Sharad Pawar – Peepal Media

ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲಿರುವ ಶರದ್‌ ಪವಾರ್?‌
ಮುಂಬಯಿ: ಇಂಡಿಯಾ ಒಕ್ಕೂಟದ ಭಾಗವಾಗಿರುವ NCP ಒಂದು ಕಾಲನ್ನು ಹೊರಗೇ ಇಟ್ಟುಕೊಂಡು ಮೈತ್ರಿ ಸಾಧಿಸಿದೆ. ಅತ್ತ ಆ ಪಕ್ಷದ ಇನ್ನೊಂದು ಭಾಗ ಬಿಜೆಪಿಯ ಸಖ್ಯದಲ್ಲಿದೆ. ನಾಗಲ್ಯಾಂಡ್‌ ರಾಜ್ಯದ ಎನ್‌ಸಿಪಿ ಕೂಡಾ ಬಿಜೆಪಿ ಜೊತೆ ಹೋಗಿರುವ ಅಜಿತ್‌ ಪವಾರ್‌ ಬಣಕ್ಕೆ ಬೆಂಬಲ ನೀಡಿರುವುದು ಶರದ್‌ ಪವಾರ್‌ ಅವರ ಕೈಯನ್ನು ಕಟ್ಟಿ ಹಾಕಿರುವಂತಿದೆ.

ಸದ್ಯಕ್ಕೆ ಕರ್ನಾಟಕದ JDS ಹಾಗೂ NCP ಒಂದೇ ದೋಣಿಯ ಪಯಣಿಗರೆನ್ನಬಹುದು. ಇಲ್ಲಿಯೂ ಜೆಡಿಸ್‌ ದೇಹ ಪಕ್ಷದಲ್ಲಿದ್ದರೆ ಅದರ ಮನಸ್ಸೆಲ್ಲ ಬಿಜೆಪಿಯಲ್ಲಿದೆ.

ಈಗ ಸುಳಿದಾಡುತ್ತಿರುವ ಸುದ್ದಿಯ ಪ್ರಕಾರ ಅಗಸ್ಟ್‌ರಂದು ಶರದ್‌ ಪವಾರ್‌ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಘೋಷಣೆ ಹೊರಡಿಸಲಿದ್ದಾರೆ. ಅಜಿತ್‌ ಪವಾರ್‌ ಕೈಗೆ ಪಕ್ಷದ ಚುಕ್ಕಾಣಿ ಪೂರ್ತಿಯಾಗಿ ನೀಡಿ ಸುಪ್ರಿಯಾ ಸುಳೆ ಬಿಜೆಪಿ ಮೈತ್ರಿಯ ಭಾಗವಾಗಿ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಬಲ್ಲ ಮೂಲಗಳ ಪ್ರಕಾರ ಇಂದು ಶರದ್‌ ಪವಾರ್‌ ಮೋದಿಯವರನ್ನು ಸನ್ಮಾನಿಸಲು ಒಪ್ಪಿಕೊಂಡಿರುವುದು ಕೂಡಾ ಈ ಕಾರ್ಯತಂತ್ರದ ಒಂದ ಭಾಗ ಎನ್ನಲಾಗುತ್ತಿದೆ. ಎನ್‌ಸಿಪಿ ಜೊತೆ ಬಿಜೆಪಿಯ ಸಖ್ಯ ಗಟ್ಟಿಯಾಗುತ್ತಿರುವಂತೆ ಅತ್ತ ಶಿವಸೇನೆಯ ಶಿಂಧೆಯ ಬಣ ಅಭದ್ರತೆಯನ್ನು ಎದುರಿಸುತ್ತಿದೆ. ಒಂದು ವೇಳೆ ಅಜಿತ್‌ ಪವಾರ್‌ ಕೈಗೆ ಪೂರ್ಣ ಪ್ರಮಾಣದಲ್ಲಿ ಪಕ್ಷ ಸೇರಿದಲ್ಲಿ ಅವರು ಮಹಾರಾಷ್ಟ್ರದ ಸಿಎಮ್‌ ಪಟ್ಟ ಕೇಳುತ್ತಾರೆನ್ನುವುದು ಕೂಡಾ ಶಿಂಧೆ ಬಣಕ್ಕೆ ತಳಮಳ ಹುಟ್ಟಿಸಿದೆ.

ಮಹಾರಾಷ್ಟ್ರದಲ್ಲಿ ವೈರಲ್ ಆಗ್ತಿದೆ ಬಾಹುಬಲಿ – ಕಟ್ಟಪ್ಪ ಪೋಸ್ಟರ್
ಮಹಾರಾಷ್ಟ್ರದ NCP ಪಕ್ಷದ ಬಣ ವೈಷಮ್ಯವು ಚುನಾವಣಾ ಆಯೋಗದ ಬಾಗಿಲನ್ನು ತಲುಪುತ್ತಿದ್ದಂತೆ, ಪಕ್ಷದ ಹಿರಿಯ ನಾಯಕ ಶರದ್ ಪವಾರ್ ವಿರುದ್ಧ ಅಜಿತ್ ಪವಾರ್ ಅವರು ಬಂಡಾಯವೆದ್ದಿರುವುದನ್ನು ಉಲ್ಲೇಖಿಸಿ ಎನ್‌ಸಿಪಿಯ ವಿದ್ಯಾರ್ಥಿ ಘಟಕವು ದೆಹಲಿ ಕಚೇರಿಯ ಹೊರಗೆ “ಗದ್ದಾರ್” (ದೇಶದ್ರೋಹಿ) ಪೋಸ್ಟರ್ ಅನ್ನು ಹಾಕಿರುವುದು ಈಗ ಮಹಾರಾಷ್ಟ್ರದಾದ್ಯಂತ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇವು ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಕುರಿತಾಗಿ ಎದ್ದಿರುವ ಟ್ರೋಲ್ ವಿಚಾರವಾಗಿದ್ದು, ಒಂದಕ್ಕಿಂತ ಒಂದು ಹೆಚ್ಚು ಸುದ್ದಿ ಮಾಡುತ್ತಿವೆ. ಅದರಲ್ಲೂ ದೆಹಲಿ ಕಛೇರಿಯ ಹೊರಗೆ ನಿಲ್ಲಿಸಿದ “ಗದ್ದಾರ್” ಪೋಸ್ಟರ್ ಮಾತ್ರ ಈ ದಿನದ ಹೆಚ್ಚು ಚರ್ಚಿತ ಮತ್ತು ಗಮನಾರ್ಹ ಪೋಸ್ಟರ್ ಆಗಿದೆ.

ರಾಷ್ಟ್ರವಾದಿ ವಿದ್ಯಾರ್ಥಿ ಕಾಂಗ್ರೆಸ್ ಬಾಹುಬಲಿ ಸಿನೆಮಾದಲ್ಲಿ ಕಟ್ಟಪ್ಪ ಬಾಹುಬಲಿಗೆ ಹಿಂಬದಿಯಿಂದ ಚುಚ್ಚಿದ ದೃಶ್ಯವನ್ನು ಬಿಂಬಿಸುವ ಪೋಸ್ಟರ್ ಅನ್ನು ಹಾಕಿದ್ದು, ಅಜಿತ್ ಪವಾರ್ “ಕಟ್ಟಪ್ಪ”ನಾಗಿ, “ಅಮರೇಂದ್ರ ಬಾಹುಬಲಿ”ಯಾಗಿ ಶರದ್ ಪವಾರ್ ಅವರ ಬೆನ್ನಿಗೆ ಚೂರಿಯಿಂದ ಇರಿದಂತೆ ತೋರಿಸಿದೆ. ಅದರ ಮೇಲೆ ಗದ್ದಾರ್ ಎಂದು ಬರೆಯಲಾಗಿದೆ.

“ಇಡೀ ದೇಶವು ಒಬ್ಬರ (ಮೋದಿ) ನಡುವೆ ಅಡಗಿರುವ ದೇಶದ್ರೋಹಿಗಳನ್ನು ನೋಡುತ್ತಿದೆ. ಅಂತಹ ಜನರನ್ನು ರಾಷ್ಟ್ರದ ಜನತೆ ಕ್ಷಮಿಸುವುದಿಲ್ಲ” ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ಆದರೆ ಯಾವ ಚಿತ್ರದಲ್ಲೂ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.

ಎನ್‌ಸಿಪಿಯ ಬಣದ ಹೋರಾಟವು ಇಂದು ಚುನಾವಣಾ ಆಯೋಗದ ಬಾಗಿಲನ್ನು ತಲುಪಿದೆ. ಅಜಿತ್ ಪವಾರ್ ಅವರ ಬೆಂಬಲಕ್ಕೆ ನಿಲ್ಲುವ 40 ಕ್ಕೂ ಹೆಚ್ಚು ಶಾಸಕರು ಮತ್ತು ಸಂಸದರು ಅಫಿಡವಿಟ್‌ಗಳನ್ನು ಸಲ್ಲಿಸಿದ್ದಾರೆ. ಶರದ್ ಪವಾರ್ ಪಾಳಯವು ಬಣ ಹೋರಾಟಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನವನ್ನು ರವಾನಿಸುವ ಮೊದಲು ತಾವೇ ಮೊದಲು ಒತ್ತಾಯಿಸಿ ಚುನಾವಣಾ ಸಂಸ್ಥೆಗೆ ಕೇವಿಯಟ್ ಸಲ್ಲಿಸಿದೆ. ಅಜಿತ್ ಪವಾರ್ ಬಣವು ಪಕ್ಷದ ಹೆಸರು ಮತ್ತು ಚಿಹ್ನೆಯ ಮೇಲೆ ಹಕ್ಕು ಸಾಧಿಸಿರುವ ಹಿನ್ನೆಲೆಯಲ್ಲಿ, ಶರದ್ ಪವಾರ್ ಗುರುವಾರ ಮಧ್ಯಾಹ್ನ 3 ಗಂಟೆಗೆ ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯನ್ನು ಕರೆದಿದ್ದಾರೆ.

ಸಭೆಯಲ್ಲಿ ಶರದ್ ಪವಾರ್ ಬಣವು “ರಹಸ್ಯ ಪಕ್ಷಾಂತರ” ಮತ್ತು ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ 40 ಮಂದಿ ಶಾಸಕರನ್ನು ಅನರ್ಹಗೊಳಿಸುವಂತೆ ಸಭೆಯಲ್ಲಿ ಒತ್ತಾಯಿಸಿದೆ.

ಅಜಿತ್ ಪವಾರ್ ನಡೆ ಆಶ್ಚರ್ಯವೇನಲ್ಲ ; NCP ಗೆ ಮೋಸ ಮಾಡಿದವರ ವಿರುದ್ಧ ಕ್ರಮ ; ಶರದ್ ಪವಾರ್
ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ NCP ಪಕ್ಷದ ನಾಯಕ ಅಜಿತ್ ಪವಾರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇಂದು ತಮ್ಮ ಪಕ್ಷದ 9 ಮಂದಿ ಶಾಸಕರನ್ನು ಒಳಗೊಂಡಂತೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. NCP ಪಕ್ಷದ 53 ಶಾಸಕರಲ್ಲಿ ಸುಮಾರು 40 ಮಂದಿ ಶಾಸಕರು ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಬಗ್ಗೆ ವರದಿಯಾಗಿದೆ.

ಭಾನುವಾರ ಬೆಳಿಗ್ಗೆ ತನ್ನ ನಿವಾಸದಲ್ಲಿ ಎನ್ಸಿಪಿ ಶಾಸಕರ ತುರ್ತು ಸಭೆ ಕರೆದ ನಂತರ ಅಜಿತ್ ಪವಾರ್ ರಾಜಭವನಕ್ಕೆ ಆಗಮಿಸಿದರು. ಸುಮಾರು 40 ಮಂದಿ NCP ಶಾಸಕರ ಸಹಿಯೊಂದಿಗೆ ಇಂದು ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಲ್ಲದೆ, ಅವರ ಜೊತೆಗೆ ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಅದಿತಿ ತತ್ಕರೆ, ಧನಂಜಯ್ ಮುಂಡೆ, ಹಸನ್ ಮುಶ್ರೀಫ್, ರಾಮರಾಜೇ ನಿಂಬಾಳ್ಕರ್, ಸಂಜಯ್ ಬನ್ಸೋಡೆ, ಧರ್ಮರಾವ್ ಬಾಬಾ ಅತ್ರಮ್ ಹಾಗೂ ಅನಿಲ್ ಭೈದಾಸ್ ಪಾಟೀಲ್ ಕೂಡಾ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು

ಕೆಲವೇ ದಿನಗಳ ಹಿಂದೆ ಅಜಿತ್ ಪವಾರ್ ತಾವು ವಿರೋಧ ಪಕ್ಷದ ಸ್ಥಾನದಿಂದ ಕೆಳಗಿಳಿಯುವ ಹೇಳಿಕೆ ನೀಡಿದ್ದರು. ಇದರ ಹಿಂದೆ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ತಡವಾಗಿ ಮಾಹಿತಿ ಹೊರಬಿದ್ದಿದೆ.

ಈ ಮೂಲಕ ಮಹಾರಾಷ್ಟ್ರದಲ್ಲಿ NCP ಇಬ್ಭಾಗವಾದಂತಾಗಿದೆ. ಇತ್ತ NCP ಮುಖ್ಯಸ್ಥ ಶರದ್ ಪವಾರ್ ಇದೊಂದು ನಿರೀಕ್ಷಿತ ಬೆಳವಣಿಗೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 1980 ಕ್ಕೂ ಮುನ್ನ ಕೇವಲ 6 ಮಂದಿ ಶಾಸಕರನ್ನು ಹೊಂದಿ ಪಕ್ಷ ಕಟ್ಟಿದ್ದೆ. ಆ ನಂತರ 58 ಶಾಸಕರ ಬಲವನ್ನು NCP ಹೊಂದಿತ್ತು. ಆ ಸಂದರ್ಭದಲ್ಲಿ ಪಕ್ಷ ಬಿಟ್ಟ ಬಹುತೇಕರು ಆ ಕ್ಷೇತ್ರಗಳಲ್ಲಿ ಸೋಲನ್ನು ಅನುಭವಿಸಿದ್ದರು. ಇದು ನನಗೆ ಹೊಸತೇನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಸೋದರಳಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶರದ್ ಪವಾರ್ “ಜುಲೈ 6 ರಂದು ನಾನು ಪಕ್ಷದ ಎಲ್ಲಾ ನಾಯಕರ ಸಭೆ ಕರೆದಿದ್ದೆ, ಅಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದಿತ್ತು. ಪಕ್ಷದೊಳಗೆ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿತ್ತು. ಆದರೆ ಆ ಸಭೆಯ ಮೊದಲೇ, ಕೆಲವು ನಾಯಕರು ವಿಭಿನ್ನ ನಿಲುವು ತಳೆದಿದ್ದಾರೆ. ಅದರ ಪರಿಣಾಮ ಇಂದಿನ ಬೆಳವಣಿಗೆ” ಎಂದು ಶರದ್ ಪವಾರ್ ಹೇಳಿದ್ದಾರೆ.

“ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಶಾಸಕರ ನಿಲುವು ಎಷ್ಟು ಭಿನ್ನವಾಗಿದೆ ಎಂಬುದನ್ನು ಮುಂದಿನ 2-3 ದಿನಗಳಲ್ಲಿ ಸ್ಪಷ್ಟಪಡಿಸಲಾಗುವುದು. ಅವರಲ್ಲಿ ಕೆಲವರು ನನ್ನನ್ನು ಸಂಪರ್ಕಿಸಿ ಸರ್ಕಾರವನ್ನು ಬೆಂಬಲಿಸಲು ಸಹಿ ಹಾಕುವಂತೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳು ಈಗಲೂ ನಮ್ಮೊಂದಿಗಿದ್ದೇವೆ ಎಂದು ಹೇಳಲು ನನಗೆ ಕರೆ ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬೆಂಬಲ ಸೂಚಿಸಲು ಕರೆ ಮಾಡಿದ್ದಾರೆ.” ಎಂದು ಶರದ್ ಪವಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಅಜಿತ್ ಪವಾರ್ ಸೇರಿದಂತೆ ಪ್ರಮಾಣವಚನ ಸ್ವೀಕರಿಸಿದ ಎಲ್ಲಾ ಒಂಬತ್ತು ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಶರದ್ ಪವಾರ್ ಹೇಳಿದ್ದಾರೆ.