suratkal – Peepal Media

ಕೊನೆಗೂ ಸುರತ್ಕಲ್‌ ಟೋಲ್‌ ಅಧಿಕೃತವಾಗಿ ತೆರವು
ಮಂಗಳೂರು: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರ ಹೋರಾಟಕ್ಕೆ ಕೊನೆಗೂ ಜಯ ದೊರಕಿದ್ದು, ತಡರಾತ್ರಿ ಹನ್ನೆರಡು ಗಂಟೆಯಿಂದ ಸುಂಕ ವಸೂಲಿ ನಿಲ್ಲಿಸಲಾಗಿದೆ.

ಕರಾವಳಿ ಜಿಲ್ಲೆಯ ಜನರ ಹಲವು ವರ್ಷಗಳ ಆಗ್ರಹವೊಂದು ಕಡೆಗೂ ಈಡೇರಿದಂತಾಗಿದೆ ಮತ್ತು ಸುಮಾರು ವರ್ಷಗಳ ಹೋರಾಟವೊಂದಕ್ಕೆ ಈ ಮೂಲಕ ಒಂದು ತಾರ್ಕಿಕ ಅಂತ್ಯ ಕಂಡಂತಾಗಿದೆ. ಈ ಮೊದಲು ಸರ್ಕಾರ ಸುರತ್ಕಲ್‌ ಟೋಲ್‌ನ ಸುಂಕವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡಲು ಯೋಜಿಸಿತ್ತಾದರೂ ಆ ರಸ್ತೆಯ ಮಾಲಕ ಸಂಸ್ಥೆ ನವಯುಗ ಅದಕ್ಕೆ ಒಪ್ಪಿಗೆ ನೀಡದ ಕಾರಣ ಸದ್ಯಕ್ಕೆ ಹೆಜಮಾಡಿಯಲ್ಲಿ ಹೆಚ್ಚುವರಿ ಸುಂಕ ವಸೂಲಿ ಮಾಡಲಾಗುತ್ತಿಲ್ಲ.

ನವಯುಗ ಸಂಸ್ಥೆಯೊಡನೆ ಸರಕಾರದ ಚೌಕಾಶಿ ಮುಂದುವರೆದಿದೆಯಾದರೂ ಈಗಾಗಲೇ ಜನರ ಕಣ್ಣಲ್ಲಿ ವಿಲನ್‌ ಆಗಿರುವ ಸಂಸ್ಥೆ ಹೆಚ್ಚುವರಿ ಸುಂಕ ವಸೂಲಿ ಮಾಡುವ ಮೂಲಕ ಇನ್ನಷ್ಟು ಜನಾಕ್ರೋಶಕ್ಕೆ ಈಡಾಗಲು ಹೆದರುತ್ತಿದೆ ಎನ್ನುವುದು ಮೂಲಗಳ ಅಭಿಪ್ರಾಯ.

ಎನ್‌ಐಟಿಕೆ ಬಳಿಯ ಟೋಲ್ ಮುಚ್ಚುವುದರಿಂದ ಸರಕಾರಕ್ಕೆ ನಷ್ಟವಾಗಲಿದೆಯೆನ್ನುವುದು ಸದ್ಯದ ಸರಕಾರದ ದೂರು. ಇಲ್ಲಿನ ದರವನ್ನು ಹೆಜಮಾಡಿ ಟೋಲ್‌ನಲ್ಲಿ ಪಡೆಯುವುದು ಸರಕಾರದ ಉದ್ದೇಶವಾಗಿತ್ತು. ಆದರೆ ಅದರ ಬದಲಾಗಿ ಎನ್ಐ‌ಟಿಕೆ ಟೋಲ್‌ನ ಮತ್ತೊಂದು ಟೋಲ್‌ ಬಹ್ಮರಕೂಟ್ಲು, ತಲಪಾಡಿ, ಮತ್ತು ಹೆಜಮಾಡಿ ಸುಂಕದಕಟ್ಟೆಗಳಲ್ಲಿ ದರಗಳನ್ನು ವಿಭಜಿಸಿ ಪಡೆದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಹೆಜಮಾಡಿ ಟೋಲ್‌ನಲ್ಲಿ ಹೆಚ್ಚುವರಿಯಾಗಿ 60 ರೂ. ಪಡೆಯುವ ಬದಲು ಈ ಮೂರು ಟೋಲ್‌ಗಳಲ್ಲಿ ತಲಾ 10 ರೂ. ಹೆಚ್ಚುವರಿಯಾಗಿ ಪಡೆದರೆ ಜನರಿಗೆ ಅನುಕೂಲವಾಗುತ್ತದೆಯೆನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ನಿನ್ನೆ ಟೋಲ್‌ಗೇಟ್‌ ವಿರೋಧಿ ಸಮಿತಿ ತಡರಾತ್ರಿ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ನೂರಾರು ಜನರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದರು. ಮೇಲಿನಿಂದ ಕೆಳಗಿನವರೆಗೂ ಆಡಳಿತ ಪಕ್ಷದವರೇ ಇದ್ದೂ ಸ್ಥಳೀಯ ರಾಜಕಾರಣಿಗಳಿಗೆ ಇದೊಂದು ಟೋಲ್‌ ತೆರೆಸಲು ಜನರು ಒತ್ತಡ ಹೇರಬೇಕಾಗಿ ಬಂದಿದ್ದು ನಿಜಕ್ಕೂ ವಿಪರ್ಯಾಸ ಎಂದು ಹಿರಿಯ ಹೋರಾಟಗಾರರೊಬ್ಬರು ಅಭಿಪ್ರಾಯಪಟ್ಟರು.

ಸುರತ್ಕಲ್‌ ಟೋಲ್‌ ಗೇಟ್‌ ವಿರುದ್ಧದ ಹೋರಾಟ: ನೂರಾರು ಹೋರಾಟಗಾರರ ಬಂಧನ
ಸುರತ್ಕಲ್:‌ ಇಂದು ನಡೆದ ಟೋಲ್‌ ಗೇಟ್‌ ವಿರೋಧಿ ಹೋರಾಟದ ಸಮಯದಲ್ಲಿ ಸರಕಾರವು ಮಿಥುನ್‌ ರೈ, ಮುನೀರ್‌ ಕಾಟಿಪಳ್ಳ, ಪ್ರತಿಭಾ ಕುಳಾಯಿ ಸೇರಿದಂತೆ ನೂರಾರು ಹೋರಾಟಗಾರರನ್ನು ಬಂಧಿಸಿ ವಶಕ್ಕೆ ಪಡೆದಿದೆ.

ಹಲವು ದಿನಗಳಿಂದ ಜನಸಾಮಾನ್ಯರ ನಡುವೆ ಚರ್ಚೆಯಲ್ಲಿದ್ದ ಪ್ರಮುಖ ನಾಯಕರುಗಳ ಬೆಂಬಲ ಪಡೆದಿದ್ದ ಹೋರಾಟಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಒಗ್ಗೂಡಿದ್ದರು. ಆಡಳಿತವು ಸಹ ನಿನ್ನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದು ಹೋರಾಟವನ್ನು ಹತ್ತಿಕ್ಕಲು ಬೇಕಿದ್ದ ವ್ಯವಸ್ಥೆಯನ್ನು ಮಾಡಿಕೊಂಡಿತ್ತು.

ಬಂಧನದ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿರುವ ಹೋರಾಟಗಾರರು, ʼಒಂದು ಟೋಲ್ಗೇಟ್‌ ಅನಧಿಕೃತವೆಂದು ನೀವೇ ಒಪ್ಪಿಕೊಂಡೂ ಅದನ್ನು ತೆಗೆದು ಹಾಕಲಾಗದ ನಿಮ್ಮ ಅಸಹಾಯಕತೆಗೆ ನಮಗೆ ನಾಚಿಕೆಯಾಗುತ್ತಿದೆ, ಜನರು ನಿಮ್ಮನ್ನು ನಂಬಿ ಹೇಗೆ ಬದುಕುವುದು,” ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕುತ್ತಿದ್ದ ದೃಶ್ಯ ಸ್ಥಳದಲ್ಲಿ ಕಂಡುಬರುತ್ತಿತ್ತು.

ದೈತ್ಯ ಕಂಪನಿಯೊಂದರ ಎದುರು ಮಂಡಿಯೂರಿ ಜನರ ಶಾಂತಿಯುತ ಹೋರಾಟವನ್ನು ಹತ್ತಿಕ್ಕುತ್ತಿರುವುದು ನಾಚಿಕೆಗೇಡು ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೋರಾಟ ನಿಲ್ಲುವುದಿಲ್ಲ, ಇಂದು ನೀವು ಐನೂರು ಜನರನ್ನು ಬಂಧಿಸಿರಬಹುದು ಆದರೆ ನಾಳೆ ಇಲ್ಲಿ ಸಾವಿರ ಸಂಖ್ಯೆಯಲ್ಲಿ ಜನ ಬರಲಿದ್ದಾರೆ, ಇದು ಜನರ ಹೋರಾಟ ನೀವಿದನ್ನು ತಡೆಯಲಾರಿ ಎಂದು ನಾಯಕೊರಬ್ಬರು ಕಿಡಿಕಾರಿದರು. ಸ್ಥಳದಲ್ಲಿ ಮೊಹಮದ್ದ ಬಾವಾ ವಿನಯ್‌ ಕುಮಾರ್‌ ಸೊರಕೆ ಸೇರಿದಂತೆ ಹಲವು ರಾಜಕೀಯ ಮತ್ತು ಜನಪರ ಸಂಘಟನೆಗಳಿಗೆ ಸೇರಿದ ನಾಯಕರು ಉಪಸ್ಥಿತರಿದ್ದರು.

ಸುರತ್ಕಲ್: ಪ್ರತಿಭಟನಾಕಾರರಿಂದ ಟೋಲ್ ಗೇಟ್‌ಗೆ ಮುತ್ತಿಗೆ
ಸುರತ್ಕಲ್ ಅಕ್ರಮ ಟೋಲ್‌ ಸಂಗ್ರಹವನ್ನು ನಿಲ್ಲಿಸಬೇಕೆಂದು ಇಂದು ಅನೇಕ ಸಂಘಟನೆಗಳು ಸೇರಿ ಹೋರಾಟ ನಡೆಸುತ್ತಿವೆ.

ನೂರಾರು ಸಂಘಟನೆಳ ಸಾಮೂಹಿಕ ನಾಯಕತ್ವದಲ್ಲಿ ಟೋಲ್‌ ಮುತ್ತಿಗೆ ಹಾಕುವ ಕೆಲಸ ನಡೆಯುತ್ತಿದೆ. ಇದು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ನೀವು ನಮಗೆ ಸಹಕಾರ ನೀಡಬೇಕೆಂದು ಹೋರಾಟಗಾರರು ಮನವಿ ಮಾಡಿದ್ದಾರೆ.

ನಮ್ಮ ಟೋಲ್ ಮುತ್ತಿಗೆ ಪ್ರತಿಭಟನೆಯು ನಿಗದಿಯಂತೆ ಶಾಂತಿಯುತವಾಗಿ ನಡೆಯಲಿದೆ. ಯಾರೂ ಪ್ರಚೋದನೆಗೆ ಒಳಗಾಗಬಾರದು. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ, ಇಂದೇ ಟೋಲ್ ಸಂಗ್ರಹ ಅಂತ್ಯಗೊಳ್ಳಲೇಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳು ರಾತ್ರಿ ವೇಳೆ‌ ಹೋರಾಟಗಾರರ ಮನೆಗೆ ಹೋಗಿ ನೋಟಿಸ್‌ ನೀಡಿದ್ದರೆ ಅದು ತಪ್ಪು: ಕಟೀಲ್
ಮಂಗಳೂರು : ಟೋಲ್‌ ಹೋರಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ತಡ ರಾತ್ರಿ ಮನೆಗೆ ತೆರಳಿ ನೋಟಿಸ್‌ ನೀಡಿದ್ದು ನಮ್ಮ ಗಮನಕ್ಕೆ ಬಂದಿಲ್ಲ, ಹಾಗೊಂದು ವೇಳೆ ಅವರು ಆ ರೀತಿ ನೀಡಿದ್ದರೆ ಅದು ತಪ್ಪೆಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

ನಗರದಲ್ಲಿ ಇಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಟೋಲ್ಗೇಟ್‌ ತೆರವುಗೊಳಿಸುವುದು ಕೆಲವು ತಾಂತ್ರಿಕ ಕಾರಣಗಳಿಂದ ತಡವಾಗಿದೆ. ಆದರೆ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕೆ ಸಂಬಂಧಪಟ್ಟವರ ಜೊತೆ ಮಾತನಾಡಲಾಗುತ್ತಿದೆ ಎಂದ ಅವರು, ಹೋರಾಟಗಾರರ ಹೋರಾಟಕ್ಕೆ ನಮ್ಮ ಯಾವುದೇ ಆಕ್ಷೇಪವಿಲ್ಲ. ನಾವು ಅವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡುವುದಿಲ್ಲ ಎಂದಿದ್ದಾರೆ.

ತಾಂತ್ರಿಕ ಕಾರಣಗಳಿಂದಾಗಿ ನಮಗೆ ಟೋಲ್‌ಗೇಟ್‌ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಹೋರಾಟಗಾರರು ನಮ್ಮನ್ನು ಅರ್ಥಮಾಡಿಕೊಂಡು ನಮ್ಮೊಡನೆ ಸಹಕರಿಸಬೇಕೆಂದು ಮನವಿ ಮಾಡುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ನಳಿನ್‌ ಕುಮಾರ್‌ ಕಟೀಲ್‌ ಅವರ ಮಾತುಗಳಿಗೆ ಪ್ರತಿಕ್ರಿಯೆಯಾಗಿ, ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿಯ ನಾಯಕರಾದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಅವರು “ಪೀಪಲ್‌ ಮೀಡಿಯಾ“ದೊಂದಿಗೆ ಮಾತನಾಡುತ್ತಾ, “ನಳಿನ್‌ ಕುಮಾರ್‌ ಅವರು ಹಿಂದೆಯೂ ತಮ್ಮ ಮಾತುಗಳನ್ನು ಉಳಿಸಿಕೊಂಡಿದ್ದಿಲ್ಲ, ಮುಂದೆಯೂ ಉಳಿಸಿಕೊಳ್ಳುತ್ತಾರೆನ್ನುವ ನಂಬಿಕೆಯೂ ನಮಗಿಲ್ಲ. ಅವರು ನಂಬಿಕೆಗೆ ಅರ್ಹರಲ್ಲ ಎಂದು ಹೇಳಿದರು. ನಿನ್ನೆ ಹದಿನೈದು ದಿನಗಳಲ್ಲಿ ತೆರವುಗೊಳಿಸುವುದಾಗಿ ಹೇಳಿದ್ದ ಅವರು, ಇವತ್ತು ಇಪ್ಪತ್ತು ದಿನ ಎನ್ನುತ್ತಿದ್ದಾರೆ. ನಾಳೆ ಅವರು ಇಪತ್ತು ವಾರ ಆಗುತ್ತದೆ ಎಂದರೂ ಅಚ್ಚರಿಯಿಲ್ಲ. ಇಂತಹ ಗಳಿಗೆಗೆ ಒಂದನ್ನು ಹೇಳುವವರ ಮಾತನ್ನು ನಂಬಲು ಸಾಧ್ಯವಿಲ್ಲ ಎಂದರು.

ಮುಂದುವರೆದು ಮಾತನಾಡಿದ ಅವರು, “ಬಿಜೆಪಿ ಪಕ್ಷದ ನಾಯಕ ನಮಗೆ ಶಾಂತಿಯ ಪಾಠ ಮಾಡುವುದು ಅತಿ ದೊಡ್ಡ ವ್ಯಂಗ್ಯವಾಗಿದೆ, ನಾವು ಎಂದೂ ಶಾಂತಿಗೆ ಭಂಗ ಬರುವಂತಹ ಹೋರಾಟ ಮಾಡುವವರಲ್ಲ, ಅದೇನಿದ್ದರೂ ಬಿಜೆಪಿಯ ಕೆಲಸ,” ಎಂದು ಕಟಕಿಯಾಡಿದರು.

ನವಯುಗ ಕಂಪನಿ ಒಪ್ಪಂದಕ್ಕಿಂತಲೂ ಹೆಚ್ಚು ಟೋಲ್ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದೆ.‌ ಈ ಟೋಲ್‌ ತೆಗೆದರೆ ಅವರಿಗೆ ಆದಾಯ ಕಡಿಮೆಯಾಗುವ ಆತಂಕವಿದೆ ಹೀಗಾಗಿ ಅವರು ಟೋಲ್‌ ತೆರವಿಗೆ ಸಹಕರಿಸುತ್ತಿಲ್ಲ. ಇಂತಹ ದೈತ್ಯ ಕಂಪನಿಯಾದ ನವಯುಗವನ್ನು ನಿಯಂತ್ರಿಸಲಾಗದ ಅಸಹಾಯಕ ನಳಿನ್‌ ಕುಮಾರ್‌ ಅವರ ಮಾತುಗಳನ್ನು ಕಟ್ಟಿಕೊಂಡು ನಾವು ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಹೋರಾಟ ನಡೆದೇ ನಡೆಯುತ್ತದೆ. ಟೋಲ್‌ಗೇಟ್‌ ತೆರವುಗೊಳ್ಳುವವರೆಗೂ ನಮ್ಮ ಹೋರಾಟ ನಿಲ್ಲುವ ಪ್ರಶ್ನೆಯೇ ಇಲ್ಲವೆಂದು ಅವರು ಪುನರುಚ್ಛರಿಸಿದರು.

ಸುರತ್ಕಲ್ ಟೋಲ್: ಹೋರಾಟಗಾರರಿಗೆ ನೋಟಿಸ್ ನೀಡಿರುವುದು ಪ್ರಜಾತಂತ್ರ ವಿರೋಧಿ- ಪತ್ರಕರ್ತ ನವೀನ್ ಸೂರಿಂಜೆ
ಮಂಗಳೂರು: ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರಿಗೆ ನೋಟಿಸ್ ಪೊಲೀಸರು ನೋಟಿಸ್ ನೀಡಿರುವ ಕುರಿತು ಪತ್ರಕರ್ತ ನವೀನ್‌ ಸೋರಿಂಜೆ ಅವರು ಪ್ರತಿಕ್ರಿಯಿಸಿದ್ದು ಇದು ಪ್ರಜಾತಂತ್ರ ವಿರೋಧಿ ಎಂದು ಖಂಡಿಸಿದ್ದಾರೆ.

ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬರಹ ಇಲ್ಲಿದೆ.

ಮಂಗಳೂರಿನ ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರಿಗೆ ಪೊಲೀಸರು ಸಿಆರ್ ಪಿಸಿ 107 ರಡಿಯಲ್ಲಿ ನೋಟಿಸ್ ನೀಡಿರುವುದು ವಿಧಾನಸಭೆಯ ನಡವಳಿಕೆ ಕಾರ್ಯವಿಧಾನ ನಿಯಮಾವಳಿಗಳು ಮತ್ತು ಹೈಕೋರ್ಟ್ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಸುರತ್ಕಲ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಗೇಟ್ ಅಕ್ರಮ ಎಂದು ಆರೋಪಿಸಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದ ಟೋಲ್ ವಿರೋಧಿ ಹೋರಾಟ ಸಮಿತಿ ಹಲವು ಸಮಯಗಳಿಂದ ಕಾರ್ಯಾಚರಿಸುತ್ತಿದೆ. ಈ ಸಮಿತಿಯು ಈಗಾಗಲೇ ಹಲವಾರು ಸುತ್ತಿನ ಸಭೆಯನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದೆ. ಸಿಆರ್ ಪಿಸಿ 107 ಅಡಿಯಲ್ಲಿ ನೋಟಿಸ್ ನೀಡಬೇಕಾದರೆ ವ್ಯಕ್ತಿಯು ಸಮಾಜದ ಶಾಂತಿಗೆ ಭಂಗ ತರುವ ವ್ಯಕ್ತಿಯಾಗಿರಬೇಕು. ನೋಟಿಸ್ ನಲ್ಲಿ ಹೋರಾಟಗಾರರಿಗೆ ಏಕವಚನದ ಬಳಸಿದ್ದಲ್ಲದೆ ಶಾಂತಿಗೆ ಭಂಗ ತರುವ ಕಿಡಿಗೇಡಿ ಎಂದು ಉಲ್ಲೇಖಿಸಲಾಗಿದೆ. ಕಿಡಿಗೇಡಿ ಆಗಿದ್ದಲ್ಲಿ ನೋಟಿಸ್ ನೀಡುವ 24 ಗಂಟೆಗಳ ಮೊದಲು ಅದೇ ಹೋರಾಟಗಾರರ ಜೊತೆ ಸಭೆ ನಡೆಸಿದ್ದೇಕೆ ? ಕಿಟಿಗೇಡಿಗಳಾಗಿದ್ದಲ್ಲಿ ಅವರ ಜೊತೆ ಟೀ ಕಾಫಿ ಜೊತೆ ಮಾತುಕತೆ ನಡೆಸಿ ಹೋರಾಟ ಕೈ ಬಿಡುವಂತೆ ಮನವಿ ಮಾಡಿದ್ದೇಕೆ ?

ಸಿಆರ್ ಪಿಸಿ 107 ಕಲಂ ದುರುಪಯೋಗ ಆಗುತ್ತಿದೆ ಎಂದುಕೊಂಡೇ ಕರ್ನಾಟಕ ಹೈಕೋರ್ಟ್ 2018 ಜುಲೈ 28 ರಂದು ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದೆ. ರಾಜಾಜಿನಗರದ ಹೋರಾಟಗಾರ್ತಿ ಗೀತಾ ಮಿಶ್ರ ವಿರುದ್ದ ಪೊಲೀಸರು ಸಿಆರ್ ಪಿಸಿ 107 ನೋಟಿಸ್ ನೀಡಿದಾಗ ಅವರು ಅದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದರು. ಈ ಸಂದರ್ಭ ಹೈಕೋರ್ಟ್ ನ್ಯಾಯಪೀಠವು “ಯಾವ್ಯಾವ ಸಂದರ್ಭಗಳಲ್ಲಿ ಸೆಕ್ಷನ್‌ 107 ಬಳಸಬಹುದು ? ಹೇಗೆ ಬಳಸಬಹುದು? ಎಂಬ ಬಗ್ಗೆ ಸುತ್ತೋಲೆ ಹೊರಡಿಸುವಂತೆ ರಾಜ್ಯ ಗೃಹ ಇಲಾಖೆ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿತ್ತು. ಜೊತೆಗೆ ಕಲಂ 107 ನಂತೆ ಹೋರಾಟಗಾರರ ಮೇಲೆ ಎಫ್ಐಆರ್ ಹಾಕುವಂತಿಲ್ಲ ಎಂದು ಆದೇಶ ನೀಡಿ ಎಫ್ಐಆರ್ ಮತ್ತು ನೋಟಿಸನ್ನು ರದ್ದು ಮಾಡಿತ್ತು.

ಜನರ ಪರವಾಗಿನ ಹೋರಾಟವನ್ನು ಕಾನೂನು ಸುವ್ಯವಸ್ಥೆಗೆ ಅಡ್ಡಿ, ಶಾಂತಿ ಭಂಗ ಎಂದು ಕರೆಯಬಹುದೇ ? ಗೀತಾ ಮಿಶ್ರ ವರ್ಸಸ್ ಕರ್ನಾಟಕ ಸರ್ಕಾರ ಕೇಸ್ ನಲ್ಲಿ ನ್ಯಾಯಾಲಯ ನೀಡಿರುವ ನಿರ್ದೇಶನದ ಪ್ರಕಾರ ಹೋರಾಟ ಎನ್ನುವುದು ಶಾಂತಿಭಂಗ ಆಗುವುದಿಲ್ಲ. ಆ ಕಾರಣಕ್ಕಾಗಿ ಹೊಸದಾಗಿ ಸುತ್ತೋಲೆ ಹೊರಡಿಸಲು ನಿರ್ದೇಶನ ನೀಡಿತ್ತು.

ಟೋಲ್ “ನಿಯಮ ಬಾಹಿರ” ಎಂದು ವಿಧಾನಸಭೆಯಲ್ಲಿ ಸರ್ಕಾರ ಅಧಿಕೃತವಾಗಿ ಸ್ಪಷ್ಟಪಡಿಸಿತ್ತು. ಲೋಕೋಪಯೋಗಿ ಸಚಿವರು ಉತ್ತರ ನೀಡಿ ಇದೊಂದು ನಿಯಮಬಾಹಿರ ಟೋಲ್ ಗೇಟ್ ಆಗಿದ್ದು ತೆರವುಗೊಳಿಸಲಾಗುವುದು ಎಂದಿದ್ದರು. ಸರ್ಕಾರ ವಿಧಾನಸಭೆಯಲ್ಲಿ ನೀಡಿದ ಭರವಸೆಯನ್ನು ಕರ್ನಾಟಕ ವಿಧಾನಸಭೆ ನಡವಳಿಕೆಗಳು ಮತ್ತು ಕಾರ್ಯವಿಧಾನ ನಿಯಮ 281 (ಎ) (ಬಿ) ಯಂತೆ ಶೀಘ್ರವಾಗಿ ಈಡೇರಿಸಬೇಕು.‌ ಹಾಗೊಂದು ವೇಳೆ ಭರವಸೆಯನ್ನು ಈಡೇರಿಸದಿದ್ದರೆ ವಿಧಾನಸಭೆಯ ಭರವಸೆಯ ಸಮಿತಿ ವಿಚಾರಣೆ ನಡೆಸಿ ವಿಧಾನಸಭಾಧ್ಯಕ್ಷರಿಗೆ ವರದಿ ನೀಡಬೇಕು. ಹಾಗಾಗಿ ಹೋರಾಟಗಾರರಿಗೆ ನೀಡಲಾದ ನೋಟಿಸ್ ನಲ್ಲಿ “ಸರ್ಕಾರದಿಂದ ಸ್ಥಾಪಿಸಲಾದ ಟೋಲ್ ಗೇಟ್ ಮತ್ತು ಸರ್ಕಾರದ ಆದೇಶಕ್ಕೆ ವಿರುದ್ದವಾಗಿ ನಡೆಯುತ್ತಿರುವ ಹೋರಾಟ” ಎಂದು ಉಲ್ಲೇಖಿಸಿರುವುದು ಸರಿಯಲ್ಲ. ವಿಧಾನಸಭೆಯಲ್ಲಿ ಸರ್ಕಾರ ಈ ಟೋಲ್ ಬಗ್ಗೆ ತಳೆದಿರುವ ನಿಲುವಿಗೆ ವಿರುದ್ದವಾಗಿ ಪೊಲೀಸರ ನಡವಳಿಕೆ ಆಶ್ಚರ್ಯಕರವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕ್ಷೇತ್ರವನ್ನು ಪ್ರತಿನಿಧಿಸುವ ಯಾವುದೇ ಶಾಸಕರು “ವಿಧಾನಸಭೆಯಲ್ಲಿ ಸರ್ಕಾರ ನೀಡಿರುವ ಭರವಸೆ ತನ್ನ ಕ್ಷೇತ್ರದಲ್ಲಿ ಜಾರಿಯಾಗಿದೆಯೇ ?” ಎಂದು ಪರಾಮರ್ಶಿಸಬೇಕು. ಶಾಸನ ರಚನಕಾರನ ಮೂಲಭೂತ ಕರ್ತವ್ಯವಿದು. ವಿಧಾನಸಭೆಯಲ್ಲಿ ಸರ್ಕಾರ ನೀಡಿದ ಭರವಸೆಯ ಜಾರಿಗೆ ಅಡ್ಡಿಯುಂಟು ಮಾಡುವವರ ವಿರುದ್ದ ಶಾಸಕರು ಹಕ್ಕುಚ್ಯುತಿ ಮಂಡಿಸಿ ಶಿಕ್ಷಿಸಬೇಕೇ ಹೊರತು ಜಾರಿಗೆ ಆಗ್ರಹಿಸುವವರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗುವುದು ಜನವಿರೋಧಿ ಮಾತ್ರವಲ್ಲ ಪ್ರಜಾತಂತ್ರ ವಿರೋಧಿಯಾಗಿದೆ ಎಂದು ಪತ್ರಕರ್ತ ನವೀನ್‌ ಸೋರಿಂಜೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನವೀನ್ ಸೂರಿಂಜೆ

ಸುರತ್ಕಲ್ ಟೋಲ್ ಗೇಟ್: AC ಅಧ್ಯಕ್ಷತೆಯಲ್ಲಿ ಸಭೆ
ಅಕ್ಟೋಬರ್ 18 ರ ಟೋಲ್ ಗೇಟ್ ಮುತ್ತಿಗೆ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಪರವಾಗಿ ಇಂದು ಪಣಂಬೂರು ಪೊಲೀಸ್ ಉಪ ಆಯುಕ್ತ (ACP) ಕಚೇರಿಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅಧ್ಯಕ್ಷತೆಯಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಲಭ್ಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು‌. ACP ಮಹೇಶ್ ಕುಮಾರ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಸಭೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾಡಳಿತದ ವಿವರಣೆ

ಸುರತ್ಕಲ್ ಟೋಲ್ ಗೇಟ್ ತೆರವು ಪ್ರಕ್ರಿಯೆಯ ಆಡಳಿತಾತ್ಮಕ ಕೆಲಸಗಳು ನಡೆಯುತ್ತಿದೆ. ತೆರುವುಗೊಳಿಸಲು ತೀರ್ಮಾನ ಆಗಿದೆ. ಇನ್ನು ಕೆಲವು ದಿನಗಳಲ್ಲಿ ತೆರವು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅಲ್ಲಿಯವರಗೆ ಹೋರಾಟ ಕೈ ಬಿಡುವಂತೆ ಹೋರಾಟ ಸಮಿತಿಯನ್ನು ವಿನಂತಿಸಲಾಯಿತು. ಟೋಲ್ ತೆರವಿನ ನಿರ್ಧಿಷ್ಟ ದಿನಾಂಕವನ್ನು ಪ್ರಕಟಿಸದೆ ಎಂದಿನಂತೆ ಕೆಲವೇ ದಿನಗಳಲ್ಲಿ ತೆರವು ಎಂಬ ಬಾಯಿ ಮಾತಿನ ಭರವಸೆ ಮಾತ್ರ ನೀಡಿದ್ದಾರೆ ಎಂದು ಹೋರಾಟ ಸಮಿತಿ ಹೇಳಿದೆ.

ಹೋರಾಟ ಸಮಿತಿ ವ್ಯಕ್ತಪಡಿಸಿದ ನಿಲುವು

ಕಳೆದ ಆರು ವರ್ಷಗಳಲ್ಲಿ ಈ ರೀತಿಯ ಟೋಲ್ ಗೇಟ್ ತೆರವಿನ ಹಲವು ಭರವಸೆಗಳನ್ನು ನೀಡಲಾಗಿದೆ. ಕಳೆದ ಆರು ತಿಂಗಳಿನಲ್ಲಿ ಸರಕಾರದ ಹಲವು ವೇದಿಕೆ, ವಿಧಾನ ಸಭೆಯಲ್ಲಿಯೂ ತಿಂಗಳೊಳಗೆ ಟೋಲ್ ಗೇಟ್ ತೆರವು ಎಂಬ ಹೇಳಿಕೆಗಳು ಹೊರಬಿದ್ದಿವೆ. ಆದರೆ ಆ ಹೇಳಿಕೆಗಳು ಜಾರಿಗೆ ಬಂದಿಲ್ಲ. ಈಗಲೂ ಭರವಸೆ ಜಾರಿಗೆ ಬರುತ್ತದೆ ಎಂಬ ವಿಶ್ವಾಸ ಜನತೆಗೆ ಇಲ್ಲ.

ಆದುದರಿಂದ ಟೋಲ್ ಸಂಗ್ರಹ ಸ್ಥಗಿತಗೊಳ್ಳದೆ ಹೋರಾಟ ಹಿಂಪಡೆಯಲು ಸಾಧ್ಯವಿಲ್ಲ. ಎರಡೂ ಜಿಲ್ಲೆಗಳ ನೂರಾರು ಸಂಘಟನೆಗಳು ಅಕ್ಟೋಬರ್ 18 ರ ಮುತ್ತಿಗೆ ತೀರ್ಮಾನವನ್ನು ಬೆಂಬಲಿಸಿವೆ. ಭಾಗಿಗಳಾಗಿವೆ. ಟೋಲ್ ಸಂಗ್ರಹ ಸ್ಥಗಿತಗೊಳ್ಳದೆ, ಭರವಸೆಯ ಆಧಾರದಲ್ಲಿ‌ ಹೋರಾಟ ಮುಂದೂಡಲು ಅವರು ಯಾರ ಸಮ್ಮತಿಯೂ ಇಲ್ಲ. ಹೋರಾಟವನ್ನು ಒಕ್ಕೊರಲಿನಿಂದ ಬೆಂಬಲಿಸುತ್ತಿರುವ ಜನತೆಯೂ ಇದನ್ನು ಒಪ್ಪವುದಿಲ್ಲ ಎಂದು ಹೇಳಿದರು.

ಟೋಲ್ ಸಂಗ್ರಹ ತಕ್ಷಣ ಕೈಬಿಡಿ

ಟೋಲ್ ಸಂಗ್ರಹವನ್ನು ತಕ್ಷಣ ಕೈ ಬಿಡಬೇಕು. ಸರಕಾರದ ಹೇಳಿಕೆಯ ಪ್ರಕಾರ ಇನ್ನು ಕೆಲವೇ ದಿನದಲ್ಲಿ ತೆರವಿಗೆ ಬೇಕಾದ ಪ್ರಕ್ರಿಯೆ ಪೂರ್ಣಗೊಳ್ಳುವುದಾದರೆ, ತೀರ್ಮಾನ ಜಾರಿಯಾಗುವುದಾದರೆ ಅಲ್ಲಿಯವರಗಿನ ಒಂದಿಷ್ಟು ದಿನಗಳ ಟೋಲ್ ಸಂಗ್ರಹವನ್ನು ಬಿಟ್ಟುಕೊಟ್ಟರೆ ದೊಡ್ಡ ನಷ್ಟವೇ‌ನೂ ಆಗುವುದಿಲ್ಲ. ಏಳು ವರ್ಷಗಳ ಕಾಲ ಸತತವಾಗಿ ನೂರಾರು ಕೋಟಿ ರೂಪಾಯಿ ಸುರತ್ಕಲ್ ಟೋಲ್ ಗೇಟ್ ನಲ್ಲಿ ಈಗಾಗಲೆ ಸಂಗ್ರಹಿಸಲಾಗಿದೆ. ಆದುದರಿಂದ ಜನರ ಆಕ್ರೋಶ, ಆಗ್ರಹವನ್ನು ಮನ್ನಿಸಿ ಟೋಲ್ ಸಂಗ್ರಹವ‌ನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು. ಅಕ್ಟೋಬರ್ 18 ರ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲಿದ್ದೇವೆ. ಟೋಲ್ ಸಂಗ್ರಹ ಸ್ಥಗಿತಗೊಂಡಿರುವುದು ಖಾತರಿಗೊಳ್ಳುವವರಗೆ ಮುತ್ತಿಗೆ ಮುಂದುವರಿಯಲಿದೆ ಎಂದು ತಿಳಿಸಲಾಯಿತು. ಮೂವತ್ತುಕ್ಕೂ ಹೆಚ್ಚು ಮುಖಂಡರು ಹೋರಾಟ ಸಮಿತಿಯನ್ನು ಪ್ರತಿನಿಧಿಸಿ ಸಭೆಯಲ್ಲಿ ಭಾಗಿಗಳಾಗಿದ್ದರು.

ಜಿಲ್ಲಾಧಿಕಾರಿಗೆ ಇಂದಿನ ಸಭೆಯಲ್ಲಿ ಹೋರಾಟ ಸಮಿತಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ತಲುಪಿಸಲಾಗುವುದು ಎಂದು ಹೇಳಿ ಸಭೆಯನ್ನು ಮುಕ್ತಾಯಗೊಳಿಸಿದರು.

ಅಕ್ಟೋಬರ್ 18 ರ ಟೋಲ್ ಗೇಟ್ ಮುತ್ತಿಗೆ ತೀರ್ಮಾನದಂತೆ ಶಾಂತಿಯುತವಾಗಿ ನಡೆಯಲಿದೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಅಂದು ಬೆಳಿಗ್ಗೆ 9:30 ಕ್ಕೆ ಸುರತ್ಕಲ್ ಟೋಲ್ ಗೇಟ್ ಮುಂಭಾಗ ಸೇರಬೇಕು. ಯಾವುದೇ ಕಾರಣಕ್ಕೂ ಪ್ರಚೋದನೆಗೆ ಒಳಗಾಗದೆ ಟೋಲ್ ತೆರವು ಹೋರಾಟದ ಯಶಸ್ಸಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ. ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಸ್ಥಗಿತಗೊಳ್ಳದೆ ಈ ಬಾರಿಯ ಹೋರಾಟ ಮುಗಿಯುವುದಿಲ್ಲ ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಅವರು ಹೇಳಿದರು.

ಮಂಗಳೂರಿನಲ್ಲಿ ಮುಂದುವರೆದ ಸರಣಿ ಕೊಲೆ
ಸುರತ್ಕಲ್‌ :  ಮಂಗಳೂರು ಹೊರವಲಯದ ಸುರತ್ಕಲ್‌ ಭಾಗದಲ್ಲಿ ಮಹಮ್ಮದ್ ಫಾಝಿಲ್ ಎಂಬ ಯುವಕ ಕೊಲೆಯಾಗಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುವಾರ ರಾತ್ರಿ ಮಂಗಳೂರು ಬಳಿಯ ಸುರತ್ಕಲ್‌ನಲ್ಲಿ ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುದಾರಿ ದುಷ್ಕರ್ಮಿಗಳು ಬಟ್ಟೆ ಅಂಗಡಿಗೆ ನುಗ್ಗಿ ಮಹಮ್ಮದ್ ಫಾಸಿಲ್ (23) ಅವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಮಹಮ್ಮದ್ ಫಾಝಿಲ್ ಅವರು, ರಾತ್ರಿ 8 ಗಂಟೆಯ ಸುಮಾರಿಗೆ ಎಂಆರ್‌ಪಿಎಲ್‌ ರಸ್ತೆಯ ಸುರತ್ಕಲ್ ಮಾರುಕಟ್ಟೆ ಸಮೀಪದ ಬಟ್ಟೆ ಅಂಗಡಿಗೆ ಹೋಗುತ್ತಿರುವ ಸಂದರ್ಭದಲ್ಲಿ, ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದು. ಕೊಲೆಯಾದ  ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಕಾರಣ ಸುರತ್ಕಲ್‌ ಭಾಗದಲ್ಲಿ ಪರಿಸ್ಥಿತಿ ಗಂಭೀರವಾಗಿರುವುದರಿಂದ  ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ನಗರ ಪೊಲೀಸ್ ಕಮಿಷನರ್ ಮನವಿಯ ಮೇರೆಗೆ‌ ಜಿಲ್ಲಾಧಿಕಾರಿ ಶುಕ್ರವಾರ (ಜು.29) ಪಣಂಬೂರು, ಮೂಲ್ಕಿ, ಬಜಪೆ, ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲಾ- ಕಾಲೇಜುಗಳಿಗೆ ರಜೆ‌ ಘೋಷಿಸಿದ್ದು, ಸೆಕ್ಷೆನ್‌ 144 ಜಾರಿ ಮಾಡಲಾಗಿದೆ.