State government increased incentive for milk producers – Peepal Media

ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಹೆಚ್ಚಿಸಿದ – ರಾಜ್ಯ ಸರ್ಕಾರ
ಬೆಳಗಾವಿ : ಅಧಿವೇಶನದಲ್ಲಿ ರೈತರಿಗೆ 1 ಲೀಟರ್ ಹಾಲಿಗೆ(Milk Incentive) ಸಹಾಯಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಘೋಷಿಸಿದ್ದಾರೆ.

ಸದ್ಯ ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ 5 ರೂಪಾಯಿ ಪ್ರೋತ್ಸಾಹಧನವನ್ನು ಈ ವರ್ಷದ ಅವಧಿಯಲ್ಲಿ 7 ರೂಪಾಯಿಗೆ ಹೆಚ್ಚಿಸುವುದಾಗಿ ತಿಳಿಸಿದರು. ಪ್ರಸ್ತುತ ಪ್ರೋತ್ಸಾಹಧನವು ರೈತರಿಗೆ ಸಂಪೂರ್ಣವಾಗಿ ತಲುಪುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬೆಲೆ ಏರಿಕೆ ಹೊರತಾಗಿಯೂ ಸರ್ಕಾರದಿಂದ ನೆರವು ಮುಂದುವರಿಯುತ್ತದೆ ಎಂದು ಭರವಸೆ ನೀಡಿದರು.

ಇಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು ರೈತರಿಗೆ ಹಸುಗಳನ್ನು ಸಾಕಿ ಮೇವು ನೀಡಲು ನೆರವಾಗಲು ಸರ್ಕಾರ ಎಲ್ಲಾ ರೀತಿಯಿಂದಲೂ ಸಹಾಯಕ್ಕೆ ಮುಂದಾಗಿದೆ. ಮೇವಿನ ಹಿಂಡಿ ದರ ಹೆಚ್ಚಳವಾಗಿದೆ ಎಂದು ನಮ್ಮ ಸರ್ಕಾರ ಪ್ರತಿಲೀಟರ್ ಹಾಲಿನ ಮೇಲೆ 5 ರೂಪಾಯಿ ಸಹಾಯಧನವನ್ನು ನೀಡುತ್ತಿತ್ತು. ಅದನ್ನೀಗ 7 ರೂಪಾಯಿಗೆ ಹೆಚ್ಚಿಸುತ್ತಿದ್ದೇವೆ ಎಂದರು.

ತಮ್ಮ ಸರ್ಕಾರದ ಹಿಂದಿನ ಅವಧಿಯ (2013-18) ಪ್ರಣಾಳಿಕೆ ಭರವಸೆಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದರ ಜೊತೆಗೆ ಬಜೆಟ್‌ನಲ್ಲಿ ಘೋಷಿಸದೆ 30 ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು. ಪ್ರಸ್ತುತ (2023ರ ನಂತರ) ಪ್ರಣಾಳಿಕೆಯಲ್ಲಿನ 593 ಭರವಸೆಗಳ ಪೈಕಿ 293 ಭರವಸೆಗಳನ್ನು ಈಗಾಗಲೇ ಈಡೇರಿಸಲಾಗಿದ್ದು, ಉಳಿದ ಭರವಸೆಗಳನ್ನು ಮುಂದಿನ ಮೂರು ಬಜೆಟ್‌ಗಳಲ್ಲಿ ಈಡೇರಿಸಲಾಗುವುದು ಎಂದು ಹೇಳಿದರು.