Sunil Kumar Karkala – Peepal Media

ಪರಶುರಾಮ ಥೀಮ್ ಪಾರ್ಕ್; ಮಾಜಿ ಸಚಿವ ಸುನಿಲ್ ಕುಮಾರ್ ಭ್ರಷ್ಟಾಚಾರ: ವಕೀಲ ದಿನೇಶ್ ಹೆಗಡೆ ಉಳೆಪಾಡಿ ಆರೋಪ
ಮಂಗಳೂರು/ಕಾರ್ಕಳ: ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಕಾರ್ಕಕಳದ ಪರಶುರಾಮ ಮೂರ್ತಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮೂರ್ತಿ ಸ್ಥಾಪನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆಯೆಂದು ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರಾಗಿರುವ ದಿನೇಶ್‌ ಹೆಗಡೆ ಉಳೆಪಾಡಿ ಆರೋಪಿಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಬರೆದಿರುವ ಅವರು, ಮಾಜಿ ಸಚಿವ ಹಾಗೂ ಹಾಲಿ ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್‌ ಕುಮಾರ್‌ ಅವರು ಜನರ ಜೀವವನ್ನು ಒತ್ತೆಯಿಟ್ಟು ತಮ್ಮ ರಾಜಕೀಯ ಹಿತಾಸಕ್ತಿಯನ್ನು ಪೂರೈಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೊಂದು ಧಾರ್ಮಿಕ ಹಾಗೂ ಆರ್ಥಿಕ ಭ್ರಷ್ಟಾಚಾರವೆಂದು ಅವರು ಕರೆದಿದ್ದಾರೆ.

ಈ ಯೋಜನೆ ಪೂರ್ಣಗೊಳ್ಳುವ ಮೊದಲೇ ಉದ್ಘಾಟಿಸುವ ಮೂಲಕ ಸುನೀಲ್‌ ಕುಮಾರ್‌ ಯೋಜನೆಯ ನಿಯಮಗಳನ್ನು ಉಲ್ಲಂಘಿಸುವುದರ ಜೊತೆಗೆ ಅಂದಿನ ಜಿಲ್ಲಾಧಿಕಾರಿಯನ್ನೂ ಹೆದರಿಸಿ ತಮ್ಮ ಕಾರ್ಯವನ್ನು ಸಾಧಿಸಿದ್ದಾರೆಂದು ತಮ್ಮ ಪೋಸ್ಟಿನಲ್ಲಿ ಅವರು ಆರೋಪಿಸಿದ್ದಾರೆ.

ಅವರು ತಮ್ಮ ಪೋಸ್ಟಿನಲ್ಲಿ “ಒಪ್ಪಂದದ ಪ್ರಕಾರ ಗುತ್ತಿಗೆ ದಾರರು ಸಂಪೂರ್ಣ ಗೊಳಿಸಲು ಇನ್ನೂ ಎರಡು ವರ್ಷ ಬಾಕಿ ಇದೆ.(ಈ ದಿನದಿಂದ ). ಸರಕಾರ 14 ಕೋಟಿಯಲ್ಲಿ 3 ಕೋಟಿಯಷ್ಟೇ ಪಾವತಿ ಮಾಡಿತ್ತು.(ಉದ್ಘಾಟನಾ ಸಮಯದ ವರೆಗೆ )” ಎಂದು ಬರೆದುಕೊಂಡಿದ್ದಾರೆ.

ಆರಂಭಿಕ ಹಂತದ ಕೆಲಸ ನಡೆಯುತ್ತಿರುವ ಥೀಮ್ ಪಾರ್ಕನ್ನು ಉದ್ಘಾಟನೆಗೆ ಸಿದ್ದ ಗೊಳಿಸುವಂತೆ ಸುನಿಲ್ ಕುಮಾರ್ ಅವರು ಉಡುಪಿಯ ಡಿಸಿ ಯವರಿಗೆ ಆದೇಶ ನೀಡುತ್ತಾರೆ. ಅಪೂರ್ಣವಾದ ಕಾಮಗಾರಿಯನ್ನು ಉದ್ಘಾಟನೆಗೆ ಸಜ್ಜುಗೊಳಿಸಲು ಆಗುವುದಿಲ್ಲ ಮತ್ತು ಅದು ಅಪರಾಧ ಕೂಡಾ ಮತ್ತು ಒಂದು ವೇಳೆ ಈ ಹಂತದಲ್ಲಿ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಪ್ರವೇಶ ಅವಕಾಶ ನೀಡಿದರೆ ಜೀವ ಹಾನಿ ಆಗುವ ಸಂಭವ ಇದೆ ಎಂದು ಡಿಸಿ ಸಲಹೆ ನೀಡುತ್ತಾರೆ. ನನಗೆ ಚುನಾವಣೆ ಗೆಲ್ಲುವುದು ಮುಖ್ಯ. ಯಾರ ಜೀವ ಹೋಗುತ್ತದೆ ಹೋಗುವುದಿಲ್ಲ ಎಂದು ನನಗೆ ಲೆಕ್ಕಾ ಚಾರ ಹಾಕಿ ಕುಲಳಿತುಕೊಳ್ಳಲು ಸಮಯ ಇಲ್ಲ. ನೀವು ಉದ್ಘಾಟನೆಗೆ ತಯಾರು ಗೊಳಿಸದೇ ಇದ್ದರೆ ನಿಮ್ಮನ್ನು ಲಾಭ ಇಲ್ಲದ ಇಲಾಖೆಗೆ ಟ್ರಾನ್ಸ್‌ಫರ್ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ.‌

https://m.facebook.com/story.php?story_fbid=pfbid0rvGzdJ6v1hwKNFLywvtUV6dSnvE33HGwfYXSuzG1eXu4g5oJVLiXybHHoJ2MEvE7l&id=100000580132992&mibextid=Nif5oz

ಆರಂಭಿಕ ಹಂತದ ಕೆಲಸ ನಡೆಯುತ್ತಿರುವ ಥೀಮ್ ಪಾರ್ಕ್ ಅನ್ನು ಉದ್ಘಾಟನೆಗೆ ಸಿದ್ದ ಗೊಳಿಸುವಂತೆ ಸುನಿಲ್ ಕುಮಾರ್ ಅವರು ಉಡುಪಿಯ ಡಿಸಿ ಯವರಿಗೆ ಆದೇಶ ನೀಡುತ್ತಾರೆ. ಅಪೂರ್ಣವಾದ ಕಾಮಗಾರಿಯನ್ನು ಉದ್ಘಾಟನೆಗೆ ಸಜ್ಜುಗೊಳಿಸಲು ಆಗುವುದಿಲ್ಲ ಮತ್ತು ಅದು ಅಪರಾಧ ಕೂಡಾ ಮತ್ತು ಒಂದು ವೇಳೆ ಈ ಹಂತದಲ್ಲಿ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಪ್ರವೇಶ ಅವಕಾಶ ನೀಡಿದರೆ ಜೀವ ಹಾನಿ ಆಗುವ ಸಂಭವ ಇದೆ ಎಂದು ಡಿಸಿ ಸಲಹೆ ನೀಡುತ್ತಾರೆ. ನನಗೆ ಚುನಾವಣೆ ಗೆಲ್ಲುವುದು ಮುಖ್ಯ. ಯಾರ ಜೀವ ಹೋಗುತ್ತದೆ ಹೋಗುವುದಿಲ್ಲ ಎಂದು ನನಗೆ ಲೆಕ್ಕಾ ಚಾರ ಹಾಕಿ ಕುಲಳಿತುಕೊಳ್ಳಲು ಸಮಯ ಇಲ್ಲ. ನೀವು ಉದ್ಘಾಟನೆಗೆ ತಯಾರು ಗೊಳಿಸದೇ ಇದ್ದರೆ ನಿಮ್ಮನ್ನು ಲಾಭ ಇಲ್ಲದ ಇಲಾಖೆಗೆ transfer ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ.

ಯೋಜಿತ ಪರಶುರಾಮನ ಮೂರ್ತಿಯಲ್ಲಿ ಕೊಡಲಿ ಬಹು ಮುಖ್ಯವಾದ ಮತ್ತು ಆಕರ್ಷಣೀಯ ಅಂಗ. ಮೂರ್ತಿಯ ಎತ್ತರಕ್ಕೆ ಅನುಗುಣವಾಗಿ ಅದರ ಕೈ ಮತ್ತು ಕೊಡಲಿಯ ಬಾರ 1.5 ಟನ್ ತೂಕ.ಇಷ್ಟು ತೂಕದ ಭಾರವನ್ನು ಹೊರಲು ಮೂರ್ತಿಗೆ ಭೂಮಿಯ ಅಡಿ ಭಾಗದಿಂದ ಆಧಾರ ಸ್ತ0ಬ ವನ್ನು ನಿರ್ಮಿಸಬೇಕು.

ಇದು ಬಹು ನಾಜೂಕಾದ ಮತ್ತು ವೈಜ್ಞಾನಿಕ ಲೆಕ್ಕಾಚಾರದಲ್ಲಿ ನಿರ್ಮಾಣಮಾಡಬೇಕಾದ ಕೆಲಸ. ಇದನ್ನು ಮಾಡಲು ನೆಲದಿಂದ ಕಾಲಿನ ಒಳಭಾಗದಿಂದ ಕಂಬವನ್ನು ನಿರ್ಮಿಸಿ (piller ) ಕೈ ಮತ್ತು ಕೊಡಲಿಗೆ ಆಧಾರವನ್ನು ನೀಡಬೇಕು. ಸ್ವಲ್ಪ ಲೆಕ್ಕಾಚಾರ ತಪ್ಪಿದರೂ ಗಾಳಿ ಮಳೆಗೆ ಆಯ ತಪ್ಪಿ ಕೆಳಗೆ ಉರುಳುವ ಸಾಧ್ಯತೆಯೇ ಜಾಸ್ತಿ. ಇದರಿಂದ ಆಸುಪಾಸಿನ ಜನರ ಆಸ್ತಿಗೆ ಮತ್ತು ಪ್ರವಾಸಿ ಜನರ ಜೀವ ಹಾನಿ ಉಂಟಾಗುವ ಸಾಧ್ಯತೆ ಇದೆ.
ಸುನಿಲ್ ಕುಮಾರ್ ರವರ ಮಾತಿಗೆ ಗುಟ್ರಿಗೆದಾರರು ವಿರೋಧ ವ್ಯಕ್ತ ಪಡಿಸುತ್ತಾರೆ. ತನ್ನ ಮಾತನ್ನು ಕೇಳದ ಗುತ್ತಿಗೆದಾರರನ್ನು ಪಕ್ಕಕ್ಕೆ ಸರಿಸಿ ಸುನಿಲ್ ಕುಮಾರ್ ಇಡೀ ಥೀಮ್ ಪಾರ್ಕ್ ನ ಕೆಲಸವನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಳ್ಳುತ್ತಾರೆ. ನಿರ್ಮಾಣ ಹಂತದಲ್ಲಿ ಇದ್ದ ಕೆಲಸವನ್ನು ತನ್ನ ಆಪ್ತರ ಸುಪರ್ದಿಗೆ ನೀಡುತ್ತಾರೆ.

ಪರಶುರಾಮ ಮೂರ್ತಿಗೆ ಲೋಹದ ಬದಲು ಫೈಬರ್ ವಸ್ತುವನ್ನು ಬಳಸುತ್ತಾರೆ. ಮೂರ್ತಿಯ ಬಹು ಮುಖ್ಯವಾದ ಮತ್ತು ಧಾರ್ಮಿಕ ನಂಬಿಕೆಯ ಭಾಗವಾದ ಕೈ ಮತ್ತು ಕೊಡಲಿಯನ್ನು ಫೈಬರ್ ನಿಂದ ನಿರ್ಮಿಸಿ ತನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಣದಿಂದ ಉದ್ಘಾಟನೆ ಗೊಳಿಸುತ್ತಾರೆ.
ಉದ್ಘಾಟನೆ ಮಾಡುವಾಗ ಇದನ್ನು 14 ಕೋಟಿಯಲ್ಲಿ ನಿರ್ಮಿಸಲಾಗಿದೆಯೆಂದೂ, ಹಿಂದೂ ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಲೋಹದಿಂದ ನಿರ್ಮಿಸಲಾಗಿದೆಯೆಂದೂ ನಮ್ಮ ಸುನಿಲ್ ಕುಮಾರ್ ರವರು ಘೋಷಿಸುತ್ತಾರೆ.

ಇದೀಗ ಈ ಥೀಮ್‌ ಪಾರ್ಕ್‌ ಸುತ್ತ ಅನುಮಾನದ ಹುತ್ತಗಳೇ ಮೂಡಿದ್ದು, ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಕುರಿತು ತನಿಖೆ ನಡೆಯಬೇಕೆಂದು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಸರ್ಕಾರ ಯಾವುದೇ ತನಿಖೆಗೆ ಮುಂದಾಗಿಲ್ಲ. ಹಾಗೂ ಈ ಕುರಿತು ಇದುವರೆಗೆ ಯಾವುದೇ ದೂರು ಕೂಡಾ ದಾಖಲಾಗಿಲ್ಲ.

ರೈತರ ಕೆಲಸ ಕಾರ್ಯಗಳನ್ನು ಆದ್ಯತೆಯ ಮೇಲೆ ಮಾಡಿಕೊಡಿ: ಸಚಿವ ವಿ ಸುನೀಲ್ ಕುಮಾರ್
ಉಡುಪಿ, ಡಿಸೆಂಬರ್ 12 (ಕವಾ): ರೈತರ ಕೆಲಸ ಕಾರ್ಯಗಳನ್ನು ಸರ್ಕಾರಿ ಇಲಾಖೆಗಳಲ್ಲಿ ಆದ್ಯತೆಯ ಮೇಲೆ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಸೂಚನೆ ನೀಡಿದರು.

ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ರೈತರ ಸರ್ವತೋಮುಖ ಅಭಿವೃದ್ಧಿ ಕುರಿತ ಪ್ರಮುಖ ಬೇಡಿಕೆಗಳ ಈಡೇರಿಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ಬೆನ್ನುಲುಬಾದ ರೈತರು ಇತ್ತೀಚಿನ ದಿನಗಳಲ್ಲಿ ಅನೇಕ ಸಮಸ್ಯೆಗಳಿಂದ ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರದೆ ಇರುವುದು ಕಂಡು ಬರುತ್ತಿದೆ. ಅವರ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರವು ಪ್ರಯತ್ನಿಸುತ್ತಿದೆ. ರೈತರು ತಮ್ಮ ಕೃಷಿ ಪದ್ಧತಿಯಲ್ಲಿ ಯಾಂತ್ರೀಕರಣ ಹಾಗೂ ಆಧುನಿಕತೆಯನ್ನು ಬೆಳಸಿಕೊಂಡಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದರು.

ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಗಳ ಪ್ರಾರಂಭವನ್ನು ರೈತರಿಗೆ ಅನುಕೂಲವಾಗುವಂತೆ ಬೆಳೆ ಕಟಾವು ಬಂದಾಗ ಪ್ರಾರಂಭಿಸಿದ್ದಲ್ಲಿ ಅವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಮುಂಬರುವ ಭತ್ತದ ಕಟಾವು ಸಂದರ್ಭದಲ್ಲಿಯೇ ಖರೀದಿ ಕೇಂದ್ರವನ್ನು ಪ್ರಾರಂಭಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದ ಅವರು, ರೈತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವಾಗ ವಾಣಿಜ್ಯ ಇಲಾಖೆ ಅಧಿಕಾರಿಗಳು ಮಾರಾಟ ತೆರಿಗೆಯನ್ನು ಪಾವತಿಸಬೇಕೆಂಬ ದೂರುಗಳು ಕೇಳಿ ಬರುತ್ತಿವೆ ಈ ಬಗ್ಗೆ ಎಚ್ಚರವಹಿಸಬೇಕು ಎಂದರು.
ಕೃಷಿಯಲ್ಲಿ ಯಾಂತ್ರೀಕರಣನ್ನು ಬಳಕೆ ಮಾಡಲು ಅನುಕೂಲವಾಗುವಂತೆ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ಕೆಲವು ಕೇಂದ್ರಗಳ ನಿರ್ವಹಣೆ ಅವಧಿಯು ಮುಗಿದಿದ್ದು, ಇದರಿಂದ ರೈತರಿಗೆ ಅನಾನುಕೂಲತೆ ಉಂಟಾಗಿದೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೇಂದ್ರ ನಿರ್ವಹಣೆ ಒದಗಿಸಬೇಕೆಂದರು.
ಕಾಡು ಅಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರ ಬೆಳೆ ನಷ್ಠ ಉಂಟಾಗುತ್ತಿವೆ. ಇವುಗಳನ್ನು ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದ ಅವರು, ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಆಹಾರ ಉತ್ಪಾದನೆಯಾಗುವಂತಹ ಹಣ್ಣಿನ ಮರಗಳನ್ನು ನೆಡಲು ಮುಂದಾಗಬೇಕೆAದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಕ್ಕೆ ಭೂಮಿಗಳನ್ನು ಕೋರಿ ರೈತರು ಸಲ್ಲಿಸಿರುವ ನಿಗಧಿತ ನಮೂನೆಯ ಅರ್ಜಿಗಳನ್ನು ಆದಷ್ಟು ಶೀಘ್ರದಲ್ಲಿಯೇ ನಿಯಮಾನುಸಾರ ವಿಲೇವಾರಿ ಮಾಡಬೇಕೆಂದು ತಿಳಿಸಿದ ಅವರು, ರೈತರು ಪಹಣಿ ಕಾಲಂಗಳಲ್ಲಿ ಋಣಭಾರದ ಬದಲಾವಣೆ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅವುಗಳನ್ನು ಆಗಿಂದಾಗ್ಗೆ ವಿಲೇವಾರಿ ಮಾಡಬೇಕೆಂದು ತಿಳಿಸಿದರು.

ಹವಾಮಾನ ಆಧಾರಿತ ಬೆಳೆ ವಿಮೆಯನ್ನು ರೈತರುಗಳು ಮಾಡಿಸಿದಲ್ಲಿಯೂ ಕೆಲವು ರೈತರುಗಳಿಗೆ ಪರಿಹಾರದ ಹಣವು ಸಿಕ್ಕದೇ ಇರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಕೆಲವು ಕಂದಾಯ ದಾಖಲೆ ಹಾಗೂ ವೈಯಕ್ತಿಕ ಮಾಹಿತಿಗಳಲ್ಲಿ ಸಣ್ಣಪುಟ್ಟ ದೋಷಗಳ ಕಾರಣದಿಂದಾಗಿ ಪರಿಹಾರದ ಹಣ ಸಿಕ್ಕಿಲ್ಲ. ಈ ಬಗ್ಗೆ ಇಲಾಖೆಯವರು ಹಾಗೂ ಬ್ಯಾಂಕ್ ಅಧಿಕಾರಿಗಳು ಸಮನ್ವಯದೊಂದಿಗೆ ಆಗಿರುವ ನ್ಯೂನತೆಗಳನ್ನು ಬಗೆಹರಿಸಿ, ಪರಿಹಾರ ಒದಗಿಸಬೇಕೆಂದು ಸೂಚನೆ ನೀಡಿದರು.

ಕಿಂಡಿ ಅಣೆಕಟ್ಟುಗಳ ನಿರ್ಮಾಣವನ್ನು ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇವುಗಳ ನಿರ್ವಹಣೆಯನ್ನು ಸ್ಥಳೀಯ ರೈತರುಗಳೇ ಸಂಘಗಳನ್ನು ಮಾಡಿಕೊಳ್ಳುವುದರ ಮೂಲಕ ನಿರ್ವಹಿಸಬೇಕು ಎಂದ ಅವರು, ಹಳೆಯ ಕಿಂಡಿ ಅಣೆಕಟ್ಟುಗಳಿಗೆ ಮರದ ಹಲಗೆಗಳನ್ನು ಅಳವಡಿಸಲಾಗಿದೆ. ಇವುಗಳ ನಿರ್ವಹಣೆ ಸರಳವಾಗಿಲ್ಲದೇ ಇರುವುದರಿಂದ ಫೈಬರ್ ತಡೆಗೋಡೆಯಾಗಿ ನಿರ್ವಹಿಸಲು ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ರೈತರು ಇಂದಿನ ಸಭೆಯಲ್ಲಿ ತಿಳಿಸಿರುವ ಕೆಲವು ಸಮಸ್ಯೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬಗೆಹರಿಸುವಂತದ್ದಾಗಿದ್ದು, ಸರ್ಕಾರದ ಗಮನಕ್ಕೆ ತಂದು ಪರಿಹರಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಮಾತನಾಡುತ್ತಾ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಹಳೆಯ ಗುಜರಿ ವಸ್ತುಗಳ ವಿಲೇವಾರಿಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು. ತೆಂಗು ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಸಾವಯವ ಕೃಷಿಗೆ ಉತ್ತೇಜನ ನೀಡುವುದರ ಜೊತೆಗೆ ಮಾರುಕಟ್ಟೆ ಮೌಲ್ಯವರ್ಧನೆಗೆ ಸರ್ಕಾರ ಸಹಕರಿಸಬೇಕು ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ?: ಸುನಿಲ್‌ ಕುಮಾರ್‌ ಕಾರ್ಕಳ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ
ಬೆಂಗಳೂರು: ಡಾಲಿ ಧನಂಜಯ ಅಭಿನಯದ ಹೆಡ್‌ ಬುಷ್‌ ಸಿನಿಮಾದಲ್ಲಿ ಕನ್ನಡದ ಜನಪದ ನೃತ್ಯ ವೀರಗಾಸೆಗೆ ಅವಮಾನವಾಗಿದ್ದರೆ ಅಂತಹ ಆಂಶಗಳನ್ನು ಮರುಪರಿಶೀಲನೆ ಮಾಡಬೇಕು ಎಂಬ ಇಂಧನ ಸಚಿವ ಸುನಿಲ್‌ ಕುಮಾರ್‌ ಕಾರ್ಕಳ ಅವರ ಹೇಳಿಕೆಗೆ, ರಾಜ್ಯ ಕಾಂಗ್ರೆಸ್‌ ಘಟಕ ವಾಗ್ದಾಳಿ ನಡೆಸಿದೆ.

ಈ ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ಟೀಟ್‌ ಮಾಡಿದ್ದು, ಹೆಡ್ ಬುಷ್ ಚಿತ್ರದಲ್ಲಿ ಇಲ್ಲದ ವಿವಾದ ಕಣ್ಣಿಗೆ ಬೀಳುತ್ತಲೇ ಹೆಡೆ ಎತ್ತಿ ಬುಸ್ ಬುಸ್ ಎನ್ನಲು ಹೊರಟಿರುವ ಸುನಿಲ್ ಕುಮಾರ್ ಕಾರ್ಕಳ ಅವರೇ, ಪಠ್ಯಪುಸ್ತಕದಲ್ಲಿ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ನಿಮ್ಮೊಳಗಿನ ಸಂಸ್ಕೃತಿ ವೀರ ಹೆಡೆ ಎತ್ತಲಿಲ್ಲವೇಕೆ? ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ? ಎಂದು ಟೀಕಿಸಿದೆ.

ಹೆಡ್ ಬುಷ್ ಚಿತ್ರದಲ್ಲಿ ಇಲ್ಲದ ವಿವಾದ ಕಣ್ಣಿಗೆ ಬೀಳುತ್ತಲೇ ಹೆಡೆ ಎತ್ತಿ ಬುಸ್ ಬುಸ್ ಎನ್ನಲು ಹೊರಟಿರುವ @karkalasunil ಅವರೇ,

ಪಠ್ಯಪುಸ್ತಕದಲ್ಲಿ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ನಿಮ್ಮೊಳಗಿನ ಸಂಸ್ಕೃತಿ ವೀರ ಹೆಡೆ ಎತ್ತಲಿಲ್ಲವೇಕೆ?

ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ?
— Karnataka Congress (@INCKarnataka) October 28, 2022

ಕಾಂಗ್ರೆಸ್‌ ಟೀಕೆಗೆ ಕಾರಣವಾದ ಸುನಿಲ್ ಕುಮಾರ್ ಕಾರ್ಕಳರವರ ಟ್ವೀಟ್‌

ಹೆಡ್‌ ಬುಷ್‌ ಸಿನಿಮಾದ ವಾದ-ವಿವಾದದ ಬಗ್ಗೆ ಟ್ವೀಟ್‌ ಮಾಡಿದ್ದ ಸುನಿಲ್ ಕುಮಾರ್ ಕಾರ್ಕಳರವರು, ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕ್ರತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.

ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ, ಈ ಕುರಿತು ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ ಎಂದು ತಿಳಿಸಿದ್ದರು.

ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ. (2/2)
— Sunil Kumar Karkala (@karkalasunil) October 26, 2022

ಸಚಿವ ಸುನಿಲ್ ಕುಮಾರ್ ಕಾರ್ಕಳ ಹೇಳಿಕೆ ಕುರಿತು ಸಿದ್ದು ವಾಗ್ದಾಳಿ
ಬೆಂಗಳೂರು: ರೈತರ ಪಂಪ್‌ ಸೆಟ್‌ಗಳಿಗೆ ಮೀಟರ್ ಅಳವಡಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು ಎಂಬ ಸಚಿವ ಸುನಿಲ್ ಕುಮಾರ್ ಕಾರ್ಕಳ ಹೇಳಿಕೆ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು ಎಂದು ಆರೋಪಿಸಿರುವ ಸಚಿವ ಸುನಿಲ್ ಕುಮಾರ್ ಕಾರ್ಕಳ ಅವರು, ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಲು ಹೊರಟಿರುವ ಹೊಸ ವಿದ್ಯುತ್ ಕಾಯ್ದೆಯನ್ನು ಒಮ್ಮೆ ಓದಿಕೊಳ್ಳುವುದು ಒಳಿತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೊನಾ ಕರ್ಫ್ಯೂ ಇದ್ದ ಕಾಲದಲ್ಲಿಯೇ ಕರಡನ್ನು ಸಿದ್ಧಪಡಿಸಿ, ನೆಪಮಾತ್ರಕ್ಕೆ ಚರ್ಚೆಗೆ ಬಿಟ್ಟಿರುವ ಹೊಸ ವಿದ್ಯುತ್ ಬಿಲ್‌ನಲ್ಲಿಯೇ ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸುವ ನಿರ್ಧಾರ ಇದೆ. ನಮ್ಮ ಸರ್ಕಾರ ಇಂತಹ ಪ್ರಸ್ತಾಪವನ್ನು ಮಾಡಿದ್ದರೆ ಸುನಿಲ್ ಕುಮಾರ್ ಕಾರ್ಕಳ ಅದನ್ನು ಬಹಿರಂಗಪಡಿಸಬೇಕು ಎಂದು ಕಿಡಿಕಾರಿದ್ದಾರೆ.

ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವುದನ್ನು ಸುನಿಲ್ ಕುಮಾರ್ ಕಾರ್ಕಳ ಮತ್ತು ಅವರ ಸರ್ಕಾರ ವಿರೋಧಿಸುವುದಾಗಿದ್ದರೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಹೊಸ ವಿದ್ಯುತ್ ಮಸೂದೆಯನ್ನು ತಿರಸ್ಕರಿಸಿ, ಸರ್ವಾನುಮತದ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳಿಸೋಣ ಎಂದಿದ್ದಾರೆ.

ಸಚಿವ ಸುನಿಲ್ ಕುಮಾರ್ ಕಾರ್ಕಳ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಸಾಲದ ಸುಳ್ಳು ಆರೋಪ ಹೊರಿಸಿದ್ದಾರೆ. 2014-15ರಲ್ಲಿನ ವಿದ್ಯುತ್ ಉತ್ಪಾದನೆ-14,825 ಮೆಗ ವ್ಯಾಟ್‌ ಮಾತ್ರ. 2018 ರ ಸಾಲಿನ ವಿದ್ಯುತ್ ಉತ್ಪಾದನೆ- 28,741 ಮೆಗಾ ವ್ಯಾಟ್. ಹೀಗಾಗಿ ಹೆಚ್ಚು ಉತ್ಪಾದನೆ ಎಂದರೆ ಹೆಚ್ಚು ಲಾಭವಲ್ಲವೇ? ನಷ್ಟ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಬೇಸಿಗೆಯಲ್ಲಿ ಸುಮಾರು 11 ರಿಂದ 13,000 ಮೆ.ವ್ಯಾ. ಮಳೆಗಾಲದಲ್ಲಿ 8 ರಿಂದ 9,000 ಮೆ. ವ್ಯಾ. ಸುನಿಲ್ ಕುಮಾರ್ ಕಾರ್ಕಳ ಅವರೇ, ಉಳಿಕೆಯಾಗುವ 18 ರಿಂದ 20 ಸಾವಿರ ಮೆ. ವ್ಯಾ ವಿದ್ಯುತ್ ಮಾರಾಟಕ್ಕೆ ಏನು ಕ್ರಮ ಕೈಗೊಂಡಿದ್ದೀರಿ? ಉತ್ತರಿಸಿ ಎಂದಿದ್ದಾರೆ.

ಅವಾಸ್ತವಿಕ ಸೋಲಾರ್ ವಿದ್ಯುತ್ ಖರೀದಿ ಒಪ್ಪಂದದಿಂದಾಗಿ ರಾಜ್ಯಕ್ಕೆ 2000 ಕೋಟಿ ನಷ್ಟವಾಗಿದೆ ಎಂದು ಆರೋಪಿಸಿರುವ ಸಚಿವ ಸುನಿಲ್ ಕುಮಾರ್ ಕಾರ್ಕಳ ಅವರೇ, ನಿಮ್ಮ ಪಕ್ಷ ಅಧಿಕಾರದಲ್ಲಿರುವ ಗುಜರಾತ್ ರಾಜ್ಯವು ವಿದ್ಯುತ್ ಖರೀದಿಗೆ ಯಾವ ದರ ನಿಗದಿಪಡಿಸಿದೆ ಎನ್ನುವುದನ್ನೂ ತಿಳಿಸಿ ಬಿಡಿ. ಗುಜರಾತ್ ರಾಜ್ಯವೂ ಸೇರಿದಂತೆ ದೇಶದಲ್ಲಿ ಯಾವ, ಯಾವ ರಾಜ್ಯಗಳು 2010 ರಿಂದ 2022 ರವರೆಗೆ ಎಷ್ಟು ರೂಪಾಯಿಗಳಿಗೆ ಸೋಲಾರ್ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂಬುದರ ಕುರಿತು ಶ್ವೇತ ಪತ್ರವನ್ನು ಹೊರಡಿಸಬೇಕೆಂದು ಸುನಿಲ್ ಕುಮಾರ್ ಕಾರ್ಕಳ ಅವರನ್ನು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಸುನಿಲ್ ಕುಮಾರ್ ಕಾರ್ಕಳ ಅವರೇ, ಜನರಿಗೆ ಹೆಚ್ಚು ಹೊರೆ ಬೀಳದಂತೆ ವಿದ್ಯುತ್ ಇಲಾಖೆಯನ್ನು ಲಾಭದಾಯಕವಾಗಿ ಮಾಡುವ ಯೋಚನೆ ನಿಮಗಿದ್ದರೆ ನಾನು ಹಿಂದೆ ವಿಧಾನಸಭಾ ಅಧಿವೇಶನದಲ್ಲಿ ವಿವರವಾಗಿ ನೀಡಿದ್ದ ಸಲಹೆಗಳನ್ನು ಅಧ್ಯಯನ ಮಾಡಿ, ಸಾಧ್ಯವಾದರೆ ಅದನ್ನು ಜಾರಿಗೆ ತರುವ ಧೈರ್ಯ ಮಾಡಿ. ಪೊಳ್ಳು ವಾದದ ಮೂಲಕ ವೈಫಲ್ಯವನ್ನು ಬಚ್ಚಿಟ್ಟುಕೊಳ್ಳಲು ಹೋಗದೆ, ಸಂಪನ್ಮೂಲ ಸೋರಿಕೆಗೆ ತಡೆ, ಹೆಚ್ಚುವರಿ ವಿದ್ಯುತ್ ಮಾರಾಟ, ಅಗತ್ಯವಿಲ್ಲದಿದ್ದರೂ ಅದಾನಿ ಪವರ್ಸ್ ಸೇರಿದಂತೆ ಖಾಸಗಿಯವರಿಂದ ವಿದ್ಯುತ್ ಖರೀದಿಸುವ ಒಪ್ಪಂದದ ರದ್ದತಿಯೂ ಸೇರಿದಂತೆ ನನ್ನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಟ್‌ ಮಾಡಿದ್ದಾರೆ.

ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು ಎಂದು ಆರೋಪಿಸಿರುವ ಸಚಿವ @karkalasunil ಅವರು @narendramodi ಸರ್ಕಾರ ಜಾರಿಗೊಳಿಸಲು ಹೊರಟಿರುವ ಹೊಸ ವಿದ್ಯುತ್ ಕಾಯ್ದೆಯನ್ನು ಒಮ್ಮೆ ಓದಿಕೊಳ್ಳುವುದು ಒಳಿತು.
1/10#ಇಂಧನ‌ಇಲಾಖೆ
— Siddaramaiah (@siddaramaiah) September 7, 2022

ಇಂಧನ ಸಚಿವರ ವಿರುದ್ಧ ಸಿದ್ದರಾಮಯ್ಯ ಗರಂ
ಬೆಂಗಳೂರು: ಪರಿಶಿಷ್ಟಜಾತಿ, ಪಂಗಡದ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆಯನ್ನು 40 ಯುನಿಟ್ ಗಳಿಂದ 75 ಯುನಿಟ್ ಗಳಿಗೆ ಹೆಚ್ಚಿಸುವ ಆದೇಶವನ್ನುಹಿಂದಕ್ಕೆ ಪಡೆದಿರುವ ಕುರಿತು ರಾಜ್ಯ ಇಂಧನ ಸಚಿವ ಸುನಿಲ್ ಕುಮಾರ್ ಕಾರ್ಕಳ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಪರಿಶಿಷ್ಟಜಾತಿ/ಪಂಗಡದ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆಯನ್ನು 40 ಯುನಿಟ್ ಗಳಿಂದ 75 ಯುನಿಟ್ ಗಳಿಗೆ ಹೆಚ್ಚಿಸುವ ಆದೇಶವನ್ನು ರಾಜ್ಯ ಇಂಧನ ಸಚಿವ @karkalasunil ಹಿಂದಕ್ಕೆ ಪಡೆದಿರುವುದು ಹಣದ ಕೊರತೆಯಿಂದಲೋ? ಕಮಿಷನ್ ನಿರೀಕ್ಷೆಯಿಂದಲೋ? 1/4#SocialJustice pic.twitter.com/eRENC7NTHL
— Siddaramaiah (@siddaramaiah) September 5, 2022

ಈ ಕುರಿತು ಟ್ವೀಟ್ ಮಾಡಿರುವ ಅವರು, ಪರಿಶಿಷ್ಟಜಾತಿ, ಪಂಗಡದ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆಯನ್ನು 40 ಯುನಿಟ್ ಗಳಿಂದ 75 ಯುನಿಟ್ ಗಳಿಗೆ ಹೆಚ್ಚಿಸುವ ಆದೇಶವನ್ನು ರಾಜ್ಯ ಇಂಧನ ಸಚಿವ ಸುನಿಲ್ ಕುಮಾರ್ ಕಾರ್ಕಳ ಹಿಂದಕ್ಕೆ ಪಡೆದಿರುವುದು ಹಣದ ಕೊರತೆಯಿಂದಲೋ? ಕಮಿಷನ್ ನಿರೀಕ್ಷೆಯಿಂದಲೋ? ಎಂದು ಟೀಕಿಸಿದ್ದಾರೆ.

ಇಂದನ ಸಚಿವ ಸುನಿಲ್ ಕುಮಾರ್ ಕಾರ್ಕಳ ಅವರೇ, ನಿಮ್ಮದೇ ಲೆಕ್ಕದ ಪ್ರಕಾರ ಉಚಿತವಾಗಿ ಹೆಚ್ಚುವರಿ ಉಚಿತ ವಿದ್ಯುತ್ ನೀಡಲು ಬೇಕಾಗಿರುವುದು ರೂ.979 ಕೋಟಿ ಮಾತ್ರ. ಆದರೆ ಎಸ್.ಸಿ.ಪಿ/ಟಿ.ಎಸ್.ಪಿ ಕಾಯ್ದೆಯಡಿ ರೂ.28,233 ಕೋಟಿ ಹಣವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆಯಲ್ಲಾ, ಆ ಹಣ ಯಾರ ಕಲ್ಯಾಣಕ್ಕೆ? ಎಂದು ಪ್ರಶ್ನಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ ರಾಜ್ಯ ಯೋಜನಾ ವೆಚ್ಚದ ಶೇಕಡಾ 25ರಷ್ಟನ್ನು ಮೀಸಲಿಡುವ ಎಸ್.ಸಿ.ಪಿ/ಟಿ.ಎಸ್.ಪಿ ಕಾಯ್ದೆಯನ್ನು ಜಾರಿಗೆ ತಂದಾಗ, ನಮ್ಮ ಸರ್ಕಾರ ಸುನಿಲ್ ಕುಮಾರ್ ಕಾರ್ಕಳ ಸರ್ಕಾರದಂತೆ ಹಣದ ಲೆಕ್ಕ ಹಾಕಿ ಕೂತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಳಜಿ ಭಾಷಣದಲ್ಲಿ, ಜಾಹೀರಾತಿನಲ್ಲಿ ಅಲ್ಲ, ಕೃತಿಯಲ್ಲಿರಲಿ. ಕುಂಟು ನೆಪಗಳನ್ನೊಡ್ಡದೆ ನುಡಿದಂತೆ ನಡೆಯಲು ಕಲಿಯಿರಿ. ಉಚಿತ ವಿದ್ಯುತ್ 75 ಯುನಿಟ್ ನಿಂದ 100 ಯುನಿಟ್ ಗೆ ಹೆಚ್ಚಿಸಿ. ಇದನ್ನು ಪಡೆಯಲು ನೀವು ರೂಪಿಸಿರುವ ನೂರೆಂಟು ನಿಯಮಗಳನ್ನು ಪರಿಷ್ಕರಿಸಿ ಸುಲಭದಲ್ಲಿ ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ನೆರವಾಗಿ ಎಂದು  ಸಿದ್ದರಾಮಯ್ಯ ಹೇಳಿದ್ದಾರೆ.