Shivamogga Airport – Peepal Media

ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಹಿಂದಿ ಹೇರಿಕೆ: ನೆಟ್ಟಿಗರ ಆಕ್ಷೇಪ
ಶಿವಮೊಗ್ಗ,ಅಗಸ್ಟ್.31: ಇಂದು ವಿಮಾನ ಸಂಚಾರ ಸೇವೆಯನ್ನು ಆರಂಭಿಸಿರುವ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೂಚನಾ ಫಲಕದಲ್ಲಿ ಕನ್ನಡವನ್ನು ಕಡೆಗಣಿಸಿ ಹಿಂದಿಯನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಟ್ವೀಟರ್‌ನಲ್ಲಿ ಚರ್ಚೆಯಾಗುತ್ತಿದ್ದು ಜನರು ಅಸಮಾಧನ ತೋರಿಸಿದ್ದಾರೆ. ಈ ಫಲಕದ ಫೋಟೋವನ್ನು ಹಂಚಿ ಹಿಂದಿ ಹೇರಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ in ಕರ್ನಾಟಕ ಎಂಬ ಹ್ಯಾಷ್‌ ಟ್ಯಾಗ್‌ ಬಳಸಿ ಈ ಅಸಮಧಾನವನ್ನು ವ್ಯಕ್ತಪಡಿಸಲಾಗಿದೆ.

“ಇದು ಯಾವುದೋ ಹಿಂದಿ ರಾಜ್ಯವಲ್ಲ ಇದು ಕರ್ನಾಟಕ.. ಇಲ್ಲಿ ಹಿಂದಿ ಅವಶ್ಯಕತೆ ಇಲ್ಲ. ಇದನ್ನು ತೆಗೆಸಿ ಕನ್ನಡದಲ್ಲಿ ಹಾಕಿಸಿ. ಕರ್ನಾಟಕ ಸರ್ಕಾರವೇ ನಿರ್ವಹಿಸಲಿರುವ ನಾಳೆಯಿಂದ ಶಿವಮೊಗ್ಗ – ಬೆಂಗಳೂರು ನಡುವೆ ವಿಮಾನ ಸೇವೆಗಳು ಪ್ರಾರಂಭವಾಗುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಿಂದಿಮಯ.” ಎಂದು ಟ್ವೀಟರ್‌ ಖಾತೆಯಿಂದ #ಹಿಂದಿಹೇರಿಕೆ
ನಲ್ಲಿ ಟ್ವೀಟ್‌ ಮಾಡಲಾಗಿದೆ.

ಮಾನ್ಯ @MBPatil ಅವರೇ ಇದೇನಿದು.
ಇದು ಯಾವುದೋ ಹಿಂದಿ ರಾಜ್ಯವಲ್ಲ ಇದು ಕರ್ನಾಟಕ.. ಇಲ್ಲಿ ಹಿಂದಿ ಅವಶ್ಯಕತೆ ಇಲ್ಲ
ಇದನ್ನು ತೆಗೆಸಿ ಕನ್ನಡದಲ್ಲಿ ಹಾಕಿಸಿ
ಕರ್ನಾಟಕ ಸರ್ಕಾರವೇ ನಿರ್ವಹಿಸಲಿರುವ ನಾಳೆಯಿಂದ ಶಿವಮೊಗ್ಗ – ಬೆಂಗಳೂರು ನಡುವೆ ವಿಮಾನ ಸೇವೆಗಳು ಪ್ರಾರಂಭವಾಗುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಿಂದಿಮಯ.#ಹಿಂದಿಹೇರಿಕೆ pic.twitter.com/7DQwkfcvpw
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) August 30, 2023

ಈ ಟ್ವೀಟ್‌ಗೆ ಸಚಿವ ಬಿ ಎಂ ಪಾಟೀಲ್‌ ಪ್ರತಿಕ್ರಿಯೆ ನೀಡಿದ್ದು “ಇದು ನನ್ನ ಗಮನಕ್ಕೆ ಬಂದಿರಲಿಲ್ಲ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಕುರಿತು ಮಾತನಾಡುವೆ,” ಎಂದು ರೀಟ್ವೀಟ್‌ ಮಾಡಿದ್ದಾರೆ.

ಇದು ನನ್ನ ಗಮನಕ್ಕೆ ಬಂದಿರಲಿಲ್ಲ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಕುರಿತು ಮಾತನಾಡುವೆ.
# ಕನ್ನಡ in ಕರ್ನಾಟಕ https://t.co/PzC2Jx3TLP
— M B Patil (@MBPatil) August 31, 2023

ಬೆಂಗಳೂರು- ಶಿವಮೊಗ್ಗ ನಡುವೆ ವಿಮಾನಯಾನ ಸಂಚಾರ ಆರಂಭ
ಶಿವಮೊಗ್ಗ,ಅಗಸ್ಟ್‌.31: ಶಿವಮೊಗ್ಗ ವಿಮಾನ ನಿಲ್ದಾನ ಕಾರ್ಯಾರಂಭ ಮಾಡಿದ್ದು ತನ್ನ ಮೊದಲ ವಿಮಾನ ಇಂಡಿಗೋವನ್ನು ಬರಮಾಡಿಕೊಂಡಿದೆ. ವಿಮಾನಯಾನ ಸೇವೆಗಳ ಮೊದಲ ಹೆಜ್ಜೆಯಾಗಿ ಇಂಡಿಗೋ ಸಂಸ್ಥೆಯ ವಿಮಾನವು ಗುರುವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.05ಕ್ಕೆ ಮಲೆನಾಡಿನ ಶಿವಮೊಗ್ಗ ವಿಮಾನ ನಿಲ್ದಾಣ ತಲುಪಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ ಇಂಡಿಗೊ ವಿಮಾನದಲ್ಲಿ ಸಚಿವ ಎಂಬಿ ಪಾಟೀಲ್‌ ಜೊತೆಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ, ಶಾಸಕ ಅರಗ ಜ್ಞಾನೇಂದ್ರ , ಬಿ ವೈ ವಿಜಯೇಂದ್ರ ಹಾಗೂ ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ, ಹಾಲಪ್ಪ , ಶ್ರೀಮತಿ ಭಾರತಿಶೆಟ್ಟಿ, ಸೇರಿದಂತೆ ಹಲವರಿಂದ ಮೊದಲ ಪ್ರಯಾಣ ಮಾಡಿದರು.

ಎಲ್ಲಿದೆ ಈ ಏರ್‌ಪೋರ್ಟ್?
ಇದು ರಾಜ್ಯದ ಮಲೆನಾಡು ಪ್ರಥಮ ಪ್ರಪ್ರಥಮ ವಿಮಾನ ನಿಲ್ದಾಣವಾಗಿದ್ದು, ಇದರ ನಿರ್ಮಾಣಕ್ಕೆ 450 ಕೋಟಿ ರುಪಾಯಿ ವಿನಿಯೋಗಿಸಲಾಗಿದೆ. ಶಿವಮೊಗ್ಗದಿಂದ 15 ಕಿ.ಮೀ. ದೂರದಲ್ಲಿರುವ ಸೋಗಾನೆ ಎಂಬಲ್ಲಿ 779 ಎಕರೆ ಜಾಗದಲ್ಲಿ ಏರ್‌ಪೋರ್ಟ್ ನಿರ್ಮಾಣವಾಗಿದೆ.
ಇಲ್ಲಿ ಏರ್‌ ಬಸ್‌ ಮಾದರಿಯ ವಿಮಾನಗಳೂ ಬಂದಿಳಿಯುವ ವ್ಯವಸ್ಥೆ ಮಾಡಲಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಉಪಯೋಗವಾಗಲಿದೆ.
ಯೋಜನೆಯ ಆರಂಭಲ್ಲಿ ಇಲ್ಲಿ ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಈ ವ್ಯವಸ್ಥೆಯನ್ನೂ ಕಲ್ಪಸಲಾಗಿದೆ. 4,340 ಚದರ ಮೀಟರ್‌ ವಿಸ್ತೀರ್ಣದಲ್ಲಿ ಪ್ರಯಾಣಿಕರ ಟರ್ಮಿನಲ್‌ ಹಾಗೂ 3,050 ಮೀಟರ್‌ ಉದ್ದದ ರನ್‌ವೇ ನಿರ್ಮಿಸಲಾಗಿದೆ.

ಬೃಹತ್ ನಗರಗಳಿಗಿದೆ ಇಲ್ಲಿಂದ ಫ್ಲೈಟ್!
ಈಗಾಗಲೇ ಕಾರ್ಯಾರಂಭವಾಗಿರುವ ಈ ವಿಮಾನ ನಿಲ್ದಾನದಿಂದ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಗೋವಾ ಮುಂತಾದ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ಯೋಜನೆಯಿದೆ. ತಕ್ಷಣಕ್ಕೆ ಬೆಂಗಳೂರಿನಲ್ಲಿ ಈ ಸ್ಥಳಗಳಿಗೆ ಕನೆಕ್ಕಿಂಗ್ ವಿಮಾನಗಳು ಇದ್ದು, ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ವಿಸ್ತರಿಸಲು ಈಗಾಗಲೇ ಕರೆಯಲಾಗಿರುವ ಟೆಂಡರ್ ಅಂತಿಮ ಹಂತದಲ್ಲಿದೆ.

ಶಿವಮೊಗ್ಗದಲ್ಲಿ ಇಂದಿನಿಂದ ಲೋಹದ ಹಕ್ಕಿಗಳ ಕಲರವ
ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ರಾಜ್ಯದ 9ನೇ ಏ‌ಪೋರ್ಟ್ ಶಿವಮೊಗ್ಗ ವಿಮಾನ ನಿಲ್ದಾಣ ಗುರುವಾರದಿಂದ ಕಾರ್ಯಾರಂಭ ಮಾಡಲಿದೆ. ಬೆಂಗಳೂರಿನಿಂದ ಆಗಮಿಸುವ ಮೊದಲ ವಿಮಾನ ಸೋಗಾನೆಯಲ್ಲಿನ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಲ್ಯಾಂಡ್ ಆಗಲಿದೆ.

ಇಂಡಿಗೋ ವಿಮಾನಯಾನ ಸಂಸ್ಥೆಯು ಆಗಸ್ಟ್‌ 31ರಿಂದ ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಸೇವೆ ಆರಂಭಿಸಲಿದೆ. ಗುರುವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ 11.05ಕ್ಕೆ ಶಿವಮೊಗ್ಗ ತಲುಪಲಿದೆ. ಈ ಮೂಲಕ ಮಲೆನಾಡಿನಲ್ಲಿ ಲೋಹದ ಹಕ್ಕಿಗಳ ಕಲರವ ಆರಂಭವಾಗಲಿದೆ.

ಬೆಂಗಳೂರಿನಿಂದ ಬೆಳಗ್ಗೆ 9.50ಕ್ಕೆ ಹೊರಡಲಿರುವ ಇಂಡಿಗೋ ವಿಮಾನ
* ಬೆಳಗ್ಗೆ 11.05ಕ್ಕೆ ಶಿವಮೊಗ್ಗದಲ್ಲಿ ಇಳಿ ಯಲಿದೆ ಮೊದಲ ವಾಣಿಜ್ಯ ವಿಮಾನ
* ಬೆಳಗ್ಗೆ 11.25ಕ್ಕೆ ಶಿವಮೊಗ್ಗದಿಂದ ಬೆಂಗಳೂರಿನತ್ತ ಪ್ರಯಾಣ ಆರಂಭ
* ಬೆಂಗಳೂರಿನಿಂದ ಬರುವ ವಿಮಾನದಲ್ಲಿ ಬಿಎಸ್‌ವೈ, ಎಂಬಿಪಾ ಪ್ರಯಾಣ

ಮೊದಲ ವಿಮಾನದಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ‌ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನಕ್ಕೆ ವಾಟರ್‍‌ ಸೆಲ್ಯೂಟ್‌ ನೀಡಿ ಬರಮಾಡಿಕೊಳ್ಳಲಾಗುತ್ತದೆ.