Soujanya murder case – Peepal Media

ಸಮೀರ್‌ ಎಂಡಿ ಮನೆಯನ್ನು ಸುತ್ತುವರಿದ ಪೊಲೀಸರು
ಬೆಂಗಳೂರು: ಯೂಟ್ಯೂಬರ್ ಸಮೀರ್ ಎಮ್ ಡಿ ಯ ಬೆಂಗಳೂರಿನ ಮನೆಯನ್ನು ಧರ್ಮಸ್ಥಳ ಪೊಲೀಸರು ಸುತ್ತುವರೆದಿದ್ದಾರೆ. ಸಮೀರ್‌ ಎಂ ಡಿ ಮಾಡಿದ ಸೌಜನ್ಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿ ವಿಡಿಯೋ ವೈರಲ್‌ ಆಗಿತ್ತು. ಈ ವಿಡಿಯೋ ಸಾಕಷ್ಟು ಚರ್ಚೆಗೆ ಘ್ರಾಸವಾಗಿತ್ತು. ಧರ್ಮಸ್ಥಳ ಮಂಜುನಾಥ ದೇವಾಲಯ ಮತ್ತು ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ವೀಡಿಯೋ ಮಾಡಿದ್ದಾರೆ ಎಂದು ಹೆಗ್ಗಡೆ ಪರ ಗುಂಪು ವಾದಿಸಿತ್ತು.

ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಸಂಬಂಧ ನೋಟಿಸ್‌ ನೀಡಿದರೂ ಠಾಣೆಗೆ ವಿಚಾರಣೆಗೆ ಹಾಜರಾಗದ ಇದ್ದರಿಂದ ವಾರೆಂಟ್ ಜೊತೆ ಧರ್ಮಸ್ಥಳ ಪೊಲೀಸ್ ಸಬ್ ಇನ್ಸೆಕ್ಟರ್ ಅನಂದ್.ಎಮ್ ನೇತೃತ್ವದ ತಂಡ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸಮೀರ್‌ ಅವರ ಬಾಡಿಗೆ ಮನೆಯನ್ನು ಆ.21 ರಂದು ಸುತ್ತುವರಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಸೌಜನ್ಯ ನ್ಯಾಯ ಹೋರಾಟಗಾರ ಗಿರೀಶ್ ಮಟ್ಟಣವರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಈಗಾಗಲೇ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಧರ್ಮಸ್ಥಳ: 6 ನೇ ಪಾಯಿಂಟ್‌ನಲ್ಲಿ ಕಳೇಬರದ ಅವಶೇಷಗಳು ಪತ್ತೆ!
ಬೆಳ್ತಂಗಡಿ, ಜು.31: ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಶವಸಂಸ್ಕಾರಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ನಡೆಸುತ್ತಿರುವ ಶೋಧಕಾರ್ಯದ ಮೂರನೇ ದಿನದಂದು ಸಾಕ್ಷಿ-ದೂರುದಾರ ತೋರಿಸಿದ ಆರನೇ ಪಾಯಿಂಟ್‌ನಲ್ಲಿ ಮೃತದೇಹದ ಅವಶೇಷಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ದೂರುದಾರ ಗುರುತಿಸಿರುವ ಈ ಆರನೇ ಪಾಯಿಂಟ್‌ ನೇತ್ರಾವತಿ ಸ್ನಾನ ಘಟ್ಟದ ಸಮೀಪದಲ್ಲಿದ್ದು ಉತ್ಖನನದ ವೇಳೆ ಕೆಲವು ಎಲುಬಿನ ಚೂರುಗಳು ಸಿಕ್ಕಿರುವ ಬಗ್ಗೆ ಮಾಹಿತಿಗಳು ಹೊರಬರುತ್ತಿವೆ. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಎಸ್‌ಐಟಿ ತಂಡ ಇಂದು ಬೆಳಗ್ಗೆ  11:30ರ ಸುಮಾರಿಗೆ ಈಗಾಗಲೇ ದೂರುದಾರ ತೋರಿಸಿರುವ 13 ಸ್ಥಳಗಳಲ್ಲಿ ನೇತ್ರಾವತಿ ನದಿಯ ತೀರದ 6ನೇ ಜಾಗದಲ್ಲಿ ಅಗೆಯುವ ಕಾರ್ಯಾಚರಣೆ ನಡೆಸಿದ್ದಾರೆ. ಮೊದಲೆರಡು ದಿನಗಳಲ್ಲಿ ಯಾವುದೇ ಅವಶೇಷಗಳು ಲಭ್ಯವಾಗಿರಲಿಲ್ಲ. ಮೂರನೇ ದಿನವಾದ ಇಂದು, ಗುರುವಾರ ಆರನೇ ಪಾಯಿಂಟ್‌ನಲ್ಲಿ ಮೂರು ಅಡಿ ಆಳದಲ್ಲಿ ಕಳೇಬರದ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಹೊರಬರುತ್ತಿದೆ. ಈ ಬಗ್ಗೆ ಎಸ್‌ಐಟಿ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.

ಎಸ್‌ಐಟಿ ತಂಡದ ಜೊತೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರಿನ ಕೆಎಂಸಿ ವೈದ್ಯರ ತಂಡ, ಎಫ್.ಎಸ್.ಎಲ್. ತಂಡ, ಐ.ಎಸ್.ಡಿ. ಹಾಗೂ ಇತರ ಅಧಿಕಾರಿಗಳು ಇದ್ದರು.

ಧರ್ಮಸ್ಥಳ ಮತ್ತು ಹೆಗ್ಗಡೆ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಜಾನ್ ಡೋ ಆದೇಶ ಜಾರಿ
ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು ಮತ್ತು ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಜಾನ್ ಡೋ (ಅಶೋಕಕುಮಾರ್ ಆದೇಶ) ಆದೇಶ ಹೊರಡಿಸಿದೆ.

ಈ ಸಂಬಂಧ ಹಿರಿಯ ನ್ಯಾಯವಾದಿ ಎಸ್. ರಾಜಶೇಖರ್ ಹಿಳಿಯಾರು ವಾದ ಮಂಡಿಸಿದ್ದು, ದಾವೆಯನ್ನು ವಿಚಾರಣೆ ನಡೆಸಿದ ಸಿಸಿಎಚ್‌–11ನೇ ನ್ಯಾಯಾಲಯ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಮಾಧ್ಯಮಗಳ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಹಾಗೂ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇತರ ಮಾಧ್ಯಮಗಳು ಮಾಡಿರುವ ಅವಹೇಳನಕಾರಿ ವರದಿಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಿದೆ

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಜಾನ್ ಡೋ ಆದೇಶದ ಅನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಡೆಸುತ್ತಿರುವಂತಹ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ ಆ್ಯಪ್‌, ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌, ಯೂಟ್ಯೂಬ್‌, ಟಿ.ವಿ.ಚಾನೆಲ್‌ ಹಾಗೂ ಇತರೆ ಯಾವುದೇ ರೀತಿಯ ಮಾಧ್ಯಮ ಪ್ರಕಾರಗಳಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ವರದಿ ಅಥವಾ ಮಾತನಾಡಬಾರದು ಎಂದು ನಿರ್ಬಂಧ ಹೇರಿದೆ.

ಜಾನ್ ಡೋ (john doe) ಆದೇಶ ಅಜ್ಞಾತ ಅಥವಾ ಪತ್ತೆಯಾಗದವರ ವಿರುದ್ಧ ಜಾರಿಯಾಗುವ ಕಾನೂನು ಕ್ರಮ ಇದಾಗಿದ್ದು, ಸಾಮಾಜಿಕ ಜಾಲತಾಣಗಳು ಮತ್ತು ಟಿವಿ ಮಾಧ್ಯಮಗಳ ಮೂಲಕ ನೀಡಲಾಗುತ್ತಿರುವ ಅವಹೇಳನಕಾರಿ ಹೇಳಿಕೆ ಮತ್ತು ಅಪಪ್ರಚಾರಕ್ಕೆ ಕಡಿವಾಣ ಹಾಕಲಿದೆ. ನ್ಯಾಯಾಲಯ ಹೊರಡಿಸಿರುವ ಈ ಆದೇಶವನ್ನು ಉಲ್ಲಂಘಿಸಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

Soujanya Case | ಸೌಜನ್ಯ ಅತ್ಯಾಚಾರ ಮತ್ತು ಕೊಲೆ: ಮರುತನಿಖೆಗೆ ನಿರ್ದೇಶನ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ
ಬೆಂಗಳೂರು: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.

ಸೋಮವಾರ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣದ ಮರುತನಿಖೆಗೆ ಆದೇಶಿಸುವಂತೆ ನ್ಯಾಯಾಲಯದಿಂದ ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನು ಕೋರಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮತ್ತು ನಂದೀಶ್‌ಕುಮಾರ್ ಜೈನ್ ಎಂಬುವರು ಮನವಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ಹೈಕೋರ್ಟ್ ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಿದೆ.

ಪ್ರಸಿದ್ಧ ಧರ್ಮಸ್ಥಳ ಮಂಜುನಾಥ ದೇವಸ್ಥಾನ ಮತ್ತು ನ್ಯಾಯಾಂಗದ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಅರ್ಜಿದಾರರು ಕೋರಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಅವರು ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಆಂದೋಲನ ಮತ್ತು ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಬಲ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧವೂ ಆರೋಪ ಮಾಡುತ್ತಿದ್ದಾರೆ.

ಅರ್ಜಿಯಲ್ಲಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

17 ವರ್ಷದ ಸೌಜನ್ಯಳನ್ನು ಅಕ್ಟೋಬರ್ 9, 2012ರಂದು ಧರ್ಮಸ್ಥಳ ಬಳಿಯ ಉಜಿರೆಯಲ್ಲಿರುವ ತನ್ನ ಮನೆಗೆ ಹೋಗುವಾಗ ಅಪಹರಿಸಲಾಗಿತ್ತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಓದುತ್ತಿದ್ದಳು. ಮರುದಿನ ಆಕೆಯ ಶವವು ನೇತ್ರಾವತಿ ನದಿಯ ಬಳಿ ಕಾಡಿನಲ್ಲಿ ಆಕೆಯ ಮನೆಯ ಸಮೀಪ ಪತ್ತೆಯಾಗಿದೆ. ಮೃತದೇಹ ಅರೆಬೆತ್ತಲೆಯಾಗಿ ಪತ್ತೆಯಾಗಿದೆ. ಅವಳ ಒಂದು ಕೈಯನ್ನು ಅವಳ ದುಪಟ್ಟಾ ಬಳಸಿ ಮರಕ್ಕೆ ಕಟ್ಟಲಾಗಿತ್ತು. ಆಕೆಯ ಜನನಾಂಗವು ಮಣ್ಣಾಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು.

ಈ ಕುರಿತು ಆರಂಭಗೊಂಡ ದೊಡ್ಡ ಮಟ್ಟದ ಸಾರ್ವಜನಿಕ ಪ್ರತಿಭಟನೆಯಲ್ಲಿ ಪ್ರದೇಶದ ಪ್ರಬಲ ಧಾರ್ಮಿಕ ಮುಖಂಡರೊಬ್ಬರ ಕುಟುಂಬ ಸದಸ್ಯರ ಕಡೆಗೆ ಬೆರಳುಗಳನ್ನು ತೋರಿಸಲಾಯಿತು. ಕೋಲಾಹಲದ ನಡುವೆ, ಪೊಲೀಸರು ಅಕ್ಟೋಬರ್ 11ರಂದು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿ ಈತನೇ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಂದಿದ್ದಾನೆ ಎಂದಿದ್ದರು.

ರಾಜಕೀಯ ಒತ್ತಡಕ್ಕೆ ಮಣಿದ ಪೊಲೀಸರು ಅಪರಾಧ ನಡೆದ ಸ್ಥಳವನ್ನಾಗಲಿ, ಮೃತದೇಹವನ್ನಾಗಲಿ ವಿಡಿಯೋ ಮಾಡುವ ಕುರಿತು ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ. ಅಪರಾಧ ನಡೆದ ಪ್ರದೇಶವನ್ನು ಪರಿಶೀಲನೆ ಮಾಡಲು ಯಾವುದೇ ತಜ್ಞರನ್ನು ಕರೆತರಲಾಗಿಲ್ಲ ಮತ್ತು ಮೃತ ದೇಹದಿಂದ ಯಾವುದೇ ಮಾದರಿಗಳನ್ನು ಸಂಗ್ರಹಿಸಲಾಗಿಲ್ಲ ಎಂದೂ ಆರೋಪಿಸಲಾಗಿತ್ತು.

ಧರ್ಮಸ್ಥಳ ಟ್ರಸ್ಟ್‌ನ ಅಕೌಂಟೆಂಟ್ ಮಲಿಕ್ ಜೈನ್, ಅನ್ನಪೂರ್ಣ ಟ್ರಸ್ಟ್‌ನ ಹಿರಿಯ ವ್ಯವಸ್ಥಾಪಕರ ಮಗ ಧೀರಜ್ ಮತ್ತು ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆಯರ ಸೋದರನ ಮಗ ನಿಶ್ಚಲ್ ಜೈನ್ ವಿರುದ್ಧ ಪ್ರತಿಭಟನಾಕಾರರು ಮತ್ತು ಸೌಜನ್ಯ ಅವರ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಘಟನೆ ನಡೆದಾಗ ನಿಶ್ಚಲ್ ಜೈನ್ ನ್ಯೂಯಾರ್ಕ್‌ನಲ್ಲಿದ್ದರು ಎಂದು ವೀರೇಂದ್ರ ಹೆಗ್ಗಡೆ ಹೇಳಿಕೊಂಡಿದ್ದಾರೆ. ಅಪರಾಧ ತನಿಖಾ ಇಲಾಖೆ (ಸಿಐಡಿ) ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಿದೆ.

ಆರೋಪಿಗಳ ಸಹಿತ ಮೂವರನ್ನು ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಸೌಜನ್ಯ ಅವರ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ್ದರೂ, ಉನ್ನತ ನ್ಯಾಯಾಲಯಗಳು ಅರ್ಜಿಯನ್ನು ಅನುಮತಿಸಲಿಲ್ಲ. ನಂತರ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಲಾಯಿತು.

ಜೂನ್ 16ರಂದು, ಸಿಬಿಐ ವಿಶೇಷ ನ್ಯಾಯಾಲಯವು ಬಂಧಿತ ಆರೋಪಿ ಸಂತೋಷ್ ರಾವ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು ಮತ್ತು ನ್ಯಾಯಾಲಯವು ಪ್ರಕರಣದ ತನಿಖೆ ನಡೆಸಿದವರ ವಿರುದ್ಧ ತನಿಖೆಗೆ ಆದೇಶಿಸಿತು ಮತ್ತು ತನಿಖೆಯ ಸಮಯದಲ್ಲಿ ನಿರ್ಣಾಯಕ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಡೆಗೆ ಚೂರು ಗಮನ ನೀಡಲಾಗಿಲ್ಲ ಎಂದಿತ್ತು. ಈ ತೀರ್ಪು ಸಾರ್ವಜನಿಕರಲ್ಲಿ ಕಳವಳಗಳನ್ನು ಮೂಡಿಸಿದೆ.

ಸೌಜನ್ಯಾ ಬಸ್‌ನಿಂದ ಇಳಿದು ಮನೆಯತ್ತ ನಡೆದುಕೊಂಡು ಹೋಗುತ್ತಿದ್ದುದನ್ನು ಕಂಡ ಭದ್ರತಾ ಸಿಬ್ಬಂದಿ ರವಿ ಪೂಜಾರಿ ಎಂಬುವರು ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದೂ ಶಂಕೆಗೆ ಕಾರಣವಾಗಿದೆ. ಇದು ಆತ್ಮಹತ್ಯೆ ಎಂದು ತೀರ್ಮಾನಿಸಲಾಗಿದ್ದರೂ, ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಸಂತೋಷ್ ರಾವ್ ಅವರನ್ನು ಏಕೈಕ ಆರೋಪಿ ಎಂದು ಉಲ್ಲೇಖಿಸಲಾಗಿದೆ.

ಈ ವಿಚಾರ ಈಗ ಕರ್ನಾಟಕದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯಸಭಾ ಬಿಜೆಪಿ ಸಂಸದ ವೀರೇಂದ್ರ ಹೆಗ್ಗಡೆ ಪ್ರಕರಣವನ್ನು ಮುಚ್ಚಿ ಹಾಕಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಣದ ಕೈಗಳು ಅಭಿವೃದ್ಧಿಯಲ್ಲಿ ದೈತ್ಯ ಹೆಜ್ಜೆ ಇಡುತ್ತಿರುವ ಹಿಂದೂ ಯಾತ್ರಾಸ್ಥಳವಾದ ಧರ್ಮಸ್ಥಳಕ್ಕೆ ಅಪಖ್ಯಾತಿ ತರಲು ಮತ್ತು ಮಾನಹಾನಿ ಎಸಗಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.

“ಸೌಜನ್ಯಳ ಪ್ರಕರಣ ಮುಗಿದ ಅಧ್ಯಾಯವಲ್ಲ. ಮುಚ್ಚಲ್ಪಟ್ಟದ್ದು ಮತ್ತೆ ಆರಂಭವಾಗಿದೆ”
ಅಪಹರಣ ಹಾಗೂ ಅತ್ಯಾಚಾರಕ್ಕೊಳಗಾಗಿ ಕೊಲೆಗೈಯ್ಯಲ್ಪಟ್ಟ ಹದಿನಾರರ ಬಾಲೆ ಸೌಜನ್ಯಳ ಚೈತನ್ಯವು ಕರುನಾಡಿನ ಹಾಗೂ ತುಳುನಾಡಿನ ಜನರ ತಾಯ್ತನ ಹಾಗೂ ನಾಗರಿಕ ಪ್ರಜ್ಞೆಯನ್ನು ಬಡಿದೆಬ್ಬಿಸಿ, ಎಲ್ಲಾ ಮಾನವ ಮಿತಿಗಳನ್ನು ದಾಟಿ , ಹಳ್ಳ ಕೊಳ್ಳಗಳ ನಡುವೆ ಓಡುತ್ತಾ , ಧುಮು ಧುಮುಕಿ ಹರಿದು, ಹೋರಾಟದ ಸಾಗರದಲ್ಲಿ ಮಿಲನಗೊಂಡು ರೂಪ ಕಳೆದುಕೊಳ್ಳುತ್ತಿರುವ ಹಲವು ನದಿಗಳ ಆವೇಗವಾಗಿ, ಆ ಸಾಗರದ ಅಲೆಗಳ ಮೇಲೆ ಏರುಜವ್ವನೆಯಾಗಿ ನರ್ತಿಸುತ್ತಾ ಭೋರ್ಗರೆದು ಅಪ್ಪಳಿಸುತ್ತಿರುವುದನ್ನು ನೋಡಿ ಅನುಭವಿಸಿದವರಾರೂ “ಆಕೆ ಕಳೆದು ಹೋಗಿದ್ದಾಳೆ” ಎನ್ನುವ ಅವಿವೇಕದ ಜಾಣತನವನ್ನು ಪ್ರದರ್ಶಿಸಲೆತ್ನಿಸಲಾರಾರು.

ಪ್ರಜಾಸತ್ತೆಯಲ್ಲಿ ಸೇವಕರಾಗಿ ಆಯ್ಕೆಯಾದವರು ಎಚ್ಚರಿಕೆಯಿಂದ ಮಾತುಗಳನ್ನಾಡಬೇಕಾಗಿದೆ. ನಿಮ್ಮ ಮಾತುಗಳನ್ನು ಈ ನೆಲದ ಜನ ಸೂಕ್ಷ್ಮವಾಗಿ ಗಮನಿಸಿ ಗಂಭೀರವಾಗಿ ಪರಿಗಣಿಸಲಿದ್ದಾರೆ. ಸೌಜನ್ಯ ಈಗಾಗಲೇ ಈ ನೆಲದ ಮಗಳಾಗಿ ಹೋಗಿದ್ದಾಳೆ. ಆ ಎಳೆ ಬಾಳೆಯ ಸುಳಿಯ ಮೇಲೆ ಬಿರುಗಾಳಿಯಂತೆ ಎರಗಿ ಭಕ್ಷಿಸಿದವರನ್ನು ರಕ್ಷಿಸಿ, ನ್ಯಾಯ ದೇವತೆಯನ್ನು ಹೂತು ಮಣ್ಣು ಮಾಡಿದ ಅಧಿಕಾರಿಗಳು ನಿಮ್ಮ ಇಲಾಖೆಯಲ್ಲೇ ಇನ್ನೂ ಸೇವೆಯಲ್ಲಿರುವುದನ್ನು ಮರೆಯದಿರಿ. ಒಬ್ಬ ಬಡ ಬ್ರಾಹ್ಮಣ ಮೇಷ್ಟ್ರ ಮಗನನ್ನು ಈ ಪ್ರಕರಣದಲ್ಲಿ ನೇಣುಗಂಬದವರೆಗೆ ತಂದು ನಿಲ್ಲಿಸಿದ ಕ್ರೂರಿಗಳು ಇನ್ನೂ ಉಸಿರಾಡುತ್ತಿದ್ದಾರೆ. ಯಾವತ್ತು ಮಾನ್ಯ ನ್ಯಾಯಾಲಯ ಸಂತೋಷ್ ರಾವ್ ಗೂ ಈ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತೀರ್ಪು ನೀಡಿತೋ ಅಂದೇ ಸೌಜನ್ಯಳ ಪ್ರಕರಣ ಮರು ಹುಟ್ಟು ಪಡೆದಿದೆ. ಸಂತೋಷ್ ರಾವ್ ನ ಮೇಲಾದ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ರಾಜ್ಯ ಮಾನವ ಹಕ್ಕುಗಳ ಆಯೋಗವು ಗಂಭೀರವಾಗಿ ಪರಿಗಣಿಸಿ, ದೂರನ್ನು ದಾಖಲಿಸಿಕೊಂಡಿದೆ ಎಂಬುದು ನಿಮ್ಮ ಗಮನದಲ್ಲಿರಲಿ. ಸೌಜನ್ಯಳ ಪ್ರಕರಣಕ್ಕೆ ಪ್ರಾಣವಾಯು ತುಂಬುವ ಕಾರ್ಯ ಗೃಹ ಇಲಾಖೆಯಲ್ಲಿರುವ ತಮ್ಮಂತಹ ವೈದ್ಯರಿಂದ ತುರ್ತಾಗಿ ಆಗಬೇಕಿದೆ. ಈ ಚದುರಂಗವನ್ನು ಗೆಲ್ಲಲು ಇನ್ನೂ ಕೆಲವು ವಿಫುಲ ಅವಕಾಶಗಳು ಸರ್ಕಾರಕ್ಕಿದೆ. ದಕ್ಷ ಕಮಿಷನರೇಟ್ ರಚಿಸಿ, ವರದಿ ಕೇಳಿ ಪಡೆಯಿರಿ. ಅದರ ಆಧಾರದ ಮೇಲೆ ಮರು ತನಿಖೆ ಸೇರಿದಂತೆ ಇನ್ನಿನ್ಯಾವ ಕಾನೂನಿನ ಹೆಜ್ಜೆಗಳನ್ನು ಇರಿಸಬೇಕೋ ಯೋಚಿಸಿ. ಇದಕ್ಕೆ ಬೇಕಿರುವುದು ತಜ್ಞರ ಕಾನೂನು ಸಲಹೆ, ಒಂದು ದಕ್ಷ ತನಿಖಾ ತಂಡ ಹಾಗೂ ನಿಮ್ಮ ರಾಜಕೀಯ ಇಚ್ಛಾಶಕ್ತಿಯ ಪ್ರಯೋಗ! ಸರ್ಕಾರದ ಸಂಬಳ ತಿಂದು , ಪ್ರಕರಣಕ್ಕೆ ಗೋರಿ ಕಟ್ಟಿ, ಅಮಾಯಕರನ್ನು ಸೆರೆಮನೆಗೆ ತಳ್ಳಿ, ನಿಜವಾದ ಪಾತಕಿಗಳನ್ನು ರಕ್ಷಿಸಿದ ವೈದ್ಯರು ಹಾಗೂ ಪೊಲೀಸ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಮಾನ್ಯ ಸಿಬಿಐ ನ್ಯಾಯಾಲಯ ಹೇಳಿರುವಾಗ ಹೇಗೆ ಅದು ಮುಗಿದ ಅದ್ಯಾಯವಾಗುತ್ತೆ ಹೇಳಿ? ನಿಜವಾದ ಪಾಪಿಗಳನ್ನು ಪತ್ತೆ ಹಚ್ಚಿ ಕುಣಿಕೆಯನ್ನೂ ಬಿಗಿಗೊಳಿಸಬೇಕಾದ ನೀವು ಈ ಮಾತನ್ನು ಆಡಿದಲ್ಲಿ ಬೇರೆ ಅರ್ಥವನ್ನು ನೀಡೀತು ಜೋಪಾನ! ಆ ಪಾಪಿಗಳ ಹೇಸಿಗೆಯು ಇಲಾಖೆಯ ಹೊಸ ಮೇಟಿಯಾಗಿರುವ ನಿಮ್ಮ ಮೆಟ್ಟುಗಳಿಗೆ ಅಂಟಿಕೊಂಡಿದೆ. ತೊಳೆಯಲಂಜಿದಲ್ಲಿ ನಿಮ್ಮ ಗೌರವಕ್ಕೇ ಚ್ಯುತಿಯಾದೀತು. ನೀವು ಸುಲಭವಾಗಿ ನುಡಿದಂತೆ ಸೌಜನ್ಯಳಿಗೆ ನ್ಯಾಯ ದೊರಕಿಸುವ ಹೋರಾಟ ಮುಗಿದ ಅಧ್ಯಾಯವಲ್ಲ. ಆರಂಭವಷ್ಟೇ. ನಿಮ್ಮ ನಡೆ ಹಾಗೂ ನುಡಿಯಲ್ಲಿ ಕಾನೂನಿನ ಜ್ಞಾನ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾಣದಿರಲಿ.

“ಸೌಜನ್ಯಳಿಗಾಗಿ ನ್ಯಾಯ” ಎಂಬುದು 11 ವರ್ಷಗಳ ಬಳಿಕ ಭ್ರಷ್ಟರು ಕಟ್ಟಿದ ಗೋರಿಯ ಎದೆಯ ಸೀಳಿ ಹೊರಬಂದು ಮೊಳಗಿದ ನೊಂದವರ ಕೂಗು. ಹೋರಾಟ ಕವಿ ಸಿದ್ದಲಿಂಗಯ್ಯ ಹೇಳಿದ್ದನ್ನು ನೀವಿನ್ನೂ ಮರೆತಿರಲಾರಿರಿ ಎಂದು ಅಂದುಕೊಂಡಿದ್ದೆನೆ.

ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು
ಕಪ್ಪು ಮುಖ, ಬೆಳ್ಳಿ ಗಡ್ಡ, ಉರಿಯುತ್ತಿರುವ ಕಣ್ಣುಗಳು! ಹಗಲು ರಾತ್ರಿಗಳನ್ನು ಸೀಳಿ ನಿದ್ದೆಯನ್ನು ಒದ್ದರು. ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ. ಭೂಕಂಪನವಾಯಿತು ಅವರು ಕುಣಿವ ಹುಚ್ಚಿಗೆ. ಬೀದಿಯಲ್ಲಿ ಗಲ್ಲಿಯಲ್ಲಿ ಬೇಲಿ ಮರೆಯ ಮೆಳೆಗಳಲ್ಲಿ , ಯಜಮಾನನ ಅಟ್ಟದಲ್ಲಿ, ಧಣಿ ಕೂರುವ ಪಟ್ಟದಲ್ಲಿ ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು”

ಮೊನ್ನೆ ದಿನ ಸುಳ್ಯದಲ್ಲಿ ಕಪ್ಪು ಸಾಗರವೇ ನಿಂತಿತ್ತು. ನನ್ನ ಸ್ನೇಹಿತರೂ, ಪ್ರೀತಿಯ ಗುರುಗಳಾದ “ಜನ್ನಿ”ಯ ನೋವಿನ ಕೂಗಿನಂತಿದ್ದ ಹಾಡುಗಳು ನನ್ನ ಹಾಗೂ ಅಲ್ಲಿಯ ಜನಗಳ ಎದೆಯ ಬಡಿತ ಹೆಚ್ಚಿಸುತಲಿತ್ತು. ಎಲ್ಲಾ ಜಾತಿ, ಮತ ಪಂಥಗಳ ಆ ಜನ ಸಾಗರದಲ್ಲಿ ನೈಜವಾದ ಮನುಜ ಧರ್ಮವೊಂದು ಸೌಜನ್ಯಳಿಗಾಗಿ ಸಮರವನ್ನು ಸಾರಿತ್ತು. ಈ ನೆರೆ ಬಂದ ಹೊಳೆಯು ನಿಜವಾದ ಧಾರ್ಮಿಕರು, ದಲಿತ, ಮಹಿಳಾಪರ, ಜನಪರ, ಪ್ರಗತಿಪರ, ಹಾಗೂ ಸಜ್ಜನರಿಂದ ಕೂಡಿದೆ. ಡೊಂಗಿಗಳೂ ಕೂಡಾ ಇಲ್ಲಿ ಬೆತ್ತಲಾಗುತ್ತಿದ್ದಾರೆ. ಇಲ್ಲಿ ರಾಜ್ಯದ ಸಕಲ ಜನರೂ ಸೌಜನ್ಯಗಳಿಗಾಗಿ ನ್ಯಾಯವನ್ನು ಅಪೇಕ್ಷಿಸುತ್ತಿದ್ದಾರೆ. ಆರೋಪ ಹೊತ್ತವರು ಹಾಗೂ ಆರೋಪಿಗಳ ಪಡೆಯವರು ಮಾತ್ರ ಈ ಹೋರಾಟವನ್ನು ವಿರೋಧಿಸುತ್ತಿದ್ದಾರೆ. ಇದೊಂದು ದುರ್ಜನ – ಸಜ್ಜನರ ಸಂಗ್ರಾಮವೂ ಹೌದು! ಇಂತಹದೊಂದು ಚಳುವಳಿ ಕರುನಾಡಿನಲ್ಲಿ ಜೀವ ತಳೆದಿರುವುದ್ದಕ್ಕೆ ನಿಮಗೂ ಹೆಮ್ಮೆ ಇರಲಿ.

ಆದ್ದರಿಂದ ಈ ಬರಹವನ್ನು ಜನಸಾಮಾನ್ಯನ ಅರಿಕೆ ಎಂದೇ ತಿಳಿಯಿರಿ. ನಿಮ್ಮಗಳ ಮೇಲೆ ಜನಸಾಮಾನ್ಯ ಇಟ್ಟಿರುವ ನಂಬಿಕೆಯನ್ನು ದಯಮಾಡಿ ಹುಸಿ ಮಾಡದಿರಿ. ಇದು ರಾಜಕಾರಣದ ದಾಳವಲ್ಲ. ಕರುನಾಡಿನ ಹೆಣ್ಣು ಮಕ್ಕಳ ಮಾನ ಹಾಗೂ ಪ್ರಾಣದ ವಿಚಾರ. ಸೂತಕದ ಮನೆಯಲ್ಲಿ ನೀವಾಡುವ ಮಾತುಗಳು ನ್ಯಾಯ ಸಮ್ಮತವಾಗಿರಲಿ. ಸಾಂತ್ವನ ನೀಡಿ ಹೆತ್ತ ಒಡಲ ಉರಿಯನ್ನು ಆರಿಸುವಂತಿರಲಿ ಮತ್ತು ವಿವೇಕ ಹಾಗೂ ವಿವೇಚನೆಯ ದ್ಯೋತಕವಾಗಿರಲಿ.

ಬರಹ : ಒಡನಾಡಿ ಸ್ಟ್ಯಾನ್ಲಿ

ಸೌಜನ್ಯ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ : ಪ್ರಮೋದ್ ಮುತಾಲಿಕ್
ಪ್ರಕರಣದ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪ್ರಮೋದ್ ಮುತಾಲಿಕ್

ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು, ಮೇಲ್ನೋಟಕ್ಕೇ ತನಿಖೆಯಲ್ಲಿ ಲೋಪ ಮತ್ತು ವ್ಯವಸ್ಥಿತ ಪಿತೂರಿ ಕಂಡುಬರುತ್ತಿದೆ. ಆ ಮೂಲಕ ಈ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಯತ್ನಗಳು ಈವರೆಗೆ ಸಾಕಷ್ಟು ನಡೆದಿವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 40,000 ಮಹಿಳೆಯರು ಕಾಣೆಯಾಗಿದ್ದು 45,000 ಅಪ್ರಾಪ್ತರು ಗರ್ಭಿಣಿಯಾಗಿದ್ದಾರೆ. ಇದೊಂದು ಭಯಾನಕ ಸ್ಥಿತಿಯಾಗಿದ್ದು ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸೂಕ್ತ ತನಿಖೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್ “ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಒಂದರಲ್ಲೇ ಕಳೆದ 11 ವರ್ಷಗಳಲ್ಲಿ 434 ಮಹಿಳೆಯರು ಕಾಣೆಯಾಗಿದ್ದು ಸುಮಾರು 452 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕೃತ್ಯಗಳ ಬಗ್ಗೆ ಲಘುವಾಗಿ ಪರಿಗಣಿಸುವುದು ಯಾವುದೇ ಪಕ್ಷದ ಸರ್ಕಾರಕ್ಕೂ ಒಳ್ಳೆಯದಲ್ಲ” ಎಂದಿದ್ದಾರೆ.

ಸೌಜನ್ಯ ಪ್ರಕರಣದಲ್ಲಿ 11 ವರ್ಷ ಜೈಲು ಶಿಕ್ಷೆ ಅನುಭವಿಸಿದ ಸಂತೋಷ್ ರಾವ್ ನಿರಪರಾಧಿ ಎಂದು ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಸೌಜನ್ಯ ಪ್ರಕರಣದಲ್ಲಿ ಅಮಾಯಕ ಸಂತೋಷ್ ನನ್ನು ಅರೆಸ್ಟ್ ಮಾಡಿ, ನಂತರ ಬಿಡುಗಡೆ ಮಾಡಿದ್ದಾರೆ. ನಿರ್ಲಜ್ಜ ಪೊಲೀಸ್ ವ್ಯವಸ್ಥೆ ಇದಕ್ಕೆ ಕಾರಣ. ಪೊಲೀಸರ ಭ್ರಷ್ಟಾಚಾರಕ್ಕೆ ಸಂತೋಷ್‌ ರಾವ್ ಬಲಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಸೌಜನ್ಯ ಪ್ರಕರಣ ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದ ಅವರು, ಈ ಪ್ರಕರಣದಲ್ಲಿ ರಾಜಕಾರಣಿಗಳು, ಪೊಲೀಸರು ಪಾಪಿಷ್ಠರು. ಈ ಎಲ್ಲ ವ್ಯವಸ್ಥೆಗೆ ಪೊಲೀಸರು ಹಾಗೂ ಸರ್ಕಾರವೇ ಕಾರಣ. ಪೊಲೀಸರ ಮನೆ ಹೆಣ್ಣು ಮಕ್ಕಳ ಮೇಲೆ ಏನಾದರೂ ಆದರೆ ಸುಮ್ಮನೆ ಇರ್ತಿರಾ ಎಂದು ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ.

ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ: ವಿಶೇಷ ತನಿಖಾ ತಂಡ(SIT) ರಚನೆಗೆ ‘ನೈಜ ಹೋರಾಟಗಾರರ ವೇದಿಕೆ’‌ ವತಿಯಿಂದ ಗೃಹ ಸಚಿವರಿಗೆ ಮನವಿ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದ ಕುಮಾರಿ ಸೌಜನ್ಯ ಹತ್ಯೆಯ ವಿಚಾರಣೆಗೆ ವಿಶೇಷ ತನಿಖಾ ತಂಡ(SIT) ರಚಿಸ ಬೇಕೆಂದು ಆಗ್ರಹಿಸಿ ‘ನೈಜ ಹೋರಾಟಗಾರರ ವೇದಿಕೆ’ ಗೃಹ ಸಚಿವ ಡಾ ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದೆ.

ಈ ಪ್ರಕರಣದಲ್ಲಿ ಆರೋಪಿಯೆಂದು ಬಂಧಿಸಲ್ಪಟ್ಟಿದ್ದ ಸಂತೋಷ ರಾವ್ ನಿರ್ದೋಷಿ ಎಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದ್ದು, ಈಗ ನಿಜವಾದ ಆರೋಪಿ ಯಾರೆನ್ನುವ ಪ್ರಶ್ನೆ ಮತ್ತೆ ಎದುರಾಗಿದೆ. ಹೀಗಿರುವಾಗ ? ಈ ಪ್ರಕರಣದ ಮರುತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

“ಸೌಜನ್ಯಾಳ ಮೇಲೆ ಅತ್ಯಾಚಾರ ಆಗಿ ಹತ್ಯೆ ಆಗಿರುವುದಂತೂ ಸತ್ಯ. ಸ್ಥಳೀಯ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಒಡಿ ತಂಡದವರು ಪ್ರಾಥಮಿಕ ಹಂತದಲ್ಲಿಯೇ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಹಾಗೂ ಮುಂದೆ ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ ಕೂಡ ಸಮಗ್ರವಾದ ತನಿಖೆ ನಡೆಸಿಲ್ಲ ಹಾಗೂ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುವಡಿಸಲಿಲ್ಲವೆಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕರ್ನಾಟಕ ರಾಜ್ಯದ ಪೊಲೀಸರು ಯಾವುದೇ ಪ್ರಕರಣಗಳನ್ನು ಅತ್ಯಂತ ಚಾಣಾಕ್ಷತನದಿಂದ ತನಿಖೆ ನಡೆಸಿ ಆರೋಪಿಗಳು ಎಲ್ಲಿ ಅಡಗಿದ್ದರೂ ಅವನನ್ನು ಹೊರಗೆ ತಂದು ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆನ್ನುವುದು ನಮ್ಮೆಲ್ಲರ ನಂಬಿಕೆ. ಆದರೆ, ಈ ಪ್ರಕರಣದಲ್ಲಿ ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಬಗ್ಗೆ ನಮಗೆಲ್ಲ ಸಂಶಯವಿದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮುಂದುವರೆದು ಮನವಿಯಲ್ಲಿ, “ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ಪ್ರಾಥಮಿಕ ಹಂತದಲ್ಲಿಯೇ ಪ್ರಕರಣವನ್ನು ಭೇದಿಸಲು ವಿಫಲರಾಗಿದ್ದಾರೆ. ಈ ಪ್ರಕರಣದ ಹಿಂದೆ ಕಾಣದ ಕೈಗಳು ಹೇಗೆ ಕೆಲಸ ಮಾಡಿರಬಹುದು. ಅಮಾಯಕ ಸಂತೋಷ್ ಅವರ ಜೀವನದಲ್ಲಿ ಅಸಂತೋಷ ಮೂಡಿಸಿ ಅವನ ಜೀವನಕ್ಕೆ ಕಲ್ಲು ಹಾಕಿದವರು ಯಾರು? ಇಂತಹ ಹಲವಾರು ಪ್ರಶ್ನೆಗಳು ಸಾರ್ವಜನಿಕರಲ್ಲಿ ಉತ್ತರ ಸಿಗದಿರುವುದು ವಿಪರ್ಯಾಸ” ಎಂದು ಹೇಳಲಾಗಿದೆ.

ʼಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಡಾ ಜಿ. ಪರಮೇಶ್ವರ್ ಅವರು ಈ ಕುರಿತು ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆʼ ಎಂದು ನೈಜ ಹೋರಾಟಗಾರರ ವೇದಿಕೆಯ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ಎಂ ವೆಂಕಟೇಶ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಗೃಹ ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಎಲ್‌ ಎಸ್ ಮಲ್ಲಿಕಾರ್ಜುನ್ ಮತ್ತು ಶ್ರೀಮತಿ ಜಯಲಕ್ಷ್ಮಿ ಉಪಸ್ಥಿತರಿದ್ದರು.

ಸೌಜನ್ಯ ಹತ್ಯೆ ಪ್ರಕರಣದ ಆರೋಪಿ ಖುಲಾಸೆ : ಸಿಬಿಐ ಮರು ತನಿಖೆಗೆ ಕುಟುಂಬಸ್ಥರ ಒತ್ತಾಯ
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಏಕೈಕ ಆರೋಪಿಯನ್ನೂ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದ ಒಂದು ದಿನದ ನಂತರ, ಇಂತಹ ಅಪರಾಧದ ಹಿಂದಿರುವ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಲು ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಂತ್ರಸ್ತೆಯ ಕುಟುಂಬ ಒತ್ತಾಯಿಸಿದೆ.

2012ರಲ್ಲಿ ಧರ್ಮಸ್ಥಳದ ನಿರ್ಜನ ಸ್ಥಳದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸೌಜನ್ಯಳನ್ನು ಕತ್ತು ಹಿಸುಕಿ ಶಾಲಿನಿಂದ ಕೈ ಕಟ್ಟಿ ಅಮಾನುಷವಾಗಿ ಅತ್ಯಾಚಾರ ಎಸಗಲಾಗಿತ್ತು. ನಂತರ ಆಕೆಯನ್ನು ಹತ್ಯೆ ಮಾಡಲಾಗಿತ್ತು. ಘಟನೆ ಬಳಿಕ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಸಂತೋಷ್ ರಾವ್​ನನ್ನು ಬಂಧಿಸಿದ್ದರು. ಮಾನಸಿಕ ಸ್ಥಿಮಿತ ಕಳೆದುಕೊಂಡು ಕೃತ್ಯ ನಡೆಸಿದ್ದ ಎನ್ನಲಾಗಿತ್ತು. ಆ ನಂತರ ಆರೋಪಿಯು ಜಾಮೀನುನಲ್ಲಿ ಬಿಡುಗಡೆಗೊಂಡಿದ್ದ. ಹಲವು ಹೋರಾಟದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಇದೀಗ 11 ವರ್ಷಗಳ ನಂತರ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದು ಹೇಳಿದೆ.

ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಸೌಜನ್ಯ ತಾಯಿ ಕುಸುಮಾವತಿ ಪ್ರತಿಕ್ರಿಯಿಸಿದ್ದು “ನ್ಯಾಯಾಲಯದ ತೀರ್ಪಿನಿಂದ ನಮಗೆ ಕೊಂಚ ಮಟ್ಟಿಗೆ ಸಮಾಧಾನವಿದೆ. ನಿಜವಾದ ಅಪರಾಧಿ ಸಂತೋಷ್ ರಾವ್ ಅಲ್ಲ ಎಂಬುದನ್ನು ನಾವು ಕಳೆದ 11 ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. ಅವನು ಅತ್ಯಾಚಾರಿ ಅಥವಾ ಕೊಲೆಗಾರನೂ ಅಲ್ಲ. ಈ ಮೂಲಕ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಹೊರಹಾಕಿದೆ. ಆದರೆ ನಿಜವಾದ ಅಪರಾಧಿ ಯಾರು ಎಂಬುದನ್ನು ಸಿಬಿಐ ಮರು ತನಿಖೆ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.

“ಈಗಾಗಲೇ ನಾವು ಶಂಕಿತರ ನಾಲ್ಕು ಹೆಸರುಗಳನ್ನು ನೀಡಿದ್ದೇವೆ. ಅವರನ್ನು ವಿಚಾರಣೆಗೆ ಒಳಪಡಿಸಬೇಕು. ನನ್ನ ಮಗಳ ನಿಜವಾದ ಕೊಲೆಗಾರರು ಯಾರೆಂದು ತಿಳಿಯಲು ನಾವು ಬಯಸುತ್ತೇವೆ. ನನ್ನ ಮಗಳ ಹತ್ಯೆಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಮೃತ ಸೌಜನ್ಯ ತಾಯಿ ಕುಸುಮಾವತಿ ಪ್ರತಿಕ್ರಿಯಿಸಿದ್ದಾರೆ.

“ನನ್ನ ಮಗಳು ಸೌಜನ್ಯ ಕಾಲೇಜು ಮುಗಿಸಿ ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ರಾತ್ರಿ 2 ಗಂಟೆಯವರೆಗೂ ಹಡುಕಾಟ ನಡೆಸಿದ್ದೆವು. ಸುಮಾರು 2,000 ಜನರು ಹುಡುಕಾಟದಲ್ಲಿ ಜೊತೆಯಾಗಿದ್ದರು. ಒಂದು ದಿನದ ನಂತರ ಆಕೆಯ ಶವ ಪತ್ತೆಯಾಯಿತು. ಕೊಲೆಗೂ ಮುನ್ನ ದುಷ್ಕರ್ಮಿಗಳು ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ ಎಂಬುದನ್ನು ಮೇಲ್ನೋಟಕ್ಕೆ ಗಮನಿಸಿದವರೂ ಹೇಳುತ್ತಾರೆ. ನನಗೆ ನನ್ನ ಕಣ್ಣುಗಳಿಂದ ಮಗಳನ್ನು ಆ ಸ್ಥಿತಿಯಲ್ಲಿ ನೋಡಲು ಮನಸ್ಸಾಗಿಲ್ಲ” ಎಂದರು. ಹಾಗೆಯೇ “ಶುರುವಿನ ದಿನಗಳಲ್ಲಿ ತನಿಖಾಧಿಕಾರಿಗಳ ಕಡೆಯಿಂದಲೇ ಸಾಕ್ಷ್ಯ ನಾಶವಾಗಿತ್ತು. ಅವಳು ಸತ್ತ ದಿನ, ಮಳೆ ಬೀಳುತ್ತಿತ್ತು ಮತ್ತು ಅವಳ ದೇಹ ಮತ್ತು ಬಟ್ಟೆ ನೀರಿನಲ್ಲಿ ನೆನೆಸಿರಬಹುದು. ಆದರೆ ಅದರ ಯಾವುದೇ ಕುರುಹು ಅವಳ ದೇಹದ ಮೇಲೆ ಅಥವಾ ಆ ಜಾಗದಲ್ಲಿ ಇರದಂತೆ ತನಿಖಾಧಿಕಾರಿಗಳು ಮಾಡಿದ್ದರು.”

“ಅಷ್ಟೆ ಅಲ್ಲದೆ ನಮ್ಮ ದೈನಂದಿನ ಚಟುವಟಿಕೆಗಳನ್ನು ಗಮನದಲ್ಲಿಡಲು, ನಮ್ಮನ್ನು ನಿರಂತರವಾಗಿ ಗಮನಿಸಲು ಅಪರಾಧಿ ಕಡೆಯವರೇ ನಮ್ಮ ಸುತ್ತಲೂ ಹಿಂಬಾಲಿಸುತ್ತಿದ್ದಾರೆ. ನಾವು ಪ್ರತಿನಿತ್ಯ ಇಂತಹ ಕಿರುಕುಳ ಅನುಭವಿಸುತ್ತೇವೆ, ಆದರೆ ನಾವು ಯಾರಿಗೂ ಹೆದರುವುದಿಲ್ಲ. ಈ ವರ್ಷದ ಜನವರಿಯಲ್ಲಿ ಹೊಸ ಗೃಹಪ್ರವೇಶ ಸಮಾರಂಭ ನಡೆದಿದೆ. ಹಾಗೆ ನಾವು ಅವಳ ಸಮಾಧಿಯ ಬಳಿ ಮರವನ್ನು ಬೆಳೆಸಿದ್ದೇವೆ. ಮುಂಬರುವ ಅವಳ ಹುಟ್ಟು ಹಬ್ಬದ ದಿನ ಅಕ್ಟೋಬರ್ 18 ರಂದು ನಾವು ಈ ವರೆಗೂ ಆರೋಪಿಸಿಕೊಂಡು ಬಂದಿರುವ ಶಂಕಿತರಾದ ಉದಯ್ ಜೈನ್, ಮಲ್ಲಿಕ್ ಜೈನ್, ಆಶ್ರಿತ್ ಜೈನ್ ಮತ್ತು ನಿಶ್ಚಲ್ ಜೈನ್ ವಿರುದ್ಧ ತನಿಖೆ ನಡೆಸುವಂತೆ ನಾವು ಅಧಿಕಾರಿಗಳಿಗೆ ಒತ್ತಾಯಿಸುತ್ತೇವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಒತ್ತಡಕ್ಕೆ ಮಣಿದು ತನಿಖೆ ಬೇರೆಡೆಗೆ ತಿರುಗುತ್ತಿದೆ. ಇದು ಈ ಪ್ರಕರಣವನ್ನು ಮುಚ್ಚಿ ಹಾಕುವ ತಂತ್ರ. ಬೇರೆ ಯಾವ ಮಹಿಳೆಯೂ ಈ ರೀತಿ ಆಗದಂತೆ ನಾವು ಹೋರಾಟ ರೂಪಿಸುತ್ತೇವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.