state – Peepal Media

ರಾಜ್ಯಗಳಿಂದಲೇ ದೇಶ
ಭಾಷೆ ಎನ್ನುವುದು ಭಾವನಾತ್ಮಕವಾಗಿ ತುಂಬಾ ಸಂವೇದನಾಶೀಲ ಸಂಗತಿ. ಭಾಷಾ ಅಸ್ಮಿತೆಗಳ ಮೇಲಿನ ದಾಳಿಯು ಸಮುದಾಯಗಳ ಅಸ್ಮಿತೆಯ ಮೇಲಿನ ದಾಳಿಯಾಗಿ, ಅಂತಿಮವಾಗಿ ಪ್ರತ್ಯೇಕತೆಯ ಭಾವನೆಗೆ ಇಂಬು ಕೊಡುತ್ತದೆ. ಇದಾಗ ಬಾರದು ಎನ್ನುವ ಶ್ರೀನಿವಾಸ ಕಾರ್ಕಳ ಅವರ ಕನ್ನಡ ರಾಜ್ಯೋತ್ಸವ ವಿಶೇಷ ಲೇಖನ ಶ್ರೀನಿ ಕಾಲಂ ನಲ್ಲಿ.

ಇಂದಿಗೆ ಸುಮಾರು ನೂರ ಎಂಟು ವರ್ಷಗಳ ಹಿಂದೆ, ಅಂದರೆ ಆಗಸ್ಟ್ 3, 1914 ರಂದು, ಪುಣೆಯ ಡೆಕ್ಕನ್ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಮ್ಮುಖದಲ್ಲಿ, ಧಾರವಾಡದಿಂದ ಬಂದ ಕನ್ನಡಿಗ ಆಲೂರು ಕೃಷ್ಣರಾಯರು ‘ಪಾಸ್ಟ್ ಗ್ಲೋರಿ ಆಫ್ ಕರ್ನಾಟಕ’ (ಗತಕಾಲದ ಕರ್ನಾಟಕದ ವೈಭವ) ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ್ದರು. ಈ ಭಾಷಣ ಇಂಗ್ಲಿಷ್ ನಲ್ಲಿದ್ದುದರಿಂದ ಕೆಲ ಮಹಾರಾಷ್ಟ್ರೀಯರೂ ಉಪನ್ಯಾಸ ಆಲಿಸಲು ಅಲ್ಲಿ ಸೇರಿದ್ದರು.

ಚಾರಿತ್ರಿಕ ಸಂಗತಿಗಳನ್ನು ಪ್ರತ್ಯಕ್ಷ ಕಂಡವರಂತೆ, ಹೃದಯಸ್ಪರ್ಶಿಯಾಗಿ ಆಡಿದ ಆಲೂರರ ಮಾತುಗಳನ್ನು ಅಲ್ಲಿನ ಮರಾಠೀ ಪ್ರಾಧ್ಯಾಪಕರು ಮೆಚ್ಚಿ, ‘ಕರ್ನಾಟಕದ ಗತಕಾಲದ ವೈಭವ ರೋಮಾಂಚಕಾರಿಯಾಗಿದೆ. ಅದು ಭಾರತದ ಚರಿತ್ರಸಾಗರದ ಒಂದು ಮುಖ್ಯ ಅಂಗ, ಅದು ಮಹಾರಾಷ್ಟ್ರದ ಇತಿಹಾಸ ಕೂಡ ಆಗಿದೆ, ಆಲೂರ ಅವರ ಇಂದಿನ ವ್ಯಾಖ್ಯಾನ ನಮ್ಮಲ್ಲಿ ನವಸ್ಫೂರ್ತಿಯನ್ನು ಉಂಟು ಮಾಡಿದೆ’ ಎಂದು ಹೇಳಿದರು.

‘ಕರ್ನಾಟಕವು ನಮ್ಮ ಹೃದಯದಲ್ಲಿ ಇದೆ’

ಸಭೆ ಮುಗಿಯಿತು. ವೆಂಕಟರಾಯರು ಕನ್ನಡದಲ್ಲಿ ಕೆಲವು ಮಾತು ಆಡಬೇಕೆಂಬುದು ವಿದ್ಯಾರ್ಥಿಗಳ ಆಶಯವಾಗಿತ್ತು. ವೆಂಕಟರಾಯರು ಸಮ್ಮತಿಸಿ, ಹೀಗೆ ಮಾತನಾಡಿದರು- “ಕರ್ನಾಟಕವು ಎಲ್ಲಿದೆ, ಎಂದು ಕೇಳುವ ಜನ ನಮ್ಮಲ್ಲಿ ಸಾಕಷ್ಟಿದ್ದಾರೆ. ಇದಕ್ಕೆ ನನ್ನ ಉತ್ತರ: ನಿಮ್ಮ ಹೃದಯದಲ್ಲಿ. ಇಂದಿನ ಕರ್ನಾಟಕ ಭೌಗೋಲಿಕವಾಗಿ ಮುಂಬಯಿ ಪ್ರಾಂತದ ನಾಲ್ಕು ಜಿಲ್ಲೆಗಳಲ್ಲಿ ಮತ್ತು ಬೇರೆ ಬೇರೆ ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿರಬಹುದು. ಆದರೆ ಕೇವಲ ಭೂಪ್ರದೇಶ ಅಥವಾ ಜನಸಂಖ್ಯೆಯ ಮೊತ್ತದಿಂದ ಮಾತ್ರ ಕರ್ನಾಟಕವನ್ನು ನಾವು ಅರಿಯಲಾರೆವು. ಜನತೆಯ ಶಕ್ತಿ-ಸಾಹಸ, ಸಾಧನೆ-ಸಿದ್ಧಿಗಳಲ್ಲಿ ಒಂದು ದೇಶದ ಘನತೆ ಇದೆ, ಬೆಲೆ ಇದೆ. ಈ ದೃಷ್ಟಿಯಿಂದಲೇ ನಾನು ಹೇಳುವುದು ‘ಕರ್ನಾಟಕವು ನಮ್ಮ ಹೃದಯದಲ್ಲಿ ಇದೆ’ ಎಂದು; ನಾವು ಬೆಳೆದರೆ ಕರ್ನಾಟಕವು ಬೆಳೆಯುತ್ತದೆ ಎಂದು ಅರ್ಥ. ಇಂದು ಒಂದು ಘಟಕವಾಗಿ ನಮ್ಮ ಕಣ್ಣಿಗೆ ಕಾಣದಿದ್ದರೂ, ಕರ್ನಾಟಕವೂ ಒಂದು ಜೀವಂತ ರಾಷ್ಟ್ರ ಎಂಬ ನನ್ನ ಮಾತಿನಲ್ಲಿ ನೀವು ವಿಶ್ವಾಸವಿಡಿ.

ಕರ್ನಾಟಕವೇ ಒಂದು ರಾಷ್ಟ್ರ..

ಹೌದು- ಇದು ನನ್ನ ಉತ್ತರ. ರಾಷ್ಟ್ರೀಯತ್ವವು ಒಂದು ಕಲ್ಪನೆ. ಯಾವ ಕಲ್ಪನೆಯು ನಮ್ಮನ್ನು ಸಂಪೂರ್ಣವಾಗಿ ಆಕರ್ಷಿಸಿ, ದೇಶಸೇವೆಗೆ ಪ್ರೇರಕ ಶಕ್ತಿಯಾಗುತ್ತದೆಯೋ ಅದು ರಾಷ್ಟ್ರೀಯತ್ವ. ಈ ಕಲ್ಪನೆಯು ಇಂದು ಬಂಗಾಲ ಮತ್ತು ಮಹಾರಾಷ್ಟ್ರದಲ್ಲಿ ತೀವ್ರ ಸ್ವರೂಪದಲ್ಲಿದೆ. ಆ ಪ್ರಾಂತಗಳು ಎಚ್ಚೆತ್ತು ತಮ್ಮ ರಾಷ್ಟ್ರೀಯತೆಯ ಬಲವನ್ನು ಪ್ರಸ್ತಾಪಿಸಿವೆ. ಸ್ವಾತಂತ್ರ್ಯ ಸಮರದಲ್ಲಿ ಧೈರ್ಯದಿಂದ ಮುನ್ನಡಿ ಇಡುತ್ತಿವೆ. ಅದೇ ರೀತಿಯಲ್ಲಿ ಕರ್ನಾಟಕವು ಎಚ್ಚರಾಗಬೇಕು. ತಾನು ಶಕ್ತಿವಂತವಾಗಿ ಬೆಳೆದು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಕಾಣಿಕೆಯನ್ನು ಸಲ್ಲಿಸುವಂತಾದಾಗ ಮಾತ್ರ ಕರ್ನಾಟಕದ ರಾಷ್ಟ್ರೀಯತ್ವ ಆವಾಹನವಾಗುತ್ತದೆ.

ಚರಿತ್ರೆಯ ಅಭ್ಯಾಸ ನಮ್ಮಲ್ಲಿ ಅಭಿಮಾನ ಹುಟ್ಟಿಸುತ್ತದೆ. ಅಭಿಮಾನವೆಂದರೆ ಸಾತ್ವಿಕ ಅಹಂಕಾರ. ‘ನಾನು ನನ್ನದು’ ಎಂಬ ಭಾವ ಇಲ್ಲದ ಬದುಕು ಬದುಕಲ್ಲ. ವ್ಯಕ್ತಿ, ಸಂಸಾರ, ಸಮಾಜ – ಇವುಗಳ ಬಗ್ಗೆ ಈ ಭಾವನೆ ಬೆಳೆದು ವಿಶಾಲವಾಗುತ್ತ ಹೋಗುತ್ತದೆ. ಈ ವಿಕಾಸವು ವ್ಯಕ್ತಿಯ ಸಂಸ್ಕಾರವನ್ನವಲಂಬಿಸಿರುತ್ತದೆ. ‘ನಮ್ಮದೀ ನಮ್ಮದೀ ಕನ್ನಡನಾಡು’ ಎಂಬ ಭಾವ ಕರ್ನಾಟಕತ್ವವನ್ನು ಸೂಚಿಸಿದರೆ, ‘ನಮ್ಮದೀ ನಮ್ಮದೀ ಭರತ ಭೂಮಿ’ ಎಂಬ ಭಾವ ರಾಷ್ಟ್ರೀಯತ್ವವನ್ನು ವ್ಯಕ್ತಪಡಿಸುತ್ತದೆ. ಅವೆರಡರಲ್ಲಿ, ನನ್ನ ದೃಷ್ಟಿಯಲ್ಲಿ ಯಾವ ಅಂತರವೂ ಇಲ್ಲ.

ಕರ್ನಾಟಕತ್ವವನ್ನು ಪ್ರಾದೇಶಿಕ ರಾಷ್ಟ್ರೀಯತೆಯೆಂದು ಕರೆಯಬಹುದು. ಅದು ರಾಜಕೀಯವೂ ಅಲ್ಲ, ಶುದ್ಧ ಧಾರ್ಮಿಕವೂ ಅಲ್ಲ. ಅದು ಸಂಸ್ಕೃತಿ ನಿಷ್ಠವಾದುದು. ಭಾಷೆ ಅದರ ಆಧಾರ. ಭಾರತದ ಸಮಸ್ತ ಪ್ರಾದೇಶಿಕ ಸಂಸ್ಕೃತಿಗಳ ಒಟ್ಟಂದವೇ ಭಾರತದ ರಾಷ್ಟ್ರೀಯತೆ ಇದನ್ನು ಗ್ರಹಿಸಲು ನಮಗೆ ವಿಶೇಷ ಸಾಧನೆ ಬೇಕು.

ಕರ್ನಾಟಕತ್ವದ ಅಭಿಮಾನವಿಲ್ಲದೆ ನಾವು ರಾಷ್ಟ್ರಕಾರ್ಯ ಮಾಡಲಾರೆವೆ? – ಇನ್ನೊಂದು ಪ್ರಶ್ನೆ. ನನ್ನ ದೃಷ್ಟಿಯಲ್ಲಿ, ಅದು ಸಾಧ್ಯವಿಲ್ಲ. ಮಾತ್ರವಲ್ಲ, ಕರ್ನಾಟಕವನ್ನು ಅಲಕ್ಷಿಸುವವರು ಭಾರತದ ರಾಷ್ಟ್ರೀಯತೆಯನ್ನು ಅರ್ಥ ಮಾಡಿಕೊಳ್ಳಲಾರರು ಎಂಬುದು ನನ್ನ ಅಭಿಪ್ರಾಯ. ಅಭಿಮಾನದಿಂದ ಕಾರ್ಯಪ್ರೇರಣೆ. ಕರ್ನಾಟಕತ್ವದ ಅಭಿಮಾನ ಎಂದರೆ ಕರ್ನಾಟಕದ ಉನ್ನತಿಗಾಗಿ ಶ್ರಮಿಸುವ ಹಂಬಲ. ದೇಶಕಾರ್ಯವು ಸುತ್ತಲಿನ ಜನತೆಯೊಂದಿಗೆ ಹೆಣೆದುಕೊಂಡಿರುತ್ತದೆ – ಇವು ಆಲೂರು ಅವರ ಮಾತುಗಳು.

ಕನ್ನಡ ಪ್ರದೇಶಗಳ ಏಕೀಕರಣಕ್ಕೆ ದುಡಿದ ಬಹಳ ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರಾದ ಮತ್ತು ಕನ್ನಡದ ಮೇಲಿನ ಪ್ರೀತಿ, ಬದ್ಧತೆ ಹಾಗೂ ಕನ್ನಡಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕಾರಣಕ್ಕೆ ‘ಕನ್ನಡ ಕುಲ ಪುರೋಹಿತ’ ಎಂಬ ಹೆಸರು ಗಳಿಸಿದ ಆಲೂರು ವೆಂಕಟರಾಯರು ‘ಕರ್ನಾಟಕವೇ ಒಂದು ರಾಷ್ಟ್ರ, ಕರ್ನಾಟಕವೇ ಒಂದು ಪ್ರಾದೇಶಿಕ ರಾಷ್ಟ್ರೀಯತೆ, ಭಾರತದ ಸಮಸ್ತ ಪ್ರಾದೇಶಿಕ ಸಂಸ್ಕೃತಿಗಳ ಒಟ್ಟಂದವೇ ಭಾರತದ ರಾಷ್ಟ್ರೀಯತೆ’ ಎಂದು ಆಡಿದ ಮಾತುಗಳನ್ನು ಗಮನಿಸಿ. ಆಲೂರರು ನೂರ ಎಂಟು ವರ್ಷಗಳ ಹಿಂದೆ ಆಡಿದ ಮಾತುಗಳನ್ನು ಈಗ ನಾವು ಮತ್ತೆ ನೆನಪಿಸಿಕೊಳ್ಳುವಂತಹ ಮತ್ತು ನಮ್ಮನ್ನು ಆಳುವವರಿಗೆ ನೆನಪಿಸಿಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದೌರ್ಭಾಗ್ಯವೇ ಸರಿ.

ಚೆಲುವ ಕನ್ನಡ ನಾಡು ಉದಯವಾಗಿದೆಯೇ?

ಕನ್ನಡದ ಅನೇಕ ಕಟ್ಟಾಳುಗಳ ತ್ಯಾಗ ಬಲಿದಾನ, ಅವಿರತ ಹೋರಾಟದಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಹರಿದು ಹಂಚಾಗಿದ್ದ ಹೆಚ್ಚಿನ ಕನ್ನಡ ಪ್ರದೇಶಗಳು ಒಂದಾಗಿವೆ ನಿಜ. ಮಾತ್ರವಲ್ಲ, ಮೈಸೂರು ರಾಜ್ಯ ಎಂಬ ಹೆಸರು ಹೋಗಿ ಕರ್ನಾಟಕ ರಾಜ್ಯವಾಗಿದೆ, ಹುಯಿಲಗೋಳರ ‘ಉದಯವಾಗಲಿ ಚೆಲುವ ಕನ್ನಡ ನಾಡು’ ಎಂಬ ಹಾಡನ್ನು ‘ಉದಯವಾಯಿತು ಚೆಲುವ ನಾಡು’ ಎಂದು ಹಾಡಿದ್ದೂ ಇದೆ. ಆದರೆ ನಿಜವಾಗಿಯೂ ಚೆಲುವ ಕನ್ನಡ ನಾಡು ಉದಯವಾಗಿದೆಯೇ? ಕನ್ನಡ ನಾಡಿನ ಆತ್ಮ ಮತ್ತು ಅಸ್ಮಿತೆಯಾದ ಕನ್ನಡ ಸುರಕ್ಷಿತವಾಗಿದೆಯೇ?

ಒಂದು ಉಪಖಂಡದಂತಹ ದೇಶವಾದ ಭಾರತದ ಬುನಾದಿಯೇ ಬಹುತ್ವ. ವೈವಿಧ್ಯವೇ ಭಾರತದ ವೈಶಿಷ್ಟ್ಯ. ಇಲ್ಲಿರುವುದು ಅನೇಕತೆಯಲ್ಲಿ ಏಕತೆಯಲ್ಲ; ಅನೇಕತೆಯ ಮೂಲಕ ಏಕತೆ. ಇಲ್ಲಿ ಅನೇಕ ಮತಧರ್ಮ, ಸಂಸ್ಕೃತಿಗಳಿವೆ. ಇಲ್ಲಿರುವಷ್ಟು ಭಾಷೆಯಾದರೋ ಜಗತ್ತಿನ ಎಲ್ಲಿಯೂ ಕಾಣಸಿಗದು. ಭಾರತದಲ್ಲಿ 19,569 ಭಾಷೆಗಳಿವೆ. ಇದರಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರು ಮಾತನಾಡುವ ಭಾಷೆಗಳ ಸಂಖ್ಯೆಯೇ 40. ಕರ್ನಾಟಕ ರಾಜ್ಯವೊಂದರಲ್ಲಿಯೇ 62 ಭಾಷೆಗಳಿವೆ!

ಒಂದು ರಾಷ್ಟ್ರವಾಗಿ ಭಾರತ ಹೇಗಿರಬೇಕು, ಅದರ ಸಂವಿಧಾನ ಹೇಗಿರಬೇಕು ಎಂಬುದನ್ನು ಪರಿಕಲ್ಪಿಸಿದ ನಮ್ಮ ಹಿರಿಯರಿಗೆ ಭಾರತದ ಬಹುತ್ವ ಸ್ವರೂಪ ಮತ್ತು ಅದರ ಧರ್ಮನಿರಪೇಕ್ಷತೆಯ ಅನಿವಾರ್ಯತೆಯ ಬಗ್ಗೆ ಸ್ಪಷ್ಟತೆ ಇತ್ತು. ಇದು ಎಲ್ಲರ ಭಾರತ ಎಂಬ ಅರಿವಿತ್ತು. ಹಾಗಾಗಿಯೇ ಭಾರತ ಸಂವಿಧಾನ ಗ್ರಂಥದಲ್ಲಿ ಅವರು ‘ವಿ ದ ಪೀಪಲ್ ಆಫ್ ಹಿಂದೂಸ್ ಅಥವಾ ಮುಸ್ಲಿಂಸ್’ ಎಂದೆಲ್ಲ ಹೇಳದೆ, ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂದರು. ಭಾರತವನ್ನು ರಾಷ್ಟ್ರ ಎಂದು ಕರೆಯದೆ ‘ಯೂನಿಯನ್ ಆಫ್ ಸ್ಟೇಟ್ಸ್’, (ರಾಜ್ಯಗಳ ಒಕ್ಕೂಟ) ಎಂದು ಕರೆದರು. ಅದಕ್ಕೆ ಅನುಗುಣವಾಗಿ ರಾಜ್ಯಗಳಿಗೆ ಮಾನ್ಯತೆ ನೀಡಲಾಯಿತು; ಅನೇಕ ಅಧಿಕಾರಗಳೊಂದಿಗೆ ಒಂದು ರೀತಿಯ ಸ್ವಾಯತ್ತೆಯನ್ನು ನೀಡಲಾಯಿತು. ಅವರು ಯಾವ ಭಾಷೆಯನ್ನೂ ರಾಷ್ಟ್ರಭಾಷೆ ಎಂದು ಘೋಷಿಸಲಿಲ್ಲ. ದೇಶದ 22 ಮುಖ್ಯ ಭಾಷೆಗಳನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಿದರು.

ಆರಂಭದಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಪಂಡಿತ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಎಲ್ಲರೂ ದೇಶದ ಒಕ್ಕೂಟ ಸ್ವರೂಪಕ್ಕೆ ಮನ್ನಣೆ ನೀಡುತ್ತಾ, ಹೆಚ್ಚಿನ ಎಲ್ಲ ಭಾಷೆಗಳನ್ನು ಸಮಾನವಾಗಿ ಗೌರವಿಸುತ್ತ, ಸುಸೂತ್ರ ಆಡಳಿತ ನಡೆಸಿದರು. ದಕ್ಷಿಣದ ರಾಜ್ಯಗಳು, ಅದರಲ್ಲೂ ಮುಖ್ಯವಾಗಿ ತಮಿಳುನಾಡು ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸಿದಾಗ ಆ ವಿರೋಧವನ್ನು ಮಾನ್ಯ ಮಾಡಿ ಸಂಘರ್ಷ ರಹಿತವಾಗಿ ಆಡಳಿತ ನಡೆಸಿದರು.

ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ…

2014ನೇ ಇಸವಿಯಿಂದ ದೇಶದ ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರದಲ್ಲಿರುವ ಸರಕಾರದಿಂದ ನಡೆಯುವ ದಾಳಿಯ ತೀವ್ರತೆ ಹೆಚ್ಚಾಗಿದೆ. ಇದು ಬಹುಮುಖ್ಯವಾಗಿ ಎರಡು ರೀತಿಯಲ್ಲಿ ನಡೆಯುತ್ತಿದೆ. ಸಂವಿಧಾನದ ಪ್ರಕಾರ ಇಲ್ಲಿನ ಕೆಲವು ಅಧಿಕಾರಗಳು ಕೇಂದ್ರದ ಬಳಿಯೂ, ಇನ್ನು ಕೆಲವು ಅಧಿಕಾರಗಳು ರಾಜ್ಯಗಳ ಪಟ್ಟಿಯಲ್ಲಿ ಬಂದರೆ, ಮತ್ತೆ ಕೆಲವು ಅಧಿಕಾರಗಳು ಜಂಟಿ ಪಟ್ಟಿಯಲ್ಲಿ ಬರುತ್ತದೆ. ಆದರೆ ಈಗೀಗ ಹಣಕಾಸು, ಕೃಷಿ, ಶಿಕ್ಷಣ, ಪೊಲೀಸ್ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೇಂದ್ರ ಕೈಯಾಡಿಸುತ್ತಾ ರಾಜ್ಯಗಳಿಗೆ ಬಹುತೇಕ ಯಾವ ಅಧಿಕಾರವೂ ಇಲ್ಲದಂತೆ ಮಾಡಲಾಗುತ್ತಿದೆ. ತೆರಿಗೆ ವಿಧಿಸುವ ಅಧಿಕಾರವೆಲ್ಲವೂ ಒಕ್ಕೂಟ ಸರಕಾರದ ಬಳಿ ಇರುವುದರಿಂದ ಹಣಕಾಸಿಗಾಗಿ ರಾಜ್ಯಗಳು ಅದರ ಮುಂದೆ ಕೈಚಾಚಿ ನಿಲ್ಲುವಂತಾಗಿದೆ.

ಭಾಷೆಗಳ ಮೇಲೆ ದಾಳಿ..

ಇನ್ನೊಂದೆಡೆ, ದೇಶದ ಬಹುತ್ವವನ್ನು ನಾಶಪಡಿಸುವ ಏಕರೂಪೀಕರಣ ಕಾರ್ಯತಂತ್ರದ ಭಾಗವಾಗಿ ಭಾಷೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇಡೀ ದೇಶದ ಮೇಲೆ ಹಿಂದಿಯನ್ನು ಹೇರಲಾಗುತ್ತಿದೆ. ಬ್ಯಾಂಕ್, ಅಂಚೆ ಕಚೇರಿ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ರಕ್ಷಣಾ ಇಲಾಖೆ.. ಹೀಗೆ ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಎಲ್ಲ ಕಡೆಯೂ ಹಿಂದಿಯು ವ್ಯಾಪಕವಾಗಿ ಬೇರು ಬಿಟ್ಟಿದೆ. 2015 ರಿಂದ ಕೇಂದ್ರ ಸರಕಾರ ಜಾರಿಗೆ ತಂದ ಎಲ್ಲ ಯೋಜನೆಗಳ ಹೆಸರು ಹಿಂದಿಯಲ್ಲಿ ಇವೆ. ಸಂಸತ್ ಕಲಾಪ, ಮಂತ್ರಿಗಳ ಭಾಷಣ. ಅಧಿಕಾರಿಗಳ ಪತ್ರಿಕಾಗೋಷ್ಠಿ ಎಲ್ಲವೂ ಹಿಂದಿಯಲ್ಲಿ. ಹಿಂದಿ ಅನುಷ್ಠಾನಕ್ಕೆ ಕೋಟಿ ಕೋಟಿ ವ್ಯಯಿಸಲಾಗುತ್ತಿದೆ. ಹಿಂದಿ ವೈಭವೀಕರಣದ ನಡುವೆ ಇತರ ಭಾಷೆಗಳಿಗೆ ಪ್ರೋತ್ಸಾಹ ಇಲ್ಲವಾಗಿ ಈವತ್ತು ನಮ್ಮ ದೇಶದಲ್ಲಿ ಸುಮಾರು ಮೂರೂವರೆ ಕೋಟಿ ಜನಗಳ ತಾಯಿ ನುಡಿಗಳು ಪತನಮುಖಿಯಾಗಿವೆ.

ಕನ್ನಡ ಭಾಷೆಯ ದುಸ್ಥಿತಿ…

ಒಂದೆಡೆಯಲ್ಲಿ ಜಾಗತಿಕ ಭಾಷೆ ಇಂಗ್ಲಿಷ್, ಇನ್ನೊಂದೆಡೆಯಲ್ಲಿ ಹಿಂದಿ, ಇವುಗಳ ದಾಳಿಯಿಂದಾಗಿ ಕನ್ನಡದ ಪರಿಸ್ಥಿತಿ ಹೇಗಿದೆ? ಕರ್ನಾಟಕದ ಒಟ್ಟು ಜನಸಂಖ್ಯೆ 6,10,95,297 ಆಗಿದ್ದು, ಇದರಲ್ಲಿ 4,37,06,512 ಮಂದಿ ತಮ್ಮ ಮಾತೃಭಾಷೆಯನ್ನು ಕನ್ನಡವೆಂದು ಅಂಗೀಕರಿಸಿಕೊಂಡಿದ್ದಾರೆ. ಇದು ಒಟ್ಟು ಭಾರತೀಯ ಭಾಷೆಗಳ ಶೇಕಡಾ 3.61 ಆಗಿದ್ದು ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಉಳಿದಂತೆ, ಬಂಗಾಳಿ (ಶೇಕಡಾ 8.3), ಮರಾಠಿ (ಶೇಕಡಾ 6.86), ತೆಲುಗು (ಶೇಕಡಾ 6.70), ತಮಿಳು (ಶೇಕಡಾ 5.70), ಗುಜರಾತಿ (ಶೇಕಡಾ 4.58) ಮತ್ತು ಉರ್ದು (ಶೇಕಡಾ 4.19) ಭಾಷೆಗಳು ಸಂಖ್ಯೆಯ ದೃಷ್ಟಿಯಿಂದ ಕನ್ನಡಕ್ಕಿಂತ ಮೇಲೆ ಇವೆ. ಹಿಂದಿ ಭಾಷೆಯು ಶೇಕಡಾ 56 ರ ಬೆಳವಣಿಗೆ ತೋರಿಸುತ್ತಿರುವಾಗ ಈ ಭಾಷೆಗಳು ಕಡಿಮೆ ಬೆಳವಣಿಗೆ ತೋರಿಸುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ.

ಯೂನೆಸ್ಕೋವು ಸಿದ್ಧಪಡಿಸಿದ ‘ಭಾಷೆಗಳ ಜಾಗತಿಕ ಭೂಪಟ’ವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ, ಅದರಲ್ಲಿ 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ, 71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ. ದೇಶದ ಭಾಷೆಗಳಿಗೆ ಸಂಬಂಧಿಸಿದಂತೆ ಒಕ್ಕೂಟ ಸರಕಾರದ ತಾರತಮ್ಯ ನೀತಿಯಿಂದ ಮತ್ತು ಭಾರತಕ್ಕೊಂದು ಸ್ಪಷ್ಟ ಭಾಷಾ ನೀತಿಯೇ ಇಲ್ಲದ ಕಾರಣ ದೇಶದ ಅಮೂಲ್ಯ ಸಂಪತ್ತಾದ ನೂರಾರು ಭಾಷೆಗಳು ಅಪಾಯದಲ್ಲಿವೆ.

ಅಭಿಮಾನ ಹರಿಯ ಬೇಕಾದುದೇ ಹೀಗೆ..

ದೇಶದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ. ಇವು ದೇಶ ಎಂಬ ಸೌಧದ ಆಧಾರ ಕಂಬಗಳಿದ್ದಂತೆ. ಯಾವ ಒಂದು ಕಂಬ ದುರ್ಬಲಗೊಂಡರೂ ಸೌಧ ಕುಸಿದು ಬೀಳುತ್ತದೆ. ಹಾಗಾಗಿ ಆ ಎಲ್ಲ ಕಂಬಗಳು ಬಲಿಷ್ಠ ಇರುವಂತೆ ನೋಡಿಕೊಳ್ಳುವುದು ಬಹಳ ಅಗತ್ಯ. ಆಲೂರು ಕೃಷ್ಣರಾಯರು ಅಂದಂತೆ “ಅಭಿಮಾನವೆಂದರೆ ಸಾತ್ವಿಕ ಅಹಂಕಾರ. ‘ನಾನು ನನ್ನದು’ ಎಂಬ ಭಾವ ಇಲ್ಲದ ಬದುಕು, ಬದುಕಲ್ಲ. ವ್ಯಕ್ತಿ, ಸಂಸಾರ, ಸಮಾಜ – ಇವುಗಳ ಬಗ್ಗೆ ಈ ಭಾವನೆyou ಬೆಳೆದು ವಿಶಾಲವಾಗುತ್ತ ಹೋಗುತ್ತದೆ”. ನಮ್ಮನ್ನು ಪ್ರೀತಿಸದೆ ನಾವು ಬೇರೆಯವರನ್ನು ಪ್ರೀತಿಸಲಾರೆವು. ಸಹಜವಾಗಿಯೇ ನಮಗೆ ನಮ್ಮ ಮನೆ ಮೊದಲು, ಆಮೇಲೆ ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೀಗೆ ನಮ್ಮ ಅಭಿಮಾನ ಹರಿಯುವುದೇ ಹೀಗೆ.

ಪ್ರಜ್ಞಾವಂತ ಪ್ರಜೆಗಳ ಜವಾಬ್ದಾರಿ…

ಕನ್ನಡಿಗರಿಗೆ ಕರ್ನಾಟಕವೇ ಒಂದು ರಾಷ್ಟ್ರವಿದ್ದಂತೆ. ಕನ್ನಡವೇ ರಾಷ್ಟ್ರಭಾಷೆ ಇದ್ದಂತೆ. ಇಂತಹ ಅಭಿಮಾನದ ಭಾವನೆಯಿಂದ ದೇಶದ ಏಕತೆಗೇನೂ ತೊಂದರೆ ಇಲ್ಲ. ತದ್ವಿರುದ್ಧವಾಗಿ ಒಂದು ದೇಶ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಭಾಷೆ ಎಂದು ದೇಶಭಕ್ತಿ ಮತ್ತು ರಾಷ್ಟ್ರವಾದದ ಹೆಸರಿನಲ್ಲಿ ಏಕರೂಪೀಕರಣಕ್ಕೆ ಹೊರಟರೆ, ಅದು ಭಾರತ ಎಂಬ ಪರಿಕಲ್ಪನೆಗೆ ಹಾನಿ ಮಾಡುವುದಲ್ಲದೆ, ಪ್ರಾದೇಶಿಕ ಅಸಮಾಧಾನಕ್ಕೆ ಕಾರಣವಾಗುತ್ತದೆ. ಭಾಷೆ ಎನ್ನುವುದು ಭಾವನಾತ್ಮಕವಾಗಿ ತುಂಬಾ ಸಂವೇದನಾಶೀಲ ಸಂಗತಿ. ಭಾಷಾ ಅಸ್ಮಿತೆಗಳ ಮೇಲಿನ ದಾಳಿಯು ಸಮುದಾಯಗಳ ಅಸ್ಮಿತೆಯ ಮೇಲಿನ ದಾಳಿಯಾಗಿ, ಅಂತಿಮವಾಗಿ ಪ್ರತ್ಯೇಕತೆಯ ಭಾವನೆಗೆ ಇಂಬು ಕೊಡುತ್ತದೆ. ಇದಾಗಬಾರದು; ಇದಾಗದಂತೆ ನೋಡಿಕೊಳ್ಳುವುದು ನಮ್ಮನ್ನು ಆಳುವವರ ಜವಾಬ್ದಾರಿ. ನಮ್ಮನ್ನು ಆಳುವವರು ಈ ಜವಾಬ್ದಾರಿಯಿಂದ ವಿಮುಖರಾಗದಂತೆ ನೋಡಿಕೊಳ್ಳುವುದು ಪ್ರಜ್ಞಾವಂತ ಪ್ರಜೆಗಳಾದ ನಮ್ಮ ಜವಾಬ್ದಾರಿ.

ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

‘ಐಶ್ವರ್ಯ ರೈ’ ಹೋಲುವ 6 ಸುಂದರಿಯರು
ಪ್ರಪಂಚದಲ್ಲಿ ಒಬ್ಬರನ್ನು ಹೋಲುವ ಏಳು ವ್ಯಕ್ತಿಗಳು ಇರುತ್ತಾರೆ ಎಂದು ಹೇಳುವ ಮಾತನ್ನು ನೀವೆಲ್ಲರೂ ಕೇಳಿಯೇ ಇರುತ್ತೀರಿ. ಇದು ಖ್ಯಾತ ಸೆಲೆಬ್ರಿಟಿಗಳ ವಿಷಯದಲ್ಲೂ ಸಾಧ್ಯ ಆಗಬಹುದು ಅನ್ನಿಸಿದ್ದು ಈ ಸುಂದರಿಯರನ್ನು ನೋಡಿದಾಗ. ಬಾಲಿವುಡ್‌ನ ಅಪ್ರತಿಮ ನಟಿ, ಸೌಂದರ್ಯದ ಗಣಿ, 1994ರ ವಿಶ್ವ ಸುಂದರಿ, ಐಶ್ವರ್ಯಾ ರೈ ಬಚ್ಚನ್ ಅವರನ್ನೇ ಹೋಲುವ ಕೆಲವು ಚೆಲುವೆಯರ ಪರಿಚಯ ನಿಮಗಾಗಿ ಇಲ್ಲಿದೆ ನೋಡಿ.

1. ಆಮ್ನಾ ಇಮ್ರಾನ್

ಆಮ್ನಾ ಅವರು ಪಾಕಿಸ್ತಾನದ ಸೋಷಿಯಲ್ ಇನ್ ಫ್ಲುಯೆನ್ಸರ್ ಮತ್ತು ಬ್ಲಾಗರ್ ಆಗಿದ್ದಾರೆ. ಅವರು ತಮ್ಮ ಫೋಟೋಗಳನ್ನು ಇಂಟರ್ ನೆಟ್ ನಲ್ಲಿ ಪೋಸ್ಟ್ ಮಾಡಿ ರಾತ್ರೋರಾತ್ರಿ ಪ್ರಸಿದ್ಧರಾದವರು. ಅವರು ಕೇವಲ ತಮ್ಮ ದೇಶದಲ್ಲಿ ಅಷ್ಟೇ ಅಲ್ಲದೆ, ಭಾರತದಲ್ಲಿಯೂ ಗುರುತಿಸಲ್ಪಟ್ಟಿದ್ದಾರೆ. ಅದಕ್ಕೆ ಕಾರಣ ಐಶ್ವರ್ಯಾ ರೈ ಅವರನ್ನು ಹೋಲುವ ಅವರ ಮುಖಚಹರೆ. ವೈದ್ಯಕೀಯ ವೃತ್ತಿಯಲ್ಲಿ ಪದವಿ ಪಡೆಯಲು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಕ್ಕೆ ಹೋಗಿದ್ದ ಸಮಯದಲ್ಲಿ ಆಮ್ನಾ ತನ್ನ ಟಿಕ್ ಟಾಕ್ ವೀಡಿಯೊಗಳೊಂದಿಗೆ ಎಲ್ಲರ ಗಮನ ಸೆಳೆದರು. ಆಮ್ನಾ ಅವರು ತಾನು ಮಿಸ್ ವರ್ಲ್ಡ್ 1994 ಪ್ರಶಸ್ತಿ ಪಡೆದ ಐಶ್ವರ್ಯಾ ಅವರ ದೊಡ್ಡ ಅಭಿಮಾನಿ ಎಂದು ಒಪ್ಪಿಕೊಳ್ಳುತ್ತಾರೆ. ಅವರಿಗೆ ದೇವದಾಸ್, ಉಮ್ರಾವ್ ಜಾನ್, ಮೊಹಬ್ಬತೇನ್ ಮತ್ತು ಹಮ್ ದಿಲ್ ದೇ ಚುಕೆ ಸನಮ್ ಚಿತ್ರಗಳು ಅಚ್ಚುಮೆಚ್ಚಂತೆ.

2. ಸ್ನೇಹಾ ಉಳ್ಳಾಲ್

2005 ರಲ್ಲಿ ಸಲ್ಮಾನ್ ಖಾನ್ ಜೊತೆಗೆ ‘ಲಕ್ಕಿ: ನೋ ಟೈಮ್ ಫಾರ್ ಲವ್’ ಚಿತ್ರದಲ್ಲಿ ಕಾಣಿಸಿಕೊಂಡ ನಟಿ ಸ್ನೇಹಾ ಉಳ್ಳಾಲ್. ಸ್ನೇಹಾ ಅವರನ್ನು ಐಶ್ವರ್ಯಾ ಅವರ ಅತಿ ಹೆಚ್ಚು ಹೋಲಿಕೆ ಇರುವ ಚೆಲುವೆ ಅಂದರೆ ತಪ್ಪಿಲ್ಲ. ಈ ಹೋಲಿಕೆಯಿಂದಾಗಿ ಅವರ ಹೆಸರು ಬಾಲಿವುಡ್ ಉದ್ಯಮದಲ್ಲಿ ಹೆಚ್ಚು ಬೆಳೆಯಿತು. ಆಕೆಯ ಚೊಚ್ಚಲ ಚಿತ್ರದ ನಂತರ, ಅನೇಕ ಜನ ಅವರ ಕಾಲ್ ಶೀಟ್ ಗಾಗಿ ಬೆನ್ನು ಬಿದ್ದರು. ಆ ನಂತರ ಸ್ನೇಹಾ ಟಾಲಿವುಡ್‌ಗೆ ಹೋದರು. ‘ನೇನು ಮೀಕು ತೆಲುಸಾ…?, ಬೆಜುಬಾನ್ ಇಷ್ಕ್, ಅಲಾ ಮೊದಲೈಂದಿ ಮುಂತಾದ ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಈಗಲೂ ಆಕೆ ಐಶ್ವರ್ಯಾ ರೈಯೊಂದಿಗೆ ಇರುವ ಹೋಲಿಕೆಗಾಗಿಯೇ ಹೆಚ್ಚು ಪ್ರಸಿದ್ಧಿ.

3. ಮಹ್ಲಾಘಾ ಜಬೇರಿ

ಮಹ್ಲಾಘಾ ಇರಾನಿನ-ಅಮೇರಿಕನ್ ರೂಪದರ್ಶಿ. ಉಚ್ಚರಿಸಲು ಕಷ್ಟಕರವಾದ ಹೆಸರನ್ನು ಹೊಂದಿದ್ದರೂ ಆಕೆಯ ಹೆಸರು ಎತ್ತರಕ್ಕೆ ಏರಿದ್ದು ಐಶ್ವರ್ಯಾ ರೈ ಅವರಂತೆಯೇ ಇರುವ ಅವರ ಆಕರ್ಷಕ ಸೌಂದರ್ಯದಿಂದಾಗಿ. ಹದಿಹರೆಯದಿಂದಲೂ ಈಕೆ ಸಿನಿಮಾ ಇಂಡಸ್ಟ್ರಿಯಲ್ಲಿದ್ದವರು. ಇವರು ಮಾಡೆಲಿಂಗ್ ವೃತ್ತಿಯಲ್ಲಿದ್ದಾರೆ.

4. ಅಮುಜ್ ಅಮೃತ

ಇಂಟರ್ನೆಟ್ ಸೆನ್ಸೇಷನ್ ಆಗಿರುವ ‘ಅಮುಜ್ ಅಮೃತಾ’ ಐಶ್ವರ್ಯಾ ರೈ ಅವರ ಮತ್ತೊಂದು ಪ್ರತಿರೂಪ. ಅವರು ತಮಿಳು‌ಚಿತ್ರ ಮಣಿರತ್ನಂರ ‘ಇರುವರ್’ ಚಲನಚಿತ್ರದ ಐಶ್ವರ್ಯಾ ಅವರ ಲುಕ್ ಅನ್ನು ಕಾಪಿ ಮಾಡಿ ಸಾಕಷ್ಟು ಫೇಮಸ್ ಆದರು. ಅದರ ನಂತರ, ಅಮುಜ್ Instagram ಮತ್ತು Tik Tok ನಂತಹ ದೊಡ್ಡ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಹೆಸರು ಮಾಡಿದರು.

5. ಮಾನಸಿ ನಾಯ್ಕ್

ಈ ಪಟ್ಟಿಯಲ್ಲಿ ಅತ್ಯಂತ ಪ್ರಸಿದ್ಧ ವ್ಯಕ್ತಿ ಎಂದರೆ ಮರಾಠಿ ನಟಿ, ಮಾನಸಿ ನಾಯಕ್. ಇವರು 35 ವರ್ಷ ವಯಸ್ಸಿನವರು. ಮರಾಠಿ ಚಿತ್ರೋದ್ಯಮದ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಅವರ ಪ್ರಸಿದ್ಧ ಚಲನಚಿತ್ರಗಳೆಂದರೆ ‘ತೀನ್ ಬಾಯ್ಕಾ ಫಜಿತಿ ಐಕಾ, ‘ತುಕ್ಯಾ ತುಕ್ವಿಲಾ ನಾಗ್ಯಾ ನಾಚ್ವಿಲಾ, ಮರ್ಡರ್ ಮೇಸ್ತ್ರಿ, ಇತ್ಯಾದಿ. ಕಳೆದ ವರ್ಷದ ಜನವರಿಯಲ್ಲಿ, ಮಾನಸಿ ಪ್ರದೀಪ್ ಖರೇರಾ ಎಂಬ ಬಾಕ್ಸರ್‌ ಜೊತೆ ಮದುವೆ ಆದರು. ಈಕೆ ನೃತ್ಯಗಾರ್ತಿಯೂ ಹೌದು. ಐಶ್ವರ್ಯಾ ರೈ ಅವರ ಲುಕ್ ಅನ್ನು ನಕಲು ಮಾಡಿ ಅಂತರ್ಜಾಲದಲ್ಲಿ ಈಕೆ ಬೆಳೆದರು.

6. ಆಶಿತಾ ರಾಥೋಡ್

ಸಾಮಾಜಿಕ ಮಾಧ್ಯಮ ಬಳಕೆದಾರರು Instagram ನಲ್ಲಿ ಈಕೆಯ ಪ್ರೊಫೈಲ್ ಅನ್ನು ಗುರುತಿಸಬಹುದು. ಆಶಿತಾ ರಾಥೋಡ್ ಅವರು ಐಶ್ವರ್ಯಾ ರೈ ಬಚ್ಚನ್ ಅವರಂತೆ ಕಾಣುತ್ತಾರೆ ಎಂಬ ಕಾರಣಕ್ಕೆ ಈಕೆ ಇತ್ತೀಚಿನ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾರೆ. ಇಂದೋರ್ ಮೂಲದ ಆಶಿತಾ ಪ್ರಸ್ತುತ 34 ಸಾವಿರಕ್ಕೂ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋಯರ್ಸ್ ಹೊಂದಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ದೇಶ ವಿಭಜನೆಯಾಗಿದ್ದು ಹೇಗೆ? ಮತ್ತು ದೇಶ ವಿಭಜನೆಯಾಗಲೇ ಬೇಕು ಎಂದವರು ಯಾರು ? ಬನ್ನಿ ಸ್ನೇಹಿತರೆ ದೇಶ ವಿಭಜನೆಯಾದ ಹಿಂದಿನ ಸತ್ಯವನ್ನು ತಿಳಿಯೋಣ

ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಲು ಕಾರ್ಮಿಕ ಶಕ್ತಿ ದೊಡ್ಡದು: ಪ್ರಧಾನಿ ಮೋದಿ
ನವದೆಹಲಿ: ಭಾರತವನ್ನು ಅಭಿವೃದ್ದಿ ಹೊಂದಿದ ರಾಷ್ಟ್ರವಾಗಿ ನಿರ್ಮಿಸಲು ಕಾರ್ಮಿಕ ಶಕ್ತಿಯು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಪ್ರಧಾನ ಮಂತ್ರಿ ಶ್ರಮ-ಯೋಗಿ ಮನ್‌ಧನ್‌ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಯೋಜನೆಗಳಂತಹ ಅನೇಕ ಪ್ರಯತ್ನಗಳು ನೀಡಿದ್ದೇವೆ.

ಕಾರ್ಮಿಕರಿಗೆ ಭದ್ರತಾ ರಕ್ಷಣೆ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಭಾರತದ ಕಾರ್ಮಿಕ ಶಕ್ತಿಯು ದೊಡ್ಡ ಪಾತ್ರವನ್ನು ವಹಿಸುತ್ತದೆ. ಈ ಚಿಂತನೆಯೊಂದಿಗೆ, ದೇಶವು ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕೋಟಿಗಟ್ಟಲೆ ಕಾರ್ಮಿಕರಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವನ್ನು ಮಾಡುವುದೇ ದೊಡ್ಡ ಸಂಕಲ್ಪ ಎಂದು ಹೇಳುವ ಮೂಲಕ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿದ ʼಪಂಚ ಪ್ರಾಣʼ ತೆಗೆದುಕೊಳ್ಳುವಂತೆ ಜನರನ್ನು ಪ್ರಧಾನಿ ಮೋದಿಯವರು ಒತ್ತಾಯಿಸಿದರು.

ಪ್ರವಾಹ ದುರಂತ-ನಲುಗಿದ ಸುಳ್ಯ
ಸುಳ್ಯ: ಕಳೆದ ಒಂದು ವಾರದಲ್ಲಿ ಸುಳ್ಯದ ಕಲ್ಮಕಾರು, ಬಾಳುಗೋಡು, ಕೊಲ್ಲಮೊಗ್ರ, ಹರಿಹರ, ಸುಬ್ರಹ್ಮಣ್ಯ ಭಾಗದಲ್ಲಿ ದೊಡ್ಡ ಪ್ರಮಾಣದ ಗುಡ್ಡ ಕುಸಿತ, ನೆರೆ ಇತ್ಯಾದಿ ಘಟನೆಗಳು ಸಂಭವಿಸಿದೆ. ಭೂ ಕುಸಿತದಿಂದ ಮರಗಳು ಉರುಳಿ ಸೇತುವೆ, ಕಿಂಡಿ ಅಣೆಕಟ್ಟೆಗಳಿಗೆ ಅಡ್ಡಲಾಗಿ ನಿಂತು ನೀರ ಹರಿವಿಗೆ ತಡೆಯಾದ ಕಾರಣ ನದಿಗಳು ತಮ್ಮ ಹರಿವಿನ ದಾರಿಯನ್ನೇ ಬದಲಾಯಿಸಿದ ಪ್ರಕರಣವೂ ನಡೆದಿದೆ. ಇದರ ಪರಿಣಾಮ ಮನೆಗಳು ಕುಸಿದಿವೆ. ಕುಸಿದ ಮನೆಯಡಿ ಸಿಲುಕಿ ಎರಡು ಮಕ್ಕಳು ಅಸು ನೀಗಿದ ದಾರುಣ ಘಟನೆಯೂ ಕಣ್ಣೆದುರಿಗಿದೆ. 2018 ರಲ್ಲಿ ಕೊಡಗಿನ ಮದೆನಾಡಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಮಾದರಿಯಲ್ಲಿ ಇದು ಸಂಭವಿಸಿದೆ.

ಈ ಘಟನೆಗೆ ಅನೇಕ ಕಾರಣಗಳನ್ನು ಮುಂದಿಡಲಾಗುತ್ತಿದೆ. ಅದರಲ್ಲಿ ಒಂದು ಮುಖ್ಯ ಕಾರಣವೆಂದರೆ ಅರಣ್ಯ, ಬೆಟ್ಟ ಪ್ರದೇಶಗಳಲ್ಲಿ  ಹೆಚ್ಚುತ್ತಿರುವ ಮಾನವ ಹಸ್ತಕ್ಷೇಪ. ಈ ಬಗ್ಗೆ  ಪಶ್ಚಿಮ ಘಟ್ಟದ ನಿವಾಸಿಯಾಗಿರುವ  ಲೇಖಕ, ರಂಗಕರ್ಮಿ ʼಪ್ರಸಾದ ರಕ್ಷಿದಿʼಯವರನ್ನು ಕೇಳಿದಾಗ “ವಿಜ್ಞಾನಿಗಳು ಹೇಳಿರುವ ಪ್ರಕಾರ, ಈ ಭಾಗಗಳು ಭೂಕಂಪ ವಲಯದಲ್ಲಿ ಬರುತ್ತವೆ. ಸುಮಾರು ಒಂದು ಶತಮಾನದ ಹಿಂದೆ ಸುಮಾರಾಗಿ ಇದೇ ರೀತಿ ಭೂಕಂಪ ಮತ್ತು ಅದನ್ನು  ಹಿಂಬಾಲಿಸಿದ ಮಳೆ ಮತ್ತು ಭೂಕುಸಿತವನ್ನು ಕೊಡಗು ಕಂಡಿತ್ತು. ಅಂದರೆ, 1900 ರಿಂದ 1910 ರ ದಶಕದಲ್ಲಿ ಅಂತ ಹಿರಿಯರು ಹೇಳುತ್ತಾರೆ. 1983 -84 ರಲ್ಲಿ ಸುಳ್ಯ ದ ಬೇಂಗಮಲೆಯ ಗುಡ್ಡದಲ್ಲಿ ದೊಡ್ಡ ಪ್ರಮಾಣದ ಭೂಕುಸಿತ
(land slide) ಉಂಟಾಗಿತ್ತು. ಇಂತಹ ವಲಯದಲ್ಲಿ. ರಸ್ತೆ, ಅಣೆಕಟ್ಟು, ಅಥವಾ ಯಾವುದೇ ಅಭಿವೃದ್ಧಿ ಯೋಜನೆ ಮಾಡುವಾಗ ಹತ್ತಾರು ಸಲ ಯೋಚಿಸಬೇಕು ಮತ್ತು ಅತ್ಯಂತ ಯೋಜಿತವಾಗಿ ಮತ್ತು ಕಡಿಮೆ ಪ್ರಮಾಣದಲ್ಲಿ ಮಾಡಬೇಕು. ಅದನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ನಿರಂತರವಾಗಿ ಮಾಡುತ್ತಿರುವ ಭೂ ಅತ್ಯಾಚಾರದ ಫಲವನ್ನು ನಾವೀಗ ಅನುಭವಿಸುತ್ತಿರುವುದು. ಈಗ ಕೆಲವು ದಿನದ ಹಿಂದೆ ಸಣ್ಣ ಪ್ರಮಾಣದ ಭೂಕಂಪ, ಕೊಡಗು ಮತ್ತು ಸುಳ್ಯ ವಲಯದಲ್ಲಿ ಆಗಿದೆ ಎಂಬುದನ್ನು ಗಮನಿಸಿ” ಎಂದು ಹೇಳುತ್ತಾರೆ.

ಹಿಂದೆ ನಮ್ಮಲ್ಲಿ ಬೃಹತ್ ಯಂತ್ರಗಳಿರಲಿಲ್ಲ. ಕೆಲಸಗಳಿಗೆ ಮಾನವ ಶ‍್ರಮವನ್ನೇ ಅವಲಂಬಿಸಬೇಕಾಗಿತ್ತು. ಅದಕ್ಕೊಂದು ಮಿತಿಯೂ ಇತ್ತು. ಹಾಗಾಗಿ ಗುಡ್ಡ ಬೆಟ್ಟಗಳನ್ನು ಕತ್ತರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಬೆಟ್ಟದ ಏರು ತಗ್ಗುಗಳನ್ನು ಬಳಸಿಕೊಂಡೇ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಇದರಿಂದ ಪ್ರಕೃತಿಗೆ ಹಾನಿಯಿರಲಿಲ್ಲ. ಆದರೆ ಈಗ ನಾವು ಯಂತ್ರಯುಗದಲ್ಲಿ ಬದುಕುತ್ತಿದ್ದೇವೆ. ಪ್ರತೀ ಊರುಗಳಲ್ಲಿ ಮಣ್ಣು ಅಗೆಯುವ ಬೃಹತ್ ಜೆಸಿಬಿ ಯಂತ್ರಗಳು ದೊಡ್ಡ ಸಂಖ್ಯೆಯಲ್ಲಿವೆ. ಜನರ ಬಳಿ ಹಣವೂ ಇದೆ. ಮಿಲಿಯಗಟ್ಟಲೆ ವರ್ಷ ಹಿಂದೆ ನಿರ್ಮಾಣವಾದ ಬೆಟ್ಟಗಳನ್ನು ಈ ಯಂತ್ರಗಳು ಗಂಟೆಗಳಲ್ಲಿ ಕತ್ತರಿಸಿ ನೆಲ ಸಮ ಮಾಡುತ್ತಿವೆ. ಅದರ ಪರಿಣಾಮವನ್ನು ನಾವೀಗ ನೋಡುತ್ತಿರುವುದು ಎಂದೂ ಜನರು ಮಾತಾಡಿಕೊಳ್ಳುತ್ತಿದ್ದಾರೆ.

ನಿನ್ನೆ ಅಧಿಕಾರಿಗಳು ನೆರೆ ಸಂತ್ರಸ್ತರನ್ನು ಭೇಟಿಯಾಗಿ ಪರಿಹಾರದ ಭರವಸೆಯನ್ನು ನೀಡಿದ್ದಾರೆ. ಆದರೆ ಅಭಿವೃದ್ಧಿ ವಿಷಯದಲ್ಲಿ ಶಾಪಗ್ರಸ್ತವಾಗಿರುವ ಸುಳ್ಯದಂತಹ ಗ್ರಾಮೀಣ ಪ್ರದೇಶವನ್ನು ಈ ವರೆಗಿನ ಯಾವ ಸರಕಾರಗಳೂ ಗಂಭೀರವಾಗಿ ಪರಿಗಣಿಸಿಲ್ಲವಾದ್ದರಿಂದ  ಸಂತ್ರಸ್ತರು ಮತ್ತೆ ಬದುಕು ಕಟ್ಟಿಕೊಳ್ಳುವುದಕ್ಕೆ ಇನ್ನೆಷ್ಟು ವರ್ಷ ಬೇಕಾದೀತು ಎನ್ನುವುದು ಯಕ್ಷ ಪ್ರಶ್ನೆ.

ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಎಎಪಿಯಿಂದ ಪುಸ್ತಕ ಬಿಡುಗಡೆ
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಸರ್ಕಾರದ ಸಾಲುಸಾಲು ವೈಫಲ್ಯಗಳನ್ನು ಪುಸ್ತಕದ ರೂಪದಲ್ಲಿ ಆಮ್‌ ಆದ್ಮಿ ಪಾರ್ಟಿ ಬಿಡುಗಡೆ ಮಾಡಿತು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ʻಬಿಜೆಪಿಯ ಬೊಗಳೆ ಆಡಳಿತʼ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, “ಜನರ ಆಶೋತ್ತರಗಳನ್ನು ಈಡೇರಿಸುವುದರಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ 40% ಕಮಿಷನ್‌ ದಂಧೆಯಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ವೈಫಲ್ಯಗಳನ್ನು ಮರೆಮಾಚಲು ಹಾಗೂ ರಾಜಕೀಯ ಲಾಭ ಪಡೆಯಲು ಬಿಜೆಪಿಯು ಕೋಮುದ್ವೇಷ ಹರಡುತ್ತಿದೆ. ಬಿಜೆಪಿಯ ದುರಾಡಳಿತದಿಂದಾಗಿ ಜನಸಾಮಾನ್ಯರ ನೆಮ್ಮದಿ ಹಾಳಾಗಿದೆ” ಎಂದು ಹೇಳಿದರು.

“ಪಠ್ಯಪುಸ್ತಕ ಪರಿಷ್ಕರಣೆ ವಿವಾದ, ಕೋಮುದ್ವೇಷ, ಪಿಎಸ್‌ಐ ಹಗರಣ, ಗುತ್ತಿಗೆ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಮುಂತಾದವುಗಳೇ ಸರ್ಕಾರದ ಸಾಧನೆಗಳು. ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟ ಸಭೆಯಲ್ಲೇ ಲೋಕಾಯುಕ್ತ ಸಂಸ್ಥೆಯನ್ನು ಮರಳಿ ಬಲಪಡಿಸುವುದಕ್ಕೆ ಅನುಮೋದನೆ ನೀಡುವುದಾಗಿ ಬಿಜೆಪಿಯು 2018ರ ಚುನಾವಣೆಯ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿತ್ತು. ಆದರೆ ಬಿಜೆಪಿಗೆ ಅಧಿಕಾರ ಸಿಕ್ಕಿ ಮೂರು ವರ್ಷಗಳಾದರೂ ಇನ್ನೂ ಲೋಕಾಯುಕ್ತ ಸಂಸ್ಥೆಯು ಹಲ್ಲು ಕಿತ್ತ ಹಾವಿನ ಸ್ಥಿತಿಯಲ್ಲಿದೆ. ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಲು ಸಿದ್ಧವೆಂದು ಬಿಜೆಪಿ ನಾಯಕರು ಕಳೆದ ಮೂರು ವರ್ಷಗಳಿಂದ ಬೊಗಳೆ ಬಿಡುತ್ತಿದ್ದಾರೆಯೇ ಹೊರತು ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, “ಬಿಜೆಪಿ ಆಡಳಿತದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಸ್ತೆ ಗುಂಡಿಗಳು, ಕಸದ ರಾಶಿ, ಮನೆಗಳಿಗೆ ನೀರು ನುಗ್ಗುವುದು, ರಸ್ತೆಗಳು ನದಿಗಳಂತಾಗುವುದು ಸಾಮಾನ್ಯವಾಗಿದೆ. ರಾಜಧಾನಿ ಬೆಂಗಳೂರಿನಲ್ಲೇ ಹಲವು ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸರ್ಕಾರಿ ಶಾಲೆಗಳು, ಸರ್ಕಾರಿ ಆರೋಗ್ಯ ಕೇಂದ್ರಗಳು ಮೂಲ ಸೌಕರ್ಯಗಳಿಲ್ಲದೇ ಶೋಚನೀಯ ಸ್ಥಿತಿ ತಲುಪಿವೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಹಾಗೂ ಮತ್ತಿತರ ನಾಯಕರ ಭಾಗವಹಿಸಿದ್ದರು.

ರಾಜ್ಯದ 19 ಜಿಲ್ಲೆಗಳಲ್ಲಿ Yellow ಅಲರ್ಟ್‌..!
ಬೆಂಗಳೂರು: ರಾಜ್ಯದಲ್ಲಿ ಇಂದು ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದ್ದು 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿಆಗಸ್ಟ್‌ 2ರಂದು ಯೆಲ್ಲೊ ಹಾಗೂ ನಂತರ ನಾಲ್ಕು ದಿನಗಳಲ್ಲಿಆರೆಂಜ್‌ ಅಲರ್ಟ್‌ ಘೋಷಿಸಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಹಾಗಾಗಿ ಆ.2ರಿಂದ ಎರಡು ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡದಂತೆ ಯಾತ್ರಾರ್ಥಿಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ.

ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40-50 ಕಿ.ಮೀ.ವೇಗದಲ್ಲಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಹಾಗೆ ಉಳಿದ ಜಿಲ್ಲೆಗಳಾದ ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಮತ್ತು ವಿಜಯಪುರ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೊಅಲರ್ಟ್‌ ನೀಡಲಾಗಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ..!
ಬೆಂಗಳೂರು : ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)ಸದಸ್ಯರು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು. ಗೃಹ ಸಚಿವರು ʼರಾಜೀನಾಮೆʼ ನೀಡಬೇಕು ಎಂದು ಆಗ್ರಹಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಜಯಮಹಲ್‌ನಲ್ಲಿರುವ ಗೃಹ ಸಚಿವರ ಮನೆಗೆ ಬಂದಿದ್ದ ಕಾರ್ಯಕರ್ತರು, ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ಆರಂಭಿಸಿದ್ದು, ಕೆಲ ಹೊತ್ತಿನ ನಂತರ ಮನೆಯ ಗೇಟನ್ನ ದಾಟಿ ಮನೆಯ ಬಾಗಿಲು ಬಳಿ ಕೂತು ಪ್ರತಿಭಟನೆ ನಡೆಸಿದ್ದಾರೆ.  ‘ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ನಂತರ ಪ್ರತಿಭಟನೆ ತೀವ್ರಗೊಂಡಿದ್ದು, ಸಚಿವರ ಮನೆಯ ಮುಂದಿನ ಪೀಠೋಪಕರಣಗಳನ್ನ ನಾಶಮಾಡಲಾರಂಭಿಸಿದರು. ನಂತರ ಪರಿಸ್ಥಿತಿಯನ್ನ ಸುಧಾರಿಸಲು ಪೋಲಿಸರು ಕಾರ್ಯಕರ್ತರನ್ನು ದ್ವಾರಬಾಗಿಲಿನಿಂದ ಹೊರಹಾಕಲು ಪ್ರಯತ್ನಿಸಿದರು. ಈ ವೇಳೆ ಪೋಲಿಸ್‌ ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ಶುರುವಾಗಿದೆ. ನಂತರ ಪರಿಸ್ಥಿತಿ ಕೈಗೆಟುಕಾದ ಕಾರಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. 40 ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಠಾಣೆಗೆ ಕರೆದೊಯ್ಯಲಾಗಿದೆ. ನಂತರ ಗೃಹ ಸಚಿವರ ಮನೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ

ಸಿಇಟಿ ಫಲಿತಾಂಶ ಪ್ರಕಟ: ಈ ಬಾರಿಯೂ ವಿಧ್ಯಾರ್ಥಿನಿಯರ ಮೇಲುಗೈ￼
ಬೆಂಗಳೂರು : ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವು ಇಂದು(ಶನಿವಾರ) ಪ್ರಕಟಗೊಂಡಿದೆ.

ಎಂಜಿನಿಯರಿಂಗ್‌, ಕೃಷಿ, ಪಶುಸಂಗೋಪನೆ, ಆಯುಷ್‌, ಯುನಾನಿ, ಫಾರ್ಮಸಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕಳೆದ ಜೂನ್‌ 16 ಮತ್ತು 17 ರಂದು ಸಿಇಟಿ ಪರೀಕ್ಷೆಯನ್ನು ರಾಜ್ಯದ ಒಟ್ಟು 486 ಕೇಂದ್ರಗಳಲ್ಲಿ ನಡೆಸಲಾಗಿತ್ತು.ಈ ಪರೀಕ್ಷೆಯಲ್ಲಿ ಒಟ್ಟು 2,10,829 ವಿದ್ಯಾರ್ಥಿಗಳು ಹಾಜರಾಗಿದ್ದು ಇಂದು ಫಲಿತಾಂಶ ಪ್ರಕಟಣೆಗೊಂಡಿದೆ.

ಒಟ್ಟು 83 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 88 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ಈ ಭಾರಿ ಸಿಇಟಿ ಫಲಿತಾಂಶದಲ್ಲಿ ತೇರ್ಗಡೆ ಹೊಂದಿದ್ದು. ಈ ಬಾರಿಯು ವಿಧ್ಯಾರ್ಥಿನಿಯರೆ ಮೇಲುಗೈ ಸಾಧಿಸಿದ್ದಾರೆ.

ಇಂಜಿನಿಯರಿಂಗ್ ಕೋರ್ಸ್​ಗೆ 1,71,656 ರ‍್ಯಾಂಕ್​​​, ಕೃಷಿ ಕೋರ್ಸ್​ಗೆ 1,39,968 ರ‍್ಯಾಂಕ್, ಪಶುಸಂಗೋಪನೆ 1,42,2820 ಯೋಗ ಮತ್ತು ನ್ಯಾಚುರೋಪತಿ 1,42,750 ರ‍್ಯಾಂಕ್, ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ‍್ಯಾಂಕ್ ಬಂದಿದೆ.

ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ www.karresults.nic.in ಹಾಗೂ www.karresults.nic.in/ ವೆಬ್‌ಸೈಟ್‌ನಲ್ಲಿ ನೋಡಬಹುದು.

ಸರಣಿ ಕೊಲೆಗಳ ವಿಚಾರವಾಗಿ ಸರ್ಕಾರದ ವಿರುದ್ದ ಹೆಚ್‌ಡಿಕೆ ‘ಗರಂ’
ಬೆಂಗಳೂರು: ಗುರುವಾರ(28.ಜುಲೈ) ರಾತ್ರಿ  ಮಂಗಳೂರು ಹೊರ ವಲಯದ ಸುರತ್ಕಲ್‌ ನಲ್ಲಿ ನಡೆದ ಮಹಮ್ಮದ್ ಫಾಝಿಲ್ ಕೊಲೆ ಪ್ರಕರಣವನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರ್‌ ಸ್ವಾಮಿ ಟ್ವಿಟರ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ @BSBommai ಅವರು ಮಂಗಳೂರಿನಲ್ಲಿ ಇದ್ದಾಗಲೇ 3ನೇ ಕೊಲೆ ಆಗಿದೆ. ಅಷ್ಟರಲ್ಲಿ ಸಿಎಂ ಸಾಹೇಬರು ಜಿಲ್ಲೆಯಿಂದ ಕಾಲ್ಕಿತ್ತಿದ್ದಾರೆ. ಅಲ್ಲೇ ಉಳಿದು ಪರಿಸ್ಥಿತಿ ಅವಲೋಕಿಸಿ, ಕೊಲೆಗೆಡುಕರನ್ನು ಹಡೆಮುರಿ ಕಟ್ಟುವಂತೆ ಕಟ್ಟಾಜ್ಞೆ ಮಾಡುವ ಧೈರ್ಯವನ್ನು ತೋರಲಿಲ್ಲ. ಅವರ ಅಧೈರ್ಯಕ್ಕೆ ಕಾರಣವೇನು? ಕಾಣದ ಕೈಗಳ ಒತ್ತಡವೇನಾದರೂ ಉಂಟಾ? 2/7
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 29, 2022

ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕೆ, ಸೃಜನಶೀಲತೆ, ಉದ್ಯಮಶೀಲತೆ ತವರು ಕರಾವಳಿ ಈಗ ಕೊಲೆಗಳ ಆಡಂಬೋಲವಾಗಿದೆ. 10 ದಿನಗಳಲ್ಲಿ 3 ಕೊಲೆ! ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಆಂತರಿಕ ಭದ್ರತೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಇದೇ ಸಾಕ್ಷಿ ಎಂದು ಅವರು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಮಂಗಳೂರಿನಲ್ಲಿ ಇದ್ದಾಗಲೇ 3ನೇ ಕೊಲೆ ಆಗಿದೆ. ಅಷ್ಟರಲ್ಲಿ ಸಿಎಂ ಸಾಹೇಬರು ಜಿಲ್ಲೆಯಿಂದ ಕಾಲ್ಕಿತ್ತಿದ್ದಾರೆ. ಅಲ್ಲೇ ಉಳಿದು ಪರಿಸ್ಥಿತಿ ಅವಲೋಕಿಸಿ, ಕೊಲೆಗೆಡುಕರನ್ನು ಹಡೆಮುರಿ ಕಟ್ಟುವಂತೆ ಕಟ್ಟಾಜ್ಞೆ ಮಾಡುವ ಧೈರ್ಯವನ್ನು ತೋರಲಿಲ್ಲ. ಅವರ ಅಧೈರ್ಯಕ್ಕೆ ಕಾರಣವೇನು? ಕಾಣದ ಕೈಗಳ ಒತ್ತಡವೇನಾದರೂ ಉಂಟಾ? ಕರಾವಳಿ ಶಿಕ್ಷಣದ ಕಾಶಿ, ದೇಗುಲಗಳ ಪುಣ್ಯನೆಲ, ಪ್ರಾಕೃತಿಕ ಸೌಂದರ್ಯದ ಬೀಡು, ಪ್ರವಾಸೋದ್ಯಮದಲ್ಲಿ ಕರ್ನಾಟಕದ ಕೀರ್ತಿಕಳಸ. ಇಂಥ ನೆಲದಲ್ಲಿ ದಿನಕ್ಕೊಂದು ಕೊಲೆ!! ಈ ಕೊಲೆಗಳನ್ನು ಹತ್ತಿಕ್ಕುವ ಬದಲು ಬೊಮ್ಮಾಯಿ ಅವರು ʼಬುಲ್ಡೋಜರ್ʼ ಬಗ್ಗೆ ಮಾತನಾಡುತ್ತಿದ್ದಾರೆ. ಕರಾವಳಿ & ಕರ್ನಾಟಕವನ್ನು ʼಜಂಗಲ್ ರಾಜ್ʼ ಮಾಡುವ ಹುನ್ನಾರವಷ್ಟೇ ಇದು. ಮನೆ, ಮನಗಳಲ್ಲಿ ಮಾತ್ರ ಇರಬೇಕಿದ್ದ ಧರ್ಮವನ್ನು ʼವ್ಯಸನʼವನ್ನಾಗಿಸಿ ಕೈಗೆ ದೊಣ್ಣೆ, ಶೂಲ ಕೊಟ್ಟು ಯುವಕರ ನಿಷ್ಕಲ್ಮಶ ಮುಗ್ಧಮನಸ್ಸಿಗೆ ʼಕೊಮುಪ್ರಾಷನʼ ಮಾಡಿದ ದುಷ್ಪರಿಣಾಮವೇ ಸರಣಿ ಕೊಲೆಗಳು. ಧರ್ಮನಿರಪೇಕ್ಷತೆ ತತ್ತ್ವವನ್ನು ನಿರ್ನಾಮ ಮಾಡಿದ್ದೇ ಇದಕ್ಕೆಲ್ಲ ಮೂಲ ಕಾರಣ ಎಂದು ಅವರು ಹೇಳಿದ್ದಾರೆ.

ಮಸೂದ್, ಪ್ರವೀಣ್ ನೆಟ್ಟಾರು; ಈಗ ಫಾಸಿಲ್. ಇನ್ನೆಷ್ಟು ಕೊಲೆಗಳು ನಡೆದರೆ ಸರಕಾರಕ್ಕೆ ತೃಪ್ತಿ? ಸರಣಿ ಕೊಲೆಗಳಿಂದ ಕರಾವಳಿಗೆ ಮಾತ್ರವಲ್ಲ, ಕರ್ನಾಟಕದ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ. ಈ ಅರಾಜಕತೆಯಿಂದ ಇಡೀ ಕರಾವಳಿಯ ಆರ್ಥಿಕತೆಯೇ ಬುಡಮೇಲಾಗುತ್ತಿದೆ. ಆದರೆ,  ಕರ್ನಾಟಕ ಬಿಜೆಪಿ ಸರಕಾರ ಸಾವಿನಲ್ಲೂ ʼಕೊಲೆಗೆಡುಕ ರಾಜಕಾರಣʼ ಮಾಡುತ್ತಿದೆ.ಕೊಲೆಗಳ ಹಿಂದಿನ ಕಾರಣ ಬೇಧಿಸಿ ಕೊಲೆಗೆಡುಕರನ್ನು ಹತ್ತಿಕ್ಕುವ ಕೆಲಸ ಮಾಡಬೇಕಿದ್ದ ಬಿಜೆಪಿ ಸರಕಾರ, ಪ್ರತೀ ಕೊಲೆಗೂ ತಾನೇ ಮುಂದೆ ನಿಂತು ಹೊಸಹೊಸ ಟ್ವಿಸ್ಟ್ ನೀಡುತ್ತಿದೆ. ಸರಕಾರದ ಕೆಲಸ ಬಿಗಿ ಆಡಳಿತ ನಡೆಸುವುದೇ ಹೊರತು ಬೀದಿಯಲ್ಲಿ ನಿಂತು ಗಂಟಲು ಹರಿದುಕೊಳ್ಳುವುದಲ್ಲ ಎಂದು ಅವರು ಟೀಕಿಸಿದ್ದಾರೆ.

ಕರಾವಳಿಯಲ್ಲಿ ನೆಮ್ಮದಿ ನೆಲಸಬೇಕಾದರೆ, ಪೊಲೀಸ್ ವ್ಯವಸ್ಥೆಗೆ ಶಕ್ತಿ ತುಂಬಬೇಕು. ಕಾಣದ ಕೈಗಳ ಸಂಕೋಲೆಯಿಂದ ಇಲಾಖೆಯನ್ನು ಮುಕ್ತಗೊಳಿಸಿ ಅಧಿಕಾರಿಗಳು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸುವ ವಾತಾವರಣ ನಿರ್ಮಿಸಬೇಕು. ಇಲ್ಲವಾದರೆ, ಡಬಲ್ ಎಂಜಿನ್ ಸರಕಾರಕ್ಕೆ ಜನರೇ ಬೆಂಕಿ ಹಾಕಿಯಾರು. ಎಂದು ಸರ್ಕಾರದ ವಿರುದ್ದ ಹೆಚ್‌.ಡಿ.ಕೆ ಕಿಡಿಕಾರುವುದರ ಜೊತೆಗೆ ಎಚ್ಚರಿಕೆ ನೀಡಿದ್ದಾರೆ.

ʼಜನೋತ್ಸವʼ ರದ್ದು : ಸಿ ಎಂ ಬೊಮ್ಮಾಯಿ
ಬೆಂಗಳೂರು: ಆರ್.ಟಿ ನಗರದ ಖಾಸಗಿ ನಿವಾಸದಲ್ಲಿ ಮಧ್ಯರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಕಾರ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜುಲೈ 28ರಂದು  ಆಯೋಜಿಸಿದ್ದ ʼಜನೋತ್ಸವʼ ಸಾಧನಾ ಸಮಾವೇಶ  ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಾಳೆಯದಿನ (ಗುರುವಾರ) ಪಕ್ಷದ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಹಾಗೂ ಸರಕಾರದ ವತಿಯಿಂದ ವಿಧಾನಸೌಧದಲ್ಲಿ ನಿಗದಿಯಾಗಿದ್ದ ಜನೋತ್ಸವ ಸಾಧನಾ ಸಮಾವೇಶ ಕಾರ್ಯಕ್ರಮ ರದ್ದುಗೊಳಿಸಲಾಗಿದ್ದು, ಪ್ರವೀಣ್ ಹತ್ಯೆಯ ಕಾರಣ ತೀವ್ರ ನೋವಾಗಿದೆ ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇನ್ನುಈ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವವಿಸುವವರಿದ್ದರು. ಆದರೆ ಈ ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಜೆ.ಪಿ.ನಡ್ಡಾ ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಸಚಿವ ಅರುಣ್‌ ಸಿಂಗ್‌ ಕೂಡಾ ಕರ್ನಾಟಕ ರಾಜ್ಯ ಭೇಟಿ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.