siddaramay – Peepal Media

ಮುಂದೆಯೂ ಸಿದ್ದರಾಮಯ್ಯರೇ ಸಿಎಂ, ಗೌಡ ಲಿಂಗಾಯತ ಶಾಸಕರೆಲ್ಲ ಸಿದ್ದರಾಮಯ್ಯ ಜೊತೆಗಿದ್ದೇವೆ: ರಾಯರಡ್ಡಿ
ಕೊಪ್ಪಳ: ಉಳಿದ ಉಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು, ಇದು‌ ನನ್ನನ್ನು ಸೇರಿದಂತೆ ಗೌಡ, ಲಿಂಗಾಯತ ಶಾಸಕರೆಲ್ಲರ ಅಭಿಪ್ರಾಯವಾಗಿದೆ ಎಂದು ಸಿ.ಎಂ. ಆರ್ಥಿಕ ಸಲಹೆಗಾರರೂ ಆದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಕೊಪ್ಪಳದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ನಿವೇಶನ ಹಂಚಿಕೆ ಪ್ರಕರಣ ವಿಷಯದಲ್ಲಿ ಮುಖ್ಯಮಂತ್ರಿ ಅವರ ಹೆಸರಿಗೆ ‌ಮಸಿ ಬಳಿಯಲು ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರ ನಡೆಸುತ್ತಿದೆ. ಇದಕ್ಕೆ ನಾವು ಬಗ್ಗುವುದಿಲ್ಲ. ನಾವೆಲ್ಲ ಸಿದ್ದರಾಮಯ್ಯ ಜೊತೆಗಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಬರುವುದಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ರಾಜ್ಯಪಾಲರು ಅನುಮತಿ ಕೊಟ್ಟರೆ ನಾವೆಲ್ಲ ಕಾನೂನು ಹೋರಾಟ ನಡೆಸಲು ಹೈಕೋರ್ಟ್ ಮೊರೆ ಹೋಗುತ್ತೇವೆ. ಮುಡಾ ವಿಷಯದಲ್ಲಿ ‌ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ರಾಜೇನಾಮೆ ಕೊಡಲೂಬಾರದು ಎಂದರು.

ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜಾತಿ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಬಗ್ಗೆ ಕೂಡ ಜಾತಿ ವಿಷಯವನ್ನು ಮುನ್ನಲೆಗೆ ತರುತ್ತಿದ್ದಾರೆ. ಇವರಿಗೆ ಸಿದ್ದರಾಮಯ್ಯ ತಂದಿರುವ ಒಳ್ಳೆಯ ಯೋಜನೆಗಳು ಕಾಣುತ್ತಿಲ್ಲ. ತಮ್ಮ ಹಗರಣಗಳನ್ನು‌ ಮರೆಮಾಚಲು ಸಿ.ಎಂ. ಮೇಲೆ ಗೂಬೆ ಕೂರಿಸುತ್ತಿದ್ದಾರೆ‌‌. ರಾಜ್ಯ ಸರ್ಕಾರವನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಯರೆಡ್ಡಿ ಒತ್ತಿ ಹೇಳಿದರು.

ಇತ್ತೀಚೆಗಷ್ಟೇ ಅಯ್ಕೆಯಾಗಿರುವ ಸಂಸದ ರಾಜಶೇಖರ ಹಿಟ್ನಾಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪೀಪಲ್ ಮೀಡಿಯಾ ವರದಿ ಇಂಪ್ಯಾಕ್ಟ್ : ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅರೆಸ್ಟ್
ಉಡುಪಿ ಶೌಚಾಲಯದ ಖಾಸಗಿ ಸಂದರ್ಭದ ಚಿತ್ರೀಕರಣದ ಬಗ್ಗೆ ಟ್ವಿಟ್ ಮಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯ ಹೆಣ್ಣು ಮಕ್ಕಳ ಪ್ರಸ್ತಾಪವನ್ನು ಅನವಶ್ಯಕವಾಗಿ ಎಳೆದು ತಂದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಂಬ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ವಶಕ್ಕೆ ಪಡೆದು FIR ದಾಖಲು ಮಾಡಿದ್ದಾರೆ. “ಸಿದ್ದರಾಮಯ್ಯನವರ ಹೆಂಡತಿ ಅಥವಾ ಸೊಸೆಯ ಖಾಸಗಿ ವಿಡಿಯೋ ಮಾಡಿದ್ದರೆ ಸುಮ್ಮನಿರುತ್ತಿದಾದರೇ?” ಎಂಬಂತೆ ಸಾಮಾಜಿಕ ಪ್ರಕರಣವನ್ನು ಸಿದ್ದರಾಮಯ್ಯನವರ ವಯಕ್ತಿಕ ವಿಚಾರಕ್ಕೆ ಎಳೆದು ತಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಪೀಪಲ್ ಮೀಡಿಯಾ ಈ ಬಗ್ಗೆ ಮೊಟ್ಟ ಮೊದಲು ವರದಿ ಮಾಡಿ ಎಲ್ಲರ ಗಮನ ಸೆಳೆದಿತ್ತು. ಅಷ್ಟೆ ಅಲ್ಲದೇ ಇದೇ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಹಿಂದೆ ಅನೇಕ ಬಾರಿ ಸಾಮಾಜಿಕ ಸ್ವಾಸ್ಥ್ಯ ಕೆಡುವಂತಹ ರೀತಿಯಲ್ಲಿ ಟ್ವಿಟ್ ಮಾಡಿದ್ದನ್ನು ಪೀಪಲ್ ಮೀಡಿಯಾ ಉಲ್ಲೇಖಿಸಿತ್ತು.

ಕೆಲವೇ ದಿನಗಳ ಹಿಂದೆ ಪ್ರಿಯಾಂಕ್ ಖರ್ಗೆ ಅವರನ್ನು ಉಲ್ಲೇಖಿಸಿ, ಮೈ ಬಣ್ಣದ (ಖರ್ಗೆ ಹೆಸರು ‘ಕರ್ರಗೆ’ ಎಂದು ಉಲ್ಲೇಖ) ಟ್ವಿಟ್ ಮಾಡಲಾಗಿತ್ತು. ಇದೂ ಕೂಡ ವರ್ಣಭೇದ ನೀತಿಯ ಅಡಿಯಲ್ಲಿ ಅಪರಾಧವಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಗಂಭೀರವಾಗಿ ತಗೆದುಕೊಂಡಿರಲಿಲ್ಲ.

ಇನ್ನು ಈಕೆ ಇದೇ ರೀತಿಯ ಇತಿಹಾಸ ಹೊಂದಿದ್ದು, ಒಂದೋ ಪ್ರಚೋದನಕಾರಿ ಅಥವಾ ಸುಳ್ಳು ಮಾಹಿತಿಯ ಹಂಚುವ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾಳೆ. ಈ ಹಿಂದೆಯೂ ಸಹ ಗುಜರಾತ್ ಕಚ್ ನಲ್ಲಾದ ಸೇತುವೆ ದುರಂತದ ಬಗ್ಗೆ ದಾರಿ ತಪ್ಪಿಸುವ ಟ್ವಿಟ್ ಮಾಡಿ ಹಲವ ಕೆಂಗಣ್ಣಿಗೆ ಗುರಿಯಾಗಿದ್ದಳು. ‘ಸೇತುವೆ ದುರಂತ, ಯಾರೋ ಉದ್ದೇಪೂರ್ವಕವಾಗಿಯೇ ಮಾಡಿದ್ದು, ಕಿಡಿಗೇಡಿಗಳು ಸೇತುವೆ ಮುರಿಯಲೆಂದೇ ಕಾಲಿನಿಂದ ಕೇಬಲ್ಲಿಗೆ ಒದ್ದಿದ್ದು’ ಎನ್ನುವ ರೀತಿಯಲ್ಲಿ ಟ್ವಿಟ್ ಮಾಡಿದ್ದಳು.

ಇನ್ನು ಇತ್ತೀಚೆಗೆ ಒಡಿಶಾದಲ್ಲಿ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತದ ಬಗ್ಗೆಯೂ ಟ್ವಿಟ್ ಮಾಡಿ ‘ಅಪಘಾತವಾದ ಸ್ಥಳದ ಪಕ್ಕದಲ್ಲಿ ಮಸೀದಿ ಇರುವ ಕಾರಣಕ್ಕೇ ರೈಲು ಅಪಘಾತ ಸಂಭವಿಸಿದೆ’ ಎನ್ನುವ ಅರ್ಥ ಬರುವಂತೆ ಟ್ವಿಟ್ ಮಾಡಿ ಮತ್ತೊಮ್ಮೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಳು.

ಇದೇ ಕಾರಣಕ್ಕೆ ಒಡಿಶಾ ಪೊಲೀಸರು ಈಕೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.

ಸಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಹೆಣ್ಣು ಮಕ್ಕಳನ್ನು ಉಲ್ಲೇಖಿಸಿ ಬರೆದ ಪೋಸ್ಟ್ ಹೆಚ್ಚು ಗಮನ ಸೆಳೆದು ಶಕುಂತಲಾ ಬಂಧನವಾಗಿ, FIR ದಾಖಲಾಗಿದೆ.

ಎಐಸಿಸಿ ಅಧ್ಯಕ್ಷರಾಗಿ ಮೊದಲ ಬಾರಿ ತವರು ನೆಲಕ್ಕೆ ಕಾಲಿಟ್ಟ ಖರ್ಗೆ
ಬೆಂಗಳೂರು : ನೂತನ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿ ಮಲ್ಲಿಕಾರ್ಜುನ ಖರ್ಗೆಯವರು ಇಂದು ತವರು ನೆಲಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಐಸಿಸಿ ಅಧ್ಯಕ್ಷರನ್ನು ಸ್ವಾಗತಿಸಲಾಗಿದೆ.

ಪ್ರಜಾಪ್ರಭುತ್ವದ ಆಶಯದಲ್ಲಿ ಚುನಾವಣೆಯ ಮೂಲಕ ಸರ್ವ ಸಮ್ಮತದ ನಾಯಕರಾಗಿ ಆಯ್ಕೆಯಾದ  ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾದ ನಂತರ ಇಂದು ಮೊದಲ ಬಾರಿಗೆ  ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್‌ ಮುಖಂಡರು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.

ಖರ್ಗೆ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ʼ9 ಬಾರಿ ಶಾಸಕರಾಗಿ, 3 ಬಾರಿ ಸಂಸದರಾಗಿ, 5 ಬಾರಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ

ಮಲ್ಲಿಕಾರ್ಜುನ ಖರ್ಗೆ ಅವರಿಗೆ “ಸೋಲಿಲ್ಲದ ಸರದಾರ” ಎಂಬ ಹೆಗ್ಗಳಿಕೆ ಸಂದಿದೆ. ನಿಷ್ಠೆ, ಸೇವೆ, ಪ್ರಾಮಾಣಿಕವಾದ ಜನಪರ ಕಾಳಜಿಗಳೇ ಮಲ್ಲಿಕಾರ್ಜುನ್ ಖರ್ಗೆಯವರ ಸುದೀರ್ಘ ರಾಜಕೀಯ ಬದುಕಿನ ಶಕ್ತಿಯಾಗಿವೆʼ ಎಂದು ಹೇಳಿದೆ.

ʼರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ ಮಲ್ಲಿಕಾರ್ಜುನ್ ಖರ್ಗೆಯವರು ಸಾಮಾಜಿಕ ಸೇವೆಯಲ್ಲಿ ತಮ್ಮದೇ ಆದ ವಿಶಿಷ್ಟ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ತಮ್ಮ ಸಾಧನೆಗಳನ್ನು ಎಂದೂ ಸಹ ತಮ್ಮದೇ ಎಂದು ಹೇಳಿಕೊಳ್ಳದೆ ಕರ್ತವ್ಯವೆಂದು ಭಾವಿಸಿ ಮುನ್ನೆಡೆಯುವ ಗುಣ ಅವರದ್ದುʼ ಕಾಂಗ್ರೆಸ್‌ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.