sihana bm – Peepal Media

ಬಂಡೆ ಕಲ್ಲುಗಳ ನಡುವೆ ಅರಳುವ ಹೂಗಳು
ಗಡ್ಡ, ಟೋಪಿ ಧರಿಸಿದವರೆಲ್ಲ ಭಯೋತ್ಪಾದಕರಲ್ಲ. ವಿಭೂತಿ, ದಾರ, ಮಾಲೆ ಧರಿಸಿದವರೆಲ್ಲ ಕೊಲೆಗಾರರಲ್ಲ. ಹಿಂದೆಂದೂ ಇಲ್ಲದ ಈ ಭಾವನೆ ಬೆಳೆಯಲು ಕಾರಣವಾದರೂ ಯಾವುದು? ಹಿಂದೆ ಜೊತೆಗೂಡಿ ಆಡಿದವರನ್ನು ಅನುಮಾನಿಸುವಷ್ಟರ ಮಟ್ಟಿಗೆ ಪರಿಸ್ಥಿತಿಯನ್ನು ಸೃಷ್ಟಿಸಿದವರಾದರೂ ಯಾರು? ಓದಿ.. ಸಿಹಾನ ಬಿ.ಎಂ. ಅಂಕಣ ಮೈಂಡ್‌ ಬ್ಲಾಕ್

ಕೊರೋನ ಕಾಲಾವಧಿಯ ಬಳಿಕ ಕೆಲಸದ ಒತ್ತಡದಲ್ಲಿ ಮೈಮರೆತ ಪತಿಯ ಪುರುಸೊತ್ತಿಲ್ಲದ ಬದುಕಿಗೆ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ ಸೀಮಾಳದು. ಅತ್ತ ಸೂರ್ಯೋದಯಕ್ಕೆ ಒಂದೂವರೆ ತಾಸು ಮುಂಚಿತವಾಗಿ ಮನೆ ಬಿಡುವವನು ಮುಸ್ಸಂಜೆ ಕಳೆದೇ ಗೂಡು ಸೇರುವುದು. ಇತ್ತ ಅವಳಿಗೂ ಮಕ್ಕಳಿಗೂ ಆನ್ ಲೈನ್ ಕ್ಲಾಸ್, ಮನೆಕೆಲಸ ಇದರಲ್ಲೇ ಇಡೀ ಕೊರೋನ ಕಾಲವನ್ನು ಕಳೆದು ತಲೆ ಚಿಟ್ಟು ಹಿಡಿದು ಹೋಗಿತ್ತು. ಕಾಲೇಜಿನ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದು ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಜೊತೆ ಕಾಲ ಕಳೆಯುತ್ತಿದ್ದ ಹಿತವನ್ನು ಕೊರೋನ ಬಲಿ ತೆಗೆದು ಕೊಂಡಿತು. ಇದರ ನಡುವೆ ಸಂಬಂಧಿಕರ, ಒಡಹುಟ್ಟಿದವರ, ವಿದ್ಯಾರ್ಥಿಗಳ, ಆಪ್ತರ ಫೋನ್ ಕಾಲ್, ಮೆಸೇಜ್ ಗಳು ಬದುಕಿಗೊಂದು ಆಶ್ವಾಸನೆ ಕೊಡುತ್ತಿತ್ತು.

ಇದೀಗ ಬದುಕಿನ ಮಗ್ಗುಲು ಮತ್ತೊಮ್ಮೆ ಬದಲಾವಣೆಗೆ, ಬೆಳಕಿನೆಡೆಗೆ ಹೊರಳಿದೆ. ಆನ್ ಲೈನ್ ಕ್ಲಾಸ್, ಹೋಂವರ್ಕ್, ಮೊಬೈಲ್, ಕಂಪ್ಯೂಟರ್ ಬೆರಳಾಟ, ಗೂಡೊಳಗಿನ ಜೀವನ ಮಕ್ಕಳಿಗೂ ಸಾಕಾಯಿತೇನೋ…ಜೀವ ಹಿಂಡಿ ಪ್ರಾಣ ತೆಗೆಯುವ ಕಾಲದಲ್ಲಿ ಬದುಕು ಸವೆಸುವ ಮಕ್ಕಳು ಬೆಳಗಾಗುತ್ತಲೇ ಅವಳತ್ತ ಬೀರುವ ಕಿರುನೋಟ,” ಬಂತೆಲ್ಲಿಗೆ…ಇನ್ನೆಲ್ಲಿಗೆ..” ದಾ.ರಾ.ಬೇಂದ್ರೆಯವರ ಕವನದ ಸಾಲುಗಳನ್ನು ನೆನಪಿಸಿ ಅಣಕಿಸುವಂತಿತ್ತು.

” ಅಂತು ಇಂತು ಪ್ರಾಣತಂತು ಹೆಣೆಯುತ್ತಿದೆ ಬಾಳಾ

ಅಲ್ಲು ಇಲ್ಲು ಚೆಲುವು ನಿಂತು ಹಾಕುತ್ತಿತ್ತು ಬಾಳಾ

ಬಂತೆಲ್ಲಿಗೆ ? ಕೇಳುತ್ತಿದ್ದ ನೀಯನಂತ ಕಾಲ.”

ಬೇಂದ್ರೆಯವರ ಸಾಲುಗಳಂತೆ ಚೆಲುವ ಸವಿಯುವ ಮಕ್ಕಳ ಆಸೆಗೆ ತಣ್ಣೀರೆರಚುವ ಮನಸ್ಸು ಬಾರದೆ ಪ್ರತಿದಿನ ಅವನೊಂದಿಗೆ ಮಗ್ಗುಲಲ್ಲಿ ಮಲಗಿ, ‘ನಾಳೆತ್ತ…’ ಎಂದು ಪಿಸುಗುಟ್ಟುತ್ತಿದ್ದಳು. ಕೊನೆಗೊಮ್ಮೆ ಮಸೆದ ಉಸಿರು ಪಕ್ಕ ಹಿಡಿದು ಮಿಂಚಿ ಮಾಯವಾಗಿ ಒಂದು ಮಂದಹಾಸ,” ನಾಳೆ ಹೊರಡೋಣ” ಎನ್ನುತ್ತಾ ಉಲಿಯಿತು.

ಮರುದಿನ ಭಾನುವಾರ. ಮಕ್ಕಳು ಬಲು ಆನಂದದಿ ಬೆಳಗೆದ್ದು ಬೇಗ ಹೊರಡಲನುವಾದರು. “ಅಮ್ಮಾ..ಎಲ್ಲಿಗಮ್ಮಾ ಹೋಗುವುದು? ಅಲ್ಲಿ ಏನೇನು ಇವೆಯಮ್ಮಾ…?” ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಯಿತವಳಿಗೆ.” ನಿಮ್ಮಪ್ಪ ಎಲ್ಲಿಗೆ ಕರ್ಕೊಂಡು ಹೋಗ್ತಾರೋ ಅಲ್ಲಿಗೆ ಹೋಗೋಣ. ಈಗಂತು ದೂರದೂರಿಗೆ ಹೋಗುವಂತಿಲ್ಲ. ಈ ಲಾಕ್ ಡೌನ್, ಸೀಲ್ ಡೌನ್ ಆಟ ಮುಗಿದ ಮೇಲೆ ಊಟಿಗೋ ಮೈಸೂರಿಗೋ ಹೋಗೋಣ…” ಮಕ್ಕಳಿಗೆ ಹೀಗೆ ಹೇಳಿ ಭರವಸೆ ತುಂಬುತ್ತಿದ್ದಳು. ಇನ್ನು ಅವನ ವಿಷ್ಯ ಕೇಳುವುದೇ ಬೇಡ. ಹೀಗೆ ಊರೂರು ಸುತ್ತಾಡುವುದೆಂದರೆ ಅದರಲ್ಲಿ ಅವನಿಗೆ ಆಸಕ್ತಿ ಕಮ್ಮಿ. ಅವನ ಇಷ್ಟಗಳೇ ಬೇರೆ. ಪ್ರವಾಸೀಸ್ಥಳಗಳ ಹೆಸರು ಹೇಳಿದೊಡನೆ ಅನಾಥಾಶ್ರಮವೋ, ಸೇವಾಸಂಸ್ಥೆಗಳೋ, ಸಂಬಂಧಿಕರ ಸ್ನೇಹಿತರ ಮನೆಗಳನ್ನೋ ಎತ್ತಿ ತೋರಿಸುತ್ತಾನೆ. ಇದೀಗ ನೋಡಿದರೆ ಎಂದಿನ ಅದೇ ವರಸೆ ಮತ್ತೊಮ್ಮೆ ಎದ್ದಿತು.

” ಕಳೆದ ವಾರ ಗೆಳೆಯ ರಾಜೇಶ್ ಒತ್ತಾಯ ಮಾಡಿ ಮನೆಗೆ ಕರೆದಿದ್ದ. ಅವನ ಮನೆಗೆ ಹೋಗೋಣ..” ಕಾರನ್ನು ಹತ್ತುತ್ತಾ ಹೇಳಿದಾಗ ನಿರ್ವಾಹವಿಲ್ಲದೆ  ಹ್ಞೂಂಗುಟ್ಟಿದ್ದಳು. ಬಾಡಿದ ಮೂತಿಯೊಂದಿಗೆ ಜೊತೆಯಾದ ಮಕ್ಕಳು ಹೊರಟ ಪ್ರಯಾಣದುದ್ದಕ್ಕೂ ಸುಂದರ ಪ್ರಕೃತಿ ಸೌಂದರ್ಯ, ಐತಿಹಾಸಿಕ ವಾಸ್ತುಶಿಲ್ಪವನ್ನು ನೋಡುತ್ತಾ ಕಣ್ಮನ ತಂಪಾಗಿಸಿದರು. ರಸ್ತೆಯ ಮಗ್ಗುಲ ಪ್ರಕೃತಿ ಸೌಂದರ್ಯ, ದೂರದಲ್ಲಿ ಹೊಗೆಯಾಡುವ ಕಾರ್ಖಾನೆ, ಗಾಳಿಯ ಹೊಯ್ದಾಟ, ಸುಂದರ ಪೂಜಾಸ್ಥಳಗಳ ದರ್ಶನ ಎಲ್ಲವೂ ಆ ಊರಿಗೆ ಮೆರುಗು ಕೊಡುವ ದೃಶ್ಯಗಳು. ನಡುನಡುವೆ ಕಾರು ನಿಲ್ಲಿಸಿ ಪಾನಕ ಕುಡಿದು ದಣಿವನ್ನು ನಿವಾರಿಸಿಕೊಳ್ಳುವಂತೆ ಪ್ರಯಾಣದ ಸಂದರ್ಭದಲ್ಲಿ ವಿಶೇಷ ಕಾಳಜಿ ವಹಿಸುವುದು ಅವನ ಪ್ರೀತಿಯ ಭಾಗವಾಗಿತ್ತು.

ಹೀಗೆ ಸುತ್ತಾಡಿ ಗೆಳೆಯ ರಾಜೇಶನ ಮನೆ ತಲುಪಿದಾಗ ಮಧ್ಯಾಹ್ನದ ಗಡಿ ದಾಟಿತು. ರಾಜೇಶ್ ಮತ್ತು ಆತನ ಪತ್ನಿ ಸುನೀತಾರ ಪ್ರೀತಿಯ ಆತಿಥ್ಯ ಹಳೆಯ ಅದೇ ಕೊಂಡಿಯನ್ನು ಬೆಸೆಯುವಂತಿತ್ತು.  ಜಗತ್ತು ಬದಲಾಗಿದೆ. ಜನ ಬದಲಾಗಿದ್ದಾರೆ ಎಂದು ದಿನನಿತ್ಯ ಆಡುವ ಮಾತು ಇವರನ್ನು ಸ್ಪರ್ಶಿಸಿಲ್ಲ. ಬೆಸೆದಿದ್ದ, ಗಟ್ಟಿಗೊಳಿಸಿದ್ದ ಸೌಹಾರ್ದ ಗೆಳೆತನಕ್ಕೆ ಮೂವತ್ತು ವರ್ಷಗಳ ಹಿಂದಿನ ಇತಿಹಾಸವೂ ಇತ್ತು. ಹೊಡೆದಾಡಿ, ಬಡಿದಾಡಿ, ರಕ್ತ ಹರಿಸುವ  ವಾರ್ತೆಗಳಿಗೆ ಕೊರತೆಯಿಲ್ಲದ ದಿನಗಳಲ್ಲಿ ಬೇವು ಬೆಲ್ಲದಂತೆ ಸವಿದಿದ್ದ ಸಂಬಂಧ ರಾಜೇಶ ಮತ್ತು ಬಶೀರನದ್ದು. ಸೂಫಿಯಂತೆಯೂ, ಬುದ್ಧನಂತೆಯೂ ಶುದ್ಧನಗುವನ್ನು ಹರಡುವ ಅದೆಷ್ಟೋ ಶಾಂತಚಿತ್ತದ ಮನಸ್ಸುಗಳು  ಸುತ್ತಲಿರುವುದರಿಂದಲೇ ಅನ್ಯಾಯವನ್ನು ಕಂಡಾಗಲೆಲ್ಲ ಮುಖ ಸಿಂಡರಿಸುವವರೂ ಇದ್ದಾರೆ. ಅವರು ಒಳಿತು ಕೆಡುಕಿನ ಪಾಠಗಳನ್ನು ಚೆನ್ನಾಗಿ ಅರೆದು ಕುಡಿದಿರುವರು. ಬಗ್ಗಿಸಿದರೂ ಜಗ್ಗಿಸಿದರೂ ಒಲ್ಲೆಯೆನ್ನುತ್ತಾ ಧರ್ಮದ ಗೋಡೆಯಿಂದ ಹೊರ ಬಂದು ಸೌಹಾರ್ದತೆಯ ಸೇತುವೆಯನ್ನು ಕಟ್ಟುವರು. ಅದೇ ಸೇತುವೆ ಬಶೀರ್ ಮತ್ತು ರಾಜೇಶರ ನಡುವೆ ಭದ್ರವಾಗಿಯೇ ನಿಂತಿದೆ.

ರಾಜೇಶ್ ಮತ್ತು ಸುನೀತಾರ ಸಾಂಗತ್ಯವು ಅಲ್ಲಿದ್ದಷ್ಟು ಕಾಲ ಉಲ್ಲಸಿತವಾಗಿಸಿತು. ಅವರ ಆತಿಥ್ಯದಲ್ಲಿ ಪ್ರಯಾಣದ ದಣಿವು ಮರೆಯಾಯಿತು. ಸುಂದರ ಕಂಗು, ತೆಂಗು, ಬಾಳೆಗಿಡಗಳಿಂದ ಕಂಗೊಳಿಸುತ್ತಿದ್ದ ಹಿತವಾದ ಗಾಳಿ ಸೆಖೆತಾಪದ ಬಿಸಿ ತಾಗಿಸದೆ ವೈವಿಧ್ಯಮಯ ಖಾದ್ಯಗಳನ್ನು ಸವಿಯುತ್ತಾ ಅವರ ಉಪಚಾರದಲ್ಲಿ ಸಮಯ ಸರಿದದ್ದೇ ತಿಳಿಯಲಿಲ್ಲ. ಅದರ ನಡುವೆ ಹಳೆಯ ದಿನಗಳ ಸವಿನೆನಪುಗಳನ್ನು ಸವಿಯ ತೊಡಗಿದರು. ವರ್ಷದ ದೀಪಾವಳಿಯ ದಿನ ರಾಜೇಶನ ಅಮ್ಮನ  ಅಡುಗೆಯಲ್ಲಿ ಇವರಿಗೆ ಪಾಲಿದ್ದರೆ ಇವರ ರಮಝಾನ್ ಹಬ್ಬದ ದಿನ ಅವರ ಮನೆಯ ಒಲೆ ಉರಿಯುತ್ತಿರಲಿಲ್ಲ. ಹಲವಾರು ವರ್ಷಗಳಿಂದ ನಡೆದು ಬಂದ ಪದ್ಧತಿಯಿದು. ಈಗ ಇಂತಹದೆಲ್ಲ ಸುದ್ದಿಯಾಗುತ್ತಿದ್ದರೆ ಆ ದಿನಗಳಲ್ಲಿ ಇದೆಲ್ಲ ಸಾಮಾನ್ಯ ಸಂಗತಿ.

ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಏಳುತ್ತಿದ್ದ ಅಲೆಗಳಲ್ಲಿ ಕರಿಹೊಗೆ ತುಂಬಿದೆ. ಗಲಭೆಗಳಿಗೆ ತುತ್ತಾಗುವ, ಗೋಲಿಬಾರ್ ಗಳಿಗೆ ಬಲಿಯಾಗುವ, ನಡುರಸ್ತೆಯಲ್ಲಿ, ಜನಜಂಗುಳಿಯ ನಡುವೆ ವಿನಾಕಾರಣ ಹತ್ಯೆಯಾಗುವ ಘಟನೆಗಳಿಗೆ ಕಾರಣವೂ ಇರುತ್ತಿರಲಿಲ್ಲ‌. ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಮೆಸೇಜ್ ಗಳನ್ನು ನಂಬಿ ದೊಣ್ಣೆ, ತಲವಾರುಗಳನ್ನು ಶೇಖರಿಸಿಡುವ ಒಂದು ಗುಂಪು ಬೆಳೆಯುತ್ತಿರುವುದು ಭಯದ ವಾತಾವರಣವನ್ನು ಸೃಷ್ಟಿಸಿದೆ. ಬೆಳೆಯುತ್ತಿರುವ ಮಕ್ಕಳಿಗೆ ಬಹುಬೇಗನೇ ಹರಡಿದ ಈ ವಿಷಗಾಳಿ ಕೆಟ್ಟ ವಾಸನೆಯನ್ನು ನೀಡುತ್ತಿದೆಯೆಂದು ಗೆಳೆಯರಿಬ್ಬರು ಆಡಿಕೊಳ್ಳುತ್ತಿದ್ದ ಮಾತನ್ನು ಒಳಗಿನಿಂದ ಆಲಿಸುತ್ತಿದ್ದ ಸೀಮಾಳ ಎದೆಯಲ್ಲಿ ಸಣ್ಣನೆಯ ನಡುಕವನ್ನು ಉಂಟು ಮಾಡಿತು.

ಒಂದಿಡೀ ತಲೆಮಾರನ್ನು ನಾಶಪಡಿಸುವ ಗಲಭೆಗಳು, ಕೊಲೆಗಳು ಮುಂದೊಂದು ದಿನ ಜೋಡಿಸಿ ಕೊಂಡಿದ್ದ ಸಮಾಜವನ್ನು ಪೂರ್ತಿಯಾಗಿ ಒಡೆದು ಹಾಕುವುದರಲ್ಲಿ ಸಂಶಯವಿಲ್ಲ. ರಾಜಕೀಯ ತೆವಲುಗಳಿಗೆ ಬಲಿಯಾಗುತ್ತಿರುವ ಅಮಾಯಕ ಜನರ ಸಾವು, ಅವರನ್ನು ಹತ್ಯೆಗೊಳಿಸುವ ಯುವಕರ ವಯಸ್ಸು, ಸಹಜವಾಗಿ ಸೌಹಾರ್ದದಿಂದ ಬದುಕಿದ್ದ ಸಂಬಂಧಗಳಲ್ಲಿ ಮನೆ ಮಾಡಿದ ಜಟಿಲತೆ ಇದೆಲ್ಲವೂ ಸಿಲ್ಲಿ ವಿಷಯಗಳಲ್ಲ. ಎಲ್ಲೆಲ್ಲೋ ನಡೆದುದನ್ನು ಇಲ್ಲಿ ಎಳೆದು ತಂದು ವಾದಿಸುತ್ತಾ, ನೂರಾರು ಹಿಂದಿನ ಕತೆಗಳಿಗೆ ಕಾಲ್ಪನಿಕತೆಯನ್ನು ತುಂಬಿ ಶುದ್ಧವಾದ ಮನಸ್ಸಿನಲ್ಲಿ ವಿಷಬೀಜವನ್ನು ಬಿತ್ತುವವರ ಒಂದು ಸಂಗ ಸದ್ದಿಲ್ಲದೆ ನುಸುಳಿಯಾಗಿದೆ.

“ದಕ್ಷಿಣದಲ್ಲಿ ಹಾಗೆ ಮಾಡಿದರು, ಉತ್ತರದಲ್ಲಿ ಹೀಗೆ ಮಾಡಿದರು, ಅವರ ಹುಡುಗರು ಇವರ ಹುಡುಗಿಯರನ್ನು ಎತ್ಕೊಂಡು ಹೋದ್ರು, ಅವರು ವಿಷ ಬೆರೆಸುವವರು, ಇವರು ಕೊಲ್ಲುವವರು, ಟೊಪ್ಪಿ- ಗಡ್ಡವಿರುವವರು ಭಯೋತ್ಪಾದಕರು, ವಿಭೂತಿ- ದಾರ ಕಟ್ಟಿದವರು ಕೊಲೆಗಾರರು” ಇವೆಲ್ಲ ಅಂತೆಕಂತೆಗಳಿಗೆ ಸೊಪ್ಪು ಹಾಕುವವರ, ಎಣ್ಣೆ ಸುರಿಯುವವರ ಸಂಖ್ಯೆ ಹೆಚ್ಚಾಗುತ್ತಲಿದೆ. ಇದನ್ನೇ ನಂಬಿದ ಮುಗ್ಧ ಮಕ್ಕಳಿಗೆ ಎಂತಹ ಸಮಾಜವನ್ನು ಕೊಡಲು ಸಾಧ್ಯ ? ಈಗೀಗ ಹುಡುಗರ ಮಾತಿನಲ್ಲಿ ರೋಷ, ದ್ವೇಷ, ಕ್ರಿಯೆಗೆ ಪ್ರತಿಕ್ರಿಯೆಯ ಶೀಘ್ರ ಕಾವು ಹೆಚ್ಚಾಗಿದೆ. ಇದರಿಂದ ನಮ್ಮ ಮಕ್ಕಳನ್ನು ಹೇಗಾದರು ಪಾರು ಮಾಡಬೇಕು‌.” ಹೀಗೆ ಗೆಳೆಯರಿಬ್ಬರ ಮಾತು ಸಾಗುತ್ತಿದ್ದಂತೆ ಸಣ್ಣಪುಟ್ಟ ವಿಷಯಗಳನ್ನು ಬಹು ಬೇಗನೆ ತಲೆಗೆ ಹಚ್ಚಿಕೊಳ್ಳುವ ಸೀಮಾಳಿಗಾದ  ಆತಂಕ ನೂರುಪಟ್ಟು ಹೆಚ್ಚೇ. ಶ್ಯಾವಿಗೆ ಪಾಯಸ ಹೀರುತ್ತಿದ್ದವಳಿಗೆ ತುಪ್ಪದ ಪರಿಮಳ, ಗೋಡಂಬಿಯ ಸ್ವಾದ, ಹಾಲಿನ ಕೆನೆಯ ಸಿಹಿ ನಾಲಗೆಗೆ ರುಚಿಸಲಿಲ್ಲ. ಮುಂದೇನು ಅನ್ನುವ ಅಭದ್ರತಾ ಭಾವ, ನಮ್ಮವರೆನ್ನುವವರು ಶತ್ರುಗಳಾಗುವ ಭಯ ಆಕೆಯನ್ನು ಕಾಡತೊಡಗಿತು.

ಮನೆಯ ಗಂಡಸರನ್ನು ಹೊರ ಕಳಿಸಲು ಭಯಪಡುವ ಹೆಂಗಳೆಯರು ಉಸಿರು ಬಿಗಿಹಿಡಿದು ಅವರು ಹಿಂತಿರುಗುವವರೆಗೂ ಮನೆಬಾಗಿಲಲ್ಲಿ ಕಾದು ನಿಲ್ಲುವ ಪರಿಸ್ಥಿತಿ ಈಗಾಗಲೇ ಸೃಷ್ಟಿಯಾಗಿಬಿಟ್ಟಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿ ಬದುಕುವವರಿಗೆ ಬದುಕುವಂತಿಲ್ಲ. ಮುಂಜಾನೆಯ ಕುಶಲೋಪರಿ ಮಾತುಕತೆಗಳಿಲ್ಲ. ಮುಸ್ಸಂಜೆಯ ಮೆಲು ಹರಟೆಗಳಿಲ್ಲ. ಎಲ್ಲಾ ಕಡೆ ಸಂಶಯದ ಹುತ್ತಗಳು. ಅನುಮಾನದ ನೋಟಗಳು. ಕೊಲೆ, ಕ್ರೌರ್ಯಗಳದೇ ಅಟ್ಟಹಾಸ. ಕೊಲ್ಲುವವನಿಗೆ ಯಾಕೆ ಕೊಲ್ಲುತ್ತಿದ್ದೇನೆಂದು ಗೊತ್ತಿಲ್ಲ. ಹತ್ಯೆಯಾದವನಿಗೆ ತನ್ನ ಕೊಲೆಗೆ ಕಾರಣವೇನೆಂದು ಗೊತ್ತಿಲ್ಲ. ಕರಾವಳಿಯ ಸುತ್ತ ಒಂದಲ್ಲದಿದ್ದರೆ ಒಂದು ಹೆಣ ಬೀಳುತ್ತಲೇ ಇದೆ. ಯಾರನ್ನೂ ನಂಬದಂತಹ ಸ್ಥಿತಿ ತಾನಾಗಿ ಹುಟ್ಟಿ ಬೆಳೆಯುತ್ತಲಿದೆ. ಯಾರು ವಿದ್ಯಾವಂತರು, ಯಾರು ಪ್ರಜ್ಞಾವಂತರು ಅರಿಯದಷ್ಟು ಕಾಲ ಕೆಟ್ಟು ಹೋಗಿದೆ.

ಯಾಕೋ ಆಕೆಯ ಮನಸ್ಸಿನಲ್ಲಿ ಭಯ ಮೆಲ್ಲಮೆಲ್ಲನೆ ಹೆಚ್ಚಾಗತೊಡಗಿತು. ಒಮ್ಮೆ ಕತ್ತಲಾಗುವ ಮೊದಲು ಮನೆ ಸೇರಿದರೆ ಸಾಕು ಎಂದು ಮನ ಮಿಡಿಯುತ್ತಿತ್ತು. ಬಂದಾಗ ಇದ್ದ ಉತ್ಸಾಹ ಈಗಿಲ್ಲ. ಅದಕ್ಕೊಂದು ಬಲವಾದ ಕಾರಣವೂ ಇತ್ತು. ಕಳೆದ ಎರಡು ವಾರದ ಹಿಂದೆ ಇದೇ ಪರಿಸರದಲ್ಲೊಬ್ಬ ಅಮಾಯಕ ಯುವಕ ದ್ವೇಷದ ಕೊಲೆಗೆ ಬಲಿಯಾಗಿದ್ದ. ಆ ನೋವು ಪರಿಸರದ ಸುತ್ತ ಈಗಲೂ ಕವಿದಿತ್ತು. ಆ ಆತಂಕ, ತಲ್ಲಣವನ್ನು ಹೊತ್ತಿದ್ದ ರಾಜೇಶ ಆತ್ಮೀಯ ಗೆಳೆಯನಲ್ಲಿ ಹೇಳಿ ಮನಸ್ಸು ಹಗುರವಾಗಿಸುತ್ತಿದ್ದ. ಒಳಗಿದ್ದ ಇವಳ ಕಿವಿ ನೆಟ್ಟಗಾದ ಪ್ರಜ್ಞೆ ಅವರಿಗಿನ್ನೂ ತಟ್ಟಲಿಲ್ಲ. ಮರಳಿ ಹಿಂತಿರುಗುವಾಗ ಕಡಲ ಕಿನಾರೆ ಕಡೆಯ ಪ್ರಯಾಣವನ್ನು ಮೊಟಕುಗೊಳಿಸಿ ಸೀದಾ ಮನೆಯ ದಾರಿಯತ್ತ ಹೋದರಾಯಿತೆಂದು ಮನಸ್ಸಿನಲ್ಲಿಯೇ ನಿರ್ಧರಿಸಿದಳು. ಹಾಗೆಯೇ ಹೊರಡುವಂತೆ ಅವಳಾಗಿಯೇ ಧೃತಿ ತೋರಿಸಿದಳು. ಹೋದ ಕಡೆಯೆಲ್ಲ ಬೇಗನೆ ಎದ್ದೇಳದ, ಮಾತಿಗೆ ನಿಂತರೆ ಅದರಲ್ಲೇ ಮುಳುಗುವ ಸೀಮಾಳ ವರ್ತನೆಯಲ್ಲಿ ಹಿಂದೆಂದೂ ಇಲ್ಲದ ಇಂದಿನ ಧಾವಂತವನ್ನು ಗಮನಿಸಿದ ಬಶೀರನ ನೋಟದಲ್ಲಿದ್ದ ಪ್ರಶ್ನೆಯನ್ನು ಲೆಕ್ಕಿಸದೆ ಹೇಗೋ ರಾಜೇಶನ ಕುಟುಂಬಕ್ಕೆ ಧನ್ಯವಾದ ಹೇಳಿ ಸೀಮಾ ಮಕ್ಕಳೊಂದಿಗೆ ಕಾರು ಹತ್ತಿದಳು.

ಅಲ್ಲಿಂದ ಪ್ರಯಾಣ ಊರ ಕಡೆ ಹೊರಟಿತು. ಸೀಮಾ ಜೀವ ಕೈಯಲ್ಲಿಡಿದವಳಂತೆ ಸೀಟಿನಲ್ಲಿ ಮುದುಡಿ ಕುಳಿತಿದ್ದಳು. ಭಯ, ದಿಗಿಲಿನಿಂದ ಮಾತಿಲ್ಲದೆ ಮೌನವಾಗಿದ್ದಳು. ಬಶೀರ್ ಅದೆಷ್ಟೇ ಅವಳಲ್ಲಿ ಧೈರ್ಯ ತುಂಬಿದರೂ ಪ್ರಯೋಜನವಾಗಲಿಲ್ಲ. ರಾಜೇಶನ ಊರು ದಾಟಿ ತಮ್ಮೂರ ಕಡೆ ಹೊರಟ ಕಾರು ಕ್ಷಣದಲ್ಲಿ ಕೆಟ್ಟಿತು. ಎಷ್ಟೇ ಪ್ರಯತ್ನಿಸಿದರೂ ಸ್ಟಾರ್ಟ್ ಆಗ್ತಿಲ್ಲ. ಆಗಲೇ ಮಬ್ಬುಗತ್ತಲು ಆವರಿಸಿತು. ಪರಿಚಯಸ್ಥರಿಲ್ಲದ ಪ್ರದೇಶ. ಬಶೀರನ ಪರದಾಟವೇ ಪರದಾಟ. ಪಾಪ ಬಸವಳಿದು ಹೋಗಿದ್ದ. ಜೊತೆಗೆ ಸೀಮಾಳಿಗೂ ಮಕ್ಕಳಿಗೂ ಧೈರ್ಯ ತುಂಬುತ್ತಲಿದ್ದ. ಇತ್ತ ಇವಳ ಪಾಡು ಕೇಳುವುದೇ ಬೇಡ. ಕಾರಿನ ಪಕ್ಕದಲ್ಲಿ ಯಾರೇ ಹಾದು ಹೋದರೂ ಭಯದಲ್ಲಿ ಇನ್ನಷ್ಟು ಗುಬ್ಬಚ್ಚಿಯಂತಾಗುತ್ತಿದ್ದಳು.

ಕಾರು ಸರಿಪಡಿಸುವ ಅಂದರೆ ಹತ್ತಿರದಲ್ಲೆಲ್ಲೂ ಗ್ಯಾರೇಜಿಲ್ಲ. ಅದೇನು ಜನಸಂದಣಿಯಿಲ್ಲದ ಸ್ಥಳವೇನೂ ಅಲ್ಲ. ಬಳಿಯಲ್ಲಿ ಜನರ ಓಡಾಟ…ವಾಹನಗಳ ಕಿರುಚಾಟ…ಆದರೂ ಬಳಿ ಬಂದು ವಿಚಾರಿಸುವವರು ಬೇಕಲ್ಲವೇ ? ಇತ್ತೀಚೆಗೆ ದಾರಿಯಲ್ಲಿ ಒಬ್ಬ  ಹುಡುಗನಿಗೆ ನಾಲ್ಕೈದು ಜನ ಸೇರಿ ಚಾಕುವಿನಿಂದ ಕೊಚ್ಚಿ ಸಾಯಿಸಿದ ಸುದ್ದಿ ಇಡೀ ಊರು ಹಬ್ಬಿತು. ಇವಳಿಗೆ ಎಲ್ಲೆಲ್ಲೋ ನಡೆದ ಒಂದೊಂದೇ ಘಟನೆಗಳು ನೆನಪಾಗತೊಡಗಿದುವು. ಕೈ ಕಾಲುಗಳ ನಡುಕ ಹೆಚ್ಚಾಯಿತು. ಇದರ ನಡುವೆ ಬಶೀರನದ್ದು ತನ್ನವರತ್ತ ಕಾಳಜಿ. ಪ್ರಾರ್ಥನೆ, ದಿಕ್ರ್, ದುವಾಗಳಲ್ಲಿ ಮುಳುಗಿದ ಪತ್ನಿಯತ್ತ ನಗುಮುಖದಿ ಕಂಗಳಲ್ಲಿ ಧೈರ್ಯ ತುಂಬುತ್ತಿದ್ದ.

ಅಷ್ಟರಲ್ಲಿ ಅದ್ಯಾವನೋ ಪುಣ್ಯಾತ್ಮ ಕಾರ ಬಳಿ ಬಂದ. ಕೃಶ ಶರೀರ, ತುಸುಗಪ್ಪು ಬಣ್ಣದ ಯುವಕ. ಹಣೆಯಲ್ಲಿ ಉದ್ದನೆಯ ವಿಭೂತಿ. ಕೈಗೆ ಕೆಂಪು ಬಣ್ಣದ ದಾರ ಕಟ್ಟಿದ್ದ. ಇವಳ ಕಣ್ಣು ಮೊದಲು ಹೊರಳಿದ್ದು ಅದೆರಡರ ಮೇಲೆ. ಭಯ ಇಮ್ಮಡಿಯಾಗುತ್ತಲಿತ್ತು. ಕಂಪನ ಇನ್ನೂ ಹೆಚ್ಚಾಯಿತು. ಅಮ್ಮನನ್ನು ನೋಡಿ ಮಕ್ಕಳೂ ಹೆದರಿ ಒಂದು ಭಾಗಕ್ಕೆ ಸರಿದು ಮುದುಡಿ ಕುಳಿತಿದ್ದರು.

ಬಂದವನು ಬಶೀರನ ಜೊತೆ ಮಾತನಾಡಿ ಅವನ ಪಾಡಿಗೆ ಅವನು ತನಗೆ ತಿಳಿದಷ್ಟು ಸರಿಪಡಿಸಲು ಬಶೀರನಿಗೆ ಸಹಾಯಕ್ಕೆ ಮುಂದಾದ. ಹೇಗೋ ಅರ್ಧ ತಾಸಿನೊಳಗೆ ಕಾರು ಸರಿಯಾಯಿತು. ಇಬ್ಬರ ಮುಖದಲ್ಲಿ ಸಂತೃಪ್ತಿ. ಅವರಿಬ್ಬರು ಪರಸ್ಪರ ಆಲಂಗಿಸಿ ಬೀಳ್ಕೊಟ್ಟರು. ಇದನ್ನೆಲ್ಲ ಗಮನಿಸುತ್ತಿದ್ದ ಸೀಮಾಳಲ್ಲಿ ಅಪರಾಧ ಭಾವ ಕಾಡತೊಡಗಿತು. ‘ ಛೆ…ಎಂತಹ ತಪ್ಪು ಮಾಡಿದೆ ? ಎಲ್ಲರನ್ನು ಒಂದೇ ತಟ್ಟೆಯಲ್ಲಿ ತೂಗಿದೆನಲ್ಲಾ…ಗಡ್ಡ, ಟೋಪಿ ಧರಿಸಿದವರೆಲ್ಲ ಭಯೋತ್ಪಾದಕರಲ್ಲ. ವಿಭೂತಿ, ದಾರ,ಮಾಲೆ ಧರಿಸಿದವರೆಲ್ಲ ಕೊಲೆಗಾರರಲ್ಲ. ಹಿಂದೆಂದೂ ಇಲ್ಲದ ಈ ಭಾವನೆ ಬೆಳೆಯಲು ಕಾರಣವಾದರೂ ಯಾವುದು? ಹಿಂದೆ ಜೊತೆಗೂಡಿ ಆಡಿದವರನ್ನು ಅನುಮಾನಿಸುವಷ್ಟರ ಮಟ್ಟಿಗೆ ಪರಿಸ್ಥಿತಿಯನ್ನು ಸೃಷ್ಟಿಸಿದವರಾದರೂ ಯಾರು?

ಉಡುಪು, ಆಹಾರ, ವೇಷಭೂಷಣವನ್ನು ಮುಂದಿಟ್ಟು ಮಾನವೀಯತೆಗೆ ನಿಲುಕದಷ್ಟು ಸಂಕುಚಿತ ಮನಸ್ಸುಗಳು ಸುತ್ತಲು ತುಂಬಿದೆ. ಎಲ್ಲಾ ಧರ್ಮದವರಲ್ಲೂ ಹೃದಯವಂತರು ಇದ್ದಾರೆ. ಕೆಟ್ಟವರು, ಒಳ್ಳೆಯವರು ಎಲ್ಲಾ ಕಡೆ ಇದ್ದಾರೆ. ಇಂದು ಜೊತೆಯಾದ ಸಹೃದಯಿಯನ್ನು ಗುರುತಿಸದಷ್ಟು ಕೀಳಾಗಿ ಹೋದೆನಲ್ಲ…ಯಾರು ಎಷ್ಟೇ ತಲೆಯೊಳಗೆ ಏನೇನೋ ತುಂಬಿಸಿದರೂ ಮನುಷ್ಯತ್ವ ಇನ್ನೂ ಸತ್ತಿಲ್ಲ. ಸಂಕಷ್ಟದ ಸಮಯದಲ್ಲಿ ಜಾತಿ, ಧರ್ಮ ನೋಡದೆ ಸಹಾಯಹಸ್ತ ಚಾಚುವುದೇ ಮಾನವೀಯತೆಯ ಬಿಂದು. ಮನುಷ್ಯತ್ವದ ಪಾಠ. ಅವಳಿಗರಿಯದೆ ಅವಳ ನಾಲಗೆಯಿಂದ ಅವನಿಗಾಗಿ ಪ್ರಾರ್ಥನೆಯ ಸಾಲುಗಳು ಹೊರಟವು. ಕ್ಷಣದಲ್ಲಿ ಅವಳ ಮನದೊಳಗೆ ಸಣ್ಣನೆಯ ನಂಬಿಕೆ, ಭರವಸೆಯ ಸಸಿಯು ಮೆಲ್ಲನೆ ಮೊಳಕೆಯೊಡೆಯಲಾರಂಭಿಸಿತು.

ಜೊತೆಗೆ ಅವಳ ಮನದಲ್ಲಿ ಪ್ರಶ್ನೆಗಳು ಏಳತೊಡಗಿದುವು. ನಮ್ಮವರು ಅನ್ನುವವರ ನಡುವೆ ಯಾಕಿಷ್ಟು ಕಚ್ಚಾಟ? ದಿನ ಬೆಳಗಾದರೆ ಹಿಂಸೆಗಳ ಸುದ್ದಿ. ಎತ್ತ ನೋಡಿದರತ್ತ ಹಕ್ಕುಗಳ ಕಸಿದಾಟ. ದಮನಿತರ ನರಳಾಟ. ನೋಯಿಸುವ ಮಾತುಗಳು. ಸೋತವನಿಗೆ ಮೇಲಿಂದ ಮೇಲೆ ಗುದ್ದು. ಪ್ರೀತಿಸುವ ಹೃದಯಗಳ ಕೊರತೆ. ಅಸಹಾಯಕ ಕರಗಳನ್ನು ಹಿಡಿದೆತ್ತುವವರಿಲ್ಲ. ಕಣ್ಣೀರು ಒರೆಸುವ ಕರಗಳಿಲ್ಲ. ಯಾಕೆ ಹೀಗಾಗುತ್ತಿದೆ? ಜನ ಸಂಶಯ, ಅನುಮಾನಗಳ ಹಿಂದೆ ಬೀಳುವುದಾದರೂ ಯಾತಕೆ? ತಮ್ಮ ಸುತ್ತಮುತ್ತಲಿನವರ

ಒಡನಾಟವನ್ನು ಮುಂದಿಟ್ಟು ಚಿಂತಿಸ ಬಾರದೇ? ಎಲ್ಲೆಲ್ಲೋ ನಡೆದಿರುವುದನ್ನು ಇಲ್ಲಿ ಎಳೆದು ತಂದು ಅಪನಂಬಿಕೆಯನ್ನು ಬಿತ್ತುವುದೇತಕೆ ? ನೆರೆಯವನಿಗೆ ನೆರೆಯವನಲ್ಲದೆ ಇನ್ನ್ಯಾರು ಸಿಗುವರು? ಮನುಷ್ಯ ಪರಾವಲಂಬಿಯಲ್ಲದೆ ಬದುಕಲಾರ. ಕೊಡು ಕೊಳ್ಳುವಿಕೆ ಈ ನೆಲದ ಗುಣ. ಇನ್ನಾದರು ಜನ ಅರ್ಥ ಮಾಡಬಾರದೇ…?

ಪ್ರಯಾಣದುದ್ದಕ್ಕೂ ಅವಳು ಆ ಯುವಕನ ಕುರಿತು ಮಾತನಾಡುತ್ತಲೇ ಇದ್ದಳು. ಬಶೀರ್ ಇಂದಿನ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ವಿವರಿಸತೊಡಗಿದ ” ಇಂದು ಜನರಿಗೆ ಮಾಡುವ ಸಣ್ಣಪುಟ್ಟ ಸಹಾಯಗಳು ಗುರುತಿಸಲ್ಪಡಬೇಕು. ಅದು ಅನಿವಾರ್ಯ, ಅವಶ್ಯಕವೂ ಆಗಿದೆ. ಸಂಶಯ, ಅನುಮಾನಗಳು ದೂರವಾಗಬೇಕಾದರೆ ಹೆಚ್ಚೆಚ್ಚು ಸಹಕಾರದ ಸುದ್ದಿಗಳು ಮನೆಮಾತಾಗಬೇಕು. ಮುಖವಾಡ ಹೊತ್ತ ಈ ದಿನಗಳಲ್ಲಿ ಉತ್ಸಾಹದ ಚಿಲುಮೆ, ಹೃದಯಶೀಲ, ಉಪಕಾರಿ ಜೀವಿಯಾದ ಆ ಯುವಕ ಧರ್ಮದ ಮುಖವಾಡ ಹೊತ್ತಿಲ್ಲ. ಅವನ ವಸ್ತ್ರ, ವೇಷಭೂಷಣ ಅದವನ ಬದುಕಿನ ಭಾಗ. ಅವನು ಹೊಂದಿಕೊಂಡ ಜೀವನ ಪದ್ಧತಿಯ ಮೇಲೆ ಎಂದಿಗೂ ಸಂಶಯ ಪಡಬಾರದು. ಆತನ ಮುಖದಲ್ಲಿ ನಾವು ಪರರೆಂಬ ತಾತ್ಸಾರದ ನೋಟವಿಲ್ಲ. ತೊಟ್ಟ ಬುರ್ಖಾದ ಮೇಲೆ ಆತನಿಗೆ ಅಸಹ್ಯವಿಲ್ಲ. ಅವನ ಹೃದಯ ಸೌಹಾರ್ದತೆಯ ಒರತೆ. ಮಾನವೀಯತೆಯೆಂಬ ಧರ್ಮದ ನೆರಳು ಅವನ ಮೇಲೆ ಹಾಸಿದೆ.  ವೈಷಮ್ಯದಿ ಒಣಗಿದ ಎಲೆಗಳ ಮರಗಳಿಗೆ ಮನುಷ್ಯತ್ವದ ನೀರನ್ನು ಕುಡಿಸಿದನು‌. ಸುತ್ತ ಎದ್ದು ನಿಂತ ಬಂಡೆಕಲ್ಲುಗಳ ನಡುವೆ ಅರಳುವ ಹೂವುಗಳು ನಮ್ಮ ಸುತ್ತಲಿವೆ. ಅಲ್ಲಿ ಇನ್ನಷ್ಟು ಮೊಗ್ಗುಗಳು ಅರಳಬೇಕು. ಹಳೆಬೇರು, ಒಣಗಿದ ಬಳ್ಳಿಗಳು ಮಣ್ಣಾಗಿ ಹೊಸ ಚಿಗುರು ಮೊಳಕೆಯೊಡೆಯುತ್ತಲೇ ಇರಬೇಕು…” ಬಶೀರ್ ದಾರ್ಶನಿಕನಂತೆ ಹೇಳುತ್ತಲೇ ಇದ್ದ. ಅವಳು ಹೊರಗಡೆ ಬೀಸುವ ತಂಪಾದ ಗಾಳಿಗೆ ಮುಖವೊಡ್ಡಿ ಹ್ಞೂಂಗುಟ್ಟುತ್ತಿದ್ದಳು.

ಸಿಹಾನ ಬಿ.ಎಂ.

ಉದಯೋನ್ಮುಖ ಲೇಖಕಿ, ಕವಯಿತ್ರಿ

ಗೋಡೆಯಲೊಂದು ಬಿಕ್ಕಳಿಕೆ
ಸುತ್ತ ಸುಟ್ಟ ಗಾಯಗಳ ವಾಸನೆ. ಸೀದು ಹೋದ, ಕರಟಿ ಹೋದ ದುರ್ನಾತ. ಈಗ ಹಾದಿಬೀದಿ ಕೇರಿ ಕೇರಿ ಇರಲಿ, ಬಯಲು, ಮರ, ಗಿಡ, ರಸ್ತೆ, ಅಂಗಡಿ, ಶಾಲೆ, ಕಾಲೇಜು, ಮನೆಮನೆಗಳಲ್ಲೂ ಈ ವಾಸನೆ ಹರಡಿದೆ. ಬೆಂಕಿ ಹೊತ್ತಿದೆ. ಸುಡುವವರ ಮುಂದೆ ಆರಿಸುವವರ ಸಂಖ್ಯೆ ವಿರಳವಾಗುತ್ತಿದೆ…ಮುಂದೆ ಓದಿ ಲೇಖಕಿ ಸಿಹಾನ ಬಿ. ಎಂ ಅವರ ಮೈಂಡ್‌ ಬ್ಲಾಕ್‌ ಅಂಕಣ

ಹಾಡುಹಗಲಿನಲ್ಲಿ, ಉರಿಬಿಸಿಲಿನಲ್ಲಿ ಹಸಿ ಹಸಿ ಹಾದಿಯಲ್ಲಿ ಬದುಕಿನ ಓಘದಲ್ಲಿ ಮುಟ್ಟಿಸಿ ಕೊಳ್ಳಲಾಗದ ಅಂಟುಜಾಡ್ಯದ ಬೇರನ್ನು ಕಿತ್ತೆಸೆಯದಿದ್ದರೆ ಅದು ತಂದಿಡುವ ವಿಹ್ವಲತೆಗಳಿಗೆ ಇಲ್ಲಿ ಪ್ರತಿಯೊಬ್ಬರು ಸಾಕ್ಷಿಗಳಾಗುವರು. ಪ್ರತಿ ಬೆಳಗು ರಾತ್ರಿಗಳಲ್ಲಿ ಕಿತ್ತು ತಿನ್ನುವ ಹಸಿವು, ಬಡತನ, ನಿರುದ್ಯೋಗ, ಪೌಷ್ಟಿಕ ಆಹಾರಗಳ ಕೊರತೆ, ಗುಣಮಟ್ಟದ ಶಿಕ್ಷಣ ಎಟುಕದ ಸಮಸ್ಯೆಗಳು ಆಳೆತ್ತರ ಬೆಳೆದು ನಿಂತಿದ್ದರೂ ಮನುಷ್ಯ ತನ್ನವನನ್ನೇ ಕಿತ್ತು ತಿನ್ನಲು ಹೊರಟಿರುವನು. ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರರ ನಡುವಿನ ಕಚ್ಚಾಟದಲ್ಲಿ ಉಳಿದವೆಲ್ಲವು ಗೌಣವಾಗುತ್ತಿವೆ. ಕೆಲ ವರುಷಗಳ ಹಿಂದೆ ಈ ಅಂಟುರೋಗ ಇಷ್ಟು ತೀವ್ರವಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಅದನ್ನೇ ಕಾರಣವಾಗಿಟ್ಟು ಗದ್ದುಗೆಯನ್ನೇರುವ, ಉಳಿಸುವ ಹುನ್ನಾರ ನಡೆಯುತ್ತಿದೆ. ಈ ಗಾಳಿ  ಅಷ್ಟೇನು ಹಬ್ಬಿಲ್ಲದ ಕರಾವಳಿಯಲ್ಲೂ ಇಂದು ಇದು ಎದ್ದು ಕಾಣುತ್ತಿದೆ. ಹಿಂದೆ, ಮುಟ್ಟಿಸಿ ಕೊಳ್ಳದಿದ್ದರೂ, ಜೀತದಾಳುಗಳಾಗಿ ದುಡಿಸುತ್ತಿದ್ದರೂ, ಅವರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಹಿಂಸೆಯು ಪರಾಕಾಷ್ಠೆಗೆ ತಲುಪಿರಲಿಲ್ಲ.

ಮಂಗಳೂರಿನ ಬಂದರಿನ ದಕ್ಕೆಯಲ್ಲಿ ವಲಸೆ ಕಾರ್ಮಿಕರಾಗಿ ಬಂದವರಲ್ಲಿ ಬಹುತೇಕ ಅಂತವರು ತುಂಬಿರುವರು. ಬಹುಕಷ್ಟದ ಹೊರುವ, ಶುಚಿತ್ವದ ಕೆಲಸಗಳಲ್ಲಿ, ದೊಡ್ಡ ದೊಡ್ಡ ಫ್ಯಾಕ್ಟರಿಯ ಒಳಗಡೆ ಕೊಳೆತು ಹೋಗುವಷ್ಟು ಕಾಲದ ದುಡಿಮೆಗಳಲ್ಲಿ, ಭದ್ರತೆಯ ಕೊರತೆಗಳಿರುವ ಕಂಪೆನಿಗಳಲ್ಲಿ ನಿರಂತರವಾಗಿ ವಲಸೆ ಕಾರ್ಮಿಕರನ್ನು ಗುರುತಿಸಬಹುದು. ಅಲ್ಲೂ ಇವರು ಜೀತದಾಳುಗಳ ರೀತಿಯಲ್ಲಿ ಕೂಡಿ ಹಾಕಿ ಮಾಲಕರ ಆಜ್ಞೆಗಳನ್ನು ಹಗಲು ರಾತ್ರಿಯೆನ್ನದೆ ಪಾಲಿಸುವಂತಹ ನಿಯಮಗಳಿಗೆ ಬದ್ಧರಾಗಿ ಇರುವರು.  ಅಭದ್ರತೆಯ ವ್ಯವಸ್ಥೆಗಳ ಕಾರಣದಿಂದ ಸಾವಿಗೀಡಾದವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಅಂತಹ ಹಲವಾರು ಸಾವುಗಳು ಸುದ್ದಿಯಾಗುವುದೇ ಇಲ್ಲ. ಅಸ್ಸಾಂ, ಜಾರ್ಖಂಡ್, ಬಂಗಾಳ, ಉತ್ತರ ಪ್ರದೇಶದಿಂದ ವಲಸೆ ಬಂದವರ ಸಂಖ್ಯೆ ಹೇರಳವಾಗಿದೆ. ಹಾಗೆ ಬಂದವರಲ್ಲಿ ಹಲವು ಜಾತಿ, ಧರ್ಮದವರೂ ಇದ್ದಾರೆ. ರೈಲುಗಳಲ್ಲಿ, ಬಸ್ಸುಗಳಲ್ಲಿ ಲೆಕ್ಕವಿಲ್ಲದಷ್ಟು ಯಾತ್ರಿಕರ ನಡುವೆ ಪ್ರಯಾಣಿಸುವಾಗಲೂ ಪಥಭ್ರಾಂತರು, ಜಾತಿಪಂಥ ಹೊತ್ತು ನಡೆಯುವವರು, ಸಿಡಿದೆದ್ದು ಬೀಳುವವರು, ಉರಿದುರಿದು ಬೀಳುವವರು ಇವರನ್ನು ಮುಟ್ಟಿಸಿಕೊಳ್ಳಬಾರದೆಂದು ಅಂತರ ಕಾಯ್ದುಕೊಂಡು ಪ್ರಯಾಣಿಸುವರೆಂಬ ಮಾತು ಹಿಂದೊಮ್ಮೆ ಕೇಳಿಸಿಕೊಂಡಿದ್ದೆ. ಅದೇ ವರ್ತನೆಯನ್ನು ಜೊತೆಯಾಗಿ ಕೆಲಸ ಮಾಡುವಾಗಲೂ ತೋರಿಸುತ್ತಿರುವುದು ಹಲವರ ಕಣ್ಣಿಗೂ ಬಿದ್ದಿದೆ. ಆದರೆ ಆ ಒಂದು ಮುಟ್ಟಬಾರದ, ಮುಟ್ಟಿಸಿಕೊಳ್ಳಲಾಗದ “ಅಂಟುಜಾಡ್ಯ”ಕ್ಕೆ ತಾವು ಅರ್ಹರೆಂಬ ಭಾವವನ್ನು ಇವರು ಇವರೊಳಗೆ ತುಂಬಿಸಿಕೊಂಡಿರುವುದು ವಿಪರ್ಯಾಸ!

ಬೇಕಾಬಿಟ್ಟಿ ಬೆಳೆದ ಈ ಗೋಡೆಯನ್ನು ನೋವುಂಡವರ ಗುಂಪು ಜೊತೆಯಾಗಿ ಹೊಡೆದುರುಳಿಸಿದರೆ ಗೋಡೆ ಕಟ್ಟಿದವರ ಗತ್ತು, ಗರ್ವ, ಅಹಂಕಾರ ನೆಲಕ್ಕಪ್ಪುವುದರಲ್ಲಿ ಸಂಶಯವಿಲ್ಲ. ಆದರೆ ಒಗ್ಗಟ್ಟಿನ ಕೊರತೆಯೇ ಬಹುದೊಡ್ಡ ಸವಾಲು. ಬೆಕ್ಕಿಗೆ ಗಂಟೆ ಕಟ್ಟುವವರ ಸಂಖ್ಯೆ ವಿರಳವಾಗಿರುವುದರಿಂದ ಗೋಡೆಯ ಮೇಲಿನ ಅಟ್ಟಹಾಸ, ದಬ್ಬಾಳಿಕೆ ಇನ್ನಷ್ಟು ಎತ್ತರಕ್ಕೇರಿದೆ. ಸುತ್ತಲು ಗಬ್ಬುವಾಸನೆ, ಮಬ್ಬುಗತ್ತಲು, ಬಟಾಬಯಲ ಬೆತ್ತಲು. ಕುಹಕ ಮಾತಿಗೆ, ವ್ಯಂಗ್ಯ ನೋಟಕ್ಕೆ, ಕುಟುಕು ನಡೆಗೆ ಜನ ಬೇಸತ್ತು ಹೋಗಿರುವರು. ಜಾತಿಯ ಕಾರಣದಿಂದ ಇವರೊಂದಿಗೆ ವ್ಯವಹರಿಸುವಂತಿಲ್ಲ. ಅವರ ಭೂಮಿಯನ್ನು ಖರೀದಿಸುವಂತಿಲ್ಲ. ಬಾಡಿಗೆಗೆ ಮನೆ ಕೊಡುವಂತಿಲ್ಲ. ಮದುವೆ, ಸಮಾರಂಭಗಳಿಗೆ ಆಮಂತ್ರಿಸುವಂತಿಲ್ಲ. ಈ ಮೌಢ್ಯದ ಗಾಳಿ ಉಳಿದವರಲ್ಲಿ ಹಾಸು ಹೊಕ್ಕಿರುವುದು ಬಲು ಖೇದಕರ. ಈ ಮಣ್ಣಿನ ಗುಣ ಅದಲ್ಲವಾದರೂ ಈ ಮಣ್ಣಿನವರೊಂದಿಗೆ ಜೊತೆಯಾಗಿ ಮೇಲು ಕೀಳೆಂಬ ಭಾವ ಅರಿತೋ ಅರಿಯದೆಯೋ ಹರಡಿರುವುದು ಸುತ್ತಮುತ್ತಲು ಕಾಣಬಹುದು. ಪರಕೀಯತೆ, ಅನಾಥ ಭಾವದೊಂದಿಗೆ ಬದುಕುತ್ತಿರುವ ಅವರಾದರೋ ಪ್ರೀತಿಗಾಗಿ ಹಂಬಲಿಸುವವರು. ಸಾಂತ್ವನದ ನುಡಿಗಳಿಗಾಗಿ ತವಕಿಸುವವರು. ಹಾಗೆ ಪ್ರೀತಿ ಎಲ್ಲಾದರು ಸಿಕ್ಕಿದೊಡನೆ ಅವರ ಖಾಲಿ ಕಣ್ಣುಗಳಲ್ಲಿ ಹೊಳಪು ತುಂಬುವುದು. ಅವರ ಆ ಹೊಳೆಯುವ ಕಂಗಳು ಈಗಲೂ ನನ್ನ ನೆನಪಿನಂಗಳದಲ್ಲಿದೆ.

ಇವರ ನೋವಿನ ಕತೆಗಳು ಅಲ್ಲಿ ಇಲ್ಲಿ ಕೇಳಿದರೂ ನಮ್ಮ ಸುತ್ತಮುತ್ತಲು ನಡೆದ ಕತೆಗಳಿಗೆ ತೂಕ ಹೆಚ್ಚು. ಜೊತೆಯಾಗಿ ಊಟಕ್ಕೆ ಕೂರಿಸಲೆತ್ನಿಸಿದರೆ ಕೂರದೆ ದೂರ ಓಡುವ ಇವರನ್ನು ಮತ್ತೊಮ್ಮೆ ಕೂರಿಸಿ ಜೊತೆಯಾಗಿಸಿದಾಗ ಪ್ರೀತಿಯ ಕಂಗಳಲ್ಲಿ ಭೀತಿಯನ್ನು ನೋಡಿದ್ದೇನೆ. ಎಲ್ಲಾದರು ಯಾರಾದರು ನೋಡಿ ಕೆಕ್ಕರಿಸುವರೇನೋ ಎಂಬ ಇವರ ಅಂಜಿಕೆಯ ನೋಟದ ಆಳವನ್ನು ಮರೆಯುವಂತಿಲ್ಲ. ” ಇಲ್ಲಣ್ಣಾ…ನಿಮ್ಜೊತೆ ಕೂತದ್ದನ್ನು ಯಾರಾದರು ನೋಡಿದರೆ ಮತ್ತೆ ನಮ್ಮೊಂದಿಗೆ ಸೇಡು ತೀರಿಸುವ ಅವರ ವರ್ತನೆ ನಿಮಗೆ ಗೊತ್ತಿಲ್ಲಣ್ಣಾ…” ಎಂದು ಅವರಾಗಿಯೇ ನಿರಾಕರಿಸಿದಾಗ ನೋವಾಗಿದ್ದೂ ಇದೆ. ಅಷ್ಟಕ್ಕೂ ಈ ವ್ಯವಸ್ಥೆಯನ್ನು ಹುಟ್ಟು ಹಾಕಿದ ಧರ್ಮವಾದರೂ ಯಾವುದು? ಈ ಜಾತಿ, ಧರ್ಮವನ್ನು ದೇವರು ಸೃಷ್ಟಿಸಿದರೇ? ಸಮಾನತೆಯನ್ನು ಪ್ರತಿಪಾದಿಸದ ಧರ್ಮ ಈ ಭೂಮಿಯ ಮೇಲೆ ಯಾಕಿರಬೇಕು? ಮನುಷ್ಯರನ್ನೆಲ್ಲರನ್ನು ಒಂದೇ ಎಂದು ನೋಡದ ಧರ್ಮವನ್ನು ಅಂಗೀಕರಿಸುವುದಾದರೂ ಯಾತಕೆ? ಮಾನವತೆಯಿಲ್ಲದ ಧರ್ಮ ಹುಟ್ಟಿ ಬೆಳೆದು ಮನುಷ್ಯನನ್ನು ನುಂಗುವ ಈ ಪರಿಗೆ ಮೇಲು ಕೀಳೆಂಬ ಪಟ್ಟಗಳನ್ನು ಇಟ್ಟವರ್ಯಾರು? ಧರ್ಮ, ಜಾತಿ, ವರ್ಣ, ಲಿಂಗದ ಕಾರಣವನ್ನು ಮುಂದಿಟ್ಟು ನಡೆಯುವ ಕ್ರೌರ್ಯಗಳನ್ನು ಇನ್ನೆಷ್ಟು ಕಾಲಗಳವರೆಗೆ ಸಹಿಸಿಕೊಳ್ಳಬೇಕು ?

ಬಾಲ್ಯಕಾಲದಲ್ಲಿ ನಮ್ಮನೆಗೆ ಬರುತ್ತಿದ್ದ ಮಾಧವಣ್ಣ, ಕುಂಡಣ್ಣ, ಅಕ್ಕು, ತನಿಯ, ಚೋಮ ಇವರೆಲ್ಲರು ಇದೀಗ ನೆನಪಾಗುತ್ತಿದ್ದಾರೆ. ಜಾತಿಗೂ, ವರ್ಣಕ್ಕೂ ತುಲನೆ ಮಾಡುತ್ತಾ ಹೀಯಾಳಿಸುವವರ ನಡುವೆ ಆಧರಿಸುವವರ ಕರೆ ಕೇಳಿದೊಡನೆ ಓಡೋಡಿ ಬರುವ ಇವರ ನಡಿಗೆಯ ವೇಗವನ್ನು ಆ ದಿನಗಳಲ್ಲಿ ಗಮನಿಸಿದ್ದೇನೆ. ನನಗಿನ್ನೂ ಈ ಅಂಟುಜಾಡ್ಯದ ಅರಿವಿಲ್ಲದ ಕಾಲವದು. ಈಗಿನಷ್ಟು ಸುದ್ದಿಗಳು ಆಗ ನನ್ನ ತಮಟೆಗೆ ಬಡಿದಿರಲಿಲ್ಲ. ಹಿತ್ತಲ ಕೆಲಸಕ್ಕೆ ಕುಂಡಣ್ಣನಾದರೆ, ಮರ ಹತ್ತಿ ಕಾಯಿ ಕೀಳಲು ಮಾದಣ್ಣನೇ ಬೇಕು. ಬೇರೆ ಯಾರಿಂದಲಾದರು ಆ ಕೆಲಸ ಮಾಡಿಸಿದರೆ ಅಮ್ಮನಿಗೆ ತೃಪ್ತಿಯಾಗದು. ಅವರ ಶುಚಿತ್ವ, ಶಿಸ್ತು, ಸಮಯ ಪಾಲನೆ, ಕರ್ತವ್ಯ ನಿಷ್ಠೆ ಮೆಚ್ಚುವಂತಹದು. ಕುಂಡಣ್ಣನ ಕೆಲಸದಲ್ಲಿ ವೇಗ ಕಮ್ಮಿಯಿದ್ದರೂ ಶುಚಿತ್ವ, ಅಚ್ಚುಕಟ್ಟುತನದಲ್ಲಿ ಉಳಿದವರನ್ನು ಮೀರಿಸುವ ಗುಣವಿತ್ತು. ಮಾಧವಣ್ಣ ತೆಂಗಿನ ಮರಕ್ಕೆ ಹತ್ತಿದನೆಂದರೆ  ಆ ತೆಂಗಿನಮರವೂ ಮಾಧವಣ್ಣನನ್ನು ಪ್ರೀತಿಸುವಂತಿತ್ತು ಗರಿಗಳ ವಾಲಾಟ. ಅಕ್ಕು ಅಮ್ಮನಿಗೆ ಆತ್ಮೀಯರಾಗಿದ್ದರು. ಮನೆಯಲ್ಲಿ ವಿಶೇಷ ತಿಂಡಿ ತಿನಿಸುಗಳನ್ನು ತಯಾರಿಸಿದರೆ ಅಕ್ಕುವಿಗೆ ಮತ್ತು ಆಕೆಯ ಮಕ್ಕಳಿಗೆ ತೆಗೆದಿರಿಸುವ ಅಮ್ಮನ ಪ್ರೀತಿಯನ್ನು ಹತ್ತಿರದಿಂದ ನೋಡಿದ್ದೇನೆ. ಅಮ್ಮ, ಅಪ್ಪನಲ್ಲಿ ಅವರ ಅಳಲು, ನೋವು, ಕಷ್ಟಗಳನ್ನು ಹೇಳಿ ಮನಸ್ಸು ಹಗುರಾಗಿಸುವ, ಅವರಿಗೆ ಹೆಗಲಾಗುತ್ತಿರುವ ಆ ಕ್ಷಣಗಳು ಅದೆಷ್ಟು ಸುಂದರ! ಜೀತದಾಳುವಿನಂತೆ ದುಡಿಯುವ ಅವರ ದುಡಿಮೆಯನ್ನು ನೋಡಿ ಅಮ್ಮ ಅಪ್ಪ ಮರುಗಿದ್ದೂ ಇದೆ. ಸಾಲ, ಬಡ್ಡಿಯ ಹೆಸರಿನಲ್ಲಿ ಮಕ್ಕಳಿಗೂ ಹಂಚಿ ಹೋಗುವ ಈ ಜೀತ ಅವರ ನಿತ್ಯ ಪಾಡಾದರೆ ನಮ್ಮ ಹೃದಯಕ್ಕೆ ಅದು ನೋವಿನ ಹಾಡು. ಕುಡಿತ, ದುಡಿಮೆ ಇದರಿಂದ ಒಂದಿಂಚು ಸುಧಾರಿಸದ ಇವರನ್ನು ನೋಡಿ ಹಲವಾರು ಬಾರಿ ತಿದ್ದಲು ನಡೆಸಿದ ಪ್ರಯತ್ನ ಈಗಲೂ ಕಣ್ಣ ಮುಂದಿದೆ. ಜೀತದಾಳಿಗೆ ಬಗ್ಗದ ಕುಂಡಣ್ಣ ಮತ್ತು ಮಾಧವಣ್ಣನ ಮೇಲೆ ಅಭಿಮಾನವಿದ್ದರೂ ಅವರ ಕುಡಿತದ ಮೇಲೆ ಅಸಮಾಧಾನವಿತ್ತು.

ಗವ್ವೆನ್ನುವ ಒಂಟಿತನದ ಪರಕೀಯ ಭಾವವನ್ನು ಕಳಚಿಕೊಳ್ಳಲು ವಿದ್ಯೆಯ ದಾರಿ ಅತೀ ಅಗತ್ಯ. ವಿದ್ಯೆಯ ಕೊರತೆ ಪ್ರತಿರೋಧದ ಶಕ್ತಿಯನ್ನು ಬೆಳೆಸುವುದಿಲ್ಲ. ಸ್ವಾವಲಂಬನೆ, ಸಬಲೀಕರಣದ ಪುಟಗಳೊಂದಿಗೆ ಸೇರಿಕೊಳ್ಳುವುದಿಲ್ಲ. ಬದಲಾವಣೆಯ ದಾರಿಗೆ ವಿವೇಚನೆಯನ್ನು ಬೆಳೆಸಲು ವಿದ್ಯೆ ಮುಖ್ಯ. ತರಗತಿಯ ಹೊರಗಿದ್ದು ಕಲಿತ ಅಂಬೇಡ್ಕರರು ಸಂವಿಧಾನ ಶಿಲ್ಪಿಯಾಗಿ ಬೆಳೆದ ಚರಿತ್ರೆ ಪ್ರತಿಯೊಬ್ಬರ ಎದೆಗಿಳಿಯುತ್ತಿದ್ದರೆ ಬದಲಾವಣೆಯ ದಾರಿ ಸುಗಮವಾಗುತ್ತಿತ್ತೇನೋ… ಮಡಿವಂತಿಕೆ, ಮೌಢ್ಯ ವ್ಯವಸ್ಥೆಯೊಂದಿಗೆ ರಾಜಿಯಾಗುತ್ತಾ ಹೊಂದಿಕೊಳ್ಳುವ ಮನಸ್ಥಿತಿಗೆ ವಿಷಾದವೂ ಇದೆ. ಪ್ರತಿರೋಧದ ಯುಕ್ತಿ, ಶಕ್ತಿಗಳಿಲ್ಲದೆ ಅಲ್ಲೇ ಹುದುಗಿ ಹೋಗುವವರ ವ್ಯಥೆಯೂ ಕಣ್ಣ ಮುಂದಿದೆ. ಎಷ್ಟರವರೆಗೆ  ತುಳಿತಕ್ಕೊಳಪಡುವರೋ ಅಷ್ಟರವರೆಗೆ ತುಳಿಯುತ್ತಲೇ ಇರುವರು. ಎದ್ದೇಳದಿದ್ದರೆ, ಎದ್ದು ನಡೆಯದಿದ್ದರೆ ನೀರಿನ ಕಾರಣಕ್ಕೋ, ಅಂಗಳಕ್ಕೆ ಕಾಲಿಟ್ಟ ಕಾರಣಕ್ಕೋ, ವ್ಯಾಪಾರ, ಶಿಕ್ಷಣದ ಹೆಸರಿನಲ್ಲಿ ಮರ್ದನಕ್ಕೆ ಗುರಿಯಾಗುತ್ತಲೇ ಇರುವರು. ದೇವಾಲಯದ ಕೋಲು ಮುಟ್ಟಿದನೆಂದು, ನೀರು ಕುಡಿದನೆಂದು, ತೋಟದೊಳಗೆ ಬಂದನೆಂಬ ಕಾರಣಕ್ಕೆ ಹಲ್ಲೆಗೊಳಗಾದವರ ಕಣ್ಣೀರು ಇನ್ನೂ ಆರಿಲ್ಲ.

ಸುತ್ತ ಸುಟ್ಟ ಗಾಯಗಳ ವಾಸನೆ. ಸೀದು ಹೋದ, ಕರಟಿ ಹೋದ ದುರ್ನಾತ. ಈಗ ಬೀದಿಬೀದಿಯಲ್ಲೆಲ್ಲ ಈ ವಾಸನೆ ಹರಡಿದೆ. ಕೇರಿ ಕೇರಿ ಇರಲಿ, ಬಯಲು, ಮರ, ಗಿಡ, ರಸ್ತೆ, ಅಂಗಡಿ, ಶಾಲೆ, ಕಾಲೇಜು, ಮನೆಮನೆಗಳಲ್ಲೂ ಇದು ಹಬ್ಬಿದೆ. ಪರಿಚಿತರು ಅಪರಿಚಿತರಾಗುತ್ತಿದ್ದಾರೆ. ಬೆಂಕಿ ಹೊತ್ತಿದೆ. ಸುಡುವವರ ಮುಂದೆ ಆರಿಸುವವರ ಸಂಖ್ಯೆ ವಿರಳವಾಗುತ್ತಿದೆ. ಒಗ್ಗೂಡುವಿಕೆಯ ನೀರಿನ ಕೊರತೆಯು ಬೆಂಕಿಯನ್ನು ಆರಿಸುವುದಿಲ್ಲ. ಪರಸ್ಪರರ ಮೇಲೆ ಆರೋಪ, ಪ್ರತ್ಯಾರೋಪಗಳು ಹೆಚ್ಚುತ್ತಿರುವುದು ಒಗ್ಗಟ್ಟಿಗೆ ಮಾರಕ. ಅವರಿಗದುವೇ ಬೇಕಾಗಿರುವುದು.

ಹಿಂದಿನಿಂದಲೂ ಹೀಗೆ. ತುಳಿಯುವುದಕ್ಕೆ, ಉಸಿರುಗಟ್ಟಿಸುವುದಕ್ಕೆ, ಹೊಡೆಯುವುದಕ್ಕೆ, ರಕ್ತ ಕುಡಿಯುವುದಕ್ಕೆ, ಕತ್ತು ಹಿಸುಕುವುದಕ್ಕೆ, ಸುಟ್ಟು ಬಿಡುವುದಕ್ಕೆ, ಜೀವ ಕೊಲ್ಲುವುದಕ್ಕೆ ಜಾತಿ, ಧರ್ಮ ಬೇಕಿತ್ತು. ಅದೀಗ ಸರಾಗವಾಗಿ ನಡೆಯುತ್ತಿದೆ. ಹಸಿರು, ಉಸಿರು ಕಳೆದ ಈ ನೆಲದ ಸೊಬಗನ್ನು ಸಂಪೂರ್ಣವಾಗಿ ಕೆಸರುಮಯ ಮಾಡುವ ಪರಿಯಿದು. ಹಸಿರು ಬಯಲನ್ನು ಮರುಭೂಮಿಯಾಗಿಸುವ ಸೃಷ್ಟಿಯಿದು. ಯಾರದೋ ಸುಖದ ಪರಿಕಲ್ಪನೆಗೆ ಕಟ್ಟಿದ ಈ ಗೋಡೆಯನ್ನು ಉರುಳಿಸುವವರೆಗೆ ಈ ಬಿಕ್ಕಳಿಕೆಗೆ ಕೊನೆಯಿಲ್ಲ. ಅದು ಸ್ವಸ್ಥ ಸಮಾಜದ ಶಾಂತಿಯನ್ನು ನುಂಗುವ ಬಿಕ್ಕಳಿಕೆಯೆಂಬುದನ್ನು ಮರೆಯದಿರಿ.

ಸಿಹಾನ ಬಿ.ಎಂ

ಉದಯೋನ್ಮುಖ ಲೇಖಕಿ, ಕವಯಿತ್ರಿ

ʼಮೈಂಡ್‌ ಬ್ಲಾಕ್ʼ ಎಂಬ ಪರದೆಯನ್ನು ಸರಿಸಬೇಕಿದೆ
ತಟಸ್ಥವಾದ ಹೃದಯಗಳನ್ನು, ಅಲ್ಲೇ ಸ್ತಂಭೀಭೂತವಾದ ಮನಸ್ಸುಗಳನ್ನು, ಆಕಾರ ಗುರುತಿಸಲಾಗದ ಕತ್ತಲೆಯನ್ನು ಸೀಳಿ, ಈ ಮಣ್ಣಿನ ಪ್ರೇಮವನ್ನು ಎಲ್ಲರ ಎದೆಎದೆಗಳಲ್ಲೂ, ಕಣಕಣಗಳಲ್ಲೂ ಬಿತ್ತಿ ಬೆಳೆಸಬೇಕಾಗಿದೆ. ಎಂದೇ ʼಮೈಂಡ್‌ ಬ್ಲಾಕ್‌ʼ ಎಂಬ ಪರದೆಯನ್ನು ಕಿತ್ತೆಸೆಯಬೇಕಿದೆ. ಇದು ಉದಯೋನ್ಮುಖ ಲೇಖಕಿ ಸಿಹಾನ ಬಿ ಎಂ ಬರೆಯುವ  ʼಮೈಂಡ್‌ ಬ್ಲಾಕ್ʼ ಅಂಕಣದ ಮೊದಲ ಕಂತು

ಮನಸ್ಸು ಮನಸ್ಸುಗಳನ್ನು ಒಡೆದು ನಿಗಿನಿಗಿ ಕೆಂಡದಂತಹ ದ್ವೇಷ ಕಾರಿ ಕಿಡಿಮಾತು ಸಿಡಿಸಿ ಮನೆಮನಗಳು ದಹಿಸುತ್ತಿವೆ.. ಪ್ರೀತಿಸುತ್ತಿದ್ದ ಮನಸ್ಸುಗಳ ನಡುವೆ, ಜೊತೆಯಾಗಿದ್ದವರ ಮಧ್ಯೆ ಬಿರುಕುಗಳು ಹುಟ್ಟುತ್ತಿವೆ. ಹರೆಯದ ಮೆದುಳೊಳಗೆ ಹೊಕ್ಕು ಬೆಂಕಿಯ ಉಂಡೆ ಕಟ್ಟಿ ಜ್ವಾಲೆಯನ್ನು ಹರಡುತ್ತಿದೆ. ಸಂತೆ, ಮಾರುಕಟ್ಟೆಗಳಲ್ಲೂ ಅಂತೆಕಂತೆಗಳನ್ನು ಎಸೆದು ಹೊಟ್ಟೆಗೆ, ಎದೆಗೆ ಕಲ್ಲು ಹೊಡೆಯುತ್ತಿದೆ. ಸ್ವಸ್ಥವಾಗಿದ್ದ ಸಮಾಜದೊಳಗೆ ಬಿರುಗಾಳಿಯೆಬ್ಬಿಸಿ, ಧೂಳುಕಣಗಳನ್ನು ಹರಡಿ ಉಸಿರುಗಟ್ಟಿಸುತ್ತಿದೆ. ಸುತ್ತ ಸಂಶಯದ ನೋಟಗಳು. ಮುಖವಾಡ ಹೊತ್ತ ಮುಖಗಳು. ಸುಣ್ಣ, ಬಣ್ಣದ ತೇಪೆಗಳು. ವಿಷದ ಅಗುಳನ್ನು ನುಂಗುತ್ತಾ ಅಂಗಳದಲ್ಲಿ, ಹರೆಯದ ಹೃದಯಗಳಲ್ಲಿ, ಆಟದ ಬಯಲಿನಲ್ಲಿ, ಅಂಗಡಿ ಮುಂಗಟ್ಟುಗಳ ಬಾಗಿಲುಗಳಲ್ಲಿ, ಅಡುಗೆ ಮನೆಯ ಡಬ್ಬಗಳ ಮೇಲೆಲ್ಲಾ ವಿಷದುಂಡೆಗಳು ನೃತ್ಯವಾಡುತ್ತಿವೆ.

ಇಲ್ಲದ ಕಾರಣಗಳನ್ನು ಸೃಷ್ಟಿಸಿ ಆರೋಪ, ಪ್ರತ್ಯಾರೋಪಗಳ ಆಟಗಳು ನಡೆಯುತ್ತಿವೆ. ಸುಳ್ಳುಗಳ ಜರಡಿಯನ್ನು ಗಿರಗಿರ ಆಡಿಸುತ್ತಾ ಸತ್ಯಗಳು ಮರೆಯಾಗುತ್ತಿವೆ. ಎದ್ದರೂ ಬಿದ್ದರೂ ಎದ್ದೆದ್ದು ಓಡಿದರೂ ಮತ್ತೊಮ್ಮೆ ಆ ಜರಡಿಯೊಳಗೆ ನೂಕಿ ಬಿಗಿಹಿಡಿತದಲ್ಲಿ ಬಂಧಿಯಾಗಿಸುತ್ತಿದ್ದಾರೆ. ಅವರವರ ಸ್ವಾರ್ಥಕ್ಕಾಗಿ ಮನಮನಗಳ ನಡುವೆ ವಿಷ ಬೀಜವನ್ನು ಬಿತ್ತುತ್ತಲೇ ಇದ್ದಾರೆ. ಒಂದೇ ಬೆಂಚಿನಲ್ಲಿ ಕೂತವರ ನಡುವೆ, ಒಂದೇ ಬಯಲಿನಲ್ಲಿ ಆಡಿದವರ ಮಧ್ಯೆ, ಇಕ್ಕೆಲಗಳ ಮನೆಗಳ ಸುತ್ತ ಅವರದೇ ಮಾತುಗಳನ್ನು ಗಾಳಿಯಲ್ಲಿ ಹಾರಾಡಿಸುತ್ತಿದ್ದಾರೆ. ಬೆಂಕಿ ಬೆಂಕಿಯಾಗಿಯೇ ಹೊತ್ತಿ ಉರಿಯುತ್ತಿದೆ. ಮಂಜುಗಡ್ಡೆ ಕಲ್ಲಾಗಿಯೇ ನಿಂತಿದೆ. ಸುತ್ತಲು ಕರಿಮೋಡದ ಛಾಯೆ. ಸೇತುವೆ ಕಟ್ಟುವ ಬದಲು ಗೋಡೆಗಳನ್ನು ಕಟ್ಟುತ್ತಿದ್ದಾರೆ. ಗೋಡೆ ಆಳೆತ್ತರಕ್ಕೆ ಬೆಳೆದು ನಿಂತಿದೆ. ಇಂಟರ್ನೆಟ್, ಯೂಟ್ಯೂಬ್, ಫೇಸ್ಬುಕ್, ವಾಟ್ಸಾಪ್, ಪುಸ್ತಕ, ಸೀರೆ, ಪಂಚೆಯ ಮೇಲೆಲ್ಲಾ ಊಹಾಪೋಹಾ, ಸುಳ್ಳುಗಳದೇ ಸಾಮ್ರಾಜ್ಯ. ಸಣ್ಣಗೆ ನೋವೊಂದು ಹುಟ್ಟಿ, ಹೋದ ಕಡೆಯೆಲ್ಲ ಕಟ್ಟಿ ಬೆಳೆಯುತ್ತಲೇ ಹೋಗುತ್ತಿದೆ.

ಬಣ್ಣಬಣ್ಣದ ಮಾತುಗಳಿಗೆ, ಸುಳ್ಳು ಪೊಳ್ಳಾದ ಮರುಳು ವಾಗ್ದಾನಗಳಿಗೆ, ಸ್ವಾಭಿಮಾನ ಸೋಕಿಲ್ಲದ ಗದ್ದುಗೆಗೆ ಸಿಕ್ಕ ಸಿಕ್ಕವರನ್ನೆಲ್ಲ ಕಚ್ಚಿ ಎಳೆಯುತ್ತಿದ್ದಾರೆ. ಎಳೆ ಪಾದಗಳನ್ನು, ಹರೆಯದ ನಡಿಗೆಗಳನ್ನು ಇವರತ್ತ ಬೀಸಿ ಕರೆಯುತ್ತಿದ್ದಾರೆ. ಇವರೇ ಮುಸುಕೆಳೆದ ಚಿತ್ರಕ್ಕೆ ಇವರದ್ದೇ ಕ್ಲೈಮ್ಯಾಕ್ಸ್ ರಚಿಸಿ ಮೆಂಟಲ್ ಬ್ಲಾಕಿನ ಪರದೆಯ ಮೇಲೆ ಬಲವಂತದಿಂದ ಬಣ್ಣ ಹಚ್ಚುತ್ತಿದ್ದಾರೆ.  ಇನ್ನು ಈ ಮೈಂಡ್‌ ಬ್ಲಾಕ್ ಅರಿವನ್ನು ಸ್ಪರ್ಶಿಸಿದಾಗಲೆಲ್ಲ ಮನಃಶಾಸ್ತ್ರದ ಪಾಠ ನೆನಪಾಗುತ್ತಿದೆ.

ಬಲು ದೊಡ್ಡದಾದ ಬೃಹತ್ತಾದ ಅಕ್ವೇರಿಯಮ್. ಅದರ ತುಂಬಾ ಬಣ್ಣಬಣ್ಣದ ಮೀನುಗಳು. ತುಸುಕಪ್ಪು ಅರೋವನಾ, ಬ್ಲ್ಯಾಕ್ಮೋರ್, ಪ್ಲವರ್ ಹಾರ್ನ್, ಏಂಜೆಲ್ ಫಿಶ್, ಟೆಟ್ರಾಸ್ ಮೀನುಗಳೆಲ್ಲ ತುಂಬಿದ್ದ ಅಕ್ವೇರಿಯಮಿನಲ್ಲಿ ದೊಡ್ಡ ಗಾತ್ರದ ಮೀನುಗಳಿವೆ. ಗೋಲ್ಡನ್ ಫಿಶ್ ಗಳಂತಹ ಸಣ್ಣ ಮೀನುಗಳಿವೆ. ದೊಡ್ಡ ಮತ್ತು ಸಣ್ಣ ಮೀನುಗಳು ಜೊತೆಯಾಗದಂತೆ, ದೊಡ್ಡ ಮೀನುಗಳು ಸಣ್ಣ ಸಣ್ಣ ಮೀನುಗಳನ್ನು ನುಂಗದಂತೆ ತಡೆಯಾಗಿಸಲು ಅಕ್ವೇರಿಯಮಿನ ಮಧ್ಯಭಾಗದಲ್ಲಿ ದಪ್ಪ ಮತ್ತು ಅಗಲವಾದ ಗಾಜಿನ ಹಲಗೆಯನ್ನು ಅಳವಡಿಸಲಾಗಿದೆ. ನೀರೊಳಗಿನ ಗಾಜು ಕಣ್ಣಿಗೆ ಗೋಚರಿಸದೆ ಅತ್ತಿಂದಿತ್ತ ಓಡಾಡುತ್ತಿದ್ದ ಮೀನುಗಳು ಆ ಗಾಜಿಗೆ ತಾಗಿ ಅಲ್ಲೊಂದು ತಡೆಗೋಡೆಯ ಅರಿವನ್ನು ತಮ್ಮೊಳಗೆ ತುಂಬುತ್ತಾ ಅದರದೇ ಸೀಮಿತ ವಲಯದಲ್ಲಿ ಈಜಾಡುತ್ತಾ ಕಾಲ ಕಳೆಯುತ್ತಿದ್ದವು. ಕ್ರಮೇಣ ಅಕ್ವೇರಿಯಮಿನ ಒಳಗಿರುವ ಎಲ್ಲಾ ಮೀನುಗಳು ಆ ತಂತ್ರಕ್ಕೆ ಬಲಿಯಾಗಿ ಅದಕ್ಕಿಂತ ಆಚೆಗೆ ಚಿಂತಿಸಲಾರದಷ್ಟು ಮೈಂಡ್ ಬ್ಲಾಕಿಗೆ ಬದ್ಧರಾಗಿ ಬದುಕ ತೊಡಗಿದುವು. ಹಲವಾರು ತಿಂಗಳುಗಳ ಬಳಿಕ ಆ ಗಾಜಿನ ಹಲಗೆಯನ್ನು ಅಲ್ಲಿಂದ ಹೊರ ತೆಗೆದು ಯಾವುದೇ ಅಡ್ಡ ಪರದೆಗಳನ್ನು ಇಡದಿದ್ದರೂ ಈ ಮೀನುಗಳು ಮೊದಲಿನ ಅದೇ ಮೈಂಡ್ ಬ್ಲಾಕಿನಿಂದ ಹೊರ ಬರಲೇ ಇಲ್ಲ. ದೊಡ್ಡ ಮೀನುಗಳು ಮತ್ತು ಸಣ್ಣ ಮೀನುಗಳು ಜೊತೆಯಾಗಲೂ ಇಲ್ಲ.

ಅದೇ ರೀತಿ ಇಂದು ಕುತಂತ್ರ, ಷಡ್ಯಂತ್ರಗಳ ಅರಿವೇ ಇಲ್ಲದ ಜೀವಗಳು ಒಣಗಿದ ಮಾತುಗಳಿಗೆ, ಶುಷ್ಕ ಹೃದಯಗಳಿಗೆ, ಸ್ವಾರ್ಥದಾಳ್ವಿಕೆಗೆ ಬಲಿಯಾಗಿ ತಮ್ಮನ್ನು ತಾವೇ ಮೈಂಡ್ ಬ್ಲಾಕಿನಲ್ಲಿ ಮುಳುಗಿಸಿ ಜಗತ್ತನ್ನು ಕತ್ತಲಾಗಿಸಲು ಹೊರಟಿದ್ದಾರೆ. ಸೋಲುಂಡರೂ, ನೋವಾದರೂ, ಗಲಭೆಗಳು ಎದ್ದರೂ, ಮುಷ್ಕರಗಳು ಮುಗಿಲು ಮುಟ್ಟಿದರೂ, ಬಡ ಅಮಾಯಕ ಹೆಣಗಳು ಬಿದ್ದರೂ ಇವರಿನ್ನೂ ಅದರಿಂದ ಹೊರ ಬಂದಿಲ್ಲ.

ವಿಚಿತ್ರವೆಂದರೆ ಸತ್ಯವೆಂದು ತಿಳಿದಿದ್ದರೂ ಒಪ್ಪದವರು ಸುತ್ತಲಿದ್ದಾರೆ. ಅವರಾಡುವ ಮಾತುಗಳು ಅವರಿಗೇ ಅರ್ಥವಾಗುವುದಿಲ್ಲ. ಹಾಸ್ಯಾಸ್ಪದ, ಬಲಹೀನ ಮಾತುಗಳು ಹೆಚ್ಚು ಕಾಲ ನಿಲ್ಲಲಾರದೆಂದು ಗೊತ್ತಿದ್ದರೂ ಹಿಡಿದ ಹಟ ಬಿಡುತ್ತಲೂ ಇಲ್ಲ. ಇನ್ನು ಅರ್ಥವಾದರೂ ಮಾತಿನಲ್ಲಿ ಸೋಲಬಾರದೆಂದೋ ವಾಸ್ತವದ ಅರಿವಿನ ಕೊರತೆಯಿಂದಲೋ ಅಹಮ್ಮಿನಲ್ಲಿ ಮುಳುಗಿ ಪದಗಳನ್ನು ಸೀಳುತ್ತಿದ್ದಾರೆ. ಹಿಂದೆಂದೂ ಎದ್ದಿಲ್ಲದ ಗೋಡೆಯೊಂದು ಹಠಾತ್ತನೆ ಎದ್ದಿದೆ. ದ್ವೇಷವನ್ನು ಹೊದ್ದು ಎದ್ದ ಆ ಗೋಡೆಯನ್ನು ತುರ್ತಾಗಿ ಉರುಳಿಸಬೇಕಾಗಿದೆ. ಹೊತ್ತಿಕೊಂಡ ಬೆಂಕಿಯನ್ನು ನಂದಿಸಬೇಕಾಗಿದೆ. ಯಾವುದನ್ನು ನಂದಿಸಬೇಕು? ಎದ್ದ ಬೆಂಕಿಯ ಜ್ವಾಲೆಯನ್ನೇ? ಸಾವು ನೋವುಗಳಿಗೆ ದೂಡಿದ ಬರೆಗಳನ್ನೇ? ಒಡೆದ ಹೃದಯಗಳಲ್ಲಿ ಇನ್ನೂ ಬಾಕಿಯಾಗಿ ಉಳಿದಿದ್ದ ಧೂಳಿನ ಕಣಗಳನ್ನೇ? ನಂದಿಸಬೇಕಾಗಿರುವುದು ಬುಡವಿಲ್ಲದ ಹತ್ತು ಹಲವು ವಿಚಾರಗಳನ್ನೇ ?

ನೋವಿನ ಬೆಂಕಿಯಲ್ಲಿ ಬೇಯುತ್ತಲಿದ್ದು ನಿದಿರೆ ಮರೆಯಾದ ರಾತ್ರಿ ಪಾಳಿಯ ಕೆಲಸಗಳನ್ನು, ಕನಸು ಕಂಡ ಹಗಲುಗಳಲ್ಲಿ ಹಸಿವು, ಸಂಕಟ, ನಿರುದ್ಯೋಗದ ಬದುಕುಗಳನ್ನು, ಬಾಯಿ ತೆರೆದರೆ ಭಯಕ್ಕೆ ದೂಡುವರೆಂಬ ನಂಬುಗೆಗಳನ್ನು, ದನಿಯ ಕತ್ತರಿಸಿದ ನಾಲಗೆಗಳನ್ನು ಈಗ ಬಟಾಬಯಲಿಗೆಳೆದು ಮತ್ತೊಮ್ಮೆ ಮರುಜೀವ ನೀಡಬೇಕಾಗಿದೆ.

ಪ್ರೀತಿಗೆ ಪ್ರೀತಿ ಕೊಟ್ಟು, ದ್ವೇಷವನ್ನು ಕಿತ್ತೆಸೆದು, ನಿರ್ಲಕ್ಷ್ಯವನ್ನು ಅವಗಣಿಸಿ, ಸೌಹಾರ್ದತೆಯ ಬಣ್ಣಗಳಿಂದ ಸುಂದರ ಚಿತ್ರಕ್ಕೆ ಮಾನವತ್ವ ತುಂಬಬೇಕಾಗಿದೆ. ಭೂಮಿ ಸೃಷ್ಟಿಸಿದ ಅದ್ಭುತ ಪ್ರೀತಿಗೆ ಅಪ್ಪುಗೆಯ ತುಪ್ಪವನ್ನು ಸುರಿಯುತ್ತಾ ಕಳೆದು ಹೋದ ಸವಿನೆನಪುಗಳನ್ನು ಪಾಕ ಮಾಡಿ ಸವಿಯಬೇಕಾಗಿದೆ. ತಟಸ್ಥವಾದ ಹೃದಯಗಳನ್ನು, ಅಲ್ಲೇ ಸ್ತಂಭೀಭೂತವಾದ ಮನಸ್ಸುಗಳನ್ನು, ಆಕಾರ ಗುರುತಿಸಲಾಗದ ಕತ್ತಲೆಯನ್ನು ಸೀಳಿ, ಈ ಮಣ್ಣಿನ ಪ್ರೇಮವನ್ನು ಎದೆಎದೆಗಳಲ್ಲೂ, ಕಣಕಣಗಳಲ್ಲೂ ಬಿತ್ತಿ ಬೆಳೆಸಬೇಕಾಗಿದೆ. ನಿರೀಕ್ಷೆಯೆಂಬುದು ಬಹುಕಾಲ ನಿಲ್ಲದು. ಹತಾಶೆಯೆಂಬುದು ಕೊನೆಯವರೆಗೂ ಉಳಿಯದು. ಪ್ರೀತಿಸಬೇಕಾಗಿದ್ದ ಸಮಯದಲ್ಲಿ ಪ್ರೀತಿಸಬೇಕಾಗಿದೆ. ಜೊತೆಯಾಗ ಬೇಕಾಗಿದ್ದ ಗಳಿಗೆಯಲ್ಲಿ ಒಂದಾಗ ಬೇಕಾಗಿದೆ. ಬೇಕು ಅನಿಸಿದಾಗ ಸಿಗದಿದ್ದ ಸುಖ, ಸಂತೋಷ ಬೇಡವೆಂದಾಗ ಸಿಕ್ಕಿದರೆ ಪ್ರೇಮದ ಪರಾಕಾಷ್ಠೆಗೆ ತಲುಪಲು ಸಾಧ್ಯವಾಗದು. ಇನ್ನೂ ಕಾಲ ಮಿಂಚಿಲ್ಲ. ನಿರೀಕ್ಷೆ ಸತ್ತಿಲ್ಲ. ಆಸೆಗಳು ಕೊನೆಯಾಗಿಲ್ಲ.

ಹೃದಯ ಹೃದಯಗಳನ್ನು ಒಡೆಯಲೆತ್ನಿಸುತ್ತಿರುವ, ಈಗಲೂ ಮರೆಯಲ್ಲಿ ಅವಿತಿರುವ ಈ ‌ʼಮೈಂಡ್‌ ಬ್ಲಾಕ್‌ʼ ಎಂಬ ಪದವನ್ನು ಹಳೆ ನಿಘಂಟಿನಿಂದ ಬಹುಬೇಗನೆ ಕಿತ್ತೆಸೆದು ದೂರಕ್ಕೆಸೆಯಬೇಕಾಗಿದೆ.

ಸಿಹಾನ ಬಿಎಂ

ಉದಯೋನ್ಮುಖ ಲೇಖಕಿ, ಕವಯಿತ್ರಿ.