story – Peepal Media

ಗುಳೇ ಎದ್ದ ಹನುಮ (ಚಂದ್ರಪ್ರಭ ಕಠಾರಿಯವರ ಕಥೆ)
(ರವಿವಾರ 24.03.2024ರಂದು ಬೆಳಗ್ಗೆ 10.30ಕ್ಕೆ ಚಾಮರಾಜಪೇಟೆಯ ಕಸಾಪ ಭವನದಲ್ಲಿ ಹಿರಿಯ ಕಥೆಗಾರ ಚಂದ್ರಪ್ರಭ ಕಠಾರಿಯವರ ʼನಾಲಿಗೆ, ನೆತ್ತರು ಮತ್ತು ಬುದ್ಧʼ ಎಂಬ ಕಥಾಸಂಕಲನ ಬಿಡುಗಡೆಗೊಳ್ಳುತ್ತಿದೆ. ಆ ಕಥಾ ಸಂಕಲನದ ಆಯ್ದ ಕಥೆ ಇಲ್ಲಿ ನಿಮ್ಮ ಓದಿಗಾಗಿ… ಈ ಕಥೆಯು ಕೊರಾನಾ ಕಾಲಘಟ್ಟದಲ್ಲಿ ಗುಳೆಹೊರಟ ಕಾರ್ಮಿಕರ ಭವಣೆಯ ಬದುಕನ್ನು ನಿರ್ಲಿಪ್ತವಾಗಿ ನಿರೂಪಿಸುತ್ತಾ ಹೋಗುತ್ತದೆ.)

ಕತೆ ಬರೆದು ಮುಗಿಸಿದ ರಾಮಣ್ಣನಿಗೆ ಎದೆಭಾರ ಕಮ್ಮಿಯಾದಂತಾಯಿತು.

ರಿಮೋಟನ್ನು ಯಾಂತ್ರಿಕವಾಗಿ ಕೈಗೆತ್ತಿಕೊಂಡವನು ಮತ್ತೆ ಅದನ್ನು ಕೆಳಗಿಟ್ಟು, “ಕೊರೊನಾ ಮಹಾಮಾರಿ ಹಾವಳಿ: ಕೊರೊನಾ ರುದ್ರ ನರ್ತನ: ಕೊರೊನಾ ಸಾವಿನ ಕೇಕೆ: ಕೊರೊನಾ ಮರಣಮೃದಂಗ” ಎಂದು ಆರ್ಭಟಿಸುವ, ಬರೀ ಸಾವಿನ ಸಮಾಚಾರವನ್ನೇ ಉತ್ಪ್ರೇಕ್ಷಿಸಿ ಪ್ರಸಾರ ಮಾಡುತ್ತ ಭಯವನ್ನು ಹುಟ್ಟು ಹಾಕುವ ಟೀವಿಯ ಸುದ್ದಿಯನ್ನು ಇನ್ಮುಂದೆ ನೋಡಬಾರದೆಂದು ನಿರ್ಧಾರ ಮಾಡಿದ. ಹೊಟ್ಟೆ ಚುರುಗುಟ್ಟುತ್ತಿದ್ದು ಅಡುಗೆಮನೆಯಲ್ಲಿ ಮಧ್ಯಾಹ್ನ ಮಾಡಿದ್ದ ಅನ್ನ, ಸ್ವಲ್ಪ ಹುಳಿಗೊಜ್ಜು ಮಿಕ್ಕಿತ್ತು. ಮೊಸರು ಖಾಲಿಯಾಗಿ ತರೋಣವೆಂದರೆ ಆಲಸ್ಯ ಕಾಡಿ, ಅಲ್ಲದೆ ಇಷ್ಟೊತ್ತಲ್ಲಿ ಕಿಟ್ಟಪ್ಪನ ಅಂಗಡಿ ತೆರೆದಿರುತ್ತದೊ ಇಲ್ಲವೋ ಎಂದುಕೊಂಡು ಅನ್ನಕ್ಕೆ ಗೊಜ್ಜು ಕಲಸಿಕೊಂಡು ತಿಂದು ಊಟದ ಶಾಸ್ತ್ರ ಮುಗಿಸಿದ. ಬರೆದ ಕತೆಯನ್ನು ಮತ್ತೊಮ್ಮೆ ಓದುತ್ತ ಕೂತಾಗ ಕಣ್ಣಿಗೆ ನಿದ್ದೆಹತ್ತಿ ಹಾಗೆ ಹಾಸಿಗೆಗೆ ಹೊರಳಿದ.

ಆ ನಟ್ಟಿರುಳು – ಮುಖ ಮುಚ್ಚಿ, ಗುಬರ ಹಾಕಿಕೊಂಡು ಗಡದ್ದಾಗಿ ಮಲಗಿದ್ದ ರಾಮಣ್ಣನಿಗೆ ಯಾರೋ ಕೂಗಿದಂತಾಗಿ ತನ್ನನ್ನು ಅಲುಗಾಡಿಸಿದಂತೆ ಭಾಸವಾಯಿತು. ಗಾಬರಿಯಿಂದ ಗುಬರ ತೆಗೆದು ಅರೆನಿದ್ದೆಯಲ್ಲಿ ಎಚ್ಚೆತ್ತು ನೋಡಿದರೆ ರೂಮಲ್ಲಿ ಏನು ವಿಶೇಷ ಕಾಣಲಿಲ್ಲ. ತುಸು ಹೊತ್ತು ಕುಳಿತವನು ಭ್ರಮೆಯಿರಬೇಕೆಂದು ಮತ್ತೆ ನಿದ್ದೆಗೆ ಜಾರಿದ. ಅರೆತಾಸು ಕಳೆದಿರಬಹುದು. ಮತ್ತದೇ ಅನುಭವ. ಈಗ ಯಾರೋ ಪಾದವನ್ನು ಮುಟ್ಟಿದಂತಾಯಿತು. ಸರಕ್ಕೆಂದು ಕಾಲನ್ನು ಎಳೆದುಕೊಂಡು ಮುಸುಕು ಸರಿಸಿ ಎದ್ದವನಿಗೆ ಹೃದಯವೇ ಬಾಯಿಗೆ ಬಂದಂತಾಯಿತು. ಎದುರಿಗೆ ಕುಕ್ಕರಗಾಲಿನಲ್ಲಿ ಹನುಮ ಕುಳಿತಿದ್ದಾನೆ. ಅಳು ಮುಖ ಹೊತ್ತು “ನೀವು ಹೀಗೆ ಮಾಡಬಾರದಿತ್ತು…ಸಾರ್” ಅಂದ. ರಾಮಣ್ಣ ನಖಶಿಖಾಂತ ಬೆವೆತುಹೋಗಿದ್ದ.

ರಾತ್ರಿಯೆಲ್ಲ ಹನುಮನ ಕನವರಿಕೆಯಲ್ಲಿ ಏಳುವುದು, ಮಲಗುವುದು ಮಾಡುತ್ತಿದ್ದವನಿಗೆ ಮುಂಜಾನೆ ಹೊತ್ತಿಗೆ ಚೆನ್ನಾಗಿ ನಿದ್ದೆ ಹತ್ತಿತ್ತು. ಏನನ್ನೋ ನೆನಪಿಸಿಕೊಂಡವನಂತೆ ಗಡಬಡಿಸಿ ಎದ್ದು ನೋಡಿದರೆ ಗೋಡೆ ಗಡಿಯಾರ ಆಗಲೇ ಸಮಯ ಒಂಭತ್ತುವರೆಯಾದದ್ದನ್ನು ತೋರುತ್ತಿತ್ತು. ಹಾಸಿಗೆಯಲ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದ ಲುಂಗಿಯನ್ನು ಸುತ್ತಿಕೊಂಡು, ಕೈಚೀಲ ಹಿಡಿದು ಅವಸರದಲ್ಲಿ ರಾಮಣ್ಣ ತರಕಾರಿ ಮಾರ್ಕೆಟ್ಟಿಗೆ ನಡೆದ. ಕರ್ಫ್ಯೂಗೆ ಕೇವಲ ಇನ್ನರ್ಧ ಗಂಟೆ ಬಾಕಿಯಿತ್ತು. ಅಷ್ಟರಲ್ಲಿ ಹಾಲು, ಮೊಸರು, ತರಕಾರಿ ಕೊಂಡು ಮನೆ ಸೇರಬೇಕಿತ್ತು.

ಮಾರ್ಕೆಟ್ಟಿಗೆ ಬಂದರೆ ಅಲ್ಲಿ ಎಲ್ಲೆಲ್ಲೂ ಜನವೋ, ಜನ. ಕೆಲವರು ಭಂಡಧೈರ್ಯದವರು ಮಾಸ್ಕನ್ನೇ ತೊಟ್ಟಿರಲಿಲ್ಲ. ಇನ್ನೂ ಕೆಲವರು ನೆಪ ಮಾತ್ರಕ್ಕೆ ತೊಟ್ಟಿದ್ದರೂ ಅದು ಕುತ್ತಿಗೆಯಲ್ಲಿ ನೇತಾಡುತ್ತಿತ್ತು. ಜನಜಂಗುಳಿಯಲ್ಲಿ ದಾರಿ ಮಾಡಿಕೊಂಡು ತನ್ನ ವರ್ತನೆಯ ಕಿಟ್ಟಪ್ಪನ ಅಂಗಡಿಯತ್ತ ಮುನ್ನುಗ್ಗುತ್ತಿದ್ದವನಿಗೆ “ಸಾರ್…ನಿಲ್ಲಿ!” ಎಂದು ಯಾರೋ ಜೋರಾಗಿ ಕೂಗಿದಂತಾಯಿತು. ಹಿಂತಿರುಗಿ ನೋಡಿದರೆ ಅಷ್ಟು ಜನರಲ್ಲಿ ಕೂಗಿದ್ದು ಯಾರು, ಯಾರಿಗೆಂದು ತಿಳಿಯಲಿಲ್ಲ. ಮುಂದಕ್ಕೆ ಹತ್ತು ಹೆಜ್ಜೆ ಇಟ್ಟಿರಲಿಲ್ಲ. ಮತ್ತದೇ ಕೂಗು ಕೇಳಿ ಬಂತಾದರೂ ತನ್ನನ್ನು ಕರೆದದ್ದು ಅಲ್ಲವೆಂದು ಎಣಿಸಿ ಮುನ್ನೆಡೆದ.

ಹಾಳಾದರೂ ಪರವಾಗಿಲ್ಲ ವಾರಕ್ಕೆ ಬೇಕಾಗೊವಷ್ಟು ತರಕಾರಿ ಕೊಳ್ಳಬೇಕು. ಇಲ್ಲದಿದ್ರೆ ಈ ಜನರ ಮಧ್ಯೆ ಸೇರಿ ಸೋಂಕು ಅಂಟಿಸಿಕೊಳ್ಳೊದು ಗ್ಯಾರಂಟಿ ಅಂದುಕೊಂಡು ಅಂಗಡಿಯಲ್ಲಿ ತರಕಾರಿ ಆರಿಸುತ್ತಿರುವಾಗ, ನೆಲದ ಮೇಲೆ ನಿಧಾನವಾಗಿ ಸರಿದ ನೆರಳನ್ನು ನೋಡಿ, ಹಿಂದಕ್ಕೆ ತಿರುಗಿದರೆ ದುಗುಡದಿಂದ ಹನುಮ ಕೈಮುಗಿದು ನಿಂತಿದ್ದ. “ಸಾರ್…ಏನಾದರೂ ಮಾಡಿ ಅಪ್ಪನನ್ನು ಉಳಿಸಿ” ಎಂದು ಗೋಗರೆಯುತಲ್ಲಿದ್ದ. ಕಲ್ಲಿನ ಹಾಗೆ ನಿಂತ ರಾಮಣ್ಣ ಅದೆಷ್ಟು ಹೊತ್ತು ಹಾಗೆ ನಿಂತನೋ! ಅಂಗಡಿ ಮಾಲೀಕ ಕಿಟ್ಟಪ್ಪ “ಏನಾಯ್ತ ಸ್ವಾಮಿ? ಹಂಗೆ ನಿಂತ್ಬುಟ್ರಿ…ಬ್ಯಾಗ್ ಹಿಡೀರಿ…ಟೈಮ್ ಆಗುತ್ತೆ” ಅಂದ. ತನಗೇನಾಗುತ್ತಿದೆ? ಎರಡು ಕೈಲಿ ಬ್ಯಾಗಿಡಿದು ರಾಮಣ್ಣ ಅಲ್ಲಿಂದ ಮನೆಯತ್ತ ಓಡಿದ.

ಮಕ್ಕಳಿಗೆ ಮೊಬೈಲಲ್ಲೇ ಪಾಠ ಮಾಡೋದು ಅಂತಾದರೆ, ಸ್ಕೂಲಿಗೆ ಯಾಕೆ ಹೋಗಬೇಕು? ಮನೆಯಲ್ಲೇ ಮಾಡಬಹುದಿತ್ತು. ಆದರೆ, ಜಿಗುಟು ಆಸಾಮಿ ಹೆಡ್ ಮಾಸ್ಟರ್ ಶಾಲೆಯ ವೇಳೆಯಂತೆ ತರಗತಿಯಲ್ಲೇ ಪಾಠ ಮಾಡಬೇಕೆಂದು ಆಜ್ಞೆಮಾಡಿದ್ದ.

ಕ್ಲಾಸ್ ರೂಮಿಗೆ ಬಂದ ರಾಮಣ್ಣ ಬ್ಲಾಕ್ ಬೋರ್ಡ್ ಒರೆಸಿ, ಆರನೇ ತರಗತಿಗೆ ರೇಖಾಗಣಿತ ಪಾಠ ಮಾಡಲು ಜ್ಯಾಮಿತಿ ಚಿತ್ರಿಸಿದ. ವಿದ್ಯಾರ್ಥಿಗಳಿಲ್ಲದೆ ಖಾಲಿ ಬೆಂಚುಗಳಿದ್ದ ಕೋಣೆಯಲ್ಲಿ ಒಬ್ಬನೇ, ಟ್ರೈಪಾಡಿಗೆ ಸಿಗಿಸಿದ್ದ ಮೊಬೈಲ್ ಫೋನನ್ನು ನೋಡುತ್ತ ಗೋಡೆಗಳಿಗೆ ಪಾಠ ಮಾಡುವುದು ಹಿಂಸೆಯೆನಿಸುತ್ತಿತ್ತು. ಹಾಗೆ ಬೋರ್ಡಿನ ಮೇಲೆ ಚಿತ್ರಿಸಿದ ಜ್ಯಾಮಿತಿ ಚಿತ್ರವನ್ನು ತೋರುತ್ತ, ಪಟಪಟಾಂತ ಲೆಕ್ಕ ಹೇಳುತ್ತ ಪ್ರಮೇಯಗಳನ್ನು ಬಿಡಿಸುತ್ತಿರಬೇಕಾದರೆ, ಕೊಠಡಿಯ ಹೊರಗಡೆ ಯಾರೋ ಬಂದು ನಿಂತಂತಾಯಿತು.

“ಮಕ್ಕಳೇ, ಒಂದು ನಿಮಿಷ ಬಂದೆ” ಎಂದು ಮೊಬೈಲ್ ಕ್ಯಾಮೆರಾಗೆ ಹೇಳಿ ಹೊರಗೆ ಬಂದ. ಹಳೇ ಮಾಸಲು ಪ್ಯಾಂಟು, ಶರಟು ತೊಟ್ಟು ಯುವಕನೊಬ್ಬ ನಿಂತಿದ್ದ. “ಯಾರು? ಏನು ಬೇಕಿತ್ತು?” ಅನ್ನುವಾಗ್ಗೆ, ಬೆನ್ನನ್ನು ತೋರಿ ನಿಂತಿದ್ದ ಹನುಮ ತಿರುಗಿದ. “ಸಾರ್..ನೀವು ಭಾಳ ಅನ್ಯಾಯ ಮಾಡುದ್ರಿ” ಅಂದು, ಕಣ್ಣೀರು ಹಾಕತೊಡಗಿದ. ತನಗರಿಯದಂತೆ ರಾಮಣ್ಣ ಕೈಲಿದ್ದ ಚಾಕ್ ಪೀಸನ್ನು ತುಂಡುತುಂಡು ಮಾಡುತ್ತ ನಿರುತ್ತರನಾಗಿ ನಿಂತ.

ಕತೆ ಬರೆದು ನಿರುಮ್ಮಳನಾದೆನೆಂದು ಕೊಂಡರೆ, ಹನುಮನ ಪಾತ್ರ – ಪ್ರಾಥಮಿಕ ಶಾಲೆಯ ಅಧ್ಯಾಪಕ ರಾಮಣ್ಣನನ್ನು ಬಹುವಾಗಿ ಆವರಿಸಿ, ಕಾಡತೊಡಗಿತ್ತು. ನಿಂತಲ್ಲಿ, ಕುಂತಲ್ಲಿ,  ಹೋದೆಡೆಲೆಲ್ಲ – ಬೆಳಗಿನ ಹೊತ್ತು ಸಾಲದೆಂದು ರಾತ್ರಿ ನೆಮ್ಮದಿಯ ನಿದ್ರೆಯಲ್ಲೂ ಹೊಕ್ಕು ಪರಿಪರಿಯಾಗಿ ಹನುಮ ಬೆನ್ನು ಹತ್ತಿದ್ದ.

ಬೆಂಗಳೂರಿನ ಹೊಸೂರ್ ರೋಡಲ್ಲಿ ಸಿವಿಲ್ ಕಂಟ್ರಾಕ್ಟರೊಬ್ಬರ ಬಳಿ, ಗಗನಚುಂಬಿ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಹನುಮ. ಎಲ್ಲೆಡೆ ಕೊರೊನಾ ಕಾಯಿಲೆ ಹೆಚ್ಚಾಗಿ ಹಠಾತ್ತಾಗಿ ಲಾಕ್ ಡೌನ್ ಆಗಿ, ದಿನರಾತ್ರಿ ಪಾದರಸದಂತಿದ್ದ ಇಡೀ ನಗರ ಕಾಲು ಮುರಿದುಕೊಂಡು ಅನಾಥವಾಗಿ ಬಿದ್ದಾಗ, ರೂಮೊಳಗೆ ಬಂಧಿಯಾಗಿ ಮುಂದೇನು? ಎಂದು ಕಂಗಾಲಾಗಿದ್ದ. ಮೂರು ಕಾಸು ಇಲ್ಲದೆ ಮೂರೊತ್ತಿನ ಕೂಳಿಗೆ ಏನು ಮಾಡೋದೆಂದು ಚಿಂತಿತನಾಗಿದ್ದಾಗ, ಉತ್ತರಭಾರತದ ಬಿಹಾರದಿಂದ ಬಂದು ಹನುಮನೊಡನೆ ಕೆಲಸ ಮಾಡುತ್ತಿದ್ದ, ಅವನಿದ್ದ ರೂಮನ್ನು ಹಂಚಿ ಕೊಂಡಿದ್ದ ಅನ್ಸರ್ ಮತ್ತು ರಂಜೀತರಿದ್ದಕ್ಕಾಗಿ ಸದ್ಯಕ್ಕೆ ಹೊಟ್ಟೆಗೇನು ತೊಂದರೆಯಿರಲಿಲ್ಲ. ತನ್ನಲ್ಲಿದ್ದ ಅಕ್ಕಿ, ಜೋಳದ ಹಿಟ್ಟು ಇತ್ಯಾದಿ ರೇಷನ್ನು ದಿನಕಳೆದಂತೆ ಖಾಲಿಯಾಗಿ ಅಡುಗೆ ಸ್ಟೋವ್ ತಣ್ಣಗಾದಾಗ, ಅವರು ಮಾಡಿಕೊಂಡ ರೋಟಿ ಪೂರಿಯನ್ನು ಇವನೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದರು. ಆದರೆಷ್ಟು ದಿನ ಅವರ ಬಳಿ ಇರುವ ಸಾಮಗ್ರಿ ಅಡುಗೆಗೆ ಬಂದೀತು ಅಥವಾ ಹರಕುಮುರುಕು ಹಿಂದಿಯಲ್ಲಿ ತಾನೆಷ್ಟು ದಿನ ನಾಚಿಕೆಯಿಲ್ಲದೆ ಊಟ, ತಿಂಡಿಗೆ ಕೈಯೊಡ್ಡುವುದು?

ಊರಲ್ಲಿ – ಹಳೇ ಕಂತು ಕಟ್ಟದೆ ವ್ಯವಸಾಯಕ್ಕೆಂದು ಬ್ಯಾಂಕಲ್ಲಿ ಸಾಲ ಸಿಗದಾಗ, ಮೀಟರ್ ಬಡ್ಡಿ ಲೆಕ್ಕಾಚಾರದಲ್ಲಿ ಸಾಲ ಮಾಡಿ ಹಾಕಿದ್ದ ಮೆಕ್ಕೆ ಜೋಳ, ಮೋಡ ಮುನಿಸಿಕೊಂಡು ಮಳೆ ಕೈಕೊಟ್ಟು, ಅಂದುಕೊಂಡಷ್ಟು ಫಸಲು ಕೈಗೆ ಬಾರದೆ ಬರಬಾದಾಗುವ ಪರಿಸ್ಥಿತಿ ಹನುಮನ ಅಪ್ಪನಿಗೆ ಬಂದಿತ್ತು. ಸಾಲ ಕೊಟ್ಟ ದಲ್ಲಾಳಿ ದಿನಾ ಮನೆಯ ಮುಂಬಾಗಿಲಿಗೆ ನಿಂತು ಕೂಗಾಡುವುದು ದಿನಂಪ್ರತಿ ಸಾಗಿ, ಹಳ್ಳಿಯಲ್ಲಿ ತಲೆಯೆತ್ತಿ ಓಡಾಡದಂತಾಗಿ ಹನುಮನ ಅಪ್ಪ ಕಂಗೆಟ್ಟು ಹಣ ಕಳುಹಿಸಲು ಕೇಳಿದ್ದ. ಭೂತಾಯಿಯನ್ನು ಅಪಾರ ನಂಬುವ ಅಪ್ಪನ ಎಂದೂ ಮುಗಿಯದ ಗೋಳಿನ ಕತೆಗೆ ಕೊನೆಯೇ ಇಲ್ಲವೇ? ಎಂದು ನಿಟ್ಟುಸಿರಿಟ್ಟು, ಖರ್ಚಿಗೂ ಉಳಿಸಿಕೊಳ್ಳದೆ ಬ್ಯಾಂಕಲ್ಲಿದ್ದ, ಟ್ರಂಕಿನ ತಳದಲ್ಲಿ ಬಟ್ಟೆಗಳ ಮಧ್ಯೆ ತುರ್ತು ಕಾಲದಲ್ಲಿ ಸಿಗಲಿ ಎಂದಿಟ್ಟಿದ್ದ, ಕೊನೆಗೆ ಜೇಬಲ್ಲಿ ಇದ್ದ ಎಲ್ಲಾ ದುಡ್ಡನ್ನು ಅಪ್ಪನ ಬ್ಯಾಂಕಿನ ಅಕೌಂಟಿಗೆ ಹಾಕಿ ಬಂದಿದ್ದ ಹನುಮ. ಆದರೆ, ಸಹ ಕೆಲಸಗಾರರೊಂದಿಗೆ ಹಂಚಿಕೊಂಡಿದ್ದ ಮನೆಬಾಡಿಗೆ ಕಟ್ಟದೆ ಆಗಲೇ ಮೂರು ತಿಂಗಳಾಗಿದ್ದು ಆ ಹೊತ್ತಿಗೆ ಅವನಿಗೆ ಮರೆತೇ ಹೋಗಿತ್ತು.

ಲೋಕಲ್ ಪೊಲಿಟಿಶಿಯನ್ ಕಮ್ – ಅನಾಮಧೇಯ ಸೈಟುಗಳಲ್ಲಿ ಕಟ್ಟಿಸಿದ್ದ ಹಲವು ಶೆಡ್ ಗಳ, ಮುಟ್ಟಿದರೆ ಬೀಳುವಂತಿದ್ದ ಮನೆಯ ಓನರ್, ಆ ದಿನ ಬೆಳಿಗ್ಗೆ ಸೂರ್ಯ ಕಣ್ಣು ಬಿಡುವ ಹೊತ್ತಿಗೆ ಪ್ರತ್ಯಕ್ಷನಾಗಿ “ಪರದೇಶಿ ನನ್ಮಗನೇ! ಬಾಡಿಗೆ ಕೊಡ್ದೆ ಇರೋಕೆ ಇದೇನು ತೋಂಟದಪ್ಪನ ಛತ್ರನಾ? ಕೈಗೆ ಸಿಕ್ದೆ ತಲೆ ಮರೆಸಿಕೊಂಡು ಓಡಾಡ್ತೀಯಾ? ದುಡ್ಡು ಮಡಗು ಇಲ್ಲಾ ಮನೆ ಖಾಲಿ ಮಾಡು” ಎಂದು ಗಲಾಟೆ ಮಾಡಿದ್ದ. ಆಗಲೂ ಅನ್ಸರ್, ರಂಜೀತ್ – ಹನುಮನ ಬಾಡಿಗೆಯ ಭಾಗವನ್ನು ತಾವೇ ಕೊಟ್ಟು ಉಪಕರಿಸಿದ್ದರು. ಈಗ ಲಾಕ್ ಡೌನ್ ಆಗಿ ಕೆಲಸವಿಲ್ಲ. ಮುಂದೆ ಎಷ್ಟು ತಿಂಗಳಿಗೆ ಮತ್ತೆ ಕೆಲಸ ಆರಂಭವಾಗುತ್ತೆ, ಗೊತ್ತಿಲ್ಲ? ಹುಷಾರಿ ಕಂಟ್ರಾಕ್ಟರ್, ಅರ್ಧದಲ್ಲಿ ಕೆಲಸಕ್ಕೆ ಕೈಕೊಟ್ಟು ಓಡಿಹೋಗುತ್ತಾರೆಂದು ಎರಡು ತಿಂಗಳ ಕೂಲಿಯನ್ನು ತನ್ನಲ್ಲೇ ಇರಿಸಿಕೊಂಡಿದ್ದಾನೆ. ಊಟಕ್ಕೆ, ಬಾಡಿಗೆಗೆ ತೊಂದರೆಯಾಗಿದೆಯೆಂದು ದುಡ್ಡು ಕೇಳಿದರೆ “ಮಾಡಿದ ಕೆಲಸದ ಬಿಲ್ಲು ಇನ್ನು ಪಾಸಾಗಿಲ್ಲ. ಬಂದಾಗ ನೋಡೋಣ” ಎಂದು ಇಲ್ಲದ ಸಬೂಬನ್ನು ಹೇಳಿ ತಾರಮ್ಮಯ್ಯ ಕೈ ಆಡಿಸಿದ್ದ.

ಪ್ಲಾಸ್ಟರ್ ಅಲ್ಲಲ್ಲಿ ಕಿತ್ತು ತೊನ್ನು ಬಂದಂತಿದ್ದ ಗೋಡೆಗಳ, ಹಂದಿಗೂಡಿನಂತಿದ್ದ ಆ ಅರಮನೆಯಲ್ಲಿ ಬಹಳಷ್ಟು ದಿನ ಇರಲಾಗದು. ನೋಡು ನೋಡುತ್ತಿದ್ದಂತೆ ತಿಂಗಳ ಕೊನೇ ದಿನ ಬಂದು ಕ್ಯಾಲೆಂಡರ್ ಮುಗುಚಿಕೊಳ್ಳುತ್ತದೆ. ಲಾಕ್ ಡೌನ್ ಆಗಿ ರೂಮಲ್ಲೇ ಲಾಕಾಗಿ ಕೆಲಸವಿಲ್ಲದೆ, ಕೂಲಿಯೂ ಇಲ್ಲದ್ದಕ್ಕೆ ಕನಿಕರ ತೋರುವ ಆಸಾಮಿಯೇ ಮನೆಓನರ್? ತಾರೀಖು ಒಂದಕ್ಕೆ ಕರಗದ ಕುಣಿತ ಮಾಡುತ್ತ ವಕ್ಕರಿಸುತ್ತಾನೆ. ಆದಷ್ಟು ಬೇಗ ತನ್ನೂರಿಗೆ ಹೊರಟು ಬಿಡಬೇಕೆಂದು ಹನುಮ ನಿರ್ಧರಿಸಿದ.

ಟೀವಿಯಲ್ಲಿ, ಪೇಪರಿನಲ್ಲಿ ಹೇಗೊ ಜನರು ಬಸ್ಸು, ರೈಲಿನ ವ್ಯವಸ್ಥೆಯಿಲ್ಲದೆ ಕಾಲ್ನಡಿಗೆಯಲ್ಲೇ ತಮ್ಮೂರಿಗೆ ಹೆಜ್ಜೆ ಹಾಕುತ್ತ ಬೀಳುತ್ತಿದ್ದ ಪಡಿಪಾಟಲ ಬಗ್ಗೆ ಸುದ್ದಿ  ನಿರಂತರವಾಗಿ ಬರುತ್ತಿದ್ದದ್ದು, ಅವರೊಂದಿಗೆ ತಾನೂ ಒಬ್ಬನಾದೇನೆಂಬುದು ಒಂದು ಸಮಾಧಾನ. ಮಲಗುವ ಚಾಪೆ, ಚಾದರ, ಅಡುಗೆ ಸಾಮಾನುಗಳನ್ನು ಒಂದು ಮೂಲೆಗೆ ಕಟ್ಟಿಟ್ಟು, ಬ್ಯಾಗಿಗೆ ಒಂದಷ್ಟು ಬಟ್ಟೆ ತುರುಕಿ, ಪೂರಾ ಚಾರ್ಜ್ ಮಾಡಿದ ಮೊಬೈಲ್ ಹಿಡಿದು, ಸಹವಾಸಿಗಳು ಕೊಟ್ಟ ಉದ್ರಿ ಹಣವನ್ನು ಒಳನಿಕ್ಕರ್ ಜೇಬಿನಲ್ಲಿಟ್ಟ ಹನುಮ, “ಭಯ್ಯಾ…ಅಭಿ ಕ್ಯಾಕರೇಗ..ಮೇ ಗಾಂವ್ ಕು ಜಾತಾ ಹು. ತುಮಾರ ಪೈಸಾ ವಾಪಸ್ ಬಂದಾಗ ದೂಂಗಾ” ಎಂದು, ಅವರಿಗೂ ಅವರೂರಿಗೆ ಹೋಗಲು ಹೇಳಿದ. ರೈಲು ಸಂಚಾರ ಶುರುವಾಗದೇ ಅವರಾದರೂ ಹೇಗೆ ಹೋದಾರು? “ಹಮಾರ ಪೈಸಾ ಕ ಚಿಂತಾ ನಾ ಕರ್. ಬಾದ್ ಮೆ ದೇಸಕ್ತೆ. ಒಶಿಯರ್ ರೆಹೆನಾ. ಮಾಸ್ಕ್ ಮತ್ ನಿಕಲೊ…ಪೊಲೀಸ್ ಕೆ ಪಾಸ್ ಮತ್ ಜಾನಾ” ಎಂದು ರೂಮಿನಿಂದ ಭಯದ ಹಾರ ಹಾಕಿ ಬೀಳ್ಕೊಟ್ಟರು.

ತನ್ನೂರು ಬೆಂಗಳೂರಿನ ಪಕ್ಕದಲ್ಲಿದೆಯೇ? ಹಾವೇರಿಯ ಸಮೀಪ ಬೆಂಚಿಹಳ್ಳಿ. ಸರಿಸುಮಾರು ನಾಲ್ಕುನೂರು ಕಿಲೋಮೀಟರ್ ದೂರದ್ದು. ದಿನಕ್ಕೆ ಎಷ್ಟು ದೂರ ನಡೆಯಬಹುದು? ಎಷ್ಟು ದಿನ…ಅಲ್ಲ…ಎಷ್ಟು ತಿಂಗಳಿಗೆ ಹಳ್ಳಿ ತಲುಪುವುದು? ದಾರಿಯಲ್ಲಿ ಊಟತಿಂಡಿಗೇನು ಮಾಡುವುದು? ಯಾವ ಚಿಂತೆಯನ್ನು ಮಾಡದೇ ಬೆನ್ನಿಗೆ ಬ್ಯಾಗನ್ನು ಅಂಟಿಸಿ ಹನುಮ ರಸ್ತೆಗಿಳಿದಿದ್ದ. ಅವನಿಗಿದ್ದ ಒಂದು ಧೈರ್ಯ- ದೂರದ ಊರಿಂದ ಬೇರೆ ಬೇರೆ ಕೆಲಸವನರಸಿ ಬಂದು, ನೆಲೆ ನಿಂತು, ತುತ್ತಿನ ಚೀಲ ತುಂಬಿಸಿಕೊಂಡವರು ಅಪ್ಪಿಕೊಂಡ ಬೆಂಗಳೂರಿನ ಕರುಳು ಬಳ್ಳಿಯನ್ನು ಏಕಾಏಕಿ ಕತ್ತರಿಸಿ ಈಗಾಗಲೇ ಗುಳೇ ಹೊರಟಿದ್ದಾರೆಂಬುದು. ಹೇಗೊ ತನ್ನೂರು ತಲುಪಿದರೆ, ಅಲ್ಲಿ ಉಪವಾಸವೊ, ವನವಾಸವೊ – ಮನೆಯವರೊಟ್ಟಿಗೆ ಹೇಗಿದ್ದರೂ ಸಂತೋಷವೆ!

ತಾನಿದ್ದ ಅಷ್ಟ ದಾರಿದ್ರ್ಯದ – ರಸ್ತೆಯಲ್ಲೇ ಕೊಚ್ಚೆ ಹರಿಯುವ, ಬೆಳಗಲ್ಲೇ ಗುಯ್ ಗುಡುವ ಸೊಳ್ಳೆ ಸಾಮ್ರಾಜ್ಯದ, ಗಬ್ಬುನಾರುವ  ಜಾಗವನ್ನು, ಸಂದಿಗೊಂದಿಗಳನ್ನು ದಾಟಿ, ದುಡಿಮೆಯ ನೆನಪುಗಳನ್ನು ಹಿಂದೆ ಬಿಟ್ಟು ಮೇನ್ ರೋಡಿಗೆ ಬಂದಾಗ ಹನುಮನ ಕೈಕಾಲು ಮರಗಟ್ಟಿ ಗಕ್ಕನೆ ನಿಂತ. ನರಪಿಳ್ಳೆ, ನಾಯಿಗಳಿಲ್ಲದೆ ಬಿಕೋ ಎನ್ನುತ್ತ ಉದ್ದುದ್ದ ತಣ್ಣಗೆ ಮಲಗಿದ್ದ ರಸ್ತೆಗಳು. ಲೋಕದ ವ್ಯಾಪಾರವೆಲ್ಲ ಸ್ತಬ್ಧವಾಗಿ ಭೂಮಿ ಸುತ್ತುವುದು ನಿಂತಿತೊ ಎಂಬಂತೆ ಎಲ್ಲೆಲ್ಲೂ ಸ್ಮಶಾನ ಮೌನ! ರೂಮಿನಲ್ಲಿ ಅನ್ಸರ್, ರಂಜೀತರ ಜೊತೆ ಅರ್ಧಂಬರ್ಧ ಅರ್ಥವಾಗುತ್ತಿದ್ದ ಅವರೂರಿನ ಕತೆ, ಹರಟೆ – ಏನನ್ನೋ ಹೇಳಿ ಬಿದ್ದು ಬಿದ್ದು ಅವರು ನಗುತ್ತಿದ್ದಾಗ ಪೆಕರನಂತೆ ತಾನು ಸುಮ್ಮನೆ ನಗುತ್ತಿದ್ದದ್ದು ನೆನಪಾಗಿ, ರೂಮು ಅಸಹನೀಯವೆಂದು ಕೊಂಡಿದ್ದರೆ ಹೊರ ಜಗತ್ತು ರೌರವ ನರಕವೆನಿಸಿತು.

ಬಿಳಿ ಹೆಬ್ಬಾವಿನಂತೆ ಮಲಗಿದ್ದ ವೈಟ್ ಟಾಪಿಂಗ್ ರಸ್ತೆಯಲ್ಲಿ ಒಬ್ಬಂಟಿಯಾಗಿ ಸಾಗಿದಾಗ, ಅಲ್ಲಲ್ಲಿ ರಸ್ತೆಗೆ ಅಡ್ಡಲಾಗಿ ಇಟ್ಟಿದ್ದ ಬ್ಯಾರಿಕೇಡುಗಳು. ಮಾಸ್ಕ್ ಹಾಕಿ, ಉಸಿರುಗಟ್ಟಿ ಹಾಗೆ ತೂಕಡಿಸುತ್ತಿದ್ದ ಪೋಲಿಸರು. ಆಗಾಗ್ಗೆ, ಅಶರೀರವಾಣಿಯಂತೆ ಶೂನ್ಯದಲ್ಲಿ ಕೇಳುತ್ತಿದ್ದ ಸೈರನ್ ಧ್ವನಿಯು ಹತ್ತಿರವಾಗುತ್ತ ಎದೆಗೂಡು ಚೂರಾಗುವಂತೆ ಚೀರಿ, ಪಕ್ಕದಲ್ಲೇ ಮಿಂಚಿನಂತೆ ಸರಿದು ಹೋಗುವ ಆಂಬುಲೆನ್ಸುಗಳು. ಅದ್ಯಾವ ಕಾಡಲ್ಲಿ ತಣ್ಣಗಿದ್ದ ಆ ಸೂಕ್ಷ್ಮಜೀವಿ, ನಗರ ಹೊಕ್ಕು, ವಿಶ್ವವ್ಯಾಪ್ತಿಯಾಗಿ ರಕ್ತಬೀಜಾಸುರನಾಗಿ ಹರಡಿ ಅದ್ಯಾವ ಆಮಾಯಕನ ಮೈಯಲ್ಲಿ ಹೊಕ್ಕಿದೆಯೊ? ಅವನು ಬದುಕುತ್ತಾನೊ, ಸಾಯುತ್ತಾನೊ? ಅಯ್ಯೋ…!

ಗಿಜಗುಡುತ್ತಿದ್ದ ರಸ್ತೆಯು ಖಾಲಿ ಖಾಲಿ ಇರುವಾಗಲೂ ಸಲೀಸಾಗಿ ನಡೆಯಲಾಗದೆ, ಕಳ್ಳಹೆಜ್ಜೆಗಳು ಭಾರವಾಗಿ ಸಾಗುತ್ತ ಆಸರೆ ಕೊಟ್ಟ ಬೆಂಗಳೂರಿಂದ ಆಚೆಗೆ ಬಿದ್ದರೆ ಸಾಕೆಂದು ನೋಡುವಾಗ್ಗೆ ದೂರದಲ್ಲಿ ಪೊಲೀಸರು ಆಟೊವೊಂದನ್ನು ಅಡ್ಡಹಾಕಿ ನಿಲ್ಲಿಸಿದ್ದರು. ದಾಡಿ ಬಿಟ್ಟ ಆಟೋ ಡ್ರೈವರ್ ಪೊಲೀಸರಲ್ಲಿ ಕೈಮುಗಿದು ಗೋಗರೆಯುತಲ್ಲಿದ್ದ. ಆಟೋದಲ್ಲಿ ಬಸುರಿ ಮಹಿಳೆಯೊಬ್ಬಳು ನರಳಾಡುತ್ತಿದ್ದಳು. ಹನುಮ, ಒಮ್ಮೆ ಮುಖದ ಮೇಲೆ ಮಾಸ್ಕ್ ಇದೆಯೋ ಎಂದು ಮುಟ್ಟಿ ನೋಡಿಕೊಂಡ. ಪೊಲೀಸರ ಕೈಲಿ ಸಿಕ್ಕಿಕೊಂಡರೆ ಊರು ತಲುಪಿದಂತೆ!

ವಿರುದ್ಧ ದಿಕ್ಕಿಗೆ ನಡೆದು, ಸರ್ವೀಸ್ ರಸ್ತೆ ಬಿಟ್ಟು ಹಿಂತಿರುಗಿ ಫ್ಲೈಒವರ್ ಹತ್ತಿ ಏರುರಸ್ತೆಯಲ್ಲಿ ನಡೆದ…ನಡೆದೇ ನಡೆದ. ಉರಿಬಿಸಿಲು ತಲೆ ಸುಡುವಾಗ, ತನ್ನ ಸೋಲಿಸುವ ಮಾತು ಬೇಡ. ತನ್ನೂರಿನ ಕೆಂಡದ ಮಳೆಯಂಥ ಬಿಸಿಲಿನ ಮುಂದೆ ಇದ್ಯಾವ ಧಗೆಯೆಂದು ನಕ್ಕ.

ನೆಲಮಂಗಲ – ಮಾದಾವಾರ ಹತ್ತಿರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದ ಮೈದಾನದ ಬಳಿ ಬರುತ್ತಿದ್ದಂತೆ, ಪೊಲೀಸರು ಕಾಲ್ನಡಿಗೆಯಲ್ಲಿ ಬರುತ್ತಿದ್ದ ನೂರಾರು ಜನರನ್ನು ಅಡ್ಡಗಟ್ಟಿ, ನುಸುಳಿ ಹೋಗಲು ಯತ್ನಿಸುತ್ತಿದ್ದವರಿಗೆ ಲಾಠಿ ಬೀಸುತ್ತಿದ್ದನ್ನು ನೋಡಿ ಒಮ್ಮೆಗೆ ಬೆದರಿದ. ತನ್ನನ್ನು ಸೇರಿದಂತೆ ಹೆದ್ದಾರಿಯಲ್ಲಿ ಎಲ್ಲರನ್ನೂ ಕುಕ್ಕರಗಾಲಿನಲ್ಲಿ ಕೂರಿಸಿ, ಮೈಮೇಲೆಲ್ಲ ತಮಗೆ ಕೋವಿಡ್ ವೈರಸ್ ಅಂಟಿದೆಯೆಂಬಂತೆ ಆಂಟಿ ವೈರಸ್ ದ್ರಾವಣ ಸಿಂಪರಣೆ ಮಾಡಿದರು. ನಂತರ, ತಿಂಡಿ ಪೊಟ್ಟಣಗಳನ್ನು ತಿನ್ನಲು ಕೊಟ್ಟು ಅಲ್ಲೇ ಹಾಕಿದ್ದ ಬೃಹತ್ ಶೆಡ್ಡಿನಲಿ ಕ್ವಾರೆಂಟೈನ್ ಆಗಿ ಉಳಿಯಲು ಹೇಳಿದರು.

“ಸಾರ್…ನಮ್ಮೂರಿಗೆ ನಾನು ಹೋಗ್ಲೇ ಬೇಕು. ದಯವಿಟ್ಟು ಬಿಟ್ಬಿಡಿ”

“ಅಂತಾದ್ದೇನಯ್ಯ ನಿಮ್ಮೂರಲ್ಲಿ ಕೊಳ್ಳೇ ಹೋಗೋದು…ಜನ್ರು ತುಪತುಪನೆ ಸಾಯ್ತಿದ್ದಾರೆ…ಎರಡು ವಾರ ಇದ್ದೋಗು”

“ಇಲ್ಲಾ…ಸಾರ್…ನಮ್ಮಪ್ಪನಿಗೆ ಮೈ ಚೆನ್ನಾಗಿಲ್ಲ…ಇವತ್ತೋ…ನಾಳೆಯೋ…”

ಅರಿವಿಲ್ಲದೆ, ಆಕಸ್ಮಿಕವಾಗಿ ನಾಲಿಗೆಗೆ ಬಂದ ಒಂದು ಸುಳ್ಳನ್ನು ನುಡಿದದ್ದಕ್ಕೆ “ಹೌದಾ…ಆಗಲಿ…ಹೋಗು” ಎಂದು, ಟೂ ಸ್ಟಾರ್ ಹೆಗಲಿಗೆ ಅಂಟಿಸಿದ್ದ ಪೊಲೀಸ್ ಅಧಿಕಾರಿ ಕರುಣೆ ತೋರಿದ.

ತನ್ನಂತೆ ನೂರಾರು ಜನರು – ಹೆಂಡತಿಯೊಡನೆ, ಪುಟ್ಟ ಮಕ್ಕಳನ್ನು ಹೆಗಲ ಮೇಲೆ ಹೊತ್ತು, ಕೈಲಿ ಭಾರದ ಸಂಸಾರದ ಬ್ಯಾಗನ್ನಿಡಿದು ಹೆದ್ದಾರಿಯಲ್ಲಿ ಸಾಗಿದ್ದರು. ಕೆಲವರು ಸುಸ್ತಾಗಿ, ಕುಡಿಯಲು ನೀರಿಲ್ಲದೆ ಕುಸಿದು ಬಿದ್ದರೆ, ಕೆಲವು ಕನಿಕರದ ಮಾನವೀಯತೆಯ ಕೈಗಳು ತಮ್ಮ ಪ್ಲಾಸ್ಟಿಕ್ ಬಾಟಲಿಯಲ್ಲಿ ಉಳಿದಿದ್ದ ತೊಟ್ಟು ನೀರನ್ನು ಹನಿಸಲು ಮುಂದಾಗುತ್ತಿದ್ದವು. ಆದರೆ, ಕೆಲವರ ಬಾಯಲ್ಲಿ ನೀರು ಹೋಗದೆ ತುಟಿಗಳ ಮಧ್ಯೆ ಹೊರ ಚೆಲ್ಲುತ್ತಿತ್ತು. ಅದ ನೋಡಿದ ಹನುಮ, ಕಾಂಕ್ರೀಟು ರಸ್ತೆಯ ಬದಿಗಿನ ಪುಟ್ ಪಾತಲ್ಲಿ ಕೂತು ಬಳಬಳನೆ ಅಳಲು ಆರಂಭಿಸಿದ.

ತಾನೇಕೆ ಅಳುತ್ತಿದ್ದೇನೆ?  ರಸ್ತೆಗೆ ಬಿದ್ದು ಮೂರಾಬಟ್ಟೆಯಾದವರ ಬದುಕಿಗೊ ಅಥವಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಪ್ಪನಿಗೆ ಆಪತ್ತಾಗಿದೆ ಎಂದು ಸುಳ್ಳು ನುಡಿದದ್ದಕ್ಕೊ? ಅಥವಾ ನಡಿಗೆಯಲ್ಲೇ ಊರು ಸೇರಬೇಕಾದ ಸಂಕಟಕ್ಕೊ?

ಬೆಂಗಳೂರಲ್ಲಿ ರಸ್ತೆಗೆ ಬಿದ್ದಾಗ, ತಾನು ನಡೆಯುತ್ತಲೇ ಊರಿಗೆ ಬರುತ್ತೇನೆಂದು ಹನುಮ ತನ್ನಪ್ಪನಿಗೆ ಫೋನು ಮಾಡಿದ್ದ. ದಾರಿ ಮಧ್ಯೆ ಅವನ ಅಮ್ಮ, ಅಣ್ಣಅತ್ತಿಗೆ ಆಗಾಗ್ಗೆ ಫೋನು ಮಾಡಿ ಎಲ್ಲಿದ್ದಿಯೆಂದು ವಿಚಾರಿಸುತ್ತಿದ್ದರು. ದಾವಣಗೆರೆ, ಹರಿಹರ ದಾಟಿ ರಾಣೆಬೆನ್ನೂರಿನ ಹತ್ರ ಇರಬೇಕು. ಸುಸ್ತಾಗಿ ಫ್ಲೈಓವರ್ ಮೇಲೆ ದಣಿವಾರಿಸಿಕೊಳ್ಳಲು ಕೂತು, ಮನೆಗೆ ಫೋನು ಮಾಡಿದರೆ ಬ್ಯಾಟರಿ ರೀಚಾರ್ಜ್ ಆಗದೆ ಸ್ವಿಚ್ಚಾಫಾಗಿತ್ತು. ಸಿಟ್ಟಿನಿಂದ ಮೊಬೈಲನ್ನು ಸೇತುವೆ ಕೆಳಗೆ ಎಸೆದು ಬಿಟ್ಟ.

ಹೆದ್ದಾರಿಯಲ್ಲಿ – ಹಾವೇರಿ ಬಲಭಾಗಕ್ಕೆ ಇದ್ದು ಅದ ದಾಟಿ ಮುಂದಕ್ಕೆ ಸಾಗಿ, ಎಡಕ್ಕೆ ಸರ್ವೀಸ್ ರಸ್ತೆಗೆ ಹೊರಳಿ ಹನುಮ ತನ್ನೂರಿನ ಕಡೆ ನಡೆದ. ತಾಯಿಯಂತೆ ಪೊರೆದ ನಗರ – ಇರುಳು ಕಳೆದು ಬೆಳಗಾಗುವುದರೊಳಗೆ ರಾಕ್ಷಸನ ರೂಪ ತಾಳಿ ಬಂದಾಗ, ಪಾರಾದೆನೆಂಬ ಖುಷಿಯಲ್ಲಿ ಸೋತ ಕಾಲುಗಳನ್ನು ಎಳೆಯುತ್ತ ತನ್ನ ಮನೆಯ ಕಡೆ ಹೆಜ್ಜೆ ಹಾಕಿದ.

ಅದೆಷ್ಟು ದಿನಗಳು ಹೊಟ್ಟೆಗೆ ಅನ್ನ, ನೀರಿಲ್ಲದೆ ಕಳೆದವೋ? ಇಡೀ ದೇಹವಿಲ್ಲವಾಗಿ ಚೈತನ್ಯ ಮಾತ್ರ ಉಳಿದಿದೆಯೊ? ಅಂತೂ ದೂರದಲ್ಲಿ ಬಯಲಲ್ಲಿ ಒಂಟಿಯಾಗಿದ್ದ ಮನೆಯ ಕಂಡು ಹನುಮನ ಮುಖವರಳಿತು. ಅವಸರದಿಂದ ಊದಿದ ಪಾದಗಳನ್ನು ಎತ್ತಿಡುತ್ತ ಮನೆಯತ್ತ ಸಾಗಿದಾಗ, ಜಗಲಿಯ ಮೇಲೆ ಯಾರೋ ಬೀಡಿ ಸೇದುತ್ತ ಕುಳಿತಂತೆ ಕಂಡಿತು. ಅದು ಅಣ್ಣನಿರಬಹುದು. ಊರ ಹೊರಗೆ ಕದ್ದುಮುಚ್ಚಿ ಬೀಡಿ ಸೇದುವುದು ತನಗೆ ಗೊತ್ತಿದ್ದೇ! ಆದರೆ, ಅಪ್ಪನಿರುವ ಮನೆಯ ಮುಂದೆ ಬೀಡಿ ಸೇದೊ ಧೈರ್ಯ, ಅಹಂಕಾರ ಅವನಿಗೆಲ್ಲಿಂದ ಬಂತು?

ಮುಂಬಾಗಿಲ ದಾಟಿ ಹಜಾರಕ್ಕೆ ಬಂದರೆ, ಗೋಡೆಗೆ ನೇತು ಹಾಕಿದ್ದ ಅಪ್ಪನ ಫೋಟೊಕ್ಕೆ ಹಣೆಗೆ ಕುಂಕುಮವಿಟ್ಟು, ಹೂವಿನಹಾರ ಹಾಕಿದ್ದರು. ಅದನ್ನು ನೋಡಿ ಅನಾಮತ್ತಾಗಿ ಹನುಮ ನೆಲಕ್ಕೆ ಕುಸಿದ. ಮನೆಮಂದಿಯೆಲ್ಲ ಅವನ ಸುತ್ತಲೂ ಕೂತು ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. “ಅದೇನಾತೊ! ಒಂದೇ ಸಮ ಕೆಮ್ಮು ಶುರುವಾತು. ಆಮೇಲೆ ಜ್ವರ! ಮೈಯೆಲ್ಲ ಬೆಂಕಿಯಾಗಿ ಸುಡುತ್ತಿತ್ತು. ಜಿಲ್ಲಾಸ್ಪತ್ರೆಗೆ ಫೋನು ಮಾಡಿದರೆ ಆಂಬುಲೆನ್ಸಲ್ಲಿ ಕರ್ಕೊಂಡು ಹೋದ್ರು. ಆಸ್ಪತ್ರೆಲೀ ಉಸಿರು ಕಟ್ಟಿದಾಗ, ಇರೋ ಎರಡೇ ಐಸಿಯುನಲ್ಲಿ ಜಾಗ ಸಿಗ್ಲಿಲ್ಲ. ಆಸ್ಪತ್ರೆಲೀ ಆಕ್ಸಿಜೆನ್ನೂ ಇರ್ಲಿಲ್ಲ. ಮೂರೇ ದಿನ…ಉಸಿರು ತಗೊಳೋಕು ಆಗ್ದೆ…ಬಿಡೋಕು ಆಗ್ದೆ ನಿಮ್ಮಪ್ಪ ಪ್ರಾಣ ಬಿಟ್ರಂತೆ ಕಣಪ…” ಎಂದ ಹನುಮನ ಅಮ್ಮ, ಅಳುತ್ತಿದ್ದವನನ್ನು ಎದೆಗಪ್ಪಿಗೊಂಡು ತಲೆನೇವರಿಸುತ್ತ ರೋದಿಸತೊಡಗಿದಳು.

ರಜಾದಿನ. ಮನೆಯಲ್ಲಿ ಒಬ್ಬನೇ ಇದ್ದು, ಶಾಲೆಯಿಲ್ಲದೆ, ಕರ್ಫ್ಯೂಯೆಂದು ಹೊರ ಹೋಗಲಾಗದೆ ರಾಮಣ್ಣ ಒಂಟಿ ಉಳಿದ. ಟೀವಿಯಲ್ಲಿ, ಪತ್ರಿಕೆಗಳಲ್ಲಿ ಬರುತ್ತಿದ್ದ – ಐಸಿಯು ಸಿಗದೆ, ಆಕ್ಸಿಜೆನ್ ಇಲ್ಲದೆ ಸಾಲುಸಾಲು ಸಾಯುತ್ತಿದ್ದವರ ಸುದ್ದಿಗಳು, ನೂರಾರು ಮೈಲಿ ನಡೆದುಕೊಂಡೇ ಗುಳೇ ಹೊರಟ ಅಮಾಯಕ ವಲಸಿಗರ ನೋವು, ಸಂಕಷ್ಟಗಳು ರಾಮಣ್ಣನನ್ನು ಬಹುವಾಗಿ ಕಾಡಿತ್ತು. ಹೊಟ್ಟೆಗೆ ಬೆಂಕಿ ಬಿದ್ದಿತ್ತು. ಆ ಬಗ್ಗೆ ಬರೆದು ನಿರುಮ್ಮಳನಾಗಬೇಕೆಂದು ಹನುಮನ ಕತೆ ಬರೆದ. ಆದರೆ ನೆಮ್ಮದಿ ಇರಲಿಲ್ಲ. ಏನೋ ಆತಂಕ! ಕಣ್ಣು ಮುಚ್ಚಿದರೆ ಸಾಕು, ಹನುಮ ಬಂದು ʼನನ್ನಪ್ಪನನ್ನು ಸಾಯಿಸಬಾರದಿತ್ತುʼ ಎಂದು ಗೋಳಿಡುತ್ತಿದ್ದಂತೆ ಭಾಸವಾಗುತ್ತಿತ್ತು.

ಅವನಪ್ಪನನ್ನು ಸಾಯಿಸಿದ್ದು…ನಾನೇ? ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದೆ ಆಳುವ ಸರ್ಕಾರ ಆ ಅಸಹಾಯಕ ರೈತನನ್ನು ಸಾಯಿಸಿದ್ದು! ಅದನ್ನೇ ಕತೆಯಲ್ಲಿ ಬರೆದಿದ್ದೇನೆ. ಆದರೆ, ಹನುಮ ತಾನು ತಪ್ಪಾಡಿದ ಮಾತಿನಿಂದ ಅಪ್ಪ ತೀರಿಕೊಂಡನೆಂದು ಭಾವಿಸಿ ಪಾಪಪ್ರಜ್ಞೆಯಿಂದ ಬೇಯುತ್ತಿದ್ದಾನೆ.

ಬಹಳ ಚಿಂತಿಸಿ – ಒಲ್ಲದ ಮನಸ್ಸಿಂದ ಬರೆದ ಕತೆಯ ಕೊನೆಯ ಸಾಲುಗಳಿಗೆ ಕಾಟು ಹಾಕಿ, ಕೆಮ್ಮುಜ್ವರದಿಂದ ವಿಪರೀತ ನರಳುತ್ತಿದ್ದ ಹನುಮನ ಅಪ್ಪನನ್ನು ಆಸ್ಪತ್ರೆಗೆ ಸೇರಿಸಿದರು. ಸಕಲ ಸೌಲಭ್ಯವಿದ್ದ ಜಿಲ್ಲಾಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿ, ಆಕ್ಸಿಜೆನ್ನಿಗೆ ಯಾವ ಕೊರತೆಯು ಇಲ್ಲದ್ದರಿಂದ, ಸಕಾಲದಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆತು ಅವನು ಪ್ರಾಣಾಪಾಯದಿಂದ ಪಾರಾದ. ಹುಷಾರಾಗಿ ಡಿಸ್ಚಾರ್ಜ್ ಆಗುವಾಗ ತನ್ನ ಜೀವ ಉಳಿಸಿದ ವೈದ್ಯರಿಗು, ಆಳುವ ಸರ್ಕಾರಕ್ಕು

ಕೃತಜ್ಞತೆಯಿಂದ ಕಣ್ಣೀರು ಹಾಕುತ್ತ ಕೈಮುಗಿದ…ಎಂದು ಕತೆಯಲ್ಲಿ ರಾಮಣ್ಣ ಬದಲಾವಣೆ ಮಾಡಿದ.

ಜೈನ ಧರ್ಮದ ಬೋಧನೆಗಳು
ಜೈನಮತವು ಅಹಿಂಸಾ ಪರಿಪಾಲನೆ, ಸತ್ಯ ನುಡಿಯುವುದು, ಕಳ್ಳತನ ಮಾಡದಿರುವುದು ಮತ್ತು ಆಸ್ತಿಯ ವ್ಯಾಮೋಹವನ್ನು ತ್ಯಜಿಸುವುದು-ಇವುಗಳು ಪಾರ್ಶ್ವನಾಥ ಬೋಧಿಸಿದ ಮುಖ್ಯ ತತ್ತ್ವಗಳು
- ಲೇಖಕರು: ಗೌತಮ ಆವರ್ತಿ

ಜೈನ ಧರ್ಮಾವಲಂಬಿಗಳ ನಂಬಿಕೆಯ ಪ್ರಕಾರ ಜೈನಮತ ಅತ್ಯಂತ ಪ್ರಾಚೀನ ವಾದುದೆಂದೂ ವೃಷಭದೇವನೇ ಆದಿಯಾಗಿ ಇಪ್ಪತ್ನಾಲ್ಕು ತೀರ್ಥಂಕರರು ಈ ಮತವನ್ನು ಪ್ರಚಾರ ಮಾಡಿದರೆಂದೂ ತಿಳಿದುಬರುತ್ತದೆ. ಆದರೆ ಮೊದಲಿನ ಇಪ್ಪತ್ತೆರಡು ತೀರ್ಥಂಕರರು ಪೌರಾಣಿಕ ವ್ಯಕ್ತಿಗಳೆಂದು ವೇದ್ಯವಾಗುತ್ತದೆ. ಇಪ್ಪತ್ತೂರನೇ ತೀರ್ಥಂಕರನಾದ ಪಾರ್ಶ್ವ ನಾಥ ಕ್ರಿ.ಪೂ. ಎಂಟನೇ ಶತಮಾನದಲ್ಲಿ ಜೀವಿಸಿದ್ದ. ಕ್ಷತ್ರಿಯ ವರ್ಗಕ್ಕೆ ಸೇರಿದ ಪಾರ್ಶ್ವ ನಾಥ ತನ್ನ ೩೦ನೇ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ ಕಠಿಣ ತಪಸ್ಸನ್ನು ಆಚರಿಸಿದ. ತಪಶ್ಚರ್ಯೆಯಿಂದ ತನಗೆ ಸಿದ್ಧಿಸಿದ ಜ್ಞಾನವನ್ನು ಇತರರಿಗೆ ಪ್ರಸಾರ ಮಾಡಿದ. ತನ್ನ ತತ್ತ್ವಗಳನ್ನು ಪ್ರಸಾರ ಮಾಡಲು ಭಿಕ್ಷುಗಳನ್ನು ನೇಮಿಸಿದ. ಅಹಿಂಸಾ ಪರಿಪಾಲನೆ, ಸತ್ಯ ನುಡಿಯುವುದು, ಕಳ್ಳತನ ಮಾಡದಿರುವುದು ಮತ್ತು ಆಸ್ತಿಯ ವ್ಯಾಮೋಹವನ್ನು ತ್ಯಜಿಸು ವುದು-ಇವುಗಳು ಪಾರ್ಶ್ವನಾಥ ಬೋಧಿಸಿದ ಮುಖ್ಯ ತತ್ತ್ವಗಳು. ವರ್ಧಮಾನ ಮಹಾ ವೀರನ ಮಾತಾಪಿತೃಗಳು ಪಾರ್ಶ್ವನಾಥನ ಪಂಥಕ್ಕೆ ಸೇರಿದವರಾಗಿದ್ದರು.

ವರ್ಧಮಾನ ಮಹಾವೀರ : ವೈಶಾಲಿಯ ಉಪನಗರವಾದ ಕುಂಡಲವನದಲ್ಲಿ ವಾಸಿಸುತ್ತಿದ್ದ ಜ್ಞಾತ್ರಿಕ ಕ್ಷತ್ರಿಯ ಪಂಗಡದ ಸಿದ್ದಾರ್ಥ ಮತ್ತು ತ್ರಿಶಾಲಿ ಎಂಬುವವರ ಮಗನಾದ ವರ್ಧಮಾನ ಕ್ರಿ.ಪೂ. ಸುಮಾರು ೫೪೦ ರಲ್ಲಿ ಹುಟ್ಟಿದ. ವರ್ಧಮಾನನಿಗೆ ಬಾಲ್ಯದಲ್ಲಿ ಸೂಕ್ತ ಶಿಕ್ಷಣ ಕೊಡಲಾಗಿತ್ತು. ಅವನು ಪ್ರಾಪ್ತವಯಸ್ಕನಾದಾಗ ‘ಯಶೋದ’ ಎಂಬ ಕನೈಯನ್ನು ವರಿಸಿದ. ಅನೇಕ ವರ್ಷಗಳ ಕಾಲ ಅವರ ದಾಂಪತ್ಯ ಜೀವನ ಮುಂದುವರಿಯಿತು. ಅವರಿಗೆ ಒಬ್ಬಳು ಪುತ್ರಿಯೂ ಇದ್ದಳು. ಅವಳನ್ನು ಜಾಮಾಲಿ ಎಂಬುವವ ನಿಗೆ ಕೊಟ್ಟು, ವಿವಾಹಮಾಡಿದ್ದರು. ಜಾಮಾಲಿ ಅನಂತರ ವರ್ಧಮಾನನಿಂದ ದೀಕ್ಷೆ ಪಡೆ ದವರಲ್ಲಿ ಒಬ್ಬ. ವರ್ಧಮಾನನ ೩೦ ನೇ ವಯಸ್ಸಿನಲ್ಲಿ ಅವನ ಮಾತಾಪಿತೃಗಳು ಮರಣ ಹೊಂದಿದರು. ಮಾತಾಪಿತೃಗಳ ಅಗಲುವಿಕೆಯ ದುಃಖದಿಂದ ಬಹುವಾಗಿ ನೊಂದ ವರ್ಧ – ಮಾನ ಸಂಸಾರ ತ್ಯಾಗಮಾಡಿ ತಪಶ್ಚರ್ಯೆ ಕೈಗೊಂಡ. ಸುಮಾರು ೧೩ ವರ್ಷಗಳ ಕಾಲ ಅವನು ಕಠಿಣವಾದ ತಪಸ್ಸನ್ನಾಚರಿಸಿದ. ಈ ಅವಧಿಯ ಕೊನೆಯಲ್ಲಿ ಬಿಹಾರದ ಪಾರ್ಶ್ವ ತ ನಾಥ ಗುಡ್ಡದ ಬಳಿಯಲ್ಲಿ ವರ್ಧಮಾನ ಪರಮಜ್ಞಾನ ಪಡೆದ. ಅಂದಿನಿಂದ ಅವನಿಗೆ ಮಹಾವೀರ ಎಂಬ ಹೆಸರಾಯಿತು. ಅನಂತರ ಮಹಾವೀರ ಮತಪ್ರಚಾರ ಕಾರ್ಯದಲ್ಲಿ ತೊಡಗಿದ. ಅವನು ತನ್ನ ೭೨ನೇ ವಯಸ್ಸಿನಲ್ಲಿ ಪಾವಾ ಗ್ರಾಮದ ಬಳಿ ಕ್ರಿ.ಪೂ. ಸುಮಾರು ೨ ೪೬೮ ರಲ್ಲಿ ಕೈವಲ್ಯ ಹೊಂದಿದ. ಮಹಾವೀರ ಪ್ರಚಾರಮಾಡಿದ ಧರ್ಮಕ್ಕೆ ಜೈನಮತವೆಂದು – ಹೆಸರಾಗಿದೆ.

ಜೈನಮತದ ಮುಖ್ಯ ತತ್ತ್ವಗಳು: ಮಹಾವೀರ ಪಾರ್ಶ್ವನಾಥ ಬೋಧಿಸಿದ ತತ್ತ್ವಗಳ ಜೊತೆಗೆ ಕೆಲವು ಅಂಶಗಳನ್ನು ಸೇರಿಸಿದ. ಜೈನಮತದ ಮುಖ್ಯ ತತ್ತ್ವಗಳೇ ನೆಂದರೆ: (೧) ಅಸತ್ಯ ನುಡಿಯಬಾರದು, (೨) ಕಳ್ಳತನ ಮಾಡಬಾರದು, (೩) ಜೀವರಾಶಿಗಳನ್ನು ಹಿಂಸಿಸಬಾರದು, (೪) ಆಸ್ತಿಯನ್ನು ಹೊಂದಬಾರದು, (೫) ತಪಶ್ಚರೆಯನ್ನು ಅನುಸರಿಸಬೇಕು. ಮಹಾವೀರ ವೇದಗಳನ್ನು ಪ್ರಮಾಣವೆಂದಾಗಲಿ, ಅಪೌರುಷೇಯವೆಂದಾಗಲಿ ಒಪ್ಪಲಿಲ್ಲ. ಜಗತ್ತು ಭಗವಂತನ ನಿಯಾಮಕ ಮತ್ತು ಲೀಲೆ ಎಂಬುದನ್ನು ಜೈನಮತ ಪುರಸ್ಕರಿಸಲಿಲ್ಲ. ಜೈನಮತ ಅಹಿಂಸೆಗೆ ವಿಶೇಷ ಪ್ರಾಧಾನ್ಯ ಕೊಟ್ಟಿದೆ.

ಜೈನ ತತ್ತ್ವದ ಪ್ರಕಾರ ಆತ್ಮ ಪರಿಶುದ್ಧವಾದುದು, ಪರಿಶುದ್ಧವಾದ ಆತ್ಮವನ್ನು ಪುದ್ದಲ ಹೊಕ್ಕು ಅಶುದ್ಧಗೊಳಿಸುವುದರಿಂದ ಸಂಸಾರ ಬಂಧನವುಂಟಾಗುತ್ತದೆ. ಕಠಿಣ ತಪಸ್ಸನ್ನಾಚರಿಸುವುದರಿಂದ ಪುನಃ ಆತ್ಮ ಪರಿಶುದ್ಧವಾಗಿ ಮೋಕ್ಷ ಪಡೆಯುವುದು. ಸಮ್ಯಕ್ ಆಚಾರ, ಸಮ್ಯಕ್ ದರ್ಶನ, ಸಮ್ಯಕ್ ಚಿಂತನೆ ಇವು ಜೈನಮತದ ತ್ರಿರತ್ನಗಳು. ಜೈನಯತಿಗಳು ಕಠಿಣವಾದ ನಿಯಮಗಳನ್ನು ಆಚರಿಸಬೇಕು. ಗೃಹಸ್ಥರು ಜೈನಮತದ

ಮುಖ್ಯ ನಿಯಮಗಳ ಜೊತೆಗೆ ಪಂಚಪರಮೇಷ್ಠಿ ಯಜ್ಞವನ್ನಾಚರಿಸಬೇಕು. ಜೈನಮತದ ಪ್ರಚಾರ : ಮಹಾವೀರನಿಗೆ ಹನ್ನೊಂದು ಮಂದಿ ಆಪ್ತ ಶಿಷ್ಯ ರಿದ್ದರು. ಅವರಲ್ಲಿ ಸುಧಮ್ಮನ್ ಎಂಬುವನೊಬ್ಬನ ಹೊರತಾಗಿ ಉಳಿದವರು ಮಹಾವೀರನು ಜೀವಿಸಿರುವಾಗಲೆ ಮರಣ ಹೊಂದಿದರು. ಸುಧಮ್ಮನ್ ಮಹಾವೀರನ ಮರಣಾನಂತರ ಜೈನ ಯತಿಗಳ ಸಂಘದ ಮುಖ್ಯನಾದ. ಅವನ ಅನಂತರ ಒಬ್ಬೊಬ್ಬರಾಗಿ ಅನೇಕ ಆಚಾರೈರು ಶ್ರವಣ ಸಂಘದ ಮುಖ್ಯರಾಗಿದ್ದರು. ಅವರಲ್ಲಿ ಆರನೆಯವನಾದ ಭದ್ರಬಾಹು ಚಂದ್ರಗುಪ್ತ ಮೌಯ್ಯನ ಸಮಕಾಲೀನನಾಗಿದ್ದ. ಚಂದ್ರಗುಪ್ತಮೌಯ್ಯನ ಆಳ್ವಿಕೆಯ ಕೊನೆಗಾಲದಲ್ಲಿ ಮಗಧ ಸಾಮ್ರಾಜ್ಯದಲ್ಲಿ ಹನ್ನೆರಡು ವರ್ಷಗಳ ಅವಧಿಯ ಕ್ಷಾಮ ತಲೆದೋರಿತೆಂದೂ, ಆ ಸಮಯದಲ್ಲಿ ಮೌಲ್ಯ ಚಕ್ರವರ್ತಿ ಸಿಂಹಾಸನ ತ್ಯಾಗಮಾಡಿ ಭದ್ರಬಾಹು ಮತ್ತು ಇತರ ಅನೇಕ ಜೈನಭಿಕ್ಷುಗಳೊಡನೆ ದಕ್ಷಿಣಕ್ಕೆ ಬಂದು ಮೈಸೂರು ದೇಶದ ಶ್ರವಣಬೆಳಗೊಳದಲ್ಲಿ ತಂಗಿದನೆಂದೂ ತಿಳಿದುಬರುತ್ತದೆ. ಶ್ರವಣಬೆಳಗೊಳದ ಚಿಕ್ಕ ಬೆಟ್ಟದಲ್ಲಿರುವ ಚಂದ್ರಗುಪ್ತ ಬಸದಿ ಈ ಘಟನೆಯ ನೆನಪಾಗಿ ಇಂದಿಗೂ ಉಳಿದುಬಂದಿದೆ. ಭದ್ರಬಾಹುವಿನೊಡನೆ ಶ್ರವಣಬೆಳಗೊಳಕ್ಕೆ ಬಂದ ಮೌಲ್ಯ ಚಕ್ರವರ್ತಿ ಚಂದ್ರಗುಪ್ತನ ಮೊಮ್ಮಗ ಸಂಪ್ರಾತಿ ಚಂದ್ರಗುಪ್ತನಾಗಿರಬಹುದೆಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕ್ಷಾಮದ ಅವಧಿಯಲ್ಲಿ ಮಗಧರಾಜ್ಯದಲ್ಲೇ ನೆಲಸಿದ್ದ ಜೈನಭಿಕ್ಷುಗಳು ಒಂದು ಸಮ್ಮೇಳನ ನಡೆಸಿ ಆ ಸಮ್ಮೇಳನದ ನಿರ್ಣಯದ ಪ್ರಕಾರ ಜೈನದರ್ಶನದ ಹನ್ನೆರಡು ಅಂಗಗಳನ್ನೊಳಗೊಂಡ ಪವಿತ್ರಗ್ರಂಥಗಳನ್ನು ರಚಿಸಿದರು. ಅಲ್ಲದೆ ಬಿಳಿಬಟ್ಟೆಗಳನ್ನು ಧರಿಸುವ ಹಾಗೂ ಇತರ ಕೆಲವು ಪದ್ಧತಿಗಳನ್ನು ಅವರು ಆಚರಣೆಗೆ ತಂದುಕೊಂಡಿದ್ದರು. ಹಲವು ವರ್ಷಗಳ ಅನಂತರ ಭದ್ರ ಬಾಹು ಮತ್ತು ಅವನ ಅನುಯಾಯಿಗಳು ಮಗಧರಾಜ್ಯಕ್ಕೆ ಹಿಂದಿರುಗಿದರು. ತಮ್ಮ ಗೈರುಹಾಜರಿಯಲ್ಲಿ ಆಚರಣೆಗೆ ಬರದಿದ್ದ ನಿಯಮಗಳನ್ನು ಅವರು ಒಪ್ಪಲಿಲ್ಲ. ಆದ್ದರಿಂದ

ಜೈನಮತ ‘ದಿಗಂಬರ’ ಮತ್ತು ‘ಶ್ವೇತಾಂಬರ’ ಎಂಬ ಎರಡು ಶಾಖೆಗಳಾಗಿ ಮಾಲ್ಪಟ್ಟಿತು. ಜೈನಮತ ಕ್ರಿ.ಪೂ. ೪ನೇ ಶತಮಾನದ ವೇಳೆಗೆ ದಕ್ಷಿಣ ಭಾರತದಲ್ಲಿ ಪ್ರಚಾರ ವಾಯಿತು. ತಮಿಳು ಸಂಘಂ’ಕಾಲದಲ್ಲಿ ಮಧುರೆಯ ಪಾಂಡ್ಯರು ಜೈನಮತಕ್ಕೆ ಪ್ರೋತ್ಸಾಹ ನೀಡಿದರು. ಅನೇಕ ಜೈನಕವಿಗಳು ತಮಿಳು ಗ್ರಂಥಗಳನ್ನು ರಚಿಸಿರುವರು. ಕ್ರಿ.ಶ. ಎರಡನೇ ಶತಮಾನದಲ್ಲಿ ಕಳಿಂಗದ ಖಾರವೇಲ ಜೈನಮತಕ್ಕೆ ವಿಶೇಷ ಪ್ರೋತ್ಸಾಹ ನೀಡಿದ. ಕನ್ನಡ ನಾಡಿನ ಅರಸು ಮನೆತನಗಳಾದ ಗಂಗರು, ರಾಷ್ಟ್ರಕೂಟರು, ಹೊಯ್ಸಳರು ಜೈನಮತಕ್ಕೆ ವಿಶೇಷ ಪ್ರೋತ್ಸಾಹ ನೀಡಿದರು. ಈ ಮನೆತನಗಳ ಅನೇಕ ರಾಜರು ಜೈನಮತೀಯರಾಗಿ ದ್ದರು. ಸಿಂಹನಂದಿ ಕುಂದಕುಂದಾಚಾರ, ಪೂಜ್ಯಪಾದ ಮೊದಲಾದ ಪ್ರಸಿದ್ಧ ಜೈನಯತಿ ಗಳು ಸಂಸ್ಕೃತ ಭಾಷೆಯಲ್ಲಿ ದಾರ್ಶನಿಕ ಗ್ರಂಥಗಳನ್ನು ರಚಿಸಿದರು.

ತಲಕಾಡಿನ ಗಂಗರ ಕಾಲದಲ್ಲಿ ಕನ್ನಡನಾಡಿನಲ್ಲಿ ಜೈನಮತ ಸರ್ವತೋಮುಖ ಅಭಿ ವೃದ್ಧಿ ಹೊಂದಿತ್ತು. ಕ್ರಿ.ಶ. ೧೦ನೇ ಶತಮಾನದಲ್ಲಿ ಮಾರಸಿಂಹ ಗಂಗ ಮತ್ತು ಅವನ ಮಗ ರಾಚಮಲ್ಲನ ಅಮಾತ್ಯನಾಗಿದ್ದ ಚಾವುಂಡರಾಯ ಶ್ರವಣಬೆಳಗೊಳದ ಜಗತ್ರ ಸಿದ್ಧವಾದ ಏಕಶಿಲೆಯ ೫೮ ಅಡಿ ಎತ್ತರದ ಗೊಮ್ಮಟ ಪ್ರತಿಮೆಯನ್ನು ಕಡೆಸಿ ಸ್ಥಾಪಿಸಿದ. ಕನ್ನಡ ನಾಡಿನ ಬೇರೆಬೇರೆ ಸಂತತಿಗಳ ರಾಜರ ಆಸ್ಥಾನದಲ್ಲಿದ್ದ ಪಂಪ, ರನ್ನ, ಪೊನ್ನ, ಜನ್ನ ಮತ್ತು ಇತರ ಪ್ರಸಿದ್ಧ ಜೈನಕವಿಗಳು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಶ್ರೇಷ್ಠ ಗ್ರಂಥಗಳನ್ನು ರಚಿಸಿದ್ದಾರೆ.

ಮಧ್ಯಕಾಲೀನ ಯುಗದ ರಜಪೂತರು ಜೈನ ದಾರ್ಶನಿಕರಿಗೂ ವಿದ್ವಾಂಸರಿಗೂ ಪ್ರೋತ್ಸಾಹ ನೀಡಿದರು. ಆ ಕಾಲದಲ್ಲಿ ಮೌಂಟ್ ಅಬು ಬೆಟ್ಟಗಳ ಮೇಲೆ ಅಮೃತಶಿಲೆಯ ಜೈನ ದೇವಾಲಯ ನಿರ್ಮಾಣವಾಯಿತು. ಮೊಗಲ್ ಸಾಮ್ರಾಟ ಅಕ್ಟರ್‌ನ ಆಸ್ಥಾನದಲ್ಲಿ ಪ್ರಸಿದ್ಧ ಜೈನ ದಾರ್ಶನಿಕರಾದ ಹೀರವಿಜಯಸೂರಿ ಮೊದಲಾದವರಿದ್ದರು. ಹೀರವಿಜಯಸೂರಿಯು ಅಕ್ಟರ್ ಸಾಮ್ರಾಟನ ವಿಶೇಷ ಮನ್ನಣೆಗೆ ಪಾತ್ರನಾಗಿದ್ದನು. ಜೈನಮತ ಬೌದ್ಧ ಮತದಷ್ಟು ವಿಶೇಷವಾಗಿ ಭಾರತದಲ್ಲಿ ಹರಡಲೂ ಇಲ್ಲ, ಸಂಪೂರ್ಣವಾಗಿ ಚ್ಯುತಿ ಹೊಂದಲೂ ಇಲ್ಲ.

ಜೈನಮತ ಅಹಿಂಸಾ ತತ್ತ್ವವನ್ನು ವಿಶೇಷವಾಗಿ ಪ್ರಚಾರಪಡಿಸಿತು. ಪ್ರಾಂತೀಯ ಭಾಷೆಗಳ ಬೆಳವಣಿಗೆಗೆ ಬಹುಮಟ್ಟಿಗೆ ಸಹಕಾರಿಯಾಯಿತು. ಭಾರತೀಯ ತತ್ತ್ವಶಾಸ್ತ್ರಕ್ಕೆ ಜೈನಮತ ತನ್ನ ಕೊಡುಗೆ ಸಲ್ಲಿಸಿದೆ. ಜೈನ ಮತೀಯರು ಪ್ರಾರಂಭದಲ್ಲಿ ಅನೇಕ ಗುಹಾಲಯಗಳನ್ನು ನಿರ್ಮಿಸಿದರು. ಶ್ರವಣಬೆಳಗೊಳ, ಮೌಂಟ್ ಅಬು, ಹಳೇಬೀಡು ಮೊದಲಾದ ಸ್ಥಳಗಳಲ್ಲಿರುವ ಜೈನ ದೇವಾಲಯಗಳು ಇಂದಿಗೂ ಪ್ರಸಿದ್ಧವಾಗಿವೆ. ಮೈಸೂರು ರಾಜ್ಯದ ಧರ್ಮಸ್ಥಳದಲ್ಲಿ ಬೃಹತ್ ಗೊಮ್ಮಟ ಶಿಲಾ ಪ್ರತಿಮೆ ಜೈನ ಧರ್ಮದ ಸಾಕ್ಷಿಯಾಗಿ ನಿಂತಿದೆ.

ಲೇಖಕರು: ಗೌತಮ ಆವರ್ತಿ

ಆಕರ: ಡಾ. ಬಿ. ಷೇಕ್ ಅಲಿ ಜಿ. ಆರ್. ರಂಗಸ್ವಾಮಯ್ಯ ಡಾ. ಎ. ವಿ. ವೆಂಕಟರತ್ನಂ. ಡಾ. ಬಿ. ಮುದ್ದಾಚಾರಿ, VARF – Visual Anthropology Research Foundation Varf Viewfinder ಕನ್ನಡದ ಐತಿಹಾಸಿಕ ದಾಖಲೆಗಳು

ಪ್ರವಾಸಿಗರ ಸ್ವರ್ಗ – ಕವಲೇದುರ್ಗ
ಮಳೆಗಾಲವನ್ನು ಮಲೆನಾಡಿನಲ್ಲಿ ಇಷ್ಟ ಪಡದವರು ಯಾರಿದ್ದಾರೆ? ಸುತ್ತ ಹಸಿರ ಕಾಡುಗಳಿಂದ ತುಂಬಿ ತುಳುಕಾಡುತ್ತಿರುವ ಮಲೆನಾಡಿನ ಅರಣ್ಯಗಳ ನಡುವೆ ಅನೇಕ ಐತಿಹಾಸಿಕ ತಾಣಗಳಿವೆ.

ಮಳೆ ಬರುವ ಕಾಲದಲ್ಲಿ ಇಂತ ಒಂದು ಕಾಡಿಗೆ ಟ್ರಕ್ಕಿಂಗ್‌ ಹೋಗುವ ಮಜವೇ ಬೇರೆ. ನೀವು ಒಂದು ದಿನದ ಟ್ರಿಪ್‌ ಪ್ಲಾನ್‌ ಮಾಡೋದಾದ್ರೆ ನಾನು ನಿಮಗೆ ಒಂದು ಜಾಗ ಹೇಳ್ತೀನಿ.

ಅದೇ ಪ್ರವಾಸಿಗರ ಸ್ವರ್ಗ – ಕವಲೇದುರ್ಗ!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು. ಹಸುರು ಹೊದ್ದಿರುವ ಪ್ರಕೃತಿ, ಮೋಡಗಳ ಕಣ್ಣಾಮುಚ್ಚಾಲೆ, ತಂಗಾಳಿ, ಮಂಜಿನಾಟ ಹಾಗೂ ಜಿಟಿ ಜಿಟಿ ಮಳೆ ….ಇವೆಲ್ಲಾ ಬೆರೆತು ಸ್ವರ್ಗ ಸದೃಶ ಅನುಭವವನ್ನು ನಮಗೆ ನೀಡುತ್ತವೆ.

ಒಂದಾನೊಂದು ಕಾಲದಲ್ಲಿ ರಾಜವೈಭೋಗದಿಂದ ಮೆರೆಯುತ್ತಿದ್ದ ಕವಲೆದುರ್ಗ ಈಗ ಅಕ್ಷರಶಃ ಪಾಳುಬಿದ್ದ ಕೋಟೆ. ಆದರೆ ಇದರ ಸುತ್ತ ಬೆಳೆದಿರುವ ದಟ್ಟ ಕಾಡಿನ ನಡುವೆ ಇರುವ ಕೋಟೆಯ ಒಳಗೆ ಇರುವ ರಾಜ, ರಾಣಿಯರ ಆರಮನೆಯ ದರ್ಬಾರು, ಈಜುಕೊಳ, ದೇವಾಲಯಗಳು ಅನೇಕ ಕಥೆಗಳನ್ನು ನಮಗೆ ಹೇಳುತ್ತವೆ.

ಕೋಟೆಯ ಗರ್ಭದ ಒಳಗಿದೆ ಚರಿತ್ರೆಯ ಪುಟಗಳು!

ಕವಲೇದುರ್ಗ ಎಂಬ ಹೆಸರು ಕಾವಲು ದುರ್ಗ ಎಂಬುದರಿಂದ ಬಂದಿದೆ. ಮಲ್ಲವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಕವಲೇದುರ್ಗಕ್ಕೆ ಭುವನಗಿರಿ ದುರ್ಗ ಎಂಬ ಹೆಸರಿದೆ.

9 ನೇ ಶತಮಾನದಲ್ಲಿ ಸ್ಥಾಪನೆಯಾದ ಕವಲೇದುರ್ಗ ಕೋಟೆಯು ವಿವಿಧ ಆಡಳಿತಗಾರರ ಆಳ್ವಿಕೆಯನ್ನು ಕಂಡಿದೆ. 14 ನೇ ಶತಮಾನದಲ್ಲಿ ಚೆಲುವರಂಗಪ್ಪರಿಂದ ನವೀಕರಿಸಲ್ಪಟ್ಟ ಈ ಕೋಟೆ ಕೆಳದಿ ಅರಸರ ತನಕ ವೈಭವದಿಂದ ಮೆರೆದಿದೆ. ಮಲ್ಲವರು ಮೊದಲು ಸಾಗರದ ಸಮೀಪ ಇರುವ ಕೆಳದಿ ಎಂಬಲ್ಲಿ ರಾಜ್ಯ ಸ್ಥಾಪಿಸಿ ಇಕ್ಕೇರಿ, ಬಿದನೂರಿನಲ್ಲಿ (ನಗರ) ಕೋಟೆಕೊತ್ತಲ ನಿರ್ಮಿಸಿ ರಾಜ್ಯಭಾರ ಮಾಡುತ್ತಿದ್ದರು. ಆಗ ಕವಲೇದುರ್ಗದ ಗಿರಿಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೆಗಾರ ಸಹೋದರರ ಸ್ವಾಧೀನದಲ್ಲಿತ್ತು. ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ಭುವನಗಿರಿ ದುರ್ಗ ಎಂದು ಹೆಸರಿಟ್ಟು ಆಳ್ವಿಕೆ ನಡೆಸಿದರು. ಮಲ್ಲವ ವಂಶದ ಪ್ರಖ್ಯಾತ ರಾಣಿ ಚೆನ್ನಮ್ಮಾಜಿ ಛತ್ರಪತಿ ಶಿವಾಜಿ ಮಹಾಹಾರಾಜರ ಮಗನಾದ ರಾಜಾರಾಮನಿಗೆ ಆಶ್ರಯ ನೀಡಿದ್ದು ಇದೇ ಕವಲೇದುರ್ಗ ಸಂಸ್ಥಾನದ ಕೋಟೆಯಲ್ಲಿ.

ಕೆಳದಿಯ ಅರಸ ವೆಂಕಟಪ್ಪ ನಾಯಕನು ಹದಿನಾರನೇ ಶತಮಾನದಲ್ಲಿ ಇಲ್ಲಿ ಒಂದು ಅರಮನೆಯನ್ನು ಕಟ್ಟಿ ಅದನ್ನು ಒಂದು ಅಗ್ರಹಾರವನ್ನಾಗಿಸಿದ. ಮತ್ತಿನ ಮಠ ಎಂಬ ಶೃಂಗೇರಿ ಮಠದ ಶಾಖೆಯನ್ನೂ, ಒಂದು ಖಜಾನೆ, ಕಣಜ, ಆನೆಗಳಿಗಾಗಿ ಗಜಶಾಲೆ, ಕುದುರೆಗಳಿಗಾಗಿ ಅಶ್ವಶಾಲೆ ಮತ್ತು ಕೊಳಗಳನ್ನು ನಿರ್ಮಿಸಿದನು.

16 ನೇ ಶತಮಾನದ ಕೆಳದಿಯ ನಾಯಕರವರೆಗೆ, ಏಳು ಬುರುಜುಗಳನ್ನು ನಿರ್ಮಿಸುವ ಮೂಲಕ ಕೋಟೆಯನ್ನು ಬಲಪಡಿಸಲಾಯಿತು. 1763 ರಲ್ಲಿ ಕೋಟೆಯನ್ನು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಕ್ರಮಿಸಿಕೊಂಡರು.

ಏನಿದೆ ಈ ಕೋಟೆಯ ಒಳಗೆ?

ಸುಮಾರು ಆರು ನೂರು ವರ್ಷಗಳ ಇತಿಹಾಸ ಹೊಂದಿರುವ ಈ ಕೋಟೆಯನ್ನು ಮಳೆ ನೀರು ಆಧಾರಿತ ತಾಂತ್ರಿಕತೆ ಬಳಸಿರುವುದನ್ನು ಕಾಣಬಹುದು.

ಮೂರು ಸುತ್ತಿನ ಕೋಟೆಯಾದ ಈ ಕವಲೇ ದುರ್ಗವನ್ನು ಬೃಹತ್‌ ಗಾತ್ರದ ಪೆಡಸುಕಲ್ಲುಗಳ ಇಟ್ಟಿಗೆಗಳನ್ನು ಬಳಸಿ ಕಟ್ಟಲಾಗಿದೆ. ಪ್ರತಿ ಸುತ್ತಿನಲ್ಲೂ ಒಂದು ಹೆಬ್ಬಾಗಿಲಿದ್ದು,  ಅವುಗಳ ಇಕ್ಕೆಲಗಳಲ್ಲಿ ರಕ್ಷಣಾ ಕೊಠಡಿಗಳಿವೆ. ಕೋಟೆಯ ಮಧ್ಯ ದೇವಾಲಯಗಳು, ಒಂದು ಪಾಳುಬಿದ್ದ ಅರಮನೆ ಹಾಗೂ ಇತರ ರಚನೆಗಳಿವೆ.

ದುರ್ಗದ ತುತ್ತತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ ಶಿಖರೇಶ್ವರ ಅಥವಾ ಶ್ರೀಕಂಠೇಶ್ವರ ಎಂಬ ಸಣ್ಣ ದೇವಸ್ಥಾನವಿದೆ.ಕೋಟೆ ಒಳಗಿರುವ ಅರಮನೆಯ ಜಾಗದಲ್ಲಿ ದೊಡ್ಡ ಅಡಿಪಾಯ ಕಂಡುಬರುತ್ತದೆ. ಇತ್ತೀಚಿನ ಉತ್ಖನನದಿಂದ, ಪರಸ್ಪರ ಹೊಂದಿಕೊಂಡಿರುವ ಕೊಠಡಿಗಳು,ವಿಶಾಲವಾದ ಕಂಬದ ಜಗುಲಿ, ಪೂಜಾಗೃಹ, ಅಡಿಗೆ ಕೋಣೆ ಮತ್ತು ಅದರಲ್ಲಿರುವ ಕಲ್ಲಿನ ಐದು ಉರಿಕ ಅಂದರೆ ಒಲೆ, ಕಲ್ಲಿನ ವೇದಿಕೆಯಿರುವ ಸ್ನಾನದ ಕೋಣೆ,ಉತ್ತಮ ನೀರು ಸರಬರಾಜು ವ್ಯವಸ್ಥೆ, ಒಂದು ವಿಶಾಲವಾದ ಒಳ ಪ್ರಾಂಗಣ ನಂತರ ಮೆಟ್ಟಿಲಿನಿಂದ ಕೂಡಿದ ಒಂದು ಕೊಳ – ಇವುಗಳಿಂದ ಕೂಡಿದ ಅರಮನೆಯ ವಾಸ್ತುಶಿಲ್ಪದ ಒಳನೋಟ ಕಾಣಸಿಗುತ್ತದೆ.

ಯಾವಾಗ ಚಾರಣ ಮಾಡಬಹುದು?

ನೀವು ಚಾರಣ ಪ್ರಿಯರಾಗಿದ್ದರೆ, ಒಂದು ದಿನ ಪೂರ್ತಿ ಕಾಡಿನಲ್ಲಿ, ಐತಿಹಾಸಿಕ ಅವಶೇಷಗಳ ನಡುವೆ ಇರಬೇಕು ಅಂತ ಇದ್ರೆ….ಕವಲೇದುರ್ಗ ಬೆಸ್ಟ್.‌ ನೀವು ವರ್ಷಪೂರ್ತಿ ಕವಲೇದುರ್ಗ ಕೋಟೆಗೆ ಚಾರಣ ಮಾಡಬಹುದು. ಆದರೂ ಆಗಸ್ಟ್ ಮತ್ತು ಏಪ್ರಿಲ್ ನಡುವೆ ಉತ್ತಮ ಸಮಯ. ಆದರೆ ಇಲ್ಲಿ ಯಾವುದೇ ವಾಸ್ತವ್ಯದ ಸೌಲಭ್ಯ ಇಲ್ಲ. ನೀವು ಹತ್ತಿರದಲ್ಲಿರುವ ತೀರ್ಥಹಳ್ಳಿ, ಶಿವಮೊಗ್ಗ ಅಥವಾ ಆಗುಂಬೆಯಲ್ಲಿ ತಂಗಬಹುದು. ಈ ಕೋಟೆ ಬೆಳಿಗ್ಗೆ 8:30 ರಿಂದ ಸಂಜೆ 5: 30 ರವರೆಗೆ ತೆರೆದಿರುತ್ತದೆ.

ಹೇಗೆ ತಲುಪುವುದು?

ಕವಲೇದುರ್ಗದಿಂದ ಸರಿಸುಮಾರು 51 ಮೈಲಿ ದೂರದಲ್ಲಿರುವ ಶಿವಮೊಗ್ಗ – ಹತ್ತಿರದ ರೈಲು ನಿಲ್ದಾಣ – ಉಳಿದ ದಾರಿಗಳಲ್ಲಿ ಕ್ಯಾಬ್ / ಟ್ಯಾಕ್ಸಿ ತೆಗೆದುಕೊಳ್ಳಿ. ಅಥವಾ ಕವಲೇದುರ್ಗ ಕೋಟೆಯಿಂದ ಸುಮಾರು 11 ಮೈಲಿ ದೂರದಲ್ಲಿರುವ ತೀರ್ಥಹಳ್ಳಿಯಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು. ಕವಲೇದುರ್ಗದಲ್ಲಿ ನೀವು ನಡೆಯುತ್ತಾ, ಶಾಂತ ಕಾಡುಗಳ ಮಧ್ಯೆ ನೀವು ಚಾರಣ ಮಾಡಬಹುದು.

ಲೇಖನ – ಫೋಟೋಗ್ರಾಫಿ: ಚರಣ್‌ ಐವರ್ನಾಡು

ಅವಳ ಹಣೆಲಿ ಬರ್ದಂಗ್ ಆಯ್ತದೆ
(ಈವರೆಗೆ…)

ಗಂಗೆಯ ಅಣ್ಣಂದಿರು ಒಪ್ಪಿಕೊಂಡ ಹುಡುಗನ ಜತೆ ಮದುವೆ ಮಾಡಲು ಅವಳ ಅಪ್ಪ ಆಸಕ್ತಿ ತೋರಿಸುವುದಿಲ್ಲ. ಒಂದು ಹಂತದಲ್ಲಿ ಅಪ್ಪ ಮಕ್ಕಳ ಜಗಳ ವಿಪರೀತಕ್ಕೆ ಹೋಗಿ ಅಪ್ಪ ಮನೆ ಬಿಟ್ಟು ಹೊಲದ ಗುಡಿಸಲಿಗೆ ಹೋಗಿ ಅಲ್ಲೇ ಇರುತ್ತಾನೆ. ಅಪ್ಪನ ಒಳಮನದ ನೋವನ್ನು ಸಹಿಸಲಾರದೆ ಗಂಗೆ ಗಟ್ಟಿ ಮನಸು ಮಾಡಿ ತಾನು ಮದುವೆಗೆ ಒಪ್ಪಿಕೊಂಡಿರುವುದಾಗಿ ಹೇಳುತ್ತಾಳೆ. ಗಂಗೆಯ ಅಪ್ಪ ಏನು ಮಾಡಿದರು?  ಓದಿ.. ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆ -೪

ಇಪ್ಪತ್ತೆರಡರ ಮಗಳ ಮಾತುಗಳು ಎಪ್ಪತ್ತರ ಅಪ್ಪನ ಕಿವಿಯಲ್ಲಿ ಗುಂಯ್ ಗುಡುತ್ತಲೇ ಇತ್ತು. ಎಂದೂ ಎದುರು ಬದುರು ನಿಂತು ಮಾತಾಡದ ಮಗಳು ಇಂದು ತನ್ನ ಪ್ರಬುದ್ಧವಾದ ಮಾತುಗಳಿಂದ ತುಸುಮಟ್ಟಿಗೆ ಅಪ್ಪನ ಎದೆಯ ಭಾರ ಇಳಿಸಿದ್ದಳು. ಸಾಲದೆಂಬಂತೆ ಎದುರು ಹೊಲದ ಸಿದ್ದಣ್ಣ ಕೂಡ ಗಂಗೆಯ ಮಾತಿಗೆ ದನಿಗೂಡಿಸಿ, “ಕಳ್ಳು ಬಳ್ಳಿ ಸಂಬಂಧ ಅಂದ್ರೆ ಅಷ್ಟು ಸುಸೂತ್ರ ಅನ್ಕಂಡಿಯನ ಬೋಪಣ್ಣ. ನಾಳೆ ದಿನ ತಂಗಿಗೆ ಏನಾದ್ರು ಆದ್ರೆ ಅಣ್ಣ ತಮ್ಮದಿರ್ ಜೀವ ಚುರ್ ಅಂದಂಗಿರ್ತದ ಹೇಳು?” ಎನ್ನುವ ಪ್ರಶ್ನೆ ಎಸೆಯುವುದರ ಮುಖಾಂತರ ಅಪ್ಪನೊಳಗೆ  ಒಂದು ಸಣ್ಣ ಭರವಸೆಯ ಕಿಡಿ ಹೊತ್ತಿಸಿ, ಹೊಲದ ಗುಡಿಸಲಿನಿಂದ ಊರೊಳಗಿನ ಮನೆಯ ಕಡೆಗೆ ಎಳೆದು ತಂದಿದ್ದ.

ಮುಸ್ಸಂಜೆ ದೀಪ ಹತ್ತಿಸುವ ಹೊತ್ತು, ಎಲ್ಲರ ಮನೆಯ ಅಂಗಳದಲ್ಲಿ ಪೊರಕೆಯ ಸರ ಪರ ಸದ್ದು ಕೇಳಿ ಬರುತ್ತಿತ್ತು. ಮೇಯಲು ಹೋಗಿದ್ದ ಹಸು ಎಮ್ಮೆಗಳು ಕೊರಳ ಗಂಟೆ ಸದ್ದಿನೊಂದಿಗೆ ಕೊಟ್ಟಿಗೆಯ ಹಾದಿ ಹಿಡಿದಿದ್ದವು. ಊರೊಳಗಿನ ಆ ಕಿರಿದಾದ ಹಾದಿಯ ಉದ್ದಕ್ಕೂ ಅಂಟಿಕೊಂಡಿದ್ದ ಮನೆಗಳಿಂದ, ಮುಸ್ಸಂಜೆಯ ಕಾಫಿಯ ಘಮಲು ಹೊರ ಹೊಮ್ಮುತ್ತಿತ್ತು. ಎಷ್ಟೋ ಬಾರಿ ಅಪ್ಪ ಆ ಚಂದದ ಘಮಲನ್ನು ಆಸ್ವಾದಿಸಲೆಂದೇ ಮೇಲಿನ ಬೀದಿಯಲ್ಲಿದ್ದ ತನ್ನ ಮನೆಯಿಂದ ಕೆಳಗಿನ ಬೀದಿಗೂ, ಕೆಳಗಿನ ಬೀದಿಯಿಂದ ಮೇಲಿನ ಬೀದಿಗೂ ನಡೆದಾಡುತ್ತಿದ್ದುದುಂಟು. ಇಂದು ಅದರ ಯೋಚನೆಯೇ ಇಲ್ಲದೆ, ಬದುಕಿನ ಎಣಿಕೆ ಗುಣಿಕೆಯ ಲೆಕ್ಕಾಚಾರದಲ್ಲೇ, ಕಾಲೆಳೆಯುತ್ತಾ ಬರುತ್ತಿದ್ದವನನ್ನು, ಆ ಬೀದಿಯ ಅದೇ ಕಾಫಿಯ ಘಮಲು ಕ್ಷಣ ಜಗ್ಗಿ ನಿಲ್ಲಿಸಿ ಉಲ್ಲಾಸ ತುಂಬಿತು. ಇನ್ನೇನು ಘಮಲಿನ ಒಳಗಿಳಿದು ಮೈ ಮರೆಯಬೇಕು ಎನ್ನುವಷ್ಟರಲ್ಲಿ ಧುತ್ತನೆ ತನ್ನ ಗಂಡು ಮಕ್ಕಳ ಹುಂಬ ಮುಖ ಕಣ್ಣೆದುರು ಬಂದು ಆ ಆನಂದವನ್ನೇ ಕಸಿದು ಬಿಟ್ಟಿತು. ಕಂಕುಳಲ್ಲೊಂದು ಗಂಟನ್ನಿರುಕಿಕೊಂಡಿದ್ದ ಅಪ್ಪ ಕಾಲೆಳೆಯುತ್ತಾ ಒಲ್ಲದ ಮನಸ್ಸಿನಲ್ಲೇ ಮನೆಯ ಮುಂದೆ ಬಂದು ನಿಂತ.

ಬಾಗಿಲಿಗೆ ಎದುರಾಗಿ ಕುಳಿತು, ಕಾಫಿ ಹೀರುತ್ತಿದ್ದ ಚಂದ್ರಹಾಸನ ಮುಖನೋಡಲು ಇಚ್ಛಿಸದ ಅಪ್ಪ, ಮನೆಯ ಹೊರಗಿದ್ದ ದೊಡ್ಡ ಜಗುಲಿ ಕಟ್ಟೆಯ ಮೇಲೇ ಕುಳಿತ. ಅಂಗಳದ ಕಸ ಗುಡಿಸುತ್ತಿದ್ದ ಗಂಗೆ ಅಪ್ಪನನ್ನು ಕಂಡು ಸಂಭ್ರಮಿಸುತ್ತಾ ಪೊರಕೆಯನ್ನು ಬದಿಗೆಸೆದು ಒಳಗೋಡಿ ಅವ್ವನಿಗೆ ಸುದ್ದಿ ಮುಟ್ಟಿಸಿದಳು.

ಅವ್ವ ಬಿಸಿ ಕಾಫಿ ತಂದು ಅಪ್ಪನ ಮುಂದೆ ಹಿಡಿದಳು. ತುಸು ಸೆಟೆದುಕೊಂಡಂತೆಯೇ ಇದ್ದ ಅಪ್ಪ “ನನಗೆ ಕಾಪಿ ಗೀಪಿ ಏನು ಬೇಡ ತಗೊಂಡೋಗು.” ಎಂದು ಮುಖ ತಿರುವಿ ಕುಳಿತ.  ಅವ್ವ “ಅಲ್ಲ ಎಷ್ಟ್ ದಿನಾಂತ ಮಕ್ಕಳಂಗೆ ರಚ್ಚೆ ಹಿಡ್ದೀರಿ. ಹಿಂಗಾದ್ರೆ ಬದುಕು ನಡಿತದ. ಏಳೇಳಿ ಮುಂದಿನ ಕಾರ್ಯ ನೋಡಿ” ಎಂದಳು. ಏನೂ ನಡೆದೇ ಇಲ್ಲ ಎಂಬಂತೆ ಯಾವ ಅಳುಕು ಇಲ್ಲದೇ ಹೊರ ಬಂದ ಚಂದ್ರಹಾಸ. “ಆಗಿದ್ ಆಗೋಯ್ತು ಈಗ ಮದುವೆ ವಿಷಯ ಏನಾಯ್ತು” ಎಂದು ಕೇಳಿದ. ಅಪ್ಪ, ಅವ್ವನ ಮುಖ ನೋಡುತ್ತಾ “ನಾಳೆ ಗಂಗೆಗೆ ಏನು ಹೆಚ್ಚು ಕಮ್ಮಿ ಆದ್ರೂ ಇವರೆಲ್ಲ ಸೇರಿ ಜವಾಬ್ದಾರಿ ತಕ್ಕೊತರ ಕೇಳು ಸಾಕಿ” ಎಂದ. ಚಂದ್ರಹಾಸ, ಗಿರಿಧರ ವೆಂಕಟೇಶ ಮೂರು ಜನರು ಎದೆ ತಟ್ಟಿಕೊಂಡು. “ನಾವಿರೋ ತನ್ಕಾ ಅವಳಿಗೆ ಯಾವ ತೊಂದ್ರೆನು ಆಗ್ದಂಗ್ ನೋಡ್ಕೋತೀವಿ. ನಮ್ಮ ಮೇಲೆ ನಂಬಿಕೆ ಇಡಕೇಳವ್ವ” ಎಂದರು.  ಅಪ್ಪ “ಸರಿ ಅದೇನ್ ಮಾಡ್ತೀರೋ ಅದುನ್ನಾದ್ರು ಅಚ್ಕಾಟ್ಟಗಿ ಮಾಡಿ. ಅವಳ ಹಣೆಲಿ ಬರ್ದಂಗ್ ಆಯ್ತದೆ” ಎಂದು ಹೇಳಿ ಹೊಟ್ಟೆಯ ಸಂಕಟ ತಾಳಲಾರದೆ ಹಿತ್ತಿಲ ಕಡೆ ಹೆಜ್ಜೆ ಹಾಕಿದ.

ಕಷ್ಟ ಪಟ್ಟು ಅಪ್ಪ ಹೊಂದಿಸಿ ತಂದಿದ್ದ ಅಷ್ಟೋ ಇಷ್ಟೋ ದುಡ್ಡಿನಲ್ಲಿ, ಚಂದ್ರಹಾಸ  ಮುವತ್ತು ರೂಪಾಯಿ ಕೊಟ್ಟು  ತನ್ನ ಹೆಂಡತಿಯ ಅಡವಿಟ್ಟಿದ್ದ ಚಿನ್ನದ ಕುಚ್ಚಿನ ಕುಪ್ಪಿಗೆಯನ್ನು ಬಿಡಿಸಿ ತಂದ. ಅದನ್ನು ಕರಗಿಸಿ ಗಂಗೆಗೆ ತಾಳಿ, ಕಾಲುಂಗುರ, ಹುಡುಗ ಹುಡುಗಿಗೆ ಒಂದು ಜೊತೆ ಬಟ್ಟೆ ತರುವಷ್ಟರಲ್ಲಿ ಅಪ್ಪ ಕೂಡಿಸಿ ಕೊಟ್ಟಿದ್ದ ಅಷ್ಟೂ ಹಣವೂ ಖಾಲಿಯಾಯಿತು. ಇನ್ನು ಮದುವೆಯ ರಿಜಿಸ್ಟರ್ ಖರ್ಚು, ನಾರಿಪುರದಿಂದ ಮಾದಲಪುರಕ್ಕೆ ಅವರೆಲ್ಲರ ಓಡಾಟದ ಖರ್ಚು, ಗಂಡನ ಮನೆಗೆ ಹೋಗುವಾಗ ಮಗಳ ಕೈಗಿಡಲು ಬೇಕಾದ ಒಂದಷ್ಟು ಪುಡಿಗಾಸು ಹೀಗೆ ಸಣ್ಣ ಪುಟ್ಟ ಖರ್ಚು ವೆಚ್ಚವೇ ತಲೆ ಮೇಲೆ ಬೆಟ್ಟದಂತೆ ಕೂತಿತ್ತು. ದಾರಿ ಕಾಣದಂತಾದ ಅಪ್ಪ, ವಿಧಿಯೇ ಇಲ್ಲದೆ ಸತ್ತ ಮಗಳು ಲಕ್ಷ್ಮೀ ಹೆಸರಿನಲ್ಲಿ ಬಿಟ್ಟುಕೊಂಡಿದ್ದ ಹಸುವನ್ನು  ಮಾರಲೇಬೇಕಾದ ಪರಿಸ್ಥಿತಿ ಎದುರಾಯಿತು. ಅವ್ವ ತನ್ನ ಜೀವವನ್ನೇ ಕಿತ್ತು ಕೊಡುತ್ತಿದ್ದೇನೋ ಎನ್ನುವಂತಹ ವೇದನೆ ಅನುಭವಿಸುತ್ತಾ  ಹಸುವಿಗೆ ಪೂಜೆ ಮಾಡಿ  ನಮಸ್ಕರಿಸಿದಳು. ಮಗಳು, ಲಕ್ಷ್ಮಿಗೆ ಇಷ್ಟದ ಕೆಲವು ತಿಂಡಿಗಳನ್ನು ತಿನ್ನಿಸಿ ಗೂಟಕ್ಕೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಚಂದ್ರಹಾಸನ ಕೈಗಿತ್ತಳು. ಮಾತು ಕಳೆದುಕೊಂಡ ಅಪ್ಪ ತನ್ನ ಗಂಡು ಮಕ್ಕಳ ಹಠಮಾರಿತನಕ್ಕೆ  ಬೇಸರಿಸುತ್ತಾ, ರೆಕ್ಕೆ ಮುರಿದ ಹಕ್ಕಿಯಂತೆ ಚಡಪಡಿಸುತ್ತಾ ಕೊಟ್ಟಿಗೆಯ ಒಂದು ಬದಿಗೆ ನಿಂತಿದ್ದ.  ಹಸುವನ್ನು ತಬ್ಬಿ ಹಿಡಿದು ಒಂದೇ ಸಮನೆ ಅಳುತ್ತಿದ್ದ ಗಂಗೆಯ ಕೈಕೊಸರಿದ ಚಂದ್ರಹಾಸ, “ಈ ನಾಟ್ಕನೆಲ್ಲಾ ನಿಲ್ಸಿ ಹಸ ಬುಟ್ಟು ಆ ಕಡೆ ಹೋಗು. ನಿನ್ನಿಂದ್ಲೆ ತಾನೇ ಈ ಹಸ ಮಾರ್ತಿರದು”  ಎಂದು ಗದರಿದ. “ನಿನ್ನಿಂದಲೇ” ಎನ್ನುವ ಮಾತನ್ನು ಕೇಳಿ ಗಂಗೆಯ ಕೋಪ ನೆತ್ತಿಗೇರಿತು. “ನನ್ನ್ ಮದುವೆ ಮಾಡಿ ಅಂತ ನಿಮ್ಮ ಎದೆ ಮೇಲೆ ನಿಂತಿದ್ದೀನಿ ಅನ್ನೊ ಹಂಗೆ ಹೇಳ್ತಿದ್ದಿಯಲ್ಲ ನಾಚ್ಕೆ ಆಗಬೇಕು ನಿನ್ ಮಕ್ಕೆ” ಎಂದು ಉಗಿದಳು. ಚಂದ್ರಹಾಸ “ನನಗೆ ಉಗಿತಿಯೇನೆ ಗಂಡ್ ಬೀರಿ” ಎಂದು ಗಂಗೆಯ ಮುಂದಲೆಗೆ ಕೈ ಹಾಕಿದ. ನಡುವೆ ಬಂದ ಅವ್ವ “ಹೂಂ ಇವುಳುನ್ನು ಹೊಡ್ದು ಕೊಂದು ಬುಡಪ್ಪ ಅತ್ಲಗಿ. ಆ ಮಗಳಿರೋವರಿಗೂ ಅವಳನ್ನ ಹುರ್ದು ಮುಕ್ಕಿದ್ರಿ. ಇನ್ನು ಹೆಣ್ ಸಂತಾನ ಅಂತ ಉಳಿದಿರೋದು ಇವ್ಳೊಬ್ಬಳು. ಇವ್ಳುನ್ನು ಬಡ್ದು ಬಾಯ್ಗಾಕೋ ಬುಡಿ” ಎಂದು ಚಂದ್ರಹಾಸನ ಬೆನ್ನಿನ ಮೇಲೆ ಗುದ್ದಿದಳು. ಎಂದೂ ಯಾವ ಹೊತ್ತು ಗಂಡುಮಕ್ಕಳನ್ನು ಬಿಟ್ಟು ಕೊಟ್ಟು ಮಾತಾಡಿದ ಚರಿತ್ರೆಯೇ ಇಲ್ಲದ ಅವ್ವನ ನಡವಳಿಕೆಗೆ ಅಪ್ಪನೇ ಕ್ಷಣ ಬೆರಗಾಗಿ ಹೋದ. ಮೂರು ಜನ ಗಂಡು ಮಕ್ಕಳ ಮೇಲೆ ಹೆಣ್ಣು ಮಗು ಹುಟ್ಟಿದರೆ ದಟ್ಟ ದರಿದ್ರ ಅಡರಿಕೊಳ್ಳುತ್ತದೆ ಎಂದು ಯಾರೋ ಹೇಳಿದ್ದ ಮಾತನ್ನು ಬಲವಾಗಿ ನಂಬಿದ್ದ ಅವ್ವ, ಇದೇ ಮಗಳು ಸಾಯಲೆಂದು ಮೂರುದಿನ ಹಾಲು ನೀರು ಕೊಡದೆ ಹಠ ಹಿಡಿದು ಕೂತ ದಿನಗಳು ಅಪ್ಪನ ಕಣ್ಣ ಮುಂದೆ ರಪ್ ಎಂದು ಹಾದು ಹೋಯಿತು. ಇದೇ ಹೆಂಡತಿಯ ದೊಡ್ಡತನವನ್ನು ಕಣ್ಣಾರೆ ಕಂಡಿದ್ದ ಅಪ್ಪ, ಮನುಷ್ಯನೊಳಗಿನ ವೈರುಧ್ಯಗಳ ಬಗ್ಗೆ ಸದಾ ಕುತೂಹಲವನ್ನೂ, ಗೌರವವನ್ನೂ ಹೊಂದಿದ್ದ. ಹಾಗಾಗಿಯೇ ಎಂದೂ ಯಾವ ಉದ್ವೇಗಕ್ಕೂ ಒಳಗಾಗದೆ ಅವ್ವನ ಈ ಅವಿವೇಕದ ನಡೆಯನ್ನು ಕೂಡ ತಾಳ್ಮೆಯಿಂದಲೇ ಸರಿಪಡಿಸಿದ್ದ.

ಇದೇ ಅವ್ವ ಬಿದಿರು ಮೆಳೆಯೊಳಗೆ ಸಾವಿನ ದವಡೆಯಲ್ಲಿದ್ದ  ಮೂರು ದಿನದ ಹಸುಳೆಯನ್ನು ರಕ್ಷಿಸಿ ಹೆಣ್ಣು ,ಗಂಡು, ಜಾತಿ, ಜಾತಕ, ಸೂತಕ, ಏನೊಂದು ನೋಡದೇ ಮಡಿಲಿಗೆ ಕಟ್ಟಿಕೊಂಡು ಬಂದು, ಮಹಾಲಕ್ಷ್ಮಿ ಎಂದು ಹೆಸರಿಟ್ಟು ಇಪ್ಪತ್ತು ವರ್ಷಗಳು ಹೂವಿನಂತೆ ಸಾಕಿದ್ದಳು. ತನ್ನ ಎಲ್ಲಾ ಮಕ್ಕಳಿಗಿಂತಲೂ ಒಂದು ಹಿಡಿ ಹೆಚ್ಚೇ ಪ್ರೀತಿ ನೀಡಿ ಬಹಳ ಮುಚ್ಚಟೆಯಿಂದ ಬೆಳೆಸಿದ್ದಳು. ತಿಂಗಳು ಎನ್ನುವುದರೊಳಗೆ ಮದುವೆ ಮಂಟಪವೇರಬೇಕಾದ ಲಕ್ಷ್ಮಿ ವಾರ ಎನ್ನುವುದರೊಳಗೆ ದೆವ್ವ ಹಿಡಿದು ಸತ್ತೇ ಹೋದಳು. ಈ ಘಟನೆ ನಡೆದು ಆರು ವರ್ಷಗಳೇ ಕಳೆದು ಹೋದವು ಈ ಕಟು ಸತ್ಯವನ್ನು ಅರಗಿಸಿಕೊಳ್ಳಲು ಅವ್ವನಿಗಾಗಲಿ, ಅಪ್ಪನಿಗಾಗಲಿ, ಗಂಗೆಗಾಗಲಿ  ಇಂದಿಗೂ ಸಾಧ್ಯವಾಗಿಲ್ಲ.

(ಮುಂದುವರೆಯುವುದು)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

347 ಆಲ್ಕೋಹಾಲ್‌ ಬ್ರೀತ್‌ ಅನಲೈಸರ್‌ಗಳ ಖರೀದಿಗೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ಸರ್ಕಾರಿ ಸಾರಿಗೆಯಲ್ಲಿ  ಕುಡಿದು ವಾಹನ ಚಲಾಯಿಸುವ ಚಾಲಕರಿಗೆ ಎಚ್ಚರವಹಿಸಲು ರಾಜ್ಯಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಒಟ್ಟು 347 ಆಲ್ಕೋಹಾಲ್‌ ಬ್ರೀತ್‌ ಅಲಲೈಸರ್‌ಗಳನ್ನು ಖರೀದಿಸಲು ಮುಂದಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸುರಕ್ಷಾತಾ ಪ್ರಾಧಿಕಾರದ ಕ್ರಿಯಾ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಕೆಆರ್‌ಟಿಸಿ, ಬಿಎಂಟಿಸಿ, ಸೇರಿದಂತೆ ಸಾರಿಗೆ ಇಲಾಖೆಗೆ 347 ಆಲ್ಕೋಹಾಲ್‌ ಬ್ರೀತ್‌ ಅನಲೈಸರ್‌ಗಳ ಖರೀದಿಗೆ ಒಟ್ಟು 2.9 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಮಾಡಿದೆ.

ಇದರ ಉದ್ದೇಶವು ಕುಡಿದು ವಾಹನ ಓಡಿಸುವುದರಿಂದ ಅಪಘಾತಕ್ಕೆ ಕಾರಣವಗುತ್ತದೆ ಮತ್ತು ಇದರಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಎಂದು ಪರಿಗಣಿಸಿ, 2022-23 ನೇ ಸಾಲಿನ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಈ ಕ್ರಿಯಾ ಯೋಜನೆಯನ್ನು ರೂಪಿಸಲು ಅನುಮೋದನೆಯನ್ನು ನೀಡಿದೆ.

ಕೆಚ್ಚೆದೆಯ ಹೋರಾಟಗಾರ, ಕೆಳದಿ ಸಂಸ್ಥಾನದ ಕುಡಿ; ಬೂದಿ ಬಸಪ್ಪ ನಾಯಕ.
ಇತಿಹಾಸದ ಪುಟಗಳಲ್ಲಿ ದಾಖಲಾಗದ, ಸಾವಿರಾರು ಮಲೆನಾಡಿಗರ ಬಲಿದಾನದ ಮಹಾನ್ ರೈತ ಹೋರಾಟ

ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಶ್ರೇಯ ತೀರ್ಥಹಳ್ಳಿಗೆ ಸಿಗಬೇಕಿದೆ

ಇತಿಹಾಸದ ಪುಟಗಳಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾಗಿ ದಾಖಲಾಗಿರುವ 1857 ರ ಸ್ವಾತಂತ್ರ್ಯ ಹೋರಾಟಕ್ಕಿಂತಾ ಮೊದಲೇ ಅಂದ್ರೆ 1829 ರಿಂದ 1831 ರ ವರೆಗೆ ನಡೆದ ಮಲೆನಾಡು ರೈತರ ಹೋರಾಟ ಮೈಸೂರು ಅರಸರನ್ನು ,ಬ್ರಿಟೀಷರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಸ್ವಾತಂತ್ರ್ಯದ ಕಿಚ್ಚು ತೀರ್ಥಹಳ್ಳಿಯ ಆಸುಪಾಸಿನ ಹಳ್ಳಿಗಳಿಂದಲೇ ಆರಂಭವಾದರೂ ಇಡೀ ಮೈಸೂರು ಸಾಮ್ರಾಜ್ಯದಲ್ಲೇ ಕಿಚ್ಚೆಬ್ಬಿಸಿ ನಡುಕ ಎಬ್ಬಿಸಿತ್ತು.

ಹದಿನೆಂಟನೇ ಶತಮಾನದ ಪ್ರಾರಂಭದಲ್ಲಿ ಮೈಸೂರು ನೆಲದಲ್ಲಿ ನಡೆದ ಅತೀ ದೊಡ್ಡ ರೈತಧಂಗೆಯ ಪ್ರೇರಕ ಶಕ್ತಿಯಾಗಿದ್ದು‌ ಈ ತೀರ್ಥಹಳ್ಳಿಯ ನೆಲ ಎಂದರೆ ಆಶ್ಚರ್ಯವಾಗಬಹುದು. ಅದರಲ್ಲೂ ಇಡೀ ಕರ್ನಾಟಕದ ಭೂಭಾಗಗಳಲ್ಲಿ‌ ನಡೆದ ಅತ್ಯಂತ ವ್ಯವಸ್ಥಿತ ಹೋರಾಟ ಮೈಸೂರು ಅರಸರ ಮತ್ತು ಬ್ರಿಟೀಷ್ ಸೈನ್ಯದ ಜಂಟಿ ಕಾರ್ಯಾಚರಣೆಗೂ ಜಗ್ಗದೆ ಎರಡು ಮೂರು ವರ್ಷಗಳು ಮೈಸೂರು ಅರಸರ ಹಾಗೂ ಬ್ರಿಟಿಷ್ ಸೈನ್ಯದ ನಿದ್ದೆಗೆಡಿಸಿ ಕೊನೆಗೆ ಮೈಸೂರು ಅರಸರ ಪದವಿ‌ ಹದಿನೇಳು ವರ್ಷದವರೆಗೆ ಕಸಿದು, ಸಾವಿರಾರು ರೈತರು ಪ್ರಾಣ ಕಳೆದುಕೊಂಡು ವೀರಾಧಿವೀರ ಕೆಳದಿ ವಂಶಸ್ಥ ಜಳದಬಯಲಿನ ವಾಸಿ ಬೂದಿ ಬಸಪ್ಪ ನಾಯಕರು ಭೂಗತರಾಗುವುದರೊಂದಿಗೆ ಪರ್ಯಾವಸನಗೊಂಡಿತು.‌ ಇತಿಹಾಸದ ಪುಟಗಳಲ್ಲಿ ಬಿರ್ಸಾ ಮುಂಡಾ, ವೀರ ನಾರಾಯಣ ಸಿಂಗ್,ಅಲ್ಲೂರಿ ಸೀತಾರಾಮರಾಜು, ರಾಮಜೀ ಗೊಂಡರ ಹೋರಾಟಗಳಂತೆ ಪ್ರಾಮುಖ್ಯತೆ ಪಡೆಯದೇ ಹೋದದ್ದು ಈ‌ ನೆಲದ ದುರಂತ.

ಕೃಷಿ ಮತ್ತು ಕೃಷಿ ಸಂಬಂಧಿತ ವ್ಯವಹಾರಗಳಲ್ಲಿ ಇಡೀ ಭಾರತಕ್ಕೆ ಅಗ್ರಗಣ್ಯರಾಗಿ ಸಾವಿರಾರು ವರ್ಷಗಳಿಂದಲೂ ಹೊರಹೊಮ್ಮಿದ್ದು ದಕ್ಷಿಣ ಭಾರತೀಯರೇ, ಅದರಲ್ಲೂ ಮಲೆನಾಡಿನ ಕಾಳುಮೆಣಸು,ಅಡಿಕೆ ಮತ್ತು ಇತರೆ ಸಾಂಬಾರು ಪದಾರ್ಥಗಳಿಗೆ ಸ್ವರ್ಗವಾಗಿತ್ತು. ಕೆಳದಿಯ ರಾಜಮನೆತನದ ಉಚ್ಚ್ರಾಯ ಕಾಲದಲ್ಲಿ ಇಡೀ ಪಶ್ಚಿಮ ಘಟ್ಟದ ಒಡೆಯರಾಗಿದ್ದ ಕೆಳದಿ ಅರಸರು ಪೋರ್ಚುಗೀಸರು, ಡಚ್ಚರನ್ನು, ಮೊದ ಮೊದಲು ಪೋರ್ಚುಗೀಸರ ನೆರಳಿನಲ್ಲೇ ಬಂದ ಬ್ರಿಟಿಷರನ್ನು ಸಮುದ್ರದ ದಡದಲ್ಲೆ ನಿಲ್ಲಿಸಿ ವ್ಯಾಪಾರ ಮಾಡಿ ಅಪಾರ ಹಣಗಳಿಸಿದವರು. ಎಂದೆಂದಿಗೂ ಅವರನ್ನು ನಾಡಿನೊಳಕ್ಕೆ ಬಿಟ್ಟುಕೊಂಡವರಲ್ಲಾ. ಕೆಳದಿಯ ಅರಸೊತ್ತಿಗೆ ಕಾಲದಲ್ಲಿ ಕೃಷಿ ಅತ್ಯಂತ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿತ್ತು. ಬೆಳಗಾವಿಯಿಂದ ಕಾಸರಗೋಡಿನವರೆಗೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವಿಶಾಲವಾದ ರಾಜ್ಯ ಕಟ್ಟಿಕೊಂಡಿದ್ದ ಕೆಳದಿ ರಾಜರು ಪ್ರತಿ ಪ್ರಾಂತ್ಯದಲ್ಲು ಒಂದೊಂದು ಬೆಳೆಗೆ ಸ್ಥಳ ಮೀಸಲಿರಿಸಿದ್ದರು.‌ ಇಂದು ಗದ್ದೆ ,ತೋಟ, ಬಯಲು, ಸರ ಗಳ ಹೆಸರಿನಿಂದ ಅಂತ್ಯವಾಗುವ ಎಲ್ಲಾ ಸ್ಥಳ , ಪ್ರದೇಶಗಳು ಕೆಳದಿ ಅರಸರ ಕೃಷಿ ಜಮೀನುಗಳ ಪ್ರದೇಶವೇ ಆಗಿದ್ದವು. ಶಿಸ್ತಿನ ಶಿವಪ್ಪ ನಾಯಕರ ಕಾಲದಲ್ಲಿ ಜಾರಿಗೆ ತಂದ ಕಂದಾಯ ನೀತಿ ಈಗಲೂ ಬಳಕೆಯಾಗುತ್ತಿದೆ ಅನ್ನುವುದು ಹೆಮ್ಮೆಯ ವಿಚಾರ.

ಕೆಳದಿ ಸಂಸ್ಥಾನದ ಅಂತ್ಯದೊಂದಿಗೆ ಪ್ರದೇಶವಾರು ಕೃಷಿಗೆ ಪೆಟ್ಟು ಬಿದ್ದಿತು, ನಂತರ ಬಂದ ಹೈದರಾಲಿ ಮತ್ತು ಟಿಪ್ಪು ಸುಲ್ತಾನ ಇಡೀ ಕರ್ನಾಟಕದ ಅಷ್ಟೂ ಪ್ರದೇಶಗಳಿಗೆ ಜಂಟಿ ಕೃಷಿ ನೀತಿ ತಂದಿದ್ದು ಮಲೆನಾಡಿಗೆ ಇದ್ದ ಅತ್ಯುತ್ತಮ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು. ಇನ್ನು ಟಿಪ್ಪುವಿನ ಅಂತ್ಯದೊಂದಿಗೆ ದಕ್ಷಿಣಕ್ಕೆ ಅಧಿಕೃತವಾಗಿ ಕಾಲಿಟ್ಟ ಬ್ರಿಟಿಷರು ಕಂದಾಯವನ್ನು ಭಾರತದಿಂದ ದೋಚುವ ಹಣವನ್ನಾಗಿ ನೋಡಿದ್ದಷ್ಟೇ. ಬ್ರಿಟಿಷರೊಂದಿಗೆ ಸೇರಿ ಮೈಸೂರು ಅರಸರು ಈಗಿರುವ ಕರ್ನಾಟಕ ಪ್ರದೇಶದಷ್ಟು ಗೆದ್ದು ಬೀಗಿದರೂ ಬೆಂಬಲವಾಗಿ ನಿಂತ ಮರಾಠ ಪೇಶ್ವೆಗಳಿಗೆ ಮುಂಬೈ ಕರ್ನಾಟಕ, ಅತ್ಯಂತ ಕ್ರೂರ ದೊರೆಗಳು ಎಂದೇ ಬಿಂಬಿತರಾದ ನಿಜಾಮರಿಗೆ ಹೈದರಾಬಾದ್ ಕರ್ನಾಟಕವನ್ನು ಬಿಟ್ಟು ಕೊಟ್ಟು ಸಮೃದ್ಧವಾಗಿದ್ದ ಕೆಳದಿ ಸಂಸ್ಥಾನದ ಪ್ರದೇಶವನ್ನು ತನ್ನೊಂದಿಗೆ ಉಳಿಸಿಕೊಂಡರು, ಇಲ್ಲಿಯ ಕೃಷಿ ಸಂಬಂಧಿತ ಕಾನೂನು ನಿರ್ವಹಣೆಯ ಅರಿವಿಲ್ಲದೇ ಹೋದದ್ದು ಮಲೆನಾಡಿನ ಕೃಷಿಗೆ, ಕೃಷಿ‌ ನಂಬಿಕೊಂಡಿದ್ದ ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

ಐಪಿಎಲ್ ಟೀಮ್‌ಗಳ‌ ಮಾದರಿಯಲ್ಲಿ ಹರಾಜಗಿದ್ದವು ಕೆಳದಿ ಸಾಮ್ರಾಜ್ಯದ ತಾಲ್ಲೂಕುಗಳು.

ಅತ್ಯಂತ ಸಂಪದ್ಭರಿತ ಕೃಷಿ ಪ್ರದೇಶಗಳ ಮೇಲೆ ಕಣ್ಣಿಟ್ಟ ಬ್ರಿಟಿಷರ ಜಂಟಿ ಕಾರ್ಯಪಡೆ ಮೈಸೂರು ಅರಸರನ್ನು ಬಳಸಿಕೊಂಡು ಬಿದನೂರು( ಈಗಿನ ನಗರ)ನಿಂದ ಕೇಂದ್ರೀಕೃತವಾಗಿದ್ದ ಕೆಳದಿ ರಾಜ್ಯಕ್ಕೆ ಇಪ್ಪತ್ತೇಳು‌ ಲಕ್ಷ ಪಗೋಡಾಗಳ ಕಂದಾಯ ಫಿಕ್ಸ್ ಮಾಡಿ ಆದೇಶ ಹೊರಡಿಸಿತು. ಎಲ್ಲ ಮುಖ್ಯ ಪ್ರದೇಶಗಳ ಅಧಿಕಾರಿಗಳಾಗಿ ಮರಾಠರನ್ನು ನೇಮಿಸಿ ಪ್ರತಿ ತಾಲ್ಲೂಕನ್ನು ಹರಾಜು ಹಾಕಲಾಯಿತು, ಅತಿ ಹೆಚ್ಚು ಹಣಕ್ಕೆ ಬಿಡ್ ಮಾಡುವವರನ್ನು ಅಮಲ್ದಾರನನ್ನಾಗಿ ಘೋಷಿಸಲಾಯಿತು. ದೊಡ್ಡ ದೊಡ್ಡ ಮೊತ್ತಗಳಿಗೆ ತಾಲ್ಲೂಕುಗಳನ್ನು ಕೊಂಡು ಕೊಂಡ ಅಮಲ್ದಾರರು ಕಂದಾಯ ಒಟ್ಟುಗೂಡಿಸಲು ಸಾಮಾನ್ಯ ಕೃಷಿಕರ ಮೇಲೆ ಮುಗಿಬಿದ್ದರು. ದಿವಾನ್ ಪೂರ್ಣಯ್ಯ ಕಾಲವಾಗುವವರೆಗೆ ಒಂದು ಹಂತದಲ್ಲಿ ಸರಿಯಿದ್ದ ಸ್ಥಿತಿ 1829ರ ವೇಳೆಗೆ ಬಿಗಡಾಯಿಸಿತು. ಮೈಸೂರು ಅರಸರಿಗೆ ಬಿದನೂರಿನಿಂದ ಇಪ್ಪತ್ತೆಂಟು ಲಕ್ಷ ಪಗೋಡಾದ ಬದಲು ಇಪ್ಪತ್ತೈದು ಲಕ್ಷ ಪಗೋಡಾ ಅಷ್ಟೆ ಕಂದಾಯ ಸಲ್ಲಿಕೆಯಾಯಿತೆಂದು ಬ್ರಿಟಿಷ್ ಆಡಳಿತ ಕನಲಿ ಕೆಂಡವಾಯಿತು. ಬಿದನೂರು ಪ್ರಾಂತ್ಯದ ಅಧಿಕಾರಿಗಳಿಗೆ ನೋಟಿಸ್ ಕೂಡಾ ಜಾರಿಯಾಯಿತು. ಬಿದನೂರು ಆಡಳಿತ ನೋಡುತ್ತಿದ್ದ ರಾಮ ರಾವ್ ,ಕೃಷ್ಣ ರಾವ್ ಮರಾಠ ಸಹೋದರರು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದರು. ಆದರೆ ತಪ್ಪಿಸಿಕೊಳ್ಳುವ ಸಲುವಾಗಿ ಜನರು ಸರಿಯಾಗಿ ಕಂದಾಯ ಕಟ್ಟುತ್ತಿಲ್ಲಾ ಎಂಬ ಪ್ರತಿ ದೂರು ನೀಡಿದರು. ದೂರು,ಪ್ರತಿ ದೂರಿನ ವಿಚಾರಣೆಗೆ ಕಾಂತ ರಾಜೇ ಅರಸ್ ಎಂಬ ಮತ್ತೊಬ್ಬ ಅಧಿಕಾರಿಯನ್ನು ಬಿದನೂರಿಗೆ ಕಳುಹಿಸಲಾಯಿತಾದರೂ ಈ ಅಧಿಕಾರಿಗೆ ಹೆಚ್ಚಿನ ಯಾವ ಮಾಹಿತಿಯೂ ದೊರೆಯದೇ ಸಮಸ್ಯೆ ಮತ್ತಷ್ಟು ಜಟಿಲವಾಯಿತು.

ಅತ್ಯಂತ ಸಂಪದ್ಭರಿತ ಕೃಷಿ ವ್ಯವಸ್ಥೆಯೊಂದಿಗೆ ಕಂದಾಯ ಕಟ್ಟಿಕೊಂಡು ಸುಖವಾಗಿ ಬದುಕುತ್ತಿದ್ದ ಮಲೆನಾಡಿಗರಿಗೆ ಅಮಲ್ದಾರನ ದರ್ಪದ ಕಂದಾಯ ಮರಣ ಶಾಸನವಾಗಿ ಮಾರ್ಪಟ್ಟಿತು. ಜೊತೆಗೆ ಐದಾರು ವರ್ಷಗಳಿಂದ ಸತಾಯಿಸಿದ ಬರಗಾಲ ಕೃಷಿ ಕಾರ್ಯಗಳಿಗೆ ಹೆಚ್ಚಿನ ಪೆಟ್ಟು ನೀಡಿತು. ಅಡಿಕೆ ತೋಟಗಳು, ಭತ್ತದ ಗದ್ದೆಗಳು, ಕಾಳುಮೆಣಸಿನ ಕೃಷಿ ಕಷ್ಟದಾಯಕವಾಗತೊಡಗಿತು.‌ ಇದರ ನಡುವೆಯೇ ಮಲೆನಾಡ ಜಮೀನುಗಳ ಮೇಲೆ ಮರಾಠರ ದಾಳಿಯೂ ಪ್ರಾರಂಭವಾಯಿತು. ಬೇಸತ್ತ ಜನ ಅತ್ಯಂತ ನಿಗೂಢವಾಗಿ, ಸಾರ್ವಜನಿಕ ಜೀವನದಿಂದ ದೂರವೇ ಉಳಿದು ಬದುಕುತ್ತಿದ್ದ ಕೆಳದಿ ರಾಜವಂಶಸ್ಥರ ಬಳಿ ದೂರು ಕೊಂಡೊಯ್ದರು. ರಾಜವಂಶಸ್ಥರಿಂದ ಜಂಗಮವಾಡಿಗಳಿಗೆ ಸುದ್ದಿ ತಲುಪಿ ಪ್ರತಿಭಟನೆಗೆ ವೇದಿಕೆ ಸಿದ್ಧಪಡಿಸುವ ಹೊಣೆ ಹೊತ್ತುಕೊಂಡಿತು ಶಿವಭಕ್ತರಕೂಟ.

ಶಿವಭಕ್ತಕೂಟ ಎಂದರೆ ಅದೊಂದು ಅನೂಹ್ಯ ಸೀಕ್ರೆಟ್ ಪ್ರಪಂಚ. ಕೆಳದಿ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ ಆರಂಭವಾದ ಜಂಗಮವಾಡಿಗಳ ಶಿವ ಕೂಟ, ಸಾಮ್ರಾಜ್ಯದ ಬೆನ್ನೆಲುಬಾಗಿ , ಅಧಿಕಾರ ಧಾರಣೆ, ಸಾಮ್ರಾಜ್ಯ ವಿಸ್ತರಣೆ, ಮತ್ತು ಮಹತ್ವದ ವಿಷಯಗಳ ನಿರ್ಧಾರದ ಹಕ್ಕು ಪಡೆದು ನೂರಾರು ವರ್ಷದ ನಿಗೂಢ ಜೀವನ ನಡೆಸಿದ ಕೆಳದಿಯದೇ ಒಂದು ಪ್ಯಾರೆಲಲ್ ವಂಶ. ಶೈವತ್ವ ವಿಸ್ತರಣೆ ಇದರ ಪ್ರಮುಖ ಗುರಿಯಾಗಿತ್ತು. ಇದು ಕೆಳದಿ ಸಾಮ್ರಾಜ್ಯದ ಪತನದ ನಂತರವೂ ನೂರಾರು ವರ್ಷ ದಾಳಿ ಪ್ರತಿದಾಳಿಗಳ ಭಾಗವಾಗುತ್ತಲೇ ಶೈವತ್ವದ ರಕ್ಷಕನಾಗಿ ಹೋರಾಟ ಸಂಘಟಿಸುತ್ತಲೇ ಬಂದಿತ್ತು. ಸ್ವಾತಂತ್ರ್ಯಾ ನಂತರ ದೇಶ ಸೃಷ್ಟಿಯೊಂದಿಗೆ ಕಾಲಗರ್ಭದಲ್ಲಿ ಜಂಗಮವಾಡಿ, ಶಿವಭಕ್ತರ ಕೂಟ ಸೇರಿ ಹೋಯಿತು.

ಇತಿಹಾಸದ ಪುಟಗಳಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾಗಿ ದಾಖಲಾಗಿರುವ 1857ರ ಸ್ವಾತಂತ್ರ್ಯ ಹೋರಾಟಕ್ಕಿಂತಾ ಮೊದಲೇ ಅಂದ್ರೆ 1829ರಿಂದ 1831ರ ವರೆಗೆ ನಡೆದ ಮಲೆನಾಡು ರೈತರ ಹೋರಾಟ ಮೈಸೂರು ಅರಸರನ್ನು ,ಬ್ರಿಟೀಷರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು , ಸ್ವಾತಂತ್ರ್ಯದ ಕಿಚ್ಚು ತೀರ್ಥಹಳ್ಳಿಯ ಆಸುಪಾಸಿನ ಹಳ್ಳಿಗಳಿಂದಲೇ ಆರಂಭವಾದರೂ ಇಡೀ ಮೈಸೂರು ಸಾಮ್ರಾಜ್ಯದಲ್ಲೇ ಕಿಚ್ಚೆಬ್ಬಿಸಿ ನಡುಕ ಎಬ್ಬಿಸಿತ್ತು.

ರೈತರು ಅನಿವಾರ್ಯವಾಗಿ ಕರನಿರಾಕರಣೆಯ ಸಾಧ್ಯತೆಯನ್ನು
ಸಮರ್ಥವಾಗಿ ಸ್ವಾತಂತ್ರ್ಯದ ಹೋರಾಟವಾಗಿ ಬಳಸಿಕೊಳ್ಳಲು ಕೆಳದಿಯ ಶಿವಕೂಟ ನಿರ್ಧರಿಸಿತು. ಅದಾಗಲೇ ಮೈಸೂರು ರಾಜರು ಕೆಳದಿ ವಂಶಸ್ಥರು ನಮ್ಮೊಂದಿಗೇ ಇದ್ದಾರೆ ಎಂದು ತೋರಿಸಲು ತಮ್ಮ ಆಶ್ರಯದಲ್ಲಿದ್ದ ತರೀಕೆರೆಯ ರಂಗಪ್ಪನಾಯಕರನ್ನು ರಾಜ ವಂಶಸ್ಥ ಬೂದಿ ಬಸಪ್ಪ ನಾಯಕನಿಗೆ ಭೇಟಿ ಮಾಡಿಸಿ ಬೆಂಬಲ‌ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಅತ್ಯಂತ ರಹಸ್ಯವಾಗಿ ಬೂದಿಬಸಪ್ಪನಾಯಕನಿಗೆ ಪಟ್ಟಾಭಿಷೇಕ ಮಾಡಿ , ಐವತ್ತರವತ್ತು ವರ್ಷಗಳಿಂದ ಅತ್ಯಂತ ರಹಸ್ಯವಾಗೇ ಉಳಿದಿದ್ದ ರಾಜಮುದ್ರೆಯನ್ನು ಬೂದಿ ಬಸಪ್ಪನಾಯಕರಿಗೆ ತೊಡಿಸಿ ಬ್ರಿಟಿಷರನ್ನು, ಅವರೊಂದಿಗಿರುವ ಮೈಸೂರು ಅರಸರನ್ನು ಸೋಲಿಸಿ ಕರಾಳ ಕಂದಾಯವನ್ನು ವಾಪಾಸು ಪಡೆಯುವ ವಾಗ್ದಾನ ಪಡೆಯಲಾಗುತ್ತದೆ. ಅಂದು ನಡೆದ ಸಭೆಯಲ್ಲಿ ಜಂಗಮವಾಡಿಯ ಮಠಾಧೀಶರನ್ನು ನೂರಾರು ಸಂಖ್ಯೆಯಲ್ಲಿ ಸೇರಿಸಿ ಬೂದಿ ಬಸಪ್ಪನಾಯಕರಿಗೆ ಆಶೀರ್ವದಿಸಲಾಗುತ್ತದೆ. ಜಂಗಮವಾಡಿಯ ಜನ ಸಾಮಾನ್ಯರಂತೇ ಕಂಡರೂ ಅವರನ್ನು ಗುರುತಿಸುವುದು, ಅವರ ಮೈಮೇಲಿದ್ದ ಭಂಡಾರದ ಗುರುತುಗಳು, ಅವರ ಬಳಿ‌ ಇರುತ್ತಿದ್ದ ಬೇವಿನ ಎಲೆ ಮತ್ತು ಒಂದು ತುಂಡು ಮೂಳೆಗಳಿಂದಾಗಿತ್ತು.‌ ಬೇವಿನ ಎಲೆ ಮತ್ತು ಮೂಳೆಯನ್ನು ಶಿವನ ಗುರುತು ಎಂದೇ ಶಿವಭಕ್ತರ ಕೂಟದ ನಂಬಿತ್ತು.

ಹೀಗೆ ಬೂದಿ ಬಸಪ್ಪನಾಯಕರನ್ನು ರಾಜನೆಂದು ಹೊರಜಗತ್ತಿಗೆ ಘೋಷಿಸುವುದು ಹೊರಪ್ರಪಂಚದಲ್ಲಿ ಅಪಾಯವನ್ನು ಆಹ್ವಾನಿಸಿದಂತೆ ಎಂದು ವಿಷಯವನ್ನು ರಹಸ್ಯವಾಗಿಟ್ಟೆ ರೈತರನ್ನು ಸಂಘಟಿಸಲಾಯಿತು. ವಿಷಯ ತಿಳಿದರೇ ಬ್ರಿಟಿಷರು ಇದನ್ನು ದೊಡ್ಡ ಅಪಾಯ ಎಂದೇ ಪರಿಗಣಿಸುತ್ತಿದ್ದರು. ಜಂಗಮವಾಡಿಯ ಜನ ಇದಕ್ಕೊಂದು ಉಪಾಯ ಹೂಡಿ ಮೈಸೂರಿನ ಆಡಳಿತಕ್ಕೆ ಮಂಕುಬೂದಿ ಎರಚುವ ಸಲುವಾಗಿ ಬೂದಿ ಬಸಪ್ಪನಾಯಕರು ವೃತ್ತಿಯಲ್ಲಿ ಕಳ್ಳರೆಂದು ತಾನು ರಾಜನೆಂದು ಕತೆ ಕಟ್ಟಿ ಹೇಳುತ್ತಿದ್ದಾರೆ , ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲಾ ಎನ್ನುವ ಹಾಗೆ ವಿಷಯ ತಲುಪಿಸಿ ನಿರುಮ್ಮಳರಾಗಿ ಕೆಳದಿ‌ ಸಂಸ್ಥಾನ ನಿಷ್ಟರಿಗಷ್ಟೇ ನಿಜ ವಿಷಯ ಅರುಹತೊಡಗಿದರು. ರೈತರ ಸಣ್ಣ ಸಣ್ಣ ಗುಂಪು ಮಾಡಿ ಸ್ವಾತಂತ್ರ್ಯದ ಕಿಚ್ಚು ಹಚ್ಚಲಾಯಿತು. ಕೆಳದಿ ಅರಸರ ಸೋಲಿನೊಂದಿಗೆ ಕಾಡು ಪಾಲಾಗಿದ್ದ ದೀವರ ಸೇನೆಯನ್ನು ಕಾಸರಗೋಡು ತಿಮ್ಮಣ್ಣನಾಯಕರ ಮೊಮ್ಮಕ್ಕಳ ನೇತೃತ್ವದಲ್ಲಿ‌ ಅನಂತಪುರ, ಸಾಗರ ಸಿದ್ದಾಪುರದ ಆಸುಪಾಸಿನ ಪ್ರದೇಶಗಳಲ್ಲಿ ರಹಸ್ಯ ಸಭೆ ನಡೆಸಿ ಸಂಘಟಿಸಲಾಯಿತು. ಈ ಹಿಂದೆ 1800 ರಲ್ಲಿ ಯುದ್ಧ ಸಂಘಟಿಸಿದ ದಾಂಡಿಯಾವಾಘ್ ಜೊತೆಗೆ ಸಾಥ್‌ ಕೊಟ್ಟು ಕನ್ನಡ ನಾಡಲ್ಲಿದ್ದ ಮರಾಠರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತು. ಕರ್ನಾಟಕದ ಪಿಂಡಾರ, ಮರಾಠರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಗಾಜನೂರು , ಚನ್ನಗಿರಿ, ಹೊದಿಗೆರೆಯಲ್ಲಿ ರಹಸ್ಯ ಸಭೆ ನಡೆಸಲಾಯಿತು. ಒಂದು ಮಟ್ಟಿಗೆ ಸಂಘಟನೆಯಾದ ಕೂಡಲೇ ನಿದಾನವಾಗಿ ಬಹಿರಂಗ ಸಭೆಗಳನ್ನೇ ನಡೆಸುವ ಪ್ರಯತ್ನವಾಗಿ ಆಗಸ್ಟ್ 23 , 1930 ರಂದು ಹೊಸಂತೆ ಯಲ್ಲಿ ರೈತರ ಬೃಹತ್ ಸಮಾವೇಶ ನಡೆಸಿ ಕಂದಾಯ ಕೊಡದಿರಲು ನಿರ್ಧರಿಸಲಾಯಿತು. ಅಷ್ಟರಲ್ಲಿ ಜಂಗಮವಾಡಿಯ ಶಿವಭಕ್ತರ ಕೂಟ ಇಡೀ ಮೈಸೂರು ಪ್ರಾಂತ್ಯದಲ್ಲಿ ರೈತರ ಗುಂಪುಗಳನ್ನು ಸಂಘಟಿಸಿ ರೈತ ಹೋರಾಟದ ಕಿಡಿ ಹಚ್ಚಿ ,ಸ್ವಾತಂತ್ರ್ಯದ ಕಹಳೆ ಊದಲು ವೇದಿಕೆ ಸಿದ್ಧಪಡಿಸಿತ್ತು. ಚನ್ನರಾಯಪಟ್ಟಣ, ಮಂಡ್ಯ, ಚನ್ನಗಿರಿ, ಮಲೆನಾಡು ಪ್ರಾಂತ್ಯದ ಸಾಗರ, ಅನಂತಪುರ, ಕವಲೇದುರ್ಗ, ಬಿದನೂರುಗಳಲ್ಲಿ ಸಣ್ಣ ಪ್ರಮಾಣದ ರೈತ ಕರನಿರಾಕರಣೆಯ ಘೋಷವಾಕ್ಯಗಳು ಮೊಳಗಿದವು. . ಜಮಲಾಬಾದ್ (ದಕ್ಷಿಣ ಕನ್ನಡ) ನ ಜಿಲ್ಲಾ ಅಮಲ್ದಾರನಿಗೂ ಇದರ ಬಿಸಿ ತಟ್ಟಿತ್ತು. ಬಿದನೂರು ಅಮಲ್ದಾರ ರಾಮರಾವ್ ಹಾಗೂ ನೆಂಟ ಕೃಷ್ಣ ರಾವ್ ದಂಗೆಯ ತೀವ್ರತೆ ಹೆಚ್ಚಾಗುತ್ತಿದ್ದರೂ ತಮ್ಮ ಹರಕತ್ತುಗಳೆಲ್ಲಾ ಬಯಲಿಗೆ ಬರುವ ಸಾಧ್ಯತೆಗಳಿಂದ‌ ಮೈಸೂರು ಅರಸರು ಇಲ್ಲಿಗೆ ಬರುವುದನ್ನು ತಡೆದುಬಿಟ್ಟರು. ರೈತರ ದಂಗೆ ಎಂದು ಪರಿಗಣಿಸಿದ ಮೈಸೂರು ರಾಜರು ಇದರ ಶಮನಕ್ಕೆ ಚನ್ನರಾಯಪ್ಟಣದವರೆಗೆ ಬಂದ ಮೈಸೂರು ರಾಜ ಬಿದನೂರಿಗೆ ಬಾರದೇ ಹೋದದ್ದು ಬಿದನೂರು ರೈತರ ಕಿಚ್ಚು ಇನ್ನೂ ಹೆಚ್ಚಾಗಲು ಕಾರಣವಾಯಿತು.

ಬೂದಿ ಬಸಪ್ಪ ನಾಯಕರ ಪಡೆ ದಿನದಿಂದ ದಿನಕ್ಕೆ ರೈತರ ಬೆಂಬಲವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು. ಮೈಸೂರು ಪಡೆಗಳ ಅಧೀನದಲ್ಲಿದ್ದ ಬಿದನೂರು, ಕವಲೇದುರ್ಗ, ಕಮಾನುದುರ್ಗ, ಚಂದ್ರಗುತ್ತಿ, ಚನ್ನಗಿರಿ ಕೋಟೆಗಳನ್ನು ಅತಿಕ್ರಮಿಸಿ ಕೊಂಡಿತು‌. ಬ್ರಿಟೀಷ್ ಸೈನ್ಯ ಹೆಚ್ಚಿನ ಸೈನ್ಯಕ್ಕಾಗಿ ಮೊರೆ ಇಟ್ಟು ಮದ್ರಾಸ್ ರೆಜಿಮೆಂಟ್ – 24ನ್ನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕರೆಸಿಕೊಂಡಿತು. ಆದ್ರೆ ರಹಸ್ಯ ಕಾರ್ಯಾಚರಣೆಗಳಲ್ಲಿ ಪಳಗಿದ್ದ ಜಂಗಮವಾಡಿಯ ಶಿವಕೂಟ ಯಾವುದೇ ಕೋಟೆಗೆ ಬ್ರಿಟಿಷರು ದಾಳಿ ಇಟ್ಟರೂ ,ದಾಳಿ ಇಡುವ ಮುನ್ನವೇ ಮಾಹಿತಿ ಪಡೆದು ,ಬ್ರಿಟಿಷರಿಗೆ ನಿಷ್ಟರಾದವರನ್ನು ಕೊಂದು ತಪ್ಪಿಸಿಕೊಂಡು ಇನ್ನೊಂದು ಕೋಟೆಯಲ್ಲಿ ಧ್ವಜ ನೆಡತೊಡಗಿತು. ಬಿದನೂರು ಮೇಲೆ ದಾಳಿ ಮಾಡಿದಾಗ, ಚಂದ್ರಗುತ್ತಿ, ಚಂದ್ರಗುತ್ತಿಯ ಮೇಲೆ ದಾಳಿ ಮಾಡಿದಾಗ ಕವಲೇದುರ್ಗ ಹೀಗೆ ನಾಲ್ಕಾರು ಬಾರಿ ಸುತ್ತಿಸಿ ಬ್ರಿಟಿಷ್ ಸೈನ್ಯವನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಬ್ರಿಟಿಷರ ಕೋಪ ನೆತ್ತಿಗೇರುವಂತೆ ಮಾಡಿತು.

ಮುಂದುವರೆಯುವುದು

(ಮುಂದಿನ ಭಾಗದಲ್ಲಿ ; ಹೊನ್ನಾಳಿಯಲ್ಲಿ ನಡೆಯಿತು ಜಲಿಯನ್ ವಾಲಾಬಾಗ್ ಮಾದರಿ ಹತ್ಯಾಕಾಂಡ….)

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಆದರ್ಶ್ ಹುಂಚದಕಟ್ಟೆ
ಯುವ ಚಿಂತಕರು, ವಾಗ್ಮಿ

ಸ್ವಾತಂತ್ರ್ಯ ಹೋರಾಟದಲ್ಲಿ ಬಿಲ್ಲವರು: ಜೈಲಿನ ಕಡತಗಳು ಹೇಳುವ ಸಾಕ್ಷಿ
ಭಾರತದ ಸ್ವಾತಂತ್ರ್ಯ ಚಳುವಳಿಯು ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕು, ಪ್ರಾಣವನ್ನು ಮುಡಿಪಾಗಿಟ್ಟ ಜನರ  ನಿಸ್ವಾರ್ಥ ಹೋರಾಟದ ಸುದೀರ್ಘ ಇತಿಹಾಸದ ಜನ ಸಂಗ್ರಾಮ. ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ವಿರುದ್ಧ ಶಸ್ತ್ರ ಹಿಡಿದು ಹೋರಾಟ ಮಾಡದೇ ಹೋದರೂ ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಧಾರೆ ಎರೆದ ಹಲವರ ತ್ಯಾಗ ಬಲಿದಾನ ಹೋರಾಟದ ಸುದೀರ್ಘ ಇತಿಹಾಸವು ಈ ನಾಡಿನ ಮೂಲೆ ಮೂಲೆಗಳಲ್ಲಿ ಪಿಸುಗುಡುತ್ತಿದ್ದು ಈ ಹೋರಾಟಗಾರರ ಬಗ್ಗೆ ಇತಿಹಾಸದ ಪುಟಗಳು ತೆರೆ ಮರೆಯಲ್ಲಿ ಉಳಿದು ಮೌನವಾಗಿವೆ. ಆ ತೆರೆ ಸರಿಸಿ ಮರೆಯಲ್ಲಿ ಉಳಿದ, ಹೆಚ್ಚು ಪ್ರಚಾರ ಪಡೆಯದ ಸಾಮಾನ್ಯರ ಹೋರಾಟದ ಚರಿತ್ರೆಯನ್ನು ಸ್ಮರಿಸುವ ಪ್ರಯತ್ನ ಮಾಡುವುದು ಮತ್ತು  ಸ್ವಾತಂತ್ರ್ಯ-75ರ ಈ ಸಂದರ್ಭಕ್ಕೆ ಪೀಪಲ್‌ ಮೀಡಿಯಾ ಸಲ್ಲಿಸುವ ಗೌರವವೆಂದು ನಾವು ಭಾವಿಸುತ್ತೇವೆ.

ದಕ್ಷಿಣ ಕನ್ನಡದ ಬಿಲ್ಲವ ಸಮುದಾಯದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಶಿಕ್ಷೆಗೆ ಒಳಗಾಗಿದ್ದಾರೆ ಎಂದು  ತಿಳಿಯುತ್ತದೆ. ಬಿಲ್ಲವರ ಮನಸ್ಥಿತಿಯ ದರ್ಶನವಾಗುತ್ತದೆ ಮಾತ್ರವಲ್ಲ ಬಿಲ್ಲವರ  ದೌರ್ಬಲ್ಯಗಳೇನೆಂಬುದನ್ನು ಜೈಲಿನ ಕಡತಗಳು ನಮಗೆ ಮನವರಿಕೆ ಮಾಡಿಕೊಡುತ್ತವೆ ಎಂದು ನಿವೃತ್ತ ಶಿಕ್ಷಕಿ, ಸಾಮಾಜಿಕ ಚಿಂತಕಿ ಬಿ.ಎಂ ರೋಹಿಣಿ ಹೇಳುತ್ತಾರೆ. ʼಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ   ದಕ್ಷಿಣ ಕನ್ನಡದ ಮಹಿಳೆಯರು ಮತ್ತು ಪುರುಷರುʼ ಎಂಬ ಅಧ್ಯಯನ ನಡೆಸುವ ಸಂದರ್ಭದಲ್ಲಿ  ಈ ಮಾಹಿತಿಗಳನ್ನು ಅವರು ಜೈಲಿನ ಕಡತಗಳ ಒಳ ಹೊಕ್ಕು  ಕಲೆ ಹಾಕಿದ್ದಾರೆ.

ಜೈಲುಗಳು ನಾಗರಿಕ ಸಮಾಜದ ಕೊಡುಗೆ. ನಮ್ಮ ದೇಶದಲ್ಲಿ ಸಾವಿರಾರು ಜೈಲುಗಳಿವೆ. ನಮ್ಮ ಕರ್ನಾಟಕದಲ್ಲಿಯೇ ಬೇರೆ ಬೇರೆ ಕೆಟಗರಿಯ ನೂರು ಜೈಲುಗಳಿವೆ. ಮಂಗಳೂರಿನ ಜಿಲ್ಲಾ ಕಾರಾಗ್ರಹವು 1850 ರಲ್ಲಿ ಸ್ಥಾಪಿತವಾಗಿದೆ. ಅಂದಿನಿಂದ ಇಂದಿನ ವರೆಗೂ ಲಕ್ಷಾಂತರ ಮಂದಿ ಅಪರಾಧಿಗಳು ಈ ಬಂದೀಖಾನೆಯಲ್ಲಿ ಶಿಕ್ಷೆ ಅನುಭವಿಸಿದ್ದಾರೆ. ಈಗಲೂ ಸುಮಾರು 250 ರಷ್ಟು ಮಂದಿ ಸ್ತ್ರೀ ಪುರುಷ ಕೈದಿಗಳು ವಿಚಾರಣಾಧೀನರಾಗಿಯೋ, ಕಾನೂನಿನ ರೀತಿಯಲ್ಲಿ ಶಿಕ್ಷೆಯನ್ನು ಸ್ವೀಕರಿಸಿಯೋ ಇಲ್ಲಿ ಕ್ಷಣಗಣನೆಯನ್ನು ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ಪೂರ್ವದ ಕಾಲದ ಜೈಲಿನ ನಿರ್ವಹಣೆ ಬ್ರಿಟಿಷರ ಕೈಯಲ್ಲಿತ್ತು. ಜೈಲಿನ ಕಡತಗಳಲ್ಲಿ ದಾಖಲಾದ ಅಪರಾಧ ದಾಖಲೆಗಳು, ಆಧುನಿಕ ಕಾಲದ ಜೈಲಿನ ದಾಖಲೆಗಳಿಗೆ ವಿಶೇಷ ವ್ಯತ್ಯಾಸವೇನೂ ಕಾಣದು. ಒಂದೇ ಒಂದು ವ್ಯತ್ಯಾಸವೆಂದರೆ, ಸ್ವಾತಂತ್ರ್ಯ ಹೋರಾಟಗಾರರು ಜೈಲು ಶಿಕ್ಷೆಗೆ ಒಳಗಾದದ್ದು. ಬ್ರಿಟಿಷರ ವಿರುದ್ಧ ಹೋರಾಡಿ ಡಿಫೆನ್ಸಿವ್ ಆಫ್ ಇಂಡಿಯಾ ಆಕ್ಟ್ ಸೆಕ್ಷನಿನ ಮೂಲಕ ಜೈಲು ಶಿಕ್ಷೆ ಅನುಭವಿಸಿದ್ದು. ಇವರಲ್ಲಿ ಹೆಚ್ಚಿನವರು ಬಳ್ಳಾರಿಯ ಆಲಿಪುರಂ ಜೈಲಿಗೆ ರವಾನಿಸಲ್ಪಟ್ಟವರು. ಕೆಲವರು ಇಲ್ಲಿಯೇ ಒಂದು ತಿಂಗಳೋ, ಮೂರು ತಿಂಗಳೋ ಜೈಲು ಶಿಕ್ಷೆ ಪಡೆದವರು.

ಅನಾಮಿಕರಾಗಿ ಉಳಿದ ಹಿಂದುಳಿದ ವರ್ಗದ ಸ್ವಾತಂತ್ರ್ಯಹೋರಾಟಗಾರರು

ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಬರೆದ ಲೇಖಕರು ನಾಯಕರುಗಳ ಜತೆಯಲ್ಲಿ ನೂರಾರು ಮಂದಿ ಹಿಂದುಳಿದ ವರ್ಗದ ಮೊಗವೀರರು, ಬಿಲ್ಲವರು, ದೇವಾಡಿಗರು, ದಲಿತರು, ಸೆರೆಮನೆಗೆ ತಳ್ಳಲ್ಪಟ್ಟರು ಎಂದು ದಾಖಲಿಸಿದ್ದಾರೆ. ಆದರೆ, ಈ ನೂರಾರು ಮಂದಿ ಹಿಂದುಳಿದ ವರ್ಗದವರು ಅನಾಮಿಕರಾಗಿಯೇ ಉಳಿದಿದ್ದಾರೆ. ಜೈಲು ಸೇರಿದ ಕೈದಿಗಳ ಹೆಸರುಗಳ ಮುಂದೆ ಭಟ್, ಶೆಣೈ, ಕಾಮತ್, ಪ್ರಭು, ಶೆಟ್ಟಿ ಮುಂತಾದ ಉಪನಾಮಗಳಿರುವುದರಿಂದ ಅವರು ಯಾವ ಸಮುದಾಯಕ್ಕೆ ಸೇರಿದವರೆಂಬುದನ್ನು ಗುರುತಿಸಲು ಸಾಧ್ಯವಿದೆ. ಸೇಸ, ದೂಮ, ಲಿಂಗಪ್ಪ, ತುಕ್ರ, ಮುಂತಾದ ಹೆಸರುಗಳುಳ್ಳ ದಾಖಲೆಗಳು ಹಿಂದುಳಿದ ಮತ್ತು ದಲಿತ ವರ್ಗವೆಂದು ಖ್ಯಾತಿಯಾಗುತ್ತದಾದರೂ, ಯಾವ ಸಮುದಾಯಕ್ಕೆ ಸೇರಿದವರೆಂಬುದು ನಮೂದಿಸಲ್ಪಟ್ಟಿಲ್ಲ. ಇಲ್ಲಿ ನಾಯಕರ ಅನುಯಾಯಿಗಳಾಗಿ ಬಂದುದು ಒಂದು ಕಾರಣವಾದರೆ, ತಮ್ಮ ಹೆಸರನ್ನು ಕಡತದಲ್ಲಿ ಸರಿಯಾಗಿ ನಮೂದಿಸಲಾಗದ ಅವರ ಅನಕ್ಷರತೆಯೂ ಕಾರಣವಾಗಿದೆ.  ಅಲ್ಲದೆ, ಈ ಅನುಯಾಯಿಗಳನ್ನು ಕೇವಲವಾಗಿ ಕಂಡ ಜೈಲು ಸಿಬ್ಬಂದಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ.

ಇವರು ಮಾಸಾಶನ ಪಡೆದ ದಾಖಲೆಗಳಿಲ್ಲ

ಈ ಸೇಸ, ತುಕ್ರನವರು ಸ್ವಾತಂತ್ರ್ಯ ಯೋಧರಿಗೆ ಸಲ್ಲುವ ಯಾವ ಮಾಸಾಶನವನ್ನು ಪಡೆದ ದಾಖಲೆಗಳಿಲ್ಲ. ಉಳಿದವರ ಹೆಸರುಗಳಲ್ಲಿ ಅವರು ಸರಕಾರದ ಮಾಸಾಶನ ಪಡೆದ ದಾಖಲೆಗಳಿವೆ. ಇನ್ನೂ ಒಂದು ವಿಶೇಷ ದಾಖಲೆಯೆಂದರೆ, 143 ನೇ ಸೆಕ್ಷನ್ ಅಡಿಯಲ್ಲಿ ಜೈಲು ಸೇರಿದ ಮೇಲ್ವರ್ಗದವರು ಸ್ವಾತಂತ್ರ್ಯ ಹೋರಾಟಗಾರರು ಪಡೆಯುವ ಕೀರ್ತಿ ಮತ್ತು ಸೌಲಭ್ಯಗಳನ್ನು ಪಡೆದಿದ್ದಾರೆ. ಆದರೆ, ಅದೇ ಸೆಕ್ಷನ್ ಅಡಿಯಲ್ಲಿ ಜೈಲು ಸೇರಿದ ರಾಮ ಪೂಜಾರಿ, ತಿಮ್ಮಪ್ಪ ಪೂಜಾರಿ, ಪಿ ನಾರಾಯಣ ಪೂಜಾರಿಯವರಿಗೆ 143 ಸೆಕ್ಷನ್ ಜತೆಗೆ 379 ಸೆಕ್ಷನ್ ಅನ್ನು ಲಗತ್ತಿಸಲಾಗಿದೆ. 379 ಸೆಕ್ಷನ್ ಕಳವು ಅಪರಾಧಕ್ಕೆ ಸಂಬಂಧಿಸಿದ್ದು. ಈ ಬಿಲ್ಲವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರೂ ಕಳವು ಕೇಸೊಂದು ಅವರನ್ನು ಸುತ್ತಿಕೊಂಡದ್ದು ಹೇಗೆ? ಎಂಬುದು ನಿಗೂಢವಾಗಿದೆ. ಇವರಲ್ಲಿ ಇಬ್ಬರು ಅನಕ್ಷರಸ್ಥರಾಗಿದ್ದು, ಒಬ್ಬ ಅಕ್ಷರಸ್ಥನಾಗಿದ್ದ. ಇದು 1942 ನೇ ಇಸವಿಯ ಕಾಲದ ಸ್ವಾತಂತ್ರ್ಯ ಚಳುವಳಿಯ ಜೈಲಿನ ಕಡತಗಳಲ್ಲಿರುವ ದಾಖಲೆಗಳು.

ನಾಯಕರ ಅನುಯಾಯಿಗಳಾಗಿಯೇ ತೃಪ್ತಿಪಟ್ಟವರು

ಸ್ವಾತಂತ್ರ್ಯ ಹೋರಾಟಗಾರರು ಜೈಲು ಸೇರಿದ ದಿನದಂದೇ ಗೋವಿಂದ ಪೂಜಾರಿ, ಕಾಳು ಪೂಜಾರಿ ಮುಂತಾದವರು ಒಂದೇ ಸೆಕ್ಷನ್ ಅಡಿಯಲ್ಲಿ ಬಂಧಿತರಾಗಿದ್ದಾರೆ. ಆದರೆ, ಅವರು ಸ್ವಾತಂತ್ರ್ಯ ಹೋರಾಟಗಾರರೆಂಬ ಸರ್ಟಿಫಿಕೇಟ್ ಪಡೆದ ದಾಖಲೆಗಳಿಲ್ಲ. ಹಿಂದುಳಿದ ಸಮುದಾಯ ಅಕ್ಷರ ಸಂಸ್ಕೃತಿಗೆ ಆಗ ತಾನೇ ಪ್ರವೇಶ ಪಡೆದ ಕಾಲವಾಗಿತ್ತದು. ಆರ್ಥಿಕವಾಗಿ ಸಬಲರಾಗಿದ್ದರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದು ಗೌರವದ ಕೆಲಸ ಎಂದಾಗಲೀ, ದೇಶಭಕ್ತಿಯ ದ್ಯೋತಕವೆಂದಾಗಲೀ ಈ ಸಮುದಾಯ ಅರಿತಿರಲಿಲ್ಲ. ಅದೊಂದು ಮನೆ ಹಾಳು ಮಂದಿಯ ತಲೆತಿರುಕ ಕೆಲಸವೆಂಬ ಭಾವನೆಯೇ ಈ ಮಂದಿಯಲ್ಲಿ ವ್ಯಾಪಕವಾಗಿತ್ತು. ಹಾಗೆಂದು, ಬಿಲ್ಲವರು ಮೊಗವೀರರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲೇ ಇಲ್ಲವೆಂದು ಹೇಳುವಂತಿಲ್ಲ. ಇಲ್ಲಿಯ ಜನಸಂಖ್ಯೆಗೆ ಹೋಲಿಸಿದರೆ, ಅವರ ಸಂಖ್ಯೆ ತೀರಾ ಕಡಿಮೆಯೆಂದೇ ಹೇಳಬೇಕು. ನಾಯಕರಾಗಿ ಮುಂದುವರಿಯಲು ಬೇಕಾದ ಧೀಶಕ್ತಿ ಕೊರತೆಯೂ ಇದಕ್ಕೆ ಕಾರಣ ಇದ್ದಿರಬಹುದು. ಸಂಘಟನಾ ಚಾತುರ್ಯವು ಉಳಿದ ವರ್ಗದಲ್ಲಿದ್ದಂತೆ ಇವರಲ್ಲಿ ಇರಲಿಲ್ಲವೆಂದೇ ಹೇಳಬೇಕು. ಮುನ್ನುಗ್ಗುವ ಛಾತಿ ಇತ್ತು,ಕೆಚ್ಚು ಇತ್ತು. ನಾಯಕರ ಅನುಯಾಯಿಗಳಾಗಿ ಮುಂದುವರಿಯುವುದರಲ್ಲಿಯೇ ಯಶಸ್ಸು ಕಂಡ ಸಮುದಾಯವಿದು.

ಬಿಲ್ಲವರಿಗೆ ತಟ್ಟಿದ ಮದ್ಯಪಾನದ ಶಾಪ

ಗಾಂಧೀಜಿಯ ಮದ್ಯಪಾನ ನಿಷೇಧದ ಕರೆಯೂ ಈ ವರ್ಗವನ್ನು ಚಳುವಳಿಯಲ್ಲಿ ನಿರಂತರವಾಗಿ ದುಡಿಸಿಕೊಳ್ಳುವುದರಲ್ಲಿ ಸೋತಿರಬಹುದು. ಯಾಕೆಂದರೆ, ಆ ಕಾಲದ ದಾಖಲೆಗಳು ಹೇಳುವ ಸತ್ಯಗಳೇ ಇದಕ್ಕೆ ಸಾಕ್ಷಿಯಾಗಿದೆ. ಪಾನ ನಿಷೇಧದಿಂದ ಬ್ರಿಟಿಷರ ಕಾಲದಲ್ಲೂ ಅಕ್ರಮ ಸಾರಾಯಿ ದಂಧೆ ಮಾಡಿ ಜೈಲು ವಾಸ ಕಂಡವರಲ್ಲಿ 70% ಮಂದಿ ಬಿಲ್ಲವರು. ಮದ್ಯಪಾನ ಆಗಲೂ ಈಗಲೂ ಬಿಲ್ಲವರಿಗೆ ಶಾಪವಾಗಿ ಕಾಡುತ್ತಿದೆ. ಈ ಶಾಪದಿಂದ ಬಿಡುಗಡೆ ಹೊಂದಿದ ಕೆಲವರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರಾಗಿ ಗುರುತಿಸಿಕೊಂಡದ್ದು ಕಾಣುತ್ತದೆ.

ಲ್ಯಾಂಡ್‌ ಲಾರ್ಡ್‌ ಸೋಮಪ್ಪ ಪೂಜಾರಿ

ಜೈಲಿನ ಕಡತಗಳಲ್ಲಿರುವ ಇನ್ನೂ ಒಂದು ಮಹತ್ತ್ವದ ಸಂಗತಿ ಎಂದರೆ ಸೋಮಪ್ಪ ಪೂಜಾರಿ ಎಂಬವರು 302 ಸೆಕ್ಷನ್ ಅಡಿಯಲ್ಲಿ ಬಂಧಿತರಾಗಿದ್ದ ದಾಖಲೆಯಲ್ಲಿ ಆತ ‘ಲ್ಯಾಂಡ್ ಲಾರ್ಡ್’ ಎಂದು ನಮೂದಿತನಾಗಿದ್ದಾನೆ. ಹೀಗೆ ನಮೂದಿಸಲ್ಪಡಬೇಕಾದರೆ ಆತನಿಗೆ ಎಷ್ಟು ಜಮೀನಿತ್ತೆಂಬುದು ತಿಳಿಯುತ್ತದೆ. ಬಿಲ್ಲವರು ಸ್ಥಳೀಯ ರಾಜರಿಂದ ಉಂಬಳಿ ಜಮೀನು ಪಡೆದ ದಾಖಲೆಗಳಿವೆ ಎಂದು ನಮ್ಮ  ಕ್ಷೇತ್ರ ಕಾರ್ಯಗಳು ತಿಳಿಸುತ್ತವೆ. ಅಂತಹ ಸಾವಿರಾರು ಎಕರೆ ಜಮೀನನ್ನು  ಅಪಾತ್ರರಿಗೆ ದಾನ ಮಾಡಿಯೋ, ಧರ್ಮ ನೇಮ ಮಾಡಿ ಸಾಲಕ್ಕಾಗಿ ಮಾರಿಯೋ  ಐಷಾರಾಮೀ ಬದುಕಿಗೆ ದಾಸರಾಗಿ ಮೂರು ಕಾಸಿಗೆ ಜಮೀನನ್ನು ಮಾರಾಟ ಮಾಡಿಯೋ ಕಳಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಜಮೀನಿನ ವ್ಯಾಜ್ಯಕ್ಕಾಗಿ ಕೊಲೆ, ಮನಸ್ತಾಪಗಳು ಸರ್ವೇ ಸಾಮಾನ್ಯ ಎಂದು ಜೈಲಿನ ಕಡತಗಳು ಹೇಳುತ್ತವೆ.

ಶತಮಾನಗಳ ಹಿಂದೆ ಬಿಲ್ಲವರು ಹೀಗಿದ್ದರು

ಜೈಲಿನ ಕಡತಗಳಲ್ಲಿ ಕೈದಿಯ ವೇಷಭೂಷಣಗಳ ಉಲ್ಲೇಖಗಳೂ ಇವೆ.  ತಲೆಗೊಂದು ಮುಂಡಾಸು, ಕಿವಿಯಲ್ಲಿ ಮೇಲೆ  ಮತ್ತು ಕೆಳಗೆ ಚಿನ್ನದ ಆಭರಣ, ಕಾಲಿಗೆ ಕಡಗ ಧರಿಸಿದ ವಿವರಗಳು ಇವೆ. ಶತಮಾನಗಳ ಹಿಂದಿನ ಕಾಲದಲ್ಲಿ ಬಿಲ್ಲವರು ಹೇಗಿದ್ದರು ಎಂಬುದನ್ನು ಈ ದಾಖಲೆಗಳು ಸಾಕ್ಷೀಕರಿಸುತ್ತವೆ. 1868 ನೇ ಇಸವಿಯ ದಾಖಲೆಗಳಲ್ಲಿ ಹೆಚ್ಚಾಗಿ ಕಳ್ಳತನ ಮತ್ತು ಕೊಲೆ ಕೇಸುಗಳೇ ದಾಖಲಾಗಿವೆ. ಅವುಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದವರಲ್ಲೂ ಬಿಲ್ಲವರ ಸಂಖ್ಯೆಯೇ ಗಣನೀಯವಾಗಿದೆ. ಈ ಸಮುದಾಯ ಯಾಕೆ ಹಿಂದುಳಿದಿದೆ ಎಂಬುದಕ್ಕೆ ಜೈಲು, ಕೋರ್ಟುಗಳ ಸುತ್ತಾಟವೇ ಕಾರಣವಾಗಿರಬಹುದಲ್ಲವೇ? ಬಹುಷಃ ಈಗಲೂ ಕೂಡಾ ಜೈಲಿನಲ್ಲಿರುವ ಅಪರಾಧಿಗಳಲ್ಲಿ ಬಿಲ್ಲವರ ಸಂಖ್ಯೆಯೂ ಗಣನೀಯವಾಗಿದೆ.

ಈ ಕಡತಗಳು ಒಂದರ್ಥದಲ್ಲಿ ಅಮೂಲ್ಯ ನಿಧಿಗಳು. ಆದರೆ, ಅವುಗಳು ಈಗ ಇರುವ ಸ್ಥಿತಿಯಲ್ಲಿಯೇ ಇದ್ದರೆ ಆ ದಾಖಲೆಗಳು ಪೂರ್ಣ ನಾಶವಾಗುವ ಸಂಭವವಿದೆ. ಅವುಗಳನ್ನು ಆರ್ಕೈವ್ಸ್ ಗಳಲ್ಲಿ ಇಟ್ಟು ಸಂರಕ್ಷಿಸುವ ಪ್ರಯತ್ನ ನಮ್ಮ ಆಡಳಿತ ವ್ಯವಸ್ಥೆಗಿರುವಂತೆ ಕಾಣುತ್ತಿಲ್ಲ. ಅವುಗಳ ಮಹತ್ತ್ವಗಳ ಅರಿವೂ ಅವರಿಗೆ ಇದ್ದಂತಿಲ್ಲ. ಅವುಗಳನ್ನು ದೀರ್ಘ ಕಾಲದವರೆಗೆ ಸಂರಕ್ಷಿಸುವ ಮುಂಜಾಗ್ರತೆಗಳನ್ನು ಸರಕಾರ ಆದಷ್ಟು ಶೀಘ್ರದಲ್ಲಿ ಮಾಡಬೇಕಾಗಿದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಬಿ.ಎಂ ರೋಹಿಣಿ
ಲೇಖಕಿ, ಸಾಮಾಜಿಕ ಚಿಂತಕಿ

ಸಮರ್ಥ ನಾಯಕರಿಲ್ಲದೆ ದಿಕ್ಕೆಟ್ಟ ಮುಸ್ಲಿಮರು
ಕೋಮುವಾದಿಗಳು ಸೃಷ್ಟಿಸಿರುವ ಆತಂಕ, ಅನಕ್ಷರತೆ, ಬಡತನದೊಂದಿಗೆ ಅತಂತ್ರವಾಗಿರುವ ಮುಸ್ಲಿಂ ಸಮುದಾಯವನ್ನು ಆರೋಗ್ಯಕರ ಆಲೋಚನೆಗಳೊಂದಿಗೆ ಮುನ್ನಡೆಸುವ ಯಾವುದೇ ಸಮರ್ಥ ನಾಯಕ ಈ ಸಮುದಾಯದಲ್ಲಿ ಕಾಣುತ್ತಿಲ್ಲ. ಬಹುತೇಕ ಮುಸ್ಲಿಮರಿಗೆ ಸದ್ಯದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ‌ ಮಾರ್ಗವೂ ಕಾಣುತ್ತಿಲ್ಲ.

ನಮ್ಮ ಸಾಮಾಜಿಕ ವ್ಯವಸ್ಥೆಯೇ ಎಷ್ಟೊಂದು ಕಲುಷಿತವಾಗಿದೆ ಎಂದರೆ ದಲಿತ ಪ್ರಧಾನಿ, ದಲಿತ ಮುಖ್ಯಮಂತ್ರಿಯ ಕೂಗು ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಕೇಳಿಬರುತ್ತಿದೆಯಾದರೂ ಮುಸ್ಲಿಂ‌ ಮುಖ್ಯಮಂತ್ರಿ ಅಥವಾ ಮುಸ್ಲಿಂ ಪ್ರಧಾನಿಯ ಪಿಸುಗುಟ್ಟುವಿಕೆಯೂ ಇಲ್ಲ. ಕೆಲವು ತಿಂಗಳಿಂದ ಈ ಬಗ್ಗೆಯೇ ಯೋಚಿಸುತ್ತಿದ್ದೆ. ಮೊನ್ನೆಮೊನ್ನೆಯಷ್ಟೇ ಬಿ.ಜಡ್.ಜಮೀರ್ ಅಹ್ಮದ್ ಖಾನ್ ಎಂಬ ಚಾಮರಾಜಪೇಟೆ ಶಾಸಕ, ಮುಸ್ಲಿಮರ ಸಂಖ್ಯೆ ಒಕ್ಕಲಿಗರ ಸಂಖ್ಯೆಗಿಂತ ಹೆಚ್ಚಿದೆ, ನಾನು ಕೂಡ ಮುಖ್ಯಮಂತ್ರಿ ಸ್ಥಾನದ‌ ಆಕಾಂಕ್ಷಿ ಎಂದು ಹೇಳಿದಾಗ ನಾನು ಆರಂಭಿಸಿ ನಿಂತಿದ್ದ ಲೇಖನಕ್ಕೆ ಮತ್ತೆ ಜೀವ‌ ಬಂತು.

ನಾನೇ ಬಲ್ಲಂತೆ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರ ಪದಚ್ಯುತಿಗೆ ಲಿಂಗಾಯತರಾದ ರಾಜಶೇಖರಮೂರ್ತಿ ಮತ್ತು ಒಕ್ಕಲಿಗರಾದ ಎಸ್.ಎಂ.ಕೃಷ್ಣ ಕೈಜೋಡಿಸಿದರಾದರೂ ಅವರಿಬ್ಬರೂ ತಾವೇ ಮುಖ್ಯಮಂತ್ರಿಯಾಗುವ ಪ್ರಯತ್ನ ನಡೆಸಿದ್ದರು. ಆಗ ಏನಾದರೂ ರಾಜಿ ಅಭ್ಯರ್ಥಿಯಾಗಿ ಜಾಫರ್ ಷರೀಫ್ ಹೆಸರು ಹೊರಹೊಮ್ಮಿದರೆ ಎಂಬ ಆತಂಕ, ಮುಸ್ಲಿಂ‌ ಸಮುದಾಯದ ಬಗೆಗಿನ ಅಸಹನೆಯಿಂದಾಗಿ, ಲಿಂಗಾಯತ ಜಾತಿ‌ಪ್ರೇಮದ ಪತ್ರಕರ್ತರೊಬ್ಬರು ಪ್ರತಿ ವಾರ ಜಾಫರ್ ಷರೀಫ್ ಹೆಸರಿಗೆ ಕಳಂಕ ತರುವಂಥ ಜಮೀನು ಹಗರಣ ಸೇರಿದಂತೆ ಯಾವ್ಯಾವುದೋ ವರದಿಗಳನ್ನು ಅತ್ಯುತ್ಸಾಹದಿಂದ ಬರೆದಿದ್ದನ್ನು ನಾನೇ ನೋಡಿದ್ದೇನೆ. ಆದರೆ ಆ ವರದಿಗಳಿಗೆ ಯಾವುದೇ ಆಧಾರ ಇದ್ದಂತಿರಲಿಲ್ಲ. ಆಗ ಕಂದಾಯ ಸಚಿವರಾಗಿದ್ದ ರಾಜಶೇಖರ ಮೂರ್ತಿ ಅವರ ಸಹಕಾರದಿಂದ ಜಾಫರ್ ಷರೀಫ್ ವಿರುದ್ಧ ದೂರು ಪಡೆದಿದ್ದ (ನೀಡಿದ್ದ ಅಲ್ಲ) ಪತ್ರಗಳೇ ಈ ವರದಿಗೆ ಆಧಾರವಾಗಿದ್ದವು. ಟಿ.ಎ.ಪೈ ಎಂಬ ಮೆರಿಟ್ ಇದ್ದವರೊಬ್ಬರು ರೈಲ್ವೇ ಸಚಿವರಾಗಿ ಸಂಪೂರ್ಣ ವಿಫಲರಾಗಿದ್ದರೂ ಒಂದು ಸಮುದಾಯ ಬಿಂಬಿಸುವ‌ ಯಾವುದೇ ಮೆರಿಟ್ ಇಲ್ಲದ ಜಾಫರ್ ಷರೀಫ್ ರೈಲ್ವೇ ಸಚಿವರಾಗಿ ಯಶಸ್ವಿಯಾಗಿದ್ದವರು. ಅಪ್ಪಟ ದೇಶಭಕ್ತ, ಪ್ರಶ್ನಾತೀತ ಜಾತ್ಯತೀತ ನಾಯಕ ಷರೀಫ್ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿದ್ದರೂ ಭಾರತೀಯ ಸಾಮಾಜಿಕ ವ್ಯವಸ್ಥೆಯ ಸಂಚಿನಿಂದ ಅವಕಾಶ ವಂಚಿತರಾದವರು.

ಕಾರ್ಯಕರ್ತನ ಹಂತದಿಂದ ನಾಯಕನಾಗಿ ಬೆಳೆದ ಜಾಫರ್ ಷರೀಫ್ ಒಂದು ಕಾಲಘಟ್ಟದಲ್ಲಿ ಮಾಜಿ‌ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ‌ ಕಾರು ಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದರಂತೆ. ಅವರು ಅಂದಿರಿಕಿ ಮಂಚಿವಾಳ್ಳು ಅನ್ನುವಂತಿರಲಿಲ್ಲ. ಆದರೆ ಯಾರದೇ ದ್ವೇಷ ಕಟ್ಟಿಕೊಳ್ಳಲಿಲ್ಲ. ಆರೆಸ್ಸೆಸ್ ನ‌ ಕೆಲವು ಪ್ರಮುಖರೂ ಜಾಫರ್ ಷರೀಫ್ ಜತೆ ಉತ್ತಮ‌ ಬಾಂಧವ್ಯ ಹೊಂದಿದ್ದರು. ಮುಸ್ಲಿಂ ಸಮುದಾಯದ ದುರದೃಷ್ಟ ಎಂದರೆ ಜಾಫರ್ ಷರೀಫರಂಥ ನಾಯಕ ಮತ್ತೊಬ್ಬ ರೂಪುಗೊಳ್ಳಲಿಲ್ಲ.

ರಹಮಾನ್ ಖಾನ್ ಗೆ ಸಮೂಹ ನಾಯಕತ್ವದ ಲಕ್ಷಣಗಳೇ ಇರಲಿಲ್ಲ. ಅವರಾಯಿತು ಅಮಾನತ್ ಬ್ಯಾಂಕ್ ಆಯಿತು ಎನ್ನುವಂತಿದ್ದವರು. ಅವರದೇನಿದ್ದರೂ ರಾಜ್ಯಸಭೆಯ ಕೃಪಾಪೋಷಿತ ರಾಜಕಾರಣ! ಇನ್ನೊಬ್ಬ ನಾಯಕನಾಗಿ ಬೆಳೆಯಬಹುದಾಗಿದ್ದ ಸಿ.ಎಂ.ಇಬ್ರಾಹಿಂ ವಿದೂಷಕನ ಮಟ್ಟದಲ್ಲೇ ಉಳಿದುಬಿಟ್ಟರು. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ರೋಲೆಕ್ಸ್ ವಾಚ್ ಹಗರಣ ಸೇರಿದಂತೆ ಅನೇಕ ವಿವಾದಗಳಿಂದ ಇಬ್ರಾಹಿಂ ಸುದ್ದಿಯಲ್ಲಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಒಕ್ಕೂಟ ಸರ್ಕಾರದಲ್ಲಿ ಸಚಿವರಾಗಿದ್ದರು. ಹುಬ್ಬಳ್ಳಿಯ ಈದ್ಗಾ ವಿವಾದ ಒಂದು ಮಟ್ಟದಲ್ಲಿ ಬಗೆ ಹರಿಯುವುದಕ್ಕೆ ಕಾರಣರಾಗಿದ್ದರು. ಕ್ರಮೇಣ ದೇವೇಗೌಡರೊಂದಿಗೆ ಮುನಿಸಿಕೊಂಡು ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಗೆ ವಾಪಸಾದರು. ಯಾವಾಗಲೋ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಾರಣದಿಂದ ಅವರ ಕಾಂಗ್ರೆಸ್ ವಾಪಸಾತಿಗೆ, ವಿಧಾನಪರಿಷತ್ ಸದಸ್ಯರಾಗುವುದಕ್ಕೆ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗುವುದಕ್ಕೆ ಸಾಕಷ್ಟು ಅಡೆತಡೆಗಳಿದ್ದವು. ಆದರೆ ಸಿದ್ದರಾಮಯ್ಯ ಕಾರಣದಿಂದ ಅಷ್ಟಾದರೂ ಅವಕಾಶಗಳನ್ನು ಪಡೆಯುವುದು ಸಾಧ್ಯವಾಗಿತ್ತು. ಆದರೆ ಸಿದ್ದರಾಮಯ್ಯ ತಮ್ಮನ್ನು ಮಂತ್ರಿ ಮಾಡಲಿಲ್ಲ ಎಂಬ ಬೇಸರ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕನಾಗಿ ಮಾಡಲಿಲ್ಲ ಎಂಬ ಸಿಟ್ಟು ಅವರನ್ನು ಮತ್ತೆ ಕಾಂಗ್ರೆಸ್‌ ತೊರೆಯುವಂತೆ ಮಾಡಿ ಜೆಡಿಎಸ್ ನಲ್ಲಿ‌ ದೇವೇಗೌಡರ ಪದತಲಕ್ಕೆ ಮತ್ತೆ ಬೀಳುವಂತಾಯಿತು.

ಕೆಲವು‌ ವರ್ಷಗಳ ಹಿಂದೆ ಉತ್ತರ‌ಪ್ರದೇಶದಲ್ಲಿ ಅಖಿಲ ಭಾರತ ಮುಸ್ಲಿಂ ಮಂಚ್ ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದರಾದರೂ ಅದೇನಾಯಿತೋ ಯಾರಿಗೂ ಗೊತ್ತಿಲ್ಲ.‌ ಅವರೂ ಉದ್ದೇಶಪೂರ್ವಕವಾಗಿ ಮರೆತುಬಿಟ್ಟರು. ಚಂದದ ಭಾಷಣ ಮಾಡುತ್ತಾರೆ, ವಚನಗಳನ್ನು ಉದ್ಧರಿಸುತ್ತಾರೆ. ಆದರೆ ಅವರು ಆಸ್ಥಾನ ವಿದೂಷಕ ಮಟ್ಟ‌ ಮೀರಿ ಕತ್ತಲಲ್ಲಿರುವ ಮುಸ್ಲಿಂ ಸಮುದಾಯಕ್ಕೆ ನಾಯಕನಾಗುವುದು ಹೋಗಲಿ ಮಿಣುಕು ಹುಳವಾದರೂ ಆಗುವ ಒಂದೇ ಒಂದು ಲಕ್ಷಣ ತೋರಲಿಲ್ಲ.

ರೋಷನ್ ಬೇಗ್ ಎಡಬಿಡಂಗಿಯಾಗಿ ಹಿಂದೂಗಳನ್ನು ಓಲೈಸುತ್ತಾ ಕಾಲಹರಣ ಮಾಡಿದರಷ್ಟೇ ಅಲ್ಲದೇ ಹಗರಣಗಳ ಬಲೆಯಲ್ಲಿ ಸಿಕ್ಕಿ ಬಿದ್ದರು. ಬಿಜೆಪಿ ಬಾಗಿಲು ಬಡಿದು ನಿರಾಶರಾಗಿ ವಾಪಸಾದರು. ಮುಸ್ಲಿಮರ ವಿಚಾರಗಳಿಗೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ಸದಾ ಸುದ್ದಿಯಲ್ಲಿರುತ್ತಾರಾದರೂ ಘನತೆ ಇಲ್ಲದ ಅವರ ನಾಯಕತ್ವ ಚಾಮರಾಜಪೇಟೆಯನ್ನು ಮೀರಿ ಬೆಳೆದಂತಿಲ್ಲ. ತನ್ವೀರ್ ಸೇಠ್ ಓರ್ವ ಪ್ರಾಮಾಣಿಕ ವ್ಯಕ್ತಿಯಾಗಿ ಗುರುತಿಸಿಕೊಂಡು ತಮ್ಮ ತಂದೆಯ ನವಾಬ್ ಶೈಲಿಯ ಬದುಕಿನಿಂದ ಹೊರಬಂದಿದ್ದರೂ ಗಟ್ಟಿ ನಾಯಕನಾಗಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಸಗೀರ್ ಅಹ್ಮದ್ ತುಂಬ ಸಭ್ಯರಾಗಿದ್ದರೂ ದಿಟ್ಟತನ ಕಾಣಿಸಲಿಲ್ಲ.

ದಕ್ಷಿಣ ಕನ್ನಡದ ಯು.ಟಿ.ಖಾದರ್ ತಮ್ಮ ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಜತೆ ಮಂತ್ರಿಯಾಗಿದ್ದಾಗ ಸದಾ ಸುದ್ದಿಯಲ್ಲಿದ್ದವರು. ಸ್ವಲ್ಪಮಟ್ಟಿಗಿನ ವೈಚಾರಿಕ ಪ್ರಜ್ಞೆಯೂ ಇರುವವರು. ಆದರೆ ಕನ್ನಡ ನಾಡಿನ ಮುಸ್ಲಿಮರನ್ನು ಒಗ್ಗೂಡಿಸಿ ಮುನ್ನಡೆಸುವ ಅಯಸ್ಕಾಂತೀಯ ಗುಣಗಳಿಲ್ಲ. ಬಿ.ಎ.ಮೊಯ್ದೀನ್ ರಂಥವರು ಸಜ್ಜನಿಕೆಯನ್ನು ಮೀರಿದ ರಾಜಕಾರಣ ಮಾಡಲಾಗದೇ ಮೌನದಲ್ಲೇ ಮರೆಗೆ ಸರಿದು ಬಿಟ್ಟರು. ಕೆಲವು ದಶಕಗಳ ಹಿಂದೆ ಓರ್ವ ಅಪರೂಪದ ನಾಯಕನಾಗುವ‌ ಲಕ್ಷಣಗಳನ್ನು ತೋರಿದ್ದ ಬಿ.ಎ.ಉಮರಬ್ಬ ಅಪಘಾತದಲ್ಲಿ ದುರ್ಮರಣ ಹೊಂದಿ ನೋವುಂಟು ಮಾಡಿದ್ದರು. ಕಮರುಲ್ ಇಸ್ಲಾಂ ಗುಲ್ಬರ್ಗಕ್ಕೇ ಸೀಮಿತರಾಗಿ, ಮಂತ್ರಿಯಾಗಿ ತಮ್ಮ ಸಮುದಾಯದ ನಾಯಕನಾಗುವ‌ ಯಾವುದೇ ಲಕ್ಷಣ ತೋರಲಿಲ್ಲ. ಬಿ.ಎ.ಹಸನಬ್ಬ ಎಂ.ಎಲ್.ಸಿ.‌ಆಗುವುದಷ್ಟಕ್ಕೇ‌ ಸೀಮಿತರಾಗಿ ಮರೆತೇ ಹೋಗಿಬಿಟ್ಟರು.

ಜಾಫರ್ ಷರೀಫರಿಗಿದ್ದ ದಿಟ್ಟತನ, ಸರಳತನ, ದಕ್ಷತೆ, ದೂರದೃಷ್ಟಿ ಈ ಯಾವುದೇ ಲಕ್ಷಣಗಳು ಈಗಿನ ಮುಸ್ಲಿಂ ಜನ ಪ್ರತಿನಿಧಿಗಳಲ್ಲಿ ಕಾಣುತ್ತಿಲ್ಲ. ಒಟ್ಟಿನಲ್ಲಿ ಕರ್ನಾಟಕದ ಮುಸ್ಲಿಂ ಸಮುದಾಯ ನಾಯಕರಿಲ್ಲದೇ ಸೊರಗುತ್ತಿದೆ. ಮುಸ್ಲಿಮರದೇ ಆದ ಹೊಸ ರಾಜಕೀಯ ಪಕ್ಷಗಳು ಹುಟ್ಟಿಕೊಂಡಿದ್ದರೂ ಆಶಾಭಾವನೆ ಹುಟ್ಟಿಸುವ ರೀತಿಯಲ್ಲಿ ಅವುಗಳ ಚಟುವಟಿಕೆ ಕಾಣುತ್ತಿಲ್ಲ. ಅಂಧರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ ಎಂಬಂತೆ ಸದ್ದು ಮಾಡುತ್ತಿರುವುದು, ಸುದ್ದಿಯಲ್ಲಿರುವುದು ಜಮೀರ್ ಖಾನ್. ಬೇಜವಾಬ್ದಾರಿ ಹೇಳಿಕೆಗಳಿಂದಲೇ ಸುದ್ದಿಯಾಗುವ ಜಮೀರ್ ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾದಾಗ ತಮಗೆ ಇನೋವಾ ಕಾರ್ ನೀಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ತಾವು ಬಾಲ್ಯದಿಂದಲೂ ಐಷಾರಾಮಿ ಕಾರ್ ಗಳಲ್ಲಿ ಓಡಾಡುತ್ತಿದ್ದವನು, ಈಗ‌ ನೀಡಿರುವುದು ಕೆಟ್ಟ ಕಾರಾಗಿದ್ದು ಟೊಯೋಟೋ ಫಾರ್ಚುನರ್ ಕಾರ್ ಗೆ ಬೇಡಿಕೆ ಇಟ್ಟಿದ್ದರು. ಬಸವಕಲ್ಯಾಣ ವಿಧಾನಸಭಾ‌ಕ್ಷೇತ್ರದ ಉಪಚುನಾವಣೆಯ ಸಭೆಯೊಂದರಲ್ಲಿ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಮತ್ತು ತಮ್ಮ ಒಂದು ಕಾಲದ ಗೆಳೆಯ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ‘ಕಾಲಾ ಕುಮಾರಸ್ವಾಮಿ’ ಎಂದು ಅವರ ಕಪ್ಪು ಬಣ್ಣದ ಬಗ್ಗೆ ಗೇಲಿ ಮಾಡಿದ್ದಲ್ಲದೇ ಕಪ್ಪಿರುವವರನ್ನು ಕಪ್ಪು ಎನ್ನದೇ ಬಿಳಿ ಎನ್ನಲಾಗುತ್ತದೆಯೇ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಹಿಜಾಬ್ ವಿವಾದದ ಸಂದರ್ಭದಲ್ಲಿ ಅವರು ಭಾರತದಲ್ಲಿ ಮಹಿಳೆಯರು ಹಿಜಾಬ್ ಧರಿಸದಿರುವುದರಿಂದಲೇ ಅತ್ಯಾಚಾರ ಪ್ರಕರಣಗಳು ಹೆಚ್ಚು ಎಂಬ ತಮ್ಮ ಅಪರೂಪದ ಸಂಶೋಧನೆಯನ್ನು ಮುಂದಿಟ್ಟು ಉಗಿಸಿಕೊಂಡಿದ್ದರು.
ಇತ್ತೀಚೆಗೆ ಅವರು ನೀಡಿರುವ ಹೇಳಿಕೆ ಸಂಖ್ಯಾಬಲ ಇರುವ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು, ತಾವು ಕೂಡ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು.

ಸಂಖ್ಯಾಬಲ ಇರುವ‌ ಸಮುದಾಯಗಳಿಂದ ಕೆಂಗಲ್‌ಹನುಮಂತಯ್ಯ, ಎಚ್.ಡಿ.ದೇವೇಗೌಡ, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಮೊದಲಾದವರು ಮುಖ್ಯಮಂತ್ರಿಗಳಾಗಿದ್ದಾರೆ. ಹಾಗೆಯೇ ಸಂಖ್ಯಾಬಲವೇ ಇಲ್ಲದ ದೇವರಾಜ‌ ಅರಸು, ಎಸ್.ಬಂಗಾರಪ್ಪ, .ವೀರಪ್ಪ ಮೊಯ್ಲಿ, ಧರಂಸಿಂಗ್ ಕೂಡ‌ ಮುಖ್ಯಮಂತ್ರಿಗಳಾಗಿದ್ದಾರೆ. ಜನಸಂಖ್ಯೆಯ ಆಧಾರದಲ್ಲೇ ಹೇಳುವುದಾದರೆ ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.20 ರಷ್ಟಿರುವ ದಲಿತರ ಪ್ರಮಾಣ ಇತರ ಎಲ್ಲ ಜಾತಿಗಳಿಗಿಂತ ಹೆಚ್ಚು. ಆನಂತರ ಶೇ.16 ರಷ್ಟಿರುವ‌ ಮುಸ್ಲಿಮರು. ಲಿಂಗಾಯತರು ಶೇ.14, ಒಕ್ಕಲಿಗರು ಶೇ.11. ಮುಖ್ಯವಾಗಿ ಅನ್ಯಾಯವಾಗಿರುವುದು ದಲಿತರಿಗೆ. ಆದರೆ ಜನಸಂಖ್ಯೆಯ ಆಧರ ಇರಿಸಿಕೊಂಡೇ ಯೋಗ್ಯರಿಗೆ ಮಾತ್ರ ಮಣೆ ಹಾಕಬೇಕಾಗುತ್ತದೆ. ಮುಸ್ಲಿಮರಲ್ಲಿ ಜಾಫರ್‌ಷರೀಫ್ ಅವರ‌ ಮಟ್ಟದ ಅಥವಾ ಅವರ ಹತ್ತಿರಕ್ಕಾದರೂ ಕಾಣುವ ಒಬ್ಬನೇ ಒಬ್ಬ ನಾಯಕ‌ ಮುಸ್ಲಿಂ‌ ಸಮುದಾಯದಲ್ಲಿಲ್ಲ.

ವಿವಾದಗಳ ಧಾರಾವಾಹಿಯ ನಾಯಕನಂತಿರುವ ಜಮೀರ್‌ಖಾನ್ ಇನ್ನೂ ಆ‌ ಮಟ್ಟಕ್ಕೇರುವ ಲಕ್ಷಣಗಳಂತೂ ಗೋಚರಿಸುತ್ತಿಲ್ಲ. ವಾಸ್ತವದಲ್ಲಿ ಜಮೀರ್ ತಾವೇ ಮುಂದಿನ‌ ಮುಖ್ಯಮಂತ್ರಿಯಾಗುವುದಕ್ಕಾಗಿ ಹಾಗೆ ಹೇಳಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆಯೊಂದರಲ್ಲಿ ಎಸ್.ಎಂ.ಕೃಷ್ಣ ನಂತರ ಒಕ್ಕಲಿಗರಿಗೆ ಮುಖ್ಯಮಂತ್ರಿಯಾಗುವ‌ ಅವಕಾಶ ಇದ್ದು ಅದಕ್ಕೆ ಪೂರಕವಾಗಿ ಸಿದ್ಧರಾಗುವಂತೆ ಕರೆ ನೀಡಿದ್ದಕ್ಕೆ ಪರೋಕ್ಷ ಆಕ್ಷೇಪ ಮತ್ತು ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ಬಿಂಬಿಸುತ್ತಿರುವ‌ ಒಂದು ಗುಂಪಿಗೆ ಬೆಂಬಲ ನೀಡುವುದು ಜಮೀರ್ ಉದ್ದೇಶವಾಗಿತ್ತು.

ದುರಂತ ಎಂದರೆ ಕೋಮುವಾದಿಗಳು ಸೃಷ್ಟಿಸಿರುವ ಆತಂಕ, ಅನಕ್ಷರತೆ, ಬಡತನದೊಂದಿಗೆ ಅತಂತ್ರವಾಗಿರುವ ಮುಸ್ಲಿಂ ಸಮುದಾಯವನ್ನು ಆರೋಗ್ಯಕರ ಆಲೋಚನೆಗಳೊಂದಿಗೆ ಮುನ್ನಡೆಸುವ ಯಾವುದೇ ಸಮರ್ಥ ನಾಯಕ ಈ ಸಮುದಾಯದಲ್ಲಿ ಕಾಣುತ್ತಿಲ್ಲ. ಬಹುತೇಕ ಮುಸ್ಲಿಮರಿಗೆ ಸದ್ಯದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ‌ ಮಾರ್ಗವೂ ಕಾಣುತ್ತಿಲ್ಲ. ಇದರ ಫಲವಾಗಿ ಮೂರೂ ಹೊತ್ತು ಸಂಘ ಪರಿವಾರ, ಬಿಜೆಪಿ ಆಡಳಿತ, ನರೇಂದ್ರ ಮೋದಿ, ಅಮಿತ್ ಶಾ ರನ್ನೇ ಟೀಕಿಸುವ ಯಾವುದೇ ವೈಚಾರಿಕ ತಿಳಿವಳಿಕೆಯ ಅಡಿಪಾಯ ಇಲ್ಲದ ಯುಟ್ಯೂಬ್ ಭಾಷಣಕೋರರು ಮುಸ್ಲಿಮರ ನಾಯಕರಾಗುತ್ತಿದ್ದಾರೆ.

ಇಂಥ ಬಹುತೇಕರು ತಮ್ಮನ್ನು‌ ಪ್ರಗತಿಪರರೆಂದು ಭಾವಿಸಿರುವ ಹಿಂದೂ ಯುವಕರು. ಇಂಥವರಿಂದ ಮುಸ್ಲಿಂ‌ ಸಮುದಾಯಕ್ಕೆ ಅಪಾಯವೇ ಹೆಚ್ಚು. ಪ್ರಗತಿ ಎನ್ನುವುದು‌ ಮುನ್ನಡೆಯುವುದೇ ಹೊರತು ಶಿಲಾಯುಗದತ್ತ ಹಿನ್ನಡೆಯಲ್ಲ. ಸದ್ಯ ಬೇಕಿರುವುದು ಸಾಮರಸ್ಯವೇ ಹೊರತು ಸಾಮಾಜಿಕ ಅಶಾಂತಿಯಲ್ಲ. ಸಮುದ್ರ ಮಂಥನದಿಂದ ಅಮೃತ ಸಿಕ್ಕಿರಬಹುದು. ಆದರೆ ವರ್ತಮಾನದ ಬೆಳವಣಿಗೆಗಳು ಉರಿವ‌ ಬೆಂಕಿಗೆ ತುಪ್ಪ‌ ಹಾಕುವಂತಿರಬಾರದು. ನಿಜಕ್ಕೂ‌ ಪ್ರಗತಿಪರರಾಗಿರುವ‌ ಹಿಂದೂಗಳು ಮುಸ್ಲಿಂ ಸಮುದಾಯದ ಜತೆಗಾರರಾಗಿ‌ ಮುನ್ನಡೆಯಬೇಕೇ ಹೊರತು ಹಾದಿ ತಪ್ಪಿಸುವ‌ ನಾಯಕರಾಗಬಾರದು. ಜಾಫರ್ ಷರೀಫ್ ಇದ್ದಿದ್ದರೆ ಮುಸ್ಲಿಮರು ಈಗ ಎದುರಿಸುತ್ತಿರುವ‌ ಗೊಂದಲಗಳು ಖಂಡಿತ ಇರುತ್ತಿರಲಿಲ್ಲ. ಯಾಕೆಂದರೆ ಅವರೋರ್ವ ಅಸಾಮಾನ್ಯ ನಾಯಕ. ಈಗ‌ ಅಂಥವರಿಲ್ಲ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

-ಟಿ.ಕೆ ತ್ಯಾಗರಾಜ್
ಹಿರಿಯ ಪತ್ರಕರ್ತರು ಹಾಗು ಹವ್ಯಾಸಿ ಬರಹಗಾರಗು.
(ಸೌಜನ್ಯ: ಹಿಮಾಗ್ನಿ ವಾರಪತ್ರಿಕೆ)

ಮೊಟ್ಟ ಮೊದಲ ಕಾಲಾಪಾನಿ ಶಿಕ್ಷೆ ಅನುಭವಿಸಿ ಜೈಲಲ್ಲೇ ಹುತಾತ್ಮರಾದ ಕ್ರಾಂತಿಕಾರಿ ಮೌಲವಿ.
ಭಾರತದ ಸ್ವಾತಂತ್ರ್ಯ ಚಳುವಳಿಯು ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕು, ಪ್ರಾಣವನ್ನು ಮುಡಿಪಾಗಿಟ್ಟ ಜನರ  ನಿಸ್ವಾರ್ಥ ಹೋರಾಟದ ಸುದೀರ್ಘ ಇತಿಹಾಸದ ಜನ ಸಂಗ್ರಾಮ. ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ವಿರುದ್ಧ ಶಸ್ತ್ರ ಹಿಡಿದು ಹೋರಾಟ ಮಾಡದೇ ಹೋದರೂ ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಧಾರೆ ಎರೆದ ಹಲವರ ತ್ಯಾಗ ಬಲಿದಾನ ಹೋರಾಟದ ಸುದೀರ್ಘ ಇತಿಹಾಸವು ದೇಶದ ಮೂಲೆ ಮೂಲೆಗಳಲ್ಲಿ ಪಿಸುಗುಡುತ್ತಿದ್ದು ಈ ಹೋರಾಟಗಾರರ ಬಗ್ಗೆ ಇತಿಹಾಸದ ಪುಟಗಳು ತೆರೆ ಮರೆಯಲ್ಲಿ ಉಳಿದು ಮೌನವಾಗಿವೆ. ಆ ತೆರೆ ಸರಿಸಿ ಮರೆಯಲ್ಲಿ ಉಳಿದ, ಹೆಚ್ಚು ಪ್ರಚಾರ ಪಡೆಯದ ಸಾಮಾನ್ಯರ ಹೋರಾಟದ ಚರಿತ್ರೆಯನ್ನು ಸ್ಮರಿಸುವ ಪ್ರಯತ್ನ ಮಾಡುವುದು  ಸ್ವಾತಂತ್ರ್ಯ- 75ರ ಈ ಸಂದರ್ಭಕ್ಕೆ ಪೀಪಲ್‌ ಮೀಡಿಯಾ ಸಲ್ಲಿಸುವ ಗೌರವವೆಂದು ನಾವು ಭಾವಿಸುತ್ತೇವೆ.

ನಾನು ಈಗಾಗಲೇ ಬರೆದಂತೆ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಈ ದೇಶದ ಮದ್ರಸಾ ಮತ್ತು ಮಸೀದಿಗಳು ಕೊಟ್ಟಷ್ಟು ಕ್ರಾಂತಿಕಾರಿ ಹೋರಾಟಗಾರರನ್ನು ಯಾವ ಯುನಿವರ್ಸಿಟಿಯೂ ನೀಡಿಲ್ಲ.. ಅಂತಹ  ಕ್ರಾಂತಿಕಾರಿಗಳಲ್ಲೊಬ್ಬರು ಮೌಲಾನಾ ಅಲಾವುದ್ದೀನ್ ಹೈದರ್… ಅಲಾವುದ್ದೀನ್ ಹೈದರರ ಹೋರಾಟದ ಕಥೆ ಕೇಳಿದರೆ ನಿಜವಾದ ದೇಶಪ್ರೇಮಿಗೆ ರೋಮಾಂಚನವಾಗದಿರದು.. ಅವರು ಹೈದರಾಬಾದಿನ ಇತಿಹಾಸ ಪ್ರಸಿದ್ಧ ಮಕ್ಕಾ ಮಸೀದಿಯ ಇಮಾಮರಾಗಿದ್ದರು. ಇಸ್ಲಾಮೀ ಕರ್ಮಶಾಸ್ತ್ರ ಮತ್ತು‌ ಶರೀಯತ್ ಕಾನೂನಿನ ಕುರಿತಂತಹ ಅಪ್ರತಿಮ ವಿದ್ವಾಂಸರಲ್ಲೊಬ್ಬರಾಗಿದ್ದರು. ಹೈದ್ರಾಬಾದ್ ಪ್ರಾಂತ್ಯವನ್ನು ಅಂದು ಆಳುತ್ತಿದ್ದ ನಿಝಾಮರು ತಮ್ಮ ರಾಜಸತ್ತೆಯನ್ನು ಉಳಿಸಲು ಬ್ರಿಟಿಷರೊಂದಿಗೆ ಕೈ ಜೋಡಿಸಿದ್ದರು. ಅವರು ಹಿಂದೆ ಹಝ್ರತ್ ಟಿಪ್ಪು ಸುಲ್ತಾನರಿಗೆದುರಾಗಿ ಬ್ರಿಟಿಷ್ ಪಾಳಯಕ್ಕೆ ನಿಷ್ಟೆ ತೋರಿದವರೇ ಆಗಿದ್ದರು. ಅವರ ರಾಜಧಾನಿ ಹೈದರಾಬಾದ್ ನಗರದ ಹೃದಯ ಭಾಗದಲ್ಲೇ ಇದ್ದ ಪ್ರಮುಖ ಮಸೀದಿಯಾಗಿತ್ತು ಇತಿಹಾಸ ಪ್ರಸಿದ್ಧ ಮಕ್ಕಾ ಮಸೀದಿ. ಮಕ್ಕಾ ಮಸೀದಿಯು ಹೈದ್ರಾಬಾದಿನ ಪ್ರಮುಖ ಐತಿಹಾಸಿಕ ಕಟ್ಟಡಗಳಲ್ಲೊಂದಾದ ಚಾರ್ ಮಿನಾರ್‌ಗಿಂತ ಕೂಗಳತೆ ದೂರದಲ್ಲಿಯೇ ಇದೆ.

ಅತ್ತ ದೆಹಲಿಯಲ್ಲಿ 1857ರ ಮೊದಲ ಏಕೀಕೃತ ಸ್ವಾತಂತ್ರ್ಯ ಸಂಗ್ರಾಮದ ಕರೆಯನ್ನು ಅಂತಿಮ ಮೊಗಲ್ ದೊರೆ ಬಹಾದ್ದೂರ್ ಷಾ ಝಫರ್‌ರ ನೇತೃತ್ವದಲ್ಲಿ ನೀಡಲಾಯಿತು. ಇತಿಹಾಸದಲ್ಲಿ ದಾಖಲಿಸಲಾದಂತೆ ನಾನಿದನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎನ್ನುವುದಕ್ಕಿಂತ ಮೊದಲ ಏಕೀಕೃತ ಸ್ವಾತಂತ್ರ್ಯ ಸಂಗ್ರಾಮ ಎಂದೇ ಹೇಳ ಬಯಸುವೆ. ಒಂದು ವೇಳೆ ಇದನ್ನು ನಾವು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದರೆ ಅದಕ್ಕಿಂತ ಮೊದಲು ಬ್ರಿಟಿಷ್ ವಸಾಹತುಶಾಹಿಯಿಂದ ವಿಮೋಚನೆಗಾಗಿ ಕಾದಾಡಿ ಹುತಾತ್ಮರಾದ ಟಿಪ್ಪು ಸುಲ್ತಾನರಾದಿಯಾಗಿ ಹೋರಾಟಗಾರರ ಹೋರಾಟಗಳನ್ನು ಕಡೆಗಣಿಸಿದಂತಾಗುತ್ತದೆ.   ಅತ್ತ ದೆಹಲಿಯಿಂದ ಮೊದಲ ಏಕೀಕೃತ ಸ್ವಾತಂತ್ರ್ಯ ಸಂಗ್ರಾಮದ ಸಮರ ಘೋಷ ಮೊಳಗುತ್ತಿದ್ದಂತೆಯೇ ದೇಶದ ವಿವಿದೆಡೆಗಳಿಂದ ಹೋರಾಟಗಾರರು ತಮ್ಮ ಕೆಚ್ಚನ್ನು ನೂರ್ಮಡಿಗೊಳಿಸಿ ಹೋರಾಟದ ಕಣಕ್ಕೆ ದುಮುಕಿದರು. ಹಾಗೆ ಹೋರಾಟದ ಕಣಕ್ಕೆ ದುಮುಕಿದವರಲ್ಲಿ ಹೈದರಾಬಾದ್ ಮಕ್ಕಾ ಮಸೀದಿಯ ಇಮಾಮರಾಗಿದ್ದ ವೀರ ಸಿಂಹ ಮೌಲಾನಾ ಅಲಾವುದ್ದೀನ್ ಹೈದರ್ ಕೂಡಾ ಒಬ್ಬರಾಗಿದ್ದರು.

1857ರ ಜುಲೈ ಹದಿನೇಳರಂದು ಮಕ್ಕಾ ಮಸೀದಿಯ ಇಮಾಮರಾಗಿದ್ದ ಮೌಲಾನಾ ಅಲಾವುದ್ದೀನ್ ಹೈದರ್ ಮತ್ತು ತುರ್ರೇಬಾಝ್ ಖಾನ್ ನೇತೃತ್ವದಲ್ಲಿ 500 ಮಂದಿ ಕ್ರಾಂತಿಕಾರಿ ಹೋರಾಟಗಾರರ ಪಡೆ ಮಕ್ಕಾ ಮಸೀದಿಯಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಹೈದ್ರಾಬಾದ್‌ ನಗರದಲ್ಲಿರುವ ಬ್ರಿಟಿಷ್ ರೆಸಿಡೆನ್ಸಿಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿದರು. ಏಕಾ ಏಕಿ ನಡೆದ ಈ ಮುತ್ತಿಗೆಯಿಂದ ಕಂಗಾಲಾದ ಬ್ರಿಟಿಷರು ಹೋರಾಟಗಾರರ ಮೇಲೆ ಗುಂಡಿನ ದಾಳಿಗೈದರು. ತಕ್ಕ ಮಟ್ಟಿಗೆ ಶಸ್ತ್ರಸಜ್ಜಿತರಾಗಿಯೇ ಮುತ್ತಿಗೆ ಹಾಕಿದ್ದ ಹೋರಾಟಗಾರರು ಮರುದಾಳಿ ನಡೆಸಿ ವೀರಾವೇಶದಿಂದಲೇ ಹೋರಾಡಿದರು. ‌ಆದರೆ ಬ್ರಿಟಿಷರ ಕೈಯಲ್ಲಿದ್ದ ಆ ಕಾಲದ ಆಧುನಿಕ ಶಸ್ತ್ರಾಸ್ತ್ರಗಳ ಮುಂದೆ ಮೌಲವಿ ಅಲಾವುದ್ದೀನ್ ಹೈದರರ ಸೇನೆ ಸೋಲೊಪ್ಪಿಕೊಳ್ಳಲೇ ಬೇಕಾಯಿತು.ಮೌಲಾನಾರ ಸೈನ್ಯದ ಪ್ರಮುಖ ನಾಯಕ ತುರ್ರೇಬಾಝ್ ಖಾನ್‌ರನ್ನು ಬ್ರಿಟಿಷ್ ಸೈನ್ಯ ಸೆರೆ ಹಿಡಿಯಿತು. ತೀವ್ರ ಗಾಯಗಳಿಂದ ಜರ್ಜರಿತರಾಗಿದ್ದ ಮೌಲಾನಾ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೌಲಾನಾರ  ಬಲ ಭುಜಕ್ಕೆ ಮತ್ತು ಹಣೆಗೆ ಬಲವಾದ ಕತ್ತಿಯೇಟು ತಾಗಿತ್ತು. ಮಾತ್ರವಲ್ಲದೇ ಅವರ ಕೈಗೆ ಗುಂಡಿನೇಟು ತಾಗಿತ್ತು. ಹಾಗೆ ತಪ್ಪಿಸಿಕೊಂಡ ಮೌಲಾನಾ ಎರಡು ವರ್ಷಗಳ ಕಾಲ ಭೂಗತರಾಗಿ ಬ್ರಿಟಿಷ್ ಪ್ರಭುತ್ವದ ವಿರುದ್ಧ ತಂತ್ರಗಳನ್ನು ಹೆಣೆಯುತ್ತಿದ್ದರು. ಆ ಬಳಿಕ ಮೌಲಾನಾರ ಹುಡುಗರು ಅಲ್ಲಲ್ಲಿ ದಂಗೆಯೇಳುತ್ತಾ ಬ್ರಿಟಿಷ್ ಪ್ರಭುತ್ವಕ್ಕೆ ತಲೆನೋವಾಗಿ ಪರಿಣಮಿಸಿದರು. ಭೂಗತರಾಗಿದ್ದ ಮೌಲಾನಾರನ್ನು 1859ರ ಜೂನ್‌ ಇಪ್ಪತ್ತೆಂಟರಂದು ಬ್ರಿಟಿಷ್ ಪ್ರಭುತ್ವ ಬಂಧಿಸುವಲ್ಲಿ ಯಶಸ್ವಿಯಾಯಿತು.

ಆಗಿನ್ನೂ ಮೌಲಾನಾರಿಗೆ ಕೇವಲ ಮೂವತ್ತಾರು ವರ್ಷಗಳು. ಮೌಲಾನಾರನ್ನು ಸಾದಾ ಜೈಲಿನಲ್ಲಿಟ್ಟರೆ ಅಪಾಯ ತಪ್ಪಿದ್ದಲ್ಲ ಎಂದು ಮನವರಿಕೆ ಮಾಡಿಕೊಂಡ ಬ್ರಿಟಿಷರು ಅವರನ್ನು ಅಂಡಮಾನ್ ದ್ವೀಪದ ಸೆಲ್ಯುಲಾರ್ ಜೈಲಿಗೆ ತಳ್ಳಿ ಅವರ ಮೇಲೆ ಕಾಲಾಪಾನಿ ಅಥವಾ ಕರಿನೀರಿನ ಶಿಕ್ಷೆ ವಿಧಿಸಿದರು. ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕಾಲಾಪಾನಿ ಸಜೆಗೆ ಗುರಿಯಾದ ಕ್ರಾಂತಿಕಾರಿ ಎಂಬ ಗೌರವ ಮೌಲಾನಾರಿಗೆ ಸಲ್ಲುತ್ತದೆ. ಜೈಲಿನಲ್ಲಿ ಮೌಲಾನಾರಿಗೆ ವಿಪರೀತ ಯಾತನೆ ನೀಡಿದರು. ಕತ್ತಿಯೇಟಿನಿಂದ ಭುಜಕ್ಕೂ,ಗುಂಡಿನೇಟಿನಿಂದ ಗೂ ತೀವ್ರ ಸ್ವರೂಪದ ಗಾಯಗಳಾದುದರಿಂದ ಮೌಲಾನಾರ ಬಲಗೈ ಸ್ವಾಧೀನ ಕಳಕೊಂಡಿತು. ತೀವ್ರ ಅನಾರೋಗ್ಯದ ಕಾರಣ  ಮುಂದಿಟ್ಟು ಮೌಲಾನಾ ಬಿಡುಗಡೆಗಾಗಿ ಪತ್ರ ಬರೆದರು. ಆದರೆ ಮೌಲಾನಾ ಕ್ಷಮೆಯಾಚಿಸಲಿಲ್ಲ. 30 ವರ್ಷಗಳ ಕಾಲ ಕಠಿಣಾತಿ ಕಠಿಣ ಅಂಡಮಾನ್ ಜೈಲಿನಲ್ಲಿ ಕಳೆದ  ಆ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ಅಂಡಮಾನ್ ಜೈಲಿನ ಕತ್ತಲೆ ಕೋಣೆಯಲ್ಲೇ ಹುತಾತ್ಮರಾದರು.. ದೇಶ ವಿಮೋಚನೆಗಾಗಿ ಹೋರಾಡಿದ್ದಕ್ಕಾಗಿ ತನ್ನ ಬದುಕಿನ ಅರ್ಧ ಭಾಗವನ್ನು ಅವರು ಸೆರೆಮನೆಯಲ್ಲೇ ಕಳೆಯಬೇಕಾಗಿ ಬಂದಿತ್ತು.   ಎರಡು ವರ್ಷಗಳ ಹಿಂದೆ ಹೈದರಾಬಾದ್‌ಗೆ ಭೇಟಿ ನೀಡಿದ್ದಾಗ ಮಕ್ಕಾ ಮಸ್ಜಿದ್‌ನಲ್ಲಿ ಲುಹ್ರ್ ( ಮಧ್ಯಾಹ್ನದ) ನಮಾಝ್ ನಿರ್ವಹಿಸಿದ್ದೆ… ಆ ಮಸೀದಿಯ ಪರಿಸರ, ವುಝಾ ( ಅಂಗಸ್ನಾನದ) ಕೊಳ ಅಲ್ಲೆಲ್ಲಾ ತಿರುಗಾಡುತ್ತಿದ್ದಾಗ ಮನದ ತುಂಬಾ ಆ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ಅಲ್ಲೆಲ್ಲಾ ನಡೆದಾಡಿರಬಹುದಲ್ವಾ ಎಂದು ಅಲ್ಲಲ್ಲಿ ಕೂತು ಆತ್ಮಾನುಭೂತಿ ಪಡೆದುಕೊಂಡಿದ್ದೆ.. ಆ ಸ್ವಾತಂತ್ರ್ಯ ಯೋಧ ನಮಾಝಿಗೆ ನೇತೃತ್ವ ನೀಡುತ್ತಿದ್ದ ಮಸೀದಿಗೂ ಬಾಂಬ್ ದಾಳಿ ಮಾಡಿದ ಭಯೋತ್ಪಾದಕರು ಇಂದು ಆ ಕ್ರಾಂತಿಕಾರಿಯ ಸಮುದಾಯದೊಂದಿಗೆ ದೇಶಪ್ರೇಮದ ಸರ್ಟಿಫಿಕೇಟ್ ಕೇಳುತ್ತಿರುವುದು ವರ್ತಮಾನದ ಕ್ರೂರ ವ್ಯಂಗ್ಯವಲ್ಲದೇ ಇನ್ನೇನು…?

ಇಸ್ಮತ್_ಪಜೀರ್
ಸಾಮಾಜಿಕ ಕಾರ್ಯಕರ್ತರು ಮತ್ತು ಲೇಖಕರು.