tami – Peepal Media

ಪರಸ್ಪರ ಪ್ರಣಯ ಸಂಬಂಧ ಪ್ರಕರಣ: ಪೋಕ್ಸೊ ಆರೋಪಿಗಳನ್ನು ಬಂಧಿಸಲು ಆತುರ ಬೇಡ- ತಮಿಳುನಾಡು ಡಿಜಿಪಿ
ಚೆನೈ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಯುವಕರನ್ನು ಬಂಧಿಸುವಲ್ಲಿ ಆತುರ ತೋರದಂತೆ ಪೊಲೀಸ್ ಅಧಿಕಾರಿಗಳಿಗೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರಾದ (ಡಿಜಿಪಿ) ಸಿ.ಸೈಲೇಂದ್ರ ಬಾಬು ಸುತ್ತೋಲೆ ಹೊರಡಿಸಿದ್ದಾರೆ.

ಪೋಕ್ಸೊ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಾಲ ನ್ಯಾಯ ಸಮಿತಿ, ಮದ್ರಾಸ್ ಹೈಕೋರ್ಟ್‌ ಪೋಕ್ಸೊ ಸಮಿತಿ ಮತ್ತು ತಮಿಳುನಾಡು ಮತ್ತು ಪುದುಚೇರಿಯ ಇತರ ಮಧ್ಯಸ್ಥಗಾರರನ್ನು ಒಳಗೊಂಡ ರಾಜ್ಯ ಮಟ್ಟದ ಸಮಾಲೋಚನಾ ಸಭೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೈಲೇಂದ್ರ ಬಾಬು ತಿಳಿಸಿದ್ದಾರೆ.

ಸುತ್ತೋಲೆಯಲ್ಲಿ, ಡಿಜಿಪಿ ಪೊಲೀಸ್ ಅಧಿಕಾರಿಗಳಿಗೆ ʼಪರಸ್ಪರ ಪ್ರಣಯ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಆತುರವನ್ನು ತೋರಿಸಬೇಡಿʼ ಎಂದು ಹೇಳಲಾಗಿದೆ. ಬದಲಾಗಿ, ʼCRPC ಸೆಕ್ಷನ್ 41-4 ರ ಅಡಿಯಲ್ಲಿ ಸಂಬಂಧಪಟ್ಟ ವ್ಯಕ್ತಿಗೆ ತನಿಖೆಗಾಗಿ ನೋಟಿಸ್ ನೀಡುವಂತೆʼ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರಕರಣದ ಡೈರಿಯಲ್ಲಿ ಆರೋಪಿಗಳನ್ನು ಬಂಧಿಸದಿರಲು ಕಾರಣವೇನೆಂದು ದಾಖಲಿಸಲು ಅಧಿಕಾರಿಗಳಿಗೆ ತಿಳಿಸಲಾಗಿದ್ದು, ʼಪೊಲೀಸ್ ವರಿಷ್ಠಾಧಿಕಾರಿ / ಉಪ ಪೊಲೀಸ್ ಆಯುಕ್ತರ ಅನುಮತಿಯೊಂದಿಗೆ ಮಾತ್ರ ಬಂಧಿಸಲು ಪ್ರಯತ್ನಿಸಿʼ ಎಂದು ಡಿಜಿಪಿ ಆದೇಶಿಸಿದ್ದಾರೆ.

ʼಸುಮಾರು 60 ಪ್ರತಿಶತದಷ್ಟು ಪೋಕ್ಸೊ ಪ್ರಕರಣಗಳು ಪರಸ್ಪರ ಪ್ರಣಯ ಸಂಬಂಧಗಳಿಗೆ ಸಂಬಂಧಿಸಿವೆ, ಈ ಕಾರಣದಿಂದಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯನ್ನು ಪ್ರೀತಿಸುವ ಕಾರಣಕ್ಕಾಗಿ, ಪೋಕ್ಸೊ ಕಾಯ್ದೆಯ ಕಠಿಣ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಪುರುಷನನ್ನು ಬಂಧನ ಮತ್ತು ಪ್ರಾಸಿಕ್ಯೂಷನ್ ಮೂಲಕ ಅಪರಾಧೀಕರಿಸಲಾಗುತ್ತದೆʼ ಎಂದು ಸಮಿತಿ ಹೇಳಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿನ ಬುಡಕಟ್ಟು ಸಮುದಾಯಗಳಲ್ಲಿನ ಯುವಕರ ಪ್ರಕರಣಗಳಲ್ಲಿ ಇದು ಹೆಚ್ಚು ಕಂಡುಬರುತ್ತದೆ ಎಂದು ಸಮಿತಿ ತಿಳಿಸಿದೆ.

ಬುಡಕಟ್ಟು ಸಂಸ್ಕೃತಿಗಳಲ್ಲಿ, ಪುರುಷನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯನ್ನು ಮದುವೆಯಾಗುವುದನ್ನು ನಿಷೇಧಿಸಲಾಗುವುದಿಲ್ಲ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಮಹಿಳೆಯೊಬ್ಬಳು ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆಂದು ಹೋದಾಗ, ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ, ಪೋಕ್ಸೊ ಪ್ರಕರಣ ದಾಖಲಿಸಲಾಗುತ್ತದೆ ಮತ್ತು ಪುರುಷನನ್ನು ಬಂಧಿಸಲಾಗುತ್ತದೆ. ಇದು ಮುಂದುವರಿದರೆ, ಮಹಿಳೆಯರು ಹೆರಿಗೆಗಾಗಿ ಆಸ್ಪತ್ರೆಗೆ ಭೇಟಿ ನೀಡುವುದಿಲ್ಲ ಮತ್ತು ಬುಡಕಟ್ಟು ಶುಶ್ರೂಷಕರ ಸೇವೆಗಳನ್ನು ಪಡೆಯುತ್ತಾರೆ. ಇದರಿಂದ ʼಆದಿವಾಸಿಗಳು ಮತ್ತು ಬುಡಕಟ್ಟು ಜನರು ಮುಖ್ಯವಾಹಿನಿಯ ಸಮಾಜದಿಂದ ಹೆಚ್ಚು ದೂರವಾಗಲಿದ್ದಾರೆ, ಇದು ರಾಜ್ಯಕ್ಕೆ ಅನುಕೂಲಕರವಾಗಿಲ್ಲʼ ಎಂದು ಸಮಿತಿ ಹೇಳಿದೆ.