state government – Peepal Media

ಕಲ್ಲಡ್ಕ ಭಟ್ ವಿರುದ್ಧದ ಪ್ರತಿಭಟನೆ : ಕಾಮ್ರೆಡ್ ಕೃಷ್ಣಪ್ಪ ಸಾಲ್ಯಾನ್ ಮೇಲೆ FIR
ಮುಸ್ಲಿಂ ಸಮುದಾಯ ಹಾಗೂ ಮುಸ್ಲಿಂ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಿದ ದಕ್ಷಿಣ ಕನ್ನಡದ ದಕ್ಷಿಣ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕಾಮ್ರೆಡ್ ಕೃಷ್ಣಪ್ಪ ಸಾಲ್ಯಾನ್ ವಿರುದ್ಧ FIR ದಾಖಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ನಡೆದ ಸಭೆಯಲ್ಲಿ ‘ಮುಸ್ಲಿಂ ಮಹಿಳೆಯರಿಗೆ ಹಲವು ಗಂಡಂದಿರು ಇದ್ದರು, ಮೋದಿ ಬಂದ ನಂತರ ಅವರಿಗೆ ನ್ಯಾಯ ಸಿಕ್ಕಿದೆ..’ ಎನ್ನುವ ರೀತಿಯಲ್ಲಿ ಮಾಡಿದ ಭಾಷಣಕ್ಕೆ ರಾಜ್ಯಾದ್ಯಂತ ತೀವ್ರ ವಿಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ಹಿಂದೆಯೇ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೂ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿತ್ತು.

ಇದೇ ಕಾರಣಕ್ಕೆ ರಾಜ್ಯದ ವಿವಿಧ ಕಡೆಗಳಲ್ಲಿ ನಡೆದ ಪ್ರತಿಭಟನೆಯಂತೆ ರಾಜ್ಯದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಕ್ಷೇತ್ರ ಉಲ್ಲಾಳದಲ್ಲೂ ಸಹ ಪ್ರತಿಭಟನೆ ನಡೆದಿದೆ. ಉಲ್ಲಾಳದ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದ ರೈತ ಮುಖಂಡ ಕಾಮ್ರೆಡ್ ಕೃಷ್ಣಪ್ಪ ಸಾಲ್ಯಾನ್ ಅವರ ಮೇಲೆ ಸ್ಥಳೀಯ ಪೊಲೀಸರು ಸುಮೋಟೋ ಕೇಸ್ ಮೂಲಕ FIR ದಾಖಲಿಸಿದ್ದಾರೆ.

ಕಾಮ್ರೆಡ್ ಕೃಷ್ಣಪ್ಪ ಸಾಲ್ಯಾನ್ ಅವರ ಜೊತೆಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 20 ಮಂದಿಯ ಮೇಲೂ ಸುಮೋಟೋ ಕೇಸ್ ದಾಖಲಾಗಿದೆ. ಪ್ರತಿಭಟನೆಯಲ್ಲಿ ಯಾವುದೇ ಮೈಕ್ ಕೂಡಾ ಬಳಸದೇ ಕೇವಲ ಪ್ರೆಕಾರ್ಡ್ ಹಿಡಿದು ಕಲ್ಲಡ್ಕ ಪ್ರಭಾಕರ ಭಟ್ ನನ್ನು ಬಂಧಿಸಲು ಆಗ್ರಹಿಸಲಾಗಿತ್ತು. ಆದರೆ ಸ್ಥಳೀಯ ಪೊಲೀಸರು ಯಾವುದೇ ಮುನ್ನೆಚ್ಚರಿಕೆ ಕೊಡದೇ ಸುಮೋಟೋ ದಾಖಲಿಸಿದ್ದು ಪ್ರಗತಿಪರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕೃಷ್ಣಪ್ಪ ಸಾಲ್ಯಾನ್ ಅವರ ಬಂಧನದ ಹಿನ್ನೆಲೆಯಲ್ಲಿ ಸದಾ ಶಾಂತಿಯ ಬಗ್ಗೆ ಮಾತನಾಡುವ ಯು.ಟಿ.ಖಾದರ್ ಅವರ ಕ್ಷೇತ್ರದಲ್ಲಿ ಶಾಂತಿಯುತ ಪ್ರತಿಭಟನೆಯೂ ಶಿಕ್ಷಾರ್ಹ ಅಪರಾಧವೇ ಎಂಬ ಪ್ರಶ್ನೆ ಮೂಡಿದೆ. ಬಿಜೆಪಿ ಬೆಂಬಲಿತ ವ್ಯಕ್ತಿಯ ಪ್ರಚೋದನಾಕಾರಿ ಹಾಗೂ ಅವಹೇಳನಕಾರಿ ಭಾಷಣಕ್ಕೆ ಮುಸ್ಲಿಂ ಸಮುದಾಯದ ವ್ಯಕ್ತಿ ಶಾಸಕರಾಗಿರುವ ಕ್ಷೇತ್ರದಲ್ಲೂ ಸಹ ಇಷ್ಟರ ಮಟ್ಟಿಗೆ ಕಲ್ಲಡ್ಕ ಪ್ರಭಾಕರ್ ಭಟ್ ತನ್ನ ಪ್ರಭಾವ ಉಳಿಸಿಕೊಂಡಿರಬಹುದಾ ಎಂಬ ಅನುಮಾನ ಮೂಡುವಂತಾಗಿದೆ.

ಇನ್ನೊಂದು ಕಡೆ ಪ್ರಭಾಕರ್ ಭಟ್ ವಿರುದ್ಧ ದಾಖಲಾದ ಪ್ರಕರಣದಲ್ಲಿ ಸರ್ಕಾರವೇ ಅವರನ್ನು ಬಂಧಿಸಲು ಹಿಂದೇಟು ಹಾಕಿರುವುದರಿಂದ ಸರ್ಕಾರದ ನಿಲುವಿನ ಬಗ್ಗೆಯೂ ಸ್ವತಃ ಕಾಂಗ್ರೆಸ್ ಪಕ್ಷದಲ್ಲೇ ಅಪಸ್ವರ ಎದ್ದಿದೆ. ಅಥವಾ ಬಿಜೆಪಿ ಪಕ್ಷದ ಪ್ರತಿಭಟನೆಯ ಮುನ್ಸೂಚನೆಗೆ ಸರ್ಕಾರ ಹೆದರಿತೇ ಎಂಬ ಅನುಮಾನ ಕೂಡಾ ವ್ಯಕ್ತವಾಗಿದೆ.

ಈ ಬಗ್ಗೆ DYFI ರಾಜ್ಯ ಘಟಕದ ನಾಯಕ ಅಬ್ದುಲ್ ಮುನೀರ್ (Muneer Katipalla) ಪೀಪಲ್ ಮೀಡಿಯಾ ಜೊತೆಗೆ ಮಾತನಾಡಿದಾಗ ‘ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಇದೆಯೇ ಎಂಬ ಬಗ್ಗೆ ನಮಗೆ ಅನುಮಾನ ಕಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಸಹ ಇಷ್ಟರ ಮಟ್ಟಿಗೆ ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿ ಕಲ್ಲಡ್ಕ ಪ್ರಭಾಕರ ಭಟ್ ನಿರಾತಂಕವಾಗಿ ಇದ್ದಾರೆ ಎಂದರೆ ಇದೂ ಸಹ ಬಿಜೆಪಿ ಸರ್ಕಾರದ ಮುಂದುವರೆದ ಅವತಾರ’ ಎಂದು ಹೇಳಿದ್ದಾರೆ.

ಮುಂದುವರೆದು “ರಾಜ್ಯದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಸುಮೋಟೋ ಪ್ರಕರಣ ದಾಖಲಾಗಲ್ಲ.. ಆದರೆ ಇದು ತಪ್ಪು ಎಂದು ಪ್ರತಿಭಟಿಸಿದ 70 ವರ್ಷ ವಯಸ್ಸಿನ ಕಾಮ್ರೆಡ್ ಕೃಷ್ಣಪ್ಪ ಸಾಲ್ಯಾನ್ ಅವರ ಮೇಲೆ ಸುಮೋಟೋ ಪ್ರಕರಣ ದಾಖಲಾಗುತ್ತೆ ಎಂದರೆ ಈ ಸರ್ಕಾರದ ನಿಲುವನ್ನು ಏನೆನ್ನಬೇಕು.? ವಿಶೇಷವಾಗಿ ದಕ್ಷಿಣ ಕನ್ನಡದಲ್ಲಿ ಈಗಲೂ ಬಿಜೆಪಿ ಸರ್ಕಾರದ ಛಾಯೆಯೇ ಮುಂದುವರೆದಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಕಮೀಷನರ್ ಅಗರ್ವಾಲ್ ಅವರ ಪ್ರೋ ಸಂಘಿ ಮನಸ್ಥಿತಿ. ಹೀಗಾಗಿ ಸಧ್ಯದಲ್ಲೇ ನಾವು ಪೊಲೀಸ್ ಇಲಾಖೆಯ ಇಂತಹ ಬೇಜವಾಬ್ದಾರಿ ನಿಲುವಿನ ವಿರೋಧಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಎಥೆನಾಲ್ ಮಿಶ್ರಣಕ್ಕೆ ಉತ್ತಮ ಗುಣಮಟ್ಟದ ಅಕ್ಕಿ ; ಬಡವರ ಅನ್ನಕ್ಕಿಲ್ಲ ಕಿಮ್ಮತ್ತು
ಕರ್ನಾಟಕ ಸರ್ಕಾರದ ಮಹತ್ವದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರ ಅಕ್ಕಿ ಕೊಡುತ್ತೇವೆ ಎಂದು ಹೇಳಿ ನಿರ್ಧಾರ ವಾಪಸ್ ತಗೆದುಕೊಂಡದ್ದು ಸುದ್ದಿಯಲ್ಲಿ ಇರುವಾಗಲೇ ಎಥೆನಾಲ್ ಉತ್ಪಾದನೆಗೆ 29.5 ಲಕ್ಷ ಟನ್ ಗೃಹಬಳಕೆಗೆ ಉಪಯುಕ್ತವಾದ ಅಕ್ಕಿಯನ್ನು ಬಳಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ

ಆಹಾರ ಬಳಕೆಯ ಉತ್ಪನ್ನಗಳಾದ ಅಕ್ಕಿ ಗೋಧಿ ಬಳಸಿ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸಲು ರಾಷ್ಟ್ರೀಯ ಜೈವಿಕ ಇಂಧನ ಯೋಜನೆ 2018ಕ್ಕೆ ಕೇಂದ್ರ ಸರ್ಕಾರವು ತಿದ್ದುಪಡಿ ತಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಗೃಹಬಳಕೆಗೆ ಉಪಯುಕ್ತವಾದ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ. ಈ ಎಥೆನಾಲ್ ಮಿಶ್ರಣ ಯೋಜನೆ ನಮ್ಮ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದು ಎಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೇಳಿಕೊಂಡಿದೆ.

2018 ರ ವರೆಗೂ ಆಹಾರ ಬಳಕೆಗೆ ಉಪಯುಕ್ತ ಅಲ್ಲದ ಅಕ್ಕಿ, ಗೋಧಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿತ್ತು. ಆ ನಂತರ ಭಾರತ ಆಹಾರ ನಿಗಮದ ಬಳಿ ಇರುವ ಉತ್ತಮ ಗುಣಮಟ್ಟದ ಹೆಚ್ಚುವರಿ ಅಕ್ಕಿಯನ್ನೂ ಎಥೆನಾಲ್‌ ಉತ್ಪಾದನೆಗೆ ಬಳಸಬಹುದು ಎಂದು 2020 ಕ್ಕೆ ಮತ್ತೊಮ್ಮೆ ತಿದ್ದುಪಡಿ ತರಲಾಗಿದೆ. ಆ ನಂತರದ ದಿನಗಳಲ್ಲಿ ಭಾರತದಲ್ಲಿ ಹೆಚ್ಚುವರಿ ದಾಸ್ತಾನುವಾದ ಗೃಹಬಳಕೆಗೆ ಉಪಯುಕ್ತ ಅಕ್ಕಿಯನ್ನೂ ಬಳಸಲಾಗುತ್ತಿದೆ. ಹೀಗಾಗಿ 2022–23ನೇ ಆರ್ಥಿಕ ವರ್ಷದಲ್ಲಿ ಸುಮಾರು 16 ಲಕ್ಷ ಟನ್‌ ಅಕ್ಕಿಯನ್ನು ಎಥೆನಾಲ್‌ ಉತ್ಪಾದನೆಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಏನಿದು ಎಥೆನಾಲ್ ಮಿಶ್ರಣ? ಭಾರತಕ್ಕೆ ಇದರ ಅಗತ್ಯವೆಷ್ಟಿದೆ?
ಒಂದು ಲೀಟರ್‌ ಪೆಟ್ರೋಲ್‌ಗೆ ಶೇ 20ರಷ್ಟು ಎಥೆನಾಲ್‌ ಅನ್ನು ಮಿಶ್ರಣ ಮಾಡುವುದರಿಂದ ವಾಹನಗಳಿಂದ ಉತ್ಪಾದನೆಯಾಗುವ ವಾಯುಮಾಲಿನ್ಯ ತಗ್ಗಿಸಬಹುದು ಮತ್ತು ಕಚ್ಛಾ ತೈಲದ ಆಮದು ಕೂಡಾ ತಗ್ಗುತ್ತದೆ. ಈ ಮೊದಲೇ ತಿಳಿಸಿದಂತೆ ಎಥೆನಾಲ್ ಉತ್ಪಾದನೆಗೆ ಆಹಾರ ಉತ್ಪನ್ನಗಳಾದ ಅಕ್ಕಿ ಮತ್ತು ಗೋಧಿಯನ್ನು ಬಳಸಲಾಗುತ್ತದೆ.

2003ರಲ್ಲಿ ಈ ಯೋಜನೆ ಚಾಲ್ತಿಗೆ ಬಂದರೂ, 2018ರಲ್ಲಿ ನರೇಂದ್ರ ಮೋದಿ ಸರ್ಕಾರ ಈ ಯೋಜನೆಗೆ ವೇಗ ನೀಡಿತು. 2020 ರಿಂದ 2022 ರ ಅವಧಿಯಲ್ಲಿ ಪೆಟ್ರೋಲ್ ಗೆ ಶೇ‌.10 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಸರ್ಕಾರ ಹೊಂದಿತ್ತು. ಯೋಜನೆಯಂತೆ ಸರ್ಕಾರ ತನ್ನ ಗುರಿಯನ್ನೂ ಮುಟ್ಟಿದ ಬಗ್ಗೆ ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಸಧ್ಯಕ್ಕೆ ದೇಶದ ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ 11 ರಾಜ್ಯಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. ಅದರಂತೆ ಒಂದು ಲೀಟರ್‌ ಪೆಟ್ರೋಲ್‌ಗೆ ಶೇ 20ರಷ್ಟು (ಇ20) ಎಥೆನಾಲ್‌ ಅನ್ನು ಮಿಶ್ರಣ ಮಾಡಿ ಪೆಟ್ರೋಲ್‌ ಬಂಕ್‌ಗಳ ಮೂಲಕ ಗ್ರಾಹಕರಿಗೆ ನೀಡಲಾಗುತ್ತಿದೆ. ಈ 11 ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ.

ಮೇಲ್ನೋಟಕ್ಕೆ ಇದೊಂದು ಉಪಯುಕ್ತ ಯೋಜನೆಯೇ ಆದರೂ ಗೃಹಬಳಕೆಯ ಬೇಡಿಕೆಯನ್ನು ಪೂರೈಸಿ ಉಳಿದ ಅಕ್ಕಿ ಮತ್ತು ಗೋಧಿಯನ್ನು ಇದಕ್ಕೆ ಬಳಸಬೇಕು ಎಂಬುದು ನಿಯಮಗಳಲ್ಲಿದೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 101 ನೇ ಸ್ಥಾನದಲ್ಲಿರುವುದು ಆಘಾತಕಾರಿ ಸಂಗತಿ. ಇಂತಹ ದಿನಗಳಲ್ಲಿ ಬಡವರ ಹಸಿವು ನೀಗಿಸುವ ಬದಲು ಎಥೆನಾಲ್ ಮಿಶ್ರಣದ ಯೋಜನೆಗೆ ಕೇಂದ್ರ ಸರ್ಕಾರ ಕೋಟಿಗಟ್ಟಲೆ ವ್ಯಯಿಸುತ್ತಿರುವುದು ಅತ್ಯಂತ ಆತಂಕದ ವಿಚಾರವಾಗಿದೆ.

ಆಹಾರ ಉತ್ಪನ್ನಕ್ಕಿಂತ ಎಥೆನಾಲ್ ಉತ್ಪಾದನೆಗೆ ಅಕ್ಕಿ ಅಗ್ಗ!
ಇನ್ನೊಂದು ಆಘಾತಕಾರಿ ಅಂಶವೆಂದರೆ ಭಾರತದಲ್ಲಿ ಉತ್ಪಾದನೆಯಾಗುವ ಅಕ್ಕಿ ಇಲ್ಲಿನ ಆಹಾರಕ್ಕಾಗಿ ಬಳಕೆಯಾಗುವ ದರ ಕ್ವಿಂಟಾಲ್ ಗೆ ₹3,400 ಆದರೆ, ಎಥೆನಾಲ್ ಉತ್ಪಾದನೆಗೆ ಅಕ್ಕಿ ಖರೀದಿಸಲು ಒಂದು ಕ್ವಿಂಟಾಲ್‌ಗೆ ₹2,400 ಎಂದು ಕೇಂದ್ರ ಸರ್ಕಾರ ದರ ನಿಗದಿಪಡಿಸಿದೆ. ತೀರಾ ಇತ್ತೀಚೆಗೆ ಆಹಾರ ಸಚಿವಾಲಯವು ಇದರ ಒಂದು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.

ಖಾಸಗಿ ಎಥೆನಾಲ್ ಘಟಕಕ್ಕೆ ಉತ್ತೇಜನ; ಸರ್ಕಾರದ ಅಧೀನದಲ್ಲಿ ಒಂದೂ ಘಟಕವಿಲ್ಲ
ಎಥೆನಾಲ್‌ ಘಟಕ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಒಂದು ಎಥೆನಾಲ್ ಘಟಕ ಪ್ರಾರಂಭ ಮಾಡುವ ಉದ್ದೇಶ ಹೊಂದಿದ್ದರೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ವ್ಯವಸ್ಥೆ ಇದೆ. ಇದರ ಜೊತೆಗೆ ಸರ್ಕಾರ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಅಥವಾ ಯಾವುದೇ ಖಾಸಗಿ ವ್ಯಕ್ತಿಗಳು ಎಷ್ಟು ಬೇಕಾದರೂ ಧಾನ್ಯಗಳನ್ನು ಖರೀದಿಸಬಹುದಾಗಿದೆ. ದುರಂತ ಎಂದರೆ ಸರ್ಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆಗೆ ಯೋಜನೆ ರೂಪಿಸಿದರೂ ಇಲ್ಲಿಯವರೆಗೆ ಒಂದೇ ಒಂದು ಸರ್ಕಾರಿ ಸ್ವಾಮ್ಯದ ಎಥೆನಾಲ್ ಘಟಕವನ್ನು ಸ್ಥಾಪಿಸಿಲ್ಲ. ಇಲ್ಲಿಯವರೆಗೆ ಹತ್ತಾರು ಎಥೆನಾಲ್ ಘಟಕ ಸ್ಥಾಪನೆಯಾಗಿದ್ದರೂ ಅವೆಲ್ಲವೂ ಖಾಸಗಿ ಘಟಕಗಳೇ ಹೊರತು ಸರ್ಕಾರಿ ಸ್ವಾಮ್ಯದ್ದಾಗಿಲ್ಲ.

ಸಧ್ಯ ಕರ್ನಾಟಕ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಅಕ್ಕಿ ಬೇಡಿಕೆಯ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದಿಟ್ಟರೆ ಕೇಂದ್ರ ಸರ್ಕಾರ ಅಕ್ಕಿ ಸರಬರಾಜು ಮಾಡಲು ಹಿಂದೇಟು ಹಾಕಿದೆ. ಜೂನ್ 12 ಕ್ಕೆ ರಾಜ್ಯಕ್ಕೆ ಬರೆದ ಪತ್ರದಲ್ಲಿ ಅಕ್ಕಿ ನೀಡುತ್ತೇವೆ ಎಂದು ಸ್ವೀಕೃತಿ ಪತ್ರ ಬರೆದು ನಂತರ ಜೂನ್ 13 ಕ್ಕೆ ಅಕ್ಕಿ ವಿತರಣೆ ಸಾಧ್ಯವಿಲ್ಲ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಡವರಿಗೆ ನೀಡುವ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಎಥೆನಾಲ್ ಘಟಕಕ್ಕೆ ಕೇಂದ್ರ ಸರ್ಕಾರ ಕೊಟ್ಟಿರುವ ಸೌಲಭ್ಯಗಳು, ಮತ್ತು ಪ್ರಾಮುಖ್ಯತೆ ಮತ್ತೊಮ್ಮೆ ಚರ್ಚೆ ಹುಟ್ಟುವಂತೆ ಮಾಡಿದೆ. ಆ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಬಡವರಿಗೆ ಸಲ್ಲಬೇಕಾದ ಅನ್ನದ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವುದು ಸುಳ್ಳಲ್ಲ.

ನೂತನ ಸರ್ಕಾರದ ವಿಧಾನ ಸಭಾಧ್ಯಕ್ಷರ ಸ್ಥಾನಕ್ಕೆ ಹೆಸರು ಅಂತಿಮ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರದ ವಿವಿಧ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಬಹುತೇಕ ಅಂತಿಮಗೊಂಡಿದೆ.

ಕಾಂಗ್ರೆಸ್ ನ ಹಿರಿಯ ನಾಯಕರಾದ ಆರ್.ವಿ.ದೇಶಪಾಂಡೆ, ಹೆಚ್.ಕೆ.ಪಾಟೀಲ್ ಹಾಗೂ ಟಿ.ಬಿ.ಜಯಚಂದ್ರ ಅವರುಗಳ ಹೆಸರುಗಳನ್ನು ಸ್ಪೀಕರ್ ಆಯ್ಕೆಯ ಪಟ್ಟಿಗೆ ಹೈಕಮಾಂಡ್ ಸೂಚಿಸಿತ್ತು. ಆದರೆ ಈ ಮೂವರೂ ನಾಯಕರು ಸ್ಪೀಕರ್ ಸ್ಥಾನಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕಾಂಗ್ರೆಸ್ ನ ಇನ್ನೋರ್ವ ಹಿರಿಯ ನಾಯಕ ಯು.ಟಿ.ಖಾದರ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಮನವೊಲಿಸಲು ಸಫಲರಾಗಿದ್ದಾರೆ.

ಇಂದು ಬೆಳಿಗ್ಗೆ 11 ಗಂಟೆಯ ಅವಧಿಗೆ ಹಿರಿಯ ನಾಯಕ ಯುಟಿ ಖಾದರ್ ಅವರು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಬಹುತೇಕ ಯುಟಿ ಖಾರದ್ ಅವರು ಅವಿರೋಧ ಆಯ್ಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮೇ 24 ರಂದು ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ವಿಧಾನಸಭೆ ಬುಲೆಟಿನ್ ಹೊರಡಿಸಿದ್ದು, ಮಂಗಳವಾರ ಮಧ್ಯಾಹ್ನ 12 ಗಂಟೆಯ ಒಳಗೆ ಸ್ಪೀಕರ್ ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಬೇಕಾಗುತ್ತದೆ. ವಿಧಾನ ಸಭಾಧ್ಯಕ್ಷರ ಸ್ಥಾನಕ್ಕೆ ಇಲ್ಲಿಯವರೆಗೂ ಸಾಮಾನ್ಯವಾಗಿ ಅವಿರೋಧ ಆಯ್ಕೆಯಾಗಿರುವ ಸಂಪ್ರದಾಯವಿದೆ. ಆ ನಿಟ್ಟಿನಲ್ಲಿ ಯುಟಿ ಖಾದರ್ ವಿರುದ್ಧ ಯಾರೂ ಕಣಕ್ಕಿಳಿಯುವುದು ಅಸಾಧ್ಯ ಎನ್ನಲಾಗಿದೆ.

ಸತತವಾಗಿ 5 ನೇ ಬಾರಿಗೆ ಮಂಗಳೂರಿನಿಂದ ಶಾಸಕರಾಗಿ ಆಯ್ಕೆಯಾಗುತ್ತಿರುವ ಯುಟಿ ಖಾದರ್ 2013 ರ ಸಿದ್ದರಾಮಯ್ಯ ಸರ್ಕಾರ ಮತ್ತು ಆ ನಂತರದ ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ವಿವಿಧ ಉನ್ನತ ಖಾತೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರ ಸರ್ಕಾರದ ಅವಧಿಯಲ್ಲೂ ವಿಧಾನಸಭಾ ಪ್ರತಿಪಕ್ಷದ ಉಪನಾಯಕರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಇದೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಯುಟಿ ಖಾದರ್ ಅವರನ್ನು ಸಭಾಧ್ಯಕ್ಷ ಸ್ಥಾನಕ್ಕೆ ಮನವೊಲಿಸಲು ಸಫಲವಾಗಿದೆ.

ಮಿತಿಮೀರಿದ ಗೋರಕ್ಷಕರ ಹಾವಳಿ ; ರೈತರ ಗೋಳು ಕೇಳುವುದು ಯಾರು?
ರಾಜ್ಯದಲ್ಲಿ ಇತ್ತೀಚೆಗೆ ಗೋರಕ್ಷಣೆಯ ನೆಪದಲ್ಲಿ ಅನೈತಿಕ ಪೊಲೀಸ್ ಗಿರಿಯವರ ಕಾಟ ತೀರಾ ಹೆಚ್ಚಾಗಿದೆ. ಅದರಲ್ಲೂ ಹಿಂದೂಪರ ಸಂಘಟನೆಯ ಹಣೆಪಟ್ಟಿ ಹೊತ್ತು ಬಂದರೆ ಏನು ಬೇಕಾದರೂ ಮಾಡಬಹುದು ಎಂಬ ‘ಉತ್ತರ ಪ್ರದೇಶ’ ಮಾದರಿಯ ಗೂಂಡಾ ಪ್ರವೃತ್ತಿ ಎಲ್ಲೆಡೆ ಕಂಡು ಬರುತ್ತಿದೆ. ಅದಕ್ಕೆ ಸರಿಯಾಗಿ ಶುಕ್ರವಾರದ ದಿನ ಅರಸೀಕೆರೆ ವ್ಯಾಪ್ತಿಯಲ್ಲಿ ಶಿಕಾರಿಪುರ ಮೂಲದ ರೈತರಿಗೆ ಹಿಂದೂಪರ ಸಂಘಟನೆಯವರು ಹಿಗ್ಗಾಮುಗ್ಗಾ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದು ಈಗ ಎಲ್ಲೆಡೆ ಹಿಂದೂಪರ ಸಂಘಟನೆಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ಹಿನ್ನೆಲೆ : ರಾಜ್ಯದ ಕೆಲವು ಕಡೆ ಜಾನುವಾರುಗಳ ಸಾಕಾಣಿಕೆ ಫಾರಂ ಗಳಿದ್ದು, ಜಾನುವಾರುಗಳನ್ನು ಬಿಟ್ಟು ದೊಡ್ಡ ಬಯಲು ಪ್ರದೇಶ, ಹೊಲಗಳಲ್ಲಿ ಮೇವು ಸಂಗ್ರಹ ಮಾಡಿ ಸಾಕಲಾಗುತ್ತದೆ. ಇಂತಹ ಫಾರಂಗಳಲ್ಲಿ ವರ್ಷದಲ್ಲಿ ಒಮ್ಮೆ ನಡೆಯುವ ಹರಾಜು ಪ್ರಕ್ರಿಯೆಗೆ ರಾಜ್ಯದ ನಾನಾ ಭಾಗದ ರೈತ ಸಮುದಾಯಗಳಿಗೆ ಕರೆ ನೀಡಲಾಗುತ್ತದೆ.

ಅದೇ ರೀತಿ ತುರುವೇಕೆರೆ ತಾಲ್ಲೂಕಿನ ಕುಣಿಕೇನಹಳ್ಳಿ ಇರುವ ಜಾನುವಾರುಗಳ ಫಾರಂನಲ್ಲಿ ಜಾನುವಾರುಗಳ ಹರಾಜು ಮಾಡುವುದಾಗಿ ರೈತ ಸಮುದಾಯಕ್ಕೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕಾರಿಪುರ ತಾಲ್ಲೂಕು ಭಾಗದಿಂದಲೂ ಹಲವಷ್ಟು ಮಂದಿ ರೈತರು ವಾಹನಗಳನ್ನು ತಗೆದುಕೊಂಡು ಹರಾಜು ನಡೆಯವ ಊರಿಗೆ ಹೋಗಿದ್ದರು. ನಂತರ ತಮ್ಮ ಅನುಕೂಲಕ್ಕೆ ತಕ್ಕಂತೆ ಜಾನುವಾರುಗಳನ್ನು ಕೊಂಡುಕೊಂಡು ತಮ್ಮ ಊರಿಗೆ ಮರಳಿದ್ದಾರೆ.
ಸಧ್ಯ ಶಿಕಾರಿಪುರ ತಾಲ್ಲೂಕಿನ ಬಟ್ಟಿಕೋಟೆ ಎಂಬ ಊರಿನ ರಾಜು ಎಂಬ ಯುವ ರೈತ ಹರಾಜು ಪ್ರಕ್ರಿಯೆ ಮುಗಿಸಿಕೊಂಡು ಊರಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅರಸೀಕೆರೆ ಮತ್ತು ಬಾಣಾವರ ನಡುವಿನ ಆಸುಪಾಸಿನ ಊರಿನಲ್ಲಿ ಹಿಂದೂಪರ ಸಂಘಟನೆ ಸೋಗಿನಲ್ಲಿ ಗುರುತಿಸಿಕೊಂಡಿರುವ, ಈ ಹಿಂದೆ ಹೆಣ್ಣು ಮಕ್ಕಳ ಕಳ್ಳಸಾಗಣೆ ನೆಪಜೈಲು ಸೇರಿ ಹೊರಬಂದ ಪುನೀತ್ ಕೆರೆಹಳ್ಳಿ ಎಂಬುವವ ಮತ್ತು ಆತನ ಜೊತೆಗಿನ ಪುಂಡರ ಗುಂಪೊಂದು ಯುವ ರೈತ ರಾಜು ಅವರಿದ್ದ ಜಾನುವಾರು ವಾಹನವನ್ನು ಅಡ್ಡಗಟ್ಟಿದ್ದಾರೆ.

ವಾಹನದಲ್ಲಿ ಇದ್ದ ರಾಜು ಮತ್ತು ಡ್ರೈವರ್ ಹತ್ತಿರ ಬಂದು ನೀನು ಯಾವ ಜಾತಿ ಮತ್ತು ಧರ್ಮದವರು ಕೇಳಿದ್ದಾರೆ. ರಾಜು ತಾನು ಕುರುಬ ಸಮುದಾಯ ಎಂದಿದ್ದಾರೆ. ನಂತರ ಜಾತಿಯ ಹೆಸರನ್ನು ಉಲ್ಲೇಖಿಸಿ ಸೂ.ಮಕ್ಕಳಾ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ನಾನೊಬ್ಬ ರೈತ, ಇದು ನನ್ನ ಕೃಷಿ ಚಟುವಟಿಕೆಗಾಗಿ ಹರಾಜು ಹಿಡಿದು ತಂದ ಜಾನುವಾರುಗಳು, ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ. ಕಾನೂನು ಪ್ರಕಾರವಾಗಿಯೇ ನಾನು ಇದನ್ನು ಕೊಂಡುಕೊಂಡಿದ್ದೇನೆ ಎಂದು ರಾಜು ಅವರು ಪರಿಪರಿಯಾಗಿ ಬೇಡಿಕೊಂಡರೂ ಪುನೀತ್ ಕೆರೆಹಳ್ಳಿ ನೇತೃತ್ವದ ಪುಂಡರ ಗುಂಪು ಅದನ್ನು ಕಿಂಚಿತ್ ಕೇಳುವ ಸೌಜನ್ಯ ತೋರಿಲ್ಲ.

ಅವರ ಮೇಲೆ ಜಾನುವಾರು ಕಳ್ಳಸಾಗಣೆ ಮಾಡುವ ಆರೋಪ ಹೊರಿಸಿ ಅತ್ಯಂತ ಕೆಟ್ಟ ಶಬ್ದಗಳ ಬೈಗುಳ ಬಳಸಿ ಬೈದಿದ್ದಾರೆ. ರಾಜು ಮತ್ತು ಡ್ರೈವರ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಪುನೀತ್ ಕೆರೆಹಳ್ಳಿ ಮತ್ತು ಪೂರ್ಣಿಮಾ ಮನೆಮನೆ ಎಂಬ ಪುಂಡರ ಗುಂಪು, ರಾಜು ಅವರನ್ನು ವಾಹನದ ಮೇಲಿಂದ ಎದೆಯ ಮೇಲೆ ಒದ್ದು ವಾಹನದಿಂದ ಕೆಳಗೆ ಬೀಳಿಸಿದ್ದಾರೆ. ಕಪಾಳಕ್ಕೆ ಹೊಡೆದಿದ್ದಾರೆ. ರಾಜು ಮತ್ತು ವಾಹನದ ಡ್ರೈವರ್ ಇಬ್ಬರಿಗೂ ಆ ಪುಂಡರ ಗುಂಪು ನೆಲದ ಮೇಲೆ ಹಾಕಿ ತುಳಿದಿದ್ದಾರೆ. ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ರಾಜು ಅವರು ರಸ್ತೆಯಲ್ಲೇ ಏಳಲು ಆಗದ ಸ್ಥಿತಿಯಲ್ಲಿ ಬಿದ್ದು ನರಳುವಂತೆ ಹಲ್ಲೆ ನಡೆಸಿದ್ದಾರೆ.

ನಂತರ ಜಾನುವಾರುಗಳಿದ್ದ ವಾಹನವನ್ನು ಏರಿ, ಹಗ್ಗದಿಂದ ಕಟ್ಟಿದ್ದ ಜಾನುವಾರುಗಳನ್ನು ಬಿಟ್ಟು ಓಡಿಸಿದ್ದಾರೆ. ಅದೇ ಸಂದರ್ಭದಲ್ಲಿ ವಾಹನದಲ್ಲಿ ಇದ್ದ ಲಕ್ಷಕ್ಕೂ ಹೆಚ್ಚು ಬೆಲೆಗೆ ಕೊಂಡಿದ್ದ ಜಾನುವಾರಿಗೆ ಕಾಲಿಗೆ ಪೆಟ್ಟಾಗಿದೆ. ಈ ಸಂದರ್ಭದಲ್ಲಿ ಜಾನುವಾರುಗಳನ್ನು ಕೊಂಡು ಇದ್ದ ಉಳಿಕೆ ಮೂರು ಲಕ್ಷಕ್ಕೂ ಹೆಚ್ಚಿನ ಹಣ, ಕೊರಳಲ್ಲಿ ಇದ್ದ ಚಿನ್ನದ ಸರ ಮತ್ತಿತರ ಬೆಲೆಬಾಳುವ ವಸ್ತುಗಳು ಕಾಣೆಯಾಗಿವೆ ಎಂದು ರಾಜು ಅವರು ಅಳಲು ತೋಡಿಕೊಂಡಿದ್ದಾರೆ.

ನಂತರ ಸ್ಥಳೀಯರ ಸಹಾಯದಿಂದ ಅರಸೀಕೆರೆ ಪೊಲೀಸರ ಸಂಪರ್ಕ ಮಾಡಿದ್ದಾರೆ. ಆದರೆ ಅರಸೀಕೆರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ರಾಜು ಆರೋಪಿಸಿದ್ದಾರೆ. ಎಲ್ಲಾ ದಾಖಲೆಗಳ ಪರಿಶೀಲಿಸಿದ ನಂತರ ಏನೂ ಆಗಿಯೇ ಇಲ್ಲ ಎಂಬಂತೆ ಊರಿಗೆ ಕಳಿಸಿದ್ದಾರೆ. ಯಾರ ಮೇಲೂ ಸಹ ದೂರು ದಾಖಲು ಮಾಡಿಕೊಂಡಿಲ್ಲ. ರೈತ ರಾಜು ಅವರು ದೂರು ದಾಖಲು ಮಾಡದ ಪೊಲೀಸ್ ಕ್ರಮದ ಬಗ್ಗೆ ಕೇಳಿದಾಗ ಗೋರಕ್ಷಕರ ಮೇಲಿನ ಕೇಸುಗಳು ನಿಲ್ಲುವುದಿಲ್ಲ. ಸರ್ಕಾರವೇ ಅವರ ಬೆಂಬಲಕ್ಕೆ ಇದೆ. ಹಾಗಾಗಿ ದೂರು ನೀಡುವುದೂ ವ್ಯರ್ಥ ಎಂಬ ರೀತಿಯ ಪ್ರತಿಕ್ರಿಯೆ ಸ್ಥಳೀಯವಾಗಿ ಕೇಳಿ ಬಂದಿದೆ. ನಂತರ ಶಿಕಾರಿಪುರಕ್ಕೆ ಬಂದ ರಾಜು ಮತ್ತು ಡ್ರೈವರ್ ಆಸ್ಪತ್ರೆಗೆ ದಾಖಲಾಗಿ ಸ್ಥಳೀಯರಿಗೆ ವಿಚಾರ ತಿಳಿಸಿದ್ದಾರೆ.

ಸಾಮಾನ್ಯವಾಗಿ ಅರೆಮಲೆನಾಡು ಭಾಗಗಳಾದ ಶಿಕಾರಿಪುರ, ಸೊರಬ, ಭದ್ರಾವತಿ, ಹೊನ್ನಾಳಿ, ನ್ಯಾಮತಿ, ಹರಿಹರ, ರಾಣೆಬೆನ್ನೂರು ಕಡೆಗಳಲ್ಲಿ ಹಬ್ಬ ಹರಿದಿನದ ಸಂದರ್ಭದಲ್ಲಿ ಜಾನುವಾರುಗಳ ಸಿಂಗರಿಸವುದು, ಕೃಷಿ ಚಟುವಟಿಕೆಗೆ ಬಳಸುವುದು ಸಾಮಾನ್ಯವಾಗಿದೆ. ಇಂತಹ ಜಾನುವಾರುಗಳನ್ನು ದನದ ಜಾತ್ರೆಗಳಲ್ಲಿ ನೋಡಿ ತರಲಾಗುತ್ತದೆ. ಈ ಸಂದರ್ಭದಲ್ಲಿ ಜೋಡೆತ್ತುಗಳು, ಒಂಟಿ ಎತ್ತು, ವಿವಿಧ ತಳಿಯ ದನಗಳು, ಕರುಗಳು ಒಂದೊಂದು ಜಾನುವಾರುಗಳೂ ಅವುಗಳ ತಾಕತ್ತು, ಅವುಗಳ ಗುಣಲಕ್ಷಣಗಳ ಆಧಾರದಲ್ಲಿ ಲಕ್ಷಗಟ್ಟಲೆ ಹಣಕ್ಕೆ ಮಾರಾಟ ಮಾಡಲ್ಪಡುತ್ತವೆ.

ಹೇಳಿಕೇಳಿ ಬಯಲ ಪ್ರದೇಶದಲ್ಲಿ ಹೇಗೆ ಬೇಕೋ ಹಾಗೆ ಅಡ್ಡಾದಿಡ್ಡಿಯಾಗಿ ಬೆಳೆದುಕೊಂಡ ಜಾನುವಾರುಗಳು ಅವು. ಅವುಗಳನ್ನು ರೈತರು ತಮ್ಮ ಹಿಡಿತಕ್ಕೆ ತರಬೇಕೆಂದರೆ ಅವುಗಳನ್ನ ಪಳಗಿಸಬೇಕು. ಅವುಗಳಿಗೆ ಮೂಗುದಾರ ಹಾಕಿ ನಿಯಂತ್ರಣಕ್ಕೆ ತರಬೇಕು. ನಂತರ ಉಳುಮೆ, ಇನ್ನಿತರ ಕೆಲಸಗಳಿಗೆ ಇವು ಉಪಯೋಗಕ್ಕೆ ಬರುವಂತವು. ಹಾಗಿದ್ದರೆ ಮಾತ್ರ ರೈತರಿಗೆ ಜಾನುವಾರುಗಳು ತಂದದ್ದಕ್ಕೂ ಒಂದು ಸಾರ್ಥಕ.

ಹಾಗಾಗಿ ರೈತರು ತಾವು ಆಯ್ಕೆ ಮಾಡಿಕೊಳ್ಳುವ ಜಾನುವಾರುಗಳಿಗೆ ಮಾರಾಟದ ಜಾಗದಲ್ಲೇ ಮೂಗುದಾರ, ಕಾಲಿಗೆ ಹಲ್ಲೆಕಟ್ಟುವುದು ಎಲ್ಲವನ್ನೂ ಮಾಡಿಸಿಯೇ ಜಾನುವಾರು ಜಾತ್ರೆಗಳಿಂದ ಹೊರಡುವುದು. ಆ ಸಂದರ್ಭದಲ್ಲಿ ಜಾನುವಾರುಗಳ ನಿಯಂತ್ರಣಕ್ಕೆ ತರುವಾಗ ಸಣ್ಣಪುಟ್ಟ  ತರಚಿದ ಗಾಯಗಳಾಗುವುದು ಸಹಜ. ಇಂತಹ ಗಾಯಗಳನ್ನೇ ಪುನೀತ್ ಕೆರೆಹಳ್ಳಿಯ ಪುಂಡರ ಗುಂಪು ಜಾನುವಾರುಗಳ ಹಿಂಸಿಸಿದ್ದು ಎಂದು ಆರೋಪಿಸಿದೆ.

ಸರ್ಕಾರ ಸ್ಪಷ್ಟಪಡಿಸಬೇಕು : ರೈತರು ತಮ್ಮ ಕೃಷಿ ಚಟುವಟಿಕೆಗೆ, ಹೈನುಗಾರಿಕೆಗೆ ಅಥವಾ ಸಾಕಾಣಿಕೆಗೆ ಮಾರಾಟ ಮತ್ತು ಕೊಂಡುಕೊಳ್ಳಲು ಜಾನುವಾರುಗಳನ್ನು ಒಂದೂರಿನಿಂದ ಇನ್ನೊಂದೂರಿಗೆ ಸಾಗಿಸಲೇಬೇಕು. ಇಂತಹ ಸಂದರ್ಭದಲ್ಲಿ ಗೋರಕ್ಷಕ ಪುಂಡ ಪೋಕರಿಗಳ ಗುಂಪು ಬಂದು ರೈತರಿಗೆ ಉಪಟಳ ಕೊಡುವುದು ಇತ್ತೀಚೆಗೆ ಜಾಸ್ತಿಯಾಗಿದೆ. ಕಳೆದ ವರ್ಷವೂ ಸಹ ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಕೃಷಿ ಉಪಯೋಗಕ್ಕೆ ಜಾನುವಾರು ತಂದ ವಾಹನವನ್ನು ಇದೇ ಪುನೀತ್ ಕೆರೆಹಳ್ಳಿ ತಂಡ ಅಡ್ಡಗಟ್ಟಿ ಹಲ್ಲೆ ನಡೆಸಿತ್ತು. ಈಗಲೂ ಇದೇ ತಂಡ ರೈತರಿಗೆ ತೊಂದರೆ ನೀಡಿದ್ದಲ್ಲದೆ, ಮಾರಣಾಂತಿಕ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ಜಾತಿ ನಿಂದನೆಯನ್ನೂ ಮಾಡಿದೆ.

ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಬೇಕಿದ್ದ ಸರ್ಕಾರ ನೇರವಾಗಿ ಇಂತಹ ಪುಂಡರ ಗುಂಪನ್ನು ಹಿನ್ನೆಲೆಯಿಂದ ಬೆಂಬಲಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಸರ್ಕಾರ ನಿಜಕ್ಕೂ ಯಾರ ಪರವಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಸದಾ ಇಂತಹ ಅನೈತಿಕ ಪೋಲೀಸ್ ಗಿರಿ ಮಾಡುವವರ ಪರವಾಗಿಯೇ ನಿಲ್ಲುವ ಬಿಜೆಪಿ ಸರ್ಕಾರ ನಿಜವಾಗಿಯೂ ರೈತರ ಪರವಾಗಿಲ್ಲ ಎಂಬುದನ್ನು ನೇರವಾಗಿ ಸ್ಪಷ್ಟಪಡಿಸಲಿ. ಹಾಗೊಂದು ವೇಳೆ ಸ್ಪಷ್ಟಪಡಿಸಿದ್ದಾದರೆ ರೈತರು ಗತಿಯಿಲ್ಲ ಎಂಬಂತೆ ತಮ್ಮ ಕೃಷಿ ಚಟುವಟಿಕೆ, ಹೈನುಗಾರಿಕೆಯನ್ನು ಕೈಬಿಡಬಹುದು. ಇತ್ತ ರೈತಪರ ಎನ್ನುವುದೂ ಇವರೇ.. ಅತ್ತ ಗೋರಕ್ಷಕ ಗುಂಪಿಗೆ ಬೆಂಬಲಿಸಿ ರೈತರಿಗೆ ಉಪಟಳ ಕೊಡುವುದೂ ಇವರೇ ಆಗಿ ಮಗು ಚಿವುಟಿ ತೊಟ್ಟಿಲು ತೂಗುವ ದುರ್ಬುದ್ದಿ ಬಿಡಲಿ.

ಒಂದು ಕಡೆ ಪೊಲೀಸರೂ ಇವರ ವಿರುದ್ಧ ದೂರು ತಗೆದುಕೊಳ್ಳುವುದಿಲ್ಲ, ಇನ್ನೊಂದು ಕಡೆ ಸರ್ಕಾರದ ಕಡೆಯಿಂದಲೂ ರೈತರಿಗೆ ರಕ್ಷಣೆ ಇಲ್ಲ. ಸಧ್ಯ ಈ ಗುಂಪು ಘರ್ಷಣೆಯಿಂದ ಶಿಕಾರಿಪುರದ ಯುವ ರೈತ ರಾಜು ಅವರಿಗಾದ ನಷ್ಟ ಭರಿಸಿ ಕೊಡುವವರ್ಯಾರು? ಈಗಾಗಲೇ 3 ಲಕ್ಷಕ್ಕೂ ಮಿಕ್ಕ ಹಣ, ಕೊರಳಲ್ಲಿನ ಚಿನ್ನದ ಸರ ಕಳುವಾಗಿದ್ದು ಅದರ ಹೊಣೆ ಯಾರು ಹೊರಲಿದ್ದಾರೆ.? ಜೊತೆಗೆ ಜಾನುವಾರಿನ ಕಾಲಿಗೂ ಆ ಸಂದರ್ಭದಲ್ಲಿ ಪೆಟ್ಟಾಗಿದೆ ಎಂದು ರಾಜು ಆರೋಪಿಸಿದ್ದಾರೆ. ಈ ನಷ್ಟವನ್ನು ಯಾರು ಭರಿಸುವುದು ಎಂಬುದನ್ನೂ ಪೊಲೀಸರು ಮತ್ತು ಸರ್ಕಾರ ಸ್ಪಷ್ಟಪಡಿಸಬೇಕು.

ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ ಹಣ ; ಯಡವಟ್ಟಿನ ನಿರ್ಧಾರಕ್ಕೆ ವಿರೋಧ
ರಾಜ್ಯ ಸರ್ಕಾರಿ ನೌಕರರು ನವೆಂಬರ್ ತಿಂಗಳ ವೇತನದಲ್ಲಿ ಇಂತಿಷ್ಟು ಭಾಗವನ್ನು ಪುಣ್ಯಕೋಟಿ ಯೋಜನೆಗೆ ಮೀಸಲಿಡಬೇಕು ಎಂದು ಬಸವರಾಜ ಬೊಮ್ಮಾಯಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನೌಕರರ ಯಾವುದೇ ಸಭೆ ಕರೆಯದೇ, ನೌಕರರ ಅನುಮತಿ ಪಡೆಯದೇ ಇಂತಹ ಫರ್ಮಾನಿಗೆ ಒಪ್ಪಿಗೆ ಸೂಚಿಸಿರುವುದು ರಾಜ್ಯ ಸರ್ಕಾರಿ ನೌಕರರ ಕೆಂಗಣ್ಣಿಗೆ ಗುರಿಯಾಗಿದೆ.

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ರಚನೆಯ ದಿನದಿಂದ ಆಡಳಿತ ಅವ್ಯವಸ್ಥೆಯ ಕಾರಣಕ್ಕೆ ಒಂದಿಲ್ಲೊಂದು ಟೀಕೆ, ಆರೋಪಕ್ಕೆ ನಿರಂತರವಾಗಿ ಗುರಿಯಾಗುತ್ತಲೇ ಇದೆ. ವಿಶೇಷವಾಗಿ ಯಾವುದಾದರೊಂದು ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ತರುವ ಅವೈಜ್ಞಾನಿಕ ಮತ್ತು ನಾಗರಿಕ ಹಿತಾಸಕ್ತಿಗೆ ವಿರುದ್ಧದ ಕಾನೂನುಗಳನ್ನು ತಂದು ಮೇಲಿಂದ ಮೇಲೆ ಜನರಿಂದ ಛೀಮಾರಿ ಹಾಕಿಸಿಕೊಳ್ಳುವುದು ವಾಡಿಕೆಯಂತೆ ಬಂದಿದೆ. ಸಧ್ಯ ಪುಣ್ಯಕೋಟಿ ಯೋಜನೆ ಕೂಡಾ ಇದರ ಮುಂದುವರಿದ ಭಾಗವಾಗಿ ಸರ್ಕಾರಿ ನೌಕರರ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೌಕರರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23 ರ ಆಯವ್ಯಯದಲ್ಲಿ ಘೋಷಿಸಿರುವಂತೆ ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ನಿಗಮ, ಮಂಡಳಿ, ಪ್ರಾಧಿಕಾರ, ಸ್ವಾಯತ್ತ ಸಂಸ್ಥೆಗಳ ನೌಕರರು ತಮ್ಮ ನವೆಂಬರ್ ತಿಂಗಳ ವಂತಿಗೆಯಲ್ಲಿ ಇಂತಿಷ್ಟು ಭಾಗವನ್ನು ಯೋಜನೆಗೆ ದೇಣಿಗೆ ಕೊಡಬೇಕೆಂದು ತಮ್ಮ ಆಯವ್ಯಯ ಭಾಷಣದಲ್ಲಿ ತಿಳಿಸಿರುತ್ತಾರೆ.

ಇದಕ್ಕೆ ಪೂರಕವಾಗಿ ಸ್ಪಂದಿಸಬೇಕಿರುವುದು ಸರ್ಕಾರಿ ನೌಕರರ ಕರ್ತವ್ಯ ಎನ್ನುವ ಮೂಲಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ನೌಕರರ ಯಾವುದೇ ಪೂರ್ವಾನುಮತಿ ಇಲ್ಲದೆ ನೌಕರರ ವಂತಿಗೆಯಲ್ಲಿ ಇಂತಿಷ್ಟು ಭಾಗವನ್ನು ತಡೆ ಹಿಡಿಯುವಂತೆ ಸರ್ಕಾರದ ಖಜಾನೆ ಅಧಿಕಾರಿಗಳಿಗೆ ಪತ್ರ ಬರೆದಿರುವುದು ನೌಕರರ ವಿರೋಧಕ್ಕೆ ಕಾರಣವಾಗಿದೆ.

ನೌಕರರ ಸಂಘದ ಅಧ್ಯಕ್ಷರು ಸರ್ಕಾರದ ಖಜಾನೆ ಅಧಿಕಾರಿಗಳಿಗೆ ಕಳಿಸಿರುವ ಪ್ರಸ್ತಾವನೆಯಲ್ಲಿ
ಸರ್ಕಾರದ ಎ ದರ್ಜೆ ನೌಕರರ ತಿಂಗಳ ವಂತಿಗೆಯಲ್ಲಿ ₹11,000
ಬಿ ದರ್ಜೆ ನೌಕರರ ತಿಂಗಳ ವಂತಿಗೆಯಲ್ಲಿ ₹4,000
ಸಿ ದರ್ಜೆ ನೌಕರರ ತಿಂಗಳ ವಂತಿಗೆಯಲ್ಲಿ ₹400 ರಂತೆ ನವೆಂಬರ್ ತಿಂಗಳ ವೇತನದಲ್ಲಿ ತಡೆ ಹಿಡಿಯುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಇದಕ್ಕೆ ರಾಜ್ಯ ಸರ್ಕಾರಿ ನೌಕರರ ಒಪ್ಪಿಗೆ ಇದೆ ಎಂದೂ ತಿಳಿಸಿರುತ್ತಾರೆ.

ಇದರ ಬೆನ್ನಲ್ಲೇ ಬಹುತೇಕ ರಾಜ್ಯ ಸರ್ಕಾರಿ ನೌಕರರು ಈ ಯೋಜನೆಗೆ ತಮ್ಮ ವಂತಿಗೆಯ ಹಣ ಬಳಸದಂತೆ ಅಸಮ್ಮತಿ ಪತ್ರವನ್ನು ಹೊರಡಿಸಿದ್ದಾರೆ. ಪತ್ರದಲ್ಲಿ ‘ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ನೌಕರರ ಯಾವುದೇ ಸಭೆ ಕರೆಯದೇ ಏಕಪಕ್ಷೀಯವಾಗಿ ಈ ನಿರ್ಧಾರ ಹೊರಡಿಸಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ’ ಎಂಬುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಜೊತೆಗೆ ‘ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ರಾಜ್ಯದ 20 ಕಡೆಗಳಲ್ಲಿ ಗೋಶಾಲೆ ಶುರು ಮಾಡಿರುವ ಪ್ರಸ್ತಾವನೆ ಮಾಡಿದೆ, ಅದರಲ್ಲಿ 14 ಕಡೆಗಳಲ್ಲಿ ಗೋಶಾಲೆಗಳೇ ಇಲ್ಲ ಎಂದು ಈಗಾಗಲೇ ಹೈಕೋರ್ಟ್ ಸರ್ಕಾರದ ಕಿವಿ ಹಿಂಡಿದೆ. ಇಷ್ಟಿದ್ದೂ ಯಾವ ನಂಬಿಕೆಯಿಂದ ನಮ್ಮ ಸಂಬಳ ತಡೆ ಹಿಡಿಯಬೇಕು’ ಎನ್ನುವ ರೀತಿಯಲ್ಲಿ ನೌಕರರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದರ ಜೊತೆಗೆ ‘ಸರ್ಕಾರ ಈಗಾಗಲೇ ಜಾರಿಗೆ ತಂದಿರುವ NPS (New Pension Scheme) ನೌಕರರಾಗಿರುವ ನಮಗೆ ಹೊಸ ಪಿಂಚಣಿ ಯೋಜನೆಯಿಂದ ಯಾವುದೇ ಉಪಯೋಗ ಇಲ್ಲ. ಅದನ್ನು ರದ್ದುಪಡಿಸಿ, OPS (Old Pension Scheme) ಯೋಜನೆ ಜಾರಿಗೊಳಿಸಿದರೆ ನಾವು ಪುಣ್ಯಕೋಟಿ ದತ್ತು ಯೋಜನೆಗೆ ನಮ್ಮ ಒಂದು ತಿಂಗಳ ನಿರ್ದಿಷ್ಟ ಹಣವನ್ನು ನೀಡಬಹುದು ಎನ್ನುವ ಹೊಸ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.

ಸಧ್ಯ ಈ ಒಂದು ನಿರ್ಧಾರ ಏಕಪಕ್ಷೀಯ ಎಂದು ಸರ್ಕಾರಿ ನೌಕರರು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಗೋಶಾಲೆ ಸ್ಥಾಪನೆ ವಿಚಾರದಲ್ಲಿ ಹೈಕೋರ್ಟ್ ಸರ್ಕಾರದ ತರಾಟೆ ತಗೆದುಕೊಂಡ ವಿಚಾರ ಪ್ರಸ್ತಾಪಿಸಿ ಆದ ಅವ್ಯವಹಾರದ ಬಗ್ಗೆಯೂ ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವುದೂ ಕಂಡುಬಂದಿದೆ.

ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲೇ ಅಸ್ಪೃಶ್ಯತೆ ಆಚರಣೆ
ಕರ್ನಾಟಕ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ ದೇವಸ್ಥಾನಗಳ ವಿವಿಧ ವಿಭಾಗಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಟೆಂಡರ್ ಕಂ ಹರಾಜು ಪ್ರಕಟಣೆ ಹೊರಡಿಸಿದೆ. ಇದರಲ್ಲಿ ಬೆಂಗಳೂರಿನ ಬಸವನಗುಡಿಯ ‘ಶ್ರೀ ದೊಡ್ಡ ಗಣಪತಿ ಮತ್ತು ಸಮೂಹ ದೇವಸ್ಥಾನಗಳು’ ಹೊರಡಿಸಿದ ಹರಾಜು ಪ್ರಕಟಣೆ ಈಗ ಎಲ್ಲೆಡೆ ವೈರಲ್ ಆಗಿದ್ದು, ಸಾರ್ವಜನಿಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದ ಯಾವುದೇ ಇಲಾಖೆಗಳ ಅಡಿಯಲ್ಲಿ ಟೆಂಡರ್ ಕರೆದರೂ ಅಲ್ಲಿ ಮೀಸಲಾತಿ ಪ್ರಕಟಿಸುವುದು ಕಾನೂನು ನಿಯಮಗಳ ಅಡಿಯಲ್ಲಿ ಬಂದಿದೆ. ಅದರಂತೆ ನವೆಂಬರ್ 16 ಕ್ಕೆ ಕರೆಯಲಾದ ಶ್ರೀ ದೊಡ್ಡ ಗಣಪತಿ ಮತ್ತು ಸಮೂಹ ದೇವಸ್ಥಾನಗಳ ವಿವಿಧ ವಿಭಾಗಗಳ ಹರಾಜು ಪ್ರಕ್ರಿಯೆಯ ಪ್ರಕಟಣೆ ಈಗ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಅದರಂತೆ ಪ್ರಕಟಣೆಯನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸರ್ಕಾರವೇ ಆಚರಿಸುತ್ತಿರುವ ‘ಅಸ್ಪೃಶ್ಯತೆ’ ಬಗ್ಗೆ ಸರ್ಕಾರದ ಮೇಲೆ ಕಿಡಿ ಕಾರುತ್ತಿದ್ದಾರೆ.

ಹರಾಜು ಪ್ರಕಟಣೆಯಲ್ಲಿ ಸಮೂಹ ದೇವಸ್ಥಾನಗಳ ವಿವಿಧ ವಿಭಾಗಗಳ ಟೆಂಡರ್ ಹರಾಜಿನಲ್ಲಿ ಪೂಜಾ ಸಾಮಗ್ರಿಗಳ ಮಾರಾಟ, ಎಳನೀರು ಮಾರಾಟ, ಈಡುಗಾಯಿ ಆಯ್ದುಕೊಳ್ಳುವ ಹಕ್ಕಿನ ಟೆಂಡರ್, ಪಾದರಕ್ಷೆ ಕಾಯ್ದುಕೊಳ್ಳುವ ಹಕ್ಕಿನ ಟೆಂಡರ್ ಮತ್ತು ವಾಹನ ನಿಲುಗಡೆಯ ಸುಂಕ ವಸೂಲಾತಿಗೆ ಸಂಬಂಧಿಸಿದಂತೆ ಟೆಂಡರ್ ಗೆ ಆಹ್ವಾನ ಕರೆಯಲಾಗಿದೆ. ಉಳಿದೆಲ್ಲಾ ವಿಭಾಗಗಳಿಗೆ ‘ಸಾಮಾನ್ಯ’ ವರ್ಗಗಳ ಟೆಂಡರ್ ಕರೆದು, ಚಪ್ಪಲಿ ಕಾಯುವ ಹಕ್ಕಿನ ಟೆಂಡರ್ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ’ಕ್ಕೆ ನೀಡಿದ್ದು ಸಾರ್ವಜನಿಕ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

ಅನಾದಿಕಾಲದಿಂದಲೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗಗಳು ಇಂತಹದ್ದೇ ತಳಮಟ್ಟದ ಕೆಲಸ ನಿರ್ವಹಿಸುತ್ತಿದ್ದು, ಮೀಸಲಾತಿ ಅಡಿಯಲ್ಲಿ ಈ ಸಮುದಾಯಗಳನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಮೇಲೆತ್ತಲು ಸಂವಿಧಾನ ರಚನೆ ಮಾಡಲಾಗಿದೆ. ಆದರೆ ಸರ್ಕಾರ ಈ ಸಮುದಾಯಗಳಿಗೇ ಚಪ್ಪಲಿ ಕಾಯುವ ಕೆಲಸಕ್ಕೇ ಮೀಸಲಾತಿ ಜಾರಿ ಮಾಡಿದ್ದು, ಸರ್ಕಾರವೇ ಅಸ್ಪೃಶ್ಯತೆಯನ್ನು ಪೋಷಿಸುವ ಕೆಲಸ ಮಾಡಿದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಇನ್ನು ಜಾಲತಾಣಗಳಲ್ಲಿ ಈ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಯೋಗದ ಸದಸ್ಯರು ‘ಹಿಂದೆ ನಮ್ಮ ಸಮುದಾಯದ ಕೆಲ ಸಂಘಟನೆಯ ಮುಖಂಡರು ನಮ್ಮ ಸಮುದಾಯದ ಹಿತದೃಷ್ಟಿಯಿಂದ ಕೆಲ ಮಳಿಗೆಗಳನ್ನು ಚಪ್ಪಲಿ ಕಾವಲಿಗೆ ಮಿಸಲೀಡಲು ಮಾಡಿದ ಮನವೀಯ ಮೇರೆಗೆ ಸರಕಾರದ ಅದೇಶ ಪ್ರಕಟವಾಗಿದೆ, ಆದರೂ ಇದು ಸರಿಯಾದ ನಿರ್ಧಾರ ಅಲ್ಲ ಎಂದು SC/ST ಆಯೋಗದಿಂದ ವರದಿ ಕೇಳಿದ್ದೇನೆ.’ಎಂಬುದಾಗಿ ತಿಳಿಸಿದ್ದಾರೆ.

ಮುಸ್ಲಿಂ ವಿದ್ಯಾರ್ಥಿನಿಯರ ಖಾಸಗಿ ಹಕ್ಕನ್ನು ಎತ್ತಿ ಹಿಡಿದ ಹಿಜಾಬ್ ತೀರ್ಪು
ಇಡೀ ದೇಶದ ಕುತೂಹಲ ಕೆರಳಿಸಿದ್ದ, ಇಂದು ಅಂತಿಮ ತೀರ್ಪು ಹೊರಬೀಳಬಹುದು ಎಂದೇ ಅಂದಾಜಿಸಲಾಗಿದ್ದ ಹಿಜಾಬ್ ಕುರಿತಾದ ತೀರ್ಪು ಅಂತೂ ಹೊರಬಿದ್ದಿದೆ. ಆದರೆ ದ್ವಿಸದಸ್ಯ ಪೀಠದ ಈ ತೀರ್ಪು ಭಿನ್ನ ಅಭಿಪ್ರಾಯದಿಂದ ಕೂಡಿದ್ದು ಹಿಜಾಬ್ ಪರವೂ ಅಲ್ಲದ, ಹಿಜಾಬಿನ ವಿರುದ್ಧವೂ ಅಲ್ಲದಂತೆ ವ್ಯತಿರಿಕ್ತವಾಗಿ ಕೂಡಿದೆ. ಹಾಗಾಗಿ ಹಿಜಾಬ್ ತೀರ್ಪಿನ ಕುರಿತಾದ ಕುತೂಹಲ ಮತ್ತಷ್ಟು ಜಟಿಲಗೊಂಡಿದೆ.

ನ್ಯಾ.ಹೇಮಂತ್ ಗುಪ್ತಾ ಹಿಜಾಬ್ ಕುರಿತಾದ ಮೇಲ್ಮನವಿ ರದ್ದುಗೊಳಿಸಿದರೆ, ನ್ಯಾ.ಸುದಾಂಶು ಧುಲಿಯಾ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ ಮುಂದಿನ ತೀರ್ಪು ಹೊರಬರುವ ವರೆಗೂ ಶಾಲಾ ಕಾಲೇಜುಗಳಲ್ಲಿ ಯಥಾಸ್ಥಿತಿ ಮುಂದುವರೆಯುವಂತೆ ಆದೇಶಿಸಿದ್ದಾರೆ. ಸಧ್ಯ ದ್ವಿಸದಸ್ಯ ಪೀಠದಿಂದ ಈ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಜೊತೆಗೆ ವಿಸ್ತೃತ ಪೀಠಕ್ಕೆ 11 ಪ್ರಶ್ನೆಗಳನ್ನು ಮುಂದಿಟ್ಟು ಕರ್ನಾಟಕ ಹೈಕೋರ್ಟ್ ಆದೇಶವನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.

ಮಕ್ಕಳ ಶಿಕ್ಷಣದ ಹಕ್ಕುಗಳನ್ನು ಎತ್ತಿಹಿಡಿಯಬೇಕಾದ ಸಾಂವಿಧಾನಿಕ, ಸಾರ್ವಭೌಮತ್ವದ ದೇಶದಲ್ಲಿ ಧಾರ್ಮಿಕ ಹಿನ್ನೆಲೆಯ ಕಾರಣಕ್ಕೆ, ಸೈದ್ಧಾಂತಿಕ ಸಂಘರ್ಷದ ಕಾರಣಕ್ಕೆ ಮಕ್ಕಳನ್ನು ಶಿಕ್ಷಣದ ಹಕ್ಕಿನಿಂದ ವಂಚಿಸಬಾರದು ಎಂದು ನ್ಯಾ.ಸುದಾಂಶು ಧುಲಿಯಾ ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಅವರವರ ವಸ್ತ್ರದ ಆಯ್ಕೆ ಅವರವರಿಗೆ ಬಿಟ್ಟದ್ದು, ಇದರಲ್ಲಿ ಮೂರನೇ ವ್ಯಕ್ತಿ, ಸಂಘಟನೆ, ಧರ್ಮ, ಸಿದ್ಧಾಂತಗಳು ಮೂಗು ತೂರಿಸುವುದು ಅನಗತ್ಯ ಎಂದೂ ಸಹ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಹೆಣ್ಣು ಮಕ್ಕಳ ಆಯ್ಕೆ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಸಂಗತಿ. ಜೊತೆಗೆ ನಮ್ಮ ಮುಖ್ಯ ಆಧ್ಯತೆ ಹೆಣ್ಣು ಮಕ್ಕಳ ಶಿಕ್ಷಣವಾಗಬೇಕಿದೆ, ನ್ಯಾಯಾಲಯಗಳು ಕೊಡುವ ಈ ರೀತಿಯ ತೀರ್ಪು ಕಳವಳಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬಹಳ ಕುತೂಹಲ ಕೆರಳಿಸಿದ್ದ ಹಿಜಾಬ್ ತೀರ್ಪು ಈಗ ಹಿಜಾಬ್ ಪರ ಮತ್ತು ವಿರುದ್ಧ ಇದ್ದ ಎರಡೂ ಗುಂಪುಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಜೊತೆಗೆ ಅಂತಿಮ ತೀರ್ಪಿನ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಈ ನಡುವೆ ಹಿಜಾಬ್ ಧರಿಸುವುದು ತಮ್ಮ ನಂಬಿಕೆಯ ಭಾಗ ಜೊತೆಗೆ ಅದು ಮೂಲಭೂತ ಹಕ್ಕು ಎಂದು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು‌. ಆದರೆ ಕರ್ನಾಟಕ ಹೈಕೋರ್ಟ್ ಏಕರೂಪದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು. ಮುಸ್ಲಿಮರು ಹಿಜಾಬ್ ಧರಿಸುವುದು ಇಸ್ಲಾಮಿನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿದೆ. ಪ್ರಸ್ತುತ ಕರ್ನಾಟಕದಲ್ಲಿ, ಮುಸ್ಲಿಮರು ನಡೆಸುತ್ತಿರುವ ಕೆಲವು ಖಾಸಗಿ ಸಂಸ್ಥೆಗಳು ಮಾತ್ರ ಕ್ಯಾಂಪಸ್‌ನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುತ್ತಿವೆ ಎಂದು ಹಿಜಾಬ್ ವಿರುದ್ಧ ವಾದ ಮಂಡಿಸಲಾಗಿತ್ತು.

ಎರಡೂ ಕಡೆಗಳ ಸುಧೀರ್ಘ ವಾದ ಪ್ರತಿವಾದದಲ್ಲಿ ಅರ್ಜಿದಾರರ ಪರವಾಗಿ ಸಂಜಯ್ ಹೆಗ್ಡೆ, ರಾಜೀವ್ ಧವನ್, ದುಶ್ಯಂತ್ ದವೆ, ಯೂಸುಫ್ ಮುಚ್ಚಲ, ಎಂ ಆರ್ ಶಂಶದ್, ಸಲ್ಮಾನ್ ಖುರ್ಷೀದ್, ನಿಜಾಂ ಪಾಷಾ, ಪ್ರಶಾಂತ್ ಭೂಷಣ್, ದೇವದತ್ ಕಾಮತ್, ಶೋಯೆಬ್ ಆಲಂ ಹಾಗೂ ವಕೀಲೆ ವಿ ಮೋಹನಾ ವಾದ ಮಂಡಿಸಿದ್ದರು. ಕರ್ನಾಟಕ ಸರ್ಕಾರದ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಹಾಗೂ ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು. ಸಧ್ಯ ಪ್ರಕರಣ ಸಿಜೆಐ ಗೆ ವರ್ಗಾವಣೆ ಆದ ಬೆನ್ನಲ್ಲೇ ಸಿಜೆಐ ಅವರು ಹಿಜಾಬ್ ವಿಚಾರಣೆ ಸಂಬಂಧ ಮೂವರು ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠ ರಚಿಸಬೇಕು ಎಂದು ತೀರ್ಪಿನಲ್ಲಿ ಕೋರಿದ್ದಾರೆ.

ಇನ್ನು ಇದೇ ಅಕ್ಟೋಬರ್ 16 ಕ್ಕೆ ನ್ಯಾ.ಹೇಮಂತ್ ಗುಪ್ತಾ ರಾಜೀನಾಮೆ ಹಿನ್ನೆಲೆಯಲ್ಲಿ ಪೂರ್ಣ ಹಂತದ ತೀರ್ಪು ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಆಗಲಿದೆ. ಆಗಲೂ ನ್ಯಾಯಮೂರ್ತಿಗಳ ಭಿನ್ನ ರೀತಿಯ ತೀರ್ಪು ಬಂದರೂ ಬಹುಮತದ ಆಧಾರದಲ್ಲಿ ಅಥವಾ ಸಿಜೆಐ ಪ್ರಕಟಿಸುವ ಅಭಿಪ್ರಾಯದ ಮೇಲೆ ತೀರ್ಪು ನಿರ್ಧಾರವಾಗಲಿದೆ. ಯಾವುದೇ ತೀರ್ಪು ಬಂದರೂ ಮುಂದಿನ ಹಂತದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಭವಿಷ್ಯದ ದೃಷ್ಟಿಯಿಂದ ತೀರ್ಪು ಸ್ವೀಕರಿಸಬೇಕು. ಮತ್ತು ಸರ್ಕಾರ ಕೂಡಾ ತನ್ನ ಸೈದ್ಧಾಂತಿಕ ಹಠ ಬಿಟ್ಟು ವರ್ತಿಸಿದರೆ ರಾಜ್ಯ ಕೂಡಾ ಇವೆಲ್ಲಾ ಗೊಂದಲಗಳಿಗೆ ಅಂತ್ಯ ಹಾಡಬಹುದು ಎಂಬುದು ಸಾರ್ವಜನಿಕವಾಗಿ ಕೇಳಿಬಂದ ಅಭಿಪ್ರಾಯವಾಗಿದೆ.

ಪಠ್ಯ ಪುಸ್ತಕ ವಿವಾದ : ಅನುಮತಿ ಹಿಂಪಡೆದ ಲೇಖಕರ ಪಾಠಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ಪಠ್ಯ ಪುಸ್ತಕ ವಿವಾದದಲ್ಲಿ ಅನುಮತಿ ಹಿಂಪಡೆದಿದ್ದ ಲೇಖಕರ ಪಾಠಗಳನ್ನು  ಬೋಧನೆ, ಕಲಿಕೆ, ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಕೆಲವು ತಿಂಗಳುಗಳ ಹಿಂದೆ ನಡೆದ ಪಠ್ಯಪುಸ್ತಕ ರಚನಾ ಸಮಿತಿಯ ವಿವಾದದ ಹಿನ್ನೆಲೆಯಲ್ಲಿ ಹಲವು ಲೇಖಕರು ಪಠ್ಯ ಪುಸ್ತಕದಲ್ಲಿ ತಮ್ಮ ಲೇಖನ, ಕವಿತೆ, ಬರಹ ಇತ್ಯಾದಿಯನ್ನು ಬಳಸಿಕೊಳ್ಳಲು ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದರು. ಇದೇ ಹಿನ್ನಲೆಯಲ್ಲಿ ದೇವನೂರು ಮಹಾದೇವರವರು ಸರ್ಕಾರಕ್ಕೆ, ತಮ್ಮ ಬರಹವನ್ನು ಪಠ್ಯಪುಸ್ತಕದಲ್ಲಿ ಬಳಸದಿರಲು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು, ತಮಗೆ ಅಂತಹ ಯಾವುದೇ ಪತ್ರ ಬಂದು ತಲುಪಿಲ್ಲ ಎಂದು ಹೇಳಿಕೆ ನೀಡಿದ್ದರು.  ತಮ್ಮ ಈಗ ಸರಕಾರ ಅವರಲ್ಲಿ ಕೆಲವು ಲೇಖಕರ ಪಾಠಗಳನ್ನು ಬಳಸಿಕೊಳ್ಳದಂತೆ ಆದೇಶ ನೀಡಿದೆ.

ಕುವೆಂಪು, ನಾಡಧ್ವಜ ಹೀಗೆ ಹಲವು ವಿಷಯಗಳಲ್ಲಿ ಕಿಡಿಗೇಡಿತನವನ್ನು ತೋರಿಸಿದ್ದ ವ್ಯಕ್ತಿಯನ್ನು ಸರಕಾರ ಪಾಠಪುಸ್ತಕ ಪರಿಶೀಲನೆ ಸಮಿತಿಗೆ ಅಧ್ಯಕ್ಷನಾಗಿ ನೇಮಿಸಿದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿ ನಾಡಿನ ಪ್ರಜ್ಞಾವಂತರು ಈ ನೇಮಕಾತಿಯ ವಿರುದ್ಧ ಹೋರಾಟ ನಡೆಸಿದ್ದರು. ಹಲವು ಕಣ್ಣೊರೆಸುವ ತಂತ್ರಗಳನ್ನು ನಡೆಸಿದ ಸರಕಾರ ಕೊನೆಗೂ ತನ್ನ ಸ್ಪಷ್ಟ ನಿಲುವನ್ನು ಹೇಳಿರಲಿಲ್ಲ.

ಏನಿದು ಪಠ್ಯಪುಸ್ತಕ ವಿವಾದ ?

ಸರ್ಕಾರವು ನೇಮಿಸಿದ್ದ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಮಾಡಿದ ಬದಲಾವಣೆಯ ಪ್ರಕಾರ, ರಾಷ್ಟ್ರ ಕವಿ ಕುವೆಂಪು, ಬಸವಣ್ಣನವರ ಬರಹಗಳನ್ನು ತಿರುಚಲಾಗಿತ್ತು ಮತ್ತು ನಾಡಗೀತೆಗೆ ಅವಮಾನ ಮಾಡಲಾಗಿತ್ತು. ಜೊತೆಗೆ  ಭಗತ್ ಸಿಂಗ್, ನಾರಾಯಣಗುರು, ಪೆರಿಯಾರ್ ಸೇರಿದಂತೆ, ಹಲವು ಪಠ್ಯಗಳನ್ನು ಪಠ್ಯಪುಸ್ತಕದಿಂದ ಕೈ ಬಿಡಲಾಗಿತ್ತು. ಈ ಮೂಲಕ ನಾಡು ಕಟ್ಟುವಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಲವಾರು ಸಾಮಾಜಿಕ ಕ್ರಾಂತಿಕಾರರ, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಎಸಗಲಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯದ ಹಲವಾರು ಗಣ್ಯರು, ಸಾಹಿತಿಗಳು, ಲೇಖಕರು, ಶಿಕ್ಷಣ ತಜ್ಞರು, ಲಿಂಗಾಯತ, ಒಕ್ಕಲಿಗ ಸಮಾಜ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ, ಹಲವಾರು ಸಂಘಸಂಸ್ಥೆಗಳು, ತೀವ್ರ ಹೋರಾಟ ಮಾಡಿದ್ದವು.

ರಾಜ್ಯದ ಜನರ ಒತ್ತಡಕ್ಕೆ ಮಣಿದ ಸರ್ಕಾರ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿನ ಕೆಲವು ತಪ್ಪುಗಳನ್ನು ಪರೋಕ್ಷವಾಗಿ ಒಪ್ಪಿಕೊಂಡು,  ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ವಿಸರ್ಜಿಸಿತ್ತು. ಆದರೆ, ಇಷ್ಟೆಲ್ಲಾ ಲೋಪದೋಷಗಳ ನಡುವೆಯೂ ಪಠ್ಯಪುಸ್ತಕ ಪರಿಷ್ಕರಣೆಗೆ ನೇರವಾಗಿ ಮಣೆ ಹಾಕಿತ್ತು.

ಪ್ರಸ್ತುತ 10ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪುಸ್ತಕದ ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ (ಗದ್ಯ),  10ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿನ ‘ಭಗತ್ ಸಿಂಗ್’ (ಪೂರಕ ಗದ್ಯ) ಡಾ. ಜಿ. ರಾಮಕೃಷ್ಣ, 9ನೇ ತರಗತಿಯ ತೃತೀಯ ಭಾಷೆ ಕನ್ನಡ ಪುಸ್ತಕದ ‘ಅಮ್ಮನಾಗುವುದೆಂದರೆ’ (ಪೂರಕ ಪದ್ಯ) ರೂಪ ಹಾಸನ, 10ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪುಸ್ತಕದ ‘ಹೀಗೊಂದು ಟಾಪ್ ಪ್ರಯಾಣ’ (ಪೂರಕ ಗದ್ಯ) ಈರಪ್ಪ ಎಂ. ಕಂಬಳಿ, 10ನೇ ತರಗತಿಯ ತೃತೀಯ ಭಾಷೆ ಪುಸ್ತಕದ ‘ಕಟ್ಟತೇವ ನಾವು’ (ಪದ್ಯ) ಸತೀಶ್ ಕುಲಕರ್ಣಿ, 10ನೇ ತರಗತಿಯ ದ್ವೀತಿಯ ಭಾಷೆ ಕನ್ನಡ ಪುಸ್ತಕದ ‘ಏಣಿ’ (ಪದ್ಯ) ಸುಕನ್ಯಾ ಮಾರುತಿ, ಮತ್ತು ಆರನೇ ತರಗತಿಯ ಪ್ರಥಮ ಭಾಷೆ ಕನ್ನಡ ಪುಸ್ತಕದ ಡಾ. ರಾಜ್ಕುಮಾರ್ (ಗದ್ಯ) ದೊಡ್ಡ ಹುಲ್ಲೂರು ರುಕ್ಕೋಜಿ ರಾವ್ ಇವರ ಪಾಠಗಳನ್ನು ಬಳಸದಂತೆ ಇಲಾಖೆ ಆದೇಶ ಹೊರಡಿಸಿದೆ

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಮ್ಮ ಸಂಕಲ್ಪ : ಬಿಜೆಪಿ
ಬೆಂಗಳೂರು : ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸಲು ಬೊಮ್ಮಾಯಿ ಸರ್ಕಾರ ಕ್ರಮ ವಹಿಸಿಕೊಂಡಿದ್ದು ಹೊಸ ಶಾಲಾ ಕೊಠಡಿಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಮುಂದಾಗಿದೆ.

ಈ ಕುರಿತು ಟ್ವೀಟ್‌ ಮಾಡಿದ  ರಾಜ್ಯ ಬಿಜೆಪಿ ಘಟಕ ʼಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಸಕ್ತ ವರ್ಷದಲ್ಲಿ ನಮ್ಮ ಬೊಮ್ಮಾಯಿ ಸರ್ಕಾರ 2100 ಶಾಲಾ ಕೊಠಡಿ ನಿರ್ಮಿಸಲಿದೆ ಮತ್ತು 2500 ಅಂಗನವಾಡಿ ಕೇಂದ್ರ ತೆರೆಯಲು ಕ್ರಮ ವಹಿಸಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಎಂದರೆ ಕೇವಲ ಬಾಯಿಮಾತಲ್ಲ, ಅದು ನಮ್ಮ ಸಂಕಲ್ಪವೂ ಹೌದುʼ ಎಂದು ಹೇಳಿದೆ.

ವೇದ ಗಣಿತ : ಕರ್ನಾಟಕ ಸರ್ಕಾರದಿಂದ ಮತ್ತೊಂದು ವಿವಾದ
ಬೆಂಗಳೂರು: ಸರ್ಕಾರವು ಪಠ್ಯ ಪುಸ್ತಕ ಪರಿಷ್ಕರಣೆ ನಂತರ ಇದೀಗ ಮತ್ತೊಂದು ವಿವಾದ ಸೃಷ್ಟಿಸಿಕೊಂಡಿದೆ.  ರಾಜ್ಯದಲ್ಲಿನ ಐದರಿಂದ ಎಂಟನೇ ತರಗತಿಯ SC – ST ಮಕ್ಕಳಿಗೆ ವೇದ ಗಣಿತ ಕಲಿಸಲು ಮುಂದಾಗಿರುವ ಸರಕಾರ ಇದಕ್ಕಾಗಿ SC ST ಕಲ್ಯಾಣಕ್ಕೆ ಮೀಸಲಾದ ಗ್ರಾಮ ಪಂಚಾಯಿತಿಯ ಶೇ. 25ರಷ್ಟು ಹಣವನ್ನು ಇದಕ್ಕಾಗಿ ಬಳಸಲಿದೆ.

ಚಿತ್ರದುರ್ಗದ ಹಿರಿಯೂರಿನ ಖಾಸಗಿ ಸಂಸ್ಥೆ ಎವಿಎಂ ಅಕಾಡೆಮಿಗೆ ವೇದ ಗಣಿತದ ಬೋಧನೆಯನ್ನು ವಹಿಸಲಾಗಿದೆ.

ಎವಿಎಂ ಅಕಾಡೆಮಿ 2022ರ ಜನವರಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಪ್ರಾರಂಭಿಸಿತ್ತು.

ತರಬೇತಿ ಪಡೆದ ಶಿಕ್ಷಕರು 16 ವಾರಗಳ ಕಾಲ ಪ್ರತಿ ಶನಿವಾರ ಮತ್ತು ಭಾನುವಾರದಂದು ಎರಡು ಗಂಟೆಗಳ ಕಾಲ ವೇದ ಗಣಿತವನ್ನು ಕಲಿಸುತ್ತಾರೆ.

ಶಾಲಾ ವಿದ್ಯಾರ್ಥಿಗಳಿಗೆ ವೇದ ಗಣಿತವನ್ನು ಕಲಿಸುವುದು ಗೊಂದಲವನ್ನು ಉಂಟು ಮಾಡುತ್ತದೆ. ಏಕೆಂದರೆ ಅವರು ಈಗಾಗಲೇ ಗಣಿತವನ್ನು ವೈಜ್ಞಾನಿಕ ರೀತಿಯಲ್ಲಿ ಕಲಿಯುತ್ತಿದ್ದಾರೆ. ಗಣಿತ ಮಾಯೆಯಲ್ಲ, ಇದು ಶುದ್ಧ ವಿಜ್ಞಾನವಾಗಿದೆ. ಇದನ್ನು ತರ್ಕಬದ್ಧವಾಗಿ ತಾರ್ಕಿಕವಾಗಿ ಕಲಿಯಬೇಕು. ವೇದ ಗಣಿತಕ್ಕೆ ತರ್ಕವಿಲ್ಲ ಸರ್ಕಾರಿ ಶಾಲಾ ಮಕ್ಕಳ ಮೇಲೆ ಮಾತ್ರ ಸರ್ಕಾರ ಅನಗತ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಯ ನಿಜವಾದ ಕೇಸರಿಕರಣ – ನಿರಂಜನಾರಾಧ್ಯ, ಶಿಕ್ಷಣ ತಜ್ಞ