Shantala Damle – Peepal Media

ʼಕನ್ನಡತಿ ಉತ್ಸವ-2022ʼ ರ ಅಂಗವಾಗಿ ʼಮಿಸ್‌ ಮಹಾಲಕ್ಷ್ಮೀʼ ಒಂದು ವಿನೂತನ ರ್‍ಯಾಂಪ್ ವಾಕ್‌
ಬೆಂಗಳೂರು: ʼಅವಳ ಹೆಜ್ಜೆʼ ಸರ್ಕಾರೇತರ ಸಂಸ್ಥೆಯು ನವೆಂಬರ್‌ 13ರಂದು ಭಾನುವಾರ ಬೆಳಿಗ್ಗೆ 10.30ರಿಂದ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಗೆಳೆಯರ ಬಳಗದಲ್ಲಿರುವ ಡಾ. ರಾಜ್‌ ಕುಮಾರ್‌ ಒಳಾಂಗಣ ಕ್ರೀಡಾಂಗಣದಲ್ಲಿ ಕನ್ನಡತಿ ಉತ್ಸವ ಹಮ್ಮಿಕೊಂಡಿದ್ದು ಇದರ ಅಂಗವಾಗಿ ವಿನೂತನ ಶೈಲಿಯ ಪ್ಯಾಶನ್‌ ಶೋ- PASSION SHOW ಹಮ್ಮಿಕೊಂಡಿದೆ.

ಈ ಕುರಿತು ಇಂದು ನಗರದ ಪ್ರೆಸ್‌ ಕ್ಲಬ್‌ನಲ್ಲಿ ʼಅವಳ ಹೆಜ್ಜೆʼ ಸ್ಥಾಪಕರಾದ ಶಾಂತಲಾ ದಾಮ್ಲೆ ಮಾಹಿತಿ ನೀಡಿದರು.

ʼಸತತ 6 ವರ್ಷಗಳಿಂದ ʼಕನ್ನಡತಿ ಉತ್ಸವʼ ವನ್ನು ವಾರ್ಷಿಕ ಹಬ್ಬವಾಗಿ ನಡೆಸಿಕೊಂಡು ಬರುತ್ತಿರುವ ಅವಳ ಹೆಜ್ಜೆ ಈ ಬಾರಿ 2022ರ ʼಕನ್ನಡತಿ ಉತ್ಸವʼವನ್ನು ಅತ್ಯಂತ ವಿಭಿನ್ನವೂ ವಿನೂತನವೂ ಆಗಿ ಆಚರಿಸಲು ತೀರ್ಮಾನಿಸಲಾಗಿದೆʼ ಎಂದು ತಿಳಿಸಿದರು. ʼಈ ಪ್ಯಾಶನ್‌ ಶೋ ನಲ್ಲಿ  ಮಹಿಳೆಯರು ಮತ್ತು ಹೆಣ್ಣುಮಕ್ಕಳು ತಮ್ಮ ವೈಯಕ್ತಿಕ ಕನಸು, ಕಸುಬು ಮತ್ತು ಕಲೆಯನ್ನು ಉಡುಗೆ-ತೊಡುಗೆ, ವೇಷಭೂಷಣಗಳ ಮೂಲಕ ವೇದಿಕೆ ಮೇಲೆ ಪ್ರದರ್ಶಿಸಲಿದ್ದು  ಕಾರ್ಯಕ್ರಮಕ್ಕೆ ಈಗಾಗಲೇ 7 ವರ್ಷದ ಮಗುವಿನಿಂದ 70 ವರ್ಷದ ಹಿರಿಯರವರೆಗೆ ಅನೇಕ ಮಹಿಳೆಯರು ನೊಂದಾಯಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು. ʼವೈದ್ಯಕೀಯ, ವಕೀಲಿ, ಫಾರ್ಮಾಸಿ, ಕೇಶ ವಿನ್ಯಾಸ, ಬಾಹ್ಯಾಕಾಶ ವಿಜ್ಞಾನ, ವನ್ಯಜೀವಿ ಛಾಯಾಗ್ರಾಹಣ, ಸಮಾಜ ಸೇವೆ, ಕಸೂತಿ, ಶಿಕ್ಷಣ, ಫ್ಯಾಷನ್‌ ಡಿಸೈನ್, ಮಾಡಲಿಂಗ್, ಜಿಮ್‌, ಯೋಗ, ಸಾಹಿತ್ಯ, ಗಾಯನ, ಭರತನಾಟ್ಯ, ಕಥಕ್‌, ಯಕ್ಷಗಾನ, ಚಿತ್ರಕಲೆ, ನಾಟಕ, ಆಭರಣ ವಿನ್ಯಾಸ, ಆಪ್ತ ಸಮಾಲೋಚನೆ ಮುಂತಾದ ಕ್ಷೇತ್ರಗಳನ್ನು ಪ್ರತಿನಿಧಿಸಲಿದ್ದಾರೆʼ ಎಂದರು.

ಹೆಚ್ಚಿನ ವಿವರಗಳಿಗೆ 9972947589 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ʼಅವಳ ಹೆಜ್ಜೆʼ ಸಂಸ್ಥಾಪಕರಾದ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಬರಹಗಾರ್ತಿ ದೀಪಾ ಹಾಜರಿದ್ದರು.