shivamogga – Peepal Media

ಭದ್ರಾವತಿ: ಶಾಸಕನ ಪುತ್ರನ ಕೊಲೆಗೆ ಜೈಲಿನಿಂದಲೇ ಸಂಚು?
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ ಅವರ ಪುತ್ರ ಬಸವೇಶ್‌ ಅವರ ಹತ್ಯೆಗೆ ಸ್ಕೆಚ್ ರೂಪಿಸಲಾಗಿದೆ ಎಂಬ ಸುದ್ದಿ ಬೆಳಕಿಗೆ ಬಂದಿದೆ. ಆರೋಪಿ ಜೈಲಿನಿಂದಲೇ ಹತ್ಯೆಗೆ ಸ್ಕೆಚ್ ಸಂಚು ರೂಪಿಸಿದ್ದ ಎನ್ನಲಾಗಿದೆ.

ಡಿಚ್ಚಿ ಮುಬಾರಕ್ ಎಂಬ ಜೈಲಿನಲ್ಲಿರುವ ಆರೋಪಿ ಯುವಕ ಬಸವೇಶ ಅವರ ಹತ್ಯೆಗೆ ಸಂಚು ರೂಪಿಸಿದ್ದ. ಆರೋಪಿ ಡಿಚ್ಚಿ ಮುಬಾರಕ್‌  ಈಗಾಗಲೇ ಪ್ರಕರಣವೊಂದರಲ್ಲಿ‌ ಜೈಲಿನಲ್ಲಿದ್ದಾನೆ. ಆರೋಪಿ ಮುಬಾರಕ್ ಎಂಬಾತನಿಗೆ ಕೊಲೆ ಮಾಡುವಂತೆ ಸುಪಾರಿ ನೀಡಿದ್ದ.  ಭದ್ರಾವತಿ ಗಾಂಧಿ ಸರ್ಕಲ್‌ನಲ್ಲಿ ಬಸವೇಶನನ್ನು ಕೊಲೆ ಮಾಡುವಂತೆ ಡಿಚ್ಚಿ ಮುಬಾರಕ್ ಸೂಚಿಸಿದ್ದ ಎಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಗುತ್ತಿಗೆದಾರ ಸುನೀಲ್ ಎಂಬಾತನ  ಹೆಸರನ್ನು ಸಹ ಬಗ್ಗೆ ಆರೋಪಿ ಮುಬಾರಕ್ ಬಾಯಿ ಬಿಟ್ಟಿದ್ದಾನೆ. ಕಾರು ಹಾಗೂ ನಾಲ್ಕು ಮಂದಿ ಹುಡುಗರನ್ನು ಗ್ಯಾಂಗ್‌ ಮೂಲಕ ಕೊಲೆಗೆ ಸ್ಕೆಜಚ್‌ ಹಾಕಲಾಗಿತ್ತು ಎನ್ನಲಾಗಿದೆ.

ಘಟನೆ ಸಂಬಂಧ ಮುಬಾರಕ್ ಸೇರಿದಂತೆ ನಾಲ್ವರ ವಿರುದ್ಧ ಭದ್ರಾವತಿ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಧ್ಯ ಶಾಸಕ ಪುತ್ರ ಬಸವೇಶ್‌ ಅವರಿಗೆ ಪೊಲೀಸ್‌ ರಕ್ಷಣೆ ಒದಗಿಸಲಾಗಿದೆ.

ಈಶ್ವರಪ್ಪ ಪುತ್ರ ಕಾಂತೇಶ್ ಗೂ ತಟ್ಟಿದ ಸಿಡಿ ಬಿಸಿ : ಕೋರ್ಟ್ ನಿಂದ ನಿರ್ಬಂಧಕಾಜ್ಞೆ ಜಾರಿ
ಹಾಸನದಲ್ಲಿ ಪ್ರಜ್ವಲ್ ರೇವಣ್ಣನ ಅಶ್ಲೀಲ ಪೆನ್ ಡ್ರೈವ್ ಪ್ರಕರಣದ ನಂತರ ಈಗ ಶಿವಮೊಗ್ಗದಲ್ಲಿ ಈಶ್ವರಪ್ಪ ಪುತ್ರ ಕಾಂತೇಶ್ ಗೂ ಅದರ ಬಿಸಿ ಮುಟ್ಟಿದ್ದು, ತನ್ನ ವಿರುದ್ಧವಾಗಿ ಯಾವುದೇ ಮಾನಹಾನಿಕರ ದೃಶ್ಯ ಪ್ರಸಾರ ಮಾಡುವಂತಿಲ್ಲ ಎಂದು ಮಾಧ್ಯಮಗಳಿಗೆ ಕೋರ್ಟ್ ನಿಂದ ನಿರ್ಬಂಧಕಾಜ್ಞೆ ಜಾರಿ ಮಾಡಿಸಿದ್ದಾರೆ.

ಈಶ್ವರಪ್ಪ ಪುತ್ರ ಕಾಂತೇಶ್ ಅವರು ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಹೈಕಮಾಂಡ್​ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಆಕ್ರೋಶಗೊಂಡಿರುವ ಕೆಎಸ್ ಈಶ್ವರಪ್ಪ ಯಡಿಯೂರಪ್ಪ ಹಾಗೂ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಬೇಕೆಂದು ಶಿವಮೊಗ್ಗದಲ್ಲಿ ಬಿಎಸ್​ವೈ ಪುತ್ರ ರಾಘವೇಂದ್ರ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ.

ಕಾಂತೇಶ್ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ರಾಜಕಾರಣಿಯಾಗಿದ್ದು, ತನ್ನ ತಂದೆ ಈಶ್ವರಪ್ಪನವರ ಬಹುತೇಕ ರಾಜಕೀಯ ಚಟುವಟಿಕೆಗಳಲ್ಲಿ ತನ್ನ ಪಾತ್ರ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಶಿವಮೊಗ್ಗ ಕ್ಷೇತ್ರದಲ್ಲಿ ಈಶ್ವರಪ್ಪನವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಕಾಂತೇಶ್ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲೇ ಸ್ಪರ್ಧೆಯ ಆಕಾಂಕ್ಷಿಗಳ ಸಾಲಿನಲ್ಲಿದ್ದರು.

ಸಧ್ಯ ಸಿಡಿ ಬಿಸಿ ಅವರಿಗೂ ತಟ್ಟಿದ್ದು, ಕೋರ್ಟ್ ನಿಂದ ತಂದ ನಿರ್ಬಂಧಕಾಜ್ಞೆ ನಂತರ ಶಿವಮೊಗ್ಗ ಭಾಗದಲ್ಲಿ ಕಾಂತೇಶ್ ಬಗ್ಗೆ ಗುಸುಗುಸು ಮಾತುಗಳು ಶುರುವಾಗಿವೆ. ಈಗಾಗಲೇ ತನ್ನ ತಂದೆಯ ಲೋಕಸಭಾ ಚುನಾವಣೆ ಸ್ಪರ್ಧೆಯ ಗಡಿಬಿಡಿಯಲ್ಲೇ ಇರುವಾಗಲೇ ಕಾಂತೇಶ್ ಸಿಡಿ ಭಯಕ್ಕೆ ಹೆದರಿ ನಿರ್ಬಂಧಕಾಜ್ಞೆ ತಂದಿರುವುದು ಈಶ್ವರಪ್ಪ ಅವರ ಸ್ಪರ್ಧೆಗೆ ಎಷ್ಟು ಮುಳುವಾಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.

ಈಶ್ವರಪ್ಪ ಮನವೊಲಿಕೆಗೆ ಇಂದು ಕೊನೆಯ ಅವಕಾಶ : ಮೋದಿ ಸಭೆಯಲ್ಲಿ ವೇದಿಕೆ ಏರ್ತಾರಾ ಕೆ.ಎಸ್.ಈ?
ದೇಶಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯ ನಂತರ ಈಗ ರಾಜ್ಯಕ್ಕೆ ಚುನಾವಣಾ ಪ್ರಚಾರದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಇಂದು ಶಿವಮೊಗ್ಗದಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ನರೇಂದ್ರ ಮೋದಿ ಇರುವ ಸಭೆಯಲ್ಲಿ ಈಶ್ವರಪ್ಪ ಭಾಗಿಯಾಗಲಿದ್ದಾರಾ ಎಂಬ ಕುತೂಹಲ ಮೂಡಿಸಿದೆ.

ಇಂದಿನ ಶಿವಮೊಗ್ಗ ಸಮಾವೇಶದಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉಡುಪಿ ಮತ್ತು ಚಿಕ್ಕಮಗಳೂರಿನ ಅಭ್ಯರ್ಥಿಗಳು ವೇದಿಕೆ ಮೇಲೆ ಇರಲಿದ್ದಾರೆ. ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ, ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ, ದಾವಣಗೆರೆಯ ಸಂಸದ ಸಿದ್ದೇಶ್ವರ್, ಗಾಯತ್ರಿ ಸಿದ್ದೇಶ್ವರ್, ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ನಾಯಕ ಕೋಟ ಶ್ರೀನಿವಾಸ ಪೂಜಾರಿ ವೇದಿಕೆ ಮೇಲೆ ಇರುತ್ತಾರೆ. ಮಂಗಳೂರಿನ ಅಭ್ಯರ್ಥಿ ಬೃಜೇಶ್ ಚೌಟ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಅರಗ ಜ್ಞಾನೇಂದ್ರ, ಸಿ.ಟಿ.ರವಿ, ಮಾಜಿ- ಹಾಲಿ ಶಾಸಕರು ವೇದಿಕೆಯಲ್ಲಿ ಇರಲಿದ್ದಾರೆ ಎಂದು ರವಿಕುಮಾರ್ ಹೇಳಿದರೂ ಎಲ್ಲಿಯೂ ಸಹ ಈಶ್ವರಪ್ಪ ಅವರ ಪ್ರಸ್ತಾಪ ಮಾಡದೇ ಇರುವುದು ಕುತೂಹಲ ಮೂಡಿಸಿದೆ.

ಇನ್ನು ಯಡಿಯೂರಪ್ಪ ಬಣದ ದೊಡ್ಡ ವಿರೋಧಿಯಾಗಿರುವ ಈಶ್ವರಪ್ಪ ಇಂದಿನ ಸಮಾವೇಶದಲ್ಲಿ ಸ್ವಯಂಪ್ರೇರಿತರಾಗಿ ಭಾಗಿಯಾಗುವರೇ ಎಂಬ ಪ್ರಶ್ನೆಯೂ ಮೂಡಿದೆ. ಯಾಕೆಂದರೆ ಯಡಿಯೂರಪ್ಪ ವಿರೋಧಿ ಆಗಿರುವ ಈಶ್ವರಪ್ಪ, ಬಿಜೆಪಿ ಪಕ್ಷ ಮತ್ತು ನರೇಂದ್ರ ಮೋದಿಯವರ ವಿಚಾರದಲ್ಲಿ ತನ್ನ ಪ್ರಾಮಾಣಿಕತೆ ಉಳಿಸಿಕೊಂಡ ಬಗ್ಗೆ ಯಾವಾಗಲೂ ಹೇಳಿಕೊಂಡು ಬಂದಿದ್ದಾರೆ.

ಆದರೆ ಈ ಸಮಾವೇಶ ಬಿಜೆಪಿ ಅಧಿಕೃತ ಅಭ್ಯರ್ಥಿಗಳ ಪರ ಪ್ರಚಾರದ ಕಾರ್ಯಕ್ರಮ ಆಗಿರುವ ಹಿನ್ನೆಲೆಯಲ್ಲಿ ಈಶ್ವರಪ್ಪ ಹಾಜರಾತಿ ಕಷ್ಟ ಎಂದೂ ಊಹಿಸಲಾಗಿದೆ.

ಅಷ್ಟೆ ಅಲ್ಲದೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹ ಭಾಗಿಯಾಗುವ ಹಿನ್ನೆಲೆಯಲ್ಲಿ ವೇದಿಕೆಯ ಮೇಲೇ ತನ್ನ ಮನವೊಲಿಸಬಹುದು ಎಂಬುದು ಈಶ್ವರಪ್ಪ ಲೆಕ್ಕಾಚಾರ. ಈ ಹಿಂದೆಯೂ ಶಾಸಕ ಸ್ಥಾನ ಕೈ ತಪ್ಪಿದಾಗಲೂ ನರೇಂದ್ರ ಮೋದಿ ಕರೆ ಮಾಡಿದ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ನರೇಂದ್ರ ಮೋದಿಯವರೇ ಕರೆ ಮಾಡಿ ನಿಮ್ಮ ತ್ಯಾಗ ನಮ್ಮ ಮನದಲ್ಲಿ ಇರಲಿದೆ ಎಂದು ಹೇಳಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಹೀಗಾಗಿ ಈಶ್ವರಪ್ಪ ಸಮಾವೇಶದ ವೇದಿಕೆ ಏರುವುದು ಕಷ್ಟ ಎನ್ನಲಾಗಿದೆ.

ಈಗಾಗಲೇ ಬಿಜೆಪಿ ಪಕ್ಷದಿಂದ ಅದರಲ್ಲೂ ಯಡಿಯೂರಪ್ಪ ಬಣದಿಂದ ಮೇಲಿಂದ ಮೇಲೆ ಆಘಾತ ಅನುಭವಿಸುತ್ತಿರುವ ಈಶ್ವರಪ್ಪ ಈ ಸಮಾವೇಶದಿಂದ ದೂರವೇ ಉಳಿಯುವ ಸಾಧ್ಯತೆ ಎದ್ದು ಕಾಣುತ್ತಿದೆ. ಒಟ್ಟಾರೆಯಾಗಿ ಇಂದಿನ ಸಮಾವೇಶದಲ್ಲಿ ಮುಂದಿನ ಚುನಾವಣೆಯ ಭವಿಷ್ಯ ಕಾಣಲಿದೆ ಎಂಬುದಂತೂ ಸ್ಪಷ್ಟವಾಗಿದೆ.

ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಯಾಕೆ? ಪತ್ರಿಕಾಗೋಷ್ಠಿಯ ಫುಲ್ ಡೀಟೇಲ್ಸ್ ಇಲ್ಲಿದೆ
ಶಿವಮೊಗ್ಗದಲ್ಲಿ ವಂಶಪಾರಂಪರ್ಯ ರಾಜಕಾರಣ ಹಾಗೂ ಏಕವ್ಯಕ್ತಿ ಚಕ್ರಾಧಿಪತ್ಯದ ವಿರುದ್ಧ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ತಿರುಗಿ ಬಿದ್ದಿದ್ದಾರೆ. ‘ಹೆಚ್ಚೆಂದರೆ ನನ್ನನ್ನು ಪಕ್ಷ ಉಚ್ಚಾಟಿಸಬಹುದು, ಆದರೆ ನಾನು ಗೆದ್ದು ತೋರಿಸಿದ ಮೇಲೆ ಮತ್ತೆ ಬಿಜೆಪಿ ಬಾಗಿಲು ತೆರೆಯುತ್ತೆ. ನಾನು ಎಲ್ಲದಕ್ಕೂ ಸಿದ್ದನಾಗಿಯೇ ನಿಂತಿದ್ದೇನೆ’ ಎಂದು ಈಶ್ವರಪ್ಪ ಗುಡುಗಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಘೋಷಣೆ ಮಾಡಿದ್ದಾರೆ. ಇದಕ್ಕೆ ಸರಿಯಾಗಿ ಹಿಂದೆ ತನ್ನ ಶಾಸಕ ಸ್ಥಾನ ಕೈತಪ್ಪಿದ್ದಕ್ಕೆ ಪಕ್ಷದ ವರಿಷ್ಠರು ನೀಡಿದ ಭರವಸೆಯನ್ನು ಮತ್ತೆ ನೆನಪಿಸಿಕೊಂಡು, ಶಿವಮೊಗ್ಗ ಅಥವಾ ಹಾವೇರಿ ಲೋಕಸಭಾ ಕ್ಷೇತ್ರ ಬಿಟ್ಟುಕೊಡುವ ಭರವಸೆ ಈಗ ಎಲ್ಲಿ ಹೋಯಿತು ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ವಂಶ ಪಾರಂಪರ್ಯದ ಬಗ್ಗೆ ಹೆಚ್ಚು ಮಾತಾಡಲ್ಲ. ರಾಜ್ಯದ ಬಿಜೆಪಿ ಯಲ್ಲಿ ಕೂಡ ಕಾಂಗ್ರೆಸ್ ಸಂಸ್ಕ್ರತಿ ಬೆಳೆಯುತ್ತಿರುವುದು ದೌರ್ಭಾಗ್ಯ. ಕಳೆದ ವಿಧಾನಸಭೆ ಚುನಾವಣೆ ವೇಳೆ ನನಗಾದ ಅನ್ಯಾಯ ಸರಿಪಡಿಸುವ ಭರವಸೆ ಪಕ್ಷದ ನಾಯಕರಿಂದ ಸಿಕ್ಕಿತ್ತು. ನನಗೆ ಟಿಕೆಟ್ ಕೈತಪ್ಪಿದ ಶುರುವಿನಲ್ಲಿ ಯಡಿಯೂರಪ್ಪ ಸಹ ಹಾವೇರಿಯಲ್ಲಿ ಕಾಂತೇಶ್ ಗೆ ಟಿಕೆಟ್ ಕೊಡಿಸಿ ಗೆಲ್ಲಿಸುವೆ ಎಂದಿದ್ದರು. ಆದರೆ ಅಲ್ಲಿ ಬೊಮ್ಮಾಯಿಗೆ ಟಿಕೆಟ್ ಕೊಡಿಸಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ ಅವರು ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಅವರನ್ನು ಅಲ್ಲಿ ಒತ್ತಾಯಪೂರ್ವಕವಾಗಿ ನಿಲ್ಲಿಸಲಾಗಿದೆ. ನನಗೆ ಅಥವಾ ಕಾಂತೇಶ್ ಗೆ ಟಿಕೆಟ್ ಕೊಡಿಸುವುದಾಗಿ ಹೇಳಿ, ಈಗ ಬೊಮ್ಮಾಯಿ ಮತ್ತು ಶೋಭಾ ಪರ ಮಾತ್ರ ಹಠ ಹಿಡಿದು ಟಿಕೆಟ್ ಕೊಡಿಸಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಹೈಕಮಾಂಡ್ ಇನ್ನೂ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆಯೇ ನಡೆಸದಿರುವ ಸಂದರ್ಭದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಮುನ್ನ ಶೋಭಾ ಕರಂದ್ಲಾಜೆ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಸೂಚನೆಯನ್ನು ಹೇಗೆ ಕೊಟ್ಟರು. ಬೊಮ್ಮಾಯಿ ಕೂಡ ಕಾಂತೇಶ್ ಪರ ನಿಲುವು ವ್ಯಕ್ತಪಡಿಸಿದ್ದರು. ಬೊಮ್ಮಾಯಿಗೆ ಇಷ್ಟವಿಲ್ಲದಿದ್ದರೂ ಟಿಕೆಟ್ ಕೊಡಿಸಿದ್ದಾರೆ. ಶೋಭಾ ವಿರುದ್ದ ಚಿಕ್ಕಮಗಳೂರು ಬಿಜೆಪಿ ಕಾರ್ಯಕರ್ತರೇ ‘ಗೋ ಬ್ಯಾಕ್ ಶೋಭಾ’ ಕೂಗೆದ್ದರೂ ಬೆಂಗಳೂರು ಉತ್ತರದಿಂದ ಟಿಕೆಟ್ ಕೊಡಿಸಿದ್ದಾರೆ ಎಂದು ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಪಕ್ಷ ಬಿಟ್ಟು ಹೋಗಬಾರದು ಎಂದವ ನಾನು. ಆದರೆ ಪಕ್ಷವೇ ತಾಯಿ ಎಂದಾಗ ಆಕೆಯ ಕತ್ತು ಹಿಸುಕುವ ಪ್ರಯತ್ನ ನಡೆದಿರುವಾಗ ಸುಮ್ಮನೆ ಇರಬೇಕಾ.? ಹೀಗಾಗಿ ನನ್ನ ಸ್ಪರ್ಧೆ ಅನಿವಾರ್ಯ ಎಂದು ಈಶ್ವರಪ್ಪ ಹೇಳಿದರು.

ಬೇಕಾದವರಿಗೆ ಟಿಕೆಟ್ ಕೊಡಿಸಿದೀರಲ್ಲ ಅದೆಷ್ಟು ಜನರ ಗೆಲ್ಲಿಸುವಿರೋ ನೋಡುವೆ. ಒಂದು ಕುಟುಂಬದ ಹಿಡಿತದಿಂದ ಪಕ್ಷ ತಪ್ಪಿಸಲು ನಾನು ಶಿವಮೊಗ್ಗ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುತ್ತೇನೆ. ಇದು ಉದ್ವೇಗದ ತೀರ್ಮಾನ ಅಲ್ಲ. ಸಿದ್ದಾಂತದ ನಿರ್ಧಾರ ಎಂಬುದಾಗಿ ಗುಡುಗಿದ್ದಾರೆ.

ಸ್ಪರ್ಧೆ ಮಾಡಿದರೆ ಪಕ್ಷ ನೋಟೀಸ್ ನೀಡಿ ಉಚ್ಚಾಟನೆ ಮಾಡಬಹುದು. ಚುನಾವಣೆ ಬಳಿಕ ಗೆದ್ದು ಮತ್ತೆ ಪಕ್ಷ ಸೇರ್ಪಡೆಗೆ ಅವಕಾಶ ಇದ್ದೇ ಇದೆ. ನಾನು ಮೋದಿ ಪರವಾಗಿಯೇ ಇದ್ದೇನೆ. ಚುನಾವಣೆಯಲ್ಲಿ ಈಗ ಬಿಜೆಪಿ ಟಿಕೆಟ್ ಪಡೆದವರೆಲ್ಲರಿಗಿಂತ ಒಂದು ಗುಲಗಂಜಿ ನಾನು ಹೆಚ್ಚಿದ್ದೇನೆ. ಈಶ್ವರಪ್ಪ ಯಾವುದೇ ಒಂದು ಜಾತಿಗೆ ಸೀಮಿತವಾದವನಲ್ಲ ಎಂಬುದು ಫಲಿತಾಂಶದ ಮೂಲಕ ಗೊತ್ತಾಗುತ್ತದೆ. ಮಾತು ಕೊಟ್ಟು ಮೋಸ ಮಾಡಿದವರಿಗೆ ಪಾಠ ಕಲಿಸೋಣ. ನಾಮಪತ್ರ ಸಲ್ಲಿಕೆಗೆ ಸಾಗರೋಪಾದಿಯಲ್ಲಿ ಅಭಿಮಾನಿಗಳು ಬರಬೇಕು. ಆ ಮೂಲಕ ಒಂದು ಕುಟುಂಬದ ಹಿಡಿತದಿಂದ ಪಕ್ಷವನ್ನು ಬಿಡಿಸೋಣ ಎಂದು ಹೇಳಿದರು.

ಸದಾನಂದ ಗೌಡ, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲು, ಪ್ರತಾಪ ಸಿಂಹ ಅವರು ಹಿಂದುತ್ವ ಪರ ಧ್ವನಿ ಎತ್ತಿದ್ದೇ ಟಿಕೆಟ್ ತಪ್ಪಲು ಕಾರಣ. ಒಬ್ಬ ಮಗ ಎಂ.ಪಿ. ಇನ್ನೊಬ್ಬ ಶಾಸಕ ಜೊತೆಗೆ ಜಿಜೆಪಿ ರಾಜ್ಯಾಧ್ಯಕ್ಷ. ನನ್ನ ಎದೆ ಬಗೆದರೆ ರಾಮ ಮತ್ತು ಮೋದಿ.. ಯಡಿಯೂರಪ್ಪ ಎದೆ ಬಗೆದರೆ ಇಬ್ಬರು ಮಕ್ಕಳು ಮತ್ತು ಶೋಭಾ. ಈಗ ಶೆಟ್ಟರ್ ಬೆಳಗಾವಿ ಅಭ್ಯರ್ಥಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅಂದರೆ ಅವರೇ ಹೈಕಮಾಂಡ್. ಮೋದಿ ಇಡೀ ದೇಶ ನನ್ನ ಪರಿವಾರ ಎಂದರೆ ರಾಜ್ಯದಲ್ಲಿ ಬಿಜೆಪಿ ಸ್ಥಿತಿಯು ಪರಿವಾರದ ಪರಿಕಲ್ಪನೆಯು ಕಾಂಗ್ರೆಸ್ ನಂತಾಗಿದೆ ಎಂದರು.

ಶಿವಮೊಗ್ಗದಲ್ಲಿ ಇನ್ನೇನು ಗೆದ್ದೇ ಬಿಡುವೆನೆಂಬ ಉಮೇದಿನಲ್ಲಿದ್ದ ಬಿಜೆಪಿಗೆ ಈಗ ಈಶ್ವರಪ್ಪ ಬಂಡಾಯ ನುಂಗಲಾರದ ತುತ್ತಾಗಿದೆ. ಈಶ್ವರಪ್ಪ ಪ್ರತ್ಯೇಕ ಸ್ಪರ್ಧೆಯಿಂದ ಶಿವಮೊಗ್ಗ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪ ಗೆಲ್ಲುತ್ತಾರೋ ಅಥವಾ ಸೋಲುತ್ತಾರೋ ಎಂಬ ಪ್ರಶ್ನೆಗಿಂತ, ಬಿಜೆಪಿಗೆ ಈ ಬಾರಿ ಶಿವಮೊಗ್ಗ ಕಬ್ಬಿಣದ ಕಡಲೆಯಂತಾಗಿರುವುದು ಮಾತ್ರ ಸತ್ಯ. ಇಬ್ಬರ ಜಗಳದ ನಡುವೆ ಮೂರನೆಯವರಾಗಿ ಗೀತಾ ಶಿವರಾಜಕುಮಾರ್ ಆಯ್ಕೆ ಸಲೀಸಾದರೂ ಆಶ್ಚರ್ಯ ಪಡಬೇಕಿಲ್ಲ.

ಸಕ್ರೆಬೈಲು | ಆನೆ ಬಾಲ ಕತ್ತರಿಸಿದ ಆರೋಪ: ಕಾವಾಡಿಗರಿಬ್ಬರ ಅಮಾನತು
ಶಿವಮೊಗ್ಗ: ಇಲಾಖೆಯ ಆನೆ ಭಾನುಮತಿಯ ಬಾಲವನ್ನು ತುಂಡರಿಸಿದ ಆರೋಪದ ಮೇಲೆ ಸಕ್ರೆಬೈಲು ಆನೆ ಶಿಬಿರದ ಇಬ್ಬರು ಕಾವಾಡಿಗರನ್ನು ಅರಣ್ಯಾಧಿಕಾರಿಗಳು ಸೋಮವಾರ ಅಮಾನತುಗೊಳಿಸಿದ್ದಾರೆ.

ಶಿವಮೊಗ್ಗ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್) (ವನ್ಯಜೀವಿ ವಿಭಾಗ) ಪ್ರಸನ್ನ ಪಟಗಾರ್ ಮಾತನಾಡಿ, ಕಳೆದ ತಿಂಗಳು (ಅಕ್ಟೋಬರ್) ಭಾನುಮತಿ ಎನ್ನುವ ಆನೆಯ ಬಾಲ ಭಾಗಶಃ ತುಂಡಾಗಿರುವುದು ಗಮನಕ್ಕೆ ಬಂದಿದ್ದು, ವಿಚಾರಣೆ ನಡೆಸಿದಾಗ ಅದರ ಪಾಲಕರು [ಸುದೀಪ್ ಮತ್ತು ಮೊಹಮದ್] ಆನೆ ಮೇಯಲು ಹೋದಾಗ ಬಾಲ ತುಂಡಾಗಿರುವುದಾಗಿ ಹೇಳಿದ್ದರು.

ಈ ಹೆಣ್ಣಾನೆಯು ಗರ್ಭಿಣಿಯಾಗಿದ್ದು,  ಅಕ್ಟೋಬರ್‌ 27ರಂದು ಬಾಲ ತುಂಡಾದ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಕುರಿತು ತನಿಖೆ ನಡೆಸಲು ಸಕ್ರೆಬೈಲು ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ (ಎಸಿಎಫ್) ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಡಿಸಿಎಫ್ ಆದೇಶಿಸಿದ್ದರು.

ಕಾವಾಡಿಗರು ನೀಡಿದ ವಿವರಣೆ ತೃಪ್ತಿಕರವಾಗಿಲ್ಲದ ಕಾರಣ ಈ ಬಗ್ಗೆ ವಿಸ್ತೃತ ತನಿಖೆಗೆ ಆದೇಶಿಸಲಾಗಿದೆ. ಎಸಿಎಫ್ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಕಾವಾಡಿಗರ ನಿರ್ಲಕ್ಷ್ಯವೇ ಘಟನೆಯ ಹಿಂದಿನ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಆ ವರದಿಯ ಆಧಾರದ ಮೇಲೆ ನಾನು ಕಾವಾಡಿಗರಿಬ್ಬರನ್ನೂ ಅಮಾನತು ಮಾಡಿದ್ದೇನೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

ಆನೆಗೆ ತರಬೇತಿ ನೀಡುವಾಗ ಆರೋಪಿಗಳು ಹರಿತವಾದ ಆಯುಧದಿಂದ ಪೂರ್ಣ ಬಲ ಬಳಸಿ ಹೊಡೆದಿರುವ ಶಂಕೆಯಿದೆ ಎಂದು ಪ್ರಸನ್ನ ತಿಳಿಸಿದರು.

ಅಮಾನತುಗೊಂಡಿರುವ ಕಾವಾಡಿಗರ ಹೆಚ್ಚಿನ ವಿಚಾರಣೆಗೆ ತನಿಖಾ ತಂಡವನ್ನು ರಚಿಸಲಾಗಿದ್ದು, ತನಿಖೆ ಮುಗಿಯುವವರೆಗೆ ಅವರನ್ನು ಅಮಾನತಿನಲ್ಲಿಡಲಾಗುವುದು ಎಂದು ಡಿಸಿಎಫ್ ತಿಳಿಸಿದ್ದಾರೆ. ಮೂರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಲ್ಲಿಯವರೆಗೂ ಭಾನುಮತಿಯನ್ನು ಬೇರೊಬ್ಬ ಪಾಲಕನ ಉಸ್ತುವಾರಿಯಲ್ಲಿಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಭಾನುಮತಿಗೆ ಚಿಕಿತ್ಸೆ ನೀಡಿ ಬಾಲ ತುಂಡಾದ ಭಾಗಕ್ಕೆ ಮತ್ತೆ ಹೊಲಿಗೆ ಹಾಕಲಾಗಿದ್ದು, ಆನೆ ಚೇತರಿಸಿಕೊಳ್ಳುತ್ತಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

ಪೋಕ್ಸೋ : 2020 ರ ಪ್ರಕರಣದಲ್ಲಿ ಆರೋಪಿಗೆ 17 ವರ್ಷ ಕಠಿಣ ಶಿಕ್ಷೆ ಪ್ರಕಟ
ಶಿವಮೊಗ್ಗ: ಪೋಕ್ಸೋ ಪ್ರಕರಣದಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಯುವಕನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಶಿವಮೊಗ್ಗ ನ್ಯಾಯಾಲಯ ಆದೇಶ ಹೊರಡಿಸಿದೆ. ಇದರ ಮಧ್ಯೆ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿದೆ ಎಂದು ವರದಿಯಾಗಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಮನನೊಂದ ಬಾಲಕಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಬಾಲಕಿಯ ತಂದೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕಿನ 23 ವರ್ಷದ ಯುವಕ ಶಿಕ್ಷೆಗೆ ಒಳಗಾಗಿದ್ದಾನೆ.

2020ರಲ್ಲಿ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ನ್ಯಾಯಾಧೀಶರಾದ ಲತಾ ಅವರು ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 1.25 ಲಕ್ಷ ರೂ. ದಂಡ, ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿ ಆರು ತಿಂಗಳು ಸಾದಾ ಜೈಲು ಶಿಕ್ಷೆ, ಮೃತ ಬಾಲಕಿಯ ಕುಟುಂಬಕ್ಕೆ ಸರ್ಕಾರದಿಂದ 17 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿದ್ದಾರೆ. ಸರ್ಕಾರದ ಪರವಾಗಿ ಹರಿಪ್ರಸಾದ್ ಮತ್ತು ಮಮತಾ ವಾದ ಮಂಡಿಸಿದ್ದರು.

ಗೋವುಗಳನ್ನು ಬಳಸಿ ಆಹಾರ ತಯಾರಿಸುವ ಫ್ಯಾಕ್ಟರಿ ಮೇಲೆ ದಾಳಿ ; ಬಿಜೆಪಿ ಮುಖಂಡರಿಗೆ ಸೇರಿದ್ದಾ ಈ ಫ್ಯಾಕ್ಟರಿ!?
ಶಿವಮೊಗ್ಗ : ಶಿವಮೊಗ್ಗದ ನಿದಿಗೆ ಇಂಡಸ್ಟ್ರಿಯಲ್ ಎಸ್ಟೇಟ್ ಪ್ರದೇಶದಲ್ಲಿನ ಫ್ಯಾಕ್ಟರಿ ಒಂದಕ್ಕೆ ಪೊಲೀಸರು ದಾಳಿ ಮಾಡಿದ್ದು, ಸ್ಥಳೀಯ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಈ ಫ್ಯಾಕ್ಟರಿ ಇರುವ ಜಾಗ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡ ಶಿವಮೊಗ್ಗ ಮೇಯರ್ ಅವರಿಗೆ ಸಂಬಂಧಿಸಿದ್ದು ಎಂದು ಸ್ಥಳೀಯರ ಕಡೆಯಿಂದ ಬಂದ ಮಾಹಿತಿಯಾಗಿದೆ. ಈ ಬಗ್ಗೆ ನಿಖರ ಮಾಹಿತಿ ಪೊಲೀಸ್ ಇಲಾಖೆ ಕಡೆಯಿಂದ ಬರಬೇಕಿದೆ.

ಸಾಕುಪ್ರಾಣಿಗಳಿಗೆ ಆಹಾರ ತಯಾರಿಕೆಗೆ ಬೇಕಾದ ಪದಾರ್ಥಗಳನ್ನು ತಯಾರಿಸುವ ಫ್ಯಾಕ್ಟರಿ ಇದಾಗಿದ್ದು, ಅಕ್ರಮವಾಗಿ ದನ ಮತ್ತು ಕರುಗಳನ್ನು ಇಲ್ಲಿ ಕೂಡಿ ಹಾಕಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಸಾಕುಪ್ರಾಣಿಗಳಿಗೆ ಬೇಕಾದ ಆಹಾರ ತಯಾರಿಗೆ ಈ ಫ್ಯಾಕ್ಟರಿ ಕಡೆಯಿಂದ ಕಚ್ಚಾ ವಸ್ತುಗಳನ್ನು ಮಾಡಿ ದೊಡ್ಡ ದೊಡ್ಡ ಕಂಪನಿಗಳಿಗೆ ರವಾನೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಇದೇ ಕಾರಣಕ್ಕೆ ದನ ಕರುಗಳನ್ನು ಇಲ್ಲಿ ಕೂಡಿ ಹಾಕಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಾಥಮಿಕ ಹಂತದಲ್ಲಿ ಸಿಕ್ಕ ಮಾಹಿತಿ ಪ್ರಕಾರ, ದನ ಕರುಗಳನ್ನು  ಬಳಸಿಕೊಂಡು, ಅವುಗಳ ಮೂಳೆ ಮತ್ತು ಮಾಂಸಗಳಿಂದ ಸಾಕುಪ್ರಾಣಿಗಳಿಗೆ ಹಾಕುವ ಫೀಡ್​ಗಳನ್ನು ತಯಾರು ಮಾಡಲಾಗುತ್ತದೆ ಅಥವಾ ತಯಾರಿಸುವ ಕಂಪನಿಗಳಿಗೆ ರವಾನೆ ಮಾಡಲಾಗುತ್ತಿದೆ ಎಂಬುದಾಗಿದೆ.

ಸಧ್ಯಕ್ಕೆ ಈ ಫ್ಯಾಕ್ಟರಿ ಮಾಲಿಕತ್ವದ ಬಗ್ಗೆ ಹಲವು ಕುತೂಹಲ ಹುಟ್ಟಿದ್ದು, ಶಿವಮೊಗ್ಗದ ಬಿಜೆಪಿ ಪಕ್ಷದ ಪ್ರಭಾವಿ ವ್ಯಕ್ತಿಯವರದ್ದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಡೆಯಿಂದ ಖಚಿತ ಮಾಹಿತಿ ಹೊರಬರಬೇಕಿದೆ. ದಾಳಿ ನಡೆಸಿರುವ ತಂಡ, ಫ್ಯಾಕ್ಟರಿಯ ಮಾಲಿಕತ್ವದ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.

ನಕಲಿ ಚಿನ್ನ ಅಡವಿಟ್ಟ ಪ್ರಕರಣ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮಂಜುನಾಥ್ ಗೌಡ ನಿವಾಸದ ಮೇಲೆ ಇಡಿ ದಾಳಿ
ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಆರ್.ಎಂ.ಮಂಜುನಾಥ್ ಗೌಡ ಅವರ ನಿವಾಸ ಹಾಗೂ ತೋಟದ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

2014ರಲ್ಲಿ ಬೆಳಕಿಗೆ ಬಂದ ನಕಲಿ ಚಿನ್ನಾಭರಣ ಅಡಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿರುವ ಮಂಜುನಾಥ್ ಗೌಡ ಅವರ ನಿವಾಸಗಳ ಮೇಲೆ ಬೆಳಗ್ಗೆಯಿಂದಲೇ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತೀರ್ಥಹಳ್ಳಿಯಲ್ಲಿರುವ ಅವರ ಎರಡು ಮತ್ತು ಶಿವಮೊಗ್ಗ ನಗರದ ಶರಾವತಿ ನಗರದಲ್ಲಿನ ಒಂದು ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

15 ಅಧಿಕಾರಿಗಳ ತಂಡ ದಾಳಿ ನಡೆಸುತ್ತಿದ್ದು, ಶಸ್ತ್ರಸಜ್ಜಿತ ಪೊಲೀಸರು ಆವರಣದಲ್ಲಿ ಕಾವಲು ಕಾಯುತ್ತಿದ್ದಾರೆ.

ಡಿಸಿಸಿ ಬ್ಯಾಂಕ್ ನ ಶಿವಮೊಗ್ಗ ನಗರ ಘಟಕದಲ್ಲಿ 2012ರಿಂದ 2014ರ ನಡುವೆ ನಕಲಿ ಚಿನ್ನಾಭರಣ ವಂಚನೆ ನಡೆದಿದೆ.

ಅಧಿಕಾರಿಗಳು ಅಂದಿನ ಅಧ್ಯಕ್ಷ ಮಂಜುನಾಥ ಗೌಡ, ಉಪಾಧ್ಯಕ್ಷ, ಶಾಖಾ ವ್ಯವಸ್ಥಾಪಕ ಹಾಗೂ ಪ್ರಧಾನ ವ್ಯವಸ್ಥಾಪಕರನ್ನು ಬಂಧಿಸಿದ್ದರು. 32 ಖಾತೆಗಳು, ಖಾತೆದಾರರ ವಿವರಗಳು ಮತ್ತು ಕೆವೈಸಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ತಿಳಿಸಲಾಗಿದೆ.

ಶಿವಮೊಗ್ಗ ಹಿಂಸಾಚಾರ: 60 ಬಂಧನ, 24 ಎಫ್‌ಐಆರ್ ದಾಖಲು
ಶಿವಮೊಗ್ಗ: ಇತ್ತೀಚೆಗೆ ಶಿವಮೊಗ್ಗದಲ್ಲಿ ಈದ್-ಇ-ಮಿಲಾದ್ ಮೆರವಣಿಗೆ ವೇಳೆ ನಡೆದ ಕೋಮು ಘರ್ಷಣೆ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು 24 ಎಫ್‌ಐಆರ್‌ಗಳನ್ನು ದಾಖಲಿಸಿ 60 ಜನರನ್ನು ಬಂಧಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಶಿವಮೊಗ್ಗ ಸಹಜ ಸ್ಥಿತಿಗೆ ಬಂದಿದ್ದು, ಸದ್ಯ ಶಾಂತಿಯುತವಾಗಿದೆ ಎಂದು ಹೇಳಿದ್ದಾರೆ.

”ನಗರದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಯಾರೂ ವದಂತಿಗಳನ್ನು ನಂಬಬಾರದು ಮತ್ತು ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಅವರು ಹೇಳಿದರು.

ಘಟನೆಗೆ ಕಾರಣರಾದ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.

“ನಾವು ಹೊರಗಿನವರ ಪಾತ್ರವನ್ನು ಸಹ ತನಿಖೆ ಮಾಡುತ್ತಿದ್ದೇವೆ. ಪೊಲೀಸರಿಗೆ ಎಲ್ಲ ಆಯಾಮಗಳಲ್ಲೂ ಸಾಕ್ಷ್ಯ ಸಿಕ್ಕಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಗಳು ಸೆರೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೆರವಣಿಗೆ ವೇಳೆ ಮಚ್ಚು ಮತ್ತು ಕತ್ತಿಗಳನ್ನು ಝಳಪಿಸುತ್ತಿರುವವರ ಕುರಿತ ವರದಿಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.

ಘಟನೆಯ ಸಂದರ್ಭದಲ್ಲಿ ಪೊಲೀಸರು ಯುವಕನನ್ನು ಎನ್‌ಕೌಂಟರ್ ಮಾಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಡಿದ ಆರೋಪದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸಂದೇಶವನ್ನು ಫಾರ್ವರ್ಡ್ ಮಾಡಿದವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

ಕಳೆದ ಭಾನುವಾರ ಶಿವಮೊಗ್ಗ ನಗರದಲ್ಲಿ ಈದ್-ಎ-ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಘಟನೆಯ ನಂತರ, ಅಧಿಕಾರಿಗಳು ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.

ಶಿವಮೊಗ್ಗ | ಯಾವುದೇ ಏನ್‌ಕೌಂಟರ್‌ ನಡೆದಿಲ್ಲ, ಒಮ್ನಿ ಕಾರಿನಲ್ಲಿ ಬಂದಿದ್ದವರರಲ್ಲಿ ಹಿಂದೂ, ಮುಸ್ಲಿಮರಿಬ್ಬರೂ ಇದ್ದರು: ಎಸ್‌ಪಿ
ಶಿವಮೊಗ್ಗ: ಶಿವಮೊಗ್ಗ ಗಲಭೆಯ ವೇಳೆ ಒಮ್ನಿ ಕಾರಿನಲ್ಲಿ ಬಂದು ಕಲ್ಲು ತೂರಿದ್ದಾರೆನ್ನುವ ವದಂತಿಗಳನ್ನು ಶಿವಮೊಗ್ಗ ಎಸ್ಪಿ ಜಿ ಕೆ ಮಿಥುನ್‌ ಕುಮಾರ್‌ ಅವರು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು ಕಾರಿನಲ್ಲಿ ಬಂದವರು ದಾವಣಗೆರೆ ಜಿಲ್ಲೆಯ ನ್ಯಾಮತಿಯವರಾಗಿದ್ದು, ಇತರೆಡೆ ಮೆರವಣಿಗೆಗಳನ್ನು ನೋಡಿ ರಾಗಿ ಗುಡ್ಡಕ್ಕೂ ಬಂದಿದ್ದರು ಎಂದು ತಿಳಿಸಿದ್ದಾರೆ.

ಅವರು ಗಲಭೆ ಆರಂಭಗೊಂಡಿದ್ದನ್ನು ನೋಡಿ ನಂತರ ತಮ್ಮ ಊರಿಗೆ ಮರಳಿದ್ದಾರೆ. ಈ ದೃಶ್ಯಗಳು ಸಿಸಿ ಕೆಮೆರಾಗಳಲ್ಲಿ ದಾಖಲಾಗಿದ್ದು, ವಿವರಗಳನ್ನು ನೋಡಲಾಗಿದೆ ಎಂದು ಅವರು ತಿಳಿಸಿದರು. ಸಾರ್ವಜನಿಕರು ದಯವಿಟ್ಟು ಇಂತಹ ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ರಾಜಕಾರಣಿಗಳು ಪತ್ರಿಕಾಗೋಷ್ಟಿ ನಡೆಸಿ ಹೊರಗಿನಿಂದ ಬಂದವರು ಶಿವಮೊಗ್ಗದಲ್ಲಿ ಮೆರವಣಿಗೆಯಲ್ಲಿ ಕಲ್ಲು ತೂರಿದ್ದಾರೆ ಎಂದು ಆರೋಪ ಹೊರಿಸಿದ್ದರು.

ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಮ್ ಯುವಕ ಸತ್ತಿದ್ದಾನೆ ಎನ್ನುವುದು ಕೂಡಾ ಸು‍ಳ್ಳು

ಎನ್‌ ಕೌಂಟರಿನಲ್ಲಿ ಮುಸ್ಲಿಂ ಯುವಕನೊಬ್ಬ ಸತ್ತಿದ್ದಾನೆ ಎನ್ನುವ ವದಂತಿ ಹಬ್ಬಿಸಲಾಗಿದ್ದು ಅದೂ ಕೂಡಾ ಸುಳ್ಳು ಎಂದು ಎಸ್ಪಿ ತಿಳಿಸಿದ್ದಾರೆ. ಮೆರವಣಿಗೆ ಸಮಯದಲ್ಲಿ ಕಲ್ಲು ತೂರಾಟದ ಬಳಿಕ ನಡೆದ ಬೆಳವಣಿಗೆಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಮ್ ಯುವಕ ಮೃತಪಟ್ಟಿದ್ದಾನೆ ಎಂದು ಹೇಳುವ ಧ್ವನಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಕುರಿತು ಸ್ಪಷ್ಟನೆ ನೀಡಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು ಯಾರೂ ಇಂತಹ ಸುದ್ದಿಗಳಿಗೆ ಕಿವಿಯಾಗಬಾರದು ಎಂದು ಮನವಿ ಮಾಡಿಕೊಂಡರು.

ಈ ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು, FIR ಕೂಡಾ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.