special story – Peepal Media

ಅಯೋಧ್ಯೆಯ ಸೌಹಾರ್ದತೆ ಉಳಿಸಲು ಗುಂಡಿಗೆ ಎದೆಕೊಟ್ಟ ಬಾಬಾ ಲಾಲ್ ದಾಸ್
ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿದೆ. ದೇಶದಾದ್ಯಂತ ಜನರು ಕುತೂಹಲದಿಂದ ಕಾಯುತ್ತಿದ್ದ ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಪೂರ್ಣಗೊಂಡು, ಆ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಹಾಗೆಂದು ಭಾವಿಸಿಕೊಂಡರೂ, ಇದು ಭಾರತವೆಂಬ ಪ್ರಪಂಚದ ಬೃಹತ್‌ ಪ್ರಜಾತಂತ್ರದ ಮತೀಯ ರಾಜಕಾರಣಕ್ಕೆ ಹೊಸ ತಿರುವೊಂದು ಸಿಕ್ಕಿದೆ. ಇದರ ಪ್ರಭಾವವನ್ನು ನಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೇ ನೋಡಬೇಕು. ಅದು ಭಾರತ ನಡೆಯುತ್ತಿರುವ ದಿಕ್ಕನ್ನು ತೋರಿಸಲಿದೆ.

ಈ ಹಿನ್ನಲೆಯಲ್ಲಿ ನಾವು ನೆನಪಿಸಿಕೊಳ್ಳಬೇಕಾದ ಓರ್ವ ವ್ಯಕ್ತಿಯೆಂದರೆ ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಮಹಂತ್ (ಮುಖ್ಯ ಅರ್ಚಕ) ಆಗಿದ್ದ ಬಾಬಾ ಲಾಲ್ ದಾಸ್ ಅವರನ್ನು. ಇವರನ್ನು ನವೆಂಬರ್ 26, 1993ರಂದು ಗುಂಡಿಕ್ಕಿ ಕೊಲ್ಲಲಾಯಿತು.

ಇವರ ಜೊತೆಗೆ ಕಾಶಿ ವಿಶ್ವನಾಥ ದೇವಾಲಯದ ಮಾಜಿ ಮಹಾಂತ್ ರಾಜೇಂದ್ರ ಪ್ರಸಾದ್ ತಿವಾರಿ ಅವರನ್ನು. ಇಬ್ಬರಲ್ಲಿ ಇರುವ ವ್ಯತ್ಯಾಸವೆಂದರೆ ಓಬ್ಬರನ್ನು ಸಾಯಿಸಲಾಗಿದೆ, ಇನ್ನೊಬ್ಬರು ಬದುಕಿದ್ದಾರೆ. ಆದರೆ ಇಬ್ಬರ ದನಿಯೂ ಒಂದೇ ಆಗಿದೆ.

“ಅಯೋಧ್ಯೆಯ ಜನ ಮಾತ್ರವಲ್ಲ, ಭಾರತದಾದ್ಯಂತ ಜನರು ಇದನ್ನು ವಿರೋಧಿಸಬೇಕು. ನಾವು ಎಂದಿಗೂ ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸಬಾರದು ಮತ್ತು ಅವರ ಹೃದಯವನ್ನು ಒಡೆಯಬಾರದು. ನಮ್ಮ ಧರ್ಮ ಇದನ್ನು ಒಪ್ಪುವುದಿಲ್ಲ. ರಾಮನ ರಾಜಕೀಯ ಆದರ್ಶವು ಎಲ್ಲರಿಗೂ ಸಮೃದ್ಧಿಯನ್ನು ತರುತ್ತದೆ … ನಾವು ತಿಂದರೆ ನಮ್ಮ ದೇಹದ ಎಲ್ಲಾ ಭಾಗಗಳಿಗೆ ಆಹಾರ ಸಿಗುತ್ತದೆ, ಆದ್ದರಿಂದ ಎಲ್ಲರೂ ನಮ್ಮವರೇ, ಯಾರೂ ಇಲ್ಲಿ ದೊಡ್ಡವರಲ್ಲ ಅಥವಾ ಚಿಕ್ಕವರಲ್ಲ. ಈ ಆದರ್ಶಗಳನ್ನು ಕೊಲ್ಲಲಾಗಿದೆ….!”

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

1990 ರ ದಶಕದಲ್ಲಿ ರಾಮ ಮಂದಿರದ ಗಲಭೆಯಲ್ಲಿ ದೇಶ ಹೊತ್ತಿ ಉರಿಯುತ್ತಿದ್ದಾಗ ಈ ಮಾತುಗಳನ್ನು ಹೇಳಿದ್ದು ಬೇರೆ ಯಾರೂ ಅಲ್ಲ, ವಿವಾದಿತ ರಾಮಜನ್ಮಭೂಮಿ ದೇವಸ್ಥಾನದ ಮಹಂತ್ (ಮುಖ್ಯ ಅರ್ಚಕ) ಆಗಿದ್ದ ಹಿಂದೂ ಅರ್ಚಕ ಬಾಬಾ ಲಾಲ್ ದಾಸ್ ಅವರು. ಇದು ರಾಮ್ ಕೆ ನಾಮ್ ಸಾಕ್ಷ್ಯಚಿತ್ರದ ಕೊನೆಯಲ್ಲಿ ನೀವು ಕೇಳಬೇಕಾದ ಮುಂದೆಂದೂ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಮಾತುಗಳು.

ಭಾರತದ ಭಕ್ತಿ ಪರಂಪರೆಯ ಆತ್ಮದ ಭಾಷೆಗಳಾದ ಪ್ರೇಮ, ಶಾಂತಿ, ಒಳಗೊಳ್ಳುವಿಕೆ ನಶಿಸಿಹೋಗುತ್ತಾ, ದೇಶ ಆದ್ಯಾತ್ಮದಿಂದ ಕಳಚಿಕೊಂಡು ಕರ್ಮಠತನಕ್ಕೆ ದಾಂಗುಡಿ ಇಡುವಾಗ, ಮತೀಯತೆ ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ, ಒಪ್ಪಿಕೊಂಡ ದೇಶದಲ್ಲಿ ಮುನ್ನಲೆಗೆ ಬರುತ್ತಿರುವಾಗ, ದೇಶ ಸಾಂಸ್ಕೃತಿಕವಾಗಿ ಬಹುಮುಖಿಯಾಗಿ ಕಟ್ಟಿಕೊಳ್ಳುವ ತನ್ನ ಪರಂಪರೆಯನ್ನು ನಿಲ್ಲಿಸುತ್ತಿರುವ ಸಂದರ್ಭದಲ್ಲಿ ಬಾಬಾ ಲಾಲ್‌ ದಾಸ್‌ ಆವರ ಮಾತುಗಳು ನಮ್ಮ ಹೃದಯವನ್ನು ಆಳವಾಗಿ ನಾಟಿ ಸಂಕಟವನ್ನು ಉಂಟುಮಾಡುತ್ತವೆ.

1991ರಲ್ಲಿ ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ ಅವರ ರಾಮ್ ಕೆ ನಾಮ್ ಸಾಕ್ಷ್ಯಚಿತ್ರ ಪ್ರಚಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ನವೆಂಬರ್ 26, 1993 ರಂದು, ಬಾಬಾ ಲಾಲ್ ದಾಸ್ ಅವರನ್ನು ಅನುಮಾನಾಸ್ಪದವಾಗಿ ಗುಂಡಿಕ್ಕಿ ಕೊಲ್ಲಲಾಯಿತು.

ಯಾರು ಈ ಬಾಬಾ ಲಾಲ್‌ ದಾಸ್‌?

ಬಾಬಾ ಲಾಲ್ ದಾಸ್ ಅವರನ್ನು 1983 ರಲ್ಲಿ ಲಕ್ನೋ ಹೈಕೋರ್ಟ್ ಅಯೋಧ್ಯೆಯ ಮುಖ್ಯ ಅರ್ಚಕರನ್ನಾಗಿ ನೇಮಿಸಿತು. ಬಾಬರಿ ಮಸೀದಿಯ ಸುತ್ತ ವಿಶ್ವ ಹಿಂದೂ ಪರಿಷತ್  ನಡೆಸುತ್ತಿದ್ದ ಚಟುವಟಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಇವರು,. ಲಾಲ್ ಕೃಷ್ಣ ಅಡ್ವಾಣಿಯವರಿಗೆ ತಮ್ಮ ರಥಯಾತ್ರೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದರು. ರಾಮ ಮಂದಿರ ಚಳವಳಿಯನ್ನು ಕೇವಲ ಹಿಂದೂ ಮತಗಳನ್ನು ಸೆಳೆಯುವ ತಂತ್ರ ಎಂದು ಟೀಕಿಸಿದ್ದರು.

ರಾಮ್‌ ಕೆ ನಾಮ್‌ ಡಾಕ್ಯುಮೆಂಟರಿಯಲ್ಲಿ, “ಇದು (ಮಸೀದಿ ಧ್ವಂಸ) ವಿಎಚ್‌ಪಿಯ ರಾಜಕೀಯ ಆಟ. ಇದನ್ನು ಮಾಡುತ್ತಿರುವವರಿಗೆ ಹಿಂದೂ ಮತವನ್ನು ಸೆಳೆಯಲು ಭಾರತದಾದ್ಯಂತ ಉದ್ವಿಗ್ನತೆಯನ್ನು ಸೃಷ್ಟಿಸುವುದರಲ್ಲಿ ಹೆಚ್ಚು ಆಸಕ್ತಿ,” ಎನ್ನುತ್ತಾ ಎರಡು ಸಮುದಾಯಗಳ ನಡುವೆ ಇರುವ ಶಾಂತಿ ಮತ್ತು ಸಾಮರಸ್ಯದ ಬಗ್ಗೆ ವಿವರಿಸಿದ್ದರು. ಅಯೋಧ್ಯೆಯ ಹೆಚ್ಚಿನ ದೇವಾಲಯಗಳನ್ನು ಅವಧ್‌ನ ಮುಸ್ಲಿಂ ರಾಜರ ದೇಣಿಗೆಯಿಂದ ಹೇಗೆ ನಿರ್ಮಿಸಲಾಯಿತು ಮತ್ತು 1855 ರ ಘರ್ಷಣೆಯ ನಂತರ ಹಿಂದೂ ಪುರೋಹಿತರು ಮತ್ತು ಮುಸ್ಲಿಂ ಪೀರರು ಹೇಗೆ ಸೌಹಾರ್ದಯುತವಾಗಿ ಬದುಕಲು ನಿರ್ಧರಿಸಿದರು ಎಂದು ಈ ಡಾಕ್ಯುಮೆಂಟರಿಯಲ್ಲಿ ಅರ್ಚಕರು ಹೇಳಿದ್ದಾರೆ.

ಬಾಬಾ ಲಾಲ್‌ ದಾಸ್‌ ಅವರಲ್ಲಿ ಬಾಬ್ರಿ ಮಸೀದಿ ಧ್ವಂಸದ  ಬಗ್ಗೆ ಸಾಕ್ಷ್ಯಾಧಾರಗಳು ಇದ್ದವು,1993 ರಲ್ಲಿ ದೆಹಲಿಯ ಸಿಟಿಜನ್‌ ಟ್ರಿಬ್ಯೂನಲ್‌ಗೆ ಇದನ್ನು ಸಲ್ಲಿಸಿದ್ದರು.  ರಾಮಜನ್ಮಭೂಮಿ ನ್ಯಾಸ್ ಪರವಾಗಿ ಸಂಗ್ರಹಿಸಲಾದ ದೊಡ್ಡ ಮೊತ್ತದ ಹಣದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಆರೋಪ ಕೂಡ ಮಾಡಿದ್ದರು.

ಇದಾಗಿ, 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ಕೆಲ ತಿಂಗಳುಗಳ ಮೊದಲು, ಅಂದಿನ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಬಾಬಾ ಲಾಲ್ ದಾಸ್ ಅವರನ್ನು ಅರ್ಚಕ ಸ್ಥಾನದಿಂದ ಅನಧಿಕೃತವಾಗಿ ತೆಗೆದುಹಾಕಿತು. ಕೋರ್ಟಿನಿಂದ ನೇಮಕವಾಗಿರುವ ಕಾರಣ ಕೋರ್ಟಿನ ಆದೇಶ ಇಲ್ಲದೆ ಈ ರೀತಿ ವಜಾಗೊಳಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದರು. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಈ ಪ್ರಕರಣ ಬಾಕಿ ಉಳಿದಿದೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸವಾಯಿತು. ಇದಾದ ನಂತರ ತಮ್ಮ ಹತ್ಯೆಯಾಗಬಹುದು ಎಂಬ ಭಯ ಅರ್ಚಕರಿಗೆ ಇತ್ತು. ರಕ್ಷಣೆ ಕೊಡುವಂತೆ  ಸರ್ಕಾರಕ್ಕೆ ವಿನಂತಿಸಿದರು. ಆದರೆ ಕಲ್ಯಾಣ್ ಸಿಂಗ್ ಅವರ ಸರ್ಕಾರವು ಅವರ ಅಂಗರಕ್ಷಕರನ್ನು ತೆಗೆದುಹಾಕಿತು. ನವೆಂಬರ್ 26, 1993 ರಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

ದೇಶ ಕಂಡು ಕೇಳರಿಯದ ಅಮಾನವೀಯ ಘಟನೆಗಳು ಇದರ ಬೆನ್ನಿನಲ್ಲೇ ನಡೆದವು. ಇದರಿಂದ ದೇಶ ಚೇತರಿಸಿಕೊಂಡಿಲ್ಲ. ಆಗ ಉಂಟಾದ ಬೃಹತ್‌ ಕಂದಕವನ್ನು ಮುಚ್ಚಲು ಶತಮಾನಗಳಷ್ಟು ಪ್ರಯತ್ನಿಸಬೇಕು. ಈಗ ಬಾಬರಿ ಮಸೀದಿ ಇದ್ದಲ್ಲೇ ರಾಮನ ಪ್ರತಿಷ್ಠೆಯನ್ನು ಮಾನನೀಯ ಪ್ರಧಾನಿಗಳ ನೇತೃತ್ವದಲ್ಲಿ ಮಾಡಲಾಗಿದೆ. ದೇಶದ ರಾಜಕಾರಣ ಮಗ್ಗುಲು ಬದಲಿಸಿದ  ಈ ಸಂದರ್ಭದಲ್ಲಿ ರಾಮಭಕ್ತ ಲಾಲ್ ದಾಸ್ ಅವರು ನೀಡಿದ ಕೋಮು ಐಕ್ಯತೆಯ ಸಂದೇಶ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ.

ಮೊಘಲ್ ರಾಜಕುಮಾರ ದಾರಾ ಶಿಕೋಹ್ 17 ನೇ ಶತಮಾನದಲ್ಲಿ ವಾರಣಾಸಿಯ ವಿಶ್ವನಾಥ ದೇವಾಲಯದ ಮೇಲ್ವಿಚಾರಣೆಗಾಗಿ ಅಲ್ಲಿನ ಮಹಂತರಿಗೆ ಪಟ್ಟಾ (ಪತ್ರ) ನೀಡುತ್ತಾನೆ. 10 ತಲೆಮಾರುಗಳವರೆಗೆ ಇದು ಮುಂದುವರಿದುಕೊಂಡು ಬಂದಿದೆ. ಕಾಶಿ ವಿಶ್ವನಾಥ ದೇವಾಲಯದ ಆಡಳಿತದ ಅಧಿಕಾರ ಈ ಕುಟುಂಬದ ಕೈಯಲ್ಲೇ ಇತ್ತು. 1983 ರಲ್ಲಿ ಉತ್ತರ ಪ್ರದೇಶ ಸರ್ಕಾರ ಇವರನ್ನು ದೇವಾಲಯದ ಪಾರಂಪರಿಕ ಮೋಕ್ತೇಸರಿಕೆಯಿಂದ ತೆಗೆಯಿತು. ಈ ಮನೆತನದ ಈಗಿನ ತಲೆಮಾರು ಮಹಂತ್ ರಾಜೇಂದ್ರ ಪ್ರಸಾದ್ ತಿವಾರಿ ಸಧ್ಯದ ಕೋಮುವಾದ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಶಾಂತಿ ಸಹಬಾಳ್ವೆಯ ಬಹುಮುಖ್ಯ ದನಿಯಾಗಿ ಕಾಣಿಸಿಕೊಳ್ಳುತ್ತಾರೆ.

ತಿವಾರಿ ಪ್ರಧಾನಿ ನರೇಂದ್ರ ಮೋದಿಯವರ ಬಹುಪ್ರಿಯ ಯೋಜನೆಯಾದ ವಿಶ್ವನಾಥ ಟೆಂಪಲ್ ಕಾರಿಡಾರ್‌ನ ಕಟು ಟೀಕಾಕಾರರಾಗಿದ್ದರು. ಈ ಯೋಜನೆಯ ಮೂಲಕ ಸುಮಾರು 286 ಶಿವಲಿಂಗಗಳನ್ನು ಹೊಂದಿರುವ ಹಲವಾರು ಪುರಾತನ ದೇವಾಲಯಗಳನ್ನು ಕೆಡವಿ ಹಾಕಲಾಗಿದೆ. ಇವುಗಳನ್ನು ಕಿತ್ತು ಬಿಸಾಡಲಾಯಿತು, ಕೆಲವನ್ನು ಮುರಿದು ಹಾಕಿದರು. ಕೇವಲ 146 ಶಿವಲಿಂಗಗಳನ್ನು ಮಾತ್ರ ಜೀರ್ಣೋದ್ಧಾರಗೊಳಿಸಿ ಬನಾರಸ್‌ನ ಲಂಕಾದ ಪೊಲೀಸ್ ಠಾಣೆಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಸದ್ಯ ಅಲ್ಲಿ ಅವುಗಳಿಗೆ ನಿತ್ಯದ ಪೂಜೆಯನ್ನು ಸಲ್ಲಿಸಲಾಗುತ್ತಿದೆ.

ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯನ್ನು ತುರಾತುರಿಯಲ್ಲಿ ಮಾಡಿರುವುದನ್ನು ಎಲೆಕ್ಷನ್‌ ಗಿಮಿಕ್‌ ಎಂದೇ ಟೀಕಿಸಿರುವ ಕಾಶಿಯ ಮಾಜಿ ಮೊಕ್ತೇಸರ ತಿವಾರಿಯವರು, ಇದೊಂದು ʼಸ್ಪಾನ್ಸರ್ಡ್‌ ಬೈ ಪಿಲಂ ಸ್ಟಾರ್‌ʼ ಕಾರ್ಯಕ್ರಮ, ಇದು ಮೋದಿಯವರು ತಮ್ಮ ವ್ಯಾನಿಟಿಯನ್ನು ಹೆಚ್ಚಿಸಿಕೊಳ್ಳಲು ಮಾಡಿರುವ ತಂತ್ರ ಎಂದು ಆರೋಪಿಸಿದ್ದಾರೆ.

“ಮೋದಿಯವರು ಓಟಿಗಾಗಿ ರಾಮನನ್ನು ಬಳಸಿಕೊಳ್ಳುತ್ತಿದ್ದಾರೆ. ಅಧಿಕಾರವೇ ಮೋದಿಯವರ ರಾಮ, ಅವರ ನಂಬಿಕೆ, ಅವರ ವ್ಯಾಪಾರ,” ಎಂದು ತಿವಾರಿ ಹೇಳಿದ್ದಾರೆ.

ಭಾರತದ ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಮಾಡುವಲ್ಲಿ ತೋರಿರುವ ನಿರ್ಲಕ್ಷ್ಯ, ತಿರಸ್ಕಾರದ ಬಗ್ಗೆ ತಿವಾರಿಯವರಿಗೆ ಆಕ್ರೋಶ ಇದೆ, ಅವುಗಳನ್ನು ಮಾಲ್‌ಗಳ ರೀತಿಯಲ್ಲಿ ಕಟ್ಟಲಾಗುತ್ತಿದೆ, ಅಲ್ಲಿ ಜನರು ಶಾಪಿಂಗ್ ಮಾಡಲು ಮತ್ತು ಮೋಜು ಮಸ್ತಿಗಾಗಿ ಬರುತ್ತಾರೆ ಅಥವಾ ಅವುಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಪವಿತ್ರವಾದ ಕ್ಷೇತ್ರವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಪ್ರಯತ್ನಗಳೇ ಹೊರತು ಭಕ್ತರಲ್ಲಿ ದೇವರ ಮೇಲಿನ ಭಕ್ತಿಯನ್ನು ಮೂಡಿಸುವ ಪ್ರಯತ್ನಗಳಲ್ಲ. “ಇದು ಮಾಲ್, ಅಯೋಧ್ಯೆಯ ರಾಮಮಂದಿರವಲ್ಲ. ಅಂತಹ ಮೊದಲ ಮಾಲ್ ಅನ್ನು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನಿರ್ಮಿಸಲಾಯಿತು. ಮೂರನೆಯದು ಮಥುರಾದಲ್ಲಿ ಆಗಲಿದೆ” ಎಂದು ತಿವಾರಿ ಹೇಳುತ್ತಾರೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಇವೆಲ್ಲವನ್ನೂ ಸನಾತನ ಧರ್ಮದ ಮೇಲಿನ ಆಕ್ರಮಣ ಎಂದು ತಿವಾರಿ ಕರೆದಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸನಾತನ ಧರ್ಮ, ಅದರ ತತ್ವಗಳು, ಅದರ ನಿಯಮಗಳು ಮತ್ತು ಭವಿಷ್ಯದಲ್ಲಿ ಹಿಂದೂಗಳ ಧರ್ಮಗ್ರಂಥಗಳನ್ನು ರೂಪಿಸುವ ಅಧಿಕಾರವನ್ನು ಆಚಾರ್ಯರು ಮತ್ತು ಧಾರ್ಮಿಕ ಗುರುಗಳಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. “ಸನಾತನ ಧರ್ಮದ ಮೇಲಿನ ಈ ಸವಾರಿಯೇ ಶಂಕರಾಚಾರ್ಯರನ್ನು ಜನವರಿ 22 ರ ಉದ್ಘಾಟನೆಯ ವಿರುದ್ಧ ಮಾತನಾಡುವಂತೆ ಮಾಡಿತು” ಎಂದು ತಿವಾರಿ ವಾದಿಸುತ್ತಾರೆ.

ಇದು ಮತೀಯತೆ ಮತ್ತು ಆಧ್ಯಾತ್ಮಿಕತೆಯ ನಡುವಿನ ಸಂಘರ್ಷ. ಸಂಘವು ತನ್ನ ರಾಜಕೀಯ ಬಲದ ಜೊತೆಗೆ ಧಾರ್ಮಿಕ ಶಕ್ತಿಯನ್ನು ಪಡೆಯಲು ಯತ್ನಿಸುತ್ತಿದೆ. “ಒಮ್ಮೆ ಇದು ನಡೆದರೆ, ನಮ್ಮ ಸಮಾಜದ ಮೇಲೆ ಸಂಘದ ನಿಯಂತ್ರಣವು ಪೂರ್ಣಗೊಳ್ಳುತ್ತದೆ” ಎಂದು ಅವರು ಭವಿಷ್ಯ ನುಡಿದ್ದಾರೆ.

“ಸತ್ಯಕ್ಕಿಂತ ಅಸತ್ಯವು ಯಾವಾಗಲೂ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ” ಎನ್ನುವ ಮಹಂತ್ ತಿವಾರಿ, ಸನಾತನ ಧರ್ಮದ 10 ಮೌಲ್ಯಗಳನ್ನು ಪಟ್ಟಿ ಮಾಡುತ್ತಾರೆ: ಸತ್ಯವನ್ನು ಹೇಳುವುದು, ಅಹಂಕಾರ ಮತ್ತು ಕೋಪವನ್ನು ತೊಡೆದುಹಾಕುವುದು, ಸಹನೆಯನ್ನು ಬೆಳೆಸುವುದು ಇತ್ಯಾದಿ. “ಈ ಎಲ್ಲಾ ಮೌಲ್ಯಗಳು ಕುಸಿಯುತ್ತಿವೆ, ಇವುಗಳಲ್ಲಿ ಯಾವುದನ್ನೂ ಸಾಕಾರಗೊಳಿಸಲಾಗಿಲ್ಲ, ಅವರು ನಮ್ಮನ್ನು ಮತಾಂಧರನ್ನಾಗಿ ಮಾಡುತ್ತಿದ್ದಾರೆ” ಎಂದು ಅವರು ತಿವಾರಿ ಹೇಳುತ್ತಾರೆ.

ಕಾಶಿ ವಿಶ್ವನಾಥ ದೇವಾಲಯದ ಪಾರಂಪರಿಕ ಅಧಿಕಾರವನ್ನು ಹೊಂದಿರುವ ಮನೆತನದ ಈಗಿನ ತಲೆಮಾರು, ಯಾವುದೇ ಫಲಾಪೇಕ್ಷೆ ಇಲ್ಲದೆ, ದೇಶದ ಬಹುದೊಡ್ಡ ರಾಜಕೀಯ ಶಕ್ತಿಯೊಂದರ ವಿರುದ್ಧ ತಮ್ಮ ಮಾತುಗಳನ್ನು ನಿರ್ಭಯವಾಗಿ ಹೇಳುತ್ತಿದ್ದಾರೆ. ಇವರ ಮಾತುಗಳು ನಮ್ಮನ್ನು ಮತ್ತೆ ಅಯೋಧ್ಯೆಯ ಮುಖ್ಯ ಅರ್ಚಕ, ಸತ್ಯಕ್ಕಾಗಿ ಗುಂಡಿಗೆ ಎದೆಕೊಟ್ಟ ಬಾಬಾ ಲಾಲ್‌ ದಾಸ್‌ ಅವರ ನೆನಪನ್ನು ತರುತ್ತದೆ.

ಯಾಕೆ ಅವರು ಈಗ ಪ್ರಶ್ನಿಸುತ್ತಿದ್ದಾರೆ? ಯಾಕೆ ಅದ್ವೈತ ಪೀಠಗಳು, ಅನೇಕ ಧಾರ್ಮಿಕ ನಾಯಕರು ಬಿಜೆಪಿಯ ನಡೆಯನ್ನು ವಿರೋಧಿಸುತ್ತಿದ್ದಾವೆ?

ಅವರ ಮಾತುಗಳು ಸ್ಪಷ್ಟವಾಗಿವೆ: ಬಿಜೆಪಿ – ಸಂಘ ಪರಿವಾರದ ಈ ಎಲ್ಲಾ ನಡೆಗಳೂ ಹಿಂದೂ ಧರ್ಮಕ್ಕೆ ಕಂಟಕಪ್ರಾಯವಾಗಿವೆ. ದೇಶ ಸಹಸ್ರಾರು ವರ್ಷಗಳಿಂದ ರೂಪಿಸಿಕೊಂಡು ಬಂದ ಆಧ್ಯಾತ್ಮಿಕತೆ ಮತ್ತು ಬಹುಮುಖಿ ಸಂಸ್ಕೃತಿಗಳಿಗೆ ಹಿಂದುತ್ವ ಮಾರಕವಾಗಿ ಪರಿಣಮಿಸಿದೆ. ಇದು ಚುನಾವಣೆ ಗೆಲ್ಲುವುದಕ್ಕೆ, ಅನ್ಯ ಮತೀಯರನ್ನು ದ್ವೇಷಿಸುವುದಕ್ಕೆ ತಮ್ಮದೇ ಸಂಪ್ರದಾಯವನ್ನು ಎಷ್ಟರಮಟ್ಟಿಗೆ ಬೇಕಾದರೂ ತಿರುಚಿ, ಕೆಡವಿ ಹಾಕಲು ಮುಂದಾಗುತ್ತಿದೆ.

ಹಿಂದುತ್ವ ಎಂಬುದು ಕೋಮವಾದ+ರಾಜಕಾರಣ. ಹಿಂದೂ ಧರ್ಮ ಎಂಬುದು ಭಾರತೀಯ ಧರ್ಮಗಳ ಒಟ್ಟುಗೂಡುವಿಕೆ ಎಂಬ ಸ್ಪಷ್ಟತೆ ಇವರಲ್ಲಿ ಬರುತ್ತಿದೆ. ಹಿಂದುತ್ವವೇ ಹಿಂದೂ ಧರ್ಮದ ಮುಖವಾಡ ಧರಿಸಿಕೊಂಡು ಬಂದಾಗ ಹಿಂದೂ ಧರ್ಮದ ಮೂಲ ಆಶಯಗಳಿಗೆ ಧಕ್ಕೆಯಾಗುತ್ತದೆ ಎಂಬ ಭಯ ಈ ಧಾರ್ಮಿಕ ನಾಯಕರಲ್ಲಿ ಇದೆ. ಹಿಂದುತ್ವ ಎಂಬುದು ಆದ್ಯಾತ್ಮಿಕವಲ್ಲದ್ದು, ಅದು ಆದ್ಯಾತ್ಮಿಕವಾಗಿದ್ದರೆ ಅನ್ಯರನ್ನು ದ್ವೇಷಿಸುವಂತೆ ಮಾಡಲು ಸಾಧ್ಯವಿಲ್ಲ, ಹಾಗಾಗಿ ತಿವಾರಿಯಂತ ಪ್ರಜ್ಞಾವಂತೆರು ಬಿಜೆಪಿಯ ನಡೆಯನ್ನು ವಿರೋಧಿಸಿದ್ದಾರೆ.   ಬಾಬಾ ಲಾಲ್‌ ದಾಸ್‌ರಂತ ಅರ್ಚಕರು ತಮ್ಮ ಸಂಪ್ರದಾಯವನ್ನು ಉಳಿಸಲು ಪ್ರಾಣವನ್ನೇ ಕೊಡಬೇಕಾಯ್ತು.

ಲೇಖನ: ಚರಣ್‌ ಐವರ್ನಾಡು

ಭಾರತದಲ್ಲಿ ಹೆಚ್ಚಿದ್ದಾರೆ 25 ವರ್ಷದೊಳಗಿನ ನಿರುದ್ಯೋಗಿಗಳು! – State of Working India ವರದಿಯಲ್ಲಿ ಏನಿದೆ?
ಬೆಂಗಳೂರು: ಭಾರತದಲ್ಲಿ ಒಟ್ಟಾರೆ ನಿರುದ್ಯೋಗದ ಪ್ರಮಾಣ 2017-18ರ 8.7% ಕ್ಕೆ ಹೋಲಿಸಿದರೆ 2021-22ರಲ್ಲಿ  6.6% ಇಳಿದಿದೆ. ಆದರೆ 25 ವರ್ಷ ಪ್ರಾಯದೊಳಗಿನ ಭಾರತದ 42% ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ‌ ಸೆಂಟರ್ ಫಾರ್ ಸಸ್ಟೈನಬಲ್ ಎಂಪ್ಲಾಯಿಮೆಂಟ್ (Centre for Sustainable Employment – CSE)  ವರದಿ ತಿಳಿಸಿದೆ.

ಬುಧವಾರ ಬಿಡುಗಡೆ ಮಾಡಿರುವ ಈ ವರದಿಯಲ್ಲಿ ಉನ್ನತ ಶೈಕ್ಷಣಿಕ ಮಟ್ಟವನ್ನು ಹೊಂದಿರುವವರಿಗೆ ಅದೇ ವಯಸ್ಸಿನವರಿಗೆ ಹೋಲಿಸಿದರೆ ಭಾರತದಲ್ಲಿ 25 ವರ್ಷಕ್ಕಿಂತ ಕಡಿಮೆ ಪ್ರಾಯದ ಪದವೀಧರರು ಅತೀ ಹೆಚ್ಚು ನಿರುದ್ಯೋಗಿಗಳು ಎಂದು ಹೇಳಿದೆ.

ಅಲ್ಲದೇ, ಲಿಂಗಾಧಾರಿತ ವೇತನದಲ್ಲಿ ಅಸಮಾನತೆ (gender pay disparity) ಕಡಿಮೆಯಾಗಿದ್ದರೂ, ಜಾತಿ – ಧರ್ಮ ಆಧಾರಿತ ವೇತನದಲ್ಲಿರುವ ಅಸಮಾನತೆಗಿಂತ ಲಿಂಗಾಧಾರಿತ ವೇತನದಲ್ಲಿ ಅಸಮಾನತೆ ಹೆಚ್ಚಿದೆ. ಇದು ಇನ್ನೂ ವಿವಿಧ ಜಾತಿಗಳು ಮತ್ತು ಧರ್ಮಗಳ ನಡುವಿನ ಆದಾಯದ ಅಸಮಾನತೆಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಸ್ವಉದ್ಯೋಗಿಗಳಲ್ಲಿ ಮತ್ತು ಪರಿಶಿಷ್ಟ ಜಾತಿ/ಪಂಗಡಗಳ ಮಹಿಳಾ ಉದ್ಯೋಗಿಗಳಲ್ಲಿ ಅಸಮಾನತೆ ಹೆಚ್ಚಿದೆ.

‘State of Working India 2023 — Social Identities and Labour Market Outcomes’  ಎಂಬ ಈ ವರದಿಯ ಪ್ರಕಾರ ಕಾರ್ಮಿಕ ಮಾರುಕಟ್ಟೆಗಳಲ್ಲಿ ಜಾತಿ ಆಧಾರಿತ ಬೇಧ ಮತ್ತು ಲಿಂಗಾಧಾರಿತ ಅಸಮಾನತೆ ಕಡಿಮೆಯಾಗಿದೆ.  ಆದರೆ, ಅಭಿವೃದಿಯನ್ನು ಉದ್ಯೋಗಗಳಿಗೆ ಜೋಡಿಸುವ ವಿಚಾರದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸಾಧನೆ ಕಳಪೆ.

Employment-Unemployment Surveys ಮತ್ತು Periodic Labour Force Survey, India Working Survey ಯಂತಹ National Statistical Office (NSO) ನಡೆಸಿದ ಸಮೀಕ್ಷೆಗಳು ಸೇರಿದಂತೆ ಬೇರೆ ಬೇರೆ ಮೂಲಗಳ ಡೇಟಾ ಬಳಸಿಕೊಂಡು ಈ ವರದಿನ್ನು ತಯಾರಿಸಲಾಗಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧಕರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು, ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಸಂಶೋಧನೆ ನಡೆಸಿದ್ದಾರೆ.

ಮಹಿಳೆಯರು ಏನು ಮಾಡುತ್ತಿದ್ದಾರೆ?

ಈ ವರದಿಯಲ್ಲಿ ಲಿಂಗ-ಆಧಾರಿತ ವೇತನದಲ್ಲಿರುವ ಅಸಮಾನತೆಯಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆಗಳನ್ನೂ, ಸಾಂಪ್ರದಾಯಿಕ ಲಿಂಗ ಮಾನದಂಡಗಳು ಮಹಿಳೆಯರ ಉದ್ಯೋಗಗಳ ಮೇಲೆ ಬೀರಿರುವ ಪ್ರಭಾವವನ್ನು ತೋರಿಸಲಾಗಿದೆ.

2004 ರಲ್ಲಿ ಮಹಿಳೆಯರು ಪುರುಷರ ಸಂಬಳದ 70% ವೇತನ ಪಡೆಯುತ್ತಿದ್ದರು. ಇದು 2017 ರಲ್ಲಿ 76% ಏರಿದ್ದು, ಈ ಪ್ರಮಾಣ 2020-21ವರೆಗೆ ಮುಂದುವರಿದಿದೆ.  ಮುಖ್ಯವಾಗಿ ಗೃಹಣಿಯರು ಸ್ವಉದ್ಯೋಗ ಆರಂಭಿಸಿದ ನಂತರ 2020-21ರಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ.  ಕೋವಿಡ್-‌19ಕ್ಕಿಂತ ಮೊದಲು ಇದ್ದ 50% ಗೆ ಹೋಲಿಸಿದರೆ 60% ಮಹಿಳೆಯರು ಸ್ವಯಂ ಉದ್ಯೋಗಗಳನ್ನು ಆರಂಭಿಸಿದ್ದಾರೆ.

ಆದರೆ ಇದೇನು ಸಂಭ್ರಮಿಸುವ ವಿಚಾರವಲ್ಲ. ಈ ವರದಿಯ ಪ್ರಕಾರ 2019ರಿಂದ  ಕೋವಿಡ್‌ನ ಕಾರಣದಿಂದಾಗಿ ಹೆಚ್ಚಿದ ಸ್ವಉದ್ಯೋಗಗಳ ಗಳಿಕೆ ಕುಸಿದಿದೆ. 2022ರಲ್ಲಿ ಈ ಗಳಿಕೆಯು 2019ಕ್ಕೆ ಮೊದಲ ತ್ರೈಮಾಸಿಕದಲ್ಲಿದ್ದ ಗಳಿಕೆಯ 85% ಆಗಿದೆ.

2004 ಮತ್ತು 2017 ರ ನಡುವೆ ವಾರ್ಷಿಕ ಸರಿಸುಮಾರು ಮೂರು ಮಿಲಿಯನ್ ನಿಯಮಿತ ವೇತನ ಉದ್ಯೋಗಗಳು ಸೃಷ್ಟಿಯಾಗಿವೆ. 2017 ಮತ್ತು 2019 ರ ನಡುವೆ ಇದು ಐದು ಮಿಲಿಯನ್‌ಗೆ ಏರಿದೆ. 2019 ರಿಂದ ಇದು ಕೊರೋನ ಮತ್ತು ಆರ್ಥಿಕ ಕುಸಿತದ ಕಾರಣಗಳಿಂದ ಕಡಿಮೆಯಾಗಿದೆ.

ವರದಿಯನ್ನು ಇಲ್ಲಿ ಓದಿ: ‘State of Working India 2023 — Social Identities and Labour Market Outcomes’

ಅತ್ತೆ – ಸೊಸೆಯರ ಸಂಬಂಧ!

ಮನೆಯಲ್ಲಿ ಅತ್ತೆಯಂದಿರ ಉದ್ಯೋಗ ಗ್ರಾಮೀಣ ಹಾಗೂ ನಗರ ಪ್ರದೇಶದ ಸೊಸೆಯಂದಿರು ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ನಿರ್ಧಿರಿಸುವ ವಿಚಾರ ಈ ವರದಿಯ ಗಮನಾರ್ಹ ಸಂಗತಿ. ನಿರುದ್ಯೋಗಿ ಅತ್ತೆಯೊಂದಿಗೆ ವಾಸಿಸುವ ಭಾರತದ ವಿವಾಹಿತ ಮಹಿಳೆಯರು ಉದ್ಯೋಗ ಮಾಡುವುದು 20%-30% ಕಡಿಮೆ.

ಅಕಸ್ಮಾತ್‌, ಪ್ರತ್ಯೇಕವಾಗಿ ವಾಸಿಸುವ ಸೊಸೆಯಂದಿರಿಗೆ ಹೋಲಿಸಿದರೆ ಉದ್ಯೋಗವಿರುವ ಅತ್ತೆಯಂದಿರೊಂದಿಗೆ ವಾಸಿಸುವ 50% (ಗ್ರಾಮೀಣ) ಮತ್ತು  70% (ನಗರ) ಹೆಚ್ಚು  ಸೊಸೆಯಂದಿರುವ ಉದ್ಯೋಗಿಗಳಾಗಿದ್ದಾರೆ.

ಕ್ಯಾಸ್ಟ್‌ ಮ್ಯಾಟರ್ಸ್!

ಜನರಲ್‌ ಕೆಟಗರಿಯ ಜಾತಿಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿ/ಪಂಗಡಗಳ ಕಾರ್ಮಿಕರಿಗೆ Intergenerational  Mobility ತುಂಬಾ ಕಷ್ಟವಾಗಿ ಪರಿಣಮಿಸಿದೆ.

2018 ರಲ್ಲಿ ಸಾಂದರ್ಭಿಕ ವೇತನ ಪಡೆಯುವ  75.6% SC/ST ಪುರುಷ ಉದ್ಯೋಗಿಗಳ ಗಂಡು ಮಕ್ಕಳೂ ತಂದೆಯಂತೆ ವೇತನ ಪಡೆಯುವ ಕೆಲಸವನ್ನೇ ಮಾಡುತ್ತಿದ್ದಾರೆ.  2004 ರಲ್ಲಿ ಇದು 86.5% ಇತ್ತು. ಈ ಇಳಿಕೆ  ಸಾಂದರ್ಭಿಕ ವೇತನ ಪಡೆಯುವ SC/ST ಕಾರ್ಮಿಕರ ಗಂಡು ಮಕ್ಕಳು ಬೇರೆ ಉದ್ಯೋಗಗಳನ್ನು, ಅದರಲ್ಲೂ  ಅನೌಪಚಾರಿಕ ನಿಯಮಿತ ವೇತನದ ಕೆಲಸ ಮಾಡಲು ಆರಂಭಿಸಿರುವುದನ್ನು. ಸಾಮಾನ್ಯ ವರ್ಗದ ಜಾತಿಯಲ್ಲಿ  2004ರಲ್ಲಿ ಇದ್ದ ಈ ಪ್ರಮಾಣ 83.2% ರಿಂದ 2018 ರಲ್ಲಿ 53.2% ಗೆ ಕುಸಿದಿದೆ.

ಎಂಬತ್ತರ ದಶಕದಲ್ಲಿ ಪರಿಶಿಷ್ಟ ಜಾತಿಯ ಕಾರ್ಮಿಕರು ತ್ಯಾಜ್ಯ ವಿಲೇವಾರಿಯ ಕೆಲಸದಲ್ಲಿ ಈಗಿಗಿಂತ ಐದು ಪಟ್ಟು ಹೆಚ್ಚು ಮತ್ತು ಚರ್ಮದ ಕೆಲಸದಲ್ಲಿ ನಾಲ್ಕು ಪಟ್ಟು ಹೆಚ್ಚಿದ್ದರು. ಆದರೆ ಈಗ ಇದು ಕಡಿಮೆಯಾಗಿರುವುದು ಈ ವರದಿಯಿಂದ ತಿಳಿದುಬರುತ್ತದೆ. ಆದರೆ, ಎಸ್‌ಸಿ/ಎಸ್‌ಟಿ ಮಹಿಳಾ ಕಾರ್ಮಿಕರು ಮೇಲ್ಜಾತಿಯ ಮಹಿಳೆಯರು ಸಂಬಳದ 54% ಮಾತ್ರ ಗಳಿಸುತ್ತಿದ್ದಾರೆ.

ಈ ವರದಿ ಬೆಳಕು ಚೆಲ್ಲುವ ಇನ್ನೊಂದು ಪ್ರಮುಖ ಅಂಶವೆಂದರೆ, ದಲಿತ ಸಮುದಾಯಗಳ ಉದ್ಯಮಿಗಳ ಪಾತಿನಿಧ್ಯತೆ. ಸಣ್ಣ ವ್ಯವಹಾರಗಳಲ್ಲೇ SC/ST ಉದ್ಯಮಿಗಳು ಬೇರೆಯವರಿಗೆ ಹೋಲಿಸಿದರೆ ತುಂಬಾ ಕಡಿಮೆ ಇದ್ದಾರೆ. 20ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಉದ್ದಿಮೆಗಳಲ್ಲಿ ದಲಿತ ಉದ್ಯಮಿಗಳ ಪ್ರಾತಿನಿಧ್ಯತೆ ಕಡಿಮೆ ಇರುವುದು ಕಂಡುಬಂದಿದೆ, ಅಲ್ಲದೇ SC/S ಉದ್ಯೋಗಿಗಳನ್ನು ತಾತ್ಕಾಲಿಕ ಉದ್ಯೋಗಗಳಿಗೆ ನೇಮಿಸಲಾಗುತ್ತಿದೆ.

ಮುಸಲ್ಮಾನರೂ ನಿಯಮಿತವಾಗಿ ವೇತನ ಪಡೆಯುವ ಉದ್ಯೋಗಗಳಲ್ಲಿರುವುದು ತುಂಬಾ ಕಡಿಮೆ. ಕಳೆದ ನಾಲ್ಕು ದಶಕಗಳಿಂದ ಸ್ವಯಂ ಉದ್ಯೋಗ, ಇಲ್ಲವೇ ಸಾಂದರ್ಭಿಕ ವೇತನದ ಕೆಲಸಗಳನ್ನೇ ಹೆಚ್ಚು ನೆಚ್ಚಿಕೊಂಡಿರುವುದು ಕಂಡು ಬಂದಿದೆ.

ಒಂದು ಕಡೆಯಲ್ಲಿ ದೇಶದ ಯುವಜನತೆ ನಿರೂದ್ಯೋಗಿಗಳಾಗುತ್ತಿದ್ದಂತೆ, ಔದ್ಯೋಗಿಕ ವಲಯಗಳಲ್ಲಿ ಜಾತಿ, ಲಿಂಗ ಮತ್ತು ಧರ್ಮದ ಪ್ರಭಾವ ದಟ್ಟವಾಗಿ ಹರಡಿರುವ ಕರಾಳತೆಯನ್ನು ಈ ವರದಿ ಬಿಚ್ಚಿಟ್ಟಿದೆ.

ವರದಿಯನ್ನು ಇಲ್ಲಿ ಓದಿ: ‘State of Working India 2023 — Social Identities and Labour Market Outcomes’

ಗಾಂಧಿ ಪುಣ್ಯಸ್ಮರಣೆ: ಜಗತ್ತಿಗೆ ಹೊಸಭಾಷ್ಯ ಬರೆದ ಗಾಂಧಿ ಜೀವನ ಸಂದೇಶ
ಮಹಾತ್ಮ ಗಾಂಧೀಜಿಯವರ 75ನೇ ಪುಣ್ಯ ತಿಥಿ ಇಂದು. ತನ್ನ ಚಿಂತನೆ, ಜೀವನ ಸಂದೇಶಗಳಿಂದಲೇ ಜಗತ್ತಿನುದ್ದಕ್ಕೂ ವ್ಯಾಪಿಸಿ ನಿಂತ ಈ ಮಹಾನ್‌ ಚೇತನವನ್ನು ನೆನಪಿಸಿಕೊಳ್ಳಲು ಅಕ್ಟೋಬರ್‌ 2 ಮತ್ತು ಜನವರಿ 30 ಕೇವಲ ನೆಪಗಳಷ್ಟೆ. ಮಹಾತ್ಮರ ವಿಚಾರ ಧಾರೆಗಳು ಮುಂಬರುವ ಪೀಳಿಗೆಗೆ ಮಾರ್ಗದರ್ಶಿಯಾಗಬೇಕೆನ್ನುವ ತುಡಿತದೊಂದಿಗೆ ಅವರ ಅಭಿಮಾನಿ ನೇತಾಜಿ ಗಾಂಧಿಯವರು ಗಾಂಧೀಜಿಯವರ ಜೀವನ ಮೌಲ್ಯಗಳು ಜಗತ್ತಿನ ಮೇಲೆ ಬೀರಿದ ಪ್ರಭಾವದ ಕುರಿತು ಬರೆಯುತ್ತಾರೆ.

“ಭಾರತದ ಒಬ್ಬ ಗಾಂಧಿ ೧೦೦ ನೊಬೆಲ್‌ ಗೆ ಸಮ. ಮಹಾತ್ಮಾ ಗಾಂಧಿಯವರು ಪ್ರತಿಪಾದಿಸಿದ ಅಹಿಂಸಾ ತತ್ತ್ವ ಸಿದ್ಧಾಂತಗಳು ಅವರ ಮಾನವೀಯ ಮೌಲ್ಯಗಳು, ಅವರ ನಡೆದು ಹೋದ ಶಾಂತಿಯ ಪಥ ಮನುಕುಲ ಉಳಿಯಲು ಅಂತಿಮ ಮಾರ್ಗ”. 1981ರಲ್ಲಿ 53 ಮಂದಿ ನೊಬೆಲ್‌ ಪುರಸ್ಕೃತರು ಉದ್ಘರಿಸಿದ ಪದಗಳಿವು.

ಸರ್ವೋದಯ ಫಿಲಾಸಫಿಯ ಸರ್ವೋಚ್ಛ ನೇತಾರ, ಮಾನವ ಪ್ರಪಂಚದ ಮಹಾ ನಾಯಕ  ನಮ್ಮ  ರಾಷ್ಟ್ರಪಿತ  ಮಹಾತ್ಮ  ಗಾಂಧೀಜಿ ಯವರು ಅಂದಷ್ಟೇ ಅಲ್ಲ, ಇಂದಷ್ಟೇ ಅಲ್ಲ ಮುಂದಷ್ಟೇ ಅಲ್ಲ, ಅವರು ಎಂದೆಂದಿಗೂ ಪ್ರಸ್ತುತರು. ಆ ಸೂರ್ಯ ಚಂದ್ರರು ಇರುವ ತನಕವೂ  ಬಾಪೂ  ಪ್ರತಿಪಾದಿಸಿದ ತತ್ವ- ಸಿದ್ಧಾಂತಗಳು ಅವರು ನಡೆದು ಹೋದ ಶಾಂತಿಯ ಪಥ, ಅವರು ಬ್ರಿಟಿಷರ ವಿರುದ್ಧ  ಬಳಸಿದ ಸತ್ಯ, ನ್ಯಾಯ, ಅಹಿಂಸೆಗಳೆನ್ನುವ ಅಮೂಲ್ಯ ಅಸ್ತ್ರಗಳು ಮನು ಕುಲಕ್ಕೆ ಮಾರ್ಗದರ್ಶಿಯಾಗಿಯೇ ಇರಲಿವೆ. ಪ್ರಪಂಚದ ಅಗಣಿತ ನೇತಾರರಿಗೆ ಸ್ಪೂರ್ತಿದಾಯಕವಾಗಿವೆ. ಅವರು ನಡೆದು ಹೋದ ಶಾಂತಿಯ ಪಥ ಮಾನವ ಜಗತ್ತಿಗೆ ಹೆದ್ದಾರಿಯಾಗಿದೆ.

ಹಾಗೆಂದೇ ʼಸೌತ್ ಆಫ್ರಿಕೆಯ ಗಾಂಧಿʼ ಎಂದು ಪರ್ಯಾಯ ಹೆಸರಿನಿಂದ ಕರೆಯಲ್ಪಡುವ  ಡಾಕ್ಟರ್ ನೆಲ್ಸನ್ ಮಂಡೇಲಾ, ಅಮೇರಿಕೆಯ ಗಾಂಧಿ ಎಂದು ಎನಿಸಿಕೊಂಡ ಡಾಕ್ಟರ್ ಮಾರ್ಟಿನ್  ಲೂಥರ್  ಕಿಂಗ್,  ಜೂನಿಯರ್ ಬರ್ಮಾ ದೇಶದ ಗಾಂಧಿ ಎನಿಸಿಕೊಂಡ ಆಂಗ್ ಸಾನ್ ಸೂಕಿ, ನೈಜೀರಿಯಾ ದೇಶದ ಗಾಂಧಿ ಎನಿಸಿಕೊಂಡ ಅಮೀನೋ ಕಾಣೋ ಅಂತಹ ಸಾವಿರ  ಸಾವಿರ  ಜನ ನಾಯಕರಿಗೆ ಸ್ಪೂರ್ತಿಯ ಸೆಲೆ ನಮ್ಮ  ಬಾಪೂಜಿ. ನೊಬೆಲ್ ವಿಜೇತರಾದ ರೋಮಾ ರೋಲಾ, ಜಗತ್‌ ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್ಸ್ಟಿನ್, ಸೌತ್ ಆಫ್ರಿಕೆಯ ನಾಯಕರಾದ  ಡೆಸ್ಮಂಡ್ ಟುಟು, ಆಲ್ಬರ್ಟ್ ಲ್ಯೂತುಳಿ ಇಂತಹ ಸಾವಿರ  ಸಾವಿರ  ನಾಯಕರು ಗಾಂಧೀಜಿಯವರು ನಡೆದು ಹೋದ ಶಾಂತಿಯ ಪಥವನ್ನೇ ಆಯ್ಕೆ ಮಾಡಿಕೊಂಡು  ಸಾತ್ವಿಕ ವಾಗಿ  ಹೋರಾಡಿ  ನಿಗ್ರೋಗಳಿಗೆ ಘನತೆಯ ಬದುಕನ್ನು ತಂದುಕೊಟ್ಟವರು. ಡಾಕ್ಟರ್ ಮಂಡೇಲಾ ಅವರಂತೂ ದಶಕಗಳ  ಕಾಲ (27 ವರುಷ  ರಾಬಿನ್ ಐಲ್ಯಾನ್ಡ್ ನಲ್ಲಿ ಜೈಲು  ಶಿಕ್ಷೆ  ಅನುಭವಿಸಿದರು) ಸೆರೆಮನೆಯ  ವಾಸವನ್ನು  ಅನುಭವಿಸಿ ಕೊನೆಗೆ ಬಿಳಿಯ ರ ವಿರುದ್ಧ ಶಾಂತಿಯ ಸತ್ಯಾಗ್ರಹ ನಡೆಸಿ  ಹೋರಾಡಿದವರು. ಅಮೆರಿಕೆಯ ಕರಿಯರಿಗಾಗಿ ಸ್ವಾತಂತ್ರ್ಯ ತಂದು ಕೊಟ್ಟ ಡಾಕ್ಟರ್ ಕಿಂಗ್ ಜ್ಯೂನಿಯರ್ ಜಗತ್ತಿನ ಮುಂದೆ ಗಾಂಧೀಜಿಯವರ ತತ್ವ – ಸಿದ್ಧಾಂತಗಳನ್ನ ಪ್ರಚಾರ ಪಡಿಸಿದವರು.

ಗಾಂಧೀಜಿಯವರ ರಾಷ್ಟ್ರೀಯ ಹೋರಾಟದಲ್ಲಿ ಭಾರತದಿಂದ ಬ್ರಿಟಿಷರನ್ನು ಓಡಿಸುವುದು ಅಷ್ಟೇ ಆಗಿರಲಿಲ್ಲ. ಭಾರತದಲ್ಲಿರುವ ಮೌಢ್ಯದ ವಿರುದ್ಧ, ಅಸಮಾನತೆಯ ವಿರುದ್ಧ, ಮತೀಯ ಐಕ್ಯತೆಯನ್ನು ಸಡಿಲ ಗೊಳಿಸುತ್ತಿರುವ ಆಂಗ್ಲರ  ಒಡೆದು ಆಳುವ  ನೀತಿಯ ವಿರುದ್ಧ, ಅಸ್ಪೃಶ್ಯತೆಯನ್ನು ಆಚರಿಸುತ್ತಿರುವ ಮೇಲು ವರ್ಗದ  ಸವರ್ಣೀಯ ಹಿಂದೂಗಳ ವಿರುದ್ಧ ಹೋರಾಡುವ ಸಂಕಲ್ಪವೂ ಇತ್ತು. ದೀನರ,  ಶೋಷಿತರ ಅಭ್ಯುದಯಕ್ಕಾಗಿ, ರೈತರ,  ಕಾರ್ಮಿಕರ ಪರವಾಗಿ ತಮ್ಮ ಹೋರಾಟವನ್ನು ಸತ್ಯಾಗ್ರಹವನ್ನು ವಿಸ್ತರಿಸಿದ್ದರು ಬಾಪೂಜಿ.

ಪಶ್ಚಿಮ ಭಾರತದ ಗುಜರಾತಿನ ಪೋರ್  ಬಂದರ್ ನ ಮುಸ್ಲಿ ಮರ್ಜೆಂಟ್ ದಾದಾ ಅಬ್ದುಲ್ ಅವರ ಕೇಸನ್ನು ನಡೆಸಲು ಹೋಗಿದ್ದಾಗ ಮೋಹನ್ ದಾಸ್ ಗಾಂಧಿ  ಯಂಗ್ ಬ್ಯಾರಿಸ್ಟರ್ ಆಗಿದ್ದರು. ಅಲ್ಲಿ ಅವರಿಗಾದ ಅವಮಾನ, ಅಪಮಾನಗಳು, ಹತ್ಯಾಯತ್ನಗಳು, ಅಲ್ಲಿದ್ದ ಭಾರತೀಯರ ಮೇಲೆ ಆಗುತ್ತಿದ್ದ ದೌರ್ಜನ್ಯಗಳು ಹಿಂಸೆಗಳು ಅಸಮಾನತೆಗಳು ವರ್ಣ ಬೇಧ ನೀತಿಗಳು  ಈ ಎಲ್ಲವುಗಳು  ಬ್ಯಾರಿಸ್ಟರ್ ಗಾಂಧಿಯನ್ನು ಕೆರಳಿಸಿದವು. ಕ್ರಮೇಣ ಸತ್ಯಾಗ್ರಹಿ ಗಾಂಧಿಯನ್ನಾಗಿ ಪರಿವರ್ತನೆ ಮಾಡಿದವು.

ತಮ್ಮ ಜೀವಮಾನದ 21 ವರುಷಗಳನ್ನು ಸೌತ್ ಆಫ್ರಿಕೆಯ ಸಂಘರ್ಷದ ಬದುಕಿನಲ್ಲಿ ಕಳೆದು ಮೋಹನ್ ದಾಸ್ ಅನ್ನುವ ವಕೀಲ ಜನವರಿ 9, 1915ಕ್ಕೆ  ಮಹಾತ್ಮರಾಗಿ ಭಾರತಕ್ಕೆ ಬಂದರು. ಬಂದವರೇ  ಶಾಂತಿ ಮಾರ್ಗದ ನಾಯಕ ಗೋಪಾಲಕೃಷ್ಣ ಗೋಖಲೆಯವರನ್ನು ಭೇಟಿ ಮಾಡಿದರು. ಗೋಖಲೆ ಅವರ ಅಣತಿಯಂತೆ ಇಡೀ ದೇಶವನ್ನು ಸುತ್ತಿದರು. ಪ್ರತಿಯೊಂದು ಪ್ರಾಂತ್ಯವನ್ನು ಸಂದರ್ಶಿಸಿದರು. ಬೆನ್ನು ಬಾಗಿದ ಬಡ  ಭಾರತ ದರ್ಶನವನ್ನು ಕಂಡರು. ಮನಸು ಮರುಗಿತು, ಹೃದಯ ಕರಗಿತು.

ಈ ದೇಶದ ಜನಸಾಮಾನ್ಯರಿಗೆ ಇರದ ಸುಖ ಸಂಪತ್ತು ನನಗೆ ಬೇಡವೆಂದು ಸರಳ ಜೀವನವನ್ನು ಆಯ್ಕೆ ಮಾಡಿಕೊಂಡರು. ಜೀವನ ಪೂರ್ತಿ ಅರೆ ಬೆತ್ತಲೆ ಫಕೀರನಾಗಿ ಬದುಕಲು ಕಠಿಣ ನಿರ್ಧಾರವನ್ನು ಕೈಗೊಂಡರು. ಜೀವನದ ಕೊನೆಯ ಉಸಿರಿನವರೆಗೂ ಹಾಗೆಯೇ ಬದುಕಿದರು. ದಿವಾನರ ಮನೆತನದ, ಸಿರಿವಂತ ಕುಟುಂಬದ, ಮೇಲ್ವರ್ಗದ ಗಾಂಧಿ ಪ್ರತಿದಿನ ಪ್ರತಿಕ್ಷಣ ಬದಲಾಗುತ್ತಾ, ಮಾನವ ಜಗತ್ತಿಗೆ ತೆರೆದುಕೊಳ್ಳುತ್ತಾ ಹೋದರು, ಭಾರತಕ್ಕೆ ರಾಷ್ಟ್ರಪಿತ  ಆದರು, ಇಡೀ ವಿಶ್ವಕ್ಕೆ ಮಹಾತ್ಮನಾದರು.

79 ವರ್ಷದ ಸಂಘರ್ಷದ ಬದುಕಿನಲ್ಲಿ ಗಾಂಧಿ ಪಕ್ವವಾದರು, ಮಾಗಿದರು. ಭಾರತಕ್ಕಷ್ಟೇ ಅಲ್ಲ ಇಡೀ ಮನುಕುಲಕ್ಕೆ ದಾರಿ ದೀಪ ವಾದರು. ಬಾಪೂಜಿಯ  ಗಟ್ಟಿಯಾದ ಚಿಂತನೆಗಳು ತತ್ವ – ಸಿದ್ಧಾಂತಗಳು ಮಸುಕಾಗುವ ಸರಕಲ್ಲ. ಅವು  ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ಪ್ರಪಂಚಕ್ಕೆ ಹೊಸ ಭಾಷ್ಯವನ್ನು ಬರೆಯಬಲ್ಲಂಥವು. ಎಂದೇ  ಜಗತ್ತಿನ 184 ರಾಷ್ಟ್ರಗಳು ತಮ್ಮ ರಾಷ್ಟ್ರದ ಪ್ರಮುಖ ಸ್ಥಳಗಳಲ್ಲಿ ಗಾಂಧಿ ಪ್ರತಿಮೆಗಳನ್ನ ನಿರ್ಮಿಸಿಕೊಂಡು ಗಾಂಧಿಯವರ ತತ್ವ- ಸಿದ್ಧಾಂತಗಳನ್ನು ತಮ್ಮ ತಮ್ಮ ದೇಶಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಲಿವೆ. ಜಗತ್ತಿನ 301 ಕಡೆ ರಸ್ತೆ ಮಾರ್ಗಗಳಿಗೆ ಗಾಧೀಜಿಯವರ ಹೆಸರನ್ನು ಇರಿಸಿಕೊಂಡು ಗೌರವ ಸೂಚಿಸಿವೆ. ಯಾವುದೇ ಜಾತಿ ಧರ್ಮ ಸಮುದಾಯದ ಸೋಂಕು ಇಲ್ಲದೆಯೇ, ಆ ಜಾತಿ ಧರ್ಮ ಸಮುದಾಯವನ್ನು ಮೀರಿ ಬೆಳೆದ ಮಹಾನ್ ಚೇತನ ಗಾಂಧಿ ಎಂಬುದನ್ನು ಅರಿತೇ ವಿಶ್ವಸಂಸ್ಥೆಯೂ  ಕಳೆದ ತಿಂಗಳ 14 ರಂದು ತನ್ನ ಕಚೇರಿಯಲ್ಲಿ  ಗಾಧೀಜಿಯವರ ಪ್ರತಿಮೆಯನ್ನು ಅನಾವರಣ ಮಾಡಿಕೊಂಡಿತು.

ವಿಶ್ವ ಭ್ರಾತೃತ್ವ, ಪರಧರ್ಮ ಸಹಿಷ್ಣುತೆ, ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು, ಮಾನವೀಯತೆ, ನೈತಿಕತೆ, ಸಮ ಸಮಾಜ ನಿರ್ಮಾಣ, ಕೋಮು ಸೌಹಾರ್ದತೆ, ಅಸ್ಪೃಶ್ಯತಾ ನಿವಾರಣೆ, ವಿದ್ಯಾರ್ಥಿಗಳ  ರೈತರ, ಕಾರ್ಮಿಕರ ಶೋಷಿತರ ದನಿಯಾಗಿ ದುಡಿದ ಮಹಾತ್ಮ  ನಮ್ಮನ್ನಗಲಿ ಇದೇ ಜನವರಿ 30ಕ್ಕೆ  75 ವರ್ಷ ತುಂಬಿತು. ದೇಶದಲ್ಲಿ ಹಿಂಸೆ, ಅನ್ಯಾಯಗಳು ವಿಜೃಂಭಿಸುತ್ತಿವೆ. ಕದನಗಳು, ವಿಭಜನೆಗಳನ್ನು ಜಗತ್ತು ಎಂದಿಲ್ಲದಷ್ಟು ಎದುರಿಸುತ್ತಿದೆ. ಈ ಹೊತ್ತು ಗಾಂಧಿ ಜಗತ್ತಿಗೆ ಬಿಟ್ಟುಹೋದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಪ್ರಸ್ತುತವಾಗಿದೆ.

ನೇತಾಜಿ ಗಾಂಧಿ,  ಬಿಜಾಪುರ

ಗಾಂಧಿ ಅಭಿಮಾನಿ

ಥೀಮ್‌ ಪಾರ್ಕಿನಲ್ಲಿ ಪರಶುರಾಮ ಪ್ರತಿಮೆ ಸ್ಥಾಪನೆ-ತುಳುನಾಡಿಗೂ ಪರಶುರಾಮನಿಗೂ ಏನು ಸಂಬಂಧ? ಭಾಗ ೨
ಕಾರ್ಕಳ ತಾಲೂಕಿನ ಬೈಲೂರಿನ ಉಮಿಕ್ಕಲ್‌ ಬೆಟ್ಟದ ಮೇಲೆ ೩೩ ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯೊಂದಿಗೆ ಪರಶುರಾಮ ಥೀಮ್‌ ಪಾರ್ಕ್‌ ಇಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಗೊಂಡಿದೆ. ಕಾಲ್ಪನಿಕ ಪೌರಾಣಿಕ ವ್ಯಕ್ತಿ ಪರಶುರಾಮನ ಉಲ್ಲೇಖವು ಕರಾವಳಿಯ ಬಗ್ಗೆ ರಚಿತಗೊಂಡ ಯಾವ ಕೃತಿಗಳಲ್ಲೂ ಇಲ್ಲದಿರುವುದರಿಂದ ತುಳುನಾಡಿಗೂ ಪರಶುರಾಮನಿಗೂ ಯಾವ ಸಂಬಂಧವೂ ಇಲ್ಲವೆಂದು ನಿರೂಪಿಸುತ್ತಾರೆ ಚಿಂತಕ ಪ್ರವೀಣ್‌ ಶೆಟ್ಟಿ. ಈ ಸಕಾಲಿಕ ಲೇಖನದ ಎರಡನೇ ಭಾಗ ಇಲ್ಲಿದೆ.

ಪರಶುರಾಮ ಥೀಮ್ ಪಾರ್ಕ್

ತನ್ನ ತಂದೆಗೆ ಯಾವನೋ ಒಬ್ಬ ರಾಜ ಅನ್ಯಾಯ ಮಾಡಿದನು ಎಂದು ಪರಶುರಾಮ ಕೇವಲ ಆ ರಾಜನ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳುವ ಬದಲು ಸಂಪೂರ್ಣ ಕ್ಷತ್ರಿಯ ಜಾತಿಯ ಮೇಲೆ ಸೇಡು ತೀರಿಸಿ ಎಲ್ಲಾ ಕ್ಷತ್ರಿಯ ಗಂಡಸರನ್ನು ಕೊಲ್ಲುತ್ತಾನಂತೆ! ಗರ್ಭಿಣಿ ಮಹಿಳೆಯರ ಹೊಟ್ಟೆಯಲ್ಲಿ ಇರುವ ಗಂಡು ಭ್ರೂಣವನ್ನೂ ನಾಶ ಮಾಡಿದನಂತೆ! ಈ ಭೂಮಿಗೆ 21 ಸಾರಿ ಸುತ್ತಿ ಏಳೂ ಖಂಡಗಳಲ್ಲಿಯ ಸಮಸ್ತ ಕ್ಷತ್ರಿಯ ಗಂಡಸರನ್ನು ಕೊಂದನಂತೆ. ಆನಂತರ ಬದುಕಿ ಉಳಿದವರು ಕೇವಲ ಕ್ಷತ್ರಿಯ ಹೆಂಗಸರು ಮಾತ್ರವಂತೆ! (ಭೂಲೋಕವೆಂದರೆ ಅದು ಒಂದು ಹಳ್ಳಿಯೇ? ಅಥವಾ ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ, ಯುರೋಪ್ ಖಂಡಗಳಿಗೂ ಪರಶುರಾಮ ಹೋಗಿದ್ದನೆ? ಚೀನಾ, ಜಪಾನ್, ಕೋರಿಯಾಕ್ಕೂ ಹೋಗಿದ್ದನೆ? ಧ್ರುವ ಪ್ರದೇಶಕ್ಕೂ ಹೋಗಿದ್ದನೆ? ಅಲ್ಲಿಯೂ ಕ್ಷತ್ರಿಯರು ಇದ್ದರೆ?)

ನಮ್ಮ ಅನೇಕ ಪೌರಾಣಿಕ ಕಥೆಗಳಲ್ಲಿರುವ ಇಂತಹಾ ಅಸಂಗತ ಅಂಶಗಳನ್ನು ವಿಶ್ಲೇಷಿಸಲು ಈಗ ಕಾಲ ಪಕ್ವವಾಗಿದೆ. ಒಂದೆಡೆ ಪರಶುರಾಮನು ಕ್ಷತ್ರಿಯರನ್ನು ಸಂಪೂರ್ಣ ನಾಶ ಮಾಡಿದ ಎಂದು ಪುರಾಣ ಹೇಳುತ್ತದೆ. ಆದರೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಇಂದಿಗೂ ಶೇ.20 ರಷ್ಟು ಹಿಂದೂಗಳು ಕ್ಷತ್ರಿಯ ವರ್ಗದಲ್ಲಿ ಬರುತ್ತಾರೆ. ಪರಶುರಾಮನ ದಾಳಿಯಿಂದ ಕ್ಷತ್ರಿಯ ಗಂಡಸರೆಲ್ಲಾ ಸತ್ತಿದ್ದರೂ ಬದುಕಿ ಉಳಿದಿದ್ದ ಕ್ಷತ್ರಿಯ ಹೆಂಗಸರಿಗೆ ಮುಂದಿನ ಪೀಳಿಗೆಯ ಮಕ್ಕಳಾಗಿದ್ದು “ನಿಯೋಗ” ಎಂಬ ವಿಧಾನದಿಂದಂತೆ ! (ನಿಯೋಗ ಅಂದರೆ ಬ್ರಾಹ್ಮಣ ಗಂಡಸರ ಜತೆ ಅನೈತಿಕ ಸಂಬಂಧದಿಂದಾಗಿ ಕ್ಷತ್ರಿಯ ಹೆಂಗಸರಿಗೆ ಮುಂದಿನ ಪೀಳಿಗೆಯ ಮಕ್ಕಳಾಗಿ ಅವರ ಕ್ಷತ್ರಿಯ ಸಂತತಿ ಮುಂದುವರಿಯುವುದು!) ಈ ಅನೈತಿಕ ಕಟ್ಟುಕಥೆಯ ಮೂಲಕ ಈಗಿನ ಕ್ಷತ್ರಿಯರ ಹುಟ್ಟನ್ನೇ ವೈದಿಕರು ನೇರವಾಗಿ ಅವಮಾನಿಸಿದ್ದಾರೆ! ಪರಶುರಾಮನ ಇಂತಹಾ ಬಾಲಿಶ ಕಥೆಯನ್ನು ನಾವು  ಪ್ಪಿಕೊಳ್ಳುವುದರಿಂದ ಇಂದಿನ ಎಲ್ಲಾ ಕ್ಷತ್ರಿಯರೂ ಬ್ರಾಹ್ಮಣರಿಗೆ ಅನೈತಿಕವಾಗಿ ಹುಟ್ಟಿದವರು ಎಂದು ಸ್ವತಃ ಈಗಿನ ಕ್ಷತ್ರಿಯ ಜಾತಿಯವರೆ ಒಪ್ಪಿಕೊಂಡಂತಾಯಿತು ತಾನೇ? ಇಷ್ಟೊಂದು ಅವಮಾನಕರ ಕಥೆಯನ್ನು ಈಗಿನ ಕ್ಷತ್ರಿಯ ವರ್ಗದವರು ಸಭೆ ಸಮಾರಂಭಗಳಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವುದೆಂದರೆ ತಮ್ಮ ಪೂರ್ವಜರ ಶೀಲವನ್ನು ತಾವೇ ಅವಮಾನಿಸಿದಂತೆ ಅಲ್ಲವೇ! ವೈದಿಕರ ಕಾಲ್ಪನಿಕ ಪೌರಾಣಿಕ ಕಥೆಗಳು ಯಾವ ಮಟ್ಟಕ್ಕೆ ಶೂದ್ರರನ್ನು ಮಾನಸಿಕ ಗುಲಾಮಗಿರಿಗೆ ದೂಡಿವೆ ಎಂದರೆ ಶೂದ್ರರು ಇಂತಹಾ ಅವಮಾನಕರ ಕಥೆಯನ್ನು ತಾವೇ ಸ್ವತಃ ಪ್ರಚಾರ ಮಾಡುವ ಮೂಲಕ ತಮ್ಮ ಇಡೀ ಸಮುದಾಯದ ಪೂರ್ವಜರು ಅನೈತಿಕವಾಗಿ ಹುಟ್ಟಿದವರು ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆ!

ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಯಾವುದೇ ಸಭೆ ಸಮಾರಂಭಗಳಿಗೆ ಹೋದರೂ ಅಲ್ಲಿ ಭಾಷಣಕಾರ ಮೊಟ್ಟಮೊದಲು ಹೇಳುವುದು ತಮ್ಮದು “ಪರಶುರಾಮ ಸೃಷ್ಟಿ” ಎಂದು. ಯಾರೋ ಒಬ್ಬ ಬ್ರಾಹ್ಮಣ ಸನ್ಯಾಸಿ ಉತ್ತರ ಭಾರತದಿಂದ ದಕ್ಷಿಣಕ್ಕೆ ಬಂದು ತನ್ನ ಕೊಡಲಿ ಸಮುದ್ರಕ್ಕೆ ಬೀಸಿ ಇಲ್ಲಿ ಸಾವಿರಾರು ಚದರು ಮೈಲಿ ಭೂಮಿಯನ್ನು ಸಮುದ್ರದಿಂದ ಮೇಲೆತ್ತಿದ ಮತ್ತು ಈ ಹೊಸ ಭೂಮಿಯನ್ನೆಲ್ಲಾ ಬ್ರಾಹ್ಮಣರಿಗೆ ದಾನ ಮಾಡಿದ, ಹಾಗೂ ನಂತರ ಅದೇ ಬ್ರಾಹ್ಮಣರು ಬೇರೆ ಕಡೆಯಿಂದ ಕ್ಷತ್ರಿಯ ವಿಧವೆಯರನ್ನು ಹಾಗೂ ಶೂದ್ರರನ್ನೂ ಕರೆತಂದು ಇಲ್ಲಿ ನೆಲೆಗೊಳಿಸಿ ಅವರಿಗೆ ಮಕ್ಕಳನ್ನು ಹುಟ್ಟಿಸಿಕೊಟ್ಟರು ಎಂದು ತಮ್ಮದೇ ಪೂರ್ವಜರನ್ನು ನೇರವಾಗಿ ಅವಮಾನಿಸುವ ಕಟ್ಟುಕಥೆಯನ್ನು ಈ ಆಧುನಿಕ ಯುಗದಲ್ಲೂ ನಾವು ಶೂದ್ರರೇ ಪ್ರಚಾರ ಮಾಡುತ್ತಿರುವುದು ವಿಪರ್ಯಾಸ!

ಇಲ್ಲಿಯ ಇತಿಹಾಸದ ಸಂಶೋಧಕರ ಪ್ರಕಾರ ತುಳುನಾಡಿನಲ್ಲಿ ಮೊದಲು ಬ್ರಾಹ್ಮಣರೇ ಇರಲಿಲ್ಲವಂತೆ. ಬ್ರಾಹ್ಮಣರು ತುಳುನಾಡಿಗೆ ಉತ್ತರ ಭಾರತದ ಅಹಿಚ್ಛತ್ರದಿಂದ ವಲಸೆ ಬಂದಿದ್ದು ಬನವಾಸಿ ಕದಂಬ ರಾಜರ ಕಾಲದಲ್ಲಿ, ಅಂದರೆ ಸುಮಾರು 1500 ವರ್ಷಗಳ ಹಿಂದೆ. ಇದರ ಅರ್ಥ ಶೂದ್ರರೇ ತುಳುನಾಡಿನ ಮೂಲ ನಿವಾಸಿಗಳು ಹಾಗೂ ಬ್ರಾಹ್ಮಣರು ತದನಂತರ ವಲಸೆ ಬಂದವರು. ಇದು ಬ್ರಾಹ್ಮಣ ಪರಶುರಾಮ ನಮ್ಮ ತುಳುನಾಡನ್ನು ಮೊದಲು ಸೃಷ್ಟಿಸಿ ನಂತರ ಅವನೇ ಬ್ರಾಹ್ಮಣರನ್ನು ಹಾಗೂ ಶೂದ್ರ ಪ್ರಜೆಗಳನ್ನು ಕರೆತಂದಿದ್ದು ಎಂಬ ಸಿದ್ಧಾಂತ ಶುದ್ಧ ಸುಳ್ಳು ಎಂಬುದನ್ನು ಸಾಬೀತುಗೊಳಿಸುತ್ತದೆ.

ಆದಿಮ ಸಂಸ್ಕೃತಿಯನ್ನು ಅನುಸರಿಸುತ್ತಿದ್ದ ತುಳುನಾಡಿನಲ್ಲಿ ಪ್ರಕೃತಿ ಪೂಜೆಯ ಪ್ರತೀಕವಾಗಿ ನಾಗಪೂಜೆ ಮತ್ತು ಭೂತಪೂಜೆ ಅನಾದಿ ಕಾಲದಿಂದಲೂ ನಡೆಯುತ್ತಿದೆ. ನಾಗಪೂಜೆಗೂ ವೈದಿಕ ಪರಶುರಾಮನಿಗೂ ಯಾವುದೇ ಸಂಬಂಧ ಇಲ್ಲ. ಪರಶುರಾಮನ ಕಾಲ್ಪನಿಕ ಕಥೆ ತುಳುನಾಡಿಗೆ ಆಮದಾಗುವುದಕ್ಕಿಂತ ನೂರಾರು ವರ್ಷಗಳ ಮೊದಲೇ ನಮ್ಮಲ್ಲಿ ನಾಗಪೂಜೆ ಇತ್ತು. ಪರಶುರಾಮನಿಂದ ತುಳುನಾಡಿನಲ್ಲಿ ನಾಗಪೂಜೆ ಸುರುವಾಗಿದ್ದು ಎಂದು ಕರಾವಳಿಯ ಇತಿಹಾಸವನ್ನೇ ವೈದಿಕರು ತಿರುಚಿ ಈಗ ಇಲ್ಲಿಯ ಮೂಲನಿವಾಸಿಗಳನ್ನು ಮೋಸ ಮಾಡುತ್ತಿದ್ದಾರೆ! ಈಗಲೂ ಪ್ರತಿ ಪೂಜೆಯಲ್ಲೂ ಪರಶುರಾಮನ ಹೆಸರು ಉಲ್ಲೇಖಿಸಿಯೇ ಶೂದ್ರರ ಮನೆಯಲ್ಲಿ ಪೂಜೆ ಸಂಪನ್ನ ಮಾಡುವುದು ಕರಾವಳಿಯ ತುಳುವ ಪುರೋಹಿತರ ಅನಿಷ್ಟ ಪದ್ಧತಿ. ಈ ಆಧುನಿಕ ಕಾಲದಲ್ಲೂ ಇಂತಹಾ ಶುದ್ಧ ಕಾಲ್ಪನಿಕ ಕಥೆಯನ್ನು ಅಡಿಗಡಿಗೆ ಉದ್ಧರಿಸುವ ಮೂಲಕ ಪುರೋಹಿತರು ನಮ್ಮ ಪೂರ್ವಜರ ಶೀಲವನ್ನೇ ಅವಮಾನಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಆದರೂ ಕರಾವಳಿಯ ಕ್ಷತ್ರಿಯ-ಶೂದ್ರ ವರ್ಗದವರೇ ಪರಶುರಾಮನ ಈ ಬಾಲಿಶ ಕಥೆಯನ್ನು ಈಗಲೂ ನಂಬುವುದು ಮತ್ತು ಪ್ರತಿಯೊಂದು ಸಭೆಯಲ್ಲೂ “ನಮ್ಮದು ಪರಶುರಾಮ ಸೃಷ್ಟಿ” ಎಂದು ಹೆಮ್ಮೆಯಿಂದ (ನಿರ್ಲಜ್ಜವಾಗಿ) ಹೇಳಿಕೊಳ್ಳುವುದು ತುಂಬಾ ದುರಾದೃಷ್ಟಕರ.

ಅಂತೆಯೇ ನಮ್ಮ ಕರಾವಳಿಯಲ್ಲಿಯೂ ಬಿಲ್ಲವ ಬಂಟ ಮೊಗವೀರ ಅರೆಭಾಷೆ ಗೌಡರು ರಾಮಕ್ಷತ್ರಿಯ, ಮುಂತಾದ ಒಟ್ಟು ಶೇ.60 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಸಮುದಾಯದವರು ತಾವು ಕ್ಷತ್ರಿಯರು ಎಂದು ಹೆಮ್ಮೆ ಪಡುತ್ತಾರೆ, (ಆದರೆ ಮಿಲಿಟರಿ ಸೇರಲು ಹೆದರುತ್ತಾರೆ ಎಂಬುದು ಬೇರೆ ವಿಷಯ!). ಹಾಗಿರುವಾಗ ಈ 60% ಕರಾವಳಿಗರ ಪೂರ್ವಜರೆಲ್ಲಾ ನಿಯೋಗ ಎಂಬ ಬಲಾತ್ಕಾರದ ಕೂಡುವಿಕೆಯಿಂದ ಹುಟ್ಟಿದವರು ಎಂದು ಅವಮಾನಿಸುವ ಪರಶುರಾಮನ ಕುತ್ಸಿತ ಪುರಾಣ ಕಥೆಯನ್ನು ನಮ್ಮ ಕರಾವಳಿಯವರ ಹೊರತು ಬೇರೆ ಯಾವುದೇ ಪ್ರದೇಶದ ಮೂಲನಿವಾಸಿಗಳೂ ಪೆದ್ದುಪೆದ್ದಾಗಿ ಹೇಳಿಕೊಂಡು ತಿರುಗುವುದಿಲ್ಲ!

ಅಷ್ಟೇ ಅಲ್ಲ ಭಾರತದ ಯಾವುದೇ ರಾಜ್ಯಕ್ಕೆ ಹೋದರೂ ಪ್ರತಿ ರಾಜ್ಯದಲ್ಲಿಯೂ ಕ್ಷತ್ರಿಯ ವರ್ಗದಲ್ಲಿ ಬರುವ ಜಾತಿಗಳವರು ಕನಿಷ್ಠ 20% ಆದರೂ ಇದ್ದಾರೆ. ಇವರ ಪೂರ್ವಿಕ ಗಂಡಸರನ್ನು ಪರಶುರಾಮ ಸಾರಾಸಗಟಾಗಿ ಕೊಂದಿದ್ದರೆ ಅವರ ಈಗಿನ ಪೀಳಿಗೆ ನಿಯೋಗದಿಂದ ಹುಟ್ಟಿದ್ದು ಎಂದು ಒಪ್ಪಿದಂತೆ ಆಯಿತಲ್ಲವೇ? ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಜಗದೀಶ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಬಾಬು ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್, ಜ್ಯೋತಿ ಬಸು, ಮುಂತಾದವರೆಲ್ಲಾ “ಕಾಯಸ್ಥ” ಎಂಬ ಕ್ಷತ್ರಿಯ ಜಾತಿಯವರು. ಪ್ರಧಾನಿಗಳಾಗಿದ್ದ ಚರಣ್ ಸಿಂಗ್, ಚಂದ್ರಶೇಖರ್, ವಿ ಪಿ ಸಿಂಗ್, ದೇವೇಗೌಡ, ಡಾ.ಮನಮೋಹನ್ ಸಿಂಗ್ ಇವರ ಜಾತಿಗಳೂ ಕ್ಷತ್ರಿಯ ವರ್ಗದಲ್ಲಿ ಬರುತ್ತವೆ. ಹಾಗಾದರೆ ಇವರ ಪೂರ್ವಜರೆಲ್ಲಾ ಬ್ರಾಹ್ಮಣರಿಗೆ ಅನೈತಿಕವಾಗಿ ಹುಟ್ಟಿದವರೇ?

ಒಂದು ವೇಳೆ ಪರಶುರಾಮನೂ ಏಕಲವ್ಯ, ಕರ್ಣ, ಶಂಭೂಕರಂತೆ ಕೆಳ ಜಾತಿಯವನಾಗಿದ್ದರೆ ಹಾಗೂ ಅವನು ಕ್ಷತ್ರಿಯ ಗಂಡಸರನ್ನೆಲ್ಲಾ ಏಕಾಂಗಿಯಾಗಿ ನಾಶ ಮಾಡಿ ಅವರ ಹೆಂಗಸರನ್ನು ತನ್ನ ಕೆಳಜಾತಿಯ ಗಂಡಸರೊಂದಿಗೆ ‘ನಿಯೋಗ’ (ಬಲಾತ್ಕಾರದ ಕೂಡುವಿಕೆ) ಮಾಡಿ ಇಂದಿನ ಕ್ಷತ್ರಿಯ ಜನಾಂಗವನ್ನು (ಅನೈತಿಕವಾಗಿ) ಹುಟ್ಟಿಸಿದನು ಎಂಬ ಪುರಾಣ ಕಥೆ ಪ್ರಚಲಿತವಾಗಿದ್ದರೆ ಇಂದು ನಮ್ಮ ಕರಾವಳಿಯವರು ಮಾತು ಮಾತಿಗೆ ನಮ್ಮದು “ಶೂದ್ರ ಭಾರ್ಗವ ಪರಶುರಾಮನ ಸೃಷ್ಟಿ” ಎಂದು ಹೆಮ್ಮೆ ಪಡುತ್ತಿದ್ದರೆ? ಡಾ.ಅಂಬೇಡ್ಕರರು ನಮ್ಮ ಸಂವಿಧಾನ ಬರೆದಿದ್ದಾರೆ ಎಂಬುದನ್ನೇ ಒಪ್ಪಿಕೊಳ್ಳಲು ಹಿಂಜರಿಯುತ್ತಿರುವ ಮೇಲ್ಜಾತಿಯವರು ಶೂದ್ರ ಪರಶುರಾಮನ ಪುರಾಣ ಕಥೆಯನ್ನು ಒಪ್ಪಿಕೊಳ್ಳುತ್ತಿದ್ದರೇ? ಅಷ್ಟೇ ಅಲ್ಲ ವೈದಿಕರಂತೂ ಇಂತಹಾ ಪೊಳ್ಳು ಪುರಾಣ ಕಥೆ ಬರೆದಾತನನ್ನೇ ಹಿಗ್ಗಾಮುಗ್ಗಾ ಹೀಯಾಳಿಸುತ್ತಿದ್ದರು. ಅಷ್ಟೇ ಅಲ್ಲ ಮೇಲ್ಜಾತಿಯವರು ಆ ಶೂದ್ರ ಪರಶುರಾಮನ ಕುರಿತು ಮತ್ತೊಂದು ಕಾಲ್ಪನಿಕ ಕಥೆ ಕಟ್ಟಿ ಅವನು ಅಸುರ ಕುಲದವನಾಗಿದ್ದ ಹಾಗೂ ಮಹಾನೀಚನಾಗಿದ್ದ ಎಂಬ ದಂತಕಥೆ ಹೆಣೆದು, ಕೊನೆಗೆ ತಮ್ಮ ವೈದಿಕ ದೇವರು ಚಿತ್ರವಿಚಿತ್ರ ರೂಪ ಧರಿಸಿ ಬಂದು ಆ ‘ಪರಶಾಸುರ’ ನನ್ನು ವಧಿಸಿದ ಅಜ್ಜಿಕಥೆ ಕಟ್ಟಿ ಕೃತಾರ್ಥರಾಗುತ್ತಿದ್ದರು.

ಈಗಿರುವ ಅಸುರ-ದಾನವ-ರಾಕ್ಷಸರ ಪುರಾಣ ಕತೆಗಳೆಲ್ಲಾ ಇಂತಹವೇ ಕಟ್ಟುಕಥೆ ತಾನೇ? “ರಾಕ್ಷಸ” ಎಂಬ ನೂರು ಅಡಿ ಎತ್ತರದ ಮಾಯಾವಿ ಜೀವಿಗಳು ಈ ಜಗತ್ತಿನಲ್ಲಿ ಎಂದೂ ಇರಲಿಲ್ಲವೆಂದು ಜೀವಶಾಸ್ತ್ರಜ್ಞರೇ ಹೇಳುತ್ತಾರೆ. ಹಾಗಾಗಿ ರಾಕ್ಷಸರೇ ಇಲ್ಲದಿರುವಾಗ ರಾಕ್ಷಸರನ್ನು ಕೊಲ್ಲಲು ದೇವರು ಬೇರೆ ಬೇರೆ ವಿಚಿತ್ರ ರೂಪದಲ್ಲಿ ಅವತಾರ ತಾಳುವ ಪ್ರಸಂಗವೇ ಉದ್ಭವಿಸುವುದಿಲ್ಲ! ಮಹಾತ್ಮಾ ಜ್ಯೋತಿಬಾ ಫುಲೇ ಹೇಳಿರುವಂತೆ “ಒಳ್ಳೆಯವರನ್ನು ಕೆಟ್ಟವರೆಂದೂ, ಕೆಟ್ಟವರನ್ನು ಒಳ್ಳೆಯವರೆಂದೂ” ತಿರುಚಿ ಬರೆದಿರುವುದೇ ಈಗ ನಾವೆಲ್ಲಾ ಭಯಭಕ್ತಿಯಿಂದ ಪಠಿಸುವ ವೈದಿಕ ದೇವರ ಅವತಾರದ ಪವಿತ್ರ ಪುರಾಣಗಳು! ಹೀಗೆ ಧಾರ್ಮಿಕ ವಿಷಯದಲ್ಲಿ ಜನರನ್ನು ಹೊಸ ದಿಕ್ಕಿನತ್ತ ಆಲೋಚಿಸುವಂತೆ ಮಾಡಿದ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಡಾ. ಅಂಬೇಡ್ಕರರಿಗೆ ಧನ್ಯವಾದಗಳು. ಕೊರೋನಾದ ನಂತರ ಜನರ ಬದಲಾದ ಮಾನಸಿಕತೆಯನ್ನು ಬಳಸಿಕೊಂಡು ನಮ್ಮ ಹೆಚ್ಚಿನ ಪೌರಾಣಿಕ ಕಥೆಗಳಲ್ಲಿರುವ ಅಸಂಗತ ಅಂಶಗಳನ್ನು ಹೊಸ ದೃಷ್ಟಿಕೋನದಿಂದ ವಿಶ್ಲೇಷಿಸಲು ಈಗ ಕಾಲ ಪಕ್ವವಾಗಿದೆ!

ಪ್ರವೀಣ್ ಎಸ್ ಶೆಟ್ಟಿ

ಚಿಂತಕರು

ಮೇಲ್ಜಾತಿಗಳಿಗೂ ಮಣೆ: ಜಾಹೀರಾತು ನೀತಿ ಉಲ್ಲಂಘಿಸಿದ ಸರ್ಕಾರ
ಬ್ರಾಹ್ಮಣ ಸಮುದಾದ ಒಡೆತನದ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟಗಳ ಜಾಹೀರಾತು ನೀಡಲು ವಾರ್ತಾ ಮತ್ತು ಪ್ರಚಾರ ಇಲಾಖೆ ಸುತ್ತೋಲೆ ಹೊರಡಿಸಿದೆ. ಆ ಮೂಲಕ ಸಾಮಾಜಿಕ‌ ನ್ಯಾಯದ ಆಶಯವನ್ನೆ ಸರ್ಕಾರ ಬುಡಮೇಲು ಮಾಡಿದೆ. ಸರ್ಕಾರದ ವಿವೇಚನಾ ರಹಿತ ಈ ನಡೆ ಸಾರ್ವಜನಿಕ ವಲಯದಲ್ಲಿ ಅಸಾಮಾಧಾನವನ್ನು ಹುಟ್ಟುಹಾಕಿದ್ದು ಈ ಕುರಿತು ಪತ್ರಕರ್ತ ಎನ್.ರವಿಕುಮಾರ್ ಬರೆದಿದ್ದಾರೆ.

ರಾಜ್ಯದ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಸರ್ಕಾರಿ  ಜಾಹೀರಾತು ವಿತರಣೆಯಲ್ಲೀಗ ‘ಜಾತಿ’ ಆಧಾರದ ಕೊಡುಗೆಯ ಆದೇಶಗಳು ವ್ಯಾಪಕ ಚರ್ಚೆಗೆ  ಎಡೆ ಮಾಡಿಕೊಟ್ಟಿವೆ.

ಇದುವರೆಗೂ ಎಸ್ಸಿ/ ಎಸ್ಟಿ ಗಳ ಮಾಲೀಕತ್ವದ ಪತ್ರಿಕೆಗಳಿಗೆ ಮಾತ್ರ  ಪ್ರತಿ ತಿಂಗಳಿಗೊಮ್ಮೆ ನೀಡಲಾಗುತ್ತಿದ್ದ ವಿಶೇಷ ಜಾಹೀರಾತು ಮಾದರಿಯನ್ನು ಸರ್ಕಾರ ಇದೀಗ ನಿರ್ಧಿಷ್ಟವಾಗಿ ಬ್ರಾಹ್ಮಣ ಸಮುದಾಯಕ್ಕೂ ವಿಸ್ತರಿಸುವ ಮೂಲಕ ಸರ್ಕಾರವೆ ರೂಪಿಸಿದ “ಜಾಹೀರಾತು ನೀತಿ-2013” ನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಇದೇ ಕಾಲಕ್ಕೆ ಬಿಜೆಪಿ ಸರ್ಕಾರ ತನ್ನ ಸೈದ್ಧಾಂತಿಕ ಧೋರಣೆಯಂತೆ ಸಾಮಾಜಿಕ‌ ನ್ಯಾಯದ ಆಶಯವನ್ನೆ ಬುಡಮೇಲು ಮಾಡಿದೆ.

ವಾರ್ತಾ ಇಲಾಖೆಯ ಮಾನ್ಯತೆ (Media list) ಪಡೆದ ಪತ್ರಿಕೆಗಳಿಗೆ ಸರ್ಕಾರಿ ಜಾಹೀರಾತು ಬಿಡುಗಡೆ ಮಾಡುವಲ್ಲಿ ತಾರತಮ್ಯ ವಾಗದಂತೆ ಮತ್ತು ಜಾಹೀರಾತು ವಿತರಣೆಯಲ್ಲಿ ಸ್ಪಷ್ಟವಾದ ಮಾರ್ಗ ಸೂಚಿಗಳ ಅವಶ್ಯಕತೆಯನ್ನು  ಮನಗಂಡು 2013 ರಲ್ಲಿ ಅಂದಿನ ರಾಜ್ಯ ಸರ್ಕಾರ ” ಜಾಹೀರಾತು ನೀತಿ-2013″ ನ್ನು ಜಾರಿಗೆ ತಂದಿತು.

ಜಾಹೀರಾತು ನೀತಿ-2013

ಇದರನ್ವಯ ಮಾನ್ಯತೆ ಪಡೆದ‌ ಜಿಲ್ಲಾ, ಪ್ರಾದೇಶಿಕ, ರಾಜ್ಯ, ರಾಷ್ಟ್ರ ಮಟ್ಟದ ಪತ್ರಿಕೆಗಳಿಗೆ ಸರ್ಕಾರಿ ಜಾಹೀರಾತು ವಿತರಣೆ, ಜಾಹೀರಾತು ದರ ನಿಗದಿ, ಮಾಧ್ಯಮ‌ ಪಟ್ಟಿಗೆ ಸೇರ್ಪಡೆ ಇತ್ಯಾದಿ  ಸ್ಪಷ್ಟ ಮಾರ್ಗ ಸೂಚಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಪ್ರತಿ‌ ಐದು ವರ್ಷಕ್ಕೊಮ್ಮೆ ಜಾಹೀರಾತು ನೀತಿ  ಪರಿಷ್ಕೃತಗೊಂಡು ಮುಂದುವರೆಯಬೇಕಾಗಿರುತ್ತದೆ.

ಕಳೆದ 20 ವರ್ಷಕ್ಕೂ ಹೆಚ್ಚಿನ ಕಾಲದಿಂದ  ಸಾಮಾಜಿಕ ನ್ಯಾಯದ ಆಶಯದಂತೆ ಪರಿಶಿಷ್ಟ ಜಾತಿ/ ವರ್ಗಗಳ ಮಾಲೀಕತ್ವದ ಪತ್ರಿಕೆಗಳಿಗೆ ಎಸ್ ಸಿ ಪಿ ಎಸ್/ ಟಿಎಸ್ಪಿ ಅನುದಾನದಡಿ ನೀಡುತ್ತಾ ಬರಲಾಗುತ್ತಿದ್ದ ವಿಶೇಷ ಜಾಹೀರಾತು ಪದ್ಧತಿಯನ್ನು ಮಾತ್ರ ಜಾಹೀರಾತು ನೀತಿಯೊಳಗೆ ಅಳವಡಿಸಲಾಗಿದೆ. ಉಳಿದಂತೆ  ಜಾತಿ ಆಧಾರಿತವಾಗಿ ಯಾವುದೇ ಜಾತಿಗಳಿಗೆ ಜಾಹೀರಾತು ನೀಡುವ ಯಾವುದೇ ಪ್ರಸ್ತಾಪ ಇಲ್ಲ. ಇಂತಹ ಜಾಹೀರಾತು ನೀತಿ 2018 ಕ್ಕೆ ಪರಿಷ್ಕೃತ ಗೊಂಡಿದ್ದರೂ  ಸರ್ಕಾರ  ಅನುಷ್ಠಾನ ಗೊಳಿಸದೆ 2013 ರ ನೀತಿಯನ್ನೇ ಮುಂದುವರೆಸಿದೆ.

ಸಾಮಾಜಿಕ ನ್ಯಾಯದ ಆಶಯವನ್ನೆ ಸರ್ಕಾರ ಲೇವಡಿ ಮಾಡಿದೆ.

ಈ‌ ಮಧ್ಯೆ  ಓಬಿಸಿ ಗಳ ಮಾಲೀಕತ್ವದ ಪತ್ರಿಕೆಗಳಿಗೆ ಅದರಲ್ಲೂ ‘ಪ್ರವರ್ಗ 1 ‘ ಕ್ಕೆ ಸೇರಿದವರಿಗೆ ಆದ್ಯತೆ ಮೇರೆಗೆ  ಎಸ್ಸಿ/ಎಸ್ಟಿ ಮಾದರಿ ವಿಶೇಷ ಜಾಹೀರಾತು ನೀಡುವ ಬಗ್ಗೆ ಮನವಿಗಳು ಸರ್ಕಾರದ ಮುಂದೆ ಬಂದಿದ್ದು ಹಿಂದಿನ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಯೋಜನೇತರ ವೆಚ್ಚಗಳಲ್ಲಿ ಈ ವರ್ಗಕ್ಕೆ  ಜಾಹೀರಾತು ವಿತರಣೆಗೆ ನಿರ್ಧಾರ ಕೈಗೊಂಡಿದ್ದರೂ ಅದು ಜಾರಿಯಾಗಿರಲಿಲ್ಲ.

ಆದರೆ ಕಳೆದ ಬಜೆಟ್ ನಲ್ಲಿ  ಬಸವರಾಜ ಬೊಮ್ಮಾಯಿ ಸರ್ಕಾರ  ಓಬಿಸಿ ಇಲಾಖೆಯ ವೆಚ್ಚದಡಿ ಈ ಸಮುದಾಯಕ್ಕೆ ಜಾಹೀರಾತು ನೀಡುವ ನಿರ್ಧಾರವನ್ನು ಕೈಗೊಂಡು ಇತ್ತೀಚೆಗಷ್ಟೆ ಆದೇಶ ಮಾಡಿದೆ. ಓಬಿಸಿ ಪಟ್ಟಿಯಲ್ಲಿ ಆದಾಯ ಮಿತಿಗನುಗುಣವಾಗಿ ಮಾನದಂಡ ನಿಗದಿ ಪಡಿಸಲಾಗಿದೆ. ಇದರಲ್ಲಿ ಲಿಂಗಾಯಿತ, ಒಕ್ಕಲಿಗ ಸಮುದಾಯಗಳು ಸೇರಿದ್ದು ಆದಾಯ ಮಿತಿಯ ಮಾನದಂಡಕ್ಕನುಗುಣವಾಗಿ ಜಾಹೀರಾತು ಪಡೆಯಲು ಅರ್ಹತೆ ಪಡೆದಿದ್ದಾರೆ.

ಆದರೆ ಬಜೆಟ್ ನಲ್ಲಾಗಲಿ, ಜಾಹೀರಾತು ನೀತಿಯಲ್ಲಾಗಲಿ ಪ್ರಸ್ತಾಪವೇ ಇಲ್ಲದ ಬ್ರಾಹ್ಮಣರ ಒಡೆತನದ ಪತ್ರಿಕೆಗಳಿಗೆ ಸರ್ಕಾರ ಸದ್ದಿಲ್ಲದೆ ಜಾಹೀರಾತು ಆದೇಶವನ್ನು ನೀಡುವ ಮೂಲಕ  ಜಾಹೀರಾತು ನೀತಿಯನ್ನು ಮತ್ತು ಅದಕ್ಕಿಂತ ಮುಖ್ಯವಾದ ಸಾಮಾಜಿಕ ನ್ಯಾಯದ ಆಶಯವನ್ನೆ   ಲೇವಡಿ ಮಾಡಿದೆ.

ಮೇಲ್ಜಾತಿಗಳ ಲಾಬಿಗೆ ತಲೆಬಾಗಿದ ಸರ್ಕಾರ

ಪರಿಶಿಷ್ಟ ಜಾತಿ/ ವರ್ಗಗಳ ಮಾಲೀಕತ್ವದ 190 ಕ್ಕೂ ಹೆಚ್ಚಿನ ಪತ್ರಿಕೆಗಳಿದ್ದು ಅವುಗಳಿಗೆ  ಇದುವರೆಗೂ ನೀಡುತ್ತಿರುವ ಒಂದು ಪುಟ (10 ವರ್ಷ  ಪೂರೈಸಿದ ಪತ್ರಿಕೆಗಳಿಗೆ ಹೆಚ್ಚುವರಿ ಅರ್ಧಪುಟ)  ಜಾಹೀರಾತನ್ನು ಎರಡು ಪುಟಕ್ಕೆ ಮತ್ತು ಅರ್ಧ ಪುಟವನ್ನು ಒಂದು ಪುಟಕ್ಕೆ ಹೀಗೆ ಪ್ರತಿ ತಿಂಗಳು ಮೂರು ಪುಟಗಳ ಜಾಹೀರಾತು ಬೇಡಿಕೆ ಈಡೇರಿಸಿಕೊಳ್ಳಲು  ಪರಿಶಿಷ್ಟ ಜಾತಿ/ ವರ್ಗಗಳು ಕಳೆದ ನಾಲ್ಕು ವರ್ಷಗಳಿಂದ  ಹೋರಾಟವನ್ನೇ ನಡೆಸುತ್ತಿವೆ. ಆದರೆ ಸರ್ಕಾರ ಈ ಬೇಡಿಕೆಯನ್ನು ಈಡೇರಿಸುವ ಮನಸ್ಸು ಮಾಡಿಲ್ಲ.  ಆದರೆ ಕೇವಲ ಆರು ತಿಂಗಳ ಹಿಂದೆಯಷ್ಟೆ ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೂ ಎಸ್ಸಿ/ ಎಸ್ಟಿ- ಓಬಿಸಿ ಗಳಿಗೆ ನೀಡುವ ಮಾದರಿ ಜಾಹೀರಾತು ನೀಡಬೇಕೆಂದು ಸಲ್ಲಿಕೆಯಾದ ಮನವಿಯನ್ನು ಕಣ್ಣಿಗೊತ್ತಿಕೊಂಡ ಸರ್ಕಾರ ಸಲೀಸಾಗಿ ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ಎರಡು ಪುಟ ಜಾಹೀರಾತು ನೀಡುವ  ಆದೇಶವನ್ನು ಹೊರಡಿಸುವ ಮೂಲಕ ಮೇಲ್ಜಾತಿಗಳ ಲಾಬಿಗೆ ತಲೆಬಾಗಿದೆ. ಎಸ್ಸಿ/ ಎಸ್ಟಿ ಮಾಲೀಕತ್ವದ ಪತ್ರಿಕೆಗಳಿನ್ನೂ ಒಂದು ಪುಟ ಜಾಹೀರಾತಿನಲ್ಲೆ ತೆವಳುತ್ತಾ ಎರಡು ಪುಟಕ್ಕೇರಿಸಬೇಕೆಂಬ ಬೇಡಿಕೆಯ ಕಡತ ವಾರ್ತಾ ಇಲಾಖೆಯಲ್ಲಿ ಧೂಳು ತಿನ್ನುತ್ತಿರುವಾಗ ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ಎರಡು ಪುಟ ಜಾಹೀರಾತನ್ನು  ಸರ್ಕಾರ ಉದಾತ್ತವಾಗಿ ದಾನ ಕೊಟ್ಟು ಕೃತಾರ್ಥವಾಗಿದೆ.

ಪರಿಶಿಷ್ಟ ಜಾತಿ-ಓಬಿಸಿ ಗಳ ಮಾಲೀಕತ್ವದ ಪತ್ರಿಕೆಗಳ ಇತಿಹಾಸ ಗರಿಷ್ಠವೆಂದರೆ 25 ವರ್ಷಗಳದು. ಈ ಸಮುದಾಯಗಳ  ಮೊದಲ ತಲೆಮಾರು ಕೂಡ  ಪತ್ರಿಕೋದ್ಯಮವನ್ನು ದಾಟಿಲ್ಲ.  ಆದರೆ ಅದಕ್ಕಿಂತ ಹೆಚ್ಚಿನ  ಕಾಲಾವಧಿಯಿಂದ  ಪತ್ರಿಕೋದ್ಯಮವನ್ನು ಆಳುತ್ತಿರುವ ಮೇಲ್ಜಾತಿಗಳು   ಸರ್ಕಾರಿ ಜಾಹೀರಾತುಗಳನ್ನು ತಿಂದು- ತೇಗುತ್ತಾ ದುಂಡಗಾಗಿವೆ. ಆದಾಗ್ಯೂ ಇತ್ತೀಚೆಗಷ್ಟೆ ಪರಿಶಿಷ್ಟ ಜಾತಿ/ವರ್ಗ- ಓಬಿಸಿಗಳಿಗೆ ಅವರದ್ದೆ ಅಭಿವೃದ್ಧಿಯ ಪಾಲಿನಿಂದ ನೀಡಲಾಗುತ್ತಿರುವ  ಜಾಹೀರಾತು- ಇತರೆ ಸೌಲತ್ತುಗಳನ್ನು  ಪ್ರಶ್ನೆ ಮಾಡುತ್ತಾ ಅದೇ ಮಾದರಿ ಸೌಲತ್ತುಗಳನ್ನು ಪಡೆಯುವಲ್ಲಿ ಲಾಬಿ ನಡೆಸಿವೆ.

ಸರ್ಕಾರ  ಪ್ರಜ್ಞಾಪೂರ್ವಕವಾಗಿ ಇಂತಹ ಸಾಮಾಜಿಕ ಅನ್ಯಾಯವನ್ನು ನೆಲೆಗೊಳಿಸುವ ಮತ್ತು ಸಂವಿಧಾನದ ಆಶಯಗಳನ್ನು ಧಿಕ್ಕರಿಸುವ ಹೊಸ ಮಾದರಿಯನ್ನು ಮುಂದುವರೆಸಿದೆ.

ಎನ್.ರವಿಕುಮಾರ್

ಪತ್ರಕರ್ತರು

ಥೀಮ್‌ ಪಾರ್ಕಿನಲ್ಲಿ ಪರಶುರಾಮ ಪ್ರತಿಮೆ ಸ್ಥಾಪನೆ-ತುಳುನಾಡಿಗೂ ಪರಶುರಾಮನಿಗೂ ಏನು ಸಂಬಂಧ?
ಕಾರ್ಕಳ ತಾಲೂಕಿನ ಬೈಲೂರಿನ ಉಮಿಕ್ಕಲ್‌ ಬೆಟ್ಟದ ಮೇಲೆ ೩೩ ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯೊಂದಿಗೆ ಪರಶುರಾಮ ಥೀಮ್‌ ಪಾರ್ಕ್‌ ಇಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಗೊಂಡಿದೆ. ಕಾಲ್ಪನಿಕ ಪೌರಾಣಿಕ ವ್ಯಕ್ತಿ ಪರಶುರಾಮನ ಉಲ್ಲೇಖವು ಕರಾವಳಿಯ ಬಗ್ಗೆ ರಚಿತಗೊಂಡ ಯಾವ ಕೃತಿಗಳಲ್ಲೂ ಇಲ್ಲದಿರುವುದರಿಂದ ತುಳುನಾಡಿಗೂ ಪರಶುರಾಮನಿಗೂ ಯಾವ ಸಂಬಂಧವೂ ಇಲ್ಲವೆಂದು ನಿರೂಪಿಸುತ್ತಾರೆ ಚಿಂತಕ ಪ್ರವೀಣ್‌ ಶೆಟ್ಟಿ. ಈ ಸಕಾಲಿಕ ಲೇಖನ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.

ಪ್ರವಾಸೋದ್ಯಮಕ್ಕೆ ಇಂಬು ಕೊಡಲು ಕಾರ್ಕಳ ತಾಲೂಕಿನ ಬೈಲೂರಿನ ಬೆಟ್ಟದ ಮೇಲೆ ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಥೀಮ್ ಪಾರ್ಕ್ ಯೋಜನೆ ಕರ್ನಾಟಕ ಸರಕಾರ ಅನುಷ್ಠಾನ ಮಾಡಿದ್ದು, ಅದು ಇದೆ ತಿಂಗಳ 27-28 ಕ್ಕೆ ಮುಖ್ಯಮಂತ್ರಿ ಬೊಮ್ಮಾಯಿಯವರ ಕೈಯಿಂದ ಉದ್ಘಾಟನೆಗೊಳ್ಳಲಿರುವುದು ಸಂತೋಷದ ವಿಷಯ. ಆದರೆ ಆ ಪಾರ್ಕ್ ನಲ್ಲಿ ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆ ನಿಲ್ಲಿಸುವ ಯೋಜನೆ ನಿರಾಶೆ ತಂದಿದೆ. ಯಾಕೆಂದರೆ ಪರಶುರಾಮ ಎಂಬವನು ಒಬ್ಬ ಕಾಲ್ಪನಿಕ ಪೌರಾಣಿಕ ವ್ಯಕ್ತಿ. ಮೇಲಾಗಿ ಈ ಕಾಲ್ಪನಿಕ ಕಥೆಯಲ್ಲಿಯೂ ಅವನನ್ನು ಒಬ್ಬ ಅತಿ ಸೇಡು ಭರಿತ ಅಮಾನವೀಯ ಜಾತಿವಾದಿ ವ್ಯಕ್ತಿ ಎಂದು ಬಿಂಬಿಸಲಾಗಿದೆ. ಉಡುಪಿ-ಕಾರ್ಕಳದ ಪಿತೃಪ್ರಧಾನ ವೈದಿಕ ಹಿನ್ನೆಲೆ ಇರುವ ರಾಜಕಾರಣಿಗಳು ತಮ್ಮ ಸಮುದಾಯದ ಮೇಲ್ಮೆ ಸಾಧಿಸಲು ಈ ಕ್ರೂರಿ ಪರಶುರಾಮನ ಕಾಲ್ಪನಿಕ ಕಥೆಯನ್ನು ಜೀವಂತವಾಗಿಡಲು ಬಯಸಿ ಕಾರ್ಕಳದಲ್ಲಿ ತೆರಿಗೆದಾರರ ಹಣದಲ್ಲಿ ಪರಶುರಾಮನ ಮೂರ್ತಿ ಸ್ಥಾಪಿಸಿ ತಮ್ಮ ವೈದಿಕ/ಅರೆ-ವೈದಿಕ ಸಮುದಾಯದ ಪೂರ್ವಜರ ಕಾಲ್ಪನಿಕ ಮೇಲ್ಮೆ ಬಿಂಬಿಸಲು ವ್ಯರ್ಥ ಪ್ರಯತ್ನ ನಡೆಸುತ್ತಿರುವಂತಿದೆ.

500 ವರ್ಷಗಳ ಹಿಂದಿನ ಮುಸ್ಲಿಂ ರಾಜರು, ನವಾಬರು ಸುಲ್ತಾನರು ಮಾಡಿದ ತಪ್ಪಿಗೆ ಅವರ ಜಾತಿ-ಧರ್ಮದ ಇಂದಿನ ಪೀಳಿಗೆಯನ್ನು ಹೊಣೆ ಮಾಡಿ ಹೀನಾಯವಾಗಿ ಪೀಡಿಸುವ ಅತ್ಯಂತ ತುಚ್ಛ ಕಾರ್ಯ ಈಗ ಭಾರತದಲ್ಲಿ ನಡೆಯುತ್ತಿದೆ. ಹಾಗಿರುವಾಗ ಅತ್ಯಂತ ಸೇಡಿನ ಬುದ್ಧಿಯ, ಮಹಾ ಜಾತಿವಾದಿ (ಕಾಲ್ಪನಿಕ) ವ್ಯಕ್ತಿಯ ಪ್ರತಿಮೆ ನಮ್ಮ ಕಾರ್ಕಳಕ್ಕೆ ಬೇಕೆ? ಕಾರ್ಕಳದ ಈ ಪರಶುರಾಮ ಥೀಮ್ ಪಾರ್ಕ್ ಗೆ ಸರಕಾರ ಕೋಟ್ಯಂತರ ಸುರಿದಿರುವುದು ಸಾಮಾನ್ಯ ತೆರಿಗೆದಾರರ ಹಣವೇ ಹೊರತು ಅದು ಯಾವುದೇ ಒಂದು ಮೇಲ್ಜಾತಿಯ ಅಥವಾ ಒಂದು ಪಕ್ಷದ ಹಣ ಅಲ್ಲ! ಎಂಬುದು ನಮ್ಮ ನೆನಪಿನಲ್ಲಿರಲಿ.

ಕಾರ್ಕಳದಲ್ಲಿ ಅತ್ಯಂತ ಸುಂದರ ಕರಿಕಲ್ಲಿನ ಜಗತ್‌ ಪ್ರಸಿದ್ಧ ಗೊಮ್ಮಟೇಶ್ವರ ಮೂರ್ತಿ ಇರುವುದು ನಿಜ. ಅದನ್ನು ಕೆತ್ತಿದ ಶಿಲ್ಪಿ ಯಾರು ಎಂಬುದು ಕಾರ್ಕಳದ ಇತಿಹಾಸದಲ್ಲಿ ಸ್ಪಷ್ಟವಾಗಿ ನಮೂದಾಗಿಲ್ಲ. ಆದರೆ ಈ ಕುರಿತು ಇರುವ ಜಾನಪದ ಕಥೆಗಳ ಪ್ರಕಾರ ಕಲ್ಕುಡ ಎಂಬ ದೈವಿ ಶಕ್ತಿಯುಳ್ಳ ಶಿಲ್ಪಿ ಈ ಮೂರ್ತಿಯನ್ನು ಕೆತ್ತಿದ್ದು. ಆದರೆ ಮೂರ್ತಿ ಕೆತ್ತಿಯಾದ ಮೇಲೆ ಕಲ್ಕುಡನಿಗೆ ಕಾರ್ಕಳದ ಜೈನ ಅರಸ ದೊಡ್ಡ ಅನ್ಯಾಯ ಮಾಡಿದನು ಎಂದು ಕಲ್ಕುಡನ ತಂಗಿ ಕಲ್ಲುರ್ಟಿಯು ಅರಸನ ವಿರುದ್ಧ ಮಾತ್ರ ಸೇಡು ತೀರಿಸಿ ಕೊಳ್ಳುತ್ತಾಳೆ, (ಪರಶುರಾಮನಂತೆ ಕಲ್ಲುರ್ಟಿಯು ಸಮಸ್ತ ಜೈನ ಸಮುದಾಯದ ವಿರುದ್ಧ ಸೇಡು ತೀರಿಸಿಕೊಳ್ಳುವುದಿಲ್ಲ!). ಈ ಕಲ್ಕುಡ ಕಲ್ಲುರ್ಟಿಯನ್ನು ದೈವತ್ವಕ್ಕೆ ಏರಿಸಿ ನಾವು ಈಗ ಪೂಜಿಸುತ್ತೇವೆ. ಹಾಗಾಗಿ ಶಿಲ್ಪಿ ಕಲ್ಕುಡ-ಕಲ್ಲುರ್ಟಿಯ ಮೂರ್ತಿಯನ್ನು ಕಾರ್ಕಳದ ಆ ಹೊಸ ಪಾರ್ಕಿನಲ್ಲಿ ಸ್ಥಾಪಿಸಬೇಕಿತ್ತು. ಹೇಗೂ ಪರಶುರಾಮನದ್ದು ಕಾಲ್ಪನಿಕ ರೂಪವೇ ತಾನೇ? ಅಂತೆಯೇ ತುಳುವ ಸಂಪ್ರದಾಯದ ಪ್ರಕಾರ ಕಲ್ಕುಡ-ಕಲ್ಲುರ್ಟಿಯ ರೂಪವೂ ಕಾಲ್ಪನಿಕವಿದ್ದರೂ ಯಾರದೂ ಅಭ್ಯಂತರ ಇರಲಾರದು. ಹೇಗಿದ್ದರೂ ತುಳುವರೆಲ್ಲಾ ಕಲ್ಕುಡನ ತಂಗಿ ಕಲ್ಲುರ್ಟಿಯನ್ನು ಅತಿ ಕಾರಣಿಕ ದೈವದ ರೂಪದಲ್ಲಿ ಎಲ್ಲೆಡೆಯೂ ಈಗಲೂ ಆರಾಧಿಸುತ್ತಿದ್ದಾರೆ ಅಲ್ಲವೇ! ಅದಿಲ್ಲದಿದ್ದರೆ ವೀರ ಕೋಟಿ ಚೆನ್ನಯರ ಮೂರ್ತಿಗಳನ್ನು ಈ ಕಾರ್ಕಳದ ಥೀಮ್ ಪಾರ್ಕಿನಲ್ಲಿ ಸ್ಥಾಪಿಸಲಿ!

ತುಳುನಾಡಿಗರದು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯಾದರೆ ವೈದಿಕ ಪರಶುರಾಮನದು ಅಪ್ಪಟ ಪಿತೃಪ್ರಧಾನ ಸಮಾಜವಾಗಿತ್ತು. ಅದಕ್ಕಾಗಿ ತನ್ನ ತಂದೆ ಜಮದಗ್ನಿ ಹೇಳಿದನೆಂದು ಪರಶುರಾಮ ತನ್ನ ಅಮಾಯಕ ತಾಯಿಯನ್ನೇ ಕಾರಣವಿಲ್ಲದೆ ಕೊಲ್ಲುತ್ತಾನೆ, (ಮತ್ತೆ ಜೀವಂತ ಮಾಡುತ್ತಾನೆ ಎಂಬುದು ಒಂದು ಸಬೂಬು ಅಷ್ಟೇ). ಇಂತಹಾ ಮಾತೃ ಹಂತಕನ ಗೌರವಾರ್ಥ ಕಾರ್ಕಳದಲ್ಲಿ ಆತನ ಬೃಹತ್ ಪ್ರತಿಮೆ ಸ್ಥಾಪಿಸಬೇಕೆ? ನಮ್ಮ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ಕ್ರೂರ ಜಾತಿವಾದಿ ವೈದಿಕ ಪರಶುರಾಮನ ಹೆಸರಲ್ಲಿ ಮೇಲ್ಜಾತಿ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಆಗುತ್ತಿದೆಯೇ?

ಯಾವ ಕೃತಿಯಲ್ಲೂ ಪರಶುರಾಮ ಸೃಷ್ಟಿಯ ಉಲ್ಲೇಖವಿಲ್ಲ!
ಸುಮಾರು 750 ವರ್ಷಗಳ ಹಿಂದೆ ನಮ್ಮ ಕರಾವಳಿಯ ಉಡುಪಿಯಲ್ಲಿ ಮಾಧ್ವ ವೈಷ್ಣವ ಪರಂಪರೆ ಸ್ಥಾಪಿಸಿದ ಶ್ರೀಮಧ್ವಾಚಾರ್ಯರು ತಮ್ಮ ಯಾವುದೇ ಕೃತಿಯಲ್ಲೂ ಪರಶುರಾಮ ಸೃಷ್ಟಿಯ ಕಥೆಯನ್ನು ಉಲ್ಲೇಖಿಸಿಲ್ಲ. ಆನಂತರ ಮಾಧ್ವ ಪರಂಪರೆಯನ್ನು ದಕ್ಷಿಣ ಭಾರತದೆಲ್ಲೆಡೆ ಪಸರಿಸಿದ ಶ್ರೀವಾದಿರಾಜ ಸ್ವಾಮಿಗಳೂ ಸಂಸ್ಕೃತ, ಕನ್ನಡ, ತುಳು ಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಆದರೆ ಎಲ್ಲಿಯೂ ಅವರು ಪರಶುರಾಮ ಸೃಷ್ಟಿಯ ಕಥೆಯನ್ನು ಉಲ್ಲೇಖಿಸಿಲ್ಲ! ನಮ್ಮ ಕರಾವಳಿಯನ್ನು ಆಳಿದ ಕದಂಬ ರಾಜರ ಕಾಲದಲ್ಲಾಗಲಿ, ಶೈವರಾಗಿದ್ದ ಅಳೂಪ ರಾಜರ ಕಾಲದಲ್ಲಾಗಲಿ, ಅಥವಾ ಜೈನರಾಗಿದ್ದ ಹೊಯ್ಸಳರು, ರಾಣಿ ಅಬ್ಬಕ್ಕ, ಲಿಂಗಾಯತ ಇಕ್ಕೇರಿ ಅರಸರ ಆಡಳಿತ ಕಾಲದಲ್ಲಾಗಲಿ, ವಿಜಯನಗರದ ಆಳ್ವಿಕೆಯ ಕಾಲದಲ್ಲಾಗಲಿ ಈ ಪರಶುರಾಮ ಸೃಷ್ಟಿ ಎಂಬ ಕಾಲ್ಪನಿಕ ಕಥೆ ಪ್ರಚಲಿತವಾಗಿರಲೇ ಇಲ್ಲ. 19-20 ನೇ ಶತಮಾನದಲ್ಲಿ ಕೇರಳದಲ್ಲಿ ಮಹತ್ತರ ಸಾಮಾಜಿಕ ಕ್ರಾಂತಿ ಮಾಡಿ ಈಡಿಗ/ಬಿಲ್ಲವ ಸಮುದಾಯಕ್ಕೆ ಆತ್ಮಸಮ್ಮಾನ ಕಲಿಸಿಕೊಟ್ಟ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದೂ ಈ ಪರಶುರಾಮನ ಬಾಲಿಶ ಕಥೆಯನ್ನು ಉಲ್ಲೇಖಿಸಲೇ ಇಲ್ಲ. ಕೇರಳ ಮೂಲದ ಆದಿಶಂಕರರು 1200 ವರ್ಷಗಳ ಹಿಂದೆ ಕೊಲ್ಲೂರಿಗೆ ಸ್ವತಃ ಬಂದು ಮೂಕಾಂಬಿಕೆಯ ಕ್ಷೇತ್ರವನ್ನು ಸ್ಥಾಪಿಸಿದರು ಎಂಬ ಐತಿಹ್ಯ ಇದೆ. ಕರಾಚಾರ್ಯರೂ ತಮ್ಮ ಯಾವುದೇ ಕೃತಿಯಲ್ಲೂ ತಮ್ಮ ಹುಟ್ಟೂರು ಕೇರಳ ಅಥವಾ ಮೂಕಾಂಬಿಕಾ ಕ್ಷೇತ್ರ ಇರುವ ತುಳುಗನ್ನಡ ಪ್ರದೇಶವು ʼಪರಶುರಾಮ ಸೃಷ್ಟಿʼ ಎಂದು ಎಲ್ಲಿಯೂ ಹೇಳಿಲ್ಲ. ನಮ್ಮ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನೆಲೆಸಿರುವಳೆಂದು ಐತಿಹ್ಯವಿರುವ ಪರಶುರಾಮನ ತಾಯಿ ರೇಣುಕಾ ಎಲ್ಲಮ್ಮನ ಕ್ಷೇತ್ರ ಣದಲ್ಲಿಯೂ ಪರಶುರಾಮ ಸೃಷ್ಟಿಯ ಉಲ್ಲೇಖ ಇಲ್ಲ. ನಮ್ಮ ತುಳುನಾಡಿನ ಸಮಗ್ರ ಇತಿಹಾಸದ ಸಂಶೋಧಕ ಡಾ. ಪಾದೂರು ಗುರುರಾಜ ಭಟ್ಟರೂ ಈ ಪರಶುರಾಮ ಸೃಷ್ಟಿಯ ಕಥೆ ಒಂದು ಕಾಲ್ಪನಿಕ ಕಥೆ ಎಂದು ತಮಗೆ ಡಾಕ್ಟರೇಟ್ ತಂದು ಕೊಟ್ಟ “ತುಳುನಾಡು” ಎಂಬ ತಮ್ಮ ಘನ ಕೃತಿಯಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ.

ಉತ್ತರ ಭಾರತದಲ್ಲಿ ಒಂದೇ ಒಂದು ಪರಶುರಾಮನ ಪುರಾತನ ಕ್ಷೇತ್ರವಿಲ್ಲ!
ರಾಮಾಯಣ ಮತ್ತು ಮಹಾಭಾರತ ಈ ಎರಡೂ ಮಹಾಕಾವ್ಯಗಳಲ್ಲಿ ಉಲ್ಲೇಖಿತವಾಗಿರುವ ಪರಶುರಾಮ ಎಂಬ ಬ್ರಾಹ್ಮಣ ಋಷಿ ಇದ್ದಿದ್ದು ಉತ್ತರ ಭಾರತದಲ್ಲಿ. ಆದರೆ ಉತ್ತರ ಭಾರತದ ಯಾವುದೇ ಮೂಲ ಗ್ರಂಥದಲ್ಲಿಯೂ ಪರಶುರಾಮ ದಕ್ಷಿಣ ಭಾರತಕ್ಕೆ ಬಂದಿದ್ದ ಹಾಗೂ ಇಲ್ಲಿ ಅವನು ಕೊಡಲಿ ಬೀಸಿ ಸಮುದ್ರದಿಂದ ಭೂಮಿಯನ್ನು ಮೇಲೆತ್ತಿ ಕೊಟ್ಟ ಎಂಬ ಉಲ್ಲೇಖವೇ ಇಲ್ಲ. ಅವನು ಕ್ಷತ್ರಿಯರಿಂದ ಗೆದ್ದ ಎಲ್ಲಾ ಭೂಮಿಯನ್ನು ಬ್ರಾಹ್ಮಣರಿಗೆ ದಾನ ಮಾಡಿ ಹಿಮಾಲಯಕ್ಕೆ ತಪಸ್ಸು ಮಾಡಲು ಹೋದ ಎಂದಷ್ಟೇ ಮೂಲ ಗ್ರಂಥದಲ್ಲಿ ಉಲ್ಲೇಖವಿದೆ. ಪರಶುರಾಮನ ಪೌರಾಣಿಕ ಕಥೆ ಹುಟ್ಟಿದ್ದು ಉತ್ತರ ಭಾರತದಲ್ಲಿ ಆದರೂ ಉತ್ತರದ ಜನರು ಪರಶುರಾಮನನ್ನು ಒಬ್ಬ ಋಷಿ ಎಂದು ಮಾತ್ರ ಪರಿಗಣಿಸುತ್ತಾರೆಯೇ ಹೊರತು ಅವನನ್ನು ದೇವರು ಎಂದು ಯಾರೂ ಪೂಜಿಸುವುದಿಲ್ಲ. ಅವನು ವಿಷ್ಣುವಿನ ಅವತಾರ ಎಂದು ವೈಷ್ಣವರು ಹೇಳಿದರೂ ಅವನನ್ನು ಸ್ವತಃ ವೈಷ್ಣವರೇ ಆರಾಧಿಸುವುದಿಲ್ಲ. ಅದರಲ್ಲೂ ಉತ್ತರ ಭಾರತದ ಠಾಕೂರ್/ ರಜಪೂತ್/ಕುರ್ಮಿ/ ಜಾಟ್/ ಗುಜ್ಜರ್ ಮುಂತಾದ ಕ್ಷತ್ರಿಯ ವರ್ಗದ ಜನರೆಲ್ಲಾ ಮೊದಲಿನಿಂದಲೂ ಪರಶುರಾಮನನ್ನು ಒಬ್ಬ ಸೇಡುಭರಿತ ಕ್ರೂರಿ, ಅಹಂಕಾರಿ, ಹಾಗೂ ತಮ್ಮ ಜಾತಿಯ ಕಡುವೈರಿ ಎಂದು ಪರಿಗಣಿಸುತ್ತಾರೆ. ಯಾಕೆಂದರೆ ಪುರಾಣದ ಪ್ರಕಾರ ಅವನು ಚಿಕ್ಕಚಿಕ್ಕ ಗಂಡು ಮಕ್ಕಳ ಸಹಿತ ಕೋಟ್ಯಂತರ ಅಮಾಯಕ ಕ್ಷತ್ರಿಯ ಗಂಡಸರ ಮಾರಣಹೋಮ ನಡೆಸಿದ ಹೃದಯಹೀನ. ಹಾಗಾಗಿ ಉತ್ತರ ಭಾರತದಲ್ಲಿ ಲಕ್ಷಾಂತರ ಬೇರೆ ಬೇರೆ ದೇವರ ಪುರಾತನ ದೇವಸ್ಥಾನಗಳಿದ್ದರೂ ಒಂದೇ ಒಂದು ಪರಶುರಾಮನ ಪುರಾತನ ಕ್ಷೇತ್ರ ಇಲ್ಲ? ಉತ್ತರ ಪ್ರದೇಶದಲ್ಲಿ 2017 ರಲ್ಲಿ ಯೋಗಿ ಆದಿತ್ಯನಾಥರು ಖ್ಯಮಂತ್ರಿಯಾಗಿ ಆಯ್ಕೆಯಾದ ಮರುದಿನವೇ ತನ್ನ ಚೇಂಬರ್ ನಲ್ಲಿ ಇದ್ದ ಪರಶುರಾಮನ ಫೋಟೋವನ್ನು ತೆಗೆದು ಕಸದ ಬುಟ್ಟಿಗೆ ಹಾಕಿಸಿದರಂತೆ! ಯಾಕೆಂದರೆ ಅವರು ಠಾಕೂರ್ ಎಂಬ ಕ್ಷತ್ರಿಯ ಜಾತಿಯವರು. ಸಾರಾಸಗಟಾಗಿ ತನ್ನ ಕ್ಷತ್ರಿಯ ಜಾತಿಯನ್ನು ಅವಮಾನಿಸುವ ಕ್ರೂರಿ ಪರಶುರಾಮನ ಫೋಟೋ ತನ್ನ ಚೆಂಬರಿನಲ್ಲಿ ಇಡಲು ಅವರ ಮನಸ್ಸು ಒಪ್ಪಲಿಲ್ಲವಂತೆ. ಯೋಗಿ ಆದಿತ್ಯನಾಥರನ್ನು ನೋಡಿಯಾದರೂ ನಾವು ತುಳುನಾಡಿನವರು ಪರಶುರಾಮನ ಗೊಡ್ಡು ಪುರಾಣ ಪಾತ್ರಕ್ಕೆ ಅನಗತ್ಯ ಪಾವಿತ್ರ್ಯ ಮಹತ್ವ ಕಲ್ಪಿಸಿ ಕೊಡುವುದನ್ನು ನಿಲ್ಲಿಸಿದರೆ ಉತ್ತಮ.

ವಿಜ್ಞಾನಿಗಳ ಪ್ರಕಾರ…
ಖಂಡಾಂತರ ಚಲನೆಯ ಕಾಲದಲ್ಲಿ ದಕ್ಷಿಣ ಭಾರತದ ಪ್ರಸ್ಥಭೂಮಿ ಏಳು ಕೋಟಿ ವರ್ಷಗಳ ಹಿಂದೆ ಆಫ್ರಿಕಾ ಖಂಡದಿಂದ ಬೆರ್ಪಟ್ಟು ಇಂಚಿಂಚು ಸರಿಯುತ್ತಾ ಬಂದು ಐದು ಕೋಟಿ ವರ್ಷಗಳ ಹಿಂದೆ ಜಂಬೂ ದ್ವೀಪದ ಉಪಖಂಡಕ್ಕೆ ತಾಗಿ ನಿಂತಿತ್ತು. ಆ ಕಾಲದಲ್ಲಿ ನಮ್ಮ ಪಶ್ಚಿಮ ಕರಾವಳಿ ಮತ್ತು ಸಹ್ಯಾದ್ರಿ ಪರ್ವತ ಶ್ರೇಣಿ ರೂಪುಗೊಂಡಿದ್ದು. (ಶ್ರೀಲಂಕಾ ನಡುವಿನ ರಾಮಸೇತುವಿನ ಪ್ರಾಕೃತಿಕ ರಚನೆಗೂ ಇದೇ ಖಂಡಗಳ ಚಲನೆಯ ಸಿದ್ಧಾಂತ ಅನ್ವಯ!). (ಈ ಕುರಿತು ಗೂಗಲ್‌ ನಲ್ಲಿ “ಕಾಂಟಿನೆಂಟಲ್ ಡ್ರೀಫ್ಟ್” ಎಂಬ ವಿಷಯದ ವಿಕಿಪೀಡಿಯ ಓದಿ.) ಏಳು ಕೋಟಿ ವರ್ಷಗಳ ಹಿಂದೆ ಮಾನವ-ವಾನರ ಜಾತಿಯೇ ಈ ಭೂಮಿ ಮೇಲೆ ಇರಲಿಲ್ಲ. ನಮ್ಮ ಪೃಥ್ವಿ ಗ್ರಹದ ರಚನೆಯಾಗಿದ್ದು ಸುಮಾರು 600 ಕೋಟಿ ವರ್ಷಗಳ ಹಿಂದೆಯಂತೆ. ಆದರೆ ಮಾನವನು ಪೃಥ್ವಿಯ ಮೇಲೆ ಉಗಮವಾಗಿದ್ದು ಕೇವಲ 40 ಲಕ್ಷ ವರ್ಷಗಳ ಹಿಂದೆ, ಅದೂ ಹೊಮೋ-ಎರೆಕ್ಟಸ್ ಎಂಬ ಅರೆಮಾನವ ರೂಪದಲ್ಲಿ. ಹಾಗಾಗಿ ಬಹುಶ ಡೈನೊಸಾರ್ ಗಳು ನಮ್ಮ ಈ ಸೋ-ಕಾಲ್ಡ್ ಪರಶುರಾಮ ಸೃಷ್ಟಿಯಲ್ಲಿ ಐದು ಕೋಟಿ ವರ್ಷಗಳ ಹಿಂದೆ ಮೊಟ್ಟ ಮೊದಲು ನಡೆದಾಡಿರಬಹುದೇ?!

ದ್ವೇಶ ಹರಡುವ ಪುರಾಣ ಕಥೆಗಳು ನಮ್ಮಲ್ಲಿ ಮಾತ್ರ!
ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಅವೈಜ್ಞಾನಿಕ ಜಾತಿ ವ್ಯವಸ್ಥೆ ಭಾರತದಲ್ಲಿ ಮಾತ್ರ ಇರುವುದು. ಅಷ್ಟೇ ಅಲ್ಲ, ಜಾತಿ ಜಾತಿಯ ನಡುವೆ ದ್ವೇಶ ಹರಡುವ ಪುರಾಣ ಕಥೆಗಳು ಹಾಗೂ ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ಹೊಣೆ ಮಾಡಿ ಆ ಸಮುದಾಯವನ್ನು ಸಂಪೂರ್ಣ ನಾಶ ಮಾಡಲಾಯಿತು ಎಂಬ ತುಚ್ಛ ಜಾತಿ ದ್ವೇಶವನ್ನು ಸಮರ್ಥಿಸುವ ಕಥೆ ಕಟ್ಟುವುದು ಕೇವಲ ಭಾರತದಲ್ಲಿ ಮಾತ್ರ. ಕ್ಷತ್ರಿಯ ಮಹಿಳೆಯರ ಶೀಲವನ್ನು ಘೋರವಾಗಿ ಅವಮಾನಿಸುವ “ನಿಯೋಗ” ಎಂಬ ವ್ಯಭಿಚಾರವನ್ನು ಸಮರ್ಥಿಸುವ ಕಥೆ ಸಹಾ ಇರುವುದು ಭಾರತದಲ್ಲಿ ಮಾತ್ರ. ಕೆಲವು ವೈದಿಕ ಪುರಾಣಗಳ ಪ್ರಕಾರ ಕ್ಷತ್ರಿಯರಾಗಿದ್ದ ಶ್ರೀ ರಾಮ ಮತ್ತು ಶ್ರೀ
ಕೃಷ್ಣ ಕೂಡಾ ನಿಯೋಗದಿಂದ ಹುಟ್ಟಿದ್ದಂತೆ!

ಪರಶುರಾಮ ಸೃಷ್ಟಿ ಬಾಲಿಶ ಕಟ್ಟುಕಥೆ
ನಮ್ಮ ಕರಾವಳಿಯನ್ನು ಪರಶುರಾಮನು ಸೃಷ್ಟಿಸಿದ್ದು ಎಂಬ ಕಾಲ್ಪನಿಕ ಕತೆಯೂ ಕೇರಳದಿಂದ ಬಂದ ಬಾಲಿಶ ಕಟ್ಟುಕಥೆ. ಸುಮಾರು 350 ವರ್ಷಗಳ ಹಿಂದೆ ಕೇರಳದ ನಂಬೂದ್ರಿ ಬ್ರಾಹ್ಮಣರು ಬರೆದ “ಕೇರಳೊತ್ಪತ್ತಿ” ಎಂಬ ಕೃತಿಯಲ್ಲಿ ಪರಶುರಾಮ ಸೃಷ್ಟಿಯ ಕಥೆ ಮೊಟ್ಟಮೊದಲ ಬಾರಿ ಉಲ್ಲೇಖವಾಯಿತಂತೆ! ಅದು ಹೇಗೋ ಮುನ್ನೂರು ವರ್ಷಗಳ ಹಿಂದೆ ಧಾರ್ಮಿಕ ಕಾರ್ಯಗಳಿಗೆ ಮತ್ತು ಮಂತ್ರಮಾಟ ಕಲಿಯಲು ಕೇರಳಕ್ಕೆ ಹೋಗಿ ಬರುತ್ತಿದ್ದ ತುಳುನಾಡಿನ ಬ್ರಾಹ್ಮಣರ ಮೂಲಕ ಈ ಕಾಲ್ಪನಿಕ ಕಥೆ ನಮ್ಮ ಕನ್ನಡ ಕರಾವಳಿಯನ್ನು ಹೊಕ್ಕು ಅದು ಈಗ ನಿರಭಿಮಾನಿ ತುಳುವ-ಕನ್ನಡಿಗರ ಎಲ್ಲಾ ಸಭೆ ಸಮಾರಂಭಗಳನ್ನು ಆವರಿಸಿ ಕೂತಿದೆ. ಕೇವಲ
ಬ್ರಾಹ್ಮಣರನ್ನು ವಿಜೃಂಭಿಸುವ ಹಾಗೂ ಕ್ಷತ್ರಿಯ-ಶೂದ್ರರನ್ನು ಕೀಳಾಗಿಸುವ ಪರಶುರಾಮ ಸೃಷ್ಟಿಯ ಕಥೆಯನ್ನು ತಿರಸ್ಕರಿಸುವ ಕಾಲ
ಈಗ ಬಂದಿದೆ.
(ಮುಂದಿನ ಭಾಗವನ್ನು ನಾಳೆ( ೨೮.೦೧.೨೦೨೩) ಪೀಪಲ್‌ ಮೀಡಿಯಾದಲ್ಲಿ ಓದಿ)

ಪ್ರವೀಣ್‌ ಎಸ್‌ ಶೆಟ್ಟಿ
ಚಿಂತಕರು

ʼರಿಶಿ ಸುನಕ್‌ʼ ಬಗ್ಗೆ ನಿಮಗೆ ತಿಳಿಯದ ರಹಸ್ಯಗಳು
ಇನ್ಫೋಸಿಸ್ ನಾರಯಣಮೂರ್ತಿಯ ಅಳಿಯ ರಿಶಿ ಸುನುಕ್ ಬ್ರಿಟನ್ನಿನ ಪ್ರಧಾನಿಯಾಗಿದ್ದು ಭಾರತೀಯರ ಹೆಮ್ಮೆ ಎಂಬ ವಿವೇಚನೆರಹಿತ ಮಾಧ್ಯಮಗಳ ಆರ್ಭಟಗಳು ಈ ಸದ್ಯಕ್ಕೆ ಕಡಿಮೆಯಾಗುವ ಯಾವುದೇ ಸೂಚನೆ ಇಲ್ಲ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮೂಲದ, ಆದರೆ ಆಫ಼್ರಿಕಾದಲ್ಲಿ ನೆಲಸಿದ್ದ ತಂದೆತಾಯಿಗಳು ಬ್ರಿಟನ್ನಿಗೆ ವಲಸೆ ಹೋದ ಮೇಲೆ ಜನಿಸಿದ ರಿಶಿಯವರು ಇನ್ಫೋಸಿಸ್ ನಾರಾಯಣಮೂರ್ತಿಯವರ ಮಗಳನ್ನು ಮದುವೆಯಾಗಿದ್ದಾರೆ. ಇಷ್ಟುಬಿಟ್ಟರೆ ಅವರ ಭಾರತೀಯ ಸಂಬಂಧಗಳು ಬೇರೆ ಏನೂ ಇಲ್ಲ.

ಅದೇನೇ ಇರಲಿ. ಅಪ್ಪಟ ಭಾರತೀಯಳಾದ ಕರ್ನಾಟಕದ ದಲಿತ ಯುವ ಪ್ರತಿಭೆ ಅಶ್ವಿನಿ ವಿಶ್ವಸಂಸ್ಥೆಯಲ್ಲಿ ಜನಾಂಗೀಯ ತಾರತಮ್ಯ ಅಧ್ಯಯನದ ಪ್ರಮುಖ ಸ್ಥಾನ ಪಡೆದಾಗ ಒಂದಕ್ಷರವನ್ನು ಬರೆಯದ ಪತ್ರಿಕೆಗಳು-ಮಾಧ್ಯಮಗಳು ಅಭಾರತೀಯ ರಿಶಿ ಸುನುಕ್ ಬ್ರಿಟನ್ನಿನ ಪ್ರಧಾನಿಯಾದರೆ ಭಾರತವು ಬ್ರಿಟನ್ನನ್ನು ವಶಪಡಿಸಿಕೊಂಡಿತೆಂಬಷ್ಟು ಉತ್ಪ್ರೇಕ್ಷೆ ಮಾಡುತ್ತಿವೆ.

ಸಹಜವಾಗಿಯೇ, ಸೋನಿಯಾ ಗಾಂಧೀಯವರ ವಿದೇಶಿ ಮೂಲವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ್ದ ಬಿಜೆಪಿ ಈಗ ಹೇಗೆ ಬ್ರಿಟನ್ನಿನ್ನಲ್ಲಿ ರಿಶಿ ಪ್ರಧಾನಿಯಾದದ್ದನ್ನು ಸಂಭ್ರಮಿಸುತ್ತಾರೆ ಎಂಬ ಮುಜುಗರದ ಪ್ರಶ್ನೆಗೆ ಕಿವುಡಾಗಿದೆ…

ವಾಸ್ತವವಾಗಿ, ಬ್ರಿಟಿಷರು ಭಾರತವನ್ನು ಆಳುತ್ತಿರುವಾಗ ಬ್ರಿಟನ್ನಿನ ಹಡಗು ಹತ್ತಿಕೊಂಡು ವ್ಯಾಪಾರಿಗಳಾಗಿ, ಆಡಳಿತ ಸಹಾಯಕರಾಗಿ, ಜೀತಗಾರರಾಗಿ, ಕೂಲಿಗಳಾಗಿ, ವ್ಯಾಪಾರಿಗಳಾಗಿ, ಬ್ರಿಟಿಶ್ ಸಾಮ್ರಾಜ್ಯ ಇದ್ದಕಡೆಯೆಲ್ಲಾ ವಲಸೆ ಹೋದ ಭಾರತೀಯರು ಕಳೆದ ನೂರು ವರ್ಷಗಳಲ್ಲಿ ಆಯಾ ದೇಶಗಳ ಪ್ರಜಾತಾಂತ್ರಿಕ ರಾಜಕಾರಣದ ಭಾಗವಾಗಿ ವ್ಯಾಪಾರ, ರಾಜಕಾರಣ, ಉದ್ಯಮಗಳಲ್ಲಿ ಬೆಳೆದಿದ್ದಾರೆ.

ಕೆಲವು ವರ್ಗಗಳು ಅದರಲ್ಲು ಪಕ್ಕಾ ವ್ಯಾಪಾರಿ ವರ್ಗಗಳು ವಸಾಹತುಶಾಹಿಗಳ ಹಾಗೂ ಆಯಾ ದೆಶಗಳ ಶೋಷಕರ ಪರವಾಗಿದ್ದುಕೊಂಡು ಸ್ಥಳೀಯರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಅದನ್ನೇ ಬೆಳವಣಿಗೆ ಎಂದು ಮಾಧ್ಯಮಗಳು ಬಣ್ಣಿಸುತ್ತವೆ.

ಇನ್ನುಳಿದವರು ಅಲ್ಲಿಯ ದೇಶವಾಸಿಗಳೇ ಆಗಿ ನೋವು-ನಲಿವು-ಹೋರಾಟಗಳಲ್ಲಿ ಸರಿಸಮವಾಗಿ ಬೆರೆತುಹೋಗಿದ್ದಾರೆ. ಹೋರಾಟಗಳಲ್ಲಿ ಹುತಾತ್ಮರು ಆಗಿದ್ದಾರೆ. ಇದು ಮಾಧ್ಯಮಗಳಲ್ಲಿ ಸುದ್ದಿಯೂ ಅಗುವುದಿಲ್ಲ.

ಆದರೆ ರಿಶಿ ಸುನುಕ್ ವಿಷಯದಲ್ಲಿ ಹೆಮ್ಮೆ ಪಡುವುದಕ್ಕಿಂತ ಆತಂಕ ಪಡಬೇಕಾದ ಹಲವು ವಿಷಯಗಳಿವೆ. ರಿಷಿಯವರು ಬ್ರಿಟನ್ನಿನ ಬಂಡವಾಳಶಾಹಿ ಹಾಗೂ ಭಾರತದ ಬ್ರಾಹ್ಮಣಶಾಹಿಯ ಎರಕದಲ್ಲಿ ಅದ್ದು ತೆಗೆದಂತಿದ್ದಾರೆ.

ಹೀಗಾಗಿಯೇ ಅವರನ್ನು ಬ್ರಿಟನ್ನಿನ ಕಾರ್ಪೊರೇಟುಗಳು, ಭಾರತೀಯ ಮೋದಿಗಳು ಇಬ್ಬರು ಅಬ್ಬರದಿಂದ ಸ್ವಾಗತಿಸಿದ್ದಾರೆ. ಅದರೆ ಬ್ರಿಟನ್ನಿನ ಬಡಜನರು, ಇತರ ವರ್ಣೀಯರು, ಅಲ್ಪಸಂಖ್ಯಾತರು, ನಿರಾಶ್ರಿತರು, ಸುನುಕರ ಆಯ್ಕೆಯಿಂದ ಕಂಗಾಲಾಗಿದ್ದಾರೆ.

ಬ್ರಿಟನ್ನಿನ ಅತ್ಯಂತ ಪ್ರತಿಗಾಮಿ ಕನ್ಸರ್ವೇಟಿವ್ ಪಕ್ಷದ ಪ್ರಧಾನಿಯಾಗಿರುವ ರಿಶಿ ಸುನುಕ್ ಪ್ರತಿನಿಧಿಸುತ್ತಿರುವುದು ಅತ್ಯಂತ ಜನವಿರೋಧಿ ಆರ್ಥಿಕ ಹಾಗೂ ರಾಜಕೀಯ ನೀತಿಗಳನ್ನು.
ಇದರ ಬಗ್ಗೆ ಬ್ರಿಟನ್ನಿನ South Asia Solidarity Group- ದಕ್ಷಿಣ ಏಷಿಯ ಸೌಹಾರ್ದ ಸಂಘಟನೆ ಯು ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ.
(https://southasiasolidarity.org/rishi-sunak-will-intensify-racism-and-poverty-and-strengthen-hindutva-fascism-in-the-uk-and-globally)

ಆ ಹೇಳಿಕೆಯ ಕನ್ನಡಾನುವಾದ ಕೆಳಗಿದೆ.

ಈ ಸಂಘಟನೆ ಬ್ರಿಟನ್ನಿನಲ್ಲಿ ಕಳೆದ ಹಲವಾರು ದಶಕಗಳಿಂದ ಕೆಲಸ ಮಾಡುತ್ತಿರುವ ಏಷಿಯಾ ದೇಶಗಳ ಮೂಲದವರ ಸಂಘಟನೆಯಾಗಿದೆ.

ಈ ಸಂಘಟನೆಯು ಬಡದೇಶಗಳ ಮೇಲೆ ಸಾಮ್ರಾಜ್ಯಶಾಹಿ ಆಕ್ರಮಣ, ಯುದ್ಧ, ನವ ಉದಾರವಾದಿ ಜಾಗತಿಕ ಬಂಡವಳಶಾಹಿ ಆಕ್ರಮಣ ಗಳ ವಿರುದ್ಧ ಧ್ವನಿ ಎತ್ತುತ್ತಿರುವುದಲ್ಲದೇ, ಏಷಿಯಾ ದೇಶಗಳಲ್ಲಿ ಜನರು ಇದರ ಬಗ್ಗೆ ನಡೆಸುತ್ತಿರುವ ಹೋರಟಗಳಿಗೆ ಸೌಹಾರ್ದ ಹಾಗೂ ಬೆಂಬಲವನ್ನು ನೀಡುತ್ತಾ ಬಂದಿದೆ.

ಎಲ್ಲಾ ದೇಶದ ಶೋಷಕರು ಜನಶತ್ರುಗಳೇ
ಎಲ್ಲಾ ದೇಶದ ಹೋರಾಟಗಾರರು ಬಂಧುಗಳೇ

ಎಂಬ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಈ ಸಂಘಟನೆ ರಿಶಿ ಸುನುಕರ ನೀತಿಗಳು ಮತ್ತು ಧೋರಣೆಗಳು ಬ್ರಿಟನ್ನಿನ ಬಡವರಿಗೆ ಹಾಗೂ ಜಾಗತಿಕ ಪ್ರಜಾತಂತ್ರಕ್ಕೆ ಎಷ್ಟು ಅಪಯಕಾರಿ ಎಂಬುದನ್ನು ಈ ಹೇಳಿಕೆಯಲ್ಲಿ ವಿವರಿಸಿವೆ.

ಬಿಡುವು ಮಾಡಿಕೊಂಡು ಓದಿ..

” South Asia Solidarity Group-ದಕ್ಷಿಣ ಏಶಿಯಾ ಸೌಹರ್ದ ಸಂಘಟನೆ”

ರಿಶಿ ಸುನುಕ್ ಅವರು ಬಡತನ ಮತ್ತು ಜನಾಂಗೀಯವಾದವನ್ನು ಹೆಚ್ಚಿಸುತ್ತಾರೆ ಮತ್ತು ಯುನೈಟೆಡ್ ಕಿಗ್‌ಡಂನಲ್ಲು (UK) ಹಾಗೂ ಜಗತ್ತಿನ ಇತರೆಡೆಗಳಲ್ಲು ಹಿಂದೂತ್ವ ಫ಼್ಯಾಸಿಸಂ ಅನ್ನು ಗಟ್ಟಿಗೊಳಿಸುತ್ತಾರೆ!

ರಿಶಿ ಸುನುಕ್ ಅವರನ್ನು ಯುನೈಟೆಡ್ ಕಿಂಗ್‌ಡಂ (ಯು.ಕೆ.)ನ ಮೊಟ್ಟ ಮೊದಲ ಏಶಿಯನ್ ಪ್ರಧಾನಿ ಎಂದು ಕೊಂಡಾಡಲಾಗುತ್ತಿದೆ. ಹಾಗಿದ್ದಲ್ಲಿ ಆತನ ನಿಜವಾದ ಅಸ್ಮಿತೆ ಏನು ಮತ್ತು ಅದು ಆತನ ಗೃಹ ಹಾಗೂ ವಿದೇಶಿ ನೀತಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು?

ರಿಶಿ ಸುನುಕ್ ಅವರು ಯು.ಕೆಯ ಸಂಸದರಲ್ಲೇ ಅತಿ ಶ್ರೀಮಂತ ಸಂಸದ. ಚಿಕ್ಕಂದಿನಲ್ಲಿ ಅತ್ಯಂತ ದುಬಾರಿ ಖಾಸಗಿ ಶಿಕ್ಷಣವನ್ನು ಪಡೆದುಕೊಂಡವರು ಮತ್ತು ಅ ನಂತರ ಅಕ್ಸ್‌ಫ಼ರ್ಡ್ ಮತ್ತು ಗೋಲ್ದ್‌ಮಾನ್ ಸಾಶ್ಸ್ ನಲ್ಲಿ ಕಲಿತವರು. ಇವೆಲ್ಲದರಿಂದ ಅವರು ಬ್ರಿಟಿಶ್ ಸಮಾಜದ ಪ್ರತಿಷ್ಟಿತ ವರ್ಗಗಳಲ್ಲಿ ಮನೆಮಾಡಿರುವ ದುರಹಂಕಾರಿ ಮೇಲರಿಮೆಗಳನ್ನು ಹಾಗೂ ಬಡವರು ಹಾಗೂ ದುರ್ಬಲರ ಬಗ್ಗೆ ತಿರಸ್ಕಾರ ಹಾಗೂ ದ್ವೇಷಗಳನ್ನು ಮೈಗೋಡಿಸಿಕೊಂಡಿದ್ದಾರೆ.

2008ರ ಹಣಕಾಸು ಕುಸಿತದ ಸಂದರ್ಭದಲ್ಲಿ ಬ್ರಿಟನ್ ಸರ್ಕಾರವು ಕಟ್ಟುನಿಟ್ಟಿನ ಆರ್ಥಿಕ ನೀತಿಗಳನ್ನು ಜಾರಿ ಮಾಡಿದ್ದರ ಪರಿಣಾಮವಾಗಿ ಯುನೈಟೆಡ್ ಕಿಂಗ್‌ಡಂ ನಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ಆದರೆ ಅದೇ ಸಂದರ್ಭದಲ್ಲೇ ರಿಶಿ ಸುನುಕ್ ಅವರು ಅಪಾರ ಸಂಪತ್ತನ್ನು ಸಂಪಾದಿಸಿದರು.
ಕೋವಿಡ್ ಕಾಲದಲ್ಲಿ ಬ್ರಿಟನ್ ಸರ್ಕಾರದ ಹಣಕಾಸು ಮಂತ್ರಿಯಾಗಿ (ಚಾನ್ಸಲರ್) ದ್ದ ರಿಶಿ ಸುನುಕ್ ಅವರು ಕೋವಿಡ್ ಸಾಂಕ್ರಾಮಿಕದ ಸಂದರ್ಭವನ್ನು ನಿಭಾಯಿಸಲು ಅತ್ಯಂತ ಬಡಕುಟುಂಬಗಳಿಗೆ ಅನುಕೂಲಕಾರಿಯಾಗಿದ್ದ ಸಾರ್ವತ್ರಿಕ ಸಾಲ ಯೋಜನೆಯನ್ನು ವಾರಕ್ಕೆ 20 ಪೌಂಡುಗಳಷ್ಟು ಹೆಚ್ಚಿಸುವ ಯೋಜನೆಯನ್ನು ಸ್ಥಗಿತಗೊಳಿಸಿದ್ದರು.
(https://www.opendemocracy.net/en/rishi-sunak-could-become-pm-heres-what-he-doesnt-want-you-to-know)

ಈ ಜುಲೈನಲ್ಲಿ ಈ ಸಾರ್ವತ್ರಿಕ ಸಾಲ ಕಡಿತವನ್ನು ಘೋಶಿಸುವ ಹೊತ್ತಿನಲ್ಲಿ ರಿಷಿ ಸುನುಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ತಾವು 2015ರಲ್ಲಿ 1.5 ಮಿಲಿಯನ್ ಪೌಂಡ್ ಕೊಟ್ಟು ಯಾರ್ಕ್ ಶೈರ್ ನಲ್ಲಿ ಖರೀದಿಸಿದ್ದ ಐಶರಾಮಿ ವಿಲ್ಲಾದಲ್ಲಿ ಈಜುಕೊಳ, ಜಿಮ್ ಮತ್ತು ಟೆನ್ನಿಸ್ ಕೋರ್ಟನ್ನು ನಿರ್ಮಿಸುವ ಯೋಜನೆಯನ್ನು ರೂಪಿಸುತ್ತಿದ್ದರು. ರಿಶಿ ಅವರ ಹೆಂಡತಿ ಅಕ್ಷತಾ ಮೂರ್ತಿಯವರು ಕೋಟ್ಯಾಧಿಪತಿ ಮತ್ತು ಇನ್ಫೋಸಿಸ್ ನ ಸಹ ಸಂಸ್ಥಾಪಕರಾದ ನಾರಾಯಣಮೂರ್ತಿಯವರ ಮಗಳಾಗಿದ್ದು ಅದರ ವ್ಯವಹಾರದಲ್ಲೂ ಪಾಲುದಾರರಾಗಿದ್ದಾರೆ.

ಆಡಂ ಬೈಶಾಸ್ಕಿ ಯವರು ಬರೆಯುವಂತೆ ಸುನುಕ್ ಅವರು ಯುನೈಟೆಡ್ ಕಿಂಗ್‌ಡ ನ ಹಲವಾರು ಕಡೆ ಕೋಟ್ಯಾಂತರ ಪೌಂಡ್ ಬೆಲೆಬಾಲುವ ಐಷರಾಮಿ ಬಂಗಲೆಗಳನ್ನು ಹೊಂದಿರುವುದು ಮಾತ್ರವಲ್ಲದೆ ಕಪ್ಪುಹಣದ ಕೇಂದ್ರವಾಗಿರುವ ಕೇಮ್ಯಾನ್ ಐಲಾಂಡ್‌ ನಲ್ಲೂ ತಮ್ಮ ಅಪಾರ ಸಂಪತ್ತನ್ನು ಕೂಡಿಟ್ಟಿದ್ದಾರೆ.

ಅಷ್ಟು ಮಾತ್ರವಲ್ಲ ಈ ಹಿಂದೆ ಲೇಬರ್ ಪಾರ್ಟಿಯು ಯು.ಕೆಯ ನಗರ ಪ್ರದೇಶಗಳಲ್ಲಿ ಬಡವರಿಗೆಂದು (ಅವರಲ್ಲಿ ಬಹಳಷ್ಟು ಜನ ಏಷಿಯನ್ನರು) ವಿತರಿಸಿದ್ದ ಸಂಪನ್ಮೂಲಗಳನ್ನು ಕಸಿದುಕೊಂಡು ವಿಲಾಸಿ ವರ್ಗಗಳ ಐಷಾರಾಮಕ್ಕೆ ಒದಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ತಮ್ಮ ವರ್ಗಮಿತ್ರರಿಗೆ ಭರವಸೆ ನೀಡಿದ್ದಾರೆ.

ರಿಶಿಯವರ ಟೋರಿ (ಕನ್ಸರ್ವೇಟಿವ್) ಪಕ್ಷವು ಸಮಾಜದ ವೈವಿಧ್ಯತೆಯನ್ನು ಎತ್ತಿ ಹಿಡಿಯುವ ತಮ್ಮ ನಿಲುವಿನ ಬಗ್ಗೆ ಎಷ್ಟೇ ಕೊಚ್ಚಿಕೊಂಡರೂ ರಿಶಿ ಸುನುಕ್ ಅವರು ಮಾತ್ರ ಇತರ ವರ್ಣೀಯರ ಸ್ನೇಹಿತರಂತೂ ಅಲ್ಲವೇ ಅಲ್ಲ.

ಬ್ರಿಟನ್ನಿನಲ್ಲಿ ಕಪ್ಪು ಜನರನ್ನು ಮತ್ತು ಮುಸ್ಲಿಮರನ್ನು ಗುರಿ ಮಾಡಿ ಬ್ರಿಟನ್ನಿನ ಪೊಲೀಸರು ನಡೆಸುವ ಜನಾಂಗೀಯ ಮತ್ತು ಹಿಂಸಾತ್ಮಕ Stop And Search ( ಬೇಕಾಬಿಟ್ಟಿ ತಡೆಯುವ, ಶೋಧಿಸುವ) ನೀತಿಗಳನ್ನು ಇನ್ನಷ್ಟು ಹೆಚ್ಚಿಸುವ ಭರವಸೆಯನ್ನು ನೀಡಿದಾರೆ. ರಾಜಕೀಯ ಸರಿತನಗಳು ತನ್ನ ದಾರಿಗೆ ಅಡ್ಡವಾಗುವುದಿಲ್ಲ ಎಂದು ಘೋಷಿಸಿರುವ ರಿಷಿಯವರು ಮುಸ್ಲಿಮರನ್ನು ವಿನಾಕಾರಣ ನಿಂದಿಸುವ ತೀವ್ರ ಬಲಪಂಥೀಯ ಹೇಳಿಕೆಗಳಾದ “ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮರು” ಎಂಬ ಹೇಳಿಕೆಯನ್ನು ಪದೇಪದೇ ಬಳಸುತ್ತಾರೆ.
(https://www.express.co.uk/news/politics/1651595/Rishi-sunak-child-groomers-conservatives-grooming-gangs)

ಇದರ ಜೊತೆಗೆ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡಿರುವ ಹಾಗೂ ತನ್ನ ಇಸ್ಲಾಮೋಫ಼ೋಬಿಕ್ (ಮುಸ್ಲಿಮರನ್ನು ದುರುಳೀಕರಿಸುವ) ಧೋರಣೆಯಿಂದಾಗಿ ತೀವ್ರ ಟೀಕೆಗೊಳಗಾಗಿದ್ದ PREVENT ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸುವ ಭರವಸೆಯನ್ನೂ ನೀಡಿದ್ದಾರೆ.
(https://www.independent.co.uk/news/uk/politics/rishi-sunak-extremism-terrorism-prevent-b2137158.html)

ಇನ್ನು ನಿರಾಶ್ರಿತ ವಲಸೆಗಾರರ ಪ್ರಶ್ನೆಗೆ ಬರುವುದಾದರೆ ಅವರನ್ನು ರವಾಂಡಾ ದೇಶದ ಮೃತ್ಯು ಸದೃಶ ಶಿಬಿರಗಳಿಗೆ ಅಟ್ಟಿಬಿಡಬೇಕೆಂಬ ಪ್ರೀತಿ ಪಟೇಲರ ಫ಼್ಯಾಸಿಸ್ಟ್ ನೀತಿಯನ್ನು ಅಪ್ಪಿಕೊಳ್ಳಲು ಅವರು ತುದಿಗಾಲಲ್ಲಿ ನಿಂತಿದ್ದಾರೆ.

ವಿಪರ್ಯಾಸವೆಂದರೆ ರಿಶಿ ಸುನುಕರ ಪೂರ್ವಜರೇ ನಿರಾಶ್ರಿತರಾಗಿ ಯುನೈಟೆಡ್ ಕಿಂಗ್‌ಡಂ ಗೆ ಬಂದಿದ್ದರು. ಮತ್ತು ಈ ರವಾಂಡಾ ನೀತಿಯು ದುಬಾರಿಯಾಗಿದ್ದು ಪರಿಣಾಮಕಾರಿಯಾಗಿಲ್ಲವೆಂಬುದು ಈಗಾಗಲೇ ರುಜುವಾತಾಗಿದೆ.

ಇದಲ್ಲದೆ ರಿಷಿ ಸುನುಕ್ ಅವರು ಮೋದಿ ಅಳ್ವಿಕೆಗೆ ಸನಿಹವಾಗಿರುವುದು ಕೂಡ ಸ್ಪಷ್ಟವಾಗಿದೆ. ಜಗತ್ತಿನಾದ್ಯಂತ ಹಿಂದೂತ್ವವಾದಿ ಶಕ್ತಿಗಳೊಂದಿಗೆ ಮಿತ್ರತ್ವ ಹೊಂದಿರುವ ಇಸ್ರೇಲಿನೊಂದಿಗೆ ಅವರಿಗಿರುವ ಸ್ನೇಹ ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ರಿಷಿ ಸುನುಕ್ ಅವರು ಜೆರುಸೊಲೆಮ್ ಅನ್ನು ಇಸ್ರೇಲಿನ ರಾಜಧಾನಿಯಾಗಿ ಜಗತ್ತು ಒಪ್ಪಿಕೊಳ್ಳಬೇಕೆಂಬುದನ್ನು ಬೆಂಬಲಿಸುತ್ತಾರೆ.

ಅಲ್ಲದೇ ಇಸ್ರೇಲಿನ ಘಾತುಕತನವನ್ನು ಜಗತ್ತಿನಾದ್ಯಂತ ಬಯಲು ಮಾಡುತ್ತಿರುವ Boycott, Disinvest, Sanction(BDS)- (ಇಸ್ರೇಲನ್ನು-ಬಹಿಷ್ಕರಿಸಿ, ಹೂಡಿಕೆ ಹಿಂತೆಗೆದುಕೊಳ್ಳಿ ಮತ್ತು ನಿರ್ಬಂಧ ವಿಧಿಸಿ) ಚಳವಳಿಯ ಮೇಲೆ ಶಾಸನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನೂ ನೀಡಿದ್ದಾರೆ.

ಅವರ ಮಾವ ನಾರಾಯಣಮೂರ್ತಿ ಸ್ಥಾಪಿಸಿರುವ ಇನ್‌ಫ಼ೋಸಿಸ್ ಸಂಸ್ಥೆಯು ಇಸ್ರೇಲಿನಲ್ಲಿ ಸಾಕಷ್ಟು ಹೂಡಿಕೆಗಳನ್ನು ಮಾಡಿದ್ದು ಅದರ ಸಹ ಉಸ್ತುವಾರಿಯನ್ನು ಇಸ್ರೇಲಿನ ಮಿಲಿಟರಿ ಬೇಹುಗಾರಿಕೆ ಸಂಸ್ಥೆ ಘಟಕ-೮೨೦೦ರ ಭಾಗವಾಗಿದ್ದ ಉರಿ ಲೆವಿನ್ ನಿರ್ವಹಿಸುತ್ತಾರೆ.
(https://twitter.com/Lowkey0nline/status/1583423329620307969)

Rishi Sunak's family has significant business interests in Israel.

Their company, Infosys, is co-directed by Uri Levine, formerly of Israeli Military Intelligence Unit 8200.

Infosys and its subsidiaries there all employ former Israeli military personnel.
— Lowkey (@Lowkey0nline) October 21, 2022

ಮೋದಿ ಸರ್ಕಾರದ ಬಗೆಗಿನ ಯಾವುದೇ ವಿಮರ್ಶೆಯನ್ನು ಅಥವಾ ಬ್ರಿಟನ್ನಿನಲ್ಲಿರುವ ಹಿಂದುತ್ವ ಫ಼್ಯಾಸಿಸ್ಟರ ಯಾವುದೇ ಶಾಖೆಗಳ ಮೇಲಿನ ವಿಮರ್ಶೆಯನ್ನು – ಹಿಂದೂಫ಼ೋಬಿಯ- ಹಿಂದುಗಳನ್ನು ದುರುಳಿಕರಿಸುವ
-ತಂತ್ರ ಎಂದು ಪ್ರಚಾರ ಮಾಡುವ ಹಿಂದೂತ್ವ ಫ಼್ಯಾಸಿಸ್ಟರ ಪ್ರಯತ್ನಗಳನ್ನು ರಿಶಿ ಸುನುಕ್ ಅವರು ಬೆಂಬಲಿಸುವ ಎಲ್ಲಾ ಸಾಧ್ಯತೆಗಳಿವೆ.

ಕಳೆದ ಹಲವಾರು ವರ್ಷಗಳಿಂದ ಹೆಚ್ಚೆಚ್ಚು ಪಾಶ್ಚಿಮಾತ್ಯ ರಾಜಕಾರಣಿಗಳು ಮತ್ತು ವಿಶ್ಲೇಷಕರು ಮೋದಿಯವರ ನರಮೇಧ ನೀತಿಗಳನ್ನು ಟೀಕಿಸುವುದು ಹೆಚ್ಚುತ್ತಿದ್ದಂತೆ ಮೋದಿ ಸರ್ಕಾರದ ವಿದೇಶಿ ಕಚೇರಿಗಳು ಅವನ್ನು ನಗಣ್ಯಗೊಳಿಸುವ ಹತಾಷ ಪ್ರಯತ್ನದಲ್ಲಿ ತೊಡಗಿಕೊಂಡಿವೆ.

ಹಿಂದೂಫ಼ೋಬಿಯಾ- ಹಿಂದು ದುರುಳೀಕರಣ ಎಂಬುದು Black Lives Matter Movement – ಕಪ್ಪು ಜನರ ಜೀವಕ್ಕೂ ಬೆಲೆ ಇದೆ ಎಂಬ ಚಳವಳಿಯನ್ನು ನಗಣ್ಯಗೊಳಿಸಲು ಹುಟ್ಟಿಕೊಂಡ ’ White Lives Matter’- ಬಿಳಿ ಜೀವಕ್ಕೆ ಬೆಲೆ ಇದೆ -ಎಂಬ ಬಿಳಿಯ ಶ್ರೇಷ್ಟತೆಯನ್ನು ಪ್ರತಿಪಾದಿಸುವ ಬಿಳಿ ದುರಭಿಮಾನಿ ಜನಾಂಗೀಯ ಪ್ರತಿಕ್ರಿಯೆಗೆ ಸಮಾನವಾದದ್ದು ಎಂಬುದನ್ನು ನಾವು ಸೂಚಿಸುತ್ತಲೇ ಬಂದಿದ್ದೇವೆ. ಇದು ತನ್ನಂತೆಯೇ ಒಂದು ನವನಾಜಿ ಚಳವಳಿಯಾಗಿ ಬೆಳೆಯುತ್ತಿದೆ.

ಭಾರತದಲ್ಲಿರುವ ಹಿಂದೂ ಬಹುಸಂಖ್ಯಾತರು ಅಲ್ಲಿನ ಅಲ್ಪಸಂಖ್ಯಾತರಿಂದ ಯೋಜಿತ ದಾಳಿಗೆ ತುತ್ತಾಗುತ್ತಿದ್ದಾರೆ ಎಂಬ ಹಿಂದೂಫ಼ೋಬಿಯಾದ ತಿಳವಳಿಕೆಯು ಪಾಶ್ಚಿಮಾತ್ಯ ಸಂದರ್ಭದಲ್ಲಿ ಬಿಳಿಯರಿಗೆ ಅನ್ವಯವಾಗುತ್ತದೆ.
(https://southasiasolidarity.org/keir-starmer-dont-pander-to-the-right-believing-in-hinduphobia/)

ಎರಡನ್ನೂ ಕೂಡ ಅಲ್ಪಸಂಖ್ಯಾತ ಹಾಗೂ ದಮನಿತ ಜನರ ಮೇಲೆ ತಾವು ನಡೆಸುವ ಜನಾಂಗೀಯ ಮತ್ತು ಫ಼್ಯಾಸಿಸ್ಟ್ ದಾಳಿಗಳ ವಿರುದ್ಧ ನಡೆಯುವ ಪ್ರತಿರೋಧಗಳ ವಿರುದ್ಧ ನೆಪವಾಗಿ ಹಾಗೂ ಪ್ರತಿಕ್ರಿಯೆಯಾಗಿ ಬಳಸಲಾಗುತ್ತದೆ.

ಕಳೆದ ತಿಂಗಳು ಲೈಸೆಸ್ಟರ್ ನಲ್ಲಿ ಮುಖವಾಡ ಧರಿಸಿದ ಸಶಸ್ತ್ರ ಹಿಂದೂತ್ವವಾದಿಗಳು ಏಶಿಯನ್ ಸಮುದಾಯಗಳ ವಸತಿ ಪ್ರದೇಶದಲ್ಲಿ ಮೆರವಣಿಗೆ ನಡೆಸಿದ್ದರ ಹಿಂದಿನ ಉದ್ದೇಶ ಮುಸ್ಲಿಮರನ್ನು ಪ್ರಚೋದಿಸಿ ತಮ್ಮ ಹಿಂದೂಫ಼ೋಬಿಯಾ ಎಂಬ ಕಥನವನ್ನು ಮತ್ತಷ್ಟು ಗಟ್ಟಿಗೊಳಿಸಿಕೂಳ್ಳುವುದೇ ಆಗಿತ್ತು.

ರಿಶಿ ಸುನುಕ್ ಅವರು ಪ್ರಧಾನಿಯಾಗುವುದರೊಂದಿಗೆ ಈ ಶಕ್ತಿಗಳು ಇನ್ನಷ್ಟು ಬಲಗೊಳ್ಳುತ್ತಾರೆ.

ಅಲ್ಲದೇ ಈ ಬಗೆಯ ಕೋಮುವಾದಿ ಹಿಂಸಾಚಾರವನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ.

ಇದನ್ನು ತಡೆಗಟ್ಟಲೇಬೇಕು.

ಶಿವಸುಂದರ್
ಚಿಂತಕರು

ಮೊಬೈಲ್ ಮನುಷ್ಯನಿಗೆ ಮರುಳೋ? ಮನುಷ್ಯ ಮೊಬೈಲ್ ಗೆ ಮರುಳೋ?
ಇದು ಸ್ಮಾರ್ಟ್‌ ಫೋನ್‌ ಯುಗ. ಮಾಹಿತಿಗಳ ಮಹಾಪೂರವನ್ನೇ ನಮ್ಮ ಬೊಗಸೆಗೆ ತಂದು ಸುರಿಯುವ ಮೊಬೈಲ್‌ ಫೋನ್‌ ಗಳು ನಮ್ಮ ನೆಮ್ಮದಿಯನ್ನೂ, ಆರೋಗ್ಯವನ್ನೂ ಕಸಿಯುತ್ತಿವೆಯೇ? ಈ ಪ್ರಶ್ನೆ ಭಾರತ ಸೇವಾರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಹನುಮಂತ ದಾಸರ ಹೊಗರನಾಳ ಅವರದು.

ಜಗತ್ತಿನ ಬಹುತೇಕ ಜನರು ತಂತ್ರಜ್ಞಾನ ಮತ್ತು ಹೊಸ ಹೊಸ ಆವಿಷ್ಕಾರಗಳ ಅತಿಯಾದ ಬಳಕೆ ಮತ್ತು ಉಪಯೋಗದಿಂದ ಇಂದು ಮಾನಸಿಕ ಹಾಗೂ ದೇಹದ ಇನ್ನಿತರ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಮತ್ತು ಇದು ಬರೀ ಮಾನವನ ಆರೋಗ್ಯಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲದೇ ಸುತ್ತಲಿನ ವಾತಾವರಣಕ್ಕೂ, ಪ್ರಾಣಿ ಪಕ್ಷಿಗಳ ಬದುಕಿಗೂ ಮಾರಕವಾಗಿ ಪರಿಣಮಿಸಿದೆ.

ಹೊಸ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬೆನ್ನಿಗೆ ಬಿದ್ದ ಮಾನವ ತನ್ನ ದಿನನಿತ್ಯದ ಕೆಲಸ ಕಾರ್ಯಗಳನ್ನೂ ಕೂಡ ನಡೆಸಿ ಕೊಳ್ಳುವಲ್ಲಿ ತಂತ್ರಜ್ಞಾನಗಳ ಮೇಲೆ ಅತಿಯಾಗಿ ಅವಲಂಬಿತವಾಗಿರುವ ಸನ್ನಿವೇಶ ಇಂದು ನಮ್ಮೆದುರಿಗೆ ಸುಳಿದಿದೆ. ಮಾನವನ ಬದುಕಿಗೆ ಬೇಕಾದ ಪ್ರತಿಯೊಂದು ಕಾರ್ಯಗಳಿಗೆ ಇಂದು ತಂತ್ರಜ್ಞಾನ ಸಹಪಾಠಿಯಾಗಿ ನಿಂತಿದೆ.

ಮೊಬೈಲ್ ಮನುಷ್ಯನಿಗೆ ಮರುಳೋ, ಮನುಷ್ಯ ಮೊಬೈಲ್ ಗೆ ಮರುಳೋ?

ಇಂತಹ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಎಂಬ ಒಂದು ವಿಶೇಷ, ವಿಭಿನ್ನ ಹಾಗೂ ವಿಚಿತ್ರವಾದಂತಹ ತಂತ್ರಜ್ಞಾನ ಇಂದು ಪ್ರತಿಯೊಬ್ಬ ಮಾನವನನ್ನು ಆಳುವಂತಾಗಿದೆ. ಮೊಬೈಲ್ ನ್ನು  ಎಷ್ಟು ಬೇಕೋ ಅಷ್ಟೇ ಬಳಸುವ ವ್ಯಕ್ತಿಯನ್ನು ಹುಡುಕುವುದಾದರೆ ಅದು ಜಗತ್ತಿನಲ್ಲೇ ತುಂಬಾ ಕಷ್ಟಕರವಾದ ಸಂಶೋಧನೆ ಆಗಬಹುದು. ಜಗತ್ತಿನಲ್ಲಿ ಎಷ್ಟು ತಂತ್ರಜ್ಞಾನಗಳು ಅನಾವರಣ ಗೊಂಡಿವೆಯೋ ಅವುಗಳು ಅಷ್ಟೇ ಮಾನವನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಮೊಬೈಲ್ ಎನ್ನುವುದು ಅಂಗೈಯೊಳಗಿನ ಒಂದು ಚಿಕ್ಕ ತಂತ್ರಜ್ಞಾನದ ಸಾಧನೆಯಾದರೂ ಅದು ಇಡೀ ಜಗತ್ತನ್ನೇ ಅಂಗೈಯಲ್ಲಿ ತೋರಿಸುವಂತಹ ತಂತ್ರಜ್ಞಾನವನ್ನು ಒಳಗೊಂಡಿದೆ ಮತ್ತು ಅಂತಹ ವಿಭಿನ್ನ ತಂತ್ರಜ್ಞಾನದಿಂದ ನಾವು ಏನು ಬೇಕಾದರೂ ಕ್ಷಣಾರ್ಧದಲ್ಲೇ ಪಡೆದುಕೊಳ್ಳಬಹುದು. ಇಂತಹ ಮೊಬೈಲ್ ತಂತ್ರಜ್ಞಾನದಿಂದ ಜಗತ್ತಿನಲ್ಲಿ ಏನೆಲ್ಲಾ ನಡೆಯಬೇಕೋ ಅದೆಲ್ಲಾ ನಡಿಯುತ್ತೆ, ಏನೆಲ್ಲಾ ನಡಿಯಬಾರದೋ ಅದೆಲ್ಲಾ ನಡಿಯುತ್ತೆ ಹಾಗೂ ಸಮಾಜದ ಮೇಲೆಯೂ ಕೆಟ್ಟದೂ ಒಳ್ಳೆಯದೂ ಪ್ರಭಾವ ಬೀರುತ್ತದೆ. ಆದರೆ ಪರಿಣಾಮವು ಅದರ ಬಳಕೆಯ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಬೇಕಾದಕಿಂತ ಅತಿಯಾಗಿ ಮೊಬೈಲ್ ನ್ನು ನಾವು ಉಪಯೋಗಿಸುತ್ತಿದ್ದೇವೆ. ಜೊತೆಗೆ ಗೊತ್ತಿಲ್ಲದೇ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ.

ಮುಖ್ಯವಾಗಿ ಮನುಷ್ಯನಿಗೆ ಬೇಕಾಗಿದ್ದು ಅವನ ಮಾನಸಿಕ ಸ್ಥಿತಿ, ಮಾನಸಿಕ ಸ್ಥಿತಿ ಸರಿಯಾಗಿದ್ದರೆ ಮಾತ್ರ ಮನುಷ್ಯ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಹೀಗಿರುವಾಗ, ಅತಿಯಾದ ಮೊಬೈಲ್ ಬಳಕೆಯಿಂದ ಮಾನವನ ಮೃದು ಮನಸ್ಸಿನ ಮೇಲೆ ಒತ್ತಡ ಬಿದ್ದು ಅವನ ಆರೋಗ್ಯ ದುಸ್ಥಿತಿಗೂ ಕಾರಣವಾಗುತ್ತದೆ. ಇತ್ತೀಚೆಗಂತೂ ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ಇಲ್ಲ ಅಂದ್ರೆ ಮಕ್ಕಳು ಊಟ ಮಾಡುವುದಿಲ್ಲ. ನಿದ್ರೆ ಮಾಡುವುದಿಲ್ಲ. ಕೆಲವು ವರ್ಷಗಳ ಹಿಂದಿನ ದಿನಗಳನ್ನು ನೆನಪಿಸಿಕೊಂಡರೆ ಆಗ ಮಕ್ಕಳು ಅತ್ತಾಗ ಅವರ ಕೈಯಲ್ಲಿ ಯಾವುದೋ ಆಟದ ಬೊಂಬೆಯೋ, ಆಟಿಕೆ ವಸ್ತುಗಳನ್ನೋ ಕೊಟ್ಟು ಅವರ ಗಮನವನ್ನು ಅವುಗಳ ಮೇಲಿರಿಸಿ ಸುಮ್ಮನಿರಿಸುವುದು ಮತ್ತು ಊಟ ಮಾಡಲು ಹಠ ಮಾಡಿದಾಗ ಚಂದ್ರನನ್ನು ತೋರಿಸಿಯೋ ಅಥವಾ ಗುಮ್ಮ ಬರುತ್ತೆ ಹಾಗೆ ಹೀಗೆ ಅಂತ ಏನೇನೋ ಹೇಳಿ ಊಟ ಮಾಡಿಸಿ ಜೋಗುಳ ಹಾಡಿ ಮಗುವನ್ನು ಮಲಗಿಸುವಂತಹ ಕಾಲವಿತ್ತು. ಆದರೇ ಇಂದು ಅದೆಲ್ಲಾ ಬದಲಾಗಿ ವಿರುದ್ಧ ದಾರಿಯಲ್ಲಿ ನಡಿಯುತ್ತಿದೆ. ಅದಕ್ಕೆಲ್ಲಾ ಮೂಲ ಮಂತ್ರ ಈ ಮೊಬೈಲ್ ಎಂಬ ತಂತ್ರ. ಪ್ರತೀ ಕ್ಷಣವೂ ಮಕ್ಕಳ ಕೈಯಲ್ಲಿ ಮೊಬೈಲ್ ಇಲ್ಲವೆಂದರೆ ಅವತ್ತು ಆ ಮಗು ಊಟ ಮಾಡುವುದಿಲ್ಲ, ನಿದ್ದೆ ಮಾಡುವುದಿಲ್ಲ. ಮೇಲಾಗಿ ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಅತ್ತು ಅತ್ತು ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರುವುದಂತೂ ಖಚಿತ. ಹೀಗೆ ಮೊಬೈಲ್ ಒಂದು ಬಿಟ್ಟರೂ ಬಿಡದ ಮಾಯೆ ಎಂಬಂತಾಗಿ ಮೊಬೈಲ್ ಮನುಷ್ಯನಿಗೆ ಮರುಳೋ, ಮನುಷ್ಯ ಮೊಬೈಲ್ ಗೆ ಮರುಳೋ ಎಂಬ ಪ್ರಶ್ನೆ ಕಾಡುವಂತಾಗಿದೆ.

ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು

ಕಣ್ಣು

ಮುಖ್ಯವಾಗಿ ಚಿಕ್ಕಮಕ್ಕಳ ಹಠಕ್ಕೆ ಅವರ ಕೈಯಲ್ಲಿ ಮೊಬೈಲ್ ಕೊಟ್ಟು, ಗೇಮ್ ಹಚ್ಚಿ ಕೊಟ್ಟು ನಮ್ಮ ಕೆಲಸದಲ್ಲಿ ನಾವು ನಿರತರಾದರೆ ಮಕ್ಕಳು ಮೊಬೈಲ್ ಉಪಯೋಗಿಸುವಾಗ ಬಹಳ ಬ್ರೈಟ್ನೆಸ್ ಹೊಂದಿರುವ ಮೊಬೈಲ್ ಸ್ಕ್ರೀನ್ ಮಕ್ಕಳ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ದೃಷ್ಟಿ ಹೀನತೆ, ಕಣ್ಣು ಉರಿ, ತಲೆನೋವು ಇತ್ಯಾದಿ ಕಾರಣಗಳಿಗೆ ಅವರು ತುತ್ತಾಗಿ ಚಿಕ್ಕ ಮಕ್ಕಳಿಗೆ ಕನ್ನಡಕ ಧರಿಸುವಂತಹ ಸಾಧ್ಯತೆಗಳು ಹೆಚ್ಚಾಗಬಹುದು. ಕುರುಡುತನವೂ ಕಾಡಬಹುದು. ಇದು ಯುವಕರ ಆರೋಗ್ಯದ ಮೇಲೆಯೂ ಪ್ರಭಾವ ಬೀರಿ ದೂರದೃಷ್ಟಿ, ಸಮೀಪದೃಷ್ಟಿ ಎಂಬಂತಹ ತೊಂದರೆಗೆ ಅವರು ತುತ್ತಾಗಬಹುದು ಮತ್ತು ತಲೆನೋವು, ಸಿಟ್ಟು, ಚಂಚಲತೆ, ಯಾವುದರಲ್ಲೂ ಗಮನ ಕೇಂದ್ರೀಕರಿಸಲು ಸಾಧ್ಯವಾಗದೆ ಇರುವುದು ಇತ್ಯಾದಿಗಳು ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಕಿವಿ

ಅತಿಯಾಗಿ ಮೊಬೈಲ್ ಹಿಡಿದು ಮಾತನಾಡುವುದು, ಅತಿಯಾದ ಸೌಂಡ್ ಇಟ್ಟು ಹಾಡು ಕೇಳುವುದು, ಇಯರ್ ಫೋನ್ ಹಾಕಿ ಡಿಜೆ ಹಾಡುಗಳನ್ನು ಜೋರಾಗಿ ಕೇಳುವುದು ಹಾಗೂ ತಾಸುಗಟ್ಟಲೆ ಮಾತನಾಡುವಾಗ ಮೊಬೈಲ್ ಬಿಸಿಯಾಗಿ ಕಿವಿಗೆ ಬಿಸಿ ತಾಕುವುದು ಇಂತಹ ಕಾರಣಗಳಿಂದ ಕಿವಿಯ ಭಾಗಕ್ಕೆ ತೊಂದರೆಯಾಗಿ ಕಿವಿ ಕೇಳದಂತಾಗಿ ಕಿವುಡುತನಕ್ಕೂ ಕಾರಣವಾಗಬಹುದು.

ಬಾಯಿ

ಅತಿಯಾಗಿ ಮೊಬೈಲ್ ನಲ್ಲಿ ತಾಸುಗಟ್ಟಲೆ ಮಾತನಾಡುವುದರಿಂದ ಬಾಯಿಗೂ ಹಾಗೂ ದವಡೆಗೂ ಆಯಾಸವಾಗಿ ಗಂಟಲಿನಲ್ಲಿ ನೀರಿನಂಶ ಕಡಿಮೆಯಾಗಿ ಗಂಟಲು ಆರುವುದು ಮತ್ತು ಡಿಹೈಡ್ರೇಷನ್ ಆಗಬಹುದು.

ಚರ್ಮ

ಮೊಬೈಲ್ ಬಳಕೆಯನ್ನು ದೀರ್ಘ ಅವಧಿಯಲ್ಲಿ  ಮಾಡುವಾಗ ಅದು ಅತೀ ಬಿಸಿಯಾಗಿ ಬ್ಯಾಟರಿ ಬ್ಲಾಸ್ಟ್ ಆಗಬಹುದು. ಅದರಿಂದ ದೇಹದ ಯಾವುದೇ ಭಾಗದ ನ್ಯೂನತೆಗೆ ಕಾರಣವಾಗಬಹುದು ಮತ್ತು ಬಿಸಿಯಾದ ಮೊಬೈಲ್ ಉಪಯೋಗಿಸುವುದರಿಂದ ಚರ್ಮದ ಸ್ಪರ್ಶ ಜ್ಞಾನ ಕಡಿಮೆಯಾಗಬಹುದು ಮತ್ತು ಚರ್ಮದಲ್ಲಿನ ನೀರಿನಂಶ ಕಡಿಮೆಯಾಗಿ, ರಕ್ತ ಸುಟ್ಟು ಅಲರ್ಜಿಗೂ ಕಾರಣವಾಗಬಹುದು.

ಮೆದುಳು

ಅತೀಯಾಗಿ ಮೊಬೈಲ್ ಹಿಡಿದು  ಮಾತನಾಡುವುದರಿಂದ, ಯಾವಾಗಲೂ ಮೊಬೈಲ್ ಸ್ಕ್ರೀನ್ ನೋಡುವುದರಿಂದ (ರಾತ್ರಿವೇಳೆಯಲ್ಲಿ ಮಾತ್ರ ಬ್ರೈಟ್ಟ್ನೆಸ್ ಕಡಿಮೆ ಇರಬೇಕು), ಬಿಸಿಯಾದ ಮೊಬೈಲ್ ಉಪಯೋಗಿಸುವುದರಿಂದ ಕಣ್ಣಿಗೂ ಆಯಾಸವಾಗಿ, ಕಿವಿಯ ತಮಟೆಯ ಮೇಲೆ ಒತ್ತಡ ಬೀರಿ, ಚರ್ಮದ ಮೇಲೆಯೂ ಪರಿಣಾಮ ಬೀರಿ ನಂತರ ಮೆದುಳಿನ ಮೇಲೆಯೂ ಒತ್ತಡ ಬಿದ್ದಾಗ ಮೆದುಳಿನ ನರಗಳು ಆಯಾಸಗೊಳ್ಳಬಹುದು. ಮೆದುಳಿಗೆ ಅನಾವಶ್ಯಕ ಕೆಲಸ ಕೊಟ್ಟಾಗ ತಲೆನೋವು, ಸಿಟ್ಟು, ಚಂಚಲತೆ ಕಾಣಿಸಿಕೊಳ್ಳಬಹುದು. ವಿಚಾರ ಶಕ್ತಿ ಹಾಳಾಗಬಹುದು, ಏಕಾಗ್ರತೆ ಕುಂಠಿತಗೊಳ್ಳಬಹುದು, ಮಾನಸಿಕ ಒತ್ತಡ ಹೆಚ್ಚಾಗಿ ಮನುಷ್ಯ ಮಾನಸಿಕ ರೋಗಕ್ಕೂ ತುತ್ತಾಗಬಹುದು.

ಅಂಡಾಣುವಿನ ಮೇಲೆ

ಈ ಮೇಲಿನ ಎಲ್ಲಾ ಅಂಶಗಳಿಂದ ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು- ಹೆಣ್ಣಿನ ಲೈಂಗಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಗಳಾದ ಈಸ್ಟ್ರೋಜನ್ ಮತ್ತು ಪ್ರಾಜೆಸ್ಟಿರೋನ್ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಸಾಬೀತಾಗಿದೆ. ಹೀಗೆ ಮೊಬೈಲ್ ಹಾಗೂ ಇನ್ನಿತರ ತಂತ್ರಜ್ಞಾನ ಸಾಧನಗಳ ಅತಿಯಾದ ಬಳಕೆಯಿಂದ ಮಾನವನ ಮುಖ್ಯವಾದ ಅಂಗಾಂಗಗಳ ಮೇಲೆ ಅತಿಯಾದ ಪರಿಣಾಮ ಬೀರುತ್ತದೆ. ಇಂತಹ ಕಾರಣಕ್ಕಾಗಿಯೇ ಎಂಬಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಅಕ್ಟೋಬರ್ 10 ರಂದು ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತಿದೆ.

ಈ ಎಲ್ಲಾ ಅಂಶಗಳನ್ನು ಮನಗಂಡು ನಾವು ನಮ್ಮ ನಿತ್ಯ ಮೊಬೈಲ್ ಬಳಕೆಯ ಮೇಲೆ ಗಮನ ಹರಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ಇಡೀ ಜಗತ್ತನ್ನು ಅಂಗೈಯಲ್ಲಿ ತೋರಿಸಿ ನಮ್ಮ ಆರೋಗ್ಯವನ್ನು ಕಸಿದು ಕೊಳ್ಳುವಂತಹ ಮೊಬೈಲ್‌ ಹುನ್ನಾರಕ್ಕೆ ನಾವು ತುತ್ತಾಗದಿರೋಣ.

ಮೊಬೈಲ್‌ ನಿಂದ ದೂರ ಇರುವುದು ಹೇಗೆ?

ಮೊಬೈಲ್ ನಲ್ಲಿ ಅತಿಯಾಗಿ ತಲ್ಲಿನರಾಗುವುದನ್ನು  ಬಿಟ್ಟು ಸ್ವಲ್ಪ ಸಮಯ ಸಂಬಂಧಿಕರು, ಸ್ನೇಹಿತರು, ಅಕ್ಕಪಕ್ಕದವರೊಂದಿಗೆ ಬೆರೆಯುವುದು, ಮತ್ತೊಬ್ಬರ ಕಷ್ಟ ಸುಖದ ಬಗ್ಗೆ ಮಾತನಾಡುವುದು ಅಥವಾ ಬೇರೊಬ್ಬರಿಗೆ ಸಹಾಯ ಮಾಡುವುದು, ದಿನಾಲು ಸ್ವಲ್ಪ ಸಮಯ ಮೊಬೈಲ್ ಬಿಟ್ಟು ಧ್ಯಾನದಲ್ಲಿ ಮುಳುಗುವುದು, ಸುತ್ತಲಿನ ಪರಿಸರದೊಂದಿಗೆ ಬೆರೆಯುವುದು, ಒಳ್ಳೆಯ ವಾತಾವರಣದಲ್ಲಿ ಒಬ್ಬಂಟಿಯಾಗಿ ಕುಳಿತು ಪಶು ಪಕ್ಷಿಗಳ ಇಂಚರವನ್ನು ಆಲಿಸುವುದು, ಬಿಡುವಿದ್ದಾಗ ಒಳ್ಳೆಯ ಪುಸ್ತಕಗಳನ್ನು ಓದುವುದು, ವಿಭಿನ್ನ ವಿಚಾರಗಳ ಬಗ್ಗೆ ತಿಳಿಯುವುದು, ಬರೆಯುವುದು, ಹಿರಿಯರೊಂದಿಗೆ ಬೆರೆತು ವಿಶೇಷ ವಿಚಾರಗಳ ಬಗ್ಗೆ ಚರ್ಚೆ ಮಾಡುವುದು, ಚಿಕ್ಕ ಮಕ್ಕಳ ಜೊತೆಗೆ ಆಟ ಆಡುವುದು, ಗ್ರಾಮೀಣ ಕ್ರೀಡೆಗಳನ್ನು ಆಡುವುದು… ಇಂತಹ ಹವ್ಯಾಸಗಳನ್ನು  ನಾವು ಮೈಗೂಡಿಸಿಕೊಂಡಾಗ ನಮ್ಮ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವೂ ಹಿತವಾಗಿರುತ್ತದೆ.

ಹನುಮಂತ ದಾಸರ ಹೊಗರನಾಳ
ಭಾರತ ಸೇವಾರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.

ತುಳುನಾಡಿನ ದೈವಗಳು: ಒಂದು ಟಿಪ್ಪಣಿ
ತುಳುನಾಡಿನ ದೈವಗಳನ್ನು ʼಹಿಂದೂ ಧರ್ಮದʼ ಚೌಕಟ್ಟಿಗೆ ಒಳಪಡಿಸುವ ಪ್ರಕ್ರಿಯೆ ಆರಂಭವಾಗಿ ಕೆಲವು ವರ್ಷಗಳೇ ಕಳೆದಿವೆ. ಈಗ ಅದಕ್ಕೆ ಮತ್ತಷ್ಟು ಚಾಲನೆ ದೊರಕಿದೆ. ʼಹಿಂದೂ ಧರ್ಮʼ ಎಂದರೇನು ಎಂಬುದನ್ನು ಯಾರೂ ಸರಿಯಾಗಿ ನಿರ್ವಚಿಸದೇ ಇರುವುದರಿಂದ ಅದರೊಳಕ್ಕೆ ಎಲ್ಲವನ್ನೂ ಸುಲಭವಾಗಿ ತುರುಕಲು ಸಾಧ್ಯವಾಗಿದೆ. ʼಹಿಂದೂವಾಗಿ ಸಾಯಲಾರೆ ʼಎಂದ ಅಂಬೇಡ್ಕರರನ್ನು ಕೂಡಾ ಇವತ್ತಿನ ಹಿಂದೂ ರಾಜಕಾರಣ ತನ್ನೊಳಗು ಮಾಡಿಕೊಂಡಿರುವಾಗ ತುಳುನಾಡಿನ ದೈವಗಳನ್ನು ಅದು ಬಿಡಲಾರದು.

ಬಹಳ ಪ್ರಾಚೀನ ಕಾಲದಲ್ಲಿ ತುಳುನಾಡಿಗೆ ವಲಸೆ ಬಂದು ನೆಲೆಯಾಗಿರುವ ತಳಸ್ತರದ ಸುಮಾರು ೩೨ ಸಮುದಾಯಗಳಿವೆ. ಇವರ ಒಟ್ಟು ಸಂಖ್ಯೆ ಸುಮಾರು ಎರಡು ಲಕ್ಷ ಇರಬಹುದು. ಆದಿ ದ್ರಾವಿಡ, ಅಜಿಲ, ನಲ್ಕೆ, ಮಾಯಿಲ, ಬಾಕುಡ, ಭೈರ, ಮೇರ, ಮುಗ್ಗೆರ್ಲು, ಮಲೆ ಕುಡಿಯ, ಬತ್ತಡ, ಪಾಣಾರ, ಮೊಗೇರ, ಪರವ, ಪಂಬದ, ಮೊದಲಾದ ಸಮುದಾಯಗಳು ಈ ಗುಂಪಿಗೆ ಸೇರುತ್ತವೆ. ಶ್ರೇಣೀಕೃತ ಸಮಾಜದ ತಳಭಾಗದಲ್ಲಿರುವ ಇವರಲ್ಲಿ ಕೆಲವರು ಭೂತಾರಾಧನೆಯ ಸಂದರ್ಭದಲ್ಲಿ ತಾವೇ ದೈವಗಳಾಗಿ, ತಾತ್ಕಾಲಿಕವಾಗಿ ನಿರ್ಮಿತವಾದ ಕಾಲ, ಸ್ಥಳ ಮತ್ತು ಸಮುದಾಯಗಳ ಒಗ್ಗೂಡುವಿಕೆಯ ಸಂದರ್ಭದಲ್ಲಿ ಜಾತಿ ಸಮಾಜದ ಶ್ರೇಣೀಕರಣದ ಮೇಲ್ತುದಿಗೆ ಚಲಿಸುತ್ತಾರೆ. ಆರಾಧನೆ ಮುಗಿದ ಮೇಲೆ ಮತ್ತೆ ಯಥಾಸ್ಥಿತಿ ಮುಂದುವರೆಯುತ್ತದೆ.

ತುಳುನಾಡಿನ ದೈವಾರಾಧನೆಯ ಕೇಂದ್ರದಲ್ಲಿರುವ ಸಾಂಸ್ಕೃತಿಕ ನಾಯಕರ ಸಂಖ್ಯೆಯು ಸಾವಿರಕ್ಕೂ ಮೀರಿದೆ ಎಂದು ವಿದ್ವಾಂಸರು ಹೇಳಿದ್ದಾರೆ. ಇದರಲ್ಲಿ ಬಬ್ಬರ್ಯ, ಆಲಿ ಮೊದಲಾದ ಮುಸ್ಲಿಮರೂ ಇದ್ದಾರೆ. ಮಂಜೇಶ್ವರದ ಉದ್ಯಾವರದಲ್ಲಿ ನಡೆಯುವ ಅರಸು ದೈವಗಳ ನೇಮದಲ್ಲಿ ಮುಸ್ಲಿಂ ಕುಟುಂಬಗಳು ಭಾಗವಹಿಸಲೇ ಬೇಕು. ಮುಸಲ್ಮಾನರಲ್ಲಿ ದೈವಾರಾಧನೆ ಇಲ್ಲ. ಹಿಂದೂ ದೇವರುಗಳಲ್ಲಿ ಮುಸಲ್ಮಾನರು ಇರುವುದು ಸಾಧ್ಯವಿಲ್ಲ. ಅಂಥ ದೈವಗಳನ್ನು ಪೂಜಿಸಲು ಬೇಕಾದ ಶಾಸ್ತ್ರೋಕ್ತ ಮಂತ್ರಗಳೂ ಇರಲಾರವು. ಆದರೆ ಭೂತಾರಾಧನೆಯಲ್ಲಿ ಇವೆರಡೂ ಸಾಧ್ಯವಾಗಿರುವುದೇ ನನ್ನಂಥವರಿಗೆ ಅದರಲ್ಲಿ ಕುತೂಹಲ ಹುಟ್ಟಲು ಕಾರಣ. ಈ ದೈವಗಳ ಕತೆಗಳನ್ನು ಪಾಡ್ದನಗಳು ನಿರೂಪಿಸುತ್ತವೆ. ಪಾಡ್ದನಗಳ ಲೋಕ ಅದ್ಭುತವಾಗಿದ್ದು ಕ್ಲಾಸಿಕಲ್‌ ಸಂಪ್ರದಾಯಕ್ಕಿಂತ ಭಿನ್ನವಾಗಿವೆ. ಉದಾಹರಣೆಗೆ, ಗುಳಿಗ ದೈವವು ತಾಯಿಯ ಬಲದ ಸಿರಿಮೊಲೆ ಒಡೆದು ಹೊರಬಂದು ಎಡದ ಮೊಲೆ ತಿಂದು ಕೈ ತಟ್ಟಿ ನಗುವುದನ್ನು ಗಮನಿಸಬೇಕು. ಪಾಡ್ದನಗಳ ಭಾಷೆ, ವಸ್ತು, ನಿರೂಪಣಾ ವಿಧಾನ ಇತ್ಯಾದಿಗಳ ಬಗ್ಗೆ ದೇಶ ವಿದೇಶಗಳ ವಿದ್ವಾಂಸರು ಸಾಕಷ್ಟು ಕೆಲಸ ಮಾಡಿದ್ದಾರೆ. ತುಳು ದೈವಗಳ ಕೆಲವು ವೈಶಿಷ್ಟ್ಯಗಳನ್ನು ಈ ಮುಂದಿನಂತೆ ಸಂಕ್ಷಿಪ್ತವಾಗಿ ಪಟ್ಟಿ ಮಾಡಬಹುದು-

ಪಾಡ್ದನಗಳಲ್ಲಿರುವ ದೈವದ ಕಥೆಗಳು ಬಹುಮಟ್ಟಿಗೆ ದುಃಖಾಂತವಾಗಿರುತ್ತವೆ. ಈ ವಿಷಯದಲ್ಲಿ ಅವು ನಮ್ಮ ಸಂಸ್ಕೃತ ಕಥನ ಪರಂಪರೆಗಿಂತ ತುಂಬಾ ಭಿನ್ನ. ಭೂತ ಕಟ್ಟುವ ಪರವನ ಹೆಂಡತಿ ಮಂಗಣೆಯ ಚೆಲುವಿಗೆ ಮರುಳಾಗಿ, ಅವಳನ್ನು ಪಡೆಯಲು ಅವಳ ಗಂಡನನ್ನೂ ಕೊಂದು, ತನ್ನ ಸರ್ವಸ್ವವನ್ನೂ ಕಳೆದುಕೊಂಡು, ಕೊನೆಗೆ ಮಂಗಣೆ ಬೆಂಕಿಗೆ ಹಾರಿದಾಗ ತಾನೂ ಬೆಂಕಿಗೆ ಹಾರಿ ಸತ್ತ ಬೊಟ್ಟುಪ್ಪಾಡಿ ಬಲ್ಲಾಳನ ಸಂಧಿಯು ನಾನು ಇದುವರೆಗೆ ಓದಿದ ಅತ್ಯುತ್ತಮ ದುರಂತ ಕಾವ್ಯಗಳಲ್ಲಿ ಒಂದು.

ಈ ಸಾಂಸ್ಕೃತಿಕ ನಾಯಕರು ದೈವಗಳಾಗಲು ಅವರ ಜಾತಿ ಅಥವಾ ಪೂರ್ವಜನ್ಮದ ಪುಣ್ಯ ವಿಶೇಷಗಳು ಕಾರಣವಾಗುವುದಿಲ್ಲ. ಆಲಿ, ಬಬ್ಬರ್ಯರು ಮುಸ್ಲಿಮರಾಗಿದ್ದರೆ, ಕಾಂತಾಬಾರೆ-ಬೂದಾಬಾರೆಯರು ಬಿಲ್ಲವ ವರ್ಗಕ್ಕೆ ಸೇರಿದವರು. ತನಿಯ ಕೊರಗ ಸಮುದಾಯಕ್ಕೆ ಸೇರಿದ ದೈವ.

ಹೆಚ್ಚಿನ ದೈವಗಳು ತಮ್ಮ ಮಧ್ಯವಯಸ್ಸಿನಲ್ಲಿ ಮಹತ್ ಸಾಧನೆ ಮಾಡಿ, ಇಲ್ಲವೇ ಸ್ಥಾಪಿತ ಮೌಲ್ಯಗಳಿಗೆ ಮುಖಾಮುಖಿಯಾಗಿ, ಸಾಯುತ್ತಾರೆ. ಕಾರ್ಕಳದಲ್ಲಿ ಗೊಮ್ಮಟನನ್ನು ಕೆತ್ತಿದ ಕಲ್ಕುಡನು ಅರಸನ ಕಾರಣದಿಂದ ತನ್ನ ಬಲದ ಕೈಯನ್ನೂ ಎಡದ ಕಾಲನ್ನೂ ಕಳಕೊಳ್ಳಬೇಕಾಗುತ್ತದೆ. ಅಣ್ಣನಿಗಾದ ಅನ್ಯಾಯವನ್ನು ತಂಗಿ ಕಲ್ಲುರ್ಟಿ ಪ್ರಶ್ನಿಸುತ್ತಾಳೆ. ಗಂಡಸರ ಅನ್ಯಾಯವನ್ನು ಪ್ರತಿಭಟಿಸಿದ ಸಿರಿಯು ಸತ್ತು ದೈವವಾಗುತ್ತಾಳೆ. ಬಳಜೇಯಿ ಮಾನಿಗದಲ್ಲಿ ಚೆನ್ನೆಮಣೆ ಆಟದಲ್ಲಿ ಮೋಸ ಮಾಡಿದ ಗಂಡನಿಗೆ ತವರು ಮನೆಯಲ್ಲಿದ್ದ ಮಾನಿಗಳು ಪೊರಕೆಗೆ ತನ್ನ ತಾಳಿ ಕಟ್ಟಿ ದಂಡಿಗೆಯಲ್ಲಿ ಕಳಿಸುತ್ತಾಳೆ.

ಕ್ಲಾಸಿಕಲ್‌ ಸಂಪ್ರದಾಯದಲ್ಲಿ ನಾಯಕರು ಅವರ ತಾಯಿಯ ಗರ್ಭದಲ್ಲಿರುವಾಗ ದೇವತೆಗಳು ಪುಷ್ಟವೃಷ್ಟಿ ಸುರಿಸುತ್ತಾರೆ. ಆದರೆ ಪಾಡ್ದನಗಳಲ್ಲಿ ಈ ಬಗೆಯ ವಿವರಗಳಿಲ್ಲ. ಈ ವೀರರ ತಾಯಂದಿರು ಗರ್ಭ ಧರಿಸುವಾಗ ಯಾವುದೇ ಶುಭ ಶಕುನಗಳು ಸಂಭವಿಸುವುದಿಲ್ಲ. ಅವರು ಕೇವಲ ಸಾಮಾನ್ಯರು.

ಈ ಸಾಂಸ್ಕೃತಿಕ ನಾಯಕರು ವೀರರಾಗಲು ಅವರು ಬೇರೊಂದು ದೈವದ ಅವತಾರವಾಗಿರುವುದು ಕಾರಣ ಅಲ್ಲ. ಅವರಿಗೆ ಯಾವುದೇ ಪೂರ್ವ ಜನ್ಮದ ಪುಣ್ಯ ವಿಶೇಷಗಳಿಲ್ಲ. ಈ ಜನ್ಮದಲ್ಲಿ ಅವರು ಸಾಧಿಸಿದ್ದೇ ಅಂತಿಮ. ಅವರ ಸಾಮಾಜಿಕ ಸ್ಥಾನಮಾನಗಳು (ಉದಾ: ಬ್ರಾಹ್ಮಣನಾಗಿರುವುದು, ಅರಸು ಕುಮಾರನಾಗಿರುವುದು) ಅವರ ವೀರತ್ವವನ್ನು ನಿರ್ಧರಿಸುವುದಿಲ್ಲ.

ದೈವಗಳಾಗಿರುವ ತುಳುನಾಡಿನ ಸಾಂಸ್ಕೃತಿಕ ನಾಯಕರು ಎಲ್ಲರಂತೆ ಜನಿಸಿ, ಬೆಳೆಯುತ್ತಾ ಬಗೆ ಬಗೆಯ ಒತ್ತಡಕ್ಕೆ ಒಳಗಾಗುತ್ತಾರೆ. ತಮ್ಮ ಪ್ರಾಮಾಣಿಕತೆ, ಬುದ್ಧಿಮತ್ತೆ, ಮತ್ತು ಸಾಹಸಗಳಿಂದ ಜನಾನುರಾಗಿಯಾಗಿರುವ ಅವರು ಸಮಾಜ ಒಡ್ಡುವ ಸವಾಲುಗಳಿಗೆ ದಿಟ್ಟವಾಗಿ ಉತ್ತರಿಸುತ್ತಾರೆ ಮತ್ತು ಅದೇ ಕಾರಣಕ್ಕೆ ಸತ್ತು ದೈವಗಳಾಗುತ್ತಾರೆ.

ಸಾಂಪ್ರದಾಯಿಕ ಕ್ಲಾಸಿಕಲ್‌ ಕಥನಗಳು ನೇರವಾಗಿಯೋ ಪರೋಕ್ಷವಾಗಿಯೂ ವರ್ಣಾಶ್ರಮ ಧರ್ಮದ ಮತ್ತು ಪ್ರಭುತ್ವದ ಪರವಾಗಿಯೇ ಇರುತ್ತವೆ. ಆದರೆ ತುಳುನಾಡಿನ ದೈವ ಕಥನಗಳು ಜಾತಿ ಸಮಾಜದ ಒಳಗಿನ ಸಂಘರ್ಷಗಳನ್ನು ಬಹಿರಂಗಕ್ಕೆ ತರುತ್ತವೆ. ಕನ್ನಲ್ಲಾಯ ದೈವವು ಜಾತಿ ಕೇಳಿ ನೀರುಕೊಟ್ಟವಳನ್ನೇ ಮಾಯಮಾಡುತ್ತದೆ. ಕೋಡ್ದಬ್ಬು ಪಾಡ್ದನವು ದಲಿತ ಹುಡುಗನೊಬ್ಬ ತನ್ನ ಸಾಮರ್ಥ್ಯದಿಂದ ವಿದ್ಯಾವಂತನಾದಾಗ ಉಳಿದವರು ಅವನ ವಿರುದ್ಧ ಹೇಗೆ ಸಂಚು ಮಾಡುತ್ತಾರೆ ಎಂಬುದನ್ನು ಮನೋಜ್ಞವಾಗಿ ವಿವರಿಸುತ್ತದೆ.

ಈ ಬಗೆಯ ಕಥನಗಳು ಭಾರತೀಯ ಸಂಸ್ಕೃತಿಯ ಸಶಕ್ತವಾದ ಒಂದು ಭಾಗವೇ ಹೌದು. ಅವನ್ನು ಬದಲಿಸಿ ಇನ್ನಾವುದೋ ಒಂದರ ಭಾಗ ಮಾಡುವುದರಿಂದ ಯಾರಿಗೂ ಹೆಚ್ಚು ಪ್ರಯೋಜನ ಇಲ್ಲ.

ಪೋಟೋ ಕೃಪೆ: ಉಷ ಕಟ್ಟೆಮನೆ

– ಡಾ. ಪುರುಷೋತ್ತಮ ಬಿಳಿಮಲೆ
ನಿವೃತ್ತ ಪ್ರಾಧ್ಯಾಪಕರು, ಜೆ.ಎನ್.ಯು, ನವದೆಹಲಿ

ಆನು ದೇವೀ…‌ ಒಳಗಣವಳು…!
ಎಂಬ್ರೈಡರಿ ನಿಜಕ್ಕೂ ಡಿಫರೆಂಟಾಗೇ ಇತ್ತು. ನೇರ ಇರಬೇಕಿದ್ದದ್ದನ್ನು ಅಡ್ಡಕ್ಕೆ ಹೊಲಿಯಲಾಗಿತ್ತು. ಅಯ್ಯೋ ಇಲ್ಲೂ ಲಕ್ಕ್ ಕೈ ಕೊಟ್ಟು ಲುಕ್ಕ್ ಕೆಟ್ಟು ಹೋಯಿತೇ ಎಂದು ಮನದಲ್ಲಿ ಮರುಗುವ ಚಂದ್ರಾವತಿ ಬಡ್ಡಡ್ಕ ಅವರು ಬಟ್ಟೆ ಹೊಲಿಸಲು ಪಟ್ಟ ಪಡಿ ಪಾಟಲನ್ನು ಈ ಲಘು ಹಾಸ್ಯ ಪ್ರಬಂಧದಲ್ಲಿ ನವಿರಾಗಿ ಬಿಡಿಸಿಟ್ಟಿದ್ದಾರೆ.  ಓದಿ.. ಮನಸು ಹಗುರಾಗಿಸಿಕೊಳ್ಳಿ.

ಸಾಮಾನ್ಯವಾಗಿ ಸಲ್ವಾರ್ ಉರೂಫ್ ಚೂಡಿದಾರೆಂಬ ಉಡುಪಿನೊಳಕ್ಕೆ ನನ್ನನ್ನು ತೂರಿಸಿಕೊಂಡು ಮೇಲೊಂದು ದುಪ್ಪಟ್ಟವನ್ನು ಹೊದಿದುಕೊಂಡೋ ನೇತಾಡಿಸಿಕೊಂಡೋ ಓಡಾಡುತ್ತೇನೆ. ಇನ್ನೂ ಸೀರೆ ಉಡಲೇನು ಧಾಡಿ ಎಂದು ನನ್ನ ಕುಟುಂಬದ ಹಿರಿಕಿರಿಯರಾದಿ ಎಲ್ಲರಿಂದಲೂ ವ್ಯಕ್ತವಾಗಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಟೀಕಿಸಿಕೊಂಡರೂ ದಪ್ಪ ಚರ್ಮದ ಎಮ್ಮೆಯಂತೆ (ಎಮ್ಮೆಯ ಕ್ಷಮೆ ಕೋರಿ) ಓಡಾಡುವವಳು ನಾನು. ಉಡುಪು ಅಂದಾಗ ನನ್ನ ಉಡುಪಿಗೂ ‘ಉಡುಪಿ’ಗೂ ನೇರಾನೇರಾ ಸಂಬಂಧವಿದೆ. ವರ್ಷಕ್ಕೊಂದು ಐದಾರು ಖಾದಿ ಬಟ್ಟೆ ಖರೀದಿಸಿ ಅದನ್ನು ಉಡುಪಿಯ ‘ಸಿಟಿಗರ್ಲ್ಸ್’ ಟೈಲರ್ ಬಳಿ ಹೊಲಿಸಿದರೆ ನನಗೆ ಮತ್ತೆ ಹೆಚ್ಚುವರಿ ಬಟ್ಟೆ ಬೇಕು ಎಂದೆನಿಸುವುದಿಲ್ಲ. ಇರೋ ಲೆಕ್ಕದ ಕುರ್ತಿಗಳನ್ನೇ ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡಿ ಹಾಕ್ಕೊಳ್ಳುವ ಖಯಾಲಿ ನಂದು. ತೆಗೆದಿಟ್ಟಂತೆ ಖರಾರುವಾಕ್ಕಾಗಿ ಹೊಲಿದುಕೊಡುವ ಸಿಟಿಗರ್ಲ್ಸ್‌ನ ಹುಚ್ಚು ಹಿಡಿಸಿದ್ದು ನನ್ನ ಗೆಳತಿ ಜ್ಯೋತಿ. ಬೆಂಗಳೂರಲ್ಲಿದ್ದಾಗ, ಚೆನ್ನೈಯಲ್ಲಿದ್ದಾಗ, ಮಂಗಳೂರಲ್ಲಿದ್ದಾಗಲೂ ಕೂಡ ಅಲ್ಲೇ ಬಟ್ಟೆ ಹೊಲಿಯಲು ಕೊಟ್ಟು ಕೊರಿಯರಲ್ಲಿ ತರಿಸಿಕೊಳ್ಳುತ್ತಿದ್ದೆ.

ನನ್ನ ಬದುಕಲ್ಲಿ ಕಂಡ ಇನ್ನೋರ್ವ ಟೈಲರ್ ನೆನಪಾಗುತ್ತಾರೆ. ಬೆಂಗಳೂರಿನವರು. ವಿಜಯನಗರ ಎಲ್ಲೋ ಇರಬೇಕು. ಪರಿಚಿತ ಆರ್ಕೆಸ್ಟ್ರಾ ಸಿಂಗರ್ ಒಬ್ಬರೊಂದಿಗೆ ಹೋಗಿದ್ದೆ. ಡಾ| ರಾಜ್ ಕುಮಾರ್ ಕುಟುಂಬದವರು, ಸಿನಿಮಾ ನಟಿಯರು ಅರಿವೆ ಹೊಲಿಸುವ ಸುಪ್ರಸಿದ್ಧ ಟೇಲರ್ ಅಂತೆ. ಸಾಮಾನ್ಯದವರು ಸುಮ್ಮನೆ ಹೋದರೆ ತಲೆ ಎತ್ತಿಯೂ ನೋಡುವುದಿಲ್ಲವಂತೆ. ಆ ಮನುಷ್ಯನ ಹೊಲಿಗೆಯೂ ಅಷ್ಟೇ ನೀಟ್ ಮತ್ತು ಫರ್ಫೆಕ್ಟ್! ಒಂದು ಚೂರೂ ಹೆಚ್ಚು ಕಮ್ಮಿ ಇರುವುದಿಲ್ಲ. ಕಮಕ್ ಕಿಮಕ್ ಎನ್ನದೆ ಅಳತೆ ಕೊಟ್ಟು ಬರಬೇಕು ಅಷ್ಟೆ.

ಈಗೀಗ ಅಷ್ಟು ದೂರ ಹೋಗೋದ್ಯಾರು, ಸಾಯ್ಲಾಚೆ ಅಂತ ರೆಡಿಮೇಡ್ ಕುರ್ತಿ ತಕ್ಕೊಂಡು ಸುಮ್ಮನಾಗುತ್ತೇನೆ. ಪ್ರಸ್ತುತ ನಾನು ವಾಸ್ತವ್ಯವಿರುವ ಸುತ್ತಮುತ್ತಲಿರುವ ಫೇಮಸ್ ಟೇಲರ್‌ಗಳ ಕೈಲಿ ಹೊಲಿಸಿ ಹಾಕಿ ನೋಡಾಯ್ತು. ಕೆಲವರಂತೂ ಥೇಟ್ ಗೋಣಿ ಚೀಲದ ಹಾಗೆ ನೇರವಾಗಿ ಹೊಲಿದು ಕೊಟ್ಟರು. ಮೂಟೆಯಂತೆ ಉರುಳುವ ನೀನು ಇದರಲ್ಲಿ ನಿನ್ನನ್ನು ತುಂಬಿಸಿಕೊ ಎಂದಿರಬೇಕು. ಇನ್ನೊಬ್ಬರು ವರಸೆಯಲ್ಲಿ ನನಗೆ ಮಾವ. ಅವರು ತುಂಬಾ ಅನುಭವಿ, ಹೊಲಿಗೆ ಚಂದ ಅವರ ಕೈಯಲ್ಲಿ ಹೊಲಿಸಿ ನೋಡು ಅಂದರು ನಮ್ಮ ಓನರು. ಹಾಗಾಗಿ ಒಂದು ಸೆಟ್ ಬಟ್ಟೆ ಕೊಟ್ಟಿದ್ದೆ. ಸುಮಾರು ಎರಡು ತಿಂಗಳ ಕಾಲ ಅವರ ಅಂಗಡಿಗೆ ಎಡತಾಕಿದ್ದೆ. ಅಯ್ಯೋ ಸೊಸೆ ನಾಳೆ ಬಾ, ನಾಡಿದ್ದು ಬಾ, ಎನ್ನುತ್ತಾ ಮುಂದಿನ ಸೋಮವಾರ ಖಂಡಿತ ಹೊಲಿದು ಕೊಡ್ತೇನೆ, ಛೇ ನಿನ್ನೆ ಮದುವೆಗೆ ಹೋಗಿದ್ದೆ, ನಾಳೆ ಮದುರಂಗಿಗೆ ಹೋಗಲುಂಟು ಎಂದೆಲ್ಲಾ ಸಬೂಬು ಹೇಳುತ್ತಾ, ನಿನ್ನ ಅಕ್ಕನ ಮಗಳ ಮದುವೆಗೆ ಗೇರೆಂಟಿ ಕೊಡ್ತೇನೆ ಎಂದೆಲ್ಲ ಹೇಳಿದ ಆ ನನ್ನ ಮಾವ ಇದ್ದಕ್ಕಿದ್ದಂತೆ ನಮ್ಮನೆಲ್ಲ ಬಿಟ್ಟೇ ಹೋದರು.

ಎಲಾ ದುರಾದೃಷ್ಟವೇ, ಅವರಿಗಿಂತ ನನ್ನದೊಂದು ಡ್ರೆಸ್ ಹೆಚ್ಚಲ್ಲ ಎಂದುಕೊಂಡು ಸುಮ್ಮನಾದೆ. ಒಂದು ದಿನ ಅವರ ಶಾಪ್ ಬಳಿ ಹಾದುಹೋಗಬೇಕಾದರೆ ಶಾಪ್ ತೆರೆದಿದ್ದನ್ನು ಕಂಡು ಒಳಹೊಕ್ಕೆ. ಅಲ್ಲಿದ್ದ ಅವರ ಶಿಷ್ಯೋತ್ತಮೆ ನಿಮ್ಮ ಬಟ್ಟೆ ಏನಾದರೂ ಇದೆಯೇ ಅಂತ ಕೇಳಿದರು. ಹೌದೆಂದ ನಾನು ಅಳತೆಯ ಬಟ್ಟೆ ಸಹಿತ ವಾಪಾಸು ತರಲು ಮುಂದಾದೆ. ಅಷ್ಟರಲ್ಲಿ ಆಕೆ, ನಾನು ಅವರಂತೇ ಹೊಲಿತೇನೆ ಎಂಬ ಭರವಸೆ ಕೊಟ್ಟು ವೊಲಂಟರಿ ಆಗಿ ಹೊಲಿದು ಕೊಟ್ಟರು. ಕಾಲರ್ ಇಟ್ಟು ಹೊಲೀತೀರಾ ಅಂತ ಮತ್ತೆ ಮತ್ತೆ ಕೇಳಿದ್ದೆ. ಓ….. ಹೇಗೆ ಬೇಕಿದ್ದರೂ ಹೊಲೀತೇನೆ ಎಂಬ ಗ್ಯಾರಂಟಿ ಕೊಟ್ಟಿದ್ದರು. ಡ್ರೆಸ್ ಮೆಟೀರಿಯಲ್‌ಗಿಂತ 100 ರೂಪಾಯಿ ಹೆಚ್ಚೇ ಮಜೂರಿ ಕೊಟ್ಟು ಮನೆಗೆ ತಂದು ಪ್ಯಾಕ್ ಬಿಚ್ಚುತ್ತಲೇ ಡ್ರೆಸ್ಸಿನ ಶೇಪ್, ಕೇರೆ ಹಾವಿನಂತ ಓರೆ ಕೋರೆ ಹೊಲಿಗೆಗಳು, ಹೇಗೇಗೋ ಒಂದು ಮಟ್ಟಸವಿಲ್ಲದ ಅಂಚುಗಳು, ಅಲ್ಲಿ ಇಲ್ಲಿ ಎಲ್ಲೆಂದರಲ್ಲಿ ನೇತಾಡುತ್ತಿದ್ದ ನೂಲು ಹೊಲಿಗೆಯ ಫಿನಿಶಿಂಗ್ ನೋಡಿಯೇ ಸುಸ್ತಾಗಿ ಅದನ್ನೂ ಹಾಕಿಯೂ ನೋಡದೇ ಅದೇ ಕವರಲ್ಲಿಟ್ಟು ಯಾರಿಗೋ ದಾಟಿಸಿದೆ. ಕಣ್ಣೆದುರಿದ್ದು ಪದೇಪದೆ ನಿಟ್ಟಿಸಿರು ಬಿಡುವ ಸಂಕಟದಿಂದ ಪಾರಾಗಿ, ವಸ್ತ್ರದಾನದ ಪುಣ್ಯ ಕಟ್ಟಿಕೊಂಡೆ.

ನನಗೆ ಇಲ್ಲಿ ಹೇಳಲಿರುವುದು ಸೀರೆ ಬ್ಲೌಸಿನ ಬಗ್ಗೆ. ಮಾತು ಎತ್ತೆತ್ತಲೋ ಹೊರಳಿತು ನೋಡಿ. ಅದೊಮ್ಮೆ ಅಚಾನಕ್ಕಾಗಿ ನಮ್ಮ ದೀಪಾಂಜಲಿ ಭಜನಾ ತಂಡದೊಂದಿಗೆ ತಿರುಪತಿಗೆ ಹೋಗಿದ್ದೆ. ಆಮೇಲೆ ತಂಡದಿಂದ ಆಕರ್ಷಿತಳಾದ ನಾನು ಸಾಧ್ಯವಾದಾಗೆಲ್ಲ ಲೋಕಲ್ ಭಜನೆಗಳಿಗೆ ಹೋಗತೊಡಗಿದೆ. (ಭಜನೆ ಹೇಳುವಲ್ಲಿ ನಾನು L ಬೋರ್ಡೇ, ಹಿಂದೆ ಕೂತು ಮಣಮಣ ಅನ್ನುವುದು) ಭಜನಾ ತಂಡದ ಡ್ರೆಸ್ ಕೋಡ್ ಇದೆ. ನಾನೊಬ್ಬಳು ಅದನ್ನು ಉಲ್ಲಂಘಿಸುವುದು ಚೆನ್ನಾಗಿಲ್ಲದ ಕಾರಣ, ಸೀರೆ ಉಡಬೇಕಾದ ಅನಿವಾರ್ಯತೆಗೆ ಬಿದ್ದೆ. ಭಜನಾ ಯೂನಿಫಾರಂ ರವಕೆ ಹೊಲಿಸಿ ಮನೆಗೆ ತಂದು ಹಾಕಿ ನೋಡಿದೆ. ಬೆನ್ನು ನಮ್ಮ ಜೂನಿಯರ್ ಕಾಲೇಜು ಮೈದಾನದಂತೆ ಊರಗಲ. ಕಿಲಾಡಿ ರವಕೆ ಭುಜದಿಂದ ಜಾರಿ ನಿಲ್ಲುವುದು. ಅಷ್ಟರಲ್ಲಿ ಒಳಗಿರುವ ಉಡುಪಿಗೆ ಅದೇನೂ ಕೆಟ್ಟ ಕುತೂಹಲವೋ ಪದೇ ಪದೇ ಇಣುಕಿ ನೋಡುವುದು. ಅಟ್ಟಮಟ್ಟೆ ಕಾಲು ಹಾಕಿ ಕುಳಿತಾಗ ಹಿಂಬದಿಯಲ್ಲಿ ಬ್ಲೌಸು ಎತ್ತರೆತ್ತರ ಉತ್ತರಕ್ಕೇರಿ ಅಲ್ಲಿಂದಲೂ ಇಣುಕಿ ನೋಡುವುದು ಯಾರಿಗೆ ಬೇಕು ಫಜೀತಿ. ಜತೆಗಿರುವವರೆಲ್ಲ ನನಗೆ ಮುಜುಗರವಾಗದಂತೆ ಏನೋ ಮಾತಾಡುವ ನೆಪದಲ್ಲಿ ಬಳಿ ಬಂದು ಭುಜದ ಬಳಿ, ಹಿಂಬದಿಯಲ್ಲಿ ಜಾರಲು ಹವಣಿಸುವ ಬ್ಲೌಸನ್ನು ಸರಿ ಮಾಡುವುದು. ‘ಆನು ದೇವಿ‌ ಒಳಗಣವಳು’ ಎನ್ನುತ್ತಾ ಇಣುಕುವವರನ್ನು ಒಳ ಕಳುಹಿಸುವುದು. ಮುಜುಗರದಿಂದ ನನ್ನ ಧ್ಯಾನವೆಲ್ಲ ಭಜನೆ ಬದಲಿಗೆ ಬ್ಲೌಸಿನ ಮೇಲೆ ಎನ್ನುವಂತಾಗಿತ್ತು. ದೇವರನ್ನು ನೆನೆಯದಿದ್ದರೂ ಪದೇಪದೇ ಟೈಲರನ್ನು ನೆನೆನೆನೆ ಮನವೇ ಎಂಬಂತಾಗಿತ್ತು ಪರಿಸ್ಥಿತಿ. ಮತ್ತೆ ನೋಡಿದರೆ ಹೆಚ್ಚಿನವರು ನನ್ನಂತೇ ಸಮಾನ ದುಃಖಿಗಳೇ. ಎಲ್ಲರ ಭುಜದಲ್ಲೂ ಬೆನ್ನಲ್ಲೂ ಇಣುಕು ದೃಶ್ಯಗಳು ಮಾಮೂಲಿ.

ರೋಸಿ ಹೋದ ನಾನು ಮತ್ತೊಮ್ಮೆ ರವಕೆ ಹೊಲಿಸಲು ಹೋದಾಗ ಬೆನ್ನು ಇಷ್ಟು ವಿಶಾಲವಾಗಿ ಆಳವಾಗಿ ಇರುವುದರ ಸಮಸ್ಯೆಗಳನ್ನೆಲ್ಲ ಪರಿಪರಿಯಾಗಿ ವಿವರಿಸಿ, ಭಜನೆಗೆ ಕುಳಿತಾಗ ಎಲ್ಲ ಇಣುಕುತ್ತೆ ಎಂದೆಲ್ಲ ನನ್ನ ಕಂಠ ಶೋಷಣೆ ಮಾಡಿದಾಗ ನನ್ನೆಡೆಗೆ ಒಂದು ನಿಕೃಷ್ಟ ನೋಟ ಹರಿಸಿದ ಟೈಲರಿಣಿ ನನ್ನ ಭಜನಾ ಕಾರ್ಯಕ್ಕೆ ‘ಓ….. ಪದ್ಮಶ್ರೀ’ ಎಂದು ಲೇವಡಿ ಮಾಡಿದಳು. ಆದರೂ ಬಿಡದೆ ನನ್ನ ಕೌನ್ಸಿಲಿಂಗ್ ಛಾಳಿಯಂತೆ ಹಾಗಿರಬಾರದು, ಹೀಗಿರಬೇಕು ಎಂದೆಲ್ಲ ವಿವರಿಸಿ ಹೀಗೆ ಹೊಲಿಯಬೇಕೆಂದು ಹೇಳಿ ಬಂದೆ.

ಹೊಲಿದು ಸಿಕ್ಕಿದಾಗ ಆತುರಾತುರವಾಗಿ ಮನೆಗೆ ಬಂದು ಟ್ರೈ ಮಾಡಿದರೆ ನನ್ನ ಪಾಠವೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿ ಮೊದಲಿನದ್ದಕ್ಕಿಂತಲೂ ಹೆಚ್ಚು ಆಳವಾಗಿ ಇನ್ನೇನೋ ಅಧ್ವಾನವಾಗಿತ್ತು. ಸೀರೆ ಉಟ್ಟಾಗ ಎಲ್ಲಿ ಇಣುಕುತ್ತೋ ಏನು ಕಾಣುತ್ತೋ ಎಂಬ ಧಾವಂತದಿಂದ ಅಲ್ಲಿ ಇಲ್ಲಿ ಸರಿ ಪಡಿಸಿಕೊಳ್ಳುವದೊಂದೇ ಕಾಯಕವಾಗೋಯ್ತು. ಈ ಅಗಲ ಬೆನ್ನು ರವಕೆಗಳನ್ನು ನೋಡಿದಾಗ ಬಿಸಿಲಿಗೆ ಹಪ್ಪಳವೋ ಸೆಂಡಿಗೆಯೋ ಒಣಗಿಸಬಹುದು ಎಂದು ಬ್ಲೌಸ್ ಹಾಕದ, ಬ್ಲೌಸಿನೊಳಗೆ ಹುದುಗಿರುವ ಹಲವು ಸಮಸ್ಯೆಗಳ ಕುರಿತು ಲವಲೇಶವೂ ಅರಿವಿಲ್ಲದ, ವಿರುದ್ಧ ಲಿಂಗದವರು ಕುಹಕವಾಡಿದ್ದೂ ಕಿವಿಯಾರೆ ಕೇಳಿಸಿಕೊಳ್ಳಬೇಕಾಯ್ತು.

ಈ ಮೆಶಿನ್ ಎಂಬ್ರೈಡರಿ ಭರಾಟೆ ಜೋರಾದಾಗ ನೀನ್ಯಾಕೆ ಎಂಬ್ರೈಡರಿ ಮಾಡಿಸುದಿಲ್ಲ ಎಂಬ ಪ್ರಶ್ನೆಗಳು ಎದುರಾದವು. ಸೀರೆಗಿಂತ ಹೆಚ್ಚು ದುಡ್ಡು ಕಕ್ಕಿ ಕಸೂತಿ ಹಾಕಿಸೋದು ಅನ್‌ಸೈಂಟಿಫಿಕ್ ಅಂತ ನಾನು ಇಕನಾಮಿಕ್ಸ್ ಪಾಠ ಮಾಡಿದ್ದೆ. ಆದರೆ, ನಮ್ಮ ಮನೆಯಲ್ಲೇ ಮದುವೆ ಎದ್ದಾಗ, ಅಕ್ಕನ ಮಗಳೇ ಮದುಮಗಳಾದಾಗ ಸರಬರ ರೇಷ್ಮೆ ಸೀರೆ ಉಟ್ಟು ಓಡಾಡದಿದ್ದರೆ ಹೇಗೆ? ಜೀವಮಾನದಲ್ಲಿ ಮೊದಲ ಬಾರಿಗೆ ನನ್ನ ಸ್ವಂತ ಸಂಪಾದನೆಯಲ್ಲಿ ದುಬಾರಿ ರೇಷ್ಮೆ ಸೀರೆ ಖರೀದಿಸಿದೆ. ಅದೆಷ್ಟೇ ಖರ್ಚಾಗಲೀ ಈ ರವಕೆಗೆ “ಎಂಬ್ರೈಡರಿ ಹಾಕಿಸುವುದೇ” ಎಂದು ತೀರ್ಮಾನಿಸಿದ್ದೆ. ಅದರೊಂದಿಗೆ ಮದುಮಗಳೂ ನನಗೆ ಕೊಟ್ಟ ದುಬಾರಿ ರೇಷ್ಮೆ ಸೀರೆಯ ರವಕೆಗೂ ಕಸೂತಿ ಹಾಕಿಸಬೇಕು ಎಂದು ಉದಾರವಾಗಿ ನಿರ್ಧರಿಸಿ, ವಿವಾಹೋತ್ಸಾಹದಲ್ಲಿ, ಸ್ಟಿಚ್ಚಿಂಗ್ ಉನ್ಮಾದದ ಆವೇಶದ ಹೆಜ್ಜೆ ಇಟ್ಟು ರವಕೆ ಹೊಲಿಸಲು ದಾಪುಗಾಲಿಟ್ಟೆ.

ಅಸ್ತಿತ್ವದಲ್ಲಿರುವ ರವಕೆಗಳು ಹೇಗೆಲ್ಲ ಜಾರುತ್ತವೆ ಹೇಗೆಲ್ಲಾ ಕಾಟಕೊಡುತ್ತವೆ ಎಂಬುದರ ಡೆಮೋಗಾಗಿ ಸೀರೆ ಉಟ್ಟು ಹೋಗಿದ್ದೆ. ಭಯಂಕರ ಬಿಜಿಯಾಗಿದ್ದ ಟೈಲರಿಣಿ, ಕೈಲಿದ್ದ ಕೆಲಸ ಪೂರ್ತಿಗೊಳಿಸಿ ಕೊನೆಗೂ ನನ್ನತ್ತ ಎದ್ದು ಬಂದವಳಿಗೆ ಬ್ಲೌಸು ಹೇಗೆಲ್ಲ ಕಾಟಕೊಡುತ್ತದೆ ಎಂದು ಹೇಳಿ ಎಲ್ಲೆಲ್ಲ ಹೇಗೇಗೆ ಬೇಕು ಎಂದು ವಿವರಿಸಿ, ಇಷ್ಟೇ ಆಳ ಸಾಕು ಎಂದು ತೋರಿಸಲು ಒಂದು ಅಕ್ಕನ ಬ್ಲೌಸನ್ನು ಒಯ್ದು ಕೊಟ್ಟೆ. ಎಲ್ಲದಕ್ಕೂ ಗೋಣಾಡಿಸಿ ಪುಸ್ತಕದಲ್ಲಿ ಬರೆದುಕೊಂಡಳು, ಡಿಫರೆಂಟಾಗಿರಬೇಕು ಒಂದು ಎಂಬ್ರೈಡರಿ ಡಿಸೈನ್ ಸೆಲೆಕ್ಟ್ ಮಾಡಿದೆ. ಪದೇಪದೇ ಹಾಗೆಬೇಕು ಹೀಗೇ ಬೇಡ ಎಂದೆಲ್ಲ ವಿವರಿಸಿಯೇ ವಿವರಿಸಿದೆ. ಒಮ್ಮೆ ನಿನ್ನ ಉಪನ್ಯಾಸ ಮುಗಿಸಿ ನಡಿ ಇಲ್ಲಿಂದ ಎಂಬ ಮುಖಭಾವ ಹೊತ್ತಿದ್ದ ಅವಳು ಗೋಣಾಡಿಸಿಕೊಂಡಳು. ಎಷ್ಟು ಕೇಳಿಸಿಕೊಂಡಳೋ ದೇವರಿಗೇ ಗೊತ್ತು.

ಬ್ಲೌಸುಗಳು ರೆಡಿ ಆಗಿವೆ ಎಂಬ ಸೂಚನೆ ಬಂದಾಗ ಆಸೆಯಿಂದ ಓಡಿದೆ. ಕೈಗೆ ಸಿಕ್ಕ ಬ್ಲೌಸು ನೋಡುತ್ತಲೇ ಬಲೂನಿಗೆ ಸೂಜಿ ಚುಚ್ಚಿದಂತಾಯಿತು. ಹಾಕಿ ನೋಡಿದರೆ ರವಕೆಗಳೆಲ್ಲ ನನ್ನಕ್ಕನ ಅಳತೆಗೆ ಸಿದ್ಧವಾಗಿದ್ದವು. ಆದರೆ ಬೆನ್ನಿನ ಆಳ ಮಾತ್ರ ಮತ್ತೂ ಒಂದಿಂಚು ಇಳಿದಿತ್ತು. ಎಂಬ್ರೈಡರಿ ನಿಜಕ್ಕೂ ಡಿಫರೆಂಟಾಗೇ ಇತ್ತು. ನೇರ ಇರಬೇಕಿದ್ದದ್ದನ್ನು ಅಡ್ಡಕ್ಕೆ ಹೊಲಿಯಲಾಗಿತ್ತು. ಅಯ್ಯೋ ಇಲ್ಲೂ ಲಕ್ಕ್ ಕೈ ಕೊಟ್ಟು ಲುಕ್ಕ್ ಕೆಟ್ಟು ಹೋಯಿತೇ ಎಂದು ಮನದಲ್ಲಿ ಮರುಗಿದೆ.

ನನ್ನ ಮೈನ್ ಸೀರೆಯ ತೋಳು ಅತ್ಲಾಗೆ ಉದ್ದವೂ ಅಲ್ಲ ಇತ್ಲಾಗೆ ಗಿಡ್ಡವೂ ಅಲ್ಲದ ತ್ರಿಶಂಕು ಸ್ಥಿತಿಯಲ್ಲಿ ನನ್ನನ್ನು ಅಣಕಿಸಿತು. ದರ್ಜಿ ‘ನನ್ನ’ ಮರ್ಜಿಯನ್ನು ಕಡೆಗಣಿಸಿ ‘ತನ್ನ’ ಮರ್ಜಿಯಂತೆ ಹೊಲಿದಿಟ್ಟಿದ್ದಳು. ಎಲ್ಲಾ ರವಕೆಗಳಿಗೂ ಒಂದೊಂದು ಹೊಲಿಗೆ ಹಾಕಿ ಮದುವೆ ಮುಗಿದ ಮೇಲೆ ಬಾ ಸರಿ ಮಾಡಿ ಕೊಡುತ್ತೇನೆ ಎಂಬ ಆಶ್ವಾಸನೆ ಕೊಟ್ಟಳು. ಮದುವೆಗಾಗಿ ಎಕ್ಸ್‌ಕ್ಲೂಸೀವ್ ಆಗಿ ತಂದ ಜವಳಿ. ಮದುವೆ ಮುಗಿದನಂತರ ಸರಿ ಮಾಡಿವುದಂತೆ! ಕರ್ಮ. ಹಿಂದಿನ ಜನ್ಮದಲ್ಲಿ ನಾನು ಟೈಲರಾಗಿದ್ದು ಎಲ್ಲರ ರವಕೆಯನ್ನು ಎರ್ರಾಬಿರ್ರಿ ಕತ್ತರಿಸಿ ಬೆನ್ನು ಭುಜವೆಲ್ಲ ಅಳತೆಯಿಲ್ಲದಂತೆ ಆಳವಾಗಿ ತೋಡಿ, ನೇತಾಡಿ, ಜೋತಾಡಿದ್ದಿರಬೇಕು; ಅದಕ್ಕೇ ಈ ಜನ್ಮದಲ್ಲಿ ಈ ಆಳದ ಶಿಕ್ಷೆ ನನಗೆ ಎಂದು, ಎಂಬ ಕರ್ಮ ಸಿದ್ಧಾಂತವನ್ನು ಅಳವಡಿಸಿಕೊಂಡು ಸುಮ್ಮನಾದೆ.

ಮತ್ತು ಈಗೀಗ ಭಜನೆಗೆ ಹೋಗುವಾಗ ಏನು ಬೇಕಾದರೂ ಇಣುಕಲಿ, ಎಲ್ಲಿ ಬೇಕಾದರೂ ಜಾರಲಿ, ರವಕೆ ಹೇಗೆ ಬೇಕಿದ್ದರೂ ಜಾರಿ ಹಾರಿ ಎಗರಾಡಲಿ ಎಂಬ ಸ್ಥಿತಪ್ರಜ್ಞತೆಯನ್ನು ಮೈಗೂಡಿಸಿಕೊಂಡು (ವಿಧಿಯಿಲ್ಲದೆ) ಸೆರಗನ್ನು ಮೈತುಂಬಾ ಚೆನ್ನಾಗಿ ಹೊದಿದು ಕೊಂಡು ಹೋಗಲು ಆರಂಭಿಸಿದೆ. ನೀವೆಂತ ಮುದುಕಿಯಾ ಅಂತ ನನ್ನ ಸಹ ಭಜನಾ ಮಣಿಗಳು ಆಕ್ಷೇಪದ ಮಾತನ್ನಾಡಿದರು. ನಾನೂ, ಎಳೇ ಮುದುಕಿ ಅಲ್ಲವೇ ಎಂದು ಮಾತು ತೇಲಿಸಿ, ಸೆರಗನ್ನು ಮತ್ತೊಮ್ಮೆ ಸರಿಪಡಿಸಿ ಹೊದ್ದುಕೊಂಡೆ. ಹೀಗಾದರೂ, ಕನಿಷ್ಠ ಭಜನೆ ಮೇಲಾದರೂ ಗಮನ ಹರಿಸಬಹುದು ಎಂದು. ನೋಡಿದವರಾರೋ, ಏನು ಭಕ್ತಿ, ಏನು ಸಂಸ್ಕಾರ ಎಷ್ಟು ಚಂದ ಸೆರಗು ಹೊದಿದು ಕುಳಿತಿದ್ದಾರೆ ಎನ್ನುವುದು ಕಿವಿಗೆ ಬಿತ್ತಾ, ಇಷ್ಟು ದಿನ ಅನುಭವಿಸಿದ ಜಾರುವ, ಇಣುಕುವ ಕಿರಿಕಿರಿಯ ಬೇಗುದಿ ಎಲ್ಲ ಕರಗಿ ಹೋಯಿತು!

ಚಂದ್ರಾವತಿ ಬಡ್ಡಡ್ಕ
ಹಿರಿಯ ಪತ್ರಕರ್ತರು, ವೃತ್ತಿಪರ ಅನುವಾದಕರು. ಅರೆಭಾಷೆ ಅಂಕಣ “ಹರ್ಟೆ’ ಮತ್ತು ಸಂಗಾತಿಯಲ್ಲಿ ‘ಚಾಂದಿನಿ’ ಇವರು ಈಗ ಬರೆಯುತ್ತಿರುವ ಅಂಕಣಗಳು.