tamilunadu – Peepal Media

ಮಾಧ್ಯಮಗಳೆದುರು ಚಾಟಿಯಿಂದ ದಂಡಿಸಿಕೊಂಡ ಅಣ್ಣಾಮಲೈ: ಕಾರಣವೇನು ಗೊತ್ತೆ?
ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅಣ್ಣಾ ಯೂನಿವರ್ಸಿಟಿ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಡಿಎಂಕೆ ಸರ್ಕಾರದದ ನಡೆಯನ್ನು ಖಂಡಿಸಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಭರವಸೆಯಂತೆ ಆರು ಬಾರಿ ಚಾಟಿಯಿಂದ ತಮ್ಮನ್ನು ತಾವು ದಂಡಿಸಿಕೊಂಡಿದ್ದಾರೆ.

ಅಣ್ಣಾಮಲೈ ಸಾರ್ವಜನಿಕವಾಗಿ ದಂಡಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಸಿರು ‘ಮುಂಡು’ ಧರಿಸಿ, ಶರ್ಟ್ ರಹಿತವಾಗಿ ಅಣ್ಣಾಮಲೈ ಮಾಧ್ಯಮ ಪ್ರತಿನಿಧಿಗಳು ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರ ಸಮ್ಮುಖದಲ್ಲಿ ಉದ್ದವಾದ, ಬಿಳಿ ಚಾವಟಿಯಿಂದ ತನ್ನನ್ನು ತಾನೇ ಹೊಡೆದುಕೊಂಡರು. “ನಿಮಗೆ ನಾಚಿಕೆ ಇಲ್ಲವೇ ಸ್ಟಾಲಿನ್?”, “ಆರೋಪಿ ಜ್ಞಾನಶೇಖರನ್‌ ಅವರನ್ನು ಗಲ್ಲಿಗೇರಿಸಿ” ಎಂಬ ಘೋಷಣೆಗಳ ಫಲಕಗಳನ್ನು ಬಿಜೆಪಿ ಬೆಂಬಲಿಗರು ಹಿಡಿದುಕೊಂಡಿದ್ದರು.

ಸ್ವಯಂ ಚಾಟಿ ಬೀಸಿಕೊಂಡ ಬಳಿಕ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ತಮಿಳು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಯಾರಿಗಾದರೂ ಈ ಆಚರಣೆಗಳು ‘ಮಾರ್ಗಗಳು’ ಎಂದು ತಿಳಿಯುತ್ತದೆ ಎಂದು ಅವರು ಹೇಳಿದರು.

“ನಮ್ಮನ್ನು ನಾವೇ ಹೊಡೆದುಕೊಳ್ಳುವುದು, ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುವುದು, ಅತ್ಯಂತ ಕಠಿಣವಾದ ಆಚರಣೆಗಳ ಮೂಲಕ ನಮ್ಮನ್ನು ನಾವು ದಂಡಿಸಿಕೊಳ್ಳುವುದು ಇತ್ಯಾದಿಗಳು ಈ ಸಂಸ್ಕೃತಿಯ ಭಾಗವಾಗಿದೆ. ಇದು ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ ಅಥವಾ ಯಾವುದರ ವಿರುದ್ಧವೂ ಅಲ್ಲ. ಇದು ರಾಜ್ಯದಲ್ಲಿ ಆಗುತ್ತಿರುವ ನಿರಂತರ ಅನ್ಯಾಯದ ವಿರುದ್ಧ. ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವುದು ಒಂದು ಟಿಪ್ಪಿಂಗ್ ಪಾಯಿಂಟ್ ಮಾತ್ರ” ಎಂದರು.

“ನನ್ನ ಅನೇಕ ಪೂರ್ವಜರು ಈ ಮಾರ್ಗದಲ್ಲಿ ನಡೆದಿದ್ದಾರೆ; ನಾನು ಕೂಡ ಅದನ್ನು ಆರಿಸಿಕೊಂಡಿದ್ದೇನೆ. ಇದು ಉನ್ನತ ಶಕ್ತಿಗೆ ಶರಣಾಗುವ, ದೇವರಿಗೆ ಶರಣಾಗುವ ಪ್ರಕ್ರಿಯೆಯಾಗಿದೆ” ಎಂದು ಬಿಜೆಪಿ ರಾಜ್ಯ ಮುಖ್ಯಸ್ಥರು ಹೇಳಿದ್ದಾರೆ.

“ಡಿಎಂಕೆಯ ಆಡಳಿತದ ಅದಕ್ಷತೆಯಿಂದ ಸಾಮಾನ್ಯ ಜನರು ಪ್ರತಿದಿನ ತೊಂದರೆಗೊಳಗಾಗುತ್ತಿದ್ದಾರೆ. ನನ್ನ ಚಪ್ಪಲಿಗಳನ್ನು ತೆಗೆದುಹಾಕುವ ಬಗ್ಗೆ, ನಾನು ಸಾಕಷ್ಟು ಪರಿಗಣನೆಯ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಪಕ್ಷ ಮತ್ತು ಕಾರ್ಯಕರ್ತರು ಮಾಡಿದ ಎಲ್ಲ ಶ್ರಮದ ನಂತರ, ನೀವು ದೊಡ್ಡ ಶಕ್ತಿಗೆ ನಿಮ್ಮನ್ನು ಒಪ್ಪಿಸುವುದು ಮತ್ತು ನಡೆಯುತ್ತಿರುವ ವಿಷಯಗಳನ್ನು ನೋಡಿಕೊಳ್ಳಲು ದೊಡ್ಡ ಶಕ್ತಿಗೆ ಬಿಡುವುದು ಸಹ ಮುಖ್ಯವಾಗಿದೆ ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದ್ದಾರೆ.

ʼರಾಯನ್’ ಚಲನಚಿತ್ರವನ್ನು ಪೈರಸಿ ಮಾಡುತ್ತಿದ್ದಾಗ ತಮಿಳ್ ರಾಕರ್ಸ್: ಅಡ್ಮಿನ್ ಜೆಬ್‌ ಸೀಫನ್‌ ಬಂಧನ
ಕೊಚ್ಚಿ: ಥಿಯೇಟರ್‌ನಿಂದ ಸಿನಿಮಾಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಪೈರಸಿ ಮಾಡುತ್ತಿದ್ದ ಕುಖ್ಯಾತ ತಮಿಳ್ ರಾಕರ್ಸ್ ಗ್ರೂಪ್ ಅಡ್ಮಿನ್ ಗಳಲ್ಲಿ ಒಬ್ಬನಾದ ಜೆಬ್ ಸ್ಟೀಫನ್ ರಾಜ್ (33)ನನ್ನು ಕೊಚ್ಚಿ ಸಿಟಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ತಿರುವನಂತಪುರಂ ಸೈಬರ್ ಪೊಲೀಸರು ಆತನನ್ನು ನಗರದ ಪ್ರಮುಖ ಥಿಯೇಟರ್‌ನಿಂದ ಕಸ್ಟಡಿಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ. ಧನುಷ್ ಅವರ ಇತ್ತೀಚಿನ ಚಲನಚಿತ್ರ ‘ರಾಯನ್’ ಅನ್ನು ರಹಸ್ಯವಾಗಿ ರೆಕಾರ್ಡ್ ಮಾಡುತ್ತಿದ್ದಾಗ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು,  ಕೊಚ್ಚಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

‘ಗುರುವಾಯೂರ್ ಅಂಬಲನಡಾಯಿಲ್’ ಚಿತ್ರವು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಕೇವಲ ಒಂದು ದಿನದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾಗಿದೆ. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನಿರ್ಮಾಪಕರಲ್ಲಿ ಒಬ್ಬರಾದ ಸುಪ್ರಿಯಾ ಮೆನನ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದರು.

ಆರೋಪಿ ಜೆಬ್ ಸ್ಟೀಫನ್, ಮಹಾರಾಜ ಮತ್ತು ಕಲ್ಕಿಯಂತಹ ಸಿನಿಮಾಗಳ ಪೈರಸಿ ಮಾಡಿರುವುದು ಪೊಲೀಸರಿಗೆ ಪತ್ತೆಯಾಗಿದೆ. ಸೈಬರ್ ಫೋರೆನ್ಸಿಕ್ಸ್ ವಿಭಾಗವು ಆರೋಪಿಯ ಮೊಬೈಲ್ ಫೋನ್ ಅನ್ನು ಪರಿಶೀಲಿಸುತ್ತಿದೆ. ತಮಿಳುರಾಕರ್ಸ್‌ನಲ್ಲಿ ಹೆಚ್ಚಾಗಿ ಕಂಡುಬರುವ ಪೈರೇಟೆಡ್ ಆವೃತ್ತಿಗಳು ಉತ್ತಮ ಗುಣಮಟ್ಟದ್ದಾಗಿವೆ. ಈ ರೀತಿ ಪೈರಸಿ ಮಾಡುವರು ಯಾರಿಗೂ ತಿಳಿಯದಂತೆ ಚಲನಚಿತ್ರವನ್ನು ರೆಕಾರ್ಡ್ ಮಾಡಲು ತಮ್ಮ ಫೋನ್ ಅನ್ನು ಥಿಯೇಟರಿನ ಸೀಟ್‌ಗಳಲ್ಲಿನ ಕಪ್ ಹೋಲ್ಡರ್ ಅನ್ನು ಬಳಸುತ್ತಾರೆ ಎನ್ನಲಾಗುತ್ತಿದೆ.

ಜೆಬ್ ಸ್ಟೀಫನ್ ಪ್ರತಿ ಹೊಸ ಚಲನಚಿತ್ರವನ್ನು ಅಪ್‌ಲೋಡ್ ಮಾಡಲು ತಮಿಳು ರಾಕರ್ಸ್ ವೆಬ್‌ಸೈಟ್‌ನಿಂದ ರೂ 5000 ಪಡೆಯುತ್ತಿದ್ದ.

ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ, ಜೆಬ್ ತಿರುವನಂತಪುರಂನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ಟೀಫನ್, ಪೈರಸಿ ಮಾಡುವ ಗ್ಯಾಂಗ್‌ಗಳೊಂದಿಗೆ ರಹಸ್ಯವಾಗಿ ನಂಟು ಹೊಂದಿದ್ದ. ಚಲನಚಿತ್ರದ ಮೊದಲ ಪ್ರದರ್ಶನವನ್ನು ಮುಂಚಿತವಾಗಿ ಬುಕ್ ಮಾಡುತ್ತಿದ್ದ ಗ್ಯಾಂಗ್ ನಂತರ ಆ ಮಾಹಿತಿಯನ್ನು ಪೈರಸಿ ಮಾಡುವವರಿಗೆ ವಾಟ್ಸಾಪ್ ಮೂಲಕ ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ.

ಹಿಂದೂ ಧರ್ಮ ಕುರಿತು ಹೇಳಿಕೆ: ಉದಯನಿಧಿ ಸ್ಟಾಲಿನ್‌ಗೆ ಜಾಮೀನು
ಬೆಂಗಳೂರು: ಸನಾತನ ಧರ್ಮ ಕುರಿತು ತಮಿಳುನಾಡಿನ ಸಚಿವ‌ ಉದಯನಿಧಿ ಸ್ಟಾಲಿನ್‌  ನೀಡಿದ ಹೇಳಿಕೆಯನ್ನು ಆಕ್ಷೇಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾಲಿನ್ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ‌.

“ಸನಾತನ ಧರ್ಮ ಸಾಂಕ್ರಾಮಿಕ ರೋಗ ಇದ್ದಂತೆ. ಅದನ್ನು ಬುಡ ಸಮೇತ ಕಿತ್ತು ಹಾಕಿದಾಗ ಮಾತ್ರ ದೇಶದಲ್ಲಿ ವೈಚಾರಿಕತೆ ಬೆಳೆದು ಶಾಂತಿ ನೆಲೆಸುತ್ತದೆ” ಎಂದು ಉದಯನಿಧಿ ಸ್ಟಾಲಿನ್‌ ‘ಚೆನ್ನೈನ ತೆಯನಂಪೇಟೆಯಲ್ಲಿ 2023ರ ಸೆಪ್ಟೆಂಬರ್ 3ರಂದು ನಡೆದಿದ್ದ, ‘ಸನಾತನ ಧರ್ಮ ನಿರ್ಮೂಲನಾ ಸಮಾವೇಶ’ದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತದೆ ಎಂದು  ಬೆಂಗಳೂರಿನ ಬೆಳತ್ತೂರು ಕಾಲೋನಿಯ ವಿ.ಪರಮೇಶ್‌ ಖಾಸಗಿ ದೂರು ದಾಖಲಿಸಿದ್ದರು.

ದೂರಿನಲ್ಲಿ ‘ಸ್ಟಾಲಿನ್‌ ಹೇಳಿಕೆಯು ಸಮಾಜದಲ್ಲಿ ಅಶಾಂತಿ, ದಂಗೆ ಎಬ್ಬಿಸಲು ಪ್ರಚೋದನೆ ನೀಡುವಂತಿದೆ. ಇದರಿಂದ ನನ್ನ ಧಾರ್ಮಿಕ ಭಾವನೆಗೆ ದಕ್ಕೆಯುಂಟಾಗಿದೆ’ ಎಂದು ಆರೋಪಿಸದ್ದರು.

ದೂರಿನ ಅನುಸಾರ ಭಾರತೀಯ ದಂಡ ಸಂಹಿತೆ–1860ರ ಕಲಂ 153, 298 ಮತ್ತು 500ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ವಿಚಾರಣಾ ನ್ಯಾಯಾಲಯ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿತ್ತು.

ಈ ಸಂಬಂಧ ನೋಟಿಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಸಚಿವ ಉದಯ ನಿಧಿ ಸ್ಟಾಲಿನ್ ಅವರು ಮಂಗಳವಾರ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ‌ ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್ ಮುಂದೆ ಖುದ್ದು ಹಾಜರಾಗಿದ್ದರು.

ಹಾಜರಾತಿಯನ್ನು ದಾಖಲಿಸಿಕೊಂಡ ನ್ಯಾಯಾಧೀಶರು, ₹5 ಸಾವಿರ ನಗದು ಹಾಗೂ ₹50 ಸಾವಿರ ಮೊತ್ತದ ಆರೋಪಿಯ ವೈಯಕ್ತಿಕ ಬಾಂಡ್ ಮೇರೆಗೆ ಜಾಮೀನು ನೀಡಿದರು. ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ.

ಉದಯನಿಧಿ ಪರ ಹೈಕೋರ್ಟ್ ವಕೀಲರಾದ ಬಾಲಾಜಿ ಸಿಂಗ್, ಚೆನ್ನೈನ ವಿಲ್ಸನ್ ಹಾಗೂ ದೂರುದಾರರ ಪರ ಕರ್ನಾಟಕ ಹೈಕೋರ್ಟ್ ವಕೀಲ ಧರ್ಮಪಾಲ್ ಹಾಜರಿದ್ದರು.

ಮೃತ ರೈತರ ತಲೆಬುರುಡೆ ಇಟ್ಟು ಕೇಂದ್ರದ ವಿರುದ್ಧ ತಮಿಳುನಾಡು ರೈತರ ಪ್ರತಿಭಟನೆ
ತಮಿಳುನಾಡಿನಲ್ಲಿ ಈವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ತಲೆಬುರುಡೆ ಇಟ್ಟು ವಿಶಿಷ್ಟವಾಗಿ ತಮಿಳುನಾಡು ರೈತರು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳು ಕೊಟ್ಟ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಬೆಳೆಗೆ ಉತ್ತಮ ಬೆಲೆ ನಿಗದಿ, ನದಿ ಜೋಡಣೆ ವಿಚಾರ ಕುರಿತು ನಡೆಸಿದ ಪ್ರತಿಭಟನೆಯಲ್ಲಿ ತಮಿಳುನಾಡಿನ 200 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೃಷಿಯಲ್ಲಿ ಆದಾಯ ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದರೂ ಬೆಳೆಗಳ ಬೆಲೆ ಏರಿಕೆ ಮಾಡಿಲ್ಲ ಎಂದು ರೈತರು ಪ್ರಶ್ನಿಸಿದರು. 2019ರಲ್ಲಿ ಪ್ರಧಾನಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ, ನದಿಗಳನ್ನು ಪರಸ್ಪರ ಜೋಡಿಸುವುದಾಗಿ ಕೂಡ ಮಾತುಕೊಟ್ಟಿದ್ದರು ಅನ್ನು ಕೂಡ ಮಾಡಿಲ್ಲ ಎಂದು ನ್ಯಾಷನಲ್ ಸೌತ್ ಇಂಡಿಯಾ ರಿವರ್ ಇಂಟರ್‌ಲಿಂಕಿಂಗ್ ಫಾರ್ಮರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಅಯ್ಯಕಣ್ಣು ಹೇಳಿದ್ದಾರೆ.

ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ, ಅಥವಾ ಯಾವುದೇ ರಾಜಕೀಯ ಪಕ್ಷದ ಜೊತೆಗೆ ಸಂಬಂಧವೂ ಹೊಂದಿಲ್ಲ. ನಮ್ಮ ಬೇಡಿಕೆ ಪ್ರಾಮಾಣಿಕವಾದದ್ದು ಹಾಗೂ ಅವಶ್ಯಕ ಕೂಡ. ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸದೆ ಇದ್ದರೆ, ಸೀದಾ ವಾರಣಾಸಿಗೆ ತೆರಳಿ ಮೋದಿಯವರ ವಿರುದ್ಧ ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದಾರೆ.

ಮಹಿಳೆ ಅಪಹರಿಸಿ ಲೈಂಗಿಕ ದೌರ್ಜನ್ಯ : 5 ಮಂದಿ ಬಂಧನ ಇಬ್ಬರಿಗಾಗಿ ಹುಡುಕಾಟ
ತಮಿಳುನಾಡು: ಕಾರಿನಲ್ಲಿ ಮೆನೆಗೆ ತೆರಳುತ್ತಿದ್ದ ಮಹಿಳೆಯನ್ನು ಏಳು ಜನರ ತಂಡ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸೆಗಿರುವ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಗಸ್ಟ್‌ 22 ರಂದು ವಿರುದುನಗರ ಜಿಲ್ಲೆಯ ಅರುಪ್ಪುಕೊಟ್ಟೈ ಬಳಿ ಕಾರಿನಲ್ಲಿ ಹಿಂತಿರುಗುತ್ತಿದ್ದ 40 ವರ್ಷದ ಮಹಿಳೆಯನ್ನು ಏಳು ಜನರ ತಂಡವು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿತ್ತು. ಈ ಕುರಿತು ಪ್ರಕರಣವು ಸ್ಥಳಿಯ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಈ ಕಾರಣ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆ.23 ರಂದು ಬಾಲಾಪರಾಧಿ ಸೇರಿದಂತೆ ಐವರನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ ಎಂದು ಸುದ್ದಿ-ಸಂಸ್ಥೆ ಎಎನ್‌ಐ ವರದಿ ಮಾಡಿದೆ.

Tamil Nadu | A 40-yr-old woman was abducted & sexually assaulted by a group of seven people while she was returning in a car near Aruppukottai in Virudhunagar district on Aug 22. Five people, including a juvenile, were arrested on Aug 23. Search on for the other two: Police(24.8)
— ANI (@ANI) August 25, 2022