣಾಧಿಕಾರಿಗಳು ಅಧ್ಯಕ್ಷ ಗಾದಿಗೆ ಬೀಟಿ ಎತ್ತುವ ಪ್ರಕ್ರಿಯೆ ನಡೆಸಿದ್ದು ಇದರಲ್ಲಿ ಟಿ.ಇಸ್ಮಾಯಿಲ್ ಗೆಲುವು ಸಾಧಿಸಿದ್ದಾರೆ.

ತನ್ನ ಪಕ್ಷದ ಅಭ್ಯರ್ಥಿ ಗೆಲ್ಲುವ ಭರವಸೆಯಲ್ಲಿ ಹೂವಿನ ಹಾರ, ಸಿಹಿಯೊಂದಿಗೆ ಬಂದಿದ್ದ ಪಕ್ಷದ ಕಾರ್ಯಕರ್ತರು ತೀವ್ರ ಮುಖಭಂಗ ಹಾಗೂ ಮುಜುಗರದೊಂದಿಗೆ ಮರಳಿದ್ದಾರೆ. ಬಹುಮತವಿದ್ದೂ ಗೆಲ್ಲಲಾಗದ ಕುರಿತು ಬಿಜೆಪಿ ಬೆಂಬಲಿಗರು ತೀವ್ರ ಹತಾಶೆ ವ್ಯಕ್ತಪಡಿಸುತ್ತಾ ಮನೆಗೆ ಮರಳಿದ್ದಾರೆ.

ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಬಿಜೆಪಿ ಟ್ರೋಲ್‌ಗೆ ಒಳಗಾಗುತ್ತಿದ್ದು ಉತ್ತರಿಸಲಾಗದೆ ಒದ್ದಾಡುತ್ತಿದೆ.

ದ.ಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸಂಘಪರಿವಾರದ ಅನೈತಿಕ ಪೋಲಿಸ್‌ಗಿರಿ ; ಆ್ಯಂಟಿ ಕಮ್ಯೂನಲ್ ವಿಂಗ್ ಘೋಷಣೆ ಮಾತ್ರ : ಎಸ್‌ಡಿಪಿಐ ಆಕ್ರೋಶ
ಮಂಗಳೂರು : ದ.ಕ ಜಿಲ್ಲೆಯಲ್ಲಿ ಸಂಘಪರಿವಾರದ ಅನೈತಿಕ ಪೋಲಿಸ್ ಗಿರಿ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಿದ್ದು, ಸರಕಾರ ಮಂಗಳೂರು ನಗರಕ್ಕೆ ಸೀಮಿತವಾಗಿ ಮಾಡಿದ್ದ ಆ್ಯಂಟಿ ಕಮ್ಯೂನಲ್ ವಿಂಗ್ ಕೇವಲ ಮುಸ್ಲಿಮರ ಮನವೊಲಿಕೆಗೆ ಮಾಡಿದಂತೆ ತೋಚುತ್ತಿದೆ. ಪತ್ರಿಕಾ ಗೋಷ್ಠಿಯಲ್ಲಿ ಕೇವಲ ವಿಂಗ್ ಘೋಷಣೆ ಮಾಡಿದ್ದೇ ಹೊರತು ಈ ವಿಂಗ್ ಆ್ಯಕ್ಟಿವ್ ಇಲ್ಲದೆ ಇರುವುದು ಇತ್ತೀಚಿನ ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ ಎಂದು ಎಸ್‌ಡಿಪಿಐ ದ‌.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ವಾರಗಳ ಹಿಂದೆ ಬಂಟ್ವಾಳದಲ್ಲಿ ಪೋಲಿಸ್ ಸಿಬ್ಬಂದಿಯೊಬ್ಬರು ತನ್ನ ಹೆಂಡತಿ ಹಾಗೂ ನಾದಿನಿ ಜೊತೆಗೆ ಹೋಟೆಲಿಗೆ ತೆರಳಿ ಹಿಂದಿರುಗುತ್ತಿರುವಾಗ ಸಂಘಪರಿವಾರದ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿ ಹಿಂದು ಹುಡುಗಿಯನ್ನು ನೀನು ಎಲ್ಲಿಗೆ ಕರೆದುಕೊಂಡು ಹೋಗುತ್ತೀಯಾ ಎಂದು ಪ್ರಶ್ನಿಸಿ ಗೂಂಡಾಗಿರಿ ಮಾಡಿದ್ದಾರೆ.

ಅದೇ ರೀತಿ ಈ ತಿಂಗಳ 26 ನೇ ತಾರೀಕಿನಂದು ಮಂಗಳೂರಿನ ಕಾವೂರಿನಲ್ಲಿ ವೆಬ್ ನ್ಯೂಸ್ ಒಂದರ ವರದಿಗಾರ ತನ್ನದೇ ಧರ್ಮದ ಸ್ನೇಹಿತೆಯೊಂದಿಗೆ ರೆಸ್ಟೋರೆಂಟ್ ಗೆ ತೆರಳಿ ಮರಳಿ ಬರುತ್ತಿರುವಾಗ ಅಡ್ಡಗಟ್ಟಿದ ಸಂಘಪರಿವಾರದ ಕಾರ್ಯಕರ್ತರು ಬಂಟ್ವಾಳದಲ್ಲಿ ಎತ್ತಿದ ಪ್ರಶ್ನೆಯನ್ನೇ ಕೇಳಿ ಅನೈತಿಕ ಪೋಲಿಸ್ ಗಿರಿ ನಡೆಸಿದ್ದಾರೆ.

ಒಟ್ಟಾರೆ ಈ ಬೆಳವಣಿಗೆಯನ್ನು ಗಮಿಸಿದಾಗ ಇವೆಲ್ಲವೂ ವ್ಯವಸ್ಥಿತ ಷಡ್ಯಂತ್ರ ಎಂದು ಸ್ಪಷ್ಟವಾಗುತ್ತಿದೆ.

ದ.ಕ ಜಿಲ್ಲೆಯಲ್ಲಿ ಕೋಮು ಆಧಾರಿತ ಗಲಭೆಗಳು ಅಧಿಕವೆಂಬ ಕಾರಣಕ್ಕೆ ಸರ್ಕಾರ ಮಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿ ಪೋಲಿಸ್ ವ್ಯವಸ್ಥೆಯ ಒಳಗೆ ಒಂದು ವಿಂಗ್ ಅನ್ನು ಸ್ಥಾಪಿಸಿದರು ಆ ವಿಂಗ್ ಇನ್ನೂ ಕಾರ್ಯಪ್ರವೃತವಾಗದೆ ಕೇವಲ ಮುಸ್ಲಿಮರ ಮನವೊಲಿಕೆಗೆ ಮತ್ತು ನಾಮಕಾವಸ್ತೆಗೆ ಮಾಡಿದಂತೆ ಕಾಣುತ್ತಿದೆ. ಅಥವಾ ಒಂದು ವೇಳೆ ಈ ವಿಂಗ್ ಯಶಸ್ವಿಯಾದರೆ ಇದನ್ನು ಸರಕಾರ ರಾಜ್ಯಾದ್ಯಂತ ವಿಸ್ತರಿಸಬಹುದು ಎಂಬ ಕಾರಣಕ್ಕಾಗಿ ಸಂಘಪರಿವಾರ ಮನಸ್ಥಿತಿಯ ಪೋಲೀಸ್ ಅಧಿಕಾರಿಗಳೇ ಈ ವಿಂಗ್ ಅನ್ನು ಯಶಸ್ವಿ ಮಾಡಲು ಬಿಡುವುದಿಲ್ಲವೇ ಎಂಬ ಅನುಮಾನವೂ ಕಾಡತೊಡಗಿದೆ.

ಸರ್ಕಾರ ಬದಲಾದರೂ ಸಂಘಪರಿವಾರದ ಅನೈತಿಕ ಪೋಲಿಸ್ ಗಿರಿ ನಿಂತಿಲ್ಲ ಎಂಬುವುದಕ್ಕೆ ಇತ್ತೀಚಿನ ಹಲವಾರು ಘಟನೆಗಳೇ ಸಾಕ್ಷಿಯಾಗಿವೆ. ಅದಲ್ಲದೇ ದಾಳಿಕೋರರ ಉದ್ದೇಶ ಅವರು ಮುಸ್ಲಿಮರು ಎಂಬ ಕಾರಣವಾಗಿದೆ. ಇದು ಅತ್ಯಂತ ಆತಂಕದ ವಿಚಾರವಾಗಿದೆ. ಮುಸ್ಲಿಮರ ವಿರುದ್ಧ ವ್ಯವಸ್ಥಿತ ದಾಳಿಗೆ ಸಂಘಪರಿವಾರ ಷಡ್ಯಂತ್ರಗಳನ್ನು ರೂಪಿಸುತ್ತಿವೆ ಎಂಬುದರ ಸ್ಪಷ್ಟ ನಿದರ್ಶನವಾಗಿದೆ ಇವೆಲ್ಲಾ.

ಸರ್ಕಾರ ಹಾಗೂ ಜಿಲ್ಲಾಡಳಿತ ಇಂತಹ ಪ್ರಕರಣದ ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಹಾಗೂ ಆ್ಯಂಟಿ ಕಮ್ಯೂನಲ್ ವಿಂಗ್ ಗೆ ಪ್ರೊಬೆಷನರಿ ಐಪಿಎಸ್ ಅಧಿಕಾರಿಗಳ ನೇಮಕ ಮಾಡಿ ಸಕ್ರೀಯಗೊಳಿಸಿ ದ.ಕ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡಲು ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಅಂಗನವಾಡಿಗೆ ಕೊಳೆತ ಮೊಟ್ಟೆ ವಿತರಣೆ ; ಕ್ರಮಕ್ಕೆ ಆಗ್ರಹಿಸಿದ SDPI
ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳ ಅಂಗನವಾಡಿ ಕೇಂದ್ರದಲ್ಲಿ  ಕೊಳೆತ ಮೊಟ್ಟೆಗಳನ್ನು ವಿತರಣೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಕೂಡಿಗೆ ಬಳಿಯ ಬಸವನತ್ತೂರು ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. ಈ ಮೂಲಕ ರಾಜ್ಯದ ಅಂಗನವಾಡಿ ಕೇಂದ್ರದಲ್ಲಿ ಈ ರೀತಿಯ ಘಟನೆ ನಡೆದಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ಪಷ್ಟ ಬೇಜವಾಬ್ದಾರಿ ನಿಲುವನ್ನು ತೋರ್ಪಡಿಸಿದೆ.

ಹಾಸನ ಜಿಲ್ಲೆಯಲ್ಲೂ ಸಹ ಹಲವೆಡೆ ಈ ರೀತಿಯ ಘಟನೆ ನಡೆದಿದ್ದು, ಕಳಪೆ ಗುಣಮಟ್ಟದ ಮೊಟ್ಟೆಗಳ ವಿತರಣೆಗೆ ಆಕ್ರೋಶ ವ್ಯಕ್ತವಾಗಿದೆ. ಮೊಟ್ಟೆ ವಿತರಣೆಯ ಟೆಂಡರ್ ಕೂಗಿದ ಗುತ್ತಿಗೆದಾರ ಮತ್ತು ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.

ಹಳೆಯ, ಕಳಪೆ ಗುಣಮಟ್ಟದ ಹಾಗೂ ಕೊಳೆತ ಮೊಟ್ಟೆಗಳನ್ನು ಅಂಗನವಾಡಿ ಮಕ್ಕಳು ಸೇವಿಸಿದರೆ ಸ್ಪಷ್ಟವಾಗಿ ಆರೋಗ್ಯ ಕೆಡದಿರದು. ಗರ್ಭಿಣಿ ಸ್ತ್ರೀಯರಿಗಂತೂ ಆರೋಗ್ಯ ಹದಗೆಟ್ಟು, ಹುಟ್ಟುವ ಮಗು ಮತ್ತು ಗರ್ಭಿಣಿ ಸ್ತ್ರೀಗೂ ಪ್ರಾಣಾಯಾಮ ಆಗುವ ಸಂಭವವಿರುತ್ತದೆ. ಇದನ್ನು ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ

ಇತ್ತ ಕೊಡಗು ಭಾಗದಲ್ಲೂ ಸಹ ಕಳಪೆ ಗುಣಮಟ್ಟದ ಮತ್ತು ಕೊಳೆತ ಮೊಟ್ಟೆ ವಿತರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. SDPI ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ ಅವರು ಜಿಲ್ಲೆಯ ಕೂಡಿಗೆ ಬಳಿಯ ಬಸವನತ್ತೂರು ಅಂಗನವಾಡಿ ಕೇಂದ್ರದಲ್ಲಿ ಬಾಣಂತಿಯರಿಗೆ ಕೊಳೆತ ಮೊಟ್ಟೆಗಳನ್ನು ವಿತರಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಟೆಂಡರ್ ಪಡೆದು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಹಾಗೂ ಕೊಳೆತ ಮೊಟ್ಟೆಗಳನ್ನು ಪೂರೈಕೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಬಜರಂಗದಳದ ರೌಡಿಶೀಟರ್ ಸಕಲೇಶಪುರ ರಘು ಬಂಧನಕ್ಕೆ ಸಿಪಿಐಎಂ ಹಾಗೂ ಎಸ್ಡಿಪಿಐ ಆಗ್ರಹ
‘ಮುಸ್ಲಿಂ ವ್ಯಾಪಾರಿಗಳು ಬಂದರೆ ಗುಂಡಿಟ್ಟು ಸಾಯಿಸಿ’ ಎನ್ನುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಲು ಕಾರಣನಾದ ಬಜರಂಗದಳದ ಮಾಜಿ ರಾಜ್ಯ ಸಂಚಾಲಕ, ರೌಡಿಶೀಟರ್ ಸಕಲೇಶಪುರ ರಘು ಬಂಧನಕ್ಕೆ ರಾಜ್ಯಾದ್ಯಂತ ಹಲವು ಜನಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಸರ್ಕಾರವನ್ನು ಆಗ್ರಹಿಸಿವೆ.

ಈ ಹಿಂದೆಯೂ ಕೂಡಾ ಹಲವು ಬಾರಿ ಹಿಂದುತ್ವದ ಸಂಘಟನೆಗಳ ಹೆಸರಿನಲ್ಲಿ ಈ ವ್ಯಕ್ತಿ ಸಮಾಜದಲ್ಲಿ ಶಾಂತಿ ಕೆಡಿಸಲು ಪ್ರಯತ್ನಿಸಿದ್ದು, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈತನ ಆಟಾಟೋಪಕ್ಕೆ ಲಂಗು ಲಗಾಮು ಇಲ್ಲದಂತಾಗಿತ್ತು. ಆದರೆ ಇದನ್ನೇ ಮುಂದುವರೆಸಿಕೊಂಡು ಬಂದ ಸಕಲೇಶಪುರ ರಘುಗೆ ಈಗ ಬಂಧನದ ಭೀತಿ ಎದುರಾಗಿದೆ. ನಿನ್ನೆಯ ದಿನ ತಡರಾತ್ರಿ ಪೊಲೀಸರು ಬಂಧಿಸಲು ಹೋದಾಗ ಸುಳಿವು ಅರಿತು ಅಜ್ಞಾತ ಸ್ಥಳಕ್ಕೆ ಈತ ಪರಾರಿಯಾಗಿದ್ದಾನೆ. ಸಧ್ಯ ಈತನ ಸಮಾಜಘಾತುಕ ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿ ಸಿಪಿಎಂ ಹಾಸನ ಜಿಲ್ಲಾ ಘಟಕ ರಘು ಬಂಧನಕ್ಕೆ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದೆ.

“ಮುಸ್ಲಿಮರನ್ನು ಗುಂಡು ಹಾರಿಸಿ ಕೊಲ್ಲುವುದಾಗಿ ಬಹಿರಂಗವಾಗಿ ಘೋಷಿಸಿರುವ ಸಕಲೇಶಪುರದ ರಘು ಎಂಬ ಸಮಾಜಘಾತಕನನ್ನು ಪೋಲೀಸರು ಕೂಡಲೇ ಬಂಧಿಸುವಂತೆ ಸಿಪಿಐಎಂ ಹಾಸನ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ. ಹಾಗೂ ಆತನ ಮೇಲೆ ಕೊಲೆಗೆ ಪ್ರಚೋದನೆ, ಭಯೋತ್ಪಾದನೆ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡಿಕೆಗೆ ಸಂಬಂಧಿಸಿದ ಕಾಯ್ದೆಗಳನ್ವಯ ಕೇಸು ದಾಖಲಿಸಿ ಜೈಲಿಗೆ ಕಳುಹಿಸಬೇಕೆನ್ನುವುದು ಸಿಪಿಐಎಂ ಒತ್ತಾಯವಾಗಿದೆ.

ಸಕಲೇಶಪುರದ ರಘು ಎಂಬ ಸಮಾಜಘಾತುಕ ಭಜರಂಗದಳದ ಹೆಸರಿನಲ್ಲಿ ಹಲವಾರು ಅಕ್ರಮ ಹಾಗೂ ಕುಕೃತ್ಯಗಳನ್ನು ನಡೆಸಿರುತ್ತಾನೆ. ಅವನ ಮೇಲೆ ಈಗಾಗಲೇ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ‘ಗೋರಕ್ಷಣೆ’, ‘ಹಿಂದೂ’ ಧರ್ಮ ರಕ್ಷಣೆ ಹೆಸರಿನಲ್ಲಿ ರೋಲ್‌ಕಾಲ್, ಗೂಂಡಾಗಿರಿಯಂತಹ ಹಲವಾರು ಕಾನೂನು ಭಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾನೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವನ ವಿರುದ್ಧ ಪೋಲೀಸರು ಕಠಿಣ ಕ್ರಮ ಜರುಗಿಸಲು ವಿಫಲರಾಗಿದ್ದರು. ಸಕಲೇಶಪುರ ತಾಲ್ಲೂಕಿನಲ್ಲಿ ಕೆಲವು ಪೋಲೀಸರೂ ಅವನೊಂದಿಗೆ ಶಾಮೀಲಾಗಿರುವ ಮಾತುಗಳಿವೆ. ಈಗ ಸಕಲೇಶಪುರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಆಯ್ಕೆಯಾಗಿರುವುದು ಆತನಿಗೆ ಮತ್ತಷ್ಟು ಉತ್ತೇಜನ ಸಿಕ್ಕಂತಾಗಿದೆ. ಸಕಲೇಶಪರ ಕ್ಷೇತ್ರದ ಬಿಜೆಪಿ ಶಾಸಕ ಸಿಮೆಂಟ್ ಮಂಜು ಬೆಂಬಲಿಗನಾಗಿರುವ ರಘು ವಿರುದ್ಧ ಪೋಲೀಸರು ಅತ್ಯಂತ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ.

ನಾಗರಿಕ ಸಮಾಜ ಮತ್ತು ಸರ್ಕಾರಕ್ಕೆ ಸವಾಲಾಗಿರುವ ಇಂತಹ ದುಷ್ಟ ಶಕ್ತಿಗಳ ನಿಗ್ರಹಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಸಂವಿಧಾನದ ಕಾನೂನುಗಳ ಆಡಳಿತದ ಸರಾಗವಾಗವಾಗಿ ನಡೆಯಬೇಕಿದ್ದರೆ ರಘುನಂತಹ ದುಷ್ಟರ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸುವ ಮುಖಾಂತರ ಅಂತಹ ದುಷ್ಟ ಶಕ್ತಿಗಳಿಗೆ ಸ್ಪಷ್ಟ ಸಂದೇಶವನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲೀಸು ಇಲಾಖೆಯ ವಿರುದ್ಧ ತೀವ್ರ ಹೋರಾಟಕ್ಕೆ ಇಲಿಯುವಯದು ಅನಿವಾರ್ಯವಾಗಲಿದೆ ಎಂದು ಸಿಪಿಐಎಂ ಮನವರಿಕೆ ಮಾಡಿಕೊಡಲು ಬಯಸುತ್ತದೆ.” ಎಂದು ಸಿಪಿಐಎಂ ಪಕ್ಷದ ಹಾಸನ ಜಿಲ್ಲಾ ಘಟಕದ ಕಾರ್ಯದರ್ಶಿ ಧರ್ಮೇಶ್ ಆಗ್ರಹಿಸಿದ್ದಾರೆ.

ಇದರ ಜೊತೆಗೆ ರಾಜ್ಯ ಎಸ್ಡಿಪಿಐ ಪಕ್ಷ ಕೂಡಾ ಈತನ ಕುಕೃತ್ಯಗಳ ಬಗ್ಗೆ ಪ್ರಸ್ತಾಪಿಸಿ ಶೀಘ್ರದಲ್ಲೇ ಈತನ ಬಂಧನವಾಗಲಿ ಎಂದು ಆಗ್ರಹಿಸಿದೆ‌. ಅದರಂತೆ
“ಗುಂಡು ಹೊಡೆದು ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡಿರುವ ರಘು ಸಕಲೇಶಪುರ ನನ್ನು ತಕ್ಷಣ ಬಂಧಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಲು ಗೃಹಮಂತ್ರಿ ಜಿ.ಪರಮೇಶ್ವರ್ ಅವರಲ್ಲಿ ಆಗ್ರಹಿಸುತ್ತೇನೆ. ಈತ ಈ ಹಿಂದೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಾಲೆಯೊಂದರಲ್ಲಿ ನಡೆದಿದ್ದ ಸಂಘದ ಕಾರ್ಯಕರ್ತರಿಗೆ ಕಾನೂನು ಬಾಹಿರ ಬಂದೂಕು ತರಬೇತಿ ಹಾಗೂ ಶಸ್ತ್ರ ದೀಕ್ಷೆಯಲ್ಲಿ ಭಾಗವಹಿಸಿ ಸಕಲೇಶಪುರದಿಂದ ನಿರಂತರವಾಗಿ ಕೊಡಗು ಜಿಲ್ಲೆಗೆ ಆಗಮಿಸಿ ಕೋಮು ವೈಷಮ್ಯವನ್ನು ಮೂಡಿಸಿ ಸಮಾಜದ ಶಾಂತಿ ಕದಡಲು ಯತ್ನಿಸಿದ್ದ ಸಂಧರ್ಭದಲ್ಲೇ ಬಂಧಿಸಿ ಅಕ್ರಮ ಶಸ್ತ್ರಾಸ್ತ್ರಗಳ ಸಂಗ್ರಹ ಮತ್ತು ತರಬೇತಿ ಬಗ್ಗೆ ಕೂಲಂಕಷ ತನಿಖೆ ನಡೆಸುವಂತೆ ಎಸ್ಡಿಪಿಐ ಪಕ್ಷ ಅಂದೇ ಪೋಲಿಸ್ ಇಲಾಖೆಯನ್ನು ಆಗ್ರಹಿಸಿತ್ತು. ತ್ರಿಶೂಲ ದೀಕ್ಷೆ ನೀಡಿದ ಬಳಿಕ ತ್ರಿಶೂಲ ದೀಕ್ಷೆ ನೀಡಿದ ಬಳಿಕ ಭಜರಂಗದಳ ಗೂಂಡಗಳು ಅದನ್ನು ನಾಗರಿಕರ ಮತ್ತು ವಿಧ್ಯಾರ್ಥಿಗಳ ವಿರುದ್ಧ ಬಳಸಿ ಕೊಲೆಯತ್ನದಂತಹ ಕೃತ್ಯವನ್ನು ನಡೆಸಿರುವ ಉದಾಹರಣೆಗಳು ಇವೆ, ಅಲ್ಲದೇ ನೆರೆಯ ಕೇರಳದಲ್ಲಿ ಕೂಡ ಸಂಘಪರಿವಾರ ಈ ರೀತಿಯ ಬಂದೂಕು,ಪೆಟ್ರೋಲ್ ಬಾಂಬ್ ತರಬೇತಿ ನೀಡಿ ಪೋಲಿಸ್ ಠಾಣೆಗಳ ಮೇಲೆಯೇ ದಾಳಿ ನಡೆಸಿದ ಹಲವಾರು ನಿದರ್ಶನಗಳು ಇವೆ.” ಎನ್ನುವ ಮೂಲಕ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೋಲಾರದಲ್ಲಿ SDPI ನಿಂದ ಚುನಾವಣೆ ಪೂರ್ವ ಸಿದ್ಧತಾ ಕಾರ್ಯಕ್ರಮ
ಕೋಲಾರ: SDPI ವತಿಯಿಂದ ಚುನಾವಣೆ ಸಿದ್ಧತೆ ಕಾರ್ಯಕ್ರಮದಲ್ಲಿ 2023 ಚುನಾವಣೆ ಪೂರ್ವ ಸಿದ್ಧತೆಗಾಗಿ ಕಾರ್ಯಕ್ರಮ ನಡೆದಿದ್ದು, ಸೋಮವಾರದಂದು ಕೋಲಾರದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್‌ ಭಾಸ್ಕರ್‌ ಪ್ರಸಾದ್‌ ಭಾಗವಹಿಸಿ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ SDPIನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್‌ ಭಾಸ್ಕರ್‌  ಪ್ರಸಾದ್‌, ʼಈದಿನ ಹಮ್ಮಿಕೊಂಡಿದ್ದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಕೋಲಾರ ಜಿಲ್ಲೆಯ ಹಲವಾರು ದಲಿತ ಹಾಗೂ ರೈತ ಮುಖಂಡರು ಪ್ರೋತ್ಸಾಹದಾಯಕವಾದ ಸಲಹೆಗಳನ್ನು ಹಂಚಿಕೊಂಡಿದ್ದು, ಅವರ ಎಲ್ಲಾ ಸಲಹೆ, ಮಾರ್ಗಸೂಚಿ ಯನ್ನು SDPI ಒಪ್ಪಿಕೊಳ್ಳುತ್ತದೆ. 2023ರಲ್ಲಿ ಕೋಲಾರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಸ್ಪರ್ಧೆ  ಮಾಡಬೇಕು ಅನ್ನುವ ಯೋಚನೆ ಈಗ ಮಾಡಬೇಕಿದೆ. ಇನ್ನು ಕೆಲವೇ ದಿನಗಳಲ್ಲಿ ನಾವು ಸ್ಪರ್ಧಿಸುವ ಕ್ಷೇತ್ರಗಳ ಜೊತೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ. ತಾವೆಲ್ಲರೂ ಸಂವಿಧಾನವನ್ನು ಉಳಿಸಿ ಜಾಗೃತಿಯನ್ನು ಮೂಡಿಸುವಂತ ನಮ್ಮ ಹೋರಾಟದೊಂದಿಗೆ ಜೊತೆ ಇರುಬೇಕು ಎಂದು ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ SDPI(Social democratic party of India) ನ ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ನ ಮುಖಂಡರು, ದಲಿತ ಮುಖಂಡರು, ರೈತ ಪರ ಮುಖಂಡರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಮಂಗಳೂರಿನಲ್ಲಿ ಗೋ ವ್ಯಾಪಾರಿಗಳ ಮನೆ,ಅಂಗಡಿ ಜಪ್ತಿ : ಎಸ್‌ಡಿಪಿಐ ಆಕ್ರೋಶ
ಮಂಗಳೂರು: ಮಂಗಳೂರಿನ ಕಾಟಿಪಳ್ಳದಲ್ಲಿ ಅಕ್ರಮ ಜಾನುವಾರು ಮಾಂಸಕ್ಕಾಗಿ ವಧೆ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಮೂವರು ವ್ಯಾಪಾರಿಗಳ ಮನೆ ಮತ್ತು ಅಂಗಡಿಯನ್ನು ಶಾಸಕ ಭರತ್ ಶೆಟ್ಟಿ ಒತ್ತಡದ ಮೇರೆಗೆ ದ.ಕ ಜಿಲ್ಲಾಡಳಿತ ಮುಟ್ಟುಗೋಲು ಹಾಕಿದ ನಡೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ  ಕಾರ್ಯದರ್ಶಿ ಅನ್ವರ್ ಸಾದತ್,  ʼಶಾಸಕ ಭರತ್ ಶೆಟ್ಟಿ ಕ್ಷೇತ್ರವೂ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಹಾಗೂ ಕೊರೋನಾ ಸಂದರ್ಭದಲ್ಲಿ ಮೃತಪಟ್ಟ ಹಿಂದು ಮಹಿಳೆಯೊಬ್ಬಳ ಮೃತ ಶರೀರವನ್ನು ದಫನ ಮಾಡಲು ರುದ್ರಭೂಮಿಯಲ್ಲಿ ಅವಕಾಶ ನೀಡದೆ ರಾತ್ರಿ ಇಡೀ ಶವವನ್ನು ಮಂಗಳೂರಿಡೀ ಸುತ್ತಾಡುವಂತೆ ಮಾಡಿದ್ದರಿಂದ ಭರತ್ ಶೆಟ್ಟಿಯ ವಿರುದ್ಧ ಅಸಮಾಧಾನದ ಇರುವುರಿಂದ ಈ ಬಾರಿ ಟಿಕೆಟ್ ಸಿಗುವುದು ಸಂಶಯ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಾ ಇದೆ. ಇದಾಕ್ಕಾಗಿ ಇವರು  ತಮ್ಮ ಶಾಸಕ ಸ್ಥಾನದ ಅಧಿಕಾರವನ್ನು ದುರುಪಯೋಗ ಪಡಿಸಿ ಗೋ ವ್ಯಾಪಾರಿಗಳ ಮನೆಯನ್ನು ಮತ್ತು ಅಂಗಡಿಯನ್ನು ಗೂಂಡಾ ರಾಜ್ಯ ಎಂಬ ಕುಖ್ಯಾತಿ ಹೊಂದಿರುವ ಯೋಗಿಯ ಯುಪಿ ಮಾದರಿಯಂತೆ ಮುಟ್ಟುಗೋಲು ಹಾಕುವಂತೆ ಮಾಡಿದ ನಂತರ ಸಂಘಪರಿವಾರ ನಾಯಕರ ಮೆಚ್ಚುಗೆ ಗಳಿಸಿ ಟಿಕೆಟ್ ಪಡೆಯುವ ಹುನ್ನಾರ ಮಾಡಿಕೊಂಡಿದ್ದಾರೆʼ ಎಂದು ಹೇಳಿದರು.

ʼಈ ಘಟನೆಯಲ್ಲಿ ಕಾನೂನಿನ ಸ್ಪಷ್ಟ ಉಲ್ಲಂಘನೆ ಯಾಗಿದೆ,ಮನೆ ಮುಟ್ಟುಗೋಲು ಹಾಕಬೇಕೆಂಬ ಮನವಿಯಲ್ಲಿ ಅಕ್ರಮವಾಗಿ ದನವನ್ನು ಹತ್ಯೆ ಮಾಡುವುದರಿಂದ ಕೋಮು ಗಲಭೆಯ ಸಾಧ್ಯತೆ ಇದೆʼ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಕೋಮು ಗಲಭೆಯ ತಡೆಗಾಗಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ ಯನ್ನು ತಂದಿರುವುದಲ್ಲ “ಕೃಷಿ ಮತ್ತು ಪಶು ಸಂಗೋಪನೆಯ ಅಭಿವೃದ್ಧಿಯ ಉದ್ದೇಶಕ್ಕಾಗಿ ಈ ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದು ಕಾಯಿದೆಯಲ್ಲಿ ಉಲ್ಲೇಖಿಸಿದ್ದನ್ನು ಜಿಲ್ಲಾಡಳಿತ ಗಮನಿಸಬೇಕು. ಇಲ್ಲಿ ಮನೆ ಮುಟ್ಟುಗೋಲು ಹಾಕಿದ್ದು ಅಲ್ಲದೇ ಅದರ ಆರ್ ಟಿ ಸಿ ಯನ್ನು ಸರಕಾರದ ಹೆಸರಿನಲ್ಲಿ ಬದಲಾವಣೆ ಮಾಡಿ ಜಿಲ್ಲಾಡಳಿತ ಸರ್ವಾಧಿಕಾರಿ, ದಬ್ಬಾಳಿಕೆಯ ನೀತಿಯನ್ನು ಅನುಸರಿಸುತ್ತಿರುವುದು ಅಕ್ಷಮ್ಯ ವಾಗಿದೆ ಎಂದರು.

ಹಾಗಾಗಿ ದ.ಕ ಜಿಲ್ಲಾಡಳಿತ ಶಾಸಕರ ಇಂತಹ ಕಾನೂನು ವಿರೋಧಿ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ವಾಗಿ  ವರ್ತಿಸಬೇಕೆಂದು ಅನ್ವರ್ ಸಾದತ್  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜೀನಾಮೆ ಕೊಟ್ಟು ತೊಲಗಲಿ: ಅಬ್ದುಲ್ ಮಜೀದ್ ಮೈಸೂರು
ಬೆಂಗಳೂರು: ಪರೇಶ್ ಮೇಸ್ತ ಸಾವು ಆಕಸ್ಮಿಕ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಹೇಳಿದೆ. ಅದನ್ನು ಮುಸ್ಲಿಮರು  ಮಾಡಿದ ಕೊಲೆ ಎಂದು ಬಿಂಬಿಸಿ, ರಾಜ್ಯಕ್ಕೆ ಬೆಂಕಿ ಹಚ್ಚಿ, ಪೊಲೀಸರ ವಾಹನಗಳನ್ನು ದಹಿಸಿದ್ದ ಮಾನಗೆಟ್ಟ ಬಿಜೆಪಿ ರಾಜೀನಾಮೆ ಕೊಟ್ಟು ತೊಲಗಲಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಅವರು ಹೇಳಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲೇ ಒಂದು ಸಾವಾದರೂ ಕೂಡ ಸಾಮಾನ್ಯವಾಗಿ ಮರುಕ, ಕರುಣೆ ಹುಟ್ಟುತ್ತದೆ. ಆದರೆ ರಣಹದ್ದಿನ ಹಾಗೆ ಹೆಣಗಳಿಗೆ ಕಾಯುವ ಫ್ಯಾಶಿಸ್ಟ್ ಬಿಜೆಪಿಗೆ ಮಾತ್ರ ಅದು ಒಂದು ರಾಜಕೀಯ ಅವಕಾಶವಾಗಿ ಕಂಡುಬರುತ್ತದೆ ಎಂದು ಅಬ್ದುಲ್ ಮಜೀದ್ ಟೀಕಿಸಿದ್ದಾರೆ.

2017ರಲ್ಲಿ ಪರೇಶ್ ಮೇಸ್ತ ಎನ್ನುವ ಯುವಕ ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಸಾಯುತ್ತಾನೆ. ಹಿಂದೂ ಒಬ್ಬನ ಹೆಣ ಕಂಡ ತಕ್ಷಣ ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ನರಿ ಬುದ್ಧಿಯ ಬಿಜೆಪಿ ಕಣಕ್ಕೆ ಇಳಿಯಿತು. ಇದೊಂದು ಕೊಲೆ, ಇದನ್ನು ಮುಸ್ಲಿಮರೇ ಮಾಡಿದ್ದಾರೆ ಎಂದು ಆರೋಪಿಸಿ ಕೊಲೆಯ ಜೊತೆಗೆ ಎಸ್‌ಡಿಪಿಐ ಪಕ್ಷ ಮತ್ತು ಪಿ.ಎಫ್.ಐ ಸಂಘಟನೆಯ ಹೆಸರನ್ನು ಎಳೆದು ತಂತು. ಒಂದಷ್ಟು ಮುಸ್ಲಿಮರು ಜೈಲಿಗೆ ಹೋಗುವಂತೆ ಮಾಡಿತು. ಆ ವಿಚಾರವಾಗಿ ದೊಡ್ಡ ಮಟ್ಟದ ಕೋಮು ಗಲಭೆ ಮಾಡಿಸಿತ್ತು ಎಂದು ಅಬ್ದುಲ್ ಮಜೀದ್ ಆರೋಪಿಸಿದರು.

ಬಿಜೆಪಿಯ ಎಲ್ಲ ನಾಯಕರು ಒಟ್ಟಿಗೆ ಸೇರಿ ಯೋಜನೆ ರೂಪಿಸಿ ಮುಸ್ಲಿಮರ ವಿರುದ್ಧ ಕೋಮು ದ್ವೇಷದ ಭಾಷಣಗಳನ್ನು ಮಾಡಿ ಇಡೀ ರಾಜ್ಯದಲ್ಲಿ ಗಲಭೆಗೆ ಪ್ರಚೋದನೆ ನೀಡಿದರು. ಕರ್ನಾಟಕ ಹೊತ್ತಿ ಉರಿಯಿತು. ಪೊಲೀಸರ ವಾಹನಗಳಿಗೂ ಕೂಡ ಬೆಂಕಿ ಹಚ್ಚಲಾಯಿತು. ಅದರಲ್ಲಿ ಐಜಿಪಿ ಕಾರನ್ನೂ ಸುಟ್ಟು ಇನ್ನಿಲ್ಲದಂತಹ ಹಿಂಸಾಚಾರವನ್ನು ಫ್ಯಾಶಿಸ್ಟ್ ಬಿಜೆಪಿ ಮಾಡಿತು. 2018ರ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಲಾಭಕ್ಕೆ ಗಲಭಾ ಚಾಣಾಕ್ಷ ಗೃಹಮಂತ್ರಿ ಅಮಿತ್ ಷಾರನ್ನು ಕೂಡ ಕರೆಸಿ, ಈ ವಿಚಾರವಾಗಿ ಜನರ ಭಾವನೆಗಳನ್ನು ಕೆರಳಿಸಿತು. ಈಗ ಅದೇ ಬಿಜೆಪಿ ಸರ್ಕಾರದ ಅಡಿಯಲ್ಲಿ ಬರುವ ಸಿಬಿಐ ತನಿಖಾ ಸಂಸ್ಥೆ ಅದೊಂದು ಆಕಸ್ಮಿಕ ಸಾವು ಎಂದು ಅಂತಿಮ ವರದಿಯನ್ನು ನೀಡಿದೆ. ಆ ಪಕ್ಷಕ್ಕೆ ಮಾನ ಮರ್ಯಾದೆ ಇದ್ದರೆ ಈಗ ಜನರ ನಡುವೆ ಬಂದು ಆ ಹಿಂಸಾಚಾರಕ್ಕೆ ಉತ್ತರ ಕೊಡಲಿ ಎಂದು ಮಜೀದ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೋಮುವಾದಿ ಬಿಜೆಪಿ ಪಕ್ಷ ಹಿಂದೂ ಮುಸ್ಲಿಂ ದ್ವೇಷವನ್ನೇ ಬಂಡವಾಳ ಮಾಡಿಕೊಂಡು ಅಧಿಕಾರದ ಕುರ್ಚಿಗೆ ಏರುವ ತವಕದಲ್ಲಿರುತ್ತದೆ ಎನ್ನುವುದಕ್ಕೆ ಇದು ಒಂದು ಉದಾಹರಣೆ ಅಷ್ಟೇ. ಇಂತಹ ನೀಚ ಮನಸ್ಥಿತಿಯ, ದೇಶದ್ರೋಹಿ ಸಂಚುಗಳನ್ನು ರೂಪಿಸುವ ಬಿಜೆಪಿ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಅನ್ನುವುದು ಲವಲೇಶವಾದರೂ ಉಳಿದಿದ್ದರೆ ಮತ್ತು ಅವರೇ ಹೇಳುವ ಧಮ್ಮು, ತಾಕತ್ತು ಇದ್ದರೆ ವಿಧಾನಸಭೆಯನ್ನು ವಿಸರ್ಜಿಸಿ ಜನರ ಮುಂದೆ ಬಂದು ಮತ ಯಾಚಿಸಲಿ ಎಂದು ಮಜೀದ್ ಅವರು ಸವಾಲು ಹಾಕಿದರು.

ಇನ್ನು ಕಾಂಗ್ರೆಸ್ ನವರು ಪಿ.ಎಫ್ ಐ ಸಂಘಟನೆ ಬ್ಯಾನ್ ಆಗಬೇಕು ಎಂದು ಬೇಡಿಕೆ ಇಟ್ಟು, ಅದು ಬ್ಯಾನ್ ಆದಾಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅದನ್ನ ಸ್ವಾಗತಿಸಿದರು. ಆದರೆ ಮೇಸ್ತ ಸಾವಿನ ಸಂದರ್ಭದಲ್ಲಿ ಅಷ್ಟೆಲ್ಲ ಗಲಭೆಗಳಾಗಿ ಗಲಭೆಕೋರರು ಐಜಿಪಿ ಕಾರನ್ನೇ ಸುಟ್ಟರೂ ಸಹ ಅಂದು ಮುಖ್ಯಮಂತ್ರಿಯಾಗಿದ್ದ ಇದೇ ಸಿದ್ದರಾಮಯ್ಯ ಆಗಲಿ, ಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಆಗಲಿ ಯಾಕೆ ಈ ಗುಂಡಾಗಳ ವಿರುದ್ಧ ಯು.ಎ.ಪಿ.ಎ ಹಾಕಲಿಲ್ಲ? ಇದರ ಆರ್ಥ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸಹ ಮುಸ್ಲಿಮರನ್ನು ಬಲಿಕೊಟ್ಟು ತಮ್ಮ ರಾಜಕೀಯ ಲಾಭ ಪಡೆಯುತ್ತಾರೆ ಎಂಬುದೇ ಆಗಿರುತ್ತದೆ. ಹೀಗಾಗಿ ರಾಜ್ಯದ ಜನ ಇದನ್ನೆಲ್ಲ ಗoಭಿರವಾಗಿ ಪರಿಗಣಿಸಿ ಮುಂದಿನ ಚುನಾವಣೆಯಲ್ಲಿ ಈ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಜೀದ್ ಅವರು ಹೇಳಿದರು.

ಇದು ಪ್ರಜಾಪ್ರಭುತ್ವ ಮತ್ತು ಜನರ ಹಕ್ಕುಗಳ ಮೇಲಿನ ನೇರ ದಾಳಿ: SDPI ಪ್ರತಿಕ್ರಿಯೆ
PFI ಮತ್ತು ಅದರ ಸಹ ಸಂಘಟನೆಗಳ ಮೇಲೆ ಕಾನೂನು ವಿರೋಧಿ ಚಟುವಟಿಕೆ ನಡೆಸುತ್ತಿದೆಯೆನ್ನುವ ಕಾರಣ ನೀಡಿ ಕೇಂದ್ರ ಸರಕಾರ 5 ವರ್ಷಗಳ ನಿಷೇಧ ಹೇರಿರುವ ಕುರಿತು SDPI ಪಕ್ಷವು ಪ್ರತಿಕ್ರಿಯಿಸಿದ್ದು, ಅದು ಈ ನಿಷೇಧವನ್ನು ಬಿಜೆಪಿ ಆಡಳಿತದ ಅಘೋಷಿತ ತುರ್ತು ಪರಿಸ್ಥಿತಿಯ ಭಾಗವಾಗಿದೆ ಎಂದು ಹೇಳಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸುವ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರವು ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜನರ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಜಿ ಪಕ್ಷದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಆಡಳಿತದ ತಪ್ಪು ಮತ್ತು ಜನವಿರೋಧಿ ನೀತಿಗಳ ವಿರುದ್ಧ ಯಾರು ಮಾತನಾಡುತ್ತಾರೋಅವರೆಲ್ಲರೂ ಬಂಧನ ಮತ್ತು ದಾಳಿಯ ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಭಾರತೀಯ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿ ವಾಕ್ ಸ್ವಾತಂತ್ರ್ಯ, ಪ್ರತಿಭಟನೆಗಳು ಮತ್ತು ಸಂಘಟಟಿತರಾಗುವ ಹಕ್ಕುಗಳನ್ನು ಆಡಳಿತವು ನಿರ್ದಯವಾಗಿ ಹತ್ತಿಕ್ಕಿದೆ. ತನಿಖಾ ಸಂಸ್ಥೆಗಳು ಮತ್ತು ಕಾನೂನುಗಳನ್ನು ಆಡಳಿತವು ಪ್ರತಿಪಕ್ಷಗಳನ್ನು ಮೌನಗೊಳಿಸಲು ಮತ್ತು ಭಿನ್ನಾಭಿಪ್ರಾಯದ ಧ್ವನಿಯನ್ನು ವ್ಯಕ್ತಪಡಿಸದಂತೆ ಜನರನ್ನು ಹೆದರಿಸಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಎಂ.ಕೆ.ಫೈಜಿ ಹೇಳಿದರು.

ಪತ್ರಿಕಾ ಹೇಳಿಕೆಯ ಪ್ರತಿ

ಸರ್ವಾಧಿಕಾರದ ಆಡಳಿತವನ್ನು ವಿರೋಧಿಸಲು ಮತ್ತು ಭಾರತೀಯ ಸಂವಿಧಾನದ ಪ್ರಜಾಪ್ರಭುತ್ವ ಮತ್ತು ಮೌಲ್ಯಗಳನ್ನು ಉಳಿಸಲು ಎಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಜನರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದ ಸಮಯ ಇದು ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

🔶ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ಇದನ್ನೂ ನೋಡಿ: ಆಲ್ಬರ್ಟ್ ಐನ್‌ಸ್ಟಿನ್ ಮಹಾತ್ಮ ಗಾಂಧಿಯವರ ಅಭಿಮಾನಿಯಾಗಿದ್ದರು : Albert Einstein was the fan of Gandhi

E=MC² ಸೂತ್ರವನ್ನು ಕಂಡುಹಿಡಿದ ಆಲ್ಬರ್ಟ್ ಐನ್‌ಸ್ಟಿನ್ ಮಹಾತ್ಮ ಗಾಂಧಿಯವರ ಅಭಿಮಾನಿಯಾಗಿದ್ದರು ಎಂಬುದು ನಿಮಗೆ ಗೊತ್ತೆ? ಪ್ರಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ಅವರ ಮಾತುಗಳನ್ನು ಕೇಳಿಸಿಕೊಳ್ಳಿ.

https://fb.watch/fPBGNUYrnC/

PFI, SDPI ಜಿಲ್ಲಾ ಕಚೇರಿಗಳ ಮೇಲೆ ದಾಳಿ: ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರತಿಕ್ರಿಯಿ
ಮಂಗಳೂರು: ನಗರದ ಪಿಎಫ್ಐ, ಎಸ್​ಡಿಪಿಐ ಜಿಲ್ಲಾ ಕಚೇರಿಗಳ ಮೇಲೆ ಎನ್ಐಎ ಅಧಿಕಾರಿಗಳ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರ ಕೆಲಸಕ್ಕೆ ಕೆಲವರು ಅಡ್ಡಿಪಡಿಸಲು ಪ್ರಯತ್ನಿಸಿದ್ದರಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನ ಪಿಎಫ್ಐ, ಎಸ್​ಡಿಪಿಐ ಜಿಲ್ಲಾ ಕಚೇರಿಗಳ ಮೇಲೆ ಎನ್ಐಎ ಅಧಿಕಾರಿಗಳ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರ ಕೆಲಸಕ್ಕೆ ಕೆಲವರು ಅಡ್ಡಿಪಡಿಸಲು ಪ್ರಯತ್ನಿಸಿದ್ದರಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ.#mangalore #PFI #KFD #SDPI #NIA pic.twitter.com/Ia06MiEe79
— Prajavani (@prajavani) September 22, 2022

ಸದ್ಯಕ್ಕೆ ನಗರದಲ್ಲಿನ PFI, SDPI ಕಚೇರಿ ಇರುವ ನೆಲ್ಲಿಕಾಯಿ ರಸ್ತೆಯ ಎರಡು ಬದಿಗಳಲ್ಲೂ ಸಿಆರ್​ಪಿಎಫ್ ಪಡೆಗಳು ಬಂದೋಬಸ್ತ್​ ಮಾಡಿದ್ದಾರೆ.

ಮಂಗಳೂರಿನಲ್ಲಿ PFI, SDPI ಕಚೇರಿ ಇರುವ ನೆಲ್ಲಿಕಾಯಿ ರಸ್ತೆಯ ಎರಡು ಬದಿಗಳಲ್ಲೂ ಸಿಆರ್​ಪಿಎಫ್ ಪಡೆಗಳ  ಬಂದೋಬಸ್ತ್​#PFI #SDPI #Mangalore #NIA pic.twitter.com/Qr3ZsX5QOO
— Prajavani (@prajavani) September 22, 2022

SDPI ಕಚೇರಿ ಹಾಗೂ SDPI ಜಿಲ್ಲಾ ಘಟಕದ ಪ್ರಮುಖರ ಮನೆ ಮೇಲೆ NIA ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ SDPI ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಂಗಳೂರು: SDPI ಕಚೇರಿ ಹಾಗೂ SDPI ಜಿಲ್ಲಾ ಘಟಕದ ಪ್ರಮುಖರ  ಮನೆ ಮೇಲೆ NIA ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ SDPI ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು.#SDPI #NIA #PFI #KFD #Mangalore pic.twitter.com/qzQmNiyjkR
— Prajavani (@prajavani) September 22, 2022

ಹಲವು ರಾಜ್ಯಗಳಲ್ಲಿ ಏಕಕಾಲದಲ್ಲಿ PFI ಕಚೇರಿಗಳ ಮೇಲೆ NIA, ED ದಾಳಿ: ಹಲವು ವ್ಯಕ್ತಿಗಳು NIA ವಶಕ್ಕೆ
ಇಂದು ಬೆಳಗಿನ ಜಾವ ಮೂರು ಗಂಟೆಯಿಂದ NIA, CRPF ಮತ್ತು ರಾಜ್ಯ ಪೋಲಿಸರ ಜಂಟು ನೇತೃತ್ವದಲ್ಲಿ PFI ಸಂಘಟನೆಯ ಕಚೇರಿಗಳ ಮೇಲೆ ಹಲವು ರಾಜ್ಯಗಳಲ್ಲಿ ಏಕಕಾಲದಲ್ಲಿ ನಡೆಸಲಾಗಿದೆ.

ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಸಂಘಟನೆಯ ಕಾರ್ಯಕರ್ತರು ತೀವ್ರ ಪ್ರತಿರೋಧವನ್ನು ಒಡ್ಡುತ್ತಿದ್ದು, ಹಲವೆಡೆ ನಾಯಕರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಇದು ಇದುವರೆಗಿನ ಅತಿದೊಡ್ಡ ದಾಳಿ ಎನ್ನಲಾಗುತ್ತಿದ್ದು 13 ರಾಜ್ಯಗಳಲ್ಲಿ 100 ಸ್ಥಳಗಲ್ಲಿ ದಾಳಿ ನಡೆಸಲಾಗಿದೆ.

ಭಯೋತ್ಪಾದಕ ಕೃತ್ಯಗಳಿಗೆ ಹಣದ ಹರಿವು, ಭಯೋತ್ಪಾದನಾ ತರಬೇತಿ ನೀಡಿದ ಆರೋಪಗಳಡಿಯಲ್ಲಿ ಈ ದಾಳಿಯನ್ನು ನಡೆಸಲಾಗುತ್ತಿದೆ.

PFI ಕಚೇರಿ ಮತ್ತು ಅದರ ಸಂಘಟನೆಯ ಮುಖ್ಯಸ್ಥರುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಇದೇ ದಾಳಿಯ ಭಾಗವಾಗಿ ಕರ್ನಾಟಕದ ಬಂಟ್ವಾಳ, ವಿಟ್ಲ, ಮಂಗಳೂರುಗಳಲ್ಲಿಯೂ ಹಲವರನ್ನು ವಶಕ್ಕೆ ಪಡೆಯಲಾಗಿದೆ.

ಹಾರ್ಡ್‌ಡ್ರೈವ್‌ ಮತ್ತು ಪೆನ್‌ಡ್ರೈವ್‌ಗಳನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ.