T-20 CRICKET – Peepal Media

ಟಿ-20 ವಿಶ್ವಕಪ್‌: ಪಾಕಿಸ್ತಾನಕ್ಕೆ ಸೆಮಿಫೈನಲ್‌ ಹಾದಿ ಕಠಿಣ
ಬೆಂಗಳೂರು: 2022-23ನೇ ಸಾಲಿನ ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಸೆಮಿಫೈನಲ್‌ ಹಾದಿ ಬಹುಶಃ ಮುಚ್ಚಿದಂತಾಗಿದ್ದು, ಅದೃಷ್ಟದ ಮೂಲಕ ಸೆಮಿಫೈನಲ್‌ ತಲುಪುವ ಸಾಧ್ಯತೆಯೂ ಇದೆ.

ಟಿ-20 ವಿಶ್ವಕಪ್‌ನಲ್ಲಿ ʼಗ್ರೂಪ್‌ ಬಿʼಯಲ್ಲಿರುವ ಪಾಕಿಸ್ತಾನ ತಂಡವು, ಮೂರು ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿ, ಎರಡು ಪಂದ್ಯದಲ್ಲಿ ಸೂತಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೇವಲ ಎರಡು ಅಂಕಗಳನ್ನು ಪಡೆದುಕೊಂಡು ಕೊನೆಯ ಎರಡನೇ ಸ್ಥಾನ (5 ನೇ ಸ್ಥಾನ) ಪಡೆದುಕೊಂಡಿದೆ.

ಸೂಪರ್‌ 12 ಪಂದ್ಯಗಳು ಇನ್ನೆನೂ ಮುಗಿಯುವ ಸಂದರ್ಭ ಬಂದಿದ್ದು, ಪಾಕಿಸ್ತಾನಕ್ಕೆ ಇನ್ನು ಕೇವಲ ಎರಡು ಪಂದ್ಯಗಳು ಮಾತ್ರ ಬಾಕಿ ಇವೆ, ಹೀಗಾಗಿ ಈ ಎರಡು ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಾಗಿದೆ. ಏಕೆಂದರೆ ಈಗಾಗಲೇ 5ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ, ನೆಟ್‌ ರನ್‌ ರೇಟ್‌(nrr) ನಲ್ಲಿ ಭಾರತ ತಂಡಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದು, ಉಳಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸುವುದರಿಂದ, ನೆಟ್‌ ರನ್‌ ರೇಟ್‌ ಮೂಲಕವು ಸೆಮಿಫೈನಲ್‌ ತಲುಪುವ ಸಾಧ್ಯತೆ ಇದೆ.

ಪಾಕಿಸ್ತಾನ ಸೆಮಿಫೈನಲ್‌ ತಲುಪುವ ಅವಕಾಶವಿದೆ ಹೇಗೆ!

ಈಗಾಗಲೇ ʼಗ್ರೂಪ್‌ ಬಿʼಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಭಾರತ ತಂಡ ಉಳಿದ ಒಂದು ಪಂದ್ಯದಲ್ಲಿ ಗೆಲ್ಲಬೇಕು, ಅದೇ ರೀತಿ, ದಕ್ಷಿಣ ಆಫ್ರಿಕಾ ತಂಡದ ಮೇಲೆ ಪಾಕಿಸ್ತಾನ ಜಯಗಳಿಸಬೇಕು. ಹಾಗೆಯೇ ಪಾಕಿಸ್ತಾನ ಹೊರತುಪಡಿಸಿ ನೆದರ್‌ಲ್ಯಾಂಡ್‌ ವಿರುದ್ಧವು ದಕ್ಷಿಣ ಆಫ್ರಿಕಾ ತಂಡ ಸೋಲಬೇಕು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಅಂಕಪಟ್ಟಿಯಲ್ಲಿ 5 ಅಂಕಗಳನ್ನುಮಾತ್ರ ಗಳಿಸಿರುತ್ತದೆ. ಇದೇ ರೀತಿ ಬಾಂಗ್ಲಾದೇಶ, ಜಿಂಬಾಬ್ವೆ ತಂಡಗಳು ಸೋತರೆ ಮಾತ್ರ, ಪಾಕಿಸ್ತಾನಕ್ಕೆ ಸೆಮಿಪೈನಲ್‌ ಹಾದಿ ತರೆದುಕೊಳ್ಳಬಹುದು.

ಪಾಕಿಸ್ತಾನ ತಂಡ ಮುಗ್ಗರಿಸಿದ್ದು ಎಲ್ಲಿ?

ಪಾಕಿಸ್ತಾನ ತಂಡ ಭಾರತ ತಂಡದ ವಿರುದ್ಧ ಸೋತ ನಂತರ, ಜಿಂಬಾಬ್ವೆ ವಿರುದ್ಧ ಒಂದು ರನ್‌ನಲ್ಲಿ ಸೋಲು ಕಂಡಿದ್ದು ಪಾಕಿಸ್ತಾನ ತಂಡಕ್ಕೆ ಮುಳುವಾಯಿತು. ಇದು ಪಾಕಿಸ್ತಾನ ತಂಡದ ಸೆಮಿಫೈನಲ್‌ ಕನಸನ್ನು ನಿರಾಸೆಗೊಳಿಸುವಂತೆ ಮಾಡಿತು.

ICC T20-ವರ್ಲ್ಡ್ ಕಪ್: ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಜಯ
ಅಡಿಲೈಡ್ ಓವಲ್: ವಿಶ್ವಕಪ್ T20 ಟೂರ್ನಿಯ ಇಂದಿನ ಭಾರತ ಮತ್ತು ಬಾಂಗ್ಲಾದೇಶದ ಪಂದ್ಯದಲ್ಲಿ ಭಾರತ ಐದು ರನ್‌ಗಳ ರೋಚಕ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶವು, ಮೊದ-ಮೊದಲು ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಪ್ರಯತ್ನಿಸಿತು. ಈ ವೇಳೆ ರನ್‌ ಗಳಿಸಲು ಪರದಾಡಿದ ರೋಹಿತ್‌ ಶರ್ಮಾ 2 ರನ್‌ಗಳಿಸಿ ಪೆವಿಲಿಯನ್‌ ಸೇರಿದರು. ನಂತರ ಬಂದ ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌ ಜೊತೆಗೂಡಿ ತಮ್ಮ ಉತ್ತಮ ಪ್ರದರ್ಶನ ನೀಡುವುದರ ಮೂಲಕ, ಇಬ್ಬರು ಆಟಗಾರರು ಅರ್ಧ ಶತಕಗಳಿಸಿ, ಬಾಂಗ್ಲಾದೇಶದ ಬೌಲರ್‌ಗಳಿಗೆ ನೀರು ಕುಡಿಸಿದರು.

ನಂತರ ಬಂದ ಸೂರ್ಯ ಕುಮಾರ್‌ ಯಾದವ್‌ ರಭಸದ ಆಟವಾಡುವ ಮೂಲಕ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನೀಡಿ 184 ರನ್‌ಗಳಿಸಿತು.

ನಂತರ ಮಳೆಯ ಕಾರಣದಿಂದಾಗಿ ಮೊಟಕುಗೊಂಡ ಪಂದ್ಯ 16 ಓವರ್ ಗಳಿಗೆ ಸೀಮಿತಗೊಂಡಿತ್ತು. ಈ ಹಿನ್ನಲೆಯಲ್ಲಿ ಬಾಂಗ್ಲಾದೇಶವು 16 ಓವರ್‌ಗಳಿಗೆ 151 ರನ್‌ ಗಳಿಸಬೇಕಾಗಿತ್ತು. ಈ ವೇಳೆ ಭಾರತೀಯ ಬೌಲರ್‌ಗಳ ದಾಳಿಗೆ ರನ್‌ ಗಳಿಸಲು ಪರದಾಡಿದ ಬಾಂಗ್ಲಾ ಆಟಗಾರರು, 16 ಓವರ್‌ಗಳಿಗೆ 6 ವಿಕೆಟ್‌ ನೀಡಿ 145 ರನ್‌ ಗಳಿಸಿದರು. ಈ ಮೂಲಕ ಭಾರತ ತಂಡವು 5 ರನ್‌ಗಳ ಜಯ ಸಾಧಿಸಿ, ಸೆಮಿಪೈನಲ್‌ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಸಫಲವಾಯಿತು.

ವಿಶ್ವಕಪ್‌ ಕ್ರಿಕೆಟ್: ರೋಚಕ ಹಣಾಹಣಿಯಲ್ಲಿ ನೆದರ್ಲ್ಯಾಂಡ್‌ಗೆ ಗೆಲುವು
ಗೀಲಾಂಗ್: ಟಿ20 ವಿಶ್ವಕಪ್‌-2022ರ ಎರಡನೇ ಪಂದ್ಯದಲ್ಲಿ ಯುಎಇ ವಿರುದ್ಧ ನೆದರ್ಲ್ಯಾಂಡ್‌ ಕೂದಲೆಳೆಯ ಅಂತರದ ಗೆಲುವು ಸಾಧಿಸಿತು.

ಮೊದಲನೇ ಸುತ್ತಿನ ಗ್ರೂಪ್‌ ಎ ಪಂದ್ಯ ಕೊನೆಯ ಓವರ್‌ ವರೆಗೆ ಸಾಗಿತಾದರೂ ಜವಾರ್‌ ಫರೀದ್‌ ಎಸೆದ 20ನೇ ಓವರ್‌ ನ ಐದನೇ ಎಸೆತದಲ್ಲಿ ನೆದರ್ಲ್ಯಾಂಡ್‌ನ ಎಡ್ವರ್ಡ್‌ ಗೆಲುವಿನ ಹೊಡೆತ ಬಾರಿಸಿದರು.

ಯುಎಇ ತಂಡ ಗಳಿಸಿದ 111 ರನ್‌ಗಳ ಸಾಧಾರಣ ಮೊತ್ತವನ್ನು ತಲುಪಲು ನೆದರ್ಲಾಂಡ್‌ ತಿಣುಕಾಡಿತಾದರೂ ಕೊನೆಯಲ್ಲಿ ಗೆಲುವಿನ ನಗೆ ಬೀರಿತು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಬ್ಯಾಂಟಿಂಗ್‌ ಆಯ್ದುಕೊಂಡ ಯುಎಇ, ನಿಗದಿತ 20 ಓವರ್‌ ಗಳಲ್ಲಿ ಎಂಟು ವಿಕೆಟ್‌ ನಷ್ಟಕ್ಕೆ ಕೇವಲ 111 ರನ್‌ ಗಳಿಸಿತು. ಮಹಮದ್‌ ವಸೀಮ್‌ 41 ರನ್‌ ಗಳಿಸಿದರು. ಉಳಿದ ಯಾವ ಬ್ಯಾಟ್ಸ್‌ಮನ್‌ ಗಳಿಂದಲೂ ಉತ್ತಮ ಪ್ರದರ್ಶನ ಮೂಡಲಿಲ್ಲ.

ನೆದರ್ಲ್ಯಾಂಡ್‌ ಬೌಲರ್‌ ಗಳು ಉತ್ತಮ ಬೌಲಿಂಗ್‌ ಸಂಘಟಿಸಿ, ಯುಎಇ ಬ್ಯಾಟ್ಸ್‌ಮನ್‌ ಗಳನ್ನು ಕಟ್ಟಿಹಾಕಿದರು. ಪಂದ್ಯದಲ್ಲಿ ಬಾಸ್‌ ದೆ ಲೀಡೆ ಮೂರು ವಿಕೆಟ್‌ ಗಳಿಸಿ ಗಮನಸೆಳೆದರು.

ಸ್ಕೋರ್ ಕಾರ್ಡ್

ಯುಎಇ

ಚಿರಾಗ್ ಸೂರಿ: 12(20), ಮಹಮ್ಮದ್ ವಾಸಿಮ್: 41(47), ಕಾಸಿಫ್ ದೌದ್: 15(14), ವ್ರಿತ್ಯ ಅರವಿಂದ್ :18(21), ಜವಾರ್ ಫರಿದ್ : 2(4), ಬಸಿಲ್ ಹಮೀದ್ : 4(4), ಸಿಪಿ ರಿಜ್ವಾನ್  (ಕ್ಯಾಪ್ಟನ್) : 1(2), ಆಯನ್ ಫಜಲ್ ಖಾನ್ : 5(7), ಪಳನಿಯಪ್ಪನ್ ಮೇಯಪ್ಪನ್ (ನಾಟ್ ಔಟ್) : 0(0), ಜುನೈದ್ ಸಿದ್ದಿಕಿ (ನಾಟ್ ಔಟ್): 0(1), ಇತರೆ : 13

ಬೌಲಿಂಗ್:

ಫ್ರೆಡ್ ಕ್ಲಾಸೆನ್: 4-0-13-2, ಟಿಮ್ ಪ್ರಿಂಗಲ್: 4-0-13-1, ಲೋಗನ್ ವ್ಯಾನ್ ಬೀಕ್ : 2-0-190, ಬಸ್ ಡಿ ಲೇಡೆ: 3-0-19-3, ಪಾಲ್ ವ್ಯಾನ್ ಮೀಕೆರಿನ್: 4-0-21-0, ರೋಯೆಲೋಫ್ ಮೆರ್ವೆ: 3-0-19-1

ನೆದರ್ಲೆಂಡ್

ವಿಕ್ರಂಜಿತ್ ಸಿಂಗ್: 10(7), ಮ್ಯಾಕ್ಸ್ ಓ ಡೌಡ್: 23(18), ಬಸ್ ಡಿ ಲೀಡೆ: 14(18), ಕೋಲಿನ್ ಅಕೆರ್ಮನ್: 17(19), ಟಾಮ್ ಕೂಪರ್: 8(16), ಸ್ಕಾಟ್ ಎಡ್ವರ್ಡ್ಸ್ : 16(19), ರೋಯೆಲೊಫ್ ಮೆರ್ವೆ: 0(2), ಟಿಮ್ ಪ್ರಿಂಗಲ್: 15(16), ಲೋಗನ್ ವ್ಯಾನ್ ಬೀಕ್: 4(4),  ಇತರೆ: 5

ಬೌಲಿಂಗ್‌:

ಜುನೈದ್ ಸಿದ್ದಿಕಿ: 4-0-25-3, ಬಸಿಲ್ ಹಮೀದ್: 1-0-7-1, ಆಯನ್ ಅಫ್ಜಲ್ ಖಾನ್: 3-0-15-1, ಪಿ. ಮೈಯಪ್ಪನ್: 4-0-22-1,

ಝಹೂರ್ ಖಾನ್: 4-0-11-1, ಝವರ್ ಫರಿದ್: 2.5-0-24-0, ಕಾಸಿಫ್ ದೌದ್ : 1-0-5-0