Shakthi yojane – Peepal Media

ಉ.ಕರ್ನಾಟಕ ಭಾಗಕ್ಕೆ ಬರಲಿವೆ 450 ಎಲೆಕ್ಟ್ರಿಕ್ ಬಸ್ ಗಳು
ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 450 ನಗರ ಮತ್ತು ಗ್ರಾಮೀಣ ಸಾರಿಗೆ ಬಸ್ಸುಗಳನ್ನು ರಸ್ತೆಗೆ ಇಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಕ್ರಮವಹಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಶಕ್ತಿ ಯೋಜನೆಗೆ ಮೊದಲು ನಿತ್ಯ 17.48 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರ ಸಂಖ್ಯೆ 24 ರಿಂದ 26 ಲಕ್ಷಕ್ಕೆ ಹೆಚ್ಚಳವಾಗಿದೆ. ನಗರ ಸಾರಿಗೆ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಬಹಳಷ್ಟು ಏರಿಕೆಯಾಗಿದೆ. ಜನರು ಇದರ ಹೆಚ್ಚಿನ ಲಾಭ ಪಡೆಯಲಿ ಎಂಬ ಉದ್ದೇಶದಿಂದ ಉತ್ತರ ಕರ್ನಾಟಕ ಭಾಗಕ್ಕೆ ಹೊಸ 450 ಎಲೆಕ್ಟ್ರಿಕ್ ಬಸ್ ಗಳು ರಸ್ತೆಗೆ ಇಳಿಯಲಿವೆ’ ಎಂದು ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

ಜನಸಂಖ್ಯೆಗೆ ತಕ್ಕಂತೆ ಸಾರಿಗೆ ಬಸ್ ಒದಗಿಸೋದಕ್ಕೆ ಸಾಧ್ಯವಾಗದೇ ಇದ್ದರೂ, ತೊಂದರೆ ಉಂಟಾಗದಂತೆ ಒಟ್ಟು 450 ಎಲೆಕ್ನಿಕ್ ಬಸ್ಸುಗಳ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ. ಅವುಗಳಲ್ಲಿ 200 ಗ್ರಾಮಾಂತರ ಸಾರಿಗೆ ಬಸ್ ಗಳು, 150 ನಗರ ಸಾರಿಗೆ ಮಾದರಿ ಹಾಗೂ 100 ಬಿ. ಆರ್. ಟಿ.ಎಸ್. ಮಾದರಿಯ ಬಸ್ ಗಳು ಸೇರಿವೆ ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕದ ಗ್ರಾಮಾಂತರ ಹಾಗೂ ನಗರ ಸಾರಿಗೆ ಬಸ್ಸುಗಳನ್ನು ಹು-ಧಾ ನಗರ ಸಾರಿಗೆ ವಿಭಾಗ, ಹುಬ್ಬಳ್ಳಿ ಗ್ರಾಮಾಂತರ, ಧಾರವಾಡ ಹಾಗೂ ಬೆಳಗಾವಿ ವಿಭಾಗಗಳಿಂದ ಕಾರ್ಯಾಚರಣೆ ಮಾಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಜನತೆಗೆ ಸಾರಿಗೆ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ.

ಊಹಾಪೋಹಕ್ಕೆ ಕಿವಿಗೊಡದಿರಿ ; ‘ಶಕ್ತಿ ಯೋಜನೆ’ ಮುಂದಿನ 10 ವರ್ಷಕ್ಕೂ ಜಾರಿಯಲ್ಲಿರಲಿದೆ : ಸಚಿವ ರಾಮಲಿಂಗಾರೆಡ್ಡಿ
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ‘ಗ್ಯಾರಂಟಿ’ ಯೋಜನೆಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ ಜಾರಿಯಾದ ಎರಡೇ ತಿಂಗಳಿಗೆ ಸ್ಥಗಿತವಾಗಿದೆ ಎಂಬ ಸುದ್ದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಶಕ್ತಿ ಯೋಜನೆ ನಿಲ್ಲಿಸಲಾಗುತ್ತಿದೆ ಎಂಬ ಸುದ್ದಿ ಕೇವಲ ಊಹಾಪೋಹ ಅಷ್ಟೆ. ಇದಕ್ಕೆ ಕಿವಿಗೊಡದಿರಿ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟಿ ಯೋಜನೆಯಾಗಿರುವ ಶಕ್ತಿ ಯೋಜನೆ ಜಾರಿಯಾದ ಮೊದಲ ದಿನದಿಂದಲೇ ಹೆಚ್ಚು ಜನಮನ್ನಣೆ ಗಳಿಸಿತ್ತು. ವಿಶೇಷವಾಗಿ ರಾಜ್ಯದ ಮಹಿಳೆಯರು ಯೋಜನೆ ಜಾರಿಗೆ ಬಂದ ದಿನದಿಂದ ಇದರ ಸದುಪಯೋಗ ಪಡಿಸಿಕೊಂಡಿದ್ದರು. ಈ ಯೋಜನೆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕೂಡಾ ಹೆಚ್ಚು ಲಾಭದಾಯಕವಾಗಿದೆ ಎಂಬುದಕ್ಕೆ ಶಕ್ತಿ ಯೋಜನೆ ಕಾರಣವಾಗಿದೆ.

ಆದರೆ ಕೆಲವು ದಿನಗಳಿಂದ ಶಕ್ತಿ ಯೋಜನೆ ಇನ್ನು ಕೆಲವೇ ದಿನಗಳು ಮಾತ್ರ ಎಂಬ ಸುದ್ದಿ ರಾಜ್ಯದ ಮಹಿಳೆಯರಿಗೆ ಹೆಚ್ಚು ಆತಂಕ ಸೃಷ್ಟಿಸಿತ್ತು. ‘ಶಕ್ತಿ ಯೋಜನೆ ಸ್ಥಗಿತಗೊಳಿಸಲು ಹೈಕೋರ್ಟ್ ಆದೇಶ ನೀಡಿದೆ, ಈ ಕಾರಣ ಆಗಸ್ಟ್ 15 ರಿಂದ ಈ ಯೋಜನೆ ಕೊನೆಗೊಳ್ಳಲಿದೆ’ ಎಂಬ ವಿವರ ಇದ್ದ ಸಂದೇಶಗಳು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ ಬಗ್ಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ರವರು ಇದು ಸುಳ್ಳು ಸುದ್ದಿ ಎಂದು ಪ್ರತಿಕ್ರಿಯಿಸಿದ ಬೆನ್ನಲ್ಲೇ, ‘ಸರ್ಕಾರದ ಜನಪರ ಕಾರ್ಯ ಸಹಿಸದ ವಿರೋಧಿಗಳು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಆದರೇ ಅದು ಸುಳ್ಳು. ಯಾವುದೇ ಮಹಿಳೆಯರು ಆತಂಕ, ಭಯ ಪಡುವ ಅಗತ್ಯವಿಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

‘ಇನ್ನೂ ರಾಜ್ಯದಲ್ಲಿ 10 ವರ್ಷಗಳ ಕಾಲ ನಮ್ಮದೇ ಸರ್ಕಾರವಿರಲಿದೆ. 10 ವರ್ಷಗಳ ಕಾಲವೂ ಶಕ್ತಿ ಯೋಜನೆ ಮುಂದುವರೆಯುತ್ತದೆ. ಮಹಿಳೆಯರು ಯಾರೂ ಕೂಡ ಪಾಸ್ ಪಡೆಯುವ ಅಗತ್ಯವಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಹೀಗಾಗಿ ಶಕ್ತಿ ಯೋಜನೆ ಮುಂದುವರೆಯುತ್ತೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

‘ಶಕ್ತಿ ಯೋಜನೆ’ ಎಫೆಕ್ಟ್ : ದುಪ್ಪಟ್ಟು ಆದಾಯ ಎಣಿಸುತ್ತಿರುವ ಕರ್ನಾಟಕದ ದೇವಾಲಯಗಳು
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟ ಉಂಟಾಗುತ್ತೆ, ಕರ್ನಾಟಕ ಶ್ರೀಲಂಕಾ, ಪಾಕಿಸ್ತಾನದಂತೆ ಬರ್ಬಾದ್ ಆಗುತ್ತೆ ಅನ್ನೋ ಆರೋಪಗಳ ನಡುವೆ ರಾಜ್ಯದ ಮುಜರಾಯಿ ಇಲಾಖೆಗೆ ಸೇರುವ ದೇವಸ್ಥಾನಗಳ ಆದಾಯ ಕೇವಲ ಒಂದೇ ತಿಂಗಳಲ್ಲಿ ದುಪ್ಪಟ್ಟಾದ ಬಗ್ಗೆ ವರದಿ ಲಭ್ಯವಾಗಿದೆ.

ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ ಮುನ್ನ ಇದಕ್ಕೆಲ್ಲಾ ಹಣ ಎಲ್ಲಿಂದ ತರ್ತೀರಿ ಎಂದು ತಕರಾರು ತಗೆದವರು ಹಲವರು. ಆದರೆ ಈಗ ರಾಜ್ಯ ಪ್ರವಾಸೋದ್ಯಮ ಸೇರಿದಂತೆ ಮುಜರಾಯಿ ಇಲಾಖೆಯಿಂದ ರಾಜ್ಯದ ಬೊಕ್ಕಸಕ್ಕೆ ಅನಿರೀಕ್ಷಿತವಾಗಿ ಹಣ ಹರಿದು ಬರುತ್ತಿದೆ. ಸ್ವತಃ ಸರ್ಕಾರದ ಪ್ರತಿನಿಧಿಗಳೂ ಸಹ ಈ ಮಟ್ಟದ ಆದಾಯ ನಿರೀಕ್ಷಿಸಿರಲಿಲ್ಲ.

ಕೆಲವು ದೇವಾಲಯಗಳಂತೂ ಒಂದು ಇಡೀ ವರ್ಷಕ್ಕೂ ಮೀರಿದ ಆದಾಯವನ್ನು ಒಂದೇ ತಿಂಗಳಲ್ಲಿ ಗಳಿಸಿದ್ದು ದಾಖಲೆಯೇ ಸರಿ. ಕೇವಲ ದೇವಸ್ಥಾನಗಳು ಮಾತ್ರವಲ್ಲ, ಪ್ರವಾಸೋದ್ಯಮದ ಹಲವು ಪ್ರವಾಸಿ ತಾಣಗಳೂ ಕಿಕ್ಕಿರಿದು ಜನಸಂದಣಿ ಕಾಣುತ್ತಿವೆ. ನಷ್ಟ ಅನುಭವಿಸಬಹುದೆಂದೇ ನಿರೀಕ್ಷೆ ಮಾಡಿದ್ದ ಕೆಎಸ್ಆರ್ಟಿಸಿ ಸಂಸ್ಥೆಯ ಆದಾಯ ಕೂಡಾ ದ್ವಿಗುಣಗೊಂಡಿದೆ ಎಂಬ ವರದಿ ಲಭ್ಯವಾಗಿದೆ.

ಅಂದಹಾಗೆ ಮಾಹಿತಿಯ ಪ್ರಕಾರ 2022ರ ಜೂನ್​​​ 11 ರಿಂದ ಜುಲೈ 15ರವರೆಗೆ ರಾಜ್ಯದ 58 ದೇವಾಲಯಗಳಲ್ಲಿ ಇ-ಹುಂಡಿಗಳ ಮೂಲಕ 19 ಕೋಟಿ ರೂ. ಸಂಗ್ರಹವಾಗಿತ್ತು. ಆದರೆ ಈ ವರ್ಷ ಬರೋಬ್ಬರಿ 24 ಕೋಟಿ 47 ಲಕ್ಷ ರೂಪಾಯಿ ಆದಾಯ ಬಂದಿದೆ.

● ಮೈಸೂರಿನ ಚಾಮುಂಡೇಶ್ವರಿ ಇ-ಹುಂಡಿಯಲ್ಲಿ ಭರ್ಜರಿ ಕಲೆಕ್ಷನ್​ ಆಗಿದೆ. ಈ ವರ್ಷ ಜೂನ್​​​​​​​​​ 11 ರಿಂದ ಜುಲೈ 15 ವರೆಗೆ 3 ಕೋಟಿ 63 ಲಕ್ಷ ಸಂಗ್ರಹವಾಗಿದ್ರೆ, ಕಳೆದ ವರ್ಷ ಕೇವಲ 48.01 ಲಕ್ಷ ಸಂಗ್ರಹವಾಗಿತ್ತು.
● ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಇ-ಹುಂಡಿಯಲ್ಲಿ ಈ ವರ್ಷ ಜೂನ್​​​​​​​​​ 11 ರಿಂದ ಜುಲೈ 15 ವರೆಗೆ 11 ಕೋಟಿ 16 ಲಕ್ಷ ಸಂಗ್ರಹವಾಗಿದೆ. ಕಳೆದ ವರ್ಷ 11 ಕೋಟಿ 13 ಲಕ್ಷ ಸಂಗ್ರಹವಾಗಿತ್ತು.
● ಯಡಿಯೂರು ಸಿದ್ದಲಿಂಗೇಶ್ವರ ದೇಗುಲದ ಇ-ಹುಂಡಿಯಲ್ಲಿ ಈ ವರ್ಷ 1.48 ಕೋಟಿ ಸಂಗ್ರಹವಾಗಿದ್ರೆ, ಕಳೆದ ವರ್ಷ 1.20ಕೋಟಿ ರೂ. ಸಂಗ್ರಹವಾಗಿತ್ತು.
● ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸನ್ನಿಧಿಯ ಇ -ಹುಂಡಿಯಲ್ಲಿ ಈ ವರ್ಷ 1.27 ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ವರ್ಷ 1 ಕೋಟಿ 5 ಲಕ್ಷ ಬಂದಿತ್ತು.
● ಬೆಂಗಳೂರಿನ ಬನಶಂಕರಿ ದೇಗುಲದಲ್ಲೂ ಈ ವರ್ಷ 83.64 ಲಕ್ಷ ರೂ. ಸಂಗ್ರಹವಾಗಿದ್ದು, ಕಳೆದ ವರ್ಷ 65.82 ಲಕ್ಷ ಸಂಗ್ರಹವಾಗಿತ್ತು.
● ಬಳ್ಳಾರಿಯ ಕನಕದುರ್ಗಮ್ಮ ದೇವಿ, ಕೊಪ್ಪಳದ ಹುಲಿಗೆಮ್ಮ, ಕನಕಪುರದ ಕಬ್ಬಾಳಮ್ಮ, ಶ್ರೀರಂಗಪಟ್ಟಣದ ನಿಮಿಷಾಂಬ, ಬೆಂಗಳೂರಿನ ಬನಶಂಕರಿ ದೇವಿ ಸೇರಿ ದೇವಿ ದೇವಾಲಯಗಳಿಗೆ ಭಕ್ತರ ದಂಡಿನ ಜೊತೆ ಕೋಟ್ಯಂತರ ರೂ. ಆದಾಯ ಬಂದಿದೆ.

ಒಟ್ಟಾರೆ ಹೇಳುವುದಾದರೆ, ರಾಜ್ಯದ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಪ್ರವಾಸದ ಅಂದಾಜು ಇದ್ದರೂ, ಮಳೆಯ ಕಾರಣಕ್ಕೆ ಹೆಚ್ಚಿನ ಮಂದಿ ಪ್ರವಾಸ ಮೊಟಕುಗೊಳಿಸಿ, ಮುಂದಿನ ದಿನಗಳಲ್ಲಿ ಹೋಗುವ ತಯಾರಿ ಮಾಡಿಕೊಂಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲೂ ಈ ಆದಾಯ ದ್ವಿಗುಣಗೊಳ್ಳಬಹುದು ಎಂದೇ ಅಂದಾಜಿಸಲಾಗಿದೆ.

ವೀರೇಂದ್ರ ಹೆಗ್ಗಡೆಯವರಿಂದ ಸಿ ಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಪತ್ರ!
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 14 ನೇ ಬಜೆಟ್ ನ ಫಲಶೃತಿಯನ್ನು ಶ್ಲಾಘಿಸಿ, ಶಕ್ತಿ ಯೋಜನೆಗೆ ಸಿಕ್ಕಿರುವ ಜನ ಮನ್ನಣೆಗೆ ಮೆಚ್ಚುಗೆ ಸೂಚಿಸಿ ಅಭಿನಂದನಾ ಪತ್ರವನ್ನು ಬರೆದಿದ್ದಾರೆ.

‘ಅನೇಕ ಯೋಜನೆಗಳ ಮೂಲಕ ಜನರಿಗೆ ಉಪಯುಕ್ತ ಕಾರ್ಯಕ್ರಮ ನೀಡಿದ್ದೀರಿ. ಧರ್ಮಸ್ಥಳ ಕ್ಷೇತ್ರಕ್ಕೆ ಬರುತ್ತಿರುವ ಭಕ್ತರು, ವಿಶೇಷವಾಗಿ ಮಹಿಳೆಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಅನೇಕ ಮಹಿಳೆಯರು ನಿಮ್ಮ ಹೆಸರಿನಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ. ಜೈನ ಸಮುದಾಯಕ್ಕೆ ನೀಡಿದ ವಿಶೇಷ ಅನುಧಾನದ ಬಗ್ಗೆ ಸಮುದಾಯದ ಪರವಾಗಿ ಅಭಿನಂದನೆಗಳು. ಅವಕಾಶ ಇದ್ದಾಗ ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆದು ಹೋಗಬೇಕೆಂದು ಅಪೇಕ್ಷೆ ಪಡುತ್ತೇನೆ..’ ಎಂಬುದಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ವಿಶೇಷವಾಗಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆ “ಶಕ್ತಿ” ಯೋಜನೆಯಿಂದ ರಾಜ್ಯದ ತೀರ್ಥಕ್ಷೇತ್ರಗಳಿಗೆ ಭಕ್ತಾದಿಗಳ ಸಂಖ್ಯೆ ಹೆಚ್ಚಿದೆ ಎಂದು ಮಾಧ್ಯಮಗಳು ಮೇಲಿಂದ ಮೇಲೆ ವರದಿ ಬಿತ್ತರಿಸಿದ್ದವು. ಶುರುವಿನಲ್ಲಿ ಬಿಜೆಪಿ ಪಕ್ಷದ ಕೆಲವು ನಾಯಕರೂ ಸಹ ಶಕ್ತಿ ಯೋಜನೆ ಒಂದು ಜನಪರ ಯೋಜನೆ ಎಂದೂ ಹೇಳಿಕೆ ನೀಡಿದ್ದರು.

ಆದರೆ ಇತ್ತೀಚೆಗೆ ಬಿಜೆಪಿ ತನ್ನ ವರಸೆ ಬದಲಿಸಿ ಶಕ್ತಿ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸಂಸ್ಥೆಗಳು ಈ ಯೋಜನೆಯಿಂದ ನಷ್ಟಕ್ಕೆ ಒಳಗಾಗುತ್ತಿವೆ ಎನ್ನುತ್ತಿದೆ. ಸಧ್ಯ ಬಿಜೆಪಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆ ಆದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಈ ಪತ್ರದ ನಂತರ ಬಿಜೆಪಿಯವರ ಮುಂದಿನ ವರಸೆಯ ಬಗ್ಗೆ ಕುತೂಹಲ ಮೂಡಿಸಿದೆ.

ಅಗತ್ಯವಾಗಿ ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ ಜೂನ್ 16 ರಂದು ಸೌಜನ್ಯ ಪ್ರಕರಣದ ಆರೋಪಿ ಎಂದೇ ಪ್ರಕರಣದಲ್ಲಿ ಹೆಸರು ಬಂದಿದ್ದ ಸಂತೋಷ್ ರಾವ್ ಅವರನ್ನು ಸಿಬಿಐ ಕೋರ್ಟ್ ದೋಷಮುಕ್ತಗೊಳಿಸಿ ಮಹತ್ವದ ತೀರ್ಪು ನೀಡಿತ್ತು. ಆ ನಂತರ ಒಡನಾಡಿ ಸಂಸ್ಥೆ ಮತ್ತು ತಿಮರೋಡಿ ಜಂಟಿಯಾಗಿ ಸೌಜನ್ಯ ಪ್ರಕರಣಕ್ಕೆ ಮರುಜನ್ಮ ನೀಡಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವೀರೇಂದ್ರ ಹೆಗ್ಗಡೆಯವರ ಈ ಪತ್ರ ಕುತೂಹಲ ಕೆರಳಿಸಿದೆ.

ಹತ್ತು ವರ್ಷಗಳ ಹಿಂದಿನ ಸೌಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ವೀರೇಂದ್ರ ಹೆಗ್ಗಡೆಯವರ ಸಂಬಂಧಿಗಳು ಎಂಬ ಆರೋಪ ಬಲವಾಗಿ ಕೇಳಿ ಬಂದಿತ್ತು. ಈಗ ಕಾಂಗ್ರೆಸ್ ಸರ್ಕಾರವಿದ್ದು, ಪ್ರಕರಣಕ್ಕೆ ಮರುಜೀವ ಪಡೆಯಬಹುದಾದ ಹಿನ್ನೆಲೆಯಲ್ಲಿ ಈ ಪತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಕಿಟಕಿ ಮೂಲಕ ಬಸ್ ಹತ್ತಿ ಕೈ ಕಳೆದುಕೊಂಡ ಮಹಿಳೆ! ; ವಾಸ್ತವ ಸತ್ಯ ಇಲ್ಲಿದೆ ನೋಡಿ
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳಲ್ಲಿ ‘ಶಕ್ತಿ’ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಬಂದಿದ್ದು ರಾಜ್ಯದ ಮಹಿಳೆಯರು ಈಗಾಗಲೇ ಅತಿ ಉತ್ಸಾಹದಿಂದ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಶಕ್ತಿ ಯೋಜನೆಗೆ ಸಂಬಂಧಿಸಿ ವಿರೋಧಿಗಳ ಪ್ರಾಪಗಂಡಾ ಫೇಕ್ ಸುದ್ದಿಗಳು ಸಹ ಪ್ರಚಾರ ಪಡೆದುಕೊಂಡು ವೈರಲ್ ಆಗುತ್ತಿವೆ.

ಅಂತಹದ್ದೇ ಒಂದು ಫೇಕ್ ಸುದ್ದಿಯೊಂದು ಎಲ್ಲೆಡೆ ವೈರಲ್ ಆದ ನಂತರ ಈಗ ಕೆಎಸ್ಆರ್ಟಿಸಿ ಇಲಾಖೆ ಈಗ ಅದೊಂದು ಸುಳ್ಳು ಸುದ್ದಿ ಎಂಬುದನ್ನ ಸ್ಪಷ್ಟಪಡಿಸಿದೆ.

ಅಂದಹಾಗೆ ವೈರಲ್ ಆಗೋ ಮಟ್ಟಕ್ಕೆ ಹರಡಿದ ಸುಳ್ಳು ಸುದ್ದಿ ಏನಪ್ಪಾ ಅಂದ್ರೆ, ಈ ಕೆಳಗೆ ಕಾಣ್ತಿರೋ ಫೋಟೊ ಗಮನಿಸಿ. ಇದರಲ್ಲಿ ಮಹಿಳೆಯೊಬ್ಬರ ಕೈ ತುಂಡಾಗಿ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡುತ್ತಾ ಇರುವ ದೃಶ್ಯ ಇದು.

ಇಂತಹದ್ದೊಂದು ದೃಶ್ಯ ‘ಶಕ್ತಿ’ ಯೋಜನೆಯ ವಿರೋಧಿಗಳ ಕೈಗೆ ಸಿಕ್ಕಿ ಇನ್ನಿಲ್ಲದಂತೆ ಪ್ರಚಾರ ಪಡೆದುಕೊಂಡಿವೆ. ‘ಶಕ್ತಿ’ ಯೋಜನೆಯಡಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡುವ ಸಂದರ್ಭದಲ್ಲಿ ಆದ ನೂಕುನುಗ್ಗಲಿನಲ್ಲಿ ಮಹಿಳೆಯೊಬ್ಬರ ಕೈ ತುಂಡಾಗಿದೆ ಎಂಬ ರೀತಿಯಲ್ಲಿ ಪ್ರಚಾರ ಪಡೆದುಕೊಂಡಿದೆ. ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಮಹಿಳೆಯೊಬ್ಬರು ಕಿಟಕಿ ಮೂಲಕ ಬಸ್ ಹತ್ತುವಾಗ ಈ ಘಟನೆ ನಡೆದಿದೆ. ಇದು ‘ಶಕ್ತಿ’ ಯೋಜನೆಯ ಸೈಡ್ ಎಫೆಕ್ಟ್ ಎನ್ನುವ ರೀತಿಯಲ್ಲಿ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವು ಬಿಜೆಪಿ ಬೆಂಬಲಿತ ವೆರಿಫೈಡ್ ಅಕೌಂಟ್ (Verified Accounts) ಗಳೂ ಕೂಡಾ ಹಿಂದು ಮುಂದು ನೋಡದೇ ಇಂತಹದ್ದೊಂದು ಸುದ್ದಿಯನ್ನು ವೈರಲ್ ಮಾಡಲು ಮುಂದಾಗಿವೆ.

https://twitter.com/SaritaKaushik05/status/1673006824428285952?t=ECXRLeKGwnHraee2erFsLw&s=19

ಆದರೆ ವಾಸ್ತವ ಏನೆಂದರೆ, ಬಸ್ಸಿನ ಬಲಗಡೆಯ ಹಿಂಬದಿಯ ಕಿಟಕಿಯ ಬಳಿ ಕೆಎಸ್ಆರ್ಟಿಸಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಕಿಟಕಿ ಬಳಿ ಕೂತಿದ್ದ ಮಹಿಳೆಗೆ ಗಂಭೀರ ಗಾಯವಾಗಿದ್ದು, ಅವರ ಕೈ ತುಂಡಾಗಿದೆ. ಇದೊಂದು ಬಸ್ಸು ಮತ್ತು ಲಾರಿಯ ಡಿಕ್ಕಿಯಿಂದಾದ ಅಪಘಾತವೇ ಹೊರತು, ಮಹಿಳೆ ಕಿಟಕಿ ಮೂಲಕ ಬಸ್ ಹತ್ತುವಾಗ ಆದ ಅಪಘಾತ ಅಲ್ಲ ಎಂದು ಕೆಎಸ್ಆರ್ಟಿಸಿ ಸಂಸ್ಥೆ ಸ್ಪಷ್ಟಪಡಿಸಿದೆ. ಅಷ್ಟು ಮಾತ್ರವಲ್ಲ, ಆ ಮಹಿಳೆಗೆ ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ಸಂಸ್ಥೆಯೇ ಭರಿಸುವುದಾಗಿ ಸ್ಪಷ್ಟಪಡಿಸಿದೆ.

ಈ ಬಗ್ಗೆ ಕೆಎಸ್ಆರ್ಟಿಸಿ (KSRTC) ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಘಟನೆಯ ವಿವರವನ್ನು ಸ್ಪಷ್ಟಪಡಿಸಿದ್ದು, ಲಾರಿ ಚಾಲಕನ ಮೇಲೆ ದಾಖಲಾದ FIR ಪ್ರತಿಯನ್ನು ಕೂಡಾ ದಾಖಲಿಸಿದೆ.

ರಾಜ್ಯದಲ್ಲಿ ‘ಶಕ್ತಿ’ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಬಹುತೇಕ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅಷ್ಟೆ ಅಲ್ಲದೆ ರಾಜ್ಯದ ಮೂಲೆ ಮೂಲೆಗಳಿಗೆ ತೆರಳುವ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಕರು ತುಂಬಿ ಪ್ರಯಾಣ ಮಾಡುತ್ತಿದ್ದು, ಬಸ್ಸಿನ ಕಲೆಕ್ಷನ್ ನಲ್ಲಿ ಏನೊಂದೂ ಕಡಿಮೆ ಆಗುತ್ತಿಲ್ಲ ಎಂದು ಬಸ್ಸಿನ ನಿರ್ವಾಹಕರೇ ಸ್ಪಷ್ಟಪಡಿಸಿದ್ದಾರೆ. ಆದರೂ ಸರ್ಕಾರದ ಯೋಜನೆ ವಿರೋಧಿಗಳು‌.. ಅದರಲ್ಲೂ ಬಿಜೆಪಿ ಬೆಂಬಲಿಗರು ಪ್ರಾಪಗಂಡಾ ಅಡಿಯಲ್ಲಿ ಈ ರೀತಿಯ ಸುದ್ದಿ ಹರಡುತ್ತಿರುವುದು ಮತ್ತು ಅದು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೆ ಬರುತ್ತಿರುವುದು ದುರದೃಷ್ಟಕರ.

ಇನ್ನು ಫೇಕ್ ನ್ಯೂಸ್ ಹರಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಹೇಳಿಕೆ ನೀಡಿರುವುದು, ಅದೊಂದು ಕೇವಲ ಹೇಳಿಕೆಯಾಗಷ್ಟೆ ಉಳಿದಿದೆ. ಮಂಡ್ಯದ ಹುಲ್ಲಹಳ್ಳಿಯಲ್ಲಿ ಆದ ಈ ಘಟನೆ ಏನೇನೋ ರೂಪ ಪಡೆದುಕೊಂಡು ಸುಳ್ಳು ಸುದ್ದಿಯಾಗಿ ವೈರಲ್ ಆದರೂ ರಾಜ್ಯ ಸರ್ಕಾರ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಸರ್ಕಾರದ ಅಸಮರ್ಥತೆಯೋ ಅಥವಾ ನಿರ್ಲಕ್ಷ್ಯದ ಧೋರಣೆಯೋ ತಿಳಿಯದು.

ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಿಗೆ ವಿಶೇಷ ಆದೇಶ ಹೊರಡಿಸಿದ ರಾಜ್ಯ ಸರ್ಕಾರ ; ಏನದು ಹೊಸ ಆದೇಶ?
ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಡುವ ಎಲ್ಲಾ ಹಿರಿಯ ನಾಗರೀಕರಿಗೂ ನೇರ ದೇವರ ದರ್ಶನಕ್ಕೆ ಅವಕಾಶ ಕೊಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರ ವಿಶೇಷ ಆದೇಶ ಹೊರಡಿಸಿದೆ. ಕೆಲವು ಪ್ರಮುಖ ಅಂಶಗಳನ್ನು ಒಳಗೊಂಡಂತೆ ಹೊರಡಿಸಿದ ಆದೇಶ ಪತ್ರದಲ್ಲಿ ಈ ವಿಶೇಷ ಅಂಶವೂ ಒಳಗೊಂಡಿದೆ.

ಇತ್ತೀಚೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯಲ್ಲಿ ಕರ್ನಾಟಕದ ಮಹಿಳೆಯರು, ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕೇಂದ್ರಗಳಿಗೆ ಹೋಗುತ್ತಿರುವುದು ಕಂಡುಬಂದಿದೆ. ಕರ್ನಾಟಕದ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸಿಗರು, ಭಕ್ತಾದಿಗಳ ಸಂಖ್ಯೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ವಿಶೇಷ ಆದೇಶವನ್ನು ಸರ್ಕಾರ ಹೊರಡಿಸಿದೆ.

65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಸರತಿ ಸಾಲಿನಲ್ಲಿ ನಿಲ್ಲಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ವಯಸ್ಸಿನ ಆಧಾರದಲ್ಲಿ ಸರತಿ ಸಾಲಿನಲ್ಲಿ ನಿಲ್ಲದೇ ನೇರವಾಗಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಬೇಕು ಎಂದು ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಹಿರಿಯ ನಾಗರಿಕರು ಅವರ ವಯಸ್ಸಿನ ದಾಖಲೆಯಾದ ಆಧಾರ್ ಕಾರ್ಡ್, ಓಟರ್ ಐಡಿಯಂತಹ ದಾಖಲೆಗಳನ್ನು ತೋರಿಸಿ ನೇರ ದೇವರ ದರ್ಶನಕ್ಕೆ ಹೋಗಬಹುದು. ಹಾಗೆಯೇ ದೇವಾಲಯಗಳಲ್ಲಿ ಹೆಚ್ಚಿನ ಸ್ಥಳಾವಕಾಶ ಇದ್ದಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸ್ಥಳ ಕಾಯ್ದಿರಿಸಲೂ ಸೂಚಿಸಿದೆ.

ದೇವಾಲಯಗಳಲ್ಲಿ ಹಿರಿಯ ನಾಗರೀಕರಿಗೆ ಸಹಾಯ ಕೇಂದ್ರಗಳನ್ನು ಸ್ಥಾಪಿಸಿ, ಅವರೊಂದಿಗೆ ಸಹಕರಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಸದರಿ ಸಹಾಯ ಕೇಂದ್ರಕ್ಕೆ ಜವಾಬ್ದಾರಿಯುತ ಸಿಬ್ಬಂದಿಗಳನ್ನು ನೇಮಿಸಿ, ಹಿರಿಯ ನಾಗರೀಕರಿಗೆ ತ್ವರಿತ ದರ್ಶನ ವ್ಯವಸ್ಥೆ ಕಲ್ಪಿಸಲು ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಪ್ರವರ್ಗ ಎ ಮತ್ತು ಬಿ ದೇವಾಲಯಗಳಿಗೆ ಆದೇಶ ಹೊರಡಿಸಿದೆ.

“ಶಕ್ತಿ”ಗೆ ಚಾಲನೆ ; ಕಂಡೀಶನ್ ಗಳೇನು? ಮುಖ್ಯಮಂತ್ರಿ ಏನಂದ್ರು?
ಬೆಂಗಳೂರು, ಜೂನ್ 9: ಕೇಂದ್ರ ಸರ್ಕಾರದ ಬೆಲೆಯೇರಿಕೆಯ ಬಿಸಿ ತಪ್ಪಿಸಲು ಕರ್ನಾಟಕ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಘೋಷಿಸಿದ 5 ಗ್ಯಾರಂಟಿಗಳು ಇನ್ನೇನು ಅನುಷ್ಠಾನದ ಹಂತಕ್ಕೆ ಬಂದು ನಿಂತಿದೆ. ಅದರ ಮೊದಲ ಹೆಜ್ಜೆಯಾಗಿ ರಾಜ್ಯ ಸರ್ಕಾರ “ಶಕ್ತಿ” ಯೋಜನೆಯನ್ನು ಜೂನ್ 11 ರ ಭಾನುವಾರ ರಾಜ್ಯದ ಮಹಿಳಾ ಸಮೂಹಕ್ಕೆ ಅರ್ಪಣೆ ಆಗಲಿದೆ.

ರಾಜ್ಯದಲ್ಲಿ ಅರ್ಧದಷ್ಟಿರುವ ಮಹಿಳಾ ಸಮೂಹದ ಪಾಲಿನ ‘ಶಕ್ತಿ’ ಯೋಜನೆಗೆ ರಾಜ್ಯಾದ್ಯಂತ ಏಕ ಕಾಲಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದು ಈ ಕುರಿತು ಸಚಿವರು ಮತ್ತು ಶಾಸಕರಿಗೆ ನಿಮ್ಮ ನಿಮ್ಮ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಚಾಲನೆ ನೀಡುವಂತೆ ಕರೆ ನೀಡಿದ್ದಾರೆ.
“ಶಕ್ತಿ”ಯಲ್ಲಿ ಏನಿದೆ?
* ರಾಜ್ಯ ಸರ್ಕಾರದ ಸಾರಿಗೆಯಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ
* ಜೂನ್ 11 ರಿಂದ ರಾಜ್ಯಾದ್ಯಂತ ಯೋಜನೆ ಜಾರಿ
* ರಾಜ್ಯದ ಒಳಗೆ ಸಂಚರಿಸುವ ಬಿಎಂಟಿಸಿ, ಕೆಎಸ್ಆರ್ಟಿಸಿ (ಲಕ್ಷುರಿ, ಎಸಿ, ಸ್ಲೀಪರ್ ಹೊರತುಪಡಿಸಿ) ಬಸ್ ಗಳಿಗೆ ಅನ್ವಯ
* ಕರ್ನಾಟಕ ರಾಜ್ಯದ ಮಹಿಳೆಯರು, ವಿದ್ಯಾರ್ಥಿನಿಯರು, ಮಂಗಳಮುಖಿಯರಿಗೆ ಈ ಯೋಜನೆ ಅನ್ವಯ
* ಬಿಎಂಟಿಸಿ ಹೊರತುಪಡಿಸಿ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಶೇ 50 ರಷ್ಟು ಆಸನ ಪುರುಷರಿಗೆ ಮೀಸಲು
* ಸೇವಾಸಿಂಧು ಪೋರ್ಟಲ್ ಮೂಲಕ 3 ತಿಂಗಳ ಒಳಗೆ ಸ್ಮಾರ್ಟ್ ಕಾರ್ಡ್ ಲಭ್ಯ
* ಸ್ಮಾರ್ಟ್ ಕಾರ್ಡ್ ಸಿಗುವ ವರೆಗೂ ಆಧಾರ್ ಕಾರ್ಡ್ ಅಥವಾ ಓಟರ್ ಐಡಿ ತೋರಿಸಿ ಪ್ರಯಾಣಿಸಬಹುದು

ಕೇಂದ್ರ ಸರ್ಕಾರದ ಬೆಲೆ ಏರಿಕೆ, ಹಣದುಬ್ಬರದ ಕಾರಣಕ್ಕೆ ಸಂಕಷ್ಟಕ್ಕೆ  ತುತ್ತಾಗಿರುವ ಕನ್ನಡ ನಾಡಿನ ಮಹಿಳಾ ಸಮೂಹಕ್ಕೆ ಕೊಂಚ ನಿರಾಳ ನೀಡುವ ಶಕ್ತಿ ಯೋಜನೆಯ ಚಾಲನೆ ಅತ್ಯಂತ ಅರ್ಥಪೂರ್ಣವಾಗಿ ನಡೆಸಬೇಕು. ಸರ್ಕಾರ ತನ್ನ ಮೇಲೆ ಬೀಳುವ ಆರ್ಥಿಕ ಹೊರೆಯ ಹೊರತಾಗಿಯೂ ಜನ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಅಸ್ತಿತ್ವಕ್ಕೆ ಬಂದ ತಿಂಗಳ ಒಳಗೇ ಜಾರಿಗೆ ತರುತ್ತಿದೆ. ಯಾವುದೇ ಜಾತಿ, ಧರ್ಮದ ಮಿತಿಗೆ ಒಳಪಡದ ಶಕ್ತಿ ಯೋಜನೆಯ ಅನುಕೂಲ ಅರ್ಹರಿಗೆಲ್ಲಾ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಮತ್ತು ಶಾಸಕರುಗಳಿಗೆ ಸೂಚನೆ ನೀಡಿದ್ದಾರೆ.
ಸದ್ಯದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಲಾಗುವುದು. ನೇಮಕವಾದ ತಕ್ಷಣ ಎಲ್ಲಾ ಸಚಿವರೂ ಕಾರ್ಯೋನ್ಮುಖರಾಗಿ ಯೋಜನೆಯ ಅರ್ಥಪೂರ್ಣ ಚಾಲನೆ ನೀಡಬೇಕು ಎಂದು ತಿಳಿಸಿದ್ದಾರೆ.
ಜೂನ್ 11 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡುತ್ತಾರೆ. ಅದೇ ಹೊತ್ತಲ್ಲಿ ಶಾಸಕರು ಮತ್ತು ಜಿಲ್ಲಾ ಸಚಿವರುಗಳು ತಮ್ಮ ತಮ್ಮ ಜಿಲ್ಲೆ ಮತ್ತು ಕ್ಷೇತ್ರಗಳಲ್ಲಿ ಯೋಜನೆಗೆ ಚಾಲನೆ ನೀಡಬೇಕು ಎಂದು ತಮ್ಮ ಸಂಪುಟ ಸಚಿವರು ಮತ್ತು ಶಾಸಕರಿಗೆ ಕರೆ ನೀಡಿದ್ದಾರೆ.