Shivamogga riots – Peepal Media

ಶಿವಮೊಗ್ಗದಲ್ಲಿ ಫೇಕ್ ನ್ಯೂಸ್ ಹಾವಳಿ: ಎಸ್ ಪಿ ಖಡಕ್ ಎಚ್ಚರಿಕೆ
ಶಿವಮೊಗ್ಗದಲ್ಲಿ ಗಣಪತಿ ಮೆರವಣಿಗೆ ಮತ್ತು ಈದ್ ಮಿಲಾದ್ ಹಬ್ಬದ ನಂತರ ಹೊತ್ತಿಕೊಂಡ ಕೋಮು ಗಲಭೆ ಮತ್ತು ಗಲಭೆಯ ನಂತರ ಶುರುವಾದ ಕೆಲವು ಸುಳ್ಳು ಸುದ್ದಿಗಳ ವಿಚಾರವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಶಿವಮೊಗ್ಗದ ರಾಗಿಗುಡ್ಡದಲ್ಲಿ ಗಲಭೆ ಹಿನ್ನೆಲೆಯಲ್ಲಿ ದಿನಕ್ಕೊಂದು ಬೆಳವಣಿಗೆ ಸಧ್ಯ ಪೊಲೀಸರ ನಿದ್ದೆಗೆಡಿಸಿದೆ. ಸ್ಥಳೀಯ ಶಾಂತಿಪ್ರಿಯ ಮನಸ್ಸುಗಳಿಗೂ ಇದೆಲ್ಲಾ ಕೊನೆಯಾಗುವುದು ಯಾವಾಗ ಎಂಬ ದೊಡ್ಡ ತಲೆನೋವು ಶುರುವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗುತ್ತಿರುವ ದಿನಕ್ಕೊಂದು ಸುಳ್ಳು ಸುದ್ದಿಗಳು ಗಲಭೆ ಹೆಚ್ಚುವಂತೆ ಮಾಡುತ್ತಿದೆ. ಇದರ ಜೊತೆಗೆ ಶಿವಮೊಗ್ಗದ ಆಚೆಗೂ ಸಮುದಾಯಗಳ ನಡುವೆ ಕಂದಕ ಹೆಚ್ಚುವಂತೆ ಮಾಡುತ್ತಿದೆ.

ಸಧ್ಯ ಎರಡೂ ಗುಂಪಿನಲ್ಲಿ ಬರುವ ಮೂಲಭೂತವಾದಿ ನಿಲುವಿನ ಜನರು ಗಲಭೆ ತಣ್ಣಗಾಗಲು ಪ್ರಯತ್ನಿಸದೇ ಬೆಂಕಿಗೆ ತುಪ್ಪ ಸುರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದರ ಜೊತೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿಂದಲೋ ತಂದ ಸುದ್ದಿಗಳನ್ನು ಇದು ಶಿವಮೊಗ್ಗದ್ದೇ ಎಂದು ಬಿಂಬಿಸುವ ಕೆಲಸಕ್ಕೆ ಮುಂದಾದವರಿಗೆ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಐದು ದಿನಗಳ ಹಿಂದೆಯೇ ಅಕ್ಟೋಬರ್ 3 ಕ್ಕೆ ಈ ಒಂದು ಎಚ್ಚರಿಕೆ ಸಂದೇಶ ರವಾನಿಸಿದ್ದ ಶಿವಮೊಗ್ಗ ಎಸ್ಪಿ, ಮತ್ತೊಂದು ಸುಳ್ಳು ಸುದ್ದಿ ವಾಟ್ಸಾಪ್ ಮತ್ತು ಫೇಸ್ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಆ ವಿಡಿಯೋ ಸ್ಪಷ್ಟವಾಗಿ ಸುಳ್ಳು ಸುದ್ದಿ, ಇದನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶಿವಮೊಗ್ಗ ರಾಗಿಗುಡ್ಡದಲ್ಲಿ ಪೊಲೀಸ್ ಎನ್ ಕೌಂಟರ್ ನಿಂದ ಮುಸ್ಲಿಂ ಯುವಕನ ಮೃತ್ಯು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ರೀತಿ ಘಟನೆಯು ನಡೆದಿಲ್ಲ. ಸದರಿ ಸುಳ್ಳು ಸುದ್ಧಿಯನ್ನು ಹರಿಬಿಟ್ಟವರ ವಿರುದ್ಧ ಸಿಇಎನ್ ಠಾಣೆ ಗುನ್ನೆ ಸಂಖ್ಯೆ 98/2023 ರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದೆ @DgpKarnataka pic.twitter.com/40VZSIzfAm
— SP Shivamogga (@Shivamogga_SP) October 3, 2023

ಈ ವಿಡಿಯೋವು ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸದರಿ ವಿಡಿಯೋವು ಶಿವಮೊಗ್ಗ ನಗರದ ರಾಗಿಗುಡ್ಡದ ಘಟನೆಗೆ ಸಂಬಂಧಿಸಿದಾಗಿರುವುದಿಲ್ಲ. ನೈಜ ಸುದ್ದಿಗಳನ್ನು ತಿರುಚಿ  ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಿವುದು ಕಾನೂನು ರೀತ್ಯಾ ಶಿಕ್ಷಾರ್ಹ ಅಪರಾಧವಾಗಿರುತ್ತದೆ. @DgpKarnataka @kspfactcheck pic.twitter.com/XK7iaco7Co
— SP Shivamogga (@Shivamogga_SP) October 4, 2023

ಇನ್ನೊಂದು ಫೋಟೊ ಹಂಚಿಕೊಳ್ಳುವ ಮೂಲಕ ಈ ವಿಡಿಯೋ ಸಹ ಸುಳ್ಳು ಸುದ್ದಿಯಾಗಿದ್ದು, ಅದೂ ಸಹ ಶಿವಮೊಗ್ಗಕ್ಕೆ ಸಂಬಂಧಿಸಿದ್ದಾಗಿರದೇ, ದಿಃ 3-9-2023ರಂದು ಚಿಕ್ಕಮಗಳೂರಿನ ಗೌರಿಕಾಲುವೆ ಬಡಾವಣೆಯಲ್ಲಿ ಕ್ರಿಕೇಟ್ ಆಡುವಾಗ ನಡೆದ ಘಟನೆಯಾಗಿದ್ದು ಈ ಬಗ್ಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದರ ಜೊತೆಗೆ ಪೂರ್ವಾಗ್ರಹ ಪೀಡಿತ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನೈಜ ಸುದ್ದಿಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಮತ್ತು ಈ ಸುದ್ಧಿಯನ್ನು ತಿರುಚಿ  ವೈರಲ್ ಮಾಡಿದವರ ವಿರುದ್ಧ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 354/2023 ರೀತ್ಯಾ ಪ್ರಕರಣ ದಾಖಲಿಸಿರುತ್ತದೆ. @DgpKarnataka @KarnatakaCops @igperdvg
— SP Shivamogga (@Shivamogga_SP) October 8, 2023

ಶಿವಮೊಗ್ಗ | ಯಾವುದೇ ಏನ್‌ಕೌಂಟರ್‌ ನಡೆದಿಲ್ಲ, ಒಮ್ನಿ ಕಾರಿನಲ್ಲಿ ಬಂದಿದ್ದವರರಲ್ಲಿ ಹಿಂದೂ, ಮುಸ್ಲಿಮರಿಬ್ಬರೂ ಇದ್ದರು: ಎಸ್‌ಪಿ
ಶಿವಮೊಗ್ಗ: ಶಿವಮೊಗ್ಗ ಗಲಭೆಯ ವೇಳೆ ಒಮ್ನಿ ಕಾರಿನಲ್ಲಿ ಬಂದು ಕಲ್ಲು ತೂರಿದ್ದಾರೆನ್ನುವ ವದಂತಿಗಳನ್ನು ಶಿವಮೊಗ್ಗ ಎಸ್ಪಿ ಜಿ ಕೆ ಮಿಥುನ್‌ ಕುಮಾರ್‌ ಅವರು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು ಕಾರಿನಲ್ಲಿ ಬಂದವರು ದಾವಣಗೆರೆ ಜಿಲ್ಲೆಯ ನ್ಯಾಮತಿಯವರಾಗಿದ್ದು, ಇತರೆಡೆ ಮೆರವಣಿಗೆಗಳನ್ನು ನೋಡಿ ರಾಗಿ ಗುಡ್ಡಕ್ಕೂ ಬಂದಿದ್ದರು ಎಂದು ತಿಳಿಸಿದ್ದಾರೆ.

ಅವರು ಗಲಭೆ ಆರಂಭಗೊಂಡಿದ್ದನ್ನು ನೋಡಿ ನಂತರ ತಮ್ಮ ಊರಿಗೆ ಮರಳಿದ್ದಾರೆ. ಈ ದೃಶ್ಯಗಳು ಸಿಸಿ ಕೆಮೆರಾಗಳಲ್ಲಿ ದಾಖಲಾಗಿದ್ದು, ವಿವರಗಳನ್ನು ನೋಡಲಾಗಿದೆ ಎಂದು ಅವರು ತಿಳಿಸಿದರು. ಸಾರ್ವಜನಿಕರು ದಯವಿಟ್ಟು ಇಂತಹ ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ರಾಜಕಾರಣಿಗಳು ಪತ್ರಿಕಾಗೋಷ್ಟಿ ನಡೆಸಿ ಹೊರಗಿನಿಂದ ಬಂದವರು ಶಿವಮೊಗ್ಗದಲ್ಲಿ ಮೆರವಣಿಗೆಯಲ್ಲಿ ಕಲ್ಲು ತೂರಿದ್ದಾರೆ ಎಂದು ಆರೋಪ ಹೊರಿಸಿದ್ದರು.

ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಮ್ ಯುವಕ ಸತ್ತಿದ್ದಾನೆ ಎನ್ನುವುದು ಕೂಡಾ ಸು‍ಳ್ಳು

ಎನ್‌ ಕೌಂಟರಿನಲ್ಲಿ ಮುಸ್ಲಿಂ ಯುವಕನೊಬ್ಬ ಸತ್ತಿದ್ದಾನೆ ಎನ್ನುವ ವದಂತಿ ಹಬ್ಬಿಸಲಾಗಿದ್ದು ಅದೂ ಕೂಡಾ ಸುಳ್ಳು ಎಂದು ಎಸ್ಪಿ ತಿಳಿಸಿದ್ದಾರೆ. ಮೆರವಣಿಗೆ ಸಮಯದಲ್ಲಿ ಕಲ್ಲು ತೂರಾಟದ ಬಳಿಕ ನಡೆದ ಬೆಳವಣಿಗೆಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಮ್ ಯುವಕ ಮೃತಪಟ್ಟಿದ್ದಾನೆ ಎಂದು ಹೇಳುವ ಧ್ವನಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಕುರಿತು ಸ್ಪಷ್ಟನೆ ನೀಡಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು ಯಾರೂ ಇಂತಹ ಸುದ್ದಿಗಳಿಗೆ ಕಿವಿಯಾಗಬಾರದು ಎಂದು ಮನವಿ ಮಾಡಿಕೊಂಡರು.

ಈ ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು, FIR ಕೂಡಾ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಯಾವುದೇ ಧಗಧಗ ಕೊತಕೊತ ಇಲ್ಲ : ಎಸ್ಪಿ ಸ್ಪಷ್ಟನೆ
ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಗಲಭೆ ಸಂಪೂರ್ಣವಾಗಿ ತಣ್ಣಗಾಗಿ ನಮ್ಮ ಹಿಡಿತಕ್ಕೆ ಬಂದಿದೆ. ಶಿವಮೊಗ್ಗದಲ್ಲಿ ಯಾವುದೇ ಕೊತಕೊತ, ಧಗಧಗ ಇಲ್ಲ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಗಲಭೆ ಸಂಬಂಧ ಈವರೆಗೆ 60 ಮಂದಿಯನ್ನು ಬಂಧಿಸಲಾಗಿದ್ದು, 24 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಘಟನೆಯಲ್ಲಿ ಒಂದು ಕಾರು, ಆಟೋ, ಎರಡು ಬೈಕುಗಳಿಗೆ ಹಾನಿಯಾಗಿದೆ. 7 ಮನೆಗಳ ಮೇಲೆ ಕಲ್ಲು ತೂರಾಟವಾಗಿತ್ತು. ಅರ್ಧ ಗಂಟೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಗಲಭೆ ಸಂಬಂಧ ರಾಗಿಗುಡ್ಡ ಪ್ರದೇಶದಲ್ಲಿ ಅಷ್ಟೆ ಕಲ್ಲುತೂರಾಟ ನಡೆದಿದೆ. ಶಿವಮೊಗ್ಗ ನಗರದ ಬೇರೆ ಯಾವ ಪ್ರದೇಶ ಕೂಡಾ ಗಲಭೆ ಪೀಡಿತವಾಗಿಲ್ಲ. ಗಲಭೆ ನಡೆದು ಕೇವಲ ಅರ್ಧ ಗಂಟೆಗಳಲ್ಲಿ ಪರಿಸ್ಥಿತಿ ಹತೋಟಿಗೆ ತರಲಾಗಿದೆ. ಮಾಧ್ಯಮಗಳಲ್ಲಿ ಬಂದಂತೆ ಶಿವಮೊಗ್ಗದಲ್ಲಿ ಯಾವುದೇ ‘ಕೊತಕೊತ, ಧಗಧಗ’ ಇಲ್ಲ ಎಂದು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಸೌಹಾರ್ದ ಮನಸ್ಸುಗಳ ಮನವಿ
ಶಿವಮೊಗ್ಗದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ, ಯಾವುದೇ ಅಹಿತಕರ ಘಟನೆ ನಡೆಯಲು ಆಸ್ಪದ ಕೊಡದಂತೆ ನಾಗರೀಕರು ಸಹಕರಿಸಬೇಕು ಎಂದು ಸೌಹಾರ್ದ ಹಬ್ಬ, ಶಾಂತಿಯ ನಡುಗೆ ಸಮಿತಿ ಕರೆ ನೀಡಿದೆ.

“ಶಿವಮೊಗ್ಗ ಶಾಂತಿ ಮತ್ತು ಸೌರ್ಹಾದತೆಗೆ ಹೆಸರಾದ ಊರು, ಗಣಪತಿ ಮೆರವಣಿಗೆ ಈದ್ ಮಿಲಾದ್ ಮೆರವಣಿಗೆ ಒಂದೇ ದಿನಕ್ಕೆ ಬಂದಂತಹ ಸಂದರ್ಭದಲ್ಲಿ ಸೌಹಾರ್ದದ ದೃಷ್ಟಿಯಿಂದ ದಿನ ಬದಲಿಸಿಕೊಂಡು ಮೆರವಣಿಗೆ ಮಾಡಿ ಸೌಹಾರ್ದವನ್ನು ಸಾರಿರುವುದು, ಶಿವಮೊಗ್ಗದ ಗೌರವವನ್ನು ಹೆಚ್ಚಿಸಿದ್ದು, ಇದು ಹೊಸ ಬೆಳವಣಿಗೆ. ಇದಕ್ಕೆ ಸಹಕರಿಸಿದ್ದು ಹಿಂದೂ ಮಹಾಸಭಾ ಜಾಮೀಯ ಮಸೀದಿ ಮತ್ತು ಮುಸ್ಲಿಂ ಸಂಘಟನೆ ಹಾಗೂ ಓಂ ಗಣಪತಿ ಕಮೀಟಿಗಳು, ಜಿಲ್ಲಾಡಾಳಿತ ಅದರಲ್ಲು ಮುಖ್ಯವಾಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳ ಪಾತ್ರ ಮಹತ್ವದ್ದಾಗಿತ್ತು”.

ಶಿವಮೊಗ್ಗ ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲೊಂದು, ಶಿವಮೊಗ್ಗ ಅತ್ಯಂತ ಸೂಕ್ಷ್ಮವಾದ ಪ್ರದೇಶವಾಗಿದ್ದು, ಇಲ್ಲಿ ಚಿಕ್ಕ ಘಟನೆಗಳು ದೊಡ್ಡ ಸುದ್ದಿಯಾಗುತ್ತವೆ. ಯಾರೋ ಕೆಲವು ಕಿಡಿಗೇಡಿಗಳು ಮಾಡುವ ತಪ್ಪುಗಳು ಇಡೀ ನಗರದ ಜನರ ನೆಮ್ಮದಿಯನ್ನು, ವ್ಯಾಪಾರ ವಹಿವಾಟನ್ನು, ಮಕ್ಕಳ ಶಿಕ್ಷಣವನ್ನು ಹಾಳುಮಾಡುತ್ತದೆ. ಆ ದಿನ ದುಡಿಮೆ ಮಾಡಿ ಆ ದಿನ ಜೀವನ ನಡೆಸುವ ಬೀದಿ ಬದಿ ವ್ಯಪಾರಿಗಳು, ಬದುಕು ನಡೆಸುವುದೇ ಕಷ್ಟಕರವಾಗುತ್ತಿದೆ. ನಗರ ಶಾಂತವಾಗಿದ್ದರೆ ಎಲ್ಲರೂ ನೆಮ್ಮದಿಯಿಂದ ಬದುಕಬಹುದು.

ಸೌಹಾರ್ದವೇ ಹಬ್ಬ ನಾಡಿಗೆಮೀತಿಯು ಶಿವಮೊಗ್ಗ ನಗರದ ಶಾಂತಿ ಬಯಸುತ್ತದೆ, ಈ ಮೂಲಕ ನಗರದ ಜನರಲ್ಲಿ ಕೇಳಿಕೊಳ್ಳುವುದೇನೆಂದರೆ, ಯಾವುದೇ ಉಹಾಪೋಹ ಕಿವಿಗೊಡದೆ ನಗರದ ಶಾಂತಿ ಸುವ್ಯವಸ್ಥೆಯ ಕಾರ್ಯದಲ್ಲಿ ನಾವೆಲ್ಲರು ಶಾಂತಿಯುತವಾಗಿ ಶಿವಮೊಗ್ಗ ನಗರವನ್ನು ಶಾಂತಿಯ ತಾಣವಾಗಿ ಮಾಡೋಣ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಸಾಮಾಜಿಕ ತಾಣಗಳು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳು ಸತ್ಯವಾಗಿರುವುದಿಲ್ಲ. ಇಂತಹ ಸಂದರ್ಭವನ್ನು ಬಂಡವಾಳ ಮಾಡಿಕೊಂಡ ರಾಜಕೀಯ ಮಾಡುವುದು ಹೊಸದೇನು ಅಲ್ಲ. ಇಲ್ಲ ನಗರದ ನಾಗರೀಕರು ಅತ್ಯಂತ ಪ್ರಜ್ಞಾವಂತರಿದ್ದು, ಈ ತರದ ರಾಜಕೀಯ ಪಿತೂರಿಗಳಿಗೆ ಸುಳ್ಳು ಊಹಾಪೋಹಕ್ಕೆ ಕಿವಿಗೊಡದೆ, ಶಾಂತಿ ಕಾಪಾಡಲು ಕೋರುತ್ತೇವೆ ಎಂದು ಸಮಿತಿ ಕೋರಿದೆ.

ಜೊತೆಗೆ ಇಂದು ಮಹಾತ್ಮ ಗಾಂದಿಯವರ ಜಯಂತಿ ಅಂಗವಾಗಿ ಎಲ್ಲಾ ಧರ್ಮದ ಧರ್ಮ ಗುರುಗಳು ಒಂದಾಗಿ ಶಿವಮೊಗ್ಗ ಗಾಂಧಿ ಪಾರ್ಕಿನ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶಿವಮೊಗ್ಗದಲ್ಲಿ ಶಾಂತಿ ನೆಲೆಸುವಂತೆ ಶಾಂತಿ ಸಂದೇಶ ಸಾರಲು ಸೌಹಾರ್ದ ಮನಸ್ಸುಗಳು ಕರೆ ನೀಡಿವೆ. ಈ ಕಾರ್ಯಕ್ರಮಕ್ಕೆ ವಿನಯ್ ಗುರೂಜಿ ಗೌರಿಗದ್ದೆ, ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಗಳು ಬಸವಕೇಂದ್ರ ಶಿವಮೊಗ್ಗ, ಮೌಲಾನಿ ಅಬ್ದುಲ್ ಲತಿಪ್ ಸಾದಿ ಶಿವಮೊಗ್ಗ, ಪಾದರ್ ಕ್ಲಿಪ್ ಪೊರ್ಡ್ ರೋಷನ್ ಪಿಂಟೊ SMSS ಶಿವಮೊಗ್ಗ, ಮತ್ತು ಸೌರ್ಹಾದ ಸಮೀತಿಯವರು ಭಾಗವಹಿಸುತ್ತಾರೆ ಎಂದು ಸಮಿತಿಯ ಪರವಾಗಿ ಕೆ.ಪಿ.ಶ್ರೀಪಾಲ ಮತ್ತು ಕಿರಣ್ ಕುಮಾರ್  ಮನವಿ ಮಾಡಿದ್ದಾರೆ.