shrinivas-karkala – Peepal Media

ನ್ಯಾಯಾಲಯದಲ್ಲಿ ನ್ಯಾಯ ಸಿಗ್ತದೇಂತ ನಿಮಗೆ ಯಾರು ಹೇಳಿದ್ದು?!
ಇತ್ತೀಚಿನ ವರ್ಷಗಳಲ್ಲಿ ದೇಶದ ಗಮನ ಸೆಳೆದ ಪ್ರಕರಣಗಳಲ್ಲಿ ಸಿದ್ದೀಕ್‌ ಕಪನ್‌ ಅವರ ಪ್ರಕರಣವೂ ಒಂದು. ಉತ್ತರ ಪ್ರದೇಶದ ಹತ್ರಾಸ್‌ ಎನ್ನುವಲ್ಲಿ ನಡೆದ ದಲಿತ ಬಾಲಕಿಯ ಮೇಲಿನ ಅತ್ಯಾಚಾರದ ಪ್ರಕರಣವನ್ನು ವರದಿ ಮಾಡಲು ಹೊರಟಿದ್ದ ಅವರನ್ನು ತಡೆದು ಬಂಧಿಸಿ UAPA ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಹೀಗೆ ಜೈಲುವಾಸಿಯಾಗಿದ್ದ ಅವರಿಗೆ ಮೊನ್ನೆಯಷ್ಟೇ ಜಾಮೀನು ದೊರೆತಿದೆ. ಈ ಹಿನ್ನೆಲೆಯಲ್ಲಿ ಚಿಂತಕ ಶ್ರೀನಿವಾಸ ಕಾರ್ಕಳ ಅವರು ಈ ವಾರದ ಶ್ರೀನಿ ಕಾಲಮ್ಮಿನಲ್ಲಿ ನ್ಯಾಯಾಲಯದ ವ್ಯವಹಾರದ ಸುತ್ತಮುತ್ತಲಿನ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ

“ನ್ಯಾಯಾಲಯದಲ್ಲಿ ನ್ಯಾಯ ಸಿಗ್ತದೇಂತ ನಿಮಗೆ ಯಾರು ಹೇಳಿದ್ದು? ಅಲ್ಲಿ ಕಾನೂನು, ಸಂವಿಧಾನ ವಿಧಿಗಳ ವ್ಯಾಖ್ಯಾನ ನಡೆಯುತ್ತದೆ. ನಿಮಗೆ ‘ನ್ಯಾಯ’ ಬೇಕಾದರೆ ಸಂಧಾನದಂತಹ ಬೇರೆ ಯಾವುದಾದರೂ ದಾರಿ ಕಂಡುಕೊಳ್ಳಿ…” ಇದು ಕರಾವಳಿಯ ಬಳಕೆದಾರರ ಹೋರಾಟ ವೇದಿಕೆಯ ಮುಖ್ಯಸ್ಥರೊಬ್ಬರು ಎರಡು ದಶಕಗಳ ಹಿಂದೆ ನೀಡಿದ ಸಲಹೆ. ಆ ಮಹನೀಯರು ಈ ಮಾತನ್ನು ಸುಮ್ಮನೆ ಹೇಳಲಿಲ್ಲ. ಬಳಕೆದಾರರಿಗೆ ಅನ್ಯಾಯವಾದಾಗ ಈ ಸಂಬಂಧ ಕೋರ್ಟ್ ಗೆ ಅಲೆದಲೆದು, ಸತ್ಯ ಎಂಬುದು ಕಣ್ಣಿನ ಎದುರೇ ಇದ್ದಾಗಲೂ ಕೋರ್ಟ್ ನಲ್ಲಿ ವರ್ಷಗಟ್ಟಲೆ ಹೆಣಗುವಂತಾಗಿ, ಅಪಾರ ಕಷ್ಟ ನಷ್ಟ ಮಾಡಿಕೊಂಡು, ಕೊನೆಗೆ ಅಲ್ಲೂ ವ್ಯತಿರಿಕ್ತ ತೀರ್ಪುಗಳು ಬರುವುದನ್ನು ಸ್ವತಃ ನೋಡಿದ ಹಿನ್ನೆಲೆಯಲ್ಲಿ ಅವರು ಹೀಗೆ ಸಲಹೆ ನೀಡಿದ್ದರು. “ಮಾರಾಟಗಾರರಿಂದ ಅನ್ಯಾಯವಾಗಿದೆಯೇ? ನೇರ ಕೋರ್ಟ್ ಗೆ ಹೋಗುವ ಬದಲು, ಮೊದಲು ಆ ಮಾರಾಟಗಾರರನ್ನು ಭೇಟಿಯಾಗಿ, ಅವರಿಗೆ ಪ್ರಕರಣದ ಬಗ್ಗೆ ಮನವರಿಕೆ ಮಾಡಿಕೊಟ್ಟು, ಅಲ್ಲೇ ನ್ಯಾಯ ಪಡೆಯಲು ಸಾಧ‍್ಯವಾದಷ್ಟು ಪ್ರಯತ್ನ ಮಾಡಿ. ಆ ಹಂತದಲ್ಲಿಯೇ ಒಮ್ಮೊಮ್ಮೆ ಸಮಸ್ಯೆ ಪರಿಹಾರವಾಗುವುದಿದೆ. ಅಲ್ಲೂ ಸಮಸ್ಯೆ ಪರಿಹಾರವಾಗಲಿಲ್ಲವೇ? ಕೊನೆಯ ಆಯ್ಕೆಯಾಗಿ ಮಾತ್ರ ನ್ಯಾಯಾಲಯಕ್ಕೆ ಹೋಗಿ. ಅಲ್ಲೂ ನಿಮಗೆ ನ್ಯಾಯ ಸಿಗುವ ಖಾತ್ರಿಯೇನೂ ಇಲ್ಲ, ನೆನಪಿಡಿ” ಎನ್ನುತ್ತಿದ್ದರು ಅವರು.

ಮಾನವ ಇತಿಹಾಸದಲ್ಲಿ ಅತ್ಯಂತ ಆದರ್ಶಯುತ ಆಡಳಿತ ಮಾದರಿ ಎಂದು ನಾವು ಅಂದುಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗಕ್ಕೆ ಬಹಳ ಮಹತ್ತ್ವದ ಒಂದು ಸ್ಥಾನವಿದೆ. ಶಾಸಕಾಂಗದಿಂದ, ಕಾರ್ಯಾಂಗದಿಂದ ನಮಗೆ ಅನ್ಯಾಯವಾಗಬಹುದು. ಸಾಂವಿಧಾನಿಕ ಹಕ್ಕುಗಳಿಂದ ನಾವು ವಂಚಿತರಾಗಬಹುದು. ಆಗ ಬಹುನಿರೀಕ್ಷೆಯಿಂದ ನಾವು ನೋಡುವುದು ನ್ಯಾಯಾಂಗದತ್ತ. ಆಳುವವರು ಪ್ರಜಾತಂತ್ರ, ಸಂವಿಧಾನ, ಹಕ್ಕುಗಳ ಬಗ್ಗೆ ಎಷ್ಟೇ ಆಕರ್ಷಕ ಮಾತುಗಳನ್ನಾಡಿದರೂ, ತಮ್ಮನ್ನು ಪ್ರಜೆಗಳು ಪ್ರಶ್ನಿಸುವುದನ್ನು, ಟೀಕಿಸುವುದನ್ನು, ವಿರೋಧಿಸುವುದನ್ನು ಸಹಜವಾಗಿಯೇ ಅವರು ಇಷ್ಟ ಪಡುವುದಿಲ್ಲ. ವಿರೋಧದ ದನಿಗಳನ್ನು ಹೊಸಕಿ ಹಾಕಲು ಅವರು ಯತ್ನಿಸುತ್ತಲೇ ಇರುತ್ತಾರೆ. ಆಗ ಪ್ರಜೆಗಳಿಗೆ ರಕ್ಷಣೆ ಒದಗಿಸಬೇಕಾದುದು ನ್ಯಾಯಾಂಗ. ಆದರೆ, ನಮ್ಮ ನ್ಯಾಯಾಂಗ ಈ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದೆಯೇ? ಪ್ರಕ್ರಿಯೆಯೇ ಒಂದು ಶಿಕ್ಷೆಯಾಗಿ, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ, ಕೊನೆಗೆ ಅಪರಾಧಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಖುಲಾಸೆ ಗೊಳಿಸಿದರೆ ಇದರಿಂದ ಸಂತ್ರಸ್ತ ವ್ಯಕ್ತಿಗೆ ಏನು ನ್ಯಾಯ ಸಿಕ್ಕಂತಾಯಿತು? ವ್ಯಕ್ತಿಯ ಆಯುಷ್ಯದ ಅನೇಕ ವರ್ಷಗಳು ಜೈಲಿನಲ್ಲಿ ಕಳೆಯುವಂತಾದರೆ ಆ ವ್ಯಕ್ತಿಗೆ ಆದ ನಷ್ಟಕ್ಕೆ ಯಾರು ಹೊಣೆ? ದೇಶದಲ್ಲಿ ಇಂತಹ ಘಟನೆಗಳು ನೂರಾರು ಸಂಖ್ಯೆಯಲ್ಲಿ ನಡೆಯುತ್ತಲೇ ಇವೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಕೇರಳದ ಪತ್ರಕರ್ತ ಸಿದ್ದಿಖಿ ಕಪ್ಪನ್ ಪ್ರಕರಣ.

ಏನಿದು ಸಿದ್ದಿಖಿ ಕಪ್ಪನ್ ಪ್ರಕರಣ?

2020 ನೇ ಇಸವಿ ಸೆಪ್ಟಂಬರ್ 14 ರಂದು ಉತ್ತರಪ್ರದೇಶದ ಹಾತರಸ್ ನಲ್ಲಿ ದಲಿತ ಯುವತಿಯೊಬ್ಬಳ ಮೇಲೆ ನಾಲ್ವರು ಸವರ್ಣೀಯರಿಂದ ಬರ್ಬರ ಅತ್ಯಾಚಾರ ನಡೆಯಿತು. ಕ್ರೌರ್ಯ ಯಾವ ಮಟ್ಟಿನದಾಗಿತ್ತೆಂದರೆ, ಅಂತಿಮವಾಗಿ ಅದು ಆಕೆಯ ಸಾವಿಗೆ ಕಾರಣವಾಗಿತ್ತು. ಈ ಅಪರಾಧ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಸಕಾಲದಲ್ಲಿ ಆಕೆಯ ನೆರವಿಗೆ ಬಂದಿರಲಿಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿಯೂ ತಕ್ಷಣ ಆಕೆಗೆ ಸೂಕ್ತ ಚಿಕಿತ್ಸೆ ಸಿಕ್ಕಿರಲಿಲ್ಲ. ಸರಕಾರದ ವತಿಯ ತೀವ್ರ ಲೋಪದ ಈ ಸುದ್ದಿ ಹರಡುತ್ತಿದ್ದಂತೆ ಜನಾಕ್ರೋಶ ಹೆಚ್ಚ ತೊಡಗಿತು. ಪರಿಸ್ಥಿತಿ ಕೈಮೀರುವುದನ್ನು ಅರಿತ ಉತ್ತರಪ್ರದೇಶ ಪೊಲೀಸರು ಹೆತ್ತವರಿಗೆ ಒಪ್ಪಿಸುವ ಮಾತಂತಿರಲಿ, ಅವರಿಗೆ ಸರಿಯಾಗಿ ನೋಡಲೂ ಬಿಡದೆ, ಬಲವಂತವಾಗಿ ರಾತ್ರೋರಾತ್ರಿ ಆ ಹೆಣ್ಣುಮಗಳ ಮೃತದೇಹವನ್ನು ಸುಟ್ಟು ಹಾಕಿದ್ದರು. ಪ್ರಜೆಗಳ ಹಕ್ಕುಗಳನ್ನು ರಕ್ಷಿಸಬೇಕಾದ ಚುನಾಯಿತ ಸರಕಾರವೇ ಹೀಗೆ ಕಾನೂನು ಬಾಹಿರವಾಗಿ ಮತ್ತು ಅಮಾನುಷವಾಗಿ ನಡೆದುಕೊಂಡಿತ್ತು.

ಈ ಪ್ರಕರಣವನ್ನು ವರದಿ ಮಾಡಲು ಅನೇಕರು ಹಾತರಸ್ ಗೆ  ಹೋಗಿದ್ದರು. ಇದೇ ರೀತಿಯಲ್ಲಿ ಕೇರಳದ ಪತ್ರಕರ್ತ ಸಿದ್ದಿಖಿ ಕಪ್ಪನ್ ಕೂಡಾ ಹಾತರಸ್ ಗೆ ಹೊರಟಿದ್ದರು. ಆದರೆ ಹಾತರಸ್ ನ ಹಾದಿಯಲ್ಲಿರುವಾಗಲೇ ಕಪ್ಪನ್ ಮತ್ತು ಅವರ ಜತೆಗಿದ್ದ ಮೂವರನ್ನು ಉತ್ತರಪ್ರದೇಶ ಪೊಲೀಸರು ಮಥುರಾದಲ್ಲಿ ಅಕ್ಟೋಬರ್ 5, 2020 ರಂದು ಬಂಧಿಸಿದ್ದರು.

ವಿಚಿತ್ರವೆಂದರೆ, ಕಪ್ಪನ್ ಯಾವ ಅಪರಾಧವನ್ನೂ ಮಾಡಿರಲಿಲ್ಲ. ಅವರು ಪತ್ರಕರ್ತನಾಗಿ ತನ್ನ ಕರ್ತವ್ಯವನ್ನಷ್ಟೇ ನಿಭಾಯಿಸುತ್ತಿದ್ದರು. ಆದರೆ ಅವರ ಹೆಸರು ಸಿದ್ದಿಖಿಯಲ್ಲವೇ?!  ಹಾತರಸ್ ಭೇಟಿಯ ಅವರ ಉದ್ದೇಶ, ಮತೀಯ ಸೌಹಾರ್ದವನ್ನು ಕದಡುವುದು, ಗಲಭೆ ಪ್ರಚೋದಿಸುವುದು, ಭಯೋತ್ಪಾದನೆ ಹರಡುವುದು ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಮತ್ತು ಇತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವುದು ಎಂದು ಪೊಲೀಸರು ಆರೋಪಿಸಿದ್ದರು. ಅವರ ಮೇಲೆ ತುಂಬ ಕಠಿಣವಾದ ‘ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಕಪ್ಪನ್ ರನ್ನು ಶಿಕ್ಷಿಸಲು ಬಲವಾದ ಪುರಾವೆಗಳಿಲ್ಲ ಎನ್ನುವುದು ಖಚಿತವಾಗುತ್ತಲೇ, ಜುಜುಬಿ 5000 ರುಪಾಯಿ ವರ್ಗಾವಣೆಯನ್ನು ನೆಪ ಮಾಡಿಕೊಂಡು ಜ್ಯಾರಿ ನಿರ್ದೇಶನಾಲಯದ ವತಿಯಿಂದ ಅಕ್ರಮ ಹಣ ವರ್ಗಾವಣೆ ಕೇಸನ್ನೂ ಅವರ ವಿರುದ್ಧ ದಾಖಲಿಸಲಾಯಿತು.

ಕಪ್ಪನ್ ರ ಕಷ್ಟಗಳ ಸರಣಿ ಇಲ್ಲಿಂದ ಆರಂಭವಾಯಿತು. ಅವರ ಮೇಲೆ ಕೇಸು ದಾಖಲಿಸಿರುವುದರ ಹಿಂದೆ ಇರುವುದು ದುರುದ್ದೇಶ ಎಂಬುದು ಮೇಲು ನೋಟಕ್ಕೇ ತಿಳಿಯುವಂತಿದ್ದರೂ ಕೆಳ ಕೋರ್ಟ್ ಗಳು ಪದೇ ಪದೇ ಅವರಿಗೆ ಜಾಮೀನು ನಿರಾಕರಿಸಿದವು. ಮುಂದೆ ಹೈಕೋರ್ಟ್ ಕೂಡಾ ಜಾಮೀನು ನಿರಾಕರಿಸಿತು. ಕೋವಿಡ್ ಕಾಲದಲ್ಲಿಯೂ ಕಪ್ಪನ್ ಜೈಲಿನಲ್ಲಿ ನರಳಬೇಕಾಯಿತು. ಪರಿಣಾಮವಾಗಿ ಅವರು ಕೋವಿಡ್ ಸೋಂಕಿಗೆ ಒಳಗಾದರು. ಆಗ ಸಿಜೆಐ  ಆಗಿದ್ದ ಜಸ್ಟಿಸ್ ರಮಣ ಅವರು ಕಪ್ಪನ್ ರನ್ನು ದಿಲ್ಲಿಗೆ ತರಿಸಿ ಅವರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಿದ್ದರು.

ಮುಗಿಯದ ಯಾತನೆ

ವರ್ಷ ಉರುಳಿದರೂ ಕಪ್ಪನ್ ಗೆ ಜಾಮೀನು ಸಿಗಲೇ ಇಲ್ಲ. ಕೇರಳದಲ್ಲಿರುವ ಆಕೆಯ ಪತ್ನಿ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಯಾವ ಫಲವೂ ದೊರೆಯಲಿಲ್ಲ. ಈ ನಡುವೆ 18 ಜೂನ್ 2021 ರಲ್ಲಿ ಕಪ್ಪನ್ ಅವರ ತಾಯಿ ತೀರಿಕೊಂಡರು. ತೀರಿಕೊಳ್ಳುವ ಮೊದಲು ತನ್ನ ತಾಯಿಯ ಮುಖವನ್ನು ನೋಡುವ ಅವಕಾಶವೂ ಕಪ್ಪನ್ ಗೆ ಇರಲಿಲ್ಲ! ಯಾತನೆಗಳ ಮೇಲೆ ಯಾತನೆ. ಮಾಡಿಯೇ ಇರದ ಅಪರಾಧಕ್ಕಾಗಿ ಜೈಲಿನೊಳಗೆ ಬಂಧಿ.

ಕಪ್ಪನ್ ರನ್ನು ಜೈಲಿನಿಂದ ಹೊರ ತರಲು ಅವರ ಒಡನಾಡಿಗಳು ಹೋರಾಟ ನಡೆಸಿಯೇ ಇದ್ದರು. ಅಂತಾರಾಷ್ಟ್ರೀಯವಾಗಿ ಪ್ರತಿಭಟನೆಗಳು, ಒತ್ತಡಗಳು ಸಾಗಿಯೇ ಇದ್ದವು. ಹೀಗೆಯೇ ಒಂದೂ ಮುಕ್ಕಾಲು ವರ್ಷ ಕಳೆದುಹೋಯಿತು. ಅಂತಿಮವಾಗಿ ಪ್ರಕರಣ ಸುಪ್ರೀಂ ಕೋರ್ಟ್ ಗೆ ಬಂತು. ಆಗ ಸಿಜೆಐ ಆಗಿದ್ದವರು ಜಸ್ಟಿಸ್ ಯು ಯು ಲಲಿತ್. ಕಪ್ಪನ್ ಮೇಲಿನ  ಪ್ರಕರಣಕ್ಕೆ ಬಲವಾದ ಪುರಾವೆ ಏನಿದೆ ಎಂದು ಕೋರ್ಟ್ ಸರಕಾರಿ ವಕೀಲರನ್ನು ಕಟುವಾಗಿ ಪ್ರಶ್ನಿಸಿತು. ಆದರೆ ಸರಕಾರದ ಬಳಿ ಸೂಕ್ತ ಸಾಕ್ಷ್ಯಾಧಾರಗಳೇ ಇರಲಿಲ್ಲ. ಸರಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಕಪ್ಪನ್ ಗೆ ಜಾಮೀನು ನೀಡಿತು; ಬಂಧನದ ಸುಮಾರು 700 ದಿನಗಳ ಬಳಿಕ!

ಇದು ನಡೆದುದು ಸೆಪ್ಟಂಬರ್ 9, 2022 ರಂದು. ಯುಎಪಿಎ ಪ್ರಕರಣದಲ್ಲೇನೋ ಜಾಮೀನು ಸಿಕ್ಕಿತು. ಆದರೆ ಕಪ್ಪನ್ ಜೈಲಿನಿಂದ ಹೊರಬರುವಂತಿರಲಿಲ್ಲ. ಯಾಕೆಂದರೆ ಅವರ ಮೇಲೆ ಅಕ್ರಮ ಹಣ ವರ್ಗಾವಣೆಯ ಕೇಸು ಬಾಕಿ ಇತ್ತು. ಇನ್ನೊಂದು ಸುತ್ತಿನ ನ್ಯಾಯಕ್ಕಾಗಿನ ಹೋರಾಟ ಶುರುವಾಯಿತು. ಕೇವಲ 5000 ರುಪಾಯಿ ವರ್ಗಾವಣೆಯ ಕೇಸು! ಅಕ್ಟೋಬರ್ ಹೋಯಿತು, ನವೆಂಬರ್ ಹೋಯಿತು,  ಕೊನೆಗೆ 2022 ಡಿಸೆಂಬರ್ 23  ರಂದು ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಬೆಂಚ್ ಕಪ್ಪನ್ ಗೆ ಜಾಮೀನು ಮಂಜೂರು ಮಾಡಿತು.

ಈಗ ಕಪ್ಪನ್  ಜೈಲಿನಿಂದ ಹೊರಬರಬಹುದೇ? ಉಹುಂ ಇಲ್ಲ. ಯಾಕೆಂದರೆ ಈಗ ನ್ಯಾಯಾಲಯಗಳಿಗೆ ವರ್ಷದ ಕೊನೆಯ ರಜಾದಿನಗಳು. ಮತ್ತೆ ನ್ಯಾಯಾಲಯ ಕಾರ್ಯಾರಂಭ ಮಾಡಿದ ಮೇಲೆ ಜಾಮೀನಿನ ಷರತ್ತುಗಳನ್ನು ಪೂರೈಸಿದ ಮೇಲೆಯಷ್ಟೇ ಕಪ್ಪನ್ ಮನೆಗೆ ಹೋಗಬಹುದು. ಅಂದರೆ 2020 ರಲ್ಲಿ ಜೈಲು ಸೇರಿದ ಕಪ್ಪನ್ 2023 ರಲ್ಲಿ  ಜೈಲಿನಿಂದ ಹೊರಬರಬಹುದು. ನೆನಪಿಡಿ,  ಇದು ಕೇವಲ ಜಾಮೀನು. ಆರೋಪ ಮುಕ್ತನಾಗಲು ಅವರು ಸಾಗಬೇಕಾದ ದಾರಿ  ಎಷ್ಟು ದೀರ್ಘ  ಇದೆ, ತಗಲುವ ಖರ್ಚು ಎಷ್ಟು ಊಹಿಸಿ.

ಶಿಕ್ಷೆ ಮೊದಲು, ಆಮೇಲೆ ತನಿಖೆ !!

‘ಹತ್ತು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆಯಾ‍ಗಬಾರದು’ ಎಂಬುದು ಪ್ರಸಿದ್ಧ ಇಂಗ್ಲಿಷ್ ಜ್ಯೂರಿ ವಿಲಿಯಂ ಬ್ಲಾಕ್ ಸ್ಟನ್ ಎಂಬಾತನ ಮಾತು. ಪ್ರಕರಣಗಳನ್ನು ನಿಭಾಯಿಸುವಾಗ  ಜಗತ್ತಿನ ಅನೇಕ ನ್ಯಾಯಾಲಯಗಳು ಇದನ್ನೊಂದು ಆಧಾರ ತತ್ತ್ವದಂತೆ ಪರಿಗಣಿಸುತ್ತವೆ. ಜಾಮೀನು ನೀಡುವ ವಿಷಯದಲ್ಲಿಯೂ ನ್ಯಾಯಶಾಸ್ತ್ರ ತುಂಬಾ ಸ್ಪಷ್ಟವಿದೆ. Bail is the rule and jail is the exception ಎಂದು ಅದು ಹೇಳುತ್ತದೆ. ಅಂದರೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬೇಕು. ಆದರೆ ಈವತ್ತು ನಮ್ಮ ನ್ಯಾಯಾಲಯಗಳು ಹಾಗೆ ನಡೆದುಕೊಳ್ಳುತ್ತವೆಯೇ? ಪೊಲೀಸರು ದುರುದ್ದೇಶದಿಂದ ಕೇಸು ದಾಖಲಿಸಿ ಕೋರ್ಟಿ್ಗೆ ಎಳೆ ತರಬಹುದು. ಆದರೆ ನ್ಯಾಯಾಧೀಶರು ಪೂರ್ವಗ್ರಹ ರಹಿತವಾಗಿ ಪ್ರಕರಣವನ್ನು ಪರಿಶೀಲಿಸಿದರೆ ಮೇಲು ನೋಟದಲ್ಲಿಯೇ ಅದು ಗಂಭೀರ ಹೌದೋ ಅಲ್ಲವೋ ಎಂದು ಅವರಿಗೆ ತಿಳಿಯುವುದು ಕಷ್ಟವೇನಲ್ಲ. ಗಂಭೀರ ಅಪರಾಧ ಅಲ್ಲವಾದರೆ ಅವರನ್ನು ಜೈಲಿಗೆ ಹಾಕುವ ಅಗತ್ಯವಾದರೂ ಏನು?

ದೇಶದ ಆಡಳಿತವು ಕಾನೂನು ನಿಯಮಗಳ ಆಧಾರದಲ್ಲಿ ನಡೆಯಬೇಕೇ ಹೊರತು, ಭಾವನೆಗಳ ಆಧಾರದಲ್ಲಿ ಅಲ್ಲ; ಸಂಘಟನೆಗಳ ಒತ್ತಡ, ಮಾಧ್ಯಮಗಳ ಆಗ್ರಹ, ಸಾಮಾಜಿಕ ಮಾಧ್ಯಮಗಳ ಅಭಿಯಾನದ ಮೂಲಕ ಅಲ್ಲ. ಪಾಕಿಸ್ತಾನ್ ಜಿಂದಾಬಾದ್ ಎಂದರೆಂದೋ, ಪಾಕಿಸ್ತಾನ ಕ್ರಿಕೆಟ್ ‍ಗೆದ್ದಾಗ ಸಂಭ್ರಮಿಸಿದರೆಂದು ಆರೋಪ ಹೊರಿಸಿ ತಿಂಗಳು ಗಟ್ಟಲೆ ಅವರನ್ನು ಜೈಲಿನಲ್ಲಿರಿಸುವುದು ಏನನ್ನು ಸೂಚಿಸುತ್ತದೆ? ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ಅಥವಾ ಕಾನೂನಿನ ಯಾವ ಕಲಂ ಅಡಿಯಲ್ಲಿ ಅದು ಅಪರಾಧ ಎಂದು ನ್ಯಾಯಾಲಯಗಳು ವಿವೇಚಿಸಬೇಡವೇ?!

ಈವತ್ತು ಪ್ರಭುತ್ವ ಮನಸು ಮಾಡಿದರೆ ಸುಮ್ಮನೆ ನಿಮ್ಮ ಮೇಲೆ ಕೇಸು ಹಾಕಿ ಜೈಲಿನಲ್ಲಿಡಬಹುದು. ನಿಮ್ಮ ಮೊಬೈಲ್, ಕಂಪ್ಯೂಟರ್ ವಶಪಡಿಸಿಕೊಂಡು ಅದರಲ್ಲಿ ಸುಳ್ಳು ದಾಖಲೆಗಳನ್ನು ಸೇರಿಸಿ ನಿಮ್ಮನ್ನು ವರ್ಷ ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡಬಹುದು (ಭೀಮಾ ಕೋರೇಗಾಂವ್ ಕೇಸಿನಲ್ಲಿ ಹೀಗೆ ಮಾಡಲಾದುದು ಈಗಾಗಲೇ ಬೆಳಕಿಗೆ ಬಂದಿದೆ). ಒಂದು ದಿನ ನೀವು ನಿರಪರಾಧಿ ಎಂದು ಸಾಬೀತಾಗಲೂಬಹುದು. ಆದರೆ ಆಗ ಶಿಕ್ಷೆ ಅನುಭವಿಸಿಯಾಗಿರುತ್ತದೆ!

ಪ್ರಕ್ರಿಯೆಯೇ ಒಂದು ಶಿಕ್ಷೆ!

ಉತ್ತರ ಪ್ರದೇಶದ ವಿಷ್ಣು ತಿವಾರಿ ಎಂಬಾತ ಅತ್ಯಾಚಾರ ಆರೋಪದಿಂದ ಮುಕ್ತನಾದ. ಆದರೆ ಹೀಗೆ ಮುಕ್ತನಾಗುವುದಕ್ಕೆ ಮುನ್ನ ಆತ ಜೈಲಿನಲ್ಲಿ ಕಳೆದುದು ಬರೋಬ್ಬರಿ 20 ವರ್ಷಗಳನ್ನು! ಉಗ್ರರು ಎಂಬ ಆರೋಪದಡಿ ದಶಕಗಳ ಕಾಲ ಜೈಲಿನಲ್ಲಿದ್ದು, ಆಮೇಲೆ ಕೋರ್ಟ್ ತೀರ್ಪು ಪ್ರಕಾರ ಅಮಾಯಕರೆನಿಸಿಕೊಂಡು ಹೊರಬಂದವರೆಷ್ಟು ಮಂದಿ? ಭೀಮಾ ಕೋರೇಗಾಂವ್ ಪ್ರಕರಣದಲ್ಲಿ ನಿಜವಾದ ಅಪರಾಧಿಗಳು ಆರಾಮ ಹೊರಗೆ ತಿರುಗಾಡಿಕೊಂಡಿದ್ದು ಘಟನೆಗೆ ಸಂಬಂಧವೇ ಪಡದವರೆಷ್ಟು ಮಂದಿ ಜೈಲಿನಲ್ಲಿಲ್ಲ? ಮಾನವ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ವಿದ್ವಾಂಸ ಆನಂದ ತೇಲ್ತುಂಬ್ಡೆ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದು ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಕವಿ ವರವರ ರಾವ್ ಅವರದೂ ಇದೇ ಕತೆ. ಗೌತಮ ನವಲಕಾ ವರ್ಷಗಳ ಕಾಲ ಜೈಲಿನಲ್ಲಿದ್ದು ಈಗ ಗೃಹಬಂಧನದಲ್ಲಿದ್ದಾರೆ. ಸುರೇಂದ್ರ ಗಾಡ್ಲಿಂಗ್, ಸುಧೀರ್ ಧವಲೆ, ರೋನಾ ವಿಲ್ಸನ್, ಶೋಮಾ ಸೇನ್, ಮಹೇಶ್ ರಾವತ್, ಅರುಣ್ ಫೆರೇರಾ, ವರ್ನನ್ ಗೊನ್ಸಾಲ್ವೇಸ್, ಹನಿಬಾಬು, ಸಾಗರ್ ಗೋರ್ಖೆ, ರಮೇಶ್ ಗಾಯ್ಚೋರ್, ಜ್ಯೋತಿ ಜಗತಾಪ್ ಇವರೆಲ್ಲರೂ ಇದೇ ಪ್ರಕರಣದಲ್ಲಿ ಈಗಲೂ ಜೈಲಿನಲ್ಲಿದ್ದಾರೆ.  85 ರ ಮುದುಕ ಫಾದರ್ ಸ್ಟಾನ್ ಸ್ವಾಮಿಯಂತೂ ಪಾನೀಯ ಕುಡಿಯವ ಒಂದು ಸ್ಟ್ರಾ ಗಾಗಿ ಕೋರ್ಟ್ ನ ಮುಂದೆ ಅಂಗಾಲಾಚಬೇಕಾಯಿತು. ಕೊನೆಗೂ ಅವರು ಕಸ್ಟಡಿಯಲ್ಲಿಯೇ ಕೊನೆಯುಸಿರೆಳೆದರು.

ಜೆ ಎನ್ ಯು ನ ಪ್ರತಿಭಾವಂತ ವಿದ್ಯಾರ್ಥಿ ಉಮರ್ ಖಾಲೀದ್ ದೆಹಲಿ ಗಲಭೆಯ ಪಿತೂರಿಗಾರ ಎಂಬ ಆರೋಪದಲ್ಲಿ ಜೈಲಿನಲ್ಲಿದ್ದಾರೆ. ಅವರ ಜತೆಗೆ ಇನ್ನೂ ಅನೇಕ ಹೋರಾಟಗಾರರು, ಹೆಣ್ಣುಮಕ್ಕಳು ಕೂಡಾ ವರ್ಷ ವರ್ಷಗಳಿಂದ ಜೈಲಿನಲ್ಲಿದ್ದಾರೆ. ಫ್ಯಾಕ್ಟ್ ಚೆಕ್ಕರ್ ಮಹಮದ್ ಜುಬೇರ್ ರಿಗೆ ಸರಕಾರ ಕಿರುಕುಳ ಕೊಡಲಾರಂಭಿಸಿದಾಗ ಕೆಳ ಕೋರ್ಟ್ ಗಳು ಆತನಿಗೆ ರಕ್ಷಣೆ ಕೊಡಲೇ ಇಲ್ಲ. ಅದಕ್ಕೆ ಸುಪ್ರೀಂ ಕೋರ್ಟೇ ಮಧ‍್ಯಪ್ರವೇಶ ಮಾಡಬೇಕಾಯಿತು.

ಇವೆಲ್ಲ ನ್ಯಾಯಾಂಗಕ್ಕೆ ಶೋಭೆ ತರುವಂತಹ ನಡೆಗಳೇ? ನ್ಯಾಯದಾನ ಎಂಬುದು ಕಾನೂನು ಮತ್ತು ಸಂವಿಧಾನವನ್ನು ಆಧರಿಸಿಯೇ ಇರುವುದಾದರೆ ಯಾವ ಕೋರ್ಟೇ ಇರಲೀ, ಯಾವ ನ್ಯಾಯಾಧೀಶರೇ ಇರಲಿ ಅವರು ನೀಡುವ ನ್ಯಾಯ ಒಂದೇ ತೆರನಾಗಿರಬೇಕಲ್ಲವೇ? ಒಂದೇ ಪ್ರಕರಣದಲ್ಲಿ ಒಂದು ಕೋರ್ಟು ಜಾಮೀನು ನಿರಾಕರಿಸುತ್ತದೆ ಇನ್ನೊಂದು ಕೋರ್ಟು ಜಾಮೀನು ನೀಡುತ್ತದೆಯಾದರೆ ನ್ಯಾಯ ಎಂದರೆ ಏನು? ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ಒಬ್ಬರು ನ್ಯಾಯಮೂರ್ತಿಗೆ ಸಮವಸ್ತ್ರಕ್ಕಿಂತಲೂ ಹೆಣ್ಣುಮಕ್ಕಳ ಶಿಕ್ಷಣವೇ ಮುಖ್ಯವಾಗುತ್ತದಾದರೆ, ಇನ್ನೊಬ್ಬ ನ್ಯಾಯಮೂರ್ತಿಗೆ ಹೆಣ್ಣುಮಕ್ಕಳ ಶಿಕ್ಷಣಕ್ಕಿಂತಲೂ ಸಮವಸ್ತ್ರವೇ ಮುಖ್ಯವಾಗುತ್ತದೆ ಎಂದರೆ ಅದು ನ್ಯಾಯದ ಅಣಕದಂತೆ ಕಾಣುವುದಿಲ್ಲವೇ? ನ್ಯಾಯಾಲಯಗಳಲ್ಲಿ ಪ್ರಕರಣಗಳ ಇತ್ಯರ್ಥವಾದರೆ ಸಾಲದು,  ‘ನ್ಯಾಯ’ ವೂ ಸಿಗುವಂಥಾಗಬೇಕಲ್ಲವೇ?

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಚುನಾವಣೆಗಳು ನಿಷ್ಪಕ್ಷಪಾತವಾಗಿ ನಡೆಯುತ್ತಿವೆಯೇ?
ದೇಶದ ಪ್ರಜಾತಂತ್ರ ಇದೀಗ ದೊಡ್ಡ ಅಪಾಯ ಎದುರಿಸುತ್ತಿದೆ. ಚುನಾವಣೆಗಳು ಅರ್ಥಹೀನವಾಗುತ್ತಿವೆ. ಜನರಲ್ಲಿ ಚುನಾವಣೆಯ ಬಗ್ಗೆ ಜಿಗುಪ್ಸೆ ಮೂಡುತ್ತಿದೆ. ಮತದಾನದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ…ಯಾಕೆ? 2022 ರ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣಾ ಹಿನ್ನೆಲೆಯಲ್ಲಿ ಚುನಾವಣೆಗಳ ಬಗ್ಗೆ ಒಂದು ವಸ್ತುನಿಷ್ಠ ವಿಶ್ಲೇ಼ಷಣೆ ಇಂದಿನ ಶ್ರೀನಿ ಕಾಲಂ ನಲ್ಲಿ

ದೇಶದಾದ್ಯಂತ ಭಾರೀ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ, 2022 ರ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣಾ ಪ್ರಕ್ರಿಯೆ ಕೊನೆಗೂ ಮುಗಿದಿದೆ. ಫಲಿತಾಂಶಗಳೂ ಹೊರಬಿದ್ದಿವೆ. ಗುಜರಾತ್ ನಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಮತ್ತೆ ಗದ್ದುಗೆಗೆ ಮರಳಿದೆ. 2002 ರ ಕೋಮುಗಲಭೆಯ ಬಳಿಕ ಗುಜರಾತ್ ಹಿಂದೂ ಮುಸ್ಲಿಂ ನೆಲೆಯಲ್ಲಿ ಸಂಪೂರ್ಣ ಒಡೆದು ಹೋಗಿದ್ದು, ಹಿಂದೂಗಳು ಮತ್ತು ಮುಸ್ಲಿಮರು ಪ್ರತ್ಯೇಕವಾಗಿ ವಾಸಿಸುವ ಸ್ಥಿತಿಗೆ (ಗೆಟ್ಟೋವೈಸೇಶನ್) ತಲಪಿರುವ ಹಿನ್ನೆಲೆಯಲ್ಲಿ, ಹಿಂದೂಗಳ ಪಕ್ಷ ಎಂದು ಬಹಿರಂಗವಾಗಿಯೇ ಬಿಂಬಿಸಿಕೊಂಡು ಬಂದಿರುವ ಬಿಜೆಪಿಗೆ ಪರಿಸ್ಥಿತಿ ಸಹಜವಾಗಿಯೇ ಅನುಕೂಲಕರವಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಪಾಟೀದಾರ ಸಮುದಾಯವು ಮುನಿಸಿ ಕೊಂಡು ಬಿಜೆಪಿಯಿಂದ ದೂರ ಸರಿದುದರಿಂದ ಬಹಳ ಕಷ್ಟದಲ್ಲಿ ಅದು ಅಧಿಕಾರಕ್ಕೆ ಮರಳಿತ್ತು. ಆದರೆ ಈ ಬಾರಿ ಹಾರ್ದಿಕ್ ಪಟೇಲ್ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಪಾಟೀದಾರ್ ಸಮುದಾಯ ಗಟ್ಟಿಯಾಗಿ ಬಿಜೆಪಿಯ ಹಿಂದೆ ನಿಂತಿದೆ. ಅಲ್ಲದೆ ಬಿಜೆಪಿಗೆ ಆರ್ಥಿಕ ಸಂಪನ್ಮೂಲದ ಸಮಸ್ಯೆಯಿಲ್ಲ, ತಳಮಟ್ಟದ ಸಂಘಟನೆ ಗಟ್ಟಿಯಾಗಿದೆ. ಈ ಎಲ್ಲ ಕಾರಣಗಳಿಂದ ಬಿಜೆಪಿ ಅಲ್ಲಿ ಏಳನೇ ಬಾರಿಗೆ ಅಧಿಕಾರ ಹಿಡಿದಿದ್ದು, ಅಭಿವೃದ್ಧಿಗಿಂತಲೂ ಮುಖ್ಯವಾಗಿ ಅದರ ವಿಭಜನಕಾರಿ ರಾಜಕೀಯ ಸಿದ್ಧಾಂತದಿಂದಾಗಿ ಅಲ್ಲಿ ಮುಂದೆ ಎಂದೆಂದೂ ಬಿಜೆಪಿ ಆಳ್ವಿಕೆ ನಡೆಸಿದರೂ ಅಚ್ಚರಿಯೇನೂ ಇಲ್ಲ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದು ಕೊಳ್ಳುವುದು ಬಹುತೇಕ ನಿಶ್ಚಿತವಾಗಿತ್ತು. ಅಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಮರಳದ ಒಂದು ಪರಂಪರೆ, ಅಲ್ಲಿನ ಬಿಜೆಪಿಯೊಳಗೆ ಇದ್ದ ಒಳಜಗಳ, ಮುಖ್ಯಮಂತ್ರಿಯ ಪದೇ ಪದೇ ಬದಲಾವಣೆ, ಕಾಂಗ್ರೆಸ್ ಒಗ್ಗಟ್ಟಿನಿಂದ ಕೆಲಸ ಮಾಡಿದ್ದು, ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸಂಘಟಿತ ಪ್ರಚಾರ ಇವೆಲ್ಲ ಇದಕ್ಕೆ ಕಾರಣವಾಗಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ಮೋದಿ ಸರಕಾರದ ‘ಅಗ್ನಿವೀರ’ ಯೋಜನೆಯ ಬಗ್ಗೆ ಅಲ್ಲಿನ ಯುವ ಸಮುದಾಯದಲ್ಲಿ ವ್ಯಾಪಕ ಅಸಮಾಧಾನವಿತ್ತು. ಹಿಮಾಚಲ ಪ್ರದೇಶ, ಉತ್ತರಾಖಂಡ, ಬಿಹಾರ, ಪಂಜಾಬ್, ಉತ್ತರಪ್ರದೇಶ ಈ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಯುವಕರು ಸೇನೆಗೆ ಸೇರುತ್ತಾರೆ. ‘ಅಗ್ನಿವೀರ ಯೋಜನೆ ತಂದು ತಮ್ಮ ಉದ್ಯೋಗಾವಕಾಶಗಳಿಗೆ ಸಂಚಕಾರ ತಂದ ಬಿಜೆಪಿಗೆ ಪಾಠ ಕಲಿಸುತ್ತೇವೆ’ ಎಂದು ಹಿಮಾಚಲದ ಯುವಜನರು ಬಹಿರಂಗವಾಗಿಯೇ ಹೇಳುತ್ತಿದ್ದರು. ಹೀಗೆ ಶೇಕಡಾವಾರು ಮತಗಳಲ್ಲಿ ಅಷ್ಟೇನೂ ವ್ಯತ್ಯಾಸ ಇಲ್ಲವಾದರೂ 68 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ 40ಸ್ಥಾನ ಗೆದ್ದರೆ ಬಿಜೆಪಿ 25 ಸ್ಥಾನವನ್ನಷ್ಟೇ ಗೆಲ್ಲುವುದು ಸಾಧ್ಯವಾಯಿತು. ಕಾಂಗ್ರೆಸ್ ಅಧಿಕಾರಕ್ಕೇರಿತು; ಸುಖ್ವಿಂದರ್ ಸಿಂಗ್ ಮುಖ್ಯಮಂತ್ರಿಯಾದರು.

ಮಾಧ್ಯಮಗಳ ಪಕ್ಷಪಾತ ನೀತಿ

ಈ ನಡುವೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳನ್ನು ನಮ್ಮ ಮಾಧ್ಯಮಗಳು ವರದಿ ಮಾಡಿದ ಮತ್ತು ಚುನಾವಣಾ ಫಲಿತಾಂಶವನ್ನು ವಿಶ್ಲೇಷಣೆ ಮಾಡಿದ ರೀತಿಯು ದೇಶದಲ್ಲಿ ಮಾಧ್ಯಮ ಯಾವ ಕೆಳಮಟ್ಟವನ್ನು ತಲಪಿದೆ ಮತ್ತು ಎಷ್ಟೊಂದು ಪಕ್ಷಪಾತದಿಂದ ವರ್ತಿಸುತ್ತದೆ ಎಂಬುದರ ಸೂಚಕವಾಗಿದೆ. ಅವುಗಳ ಪ್ರಕಾರ ಗುಜರಾತ್ ರಾಜ್ಯ ಬಿಟ್ಟರೆ ಬೇರೆಲ್ಲೂ ಚುನಾವಣೆ ನಡೆದೇ ಇಲ್ಲ. ಪ್ರಧಾನ ಮಂತ್ರಿ ಮೋದಿಯವರು ಅಲ್ಲಿ ಕುಂತರೂ, ನಿಂತರೂ, ಏನು ಮಾಡಿದರೂ ಸುದ್ದಿ. ನೀತಿ ಸಂಹಿತೆಯ ಉಲ್ಲಂಘನೆಯನ್ನು ಪ್ರಶ್ನಿಸುವ ಧೈರ್ಯವನ್ನು ಅವು ಯಾವತ್ತೂ ತೋರಲೇ ಇಲ್ಲ. ಎಲ್ಲ ಅಕ್ರಮಗಳೂ ಸಕ್ರಮ! ಚುನಾವಣಾ ಫಲಿತಾಂಶ ಬಂದಾಗಲೂ ಅಷ್ಟೇ. ವಾಸ್ತವದಲ್ಲಿ ಗುಜರಾತ್, ಹಿಮಾಚಲ ಪ್ರದೇಶ, ದಿಲ್ಲಿ ಎಂ ಸಿ ಡಿ ಮೂರರಲ್ಲೂ ಬಿಜೆಪಿ ಅಧಿಕಾರದಲ್ಲಿತ್ತು. ಗುಜರಾತ್ ಹೊರತುಪಡಿಸಿ ಉಳಿದ ಎರಡರಲ್ಲೂ ಅದು ಅಧಿಕಾರ ಕಳೆದುಕೊಂಡಿತು. ಒಂದು ರೀತಿಯ ರಾಜಕೀಯ ಮುಖಭಂಗ. ಆದರೆ ಮಾಧ್ಯಮಗಳಿಗೆ ಅದು ಮುಖ್ಯವಾಗಲೇ ಇಲ್ಲ. ನಿರಂತರ ಒಂದೇ ಪಕ್ಷದ ಮತ್ತು ಒಬ್ಬನೇ ನಾಯಕನ ಭಜನೆ ಮಾಡಿದ್ದೇ ಮಾಡಿದ್ದು.!

ಚುನಾವಣಾ ಆಯೋಗದ ಕಾರ್ಯವೈಖರಿ

ಟಿ ಎನ್ ಶೇಷನ್ ಅವರು ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದಾಗ ಚುನಾವಣಾ ಆಯೋಗದ ಶಕ್ತಿ ಏನು ಎಂಬುದು ದೇಶಕ್ಕೆ ಮೊದಲ ಬಾರಿಗೆ ತಿಳಿಯಿತು. ಅದಕ್ಕೆ ಮೊದಲು ಮತ್ತು ಆನಂತರ ನಮ್ಮ ಚುನಾವಣಾ ಆಯೋಗಗಳು ನಿಷ್ಪಕ್ಷಪಾತವಾಗಿ ಮತ್ತು ದಿಟ್ಟವಾಗಿ ಕೆಲಸ ಮಾಡಿದ ಉದಾಹರಣೆಗಳು ತೀರಾ ವಿರಳ. ಕಳೆದ ಸುಮಾರು ಎಂಟು ವರ್ಷಗಳಿಂದಂತೂ ಸಂಪೂರ್ಣ ಕೇಂದ್ರ ಸರಕಾರದ ಕೈಗೊಂಬೆ. ಯಾರು ಚುನಾವಣಾ ಆಯೋಗದ ಚುಕ್ಕಾಣಿ ಹಿಡಿದರು, ಹೇಗೆ ಹಿಡಿದರು, ಸ್ವತಃ ಪ್ರಧಾನಿಯೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದಾಗ ಅವರು ಏನು ಕ್ರಮ ತೆಗೆದುಕೊಂಡರು ಎಂಬುದನ್ನು ಸುಮ್ಮನೆ ಅವಲೋಕಿಸಿದರೂ ಸಾಕು ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಜಿಗುಪ್ಸೆ ಹುಟ್ಟೀತು. ಇದಕ್ಕೆ ಒಂದು ಕಾರಣ ಚುನಾವಣಾ ಆಯೋಗಕ್ಕೆ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಒಕ್ಕೂಟ ಸರಕಾರದ ಬಳಿ ಇರುವುದು ಮತ್ತು ಸರಕಾರ ತಮಗೆ ಬೇಕಾದವರನ್ನು ನೇಮಕಮಾಡುವುದು!

ಇತ್ತೀಚೆಗೆ ಅರುಣ್ ಗೋಯಲ್ ಅವರನ್ನು ಚುನಾವಣಾ ಕಮಿಷನರ್ ಆಗಿ ನೇಮಕ ಮಾಡಿದಾಗ ಉಂಟಾದ ವಿವಾದ ಇದಕ್ಕೆ ಅತ್ಯುತ್ತಮ ಉದಾಹರಣೆ. ಅರುಣ್ ಗೋಯಲ್ 1985 ರ ಬ್ಯಾಚ್ ನ ಪಂಜಾಬ್ ಕೇಡರ್ ನ ಐ ಎ ಎಸ್ ಅಧಿಕಾರಿ. ಈಗಿನ ಒಕ್ಕೂಟ ಸರಕಾರದಲ್ಲಿ ಭಾರೀ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದವರು. ಡಿಸೆಂಬರ್ 31, 2022 ಕ್ಕೆ ನಿವೃತ್ತಿಯಾಗಲಿದ್ದವರು. ನಿವೃತ್ತಿಗೆ ಇನ್ನೇನು ಆರು ವಾರ ಇರುವಾಗ ಅವರು ಸ್ವಯಂ ನಿವೃತ್ತಿಗೆ (ವಿಆರ್ ಎಸ್) ಅರ್ಜಿ ಹಾಕುತ್ತಾರೆ. ನವೆಂಬರ್ 18 ರಂದು ಅವರ ಮನವಿಯನ್ನು ಅಂಗೀಕರಿಸಲಾಗುತ್ತದೆ. 19 ರಂದು ಅವರನ್ನು ಚುನಾವಣಾ ಕಮಿಷನರ್ ಆಗಿ ನೇಮಕ ಮಾಡಲಾಗುತ್ತದೆ! ಮುಂದಿನ 2027 ರ ಡಿಸೆಂಬರ್ ವರೆಗೂ ಇವರು ಚುನಾವಣಾ ಆಯುಕ್ತರಾಗಿರುತ್ತಾರೆ !

ಈ ವಿಚಾರವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಒಂದೇ ದಿನದಲ್ಲಿ, ಅದೂ ತಿಂಗಳುಗಳ ಕಾಲದಿಂದ ಖಾಲಿ ಬಿದ್ದಿದ್ದ ಹುದ್ದೆಗೆ ಅಷ್ಟು ತರಾತುರಿಯಲ್ಲಿ ನೇಮಕ ಮಾಡುವ ಅಗತ್ಯ ಏನು? ಇದಕ್ಕೆ ಅನುಸರಿಸಲಾದ ಪ್ರಕ್ರಿಯೆಯ ಎಲ್ಲ ವಿವರ ಸಲ್ಲಿಸಿ ಎಂದು ಅದು ಅಟಾರ್ನಿ ಜನರಲ್ ಆರ್ ವೆಂಕಟರಮಣಿಗೆ ಹೇಳಿದೆ. ಚುನಾವಣಾ ಆಯೋಗದ ಆಯುಕ್ತರನ್ನು ನೇಮಕ ಮಾಡಲು ಒಂದು ನಿಷ್ಪಕ್ಷಪಾತವಾದ ಒಂದು ಸಮಿತಿ ಬೇಡವೇ? ಚುನಾವಣಾ ಆಯುಕ್ತರು ಪ್ರಧಾನಿಯ ಮೇಲೂ ಕ್ರಮ ಜರುಗಿಸುವಂತಿರ ಬೇಕಲ್ಲವೇ? ಎಂದು ಅದು ಹೇಳಿದೆ. ಪ್ರಧಾನಿಯಿಂದ ನೇಮಕಗೊಂಡ ಆಯುಕ್ತರು ಪ್ರಧಾನಿಯ ಮೇಲೆ ಕ್ರಮ ಜರುಗಿಸುವರೇ ಎಂಬುದು ಕೋರ್ಟ್ ನ ಪರೋಕ್ಷ ಪ್ರಶ್ನೆಯಾಗಿತ್ತು.

ಗುಜರಾತ್ ಗೆ ಎರಡು ಹಂತದ ಚುನಾವಣೆ!

‘ಒಂದು ದೇಶ ಒಂದು ಚುನಾವಣೆ’ ಇದು ಕಳೆದ ಎಂಟು ವರ್ಷಗಳಲ್ಲಿ ಪದೇ ಪದೇ ಕೇಳಿಬರುತ್ತಿರುವ ಒಂದು ಮಾತು. ಈ ಬಗ್ಗೆ ಮಾತನಾಡಬಾರದ ಚುನಾವಣಾ ಆಯೋಗದಂತಹ ಸ್ವತಂತ್ರ ಸಂಸ್ಥೆಗಳೂ ಆಗಾಗ ಇದರ ಬಗ್ಗೆ ಮಾತನಾಡುತ್ತಾ, ‘ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆಗೆ ಒಮ್ಮೆಲೇ ಚುನಾವಣೆ ನಡೆಸಲು ತಾವು ಸಿದ್ಧ’ ಎನ್ನುತ್ತಿರುತ್ತವೆ. ದೇಶದಲ್ಲಿ ಒಮ್ಮೆಲೇ ಚುನಾವಣೆ ನಡೆಸಲು ಸಿದ್ಧ ಎನ್ನುವ ಇದೇ ಚುನಾವಣಾ ಆಯೋಗ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಗೆ ಒಮ್ಮೆಲೇ ಚುನಾವಣಾ ದಿನಾಂಕ ಘೋಷಿಸುವುದಿಲ್ಲ (ಮತಗಣನೆ ಮಾತ್ರ ಒಂದೇ ದಿನ). ಗುಜರಾತ್ ನಲ್ಲಿ ಪ್ರಧಾನಿಗಳಿಗೆ ಅನುಕೂಲ ಮಾಡಿಕೊಡಲು ಹೀಗೆ ಮಾಡಲಾಗುತ್ತಿದೆಯೋ ಎಂಬ ಅನುಮಾನ ಬರುವಂತೆ ಅಲ್ಲಿ ಅನೇಕ ವಾರಗಳ ಬಳಿಕ ಚುನಾವಣಾ ದಿನಾಂಕ ಘೋಷಿಸಲಾಗುತ್ತದೆ. ಕೇವಲ 182 ವಿಧಾನಸಭಾ ಸ್ಥಾನ ಇರುವ ಗುಜರಾತ್ ನಲ್ಲಿ ಎರಡು ಹಂತದ ಚುನಾವಣೆ ಘೋಷಿಸಲಾಗುತ್ತದೆ. ನಿಯಮದ ದುರುಪಯೋಗ ಮಾಡಿಕೊಂಡು ಮತದಾನದ ದಿನವೂ ಪ್ರಧಾನಿಗಳು ಪಕ್ಕದ ಇನ್ನೊಂದು ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಭಾಷಣ ನಡೆಸುತ್ತಾರೆ. ತಾಯಿಯನ್ನು ಭೇಟಿ ಮಾಡುತ್ತಾರೆ. ಮತ ಚಲಾವಣೆಯ ಸಮಯದಲ್ಲಿಯೂ ರೋಡ್ ಶೋ ನಡೆಸುತ್ತಾರೆ. ಮಾಧ್ಯಮ ಸ್ವಾತಂತ್ರ್ಯ ಬಳಸಿಕೊಂಡು ಮಾಧ್ಯಮಗಳು ಇವುಗಳ ಲೈವ್ ಪ್ರಸಾರ ನಡೆಸುತ್ತವೆ. ದೂರು ಕೊಟ್ಟರೆ ‘ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ’ ಎಂದು ಆಯೋಗ ಹೇಳುತ್ತದೆ. ಅಮಿತ್ ಶಾ, 2002 ರಲ್ಲಿ ‘ಅವರಿಗೆ’ ಪಾಠ ಕಲಿಸಿದೆವು ಎನ್ನುತ್ತಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಲ್ಲ ಎನ್ನುತ್ತದೆ ಆಯೋಗ!

ಚುನಾವಣಾ ಬಾಂಡುಗಳೆಂಬ ಭ್ರಷ್ಟ ಯೋಜನೆ

ಈಗಿನ ಚುನಾವಣೆಗಳು ಉಮೇದುವಾರರ ಪಾಲಿಗೆ ಬಹು ದುಬಾರಿ. ಲಕ್ಷಗಟ್ಟಲೆ ಕೆಲವೊಮ್ಮೆ ಕೋಟಿಗಟ್ಟಲೆ ಹಣ ವ್ಯಯಿಸಬೇಕು. ಜೊತೆಯಲ್ಲಿ ಮಾಧ್ಯಮಗಳೂ ನಿಮ್ಮ ಜತೆಗಿರಬೇಕು. ಆ ಎಲ್ಲ ಅನುಕೂಲಗಳೂ ಈಗ ದೇಶದಲ್ಲಿ ಒಂದು ಪಕ್ಷಕ್ಕಿದೆ. ಪಾರದರ್ಶಕತೆಯು ಬಹುಮುಖ್ಯ ಅಂಶವಾಗಿರಬೇಕಾದ ಪ್ರಜಾತಂತ್ರದಲ್ಲಿ ‘ಚುನಾವಣಾ ಬಾಂಡು’ ಎನ್ನುವುದೇ ದೊಡ್ಡದೊಂದು ಭ್ರಷ್ಟ ಯೋಜನೆ. ಈ ಬಾಂಡ್ ಮೂಲಕ ಕೋಟಿಗಟ್ಟಲೆ ಹಣ ರಾಜಕೀಯ ಪಕ್ಷಗಳಿಗೆ ಬರುತ್ತದೆ. ಆದರೆ

ಅದನ್ನು ಕೊಟ್ಟವರು ಯಾರು ಎಂಬುದು ಯಾರಿಗೂ ತಿಳಿಯದು. 2017- 18 ಮತ್ತು 2019-20 ರಲ್ಲಿ 19 ಪಕ್ಷಗಳು 6,201 ಕೋಟಿ ಹಣ ಪಡೆದವು. ಇದರಲ್ಲಿ ಬಿಜೆಪಿಗೆ 68% ಅಂದರೆ 4,215.89 ಕೋಟಿ ಬಂದರೆ, ಕಾಂಗ್ರೆಸ್ ಗೆ ಕೇವಲ 11.3%, ಅಂದರೆ 706.2 ಕೋಟಿ ಬಂತು. ದೇಶದ ಒಟ್ಟು 105 ರಾಜಕೀಯ ಪಕ್ಷಗಳ ಪೈಕಿ ಚುನಾವಣಾ ಬಾಂಡ್ ನ ಲಾಭವಾದುದು ಕೇವಲ 19 ಪಕ್ಷಗಳಿಗೆ ಎಂದು ‘ದಿ ಕ್ವಿಂಟ್’ ಹೇಳಿದೆ. ಎಲ್ಲವೂ ಗುಪ್ತ ಗುಪ್ತ. ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದರೂ ಇದುವರೆಗೆ ಪ್ರಯೋಜನವಾಗಿಲ್ಲ. ಈ ಚುನಾವಣಾ ಬಾಂಡುಗಳ ಮೂಲಕ ಬಹುದೊಡ್ಡ ಪ್ರಮಾಣದಲ್ಲಿ ಹಣ ಬರುವುದು ಸಹಜವಾಗಿಯೇ ಅಧಿಕಾರದಲ್ಲಿರುವ ಪಕ್ಷಕ್ಕೆ, ಅಂದರೆ ಈಗ ಬಿಜೆಪಿಗೆ. ಹಣ ಮತ್ತು ಅಧಿಕಾರ ಇದ್ದರೆ ಮಾಧ್ಯಮಗಳನ್ನು ಹೇಗೂ ನಿಯಂತ್ರಿಸಬಹುದು. ಆಮಿಷ ಮತ್ತು ಬೆದರಿಕೆ ಎರಡೂ ಇಲ್ಲಿ ಕೆಲಸಕ್ಕೆ ಬರುತ್ತದೆ. ಈಗಂತೂ ಆಳುವವರ ಆಪ್ತ ಸ್ನೇಹಿತ ಬಿಲಿಯಾಧಿಪತಿಗಳು ದೇಶದ ಬಹುತೇಕ ಎಲ್ಲ ಮಾಧ್ಯಮ ಸಂಸ್ಥೆಗಳನ್ನು ಕೊಂಡುಕೊಂಡಿದ್ದು ಅದರ ಲಾಭವೂ ಆಗುತ್ತಿರುವುದು ಬಿಜೆಪಿಗೆ. ಅಂದಮೇಲೆ ಸಮಾನ ನೆಲೆಯ (ಲೆವೆಲ್ ಪ್ಲೇಯಿಂಗ್ ಫೀಲ್ಡ್) ಸ್ಪರ್ಧೆ ಎಲ್ಲಿದೆ?!

ಇಷ್ಟೆಲ್ಲ ಆದ ಮೇಲೆ ಒಂದು ಸರಕಾರ ಚುನಾಯಿತವಾಗಿ ಅಸ್ತಿತ್ವಕ್ಕೆ ಬಂತು ಅಂತಿಟ್ಟು ಕೊಳ್ಳಿ. ಬಿಜೆಪಿಯೇತರ ಪಕ್ಷದ ಸರಕಾರವಾದರೆ ಅದು ಎಷ್ಟು ದಿನ ಉಳಿದು ಕೊಂಡೀತು? ದಶಕದ ಹಿಂದೆ ‘ಆಪರೇಶನ್ ಕಮಲ’ ಎಂಬ ಒಂದು ಅನೈತಿಕ ರಾಜಕೀಯ ಪರಂಪರೆ ಕರ್ನಾಟಕದಿಂದಲೇ ಶುರುವಾಯಿತು. ಒಂದು ಪಕ್ಷದಿಂದ ಗೆದ್ದ ಶಾಸಕರಿಗೆ ಹಣಕಾಸಿನ ಮತ್ತು ಮಂತ್ರಿ ಪದವಿಯ ಆಮಿಷ ಒಡ್ಡಿ ಅಥವಾ ಕೇಂದ್ರೀಯ ಸಂಸ್ಥೆಗಳ ಮೂಲಕ ಬೆದರಿಕೆ ಒಡ್ಡಿ ಅವರು ಬೇರೊಂದು ಪಕ್ಷಕ್ಕೆ ಹೋಗುವಂತೆ ಮಾಡುವುದು, ಆ ಮೂಲಕ ಸರಕಾರಗಳನ್ನು ಉರುಳಿಸಿ ಚುನಾವಣಾ ಮ್ಯಾಂಡೇಟುಗಳನ್ನು ಅಣಕ ವಾಡುವುದು. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಬಿಜೆಪಿ ಅಗತ್ಯ ಬಹುಮತದ ಮೂಲಕ ಅಧಿಕಾರಕ್ಕೆ ಬರಲಿಲ್ಲ. ಆದರೆ ಆ ಮೂರೂ ರಾಜ್ಯಗಳಲ್ಲಿ ಈಗ ಬಿಜೆಪಿ ಆಡಳಿತವಿದೆ. ಅದು ಹೇಗೆ ಅಧಿಕಾರಕ್ಕೆ ಬಂತು ಎಂಬುದನ್ನು ವಿವರಿಸಿ ಹೇಳುವ ಅಗತ್ಯವಿಲ್ಲ. ಎಲ್ಲ ಅಕ್ರಮಗಳೂ ಕ್ರಮಬದ್ಧವಾಗಿಯೇ ನಡೆದುವು ಮತ್ತು ಇದಕ್ಕೆ ಬಹುತೇಕ ಮಾಧ್ಯಮಗಳ ಬೆಂಬಲವಿತ್ತು. ಇದು ನೈತಿಕವಾಗಿ ಮಾತ್ರವಲ್ಲ ಎಲ್ಲ ರೀತಿಯಲ್ಲೂ ತಪ್ಪು ಮತ್ತು ಇದು ಪ್ರಜಾತಂತ್ರಕ್ಕೆ ಅಪಾಯ ಎಂಬುದು ಇವಕ್ಕೆ ಅನಿಸಲೇ ಇಲ್ಲ!

ಈ ಮತ್ತು ಇಂತಹ ಅನೇಕ ಕಾರಣದಿಂದಾಗಿ ದೇಶದ ಪ್ರಜಾತಂತ್ರ ಇದೀಗ ದೊಡ್ಡ ಅಪಾಯ ಎದುರಿಸುತ್ತಿದೆ. ಚುನಾವಣೆಗಳು ಅರ್ಥಹೀನವಾಗುತ್ತಿವೆ. ಜನರಲ್ಲಿ ಚುನಾವಣೆಯ ಬಗ್ಗೆ ಜಿಗುಪ್ಸೆ ಮೂಡುತ್ತಿದೆ. ಮತದಾನದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಹೇಳಿದ ಹಾಗೆ ಪ್ರಧಾನಿಯ ಮೇಲೂ ಕ್ರಮ ಜರುಗಿಸಬಲ್ಲ ಚುನಾವಣಾ ಆಯುಕ್ತರ ನೇಮಕವಾಗಬೇಕು. ಪಕ್ಷಗಳಿಗೆ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಅಂತಾರಲ್ಲ ಅದಿರಬೇಕು. ಜನಪ್ರತಿನಿಧಿಗಳಿಗೆ ಒಂದು ಪಕ್ಷದಿಂದ ಗೆದ್ದ ಮೇಲೆ ಇನ್ನೊಂದು ಪಕ್ಷಕ್ಕೆ ಹೋಗುವ ಅವಕಾಶ ಇರಕೂಡದು. ಹಾಗೆ ಹೋದರೆ ಒಂದಷ್ಟು ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸದಂತಾಗಬೇಕು. ಇವೆಲ್ಲ ಆಗಿಲ್ಲವೆಂದರೆ ದೇಶದ ಪ್ರಜಾತಂತ್ರ, ವಿಶೇಷವಾಗಿ ಸಂಸದೀಯ ಪ್ರಜಾತಂತ್ರ ಕಾಗದದ ಮೇಲಷ್ಟೇ ಉಳಿಯುತ್ತದೆ. ಚುನಾವಣೆ ಕೇವಲ ಒಂದು ಪ್ರಹಸನವಾಗುತ್ತದೆ.

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಒಂದು ಬಾಗಿಲು ಮುಚ್ಚಿಕೊಂಡಾಗ ಇನ್ನೊಂದು ಬಾಗಿಲು ತೆರೆದುಕೊಳ್ಳುತ್ತದೆ
ಅಂಗ ವೈಕಲ್ಯ ಹೊಂದಿದ ಬಹುತೇಕರು ನನ್ನಿಂದ ಏನೂ ಸಾಧ್ಯವಿಲ್ಲ ಎಂಬ ಮನೋಭಾವನೆಯಲ್ಲಿ ಬದುಕುವುದೇ ಹೆಚ್ಚು. ಆದರೆ, ಅಂತ:ಶಕ್ತಿ ಮತ್ತು ಆತ್ಮವಿಶ್ವಾಸಗಳೆಂಬ ಅದಮ್ಯ ಶಕ್ತಿಗಳಿದ್ದರೆ ಎಂತಹಾ ವೈಕಲ್ಯವನ್ನು ಕೂಡ ಮೆಟ್ಟಿ ನಿಲ್ಲಬಹುದು ಎಂಬುದನ್ನು ಶ್ರೀನಿವಾಸ ಕಾರ್ಕಳ ಸ್ವತ: ಅನುಭವಿಸಿ ಬರೆದಿದ್ದಾರೆ. ಈ ಲೇಖನ ಕೆಲವರಿಗಾದರೂ ಸ್ಪೂರ್ತಿಯಾಗಿ ಅವರ ಬದುಕಿನಲ್ಲಿ ಉತ್ಸಾಹ ಪ್ರೀತಿ ಚಿಮ್ಮಿಸಲಿ ಎಂಬುದು ಪೀಪಲ್‌ ಮೀಡಿಯಾದ ಆಶಯವಾಗಿದೆ.( ಡಿ.3 ವಿಶ್ವ ವಿಶೇಷ ಚೇತನರ ದಿನಾಚರಣೆ)

ಒಂದು ಸಣ್ಣ ಅವಘಡ. ಒಂದು ಸಣ್ಣ ಏಟು. ಬಿದ್ದುದು ಮಾತ್ರ ಅತ್ಯಂತ ಸೂಕ್ಷ್ಮ ಜಾಗಕ್ಕೆ. ಒಂದು ಆಸ್ಪತ್ರೆಯಲ್ಲಿ ಎರಡು ದಿನ. ಆನಂತರ ಮಣಿಪಾಲಕ್ಕೆ ಪಯಣ. ಸ್ಟ್ರೆಚರ್ ನಲ್ಲಿ ಮಲಗಿಯೇ ಇದ್ದೇನೆ. ಒಳ್ಳೆಯ ಆಸ್ಪತ್ರೆಗೆ ಬಂದಿದ್ದೇನೆ. ಎಲ್ಲವೂ ಸರಿಹೋಗುತ್ತದೆ ಎಂಬ ಧೈರ್ಯ. ಬೆಳಗಿನ ಹೊತ್ತು ಸುಮಾರು ಆರೋ ಏಳೋ ಗಂಟೆ ಇರಬಹುದು. ಸರ್ಜರಿ ಮಾಡಲಿರುವ ಡಾಕ್ಟರ್ ಮೊಹಂತಿ ಬಳಿ ಬಂದರು. ವೈದ್ಯಕೀಯ ವರದಿಗಳನ್ನು ನೋಡಿದರು. ಸಾಧ‍್ಯತೆ 50:50. ‘ನರಕ್ಕೆ ಆದ ಹಾನಿಯನ್ನು ಜಗತ್ತಿನ ಎಲ್ಲೂ ಸರಿಪಡಿಸಲು ಸಾಧ್ಯವಿಲ್ಲ, ನಮ್ಮ ಕೆಲಸ ನಾವು ಮಾಡುತ್ತೇವೆ’ ಎಂದರು. ಒಮ್ಮೆ ಚಿಂತೆಯಾಯಿತು. ಆದರೂ ಏನೋ ಭರವಸೆ. ಯಾಕೆಂದರೆ ಭವಿಷ್ಯ ಹೇಳಲು ಯಾರಿಗೂ ಸಾಧ್ಯವಿಲ್ಲ ಅಲ್ಲವೇ? ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ರೀತಿಯಲ್ಲವೇ? ಆರೋಗ್ಯಕ್ಕೆ ಸಂಬಂಧಿಸಿದಂತೆ ಪವಾಡದಂತಹ ಘಟನೆಗಳು ನಡೆದ ಉದಾಹರಣೆಗಳು ಎಷ್ಟಿಲ್ಲ? ಅಲ್ಲದೆ ಡಾಕ್ಟರ್ ಅರ್ಧದಷ್ಟು ಅವಕಾಶ ಇದೆಯೆಂದಿದ್ದಾರಲ್ಲ?! ಮನಸಿನಲ್ಲಿ ನಕಾರಾತ್ಮಕ ಭಾವನೆಗಳು ಬರಲೇ ಇಲ್ಲ. ಮುಗ್ಧತೆಯೋ, ಮಾನಸಿಕ ಆಘಾತದ ಪರಿಣಾಮವೋ, ಪ್ರಬುದ್ಧತೆಯೋ ಅರಿಯದು.

ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಆಪರೇಶನ್ ಥಿಯೇಟರ್ ಗೆ ಒಯ್ದರು. ಕೈಗೆ ಏನೇನೋ ವಯರ್ ಸಿಕ್ಕಿಸಿದರು. ಅರಿವಳಿಕೆ ಕೊಟ್ಟಿರಬೇಕು. ನಿಮ್ಮ ಹೆಸರು? ಏನಾದುದು? ಹೀಗೆ ಏನೇನೋ ಪ್ರಶ್ನೆ ಕೇಳುತ್ತಿದ್ದರು. ನಾನು ದಿಟ್ಟವಾಗಿ ಉತ್ತರಿಸುತ್ತಿದ್ದೆ. ಆಮೇಲೆ ಮಂಪರಿನಲ್ಲಿಯೇ ಏನೇನೋ ಬಡಬಡಿಸಿದೆ.  ಬಳಿಕ ಏನಾಯಿತೋ ಗೊತ್ತಿಲ್ಲ. ಎಚ್ಚರಗೊಳ್ಳುವಾಗ ಪೋಸ್ಟ್ ಆಪರೇಶನ್ ಥಿಯೇಟರ್ ನಲ್ಲಿದ್ದೆ. ನಸುಕಿನ ಹೊತ್ತು. ಆರೇಳು ಗಂಟೆಗಳ ಸರ್ಜರಿಗೆ ಒಳಗಾಗಿದ್ದೆ ಎಂಬುದು ತಿಳಿಯಿತು.

ಬೆಳಗಾದ ಮೇಲೆ ತಂದು ಜನರಲ್ ವಾರ್ಡ್ ಗೆ ಹಾಕಿದರು. ಕಾಲುಗಳನ್ನು ಅತ್ತಿತ್ತ ಮಾಡುವುದಿರಲಿ, ಅವು ಇವೆಯೋ ತಿಳಿಯುತ್ತಿರಲಿಲ್ಲ. ಬೆನ್ನು ಮೂಳೆಗೆ ‘ಹ್ಯಾರಿಂಗ್ ಟನ್ ರಾಡ್’ ನ ಬೆಂಬಲಕೊಟ್ಟಿದ್ದಾರೆ ಎಂದು ತಿಳಿಯಿತು. ಒಂದೆರಡು ವಾರಗಳ ಬಳಿಕ ದೇಹದ ಮುಂಭಾಗ ಮತ್ತು ಬೆನ್ನಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಜಾಕೆಟ್ ಬಿಗಿದು, ಸ್ವಲ್ಪ ದಿನಗಳ ನಂತರ ಬನ್ನಿ ಎಂದು ಹೇಳಿ ಮನೆಗೆ ಕಳುಹಿಸಿಕೊಟ್ಟರು.

ಏಳುವಂತಿಲ್ಲ. ಮಲಗಿಕೊಂಡೇ ಇರಬೇಕು. ಇಷ್ಟು ದಿನ ದೇಹದ ಬಗ್ಗೆ ಮಾತ್ರ ಯೋಚಿಸುತ್ತಿದ್ದ ಮನಸು ಈಗ ಬದುಕಿನ ಬಗ್ಗೆ ಯೋಚಿಸಲಾರಂಭಿಸಿತು. ಐದನೆಯ ತರಗತಿಯಲ್ಲಿ ಓದುತ್ತಿದ್ದ ಮಗ. ಉದ್ಯೋಗಿಯಲ್ಲದ ಸಂಗಾತಿ. ಮುಂದೆ ಬದುಕು ಹೇಗೆ? ಒಮ್ಮೊಮ್ಮೆ ಅಳುವೇ ಬರುತ್ತಿತ್ತು. ನನ್ನನ್ನು ಅರಬೀ ಕಡಲಿಗೆ ಒಯ್ದ ಕಾಲು, ಪಶ್ಚಿಮ ಘಟ್ಟಗಳ ನೆತ್ತಿಯಲ್ಲಿ ಓಡಾಡಿಸಿದ ಕಾಲು, ಮುಂಬೈ, ದೆಹಲಿ, ಶಿಮ್ಲಾ ಸುತ್ತಿಸಿದ ಕಾಲು, ನಾಟಕ, ಕವಿಗೋಷ್ಠಿ, ಆಕಾಶವಾಣಿ, ಸಾಹಿತ್ಯ ಸಮ್ಮೇಳನ ಹೀಗೆ ಕಾಲಿಗೆ ಚಕ್ರ ಸಿಕ್ಕಿಸಿ ಕೊಂಡಂತೆ ಓಡಾಡುತ್ತಿದ್ದಾತನ ಕಾಲು ಇದ್ದೂ ಇಲ್ಲದಂತಾದರೆ ಪರಿಸ್ಥಿತಿ ಹೇಗಿರಬಹುದು?

ಆ ಒಂದು ಭರವಸೆಯ ಮಾತು

ಐದಾರು ತಿಂಗಳು ಕಳೆಯಿತು. ಒಂದೆಡೆ ಆರೋಗ್ಯದ ಚಿಂತೆಯಾದರೆ ಇನ್ನೊಂದೆಡೆ ಉದ್ಯೋಗದ ಮತ್ತು ಬದುಕಿನ ಚಿಂತೆ. ಒಂದು ದಿನ ತುಂಬಾ ತುಂಬ ಚಿಂತೆಯಿಂದ ಮನಸು ಭಾರವಾಗಿ ಅನ್ಯ ಮನಸ್ಕನಾಗಿದ್ದ ಹೊತ್ತು “ನೀವು ಚಿಂತೆ ಮಾಡುವುದು ಯಾಕೆ? ನಿಮ್ಮಲ್ಲಿ ಪ್ರತಿಭೆ ಇದೆ, ಹೇಗಾದರೂ ಬದುಕೋಣ” ಎಂದಳು ಸಂಗಾತಿ. ಆ ಒಂದು ಧೈರ್ಯದ ಭರವಸೆಯ ಮಾತು ಇದ್ದಕ್ಕಿದ್ದಂತೆ ಸಂಜೀವಿನಿಯಂತೆ ಕೆಲಸ ಮಾಡಿತು. ಬದುಕಿನ ಟರ್ನಿಂಗ್ ಪಾಯಿಂಟ್ ನಂತಾಯಿತು.

ಇಷ್ಟು ದಿನ ನಾನು ದುಡಿಯಲು ಹೋಗುತ್ತಿದ್ದೆ. ಆಕೆ ಮನೆಯಲ್ಲಿರುತ್ತಿದ್ದಳು. ಈಗ ಆಕೆ ದುಡಿಯಲು ಹೊರಗೆ ಹೋದಳು, ನಾನು ಮನೆಯಲ್ಲಿದ್ದೆ. ನನ್ನ ಚಿಕಿತ್ಸೆ, ಆರೈಕೆ, ಮನೆಯ ಸಾಮಾನ್ಯ ಕೆಲಸಗಳು, ಹೊರಗೆ ದುಡಿಮೆಯ ಕೆಲಸ, ಆಕೆಯ ಮೇಲಿನ ಹೊರೆಯಾದರೋ ಅಸಾಧ್ಯವಾದುದು. ಆದರೆ ಆಕೆ ಅದನ್ನು ತೋರಿಸುತ್ತಿರಲಿಲ್ಲ. ಹಾಗೆ ತೋರಿಸುವುದು ಆಕೆಯ ಜಾಯಮಾನವೇ ಆಗಿರಲಿಲ್ಲ. ಬಹುಷಃ ಇದುವೇ ನನ್ನ ಭರವಸೆಯಾಗಿತ್ತು. ನಾನು ಮಗುವಿನಂತಾಗಿದ್ದೆ. ನನ್ನ ಪಾಲಿಗೆ ಹೆಂಡತಿಯಾಗಿದ್ದವಳು ಈಗ ಅಕ್ಷರಶಃ ತಾಯಿಯಾಗಿದ್ದಳು.

ನನ್ನ ಹಿಂದಿನ ಸಾಹಿತ್ಯ ಚಟುವಟಿಕೆ ಈಗ ಉಪಯೋಗಕ್ಕೆ ಬರಲಾರಂಭಿಸಿತು. ಗೆಳೆಯರೊಬ್ಬರ ಮೂಲಕ ಸಿಕ್ಕ ಅನುವಾದದ ಕೆಲಸವನ್ನು ಮಾಡ ತೊಡಗಿದೆ. ಇಂಗ್ಲಿಷ್ ನಿಂದ ಕನ್ನಡಕ್ಕೆ. ಬಹಳ ಅಲ್ಲವಾದರೂ ಒಂದಷ್ಟು ಹಣ ಬರುತ್ತಿತ್ತು. ಏನೋ ಸಂಪಾದನೆ ಮಾಡುತ್ತಿದ್ದೇನೆ ಎಂಬ ಸಮಾಧಾನ.

ಮೂರ್ನಾಲ್ಕು ತಿಂಗಳ ಬಳಿಕ ಹಾಸಿಗೆಯಿಂದ ಗಾಲಿಕುರ್ಚಿಗೆ ಪ್ರಮೋಶನ್ ಆಯಿತು. ಅಶಕ್ತತೆಯ ಎಲ್ಲ ಸಮಸ್ಯೆಯ ನಡುವೆಯೂ ಏನೋ ಆತ್ಮವಿಶ‍್ವಾಸ. ಹೊಸ ಬದುಕಿಗೆ ಹೊಂದಿಕೊಳ್ಳಲಾರಂಭಿಸಿದೆ. ಹೆಚ್ಚು ಹೆಚ್ಚು ಸ್ವಾವಲಂಬಿಯಾದೆ. ಬರೆವಣಿಗೆಯ ಕೆಲಸಗಳು ನಿರಂತರವಾದವು. ಅಂದಾಜು ವರ್ಷ ಕಳೆಯಿತು. ಈಗ ಇನ್ನಷ್ಟು ಸ್ವಾವಲಂಬಿ. ಸಂಗಾತಿ ಬೆಳಗ್ಗೆ ಮನೆಯಿಂದ ಹೊರಟು ಹೋದರೆ ಸಂಜೆ ವಾಪಸ್ ಬರುವವರೆಗೂ ಮನೆಯಲ್ಲಿ ಒಬ್ಬನೇ ಇರುತ್ತಿದ್ದೆ. ಎಲ್ಲ ಮ್ಯಾನೇಜ್ ಮಾಡುತ್ತಿದ್ದೆ.

ಜಗತ್ತು ನಾವಂದುಕೊಂಡಷ್ಟು ಕೆಟ್ಟದಾಗಿಲ್ಲ

ನಾವು ಗೆಳೆಯರು, ಹಿತೈಷಿಗಳು ಎಂದು ಕೊಂಡಿದ್ದ ಅನೇಕರು ನಮ್ಮ ಕಷ್ಟ ಕಾಲದಲ್ಲಿ ಕೈಕೊಟ್ಟಾಗ ಮನುಷ್ಯ ಸಂಬಂಧಗಳು, ಇಡೀ ಸಮಾಜದ ಬಗ್ಗೆಯೇ ಭ್ರಮ ನಿರಸನಗೊಳ್ಳುವುದಿದೆ. ಇಡೀ ಸಮಾಜವೇ ದುಷ್ಟ ಮತ್ತು ಸಂವೇದನಾಹೀನ ಅಂದುಕೊಳ್ಳುವುದಿದೆ. ಆದರೆ ಇದು ಪೂರ್ಣ ಸರಿಯಲ್ಲ. ಸಮಾಜ ಇರುವುದೇ ಹೀಗೆ ಎಂದು ಮುಂದೆ ಹೋಗುತ್ತಿರಬೇಕು. ನಾನು ಹಾಸಿಗೆ ಹಿಡಿದು ಆದಾಯವೇ ಇಲ್ಲದ ಹೊತ್ತು ನನ್ನ ಸಹೋದ್ಯೋಗಿಗಳು ನನ್ನನ್ನು ವರ್ಷಗಳ ಕಾಲ ಸಾಕಿದರು. ನನ್ನ ಮನೆಯವರು ನನ್ನ ಸಂಗಾತಿಯ ಮನೆಯವರು ಎಲ್ಲ ರೀತಿಯಲ್ಲಿಯೂ ಜತೆಗಿದ್ದರು. ಕೆಲ ಪರಿಚಿತರು ನಮ್ಮನ್ನು ಮರೆತರು ಅನಿಸಿದಾಗ ನಮಗೆ ಪರಿಚಯವೇ ಇಲ್ಲದವರು ದೇವರ ಹಾಗೆ ಸಹಾಯಕ್ಕೆ ಬಂದರು. ಪರಿಚಯವೇ ಇಲ್ಲದ ವಕೀಲರೊಬ್ಬರು ಲಕ್ಷಗಳ ವಿಮಾ ಪರಿಹಾರ ತೆಗೆಸಿಕೊಟ್ಟು ‘ಶುಲ್ಕ ಎಷ್ಟು?’ ಎಂದು ಕೇಳಿದಾಗ ‘ಶುಲ್ಕ ಬೇಡ, ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯಾಗುವುದಾದರೆ ಒಂದು ರುಪಾಯಿ ಕೊಡಿ’ ಅಂದರು! ಜಗತ್ತಿನಲ್ಲಿ ಇಂಥವರೂ ಇದ್ದಾರೆ. ಇವರೇ ಜಗತ್ತಿನ, ಬದುಕಿನ ಭರವಸೆ.

ನನ್ನ ಬಳಿ ಒಂದು ಪುಟ್ಟ ನಿವೇಶನ ಇತ್ತು. ಮನೆ ಕಟ್ಟಿರಲಿಲ್ಲ. ನಾನು ತೊಂದರೆಗೀಡಾದ ಬಳಿಕ ಸೂಕ್ತವಾದ ಮನೆಯ ಅಗತ್ಯ ಇತ್ತು. ಕೊಲ್ಲಿ ರಾಷ್ಟ್ರಗಳ ದುಡಿಯುತ್ತಿದ್ದ ನನ್ನ ಅನೇಕ ಗೆಳೆಯರು ಉಡುಗೊರೆಯ ನೆಪದಲ್ಲಿ ಒಂದಷ್ಟು ಆರ್ಥಿಕ ನೆರವು ನೀಡಿದರು. ಕಲಾವಿದ ಗೆಳೆಯ ಮತ್ತು ಆತನ ಆರ್ಕಿಟೆಕ್ಟ್ ತಮ್ಮ ಸೇರಿ ಚಂದದ ಮನೆಯ ವಿನ್ಯಾಸ ಮಾಡಿದರು. ವರ್ಷದಲ್ಲಿ ಮನೆ ಸಿದ್ಧವಾಯಿತು. ಅತ್ಯಂತ ಖುಷಿಯಿಂದ ಹೊಸ ಮನೆಗೆ ಬಂದೆವು. ನಮ್ಮದೇ ಮನೆ. ಗಂಜಿ ಕುಡಿದರೂ ಸರಿಯೇ ಹಂಗಿನ ಅರಮನೆಯಲ್ಲವಲ್ಲ?

ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡು ಮುಂದೆ ಹೋಗಿ

ಕಂಪ್ಯೂಟರ್ ನಲ್ಲಿ ಡಾಸ್ ಕಾಲ ಮುಗಿದು ವಿಂಡೋಸ್ ಬಂದಾಗಿತ್ತು. ನಿಧಾನಕ್ಕೆ ಇಂಟರ್ ನೆಟ್ ಕೂಡಾ ಬಂತು. ಹಿಂದೆ ಡಾಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಸ್ವಲ್ಪ ಕಾಲ ಕಂಪ್ಯೂಟರ್ ಕಲಿತಿದ್ದೆ. ಈಗ ವಿಂಡೋಸ್. ವರ್ಡ್ಸ್, ಪೇಜ್ ಮೇಕರ್ ಎಲ್ಲ ಸ್ವತಃ ಕಲಿತೆ. ಹಿಂದೆ ಬೇರೆಯವರಿಂದ ಟೈಪ್ ಮಾಡಿಸುತ್ತಿದ್ದೆ. ಈಗ ನಾನು ಅನುವಾದಿಸಿದ ಪಠ್ಯಗಳನ್ನು ನಾನೇ ಟೈಪಿಸಿ ಇಂಟರ್ ನೆಟ್ ಮೂಲಕ ಕಳಿಸಿಲಾರಂಭಿಸಿದೆ. ಇಂಟರ್ ನೆಟ್ ಬಂದ ಮೇಲೆ ನಾನು ಮನೆಯೊಳಗಿದ್ದೇನೆ ಅನಿಸಲಿಲ್ಲ. ಇಡೀ ಜಗತ್ತಿನಲ್ಲಿ ಎಲ್ಲಿ ಬೇಕಾದರಲ್ಲಿ ಓಡಾಡುತ್ತಿದ್ದೇನೆ. ಮನೆಗೆ ಗೋಡೆಗಳೇ ಇಲ್ಲ ಎಂಬ ಅನುಭವ. ಆಮೇಲೆ ನಾವು ತಿರುಗಿ ನೋಡಲೇ ಇಲ್ಲ. ಮುಂದೆ ಮುಂದೆ, ಮೇಲೆ ಮೇಲೆ ಹೋದೆವು. ಮಗ ಚೆನ್ನಾಗಿ ಓದಿದ. ಎಂಜಿನೀಯರಿಂಗ್ ಮುಗಿಸಿ ಒಳ್ಳೆಯ ಉದ್ಯೋಗ ಹಿಡಿದ (ಈಗ ಕೆನಡಾದಲ್ಲಿದ್ದಾನೆ).

ಆಗುವುದೆಲ್ಲ ಒಳ್ಳೆಯದಕ್ಕೋ ಗೊತ್ತಿಲ್ಲ. ಆದರೆ ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡು ಮುಂದೆ ಹೋಗುತ್ತಲೇ ಇರಿ. ನಿಮಗೆ ಗೊತ್ತೇ ಅಗದ ರೀತಿಯಲ್ಲಿ ನಿಮ್ಮ ಗಮ್ಯ ತಲಪಿರುತ್ತೀರಿ.

ಮೂಢನಂಬಿಕೆಯಿಂದ ದೂರ ಇರಿ

ನಮ್ಮ ಸಮಾಜದ ಬಹುದೊಡ್ಡ ಸಮಸ್ಯೆ ಏನು ಗೊತ್ತೇ? ಪುಕ್ಕಟೆ ಸಲಹೆ ನೀಡುವುದು. ಇದೊಂದು ಕೆಟ್ಟ ಗುಣ ಎನ್ನಲಾಗದು. ನಿಮಗೇನಾದರೂ ಒಳ್ಳೆಯದಾಗಲಿ ಎಂಬ ಸದುದ್ದೇಶದಿಂದಲೇ ಅವರು  ಮಾಡುತ್ತಿರುತ್ತಾರೆ. ಆದರೆ ಅವರು ಹೇಳಿದ್ದನ್ನೆಲ್ಲ ಕೇಳುತ್ತಾ ಹೋದರೆ ನೀವು ಲಗಾಡಿ ಹೋಗುವುದು ಗ್ಯಾರಂಟಿ. ಯಾವುದನ್ನು ಎಷ್ಟು ತೆಗೆದುಕೊಳ್ಳಬೇಕು ಎಂಬ ವಿವೇಚನೆ ನಿಮ್ಮಲ್ಲಿರಬೇಕು. ನಾನು ವಿಜ್ಞಾನದ ವಿದ್ಯಾರ್ಥಿ. ನನ್ನ ಸಂಗಾತಿ ಕೂಡಾ ಮೂಢ ನಂಬಿಕೆಯಿಂದ ಬಹಳ ದೂರ. ನಾವು ಕ್ಯಾಲೆಂಡರ್ ದೇವರೊಂದಿಗೆ ಅಂತರ ಕಾಪಾಡಿ ಕೊಂಡವರು. ದೇವರನ್ನು ಯಾವತ್ತೂ ಅದು ಬೇಕು ಇದು ಬೇಕು ಎಂದು ಪೀಡಿಸಿದವರಲ್ಲ. ಅದನ್ನು ಕೊಟ್ಟರೆ ನಿನಗೆ ಇದನ್ನು ಕೊಡುತ್ತೇನೆ ಎಂದು ಲಂಚದ ಅಥವಾ ಟಿಪ್ಸ್ ನ ಆಮಿಷ ಕೊಟ್ಟವರೂ ಅಲ್ಲ. ದೇವರು ಅವರ ಪಾಡಿಗೆ ಇರುತ್ತಾರೆ, ನಾವು ನಮ್ಮ ಪಾಡಿಗೆ ಇರುತ್ತೇವೆ. ನಮ್ಮ ಹೊಸ ಮನೆಗೆ ನಾವು ಗಣಹೋಮ ಸಹಿತ ಯಾವ ಹೋಮವನ್ನೂ ಮಾಡಲಿಲ್ಲ. ನಾವು ಕಾರಂತ ಮತ್ತು ತೇಜಸ್ವಿ ಫೋಟೋ ಹಿಡಿದುಕೊಂಡು ಮನೆ ಪ್ರವೇಶಿಸಿದವರು. ನಾವು ಗೃಹಪ್ರವೇಶಿಸುತ್ತಿದ್ದಂತೆಯೇ ಒಳಗಿದ್ದ ಎಲ್ಲ ಭೂತ ಪ್ರೇತ ಪೀಡೆಗಳು ಹೊರಗೋಡಿ ಹೋದವು!.

ನಾನು ವಿಜ್ಞಾನದ ವಿದ್ಯಾರ್ಥಿ ಎಂದೆನಲ್ಲ, ನನ್ನ ದೈಹಿಕ ಸಮಸ್ಯೆಯ ಬಗ್ಗೆ ಪುಸ್ತಕಗಳನ್ನು ಓದಲಾರಂಭಿಸಿದೆ. ಸಮಸ್ಯೆ ಅರ್ಥವಾಯಿತು. ವಿಜ್ಞಾನದ ಹಾದಿ ಹಿಡಿದೆವು. ವೈದ್ಯರನ್ನು ನಂಬಿದೆವು. ಅಲ್ಲಿಗೆ ಹೋಗು ಅಲ್ಲಿ ಎಣ್ಣೆ ತಿಕ್ಕುತ್ತಾರಂತೆ, ಇಲ್ಲಿಗೆ ಹೋಗು ಅಲ್ಲಿ ಪ್ರಾರ್ಥನೆ ಮಾಡಿದರೆ ಎಲ್ಲವೂ ಸರಿ ಹೋಗುತ್ತದಂತೆ ಹೀಗೆ ನೂರಾರು ಪುಕ್ಕಟೆ ಸಲಹೆಗಳು. ಮದ್ದು ಬಹಳ ಮಂದಿ ಅರೆಯುತ್ತಾರೆ, ಕುಡಿಯಬೇಕು ನಾವು ತಾನೇ? ಸಲಹೆಗಳನ್ನು ಈ ಕಿವಿಯಿಂದ ಕೇಳಿ, ಥ್ಯಾಂಕ್ಸ್ ಎಂದು ಹೇಳಿ, ಇನ್ನೊಂದು ಕಿವಿಯಿಂದ ಆಚೆ ಕಳಿಸಿದೆವು. ರಿಹ್ಯಾಬಿಲಿಟೇಶನ್ ನತ್ತ ಹೆಚ್ಚು ಹೆಚ್ಚು ಗಮನ ಹರಿಸಿದೆವು.

ಹಿಂದಿನ ಬಗ್ಗೆ ಇಂದಿನ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ಮುಂದಿನ ಬಗ್ಗೆ ಯೋಚಿಸುತ್ತ ಹೋದೆವು. ಇರದುದರ ಬಗ್ಗೆ ಯೋಚಿಸದೆ ಇರುವುದರ ಬಗ್ಗೆ ಯೋಚಿಸಿದೆವು. ಓದು, ಬರೆವಣಿಗೆ ಇತ್ಯಾದಿ ಬಿಡುವಿರದ ಹವ್ಯಾಸಗಳ ನಡುವೆ ನಮ್ಮ ನೋವಿನ ಬಗ್ಗೆ ಯೋಚಿಸುವುದಕ್ಕೆ ಸಮಯವೇ ಇರುತ್ತಿರಲಿಲ್ಲ. ‘ನೀನು ಮನೆಯಲ್ಲಿಯೇ ಇದ್ದೀಯಲ್ಲ.. ಹೇಗೆ ಸಮಯ ಕಳೆಯುತ್ತಿ, ಬೋರ್ ಆಗುವುದಿಲ್ಲವಾ?’ ಎಂದು ಕೇಳುವವರಿದ್ದಾರೆ. ಕಳೆಯುವುದಕ್ಕೆ ಸಮಯ ಇದ್ದರಲ್ಲವೇ? ಆ ಕೆಲಸ ಈ ಕೆಲಸ ಎಂದು ರಾತ್ರಿ ಮಲಗುವಾಗ 12 ಕಳೆದಿರುತ್ತದೆ.

ಸರಕಾರಿ ವ್ಯವಸ್ಥೆಯ ಕ್ರೌರ್ಯ

ಆ ದಿನ ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ಪ್ರಮಾಣ ಪತ್ರವೊಂದಕ್ಕಾಗಿ ಹೋಗಿದ್ದೆ. ಅಲ್ಲಿ ಅಂಗವಿಕಲ ಪ್ರಮಾಣ ಪತ್ರಕ್ಕಾಗಿ ಅನೇಕ ಬಡವರು ಬಂದುದು ನೋಡಿದೆ. ಇಪ್ಪತ್ತು ಇಪ್ಪತ್ತೈದು ವಯಸಿನವರನ್ನು ಕೇವಲ ಒಂದು ಪ್ರಮಾಣ ಪತ್ರಕ್ಕಾಗಿ ಒಂದೆರಡು ಜನ ಎತ್ತಿಕೊಂಡು ಬರುತ್ತಿದ್ದರು. ಇಂತಹ ವ್ಯಕ್ತಿಗಳನ್ನು ಇಪ್ಪತ್ತು ಮುವ್ವತ್ತು ಕಿಲೋಮೀಟರ್ ದೂರದಿಂದ ಬರಲು ಹೇಳುವ ಬದಲು ಒಬ್ಬ ವೈದ್ಯರು ಅವರಲ್ಲಿಗೇ ಹೋಗಿ ತಪಾಸಣೆ ಮಾಡುವ ಕೆಲಸ ಮಾಡಬಾರದೇ ಅನಿಸುತ್ತಿತ್ತು. ಆದರೆ ನಮ್ಮ ಸರಕಾರಿ ವ್ಯವಸ್ಥೆ ಅತ್ಯಂತ ಕ್ರೂರವಾಗಿದೆ. ಅಲ್ಲಿ ಇರುವ ಅನೇಕರಲ್ಲಿ ಮನುಷ್ಯ ಸಂವೇದನೆಯೇ ಇಲ್ಲ. ಪ್ರತಿಯೊಂದಕ್ಕೂ ಅಶಕ್ತರನ್ನು ತಾವು ಇರುವಲ್ಲಿಗೇ ಬರ ಹೇಳುತ್ತಾರೆ. ನಮ್ಮ ಬಹುತೇಕ ವೈದ್ಯರು ಇರುವಲ್ಲಿಗೆ, ಸಾರ್ವಜನಿಕ ಕಚೇರಿಗಳಿಗೆ ಅಶಕ್ತರು ಬಿಡಿ ಶಕ್ತರೂ ಹೋಗುವಂತಿರುವುದಿಲ್ಲ. ಇಂತಹ ವ್ಯವಸ್ಥೆ ವರ್ಷಕ್ಕೊಮ್ಮೆ ಅಶಕ್ತರ ದಿನಾಚರಣೆ ಮಾಡುತ್ತದೆ; ಕಾಟಾಚಾರಕ್ಕೆ. ‘ನೀವು ಸರಿ ಇದ್ದೀರೋ ಬದುಕಿ ಇಲ್ಲವಾದರೆ ಸಾಯಿರಿ’ ಎಂಬ ಧೋರಣೆ ನಮ್ಮ ಸರಕಾರಿ ವ್ಯವಸ್ಥೆಯದ್ದು. ಅವರಿಗೆ ಕೊಡುವ ಪಿಂಚಣಿಯಾದರೂ ಎಷ್ಟು? ಅದರಿಂದ ಅವರಿಗೆ ಎಷ್ಟು ಪ್ರಯೋಜನವಾದೀತು? ಆ ಪಿಂಚಣಿಗಾಗಿ ಕೊಡುವ ಕಾಟ ಎಷ್ಟು? ಈ ಬಗ್ಗೆ ನಮ್ಮ ಸಂಸದರು ಎಂದಾದರೂ ಸಂಸತ್ತಿನಲ್ಲಿ ದನಿ ಎತ್ತಿದ್ದಿದೆಯೇ? ಅಶಕ್ತರು ಬಳಸುವ ಗಾಲಿ ಕುರ್ಚಿಯ ಬಿಡಿ ಭಾಗಗಳಿಗೂ ಜಿಎಸ್ ಟಿ ವಿಧಿಸುವ ಕ್ರೂರ ಸರಕಾರಗಳಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ?

ಅಶಕ್ತರನ್ನು ಹೇಗೆ ನೋಡಿಕೊಳ್ಳಬೇಕು

ನಿಮ್ಮ ಮನೆಯಲ್ಲಿ ಯಾರಾದರೂ ಅಂಗವಿಕಲರಿದ್ದಾರೋ? ಅವರನ್ನು ಹೇಗೆ ನೋಡಿಕೊಳ್ಳಬೇಕು? ನೆನಪಿರಲಿ, ಅವರಿಗೆ ನಿಮ್ಮ ಅನುಕಂಪ ಬೇಕಾಗಿಲ್ಲ. ನಿಮ್ಮಿಂದ ಅವರನ್ನು ಪ್ರತ್ಯೇಕವಾಗಿ ನೋಡುವುದನ್ನು ಅವರು ಬಯಸುವುದಿಲ್ಲ. ಅವರನ್ನು ನಿಮ್ಮಲ್ಲೇ ಒಬ್ಬರಂತೆ ನೋಡಿ. ಅವರು ಕ್ಷಣ ಕ್ಷಣವೂ ಸ್ವಾವಲಂಬಿಗಳಾಗಲು ಯತ್ನಿಸುತ್ತಲೇ ಇರುತ್ತಾರೆ. ಅವರು ಕೇಳದೆ ಅವರಿಗೆ ಸಹಾಯ ಮಾಡಬೇಡಿ. ಯಾಕೆಂದರೆ ಅವರ ಬೇಕು ಏನು ಎಂಬುದು ನಿಮಗೆ ಗೊತ್ತಾಗದು. ಅಲ್ಲದೆ, ಅವರಲ್ಲಿ ವೈದ್ಯಲೋಕಕ್ಕೂ ಗೊತ್ತಿರದಂತಹ ದಾರಿ ಕಂಡುಕೊಳ್ಳುವ ವಿಶೇಷ ಶಕ್ತಿ ಸಾಮರ್ಥ್ಯ ಇರುತ್ತದೆ. ಕಣ್ಣು ಇಲ್ಲದಾತ ನಮಗಿಂತ ಚೆನ್ನಾಗಿ ನೋಡಬಲ್ಲ. ಇನ್ನು, ಅಶಕ್ತರೊಬ್ಬರ ಬಗ್ಗೆ ನಿಮಗೆ ಕುತೂಹಲ ಇದೆಯೋ? ಅವರಲ್ಲಿ ಆ ಬಗ್ಗೆ ನೇರ ಕೇಳಬೇಡಿ. ಬೇರೆಯವರಲ್ಲಿ ಅವರ ಬಗ್ಗೆ ಕೇಳಿ. ಅವರ ಭೂತಕಾಲವನ್ನು ಕೆದಕಲು ಹೋಗಬೇಡಿ. ಅವರು ಭೂತಕಾಲವನ್ನು ಮರೆತು ತುಂಬ ದೂರ ಬಂದಿರುತ್ತಾರೆ. ಅವರಿಗೆ ಅವನ್ನು ಮತ್ತೆ ಮತ್ತೆ ನೆನಪಿಸಿಕೊಟ್ಟು ಅವರನ್ನು ಖಿನ್ನತೆಗೆ ತಳ್ಳಬೇಡಿ.

ಹಾದಿಗಳು ತೆರೆದುಕೊಳ್ಳುತ್ತಲೇ ಹೋಗುತ್ತವೆ

ಕಷ್ಟಗಳು ಮನುಷ್ಯನಿಗೆ ಬರದೆ ಕಲ್ಲು ಬಂಡೆಗಳಿಗೆ ಬರುತ್ತವೆಯೇ? ಬದುಕು ಎಂದ ಮೇಲೆ ಕಷ್ಟ ಇದ್ದೇ ಇದೆ. ಎಲ್ಲರಿಗೂ ಒಂದೊಂದು ರೀತಿಯ ಕಷ್ಟ. ಕೆಲವರದು ಸಣ್ಣದು, ಕೆಲವರದು ದೊಡ್ಡದು. ಕೆಲವರು ಹೇಳಿಕೊಳ್ಳುತ್ತಾರೆ ಕೆಲವರು ಹೇಳಿಕೊಳ್ಳುವುದಿಲ್ಲ, ಅಷ್ಟೇ. “ಸುಖ ನಿಮ್ಮ ಜತೆಗೆ ಊಟ ಮಾಡುತ್ತಿರುವಾಗ ದುಃಖ ನಿಮ್ಮನ್ನು ಹಾಸಿಗೆಯಲ್ಲಿ ಕಾಯುತ್ತಿರುತ್ತದೆ” ಎನ್ನುತ್ತಾನೆ ಖಲೀಲ್ ಗಿಬ್ರಾನ್.

ನನಗೆ ಬಂದ ಸಮಸ್ಯೆ ಲಕ್ಷಕ್ಕೊಬ್ಬರಿಗೆ ಬರುವ ಸಮಸ್ಯೆ. ಇಂತಹ ಭಯಂಕರ ಕಷ್ಟ ಬಂದಾಗ ನಮ್ಮ ಮುಂದೆ ಇರುವ ಆಯ್ಕೆ ಎಷ್ಟು? ಎರಡು. ಒಂದೋ ಆತ್ಮಹತ್ಯೆ ಮಾಡಿಕೊಳ್ಳುವುದು. ಅಥವಾ ಬದುಕನ್ನು ಎದುರಿಸುವುದು. ಆತ್ಮಹತ್ಯೆ ಬಹಳ ಸುಲಭ. ಅದಕ್ಕೆ ಬೇಕಿರುವುದು ಒಂದೆರಡು ನಿಮಿಷ ಅಷ್ಟೇ. ಇನ್ನೊಂದು ಬಂದುದನ್ನು, ಬದುಕನ್ನು ಎದುರಿಸುವುದು. ಇದು ಸುಲಭವಲ್ಲವಾದರೂ ಇದುವೇ ಸರಿಯಾದ ಮಾರ್ಗ. ಬದುಕು ಸಾಧ್ಯವೇ ಇಲ್ಲ ಎಂಬ ಹಂತದಲ್ಲಿಯೂ ಬದುಕಬೇಕು ಎಂಬ ಗಟ್ಟಿ ನಿರ್ಧಾರ ಮಾಡಿ. ಆಮೇಲೆ ಹಾದಿಗಳು ತೆರೆದುಕೊಳ್ಳುತ್ತಲೇ ಹೋಗುತ್ತದೆ. ಮುಂದೊಂದು ದಿನ ತಿರುಗಿ ನೋಡುವಾಗ ನೀವೇ ಬೆರಗಾಗುವ ರೀತಿಯಲ್ಲಿ ನೀವು ನಡೆದು ಬಂದ ದಾರಿ ನಿಮಗೆ ಕಾಣುತ್ತದೆ. ನನ್ನ ಉದಾಹರಣೆಯೇ ನಿಮ್ಮ ಮುಂದಿದೆ. ಹೆಚ್ಚೆಂದರೆ ಮೂರು ವರ್ಷ ಬದುಕಬಹುದು ಎಂದು ಹೇಳುತ್ತಿದ್ದರು. ಇಪ್ಪತ್ತಮೂರು ವರ್ಷ ಆಯಿತು. ಈಗಲೂ ಗಾಡಿ ಓಡುತ್ತಿದೆ. ಬದುಕಿನಲ್ಲಿ ನೆಮ್ಮದಿ, ಸಮಾಧಾನ ಬೇಕೇ? ನಿಮಗಿಂತ ಕೆಳಗಿನವರನ್ನು ನೋಡಿ; ಮೇಲಿನವರನ್ನಲ್ಲ.

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ನೆಲೆ ಕಳೆದುಕೊಳ್ಳುವ ನೋವು
ಈ ದೇಶದ ಬಡ ಜನರಿಗೆ ಜಮೀನು ಎಂದರೆ ಜೀವ, ಜೀವನ. ಹುಟ್ಟು, ಮದುವೆ, ಸಾವು ಮಾತ್ರವಲ್ಲ ಅವರು ನಂಬಿದ ದೈವಗಳೊಂದಿಗೂ ಅದು ಸಂಬಂಧ ಹೊಂದಿರುತ್ತದೆ. ಅಂತಹ ನೆಲದಿಂದ ಅವರನ್ನು ಬೇರ್ಪಡಿಸುವುದು ಎಂದರೆ ಭೂಮಿಯಲ್ಲಿ ಆಳವಾಗಿ ಬೇರೂರಿದ ಮರವೊಂದನ್ನು ಕಿತ್ತು ಬೇರೆಡೆ ಇರಿಸಿದಂತೆ. ಹೀಗೆ, ನೆಲೆ ಕಳೆದುಕೊಂಡ ಎಂಕಜ್ಜಿಯ ಮನ ಕರಗಿಸುವ ಕತೆಯೊಂದಿಗೆ ಅಭಿವೃದ್ಧಿಯ ಕರಾಳ ಕಥನ ಇಂದಿನ ಶ್ರೀನಿ ಕಾಲಂ ನಲ್ಲಿ.

ಮುಖ್ಯ ವಿಷಯಕ್ಕೆ ಬರುವ, ಮೊದಲು ನಿಮಗೆ ಒಂದು ಸತ್ಯ ಘಟನೆಯನ್ನು ಹೇಳುತ್ತೇನೆ. ಎಂಕಜ್ಜಿ ಮದುವೆಯಾಗಿ ಗಂಡನ ಮನೆಗೆ ಬಂದ ಮೇಲೆ ಅಕ್ಷರಶಃ ‘ಕೊಟ್ಟ ಹೆಣ್ಣು ಕುಲದಿಂದ ಹೊರಗೆ’ ಎಂಬಂತೆ ಸರಿ ಸುಮಾರು ಅರ್ಧ ಶತಮಾನ ಕಾಲ ಬದುಕಿದ್ದು ಹಳ್ಳಿ ಮೂಲೆಯ ಆ ಪುಟ್ಟ ಜಮೀನಿನಲ್ಲಿ. ಗಂಡ ತೀರಿ ಹೋಗಿ ಬಹಳ ಕಾಲ ಆಯಿತು. ಈಗ ಒಂಟಿ ಬದುಕು. ಇದ್ದೊಬ್ಬಳು ಮಗಳು ಮದುವೆಯಾಗಿ ದೂರದ ಊರಿನಲ್ಲಿದ್ದಾಳೆ. ಆಗಾಗ ಬಂದು ಪ್ರೀತಿಯಿಂದ ಮಾತನಾಡಿಸಿ, ಬದುಕಿಗೆ ಅಗತ್ಯವಾದ ಸಾಮಗ್ರಿಗಳು, ಒಂದಿಷ್ಟು ಹಣ ಎಲ್ಲ ಕೊಟ್ಟು ಹೋಗುತ್ತಾಳೆ. ಇಲ್ಲೇ ಬಂದಿರಲು ಆಕೆಗೂ ಆಕೆಯದೇ ಆದ ಸಂಸಾರ ಇದೆಯಲ್ಲ? ಅಲ್ಲಿಗೆ ಹೋಗಲು ಎಂಕಜ್ಜಿ ತಯಾರಿಲ್ಲ.

ಎಂಕಜ್ಜಿಯದ್ದು ಪುಟ್ಟ ಜಮೀನು ಎಂದೆನಲ್ಲ, ಆ ಜಮೀನಿನಲ್ಲಿದ್ದುದೂ ಆಕೆಯಂತೆಯೇ ಈಗಲೋ ಆಗಲೋ ಬೀಳುವಂತಹ ಪುಟ್ಟ ಗುಡಿಸಲು. ಹಿಂದುಗಡೆ ಕಾಡು, ಮುಂದುಗಡೆ ಬೇರೆಯವರ ಗದ್ದೆ ತೋಟ ಇರುವ ಚಂದದ ಹಸಿರು ಪರಿಸರ. ಮನೆಯ ಸುತ್ತ ಬಸಳೆ, ಮನೊಳಿ ದೊಂಪ (ತೊಂಡೆ ಚಪ್ಪರ), ಬೆಂಡೆ, ಬದನೆ, ಹೀರೆ ಗಿಡ ಎಲ್ಲ ಇದೆ. ಇದು ಬಿಟ್ಟರೆ ಆಕೆ ಸಾಕಿರುವ ಕೋಳಿ, ಬೆಕ್ಕು, ನಾಯಿ, ಹಂದಿ ಆಕೆಯ ಪ್ರೀತಿಯ ಸಂಗಾತಿಗಳು. ಇದು ಎಂಕಜ್ಜಿಯ ಪುಟ್ಟ ಮತ್ತು ಸುಂದರ ಜಗತ್ತು. ಒಂಟಿಯಾಗಿರುವುದರಿಂದ ಮತ್ತು ವಯಸ್ಸೂ ಆಗಿರುವುದರಿಂದ ಬದುಕಲು ತುಂಬಾ ಕಷ್ಟದ ಪರಿಸ್ಥಿತಿ. ಆದರೆ ಮನೆಯ ಸುತ್ತ ಓಡಾಡುತ್ತಾ, ಗಿಡ ಬಳ್ಳಿಯ ಮೈದಡುವತ್ತಾ, ಬೆಂಡೆ ಗಿಡ, ಹರಿವೆ ಗಿಡದ ಬುಡಗಳನ್ನು ಒಕ್ಕಿ ಹಾಕುವ ಕೋಳಿಗಳಿಗೆ ವಾಚಾಮಗೋಚರ ಬಯ್ಯುತ್ತ, ಬೆಕ್ಕು, ನಾಯಿ, ಹಂದಿಗಳೊಂದಿಗೆ ಪ್ರೀತಿಯ ಮಾತನಾಡುತ್ತಾ, ಇರುವಾಗ ಆಕೆಗೆ ಸಮಯ ಮಾತ್ರವಲ್ಲ, ಆಯುಷ್ಯ  ಕಳೆದುದೇ ತಿಳಿಯುವುದಿಲ್ಲ. ಸುಖ ಮತ್ತು ನೆಮ್ಮದಿ ಒಂದೇ ಅಲ್ಲ. ಸುಖ ಇರುವವರಲ್ಲಿ ನೆಮ್ಮದಿ ಇರಬೇಕಾಗಿಲ್ಲ. ಆದರೆ ಸುಖ ಇಲ್ಲದೆಯೂ ನೆಮ್ಮದಿ ಇರಬಹುದಾಗಿದೆ. ಇದಕ್ಕೆ ಎಂಕಜ್ಜಿ ಅತ್ಯುತ್ತಮ ಉದಾಹರಣೆ.

ಎಂಕಜ್ಜಿಗೆ ತೀರಾ ವಯಸ್ಸಾಯಿತು. ವಯೋಸಹಜ ಕಾಯಿಲೆಗಳೂ ವಕ್ಕರಿಸಲಾರಂಭಿಸಿದವು. ಮಗಳಿಗೆ ಒಂದೆಡೆ ತಾಯಿಯ ಚಿಂತೆಯಾದರೆ, ತನ್ನ ಸಂಸಾರದ ನಾನಾ ತಾಪತ್ರಯದಿಂದ ಆಗಾಗ ಬಂದು ಹೋಗುವುದೂ ಕಷ್ಟವಾಗುತ್ತಿದೆ. ಈ ಕಷ್ಟದಿಂದ ಪಾರಾಗುವ ದಾರಿ ಯಾವುದು? ಮಗಳಿಗೆ ಒಂದು ಆಲೋಚನೆ ಬಂತು. ಒಮ್ಮೆ ತಾಯಿಯ ಬಳಿ ಬಂದವಳು, “ಅಮ್ಮಾ ನಿನಗೆ ಈಗ ವಯಸ್ಸಾಯಿತು, ಒಬ್ಬಳೇ ಇದ್ದಿ, ನಿನ್ನನ್ನಿಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲ, ನನಗಲ್ಲಿ ಸದಾ ನಿನ್ನ ಚಿಂತೆಯಾಗುತ್ತಿರುತ್ತದೆ, ನೀನು ನಮ್ಮಲ್ಲೇ ಬಂದು ಯಾಕೆ ನಮ್ಮ ಜೊತೆ ಇರಬಾರದು? ನಿನಗೂ ಒಳ್ಳೆಯದು, ನಮಗೂ ಸಮಾಧಾನ” ಎಂದಳು. ಎಂಕಜ್ಜಿಯ ಮುಖದಲ್ಲಿ ಸಿಟ್ಟು, ಬೇಸರ, ನಾನಾ ಭಾವನೆಗಳು ಒಮ್ಮೆಲೇ ಸುಳಿದು ಹೋದವು. “ಮದುವೆಯಾಗಿ ಬಂದಂದಿನಿಂದಲೂ ಇಲ್ಲೇ ಇದ್ದೇನೆ, ನನ್ನ ಗಂಡನ ಜತೆ ಇದ್ದ ಮನೆ ಇದು. ಇವನ್ನೆಲ್ಲ ಬಿಟ್ಟು ನಾನು ಹೇಗೆ ಬರಲಿ? ಇಲ್ಲಿರುವುದರಿಂದ ಬದುಕಿದ್ದೇನೆ, ಬೇರೆ ಎಲ್ಲಿ ಹೋದರೂ ನಾನು ಸಾಯುತ್ತೇನೆ. ನಾನು ಇಲ್ಲೇ ಇದ್ದುದು, ಇಲ್ಲೇ ಸಾಯುವುದು, ಎಲ್ಲಿಗೂ ಬರಲಾರೆ” ಕಡ್ಡಿ ಮುರಿದಂತೆ ಅಂದಳು. ಮಗಳು ನಾನಾ ರೀತಿಯಲ್ಲಿ ಮನವೊಲಿಸಲು ಯತ್ನಿಸಿದಳು. ಆದರೆ ಎಂಕಜ್ಜಿ ಒಪ್ಪಲೇ ಇಲ್ಲ.

ಬೇರು ಕಿತ್ತ ಗಿಡ

ಹೀಗೆ ಮನವೊಲಿಸುವ ಕೆಲಸ ಕೆಲ ವರ್ಷಗಳೇ ನಡೆದುವು. ಪರಿಸ್ಥಿತಿ ಸಹಜವಾಗಿಯೇ ಹೆಚ್ಚು ಹೆಚ್ಚು ಚಿಂತೆಗೆ ಕಾರಣವಾಗುತ್ತಲೇ ಹೋಯಿತು. ಮನೆ ಬಿಟ್ಟು ಬರಲಾರೆ ಎನ್ನುವ ತಾಯಿ, ಅಂತಹ ಹಣ್ಣು ಹಣ್ಣು ಮುದುಕಿಯನ್ನು ಅಲ್ಲಿ ಬಿಟ್ಟು ಬಂದಿದ್ದೀರಲ್ಲ, ನಿಮಗೆ ಮಾನವೀಯತೆ ಇಲ್ಲವಾ? ಎನ್ನುವ ಊರವರು, ಮಗಳು ಕೊನೆಗೂ ದಾರಿಕಾಣದೆ ಒಂದು ಗಟ್ಟಿ ನಿರ್ಧಾರ ಮಾಡಿ ಮನೆಯ ಪಕ್ಕ ಒಂದು ಪುಟ್ಟ ಮನೆ ಕಟ್ಟಿಸಿದಳು. ಬಳಿಕ ಬಂದು, “ಅಮ್ಮ ಇಷ್ಟು ದಿನ ನೀನು ಹೇಳಿದಂತೆ ನಾನು ಕೇಳಿದ್ದೇನೆ. ಇನ್ನು ಸಾಧ್ಯವಿಲ್ಲ. ಈಗ ನಾನು ಹೇಳಿದಂತೆ ನೀನು ಕೇಳಬೇಕು. ನಮ್ಮ ಮನೆಯಲ್ಲಿ ಇರುವುದು ಬೇಡ, ನಿನಗಾಗಿ ಪುಟ್ಟ ಮನೆಯೊಂದನ್ನು ಕಟ್ಟಿಸಿದ್ದೇವೆ, ನಾಳೆ ನಿನ್ನನ್ನು ಕರೆದೊಯ್ಯಲು ಬರುತ್ತಿದ್ದೇವೆ. ಹೊರಡಲು ತಯಾರಾಗಬೇಕು” ಎಂದಳು. ಮರು ಮಾತಾಡಲು ಅವಕಾಶವೇ ಇರಲಿಲ್ಲ. ಎಂಕಜ್ಜಿಯ ಕಣ್ಣುಗಳಿಂದ ಬಳ ಬಳನೆ ನೀರು ಹರಿಯಿತು. ಆ ರಾತ್ರಿ ಎಂಕಜ್ಜಿಗೆ ನಿದ್ದೆ ಬರಲಿಲ್ಲ. ಮದುವೆಯಾಗಿ ಬಂದ ದಿನಗಳು, ಗಂಡನೊಂದಿಗೆ ಕಳೆದ ಸುಖದ ದಿನಗಳು, ಈ ಭೂಮಿಯನ್ನು ಹಸನುಗೊಳಿಸಲು ಇಬ್ಬರೂ ಹಾಕಿದ ಶ್ರಮ, ಈ ಗಿಡ ಬಳ್ಳಿ ತಾನು ಸಾಕಿದ ಪ್ರಾಣಿಗಳು, ಈ ನೆಲದೊಂದಿಗಿನ ಭಾವನಾತ್ಮಕ ನಂಟು ಎಲ್ಲದರ ನೆನಪೂ ಕಾಡತೊಡಗಿತು. ಈ ನೆಲವನ್ನು ಬಿಟ್ಟು ಹೋಗುವುದಾದರೂ ಹೇಗೆ, ಇಲ್ಲಿಗೆ ನನ್ನ ಬದುಕು ಮುಗಿಯಿತು ಎಂದೆಲ್ಲ ಆಕೆಗೆ ಅನಿಸತೊಡಗಿತು. ಮಾರನೇ ದಿನ ತನ್ನ ಭೂಮಿ, ಪುಟ್ಟ ಗುಡಿಸಲು, ಅಲ್ಲಿ ಬೆಳೆದ ಗಿಡ ಮರಗಳು ಎಲ್ಲವನ್ನೂ ಒಮ್ಮೆ ಕಣ್ಣು ತುಂಬಿಕೊಂಡು “ನಾನು ಹೇಳಿದರೆ ನೀನು ಕೇಳುವುದಿಲ್ಲ” ಎಂದು ಕಣ್ಣೀರಿಡುತ್ತಾ ಮಗಳೊಂದಿಗೆ ಹೊರಟು ಹೋದಳು. ಅಲ್ಲಿ ಮಗಳು ತನಗಾಗಿ ಕಟ್ಟಿಸಿದ ಮನೆಯನ್ನು ಒಲ್ಲದ ಮನಸಿನಲ್ಲಿ ಹೊಕ್ಕಳು. ಯಾಕೋ ಅದು ತನ್ನ ಮನೆ ಎಂದು ಅನಿಸಲೇ ಇಲ್ಲ ಆಕೆಗೆ. ಅಂದು ರಾತ್ರಿ ಅಲ್ಲಿ ಮಲಗಿದ ಎಂಕಜ್ಜಿ ಬೆಳಗ್ಗೆ ಏಳಲೇ ಇಲ್ಲ.

ಆಕಾಶ ನೋಡುತ್ತ ಕೂರುವುದು

ಮಂಗಳೂರಿನಲ್ಲಿ ತೈಲ ಶುದ್ಧೀಕರಣಾಗಾರ ಸ್ಥಾಪನೆಯಾದಾಗ ಅನೇಕ ಬಡವರು ಮನೆ, ನೆಲ ಕಳೆದುಕೊಂಡರು. ಇವರಲ್ಲಿ ಕೆಲವರು ಎರಡನೆ ಬಾರಿ ನೆಲೆ ಕಳೆದುಕೊಂಡವರು. ಮೊದಲೊಮ್ಮೆ ಮಂಗಳೂರು ಬಂದರಿಗಾಗಿ ಎತ್ತಂಗಡಿಯಾದವರಿಗೆ ಈಗ ಎಂ ಆರ್ ಪಿ ಎಲ್ ಇರುವ ಜಾಗದಲ್ಲಿ ಬದಲಿ ನಿವೇಶನ ಕೊಡಲಾಗಿತ್ತು. ಒಂದೆರಡು ದಶಕಗಳ ಕಾಲ ನೆಲೆಸಿ ಅಲ್ಲಿ ಅವರು ಬೇರೂರಿದ್ದರು. ಎಂ ಆರ್ ಪಿ ಎಲ್ ಬಂದಾಗ ಅವರನ್ನು ಮತ್ತೆ ನೆಲೆ ತಪ್ಪಿಸಿ ಒಂದು ಕಾಲೋನಿ ನಿರ್ಮಿಸಿ ಅಲ್ಲಿ ಹಾಕಲಾಯಿತು. ಒಮ್ಮೆ ಸ್ವಯಂಸೇವಾ ಸಂಸ್ಥೆಗೆ ಸೇರಿದವರೊಬ್ಬರು ಅವರನ್ನು ಸಂದರ್ಶಿಸಲು ಹೋಗಿದ್ದರು. ಆಗ ಅಲ್ಲಿನ ಮುದುಕಿಯೊಬ್ಬರು, “ಅಲ್ಲಿ ನಮ್ಮ ಜಮೀನು ಇತ್ತು, ತರಕಾರಿ ಅದು ಇದೂ ಬೆಳೆಯುತ್ತಾ, ಕೋಳಿ ದನ ಸಾಕಿಕೊಂಡು ನೆಮ್ಮದಿಯಾಗಿದ್ದೆವು. ಈಗ ಇಲ್ಲಿ ತಂದು ಹಾಕಿದ್ದಾರೆ. ಇಲ್ಲಿ ಏನು ಮಾಡುವುದು? ದಿನ ಇಡೀ ಆಕಾಶ ನೋಡುತ್ತಾ ಕೂರುವುದು. ಕಂಪೆನಿ ಶುರು ಮಾಡುವಾಗ ನಿಮಗೆ ಅದು ಕೊಡುತ್ತೇವೆ ಇದು ಕೊಡುತ್ತೇವೆ, ಕೆಲಸ ಕೊಡುತ್ತೇವೆ ಎಂದೆಲ್ಲ ಹೇಳುತ್ತಾರೆ, ನಮ್ಮ ಜಮೀನಿನಲ್ಲಿ ನಾವು ಮುದುಕರು ಯುವಕರು ಎಲ್ಲರೂ ಕೆಲಸ ಮಾಡುತ್ತಿದ್ದೆವು. ಈಗ ಕಂಪೆನಿಯಲ್ಲಿ ನಮಗೆ ಕೆಲಸ ಕೊಡುತ್ತಾರಾ? ಮನೆಯಲ್ಲಿ ಒಬ್ಬ ಹುಡುಗನಿಗೆ ಕೆಲಸ ಕೊಟ್ಟರೆ ಅದರಿಂದ ಇಡೀ ಕುಟುಂಬ ಸಾಕಲಿಕ್ಕೆ ಆಗ್ತದಾ? ಜವ್ವನರಿಗೆ ಕೆಲಸ ಕೊಡಬಹುದು ನಮ್ಮಂತ ಮುದುಕರಿಗೆ ಎಂತ ಕೆಲಸ ಕೊಡ್ತಾರೆ? ನಾವು ಸಮಯ ಕಳೆಯುವುದು ಹೇಗೆ? ಎಂದು ಅಳುತ್ತಾ ತಮ್ಮ ಸಂಕಟ ತೋಡಿಕೊಂಡರು.

ಇದನ್ನೆಲ್ಲ ಯಾಕೆ ಹೇಳಿದೆ ಎಂದರೆ, ನಮ್ಮನ್ನು ಆಳುವವರಿಗೆ ಜಮೀನು ಎಂದರೆ ಒಂದು ವಾಣಿಜ್ಯ ಸರಕಿದ್ದಂತೆ. ಯಾವಾಗ ಬೇಕಾದರೂ ಮಾರಬಹುದು, ಕೊಂಡುಕೊಳ್ಳಬಹುದು. ಆದರೆ ಈ ದೇಶದ ಬಡ ಜನರಿಗೆ ಜಮೀನು ಎಂದರೆ ಜೀವ, ಜೀವನ. ಪುಟ್ಟದಿರಲೀ ದೊಡ್ಡದಿರಲೀ ಅದರೊಂದಿಗಿನ ಅವರ ನಂಟು ಭಾವನಾತ್ಮಕವಾದುದು. ಹುಟ್ಟು, ಮದುವೆ, ಸಾವು ಮಾತ್ರವಲ್ಲ ಅವರು ನಂಬಿದ ದೈವಗಳೊಂದಿಗೂ ಅದು ಸಂಬಂಧ ಹೊಂದಿರುತ್ತದೆ. ಅಂತಹ ನೆಲದಿಂದ ಅವರನ್ನು ಬೇರ್ಪಡಿಸುವುದು ಎಂದರೆ ಭೂಮಿಯಲ್ಲಿ ಆಳವಾಗಿ ಬೇರೂರಿದ ಮರವೊಂದನ್ನು ಕಿತ್ತು ಬೇರೆಡೆ ಇರಿಸಿದಂತೆ. ಈ ಸೂಕ್ಷ್ಮ ನಮ್ಮನ್ನು ಆಳುವವರಿಗೆ ಅರ್ಥವಾಗದು.

ಯೋಜನೆಗಳ ದಾಳಿ

ಕಳೆದ ಸುಮಾರು ಐವತ್ತು ಅರವತ್ತು ವರ್ಷಗಳಿಂದ ದೇಶದಲ್ಲಿ ‘ಡೆವಲಪ್ ಮೆಂಟ್’ ಎಂಬ ಪದವನ್ನು ವ್ಯಾಪಕವಾಗಿ ಕೇಳುತ್ತಿದ್ದೇವೆ. ದೊಡ್ಡ ದೊಡ್ಡ ಅಣೆಕಟ್ಟುಗಳು, ಕೈಗಾರಿಕೆಗಳು, ಗಣಿಗಾರಿಕೆ, ತೀರಾ ಇತ್ತೀಚೆಗೆ ಅಗಲಗಲದ ಹೈವೇಗಳು, ಫ್ಲೈ ಓವರ್ ಗಳು… ಇದಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಬಡವರು, ರೈತಾಪಿ ಜನರು ತಮ್ಮ ಫಲವತ್ತಾದ ಜಮೀನನ್ನು ಕಳೆದು ಕೊಳ್ಳುತ್ತಿದ್ದಾರೆ. ಅವರಿಗೆ ಒಂದಿಷ್ಟು ಹಣ ಎಸೆದು ನಾವು ಅವರಿಗೆ ಪರಿಹಾರ ಕೊಟ್ಟಿಲ್ಲವಾ? ಎಂದು ಆಳುವವರು ಉಡಾಫೆಯ ಧಾಟಿಯಲ್ಲಿ ಮಾತನಾಡುತ್ತಾರೆ. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಕೃಷಿ ಭೂಮಿ ಕೋಟ್ಯಂತರ ಮಂದಿಗೆ ಉದ್ಯೋಗ ನೀಡಿದ್ದವು. ಒಂದು ಕೃಷಿ ಭೂಮಿ ಎಂದರೆ ಅದರಿಂದ ಕುಟುಂಬದ ಎಲ್ಲರಿಗೂ ಉದ್ಯೋಗ. ಒಂದು ತುಂಡು ಕೃಷಿ ಭೂಮಿ ಅದೆಂತಹ ಬದುಕಿನ ಭದ್ರತೆ ನೀಡಬಹುದು ಎಂಬುದು ತಿಳಿದುದು ಕೊರೋನಾ ಕಾಲದಲ್ಲಿ. ದೂರದ ನಗರಗಳಲ್ಲಿ ಬಾಡಿಗೆ ಮನೆಯಲ್ಲಿದ್ದು ಅಲ್ಲಿನ ಉದ್ಯೋಗದಲ್ಲಿ ಬರುವ ಹಣದಿಂದ ಅಹಂಕಾರದಿಂದ ಮೆರೆಯುತ್ತಿದ್ದವರು ಉದ್ಯೋಗ ಕಳೆದುಕೊಂಡು ಮನೆ ಬಾಡಿಗೆ ತೆರಲೂ ಅಸಾಧ್ಯವಾದಾಗ ವಿಧಿಯಿಲ್ಲದೆ ಊರಿಗೆ ಮರಳಬೇಕಾಯಿತು. ಒಂದು ತುಂಡು ನೆಲ ಇದ್ದವರು ನೆಮ್ಮದಿಯ ಉಸಿರು ಬಿಟ್ಟರು, ಅದೂ ಇಲ್ಲದವರು ಭಿಕಾರಿಗಳಾದರು.

ಪಶ್ಚಿಮ ಘಟ್ಟ ಮತ್ತು ಕಡಲಿನ ನಡುವಣ ಸಣ್ಣ ಪ್ರದೇಶವಾದ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗೆ ಕಡಲು ಒಂದು ವರವೂ ಹೌದು. ಶಾಪವೂ ಹೌದು. ವರ ಏಕೆಂದು ವಿವರಿಸುವ ಅಗತ್ಯವಿಲ್ಲ. ಶಾಪ ಏಕೆಂದರೆ, ಕಡಲು ಒದಗಿಸುವ ಸುಲಭ ಸರಕು ಸಾಗಾಟ ಸೌಲಭ್ಯ ಮತ್ತು ಮಲಿನ ನೀರನ್ನು ಕಡಲಿಗೆ ಬಿಡುವ ಅವಕಾಶದ ಕಾರಣ ದೊಡ್ಡ ದೊಡ್ಡ ಉದ್ಯಮಿಗಳು ಕಣ್ಣು ಹಾಕುವುದೇ ಕರಾವಳಿ ಪ್ರದೇಶದ ಮೇಲೆ. ಮಾಲಿನ್ಯ ಉಂಟು ಮಾಡದ ಸಣ್ಣ ಪುಟ್ಟ ಅಭಿವೃದ್ಧಿ ಯೋಜನೆಗಳು ಬಂದಾಗ ತೊಂದರೆಯಾಗಲಿಲ್ಲ. ಆದರೆ ಯಾವಾಗ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಒಕ್ಕಲೆಬ್ಬಿಸುವ ಮತ್ತು ವಿಪರೀತ ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳು ಬರಲಾರಂಭಿಸಿದವೋ ಆಗ ಸಮಸ್ಯೆ ಶುರುವಾಯಿತು. ಇವುಗಳ ವಿರುದ್ಧ ಒಂದು ಕಾಲದಲ್ಲಿ ಶಿವರಾಮ ಕಾರಂತರ ನೇತೃತ್ವದಲ್ಲಿ ಜನಜಾಗೃತಿ ನಡೆಯಿತು ಮತ್ತು ಅನೇಕ ಹೋರಾಟಗಳು ನಡೆದವು. ಆದರೂ ಮಾಲಿನ್ಯಕಾರಕ MCF, MRPL, BASF ಉಷ್ಣ ವಿದ್ಯುತ್ ಸ್ಥಾವರ ಇವನ್ನು ತಡೆಯುವುದು ಸಾಧ್ಯವಾಗಲಿಲ್ಲ.

ಹೋದೆಯಾ ಪಿಶಾಚಿ ಎಂದರೆ…

ಈ ನಡುವೆ ಮತ್ತೆ ಕರಾವಳಿಯ ಮೇಲೆ ಇನ್ನೊಂದು ಸುತ್ತಿನ ದಾಳಿಯ ಸೂಚನೆ ಸಿಗುತ್ತಿದೆ. ಉಷ್ಣ ವಿದ್ಯುತ್ ಸ್ಥಾವರ ಹೊರ ಸೂಸುವ ಹಾರು ಬೂದಿ ಮಾಡಿದ ಹಾನಿ ಸಾಲದೆಂಬಂತೆ ಸಿಮೆಂಟು ಕಾರ್ಖಾನೆ ಸ್ಥಾಪನೆಯ ಸುದ್ದಿಯೂ ಕೇಳಿ ಬರುತ್ತಿದೆ. ಕರಾವಳಿಯ ಆಗುಹೋಗುಗಳ ಮೇಲೆ ಸದಾ ಎಚ್ಚರದ ಕಣ್ಣಿಟ್ಟಿರುವ ಹಿರಿಯ ಪತ್ರಕರ್ತ ರಾಜಾರಾಮ್ ತಲ್ಲೂರು ಹೀಗೆ ಹೇಳುತ್ತಾರೆ- “ ದೇಶದ ಅತ್ಯಂತ ಜನನಿಬಿಡ, ಫಲವತ್ತಾದ, ಸಾಂಸ್ಕೃತಿಕ ಶ್ರೀಮಂತಿಕೆ ಇರುವ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಕರಾವಳಿ ಜಿಲ್ಲೆಗಳಿಗೆ ಅಭಿವೃದ್ಧಿಯ ಹೆಸರಲ್ಲಿ ವಿಷ ಉಣ್ಣಿಸುವ ಕೆಲಸ ಸತತವಾಗಿ ನಡೆದಿದೆ. ಇದರ ಹಿಂದೆ ಯಾವ ದ್ವೇಷವಿದೆಯೋ ಕಾಣೆ. ನಿನ್ನೆ ಆನಿ ಕಂಪನಿ ಕರ್ನಾಟಕದ ಜಾಗತಿಕ ಹೂಡಿಕೆದಾರರ ಮೇಳದಲ್ಲಿ, ಕರಾವಳಿಗೆ ಪ್ರತಿವರ್ಷ 20 ಲಕ್ಷ ಟನ್ ಉತ್ಪಾದನಾ ಸಾಮರ್ಥ್ಯದ ಸಿಮೆಂಟು ಕಾರ್ಖಾನೆಯನ್ನು ಪ್ರಕಟಿಸಿದೆ. ಇದು ಹೊಸ ಪ್ರಕಟಣೆಯೇನಲ್ಲ. 2018ರಲ್ಲೇ ಅವರು ಅನುಮತಿಗೆ ಅರ್ಜಿ ಸಲ್ಲಿಸಿದ್ದಾರೆ.

ತಮ್ಮೂರು ಗುಜರಾತಿಗೆ ಬೋಯಿಂಗ್ ವಿಮಾನ ಫ್ಯಾಕ್ಟರಿ, ಐಫೋನ್ ಫ್ಯಾಕ್ಟರಿ, ಮೈಕ್ರೋಚಿಪ್ ಫ್ಯಾಕ್ಟರಿಗಳನ್ನು ಹಾಕಿಸಿಕೊಂಡು, ಸಮೃದ್ಧವಾದ ಕರಾವಳಿಗೆ ಅತ್ಯಂತ ಮಾಲಿನ್ಯಕಾರಕ “ಸಿಮೆಂಟು ಕಾರ್ಖಾನೆ” ಮಂಜೂರು ಮಾಡುತ್ತಿರುವ ಸರ್ಕಾರದ ಪ್ರಯತ್ನಗಳಿಗೆ ಉಘೇ ಎನ್ನುತ್ತಿರುವ ಅವರ ಲೋಕಲ್ ಬೆಂಬಲಿಗರು, ಮಾಧ್ಯಮದ ಬಕೇಟುಗಳು ಇಲ್ಲಿಯ ತನಕ ಬೂದಿ, ಮಸಿ, ಡಾಮರು ತಿನ್ನುತ್ತಿದ್ದರು. ಇನ್ನು ಸದ್ಯವೇ ಅವರು ಸಿಮೆಂಟಿನ ಧೂಳು ತಿಂದು ಗಟ್ಟಿಮುಟ್ಟಾಗಿ, ಆರೋಗ್ಯವಂತರಾಗಲಿದ್ದಾರೆ, ನೂರ್ಕಾಲ ಬಾಳಲಿದ್ದಾರೆ!

ಈಗಾಗಲೇ MRPL ಮತ್ತು ಅದಾನಿ ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕ ಕರಾವಳಿಗೆ ಕ್ಯಾನ್ಸರ್, ಅಲರ್ಜಿ, ಉಬ್ಬಸ ಮತ್ತಿತರ ರೋಗಗಳನ್ನು ಹಂಚಿ, ಆರೋಗ್ಯ ಉದ್ದಿಮೆಗೆ ಲಾಭ ಮಾಡಿಕೊಟ್ಟಿರುವ ಧಣಿಗಳು, ಇಲ್ಲಿ ಕುಡಿಯಲು ನೀರಿಲ್ಲದಿದ್ದರೆ ಕಿಲೋಮೀಟರ್ ಗಟ್ಟಲೆ ಪೈಪ್ ಹಾಕಿಯಾದರೂ ತಮ್ಮ ಉದ್ಯಮಿ ಬಂಧುಗಳಿಗೆ ನೀರು ತಂದುಕೊಡುತ್ತಾರೆ, ಮೀನುಗಾರರನ್ನು ಬದಿಗೊತ್ತಿ ಕಲ್ಲಿದ್ದಲು ಇಳಿಸಲು- ಸಿಮೆಂಟು ಸಾಗಿಸಲು ಸರ್ಕಾರಿ ಖರ್ಚಿನಲ್ಲಿ ಜೆಟ್ಟಿ ಕಟ್ಟಿಕೊಡುತ್ತಾರೆ”.

ಯಾರ ಅಭಿವೃದ್ಧಿ?

ಈವತ್ತು ದೇಶದ ಜನರು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ರಾಜಕೀಯ ಪಕ್ಷಗಳು ಕೋಟಿ ಉದ್ಯೋಗ ಸೃಷ್ಟಿಯ ಮಾತು ಆಡುತ್ತವೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ತಮ್ಮ ಮಾತು ಉಳಿಸಿಕೊಳ್ಳುತ್ತಿಲ್ಲ; ಉಳಿಸಿಕೊಳ್ಳುತ್ತಿಲ್ಲ ಎಂದಲ್ಲ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ  ನಡೆದ ಕೃಷಿ ವ್ಯವಸ್ಥೆಯ ನಾಶ. ಕೃಷಿ ಲಾಭದಾಯಕ ಅಲ್ಲ, ಕೃಷಿ ತೊರೆದು ಸೇವಾ ವಲಯಕ್ಕೆ ಬನ್ನಿ ಎನ್ನುವ ಮೂರ್ಖರಿಗೆ ಕೃಷಿಯ ಮಹತ್ವವೂ ಗೊತ್ತಿಲ್ಲ, ವಾಸ್ತವ ಪರಿಸ್ಥಿತಿಯ ಅರಿವೂ ಇಲ್ಲ.

ಅಭಿವೃದ್ಧಿ ಎಂಬ ಪದ ಕೇಳುವುದಕ್ಕೆ ಹಿತಕರವಾಗಿದೆ. ಆದರೆ ಈ ಅಭಿವೃದ್ಧಿ ಕಾರ್ಯವನ್ನು ‘ಹೇರುವ’ ಮುನ್ನ ಇದು ಯಾವ ಅಭಿವೃದ್ಧಿ ಮತ್ತು ಯಾರ ಅಭಿವೃದ್ಧಿ ಎಂಬ ಅಭಿವೃದ್ಧಿಯ ವ್ಯಾಖ್ಯೆಯನ್ನು ಸ್ಪಷ್ಟಪಡಿಸಿಕೊಳ್ಳಬೇಡವೇ? ಧಾರಣಾ ಸಾಮರ್ಥ್ಯ ಅಧ್ಯಯನ ಮಾಡದೆ, ಸಂತ್ರಸ್ತರ ಮಾತು ಆಲಿಸದೆ, ಜನಬಾಹುಳ್ಯ ಇರುವ, ಫಲವತ್ತಾದ ಜಮೀನು ಇರುವ, ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ, ಮಾರಕ ಮಾಲಿನ್ಯ ಉಂಟು ಮಾಡುವ ಕೈಗಾರಿಕೆಗಳನ್ನು ಸ್ಥಾಪಿಸುವುದು, ನೂರಾರು ಎಕರೆ ಬೇಕಾದಲ್ಲಿಗೆ ಸಾವಿರಾರು ಎಕರೆ ಭೂಸ್ವಾದೀನ ಮಾಡುವುದು, ಇದಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಜನರ ನೆಲೆ ತಪ್ಪಿಸುವುದು, ತಲೆಮಾರು ತಲೆಮಾರುಗಳ ಬದುಕನ್ನು ಅಸಹನೀಯಗೊಳಿಸುವುದು ಸುಖದ ಕನಸು ತೋರುತ್ತಾ ನೆಮ್ಮದಿಯನ್ನು ಇಲ್ಲದಂತೆ ಮಾಡುವುದು ಇವನ್ನೆಲ್ಲ ಅಭಿವೃದ್ಧಿ ಎಂದು ಹೇಗೆ ಹೇಳೋಣ?

ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ರಾಜ್ಯಗಳಿಂದಲೇ ದೇಶ
ಭಾಷೆ ಎನ್ನುವುದು ಭಾವನಾತ್ಮಕವಾಗಿ ತುಂಬಾ ಸಂವೇದನಾಶೀಲ ಸಂಗತಿ. ಭಾಷಾ ಅಸ್ಮಿತೆಗಳ ಮೇಲಿನ ದಾಳಿಯು ಸಮುದಾಯಗಳ ಅಸ್ಮಿತೆಯ ಮೇಲಿನ ದಾಳಿಯಾಗಿ, ಅಂತಿಮವಾಗಿ ಪ್ರತ್ಯೇಕತೆಯ ಭಾವನೆಗೆ ಇಂಬು ಕೊಡುತ್ತದೆ. ಇದಾಗ ಬಾರದು ಎನ್ನುವ ಶ್ರೀನಿವಾಸ ಕಾರ್ಕಳ ಅವರ ಕನ್ನಡ ರಾಜ್ಯೋತ್ಸವ ವಿಶೇಷ ಲೇಖನ ಶ್ರೀನಿ ಕಾಲಂ ನಲ್ಲಿ.

ಇಂದಿಗೆ ಸುಮಾರು ನೂರ ಎಂಟು ವರ್ಷಗಳ ಹಿಂದೆ, ಅಂದರೆ ಆಗಸ್ಟ್ 3, 1914 ರಂದು, ಪುಣೆಯ ಡೆಕ್ಕನ್ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಮ್ಮುಖದಲ್ಲಿ, ಧಾರವಾಡದಿಂದ ಬಂದ ಕನ್ನಡಿಗ ಆಲೂರು ಕೃಷ್ಣರಾಯರು ‘ಪಾಸ್ಟ್ ಗ್ಲೋರಿ ಆಫ್ ಕರ್ನಾಟಕ’ (ಗತಕಾಲದ ಕರ್ನಾಟಕದ ವೈಭವ) ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ್ದರು. ಈ ಭಾಷಣ ಇಂಗ್ಲಿಷ್ ನಲ್ಲಿದ್ದುದರಿಂದ ಕೆಲ ಮಹಾರಾಷ್ಟ್ರೀಯರೂ ಉಪನ್ಯಾಸ ಆಲಿಸಲು ಅಲ್ಲಿ ಸೇರಿದ್ದರು.

ಚಾರಿತ್ರಿಕ ಸಂಗತಿಗಳನ್ನು ಪ್ರತ್ಯಕ್ಷ ಕಂಡವರಂತೆ, ಹೃದಯಸ್ಪರ್ಶಿಯಾಗಿ ಆಡಿದ ಆಲೂರರ ಮಾತುಗಳನ್ನು ಅಲ್ಲಿನ ಮರಾಠೀ ಪ್ರಾಧ್ಯಾಪಕರು ಮೆಚ್ಚಿ, ‘ಕರ್ನಾಟಕದ ಗತಕಾಲದ ವೈಭವ ರೋಮಾಂಚಕಾರಿಯಾಗಿದೆ. ಅದು ಭಾರತದ ಚರಿತ್ರಸಾಗರದ ಒಂದು ಮುಖ್ಯ ಅಂಗ, ಅದು ಮಹಾರಾಷ್ಟ್ರದ ಇತಿಹಾಸ ಕೂಡ ಆಗಿದೆ, ಆಲೂರ ಅವರ ಇಂದಿನ ವ್ಯಾಖ್ಯಾನ ನಮ್ಮಲ್ಲಿ ನವಸ್ಫೂರ್ತಿಯನ್ನು ಉಂಟು ಮಾಡಿದೆ’ ಎಂದು ಹೇಳಿದರು.

‘ಕರ್ನಾಟಕವು ನಮ್ಮ ಹೃದಯದಲ್ಲಿ ಇದೆ’

ಸಭೆ ಮುಗಿಯಿತು. ವೆಂಕಟರಾಯರು ಕನ್ನಡದಲ್ಲಿ ಕೆಲವು ಮಾತು ಆಡಬೇಕೆಂಬುದು ವಿದ್ಯಾರ್ಥಿಗಳ ಆಶಯವಾಗಿತ್ತು. ವೆಂಕಟರಾಯರು ಸಮ್ಮತಿಸಿ, ಹೀಗೆ ಮಾತನಾಡಿದರು- “ಕರ್ನಾಟಕವು ಎಲ್ಲಿದೆ, ಎಂದು ಕೇಳುವ ಜನ ನಮ್ಮಲ್ಲಿ ಸಾಕಷ್ಟಿದ್ದಾರೆ. ಇದಕ್ಕೆ ನನ್ನ ಉತ್ತರ: ನಿಮ್ಮ ಹೃದಯದಲ್ಲಿ. ಇಂದಿನ ಕರ್ನಾಟಕ ಭೌಗೋಲಿಕವಾಗಿ ಮುಂಬಯಿ ಪ್ರಾಂತದ ನಾಲ್ಕು ಜಿಲ್ಲೆಗಳಲ್ಲಿ ಮತ್ತು ಬೇರೆ ಬೇರೆ ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿರಬಹುದು. ಆದರೆ ಕೇವಲ ಭೂಪ್ರದೇಶ ಅಥವಾ ಜನಸಂಖ್ಯೆಯ ಮೊತ್ತದಿಂದ ಮಾತ್ರ ಕರ್ನಾಟಕವನ್ನು ನಾವು ಅರಿಯಲಾರೆವು. ಜನತೆಯ ಶಕ್ತಿ-ಸಾಹಸ, ಸಾಧನೆ-ಸಿದ್ಧಿಗಳಲ್ಲಿ ಒಂದು ದೇಶದ ಘನತೆ ಇದೆ, ಬೆಲೆ ಇದೆ. ಈ ದೃಷ್ಟಿಯಿಂದಲೇ ನಾನು ಹೇಳುವುದು ‘ಕರ್ನಾಟಕವು ನಮ್ಮ ಹೃದಯದಲ್ಲಿ ಇದೆ’ ಎಂದು; ನಾವು ಬೆಳೆದರೆ ಕರ್ನಾಟಕವು ಬೆಳೆಯುತ್ತದೆ ಎಂದು ಅರ್ಥ. ಇಂದು ಒಂದು ಘಟಕವಾಗಿ ನಮ್ಮ ಕಣ್ಣಿಗೆ ಕಾಣದಿದ್ದರೂ, ಕರ್ನಾಟಕವೂ ಒಂದು ಜೀವಂತ ರಾಷ್ಟ್ರ ಎಂಬ ನನ್ನ ಮಾತಿನಲ್ಲಿ ನೀವು ವಿಶ್ವಾಸವಿಡಿ.

ಕರ್ನಾಟಕವೇ ಒಂದು ರಾಷ್ಟ್ರ..

ಹೌದು- ಇದು ನನ್ನ ಉತ್ತರ. ರಾಷ್ಟ್ರೀಯತ್ವವು ಒಂದು ಕಲ್ಪನೆ. ಯಾವ ಕಲ್ಪನೆಯು ನಮ್ಮನ್ನು ಸಂಪೂರ್ಣವಾಗಿ ಆಕರ್ಷಿಸಿ, ದೇಶಸೇವೆಗೆ ಪ್ರೇರಕ ಶಕ್ತಿಯಾಗುತ್ತದೆಯೋ ಅದು ರಾಷ್ಟ್ರೀಯತ್ವ. ಈ ಕಲ್ಪನೆಯು ಇಂದು ಬಂಗಾಲ ಮತ್ತು ಮಹಾರಾಷ್ಟ್ರದಲ್ಲಿ ತೀವ್ರ ಸ್ವರೂಪದಲ್ಲಿದೆ. ಆ ಪ್ರಾಂತಗಳು ಎಚ್ಚೆತ್ತು ತಮ್ಮ ರಾಷ್ಟ್ರೀಯತೆಯ ಬಲವನ್ನು ಪ್ರಸ್ತಾಪಿಸಿವೆ. ಸ್ವಾತಂತ್ರ್ಯ ಸಮರದಲ್ಲಿ ಧೈರ್ಯದಿಂದ ಮುನ್ನಡಿ ಇಡುತ್ತಿವೆ. ಅದೇ ರೀತಿಯಲ್ಲಿ ಕರ್ನಾಟಕವು ಎಚ್ಚರಾಗಬೇಕು. ತಾನು ಶಕ್ತಿವಂತವಾಗಿ ಬೆಳೆದು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಕಾಣಿಕೆಯನ್ನು ಸಲ್ಲಿಸುವಂತಾದಾಗ ಮಾತ್ರ ಕರ್ನಾಟಕದ ರಾಷ್ಟ್ರೀಯತ್ವ ಆವಾಹನವಾಗುತ್ತದೆ.

ಚರಿತ್ರೆಯ ಅಭ್ಯಾಸ ನಮ್ಮಲ್ಲಿ ಅಭಿಮಾನ ಹುಟ್ಟಿಸುತ್ತದೆ. ಅಭಿಮಾನವೆಂದರೆ ಸಾತ್ವಿಕ ಅಹಂಕಾರ. ‘ನಾನು ನನ್ನದು’ ಎಂಬ ಭಾವ ಇಲ್ಲದ ಬದುಕು ಬದುಕಲ್ಲ. ವ್ಯಕ್ತಿ, ಸಂಸಾರ, ಸಮಾಜ – ಇವುಗಳ ಬಗ್ಗೆ ಈ ಭಾವನೆ ಬೆಳೆದು ವಿಶಾಲವಾಗುತ್ತ ಹೋಗುತ್ತದೆ. ಈ ವಿಕಾಸವು ವ್ಯಕ್ತಿಯ ಸಂಸ್ಕಾರವನ್ನವಲಂಬಿಸಿರುತ್ತದೆ. ‘ನಮ್ಮದೀ ನಮ್ಮದೀ ಕನ್ನಡನಾಡು’ ಎಂಬ ಭಾವ ಕರ್ನಾಟಕತ್ವವನ್ನು ಸೂಚಿಸಿದರೆ, ‘ನಮ್ಮದೀ ನಮ್ಮದೀ ಭರತ ಭೂಮಿ’ ಎಂಬ ಭಾವ ರಾಷ್ಟ್ರೀಯತ್ವವನ್ನು ವ್ಯಕ್ತಪಡಿಸುತ್ತದೆ. ಅವೆರಡರಲ್ಲಿ, ನನ್ನ ದೃಷ್ಟಿಯಲ್ಲಿ ಯಾವ ಅಂತರವೂ ಇಲ್ಲ.

ಕರ್ನಾಟಕತ್ವವನ್ನು ಪ್ರಾದೇಶಿಕ ರಾಷ್ಟ್ರೀಯತೆಯೆಂದು ಕರೆಯಬಹುದು. ಅದು ರಾಜಕೀಯವೂ ಅಲ್ಲ, ಶುದ್ಧ ಧಾರ್ಮಿಕವೂ ಅಲ್ಲ. ಅದು ಸಂಸ್ಕೃತಿ ನಿಷ್ಠವಾದುದು. ಭಾಷೆ ಅದರ ಆಧಾರ. ಭಾರತದ ಸಮಸ್ತ ಪ್ರಾದೇಶಿಕ ಸಂಸ್ಕೃತಿಗಳ ಒಟ್ಟಂದವೇ ಭಾರತದ ರಾಷ್ಟ್ರೀಯತೆ ಇದನ್ನು ಗ್ರಹಿಸಲು ನಮಗೆ ವಿಶೇಷ ಸಾಧನೆ ಬೇಕು.

ಕರ್ನಾಟಕತ್ವದ ಅಭಿಮಾನವಿಲ್ಲದೆ ನಾವು ರಾಷ್ಟ್ರಕಾರ್ಯ ಮಾಡಲಾರೆವೆ? – ಇನ್ನೊಂದು ಪ್ರಶ್ನೆ. ನನ್ನ ದೃಷ್ಟಿಯಲ್ಲಿ, ಅದು ಸಾಧ್ಯವಿಲ್ಲ. ಮಾತ್ರವಲ್ಲ, ಕರ್ನಾಟಕವನ್ನು ಅಲಕ್ಷಿಸುವವರು ಭಾರತದ ರಾಷ್ಟ್ರೀಯತೆಯನ್ನು ಅರ್ಥ ಮಾಡಿಕೊಳ್ಳಲಾರರು ಎಂಬುದು ನನ್ನ ಅಭಿಪ್ರಾಯ. ಅಭಿಮಾನದಿಂದ ಕಾರ್ಯಪ್ರೇರಣೆ. ಕರ್ನಾಟಕತ್ವದ ಅಭಿಮಾನ ಎಂದರೆ ಕರ್ನಾಟಕದ ಉನ್ನತಿಗಾಗಿ ಶ್ರಮಿಸುವ ಹಂಬಲ. ದೇಶಕಾರ್ಯವು ಸುತ್ತಲಿನ ಜನತೆಯೊಂದಿಗೆ ಹೆಣೆದುಕೊಂಡಿರುತ್ತದೆ – ಇವು ಆಲೂರು ಅವರ ಮಾತುಗಳು.

ಕನ್ನಡ ಪ್ರದೇಶಗಳ ಏಕೀಕರಣಕ್ಕೆ ದುಡಿದ ಬಹಳ ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರಾದ ಮತ್ತು ಕನ್ನಡದ ಮೇಲಿನ ಪ್ರೀತಿ, ಬದ್ಧತೆ ಹಾಗೂ ಕನ್ನಡಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕಾರಣಕ್ಕೆ ‘ಕನ್ನಡ ಕುಲ ಪುರೋಹಿತ’ ಎಂಬ ಹೆಸರು ಗಳಿಸಿದ ಆಲೂರು ವೆಂಕಟರಾಯರು ‘ಕರ್ನಾಟಕವೇ ಒಂದು ರಾಷ್ಟ್ರ, ಕರ್ನಾಟಕವೇ ಒಂದು ಪ್ರಾದೇಶಿಕ ರಾಷ್ಟ್ರೀಯತೆ, ಭಾರತದ ಸಮಸ್ತ ಪ್ರಾದೇಶಿಕ ಸಂಸ್ಕೃತಿಗಳ ಒಟ್ಟಂದವೇ ಭಾರತದ ರಾಷ್ಟ್ರೀಯತೆ’ ಎಂದು ಆಡಿದ ಮಾತುಗಳನ್ನು ಗಮನಿಸಿ. ಆಲೂರರು ನೂರ ಎಂಟು ವರ್ಷಗಳ ಹಿಂದೆ ಆಡಿದ ಮಾತುಗಳನ್ನು ಈಗ ನಾವು ಮತ್ತೆ ನೆನಪಿಸಿಕೊಳ್ಳುವಂತಹ ಮತ್ತು ನಮ್ಮನ್ನು ಆಳುವವರಿಗೆ ನೆನಪಿಸಿಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದೌರ್ಭಾಗ್ಯವೇ ಸರಿ.

ಚೆಲುವ ಕನ್ನಡ ನಾಡು ಉದಯವಾಗಿದೆಯೇ?

ಕನ್ನಡದ ಅನೇಕ ಕಟ್ಟಾಳುಗಳ ತ್ಯಾಗ ಬಲಿದಾನ, ಅವಿರತ ಹೋರಾಟದಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಹರಿದು ಹಂಚಾಗಿದ್ದ ಹೆಚ್ಚಿನ ಕನ್ನಡ ಪ್ರದೇಶಗಳು ಒಂದಾಗಿವೆ ನಿಜ. ಮಾತ್ರವಲ್ಲ, ಮೈಸೂರು ರಾಜ್ಯ ಎಂಬ ಹೆಸರು ಹೋಗಿ ಕರ್ನಾಟಕ ರಾಜ್ಯವಾಗಿದೆ, ಹುಯಿಲಗೋಳರ ‘ಉದಯವಾಗಲಿ ಚೆಲುವ ಕನ್ನಡ ನಾಡು’ ಎಂಬ ಹಾಡನ್ನು ‘ಉದಯವಾಯಿತು ಚೆಲುವ ನಾಡು’ ಎಂದು ಹಾಡಿದ್ದೂ ಇದೆ. ಆದರೆ ನಿಜವಾಗಿಯೂ ಚೆಲುವ ಕನ್ನಡ ನಾಡು ಉದಯವಾಗಿದೆಯೇ? ಕನ್ನಡ ನಾಡಿನ ಆತ್ಮ ಮತ್ತು ಅಸ್ಮಿತೆಯಾದ ಕನ್ನಡ ಸುರಕ್ಷಿತವಾಗಿದೆಯೇ?

ಒಂದು ಉಪಖಂಡದಂತಹ ದೇಶವಾದ ಭಾರತದ ಬುನಾದಿಯೇ ಬಹುತ್ವ. ವೈವಿಧ್ಯವೇ ಭಾರತದ ವೈಶಿಷ್ಟ್ಯ. ಇಲ್ಲಿರುವುದು ಅನೇಕತೆಯಲ್ಲಿ ಏಕತೆಯಲ್ಲ; ಅನೇಕತೆಯ ಮೂಲಕ ಏಕತೆ. ಇಲ್ಲಿ ಅನೇಕ ಮತಧರ್ಮ, ಸಂಸ್ಕೃತಿಗಳಿವೆ. ಇಲ್ಲಿರುವಷ್ಟು ಭಾಷೆಯಾದರೋ ಜಗತ್ತಿನ ಎಲ್ಲಿಯೂ ಕಾಣಸಿಗದು. ಭಾರತದಲ್ಲಿ 19,569 ಭಾಷೆಗಳಿವೆ. ಇದರಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರು ಮಾತನಾಡುವ ಭಾಷೆಗಳ ಸಂಖ್ಯೆಯೇ 40. ಕರ್ನಾಟಕ ರಾಜ್ಯವೊಂದರಲ್ಲಿಯೇ 62 ಭಾಷೆಗಳಿವೆ!

ಒಂದು ರಾಷ್ಟ್ರವಾಗಿ ಭಾರತ ಹೇಗಿರಬೇಕು, ಅದರ ಸಂವಿಧಾನ ಹೇಗಿರಬೇಕು ಎಂಬುದನ್ನು ಪರಿಕಲ್ಪಿಸಿದ ನಮ್ಮ ಹಿರಿಯರಿಗೆ ಭಾರತದ ಬಹುತ್ವ ಸ್ವರೂಪ ಮತ್ತು ಅದರ ಧರ್ಮನಿರಪೇಕ್ಷತೆಯ ಅನಿವಾರ್ಯತೆಯ ಬಗ್ಗೆ ಸ್ಪಷ್ಟತೆ ಇತ್ತು. ಇದು ಎಲ್ಲರ ಭಾರತ ಎಂಬ ಅರಿವಿತ್ತು. ಹಾಗಾಗಿಯೇ ಭಾರತ ಸಂವಿಧಾನ ಗ್ರಂಥದಲ್ಲಿ ಅವರು ‘ವಿ ದ ಪೀಪಲ್ ಆಫ್ ಹಿಂದೂಸ್ ಅಥವಾ ಮುಸ್ಲಿಂಸ್’ ಎಂದೆಲ್ಲ ಹೇಳದೆ, ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂದರು. ಭಾರತವನ್ನು ರಾಷ್ಟ್ರ ಎಂದು ಕರೆಯದೆ ‘ಯೂನಿಯನ್ ಆಫ್ ಸ್ಟೇಟ್ಸ್’, (ರಾಜ್ಯಗಳ ಒಕ್ಕೂಟ) ಎಂದು ಕರೆದರು. ಅದಕ್ಕೆ ಅನುಗುಣವಾಗಿ ರಾಜ್ಯಗಳಿಗೆ ಮಾನ್ಯತೆ ನೀಡಲಾಯಿತು; ಅನೇಕ ಅಧಿಕಾರಗಳೊಂದಿಗೆ ಒಂದು ರೀತಿಯ ಸ್ವಾಯತ್ತೆಯನ್ನು ನೀಡಲಾಯಿತು. ಅವರು ಯಾವ ಭಾಷೆಯನ್ನೂ ರಾಷ್ಟ್ರಭಾಷೆ ಎಂದು ಘೋಷಿಸಲಿಲ್ಲ. ದೇಶದ 22 ಮುಖ್ಯ ಭಾಷೆಗಳನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಿದರು.

ಆರಂಭದಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಪಂಡಿತ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಎಲ್ಲರೂ ದೇಶದ ಒಕ್ಕೂಟ ಸ್ವರೂಪಕ್ಕೆ ಮನ್ನಣೆ ನೀಡುತ್ತಾ, ಹೆಚ್ಚಿನ ಎಲ್ಲ ಭಾಷೆಗಳನ್ನು ಸಮಾನವಾಗಿ ಗೌರವಿಸುತ್ತ, ಸುಸೂತ್ರ ಆಡಳಿತ ನಡೆಸಿದರು. ದಕ್ಷಿಣದ ರಾಜ್ಯಗಳು, ಅದರಲ್ಲೂ ಮುಖ್ಯವಾಗಿ ತಮಿಳುನಾಡು ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸಿದಾಗ ಆ ವಿರೋಧವನ್ನು ಮಾನ್ಯ ಮಾಡಿ ಸಂಘರ್ಷ ರಹಿತವಾಗಿ ಆಡಳಿತ ನಡೆಸಿದರು.

ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ…

2014ನೇ ಇಸವಿಯಿಂದ ದೇಶದ ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರದಲ್ಲಿರುವ ಸರಕಾರದಿಂದ ನಡೆಯುವ ದಾಳಿಯ ತೀವ್ರತೆ ಹೆಚ್ಚಾಗಿದೆ. ಇದು ಬಹುಮುಖ್ಯವಾಗಿ ಎರಡು ರೀತಿಯಲ್ಲಿ ನಡೆಯುತ್ತಿದೆ. ಸಂವಿಧಾನದ ಪ್ರಕಾರ ಇಲ್ಲಿನ ಕೆಲವು ಅಧಿಕಾರಗಳು ಕೇಂದ್ರದ ಬಳಿಯೂ, ಇನ್ನು ಕೆಲವು ಅಧಿಕಾರಗಳು ರಾಜ್ಯಗಳ ಪಟ್ಟಿಯಲ್ಲಿ ಬಂದರೆ, ಮತ್ತೆ ಕೆಲವು ಅಧಿಕಾರಗಳು ಜಂಟಿ ಪಟ್ಟಿಯಲ್ಲಿ ಬರುತ್ತದೆ. ಆದರೆ ಈಗೀಗ ಹಣಕಾಸು, ಕೃಷಿ, ಶಿಕ್ಷಣ, ಪೊಲೀಸ್ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೇಂದ್ರ ಕೈಯಾಡಿಸುತ್ತಾ ರಾಜ್ಯಗಳಿಗೆ ಬಹುತೇಕ ಯಾವ ಅಧಿಕಾರವೂ ಇಲ್ಲದಂತೆ ಮಾಡಲಾಗುತ್ತಿದೆ. ತೆರಿಗೆ ವಿಧಿಸುವ ಅಧಿಕಾರವೆಲ್ಲವೂ ಒಕ್ಕೂಟ ಸರಕಾರದ ಬಳಿ ಇರುವುದರಿಂದ ಹಣಕಾಸಿಗಾಗಿ ರಾಜ್ಯಗಳು ಅದರ ಮುಂದೆ ಕೈಚಾಚಿ ನಿಲ್ಲುವಂತಾಗಿದೆ.

ಭಾಷೆಗಳ ಮೇಲೆ ದಾಳಿ..

ಇನ್ನೊಂದೆಡೆ, ದೇಶದ ಬಹುತ್ವವನ್ನು ನಾಶಪಡಿಸುವ ಏಕರೂಪೀಕರಣ ಕಾರ್ಯತಂತ್ರದ ಭಾಗವಾಗಿ ಭಾಷೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇಡೀ ದೇಶದ ಮೇಲೆ ಹಿಂದಿಯನ್ನು ಹೇರಲಾಗುತ್ತಿದೆ. ಬ್ಯಾಂಕ್, ಅಂಚೆ ಕಚೇರಿ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ರಕ್ಷಣಾ ಇಲಾಖೆ.. ಹೀಗೆ ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಎಲ್ಲ ಕಡೆಯೂ ಹಿಂದಿಯು ವ್ಯಾಪಕವಾಗಿ ಬೇರು ಬಿಟ್ಟಿದೆ. 2015 ರಿಂದ ಕೇಂದ್ರ ಸರಕಾರ ಜಾರಿಗೆ ತಂದ ಎಲ್ಲ ಯೋಜನೆಗಳ ಹೆಸರು ಹಿಂದಿಯಲ್ಲಿ ಇವೆ. ಸಂಸತ್ ಕಲಾಪ, ಮಂತ್ರಿಗಳ ಭಾಷಣ. ಅಧಿಕಾರಿಗಳ ಪತ್ರಿಕಾಗೋಷ್ಠಿ ಎಲ್ಲವೂ ಹಿಂದಿಯಲ್ಲಿ. ಹಿಂದಿ ಅನುಷ್ಠಾನಕ್ಕೆ ಕೋಟಿ ಕೋಟಿ ವ್ಯಯಿಸಲಾಗುತ್ತಿದೆ. ಹಿಂದಿ ವೈಭವೀಕರಣದ ನಡುವೆ ಇತರ ಭಾಷೆಗಳಿಗೆ ಪ್ರೋತ್ಸಾಹ ಇಲ್ಲವಾಗಿ ಈವತ್ತು ನಮ್ಮ ದೇಶದಲ್ಲಿ ಸುಮಾರು ಮೂರೂವರೆ ಕೋಟಿ ಜನಗಳ ತಾಯಿ ನುಡಿಗಳು ಪತನಮುಖಿಯಾಗಿವೆ.

ಕನ್ನಡ ಭಾಷೆಯ ದುಸ್ಥಿತಿ…

ಒಂದೆಡೆಯಲ್ಲಿ ಜಾಗತಿಕ ಭಾಷೆ ಇಂಗ್ಲಿಷ್, ಇನ್ನೊಂದೆಡೆಯಲ್ಲಿ ಹಿಂದಿ, ಇವುಗಳ ದಾಳಿಯಿಂದಾಗಿ ಕನ್ನಡದ ಪರಿಸ್ಥಿತಿ ಹೇಗಿದೆ? ಕರ್ನಾಟಕದ ಒಟ್ಟು ಜನಸಂಖ್ಯೆ 6,10,95,297 ಆಗಿದ್ದು, ಇದರಲ್ಲಿ 4,37,06,512 ಮಂದಿ ತಮ್ಮ ಮಾತೃಭಾಷೆಯನ್ನು ಕನ್ನಡವೆಂದು ಅಂಗೀಕರಿಸಿಕೊಂಡಿದ್ದಾರೆ. ಇದು ಒಟ್ಟು ಭಾರತೀಯ ಭಾಷೆಗಳ ಶೇಕಡಾ 3.61 ಆಗಿದ್ದು ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಉಳಿದಂತೆ, ಬಂಗಾಳಿ (ಶೇಕಡಾ 8.3), ಮರಾಠಿ (ಶೇಕಡಾ 6.86), ತೆಲುಗು (ಶೇಕಡಾ 6.70), ತಮಿಳು (ಶೇಕಡಾ 5.70), ಗುಜರಾತಿ (ಶೇಕಡಾ 4.58) ಮತ್ತು ಉರ್ದು (ಶೇಕಡಾ 4.19) ಭಾಷೆಗಳು ಸಂಖ್ಯೆಯ ದೃಷ್ಟಿಯಿಂದ ಕನ್ನಡಕ್ಕಿಂತ ಮೇಲೆ ಇವೆ. ಹಿಂದಿ ಭಾಷೆಯು ಶೇಕಡಾ 56 ರ ಬೆಳವಣಿಗೆ ತೋರಿಸುತ್ತಿರುವಾಗ ಈ ಭಾಷೆಗಳು ಕಡಿಮೆ ಬೆಳವಣಿಗೆ ತೋರಿಸುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ.

ಯೂನೆಸ್ಕೋವು ಸಿದ್ಧಪಡಿಸಿದ ‘ಭಾಷೆಗಳ ಜಾಗತಿಕ ಭೂಪಟ’ವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ, ಅದರಲ್ಲಿ 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ, 71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ. ದೇಶದ ಭಾಷೆಗಳಿಗೆ ಸಂಬಂಧಿಸಿದಂತೆ ಒಕ್ಕೂಟ ಸರಕಾರದ ತಾರತಮ್ಯ ನೀತಿಯಿಂದ ಮತ್ತು ಭಾರತಕ್ಕೊಂದು ಸ್ಪಷ್ಟ ಭಾಷಾ ನೀತಿಯೇ ಇಲ್ಲದ ಕಾರಣ ದೇಶದ ಅಮೂಲ್ಯ ಸಂಪತ್ತಾದ ನೂರಾರು ಭಾಷೆಗಳು ಅಪಾಯದಲ್ಲಿವೆ.

ಅಭಿಮಾನ ಹರಿಯ ಬೇಕಾದುದೇ ಹೀಗೆ..

ದೇಶದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ. ಇವು ದೇಶ ಎಂಬ ಸೌಧದ ಆಧಾರ ಕಂಬಗಳಿದ್ದಂತೆ. ಯಾವ ಒಂದು ಕಂಬ ದುರ್ಬಲಗೊಂಡರೂ ಸೌಧ ಕುಸಿದು ಬೀಳುತ್ತದೆ. ಹಾಗಾಗಿ ಆ ಎಲ್ಲ ಕಂಬಗಳು ಬಲಿಷ್ಠ ಇರುವಂತೆ ನೋಡಿಕೊಳ್ಳುವುದು ಬಹಳ ಅಗತ್ಯ. ಆಲೂರು ಕೃಷ್ಣರಾಯರು ಅಂದಂತೆ “ಅಭಿಮಾನವೆಂದರೆ ಸಾತ್ವಿಕ ಅಹಂಕಾರ. ‘ನಾನು ನನ್ನದು’ ಎಂಬ ಭಾವ ಇಲ್ಲದ ಬದುಕು, ಬದುಕಲ್ಲ. ವ್ಯಕ್ತಿ, ಸಂಸಾರ, ಸಮಾಜ – ಇವುಗಳ ಬಗ್ಗೆ ಈ ಭಾವನೆyou ಬೆಳೆದು ವಿಶಾಲವಾಗುತ್ತ ಹೋಗುತ್ತದೆ”. ನಮ್ಮನ್ನು ಪ್ರೀತಿಸದೆ ನಾವು ಬೇರೆಯವರನ್ನು ಪ್ರೀತಿಸಲಾರೆವು. ಸಹಜವಾಗಿಯೇ ನಮಗೆ ನಮ್ಮ ಮನೆ ಮೊದಲು, ಆಮೇಲೆ ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೀಗೆ ನಮ್ಮ ಅಭಿಮಾನ ಹರಿಯುವುದೇ ಹೀಗೆ.

ಪ್ರಜ್ಞಾವಂತ ಪ್ರಜೆಗಳ ಜವಾಬ್ದಾರಿ…

ಕನ್ನಡಿಗರಿಗೆ ಕರ್ನಾಟಕವೇ ಒಂದು ರಾಷ್ಟ್ರವಿದ್ದಂತೆ. ಕನ್ನಡವೇ ರಾಷ್ಟ್ರಭಾಷೆ ಇದ್ದಂತೆ. ಇಂತಹ ಅಭಿಮಾನದ ಭಾವನೆಯಿಂದ ದೇಶದ ಏಕತೆಗೇನೂ ತೊಂದರೆ ಇಲ್ಲ. ತದ್ವಿರುದ್ಧವಾಗಿ ಒಂದು ದೇಶ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಭಾಷೆ ಎಂದು ದೇಶಭಕ್ತಿ ಮತ್ತು ರಾಷ್ಟ್ರವಾದದ ಹೆಸರಿನಲ್ಲಿ ಏಕರೂಪೀಕರಣಕ್ಕೆ ಹೊರಟರೆ, ಅದು ಭಾರತ ಎಂಬ ಪರಿಕಲ್ಪನೆಗೆ ಹಾನಿ ಮಾಡುವುದಲ್ಲದೆ, ಪ್ರಾದೇಶಿಕ ಅಸಮಾಧಾನಕ್ಕೆ ಕಾರಣವಾಗುತ್ತದೆ. ಭಾಷೆ ಎನ್ನುವುದು ಭಾವನಾತ್ಮಕವಾಗಿ ತುಂಬಾ ಸಂವೇದನಾಶೀಲ ಸಂಗತಿ. ಭಾಷಾ ಅಸ್ಮಿತೆಗಳ ಮೇಲಿನ ದಾಳಿಯು ಸಮುದಾಯಗಳ ಅಸ್ಮಿತೆಯ ಮೇಲಿನ ದಾಳಿಯಾಗಿ, ಅಂತಿಮವಾಗಿ ಪ್ರತ್ಯೇಕತೆಯ ಭಾವನೆಗೆ ಇಂಬು ಕೊಡುತ್ತದೆ. ಇದಾಗಬಾರದು; ಇದಾಗದಂತೆ ನೋಡಿಕೊಳ್ಳುವುದು ನಮ್ಮನ್ನು ಆಳುವವರ ಜವಾಬ್ದಾರಿ. ನಮ್ಮನ್ನು ಆಳುವವರು ಈ ಜವಾಬ್ದಾರಿಯಿಂದ ವಿಮುಖರಾಗದಂತೆ ನೋಡಿಕೊಳ್ಳುವುದು ಪ್ರಜ್ಞಾವಂತ ಪ್ರಜೆಗಳಾದ ನಮ್ಮ ಜವಾಬ್ದಾರಿ.

ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಫಲಜ್ಯೋತಿಷ ಒಂದು ವಿಜ್ಞಾನವೇ?
ಭವಿಷ್ಯವನ್ನು ತಿಳಿದುಕೊಳ್ಳುವುದು ಸಾಧ್ಯ ಎಂದು ಯಾರಾದರೂ ಹೇಳುತ್ತಿದ್ದಾರೆಂದರೆ ಅವರು ಅಪ್ಪಟ ಸುಳ್ಳು ಹೇಳುತ್ತಿದ್ದಾರೆ ಮತ್ತು ಭವಿಷ್ಯದ ಬಗೆಗಿನ ಮುಗ್ಧ ಜನರ ಕುತೂಹಲ ಮತ್ತು ಭಯವನ್ನು ತಮ್ಮ ದಂಧೆಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದೇ ಅರ್ಥ ಎಂದು ಹೇಳುತ್ತಾರೆ  ಚಿಂತಕ ಶ್ರೀನಿವಾಸ ಕಾರ್ಕಳ.

ಅದು ಎಪ್ಪತ್ತರ ದಶಕ. ನನ್ನಪ್ಪನ ಬಳಿಯಲ್ಲಿ ಒಂದು ಹಳೆಯ ಫೇವರ್ ಲ್ಯೂಬಾ ವಾಚು ಇತ್ತು. ಅದು ಎಷ್ಟು ಹಳೆಯದು ಮತ್ತು ಯಾವ ಸ್ಥಿತಿಯಲ್ಲಿತ್ತು ಎಂದರೆ, ಅದು ತಾನಾಗಿ ನಡೆಯುತ್ತಿದ್ದುದು ಬಹಳ ಕಡಿಮೆ. ಅದರ ಮುಳ್ಳುಗಳನ್ನು ಒಮ್ಮೊಮ್ಮೆ ನಾವೇ ಕೈಯಲ್ಲಿ ತಿರುಗಿಸಿ ಅಂದಾಜಿಗೆ ಸಮಯ ಹೊಂದಿಸುತ್ತಿದ್ದೆವು. ಅದು ನಿಜ ಸಮಯಕ್ಕಿಂತ ಒಮ್ಮೊಮ್ಮೆ ಅರ್ಧ ಮುಕ್ಕಾಲು ಗಂಟೆ ಹಿಂದೆ ಮುಂದೆ ಇರುತ್ತಿದ್ದುದೂ ಇತ್ತು.

ಇಂತಹ ಗುಜರಿ ವಾಚು ತಿಳಿಸುತ್ತಿದ್ದ ‘ನಿಖರ ಸಮಯ’ ಬಳಸಿಕೊಂಡು ನನ್ನ ತಮ್ಮಂದಿರು ತಂಗಿಯಂದಿರು ಎಲ್ಲರ ಹುಟ್ಟಿದ ಸಮಯವನ್ನು ಬರೆದಿಡಲಾಗಿತ್ತು. ಈ ‘ನಿಖರ ಸಮಯ’ದ ಮೇಲೆ ಅವರ ಜನ್ಮ ಕುಂಡಲಿ, ಜಾತಕ, ಈ ಜಾತಕ ಆಧರಿಸಿ ಅವರ ಭವಿಷ್ಯವನ್ನೂ ಬರೆದಿಡಲಾಗಿತ್ತು. ಜನನ ಸಮಯದಲ್ಲಿ ಕೆಲವು ನಿಮಿಷಗಳ ವ್ಯತ್ಯಾಸವಾದರೂ ರಾಶಿ, ನಕ್ಷತ್ರ ಬದಲಾಗುತ್ತದೆ ಎನ್ನುವಾಗ, ನನ್ನ ತಮ್ಮ ತಂಗಿಯರ, ಮೂಲದಲ್ಲಿಯೇ ತಪ್ಪಿದ ಜನನ ಸಮಯ ಆಧರಿಸಿ ಬರೆಯಲಾದ ಜನ್ಮ ಕುಂಡಲಿಯೇ ಅವರದಲ್ಲದಾಗಿರುವಾಗ, ಅದನ್ನು ಆಧರಿಸಿ ನಿಗದಿಪಡಿಸಿದ ಭವಿಷ್ಯ ಅವರದಾಗಿರಬಹುದೇ? ಇಂತಹ ಅರ್ಥಹೀನ, ಅವೈಜ್ಞಾನಿಕ ಜಾತಕವನ್ನು ಮುಂದೆ ಬದುಕಿನ ಮಹತ್ತರ ಘಟ್ಟವಾದ ಮದುವೆ ಸಂಬಂಧ ನಿರ್ಧರಿಸುವಾಗಲೂ ಬಳಸಲಾಗುತ್ತದೆ, ಜಾತಕ ಸರಿ ಇಲ್ಲವೆಂದು ಅತ್ಯುತ್ತಮ ಸಂಬಂಧಗಳನ್ನೂ ನಿರಾಕರಿಸಲಾಗುತ್ತದೆ ಎಂದರೆ ಜ್ಯೋತಿಷ, ಜಾತಕದ ಹೆಸರಿನಲ್ಲಿ ಎಂತೆಂತಹ ಮೂರ್ಖತನಗಳನ್ನು ಮಾಡಲಾಗುತ್ತಿದೆ, ಮಂಗಳನಲ್ಲಿಗೆ ಮನುಷ್ಯನನ್ನು ಕಳುಹಿಸಲು ಸಿದ್ಧತೆ ನಡೆದಿರುವ ಆಧುನಿಕ ವಿಜ್ಞಾನ ಕಾಲದಲ್ಲಿಯೂ ನಾವು ಯಾವ ಭಯಾನಕ ಮೌಢ್ಯದ ಹಾದಿಯಲ್ಲಿದ್ದೇವೆ ಊಹಿಸಿ.

ಖಗೋಳ ವಿಜ್ಞಾನ ಮತ್ತು ಫಲಜ್ಯೋತಿಷ

ಜ್ಯೋತಿಷದ ವಿಷಯ ಬಂದಾಗಲೆಲ್ಲ ನಮ್ಮಲ್ಲಿ ಖಗೋಳ ವಿಜ್ಞಾನವನ್ನು ಫಲಜ್ಯೋತಿಷದೊಂದಿಗೆ ಸಮನ್ವಯಗೊಳಿಸಿಕೊಂಡು ಗೊಂದಲಗೊಳಿಸುವುದಿದೆ. ಮನುಷ್ಯ ಈ ಭೂಮಿಯಲ್ಲಿ ಕಾಣಿಸಿಕೊಂಡ ಲಾಗಾಯ್ತಿನಿಂದಲೂ ಆತನಿಗೆ ತನ್ನ ಸುತ್ತಲ ಜಗತ್ತಿನ ಬಗ್ಗೆ, ಅಲ್ಲಿನ ಅಸಂಖ್ಯ ವಿದ್ಯಮಾನಗಳ ಬಗ್ಗೆ ಭಯವಿತ್ತು, ಕುತೂಹಲವಿತ್ತು, ಅವನ್ನು ಅರಿಯುವ ಬಯಕೆಯಿತ್ತು.  ಬಹು ಮುಖ್ಯವಾಗಿ ಆಕಾಶ, ಅಲ್ಲಿನ ಆಕಾಶ ಕಾಯಗಳು, ರಾತ್ರಿ, ಹಗಲು, ಹುಣ್ಣಿಮೆ, ಅಮವಾಸ್ಯೆ, ಬೇಸಗೆ, ಮಳೆಗಾಲ, ಚಳಿಗಾಲ, ಹೀಗೆ ಆಗುತ್ತಿದ್ದ ಬದಲಾವಣೆಗಳ ಬಗ್ಗೆ ಆತನಿಗೆ ಬೆರಗು, ಕುತೂಹಲವಿತ್ತು. ಆದರೆ ಆ ಬಗ್ಗೆ ಹೆಚ್ಚಿನ ಜ್ಞಾನವಿರಲಿಲ್ಲ. ತನ್ನ ಅಜ್ಞಾನ, ಅರೆಜ್ಞಾನದ ಮಿತಿಯೊಳಗಡೆಯೇ ಆತ ಊಹೆಗಳ ಮೂಲಕ ಅನೇಕ ತೀರ್ಮಾನಗಳಿಗೆ ಬಂದ. ಭೂಮಿ ಚಪ್ಪಟೆಯಾಗಿದೆ ಅಂದುಕೊಂಡ, ಸೂರ್ಯನು ಭೂಮಿಯ ಸುತ್ತ ತಿರುಗುತ್ತಾನೆ ಅಂದುಕೊಂಡ, ಗ್ರಹಣ ಅಂದರೆ ಚಂದ್ರ, ಸೂರ್ಯರನ್ನು ರಾಹು ಕೇತು ನುಂಗುವುದು ಅಂದುಕೊಂಡ. ಈ ಅನೇಕ ಸಂಗತಿಗಳು ಈಗ ತಪ್ಪು ಎಂದು ಅನಿಸಿದರೂ ಅರಿವಿನ ವಿಕಾಸದ ಹಾದಿಯಲ್ಲಿ ಅವು ಆ ಕಾಲಕ್ಕೆ ಸತ್ಯ ಎಂದು ಅನಿಸಿದ ಸಂಗತಿಗಳೇ ಅಗಿದ್ದವು. ಹೀಗೆ ಖಗೋಳ ವಿಜ್ಞಾನ ಬೆಳೆದು ಬಂದ ಬಗೆಗೆ ಯಾರಿಗೂ ಅಕ್ಷೇಪವಿಲ್ಲ.

ಆದರೆ ಆಕ್ಷೇಪವಿರುವುದು ಈ ಆಕಾಶಕಾಯಗಳನ್ನು, ಅವುಗಳ ಚಲನೆಯನ್ನು ಮನುಷ್ಯನ ಬದುಕಿಗೆ, ಭವಿಷ್ಯಕ್ಕೆ ತಳುಕು ಹಾಕಿದಾಗ. ಕಾಲಗಣನೆಗೆ ಹೆಸರಿಸಿದ ವಾರಗಳಿಗೆ ಗುಣಗಳನ್ನು ಆರೋಪಿಸಿಕೊಂಡು ಮಂಗಳವಾರ ಹಣಕಾಸಿನ ವ್ಯವಹಾರ ಕೂಡದು, ಗುರುವಾರ ತುಂಬಾ ಒಳ್ಳೆಯ ದಿನ, ಇಂತಿಂತಹ ಹೊತ್ತಿನಲ್ಲಿ ಶುಭ ಕಾರ್ಯ ನಡೆಸಕೂಡದು ಎಂಬ ಈ ಫಲಜ್ಯೋತಿಷ ಎಂಬ ದಂಧೆ ಮಾಡಿದ, ಮಾಡುತ್ತಿರುವ ಅನಾಹುತ ಒಂದೆರಡಲ್ಲ.

ಇಷ್ಟಕ್ಕೂ ಫಲಜ್ಯೋತಿಷಗಳ ನಿರ್ಧಾರಕ್ಕೆ ಆಧಾರವಾಗಿಟ್ಟುಕೊಂಡಿರುವ ಅನೇಕ ಸಂಗತಿಗಳು ಸುಳ್ಳು ಎಂದು ಈಗಾಗಲೇ ಸಾಬೀತಾಗಿವೆ. ಫಲಜ್ಯೋತಿಷಕ್ಕೆ ಆಧಾರವಾದ ಜನನ ಕುಂಡಲಿಗಳಲ್ಲಿ ಸೂರ್ಯ, ಚಂದ್ರ, ರಾಹು, ಕೇತುಗಳನ್ನು ಗ್ರಹ ಎಂದು ಗುರುತಿಸಲಾಗುತ್ತದೆ. ಆದರೆ ಸೂರ್ಯ ಒಂದು ನಕ್ಷತ್ರ ಮತ್ತು ಚಂದ್ರ ಒಂದು ಉಪಗ್ರಹ, ಇನ್ನು ರಾಹು ಕೇತುಗಳು ಅಸ್ತಿತ್ವದಲ್ಲಿಯೇ ಇಲ್ಲ. ಆದರೆ ಇವರೆಲ್ಲರಿಗೂ ಈಗಲೂ ಜನ್ಮಕುಂಡಲಿಯ ʼಗೃಹʼ ಗಳಲ್ಲಿ ಗ್ರಹಗಳಾಗಿ ಜಾಗ ಇದೆ!

ಫಲಜ್ಯೋತಿಷ ನಮ್ಮ ದೇಶದ್ದೇ?

ಇನ್ನು ಈ ಫಲಜ್ಯೋತಿಷಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ವಾರ, ಹೋರಾ, ಇವು ನಮ್ಮವೇ? ನಮ್ಮ ವೇದಗಳಲ್ಲಿ ಈ ಯಾವುದರ ಉಲ್ಲೇಖವೂ ಇಲ್ಲ. ಹುಣ್ಣಿಮೆ, ಅಮವಾಸ್ಯೆ ಇವೆಲ್ಲ ನೈಸರ್ಗಿಕ. ಆದರೆ ವಾರ ಕೃತಕ; ಕಾಲಗಣನೆಗೆ ಮಾಡಿಕೊಂಡ ಒಂದು ವ್ಯವಸ್ಥೆ. ವೇದ ಬಿಡಿ, ವೇದಾಂಗ, ರಾಮಾಯಣ ಮಹಾಭಾರತದಲ್ಲೂ ವಾರಗಳ ಉಲ್ಲೇಖವಿಲ್ಲ. ವಾರಗಳ ಉಲ್ಲೇಖ ಕಾಣಿಸಿಕೊಳ್ಳುವುದೇ ಕ್ರಿಪೂ 5 ನೇ ಶತಮಾನದಲ್ಲಿ, ಅಂದರೆ ವರಾಹಮಿಹಿರ, ಆರ್ಯಭಟರ ಕಾಲದಲ್ಲಿ. ಹೋರಾ ಎಂಬುದು ಮೂಲತಃ ಸಂಸ್ಕೃತ ಪದವಲ್ಲ. ಅದು ಹೋರಾನ್ ಎಂಬ ಗ್ರೀಕ್ ಪದದಿಂದ ಬಂದುದು. ಕ್ರಿ.ಶ. 5 ನೇ ಶತಮಾನದ ವರಾಹಮಿಹಿರಾಚಾರ್ಯನ ಬೃಹಜ್ಜಾತಕ ಕೃತಿಯ ಮೊದಲು ಇಲ್ಲಿ ಫಲಜ್ಯೋತಿಷದ ಕಲ್ಪನೆಯೇ ಇರಲಿಲ್ಲ. ಇನ್ನೂ ಕುತೂಹಲಕರ ಸಂಗತಿಯೆಂದರೆ ಫಲಜ್ಯೋತಿಷ ಎಂಬುದೇ ನಮ್ಮದಲ್ಲ. ಅದು ನಮ್ಮಲ್ಲಿಗೆ ಬಂದುದು ಗ್ರೀಕರಿಂದ.

ಇನ್ನು ಆಧುನಿಕ ವಿಜ್ಞಾನದ ಕಣ್ಣಿನಿಂದ ನೋಡಿದರೆ ಈ ಗ್ರಹ, ಉಪಗ್ರಹಗಳಿಗೆ ಸ್ವಂತ ಬೆಳಕಿನ ಮೂಲವೇ ಇಲ್ಲ. ಅವುಗಳು ಪ್ರತಿಫಲಿಸುವುದು ಸೂರ್ಯನ ಬೆಳಕನ್ನು. ಅದರಾಚೆ ಅಲ್ಲಿಂದ ಯಾವ ಕಿರಣಗಳೂ ನಮ್ಮಲ್ಲಿಗೆ ಬರುವುದಿಲ್ಲ. ನಮ್ಮಲ್ಲಿಂದ ಲಕ್ಷಗಟ್ಟಲೆ ಕಿಲೋಮೀಟರ್ ದೂರದ ಈ ಗ್ರಹಗಳು, ನಕ್ಷತ್ರಗಳು, ಉಪಗ್ರಹಗಳು ನಮ್ಮ ಮೇಲೆ ಪ್ರಭಾವ ಬೀರುವುದು ಸಾಧ್ಯವೇ? ಅದರಲ್ಲೂ ಅವು ನಮ್ಮ ಶಿಕ್ಷಣ, ಉದ್ಯೋಗ, ನಮ್ಮ ಸಂಸಾರ ಇತ್ಯಾದಿ ಭವಿಷ್ಯವನ್ನು ನಿರ್ಧರಿಸುವುದು ಅಸಾಧ್ಯ ಮಾತ್ರವಲ್ಲ ಒಂದು ಹಾಸ್ಯಾಸ್ಪದ ವಿಚಾರವೇ ಸರಿ.

ಇಂತಹ ತಳಹದಿಯೇ ಶಿಥಿಲವಾಗಿರುವ ಸಂಗತಿಯೊಂದನ್ನು ವಿಜ್ಞಾನ ಎಂದು ಕರೆದುಕೊಂಡು ಅದನ್ನು ಜೀವನೋಪಾಯ ಮಾಡಿಕೊಂಡ ಅನೇಕ ಮಂದಿ ನಮ್ಮಲ್ಲಿದ್ದಾರೆ. ಆಳುವವರೇ ಈ ಮೌಢ್ಯಗಳಿಗೆ ಆಶ‍್ರಯ ಒದಗಿಸುತ್ತಾ ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಅದನ್ನು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಲಾಗುತ್ತಿದೆ ಮತ್ತು ಅದನ್ನು ಇನ್ನಷ್ಟು ವ್ಯಾಪಕಗೊಳಿಸಲು ತೀವ್ರ ಯತ್ನ ನಡೆದಿದೆ.

ನಿಜವಾಗಿಯೂ ಮುಂದೆ ಏನಾಗಲಿದೆ ಎಂದು ನಮಗೆ ಗೊತ್ತಿದೆಯೇ? ಇಲ್ಲ. ಗೊತ್ತು ಮಾಡುವುದು ಸಾಧ್ಯವಿದೆಯೇ? ಇಲ್ಲ. ಆದರೆ ನಾಳೆ ಏನಾಗಲಿದೆ ಎಂಬುದು ನಮಗೆ ಗೊತ್ತಿಲ್ಲವಾದರೂ ನಾಳೆಯ ಬಗ್ಗೆ ತಿಳಿದುಕೊಳ್ಳುವ ಒಂದು ಕುತೂಹಲವಿದ್ದೇ ಇದೆ ಮತ್ತು ಅದನ್ನು ತಿಳಿಯುವ ಬಯಕೆಯೂ ಇದ್ದೇ ಇದೆಯಲ್ಲವೇ? ಮನುಷ್ಯನ ಈ ದೌರ್ಬಲ್ಯ, ಮುಗ್ಧ ಸ್ವಭಾವವೇ ಕಪಟ ಜ್ಯೋತಿಷಿಗಳ ಬಂಡವಾಳ.

ತಮ್ಮ ಭವಿಷ್ಯವೇ ಗೊತ್ತಿಲ್ಲದ ಜ್ಯೋತಿಷಿಗಳು!

ಮುಂದೆ ಏನಾಗಲಿದೆ ಎನ್ನುವುದು ಯಾರಿಗೂ ಗೊತ್ತಿಲ್ಲದಿದ್ದರೂ, ಮುಂದೆ ಏನಾಗಲಿದೆ ಎಂಬುದನ್ನು ಕರಾರುವಾಕ್ಕಾಗಿ ಹೇಳಬಲ್ಲೆವು ಎಂದು ಎದೆ ತಟ್ಟಿಕೊಂಡು ಘೋಷಿಸುವ ಜ್ಯೋತಿಷಿಗಳಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ವಿಧಾನಸೌಧ ಮಾತ್ರವಲ್ಲ, ಮೂರು ಕಡೆಗಳಲ್ಲೂ ಜಲಮೂಲೆ ಹೊಂದಿರುವ ಭಾರತದ ವಾಸ್ತುವೇ ಸರಿ ಇಲ್ಲ ಎಂದು ಯಾವ ಸಂಶಯಕ್ಕೂ ಎಡೆ ಇಲ್ಲದಂತೆ ಸಾರಿಹೇಳುವ ಮತ್ತು ಜಗತ್ತಿಗೇ ವಾಸ್ತು ಸಲಹೆ ನೀಡುವ ವಾಸ್ತು ಪಂಡಿತರೂ ನಮ್ಮಲ್ಲಿದ್ದಾರೆ. ಇಷ್ಟಿದ್ದೂ ನಮ್ಮಲ್ಲಿ ಸಂಭವಿಸುವ ಸುನಾಮಿ, ಭೂಕಂಪ, ಜಲಪ್ರಳಯ ಇತ್ಯಾದಿಗಳ ಬಗ್ಗೆ ಈ ಮಹಾನ್ ಜ್ಯೋತಿಷಿಗಳು ಏಕೆ ಮೊದಲೇ ಹೇಳಿ ಅಪಾರ ಪ್ರಮಾಣದ ಸಾವು ನೋವು, ಆಸ್ತಿಪಾಸ್ತಿ ಹಾನಿಯನ್ನು ತಡೆಗಟ್ಟುವ ಪರಮ ಪವಿತ್ರ ಕೆಲಸವನ್ನು ಮಾಡುವುದಿಲ್ಲ?

ಯಾಕೆ ಅವರು ಈ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಚರ್ಚಿಸುವ ಮುನ್ನ ತಮ್ಮ ನಾಳೆಗಳ ತಿಳಿಯಲು ಜ್ಯೋತಿಷಿಗಳ ಮತ್ತು ತಮ್ಮ ಭವಿಷ್ಯವನ್ನು ಸರಿಪಡಿಸಿಕೊಳ್ಳಲು ವಾಸ್ತು ತಜ್ಞರ ಮೊರೆಹೋಗುವವರೆಲ್ಲರೂ ತಿಳಿದುಕೊಳ್ಳಲೇಬೇಕಾದ ಕೆಲವು ವಿಚಾರಗಳಿವೆ – ಮೊದಲನೆಯದಾಗಿ ಈಗಾಗಲೇ ಹೇಳಿದ ಹಾಗೆ, ನಾಳೆ ಏನಾಗುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ (ಇತರರ ಭವಿಷ್ಯ ಹೇಳುವ ಜ್ಯೋತಿಷಿಗಳಿಗೆ ತಮ್ಮ ಭವಿಷ್ಯವೇ ತಿಳಿದಿರುವುದಿಲ್ಲ. ತಮ್ಮ ಮೇಲೆ ಆದಾಯ ಇಲಾಖೆಯ ದಾಳಿ ನಡೆದು ಒಂದು ಕೋಟಿ ರುಪಾಯಿ ನಗದು ಮತ್ತು 15 ಕೆಜಿ ಬಂಗಾರ ಪತ್ತೆಯಾಗುವ ವಿಚಾರ ಸ್ವತಃ ಅಂತಾರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಜ್ಯೋತಿಷಿಗೆ ಗೊತ್ತಿರಲಿಲ್ಲ! ತಮ್ಮ ಜತೆಗಿದ್ದವರಿಂದಲೇ ತಮ್ಮ ಬರ್ಬರ ಕೊಲೆಯಾದೀತು ಎಂಬುದು ಇನ್ನೊಬ್ಬ ವಾಸ್ತು ಪರಿಣತ ಜ್ಯೋತಿಷಿಗೆ ಗೊತ್ತಿರಲಿಲ್ಲ!) ಮತ್ತು ಅದನ್ನು ತಿಳಿದುಕೊಳ್ಳುವ ಸಾಧನ ಇಂದಿಗೂ ನಮ್ಮಲಿಲ್ಲ. ಭವಿಷ್ಯವನ್ನು ತಿಳಿದುಕೊಳ್ಳುವುದು ಸಾಧ್ಯ ಎಂದು ಯಾರಾದರೂ ಹೇಳುತ್ತಿದ್ದಾರೆಂದರೆ ಅವರು ಅಪ್ಪಟ ಸುಳ್ಳು ಹೇಳುತ್ತಿದ್ದಾರೆ ಮತ್ತು ಭವಿಷ್ಯದ ಬಗೆಗಿನ ಮುಗ್ಧ ಜನರ ಕುತೂಹಲ ಮತ್ತು ಭಯವನ್ನು ತಮ್ಮ ದಂಧೆಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದೇ ಅರ್ಥ.

ಎರಡನೆಯದಾಗಿ, ಕೆಲವರು ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಹೇಳುವುದು ಮಾತ್ರವಲ್ಲ, ಭವಿಷ್ಯದಲ್ಲಿ ಬರಲಿರುವ ಕಂಟಕಗಳನ್ನು ಪರಿಹರಿಸಲು ಸಾಧ್ಯ ಮತ್ತು ಆ (ದುಬಾರಿ) ಪರಿಹಾರ ಕಾರ್ಯವನ್ನು ತಾವೇ ಮಾಡುವುದಾಗಿಯೂ ಹೇಳುತ್ತಾರೆ. ಇಲ್ಲಿ ಉದ್ಭವಿಸುವ ಮಹತ್ತ್ವದ ಪ್ರಶ್ನೆ- ಭವಿಷ್ಯವನ್ನು ಬದಲಿಸಲು ಸಾಧ್ಯವಾಗುವುದಾದರೆ ಅದು ಭವಿಷ್ಯ ಎನಿಸಿಕೊಳ್ಳುವುದಾದರೂ ಹೇಗೆ?

ಮೂರನೆಯದಾಗಿ, ಮುಂದೆ ಏನು ಆಗಲಿದೆಯೋ, ಯಾವುದನ್ನು ಬದಲಿಸುವುದು ಸಾಧ್ಯವೇ ಇಲ್ಲವೋ ಅದನ್ನು ಭವಿಷ್ಯ ಎನ್ನುತ್ತಾರೆ. ಮುಂದೆ ಏನು ಆಗಿಯೇ ತೀರುತ್ತದೋ ಅದನ್ನು ಈಗ ತಿಳಿದುಕೊಂಡು ಆಗ ಬೇಕಾದುದಾದರೂ ಏನು? ಮತ್ತು ಅದನ್ನು ತಿಳಿದುಕೊಂಡು ವರ್ತಮಾನದಲ್ಲಿ ನೆಮ್ಮದಿ ಕೆಡಿಸಿಕೊಂಡು ವಿರಾಗಿಯಂತೆ ಏಕೆ ಬದುಕಬೇಕು? ನಾಳೆ ನಮ್ಮ ಬದುಕಿನಲ್ಲಿ ಏನು ನಡೆಯಲಿದೆ ಎಂದು ತಿಳಿದರೆ ಇಂದಿನ ನಮ್ಮ ಬದುಕಿನಲ್ಲಿ ಏನು ಸ್ವಾರಸ್ಯ ತಾನೇ ಉಳಿದೀತು?

ಮೌಢ್ಯದ ಪ್ರಸರಣಕ್ಕೆ ವಿಜ್ಞಾನದ ಬಳಕೆ!

ವಿಪರ್ಯಾಸವೆಂದರೆ ಇದುವೇ ಅಲ್ಲವೇ? ಯಾವ ಮೌಢ್ಯಗಳನ್ನು ಪ್ರಶ್ನಿಸುತ್ತಾ ವಿಜ್ಞಾನ ಬೆಳೆಯಿತೋ, ಆ ವಿಜ್ಞಾನದ ಫಲವಾದ ತಂತ್ರಜ್ಞಾನ ಬೆಳೆಯಿತೋ ಅದರ ಒಂದು ಅನನ್ಯ ಕೊಡುಗೆಯಾದ ಟೆಲಿವಿಷನ್‌ನಲ್ಲಿ ಕುಳಿತು ತಂತ್ರಜ್ಞಾನದ ಇನ್ನೊಂದು ಮಹಾನ್ ಆವಿಷ್ಕಾರವಾದ ಲ್ಯಾಪ್‌ಟಾಪ್ ಅನ್ನು ಮುಂದಿಟ್ಟುಕೊಂಡ ಈ ಡೋಂಗಿ ಜ್ಯೋತಿಷಿಗಳು ಮೌಢ್ಯವನ್ನು ಜನಮಾನಸದ ಮೂಲೆ ಮೂಲೆಗೆ ತಲಪಿಸುವ ಕೆಲಸವನ್ನು ಮಾಡುತ್ತಿರುತ್ತಾರೆ. ಬಫೂನುಗಳಂತೆ ವೇಷ ಧರಿಸಿಕೊಂಡು ಅವರು ನಡೆಸಿಕೊಡುವ ಜ್ಯೋತಿಷ ಕಾರ್ಯಕ್ರಮಗಳು ನಿಜಕ್ಕೂ ಅದ್ಭುತ ಮತ್ತು ಕ್ರೂರ ಕಾಮಿಡಿ ಕಾರ್ಯಕ್ರಮಗಳಂತಿರುತ್ತವೆ.

ಇಂಥದ್ದೇ ಒಂದು ಟಿವಿ ಕಾರ್ಯಕ್ರಮದಲ್ಲಿ ಚಿದಾನಂದ ಬಾಬು ಎಂಬ ‘ವೈಜ್ಞಾನಿಕ ಜ್ಯೋತಿಷಿ’ ಹೆಣ್ಣು ಯಾವ ರಾಶಿಯಲ್ಲಿ ಋತುಮತಿಯಾದರೆ ಕುಟುಂಬದ ಯಾರ್ಯಾರಿಗೆ ತೊಂದರೆ ಇದೆ, ಯಾವ ಯಾವ ರಾಶಿಯವರು ಯಾವಾಗ  ಯಾವ ಜಾಗದಲ್ಲಿ ಅತ್ಯಾಚಾರಕ್ಕೆ ಒಳಗಾಗಲಿದ್ದಾರೆ ಎಂಬ ‘ಕರಾರುವಾಕ್ಕು’ ಭವಿಷ್ಯ ಹೇಳಿ ಎಲ್ಲರಿಂದ ಉಗಿಸಿಕೊಂಡು, ಕೇಸು ಜಡಿಸಿಕೊಂಡು ಕೆಲ ಕಾಲ ಟಿವಿಯಿಂದ ನಾಪತ್ತೆಯಾಗಿದ್ದರು.

ಅದು ಜಪಾನಿನಲ್ಲಿ ಸುನಾಮಿ ಬಂದು ಭಾರೀ ಸಾವು ನೋವು ಉಂಟಾದ ಕಾಲ. ಕನ್ನಡ ಟಿವಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಕೆಲ ಮಂದಿ ಜ್ಯೋತಿಷಿಗಳು ಮತ್ತು ವಿಜ್ಞಾನಿಗಳು ಕುಳಿತಿದ್ದರು. ಮುಂದೆ ಸಂಭವಿಸಲಿರುವ ಘಟನೆಗಳ ಬಗ್ಗೆ ನಾವು ಕರಾರುವಾಕ್ಕಾಗಿ ಹೇಳಬಲ್ಲೆವು ಎಂದು ಜ್ಯೋತಿಷಿಗಳು ಹೇಳಿದಾಗ ಅಲ್ಲಿದ್ದ ಕೆಲ ವಿಜ್ಞಾನಿಗಳು ಕೇಳಿದ್ದು ಒಂದೇ ಒಂದು ಸರಳ ಪ್ರಶ್ನೆ – ‘ಮುಂದೆ ಏನಾಗಲಿದೆ’ ಎನ್ನುವುದು ನಿಮಗೆ ಅಷ್ಟೊಂದು ಖಚಿತವಾಗಿ ಗೊತ್ತಿದ್ದರೆ ಅದನ್ನು ಮೊದಲೇ ತಿಳಿಸಿ ನೈಸರ್ಗಿಕ ವಿಕೋಪಗಳಲ್ಲಿ ಸಂಭವಿಸುವ ಸಾವುನೋವುಗಳನು ತಡೆಯುವ ಮಾನವೀಯ ಕೆಲಸವನ್ನು ನೀವೇಕೆ ಮಾಡುವುದಿಲ್ಲ?’ ಅದಕ್ಕೆ ಸೋಮಯಾಜಿ ಎಂಬ ಜ್ಯೋತಿಷಿ ಕೊಟ್ಟ ಉತ್ತರ- ‘ಕೇಳದೆ ಹೇಳಬಾರದು ಎಂದು ಶಾಸ್ತ್ರದಲ್ಲಿದೆ’!

ನಿಸರ್ಗದ ವಿದ್ಯಮಾನಗಳ ಮೇಲೆ ನಮಗೆ ನಿಯಂತ್ರಣವಿದೆಯೇ?

ನಮ್ಮ ಅಂತಾರಾಷ್ಟ್ರೀಯ ಖ್ಯಾತಿಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ ಇತ್ಯಾದಿ ಬಿರುದಾಂಕಿತ ಬೆಂಗಳೂರಿನ ಚಂದ್ರಶೇಖರನ ಕಥೆ ಇನ್ನೂ ಕುತೂಹಲಕರವಾಗಿದೆ. ಈತ ಒಮನ್ ದೇಶದ 74 ರ ಹರೆಯದ ಸುಲ್ತಾನನ ಆರೋಗ್ಯದಲ್ಲಿ ಚೇತರಿಕೆ ಉಂಟು ಮಾಡಲು 22 ಮಂದಿ ಪುರೋಹಿತರನ್ನು ಕರೆದುಕೊಂಡು ಹೋಗಿ 5 ದಿನಗಳ ಕಾಲ ಧನ್ವಂತರಿ ಯಾಗ, ಪೂರ್ಣ ನವಗ್ರಹ ಶಾಂತಿಹೋಮ, ಮಹಾ ಮೃತ್ಯುಂಜಯ ಯಜ್ಞ, ಮಹಾ ವಿಷ್ಣು ಯಾಗ ನಡೆಸಿದ್ದರು. ಇದರಿಂದ ಸುಲ್ತಾನರ ಆರೋಗ್ಯ ಸುಧಾರಿಸಿತೇ ಎಂಬ ಪ್ರಶ್ನೆಗೆ ಉತ್ತರ ಅಗತ್ಯವಿಲ್ಲ. ಈ ಜ್ಯೋತಿಷಿಗೆ ನೇಪಾಳ ಎಂದರೆ ಅತಿ ಪ್ರೀತಿಯ ಜಾಗವಾಗಿದ್ದು ಅವರು ನೇಪಾಳ ಸರಕಾರದ ಆಧ್ಯಾತ್ಮಿಕ ಸಲಹೆಗಾರರೂ ಆಗಿದ್ದರು. ಇಂತಹ ಮಹಾನ್ ಜ್ಯೋತಿಷಿಗೂ ಅಲ್ಲಿನ ಭಯಂಕರ ಭೂಕಂಪ, ಅದರಿಂದ ಅಪಾರ ಜೀವಹಾನಿ, ಆಸ್ತಿಪಾಸ್ತಿ ನಷ್ಟ ತಡೆಯಲು ಸಾಧ್ಯವಾಗಲಿಲ್ಲ. ನೇಪಾಳದ ಪಶುಪತಿನಾಥ ದೇವಾಲಯದ ಶುಚಿತ್ವ ಕೊರತೆ ಹಾಗೂ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ದೇವಾಲಯ ಕಳಾಹೀನವಾಗಿದ್ದು ಈ ಬಗ್ಗೆ ಮುನ್ನೆಚ್ಚರಿಕೆ ನೀಡಿದರೂ ಸರಿಪಡಿಸದ್ದರಿಂದ ಈ ಘಟನೆ ನಡೆದಿದೆ ಎಂಬುದು ಅವರ ಅಂಬೋಣ! ಯಾಗ ಯಜ್ಞಗಳ ಮೂಲಕ ಪ್ರಕೃತಿಯನ್ನು ಶಾಂತ ಪಡಿಸಲು ಸಾಧ್ಯವಿದ್ದು ಈ ಬಗ್ಗೆ ನೇಪಾಳದ ಪ್ರಧಾನ ಮಂತ್ರಿಯೊಂದಿಗೆ ಚರ್ಚಿಸುವುದಾಗಿ ಹೇಳಿ ನೇಪಾಳಕ್ಕೆ ಹಾರಿದ್ದರು.

ಮತ್ತೆ ಈ ಹಿಂದಿನ ಪ್ರಶ್ನೆಗೆ ಬಂದರೆ, ಈ ವಿಶ್ವವಿಖ್ಯಾತ ಜ್ಯೋತಿಷಿಗಳೆಲ್ಲ ಇಂತಹ ದುರಂತಗಳ ಬಗ್ಗೆ ಏಕೆ ಮೊದಲೇ ಹೇಳುವುದಿಲ್ಲ ಎಂದರೆ – ಅದು ಅವರಿಗೆ ಗೊತ್ತಿಲ್ಲ. ಮುಂದೆ ಸಂಭವಿಸಬಹುದಾದುದರ ಬಗ್ಗೆ ಅವರಿಗೆ ಮಾತ್ರವಲ್ಲ, ಯಾರಿಗೂ ಏನೇನೂ ಗೊತ್ತಿಲ್ಲ ಎನ್ನುವುದು ಅವರ ಬಳಿ ಭವಿಷ್ಯ ಕೇಳಲು ಹೋಗುವವರಿಗೆ ಗೊತ್ತಿಲ್ಲದಿರುವುದು ಇದಕ್ಕಿಂತಲೂ ದೊಡ್ಡ ದುರಂತ. ನಾವು ತೋಳಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪ್ರಯೋಜನವಿಲ್ಲ, ಎಚ್ಚರಿಸಬೇಕಾಗಿರುವುದು ಕುರಿಗಳನ್ನು. ನಾವು ಅವರ ಅಂಗಡಿಗೆ ಹೋಗದಿದ್ದರೆ ಅವರಾಗಿಯೇ ಅಂಗಡಿ ಬಾಗಿಲು ಹಾಕುತ್ತಾರೆ ಅಲ್ಲವೇ?

ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು

ಫಲಜ್ಯೋತಿಷದಂತಹ ಮೌಢ್ಯಗಳಿಂದ ಶೋಷಣೆಗೀಡಾಗದಿರಲು ನಾವು ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದೊಂದೇ ದಾರಿ. ನಮ್ಮ ಭವಿಷ್ಯವನ್ನು ಸೃಷ್ಟಿಸಿ ಕೊಳ್ಳುವವರು ನಾವೇ ಆಗಿದ್ದೇವೆ. ಇಂದಿನ ನಮ್ಮ ನಡೆವಳಿಕೆಗಳು, ನಮ್ಮ ಕೆಲಸಗಳು ನಮ್ಮ ನಾಳೆಗಳನ್ನು ಸೃಷ್ಟಿಸುತ್ತವೆ. ಹೊರತು ಅದನ್ನು ಆಕಾಶದಲ್ಲಿರುವ ಯಾವುದೋ ಗ್ರಹ ನಕ್ಷತ್ರಗಳು ನಿರ್ಧರಿಸುವುದಿಲ್ಲ. ಈ ವೈಜ್ಞಾನಿಕ ಪ್ರಜ್ಞೆ, ವಿವೇಕ ಸದಾ ನಮ್ಮಲ್ಲಿ ಜಾಗೃತವಾಗಿದ್ದರೆ ನಮ್ಮನ್ನು ಯಾವ ಕಪಟ ಜ್ಯೋತಿಷಿಗಳೂ ಮೋಸಗೊಳಿಸಲಾರರು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಶ್ರೀನಿವಾಸ ಕಾರ್ಕಳ
ಚಿಂತಕ, ಲೇಖಕ

🔸ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ಹುತಾತ್ಮ ಭಗತ್ ಸಿಂಗ್ ಬರೆದ ಲೇಖನ
‘ಕ್ರಾಂತಿ ಚಿರಾಯುವಾಗಲಿ ‘ಘೋಷಣೆಯ ಕುರಿತು
ಪೀಪಲ್ ಮೀಡಿಯಾ ವಿಶೇಷ
https://peepalmedia.com/long-live-the-revolutionbhagath-singh/

‘ಕ್ರಾಂತಿ ಚಿರಾಯುವಾಗಲಿ’ ಘೋಷಣೆಯ ಕುರಿತು

ಬಹುತ್ವ ಭಾರತಕ್ಕೆ ಬೇಕಿದೆ ತೆರೇಸಾರ ಬಾಹುಗಳು
ಜಗತ್ತು ಮಹಾನ್‌ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಕಾಲ ಘಟ್ಟದಲ್ಲಿ ಪ್ರೀತಿ ವಾತ್ಸಲ್ಯದ ಮೂಲಕ ಇಡಿ ಜಗತ್ತನ್ನು ಗೆದ್ದ ಮಾನವತಾವಾದಿ ಮಹಾ ಮಾತೆ ಮದರ್‌ ತೆರೇಸಾರವರು ಇಂದು ಹಿಂದೆಂದಿಗಿಂತಲೂ ಹೆಚ್ಚು ನೆನಪಾಗುತ್ತಿದ್ದಾರೆ. ಅವರ ೨೫ ನೇ ಸಂಸ್ಮರಣೆಯ (ಸೆ.೫) ಪ್ರಯುಕ್ತ ಸಮಾಜದಲ್ಲಿ ಸೌಹಾರ್ದದ ಕೊಂಡಿ ಬೆಸೆಯಬೇಕಾದ ಅಗತ್ಯವನ್ನು ಶ್ರೀನಿವಾಸ ಕಾರ್ಕಳ ತೆರೆದಿಟ್ಟಿದ್ದಾರೆ.

ಜಗತ್ತು ಈಗ ಹಿಂದೆಂದಿಗಿಂತಲೂ ಹೆಚ್ಚು ಬಿಕ್ಕಟ್ಟನ್ನು ಎದುರಿಸುತ್ತಿದೆ; ತಲ್ಲಣ ಗೊಂಡಿದೆ. ಎರಡು ವರ್ಷಗಳ ಹಿಂದೆ ಜಗತ್ತನ್ನು ಕಾಡಿದ ಕೋವಿಡ್ ಆರ್ಥಿಕವಾಗಿ, ಸಾಮಾಜಿಕವಾಗಿ ಊಹನಾತೀತ ಸಮಸ್ಯೆಗಳನ್ನು ಉಂಟು ಮಾಡಿದೆ. ಕೋವಿಡ್ ಮಹಾ ಕಾಯಿಲೆಯ ಜತೆಗೆ ಇದಕ್ಕೆ ಸರಕಾರಗಳು ಪ್ರತಿಕ್ರಿಯಿಸಿದ ಅತಾರ್ಕಿಕ, ಅವೈಜ್ಞಾನಿಕ, ಅತಿರೇಕದ ಕ್ರಮಗಳು ಉಂಟು ಮಾಡಿದ ಆರ್ಥಿಕ ಸಮಸ್ಯೆಗಳಿಂದ ಜನರು ಬದುಕಿ ಉಳಿಯುವುದೇ ಕಷ್ಟವಾಗಿದೆ. ಒಂದೆಡೆಯಲ್ಲಿ ಕೋವಿಡ್ ಕಾರಣದ ಆರೋಗ್ಯ ಏರುಪೇರುಗಳಿಂದ ಮತ್ತು ಬದುಕುಳಿಯುವ ಲೌಕಿಕ ಚಿಂತೆಗಳ ಉದ್ವಿಗ್ನತೆಯಿಂದ ಹೃದಯಾಘಾತಗಳು ಹೆಚ್ಚಿ ಸಣ್ಣ ಹರೆಯದವರೂ ಅಕಾಲ ಸಾವಿಗೀಡಾಗುತ್ತಿದ್ದರೆ, ಇನ್ನೊಂದೆಡೆ ಘನತೆಯ ಬದುಕನ್ನು ಬದುಕುವುದು ಸಾಧ್ಯವಾಗದೆ ಜನರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ.

ಇದು ಒಂದು ತೆರನ ನೈಸರ್ಗಿಕ ವಿದ್ಯಮಾನಗಳೆಂದು ಭಾವಿಸೋಣವೇ? ಕೋವಿಡ್ ಇರಲಿ, ಇನ್ನೊಂದಿರಲಿ ಜಗತ್ತು ಬದಲಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಕೋವಿಡ್ ಮಹಾ ಕಾಯಿಲೆ ಜನತೆಗೆ ಒಂದು ಪಾಠವಾಗಬೇಕಿತ್ತು. ಈ ದ್ವೇಷ, ಅಹಂಕಾರ, ಸ್ವಾರ್ಥ ಎಲ್ಲವೂ ನಿರುಪಯುಕ್ತ, ನಾವೆಲ್ಲರೂ ಪ್ರೀತಿ ಸೌಹಾರ್ದದಿಂದ ಬದುಕಬೇಕು ಎಂದು ಅರ್ಥವಾಗಬೇಕಿತ್ತು. ಆದರೆ ಕೋವಿಡ್ ಅಪಾಯದಿಂದ ಇನ್ನೂ ಪೂರ್ತಿಯಾಗಿ ಪಾರಾಗಿಲ್ಲ ಎನ್ನುವಾಗಲೇ ನಾವು ಮತ್ತೆ ನಮ್ಮ ಹಿಂದಿನ ಚಾಳಿಗೆ ಮರಳಿಯಾಗಿದೆ. ದೇಶ ದೇಶಗಳ ನಡುವೆ ಜಗಳ ನಡೆಯುತ್ತಿದೆ, ರಶ್ಯಾ ಉಕ್ರೇನ್ ನಡುವೆ ತಿಂಗಳುಗಳಿಂದ ಕದನ ನಡೆಯುತ್ತಿದೆ, ತೈವಾನ್ ವಿಷಯ ಕೇಂದ್ರವಾಗಿರಿಸಿಕೊಂಡು ಚೀನಾ ಅಮೆರಿಕಾ ನಡುವೆ ಹೊಸ ಕದನಕ್ಕೆ ವೇದಿಕೆ ಸಿದ್ಧವಾಗುತ್ತಿದೆ.

ಜಗತ್ತಿನ ಕತೆ ಹೀಗಾದರೆ, ಭಾರತದಲ್ಲಿ ಜನಾಂಗ ದ್ವೇಷ ಮಿತಿ ಮೀರುತ್ತಿದೆ. ದಿನ ಬೆಳಗಾದರೆ ಹಿಂದೂ ಮುಸ್ಲಿಂ ವಿಷಯ ಎತ್ತಿಕೊಂಡು ಸಮಾಜ ವಿಭಜನೆಯ ಕೆಲಸವು ಪ್ರಭುತ್ವದ ಬೆಂಬಲದೊಂದಿಗೆ ರಾಜಾರೋಷವಾಗಿ ನಡೆಯುತ್ತಿದೆ. ‘ನಾವು ಇಲ್ಲಿ ಇದ್ದವರು, ನೀವು ಬಂದವರು’ ಎಂಬ ವಾದ ಬಲಗೊಳ್ಳುತ್ತಿದೆ. ಈ ದೇಶದ ಪ್ರಜೆಗಳನ್ನೇ ಅನ್ಯರನ್ನಾಗಿಸುವ ಕೆಲಸ ತೀವ್ರತೆ ಪಡೆಯುತ್ತಿದೆ. ಮುಸ್ಲಿಂ ಸಹೋದರರನ್ನು ಮಾತು ಮಾತಿಗೂ ಪಾಕಿಸ್ತಾನಕ್ಕೆ ಹೋಗಿ ಎನ್ನಲಾಗುತ್ತಿದೆ, ಅವರಿಗೆ ಮತದಾನದ ಹಕ್ಕು ನಿರಾಕರಿಸಬೇಕು ಎಂದು ಬಹಿರಂಗವಾಗಿಯೇ ಕರೆ ಕೊಡಲಾಗುತ್ತಿದೆ, ಅವರ ಹಿಜಾಬ್, ಅಜಾನ್ ಹಲಾಲ್, ಮಸೀದಿ, ಎಲ್ಲವೂ ಸಮಸ್ಯೆಯಾಗುತ್ತಿದೆ, ಅವರ ವ್ಯಾಪಾರ ವಹಿವಾಟಿಗೆ ಅಡ್ಡಿಪಡಿಸಲಾಗುತ್ತಿದೆ, ಇನ್ನೊಂದೆಡೆಯಲ್ಲಿ ರೋಹಿಂಗ್ಯಾಗಳನ್ನು ಹೊರ ಹಾಕಿ ಎಂಬ ಕೂಗು ಬಲಗೊಳ್ಳುತ್ತಿದೆ.

ಮನುಷ್ಯತ್ವ, ಪ್ರೀತಿಯ ತೀವ್ರ ಕೊರತೆ ಉಂಟಾಗಿ, ಎಲ್ಲೆಲ್ಲಿಯೂ ಸ್ವಾರ್ಥ, ದ್ವೇಷ, ಹಿಂಸೆ ಹೆಚ್ಚಿರುವ ಮತ್ತು ಒಂದು ಕಿಡಿ ಹಾರಿದರೆ ಸಾಕು ಜಗತ್ತು ಮತ್ತು ದೇಶ ಬೂದಿಯಾಗುವ ಹಂತವನ್ನು ತಲಪಿರುವ ಹೊತ್ತಿನಲ್ಲಿ ಜಗತ್ತನ್ನು ದೇಶವನ್ನು ಉಳಿಸಲು ಸಾಧ್ಯವಾಗುವುದಿದ್ದರೆ ಅದು ಪ್ರೀತಿ ಮತ್ತು ಪ್ರೀತಿಯಿಂದ ಮಾತ್ರ. ಆದ್ದರಿಂದಲೇ ನಮಗೆ ಇಂದು ಪ್ರೀತಿ ಮತ್ತು ಸೇವೆಯ ಪ್ರತಿರೂಪವಾದ ಮದರ್ ತೆರೇಸಾರಂಥವರು ಹಿಂದೆಂದಿಗಿಂತಲೂ ಹೆಚ್ಚು ನೆನಪಾಗುತ್ತಿದ್ದಾರೆ. ದ್ವೇಷದ ಗಾಯಕ್ಕೆ ಪ್ರೀತಿಯ ಮದ್ದು ಹಚ್ಚುವ ಸಾವಿರ ಸಾವಿರ ತೆರೇಸಾರ ಅಗತ್ಯವಿದೆ ಈಗಿನ ಜಗತ್ತಿಗೆ.

ಮದರ್ ತೆರೇಸಾ ಅವರು ಅನಾಥರು, ರೋಗಗ್ರಸ್ತರ ಸೇವೆಯನ್ನು ಮಾಡುವಾಗ ಅವರು ಯಾವ ಮತಧರ್ಮಕ್ಕೆ ಸೇರಿದವರು, ಯಾವ ಜಾತಿಯವರು, ಯಾವ ವರ್ಗಕ್ಕೆ ಸೇರಿದವರು, ಯಾವ ದೇಶಕ್ಕೆ ಸೇರಿದವರು ಎಂದು ನೋಡಲಿಲ್ಲ. ಅವರಿಗೆ ಎಲ್ಲರೂ ಪ್ರೀತಿಯನ್ನು, ಸೇವೆಯನ್ನು ಬಯಸುವ ದೀನರಾಗಿಯೇ ಕಂಡರು. ಅವರ ಸೇವೆಯನ್ನು ಮಾಡಿದರು. ರೋಗಿಗಳ ರೋಗವನ್ನು ಗುಣಪಡಿಸಿದರು. ಸಾವಿನಂಚಿನಲ್ಲಿರುವವರನ್ನು ನೆಮ್ಮದಿಯಿಂದ ಸಾಯುವಂತೆ ಮಾಡಿದರು, ಅನಾಥರಿಗೆ ಆಶ್ರಯ ನೀಡಿ ಅವರಿಗೆ ಬದುಕು ನೀಡಿದರು. ಇಂದು ಜಗತ್ತಿಗೆ ಬೇಕಿರುವುದು ಜಗತ್ತನ್ನು ಪೊರೆಯುವ ಈ ಗುಣ.

ಮದರ್ ಎಂಬ ಮಮತೆಯ ದೇವತೆ

ಈಗಿನ ಮೆಸಿಡೋನಿಯಾದ ರಾಜಧಾನಿಯಲ್ಲಿ 1910 ಆಗಸ್ಟ್ 26 ರಂದು ಜನಿಸಿದ ತೆರೇಸಾ ಸೇವಾ ಕಾರ್ಯಕ್ಕೆ ಆರಿಸಿಕೊಂಡದ್ದು ಭಾರತವನ್ನು. 1929 ರಲ್ಲಿ ಭಾರತಕ್ಕೆ ಬಂದ ಅವರು ಬಂಗಾಳಿ ಕಲಿತು ಹಿಮಾಲಯದ ತಪ್ಪಲಿನ ಡಾರ್ಜಿಲಿಂಗ್ ನಲ್ಲಿ ಸೈಂಟ್ ತೆರೇಸಾ ಶಾಲೆಯಲ್ಲಿ ಪಾಠ ಹೇಳಲಾರಂಭಿಸಿದರು. ಬಳಿಕ ಪೂರ್ವ ಕೊಲ್ಕತ್ತಾದ ಲೊರೆಟೋ ಕಾನ್ವೆಂಟ್ ನಲ್ಲಿ ಕೆಲಸ ಮಾಡುವಾಗ ಧಾರ್ಮಿಕ ವಿಧಿಯನ್ನು ಸ್ವೀಕರಿಸಿದರು; ಮದರ್ ಆದರು. ಅಲ್ಲಿ ಸುಮಾರು 20 ವರ್ಷ ಕೆಲಸ ಮಾಡಿದ ಬಳಿಕ 1944 ರಲ್ಲಿ ಮುಖ್ಯ ಶಿಕ್ಷಕಿ ಆದರು. ಶಾಲೆಯಲ್ಲಿ ಕಲಿಸುವುದು ಅವರಿಗೆ ಇಷ್ಟದ ಕೆಲಸವಾದರೂ ಕೊಲ್ಕತ್ತಾದ ಸುತ್ತಲ ಕಡುಬಡತನ ಅವರನ್ನು ಚಿಂತೆಗೀಡು ಮಾಡಿತು. 1943 ರ ಕ್ಷಾಮ ನಗರಕ್ಕೆ ಸಂಕಟ ಮತ್ತು ಸಾವನ್ನು ತಂದಿತು. ಸಾಲದೆಂಬಂತೆ 1946 ರ ಮುಸ್ಲಿಂ ಹಿಂದೂ ಗಲಭೆ. 1946 ಕ್ಕಾಗುವಾಗ ಶಾಲೆ ತೊರೆದು ಭಾರತದ ಬಡವರಿಗಾಗಿ ಕೆಲಸ ಮಾಡುವ ಅವರ ಬಯಕೆ ತೀವ್ರವಾಯಿತು. ಶಾಲೆ ತೊರೆದ ತೆರೆಸಾ ಅವರು ಅಕ್ಟೋಬರ್ 7, 1950 ರಲ್ಲಿ ʼಮಿಷನರಿ ಅಫ್ ಚಾರಿಟಿʼ ಶುರು ಮಾಡಿದರು. ನೀಲಿ ಅಂಚಿನ ಬಿಳಿಯ ಸೀರೆ ಅವರ ಶಾಶ್ವತ ದಿರಿಸಾಯಿತು. ತಮ್ಮ ಉಳಿದ ಜೀವಿತಾವಧಿಯನ್ನು ದೀನರ ಸೇವೆ ಮಾಡುತ್ತಾ ಇಲ್ಲೇ ಕಳೆದರು.

ಮಿಷನರೀಸ್ ಆಫ್ ಚಾರಿಟಿ

ಹಸಿದವರು, ಉಡಲು ವಸ್ತ್ರವಿಲ್ಲದವರು, ನಿರಾಶ್ರಿತರು, ಅಂಗವಿಕಲರು, ಕುರುಡರು, ಕುಷ್ಠರೋಗಿಗಳು, ಸಮಾಜದಿಂದ ತಿರಸ್ಕೃತರು, ಒಂದು ಹಿಡಿ ಪ್ರೀತಿಗಾಗಿ ತಹತಹಿಸುವವರು ಇವರೆಲ್ಲರ ಕಣ್ಣೀರು ಒರೆಸುವ ಏಕೈಕ ಗುರಿಯೊಂದಿಗೆ ಈ ಮಿಷನರೀಸ್ ಆಫ್ ಚಾರಿಟಿಯು ಮುಂದುವರೆಯಿತು.

1952 ರಲ್ಲಿ ಕೊಲ್ಕತ್ತಾದ ಕಾಳಿಘಾಟನ್ ನಲ್ಲಿ ‘ನಿರ್ಮಲ್ ಹೃದಯ’ವನ್ನು ತೆರೆದರು, ಇದು ಸಾಯುತ್ತಿರುವವರ ಧರ್ಮಶಾಲೆ ಎಂದು ಹೆಸರಾಗಿದೆ. ಇವರು ಸ್ಥಾಪಿಸಿದ ‘ಶಾಂತಿ ನಗರ’ವು ಕುಷ್ಠರೋಗದಿಂದ ಬಳಲುತ್ತಿರುವವರಿಗೆ ಸೇವೆ ಒದಗಿಸಿತು ಮತ್ತು ಸಮಾಜದಿಂದ ಪರಿತ್ಯಕ್ತರಾದವರಿಗೆ, ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಕೆಲಸ ಮಾಡಿತು. ‘ನಿರ್ಮಲ್ ಶಿಶು ಭವನ್’ ಅಥವಾ ʼಚಿಲ್ಡ್ರನ್ಸ್ ಹೋಮ್ ಆಫ್ ದಿ ಇಮ್ಯಾಕ್ಯುಲೇಟ್ ಹಾರ್ಟ್ʼ ನ್ನು ಮಕ್ಕಳಿಗಾಗಿ 1955 ರಲ್ಲಿ ಸ್ಥಾಪಿಸಲಾಯಿತು. ಕೊಲ್ಕತ್ತಾದಲ್ಲಿ ಬೀದಿ ಮಕ್ಕಳ ಶಾಲೆಯನ್ನೂ ತೆರೆಯಲಾಯಿತು.

1960 ರ ಹೊತ್ತಿಗೆ ಮಿಷನರೀಸ್ ಆಫ್ ಚಾರಿಟಿಯು ದೇಶದಾದ್ಯಂತ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿತು. 1965 ರಲ್ಲಿ ಪೋಪ್ ಪಾಲ್ VI ಅವರು ಮದರ್ ಅವರ ಕೆಲಸವನ್ನು ಮೆಚ್ಚಿ ಅವರ ಕಾರ್ಯವನ್ನು ಇತರ ದೇಶಗಳಿಗೆ ವಿಸ್ತರಿಸಲು ಅವಕಾಶ ನೀಡಿದರು. ಬಳಿಕ ಈ ಸಂಸ್ಥೆಯು ವೆನೆಜುವೆಲಾದಿಂದ ಆರಂಭಿಸಿ ಪ್ರಪಂಚದಾದ್ಯಂತ ಅನೇಕ ದೇಶಗಳಿಗೆ ತಮ್ಮ ಕೆಲಸವನ್ನು ವಿಸ್ತರಿಸಿತು. ಇದರಲ್ಲಿ ಪೂರ್ವ ಆಫ್ರಿಕಾ, ಉತ್ತರ ಯುರೋಪ್ ಮತ್ತು ದಕ್ಷಿಣ ಅಮೆರಿಕಾದ ಹಲವಾರು ದೇಶಗಳನ್ನು ಒಳಗೊಂಡಿತ್ತು. ಇಂದು ಮಿಷನರೀಸ್ ಆಫ್ ಚಾರಿಟಿಯು 4000 ಕ್ಕಿಂತ ಹೆಚ್ಚು ಸನ್ಯಾಸಿಗಳನ್ನು ಒಳಗೊಂಡಿದೆ. ಸಂಸ್ಥೆಯು ಇಲ್ಲಿಯವರೆಗೆ 100 ಕ್ಕೂ ಹೆಚ್ಚು ದೇಶಗಳಿಗೆ ತನ್ನ ಶಾಖೆಗಳನ್ನು ವಿಸ್ತರಿಸಿದೆ.

ಮದರ್ ತೆರೇಸಾರ ಅಪ್ಪುಗೆಯ ಬಾಹುಗಳು ನಮ್ಮೆಲ್ಲರದಾಗಲಿ

ಕನ್ನಡದ ಹಿರಿಯ ಚಿಂತಕ ಪುರುಷೋತ್ತಮ ಬಿಳಿಮಲೆಯವರು ಒಂದೆಡೆಯಲ್ಲಿ ಹೀಗೆ ಹೇಳುತ್ತಾರೆ- ‘ಮದರ್ ತೆರೇಸಾರ ಅಪ್ಪುಗೆಯ ಬಾಹುಗಳು ನಮ್ಮೆಲ್ಲರದಾಗಲಿ. ಸಮಾಜದಲ್ಲಿ ಹೊಸ ಬಗೆಯ ದಮನಿತರನ್ನು ಸೃಷ್ಟಿಸಲಾಗುತ್ತಿರುವ ಕಾಲಘಟ್ಟದಲ್ಲಿ ಅದರ ವಿರುದ್ಧ ಹೋರಾಟಕ್ಕೆ ಪ್ರೇಮದಿಂದ, ಸಮಾನತೆಯಿಂದ ಎಲ್ಲರನ್ನೂ ಪ್ರೀತಿಸಿದ ಮದರ್ ತೆರೇಸಾರ ಸೇವೆಯೆಂಬ ಕ್ರಿಯೆಯು ನಮಗೆಲ್ಲ ಪ್ರೇರಣೆಯಾಗಬೇಕಿದೆ.

ತೆರೇಸಾರವರು ಕ್ರಿಯೆಯನ್ನು ಸೇವೆ ಎಂದು ಹೇಳಿಕೊಂಡಿದ್ದರಿಂದಾಗಿ ಕೊಲ್ಕತ್ತಾದ ಸಾವುಗಳನ್ನು, ವಿಯೆಟ್ನಾಂನ ಗಾಯಾಳುಗಳನ್ನು ತಬ್ಬಿಕೊಳ್ಳಲು, ಇಥಿಯೋಫಿಯಾದ ಹಸಿವಿನ ಬಗ್ಗೆ ಮಾತನಾಡಲು, ಅಮೆರಿಕದ ಒಂಟಿತನವನ್ನು ಬಯಲಿಗೆಳೆಯಲು, ಐರ್ಲೆಂಡ್ ನ ಅನಾಥ ಪ್ರಜ್ಞೆಯ ಬಗ್ಗೆ ಮಾತನಾಡಲು, ಆಸ್ಟ್ರೇಲಿಯಾದ ಅಂಗವಿಕಲತೆಯ ಬಗ್ಗೆ ಮಾತನಾಡುವ ಮೂಲಕ ತೆರೇಸಾರ ಎರಡು ಬಾಹುಗಳು ಇಡೀ ಜಗತ್ತನ್ನೇ ತಬ್ಬಿಕೊಳ್ಳಲು ಸಾಧ್ಯವಾಯಿತು. ಯುಗೋಸ್ಲಾವಿಯಾದಲ್ಲಿ ಹುಟ್ಟಿದ ಮದರ್ ತೆರೆಸಾ, ಭಾರತಕ್ಕೆ ಬಂದು 1943 ರಲ್ಲಿ ಬಂಗಾಳದಲ್ಲಿ ನಡೆದ ಕ್ಷಾಮ ಹಾಗೂ 1946 ರಲ್ಲಿ ನಡೆದ ಕೋಮು ಗಲಭೆಯನ್ನು ಕಣ್ಣಾರೆ ಕಂಡವರು. ಈ ಎರಡು ಘಟನೆಗಳನ್ನು ನೋಡಿದ ತೆರೇಸಾರವರು ಪ್ರೀತಿ ಮತ್ತು ಪ್ರೇಮ ಎಂಬುದು ಭಾವನೆ ಅಲ್ಲ, ಅದು ಕ್ರಿಯೆ. ಹಾಗಾಗಿ ಸೇವೆ ಮಾಡಿ ಎಂದು ಹೇಳಿದರಲ್ಲದೆ, ಅದರಂತೆ ನಡೆದು ಕೊಂಡರು. ಅವರ ಸೇವೆಯ ಕ್ರಿಯೆಯನ್ನು ಅಂದಿನ ಕಾಲಘಟ್ಟಕ್ಕೆ ಸೀಮಿತಗೊಳಿಸದೆ, ಇಂದಿಗೆ ಪ್ರಸ್ತುತ ಪಡಿಸಬೇಕಾಗಿದೆ.

ಜಾಗತೀಕರಣದ ಕಾಲಘಟ್ಟದಲ್ಲಿ ನಾವು ಎದುರಿಸುತ್ತಿರುವ ಬಡತನ, ರೋಗ ಮತ್ತು ತುಳಿತಕ್ಕೊಳಗಾದವರನ್ನು ತೆರೇಸಾರ ಬಾಹುಗಳು ನಮ್ಮೆಲ್ಲರ ಬಾಹುಗಳಾಗಿ ತಬ್ಬಿಕೊಳ್ಳಬೇಕಾಗಿದೆ. ಇತ್ತೀಚೆಗೆ ರೋಹಿಂಗ್ಯಾ ಶಿಬಿರಕ್ಕೆ ನಾನು ಭೇಟಿ ನೀಡಿದ್ದೆ. ಅಲ್ಲಿ ಅಳುತ್ತಿರುವ ಮಕ್ಕಳು, ಮಹಿಳೆಯರನ್ನು ನೋಡಿ ಮನಸು ಕಿತ್ತು ಬರುವಂತಾಯಿತು. ಅವರಿಗೆ ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಲಾಗಿದೆ. ಯಾರೋ ಒಂದಿಬ್ಬರು ಆ ಸಮುದಾಯದಿಂದ ಭಯೋತ್ಪಾದಕರಾಗಿರಬಹುದು. ಆದರೆ ಅದಕ್ಕಾಗಿ ಇಡೀ ಸಮುದಾಯವನ್ನು ಬಲಿ ಕೊಡುವುದು ತಪ್ಪು. ಬದಲಾಗುತ್ತಿರುವ ಸಾಮಾಜಿಕ ರಾಜಕೀಯ ಸಂದರ್ಭದಲ್ಲಿ ಹುಟ್ಟುತ್ತಿರುವ ರೋಹಿಂಗ್ಯಾಗಳ ಕಣ್ಣ ನೀರು ಒರೆಸಲು ಮದರ್ ತೆರೆಸಾ ನಮಗೆ ಸ್ಫೂರ್ತಿಯಾಗಬೇಕು. ಅಂತಾರಾಷ್ಟ್ರೀಯ ಸಂಬಂಧಗಳ ನಡುವೆ ದಮನಿತರನ್ನು ಮಾರಣ ಹೋಮ ಮಾಡುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರ ವಿರುದ್ಧ ಹೊಸ ಬಗೆಯ ಹೋರಾಟಕ್ಕೆ ಮದರ್ ತೆರೇಸಾ ಪ್ರೇರಣೆಯಾಗಬೇಕು.

ಚರಿತ್ರೆಯ ಅನ್ಯಾಯಗಳ ವಿಜೃಂಭಣೆಗೆ ತೆರೇಸಾರ ಪ್ರೀತಿ, ಸೇವೆಯು ಉತ್ತರವಾಗಲಿ. ಇಂದು ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ತೀವ್ರತೆಯನ್ನು ಗ್ರಹಿಸಲು ಸಾಧ್ಯವಿಲ್ಲದಂತಾಗಿದೆ. ಚರಿತ್ರೆಯ ಕುರೂಪಗಳು, ಅನ್ಯಾಯಗಳಿಗೆ ಗೌರವ ಕೊಡುವ ಇಂದಿನ ಕಾಲಘಟ್ಟದಲ್ಲಿ ನಾವಿಂದು ತೆರೇಸಾರ ಪ್ರೀತಿಯ ಸೇವೆಯ ಕ್ರಿಯೆಗಳ ಮೂಲಕ ಉತ್ತರ ನೀಡಬೇಕಾಗಿದೆ’.

ನಿಂದಕರಿರಬೇಕಯ್ಯಾ…

ಇಂತಹ ಕರುಣಾಮಯಿಯನ್ನು ನೊಂದವರ ಸೇವೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟವರನ್ನು ಈಗ ದ್ವೇಷಿಸುವ, ನಿಂದಿಸುವ, ಕೃತಘ್ನರೇ ತುಂಬಿರುವ ಹೊಸ ಕಾಲದಲ್ಲಿ ನಾವು ಇದ್ದೇವೆ. ಆಕೆ ಮಾಡಿದ್ದು ಸೇವೆಯಲ್ಲ, ಮತಾಂತರ ಎಂದು ಯಾರೋ ಹೇಳಿದ್ದನ್ನು ಕೇಳಿ ನಿಂದಿಸುವ ದೊಡ್ಡ ತಲೆಮಾರು ನಿರ್ಮಾಣವಾಗಿದೆ. ಗೋಡ್ಸೆಯನ್ನು ಆರಾಧಿಸುವ ಈ ವರ್ಗದಿಂದ ತೆರೇಸಾ ನಿಂದನೆ ಕೇಳುವುದು ಅಚ್ಚರಿಯೇನೂ ಇಲ್ಲ. ಆದರೆ ಸತ್ಯ ಯಾವತ್ತೂ ಸತ್ಯವೇ ಆಗಿರುತ್ತದೆ. ಅದು ಇತಿಹಾಸದಲ್ಲಿ ಉಳಿದುಕೊಳ್ಳುತ್ತದೆ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತ ಬೀದಿಯಲ್ಲಿ ಬಿದ್ದವರನ್ನು, ಅಂಗ ಊನಗೊಂಡಿರುವ ಕುಷ್ಠರೋಗಿಗಳನ್ನು, ವಯೋವೃದ್ಧರನ್ನು, ಅನಾಥರನ್ನು ಮತಾಂತರ ಮಾಡಿ ಯಾವುದೇ ಧರ್ಮಕ್ಕೆ ಆಗಬೇಕಾದುದಾರೂ ಏನು? ತೆರೇಸಾ ಮತಾಂತರ ಮಾಡಿದರು ಎಂದು ಹಗುರವಾಗಿ ಮಾತನಾಡುವವರು ತಾವೂ ಆಶ‍್ರಮ ತೆರೆದು ಶುಶ್ರೂಷೆ ಮಾಡಿ ಆ ಕಡೆಯಿಂದ ಈ ಕಡೆಗೆ ಮತಾಂತರ ಮಾಡಬಹುದಲ್ಲಾ? ಆದರೆ ಸತ್ಯೋತ್ತರ ಯುಗದಲ್ಲಿ ತರ್ಕಕ್ಕೆ, ವಿವೇಕದ ಮಾತುಗಳಿಗೆ ಜಾಗವಾದರೂ ಎಲ್ಲಿದೆ?

ಒಬ್ಬ ಶಾಂತಿಯ ದೂತ ಗಾಂಧಿ, ಒಬ್ಬಳು ಪ್ರೀತಿ ಮತ್ತು ಸೇವೆಯ ಪ್ರತಿರೂಪ ಮದರ್ ತೆರೆಸಾ ಯುಗಕ್ಕೊಮ್ಮೆ ಜನಿಸುವವರು. ಆದರೆ ಅವರು ದೇವತೆಗಳಲ್ಲ. ಅವರೂ ಮನುಷ್ಯರು. ಆದರೆ, ತಮ್ಮ ಮಾನವೀಯ ಚಿಂತನೆಗಳಿಂದ ತಮ್ಮ ಮಾದರಿ ಕೆಲಸಗಳಿಂದ ಅವರು ದೇವತೆಗಳಾದರು. ನಾವೂ ಅವರಂತಾಗುವುದು ಕಷ್ಟ ನಿಜ. ಆದರೆ, ಅವರ ಹಾದಿಯಲ್ಲಿ ನಡೆಯಬಲ್ಲೆವು. ಇದಕ್ಕೆ ಮನಸು ಬೇಕು ಅಷ್ಟೇ. ಗಾಂಧಿ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ನಾವು ಅವರ ಹಾದಿಯಲ್ಲಿ ಖಂಡಿತಾ ಸಾಗಬಲ್ಲೆವು ಮತ್ತು ಹಾಗೆ ಸಾಗುವತ್ತ ನಮ್ಮ ಯತ್ನ ನಿರಂತರವಾಗಿರಲಿ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಶ್ರೀನಿವಾಸ ಕಾರ್ಕಳ
ಚಿಂತಕ, ಲೇಖಕ

‘ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲವಾದರೆ…
‘ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲವಾದರೆ ಅವರಿಗೆ ಕರಿ ನೀರಿನ ಶಿಕ್ಷೆ ಆದುದು ಯಾಕೆ?’ ಎಂದು ಸಾವರ್ಕರ್ ಬೆಂಬಲಿಗರು ಪ್ರಶ್ನೆ ಹಾಕುತ್ತಿದ್ದಾರೆ. ಆದರೆ ಅವರು ಮಾಡಿದ ಸ್ವಾತಂತ್ರ್ಯ ಹೋರಾಟದ ವಿವರ ಒದಗಿಸುವುದಿಲ್ಲ. ಅದಿರಲಿ, ಸಾವರ್ಕರ್ ಅಂಡಮಾನ್ ಶಿಕ್ಷೆಗೆ ಒಳಗಾಗಲು ಕಾರಣ ಒಂದು ಹತ್ಯಾ ಪ್ರಕರಣ. ಅದರ ವಿವರ ಇಲ್ಲಿದೆ.

1911 ರ ಪೂರ್ವದಲ್ಲಿ ಲಂಡನ್ನಿನಲ್ಲಿದ್ದಾಗ ಸಾವರ್ಕರ್ ಭಾರತೀಯ ಕ್ರಾಂತಿಕಾರಿಗಳ ನಿಲಯವಾಗಿದ್ದ “ಇಂಡಿಯಾ ಹೌಸ್” ನ ಖಾಯಂ ಸದಸ್ಯರಾಗಿದ್ದರು. ಮುಸ್ಲಿಮರ ಬಗ್ಗೆ ಮೊದಲಿಂದಲೂ ಅಸಹನೆಯನ್ನು ಬೆಳೆಸಿಕೊಂಡಿದ್ದರೂ, ಲಂಡನ್ನಿನಲ್ಲಿದ್ದಾಗ ಹಿಂದೂ-ಮುಸ್ಲಿಮರಿಬ್ಬರೂ ಭಾರತ ಮಾತೆಯ ಎರಡು ಕಣ್ಣುಗಳು ಎಂದು ಬಣ್ಣಿಸಿ 1857 ರ ಬಂಡಾಯದ ಬಗ್ಗೆ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಎಂಬ ಪುಸ್ತಕವನ್ನೂ ಬರೆದಿದ್ದರು. ಲಂಡನ್ನಿನಲ್ಲಿದ್ದ ಬಿಸಿರಕ್ತದ ತರುಣರನ್ನು ಬ್ರಿಟಿಷ್ ವಿರೋಧಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದರು. ತಾವು ತೆರೆಮರೆಯಲ್ಲಿದ್ದುಕೊಂಡು ಅಂಥಾ ಕೃತ್ಯಗಳಲ್ಲಿ ತಮ್ಮ ಪಾತ್ರ ಸಾಬೀತಾಗದಂತೆ ಎಚ್ಚರವಹಿಸುತ್ತಿದ್ದರು.

ಲಂಡನ್ನಿನಿಂದಲೇ ಮಹಾರಾಷ್ಟ್ರದಲ್ಲಿದ್ದ ತಮ್ಮ “ಅಭಿನವ ಭಾರತ್” ನ ಕ್ರಾಂತಿಕಾರಿ ಗೆಳೆಯರಿಗೆ ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆ ಮಾಡಲು ಬೇಕಾದ ಪಿಸ್ತೂಲನ್ನು ಸರಬರಾಜು ಮಾಡುತ್ತಿದ್ದರು.

ಅಂಥಾ ಒಂದು ಹತ್ಯಾ ಪ್ರಯತ್ನದ ಭಾಗವಾಗಿ ನಾಸಿಕ್ ನ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಆಗಿದ್ದ ಎಎಮ್ ಟಿ ಜಾಕ್ಸನ್ (1866-1909) ಅನ್ನು ಕೊಲೆ ಮಾಡಲಾಗುತ್ತದೆ. ಜಾಕ್ಸನ್ ತುಂಬಾ ಓದಿಕೊಂಡ ಓರ್ವ ಇಂಡಾಲಜಿಸ್ಟ್ ಮತ್ತು ಇತಿಹಾಸಕಾರ. ಪಂಡಿತ್ ಜಾಕ್ಸನ್ ಎಂಬ ಹೆಸರನ್ನೂ ಗಳಿಸಿದ್ದ ಈ ಅಧಿಕಾರಿ ಭಾರತ ಇತಿಹಾಸದ ಬಗ್ಗೆ, ಜಾನಪದ ಮತ್ತು ಸಂಸ್ಕೃತಿಯ ಬಗ್ಗೆ ಅನೇಕ ಪ್ರಬಂಧ ಬರೆದ ವಿದ್ವಾಂಸ.

ಜಾಕ್ಸನ್ ನ ಹತ್ಯೆಗೆ ಸಾವರ್ಕರ್ ಅವರು ಬ್ರಿಟನ್ನಿನಿಂದ ಕಳಿಸಿದ ಪಿಸ್ತೂಲನ್ನು ಬಳಸಿದ್ದರೆಂದು ಗೊತ್ತಾಗುತ್ತದೆ. ಹೀಗಾಗಿ ಸಾವರ್ಕರ್ ಅವರನ್ನು ಬಂಧಿಸಿ, ಭಾರತದಲ್ಲಿ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ ವಿಧಿಸಿ ಅಂಡಮಾನ್ ಜೈಲಿಗೆ ಕಳಿಸುತ್ತಾರೆ.

1909 ರಲ್ಲಿ ಲಂಡನ್ನಿನಲ್ಲಿ ಕರ್ಜನ್ ಅವರನ್ನು ಕೊಂದ ಮದನ್ ಲಾಲ್ ಧಿಂಗ್ರಾ ಕೂಡ ಗಾಂಧಿಯನ್ನು ಕೊಂದ ಗೋಡ್ಸೆಯಂತೆ ಸಾವರ್ಕರ್ ಅವರನ್ನು ತನ್ನ ಗುರು ಎಂದು ಭಾವಿಸಿದ್ದರು. ಆದರೆ ಈ ಎರಡೂ ಪ್ರಕರಣಗಳಲ್ಲಿ ಸಾವರ್ಕರ್ ತನ್ನ ಶಿಷ್ಯರನ್ನು ಮುಂದೆ ಬಿಟ್ಟು ತಾವು ಹಿಂದೆ ಉಳಿದಿದ್ದರು. ಅವರ ಪಾತ್ರ ಸಾಬೀತಾಗಿ ಶಿಕ್ಷೆಯಾಗಿದ್ದು ಜಾಕ್ಸನ್ ಕೊಲೆ ಪ್ರಕರಣದಲ್ಲಿ ಮಾತ್ರ.

ಹೀಗೆ ತಮ್ಮ ರಾಜಕೀಯ ಜೀವನದಲ್ಲಿ ಮೊಟ್ಟಮೊದಲಬಾರಿಗೆ ಜೈಲುಶಿಕ್ಷೆ ಎದುರಿಸಬೇಕಾಗಿ ಬಂದರೂ ಅದನ್ನು ವೀರೋಚಿತವಾಗಿ ಎದುರಿಸದೇ ಅಂಡಮಾನ್ ಗೆ ಹೋದ ಮರುತಿಂಗಳಿಂದಲೇ ಬ್ರಿಟಿಷರಿಗೆ ಶರಣಾಗತಿ ಹಾಗೂ ಕ್ಷಮಾದಾನ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರು. ಹಾಗೂ ಬ್ರಿಟಿಷರಿಗೆ ಕೊಟ್ಟ ಮಾತಿನಂತೆ ತಾವು ಬಿಡುಗಡೆಯಾದ ನಂತರ ಸದಾ ಬ್ರಿಟಿಷರ ಜೊತೆ ಕೈಗೂಡಿಸಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆಯುತ್ತಾ ಹೋದರು.

ಹೀಗೆ ಸಾವರ್ಕರ್ 1911ಕ್ಕೆ ಮುನ್ನ ತೆರೆಮರೆಯ ಕ್ರಾಂತಿಕಾರಿಯಾಗಿದ್ದರೂ 1911ರ ನಂತರ ಬಹಿರಂಗ ದೇಶದ್ರೋಹಿಯಾಗಿದ್ದರು.

ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.

ಶ್ರೀನಿವಾಸ್‌ ಕಾರ್ಕಳ
ಚಿಂತಕರು, ಬರಹಗಾರರು