sucide – Peepal Media

ಬಿಹಾರ: ಪೊಲೀಸ್‌ ಠಾಣೆಯಲ್ಲೇ ವ್ಯಕ್ತಿ ಆತ್ಮಹತ್ಯೆ
ಬಕ್ಸಾರ್ (ಬಿಹಾರ): ಇಲ್ಲಿನ ಕೊರಾನ್ಸರೈ ಪೊಲೀಸ್ ಠಾಣೆಯ ಕೊಠಡಿಯೊಂದರಲ್ಲಿ 70 ವರ್ಷದ ವ್ಯಕ್ತಿಯೊಬ್ಬರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ನಡೆದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ಅಧಿಕಾರಿ ನೀರಜ್ ಕುಮಾರ್ ಸಿಂಗ್, ‘ನಿಗೂಢ ಸನ್ನಿವೇಶದಲ್ಲಿʼಈ ಘಟನೆ ಸಂಭವಿಸಿದ್ದು, ಜನಾಕ್ರೋಶಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಠಾಣಾಧಿಕಾರಿ (ಎಸ್‌ಎಚ್‌ಒ) ಜುನೈದ್ ಆಲಂ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ವ್ಯಕ್ತಿಯನ್ನು ಬಕ್ಸರ್‌ನ ಕೊಪ್ವಾ ಗ್ರಾಮದ ನಿವಾಸಿ ಯಮುನಾ ಸಿಂಗ್ ಎಂದು ಗುರುತಿಸಲಾಗಿದೆ.

ಗ್ರಾಮಸ್ಥರ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ವ್ಯಕ್ತಿಯನ್ನು ಪೊಲೀಸ್ ಠಾಣೆಯ ಕಂಪ್ಯೂಟರ್ ಕೊಠಡಿಯಲ್ಲಿ ಇರಿಸಲಾಗಿತ್ತು. ಆದರೆ ಆತ ಸ್ವಲ್ಪಸಮಯದ ನಂತರ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ ಆತನನ್ನು ಕೆಳಗಿಳಿಸಿ ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು, ಆದರೆ ನೇಣು ಬಿಗಿದುಕೊಂಡ ಕಾರಣ ಉಸಿರು ಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ತನ್ನ ತಂದೆ ಸಾವಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪುತ್ರ ಅರುಣ್‌ ಸಿಂಗ್‌, ಪೊಲೀಸರ ಚಿತ್ರಹಿಂಸೆಯಿಂದಾಗಿ ನನ್ನ ತಂದೆ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.

ನಂತರ ಕಸ್ಟಡಿ ಸಾವಿನ ವಿಚಾರ ತಿಳಿದ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ವ್ಯಕ್ತಿಗೆ ನ್ಯಾಯ ಕೊಡಿಸುವಂತೆ ದುಮ್ರಾನ್-ವಿಕ್ರಮ್‌ಗಂಜ್ ರಸ್ತೆಯನ್ನು ಎರಡು ಮೂರು ಗಂಟೆಗಳ ಕಾಲ ತಡೆಹಿಡಿದಿದ್ದರು.

ಗಂಡು ಮಗುವಾಗದಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ
ಕೋಲಾರ : ತನ್ನ ಪತ್ನಿ ನಾಲ್ಕನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡ ಅಪರೂಪದ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಸೆಟ್ಟಿಹಳ್ಳಿಯಲ್ಲಿ ನಡೆದಿದೆ.

9 ವರ್ಷಗಳ ಹಿಂದೆ ಆಂದ್ರಪ್ರದೇಶದ ಪುಂಗನೂರಿನ ವಧುವನ್ನು ಸೆಟ್ಟಿಹಳ್ಳಿಯ ಲೋಕೇಶ್ ವರಿಸಿದ್ದರು. ಕಳೆದ 9 ವರ್ಷಗಳ ಅವಧಿಯಲ್ಲಿ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದ ಲೋಕೇಶ್ ದಂಪತಿ ಹಿಂದಿನಿಂದಲೂ ಗಂಡು ಮಗುವಿನ ನಿರೀಕ್ಷೆಯಲ್ಲಿ ಇದ್ದರು.

ಆದರೆ ನಾಲ್ಕನೇ ಬಾರಿಯೂ ಲೋಕೇಶ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ 34 ವರ್ಷದ ಪತಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾನುವಾರ ಮುಂಜಾನೆ ಲೋಕೇಶ್‌ನ ತಾಯಿ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿರುವುದನ್ನು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಮೂರು ವರ್ಷಗಳ ಹಿಂದೆ ಮೂರನೇ ಮಗಳು ಜನಿಸಿದಾಗ ಲೋಕೇಶ್ ಗಂಡು ಮಗುವಾಗದಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿ ತನ್ನ ಕೆಲ ಸ್ನೇಹಿತರಲ್ಲಿ ಪ್ರಾಣ ಬಿಡುವುದಾಗಿ ಹೇಳಿಕೊಂಡಿದ್ದರು. ಹಾಗಾಗಿ ಗಂಡು ಮಗು ಇಲ್ಲದ ಕಾರಣಕ್ಕೆ ಅವರು ಈ ಕ್ರಮ ಕೈಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಲೋಕೇಶ್ ಅವರ ಪತ್ನಿ ಮತ್ತೆ ಗರ್ಭ ಧರಿಸಿದ ನಂತರ ಅವರು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಶುಕ್ರವಾರ ಮುಳಬಾಗಲಿನ ಆಸ್ಪತ್ರೆಯಲ್ಲಿ ನಾಲ್ಕನೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಲೋಕೇಶ್ ತೀವ್ರ ಬೇಸರಗೊಂಡಿದ್ದರು ಎಂದು ಲೋಕೇಶ್ ಅವರ ಆಪ್ತರು ಹೇಳಿಕೊಂಡಿದ್ದಾರೆ‌.

ಬೀದಿನಾಯಿ ಸಾವಿನಿಂದ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ಮೀರತ್: ಬೀದಿನಾಯಿಯೊಂದು ಮೃತಪಟ್ಟ ಘಟನೆಯಿಂದ ನೊಂದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಇಲ್ಲಿನ ಕಂಕರಖೇಡದಲ್ಲಿ ನಡೆದಿದೆ.

ಬೀದಿನಾಯಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಯುವತಿ ಗೌರಿ (24) ಅವುಗಳಿಗೆ ಊಟ ನೀಡುವುದು, ಶುಶ್ರೂಶೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು. ಒಂದು ಬೀದಿನಾಯಿ ಅಪಘಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ಅದನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೂ ಅದು ಬದುಕುಳಿಯಲಿಲ್ಲ. ಇದರಿಂದಾಗಿ ನೊ‌ದ ಗೌರಿ ಮನೆಯ ಸಮೀಪದ ವಾಟರ್ ಟ್ಯಾಂಕ್ ಹತ್ತಿ, ಅಲ್ಲಿಂದ ಜಿಗಿದು ಕೆಳಗೆ ಬಿದ್ದು ಸಾವಿಗೀಡಾಗಿದ್ದಾಳೆ.

ಗೌರಿಯ ತಂದೆ ಸಂಜಯ್ ತ್ಯಾಗಿ ಅವರ ಪುತ್ರ ಸಾರ್ಥಕ್ ಬೆಂಗಳೂರಿನ ಐಟಿ ಕಂಪನಿಯಲ್ಲಿ ಇಂಜಿನಿಯರ್. ಮಗಳು ಗೌರಿ ಈ ವರ್ಷ ನೀಟ್‌ನಲ್ಲಿ ತೇರ್ಗಡೆಯಾಗಿದ್ದಾಳೆ. ಆಕೆ ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಿದ್ದಳು. ಗುರುವಾರ ಸಂಜೆ ಸಾಕು ನಾಯಿಯೊಂದಿಗೆ ವಾಕಿಂಗ್‌ಗೆ ತೆರಳಿದ್ದ ಆಕೆ ರಸ್ತೆಯಲ್ಲಿ ಗಾಯಗೊಂಡಿದ್ದ ನಾಯಿಯನ್ನು ನೋಡಿ ಮನೆಗೆ ಕರೆತಂದಿದ್ದಾಳೆ. ನಾಯಿಯ ಶುಶ್ರೂಶೆ ಮಾಡಿದ್ದಾಳೆ. ಆದರೆ ಅದು ಮೃತಪಟ್ಟಿತು. ಆ ನೋವಿನಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬ‌ ಸದಸ್ಯರು ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಂತರ್ಜಾತಿ ಯುವಕನೊಂದಿಗೆ ಯುವತಿ ಪರಾರಿ :ಕುಟುಂಬದ ಮೂವರ ಆತ್ಮಹತ್ಯೆ
ಚಿಕ್ಕಬಳ್ಳಾಪುರ : ಅಂತರ್ಜಾತಿ ಹುಡುಗನೊಂದಿಗೆ ಮಗಳು ನಾಪತ್ತೆಯಾದ ಕಾರಣ ಮನನೊಂದ ಮನೆಯವರು ಡೆತ್‌ ನೋಟ್‌ ಬರೆದಿಟ್ಟು ಒಂದೇ ಕುಟುಂಬದ ಮೂರು ಜನ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.

ಬೇರೆ ಜಾತಿಯವನಾದ ಆಟೋ ಚಾಲಕ ನಾರಾಯಣ ಸ್ವಾಮಿ ಎಂಬುವವನ ಜೊತೆ ತನ್ನ ಮಗಳು ಅರ್ಚನ ಪರಾರಿಯಾಗಿದ್ದಾಳೆ. ಇದರಿಂದ ನಾವೆಲ್ಲಾ ಮನನೊಂದಿದ್ದೇವೆ. ನಮ್ಮ ಮೂರು ಜನ ಸಾವಿಗೆ ನಮ್ಮ ಮಗಳು ಅರ್ಚನ ಕಾರಣ ಎಂದು ಡೆತ್‌ ನೋಟ್‌ನಲ್ಲಿ ಬರೆದಿಟ್ಟು, ವಿಷದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮಾಹಿತಿ ತಿಳಿದ ನಂತರ ಹೆಚ್ಚುವರಿ ಪೋಲೀಸ್‌ ವರಿಷ್ಠಾಧಿಕಾರಿ ಕುಶಾಲ್‌ ಚೌಕ್ಸೆ, ಸಿಪಿಐ ನಂದನ್‌ ಕುಮಾರ್‌, ಗ್ರಾಮಾಂತರ ಪೋಲೀಸ್‌ ಠಾಣೆಯ ಪಿಎಸ್‌ಐ ಸತೀಶ್‌ ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿದ್ದು, ಅರ್ಚನಾಳ ತಂದೆ ಶ್ರೀರಾಮಪ್ಪ(69), ತಾಯಿ ಸರೋಜ(55) ಮತ್ತು ಸಹೋದರ (25) ಮೃತಪಟ್ಟವರಾಗಿದ್ದಾರೆ.

ಘಟನೆಯ ಕುರಿತು ಶಿಡ್ಲಘಟ್ಟ ಗ್ರಾಮಾಂತರ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ವಸಾಹತುಶಾಹಿಗೆ ಚಳ್ಳೆಹಣ್ಣು ತಿನ್ನಿಸಿದ ಶೂದ್ರ ರಾಣಿ ರಾಶ್ಮೋನಿ

ಕುಟಿಲ ವಸಾಹತುಶಾಹಿ ಕಂಪನಿಗೆ ಚಳ್ಳೆಹಣ್ಣು ತಿನ್ನಿಸಿ ಕೋಲ್ಕತಾದ ಹೂಗ್ಲಿ ನದಿ ತಟದಲ್ಲಿ ಕಾಳಿಕಾ ದೇವಿಗೆ ದಕ್ಷಿಣೇಶ್ವರ ದೇವಾಲಯ ನಿರ್ಮಿಸಿದ ಶೂದ್ರ ರಾಣಿ ರಾಶ್ಮೋನಿ ಭಾರತದ ಇತಿಹಾಸದ ಒಂದು ದಂತಕತೆ. ಸಹಾಯಕ ಪ್ರಾಧ್ಯಾಪಕರಾದ ಪುನೀತ್‌ ಕುಮಾರ್‌ ರಾಶ್ಮೋನಿಯ ಕತೆಯನ್ನು ಇಲ್ಲಿ ಹೇಳಿದ್ದಾರೆ.

ನೀಟ್- ಪರೀಕ್ಷೆಯಲ್ಲಿ ವಿಫಲ: ವಿದ್ಯಾರ್ಥಿ ಆತ್ಮಹತ್ಯೆ
ತಮಿಳುನಾಡು: ತಿರುವಳ್ಳೂರು ಜಿಲ್ಲೆಯಲ್ಲಿ 19 ವರ್ಷದ ಯುವತಿ ಲಕ್ಷಣ ಶ್ವೇತ ನೀಟ್-ಯುಜಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿನ್ನೆ ರಾತ್ರಿ ನೀಟ್-ಯುಜಿ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು, ಪರೀಕ್ಷೆಗಳಲ್ಲಿ ಉತ್ತೀರ್ಣರಾಗದಿರುವ ಕಾರಣ ಆಕೆ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷ 2021 ರ  ನೀಟ್‌ ಪರೀಕ್ಷೆಯಲ್ಲಿ 17 ವರ್ಷದ ಬಾಲಕಿ ಅನಿತ ತೇರ್ಗಡೆಯಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈ ಹಿನ್ನಲೆಯಲ್ಲಿ ತಮಿಳುನಾಡನ್ನು ನೀಟ್‌ ಪರೀಕ್ಷೆಯಿಂದ ಹೊರಗಿಡಬೇಕೆಂದು ಬೇಡಿಕೆ ಇಟ್ಟು ನಡೆಯುತ್ತಿದ್ದ ಹೋರಾಟಗಳಿಗೆ ಈ ಸಾವು ಇನ್ನಷ್ಟು ತೀವ್ರತೆಯನ್ನು ತಂದಿತ್ತು.