Suratkal illegal toll gate – Peepal Media

ಕೊನೆಗೂ ಸುರತ್ಕಲ್‌ ಟೋಲ್‌ ಅಧಿಕೃತವಾಗಿ ತೆರವು
ಮಂಗಳೂರು: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರ ಹೋರಾಟಕ್ಕೆ ಕೊನೆಗೂ ಜಯ ದೊರಕಿದ್ದು, ತಡರಾತ್ರಿ ಹನ್ನೆರಡು ಗಂಟೆಯಿಂದ ಸುಂಕ ವಸೂಲಿ ನಿಲ್ಲಿಸಲಾಗಿದೆ.

ಕರಾವಳಿ ಜಿಲ್ಲೆಯ ಜನರ ಹಲವು ವರ್ಷಗಳ ಆಗ್ರಹವೊಂದು ಕಡೆಗೂ ಈಡೇರಿದಂತಾಗಿದೆ ಮತ್ತು ಸುಮಾರು ವರ್ಷಗಳ ಹೋರಾಟವೊಂದಕ್ಕೆ ಈ ಮೂಲಕ ಒಂದು ತಾರ್ಕಿಕ ಅಂತ್ಯ ಕಂಡಂತಾಗಿದೆ. ಈ ಮೊದಲು ಸರ್ಕಾರ ಸುರತ್ಕಲ್‌ ಟೋಲ್‌ನ ಸುಂಕವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡಲು ಯೋಜಿಸಿತ್ತಾದರೂ ಆ ರಸ್ತೆಯ ಮಾಲಕ ಸಂಸ್ಥೆ ನವಯುಗ ಅದಕ್ಕೆ ಒಪ್ಪಿಗೆ ನೀಡದ ಕಾರಣ ಸದ್ಯಕ್ಕೆ ಹೆಜಮಾಡಿಯಲ್ಲಿ ಹೆಚ್ಚುವರಿ ಸುಂಕ ವಸೂಲಿ ಮಾಡಲಾಗುತ್ತಿಲ್ಲ.

ನವಯುಗ ಸಂಸ್ಥೆಯೊಡನೆ ಸರಕಾರದ ಚೌಕಾಶಿ ಮುಂದುವರೆದಿದೆಯಾದರೂ ಈಗಾಗಲೇ ಜನರ ಕಣ್ಣಲ್ಲಿ ವಿಲನ್‌ ಆಗಿರುವ ಸಂಸ್ಥೆ ಹೆಚ್ಚುವರಿ ಸುಂಕ ವಸೂಲಿ ಮಾಡುವ ಮೂಲಕ ಇನ್ನಷ್ಟು ಜನಾಕ್ರೋಶಕ್ಕೆ ಈಡಾಗಲು ಹೆದರುತ್ತಿದೆ ಎನ್ನುವುದು ಮೂಲಗಳ ಅಭಿಪ್ರಾಯ.

ಎನ್‌ಐಟಿಕೆ ಬಳಿಯ ಟೋಲ್ ಮುಚ್ಚುವುದರಿಂದ ಸರಕಾರಕ್ಕೆ ನಷ್ಟವಾಗಲಿದೆಯೆನ್ನುವುದು ಸದ್ಯದ ಸರಕಾರದ ದೂರು. ಇಲ್ಲಿನ ದರವನ್ನು ಹೆಜಮಾಡಿ ಟೋಲ್‌ನಲ್ಲಿ ಪಡೆಯುವುದು ಸರಕಾರದ ಉದ್ದೇಶವಾಗಿತ್ತು. ಆದರೆ ಅದರ ಬದಲಾಗಿ ಎನ್ಐ‌ಟಿಕೆ ಟೋಲ್‌ನ ಮತ್ತೊಂದು ಟೋಲ್‌ ಬಹ್ಮರಕೂಟ್ಲು, ತಲಪಾಡಿ, ಮತ್ತು ಹೆಜಮಾಡಿ ಸುಂಕದಕಟ್ಟೆಗಳಲ್ಲಿ ದರಗಳನ್ನು ವಿಭಜಿಸಿ ಪಡೆದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಹೆಜಮಾಡಿ ಟೋಲ್‌ನಲ್ಲಿ ಹೆಚ್ಚುವರಿಯಾಗಿ 60 ರೂ. ಪಡೆಯುವ ಬದಲು ಈ ಮೂರು ಟೋಲ್‌ಗಳಲ್ಲಿ ತಲಾ 10 ರೂ. ಹೆಚ್ಚುವರಿಯಾಗಿ ಪಡೆದರೆ ಜನರಿಗೆ ಅನುಕೂಲವಾಗುತ್ತದೆಯೆನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ನಿನ್ನೆ ಟೋಲ್‌ಗೇಟ್‌ ವಿರೋಧಿ ಸಮಿತಿ ತಡರಾತ್ರಿ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ನೂರಾರು ಜನರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದರು. ಮೇಲಿನಿಂದ ಕೆಳಗಿನವರೆಗೂ ಆಡಳಿತ ಪಕ್ಷದವರೇ ಇದ್ದೂ ಸ್ಥಳೀಯ ರಾಜಕಾರಣಿಗಳಿಗೆ ಇದೊಂದು ಟೋಲ್‌ ತೆರೆಸಲು ಜನರು ಒತ್ತಡ ಹೇರಬೇಕಾಗಿ ಬಂದಿದ್ದು ನಿಜಕ್ಕೂ ವಿಪರ್ಯಾಸ ಎಂದು ಹಿರಿಯ ಹೋರಾಟಗಾರರೊಬ್ಬರು ಅಭಿಪ್ರಾಯಪಟ್ಟರು.

ಸುರತ್ಕಲ್ ಸ್ಮಶಾನಕ್ಕೆ ಸೇರಿದ ಬಿಜೆಪಿ ಫ್ಲೆಕ್ಸ್ ಗಳು ; ಗೊಂದಲಕ್ಕೆ ಬಿದ್ದ ದಕ್ಷಿಣ ಕನ್ನಡ ಬಿಜೆಪಿ
ಸುರತ್ಕಲ್ ಅಕ್ರಮ ಟೋಲ್ ತೆರವಿನ ಆದೇಶ ಹೊರಬರುತ್ತಿದ್ದಂತೆ ಬಿಜೆಪಿ ಬೆಂಬಲಿಗರು ದಕ್ಷಿಣ ಕನ್ನಡ ಸಂಸದರು ಮತ್ತು ಶಾಸಕರಿಗೆ ಅಭಿನಂದನೆ ಸಲ್ಲಿಸುವ ನೂರಾರು ಫ್ಲೆಕ್ಸ್ ಗಳು ಸಿದ್ದಗೊಂಡಿದ್ದವು. ಆದರೆ ಅದೇ ಟೋಲನ್ನು ಹೆಜಮಾಡಿ ಟೋಲ್ ಗೆ ವಿಲೀನಗೊಳಿಸುವ ವಿಚಾರ ತಿಳಿಯುತ್ತಿದ್ದಂತೆ ಮಾಡಿಟ್ಟ ಫ್ಲೆಕ್ಸ್ ಗಳು ಸುರತ್ಕಲ್ ಸ್ಮಶಾನಕ್ಕೆ ಶಿಫ್ಟ್ ಆಗಿವೆ.

ಸುರತ್ಕಲ್ ಅಕ್ರಮ ಟೋಲ್ ತೆರವಿಗಾಗಿ ನಡೆಯುತ್ತಿರುವ ಹೋರಾಟ 32 ನೇ ದಿನಕ್ಕೆ ಕಾಲಿಟ್ಟಿದೆ. ನಿರಂತರ ಅಹೋರಾತ್ರಿ ಹೋರಾಟದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಮಣಿದ ಕೇಂದ್ರ ಹೆದ್ದಾರಿ ಪ್ರಾಧಿಕಾರ, ಟೋಲ್ ತೆರವು ಮಾಡಲು ಜಿಲ್ಲಾಧಿಕಾರಿಗಳಿಂದ ಆದೇಶ ಹೊರಡಿಸಿದೆ.

ಆದರೆ ಆದೇಶದ ಜೊತೆಗೆ ಸುರತ್ಕಲ್ ಟೋಲನ್ನು ಹೆಜಮಾಡಿ ಟೋಲ್ ಜೊತೆಗೆ ವಿಲೀನದ ಸುದ್ದಿ ಹೊರಬರುತ್ತಿದ್ದಂತೆ ಸ್ಥಳೀಯವಾಗಿ ಮತ್ತೆ ಆಕ್ರೋಶ ವ್ಯಕ್ತವಾಗಿದ್ದು, ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರೆ ನಗೆಪಾಟಲು ಮತ್ತು ತಪ್ಪು ಸಂದೇಶ ರವಾನೆಯಾಗುವ ಹಿನ್ನೆಲೆಯಲ್ಲಿ ಎಲ್ಲಾ ಫ್ಲೆಕ್ಸ್ ಗಳನ್ನು ಸುರತ್ಕಲ್ ಸ್ಮಶಾನದಲ್ಲಿ ಅಡಗಿಸಿ ಇಡಲಾಗಿದೆ.

ಈ ನಡುವೆ ಬಿಜೆಪಿ ಸಂಸದರಿಗೆ ಮತ್ತು ಸ್ಥಳೀಯ ಬಿಜೆಪಿ ಶಾಸಕರಿಗೆ ಅಭಿನಂದನೆ ಕೋರುವ ನೂರಾರು ಫ್ಲೆಕ್ಸ್ ಗಳ ಬಗ್ಗೆ ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ ಅವರನ್ನು ಪೀಪಲ್ ಮೀಡಿಯಾ ಸಂಪರ್ಕಿಸಿದಾಗ, ‘ಟೋಲ್ ತೆರವು ಪ್ರಕ್ರಿಯೆ ನಮ್ಮ ಹೋರಾಟ ಸಮಿತಿಯ ಯಶಸ್ಸಿಗೆ ಸಾಕ್ಷಿ. ಆದರೆ ಸುರತ್ಕಲ್ ಟೋಲನ್ನು ಹೆಜಮಾಡಿ ಟೋಲ್ ಜೊತೆಗೆ ವಿಲೀನ ಮಾಡಿ, ಅಲ್ಲಿನ ಟೋಲ್ ದರವನ್ನು ಏಕಾಏಕಿ ಏರಿಕೆ ಮಾಡಿರುವುದನ್ನು ನಮ್ಮ ಹೋರಾಟ ಸಮಿತಿ ಖಂಡಿಸುತ್ತದೆ. ಈ ಸಂದರ್ಭದಲ್ಲಿ ಸುರತ್ಕಲ್ ನಲ್ಲಿ ಟೋಲ್ ತೆರವುಗೊಳಿಸಿದ ನಂತರ ಡಿಸೆಂಬರ್ 1 ರಂದು ಸುರತ್ಕಲ್ ನಲ್ಲಿ ನಮ್ಮ ಚಳುವಳಿ ಅಂತ್ಯಗೊಳ್ಳಲಿದೆ. ನಂತರ ಡಿಸೆಂಬರ್ 2 ಕ್ಕೆ ಸುಂಕ ಹೆಚ್ಚಳದ ವಿರುದ್ಧವಾಗಿ ಹೆಜಮಾಡಿಯಲ್ಲಿ ಹೋರಾಟ ಚಾಲನೆ ಪಡೆಯಲಿದೆ’ ಎಂದು ತಿಳಿಸಿದ್ದಾರೆ.

ಹಾಗೂ ‘ಟೋಲ್ ತೆರವು ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ಬಿಜೆಪಿ ಸಂಸದರು ಮತ್ತು ಶಾಸಕರು ಇಲ್ಲಿನ ಜನರನ್ನು ದಡ್ಡರು ಎಂಬುದನ್ನು ಸಾಭೀತುಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್ ಗಳು. ಇಂತಹ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್ ಗಳು ಹೊರ ಬಿದ್ದರೆ ನೇರವಾಗಿ ಜನರಿಗೆ ದ್ರೋಹ ಬಗೆದಂತೆ. ಟೋಲ್ ದರ ಏರಿಕೆ ಬಗ್ಗೆ ಬಿಜೆಪಿಯಲ್ಲೇ ಅಸಮಾಧಾನ ಇದೆ ಎಂಬುದನ್ನು ಫ್ಲೆಕ್ಸ್ ಗಳು ಸ್ಮಶಾನದಲ್ಲಿ ಸಿಕ್ಕಿದ್ದಕ್ಕೆ ಸಾಕ್ಷಿಯಂತಿದೆ. ಇಂತಹ ಅಸಮರ್ಥ ಶಾಸಕರು ಸಂಸದರು ಕರಾವಳಿ ಭಾಗಕ್ಕೆ ಸಿಕ್ಕಿದ್ದು ಇಲ್ಲಿನ ಜನರ ದೌರ್ಭಾಗ್ಯ.’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈಗ ಹೆಜಮಾಡಿ ಟೋಲ್ ಸುಂಕ ಏರಿಕೆಯಿಂದ ಬಿಜೆಪಿ ಪಾಳಯದಲ್ಲೂ ಅಸಮಾಧಾನದ ಬೆಂಕಿ ಹತ್ತಿಕೊಂಡಿದೆ. ಇತ್ತ ಟೋಲ್ ತೆರವಿಗೆ ಅಭಿನಂದನೆಯನ್ನೂ ಸಲ್ಲಿಸಲಾಗದೆ, ಅತ್ತ ಹೆಚ್ಚಳಕ್ಕೆ ವಿರೋಧವನ್ನೂ ಮಾಡಲಾಗದ ಸ್ಥಿತಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ಬಿಜೆಪಿ ಮಂದಿ ಬಂದು ನಿಂತದ್ದು ಸ್ಪಷ್ಟವಾಗಿದೆ.

ಸುರತ್ಕಲ್ ಟೋಲ್ ರದ್ದು ; ಆದೇಶ ಪ್ರತಿ ಸಿಗುವ ವರೆಗೂ ಹೋರಾಟ ಮುಂದುವರೆಯಲಿದೆ
ಮಂಗಳೂರು: ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ವಿರೋಧಿಸಿ ಕಳೆದ 18 ದಿನಗಳಿಂದ ಹಗಲು ರಾತ್ರಿ ಧರಣಿ ನಡೆಸಿದ ನಂತರ ಈಗ ಹೋರಾಟಗಾರರ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿದಿದೆ. ಇದಕ್ಕೆ ಸಂಬಂಧಿಸಿದಂತೆ ಸಂಸದ ನಳೀನ್ ಕುಮಾರ್ ಕಟೀಲ್ ಟೋಲ್ ಕೇಂದ್ರ ರದ್ದಿನ ಬಗ್ಗೆ ಟ್ವಿಟ್ ಮಾಡಿದ್ದಾರೆ.

ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ಶ್ರೀ @nitin_gadkari ಹಾಗೂ ಪ್ರಧಾನಿ ಶ್ರೀ @narendramodi ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು.

ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ.
— Nalinkumar Kateel (@nalinkateel) November 14, 2022

ಹಲವು ದಿನಗಳಿಂದ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ್ದ ಹೆದ್ದಾರಿ ಸಚಿವರು ಟೋಲ್ ರದ್ದಿಗೆ ಆದೇಶಿಸಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಟೋಲ್ ರದ್ದು ವಿಳಂಬವಾಗಿತ್ತು. ಆದರೆ ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ ಎಂದು ತಮ್ಮ ಟ್ವಿಟ್ ನಲ್ಲಿ ತಿಳಿಸಿದ್ದಾರೆ.

ಆದರೆ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಈ ಹೇಳಿಕೆ ಬಗ್ಗೆ ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದು, ಧರಣಿ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಪೀಪಲ್ ಮೀಡಿಯಾ ಜೊತೆಗೆ ಮಾತನಾಡಿದ “ಸುರತ್ಕಲ್ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿ” ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ ಈ ರೀತಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
“ನೋಟಿಫಿಕೇಶನ್ ಆದ ಬಗ್ಗೆ ಖುಷಿ ಇದೆ. ಆದರೆ ಜಿಲ್ಲಾಡಳಿತ ಅಧಿಕೃತ ಆದೇಶದ ಪ್ರತಿ ನಮಗೆ ಕೊಟ್ಟಿಲ್ಲ. ಧರಣಿ ನಿರತರು ಟ್ವಿಟ್ ಮತ್ತು ಫೇಸ್ಬುಕ್ ಪೋಸ್ಟ್ ನಂಬಿ ಕೂರುವರಲ್ಲ. ಮತ್ತೆ ಇನ್ನಾವುದಾದರೂ ತಾಂತ್ರಿಕ ಕಾರಣ ಇಟ್ಟು ಮುಂದುವರಿಸುವ ಬಗ್ಗೆಯೂ ನಮಗೆ ಅನುಮಾನವಿದೆ. ಹಾಗಾಗಿ ಆದೇಶದ ಪ್ರತಿ ನಮ್ಮ ಕೈಗೆ ಸಿಕ್ಕಿ, ಟೋಲ್ ಗೇಟ್ ತೆರವಿನ ನಂತರವೇ ನಾವು ಇಲ್ಲಿಂದ ತೆರಳುತ್ತೇವೆ.
ಹಾಗೇ ನಳಿನ್ ಕುಮಾರ್ ಕಟೀಲ್ ಪ್ರಧಾನಿಗೆ, ಹೆದ್ದಾರಿ ಪ್ರಾಧಿಕಾರದ ಸಚಿವರಿಗೆ ಧನ್ಯವಾದ ಹೇಳಿದ್ದಾರೆ. ಅದಕ್ಕೂ ಮೊದಲು 7 ವರ್ಷದಿಂದ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಹಣ ಸಂಗ್ರಹ ಮಾಡಿದ್ದಕ್ಕೆ ಕಟೀಲ್ ಎರಡು ಜಿಲ್ಲೆಯ ಜನರ ಕ್ಷಮೆ ಕೇಳಬೇಕು.”
– ಮುನೀರ್ ಕಾಟಿಪಳ್ಳ

ಹಾಗಾಗಿ ಟೋಲ್ ಸಂಗ್ರಹ ಕೇಂದ್ರ ತೆರವಾಗುವ ವರೆಗೂ ಈ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದು ಕುಳಿತಿದ್ದಾರೆ.

ಪೊಲೀಸ್ ಬಲಪ್ರಯೋಗದಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: ಸುನೀಲ್ ಕುಮಾರ್ ಬಜಾಲ್
ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ದ ಅಕ್ಟೋಬರ್ 18 ರಂದು ನಡೆಯುವ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ. ಹೋರಾಟಗಾರರಿಗೆ ಪೊಲೀಸ್ ನೋಟೀಸ್ ಜಾರಿಗೊಳಿಸಿ ಬೆದರಿಸುವ ತಂತ್ರಗಳಿಗೆ ನಾವು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ ಎಂದು ಸಿಪಿಐಎಂ ಜಿಲ್ಲಾ ಮುಖಂಡರಾದ ಸುನೀಲ್ ಕುಮಾರ್ ಬಜಾಲ್ ಹೇಳಿದರು.

ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ಬಿಜೆಪಿ ನೀತಿಯನ್ನು ವಿರೋಧಿಸಿ ನಡೆದ ದಿಢೀರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಮಿನಿವಿಧಾನ ಸೌಧದ ಮುಂಭಾಗ ಸಮಾನ ಮನಸ್ಕ ಸಂಘಟನೆಗಳಿಂದ ಪೊಲೀಸರ ಕ್ರಮವನ್ನು ಖಂಡಿಸಿದರು.

ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಜನಪರ ಹೋರಾಟದ ಮುಂದೆ ಯಾವುದೇ ಶಕ್ತಿ ನಿಲ್ಲುವುದಿಲ್ಲ. ಯಾವುದೇ ರೀತಿಯಲ್ಲಿ ಹೋರಾಟ ಹತ್ತಿಕ್ಕುವ ಪ್ರಯತ್ನವನ್ನು ನಡೆಸಿದರೂ ನಾಳಿನ ಹೋರಾಟ ನಡೆಯಲಿದೆ. ಪಕ್ಷದಿಂದ ಸಂಪೂರ್ಣ ಬೆಂಬಲವಿದೆ ಎಂದರು.

ಹಿರಿಯ ದಲಿತ ಮುಖಂಡರಾದ ಎಂ.ದೇವದಾಸ್ ಮಾತನಾಡಿ, ಹೋರಾಟಗಾರರ ಮನೆಗೆ ರಾತ್ರಿ ಹೊತ್ತು ಅದರಲ್ಲೂ ಮಹಿಳಾ ಹೋರಾಟಗಾರರ ಮನೆಗೆ ಪೊಲೀಸರು ರಾತ್ರಿ ಭೇಟಿ ನೀಡುವುದರ ಜೊತೆ ನೋಟೀಸು ನೀಡಿ ಬೆದರಿಕೆ ಹಾಕುವುದು ಪ್ರಜಾಪ್ರಭುತ್ವ ವಿರೋಧಿ ಎಂದರು.

ಈ ರೀತಿ ಸಾಮಾಜಿಕ ಚಳವಳಿಯನ್ನು ಪೊಲೀಸರ ನೋಟೀಸಿನಿಂದ ಧಮನಿಸಲು ಪ್ರಯತ್ನಿಸಿದರೆ ಹೋರಾಟ ತೀವೃಗೊಳ್ಳುವುದೇ ಹೊರತು ಹಿಂಜರಿಯಲಾಗದು ಎಂದು ಸಿಪಿಐ ಮುಖಂಡ ಬಿ. ಶೇಖರ್ ಖಂಡಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರ ಎಂ.ಜಿ ಹೆಗಡೆ, ದಲಿತ ನಾಯಕ ರಘು ಎಕ್ಕಾರು, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಜೆಡಿಎಸ್ ಜಿಲ್ಲಾ ಮುಖಂಡರಾದ ಅಲ್ತಾಫ್ ತುಂಬೆ, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಅಝೀಝ್, ಸಿಪಿಎಂ ಜಿಲ್ಲಾ ಮುಖಂಡರಾದ ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಸಿಪಿಐನ ವಿ. ಕುಕ್ಯಾನ್, ಸೀತಾರಾಂ ಬೇರಿಂಜ, ಕರುಣಾಕರ್, ಸುರೇಶ್, ಸಾಮರಸ್ಯ ಮಂಗಳೂರು ಸಂಘಟನೆಯ ಸಮರ್ಥ್ ಭಟ್, ಕಾಂಗ್ರೆಸ್ ಕಾರ್ಮಿಕ ಸಂಘಟನೆಯ ಮುಖಂಡ ಲಾರೆನ್ಸ್, ಡಿವೈಎಫ್‌ಐ ಮುಖಂಡ ನವೀನ್ ಕೊಂಚಾಡಿ, ರಫೀಕ್ ಹರೇಕಳ, ಸಾದಿಕ್ ಕಣ್ಣೂರು, ಮನೋಜ್ ಉರ್ವಾಸ್ಟೋರ್, ಜಗದೀಶ್ ಬಜಾಲ್, ದಲಿತ ಹಕ್ಕುಗಳ ಸಮನ್ವಯ ಸಮಿತಿಯ ತಿಮ್ಮಯ್ಯ ಕೊಂಚಾಡಿ, ಜೆಎಂಎಸ್ ಜಿಲ್ಲಾ ಮುಖಂಡರಾದ ಪ್ರಮೀಳಾ ದೇವಾಡಿಗ, ಭಾರತಿ ಬೋಳಾರ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜಾ, ಸಿಐಟಿಯು ಮುಖಂಡರಾದ ಮುಸ್ತಫ ಕಲ್ಲಕಟ್ಟೆ , ವಿಲ್ಲಿ ವಿಲ್ಸನ್, ಮೀನುಗಾರರ ಸಂಘಟದ ಮುಖಂಡರಾದ ತಯ್ಯೂಬ್ ಬೆಂಗರೆ, ನೌಶಾದ್ ಬೆಂಗರೆ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ವಿದ್ಯಾರ್ಥಿ ಜನತಾದಳದ ಬಿಲಾಲ್ ಮೊದಲಾದವರು ಉಪಸ್ಥಿತರಿದ್ದರು.