Sex scam – Peepal Media

ತೀರ್ಥಹಳ್ಳಿ ABVP ಮುಖ್ಯಸ್ಥನ ಬಂಧನ ; ಪ್ರಕರಣದಲ್ಲಿ ಸಂಘಪರಿವಾರದ ಮೌನದ ಹಿಂದಿನ ಕಾರಣವೇನು?
ಅಶ್ಲೀಲ ವಿಡಿಯೋ ಹರಿಬಿಟ್ಟು ಅಮಾಯಕ ಹೆಣ್ಣು ಮಕ್ಕಳ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ABVP ಘಟಕದ ಮುಖ್ಯಸ್ಥ ಪ್ರತೀಕ್ ಗೌಡ ಬಂಧನವಾಗಿದೆ. ನಿನ್ನೆಯ ದಿನ NSUI ತೀರ್ಥಹಳ್ಳಿ ಘಟಕ ಆತನ ಮೇಲೆ ದೂರು ದಾಖಲಿಸಿದ ಬೆನ್ನಲ್ಲೇ ತೀರ್ಥಹಳ್ಳಿ ಪೊಲೀಸರು ಪ್ರತೀಕ್ ಗೌಡನನ್ನು ಬಂಧಿಸಿದ್ದಾರೆ.

ಈ ಬಗ್ಗೆ ಪೀಪಲ್ ಟಿವಿ ವಿಸ್ತೃತ ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಶನಿವಾರ ಪ್ರತೀಕ್ ಗೌಡನ ಬಂಧನವಾಗಿದೆ. ABVP ಸಂಘಟನೆಯ ಸದಸ್ಯತ್ವ ಮತ್ತು ಸಂಘಟನೆಯಲ್ಲಿನ ಘಟಕಗಳಿಗೆ ಸ್ಥಾನಮಾನ ಕೊಡುವ ಬಗ್ಗೆ ವಿಧ್ಯಾರ್ಥಿನಿಯರಿಗೆ ನಾನಾ ರೀತಿಯಲ್ಲಿ ಆಮಿಷವೊಡ್ಡಿ ಅವರಿಂದ ನಗ್ನ ಚಿತ್ರಗಳನ್ನ ಆರೋಪಿ ಪ್ರತೀಕ್ ಗೌಡ ಚಿತ್ರಿಸಿದ್ದನು. ನಂತರ ವಿಧ್ಯಾರ್ಥಿನಿಯರಿಗೆ ವಿಡಿಯೋ ತೋರಿಸಿ ಹಣ ಮತ್ತು ನಿರಂತರ ಲೈಂಗಿಕ ಕ್ರಿಯೆಗೆ ಬಳಸಿದ್ದ ಎಂದೂ ಆರೋಪಿಸಲಾಗಿದೆ.

ನಂತರ ಈತನ ಬ್ಲಾಕ್ಮೇಲ್ ತಂತ್ರಕ್ಕೆ ಮಣಿಯದೇ ಹೋದಾಗ ವಿದ್ಯಾರ್ಥಿನಿಯರ ನಗ್ನ ಚಿತ್ರಗಳನ್ನು ವಾಟ್ಸಾಪ್ ಮೂಲಕ ಹರಿಬಿಟ್ಟು ಹೆಣ್ಣು ಮಕ್ಕಳ ಮಾನಹಾನಿ ಮಾಡಿದ್ದಾನೆ. ಸಧ್ಯ ಆರೋಪಿ ಈಗ ತೀರ್ಥಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ.

ಆತ ನಮ್ಮವನಲ್ಲ ಎಂದ ABVP

ಇನ್ನೊಂದು ಕಡೆ ಈತನ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಈತ ಮುಖ್ಯಸ್ಥನಾಗಿದ್ದ ತೀರ್ಥಹಳ್ಳಿ ABVP ಘಟಕ, ಪ್ರತೀಕ್ ಗೌಡ ನಮ್ಮ ಸಂಘಟನೆಯಲ್ಲೇ ಇಲ್ಲ. ಈತನಿಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಪ್ಪೆ ಸಾರಿಸೋಕೆ ಹೊರಟಿದೆ. ಆದರೆ ಇದು ಸಂಘ ಪರಿವಾರದ ಎಸ್ಕೇಪ್ ಮಾರ್ಗ ಅನ್ನೋ ಸತ್ಯ ಈಗ ಗುಟ್ಟಾಗಿ ಉಳಿದಿಲ್ಲ. ಸಂಘ ಪರಿವಾರದ ಹಿನ್ನೆಲೆಯ ಕಾರ್ಯಕರ್ತರು ಏನೇ ಕಾನೂನು ಬಾಹಿರ ಚಟುವಟಿಕೆ ನಡೆಸಿದರೂ ಪರಿವಾರ ಇದೇ ರೀತಿಯ ಮಾರ್ಗ ಉಪಯೋಗಿಸಿ ತಪ್ಪಿಸಿಕೊಳ್ಳುತ್ತೆ. ಇಲ್ಲಿ ಪ್ರತೀಕ್ ಗೌಡನ ವಿಷಯದಲ್ಲಿ ಆಗಿರೋದೂ ಇದೇ.

ಇದೇ ಪ್ರತೀಕ್ ಗೌಡ ABVP ಸಂಘಟನೆಯ ತಾಲ್ಲೂಕು ಮುಖ್ಯಸ್ಥ ಎಂಬುದು ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲೇ ದಾಖಲಾಗಿದೆ. ಮತ್ತು ಈತ ಗುರುತಿಸಿಕೊಂಡಿರುವ ಸಂಘಟನೆ ಹಿನ್ನಲೆಯ ಪ್ರತಿಯೊಬ್ಬರೂ ಹೇಳುವ ಮಾತು. ಕೇವಲ ಎರಡು ತಿಂಗಳ ಹಿಂದೆ ನಡೆದ ABVP ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ವೇದಿಕೆಯನ್ನೇ ಹಂಚಿಕೊಂಡ ಫೋಟೋಗಳೇ ಈತ ಆ ಸಂಘಟನೆ ಪದಾಧಿಕಾರಿ ಎಂಬುದಕ್ಕೆ ಸಾಕ್ಷ್ಯ ಒದಗಿಸುತ್ತಿದೆ.

ಇನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈತ ತೀರ್ಥಹಳ್ಳಿಯಲ್ಲಿ ಹಿಜಾಬ್ ಘಟನೆಯ ನೇತೃತ್ವ ಕೂಡಾ ವಹಿಸಿದ್ದ. ಅದೂ ABVP ಸಂಘಟನೆಯ ಅಡಿಯಲ್ಲೇ ನಡೆದ ಗಲಭೆಗಳಲ್ಲಿ ಪ್ರತೀಕ್ ಗೌಡ ಮುಂಚೂಣಿ ಜವಾಬ್ದಾರಿ ವಹಿಸಿದ್ದ ಎಂಬ ಮಾಹಿತಿಗಳೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸಂಘ ಪರಿವಾರದ ಮೌನವೇಕೆ?

‘ಒಂದು ಕಡೆ ಸಂಘ ಪರಿವಾರ ತನ್ನ ಅಂಗಸಂಸ್ಥೆಗಳ ಮೂಲಕ ಹಿಜಾಬ್, ಲವ್ ಜಿಹಾದ್ ನಂತಹ ಅನಗತ್ಯ ವಿಚಾರಗಳನ್ನು ಇಟ್ಟು ಹಿಂದೂ ಹೆಣ್ಣು ಮಕ್ಕಳಿಗೆ ಉಳಿಗಾಲವಿಲ್ಲ ಅನ್ನೋದು. ಇನ್ನೊಂದು ಕಡೆ ಅವರದೇ ಸಂಘಟನೆಯ ಪದಾಧಿಕಾರಿಗಳು ಈ ರೀತಿಯಲ್ಲಿ ಹಿಂದೂ ಹೆಣ್ಣು ಮಕ್ಕಳನ್ನೇ ಅಶ್ಲೀಲ ಕೃತ್ಯಗಳಿಗೆ ಬಳಸಿಕೊಳ್ಳೋದು. ಹಾಗಾದರೆ ಹಿಂದೂ ಹೆಣ್ಣು ಮಕ್ಕಳು ಅಪಾಯದಲ್ಲಿ ಇರೋದು ಯಾರಿಂದ? ಹಿಂದೂವಾಗಿ ಹಿಂದೂ ಹೆಣ್ಣು ಮಕ್ಕಳನ್ನು ಯಾವ ರೀತಿಯಲ್ಲಿ ಬೇಕಾದರೂ ಬಳಸಿಕೊಳ್ಳಬಹುದಾ? ಇಲ್ಲಿ ಮಾನಹಾನಿ ಆಗಿದ್ದು ಒಬ್ಬ ಹಿಂದೂ ಯುವಕನಿಂದ‌. ಮೇಲಾಗಿ ಸಂಘ ಪರಿವಾರದ ಹಿನ್ನೆಲೆಯ ವ್ಯಕ್ತಿಯಿಂದ ಅನ್ನೋದು ಗಮನಾರ್ಹ.

ಹಿಂದೆ ಇದೇ ತೀರ್ಥಹಳ್ಳಿಯಲ್ಲಿ ನಂದಿತಾ ಎಂಬ ವಿದ್ಯಾರ್ಥಿನಿಯ ಸಾವಿನ ನಂತರ ಬಿಜೆಪಿ ಪಕ್ಷ ಇಡೀ ತೀರ್ಥಹಳ್ಳಿ ಹೊತ್ತಿ ಉರಿಯುವಂತಹ ಪ್ರತಿಭಟನೆ ಮಾಡಿತ್ತು. ಲಕ್ಷಾಂತರ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿತ್ತು. ಸತ್ಯಾಸತ್ಯತೆಯ ಅರಿವಿಲ್ಲದೆ ನೂರಾರು ಅಮಾಯಕ ಯುವಜನರನ್ನು ಅಡ್ಡದಾರಿಗೆ ತಗೆದುಕೊಂಡು ಹೋಗಿ, ಅವರ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿತ್ತು. ರಾಜ್ಯದ ಮೂಲೆ ಮೂಲೆಗಳಲ್ಲಿ ನಂದಿತಾ ಸಾವಿನ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿತ್ತು. ಪ್ರಕರಣದ ತೀರ್ಪು ಹೊರಬರಲೂ ಅವಕಾಶ ಕೊಡದೇ ತೀರ್ಥಹಳ್ಳಿಯಲ್ಲಿ ಹಿಂದೆಂದೂ ಕಾಣದಂತಹ ಗಲಭೆ ಎಬ್ಬಿಸಿತ್ತು ಸಂಘ ಪರಿವಾರ.

ಆದರೆ ABVP ಮುಖ್ಯಸ್ಥ ಪ್ರತೀಕ್ ಗೌಡನ ಪ್ರಕರಣದಲ್ಲಿ ಈ ವರೆಗೂ ಯಾವೊಬ್ಬ ಸಂಘ ಪರಿವಾರದ ಮುಖಂಡನಾಗಲಿ, ಬಿಜೆಪಿ ನಾಯಕರಾಗಲಿ ಆ ಹೆಣ್ಣು ಮಕ್ಕಳಿಗಾದ ಅನ್ಯಾಯದ ವಿರುದ್ಧ ದನಿಗೂಡಿಸದೇ ಇರೋದು ಹಿಂದೂ ಹೆಣ್ಣು ಮಕ್ಕಳ ಮೇಲಿನ ಇವರ ಕಾಳಜಿ ಕೇವಲ ಬೂಟಾಟಿಕೆ ಎಂಬುದನ್ನು ತೋರಿಸುತ್ತಿದೆ. ಹೀಗೆಂದು ಸ್ಥಳೀಯ ಪ್ರಜ್ಞಾವಂತರು ಮಾತಾಡಿಕೊಳ್ಳುತ್ತಿದ್ದಾರೆ.

ಏನೇ ಆಗಲಿ ತೀರ್ಥಹಳ್ಳಿ ABVP ಮುಖ್ಯಸ್ಥ ಪ್ರತೀಕ್ ಗೌಡನ ಬಂಧನವಾಗಿದೆ. ಆರೋಪ ಸಾಭೀತಾಗಿ ತಕ್ಕ ಶಿಕ್ಷೆ ಆಗಲಿದೆ ಎಂಬ ಭರವಸೆ ಕೂಡಾ ಇದೆ. ಇನ್ನೂ ಸ್ವಲ್ಪ ಧೈರ್ಯ ಮಾಡಿ ಅನ್ಯಾಯಕ್ಕೆ ಒಳಗಾದ ಹೆಣ್ಣು ಮಕ್ಕಳು ಆತನ ಮೇಲೆ ದೂರು ದಾಖಲಿಸಿದರೆ ಮುಂದೆ ಇಂತಹ ತಪ್ಪು ಮಾಡುವವರು ನೂರು ಬಾರಿ ಯೋಚಿಸುವಂತಾಗಬೇಕು. ಅಮಾಯಕ ಹೆಣ್ಣು ಮಕ್ಕಳು ಅನ್ಯಾಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.

ಹಿಂದೂ ಯುವತಿಯರೇ ಎಚ್ಚರ! ಇದು ಮೀಸೆ ಚಿಗುರದ ಬಲಪಂಥೀಯ ವಿಧ್ಯಾರ್ಥಿ ಸಂಘಟನೆ ಅಧ್ಯಕ್ಷನ ಸೆಕ್ಸ್ ಸ್ಕ್ಯಾಂಡಲ್!
ಎಚ್ಚರ! ಎಚ್ಚರ!! ಎಚ್ಚರ!!!
ಕಾಲೇಜು ಕಲಿಕೆಯ ಹಂತದ ವಿದ್ಯಾರ್ಥಿ ದಿಸೆಯಲ್ಲಿ ಸಂಘಟನೆ ಕಟ್ಟಿ ತಮ್ಮ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆ. ಆದರೆ ಅದು ಯಾವಾಗ ಧರ್ಮ, ಸಂಸ್ಕೃತಿ ಉಳಿಸುವ ವಿದ್ಯಾರ್ಥಿ ಸಂಘಟನೆಯಾಗೋಕೆ ಹೊರಟಿತೋ ಆಗಲೇ ವಿದ್ಯೆಯ ಮತ್ತು ಸಂಘಟನೆಯ ಮೂಲ ಆಶಯವೇ ಹಳ್ಳ ಹಿಡಿಯಲು ಪ್ರಾರಂಭವಾಯಿತು. ಅಂದಹಾಗೆ ಇದು ಧರ್ಮ ಮತ್ತು ಸಂಸ್ಕೃತಿ ಉಳಿಸಲು ಹೊರಟು ತನ್ನ ನೈಜ ಸಂಸ್ಕೃತಿ ಹೊರಹಾಕಿದ  ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನ ಕಥೆಯಿದು.

ಸಧ್ಯ ಈಗ ನಾವು ಹೇಳೋಕೆ ಹೊರಟಿರೋದು ತೀರ್ಥಹಳ್ಳಿ ಭಾಗದಲ್ಲಿ ಧರ್ಮ ಮತ್ತು ಸಂಸ್ಕೃತಿಯನ್ನು ವಿಧ್ಯಾರ್ಥಿ ಘಟ್ಟದಿಂದಲೇ ಉಳಿಸ ಹೊರಟಿರುವ ಬಲಪಂಥೀಯ ವಿಧ್ಯಾರ್ಥಿ ಸಂಘಟನೆಯ ಪ್ರತೀಕ್‌ ಗೌಡ ಎಂಬ ಅಧ್ಯಕ್ಷನ ಸೆಕ್ಸ್ ಸ್ಕ್ಯಾಂಡಲ್ ಬಗ್ಗೆ. ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವ ಸ್ಥಾಪಿಸಲು ವಿದ್ಯಾರ್ಥಿಗಳನ್ನು ಬಳಸಿಕೊಳ್ಳೋದು ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆ. ತೀರ್ಥಹಳ್ಳಿ ತಾಲ್ಲೂಕಿನ ಈ ಸಂಘಟನೆಯ ಮುಂಚೂಣಿ ಯುವನಾಯಕನ ಕಾಮದಾಟ ಈಗ ಇಲ್ಲಿನ ಪಡ್ಡೆ ಹೈಕಳ ಮೊಬೈಲ್ ಗಳಲ್ಲಿ ಗುಪ್ತ್ ಗುಪ್ತಾಗಿ ಹರಿದಾಡುತ್ತಿದೆ.

‘ಕಠೋರ ಹಿಂದೂ ಹುಲಿ’ಯೊಂದರ ಸೆಕ್ಸ್ ಸ್ಕ್ಯಾಂಡಲ್ ಬ್ಲಾಕ್ಮೇಲ್ ದಂಧೆ.!
ಬಿಜೆಪಿ ಪಕ್ಷ ಮತ್ತು ಬಲಪಂಥೀಯ ಸಂಘಟನೆ ಹಾಗೂ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡು ಎಲ್ಲಾ ವೇದಿಕೆಗಳಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ತೀರ್ಥಹಳ್ಳಿ ಘಟಕದ ಅಧ್ಯಕ್ಷ, ‘ಕಠೋರ ಹಿಂದೂ’ ಪ್ರತೀಕ್‌ ಗೌಡನೇ ಈ ಸ್ಟೋರಿಯ ಹೀರೋ ಕಂ ವಿಲನ್.

ಈತ ಮಾಡಿರೋ ಅಯೋಗ್ಯ ಕೆಲಸಕ್ಕೆ ಇಡೀ ತೀರ್ಥಹಳ್ಳಿಯ ಜನತೆ ಮುಜುಗರಕ್ಕೆ ಸಿಕ್ಕಿದಂತಾಗಿದೆ. ಹೇಳಿಕೊಳ್ಳೋಕೆ ತಾನೊಬ್ಬ ದೊಡ್ಡ ಸಂಸ್ಕೃತಿಯ ವಕ್ತಾರ ಎಂಬಂತೆ ಇಲ್ಲಿಯವರೆಗೆ ಪೋಸು ಕೊಡುತ್ತಿದ್ದಾತ ಈಗ ಈತನ ಕಾಮಕೇಳಿ ಹೊರಬೀಳುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಅಷ್ಟಕ್ಕೂ ಈತ ಮಾಡಿದ ಕೆಟ್ಟ ಕೆಲಸ ಕ್ಷಮಿಸಲಾರದ್ದು.

ತೀರ್ಥಹಳ್ಳಿ ಸಮಜವಾದದ ತವರು. ಒಬ್ಬ ಮುಖ್ಯಮಂತ್ರಿ, ಒಬ್ಬ ಪ್ರಖರ ಸಮಾಜವಾದಿ ಮತ್ತು ಎರಡು ಜ್ಞಾನಪೀಠವನ್ನು ತನ್ನ ಮಡಿಲಿಗೆ ಹಾಕಿಕೊಂಡ ಅಪ್ಪಟ ಜಾತ್ಯತೀತ ನೆಲೆಗಟ್ಟಿನ ನೆಲ. ಅಂತರಾಷ್ಟ್ರೀಯ ಮಟ್ಟದಲ್ಲಿ ತೀರ್ಥಹಳ್ಳಿ ಅಂದಾಕ್ಷಣ ಮೊದಲ ಪಂಕ್ತಿಯಲ್ಲಿ ಬರುವ ಹೆಸರುಗಳೇ ಕುವೆಂಪು, ಶಾಂತವೇರಿ ಗೋಪಾಲಗೌಡರು, ಕಡಿದಾಳ್ ಮಂಜಪ್ಪನವರು, ಅನಂತಮೂರ್ತಿ, ಹಾಮಾ ನಾಯಕ್ ರಂತಹ ಮಹಾನುಭಾವರು. ಆದರೆ ಇಂತಹ ತೀರ್ಥಹಳ್ಳಿಗಳು ಇಲ್ಲಿ ನಡೆಯುವ ಕುಕೃತ್ಯಗಳು ಈಗ ತಲೆ ತಗ್ಗಿಸುವಂಥ ಅವಮಾನಕ್ಕೆ ಗುರಿಯಾಗ್ತಿದೆ.

ತನ್ನದೇ ನೇತೃತ್ವದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾದ ವಿದ್ಯಾರ್ಥಿನಿಯರನ್ನು ಸಂಘಟನೆ ಹೆಸರಿನಲ್ಲಿ ಪರಿಚಯಮಾಡಿಕೊಂಡು, ಆತ್ಮೀಯನಾಗಿ, ಹಿಂದುತ್ವದ ಕೊಮುದ್ವೇಷದ ಅಮಲೇರಿಸಿ ನಂತರ ಅವರನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸುತ್ತಿದ್ದ. ಈತನ ‘ಹೀರೋಯಿಸಂ’ ನೋಡಿ ಮರುಳಾದ ಒಂದಷ್ಟು ವಿಧ್ಯಾರ್ಥಿನಿಯರು ಈತನ ಬ್ಲಾಕ್ಮೇಲ್ ಬಲೆಗೆ ಬಿದ್ದು ಈಗ ತಾವು ಮಾಡಿದ ತಪ್ಪಿಗೆ ಕೊರಗುತ್ತಿದ್ದಾರೆ.

ಈ ಕೃತ್ಯ ಕೇವಲ ಅವರವರ ನಡುವೆ ನಡೆದು ಮುಗಿದು ಹೋಗುವಂತದ್ದಾಗಿದ್ದರೆ ಸುಮ್ಮನಾಗಬಹುದಿತ್ತು. ಆದರೆ ಪ್ರತೀಕ್‌ ಗೌಡ ಕೆಲವು ಹೆಣ್ಣು ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ, ನಗ್ನವಾಗಿಸಿ ಅದನ್ನು ರೆಕಾರ್ಡ್ ಮಾಡಿ ಬ್ಲಾಕ್ಮೇಲ್ ಮಾಡಲು ಶುರುವಿಟ್ಟುಕೊಂಡದ್ದೇ ಈಗ ದೊಡ್ಡ ಸುದ್ದಿಯಾಗಿ ತೀರ್ಥಹಳ್ಳಿ ಭಾಗದ ಜನ ಬಾಯಿ ಮೇಲೆ ಬೆರಳಿಡುವಂತಹ ಕೆಲಸವಾಗಿದೆ.

ಈಗಾಗಲೇ ಈ ‘ಕಠೋರ ಹಿಂದೂ ಹುಲಿ’ಯ ಬ್ಲಾಕ್ಮೇಲ್ ಮಾದರಿಯ ಹಲವಾರು ವಿಡಿಯೋಗಳು ಇದ್ದು, ಸಧ್ಯ ಇದೀಗ 2 ವಿಡಿಯೋಗಳು ಸೋಶಿಯಲ್ ಮೀಡಿಯಾ ಹಾಗೂ ವಾಟ್ಸ್ ಆಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ. ಆಘಾತಕಾರಿ ವಿಚಾರವೆಂದರೆ ತನ್ನ ನೇತೃತ್ವದ ಸಂಘಟನೆಯಲ್ಲೇ ಗುರುತಿಸಿಕೊಂಡ ಹತ್ತಾರು ಯುವತಿಯರ ಜೊತೆಗೆ ಈತ ಈ ರೀತಿಯ ಕೃತ್ಯ ನಡೆಸಿ ನಂತರ ಹಣಕ್ಕೆ ಮತ್ತು ಮಂಚಕ್ಕೆ ಕರೆದು ಬ್ಲಾಕ್ಮೇಲ್ ಮಾಡಲು ಶುರು ಮಾಡಿಕೊಂಡಿದ್ದ ಎಂಬುದು ಈ ಭಾಗದ ಜನ ಮಾತಾಡುತ್ತಿದ್ದಾರೆ. ತನ್ನ ಬಲೆಗೆ ಬಿದ್ದ ಪ್ರತೀ ಹೆಣ್ಣು ಮಕ್ಕಳ ಬಳಿಯೂ ಹತ್ತು, ಇಪ್ಪತ್ತು ಮೂವತ್ತು ಸಾವಿರಕ್ಕೆ ಈತ ಬ್ಲಾಕ್ಮೇಲ್ ಮಾಡುತ್ತಿದ್ದ ಬಗ್ಗೆಯೂ ವಂಚನೆಗೊಳಗಾದ ಯುವತಿಯರು ಈಗ ಕಣ್ಣೀರಿಡುತ್ತಿದ್ದಾರಂತೆ. ಜೊತೆಗೆ ಆತನ ನೇತೃತ್ವದ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ತಮ್ಮ ಬಗ್ಗೆ ತಾವೇ ಶಪಿಸಿಕೊಳ್ಳುತ್ತಿದ್ದಾರೆ.

ಸಧ್ಯ ಈ ‘ಕಠೋರ ಹುಲಿ’ಯದು ಹೊರ ಬಿದ್ದಿರುವುದು ಎರಡು ವೀಡಿಯೊ. ಆದರೆ ಈ ರೀತಿಯ ಹತ್ತಾರು ವಿಡಿಯೋ ಇಟ್ಟುಕೊಂಡು ಹತ್ತಾರು ಹೆಣ್ಣು ಮಕ್ಕಳ ಬಳಿಯೂ ಈತ ಬ್ಲಾಕ್ಮೇಲ್ ದಂಧೆ ನಡೆಸುತ್ತಿದ್ದ ಎಂಬ ಗುಮಾನಿಯಿದೆ. ಈ ಬಗ್ಗೆ ಈಗ ತೀರ್ಥಹಳ್ಳಿ ವಿದ್ಯಾರ್ಥಿಗಳು ಮತ್ತು ಯುವ ಜನತೆ ಆ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡ ಯುವತಿಯರ ಬಗ್ಗೆ ಅನುಮಾನದ ಕಣ್ಣಿಂದ ನೋಡುವ ದುಸ್ಥಿತಿ ಬಂದಿದೆ ಎಂದರೆ ತಪ್ಪಿಲ್ಲ.

ಈಗಾಗಲೇ ಸಮಾಜದ, ತಾಲ್ಲೂಕಿನ ಮತ್ತು ವಿಧ್ಯಾರ್ಥಿಗಳ ವಲಯದಲ್ಲಿ ಸ್ವಾಸ್ಥ್ಯ ಕೆಡುವಂತೆ ಮಾಡಿದ ಈತನ ಮೇಲೆ NSUI ಸಂಘಟನೆ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದೆ. ಹಾಗೆಯೇ ಈತನ ವಂಚನೆಯ ಜಾಲಕ್ಕೆ ಬಿದ್ದ ಹೆಣ್ಣು ಮಕ್ಕಳೂ ಸಹ ಈತನ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಕೂಡಾ ಹೊರಬರುತ್ತಿದೆ. ಆದರೆ ಸ್ಟೋರಿಯ ‘ಹೀರೋ ಕಂ ವಿಲನ್’ ಪ್ರತೀಕ್‌ ಗೌಡ ಈಗ ತಲೆಮರೆಸಿಕೊಂಡಿದ್ದಾನೆ. ಆತ ಸಿಕ್ಕಿದ ನಂತರ ಆತನ ಬಳಿ ಎಷ್ಟು ವಿಡಿಯೋಗಳಿವೆ, ಎಷ್ಟು ಯುವತಿಯರ ಜೊತೆಗೆ ಈ ರೀತಿ ಬ್ಲಾಕ್ಮೇಲ್ ದಂಧೆ ಮಾಡಿಕೊಂಡು ಬಂದಿದ್ದ, ವಂಚನೆಗೊಳಗಾದ ಹೆಣ್ಣು ಮಕ್ಕಳು ಎಷ್ಟು ಮಂದಿ ಎಂಬುದು ಹೊರಬರಬೇಕಿದೆ.

ಒಟ್ಟಾರೆ ಹೇಳುವುದಾದರೆ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಗುರುತಿಸಿಕೊಂಡವವರು ಹೆಚ್ಚಾಗಿ ಇಂತಹ ಕೃತ್ಯಗಳಲ್ಲಿ ಗುರುತಿಸಿಕೊಂಡು ವಿರೋಧಿಗಳ ಕಡೆಯಿಂದ ‘ಬ್ಲೂಜೆಪಿ’ ಅನ್ನಿಸಿಕೊಳ್ಳುತ್ತಿರುವುದಕ್ಕೆ ಈ ಸ್ಟೋರಿ ಕೂಡಾ ಒಂದು ಹೊಸ ಸೇರ್ಪಡೆ. ಎಚ್ಚರಿಕೆ ವಹಿಸಬೇಕಾದ ಒಂದು ಪ್ರಮುಖ ಅಂಶವೆಂದರೆ ಕಾಲೇಜು ಯುವತಿಯರು ಇಂತವರ ನೇತೃತ್ವದ ಸಂಘಟನೆಗಳಲ್ಲಿ ಗುರುತಿಸಿಕೊಂಡರೂ, ತಾವು ಗುರುತಿಸಿಕೊಳ್ಳುವ ಸಂಘಟನೆ ಮತ್ತು ಅದರ ಮುಖ್ಯಸ್ಥರು ಎಷ್ಟು ಸಾಚಾ ಇದ್ದಾರೆ, ಅಲ್ಲಿ ಗುರುತಿಸಿಕೊಂಡರೆ ತಮ್ಮ ಹೆಸರು ಮತ್ತು ಬೆಲೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳಬಹುದು ಎಂಬುದನ್ನು ಮನನ ಮಾಡಿಕೊಳ್ಳಬೇಕಿದೆ.

ಲೈಂಗಿಕ ಹಗರಣ: ಮುರುಘಾ ಮಠದಲ್ಲಿ ಪತ್ತೆಯಾದ 22 ಅನಾಥ ಮಕ್ಕಳ ಕುರಿತು ತನಿಖೆಗೆ ಡಿಸಿ ಆದೇಶ
ಚಿತ್ರದುರ್ಗ: ಮುರುಘಾಮಠ ನಡೆಸುತ್ತಿರುವ ಸಂಸ್ಥೆಯೊಂದರಲ್ಲಿ 22 ಅನಾಥ ಮಕ್ಕಳನ್ನು ಇರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಬಾಹಿರತೆಯನ್ನು ಪತ್ತೆಹಚ್ಚಲು ಚಿತ್ರದುರ್ಗ ಜಿಲ್ಲಾಡಳಿತ ಮಂಗಳವಾರ ತನಿಖೆಗೆ ಆದೇಶಿಸಿದೆ.

ಈ ಸಂಬಂಧ ಚಿತ್ರದುರ್ಗದ ಅಪರ ಜಿಲ್ಲಾಧಿಕಾರಿಗಳು ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ನೀಡಿದ ದೂರಿನ ಹಿನ್ನೆಲೆಯಲ್ಲಿ ಓಡನಾಡಿ ಸಂಸ್ಥೆಯು ಈ ಆದೇಶ ಹೊರಡಿಸಿದೆ.

ಅನಾಥ ಮಕ್ಕಳನ್ನು ಮುರುಘಾಮಠ ನಡೆಸುತ್ತಿರುವ ಬಸವೇಶ್ವರ ಅನಾಥ ಮಕ್ಕಳ ವಸತಿ ಗೃಹ ಮತ್ತು ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಇರಿಸಲಾಗಿತ್ತು. ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಆರೋಪಿಗಳಿಂದ ಮುರುಘಾ ಮಠವನ್ನು ಶೋಷಣೆಯ ತಾಣವಾಗಿ ಪರಿವರ್ತಿಸಲಾಗಿದೆ ಎಂದು ಒಡನಾಡಿ ಸಂಸ್ಥೆ ಆರೋಪಿಸಿದೆ.

ಮಕ್ಕಳ ಸ್ಥಿತಿ ಮತ್ತು ಅವರ ಪೋಷಕರು ಎಲ್ಲಿದ್ದಾರೆ ಎಂಬುದನ್ನು ಕಂಡುಹಿಡಿಯಲು ಕೇಂದ್ರೀಯ ಉಗ್ರಾಣ ನಿಗಮ (ಸಿಡಬ್ಲ್ಯೂಸಿ)ಮಕ್ಕೆ ತಿಳಿಸಲಾಗಿದೆ. ಮಕ್ಕಳ ಸಮಗ್ರ ಮತ್ತು ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ. ಈಗ, ಈ ಮಕ್ಕಳನ್ನು ಮಠದ ಸೌಲಭ್ಯಗಳಲ್ಲಿ ಇರಿಸುವಾಗ ದತ್ತು ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆಯೇ ಎಂಬುದರ ಮೇಲೆ ತನಿಖೆಯು ಕೇಂದ್ರೀಕರಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಸಿಡಬ್ಲ್ಯೂಸಿಯ ಜವಾಬ್ದಾರಿಗಳ ಸರಿಯಾದ ನಿರ್ವಹಣೆಯನ್ನು ಪ್ರಶ್ನಿಸಿ ಓಡನಾಡಿ ಏನ್‌ಜಿಒ ಈ ಸಂಬಂಧ ದೂರು ದಾಖಲಿಸಿತ್ತು ಮತ್ತು ಎಸ್ಪಿ ಮತ್ತು ಡಿಸಿಗೆ ದೂರು ನೀಡಿತ್ತು. ಈ ಹಿನ್ನಲೆಯಲ್ಲಿ, ದೂರಿನಲ್ಲಿ ಅನಾಥ ಮಕ್ಕಳಿಗೆ ಸಂಬಂಧಿಸಿದ 13 ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.