south africa vs netherland – Peepal Media

ಹರಿಣಗಳನ್ನು ಮಣಿಸಿದ ನೆದರ್ ಲ್ಯಾಂಡ್: ಸೆಮಿಫೈನಲ್ ತಲುಪಿದ ಭಾರತ
ಅಡಿಲೇಡ್ ಓವಲ್ (ಆಸ್ಟ್ರೇಲಿಯಾ): ಟಿ20 ಕ್ರಿಕೆಟ್ ವಿಶ್ವಕಪ್‌ನ ಮತ್ತೊಂದು ಅಚ್ಚರಿಯ ಫಲಿತಾಂಶದಲ್ಲಿ ನೆದರ್‌ಲ್ಯಾಂಡ್‌ ತಂಡ ಪ್ರಬಲ ದಕ್ಷಿಣ ಆಫ್ರಿಕಾ ತಂಡವನ್ನು 13 ರನ್ ಗಳಿಂದ ಸೋಲಿಸಿದೆ.

ಇದರೊಂದಿಗೆ ಭಾರತ ತಂಡದ ಸೆಮಿಫೈನಲ್ ಹಾದಿ ಸುಗಮವಾಗಿದ್ದು, ಗ್ರೂಪ್-2 ರಿಂದ ಸೆಮಿಫೈನಲ್ ತಲುಪಲಿರುವ ಮತ್ತೊಂದು ತಂಡ ಯಾವುದು ಎಂಬುದು ಈಗ ನಡೆಯುತ್ತಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ಫಲಿತಾಂಶದಿಂದ ಗೊತ್ತಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಭಾರತ ತಂಡದೊಂದಿಗೆ ಸೆಮಿಫೈನಲ್ ಗೆ ತೇರ್ಗಡೆಯಾಗಲಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ನೆದರ್ ಲ್ಯಾಂಡ್ ತಂಡ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಸವಾಲಿನ 158 ರನ್ ಪೇರಿಸಿತು. ಕೋಲಿನ್ ಆಕರ್ ಮನ್ 21 ಎಸೆತಗಳಲ್ಲಿ 41 ರನ್ ಗಳಿಸಿ ಅಜೇಯರಾಗಿ ಉಳಿದರು. ಟಾಮ್ ಕೂಪರ್ 19 ಎಸೆತಗಳಲ್ಲಿ 35 ರನ್ ಗಳಿಸಿದರು.

ಗೆಲುವಿಗೆ 159 ರನ್ ಗಳಿಸಬೇಕಿದ್ದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು. ಬ್ರಾಂಡನ್ ಗ್ಲೋವರ್ ಕೇವಲ 9 ರನ್ ನೀಡಿ ದಕ್ಷಿಣ ಆಫ್ರಿಕಾದ ಮೂರು ವಿಕೆಟ್ ಕಿತ್ತು ಗೆಲುವಿಗೆ ಕಾರಣರಾದರು.

ಈ ಪಂದ್ಯದ ಫಲಿತಾಂಶದಿಂದಾಗಿ ನಾಲ್ಕು ಪಂದ್ಯಗಳಿಂದ, ಮೂರು ಗೆಲುವಿನೊಂದಿಗೆ ಆರು ಅಂಕಗಳನ್ನು ಸಂಗ್ರಹಿಸಿರುವ ಭಾರತ ಗ್ರೂಪ್-2 ರಿಂದ ಸೆಮಿಫೈನಲ್ ತಲುಪಿದ ಮೊದಲ ತಂಡವಾಯಿತು. ದಕ್ಷಿಣ ಆಫ್ರಿಕಾ ಎಲ್ಲ ಐದು ಪಂದ್ಯಗಳಿಂದ 5 ಅಂಕ ಗಳಿಸಿದೆ. ತಲಾ ನಾಲ್ಕು ಅಂಕಗಳನ್ನು ಗಳಿಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ನಡುವೆ ಈಗ ಸೆಮಿಫೈನಲ್ ತಲುಪಲು ಜಿದ್ದಿನ ಹಣಾಹಣಿ ನಡೆದಿದೆ.

ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ನಡುವೆ ಈಗ ಅಡಿಲೇಡ್ ಓವಲ್ ನಲ್ಲೇ ನಡೆಯುತ್ತಿರುವ ಪಂದ್ಯದಲ್ಲಿ 8.5 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿರುವ ಬಾಂಗ್ಲಾದೇಶ ಸುಸ್ಥಿತಿಯಲ್ಲಿದೆ.

ಇಂದು ಮಧ್ಯಾಹ್ನ ಭಾರತ ಮತ್ತು ಜಿಂಬಾಬೆ ನಡುವೆ ಗ್ರೂಪ್ 2ರ ಕೊನೆಯ ಲೀಗ್ ಪಂದ್ಯ ನಡೆಯಲಿದ್ದು, ಉಭಯ ತಂಡಗಳಿಗೆ ಇದು ಔಪಚಾರಿಕವಾಗಿದೆ. ಭಾರತ ಈಗಾಗಲೇ ಸೆಮಿಫೈನಲ್ ತಲುಪಿದ್ದು, ಜಿಂಬಾಂಬ್ವೆ ಸೆಮಿಫೈನಲ್ ರೇಸ್ ನಿಂದ ಹೊರಗೆ ಬಿದ್ದಿದೆ.