siddaramaih – Peepal Media

ಇದುವರೆಗೂ 1100 ಪತ್ರಕರ್ತರ ಕೊಲೆ: ದಿ.ವೈರ್‌ ಸಂಪಾದಕಿ ಸೀಮಾ ಚಿಸ್ತಿ ಕಳವಳ
ಬೆಂಗಳೂರು: ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ನಾವೆಲ್ಲ ಭಾಷಣ ಮಾಡುತ್ತೇವೆ. ಆದರೇ ಇದುವರೆಗೂ  ನಮ್ಮ ದೇಶದಲ್ಲಿ 1100 ಪತ್ರಕರ್ತರ ಕೊಲೆ ನಡೆದಿದೆ ಎಂದು ದಿ.ವೈರ್‌ ಜಾಲತಾಣದ ಸಂಪಾದಕಿ ಸೀಮಾ ಚಿಸ್ತಿ ಕಳವಳವ್ಯಕ್ತಪಡಿಸಿದ್ದಾರೆ.

ನಗರದ ಟೌನ್‌ಹಾಲ್‌ನಲ್ಲಿ ನಡೆದ ಈದಿನ.ಕಾಮ್ ಎರಡನೇ ವರ್ಷದ ಓದುಗರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಈ ದೇಶದಲ್ಲಿ ಲಕ್ಷಗಟ್ಟಲೇ ಮಾಧ್ಯಮಗಳಿವೆ, ಆದರೆ ಎಷ್ಟರಲ್ಲಿ ವಾಸ್ತವ ಸಂಗತಿಗಳು,ವಸ್ತುನಿಷ್ಠ ವರದಿಗಳು ದೊರೆಯುತ್ತಿವೆ ಎಂದು  ಪ್ರಶ್ನಿಸಿದರು.

ಮಾಧ್ಯಮಗಳ ಸಂಖ್ಯೆಗಳನ್ನು ಹೇಳುವುದಾದರೆ, 159 ದೇಶಗಳ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿ ಭಾರತ ಇದೆ.  ಆದರೆ ಪತ್ರಿಕಾ ಸ್ವಾತಂತ್ರ್ಯದ ವಿಚಾರ ಬಂದಾಗ ದೇಶದಲ್ಲಿ 1100 ಪತ್ರಕರ್ತರು ಈ ದೇಶದಲ್ಲಿ ಕೊಲೆ ಆಗಿದ್ದಾರೆ. ಇದು ಹೆಚ್ಚು ಆತಂಕದ ವಿಚಾರ ಎಂದರು.

“ಈದಿನ.ಕಾಮ್‌ನಂಥ ಡಿಜಿಟಲ್ ಸ್ವತಂತ್ರ ಮಾಧ್ಯಮ ಬೇಕೇ ಬೇಕು. ನಾವು ಆ ಮಾಧ್ಯಮವೇ ಆಗಿ ವಾದಿಸುವುದಾದರೆ, ಇದು ಕೇವಲ ಮಾಧ್ಯಮಗಳ ಕೆಲಸವಲ್ಲ. ನಾಗರೀಕರಾಗಿ ನಮ್ಮೆಲ್ಲರ ಕೆಲಸ. ಏಕೆಂದರೆ ಭಾರತದ ಸ್ವತಂತ್ರ ಅಸ್ತಿತ್ವ ನಮ್ಮ ಜನರು ಮಾಡುವ ಆಯ್ಕೆಗಳ ಮೇಲಿರುತ್ತದೆ ಹಾಗಾಗಿ ಸ್ವತಂತ್ರ ಮಾಧ್ಯಮ ಬಹಳ ಮುಖ್ಯ. ನಾವು ದೊಡ್ಡ ಮಾಧ್ಯಮ ಎಂದು ಕರೆಯುವವರ ವಾಸ್ತವ ಏನು ಎಂಬುವುದು ನಮಗೆ ತಿಳಿದಿದೆ. ಆದ್ದರಿಂದಲೇ ಸ್ವತಂತ್ರ ಮಾಧ್ಯಮ ಬಹಳ ಮುಖ್ಯ. ಕಳೆದ 11 ವರ್ಷಗಳಲ್ಲಿ ದೇಶದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಬಹುಸಂಖ್ಯಾತರ ಪಟ್ಟ ತಲುಪಿದ್ದಾರೆ. ಈ ಬಾರಿ ಸಣ್ಣ ಪ್ರಮಾಣದಲ್ಲಿ ವಿರೋಧ ಪಕ್ಷವಿದೆ. ಕ್ರೈಮ್, ಕ್ರಿಕೆಟ್ ಮತ್ತು ಸಿನೆಮಾದ ಗೀಳು ಮಾಧ್ಯಮಗಳನ್ನು ತುಂಬಿದ್ದು, ಬಹುತೇಕ ಮಾಧ್ಯಮಗಳಿಗೆ ಗ್ರಾಮೀಣ ವರದಿಗಾರರೇ ಇಲ್ಲ ಎಂದು ಅವರು ಬೇಸರವ್ಯಕ್ತಪಡಿಸಿದರು.

“ಉದಾಹರಣೆಗೆ, ಹೊರಗೆ ಮಳೆ ಬರುತ್ತಿದ್ದರೆ ನಾರಾಯಣ್ ಅವರು ಮಳೆ ಬರುತ್ತಿದೆ ಎಂಬು ಅಭಿಪ್ರಾಯಪಟ್ಟರು ಅಥವಾ ಸಿಎಂ ಸಿದ್ಧರಾಮಯ್ಯ ಅವರು ಮಳೆ ಬರುತ್ತಿಲ್ಲ ಎಂದು ಹೇಳಿದರು ಎಂದು ವರದಿ ಮಾಡುವುದು ಮಾಧ್ಯಮದ ಕೆಲಸವಲ್ಲ. ಛತ್ರಿ ಹಿಡಿದು ಹೊರಗೆ ಹೋಗಿ 2 ಸೆಂ ಮೀ ಮಳೆ ಆಗಿದೆ ಎಂದು ಹೇಳುವುದು ನಮ್ಮ ಕೆಲಸ” ಎಂದು ಅವರು ಹೇಳಿದರು.

“ಖಬರ್ ಲೆಹರಿಯಾ, ವೈರ್, ಈದಿನ.ಕಾಮ್ ಸೇರಿ ನಾವೆಲ್ಲ ಇಂದು ಒಂದೇ ದಿಕ್ಕಿಗೆ ಹೊರಟಿದ್ದೇವೆ. ನಾವೆಲ್ಲ ಇದರಲ್ಲಿ ಮಾಡುತ್ತಿರುವ ಪ್ರಯತ್ನ ಜನರಿಗೆ ಆರೋಗ್ಯಕರವಾದ, ಸತ್ಯವಾದ ಮಾಹಿತಿಯನ್ನು ನೀಡುವುದಾಗಿದೆ. ನೀರಿನೊಳಗೆ ಬೇಯುತ್ತಿರುವ ಕಪ್ಪೆಗೆ ಹೇಗೆ ಬಿಸಿ ಗೊತ್ತಾಗುವುದಿಲ್ಲವೋ, ಹಾಗೆ ನಮ್ಮ ಜನರ ಸ್ಥಿತಿಯಿದೆ. 11 ವರ್ಷಗಳಲ್ಲಿ ಪ್ರಧಾನ ಮಂತ್ರಿ ಒಂದೂ ಪತ್ರಿಕಾಗೋಷ್ಠಿ ಮಾಡಿಲ್ಲ, ಟ್ರಂಪ್ ಕೂಡಾ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸುತ್ತಾರೆ. ಆದರೆ ಇವರು ಅದನ್ನು ಮಾಡುತ್ತಿಲ್ಲ. ಕೋವಿಡ್ ಬಂತು, ಗಂಗಾನದಿಯಲ್ಲಿ ಹೆಣಗಳು ಬಂದವು, ಏನೇ ಬರಲಿ ಪ್ರಧಾನ ಮಂತ್ರಿ ಮಾಧ್ಯಮಗಳ ಮುಂದೆ ಬರಲಿಲ್ಲ” ಎಂದು  ಸೀಮಾ  ಅಸಮಧಾನ ವ್ಯಕ್ತಪಡಿಸಿದರು.

“ಹೊರಗೆ ಹೋಗಿ ರೈತರು ಹೋರಾಟದಲ್ಲಿದ್ದಾರೆ ಎಂಬುವುದನ್ನು ದಾಖಲಿಸುವುದು. ಯಾಕೆ ಕಾರ್ಮಿಕರ ಮುಷ್ಕರ ನಡೆಯುತ್ತಿದೆ ಎಂಬುದನ್ನು ವರದಿ ಮಾಡುವುದು ಇಂದು ಮಾಧ್ಯಮಗಳ ಕೆಲಸವಲ್ಲ ಎಂಬಂತಾಗಿದೆ. ಮೊದಲೆಲ್ಲ ದನಿಯೆತ್ತುತ್ತಿದ್ದ ಮಾಧ್ಯಮ ಸಂಸ್ಥೆಗಳು ಈ ಯಾವ ಸಂದರ್ಭಗಳಲ್ಲೂ ಒಂದೂ ಮಾತಾಡುತ್ತಿಲ್ಲ. ಮಾಧ್ಯಮ ಇರುವುದು ಜನರ ಒಳಿತಿಗಾಗಿ ಎಂಬುವುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು. ಬಿಬಿಸಿ ಸರ್ಕಾರದ ಸಂಸ್ಥೆಯಲ್ಲ ಜನರ ಪ್ರತಿನಿಧಿ. ಹಾಗೆಯೇ ಪರ್ಯಾಯ ಮಾದ್ಯಮಗಳು ಕೂಡಾ. ಸರ್ಕಾರದ ದನಿಯಾಗಲು ದೂರದರ್ಶನ ಇದೆ, ಅದು ಮಾಧ್ಯಮಗಳ ಕೆಲಸವಲ್ಲ” ಎಂದು ಅವರು ಹೇಳಿದರು.

“ಮೂಲಭೂತ ಸತ್ಯಗಳನ್ನು ಹೇಳುವವರ ಮೇಲೆ ಸಾಮಾಜಿಕ ಜಾಲತಾಣಗಳಲಲ್ಲಿ ಹಾಗೂ ಹೊರಗೂ ದಾಳಿಗಳಾಗುತ್ತಿವೆ. ತಟಸ್ಥರಾಗಿರುವುದು ಸ್ವತಂತ್ರ ಮಾಧ್ಯಮಗಳ ಕೆಲಸವಲ್ಲ, ನಾವು ಜನರ ಪಕ್ಷಪಾತಿ ಆಗಿರಬೇಕು. ಟಿವಿ ಮಾಧ್ಯಮಗಳು ಒಂದು ಸುಳ್ಳಿನ ಪರದೆಯನ್ನು ಸೃಷ್ಟಿಸುತ್ತವೆ, ಅದರ ವಿರುದ್ಧ ನಾವು ಪ್ರವಾಹದ ವಿರುದ್ಧ ಈಜುತ್ತಿರುವಂತೆ ಈಜುತ್ತಿದ್ದೇವೆ. ಇದರ ಪರಿಣಾಮ ಏನೆ ಆದರೂ ನಾವು ನಮ್ಮ ಕೆಲಸ ಮಾಡಬೇಕು. ಅದು ನಾಳೆಯೇ ಬರದಿರಬಹುದು, ಆದರೂ ಇದು ದೀರ್ಘಕಾಲ ನಡೆಯಬೇಕಾದ ಕೆಲಸ. ಇದು ನಮ್ಮ ಭವಿಷ್ಯ, ವರ್ತಮಾನಕ್ಕೆ ಸಂಬಂಧಿಸಿದ ಹೋರಾಟ ಎಂದು ಅವರು ಅಭಿಪ್ರಾಯಪಟ್ಟರು.

ವಾಲ್ಮೀಕಿ ನಿಗಮದ ಹಗರಣ ವಿರೋದಿಸಿ ಡಿಸಿ ಕಚೇರಿಗಳಿಗೆ BJP ಮುತ್ತಿಗೆ: ವಿಜಯೇಂದ್ರ
ನವದೆಹಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಗರಣಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರು. ಏಕೆಂದರೆ ಅವರೇ ಹಣಕಾಸು ಸಚಿವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿತರಾಗಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಮತ್ತು ನಿಗಮದ ಅಧ್ಯಕ್ಷರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ಪೋಲಾಗಿದೆ. ಕಾಂಗ್ರೆಸ್ ಸರ್ಕಾರವೇ ಈ ಹಣವನ್ನು ದೋಚಿದೆ. ಈ ಪ್ರಕರಣದಲ್ಲಿ ಪರಿಶೀಷ್ಟರಿಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ. ಇದೇ 28ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದರು.

ನಿಗಮದ ಹಗರಣ ಸಂಬಂಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ಪತ್ರದನ್ವಯ ಸಿಬಿಐ ತನಿಖೆ ನಡೆಯುತ್ತಿದೆ. ರಾಜ್ಯ ಸರ್ಕಾರ ಆತುರಾತುರವಾಗಿ ಎಸ್‍ಐಟಿಯನ್ನೂ ರಚಿಸಿ ತನಗೆ ಬೇಕಾದಂತೆ ತನಿಖೆ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಅಲ್ಲಿ ಇಲ್ಲಿ ಅಧಿಕಾರಿ ಮನೆಯಲ್ಲಿ ಒಂದಷ್ಟು ಹಣ ಲಭಿಸಿದೆ ಎನ್ನುವ ಮೂಲಕ ಕಣ್ಣೊರೆಸುವ ತಂತ್ರವನ್ನು ಎಸ್‍ಐಟಿ ಮಾಡುತ್ತಿದೆ. ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ. ತೆಲಂಗಾಣಕ್ಕೆ ಬೇನಾಮಿ ಖಾತೆಗೆ ಹಣ ವರ್ಗಾವಣೆ ಮಾಡಿ ವಿತ್‍ಡ್ರಾ ಮಾಡಿದ್ದಾರೆ. ಈ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ ಎಂದು  ವಿಜಯೆಂದ್ರ ದೂರಿದರು.

ಗ್ಯಾರಂಟಿ ಹೆಸರಲ್ಲಿ ಜನತೆಯ ಕಿವಿಗೆ ಹೂ: ಪೆಟ್ರೋಲ್- ಡೀಸೆಲ್ ದರ ಏರಿಸಿದ್ದಾರೆ. ಹಾಲಿನ ದರ ಹೆಚ್ಚಿಸಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಏರಿಸಿದ್ದರಿಂದ ರಾಜ್ಯದೆಲ್ಲೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಲಾಗಿದೆ. ವಿದ್ಯುತ್ ದರ ಏರಿಸಿದ್ದಾರೆ. ರೈತರು ತಮ್ಮ ಹೊಲಕ್ಕೆ ಟ್ರಾನ್ಸ್ ಫಾರ್ಮರ್ ಹಾಕಿಸಲು 25 ಸಾವಿರ ಇದ್ದುದನ್ನು 2.5 ಲಕ್ಷಕ್ಕೆ ಏರಿಸಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಜನರ ಕಿವಿಗೆ ಹೂ ಮುಡಿಸಿದ್ದಾರೆ. ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ನಾಡಿನ ಜನತೆಗೆ ದ್ರೋಹ ಬಗೆಯುತ್ತಿದೆ ಎಂದು ವಿಜಯೇಂದ್ರ ದೂರಿದರು.

ರಾಜ್ಯದ ರೈತರು ಬರದಿಂದ ನರಳಿ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಟ್ರ್ಯಾಕ್ಟರ್- ಟಿಲ್ಲರ್ ಬಳಸುವ ರೈತರೂ ತೊಂದರೆ ಅನುಭವಿಸುತ್ತಿದ್ದಾರೆ. ಬಿತ್ತನೆ ಬೀಜದ ದರ ಶೇ 40- 50ರಷ್ಟು ಹೆಚ್ಚಾಗಿದೆ. ಇಂಥ ಸಂಕಷ್ಟದ ಸಂದರ್ಭದಲ್ಲೂ ಜನರಿಗೆ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರ ಯಾಕೆ ಇಷ್ಟು ಕಟುವಾಗಿ ನಡೆದುಕೊಳ್ಳುತ್ತಿದೆ ಎಂದು ಪ್ರಶ್ನಿಸಿದರು. ಜನವಿರೋಧಿ ತೀರ್ಮಾನಗಳೇಕೆ ಎಂದು ಕೇಳಿದರು. ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೋಡಿದರೆ ಅಯ್ಯೋ ಅನಿಸುತ್ತಿದೆ ಎಂದು ಅವರು ತಿಳಿಸಿದರು. ಹಾಲಿನ ದರದ ಬಳಿಕ ಬಸ್ ಪ್ರಯಾಣದರವೂ ದುಬಾರಿ ಆಗಲಿದೆ ಎಂದು ಅವರು ತಿಳಿಸಿದರು.

ವಿಮಾನ ನಿಲ್ದಾಣಗಳಿಗೆ ಸಾಧಕ ಕನ್ನಡಿಗರ ಹೆಸರು: ಕರವೇ ಅಭಿನಂದನೆ
ಬೆಂಗಳೂರು: ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ ಮತ್ತು ವಿಜಯಪುರ ವಿಮಾನ ನಿಲ್ದಾಣಗಳಿಗೆ ಕರ್ನಾಟಕದ ನಾಲ್ವರು ಮಹಾಸಾಧಕರ ಹೆಸರನ್ನು ಇಡುವ ಪ್ರಸ್ತಾಪವನ್ನು ಕರ್ನಾಟಕ ವಿಧಾನಸಭೆ ಸರ್ವಾನುಮತದಿಂದ ಅನುಮೋದಿಸಿರುವುದು ಅತ್ಯಂತ ಸಂತಸದ ವಿಷಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು,ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಹತ್ತು ವರ್ಷಗಳಿಂದ ಈ ಬೇಡಿಕೆ ಇಟ್ಟು ಹೋರಾಟ ನಡೆಸಿತ್ತು, ಆದರೆ ಈಗ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯುಗದ ಕವಿ, ಜಗದ ಕವಿ ಕುವೆಂಪು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ವಿಜಯಪುರ ವಿಮಾನ ನಿಲ್ದಾಣಕ್ಕೆ ಕ್ರಾಂತಿಯೋಗಿ ಬಸವಣ್ಣನವರ ಹೆಸರು ಇಡುವ ಪ್ರಸ್ತಾಪವನ್ನು ಅಂಗೀಕರಿಸಿರುವುದು ಹೆಮ್ಮೆ ತಂದಿದೆ ಎಂದಿದ್ದಾರೆ.

ಭಾರತ ಒಕ್ಕೂಟ ಸರ್ಕಾರವು ಆದಷ್ಟು ಶೀಘ್ರದಲ್ಲೇ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿ ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ‌. ಈ ವಿಷಯದಲ್ಲಿ ಪಕ್ಷಬೇಧ ಮರೆತು ಒಂದಾಗಿ ಸರ್ವಾನುಮತದಿಂದ ಪ್ರಸ್ತಾಪ ಅನುಮೋದಿಸಿದ ಎಲ್ಲ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಐತಿಹಾಸಿಕ ನಿರ್ಣಯಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲ ಶಾಸಕರನ್ನು ಅಭಿನಂದಿಸಿರುವ ಅವರು
ಕನ್ನಡಿಗರ ಬೇಡಿಕೆ ಈಡೇರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕೆಂದು ನಾವು ಹೋರಾಟ ನಡೆಸಿ ಯಶಸ್ವಿಯಾಗಿದ್ದೆವು. ಅದೇ ರೀತಿ ಈಗ ನಾಲ್ಕು ವಿಮಾನ ನಿಲ್ದಾಣಗಳಿಗೆ ಕರ್ನಾಟಕದ ನಾಲ್ವರು ಮೇರುಸಾಧಕರ ಹೆಸರು ಇಡಬೇಕೆಂಬ ನಮ್ಮ ಹೋರಾಟದ ಬೇಡಿಕೆಯೂ ಈಗ ಈಡೇರಿದಂತಾಗಿದೆ ಎಂದು ಹೇಳಿದ್ದಾರೆ.