Sumalatha ambarish – Peepal Media

ಸುಮಲತಾ ಅಂಬರೀಶ್ ಕಣಕ್ಕೆ! ; ಮತ್ತೊಮ್ಮೆ ಹೈವೋಲ್ಟೇಜ್ ಕ್ಷೇತ್ರವಾಗುವತ್ತ ಮಂಡ್ಯ
ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಮತ್ತೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜನಪ್ರತಿನಿಧಿಯಾಗಿ ಇನ್ನೂ ಸಹ ತನ್ನ ಚಾರ್ಮ್ ಉಳಿಸಿಕೊಂಡಿರುವ ಸುಮಲತಾ ಅಂಬರೀಶ್ ತಮಗಿರುವ ಜನಪ್ರಿಯತೆ ಮತ್ತೊಬ್ಬರಿಗೆ ಯಾಕೆ ಧಾರೆ ಎರೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಬೆಂಬಲಿಗರ ಕಡೆಯಿಂದ ಮತ್ತೊಮ್ಮೆ ಕಣಕ್ಕಿಳಿಯುವ ಬಗ್ಗೆಯೂ ಸುಮಲತಾ ಅಂಬರೀಶ್ ಅವರಿಗೆ ಒತ್ತಡ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಮೇಲಾಗಿ ಕಳೆದ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲೇ ಏಕೈಕ ಹೈವೋಲ್ಟೇಜ್ ಕಣವಾಗಿ ರೂಪುಗೊಂಡು, ತನ್ನ ಪತಿ ಅಂಬರೀಶ್ ಅವರ ಜನಪ್ರಿಯತೆಯನ್ನು ಸಮರ್ಥವಾಗಿ ಬಳಸಿಕೊಂಡ ಸುಮಲತಾ ನಿರಾಯಾಸವಾಗಿ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಒಬ್ಬ ಮಹಿಳೆಯಾಗಿ ಮಾಜಿ ಪ್ರಧಾನಿ ಮೊಮ್ಮಗನನ್ನು  ಎದುರಿಸಿ ಗೆದ್ದದ್ದು ರಾಜ್ಯದ ಜನತೆ ಇನ್ನೂ ಮರೆತಿಲ್ಲ.

ಈಗಾಗಲೇ ಸುಮಲತಾ ಅವರನ್ನು ಲೋಕಸಭಾ ಕಣದಿಂದ ದೂರವಿಡಲು ಜೆಡಿಎಸ್ ಮತ್ತು ಬಿಜೆಪಿ ನಾಯಕರು ದಂಡು ದಂಡಾಗಿ ಭೇಟಿ ಮಾಡಿ ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇಂದೂ ಕೂಡಾ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುಮಲತಾ ಮನೆಗೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಸತತ ಮೂವತ್ತು ನಿಮಿಷಗಳ ಚರ್ಚೆ ಬಳಿಕ ಕುಮಾರಸ್ವಾಮಿ ಇದೊಂದು ಸೌಹಾರ್ದ ಭೇಟಿ ಎಂದು ಕೈ ತೊಳೆದುಕೊಂಡಿದ್ದಾರೆ.

ಆದರೆ ಸುಮಲತಾ ಅಂಬರೀಶ್ ಈವರೆಗೆ ಯಾರಿಗೂ ಸ್ಪಷ್ಟ ಅಭಿಪ್ರಾಯ ತಿಳಿಸದೇ ಹಾಗೇ ಕಳಿಸಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ನಾಯಕರು ಸುಮಲತಾ ಇನ್ನು ಕಣಕ್ಕೆ ಇಳಿಯುವುದಿಲ್ಲ ಎಂಬುದನ್ನೇ ಬಿಂಬಿಸಿದರೂ ಈ ಬಗ್ಗೆ ಸುಮಲತಾ ಅಂಬರೀಶ್ ಏಪ್ರಿಲ್ 3 ರ ವರೆಗೂ ಕಾಯುವಂತೆ ತಿಳಿಸಿದ್ದಾರೆ.

ಆ ಮೂಲಕ ಏಪ್ರಿಲ್ 3 ರ ನಂತರ ಮಂಡ್ಯದ ರಣಕಣ ಯಾವ ರೀತಿಯಾಗಿ ರೂಪುಗೊಳ್ಳಬಹುದು ಎಂಬ ಕುತೂಹಲ ಕೂಡಾ ಮನೆ ಮಾಡಿದೆ. ಈಗಾಗಲೇ ಜಿಲ್ಲೆಯಾದ್ಯಂತ ತನ್ನ ಬೆಂಬಲಿಗರು ಹಾಗೂ ಅಂಬರೀಶ್ ಅಭಿಮಾನಿಗಳನ್ನು ಹೊಂದಿರುವ ಸುಮಲತಾ ಅವರಿಗೆ ಚುನಾವಣೆ ನಿಲ್ಲಲು ಒತ್ತಡ ಕೂಡಾ ಹೆಚ್ಚಿದೆ ಎನ್ನಲಾಗಿದೆ. ರಾಜಕೀಯದಲ್ಲಿ ಕಾಯಂ ಶತ್ರು ಹಾಗೂ ಮಿತ್ರ ಇಲ್ಲದೇ ಇದ್ದರೂ ಕಳೆದ ಚುನಾವಣೆಯಲ್ಲಿ ಸುಮಲತಾ ವಿರುದ್ಧ ಮಾತನಾಡಿದ ಅನೇಕ ಜೆಡಿಎಸ್ ನಾಯಕರಿಗೆ ಸರಿಯಾದ ಉತ್ತರ ಈ ಚುನಾವಣೆಯಲ್ಲಿ ಕೊಡಬೇಕು ಎಂಬುದು ಅಂಬರೀಶ್ ಅಭಿಮಾನಿಗಳ ಒತ್ತಾಯವಾಗಿದೆ.

ಸಧ್ಯಕ್ಕೆ ಸಿಕ್ಕ ಮಾಹಿತಿಯಂತೆ ಈ ಬಾರಿ ಮಂಡ್ಯ ಸುಮಲತಾ ಅಂಬರೀಶ್ ಅವರ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆಯ ಮುನ್ಸೂಚನೆ ಹುಟ್ಟು ಹಾಕಿದೆ. ಸಧ್ಯ ಮೂರೂ ಪಕ್ಷಗಳಲ್ಲೂ ಸಮಾನ ಅಂತರ ಕಾಯ್ದುಕೊಂಡು ಬಂದಿರುವ ಸುಮಲತಾ ಕಣಕ್ಕಿಳಿಯುವುದೇ ಹೌದಾದರೆ ಮತ್ತೊಮ್ಮೆ ಚಿತ್ರರಂಗದ ದಂಡು ಮಂಡ್ಯ ಕ್ಷೇತ್ರವನ್ನು ಆವರಿಸಲಿದೆ.

ಸಧ್ಯದ ಸ್ಥಿತಿಯಲ್ಲಿ ಮೂರೂ ಪಕ್ಷಗಳಲ್ಲೂ ತನ್ನ ಅಭಿಮಾನ ಉಳಿಸಿಕೊಂಡಿರುವ ಸುಮಲತಾ, ತನ್ನ ಸ್ಪರ್ಧೆ ಹೌದೇ ಆದರೆ ಅದರ ಹೆಚ್ಚಿನ ಲಾಭ ಕಾಂಗ್ರೆಸ್ ಪಕ್ಷ ಪಡೆದುಕೊಳ್ಳಲಿದೆ ಎಂಬುದು ಸ್ಪಷ್ಟ.

ಯಾವುದೇ ಕಾರಣಕ್ಕೂ ಮಂಡ್ಯ ಬಿಡುವುದಿಲ್ಲ, ಎ. 3ರಂದು ತೀರ್ಮಾನ ತಿಳಿಸುವೆ: ಸುಮಲತಾ ಅಂಬರೀಷ್
ಮಂಡ್ಯ :- ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದ ಸಂಸದೆ ಸುಮಲತಾ ಅಂಬರೀಶ್ ತಮ್ಮ ಮುಂದಿನ ನಿಲುವಿನ ಬಗ್ಗೆ ಗುಟ್ಟು ಬಿಟ್ಟುಕೊಡದೆ ಏ.3ರಂದು ಮಂಡ್ಯದಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದರು.
ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸ ಮಂಡ್ಯ ಜಿಲ್ಲೆಯಿಂದ ಆಗಮಿಸಿದ್ದ ಅಪಾರ ಅಭಿಮಾನಿಗಳ ಅಭಿಪ್ರಾಯ ಆಲಿಸಿದ ನಂತರ ಮಾತನಾಡಿದ ಅವರು ಮೊನ್ನೆಯವರೆಗೂ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿತ್ತು, ಆದರೆ ಮೈತ್ರಿ ಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಡಲಾಗಿದೆ, ಬಿಜೆಪಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿರಿಸಿ ಸಾಕಷ್ಟು ಪ್ರಯತ್ನ ಮಾಡಿತು ಆದರೆ ಫಲ ಸಿಗಲಿಲ್ಲ ಎಂದರು.
ನಾನು ಎಂದಿಗೂ ಸ್ವಾರ್ಥ ರಾಜಕಾರಣ ಮಾಡಿಲ್ಲ, ತಪ್ಪು ಹೆಜ್ಜೆ ಇರಿಸಿಲ್ಲ, ಮಂಡ್ಯ ಎಂದರೆ ನನಗೆ ಅಭಿಮಾನ, ನಿಮ್ಮನ್ನು ಬಿಟ್ಟು ನಿರ್ಧಾರ ಮಾಡುವುದಿಲ್ಲ. ಅದೇ ರೀತಿ ನಿಮ್ಮನ್ನು ನೋಯಿಸುವ ಸರದಾರ ಕೂಡ ಮಾಡಲ್ಲ, ಮಂಡ್ಯದ ಜನತೆ ನನ್ನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದೀರಿ, ನಾನು ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದು ಹೇಳಿದರು.
ಅಂಬರೀಶ್ ಜೊತೆಗೆ ಇದ್ದವರು ಇವತ್ತು ನನ್ನೊಂದಿಗೆ ಇದ್ದೀರಿ, ನಿಮ್ಮನ್ನು ವಿಶ್ವಾಸಕ್ಕೆ ಪಡೆಯದೆ ನಾನು ಯಾವುದೇ ನಿರ್ಧಾರ ಮಾಡುವುದಿಲ್ಲ, ನಿಮ್ಮನ್ನು ಕೇಳಿಯೇ ನಾನು ಎಲ್ಲಾ ನಿರ್ಧಾರ ಮಾಡುತ್ತೇನೆ, ಮಂಡ್ಯ ಜಿಲ್ಲೆಯಲ್ಲಿ ಮತ್ತಷ್ಟು ಲಕ್ಷಾಂತರ ಜನತೆ ನನ್ನೊಂದಿಗೆ ಇದ್ದಾರೆ, ಎಲ್ಲರ ಜೊತೆ ಚರ್ಚಿಸಿ ಮುನ್ನಡೆಯ ಬೇಕಾಗಿದೆ ಹಾಗಾಗಿ ಕಾಲಾವಕಾಶ ಬೇಕಾಗಿದ್ದು, ಏಪ್ರಿಲ್ 3 ರಂದು ಮಂಡ್ಯದಲ್ಲಿ ಎಲ್ಲರೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದು ಘೋಷಿಸಿದರು.
ನನ್ನ ಭವಿಷ್ಯಕ್ಕಿಂತ ಹೆಚ್ಚಾಗಿ ನನ್ನನ್ನು ನಂಬಿರುವ ಜನರ ಭವಿಷ್ಯ ನನಗೆ ಮುಖ್ಯ, ಇದೇ ವಿಚಾರವನ್ನು ಬಿಜೆಪಿ ವರಿಷ್ಠರ ಬಳಿ ಹೇಳಿದ್ದೇನೆ, ನನ್ನನ್ನು ನಂಬಿರುವ ಜನತೆಯ ಜವಾಬ್ದಾರಿ ನನ್ನ ಮೇಲಿದೆ, ಅವರಿಗೂ ಸೂಕ್ತ ಸ್ಥಾನಮಾನ ಸಲ್ಲಬೇಕಾಗಿದೆ, ಬಿಜೆಪಿ ವರಿಷ್ಠರು ಹಾಗೂ ರಾಜ್ಯದ್ಯಕ್ಷರು ಪಕ್ಷಕ್ಕೆ ಸಹಕಾರ ನೀಡಿ, ಉಜ್ವಲ ಭವಿಷ್ಯ ನಿಮ್ಮದಾಗಲಿದ್ದು, ಉನ್ನತ ಸ್ಥಾನಮಾನದ ಭರವಸೆ ನೀಡಿದ್ದಾರೆ ಆದರೆ ನಾನು ನನ್ನ ನಂಬಿರುವ ಜನತೆಯನ್ನು ಕೈ ಬಿಡುವ ಪ್ರಶ್ನೆ ಇಲ್ಲ, ಆ ಪಕ್ಷ ಈ ಪಕ್ಷಕ್ಕೆ ಒಳ್ಳೆಯದಾಗಲಿ ಎಂಬ ನಿಲುವಿನ ಮೇಲೆ ನಿರ್ಧಾರ ಮಾಡಲ್ಲ, ನನ್ನ ನಂಬಿರುವ ಜನರ ಭವಿಷ್ಯದ ಮೇಲೆ ನನ್ನ ನಿಲುವು ಇರಲಿದೆ, ಮಂಡ್ಯದ ಋಣ ನನ್ನ ಮೇಲಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲಾ ಜನರು ನನ್ನ ಮೇಲೆ ಅಭಿಮಾನ ಇಟ್ಟು ಇಲ್ಲಿಗೆ ಬಂದಿದ್ದಾರೆ,ಈಗಿನ ಬೆಳವಣಿಗೆಯನ್ನುಬಿಜೆಪಿ ವರಿಷ್ಟರಿಗೆ ತಿಳಿಸಲಾಗುವುದು, ನಿಮ್ಮನ್ನು ಬಿಟ್ಟು ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದರು.
ಅಂಬರೀಷ್ ಮನೆಗೆ ಯಾರೇ ಬಂದರೂ ಅದಕ್ಕೆ ಸ್ವಾಗತ ಇದೆ, ಆಕ್ಷೇಪ ಇರುವುದಿಲ್ಲ, ಎಲ್ಲಿಗೆ ಬಂದು ನನ್ನೊಂದಿಗೆ ಮಾತುಕತೆ ಮಾಡಲು ಎಲ್ಲರಿಗೂ ಕೂಡ ಮುಕ್ತ ಅವಕಾಶವಿದೆ ಎಂದು ತಿಳಿಸಿದರು.

ಬಿಜೆಪಿಗೂ ನನಗೂ ಸಂಬಂಧವಿಲ್ಲ – ಸುಮಲತಾ ಸಿಡಿಸಿದ ಬಾಂಬ್
ನಾನು ಬಿಜೆಪಿ ಸಂಸದೆ ಅಲ್ಲ. ನಾನೊಬ್ಬ ಸ್ವತಂತ್ರ ಅಭ್ಯರ್ಥಿ. ನನ್ನ ಕ್ಷೇತ್ರದ ಅಗತ್ಯ ಕೆಲಸಗಳ ಸಲುವಾಗಿ ಬಿಜೆಪಿಗೆ ಬೆಂಬಲ ನೀಡಿದ್ದೇನೆ. ಹಾಗಾಗಿ ಅವರ ನಿರ್ಧಾರಗಳಿಗೂ ನನಗೂ ಸಂಬಂಧ ಇಲ್ಲ ಎಂದು ಬಿಜೆಪಿ ಬೆಂಬಲಿತ ಮಂಡ್ಯ ಕ್ಷೇತ್ರದ ಸ್ವತಂತ್ರ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ಕಾವೇರಿ ನೀರಿನ, ಮಂಡ್ಯದ ರೈತರ ಸಮಸ್ಯೆಗಳಲ್ಲಿ ರಾಜಕೀಯವನ್ನು ತರಲು ಹೋಗುವುದಿಲ್ಲ. ಇದರಲ್ಲಿ ರಾಜಕೀಯ ಮಾತನಾಡಲು ಇಷ್ಟ ಪಡುವುದಿಲ್ಲ. ಕಾವೇರಿ ಬೆಲ್ಟ್ ನ ರೈತರ ಪರ ಇಡೀ ಕರ್ನಾಟಕ ನಿಲ್ಲಬೇಕು. ಕಾವೇರಿ ವಿಚಾರದಲ್ಲಿ ನಮ್ಮ ವಿರುದ್ಧವೇ ಹೋಗುತ್ತಿದೆ. ಸುಪ್ರೀಂ ಕೋರ್ಟ್ ನಲ್ಲಿ ತೀರ್ಮಾನಗಳು ತಮಿಳುನಾಡು ಪರ ಬಂದಿವೆ. ಇಲ್ಲಿ ನಮ್ಮ ತಪ್ಪುಗಳೂ ಇವೆ ಎಂದು ಸುಮಲತಾ ಅಂಬರೀಶ್ ಪರೋಕ್ಷವಾಗಿ ಬಿಜೆಪಿ ಸರ್ಕಾರದ ನಿಲುವಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಹೀಗಾಗಿ ನಮ್ಮನ್ನು ಪ್ರತಿನಿಧಿಸುವವರು ಸರಿಯಾಗಿ ಇದ್ದಾರೋ ಎಂಬುದು ಒಂದು ಮುಖ್ಯವಾದ ಪ್ರಶ್ನೆ. ಸಧ್ಯಕ್ಕೆ ನನಗೆ ಮಂಡ್ಯ ಜನತೆ, ಕಾವೇರಿ ನೀರಿನ ವಿಚಾರದಲ್ಲಿ ಸು.ಕೋರ್ಟ್ ನ ನಿಲುವಿನ ಬಗ್ಗೆ ಆಕ್ಷೇಪವಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ತೀರದ ಮಂಡ್ಯ ಜನತೆಯ ಪರವಾಗಿ ಇಡೀ ರಾಜ್ಯ ನಿಲ್ಲಬೇಕು ಎಂದು ಮನವಿ ಮಾಡಿದರು.

ಕೃಷಿ ಸಚಿವರ ವಿರುದ್ಧ ಇರುವ ಆರೋಪಗಳ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಇದಕ್ಕೂ ನನಗೂ ಸಂಬಂಧ ಇಲ್ಲ. ಆರೋಪ ಇರುವವರು ಮತ್ತು ಮಾಡಿದವರು ಮಾತನಾಡುತ್ತಿದ್ದಾರೆ. ನಾನು ಬಿಜೆಪಿ ಸದಸ್ಯೆ ಅಲ್ಲ. ನಾನು ಸ್ವತಂತ್ರ ಅಭ್ಯರ್ಥಿ. ಬಿಜೆಪಿಗೆ ಬೆಂಬಲ ನೀಡಿದ್ದೇನೆ. ಆದರೆ ಅವರ ನಿರ್ಧಾರಗಳಿಗೂ ನನಗೂ ಸಂಬಂಧ ಇಲ್ಲ ಎಂದು ಸುಮಲತಾ ಅಂಬರೀಶ್ ನಾನೊಬ್ಬ ಸ್ವತಂತ್ರ ಸಂಸದೆ ಎಂಬುದನ್ನು ಪುನರುಚ್ಛರಿಸಿದ್ದಾರೆ.

ಅಷ್ಟೆ ಅಲ್ಲದೆ ‘ಹಾಗೆಂದು ಬಿಜೆಪಿಯ ನಿರ್ಧಾರಗಳಿಗೆ ಬೆಂಬಲ ಇಲ್ಲ ಅಂತ ಅಲ್ಲ. ನನ್ನ ಸ್ವಂತ ಅಭಿಪ್ರಾಯಗಳಿಗೂ ಜಾಗ ಇದೆ. ಬಿಜೆಪಿ ನನಗೆ ಅವರ ನಿರ್ಧಾರಗಳನ್ನು ತಿಳಿಸಿ ಮನದಟ್ಟು ಮಾಡಿದರೆ ನಾನು ಬೆಂಬಲಿಸುತ್ತೇನೆ. ಆದರೆ ಪಕ್ಷ ಸೇರಲು ಬಿಜೆಪಿಯಿಂದ ಯಾವುದೇ ಮಾತು ಬಂದಿಲ್ಲ’ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.