T20 – Peepal Media

IND vs IRE 3rd T20I: ಗೆದ್ದು ದಾಖಲೆ ಸೃಷ್ಟಿಸಲಿದೆಯಾ ಭಾರತ?
ಧೂಳೀಪಟವಾಗಲಿರುವ ಪಾಕಿಸ್ಥಾನದ ಆ ದಾಖಲೆ ಯಾವುದು?

ಜಸ್ಪ್ರೀತ್ ಬುಮ್ರಾ ನೇತೃತ್ವದ ಟೀಮ್ ಇಂಡಿಯಾ ಮತ್ತೊಂದು ವಿಶ್ವ ದಾಖಲೆಯನ್ನು ಹೊಂದಲು ಒಂದು ಹೆಜ್ಜೆ ದೂರದಲ್ಲಿದೆ. ಐರ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ಗೆದ್ದುಕೊಂಡಿದೆ.

ಅಂತಿಮ ಟಿ20 ಪಂದ್ಯವು ಬುಧವಾರ (ಆಗಸ್ಟ್ 23) ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದರೆ ಬುಮ್ರಾ ಬಳಗ ವೈಟ್‌ವಾಶ್‌ ದಾಖಲಿಸುವ ಸಾಧ್ಯತೆ ಹೆಚ್ಚಿದೆ. ನೆರೆಯ ಪಾಕಿಸ್ತಾನ ತಂಡದ ಹೆಸರಿನಲ್ಲಿದ್ದ ದಾಖಲೆಯೊಂದು ಕಣ್ಮರೆಯಾಗಲಿದೆ. ಆ ದಾಖಲೆ ಏನು ಅಂತ ನೋಡೋಣ..!

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಎಂಟು ವೈಟ್‌ವಾಶ್‌ಗಳನ್ನು ದಾಖಲಿಸಿದ ಏಕೈಕ ತಂಡ ಪಾಕಿಸ್ತಾನವಾಗಿದೆ. ಮೂರನೇ ಟಿ20 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ ಗೆದ್ದರೆ ಆ ದಾಖಲೆ ಕಣ್ಮರೆಯಾಗಲಿದೆ. ಸದ್ಯ ಭಾರತ ತಂಡ ಎಂಟು ವೈಟ್‌ವಾಶ್‌ಗಳೊಂದಿಗೆ ಪಾಕಿಸ್ತಾನದ ದಾಖಲೆಯನ್ನು ಸರಿಗಟ್ಟಿದೆ. ಈ ಗೆಲುವಿನೊಂದಿಗೆ ವೈಟ್‌ವಾಶ್‌ಗಳ ಸಂಖ್ಯೆ ಒಂಬತ್ತಕ್ಕೆ ತಲುಪಲಿದೆ. ಈ ಮೂಲಕ ಟಿ20 ಮಾದರಿಯಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಸರಣಿಯಲ್ಲಿ ಅತಿ ಹೆಚ್ಚು ವೈಟ್‌ವಾಶ್ ಮಾಡಿದ ತಂಡವಾಗಿ ಇತಿಹಾಸ ಸೃಷ್ಟಿಸಲಿದೆ.

ಯಾವ ತಂಡದ ವಿರುದ್ಧ ಟೀಂ ಇಂಡಿಯಾದ 8 ವೈಟ್‌ವಾಶ್‌ಗಳು?

ಒಮ್ಮೆ ಆಸ್ಟ್ರೇಲಿಯಾ ವಿರುದ್ಧ
ಶ್ರೀಲಂಕಾ ವಿರುದ್ಧ ಎರಡು ಬಾರಿ
ವೆಸ್ಟ್ ಇಂಡೀಸ್ ಮೇಲೆ ಮೂರು ಬಾರಿ
ನ್ಯೂಜಿಲೆಂಡ್ ಮೇಲೆ ಎರಡು ಬಾರಿ
ಪ್ರಸ್ತುತ ಎರಡೂ ತಂಡಗಳು (ಭಾರತ, ಪಾಕಿಸ್ತಾನ) ಎಂಟು ಸರಣಿಗಳೊಂದಿಗೆ ಸಮಬಲದಲ್ಲಿವೆ.

ಆಗಸ್ಟ್ 15 ರಂದು ಐರ್ಲೆಂಡ್‌ಗೆ ಹೋಗಲಿದೆ ಟೀಂ ಇಂಡಿಯಾ… ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ.. ಲೈವ್‌ ನೋಡೋದು ಎಲ್ಲಿ?
ಐರ್ಲೆಂಡ್ ವಿರುದ್ಧ ಭಾರತವು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಮೊದಲ ಟಿ20 ಪಂದ್ಯ ಆಗಸ್ಟ್ 18ರಂದು ನಡೆದರೆ, ಎರಡನೇ ಪಂದ್ಯ ಆಗಸ್ಟ್ 20 ರಂದು ನಡೆಯಲಿದೆ.

ಹಾಗೂ ಕೊನೆಯ ಮತ್ತು 3ನೇ ಪಂದ್ಯ ಆಗಸ್ಟ್ 22ರಂದು ನಡೆಯಲಿದೆ. ಡಬ್ಲಿನ್‌ನಲ್ಲಿರುವ ಮಲಾಹಿಡೆ ಕ್ರಿಕೆಟ್ ಸ್ಟೇಡಿಯಂ ಈ ಎಲ್ಲಾ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಐರ್ಲೆಂಡ್ ವಿರುದ್ಧದ ಈ ಟಿ20 ಸರಣಿಗೆ ಬಿಸಿಸಿಐ ಇನ್ನಷ್ಟು ಯುವ ಆಟಗಾರರನ್ನು ಆಯ್ಕೆ ಮಾಡಿದೆ.

ಭಾರತ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಮುಗಿದಿದೆ. ಇಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಗೆದ್ದ ಟೀಂ ಇಂಡಿಯಾ ಟಿ20 ಸರಣಿಯನ್ನು ಕಳೆದುಕೊಂಡಿತ್ತು. ಟಿ20 ಸರಣಿ ಸೋಲಿನಿಂದ ಒಂದಷ್ಟು ಪಾಠ ಕಲಿತಿರುವ ಭಾರತ ಯುವ ತಂಡ ಕೆರಿಬಿಯನ್ ಪ್ರವಾಸ ಮುಗಿಸಿದೆ. ಇದೀಗ ಭಾರತೀಯ ಕ್ರಿಕೆಟ್ ತಂಡ ಐರ್ಲೆಂಡ್‌ಗೆ ತೆರಳಲು ಸಿದ್ಧವಾಗಿದೆ.

ಐರ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ನಾಳೆ, ಆಗಸ್ಟ್ 15, ಸ್ವಾತಂತ್ರ್ಯ ದಿನದಂದು ಟೀಮ್ ಇಂಡಿಯಾ ಐರ್ಲೆಂಡ್‌ಗೆ ಪ್ರಯಾಣಿಸಲಿದೆ. ವೇಗಿ ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ಭಾರತ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಐ ಸರಣಿಯನ್ನು ಆಡಲಿದೆ.

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿ ಆಗಸ್ಟ್ 18ರಿಂದ ಆರಂಭವಾಗಲಿದೆ. ಈ ಉದ್ದೇಶಕ್ಕಾಗಿ ಟೀಂ ಇಂಡಿಯಾ ಆಗಸ್ಟ್ 15ರಂದು ಡಬ್ಲಿನ್‌ಗೆ ಹೋಗಲಿದೆ. ಈ ಟೂರ್ನಿಯಲ್ಲಿ ಭಾರತದ ಹಿರಿಯ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಗೆ ವಿಶ್ರಾಂತಿ ನೀಡಲಾಗಿದೆ.

ಐರ್ಲೆಂಡ್ ವಿರುದ್ಧ ಭಾರತ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಮೊದಲ ಟಿ20 ಪಂದ್ಯ ಆಗಸ್ಟ್ 18 ರಂದು ನಡೆದರೆ, ಎರಡನೇ ಪಂದ್ಯ ಆಗಸ್ಟ್ 20 ರಂದು ನಡೆಯಲಿದೆ. 3ನೇ ಪಂದ್ಯ ಆಗಸ್ಟ್ 22ರಂದು ನಡೆಯಲಿದೆ. ಡಬ್ಲಿನ್‌ನಲ್ಲಿರುವ ಮಲಾಹಿಡೆ ಕ್ರಿಕೆಟ್ ಸ್ಟೇಡಿಯಂ ಈ ಎಲ್ಲಾ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಭಾರತ ಮತ್ತು ಐರ್ಲೆಂಡ್ ನಡುವಿನ T20 ಸರಣಿಯು 7:30 PM IST ಕ್ಕೆ ಪ್ರಾರಂಭವಾಗಲಿದೆ. Viacom 18 ನೇರ ಪ್ರಸಾರ ಹಕ್ಕುಗಳನ್ನು ಹೊಂದಿದೆ. ಸ್ಪೋರ್ಟ್ 18 ನಲ್ಲಿ ಲೈವ್ ವೀಕ್ಷಿಸಬಹುದು.
ಮತ್ತು ಜಿಯೋ ಸ್ಟ್ರೀಮಿಂಗ್ ಹೊಂದಿದೆ.

ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ಇನ್ನಷ್ಟು ಯುವ ಆಟಗಾರರನ್ನು ಆಯ್ಕೆ ಮಾಡಿದೆ. ರುತುರಾಜ್ ಗಾಯಕ್ವಾಡ್ ಅವರಿಗೆ ಉಪನಾಯಕತ್ವ ನೀಡಲಾಗಿದೆ. ಪ್ರಸಿದ್ಧ್ ಕೃಷ್ಣ ಮತ್ತು ಶಿವಂ ದುಬೆ ತಂಡಕ್ಕೆ ಮರಳಿದರೆ, ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾಗೆ ಅವಕಾಶ ಸಿಕ್ಕಿತು. ಮುಂಬರುವ ಏಷ್ಯಾ ಕಪ್, ಐಸಿಸಿ ಏಕದಿನ ವಿಶ್ವಕಪ್‌ಗೆ ತಂಡವನ್ನು ಕಟ್ಟಲು ಇದು ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತ ಟಿ20 ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಶಾಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ವಾಷಿಂಗ್ಟನ್ ಸುಂದರ್ ಸುಂದರ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ.

ಐರ್ಲೆಂಡ್ T20 ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಲ್ಬಿರ್ನಿ, ರಾಸ್ ಅಡೈರ್, ಲೋರ್ಕನ್ ಟಕರ್, ಹ್ಯಾರಿ ಟಕರ್, ಕರ್ಟಿಸ್ ಕಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಥಿಯೋ ವೈಟ್ ವ್ಯಾನ್ ವರ್ಕ್‌ಹ್ಯಾಮ್ .

ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಟಿ 20 ಪಂದ್ಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಭಾರತ
ಆಸ್ಟ್ರೇಲಿಯಾ ವಿರುದ್ಧದ ಯಶಸ್ವೀ ಸರಣಿಯ ನಂತರ ಈಗ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಟಿ 20 ಪಂದ್ಯಾವಳಿಗೆ ಮುನ್ನ  ಮತ್ತೊಂದು ಪ್ರಾಕ್ಟೀಸ್ ಸರಣಿ ಎದುರಿಸುತ್ತಿದೆ. ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 3 ಪಂದ್ಯಗಳ ಟಿ 20 ಸರಣಿ ಮತ್ತು 3 ಪಂದ್ಯಗಳ ಏಕದಿನ ಪಂದ್ಯಾವಳಿ ಆಡಲಿದೆ ಭಾರತ. ಇಂದಿನಿಂದ ಟಿ 20 ಸರಣಿ ಶುರುವಾಗಿದ್ದು ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಟಿ 20 ಸರಣಿಯಲ್ಲಿ ಭಾರತ ವಿಶ್ವಕಪ್ ಗೆ ಮುನ್ನ ಅಂತಿಮ ಹಂತದ ಅಭ್ಯಾಸ ನಡೆಸಲಿದೆ. ಈ ಪಂದ್ಯಾವಳಿಯಲ್ಲಿ ತನ್ನ ಎಲ್ಲ ಬ್ಯಾಟಿಂಗ್ ಮತ್ತು ಬೋಲಿಂಗ್ ವಿಭಾಗವನ್ನು ಒರೆಗೆ ಹಚ್ಚುವ ಇರಾದೆ ಭಾರತ ತಂಡದ್ದು. ಆದರೆ, ಪಂದ್ಯಾವಳಿಗೆ ಆಯ್ಕೆಯಾಗಿದ್ದ ಭಾರತದ ಬ್ಯಾಟಿಂಗ್ ಸ್ಟಾರ್ ದೀಪಕ್ ಹೂಡಾ ಗಾಯದ ಕಾರಣ ಕೊನೆಯ ಕ್ಷಣದಲ್ಲಿ ತಂಡದಿಂದ ಹೊರಗೆ ಬಿದ್ದಿದ್ದಾರೆ. ಅವರ ಜಾಗದಲ್ಲಿ ಇನ್ನೂ ಯಾರನ್ನೂ ಆಯ್ಕೆ ಮಾಡಿಲ್ಲವಾದ ಕಾರಣ, ಮೊದಲ ಪಂದ್ಯದಲ್ಲಿ ಭಾರತ ಇರುವ ಆರು ಜನ ಬ್ಯಾಟ್ಸ್ ಮನ್ ಗಳೊಂದಿಗೆ ಕಣಕ್ಕಿಳಿಯಬೇಕಾಗಿದೆ. ಇನ್ನು ಐದು ಜನ ಬೋಲರ್ ಗಳ ಆಯ್ಕೆಯಲ್ಲೂ ತಂಡಕ್ಕೆ ಹೆಚ್ಚು ತಲೆನೋವಿಲ್ಲ. ಹಿರಿಯ ಆಟಗಾರ ಭುವನೇಶ್ವರ್ ಕುಮಾರ್ ಈ ಪಂದ್ಯಾವಳಿಯಿಂದ ಹೊರಗೆ ಇರುವ ಕಾರಣ ಬೋಲಿಂಗ್ ಲೈನ್ ಅಪ್ ಅನ್ನು ಊಹೆ ಮಾಡುವುದು ಕಷ್ಟದ ಕೆಲಸವೇನಲ್ಲ. ಒಟ್ಟಿನಲ್ಲಿ ಈ ಬಾರಿ ವಿಶ್ವಕಪ್ ಟಿ 20 ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಭಾರತ ಈ ಪಂದ್ಯಾವಳಿಯಲ್ಲಿ ಇನ್ನಷ್ಟು ಸುಧಾರಿಸಿಕೊಂಡು ತಯಾರಾಗುವ ಪ್ರಯತ್ನ ಮಾಡಲಿದೆ.

ಗ್ರೀನ್, ವೇಡ್ ಮುಂದೆ ಫೇಡ್ ಆದ ಭಾರತ, ಮೊದಲ ಪಂದ್ಯದಲ್ಲಿ ರೋಹಿತ್ ಬಳಗಕ್ಕೆ ಸೋಲು
ಉತ್ತಮ ಬ್ಯಾಟಿಂಗ್ ನ ಹೊರತಾಗಿಯೂ 208 ರನ್ ಗಳ ಸವಾಲಿನ ಮೊತ್ತವನ್ನು ಎದುರಾಳಿ ಆಸೀಸ್ ಮುಂದಿಟ್ಟ ಭಾರತ ತಂಡ ಕೊನೆಗೂ  ಮೊದಲ ಟಿ 20 ಪಂದ್ಯದಲ್ಲಿ ಸೋಲನುಭವಿಸಬೇಕಾಯ್ತು.

ಟಾಸ್ ಗೆದ್ದು ಭಾರತಕ್ಕೆ ಬ್ಯಾಟಿಂಗ್ ಕೊಟ್ಟ ಆಸ್ಟ್ರೇಲಿಯಾ ತಂಡ ನಾಯಕ ರೋಹಿತ್ ಅವರನ್ನು ಕೇವಲ 11 ರನ್ ಗೆ ಔಟ್ ಮಾಡಿತು. ಇದಾದ ನಂತರ ಕಳೆದ ಪಂದ್ಯದ ಶತಕ ವೀರ ವಿರಾಟ್ ಕೊಹ್ಲಿ ಕೂಡಾ ಕೇವಲ 2 ರನ್ ಗಳಿಸಿ ನಿರ್ಗಮಿಸಿದರು. ಆದರೆ ನಂತರ ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಮತ್ತು ಶ್ರೇಷ್ಠ  ಪ್ರದರ್ಸನ ತೋರಿದ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ನೆರವಿನಿಂದ ಭಾರತ 208 ರನ್ ಗಳ ಮೊತ್ತ ಕಲೆ ಹಾಕಿತು. ಇದನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ ಫಿಂಚ್ ಮತ್ತು ಗ್ರೀನ್ ಅಬ್ಬರದ ಆರಂಭ ಕೊಟ್ಟರು. ಅದರಲ್ಲೂ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮೊದಲ ಪಂದ್ಯದಲ್ಲೇ ಕ್ಯಾಮೆರಾನ್ ಗ್ರೀನ್ ಅಬ್ಬರಿಸಿದರು. 30 ಬಾಲುಗಳಲ್ಲಿ 61 ರನ್ ಗಳಿಸಿದ ಅವರು ತಮ್ಮ ತಂಡದ ಗೆಲುವಿನ ರೂವಾರಿ ಎನಿಸಿದರು.

ನಂತರದ ಕೆಲವು ಓವರ್ ಗಳಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡರೂ ಮ್ಯೂಥ್ಯೂ ವೇಡ್ 21 ಬಾಲ್ ಗಲಲ್ಲಿ 45 ರನ್ ಗಳಿಸಿ ತಂಡವನ್ನು ಗೆಲುವನಿನ ದಡ ಮುಟ್ಟಿಸಿದರು. ಈ ಮಧ್ಯೆ ಹಲವು ಕ್ಯಾಚ್ ಗಳನ್ನು ಕೈ ಚೆಲ್ಲಿದ್ದು ಭಾರತ ತಂಡಕ್ಕೆ ದುಬಾರಿ ಆಯಿತು. ಅಲ್ಲದೆ 4 ಓವರ್ ನಲ್ಲಿ 3 ವಿಕೆಟ್ ತೆಗೆದು 17 ರನ್ ಕೊಟ್ಟ ಅಕ್ಸರ್ ಪಟೇಲ್ ಅವರನ್ನು ಬಿಟ್ಟರೆ ಭಾರತದ ಇತರ ಎಲ್ಲಾ ಬೋಲರ್ ಗಳ ಪ್ರದರ್ಶನ ನೀರಸವಾಗಿತ್ತು. ಹಾಗಾಗಿ ಉತ್ತಮ ಮೊತ್ತಮ ಗಳಿಸಿದ ನಂತರವೂ ಭಾರತ ತಂಡ ಸೋಲಿನ ರುಚಿ ಕಾಣಬೇಕಾಯಿತು. ಕ್ಯಾಮರೂನ್ ಗ್ರೀನ್ ಪಂದ್ಯ ಶ್ರೇಷ್ಟ ಎನಿಸಿಕೊಂಡರು.  ಅನುಭವಿ ಬೋಲರ್ ಬುಮ್ರಾ ಅವರ ಕೊರತೆ ಈ ಪಂದ್ಯದಲ್ಲಿ ಎದ್ದು ಕಂಡಿತು. ಜೊತೆಗೆ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹೇಳುವುದಾದರೆ ಎಡಗೈ, ಬಲಗೈ ಕಾಂಬಿನೇಷನ್ ನೆಪದಲ್ಲಿ ತಂಡದಲ್ಲಿ ದಿನೇಶ್ ಕಾರ್ತಿಕ್ ಇದ್ದರೂ ಅವರಿಗಿಂತ ಮುಂಚೆ ಅಕ್ಸರ್ ಪಟೇಲ್ ಅವರನ್ನು ಬ್ಯಾಟಿಂಗಿಗೆ ಕಳಿಸುವ ನಾಯಕ ರೋಹಿತ್ ಅವರ ಕೆಟ್ಟ ನಿರ್ಧಾರ ಮತ್ತು ಹಲೆಯ ಚಾಳಿ, ಇಲ್ಲೂ ಮುಂದುವರೆಯಿತು. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ಬೋಲಿಂಗ್, ಫೀಲ್ಡಿಂಗ್ ಮತ್ತು ತಂಡದ ಆಯ್ಕೆಯ ಬಗ್ಗೆ ಭಾರತ ಗಮನಹರಿಸಬೇಕಾಗಿದೆ.

ಭಾರತ ಆಸ್ಟ್ರೇಲಿಯಾ ಟಿ 20 ಸರಣಿ, ಶುಭಾರಂಭದ ನಿರೀಕ್ಷೆಯಲ್ಲಿ ಇತ್ತಂಡಗಳು
ಟಿ 20 ವಿಶ್ವಕಪ್ ಗೆ ಮುಂಚಿನ ತಾಲೀಮು ಪಂದ್ಯಗಳು ಎಂದೇ ಹೆಸರು ಪಡೆದಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗಳು ಭಾರತಕ್ಕೆ ಮಹತ್ವದ ಸರಣಿಗಳು ಎನ್ನಿಸಿವೆ. ಈ ಪೈಕಿ ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಟಿ 20 ಸರಣಿ ಆರಂಭವಾಗಲಿದೆ. ಇಂದು ಸಂಜೆ ಮೊಹಾಲಿಯಲ್ಲಿ ಶುರುವಾಗಲಿರುವ ಈ ಪಂದ್ಯ ಎಲ್ಲರ ಕುತೂಹಲ ಕೆರಳಿಸಿದೆ.

ಇನ್ನು ಆಡುವ ಬಳಗದ ವಿಷಯಕ್ಕೆ ಬಂದರೆ ವಿಶ್ವಕಪ್ ಹತ್ತಿರದಲ್ಲೇ ಇರುವುದರಿಂದ ಭಾರತ ತಂಡ ಈ ಮುಂಚೆ ಏಷ್ಯಾ ಕಪ್ ನಲ್ಲಿ ಮಾಡಿದ ತಪ್ಪುಗಳನ್ನು ರಿಪೀಟ್ ಮಾಡುವುದು ಅನುಮಾನ. ಹಾಗಾಗಿ ಸಮರ್ಥ ಆಟಗಾರರನ್ನು ಒಳಗೊಂಡ ಬಲಿಷ್ಟ ಆಡುವ 11ರ ಬಳಗವನ್ನೇ ಕಣಕ್ಕಿಳಿಸುವ ಎಲ್ಲಾ ಲಕ್ಷಣಗಳಿವೆ.

ಹೇಳಿ ಕೇಳಿ ಆಸ್ಟ್ರೇಲಿಯಾ ಬಲಿಷ್ಟ ತಂಡ ಆದ್ದರಿಂದ ಅವರ ಎದುರು ಪ್ರಯೋಗಗಳನ್ನು ಮಾಡೋದು ತಂಡದ ಹಿತದೃಷ್ಠಿಯಿಂದ ಸಮಂಜಸ ಅಲ್ಲ. ಆದಾಗ್ಯೂ ಈ ಪಂದ್ಯದಲ್ಲಿ ಫಿನಿಷರ್ ಎಂದೇ ಹೆಸರು ಮಾಡಿರುವ ದಿನೇಸ್ ಕಾರ್ತಿಕ್ ಅವರನ್ನು ಹೊರಗಿಡುವ ಸಾಧ್ಯತೆಗಳಿವೆ. ಇದು ತಂಡದ ಮ್ಯಾನೇಜ್ ಮೆಂಟ್ ಮತ್ತು ತಂಡದ ಥಿಂಕ್ ಟ್ಯಾಂಕ್ ನ ಆಲೋಚನೆ. ಆದರೆ, ದಿನೇಶ್ ಕಾರ್ತಿಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡು ಆಡುವ ಅವಕಾಶ ಕೊಡದೇ, ಒಂದು ವೇಳೆ ಕೊಟ್ಟರೂ ಬ್ಯಾಟಿಂಗಿಗೆ ಅವಕಾಶ ಕೊಡದೇ ಅವರ ಪ್ರತಿಭೆಯನ್ನು ಪೋಲು ಮಾಡುತ್ತಿರೋದಂತೂ ಕ್ರಿಕೆಟ್ ಪ್ರೇಮಿಗಳಲ್ಲಿ ಅಸಮಾಧಾನ ಉಂಟು ಮಾಡಿದೆ.

ಕಾರ್ತಿಕ್ ಗೆ ಫಿನಿಷರ್ ಪಟ್ಟ ಕಟ್ಟಿ, ಪಂದ್ಯ ಮುಗಿಯುವ ವೇಳೆಯಲ್ಲಿ ಅವರನ್ನು ಬ್ಯಾಟಿಂಗಿಗೆ ಇಳಿಸಲಾಗುತ್ತಿದೆ. ಹಾಗಾಗಿ ತಮಗೆ ಸಿಕ್ಕ ಎಂಟತ್ತು ಬಾಲುಗಳಲ್ಲೇ ತಮ್ಮ ಪ್ರತಿಭೆ ತೋರಿಸಬೇಕಾದ ಅನಿವಾರ್ಯತೆ ಕಾರ್ತಿಕ್ ಅವರದ್ದು. ಹಾಗಾಗಿ ಅವರನ್ನು 15 ಓವರ್ ಗಳ ಹಂತದಲ್ಲೇ ಕಳಿಸಬೇಕು ಅನ್ನೋದು ಹಲವರ ವಾದ. ಒಂದೊಮ್ಮೆ ಬ್ಯಾಟಿಂಗ್ ಪಿಚ್ ಆಗಿ ಮೇಲಿನ ಕ್ರಮಾಂಕದ ಇಬ್ಬರು, ಮೂವರು ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ತಂಡದಲ್ಲಿದ್ದರೂ ಕಾರ್ತಿಕ್ ಅವರಿಗೆ ಬ್ಯಾಟಿಂಗಿಗೆ ಅವಕಾಶ ಸಿಗೋದಿಲ್ಲ. ಹಾಗಾಗಿ, ದಿನೇಶ್ ಕಾರ್ತಿಕ್ ಅವರನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದು ಒಂದು ಸವಾಲಾಗಿ ಪರಿಣಮಿಸಿದೆ ಅಂದ್ರೆ ತಪ್ಪಿಲ್ಲ. ಒಟ್ಟಿನಲ್ಲಿ ಇಂದಿನ ಪಂದ್ಯ ಇಂತಹ ಸಾಕಷ್ಟು ವಿಷಯಗಳಿಗಾಗಿ ಕುತೂಹಲ ಕೆರಳಿಸಿರೋದಂತೂ ಸತ್ಯ.

ಇಂದು ಭಾರತ ವಿಂಡೀಸ್ ನಾಲ್ಕನೇ ಟಿ 20 ಪಂದ್ಯ ದೊಡ್ಡ ಮೊತ್ತದ ಸ್ಕೋರ್ ನಿರೀಕ್ಷೆ
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಅಂತಿಮ ಹಂತಕ್ಕೆ ಕಾಲಿಟ್ಟೆ. ಕೊನೆಯ ಎರಡು ಪಂದ್ಯಗಳು ಬಾಕಿ ಇದ್ದು ಸರಣಿ ಇನ್ನೂ ನಿರ್ಧಾರ ಆಗಿಲ್ಲ. ನಾಳೆಯೇ ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಇನ್ನು ಮೂರನೇ ಪಂದ್ಯದಲ್ಲಿ ರಿಟೈರ್ಡ್ ಹರ್ಟ್ ಆಗಿದ್ದ ನಾಯಕ ರೋಹಿತ್ ಶರ್ಮಾ ಅವರು ಸಂಪೂರ್ಣ ಫಿಟ್ ಆಗಿದ್ದರೆ ಮಾತ್ರ ಆಡಿಸುವ ಬಗ್ಗೆ ತಂಡದ ಮ್ಯಾನೇಜ್ ಮೆಂಟ್ ಯೋಚನೆ ಮಾಡುತ್ತಿದೆ.

ಅಮೆರಿಕಾದ ಫ್ಲೊರಿಡಾದಲ್ಲಿ ನಡೆಯಲಿರುವ ಇಂದಿನ ಪಂದ್ಯ ರೋಚಕವಾಗಿರುವ ಎಲ್ಲಾ ಸಾಧ್ಯತೆಗಳಿವೆ. ಏಕೆಂದರೆ, ಕಳೆದಬಾರಿ ಅಂದರೆ 2016ರಲ್ಲಿ ಇಲ್ಲಿ ಭಾರತ ಮತ್ತು  ವಿಂಡೀಸ್ ತಂಡಗಳ ನಡುವೆ ಪಂದ್ಯ ನಡೆದಾಗ ಮೊದಲ ಇನ್ನಿಂಗ್ಸ್ ನಲ್ಲಿ ವಿಂಡೀಸ್ 245 ರನ್ ಗಳಿಸಿತ್ತು. ಮತ್ತು ಭಾರೀ ಮೊತ್ತ ಚೇಸ್ ಮಾಡಿದ ಭಾರ ಎರಡನೇ ಇನ್ನಿಂಗ್ಸ್ ನಲ್ಲಿ 244 ರನ್ ಗಳಿಸಿ ಒಂದು ರನ್ನಿನಿಂದ ಸೋಲೊಪ್ಪಿಕೊಂಡಿತ್ತು. ಹಾಗಾಗಿ ಈಗಲೂ ಪಿಚ್ ಅದೇ ರೀತಿ ಇದ್ದರೆ, ಇವತ್ತು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡದ ಆಟಗಾರರು ಬ್ಯಾಟಿಂಗ್ ಮಾಡುವುದನ್ನು ನೋಡೋದೇ ಒಂದು ಹಬ್ಬ ಆಗಬಹುದು. ಇನ್ನು ಅರ್ಶ್ ದೀಪ್ ಸಿಂಗ್, ಅಶ್ವಿನ್ ಅವರ ಬೋಲಿಂಗ್ ಗೆ ಇದು ಪರೀಕ್ಷೆ ಆಗಬಹುದು. ಹಾಗೆಯೇ, ಆಲ್ ರೌಂಡರ್ ದೀಪಕ್ ಹೂಡಾ ಅವರ ಆಟವನ್ನೂ ಇಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ನಿರೀಕ್ಷೆ ಮಾಡುತ್ತಿದ್ದಾರೆ ಅನ್ನೋದು ಕೂಡಾ ಸತ್ಯ.

ಕೊನೆಗೂʼಜಯʼದಕ್ಕಿಸಿಕೊಂಡ ವೆಸ್ಟ್‌ಇಂಡೀಸ್‌
ಬೆಸೆಟೆರ್, ಸೇಂಟ್ ಕಿಟ್ಸ್: ವಾರ್ನರ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ದದ ಟಿ20 ಎರಡನೇ ಕ್ರಿಕೆಟ್  ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ.

ಏಕದಿನ ಸರಣಿಯಲ್ಲಿ ಭಾರತ ತಂಡದ ಮೇಲೆ ಒಂದು ಪಂದ್ಯದಲ್ಲಿಯೂ ಕೂಡ ಗೆಲ್ಲದೆ ಕ್ಲೀನ್‌ ಸ್ವೀಪ್‌  ಆಗಿದ್ದ ವೆಸ್ಟ್‌ ಇಂಡೀಸ್‌ ತಂಡವು, ಟಿ20 ಸರಣಿಯಲ್ಲಿಯೂ ಮೊದಲನೆ ಪಂದ್ಯ ಸೋತು ಹೋಗಿತ್ತು. ಆದರೆ ಟಿ20 ಎರಡನೆ ಪಂದ್ಯದಲ್ಲಿ ಐದು ವಿಕೆಟ್‌ಗಳ ಜಯಗಳಿಸುವುದರ ಮೂಲಕ ಸರಣಿ ಸಮಬಲ
(1-1) ಮಾಡಿಕೊಂಡಿದ್ದಾರೆ.

ಮೊದಲು ಬ್ಯಾಟಿಂಗ್‌ ಇಳಿದ ಟೀಮ್‌ ಇಂಡಿಯಾದ ಅನುಭವಿ ಆಟಗಾರರಾದ ನಾಯಕ ರೋಹಿತ್‌ ಶರ್ಮ ಮತ್ತು ಸೂರ್ಯಕುಮಾರ್‌ ಯಾದವ್‌ ವೆಸ್ಟ್‌ ಇಂಡೀಸ್‌ ಬೌಲಿಂಗ್‌ ದಾಳಿಗೆ ವಿಕೆಟ್‌ ಚೆಲ್ಲಿ ಪೆವಿಲಿಯನ್‌ ಸೇರಿದರು. ನಂತರ ಜೊತೆಯಾದ ರಿಷಬ್‌ ಪಂತ್‌ 24 ರನ್‌ ಮತ್ತು ಹಾರ್ದಿಕ್‌ ಪಾಂಡ್ಯ  31 ರನ್‌ ಹಾಗು ಜಡೇಜ 27 ರನ್‌ ಕಲೆಹಾಕಿ ತಂಡವನ್ನ ಒಂದು ಹಂತಕ್ಕೆ ಕರೆದೊಯ್ದರು. ಭಾರತ ಕೊನೆಗೂ 19.4 ಒವರ್‌ ಗಳಲ್ಲಿ ತನ್ನ ಎಲ್ಲಾ ವಿಕೆಟ್‌ ಕಳೆದುಕೊಂಡು 138 ರನ್‌ ಗಳಿಸಿತು.

ನಂತರ 138 ಚೇಸ್‌ ಮಾಡಲು ಹೊರಟ ವೆಸ್ಟ್‌ ಇಂಡೀಸ್‌ ತಂಡವು ಆರಂಭದಲ್ಲಿ ರನ್‌ ಕಲೆಹಾಕಲು ಪರದಾಡಿತು. ನಂತರ ಬ್ರಾಂಡನ್ ಕಿಂಗ್ 64 ಮತ್ತು ಡೆವೊನ್ ಥಾಮಸ್ 31 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕರೆದೊಯ್ದರು. ಕೊನೆಗೆ 19.2 ಓವರ್‌ಗಳಿಗೆ 141 ರನ್‌ ಗಳಿಸಿ 5 ವಿಕೆಟ್‌ಗಳ ಜಯ ಸಾಧಿಸಿತು. ಇನ್ನೂ ಬೌಲಿಂಗ್‌ನಲ್ಲಿ ಮಿಂಚಿದ ವೆಸ್ಟ್‌ ಇಂಡೀಸ್‌ ಆಟಗಾರ ಓ.ಮೆಕಾಯ್‌ ನಾಲ್ಕು ಓವರ್‌ಗಳಲ್ಲಿ 17 ರನ್‌ ಕೊಟ್ಟು 6 ವಿಕೆಟ್‌ಗಳನ್ನ ಕಬಳಿಸಿ ತಂಡದ ಗೆಲುವಿಗೆ ಕಾರಣರಾದರು.

ಇಂದು ಎರಡನೇ ಟಿ 20 ಪಂದ್ಯ ವಿಂಡೀಸ್ ಗೆ ಗೆಲುವಿನ ರುಚಿ ನೋಡುವ ತವಕ
ಭಾರತ ಮತ್ತು ವಿಂಡೀಸ್ ಸರಣಿಯ ಎರಡನೇ ಟಿ 20 ಪಂದ್ಯ ಇಂದು ಸಂಜೆ 8 ಗಂಟೆಗೆ ಶುರುವಾಗಲಿದೆ. ಬ್ಯಾಸೆಟೆರ್ರೆಯಲ್ಲಿ ಇಂದು ಎರಡೂ ತಂಡಗಳು ಸೆಣೆಸಲಿವೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗುತ್ತಿರುವ ಭಾರತವನ್ನು ಬಗ್ಗು ಬಡಿಯಲು ವಿಂಡೀಸ್ ತಂಡ ಗೇಮ್ ಪ್ಲ್ಯಾನ್ ಮಾಡುತ್ತಿದೆ. ಆದರೆ ಸರಣಿಯಲ್ಲಿ ಇದುವರೆಗೂ ಒಂದೂ ಪಂದ್ಯವನ್ನು ಗೆಲ್ಲಲಾಗದ ವಿಂಡೀಸ್ ಗೆ ಅದು ಸುಲಭದ ಕೆಲಸ ಅಲ್ಲ. ರೋಹಿತ್ ಶರ್ಮಾ ಪಡೆ ಈಗ ತನ್ನ ಫಾರ್ಮ್ ನ ಉತ್ತುಂಗದಲ್ಲಿದೆ. ತಂಡದ ಬ್ಯಾಟ್ಸ್ ಮನ್ ಮತ್ತು ಬೋಲರ್ ಗಳು ಸಮತೋಲಿತ ಪ್ರದರ್ಶನ ನೀಡುತ್ತಿದ್ದಾರೆ. ತಂಡದ ಎಲ್ಲಾ ಆಟಗಾರರು ಅವಕಾಶ ಸಿಕ್ಕಾಗಲೆಲ್ಲ ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇದರ ಜೊತೆ, ಎಂದಿನಂತೆ ದಿನೇಶ್ ಕಾರ್ತಿಕ್ ಕೂಡಾ ಫಿನಿಷರ್ ಆಗಿ ಮಿಂಚುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಸ್ಪಿನ್ನರ್ ಗಳು ತಮ್ಮ ಸಾಮರ್ಥ್ಯ ಪ್ರದರ್ಶನ ಮಿಂಚಿದ್ದರು. ಅದು ಸ್ಪಿನ್ ಗೆ ಪೂರಕ್ ಪಿಚ್ ಆಗಿದ್ದರಿಂದ ಜಡೇಜಾ, ಬಿಷ್ಣೋಯ್ ಮತ್ತು ಅಶ್ವಿನ್ ಸೇರಿದಂತೆ ಮೂವರು ಸ್ಪಿನ್ನರ್ ಗಳು ಆ ಪಂದ್ಯ ಆಡಿದ್ದರು. ಆದರೆ ಇವರಲ್ಲಿ ಒಬ್ಬರು ಎರಡನೇ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅವರಿಗೆ ಜಾಗ ಮಾಡಿಕೊಡುವ ಸಾಧ್ಯತೆ ಇದೆ. ಇನ್ನು ವೆಸ್ಟ್ಇಂಡೀಸ್ ತಂಡಕ್ಕೆ ಬ್ರ್ಯಾಂಡನ್ ಕಿಂಗ್ ಮತ್ತು ರೊಮಾರಿಯೋ ಶೆಪರ್ಡ್ ವಾಪಸ್ ಬರುವ ಸಾಧ್ಯತೆ ಇದೆ. ವಿಂಡೀಸ್ ತಂಡದಲ್ಲಿ ಪ್ರತಿಭೆಗಳ ಮಹಾಪೂರವೇ ಇದ್ದರೂ ಗೆಲುವಿನ ರುಚಿ ನೋಡಲು ಸಾಧ್ಯವಾಗುತ್ತಿಲ್ಲದಿರುವುದು ವಿಂಡೀಸ್ ನಾಯಕ ನಿಕೋಲಸ್ ಪೂರನ್ ಅವರಿಗೆ ತಲೆನೋವಿನ ವಿಷಯವಾಗಿದೆ. ಇಂದಿನ ಪಂದ್ಯದಲ್ಲಾದರೂ ವಿಂಡೀಸ್ ಗೆಲುವಿನ ಲಯಕ್ಕೆ ಮರಳಲಿದೆಯೇ ಅನ್ನೋದು ಸದ್ಯದ ಕುತೂಹಲ. ಪಂದ್ಯ ಇಂದು ಸಂಜೆ ಭಾರತೀಯ ಕಾಲಮಾನ 8 ಗಂಟೆಗೆ ಶುರುವಾಗಲಿದೆ.

ಸಂಭವನೀಯ ತಂಡಗಳು

ವಿಂಡೀಸ್

1 ಕೈಲ್ ಮೇಯರ್ಸ್, 2 ಬ್ರ್ಯಾಂಡನ್ ಕಿಂಗ್, 3 ನಿಕೋಲಸ್ ಪೂರನ್ (ಕ್ಯಾಪ್ಟನ್ ಮತ್ತು ವಿ.ಕೀ), 4 ಜೇಸನ್ ಹೋಲ್ಡರ್, 5 ರೋವ್‌ಮನ್ ಪೊವೆಲ್, 6 ಶಿಮ್ರಾನ್ ಹೆಟ್ಮೆಯರ್, 7 ರೊಮಾರಿಯೋ ಶೆಫರ್ಡ್, 8 ಅಕೆಲ್ ಹೋಸೇನ್ 9 ಕೀಮೋ ಪಾಲ್ / ಹೇಡನ್ ವಾಲ್ಷ್ ಜೂನಿಯರ್, 10 ಅಲ್ಝರ್ರಿ ಜೋಸೆಫ್ 11 ಒಬೆಡ್ ಮೆಕಾಯ್

ಭಾರತ

1 ರೋಹಿತ್ ಶರ್ಮಾ (ನಾಯಕ), 2 ಸೂರ್ಯಕುಮಾರ್ ಯಾದವ್, 3 ಶ್ರೇಯಸ್ ಅಯ್ಯರ್, 4 ರಿಷಭ್ ಪಂತ್ (ವಿ.ಕೀ), 5 ಹಾರ್ದಿಕ್ ಪಾಂಡ್ಯ, 6 ರವೀಂದ್ರ ಜಡೇಜಾ, 7 ದಿನೇಶ್ ಕಾರ್ತಿಕ್, 8 ಆರ್ ಅಶ್ವಿನ್, 9 ರವಿ ಬಿಷ್ಣೋಯ್/ಹರ್ಷಲ್ ಪಟೇಲ್, 10 ಭುವನೇಶ್ವರ್ ಕುಮಾರ್, 11 ಭುವನೇಶ್ವರ್/ಅರ್ಶದೀಪ್ ಸಿಂಗ್

ಟಿ 20 ಪಂದ್ಯದಲ್ಲೂ ಗೆಲುವು ಕಾಣದ ವಿಂಡೀಸ್ ರೋಹಿತ್, ಕಾರ್ತಿಕ್ ಅಬ್ಬರ, ಸ್ಪಿನ್ನರ್ ಗಳ ಪ್ರಾಬಲ್ಯ
ಓಕದಿನ ಸರಣಿಯಲ್ಲಿ ತವರಿನಲ್ಲೇ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ ವೆಸ್ಟ್ ಇಂಡೀಸ್ ತಂಡ, ಟಿ 20 ಸರಣಿಯ ಆರಂಭಿಕ ಪಂದ್ಯದಲ್ಲೂ ಮುಗ್ಗರಿಸಿದೆ. ಯಾಕೋ ಈ ಸರಣಿಯಲ್ಲಿ ವಿಂಡೀಸ್ ಪಾಲಿಗೆ ಗೆಲುವು ಅನ್ನೋದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಶುಕ್ರವಾರ ಇಲ್ಲಿ ನಡೆದ ಮೊದಲ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 68 ರನ್‌ಗಳ ಜಯ ಸಾಧಿಸಿದೆ. ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ವಿಂಡೀಸ್ ಗೆ ಭಾರತದ ಬ್ಯಾಟ್ಸ್ ಮನ್ ಗಳು ತಿರುಗೇಟು ಕೊಟ್ಟರು. ಭಾರತ 6 ವಿಕೆಟ್‌ಗೆ 190 ರನ್ ಗಳಿಸಿತು, ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 64 ರನ್ ಗಳಿಸಿದರೆ, ಎಂದಿನಂತೆ ಫಿನಿಷರ್ ಆಗಿ ಕೊನೆಯಲ್ಲಿ ಅಬ್ಬರಿಸಿದ ದಿನೇಶ್ ಕಾರ್ತಿಕ್ ಕೇವಲ 19 ಎಸೆತಗಳಲ್ಲಿ 41 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ಅಲಜಾರಿ ಜೋಸೆಫ್ 46 ರನ್ನಿಗೆ 2 ವಿಕೆಟ್ ಕಬಳಿಸಿದರೆ, ಎಡಗೈ ಸ್ಪಿನ್ನರ್ ಅಕೆಲ್ ಹೊಸೆನ್ 4 ಓವರ್‌ಗಳಲ್ಲಿ 14 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಭಾರತ ತನ್ನ ಕೊನೆಯ ಮೂರು ಓವರ್‌ಗಳಲ್ಲಿ 45 ರನ್ ಗಳಿಸಿತು. ನಂತರ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಅನ್ನು, ಭಾರತದ ಸ್ಪಿನ್ ಬೋಲರ್ ಗಳು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 122 ರನ್‌ಗಳಿಗೆ ಸೀಮಿತಗೊಳಿಸಿದರು. ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಬಂದ ವಿಂಡೀಸ್ ತಂಡಕ್ಕೆ ಯಾವ ಹಂತದಲ್ಲೂ ಜೊತೆಯಾಟಗಳು ಸಿಗಲೇ ಇಲ್ಲ. ಪೂರನ್, ಪೊವೆಲ್, ಶಿಮ್ರಾನ್ ಹೆಟ್ಮೇಯರ್ ಭರವಸೆ ಮೂಡಿಸಿದರೂ ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲಿಲ್ಲ. ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್ ಮತ್ತು ಅರ್ಷದೀಪ್ ಸಿಂಗ್ ತಲಾ ಎರಡು ವಿಕೆಟ್ ಪಡೆದರೆ, ಭುವಿ ಮತತು ಜಡೇಜಾ ತಲಾ ಒಂದು ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ಪರ ಶಿಮಾರೋ ಬ್ರೂಕ್ಸ್ 20 ರನ್ ಗಳಿಸಿ ಅಗ್ರ ಸ್ಕೋರ್ ಮಾಡಿದರು. ಎರಡನೇ ಟಿ 20 ಪಂದ್ಯ ಆಗಸ್ಟ್ 1ರಂದು ನಡೆಯಲಿದೆ.

Commonwealth game ಟಿ20: ಆಸ್ಟ್ರೇಲಿಯಾಗೆ ಮಣಿದ ಭಾರತ
ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಟಿ20 ಕ್ರಿಕೆಟ್‌ ಪಂದ್ಯದಲ್ಲಿ  ಭಾರತೀಯ ಮಹಿಳಾ ತಂಡ, ಆಸ್ಟ್ರೇಲಿಯಾ ತಂಡದ ವಿರುದ್ದ ಮಣಿದಿದೆ.

ಇದೇ ಮೊದಲ ಬಾರಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್‌ ಸೇರ್ಪಡೆ ಮಾಡಲಾಗಿದ್ದು, ಮಹಿಳಾ ಟಿ20 ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳು ಪರಸ್ಪರ ಸೆಣಸಿದವು.

ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 154 ರನ್‌ ಕಲೆಹಾಕಿತ್ತು.

ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಓಪನರ್‌ ಸ್ಮೃತಿ ಮಂಧಾನಾ, 17 ಎಸೆತಗಳಲ್ಲಿ 5 ಫೋರ್‌ಗಳ ಬಲದೊಂದಿಗೆ 24 ರನ್‌ ಸಿಡಿಸಿ, ವೇಗಿ ಡಾರ್ಸಿ ಬ್ರೌನ್‌ ಅವರ ಬೌಲಿಂಗ್‌ ದಾಳಿಗೆ ಔಟಾಗಿ ಪೆವಿಲಿಯನ್‌ ಸೇರಿದರು. ಹಾಗೆಯೇ ಶೆಫಾಲಿ ವರ್ಮಾ, 33 ಎಸೆತಗಳಲ್ಲಿ 9 ಫೋರ್‌ಗಳೊಂದಿಗೆ 48 ರನ್‌ಗಳಿಸಿ ಕೇವಲ 2 ರನ್‌ಗಳ ಅಂತರದಲ್ಲಿ ಅರ್ಧಶತಕದಿಂದ ವಂಚಿತರಾದರು. ಇನ್ನೂ ಪಂದ್ಯದಲ್ಲಿ ಜವಬ್ದಾರಿಯುತ ಆಟವಾಡಿದ ಕ್ಯಾಪ್ಟನ್‌ ಹರ್ಮನ್‌ಪ್ರೀತ್‌ ಕೌರ್‌, ಎದುರಿಸಿದ 34 ಎಸೆತಗಳಲ್ಲಿ 8 ಫೋರ್‌ ಮತ್ತು 1 ಸಿಕ್ಸರ್‌ನೊಂದಿಗೆ 52 ರನ್‌ ಸಿಡಿಸುವ ಮೂಲಕ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅರ್ದಶತಕ ಬಾರಿಸಿದ ಮೊಟ್ಟ ಮೊದಲ ಮಹಿಳಾ ಕ್ರಿಕೆಟರ್ ಎಂಬ ದಾಖಲೆಗೆ ಕಾರಣದಾರು.

ನಂತರ 154 ರನ್ ಗಳನ್ನ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ, ವೇಗದ ಬೌಲರ್‌ ರೇಣುಕಾ ಸಿಂಗ್‌ ಅವರ ಬೌಲಿಂಗ್‌ ದಾಳಿಗೆ ಸಿಲುಕಿ ಸಂಕಷ್ಟ ಎದುರಿಸಿತು. 49 ರನ್‌ಗಳಲ್ಲಿ 5 ವಿಕೆಟ್‌ಗಳನ್ನ ಕಳೆದುಕೊಂಡ ಆಸ್ಟ್ರೇಲಿಯಾ ತಂಡ ಸೋಲಿನಕಡೆ ಮುಖದೋರಿತು. ನಂತರ ಕಣಕ್ಕಿಳಿದ ಆಷ್ಲೇ ಗಾರ್ಡ್ನರ್‌, 35 ಎಸೆತಗಳಲ್ಲಿ 9 ಫೋರ್‌ಗಳೊಂದಿಗೆ ಅಜೇಯ 52 ರನ್‌ ಗಳಿಸಿದರು. ಅವರೊಟ್ಟಿಗೆ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ ಗ್ರೇಸ್‌ ಹ್ಯಾರಿಸ್‌, 20 ಎಸೆತಗಳಲ್ಲಿ 5 ಫೋರ್‌ ಮತ್ತು 2 ಸಿಕ್ಸರ್‌ಗಳೊಂದಿಗೆ 37 ರನ್‌ಗಳಿಸಿ ಭಾರತ ತಂಡದ ಗೆಲುವಿನ ಆಸೆಯನ್ನು ಬುಡಮೇಲು ಮಾಡಿ 3 ವಿಕೆಟ್‌ಗಳಿಂದ ಜಯಗಳಿಸಿತು.

ಸಂಕ್ಷಿಪ್ತ ಸ್ಕೋರ್‌ ವಿವರ
ಭಾರತ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 154 ರನ್‌ (ಸ್ಮೃತಿ ಮಂಧಾನಾ 24, ಶೆಫಾಲಿ ವರ್ಮಾ 48, ಹರ್ಮನ್‌ಪ್ರೀತ್‌ ಕೌರ್‌ 52: ಜೆಸ್‌ ಜೊನಾಸೆನ್‌ 24ಕ್ಕೆ 4, ಮೆಗಾನ್‌ ಶುಟ್‌ 26ಕ್ಕೆ 2).
ಆಸ್ಟ್ರೇಲಿಯಾ: 19 ಓವರ್‌ಗಳಲ್ಲಿ 7 ವಿಕೆಟ್‌ಗೆ 157 ರನ್‌ (ಆಷ್ಲೇ ಗಾರ್ಡ್ನರ್‌ 52, ಗ್ರೇಸ್‌ ಹ್ಯಾರಿಸ್‌ 37; ರೇಣುಕಾ ಸಿಂಗ್‌ 18ಕ್ಕೆ 4, ದೀಪ್ತ ಶರ್ಮಾ 24ಕ್ಕೆ 2).
ಪಂದ್ಯಶ್ರೇಷ್ಠ: ಆಷ್ಲೇ ಹ್ಯಾರಿಸ್‌