T-20 World Cup practice match – Peepal Media

ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ರೋಮಾಂಚಕ ಗೆಲುವು
ಬ್ರಿಸ್ಬೇನ್‌ (ಆಸ್ಟ್ರೇಲಿಯಾ): ಟಿಟ್ವೆಂಟಿ ವಿಶ್ವಕಪ್‌ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಭಾರತ‌ ತಂಡ ಆತಿಥೇಯ ಆಸ್ಟ್ರೇಲಿಯಾ ಎದುರು ಆರು ರನ್‌ ಗಳಿಂದ ರೋಮಾಂಚಕ ಗೆಲುವು ಸಾಧಿಸಿದೆ. ಕೊನೆಯ ಓವರ್‌ಗಳಲ್ಲಿ ಆಸ್ಟ್ರೇಲಿಯಾ ಒಂದಾದ ಮೇಲೊಂದರಂತೆ ವಿಕೆಟ್‌ ಕಳೆದುಕೊಂಡಿದ್ದರಿಂದಾಗಿ ಗೆಲ್ಲುವ ಪಂದ್ಯವನ್ನು ಸೋತುಹೋಯಿತು.

ಮಹಮದ್‌ ಶಮಿ ಎಸೆದ ಕೊನೆಯ ಓವರ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ ಆಸ್ಟ್ರೇಲಿಯಾ ನಾಲ್ಕು ವಿಕೆಟ್‌ ಕಳೆದುಕೊಂಡಿತು. ವಿರಾಟ್‌ ಕೊಹ್ಲಿ ಬೌಂಡರಿ ಗೆರೆಯಲ್ಲಿ ಪ್ಯಾಟ್‌ ಕಮಿನ್ಸ್‌ ಅವರ ಹಿಡಿದ ಕ್ಯಾಚ್‌ ಪಂದ್ಯದ ಗತಿಯನ್ನೇ ಬದಲಾಯಿಸಿತು. ಟಿಮ್‌ ಡೇವಿಡ್‌ ಅವರನ್ನು ಕೊಹ್ಲಿ ರನೌಟ್‌ ಮಾಡಿದ್ದೂ ಸಹ ಆಸ್ಟ್ರೇಲಿಯಾ ಸೋಲಿಗೆ ಕಾರಣವಾಯಿತು.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ, ಬ್ಯಾಟಿಂಗ್‌ಗೆ ಅನುಕೂಲಕರವಾಗಿದ್ದ ಪಿಚ್‌ ನಲ್ಲಿ ಭಾರತ ತಂಡವನ್ನು 186 ರನ್‌ ಗಳಿಗೆ ಕಟ್ಟಿಹಾಕಲು ಯಶಸ್ವಿಯಾಯಿತು.

ಭಾರತ ತಂಡದ ಪರವಾಗಿ ಆರಂಭಿಕ ಆಟಗಾರ, ಕನ್ನಡಿಗ ಕೆ.ಎಲ್.ರಾಹುಲ್‌ 33 ಎಸೆತಗಳಲ್ಲಿ 57ರನ್‌ ಗಳಿಸಿ ಮಿಂಚಿದರು. ಬಿರುಸಿನ ಆಟವಾಡಿದ ರಾಹುಲ್‌, ಐದು ಬೌಂಡರಿ, ಮೂರು ಸಿಕ್ಸರ್‌ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ 33 ಎಸೆತಗಳನ್ನು ಎದುರಿಸಿ 50 ರನ್‌ ಗಳಿಸಿ ಔಟಾದರು. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ದಿನೇಶ್‌ ಕಾರ್ತಿಕ್‌ ಉತ್ತಮ ಆರಂಭ ಪಡೆದರಾದರೂ ಹೆಚ್ಚು ಮೊತ್ತ ಪೇರಿಸುವಲ್ಲಿ ವಿಫಲರಾದರು.

ಆಸ್ಟ್ರೇಲಿಯಾದ ವೇಗ ಬೌಲರ್‌ ಕೇನ್‌ ರಿಚರ್ಡ್ಸ್ ನ್‌ 30 ರನ್‌ ನೀಡಿ ನಾಲ್ಕು ವಿಕೆಟ್‌ ಗಳಿಸಿದರು. ಭಾರತ ಏಳು ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತು. ಸೂರ್ಯಕುಮಾರ್‌ ಯಾದವ್‌ ಮತ್ತು ದಿನೇಶ್‌ ಕಾರ್ತಿಕ್‌ ವಿಕೆಟ್‌ ಪತನದೊಂದಿಗೆ ಭಾರತ ಇನ್ನೂರರ ಗಡಿ ದಾಟುವ ಅವಕಾಶ ಕಳೆದುಕೊಂಡಿತು.

ಭಾರತದ ಹೋರಾಟದ ಮೊತ್ತವನ್ನು ಚೇಸ್‌ ಮಾಡಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ಆರೋನ್‌ ಫಿಂಚ್‌ ಭರ್ಜರಿ ಆಟವಾಡಿ, 54 ಎಸೆತಗಳಲ್ಲಿ 79 ರನ್‌ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ, ಮೂರು ಭರ್ಜರಿ ಸಿಕ್ಸರ್‌ ಗಳು ಇದ್ದವು. ಮತ್ತೋರ್ವ ಆರಂಭಿಕ ಆಟಗಾರ ಮಿಚೆಲ್‌ ಮಾರ್ಶ್‌ ಕೇವಲ 18 ಎಸೆತಗಳಲ್ಲಿ 35 ರನ್‌ ಗಳಿಸಿ ಭುವನೇಶ್ವರ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು.

ಮಹಮದ್‌ ಶಮಿ ಎಸೆದ ಒಂದು ಓವರ್‌ನಲ್ಲೇ ಮೂರು ವಿಕೆಟ್‌ ಗಳಿಸಿ, ಭಾರತ ತಂಡಕ್ಕೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಇಪ್ಪತ್ತನೇ ಓವರ್‌ನ ಅಂತ್ಯದಲ್ಲಿ ಆಸ್ಟ್ರೇಲಿಯಾ ಆಲ್‌ ಔಟ್‌ ಆಗಿ ಸೋಲೊಪ್ಪಿಕೊಂಡಿತು.

ಟಿ-20 ವಿಶ್ವಕಪ್‌ ಅಭ್ಯಾಸ ಪಂದ್ಯ: ಪಶ್ಚಿಮ ಆಸ್ಟ್ರೇಲಿಯಾಕ್ಕೆ 159 ರನ್‌ ಗುರಿ ನೀಡಿದ ಭಾರತ
ಪರ್ತ್‌/ಆಸ್ಟ್ರೇಲಿಯಾ: ಅಕ್ಟೋಬರ್‌ 16 ರಿಂದ ಟಿ-20 ವಿಶ್ವಕಪ್‌ ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ, ಸೋಮವಾರ ಪರ್ತ್‌ನ WACA ನಲ್ಲಿ (ಪಶ್ಚಿಮ ಆಸ್ಟ್ರೇಲಿಯನ್ ಕ್ರಿಕೆಟ್ ಸಂಸ್ಥೆ) ಭಾರತ ತಂಡವು ಪಶ್ಷಿಮ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 158 ರನ್‌ಗಳ ಗಳಿಸಿದೆ.

ಟಾಸ್‌ ಗೆದ್ದ ನಾಯಕ ರೋಹಿತ್‌ ಶರ್ಮಾ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ನಂತರ ಮೊದಲು ಓಪನರ್‌ಗಳಾಗಿ  ರೋಹಿತ್‌ ಶರ್ಮಾ ಮತ್ತು ರಿಷಬ್‌ ಪಂತ್‌ ಕಣಕ್ಕಿಳಿದರು. ಈ ವೇಳೆ ಮೊದ-ಮೊದಲು ರನ್‌ ಗಳಿಸುವಲ್ಲಿ ರೋಹಿತ್‌ ಶರ್ಮ ಪರಡಾಡುತ್ತಿದ್ದು, ಬೆಹೆರೆಂಡೋಫ್‌ ಬೌಲಿಂಗ್‌ ವೇಳೆ ವೇಗವಾಗಿ ರನ್‌ಗಳಿಸಲು ಹೋಗಿ ಔಟ್‌ ಆಗಿ ಪೆವಿಲಿಯನ್‌ ಸೇರಿದರು.

ರೋಹಿತ್‌ ನಿರ್ಗಮನದ ನಂತರ ಮೂರನೇ ಕ್ರಮಾಂಕದಲ್ಲಿ ಸ್ಕ್ರೀಜ್‌ಗೆ ಇಳಿದ ದೀಪಕ್‌ ಹೂಡಾ ಬೆಹೆರೆಂಡೋಫ್‌ ಅವರ ಎರಡನೇ ಎಸೆತದಲ್ಲಿ ಸಿಕ್ಸರ್‌ ಹೊಡೆದು ತಂಡಕ್ಕೆ ಉತ್ತಮ ರನ್‌ ಕಲೆಹಾಕುವ ಭರವಸೆ ನೀಡಿದರು. ಆದರೆ ಭರವಸೆಯನ್ನು ಬಹಳ ಸಮಯ ಉಳಿಸಿಕೊಳ್ಳದೆ ಬೆಹೆರೆಂಡೋಫ್‌ ಬೌಲಿಂಗ್‌ ದಾಳಿಗೆ ವಿಕೆಟ್‌ ಒಪ್ಪಿಸಿದರು. ಈ ಮೂಲಕ ಭಾರತ ತಂಡ 5 ಓವರ್‌ಗಳಿಗೆ 29 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿತು.

ತದನಂತರ ಬಂದ ಸುರ್ಯಕುಮಾರ್‌ ಯಾದವ್‌ ಬಿರುಸಿನ ಆಟ ವಾಡುವ ಮೂಲಕ ತಂಡಕ್ಕೆ ರನ್‌ ಸೇರಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಜೊತೆಯಾಗಿ ಸಾಥ್‌ ನೀಡುತ್ತಿದ್ದ ಪಂತ್‌ ಔಟ್‌ ಆಗಿ ಪೆವಿಲಿಯನ್‌ ಸೇರಿದರು. ನಂತರ ಜೊತೆಗೂಡಿದ ಹಾರ್ದಿಕ್‌ ಪಾಂಡ್ಯ ಮತ್ತು ಸುರ್ಯಕುಮಾರ್‌ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಹೊಸ ಭರವಸೆ ಮೂಡಿಸಿದರು.

ಭರವಸೆ ಆಟವಾಡುತ್ತಿದ್ದ ಹಾರ್ದಿಕ್‌ ಪಾಂಡ್ಯ 27 ರನ್‌ ಗಳಿಸಿ ತಂಡಕ್ಕೆ ಮರಳಿದರು. ಈ ವೇಳೆ ಉತ್ತಮ ಪ್ರದರ್ಶನ ನೀಡುತ್ತಿದ್ದ ಸೂರ್ಯಕುಮಾರ್‌ ಯಾದವ್‌ 35 ಎಸೆತಗಳಿಗೆ 52 ರನ್‌ಗಳಿಸಿ ಅರ್ಧಶತಕ ದಾಖಲಿಸಿಕೊಂಡರು.

ಅರ್ಧಶತಕ ಸಿಡಿಸಿ ಪೆವಿಲಿಯನ್‌ ಸೇರಿದ ಯಾದವ್‌ ನಂತರ ಬಂದ ಬ್ಯಾಟ್ಸ್‌ಮನ್‌ಗಳು ಬಿರುಸಿನ ಆಟವಾಡದ ಕಾರಣ ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 158 ಗಳಿಸಿತು. ಈ ಮೂಲಕ ಎದುರಾಳಿ ತಂಡಕ್ಕೆ 159 ರನ್‌ ಗುರಿ ನೀಡಲು ಸಾಧ್ಯಾವಾಯಿತು.