shikar dhavan – Peepal Media

ಮತ್ತೊಂದು ಗೆಲುವಿ ನಿರೀಕ್ಷೆಯಲ್ಲಿ ಕಿವೀಸ್‌ ತಂಡ: ಮೊದಲ ಗೆಲುವಿನ ಒತ್ತಡದಲ್ಲಿ ಶಿಕರ್‌ ತಂಡ
ಹ್ಯಾಮಿಲ್ಟನ್‌: ಇಲ್ಲಿ ನಡೆಯುವ ಭಾರತ- ನ್ಯೂಜಿಲೆಂಡ್‌ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ, ಕಿವೀಸ್‌ ತಂಡ 2 ನೇ ಗೆಲುವಿನ ನಿರೀಕ್ಷೆಯ್ಲಲ್ಲಿದ್ದರೆ. ಶಿಕರ್‌ ಧವನ್‌ ನಾಯಕತ್ವದ ಭಾರತ ತಂಡವು ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಲುಕಿದೆ.

ಕಿವೀಸ್‌ ನೆಲದಲ್ಲಿ ಶುಕ್ರವಾರ ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ, ಭಾರತ ತಂಡವು 300ಕ್ಕೂ ಹೆಚ್ಚು ರನ್‌ಗಳ ಗುರಿ ನೀಡಿದ್ದರು, ನ್ಯೂಜಿಲ್ಯಾಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌, ಮತ್ತು ಟಾಮ್‌ ಲಥಾಮ್‌ ಅವರ ದ್ವಿಶತಕದ ಜೊತೆಯಾಟವು ಭಾರತ ತಂಡ ನೀಡಿದ ಗುರಿಯನ್ನು ಸುಲಭವಾಗಿ ಸಾಧಿಸಿತು. ಈ ಮೂಲಕ ನ್ಯೂಜಿಲ್ಯಾಂಡ್‌ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಇಂದು ಸರಣಿಯ ಎರಡನೇ ಪಂದ್ಯವು ನಡೆಯಲಿದ್ದು, ಭಾರತ ತಂಡವು ಗೆಲ್ಲಲೇಬೇಕಾದ ಅನಿವಾರ್ಯಯತೆ ಸೃಷ್ಟಿಯಾಗಿದೆ. ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರ, ಸರಣಿ ತನ್ನದಾಗಿಸಿಕೊಳ್ಳುವ ಆಸೆಯನ್ನು ಜೀವಂತವಾಗಿಟ್ಟು ಕೊಳ್ಳಬಹುದಾಗಿದೆ. ಭಾರತ ತಂಡದ ಬೌಲಿಂಗ್‌ ವಿಭಾಗದಲ್ಲಿ ಅನುಭವದ ಕೊರತೆ ಕಂಡುಬರುತ್ತಿದ್ದು, ಬೌಲರ್‌ಗಳು ತಮ್ಮ ಸಾಮರ್ಥ್ಯದ ಚಳಕವನ್ನು ತೋರಿಸದರೆ ಮಾತ್ರ ಕಿವೀಸ್‌ ತಂಡದ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಮರಳಿ ಕಳಿಸಬಹುದು. ಇದರಿಂದ ತಂಡ ಗಲುವು ಸಾಧಿಸಲು ಸುಲಭವಾಗುತ್ತದೆ ಎನ್ನಲಾಗಿದೆ.

ಇಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಟಾಸ್‌ ಗೆದ್ದಿದ್ದು, ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದು, ಯಾವ ತಂಡ ಗೆಲುವನ್ನು ಸಾಧಿಸುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಶಿಖರ್‌ ಧವನ್‌ ನಾಯಕತ್ವ: ಬಿಸಿಸಿಐ
ನವದೆಹಲಿ: ಭಾರತದಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)  ಭಾರತ ತಂಡವನ್ನು ಪ್ರಕಟಿಸಿದ್ದು, ತಂಡದ ನಾಯಕನಾಗಿ ಶಿಖರ್ ಧವನ್, ಉಪನಾಯಕನಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ, ಅಕ್ಟೋಬರ್ 2 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದು, ಶ್ರೇಯಸ್ ಅಯ್ಯರ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.‌

ಅಕ್ಟೋಬರ್ 6 ರಿಂದ 3 ಪಂದ್ಯಗಳ ಏಕದಿನ ಸರಣಿಯು ಪ್ರಾರಂಭವಾಗಲಿದ್ದು, ಮೊದಲ ಪಂದ್ಯ ಲಖನೌ ನಲ್ಲಿ ನಡೆಯಲಿದೆ.

ದಕ್ಷಿಣ ಆಪ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಪಟ್ಟಿ ಹೀಗಿದೆ: ಶಿಖರ್ ಧವನ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್‌ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್ , ಅವೇಶ್ ಖಾನ್, ಮೊಹಮ್ಮದ್. ಸಿರಾಜ್, ದೀಪಕ್ ಚಹಾರ್.‌

🚨 NEWS 🚨: India’s squad for ODI series against South Africa announced. #TeamIndia | #INDvSA | @mastercardindia
— BCCI (@BCCI) October 2, 2022

ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ ಶಿಖರ್ ಧವನ್ ಗೆ ನಾಯಕನಾಗಿ ಸರಣಿಯ ಶುಭಾರಂಭ
ವೆಸ್ಟ್ ಇಂಡೀಸ್‌ ತಂಡದ ಗೆಲುವಿಗೆ ದಾಖಲೆ ಬರೆಯುವ 309 ರನ್‌ಗಳು ಬೇಕಾಗಿದ್ದವು. ಅದಕ್ಕಾಗಿ ವೆಸ್ಟ್ ಇಂಡೀಸ್ 117 ರನ್‌ಗಳ ಎರಡನೇ ವಿಕೆಟ್ ಜೊತೆಯಾಟದೊಂದಿಗೆ ವೇದಿಕೆಯನ್ನು ಸಿದ್ಧಪಡಿಸಿತ್ತು.  ಕೊನೆಯ 15 ಓವರ್‌ಗಳಲ್ಲಿ ಏಳು ವಿಕೆಟ್‌ ಕೈಯಲ್ಲಿದ್ದಾಗ ಗೆಲುವಿಗೆ 120 ರನ್ ಅಗತ್ಯವಿತ್ತು. ಆದರೆ, ಅಂತಿಮ ಹಂತದಲ್ಲಿ ಕೆರೇಬಿಯನ್ ತಂಡ ಮುಗ್ಗರಿಸಿದ್ದರಿಂದ ಗೆಲುವು ಭಾರತ ತಂಡದ ಪಾಲಾಯಿತು. ಈ ಗೆಲುವಿನಲ್ಲಿ ಸಿರಾಜ್, ಚಾಹಲ್, ಠಾಕೂರ್ ಸೇರಿದಂತೆ ಹಲವು ಆಟಗಾರರ ಪಾಲು ಇತ್ತು ಅನ್ನೋದು ವಿಶೇಷ.

ರೋವ್ಮನ್ ಪೊವೆಲ್ ಮತ್ತು ನಿಕೋಲಸ್ ಪೂರನ್ ಭಾರತ ತಂಡಕ್ಕೆ ಅಡ್ಡಗಾಲು ಹಾಕುವಂಥ ಬ್ಯಾಟ್ಸ್ ಮನ್ ಗಳಾಗಿದ್ದರು. ಆದರೆ,  ಯುಜ್ವೇಂದ್ರ ಚಾಹಲ್ ಪೊವೆಲ್ ಅವರನ್ನು ಔಟ್ ಮಾಡಿದ್ದು ಪಂದ್ಯಕ್ಕೆ ತಿರುವು ನೀಡಿತು. ಆದರೆ ಕಿಂಗ್ ಮತ್ತು ಅಕೆಲ್ ಹೊಸೈನ್ ನಡುವೆ ಮತ್ತು ನಂತರ ಹೊಸೈನ್ ಮತ್ತು ರೊಮಾರಿಯೋ ಶೆಫರ್ಡ್ ನಡುವಿನ ಎರಡು ಜತೆಯಾಟಗಳು ವೆಸ್ಟ್ ಇಂಡೀಸ್‌ನ ಭರವಸೆಯನ್ನು ಹೆಚ್ಚಿಸಿದ್ದವು. ಆದರೆ, ಚಾಹಲ್, ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಕೊನೆಯ ಮೂರು ಓವರ್‌ಗಳಲ್ಲಿ 38 ರನ್ ಗಳನ್ನು ಕಂಟ್ರೋಲ್ ಮಾಡಿದ್ದರಿಂದ ಭಾರತ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯಲಿರುವ ಮೂರು ODIಗಳಲ್ಲಿ ಮೊದಲನೆಯದನ್ನು ಮೂರು ರನ್‌ಗಳ ಅಂತರದಿಂದ ಗೆಲ್ಲಲು ಸಾಧ್ಯವಾಯಿತು. ಎರಡನೇ ಇನ್ನಿಂಗ್ಸ್ ನ 49ನೇ ಓವರ್ ಎಸೆದ ಪ್ರಸಿಧ್ ಕೃಷ್ಣ ಮೊದಲ ಬಾಲಿನಲ್ಲೇ ಸಿಕ್ಸರ್ ಹೊಡೆಸಿಕೊಂಡು, ನಂತರ ತಮ್ಮ ಓವರ್ ನಲ್ಲಿ ಒಟ್ಟು 12 ರನ್ ಬಿಟ್ಟು ಕೊಟ್ಟು ವೆಸ್ಟ್ ಇಂಡೀಸ್ ಗೆ 6 ಬಾಲ್ ಗಳಲ್ಲಿ 15 ರನ್ ಗಳಿಸುವ ಸವಾಲು ಮುಂದಿಟ್ಟಿದ್ದರು. ಆದರೆ ಕೊನೆಯ ಓವರ್ ನಲ್ಲಿ ಸಿರಾಜ್ ಅಹ್ಮದ್ ಸಂಯಮ ಕಾಯ್ದುಕೊಂಡು ಭಾರತವನ್ನು ಗೆಲುವಿನ ದಡ ಸೇರಿಸಿದರು.

ನಾಯಕ ಪೂರನ್ ಔಟ್ ಆದ ನಂತರ  ಚಾಹಲ್, ರೋವ್‌ಮನ್ ಪೊವೆಲ್ ಅವರನ್ನು ಸ್ಲಿಪ್ ನಲ್ಲಿ ಕ್ಯಾಚ್ ಕೊಡುವಂತೆ ಮಾಡಿದರು. ಈ ಸಮಯದಲ್ಲಿ ವೆಸ್ಟ್ ಇಂಡೀಸ್ ಕಥೆ ಮುಗಿಯಿತು ಎಂದುಕೊಂಡಿದ್ದಾಗ ಕಿಂಗ್, ಹೊಸೈನ್ ಮತ್ತು ಶೆಫರ್ಡ್, ಶೋ ಅಭೀ ಬಾಕೀ ಹೈ ಎಂದು ಪಂದ್ಯವನ್ನು ಕೊನೆಯ ಬಾಲಿನವರೆಗೂ ತೆಗೆದುಕೊಂಡು ಹೋದರು.

ಇನ್ನು ಇದಕ್ಕೂ ಮುನ್ನ ಶಿಖರ್ ಧವನ್, ಶುಭ್ ಮನ್ ಗಿಲ್, ಶ್ರೇಯಸ್ ಅಯ್ಯರ್ ಅವರ ಉತ್ತಮ ಬ್ಯಾಟಿಂಗ್ ನಿಂದಾಗಿ ಭಾರತ, ವೆಸ್ಟ್ ಇಂಡೀಸ್ ಗೆ 309 ರನ್ ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಮೇಯರ್ಸ್, ಬ್ರೂಕ್ಸ್ ಮತ್ತು ಕಿಂಗ್ಸ್ ಅವರ ಜವಾಬ್ದಾರಿಯುತ ಆಟದಿಂದಾಗಿ ವೆಸ್ಟ್ ಇಂಡೀಸ್ ಗೆಲುವಿನ ಕಡೆ ಮುಖ ಮಾಡಿತ್ತು. ಆದರೆ ಭಾರತದ ಆಟಗಾರರ ಸಂಘಟಿತ ಪ್ರದರ್ಶನದಿಂದಾಗಿ  ಕೊನೆಯ ಕ್ಷಣಗಳಲ್ಲಿ ವೆಸ್ಟ್ ಇಂಡೀಸ್ ಸೋಲಿನ ರುಚಿ ನೋಡಬೇಕಾಯಿತು. 99 ಬಾಲುಗಳಲ್ಲಿ 87 ರನ್ ಗಳಿಸಿದ ಭಾರತ ತಂಡದ ನಾಯಕ ಶಿಖರ್ ಧವನ್ ಪಂದ್ಯ ಪುರುಷ ಎನಿಸಿಕೊಂಡರು.