Sexual assault – Peepal Media

ಹಂಪಿ: ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂರನೇ ಆರೋಪಿಯ ಬಂಧನ
ಕರ್ನಾಟಕದ ಹಂಪಿ ಬಳಿ ನಡೆದ ಪ್ರವಾಸಿಗರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂರನೇ ಶಂಕಿತನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇತರ ಇಬ್ಬರು ಶಂಕಿತರನ್ನು ಶನಿವಾರ ಬಂಧಿಸಲಾಗಿದೆ.

ಗುರುವಾರ ರಾತ್ರಿ, ಹಂಪಿ ಬಳಿಯ ಸಣಾಪುರ ಗ್ರಾಮದಲ್ಲಿ ಇಸ್ರೇಲ್‌ನ 27 ವರ್ಷದ ಮಹಿಳೆ ಮತ್ತು ಕೊಪ್ಪಳ ಜಿಲ್ಲೆಯ 29 ವರ್ಷದ ಹೋಂಸ್ಟೇ ಮಾಲಕಿಯ ಮೇಲೆ ಮೂವರು ಪುರುಷರು ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳೆಯರು ಅಮೆರಿಕ, ಒಡಿಶಾ ಮತ್ತು ಮಹಾರಾಷ್ಟ್ರದ ಮೂವರು ಪುರುಷ ಪ್ರಯಾಣಿಕರನ್ನು ಒಳಗೊಂಡ ಐದು ಜನರ ಗುಂಪಿನ ಭಾಗವಾಗಿದ್ದರು. ಒಡಿಶಾದ ಪುರುಷ ಪ್ರವಾಸಿ ಶನಿವಾರ ಶವವಾಗಿ ಪತ್ತೆಯಾಗಿದ್ದಾನೆ.

ಪ್ರಕರಣ

ಹೋಂಸ್ಟೇ ಮಾಲೀಕಿ ತಮ್ಮ ದೂರಿನಲ್ಲಿ, ರಾತ್ರಿ 10.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಬಳಿ ಊಟದ ನಂತರ ತಾನು ಮತ್ತು ತನ್ನ ನಾಲ್ವರು ಅತಿಥಿಗಳು ನಕ್ಷತ್ರ ವೀಕ್ಷಣೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಮೂವರು ಪುರುಷರು ಮೋಟಾರ್ ಸೈಕಲ್‌ನಲ್ಲಿ ಬಂದು ಪೆಟ್ರೋಲ್ ಎಲ್ಲಿ ಸಿಗುತ್ತದೆ ಎಂದು ಕೇಳಿದರು. ನಂತರ, ಅವರಲ್ಲಿ ಒಬ್ಬ ಪ್ರವಾಸಿಗರಿಂದ 100 ರೂ.ಗೆ ಬೇಡಿಕೆ ಇಟ್ಟನು, ಆಗ ಅವರು ನಿರಾಕರಿಸಿದಾಗ ಆತ ಜಗಳವಾಡಲು ಪ್ರಾರಂಭಿಸಿ ಅವರ ಮೇಲೆ ಹಲ್ಲೆ ನಡೆಸಿದನು. ನಂತರ ಮೂವರು ಪುರುಷರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಕಾಲುವೆಗೆ ತಳ್ಳಿ, ನಂತರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿತು.

ಕನ್ನಡ ಮತ್ತು ತೆಲುಗು ಮಾತನಾಡುತ್ತಿದ್ದ ಮೂವರು ಅಪರಿಚಿತ ದುಷ್ಕರ್ಮಿಗಳು, ನಂತರ ಪ್ರಯಾಣಿಕರಿಂದ ಎರಡು ಮೊಬೈಲ್ ಫೋನ್‌ಗಳು ಮತ್ತು 9,500 ರೂ. ನಗದನ್ನು ತೆಗೆದುಕೊಂಡು ತಮ್ಮ ಬೈಕ್‌ನಲ್ಲಿ ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ .

ಆಪಾದಿತ ಘಟನೆಯ ಎರಡು ದಿನಗಳ ನಂತರ, ಶೋಧ ತಂಡಗಳು ಒಡಿಶಾ ಮೂಲದ 26 ವರ್ಷದ ಬಿಬಾಶ್ ಅವರ ಶವವನ್ನು ವಶಪಡಿಸಿಕೊಂಡರೆ, 23 ವರ್ಷದ ಡೇನಿಯಲ್ ಮತ್ತು 42 ವರ್ಷದ ಪಂಕಜ್ ಎಂಬ ಇಬ್ಬರು ಪುರುಷರು ಕಾಲುವೆಯಲ್ಲಿ ಈಜಿ ಬಚಾವಾಗಿದ್ದಾರೆ.

ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ದರೋಡೆ, ಹಲ್ಲೆ ಮತ್ತು ಕೊಲೆಯತ್ನ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮೂವರು ಶಂಕಿತರನ್ನು ಹುಡುಕಲು ಪೊಲೀಸರು ಆರು ತಂಡಗಳನ್ನು ನಿಯೋಜಿಸಿದ್ದರು.

ಕರ್ನಾಟಕದಲ್ಲಿ ನಟನಿಂದ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ
ಬೆಂಗಳೂರು: ಕರ್ನಾಟಕದಲ್ಲಿ ನಟರೊಬ್ಬರು ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮಾಡಿ ದೂರು ದಾಖಲಿಸಿದ್ದಾರೆ.

31 ವರ್ಷದ ಈ ನಟನ ಈ ದೂರಿನ ಮೇಲೆ ಶನಿವಾರದಂದು ಬೆಂಗಳೂರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಎಫ್‌ಐಆರ್‌ನ ಪ್ರಕಾರ, 2012 ರಲ್ಲಿ ಬಾವುಟ್ಟಿಯುಡೆ ನಾಮತಿಲ್ ಚಿತ್ರದ ಶೂಟಿಂಗ್‌ನಲ್ಲಿ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಲು ಹೋದಾಗ ಕೇರಳದ ಕೋಝಿಕ್ಕೋಡ್‌ನಲ್ಲಿ ಬಾಲಕೃಷ್ಣನ್ ಅವರನ್ನು ಭೇಟಿಯಾಗಿದ್ದಾಗಿ ನಟ ಹೇಳಿಕೊಂಡಿದ್ದಾರೆ. ಈ ಚಲನಚಿತ್ರವನ್ನು ಬಾಲಕೃಷ್ಣನ್ ಬರೆದು ನಿರ್ದೇಶಿಸಿದ್ದರು.

ಇದಾದ ಬಳಿಕ, ಬಾಲಕೃಷ್ಣನ್ ಡಿಸೆಂಬರ್ 2012 ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೋಟೆಲ್‌ಗೆ ದೂರುದಾರರನ್ನು ಕರೆದಿದ್ದಾರೆ. ನಿರ್ದೇಶಕರು ಈ ನಟನಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಆರಂಭದಲ್ಲಿ ಕೇರಳದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಆದರೆ ನಗರದ ಹೋಟೆಲ್‌ನಲ್ಲಿ ಘಟನೆ ನಡೆದಿರುವ ಕಾರಣ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ.

ಈ ಘಟನೆಯು 2012 ರಲ್ಲಿ ನಡೆದಿದೆ ಎಂದು ಹೇಳಲಾಗಿದೆ ಆದರೆ ಮಲಯಾಳಂ ಚಲನಚಿತ್ರೋದ್ಯಮದ ಅನೇಕ ಕಲಾವಿದರ ಮೇಲೆ ಲೈಂಗಿಕ ಕಿರುಕುಳದ ಆರೋಪಗಳು ಹೇಮಾ ಕಮಿಟಿಯ ನಂತರ ಹೊರಬಂದಿರುವ ಹಿನ್ನೆಲೆಯಲ್ಲಿ ದೂರುದಾರರು ಈಗ ಈ ವಿಚಾರವನ್ನು ಹೊರಹಾಕಿದ್ದಾರೆ, ಕೇರಳದ ಈ ಬೆಳವಣಿಗೆ ತನಗೆ ಈ ಧೈರ್ಯ ನೀಡಿತು ಎಂದು ಅವರು ಹೇಳಿದ್ದಾರೆ.

ಜಸ್ಟಿಸ್ ಹೇಮಾ ಸಮಿತಿಯ ವರದಿಯ ಬಿಡುಗಡೆಯ ನಂತರ ತಮ್ಮ ಸಹೋದ್ಯೋಗಿಗಳ ಮೇಲೆ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿರುವ ಮಲಯಾಳಂ ಚಲನಚಿತ್ರೋದ್ಯಮದ ಹಲವಾರಲ್ಲಿ ಈ ನಟ ಕೂಡ ಸೇರಿದ್ದಾರೆ .

ಬಾಲಕೃಷ್ಣನ್ ವಿರುದ್ಧ ಅಸ್ವಾಭಾವಿಕ ಅಪರಾಧಗಳು ಮತ್ತು ಖಾಸಗಿತನದ ಉಲ್ಲಂಘನೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. “ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.

ಆಗಸ್ಟ್‌ನಲ್ಲಿ, 2009 ರಲ್ಲಿ ನಟನೊಬ್ಬ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ನಂತರ ಬಾಲಕೃಷ್ಣನ್ ಅವರು ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪಲೇರಿ ಮಾಣಿಕ್ಯಂ: ಒರು ಪತಿರಕೋಲಪಾಠಕತಿಂತೆ ಕಥಾ ಸಿನಿಮಾ ನಿರ್ಮಾಣವಾಗುತ್ತಿದ್ದಾಗ ನಿರ್ದೇಶಕರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿಯೊಬ್ಬರು ಆರೋಪಿಸಿದ್ದರು.

ಈ ಆರೋಪಗಳು ತನ್ನ ಮೇಲಿನ ಸಂಘಟಿತ ದಾಳಿಯ ಭಾಗವಾಗಿದೆ ಎಂದು ನಿರ್ದೇಶಕ ಆ ಸಮಯದಲ್ಲಿ ಹೇಳಿಕೊಂಡಿದ್ದರು.

“ಒಬ್ಬ ವ್ಯಕ್ತಿಯಾಗಿ ಆರೋಪವು ನನ್ನ ಮೇಲೆ ಉಂಟು ಮಾಡಿದ ಹಾನಿಯನ್ನು ತಕ್ಷಣವೇ ಸರಿಪಡಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದರು. “ಆದರೂ, ಆರೋಪ ತಪ್ಪು ಎಂದು ನಾನು ಸಾಬೀತುಪಡಿಸಬೇಕಾಗಿದೆ. ಅದು ಸುಳ್ಳು ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುತ್ತೇನೆ. ಆಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾಳೆ. ಏನೇ ಆಗಲಿ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ,” ಎಂದು ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದರು.

ಉತ್ತರಾಖಂಡ: ಬಿಜೆಪಿ ನಾಯಕನಿಂದ ಅಪ್ರಾಪ್ತೆಯ ಅತ್ಯಾಚಾರ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಂಪಾವತ್ ಜಿಲ್ಲೆಯ ಬಿಜೆಪಿ ನಾಯಕನ ಮೇಲೆ ಉತ್ತರಾಖಂಡ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಕಮಲ್ ರಾವತ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.

ಪೀಪಲ್ ಮೀಡಿಯಾ ವಾಟ್ಸಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್‌ ಮಾಡಿ: ಪೀಪಲ್‌ ಮೀಡಿಯಾ

ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಅಡಿಯಲ್ಲಿ (ಪೋಕ್ಸೋ)  ಪ್ರಕರಣ ದಾಖಲಿಸಲಾಗಿದೆ ಎಂದು ಚಂಪಾವತ್ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಿಂಚಾ.

ಶನಿವಾರ ವೈದ್ಯಕೀಯ ಪರೀಕ್ಷೆಯ ನಂತರ ಅಪ್ರಾಪ್ತ ಬಾಲಕಿಯ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗುವುದು ಎಂದು ಪಿಂಚಾ ತಿಳಿಸಿದ್ದಾರೆ. (PTI)

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು
ಹೈದರಾಬಾದ್: ಮಂಚಾಲ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತೆಲಂಗಾಣದ ವ್ಯಕ್ತಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ವಿಶೇಷ ನ್ಯಾಯಾಲಯ ಗುರುವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮಂಚಲ್ ನಿವಾಸಿ ದುಸಾರಿ ರಾಜು ಅಲಿಯಾಸ್ ಕಟಾಮ್ ರಾಜು ಎಂದು ಗುರುತಿಸಲಾದ ಆರೋಪಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಹರಿಶಾರವರು ಆರೋಪಿಯನ್ನು ದೋಷಿ ಎಂದು ಗುರುತಿಸಿದ್ದು, ಆತನಿಗೆ ₹ 20,000 ದಂಡ ವಿಧಿಸಿದ್ದಾರೆ.

ಈ ಪ್ರಕರಣ 2016ಕ್ಕೆ ಸಂಬಂಧಿಸಿದೆ. ಫೆಬ್ರವರಿ 5 ರಂದು ಮಂಚಲ್ ಪೊಲೀಸರು 24 ವರ್ಷದ ದೂರುದಾರನಿಂದ ದೂರು ಸ್ವೀಕರಿಸಿದ್ದು, ಅದರಲ್ಲಿ ಕತಮ್ ರಾಜು ತನ್ನ 4 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.

ಫೆಬ್ರವರಿ 3 ರಂದು ಮಂಚಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಕಟಮ್ ರಾಜು ಮಗುವಿಗೆ ಹಣ ನೀಡುವ ನೆಪದಲ್ಲಿ, ಹತ್ತಿರದ ಮನೆಗೆ ಕರೆದೊಯ್ದು ಆಟವಾಡುತ್ತಿದ್ದಾಗ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ʼಫೆಬ್ರವರಿ 4 ರಂದು, ಆರೋಪಿಯು ಮತ್ತೊಮ್ಮೆ ಹಣವನ್ನು ಆಮಿಷವೊಡ್ಡಲು ಪ್ರಯತ್ನಿಸಿದನು, ಆದರೆ ಹುಡುಗಿ ಅವನಿಂದ ಓಡಿಹೋಗಿ ಇಡೀ ಘಟನೆಯನ್ನು ತನ್ನ ತಾಯಿಗೆ ವಿವರಿಸಿದಳುʼ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ದೂರಿನ ಆಧಾರದ ಮೇಲೆ ಮಂಚಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಸಮಯದಲ್ಲಿ, ಮಂಚಲ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಸಾಕ್ಷ್ಯಗಳನ್ನು ಸಂಗ್ರಹಿಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ʼತನಿಖೆ ನಡೆದ ನಂತರ, ಇನ್ನೊಬ್ಬ ಪೊಲೀಸ್ ಅಧಿಕಾರಿ ಎಂ ಗಂಗಾಧರ್ ಅವರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆʼ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಪ್ರಕರಣದ ವಿಚಾರಣೆ ನಡೆಸಿದ ಎಲ್ ಬಿ ನಗರ ನ್ಯಾಯಾಧೀಶ ಹರಿಶಾ ಅವರ ವಿಶೇಷ ಪೋಕ್ಸೊ ನ್ಯಾಯಾಲಯವು ಆರೋಪಿ ದುಸಾರಿ ರಾಜುಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಿದೆ.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ವಿಡಿಯೋ ಚಿತ್ರೀಕರಿಸಿ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಆರೋಪಿ ಬಂಧನ
ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ವ್ಯಕ್ತಿಯನ್ನು ಪೋಕ್ಸೋ ಪ್ರಕರಣದ ಮೇಲೆ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ದೌರ್ಜನ್ಯ ಎಸಗಿರುವ ವ್ಯಕ್ತಿಯು ದೇವರಾಜ್‌(24) ಸ್ಥಳಿಯ ನಿವಾಸಿಯಾಗಿದ್ದು, ಪ್ಲೈವುಡ್‌ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ದೇವರಾಜನು ಬಾಲಕಿಯನ್ನು ಕೆಲವು ವರ್ಷಗಳ ಹಿಂದೆ ಪರಿಚಯ ಮಾಡಿಕೊಂಡಿದ್ದು ಬಾಲಕಿಯೊಂದಿಗೆ ಸಲುಗೆ ಬೆಳೆಸಿದ್ದ, ಹಾಗಾಗಿ ಆಕೆಯನ್ನು ಹಲವೆಡೆ ಸುತ್ತಾಡಿಸಿ, ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದನೆಂದು ತಿಳಿದುಬಂದಿದೆ. ಈ ಕೃತ್ಯಕ್ಕೆ ಆತನ ಸ್ನೇಹಿತರು ಕೂಡ ಸಹಕಾರ ನೀಡಿದ್ದು, ಆತನ ಮೇಲೆ ಪ್ರಕರಣ ದಾಖಲಾಗಿರುವುದರಿಂದ ಅವರು ಕೂಡ ತಲೆಮರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಪೋಲಿಸ್‌ ಮೂಲಗಳ ಪ್ರಕಾರ, ಬಾಲಕಿಯು ದೂರಿನಲ್ಲಿ ಆಕೆಯ ಮೆಲೆ ದೌರ್ಜನ್ಯ ಎಸಗಿರುವ ಆರೋಪಿ, ಲೈಂಗಿಕ ದೌರ್ಜನ್ಯ ಮಾಡಿರುವ ವಿಡಿಯೋ ಮಾಡಿಕೊಂಡು, ನಿನಗೆ ಈಗ 17 ವರ್ಷ 18 ವರ್ಷ ದಾಟಿದ ನಂತರ ನನ್ನನ್ನೇ ಮದುವೆಯಾಗಬೇಕು ಇಲ್ಲದಿದ್ದರೆ, ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ಭಯಗೊಂಡು ಬಾಲಕಿಯು ವಿಷಯವನ್ನು ಪೋಷಕರಿಗೆ ತಿಳಿಸಿದ್ದಾರೆ. ನಂತರ ಪೋಷಕರೊಂದಿಗೆ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ದೂರಿನ ಮೇಲೆ ವ್ಯಕ್ತಿಯನ್ನು ಬಂಧಿಸಿ ವಿಚಾರಿಸಿದಾಗ, ದೇವರಾಜ ಮತ್ತು ಬಾಲಕಿಯೂ ಐದು ವರ್ಷಗಳಿಂದ ಪ್ರೀತಿಸುತ್ತಿದ್ದು, ಬಾಲಕಿಯೂ ಇತ್ತೀಚಿಗೆ ಆತನನ್ನು ದೂರವಿಡಲು ಪ್ರಾರಂಭಿಸಿದ್ದರಿಂದ ಆತನೂ ಬ್ಲಾಕ್‌ಮೇಲ್‌ ಮಾಡಲು ಆರಂಭಿಸಿದ್ದಾನೆ ಎಂದು ತಿಳಿದುಬಂದಿದೆ.