Shailaja Teacher – Peepal Media

ಶೈಲಜಾ ಟೀಚರ್ ಹೇಳಿಕೊಟ್ಟ ಪಾಠ
ಇಂದು ಕೇರಳದ ಶೈಲಜಾ ಟೀಚರ್ ಬೆಂಗಳೂರಿಗೆ ಬಂದಿದ್ದರು. ಅವರು ಭಾಷಣ ಮಾಡುವಾಗಿದ್ದ ಗಾಂಭೀರ್ಯತೆ ಮತ್ತು ಸ್ಪಷ್ಟತೆ ನಾನು ಕೆಲವೇ ಕೆಲವು ರಾಜಕಾರಣಿಗಳಲ್ಲಿ ನೋಡಿದ್ದೇನೆ. “ನಾನು ಕಮ್ಯುನಿಸ್ಟ್ ಪಾರ್ಟಿ ಮಾರ್ಕ್ಸಿಸ್ಟ್ಗೆ ಸೇರಿದವಳು ಆದರೂ ಕೋಮುವಾದಿ ಶಕ್ತಿಯನ್ನ ಸೋಲಿಸಿದ ಸಿದ್ದರಾಮಯ್ಯನವರಿಗೆ ಶುಭಾಶಯಗಳು” ಎಂದೇಳುತ್ತಾ ಭಾಷಣ ಶುರು ಮಾಡಿದ ಶೈಲಜ ಟೀಚರ್, ಸನಾತನಿಗಳು ಮತ್ತು ವೈಜ್ಞಾನಿಕ ಮನೋಧರ್ಮ ಉಳ್ಳವರ ನಡುವಿರುವ ವ್ಯತ್ಯಾಸವನ್ನ ಸರಳವಾಗಿ ಗುರುತಿಸಿದರು.

” ಕರೋನ ವೈರಸ್ ತಂದಿಟ್ಟ ಬಿಕ್ಕಟ್ಟಿನ ಸಮಯದಲ್ಲಿ ಜಗತ್ತಿನ ಶ್ರೇಷ್ಠ ವೈದ್ಯರು, ಸಂಶೋಧಕರು ಈ ಮಾರಕ ರೋಗಕ್ಕೆ ಲಸಿಕೆ ಕಂಡು ಹಿಡಿಯಲು ಶ್ರಮಿಸುತ್ತಿದ್ದಾಗ, ಜೀವ ಉಳಿಸುವ ಕಾಯಕದಲ್ಲಿ ನಾವು ನಿರತರಾಗಿದ್ದಾಗ, ಸನಾತನಿಗಳು ಮಹಡಿಗಳ ಮೇಲೆ ನಿಂತು ತಟ್ಟೆ, ಜಾಗಟೆ ಬಡಿಯಲು, ಮೈಗೆಲ್ಲಾ ಸಗಣಿ ಬಳಿದುಕೊಳ್ಳಲು ಕರೆನೀಡುತ್ತಿದ್ದರು.” ಎಂಬ ಉದಾಹರಣೆಯನ್ನು ನೀಡುತ್ತಲೇ ಟಾಗೋರ್ ಅವರ ” where the mind is without fear- ಎಲ್ಲಿ ಮನಸ್ಸು ಅಂಜಿಕೆ ಬಿಟ್ಟದ ” ಪದ್ಯವನ್ನ ಪ್ರಸ್ತಾಪಿಸಿದರು. ಟಾಗೋರರ ಈ ಪದ್ಯದಿಂದ ವಿಶೇಷವಾಗಿ

“Where the clear stream of reason has not lost its way
Into the dreary desert sand of dead habit
ಎಲ್ಲಿ ವಿವೇಚನೆಯ ಸ್ಪಷ್ಟ ಹರಿವು
ನಿರರ್ಥಕ ಆಚಾರಗಳ ಕಳೆಗೆಟ್ಟ
ಮರುಭೂಮಿಯ ಮುಸುಕಿನಲಿ
ಹಾದಿ ತಪ್ಪಿಲ್ಲವೊ”
ಎಂಬ ಎರಡು ಸಾಲುಗಳನ್ನ ಕೇಳುಗರ ಮನ ಮುಟ್ಟುವಂತೆ ಎರಡು ಬಾರಿ ಓದಿದರು.

ಶೈಲಜಾ ಟೀಚರ್, ಟಾಗೋರ್ ಅವರ ಪದ್ಯ ಬಳಸಿ ಸನಾತನಿಗಳು ಯಾರು ಎಂಬ ಪ್ರಶ್ನೆಗೆ ನಿಖರ ಉತ್ತರ ನೀಡಿದರು. ಕರೋನ ಸಾಂಕ್ರಾಮಿಕ ರೋಗ ಹರಡಿ ಜನರ ಜೀವ ಹೋಗುತ್ತಿದ್ದಾಗ ಮೈಗೆ ಸಗಣಿ ಬಳಿದುಕೊಳ್ಳಿ, ಜಾಗಟೆ ಬಾರಿಸಿ, ಶಂಖ ಊದಿ, ಮೂಗಿನ ಒಳ್ಳೆಗಳಿಗೆ ನಿಂಬೆ ಹಣ್ಣಿನ ರಸ ಬಿಟ್ಟುಕೊಳ್ಳಿ, ಗೋ ಮೂತ್ರ ಸಿಂಪಡಿಸಿಕೊಳ್ಳಿ ಎಂಬ ಡಂಬಾಚಾರಣೆಗಳಲ್ಲಿ ತೊಡಿಗಿ, ಅವೈಜ್ಞಾನಿಕ ಸಲಹೆ ನೀಡುತ್ತಿದ್ದವರು ಸನಾತನಿಗಳು. ವಿವೇಚನೆ, ವಿವೇಕಗಳಿಗೆ ಆದ್ಯತೆ ನೀಡದೆ ಮುಗ್ಧ ಜನರ ಹಾದಿ ತಪ್ಪಿಸುವವರು ಸನಾತನಿಗಳೆಂದು.

ಫುಲೆ, ರಾಜರಾಮ್ ಮೋಹನ್ ರಾಯ್, ಟ್ಯಾಗೋರ್, ಅಂಬೇಡ್ಕರ್, ಕುವೆಂಪು ಇಂತಹ ಸನಾತನಿಗಳನ್ನೇ ತೀವ್ರವಾಗಿ ವಿರೋಧಸಿದ್ದು. ಇಂತಹ ಸನಾತನಿಗಳ ಪರವಾಗಿ ನಿಲ್ಲುವವರು ಸಹಜವಾಗಿಯೇ ಟ್ಯಾಗೋರ್, ಕುವೆಂಪು, ಅಂಬೇಡ್ಕರ್, ರಾಯ್ ಮತ್ತು ಫುಲೆಯನ್ನ ಎಂದಿಗೂ ಒಪ್ಪಲಾರರು.