Sulya – Peepal Media

ಸುಳ್ಯದಲ್ಲಿ ಅನೈತಿಕ ಪೊಲೀಸ್‌ ಗಿರಿ: ಐವರ ವಿರುದ್ಧ ಕೇಸ್‌, ಒಬ್ಬನ ಕೈಗೆ ಪೊಲೀಸ್‌ ಬೇಡಿ
ಸುಳ್ಯ: ಅನೈತಿಕ ಪೊಲೀಸ್‌ ಗಿರಿಗೆ ತವರಾಗಿರುವ ದಕ್ಷಿಣ ಕನ್ನಡದಲ್ಲಿ ಇನ್ನೊಂದು ಅಂತಹ ಕೃತ್ಯದ ವರದಿಯಾಗಿದೆ. ಸಂತ್ರಸ್ಥ ವ್ಯಕ್ತಿಯ ದೂರಿನ ಮೇರೆಗೆ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ.

ಕೇರಳ ಮಲಪುರಂ ನಿವಾಸಿ ಮೊಹಮ್ಮದ್ ಜಲೀಲ್ (39ವರ್ಷ) ಎಂಬವರು ಪ್ರಸ್ತುತ ಸುಳ್ಯ ತಾಲೂಕು ಅರಂತೋಡಿನಲ್ಲಿ ರಬ್ಬರ್ ತೋಟವನ್ನು ಕಳೆದ 3 ತಿಂಗಳ ಹಿಂದೆ ಗುತ್ತಿಗೆ ಪಡೆದು ಅರಂತೋಡಿನಲ್ಲಿ ವಾಸವಾಗಿದ್ದು, ತನ್ನ ಪರಿಚಯದ ಯುವತಿಯೋರ್ವಳು ತಾನು ಮಡಿಕೇರಿಯಿಂದ ಸುಳ್ಯ, ಕಡೆಗೆ ಬರುತ್ತಿದ್ದು ತನಗೆ ವಿಶ್ರಾಂತಿ ಪಡೆಯಲು ರೂಮ್ ಬೇಕೆಂದು ಕೇಳಿಕೊಂಡ ಮೇರೆಗೆ ಜಲೀಲ್ ಅವರು ಸುಳ್ಯದಲ್ಲಿ ರೂಂ ವ್ಯವಸ್ಥೆ ಮಾಡಿ ಬಳಿಕ ವೈಯಕ್ತಿಕ ಕೆಲಸ ನಿಮಿತ್ತ ಸುಳ್ಯ ತಾಲೂಕು ತೋಡಿಕಾನಕ್ಕೆ ತೆರಳಿದ್ದರು.

ದಾರಿಯಲ್ಲಿ ಅವರನ್ನು 5 ಜನ ಆರೋಪಿಗಳು ಕಾರು ಮತ್ತು ಸ್ಕೂಟರ್ ಮೂಲಕ ಹಿಂಬಾಲಿಸಿ ಇವರ ಕಾರನ್ನು ತಡೆದು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿ ತರಳಿದ್ದಾರೆ. ಆರೋಪಿಗಳ ಪೈಕಿ ಮೂವರ ಹೆಸರು ಲತೀಶ್ ಗುಂಡ, ವರ್ಷಿತ್ ಹಾಗೂ ಪುನೀತ್ ಎಂಬುದಾಗಿ ಹಲ್ಲೆಯ ನಡೆಯುತ್ತಿದ್ದಾಗ ಇವರಿಗೆ ತಿಳಿದುಬಂದಿದೆ. ಮತ್ತಿಬ್ಬರು ಆರೋಪಿಗಳ ಪರಿಚಯ ಸಂತ್ರಸ್ಥ ವ್ಯಕ್ತಿಗೆ ತಿಳಿದುಬಂದಿಲ್ಲ.

ಪ್ರಸ್ತುತ ಇವರ ದೂರಿನ ಮೇರೆಗೆ ಸುಳ್ಯ, ಪೊಲೀಸ್ ಠಾಣೆಯಲ್ಲಿ ಅ.ಕ್ರ 87/2023 ಕಲಂ 143, 147, 341, 323, 504, 506, 153(A) ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಗಳ ಪ್ರಕಿ ಸುಳ್ಯ, ಸೊಣಂಗೇರಿ ನಿವಾಸಿ ಪುನೀತ್ ಎಂಬಾತನನ್ನು ಬಂಧಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

ಅಡಿಕೆ ತೋಟಗಳಿಗೆ ಎಲೆ ಚುಕ್ಕೆ, ಹಳದಿ ಎಲೆ ರೋಗ: ದೋಟಿ ಖರೀದಿಸಲು ರಾಜ್ಯ ಸರ್ಕಾರದಿಂದ ಸಬ್ಸಿಡಿ- ಸಚಿವ ಮುನಿರತ್ನ
ಸುಳ್ಯ: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಡಿಕೆ ತೋಟಗಳು ಎಲೆ ಚುಕ್ಕೆ ಮತ್ತು ಹಳದಿ ಎಲೆ ರೋಗದಿಂದ ಬಳಲುತ್ತಿದ್ದು, ಚುಕ್ಕೆಗಳಿಂದ ಬಾಧಿತವಾದ ಎಲೆಯನ್ನು ಕತ್ತರಿಸಲು ಮತ್ತು ಬೆಳೆಗಳಿಗೆ ಔಷದಿ ಸಿಂಪಡಿಸುವ ಸಲುವಾಗಿ ರಾಜ್ಯ ಸರ್ಕಾರವು ದೋಟಿ ಖರೀದಿಸಲು ಸಬ್ಸಿಡಿ ನೀಡುತ್ತಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಅವರು ಭಾನುವಾರ ತಿಳಿಸಿದ್ದಾರೆ.

ಡಿ.11ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯತಾಲೂಕಿನ ಎಲೆ ಚುಕ್ಕೆ ಮತ್ತು ಅಡಿಕೆ ರೋಗ ಭಾದಿತ ಮರ್ಕಂಜದಲ್ಲಿರುವ ಅಡಿಕೆ ತೋಟಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಅಡಿಕೆ ತೋಟಗಳು ಎಲೆ ಚುಕ್ಕೆ ಮತ್ತು ಹಳದಿ ಎಲೆ ರೋಗದಿಂದ ಬಳಲುತ್ತಿದ್ದು, ಇದರಿಂದ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಈ ರೋಗವು ಅಡಿಕೆ ಬೆಳೆಯನ್ನು ಏಕೆ ಬಾಧಿಸುತ್ತಿದೆ ಎಂಬುದರ ಬಗ್ಗೆ ಸಂಶೋಧನೆ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಇಸ್ರೇಲ್ ಗೆ ಭೇಟಿ ನೀಡಿದಾಗ, ಅಲ್ಲಿನ ವಿಜ್ಞಾನಿಗಳೊಂದಿಗೆ ಈ ಕುರಿತು ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೆನೆʼ ಎಂದು ಹೇಳಿದ್ದಾರೆ.

ʼಚುಕ್ಕೆಗಳಿಂದ ಬಾಧಿತವಾದ ಎಲೆಯನ್ನು ಕತ್ತರಿಸಬೇಕು ಮತ್ತು ಬೆಳೆಯನ್ನು ಉಳಿಸಲು ಕೀಟನಾಶಕವನ್ನು ಸಿಂಪಡಿಸಬೇಕು ಎಂದು ತಿಳಿದುಬಂದಿದೆ. ಆದರೆ ಇದನ್ನು ನೆರೆಹೊರೆಯ ಕೃಷಿ ಮಾಲೀಕರು ಸಹ ಮಾಡಬೇಕಾಗಿದೆ. ಈ ಉದ್ದೇಶಕ್ಕಾಗಿ ಸರ್ಕಾರವು ದೋಟಿ ಖರೀದಿಸಲು ಸಬ್ಸಿಡಿ ನೀಡುತ್ತಿದೆ. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ಚರ್ಚೆ ನಡೆಸಲಾಗಿದೆ. ಈ ಮೂಲಕ ರೋಗದಿಂದ ಬಾಧಿತವಾಗದ ತಳಿಯ ಅಡಿಕೆಯನ್ನು ಅಭಿವೃದ್ಧಿಪಡಿಸಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಎಲೆ ಚುಕ್ಕಿ ಬಾಧಿತ ಅಡಿಕೆ ತೋಟಗಳಿಗೆ,ಕೀಟನಾಶಕ ಸಿಂಪಡಿಸಲು ನಾಲ್ಕು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಈ ಕುರಿತು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆʼ ಎಂದು ಮುನಿರತ್ನ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮೀನುಗಾರಿಕಾ ಸಚಿವ ಎಸ್.ಅಂಗಾರ, ಮರ್ಕಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ಗುಂಡಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ ಕಂಜಿಪಿಲಿ ಉಪಸ್ಥಿತರಿದ್ದರು.

ಪ್ರಧಾನಿ ಕಾರ್ಯಕ್ರಮಕ್ಕೆ ಕೆ ಎಸ್ ಆರ್ ಟಿ ಸಿ ಬಸ್ಸುಗಳು: ಸುಳ್ಯದಲ್ಲಿ ಪ್ರಯಾಣಿಕರ ಪರದಾಟ
ಸುಳ್ಯ: ಮಂಗಳೂರಿನಲ್ಲಿ ಇಂದು ನಡೆಯಲಿರುವ ಪ್ರಧಾನಿಗಳ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆದೊಯ್ಯಲು ಸರಕಾರಿ ಬಸ್ಸುಗಳು ತೆರಳಿದ ಕಾರಣ ಸುಳ್ಯದಲ್ಲಿ ಬಸ್ ಸಂಚಾರದಲ್ಲಿ ಬಾರೀ ವ್ಯತ್ಯಯ ಉಂಟಾಗಿದೆ. ಬಸ್ ನಿಲ್ದಾಣ ಬಸ್ಸುಗಳಿಲ್ಲದೆ ಬಿಕೋ ಎನ್ನುತ್ತಿದೆ.

ಮೋದಿ ಕಾರ್ಯಕ್ರಮಕ್ಕೆ ಕೆಎಸ್ಆರ್ಟಿಸಿ ಬಸ್ಸುಗಳನ್ನು ಬುಕ್ ಮಾಡಿರುವುದರಿಂದ ಸುಳ್ಯದಲ್ಲಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಸುಳ್ಯ ತಾಲೂಕಿನಿಂದ 3500ಕ್ಕೂ ಹೆಚ್ಚು ಫಲಾನುಭವಿಗಳು, ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮಕ್ಕೆ ತೆರಳುವುದಕ್ಕೆ ಸರಕಾರಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು. 50 ಬಸ್ಸುಗಳು ತೆರಳಿವೆ ಎನ್ನಲಾಗುತ್ತಿದೆ.

ಸಾರ್ವಜನಿಕರು, ವಿದ್ಯಾರ್ಥಿಗಳು ಉದ್ಯೋಗಿಗಳು ಬಸ್ಸಿಲ್ಲದೆ ಸಂಕಷ್ಟ ಎದುರಿಸಬೇಕಾಯಿತು. ಗ್ರಾಮೀಣ ಭಾಗದ ಹಲವು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರಲು ಸಾಧ್ಯವಾಗಿಲ್ಲ. ಬಸ್ಸಿಗಾಗಿ ಕಾದು ಕುಳಿತ ವಿದ್ಯಾರ್ಥಿಗಳು ಅಲ್ಲಲ್ಲೇ ಬಾಕಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮಂಗಳೂರು ಪುರ ಪ್ರವೇಶ: ಅದ್ದೂರಿ ಸ್ವಾಗತಕ್ಕೆ ಸಿದ್ಧತೆ
ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಇವುಗಳ ಆಶ್ರಯದಲ್ಲಿ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಸ್ಥಾಪನೆ ಗೊಳ್ಳಲಿರುವ ಸ್ವಾತಂತ್ರ್ಯ ಸೇನಾನಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಆಗಸ್ಟ್‌ ೨೯ ರಂದು ವಾಹನ ಜಾಥಾದ ಮೂಲಕ ಮಂಗಳೂರು ನಗರವನ್ನು ಪ್ರವೇಶಿಸಲಿದೆ. ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯು ಸರಕಾರಕ್ಕೆ ಮನವಿ ಮಾಡಿಕೊಂಡ ಮೇರೆಗೆ ಇದೀಗ ಸರಕಾರದಿಂದ ಅನುಮೋದನೆ ದೊರೆತಿದೆ. ಅಕ್ಟೋಬರ್‌ನಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ.

ಪ್ರತಿಮೆಯನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಿರ್ಮಾಣಮಾಡಲಾಗಿದ್ದು ಅದು ೧೧ ಅಡಿ ಎತ್ತರವಿದೆ. ಬಂಗಾರದ ಬಣ್ಣದಿಂದ ಹೊಳೆಯುವ ಅದನ್ನು ಮಂಗಳೂರು ನಗರದ ಬಾವುಟ ಗುಡ್ಡೆಯ ಟಾಗೋರ್‌ಪಾರ್ಕ್‌ನಲ್ಲಿ ಸುಮಾರು ೨೨ ಅಡಿ ಎತ್ತರದಲ್ಲಿ ಪ್ರತಿಷ್ಠಾಪಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ.ಇದಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆಯ ಪ್ರೇಮಾನಂದ ಶೆಟ್ಟಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕರಾದ ವೇದವ್ಯಾಸ ಕಾಮತ್‌ ಹಾಗೂ ರಾಮಯ್ಯ ಗೌಡ ಸ್ಮಾರಕ ರಚನೆಯ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕಿರಣ್‌ ಬುಡ್ಲೆಗುತ್ತು ಹಾಗೂ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಜಾಥಾ ಹಾದಿ
ಆಗಸ್ಟ್‌ ೨೭, ೨೦೨೨ ರಂದು ಮಂಡ್ಯದ ಆದಿಚುಂಚನ ಗಿರಿ ಕ್ಷೇತ್ರಕ್ಕೆ ತಲಪುವ ಪ್ರತಿಮೆ ಅಲ್ಲಿಂದ ೨೮ರಂದು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಚಾಲನೆ ಪಡೆದು ಸಂಜೆ ಮಡಿಕೇರಿ ತಲಪಲಿದೆ. ೨೯ರಂದು ಸಂಪಾಜೆ, ಸುಳ್ಯ ಪೈಚಾರು, ಜಾಲ್ಸೂರು, ಕನಕಮಜಲು ಮಾರ್ಗದ ಮೂಲಕ ಪುತ್ತೂರು ತಲುಪಲಿದೆ. ಬಳಿಕ ಮುಂದೆ ಸಾಗಿ ಮಾಣಿ, ಬಿಸಿ ರೋಡ್‌, ಫರಂಗಿ ಪೇಟೆ ಮೂಲಕ ಹಾದು ಸಂಜೆ ಆರು ಗಂಟೆಗೆ ಮಂಗಳೂರಿನ ಬಾವುಟಗುಡ್ಡೆಗೆ ತಲಪಲಿದೆ. ಹಾದಿಯುದ್ದಕ್ಕೂ ಬೃಹತ್‌ವಾಹನ ಜಾಥಾ ನಡೆಯಲ್ಲಿದ್ದು ಜನರು ವಿಶೇಷವಾಗಿ ಸ್ವಾಗತ ಕೋರಲಿದ್ದಾರೆ.

ಭರದ ಸಿದ್ಧತೆ
ಪ್ರತಿಮೆಯನ್ನು ಅದ್ದೂರಿಯಾಗಿ ಸ್ವಾಗತಿಸಲು ಭರದ ಸಿದ್ಧತೆಗಳು ನಡೆಯುತ್ತಿವೆ. ವಾಹನ ಜಾಥಾ ಹಾದು ಬರುವ ಹಾದಿಯೆಲ್ಲಡೆ ಸ್ವಾಗತ ಕೋರುವ ಫ್ಲೆಕ್ಸ್‌ಗಳು, ಬೃಹತ್‌ ಗಾತ್ರದ ಹೋರ್ಡಿಂಗ್ ಗಳು ರಾರಾಜಿಸ ತೊಡಗಿವೆ. ಸಮುದಾಯದ ಪ್ರಧಾನ ಕೃಷಿಯಾಗಿರುವ ಅಡಿಕೆ ಮತ್ತು ಎಳನೀರಿನಿಂದ ಕೆಲವೆಡೆ ಅಲಂಕಾರ ಮಾಡಲು ಕೆಲಸಗಳು ನಡೆಯುತ್ತಿದೆ. ಸ್ಥಳೀಯ ಮಾಧ್ಯಮಗಳು ಕಾರ್ಯಕ್ರಮದ ನೇರ ಪ್ರಸಾರಕ್ಕೆ ಅಣಿಯಾಗಿವೆ. ಕಾರ್ಯಕ್ರಮದ ಸುಗಮ ಚಾಲನೆಗಾಗಿ ಸಮಾಜದ ಯುವ ಮುಖಂಡರು ಸ್ವಯಂಸೇವಕರ ದೊಡ್ಡ ಪಡೆಯನ್ನು ಕಟ್ಟಿದ್ದಾರೆ. ಸುಳ್ಯದ ಖಾಸಗಿ ಬಸ್‌ ನಿಲ್ದಾಣದಲ್ಲಿ ನೆಹರೂ ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿಗಳಿಂದ ʼಅಮರ ಸುಳ್ಯ ಸ್ವಾತಂತ್ರ್ಯ ಹೋರಾಟʼದ ಕಿರು ನಾಟಕ ಪ್ರದರ್ಶನಕ್ಕೆ ತಾಲೀಮು ನಡೆಯುತ್ತಿದೆ.

ರು. ೪೦ ಲಕ್ಷ ವೆಚ್ಚದ ಪ್ರತಿಮೆ

ಮಹಾನಗರ ಪಾಲಿಕೆಯಿಂದ ರು ೩೦ ಲಕ್ಷ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯಿಂದ ರು ೧೦ ಲಕ್ಷ ಸೇರಿದಂತೆ ಒಟ್ಟು ೪೦ ಲಕ್ಷ ವೆಚ್ಚದಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಪ್ರತಿಮೆಯನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಿರ್ಮಾಣಮಾಡಲಾಗಿದ್ದು ಅದು ೧೧ ಅಡಿ ಎತ್ತರವಿದೆ. ಬಂಗಾರದ ಬಣ್ಣದಿಂದ ಹೊಳೆಯುವ ಅದನ್ನು ಮಂಗಳೂರು ನಗರದ ಬಾವುಟ ಗುಡ್ಡೆಯ ಟಾಗೋರ್‌ಪಾರ್ಕ್‌ನಲ್ಲಿ ಸುಮಾರು ೨೨ ಅಡಿ ಎತ್ತರದಲ್ಲಿ ಪ್ರತಿಷ್ಠಾಪಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಪ್ರತಿಮೆ ಸ್ಥಾಪನೆಯಲ್ಲಿ ಸರಕಾರವೇ ಆಸಕ್ತಿ ವಹಿಸಿದ್ದು ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕರಾದ ವೇದವ್ಯಾಸ ಕಾಮತ್‌, ಮಂಗಳೂರು ಮಹಾನಗರ ಪಾಲಿಕೆಯ ಪ್ರೇಮಾನಂದ ಶೆಟ್ಟಿ ಸೇರಿದಂತೆ ರಾಮಯ್ಯ ಗೌಡ ಸ್ಮಾರಕ ರಚನೆಯ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕಿರಣ್‌ ಬುಡ್ಲೆಗುತ್ತು ಹಾಗೂ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಈ ಕಾರ್ಯಕ್ರಮದ ಔಚಿತ್ಯದ ಬಗ್ಗೆ ಸಮುದಾಯದ ಕೆ ಆರ್‌ ತೇಜ್‌ಕುಮಾರ್‌ ಮತ್ತು ಎ.ಕೆ ಹಿಮಕರ ಅವರನ್ನು ಪೀಪಲ್‌ ಮೀಡಿಯಾವು ಮಾತಾಡಿಸಿದಾಗ ʼಇತಿಹಾಸದ ಪುಟಗಳಲ್ಲಿ ಹೆಚ್ಚೇನೂ ಬೆಳಕು ಚೆಲ್ಲದ ಸುಳ್ಯದ ಮಹಾನ್‌ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರಿಗೆ ತಡವಾಗಿಯಾದರೂ ಐತಿಹಾಸಿಕ ಮಹತ್ವದ ಮನ್ನಣೆ ದೊರೆಯುತ್ತಿರುವುದು ಸಂತಸ ತಂದಿದೆʼ ಎಂದರು.

ʼ1837 ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಅಮರ ಸುಳ್ಯ ಸಶಸ್ತ್ರ ಹೋರಾಟ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕಿಂತ ಇಪ್ಪತ್ತು ವರ್ಷ ಮೊದಲೇ ನಡೆದುದಾದರೂ ಇತಿಹಾಸದ ಕರಿನೆರಳಿನೆಡೆ ಅದು ಹುದುಗಿ ಹೋಗಿತ್ತು. ಬ್ರಿಟಿಷರಂತೂ ಅದೊಂದು ದರೋಡೆಯೆಂದು ಬಿಂಬಿಸಲು ಪ್ರಯತ್ನಿಸಿದ್ದರು. ಅಂತಹ ಕಾಲಘಟ್ಟದಲ್ಲಿ ಸಮಾನ ಮನಸ್ಕರೊಡನೆ ಮುಂಚೂಣಿಯಲ್ಲಿ ಕಾಣಿಸಿಕೊಂಡವರು ಕೆದಂಬಾಡಿ ರಾಮಯ್ಯಗೌಡರು. ತನ್ನ ಮಗನ ಮದುವೆಯೆಂಬ ನೆಪದಲ್ಲಿ ಸ್ವಸಾಮರ್ಥ್ಯದಿಂದ ಸುಳ್ಯದ ಉಬರಡ್ಕ ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಪ್ರಾರಂಭಿಸಿದ ಹೋರಾಟ ಒಂದು ರೋಚಕ ಇತಿಹಾಸ. ಸುಳ್ಯದಿಂದ ಪ್ರಾರಂಭಗೊಂಡ ಈ ಹೋರಾಟದಲ್ಲಿ ಶನಿವಾರ ಸಂತೆಯ ಹೆಮ್ಮನಿಯ ಪುಟ್ಟ ಬಸಪ್ಪ ಎಂಬಾತನನ್ನು ಕೊಡಗಿನ ರಾಜ ವಂಶಸ್ಥನೆಂದು ಬಿಂಬಿಸಿ ಕಲ್ಯಾಣಸ್ವಾಮಿ ಎಂಬ ಹೆಸರಿತ್ತು ಆರಂಭಿಸಿದ ಯುದ್ದತಂತ್ರದ ರೂವಾರಿಯೇ ಕೆದಂಬಾಡಿ ರಾಮಯ್ಯ ಗೌಡ. ಸೂರ್ಯ ಮುಳುಗದ ನಾಡಿನ ಆಡಳಿತದ ಅಹಂಗೆ ಮೊದಲ ಹೊಡೆತ ಬಿದ್ದದ್ದೇ ಸುಳ್ಯದಿಂದ. ಮುಂದಿನ ಹದಿಮೂರು ದಿನಗಳ ಕಾಲ ಮಂಗಳೂರಿಂದ ಕೊಡಗಿನ ದ್ವಜದಡಿ ರಾಜ್ಯವನ್ನಾಳಿದ್ದು ಭಾರತದ ಚರಿತ್ರೆಯಲ್ಲೇ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಘಟನೆ. ಇಂತಹ ಚರಿತ್ರೆಯೊಂದರ ಹರಿಕಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿಯೊಂದು ಅಂದು ಹಾಲೇರಿಯ ಧ್ವಜವೇರಿಸಿದ ಮಂಗಳೂರಿನ ಬಾವುಟಗುಡ್ಡದಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ. ಮರೆತೇ ಹೋದಂತಿದ್ದ ಇತಿಹಾಸವೊಂದರ ಸಮರವೀರ ಕೆದಂಬಾಡಿ ರಾಮಯ್ಯಗೌಡರಿಗೆ ತಡವಾಗಿಯಾದರೂ ಮನ್ನಣೆ ದೊರಕಿಸಿಕೊಟ್ಟ ಸರ್ವರಿಗೂ, ಸರಕಾರಕ್ಕೂ ಅಭಿನಂದನೆ ಹೇಳಲೇಬೇಕುʼ.

ಕೆ ಆರ್‌ ತೇಜಕುಮಾರ್‌
ಲೇಖಕರು, ಕೃಷಿಕರು, ಸುಳ್ಯ

ಬಹುಪಾಲು ಸುಳ್ಯದ ಅಸ್ಮಿತೆಯೆಂದೇ ಪರಿಗಣಿಸಬಹುದಾದ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿ ಐತಿಹಾಸಿಕ ಮಹತ್ತ್ವದ ನೆಲೆ ಸೇರುವುದು ಖಚಿತವಾಗಿದೆ.
ಭಾರತದ ಸ್ವಾತಂತ್ರ್ಯದ ಅಮೃತ (75) ವರ್ಷದಲ್ಲಿ (2022) ಜನತೆಯ ಬಹು ಕಾಲದ ಕನಸೊಂದು ಈಡೇರುವಂತಾಗಿದೆ. ಅಮರ ಸುಳ್ಯದ ಸ್ವಾತಂತ್ರ್ಯ ಹೋರಾಟವು ಆರಂಭವಾದ ಸುಳ್ಯದ ಪಕ್ಕದಲ್ಲಿರುವ ಉಬರಡ್ಕ ಮಿತ್ತೂರಿನಲ್ಲಿ ಯುದ್ಧ ಸ್ಮಾರಕವೊಂದು ಈಗಾಗಲೇ ನಿರ್ಮಾಣವಾಗಿದೆ. ಸಂಶೋಧಕ ಕುಡೆಕಲ್ಲು ವಿದ್ಯಾಧರ ಬರೆದ ಅಮರ ಸುಳ್ಯದ ಸಶಸ್ತ್ರ ಹೋರಾಟ 1837 ಕೃತಿಯನ್ನು ಆಧರಿಸಿ ಕಲಾವಿದ ಎ ಕೆ ಹಿಮಕರ ರಚಿಸಿದ್ದ ರೇಖಾ ಚಿತ್ರಗಳನ್ನು ಸಿಮೆಂಟ್ ಮಾಧ್ಯಮದ ಉಬ್ಬು ಶಿಲ್ಪಗಳನ್ನಾಗಿ ಶಿಲ್ಪಿ ಮಹೇಶ್ ಬಾಯಾರು ನಿರ್ಮಿಸಿದ್ದಾರೆ. ಎರಡನೆಯದಾಗಿ ಇಲ್ಲಿಂದ ಹೊರಟ ದಂಡು ಮಂಗಳೂರಿನಲ್ಲಿದ್ದ ಬ್ರಿಟಿಷರನ್ನು ಓಡಿಸಿ ಬಾವುಟ ಗುಡ್ಡದಲ್ಲಿನ ಈಸ್ಟ್ ಇಂಡಿಯಾ ಕಂಪೆನಿಯ ಧ್ವಜವನ್ನು ಕಿತ್ತೆಸೆದು ತಮ್ಮದೇ ಸ್ವಾತಂತ್ರ್ಯದ ಧ್ವಜವನ್ನು ಹಾರಿಸಿದ ಸ್ಥಳದಲ್ಲಿಯೇ ಅಂದಿನ ಅಮರ ಸೇನೆಯ ಮಹಾದಂಡ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಅಂದವಾದ ಶಿಲ್ಪವನ್ನು ನಿಲ್ಲಿಸಿ ಸ್ಮಾರಕವನ್ನಾಗಿಸುವುದು ಅರ್ಥಪೂರ್ಣ, ಶ್ಲಾಘನೀಯ ಮತ್ತು ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಜಿಲ್ಲೆಯ ಅಸಂಖ್ಯಾತ ಸ್ವಾತಂತ್ರ್ಯ ಪ್ರೇಮಿಗಳಿಗೆ ಸಲ್ಲಿಸುವ ಕೃತಜ್ಞತಾ ಪೂರ್ವಕ ಗೌರವವಾಗಿದೆ.

ಎ ಕೆ ಹಿಮಕರ
ಸಂಶೋಧಕ, ಸುಳ್ಯ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಸಿದ ಪೊಲೀಸರು
ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿಯ ಯುವಮೋರ್ಚಾದ ಅಧ್ಯಕ್ಷ  ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಮೂವರು ಆರೋಪಿಗಳನ್ನು  ಬಂಧಿಸುವಲ್ಲಿ ಇಂದು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸುಳ್ಯ ನಿವಾಸಿ  ಶಿಯಾಬುದ್ದಿನ್‌ ಆಲಿ(33) ರಿಯಾಜ್ ಅಂಕತಡ್ಕ(27) ಮತ್ತು  ಎಲಿಮಲೆಯ ಬಶೀರ್‌ (29)ಎಂಬುದಾಗಿ ಎಡಿಜಿಪಿ ಅಲೋಕ್‌ ಕುಮಾರ್‌ ಮಧ್ಯಾಹ್ನ ಪತ್ರಿಕಾಗೋಷ್ಟಿಯಲ್ಲಿ ಖಚಿತಪಡಿಸಿದ್ದಾರೆ. ಆರೋಪಿಗಳನ್ನು ಮಂಗಳೂರು ಸಮೀಪದ ತಲಪಾಡಿಯಲ್ಲಿ ಬಂಧಿಸಲಾಗಿತ್ತು. ಇದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಹತ್ಯೆ ಮಾಡಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು ಆಗಾಗ ತಮ್ಮ ನೆಲೆಯನ್ನು ಬದಲಾಯಿಸುತ್ತಿದ್ದರು. ಅವರ ಶೋಧ ಕಾರ್ಯಕ್ಕೆ ವಿಶೇಷ ತಂಡವನ್ನು ರಚಿಸಲಾಗಿತ್ತು.  ಖಚಿತ ಮಾಹಿತಿಯ ಮೇರೆಗೆ ಇಂದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದರು.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್‌ ವಶಕ್ಕೆ ಪಡೆದು ಮಹಜರು, ಕೊಲೆಗೆ ಬಳಸಿದ ಆಯುಧಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಎನ್‌ಐಎಗೆ ಹಸ್ತಾಂತರ ಮಾಡಲಾಗುವುದು ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಮಾಹಿತಿ ನೀಡಿದ್ದರು.

ಅದರಂತೆ ಇದೀಗ ಆರೋಪಿಗಳನ್ನು ಬೆಳ್ಳಾರೆಗೆ ಕರೆತಂದು ಮಹಜರು ನಡೆಸಲಾಗಿದೆ. ಬೆಳ್ಳಾರೆಯಲ್ಲಿ ಹತ್ಯೆ ನಡೆದ ಸ್ಥಳ, ಮತ್ತಿತರ ಕಡೆಗಳಿಗೆ ಆರೋಪಿಗಳನ್ನು ಕರೆತಂದು ತನಿಖೆ ನಡೆಸಲಾಗಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಕರೆತರುತ್ತಿರುವ ಹಿನ್ನೆಲೆಯಲ್ಲಿ ಬಿಗು ಪೊಲೀಸ್‌ ಭದ್ರತೆ ಏರ್ಪಡಿಸಲಾಗಿತ್ತು.

ಜುಲೈ 26 ರಂದು ರಾತ್ರಿ 8.30ಕ್ಕೆ ಬೈಕ್‌ನಲ್ಲಿ ಬಂದ ಅಪರಿಚಿತರು ಬೆಳ್ಳಾರೆಯ ಮಾಸ್ತಿಕಟ್ಟೆ ಎಂಬಲ್ಲಿ ದಾಳಿ ನಡೆಸಿ ತಲವಾರಿನಿಂದ ಪ್ರವೀಣ್‌ ಅವರನ್ನು ಹತ್ಯೆಗೈದು ಪರಾರಿಯಾಗಿದ್ದರು.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಮತ್ತೊಬ್ಬ ಆರೋಪಿ ಬಂಧನ
ಪುತ್ತೂರು: ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಇಂದು (ಮಂಗಳವಾರ) ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರವೀಣ್‌ ಕೊಲೆಗೆ ಸಂಬಂಧಿಸಿದಂತೆ ಒಟ್ಟು 7 ಮಂದಿಯನ್ನು ಬಂಧಿಸಿದ್ದು, ಇಂದು ಬಂಧನವಾದ ವ್ಯಕ್ತಿಯು ಸುಳ್ಯದ ಜಟ್ಟಿಪಳ್ಳ ನಿವಾಸಿ, 33 ವರ್ಷದ ಅಬ್ದುಲ್‌ ಕಬೀರ್‌ ಎಂದು ತಿಳಿದು ಬಂದಿದೆ.

ಪ್ರವಾಹ ದುರಂತ-ನಲುಗಿದ ಸುಳ್ಯ
ಸುಳ್ಯ: ಕಳೆದ ಒಂದು ವಾರದಲ್ಲಿ ಸುಳ್ಯದ ಕಲ್ಮಕಾರು, ಬಾಳುಗೋಡು, ಕೊಲ್ಲಮೊಗ್ರ, ಹರಿಹರ, ಸುಬ್ರಹ್ಮಣ್ಯ ಭಾಗದಲ್ಲಿ ದೊಡ್ಡ ಪ್ರಮಾಣದ ಗುಡ್ಡ ಕುಸಿತ, ನೆರೆ ಇತ್ಯಾದಿ ಘಟನೆಗಳು ಸಂಭವಿಸಿದೆ. ಭೂ ಕುಸಿತದಿಂದ ಮರಗಳು ಉರುಳಿ ಸೇತುವೆ, ಕಿಂಡಿ ಅಣೆಕಟ್ಟೆಗಳಿಗೆ ಅಡ್ಡಲಾಗಿ ನಿಂತು ನೀರ ಹರಿವಿಗೆ ತಡೆಯಾದ ಕಾರಣ ನದಿಗಳು ತಮ್ಮ ಹರಿವಿನ ದಾರಿಯನ್ನೇ ಬದಲಾಯಿಸಿದ ಪ್ರಕರಣವೂ ನಡೆದಿದೆ. ಇದರ ಪರಿಣಾಮ ಮನೆಗಳು ಕುಸಿದಿವೆ. ಕುಸಿದ ಮನೆಯಡಿ ಸಿಲುಕಿ ಎರಡು ಮಕ್ಕಳು ಅಸು ನೀಗಿದ ದಾರುಣ ಘಟನೆಯೂ ಕಣ್ಣೆದುರಿಗಿದೆ. 2018 ರಲ್ಲಿ ಕೊಡಗಿನ ಮದೆನಾಡಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಮಾದರಿಯಲ್ಲಿ ಇದು ಸಂಭವಿಸಿದೆ.

ಈ ಘಟನೆಗೆ ಅನೇಕ ಕಾರಣಗಳನ್ನು ಮುಂದಿಡಲಾಗುತ್ತಿದೆ. ಅದರಲ್ಲಿ ಒಂದು ಮುಖ್ಯ ಕಾರಣವೆಂದರೆ ಅರಣ್ಯ, ಬೆಟ್ಟ ಪ್ರದೇಶಗಳಲ್ಲಿ  ಹೆಚ್ಚುತ್ತಿರುವ ಮಾನವ ಹಸ್ತಕ್ಷೇಪ. ಈ ಬಗ್ಗೆ  ಪಶ್ಚಿಮ ಘಟ್ಟದ ನಿವಾಸಿಯಾಗಿರುವ  ಲೇಖಕ, ರಂಗಕರ್ಮಿ ʼಪ್ರಸಾದ ರಕ್ಷಿದಿʼಯವರನ್ನು ಕೇಳಿದಾಗ “ವಿಜ್ಞಾನಿಗಳು ಹೇಳಿರುವ ಪ್ರಕಾರ, ಈ ಭಾಗಗಳು ಭೂಕಂಪ ವಲಯದಲ್ಲಿ ಬರುತ್ತವೆ. ಸುಮಾರು ಒಂದು ಶತಮಾನದ ಹಿಂದೆ ಸುಮಾರಾಗಿ ಇದೇ ರೀತಿ ಭೂಕಂಪ ಮತ್ತು ಅದನ್ನು  ಹಿಂಬಾಲಿಸಿದ ಮಳೆ ಮತ್ತು ಭೂಕುಸಿತವನ್ನು ಕೊಡಗು ಕಂಡಿತ್ತು. ಅಂದರೆ, 1900 ರಿಂದ 1910 ರ ದಶಕದಲ್ಲಿ ಅಂತ ಹಿರಿಯರು ಹೇಳುತ್ತಾರೆ. 1983 -84 ರಲ್ಲಿ ಸುಳ್ಯ ದ ಬೇಂಗಮಲೆಯ ಗುಡ್ಡದಲ್ಲಿ ದೊಡ್ಡ ಪ್ರಮಾಣದ ಭೂಕುಸಿತ
(land slide) ಉಂಟಾಗಿತ್ತು. ಇಂತಹ ವಲಯದಲ್ಲಿ. ರಸ್ತೆ, ಅಣೆಕಟ್ಟು, ಅಥವಾ ಯಾವುದೇ ಅಭಿವೃದ್ಧಿ ಯೋಜನೆ ಮಾಡುವಾಗ ಹತ್ತಾರು ಸಲ ಯೋಚಿಸಬೇಕು ಮತ್ತು ಅತ್ಯಂತ ಯೋಜಿತವಾಗಿ ಮತ್ತು ಕಡಿಮೆ ಪ್ರಮಾಣದಲ್ಲಿ ಮಾಡಬೇಕು. ಅದನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ನಿರಂತರವಾಗಿ ಮಾಡುತ್ತಿರುವ ಭೂ ಅತ್ಯಾಚಾರದ ಫಲವನ್ನು ನಾವೀಗ ಅನುಭವಿಸುತ್ತಿರುವುದು. ಈಗ ಕೆಲವು ದಿನದ ಹಿಂದೆ ಸಣ್ಣ ಪ್ರಮಾಣದ ಭೂಕಂಪ, ಕೊಡಗು ಮತ್ತು ಸುಳ್ಯ ವಲಯದಲ್ಲಿ ಆಗಿದೆ ಎಂಬುದನ್ನು ಗಮನಿಸಿ” ಎಂದು ಹೇಳುತ್ತಾರೆ.

ಹಿಂದೆ ನಮ್ಮಲ್ಲಿ ಬೃಹತ್ ಯಂತ್ರಗಳಿರಲಿಲ್ಲ. ಕೆಲಸಗಳಿಗೆ ಮಾನವ ಶ‍್ರಮವನ್ನೇ ಅವಲಂಬಿಸಬೇಕಾಗಿತ್ತು. ಅದಕ್ಕೊಂದು ಮಿತಿಯೂ ಇತ್ತು. ಹಾಗಾಗಿ ಗುಡ್ಡ ಬೆಟ್ಟಗಳನ್ನು ಕತ್ತರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಬೆಟ್ಟದ ಏರು ತಗ್ಗುಗಳನ್ನು ಬಳಸಿಕೊಂಡೇ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಇದರಿಂದ ಪ್ರಕೃತಿಗೆ ಹಾನಿಯಿರಲಿಲ್ಲ. ಆದರೆ ಈಗ ನಾವು ಯಂತ್ರಯುಗದಲ್ಲಿ ಬದುಕುತ್ತಿದ್ದೇವೆ. ಪ್ರತೀ ಊರುಗಳಲ್ಲಿ ಮಣ್ಣು ಅಗೆಯುವ ಬೃಹತ್ ಜೆಸಿಬಿ ಯಂತ್ರಗಳು ದೊಡ್ಡ ಸಂಖ್ಯೆಯಲ್ಲಿವೆ. ಜನರ ಬಳಿ ಹಣವೂ ಇದೆ. ಮಿಲಿಯಗಟ್ಟಲೆ ವರ್ಷ ಹಿಂದೆ ನಿರ್ಮಾಣವಾದ ಬೆಟ್ಟಗಳನ್ನು ಈ ಯಂತ್ರಗಳು ಗಂಟೆಗಳಲ್ಲಿ ಕತ್ತರಿಸಿ ನೆಲ ಸಮ ಮಾಡುತ್ತಿವೆ. ಅದರ ಪರಿಣಾಮವನ್ನು ನಾವೀಗ ನೋಡುತ್ತಿರುವುದು ಎಂದೂ ಜನರು ಮಾತಾಡಿಕೊಳ್ಳುತ್ತಿದ್ದಾರೆ.

ನಿನ್ನೆ ಅಧಿಕಾರಿಗಳು ನೆರೆ ಸಂತ್ರಸ್ತರನ್ನು ಭೇಟಿಯಾಗಿ ಪರಿಹಾರದ ಭರವಸೆಯನ್ನು ನೀಡಿದ್ದಾರೆ. ಆದರೆ ಅಭಿವೃದ್ಧಿ ವಿಷಯದಲ್ಲಿ ಶಾಪಗ್ರಸ್ತವಾಗಿರುವ ಸುಳ್ಯದಂತಹ ಗ್ರಾಮೀಣ ಪ್ರದೇಶವನ್ನು ಈ ವರೆಗಿನ ಯಾವ ಸರಕಾರಗಳೂ ಗಂಭೀರವಾಗಿ ಪರಿಗಣಿಸಿಲ್ಲವಾದ್ದರಿಂದ  ಸಂತ್ರಸ್ತರು ಮತ್ತೆ ಬದುಕು ಕಟ್ಟಿಕೊಳ್ಳುವುದಕ್ಕೆ ಇನ್ನೆಷ್ಟು ವರ್ಷ ಬೇಕಾದೀತು ಎನ್ನುವುದು ಯಕ್ಷ ಪ್ರಶ್ನೆ.