tdp – Peepal Media

ಮೂರನೇ ಮಗುವನ್ನು ಹೆತ್ತ ಮಹಿಳೆಯರಿಗೆ 50,000 ರೂ. ಪ್ರೋತ್ಸಾಹ ಧನ ಮತ್ತು ಒಂದು ದನ: ಆಂಧ್ರದ ಸಂಸದರ ಘೋಷಣೆ
ಆಂಧ್ರಪ್ರದೇಶದಲ್ಲಿ ಮೂರನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ತೆಲುಗು ದೇಶಂ ಪಕ್ಷದ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಶನಿವಾರ 50,000 ರೂ. ಅಥವಾ ಒಂದು ಹಸುವಿನ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದ್ದಾರೆ ಎಂದು ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ತಮ್ಮ ಕ್ಷೇತ್ರವಾದ ವಿಜಯನಗರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಸದರು, ಮೂರನೇ ಮಗು ಹೆಣ್ಣು ಮಗುವಿಗೆ ಜನ್ಮ ನೀಡಿದರೆ ತಮ್ಮ ಸಂಬಳದಿಂದ 50,000 ರೂ.ಗಳನ್ನು ನೀಡುವುದಾಗಿ ಘೋಷಿಸಿದರು. ಆ ಮಗು ಗಂಡು ಮಗುವಾಗಿದ್ದರೆ, ಅವರಿಗೆ ಹಸುವನ್ನು ನೀಡಲಾಗುವುದು ಎಂದು ಘೋಷಿಸಿದರು.

ಡೆಕ್ಕನ್ ಹೆರಾಲ್ಡ್ ವರದಿ ಮಾಡಿರುವ ಪ್ರಕಾರ, ಎಲ್ಲಾ ಉದ್ಯೋಗಿಗಳಿಗೆ ಮಕ್ಕಳ ಸಂಖ್ಯೆಯನ್ನು ಲೆಕ್ಕಿಸದೆ ಮಾತೃತ್ವ ರಜೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಘೋಷಿಸಿದ ದಿನವೇ ಇದು ಸಂಭವಿಸಿದೆ . ಇಲ್ಲಿಯವರೆಗೆ, ಮಹಿಳಾ ಉದ್ಯೋಗಿಗಳು ತಮ್ಮ ಮೊದಲ ಎರಡು ಹೆರಿಗೆಗಳಿಗೆ ಆರು ತಿಂಗಳ ವೇತನ ಸಹಿತ ಹೆರಿಗೆ ರಜೆಯನ್ನು ಪಡೆಯುತ್ತಿದ್ದರು.

“ಜನಸಂಖ್ಯಾ ಬೆಳವಣಿಗೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಮೂರನೇ ಮಗುವನ್ನು ಹೊಂದಲು ಇಬ್ಬರೂ ನೀಡಿದ ಕೊಡುಗೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಾಯ್ಡು ಅವರು ನೀಡಿದ ಕರೆಗಳ ನಂತರ ನನ್ನ ಘೋಷಣೆ ಮಾಡಲಾಗಿದೆ. ನಾವು ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೊಂದಬೇಕೆಂದು ಕೇಳುತ್ತಿದ್ದೇವೆ ಮತ್ತು ಮೂರನೇ ಮಗು ಜನಿಸಿದರೆ ನಾವು ಪ್ರೋತ್ಸಾಹ ಧನ ನೀಡುತ್ತೇವೆ,” ಎಂದು ಅಪ್ಪಲನಾಯ್ಡು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು .

ಕಳೆದ ಕೆಲವು ತಿಂಗಳುಗಳಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಹಲವಾರು ಸಂದರ್ಭಗಳಲ್ಲಿ ರಾಜ್ಯದಲ್ಲಿ ಜನನ ಪ್ರಮಾಣ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಜನವರಿ 6 ರಂದು, ಇಂಡಿಯಾ ಟುಡೇ ಪ್ರಕಾರ , ಜನನ ಪ್ರಮಾಣ ಗಣನೀಯವಾಗಿ ಕುಸಿದಿರುವ ದಕ್ಷಿಣ ಕೊರಿಯಾ ಮತ್ತು ಜಪಾನ್‌ನಂತಹ ದೇಶಗಳ ತಪ್ಪುಗಳಿಂದ ಕಲಿಯುವಂತೆ ನಾಯ್ಡು ನಾಗರಿಕರಿಗೆ ಹೇಳಿದ್ದಾರೆ . ರಾಜ್ಯದ ಚಿತ್ತೂರು ಜಿಲ್ಲೆಯ ಕುಪ್ಪಂ ನಗರದಲ್ಲಿ ಜನನ ಪ್ರಮಾಣವು 1.5 ಕ್ಕೆ ಇಳಿದಿದೆ, ಇದು ಆದರ್ಶ ದರ ಎರಡಕ್ಕಿಂತ ಕಡಿಮೆಯಾಗಿದೆ ಎಂದು ಅವರು ಗಮನಸೆಳೆದರು.

“ನಿಮ್ಮ ಹೆತ್ತವರು ಹಾಗೆ ಯೋಚಿಸಿದ್ದರೆ, ನೀವು ಈ ಲೋಕಕ್ಕೆ ಬರುತ್ತಿದ್ದಿರಾ? ವೈಯಕ್ತಿಕ ಸಂಪತ್ತನ್ನು ನೆಚ್ಚಿಕೊಂಡು ದಂಪತಿಗಳು ಮಕ್ಕಳನ್ನು ಪಡೆಯದಿರಲು ಈಗ ನಿರ್ಧರಿಸುತ್ತಿದ್ದಾರೆ” ಎಂದು ಅವರು ಹೇಳಿದರು.

ನವೆಂಬರ್‌ನಲ್ಲಿ ಆಂಧ್ರಪ್ರದೇಶ ವಿಧಾನಸಭೆಯು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ಮೂರು ದಶಕಗಳಷ್ಟು ಹಳೆಯ ನಿಯಮವನ್ನು ರದ್ದುಗೊಳಿಸಿತು.

ರಾಜ್ಯದಲ್ಲಿ ಒಟ್ಟು ಫರ್ಟಿಲಿಟಿ ದರವು 2.1 ರ ಸೂಕ್ತ ದರಕ್ಕೆ ವಿರುದ್ಧವಾಗಿ 1.6 ಕ್ಕೆ ಇಳಿದ ಹಿನ್ನೆಲೆಯಲ್ಲಿ ಇದು ಸಂಭವಿಸಿದೆ ಎಂದು ಸಚಿವ ನಾದೇಂಡ್ಲಾ ಮನೋಹರ್ ವಿಧಾನಸಭೆಯಲ್ಲಿ ನಿಯಮವನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸುತ್ತಾ ಹೇಳಿದರು. 2015-16ರಲ್ಲಿ 28.60% ರಷ್ಟಿದ್ದ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಜನಸಂಖ್ಯೆಯು 26.50% ಕ್ಕೆ ಇಳಿದಿದೆ ಮತ್ತು ವೃದ್ಧರ ಸಂಖ್ಯೆ ಹೆಚ್ಚಾಗಿದೆ.

ಅಕ್ಟೋಬರ್‌ನಲ್ಲಿ, ನಾಯ್ಡು ಅವರು ರಾಜ್ಯದ ಕುಟುಂಬಗಳು ಹೆಚ್ಚಿನ ಮಕ್ಕಳನ್ನು ಹೊಂದುವ ಬಗ್ಗೆ ಪರಿಗಣಿಸುವಂತೆ ಒತ್ತಾಯಿಸಿದರು .

ಆಂದ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು
ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಇಂದು ಬುಧವಾರ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಇದು ಸೇರಿ ಅವರು ನಾಲ್ಕನೆ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಂತಾಗುತ್ತದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಚಂದ್ರಬಾಬು ನಾಯ್ಡು ಅವರು ಆಂಧ್ರದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ. ಕೇವಲ ತಿಂಗಳುಗಳ ಹಿಂದೆಯಷ್ಠೇ ಕೌಶಲ್ಯ ಅಭಿವೃದ್ಧಿ ಹಗರಣಕ್ಕೆ ಸಂಬಂಧಿಸಿ ಮನಿ ಲಾಂಡರಿಂಗ್ ತನಿಖೆಯಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ನಂತರ ಅವರು ಜೈಲು ಸೇರಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ನಾಯ್ಡು ಅವರು ಟಿಡಿಪಿಯನ್ನು ಬಿಜೆಪಿ ಮತ್ತು ಜನಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದ್ದರು ಮತ್ತು ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು.

ಚಂದ್ರಬಾಬು ನಾಯ್ಡು ಜೊತೆಗೆ ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ‘ಪವರ್ ಸ್ಟಾರ್’ ಪವನ್ ಕಲ್ಯಾಣ್ ಕೂಡ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  ಪವನ್ ಕಲ್ಯಾಣ್ ಅವರೊಂದಿಗೆ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಸೇರಿದಂತೆ 23 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜನಸೇನೆಗೆ ಮೂರು ಕ್ಯಾಬಿನೆಟ್ ಸ್ಥಾನಗಳು ದೊರೆತಿವೆ. ಬಿಜೆಪಿಯ ಸತ್ಯ ಕುಮಾರ್ ಯಾದವ್ ಅವರಿಗೆ ಕೂಡ ಆಂಧ್ರಪ್ರದೇಶದ ಸಚಿವ ಸಂಪುಟದಲ್ಲಿ ಅವಕಾಶವನ್ನು ನೀಡಿದ್ದು ವಿಶೇಷ.

ವಿಜಯವಾಡದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೂಪರ್‌ಸ್ಟಾರ್ ರಜನಿಕಾಂತ್, ನಟ ಚಿರಂಜೀವಿ, ತೆಲಂಗಾಣ ಮಾಜಿ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಮತ್ತು ಹಲವಾರು ನಾಯಕರು ಉಪಸ್ಥಿತರಿದ್ದರು.

2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 175 ಸ್ಥಾನಗಳಲ್ಲಿ 164 ಸ್ಥಾನಗಳನ್ನು ಗಳಿಸಿದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA)ಗೆ ಪ್ರಚಂಡ ವಿಜಯವನ್ನು ನೀಡಿತ್ತು. ಟಿಡಿಪಿ ಏಕಾಂಗಿಯಾಗಿ 135 ಸ್ಥಾನಗಳನ್ನು ಗೆದ್ದರೆ, ಪವನ್ ಕಲ್ಯಾಣ್ ಅವರ ಜನಸೇನೆ 21 ಸ್ಥಾನಗಳನ್ನು ಗಳಿಸಿತ್ತು ಮತ್ತು ಬಿಜೆಪಿ 8 ಸ್ಥಾನಗಳನ್ನು ಗಳಿಸಿತ್ತು. ಆಡಳಿತರೂಢ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಕೇವಲ 11 ಸ್ಥಾನಗಳನ್ನು ಮಾತ್ರ ಗಳಿಸಿಕೊಂಡಿತ್ತು.

ತೆಲಂಗಾಣ ಸಿಎಂ ಆಗುತ್ತಾರೆಯೇ ರೇವಂತ್‌ ರೆಡ್ಡಿ!
ಬೆಂಗಳೂರು: ಕೆ ಚಂದ್ರಶೇಖರ್ ರಾವ್  (ಕೆಸಿಆರ್‌) ಮತ್ತು ಅವರ ಭಾರತ ರಾಷ್ಟ್ರ ಸಮಿತಿ  -ಬಿಆರ್‌ಎಸ್‌ಗೆ (ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ) ತೆಲಂಗಾಣ ಚುನಾವಣೆಯಲ್ಲಿ ಭಾರೀ ಹಿನ್ನಡೆಯಲ್ಲಿದ್ದು, ಕಾಂಗ್ರೆಸ್ ಸ್ಪಷ್ಟ ಗೆಲುವಿನತ್ತ ಸಾಗುತ್ತಿದೆ.

ಇಲ್ಲಿ ನೋಡಿ: ತೆಲಂಗಾಣ ಚುನಾವಣಾ – 2023 ಫಲಿತಾಂಶ

ಸದ್ಯ ಕಾಂಗ್ರೇಸ್‌ ಗೆಲುವಿನ ರೂವಾರಿಯಾಗಿರುವ, ತೆಲಂಗಾಣದಲ್ಲಿ ಕಾಂಗ್ರೇಸ್‌ ಮತ್ತೆ ಮೈಕೊಡವಿ ಎದ್ದು ನಿಲ್ಲಲು ಕಾರಣಕರ್ತನಾದ ಫೈರ್‌ ಬ್ರಾಂಡ್‌ ನಾಯಕ ರೇವಂತ್‌ ರೆಡ್ಡಿ ಆರು ವರ್ಷದ ಹಿಂದೆ ಕಾಂಗ್ರೇಸ್‌ನಲ್ಲಿಯೇ ಇರಲಿಲ್ಲ!

ಕೊಡಂಗಲ್ ಕ್ಷೇತ್ರವನ್ನು ಗೆದ್ದಿರುವ, ಕಾಮರೆಡ್ಡಿಯಲ್ಲೂ ಕೆಸಿಆರ್ ವಿರುದ್ಧ ಸ್ಪರ್ಧಿಸಿದ ಎ ರೇವಂತ್ ರೆಡ್ಡಿ 2017 ರಲ್ಲಿ ತೆಲುಗು ದೇಶಂ ಪಕ್ಷದಿಂದ (ಟಿಡಿಪಿ) ಕಾಂಗ್ರೆಸ್ ಸೇರಿದವರು.

ಕಾಂಗ್ರೇಸ್‌ ಸೇರಿ ನಾಲ್ಕೇ ವರ್ಷಗಳಲ್ಲಿ ಆಗಿನ ರಾಜ್ಯ ಕಾಂಗ್ರೇಸ್‌ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಸೇರಿದಂತೆ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಅಸಮಾಧಾನದ ಹೊರತಾಗಿಯೂ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ (ಟಿಪಿಸಿಸಿ) ಅಧ್ಯಕ್ಷರಾಗಿ  ಅಧಿಕಾರ ವಹಿಸಿಕೊಂಡರು.

ಸದ್ಯ ತೆಲಂಗಾಣದಲ್ಲಿ ಕಾಂಗ್ರೇಸ್‌ ನೋಡುತ್ತಿರುವ ಈ ಬೃಹತ್ ಗೆಲುವನ್ನು ಸ್ವತಃ ಕಾಂಗ್ರೆಸ್‌ಗೆ ನಂಬಲಾಗದಂತಿದೆ. ಮುಖ್ಯವಾಗಿ ರೇವಂತ್ ಕಳೆದ ವರ್ಷವಷ್ಟೇ ಪಕ್ಷದ ಒಳಗೆ ಎದ್ದಿದ್ದ ಪೂರ್ಣ ಪ್ರಮಾಣದ ಬಂಡಾಯವನ್ನು ಹತ್ತಿಕ್ಕಲು ಹೋರಾಡುತ್ತಿದ್ದರೆ, ದಾಸೋಜು ಶ್ರವಣ್ ಮತ್ತು ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿಯಂತಹ ಹಿರಿಯ ನಾಯಕರು ಕ್ರಮವಾಗಿ ಬಿಆರ್‌ಎಸ್ ಮತ್ತು ಬಿಜೆಪಿಗೆ ಸೇರಿದ್ದರು. ರಾಜ್ ಗೋಪಾಲ್ ರೆಡ್ಡಿ ಇತ್ತೀಚೆಗೆ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದು, ಈ ಚುನಾವಣೆಯಲ್ಲಿ ಮುನುಗೋಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ರೇವಂತ್ ಸದ್ಯ ಕಾಂಗ್ರೆಸ್ ಪಕ್ಷದ ಸಂಭಾವ್ಯ ಸಿಎಂ ಮುಖವೂ ಆಗಿದ್ದಾರೆ. ಆದರೆ ಹೈಕಮಾಂಡ್ ಅವರನ್ನು ಹಿರಿಯ ನಾಯಕರಾದ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಉತ್ತರಕುಮಾರ್ ರೆಡ್ಡಿಯವರನ್ನು ಬಿಟ್ಟು ಸಿಎಂ ಹುದ್ದೆಗೆ ಆಯ್ಕೆ ಮಾಡುತ್ತದೆಯೇ ಎಂಬ ಪ್ರಶ್ನೆಯೊಂದಿದೆ.

ಆದರೆ, ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ನಡೆಸಿದ ಸರ್ವೇಯಲ್ಲಿ ಶೇ.21ರಷ್ಟು ಮತದಾರರು ರೇವಂತ್ ಸಿಎಂ ಆಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಬಿವಿಪಿಯಿಂದ ಟಿಡಿಪಿಗೆ – ಟಿಡಿಪಿಯಿಂದ ಕಾಂಗ್ರೆಸ್‌ಗೆ!

ಐವತ್ನಾಲ್ಕು ವರ್ಷ ಪ್ರಾಯದ ರೇವಂತ್ ರೆಡ್ಡಿ 2006 ರಲ್ಲಿ ಜೆಡ್‌ಪಿಟಿಸಿ – ಜಿಲ್ಲಾ ಪಂಚಾಯತ್‌ ಟೆರಿಟೋರಿಯಲ್‌ ಕಮಿಟಿಯ ಪ್ರತಿನಿಧಿಯಾಗಿ, 2008 ರಲ್ಲಿ ಸ್ವತಂತ್ರ ಎಂಎಲ್‌ಸಿಯಾಗಿ, 2009 ರಲ್ಲಿ ಸಂಯುಕ್ತ ಆಂಧ್ರಪ್ರದೇಶದ ಕೊಡಂಗಲ್ ಕ್ಷೇತ್ರದಿಂದ ತಮ್ಮ ಮೊದಲ ಅಸೆಂಬ್ಲಿ ಚುನಾವಣೆಯನ್ನು ಗೆದ್ದರು. ಆಗ ಅವರು ಓರ್ವ ಸುಶಿಕ್ಷಿತ ಟಿಡಿಪಿ ನಾಯಕರಾಗಿ, ಆಂಧ್ರಪ್ರದೇಶದಲ್ಲಿ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡುರವರ ಜೊತೆಗೆ ನಿಕಟ ಸಂಬಂಧವನ್ನು ಹೊಂದಿದ್ದವರು.

ರೇವಂತ್‌ ಐದು ಬಾರಿ ಶಾಸಕರಾಗಿದ್ದ ಕಾಂಗ್ರೆಸ್‌ನ ಗುರುನಾಥರೆಡ್ಡಿ ಅವರನ್ನು ಸೋಲಿಸಿದ್ದು ಸಣ್ಣ ವಿಷಯವೇನಲ್ಲ. ಔಟ್‌ಲುಕ್‌ಗೆ ನೀಡಿದ ಸಂದರ್ಶನದಲ್ಲಿ ರೇವಂತ್ “‌ನನ್ನ ಕ್ಷೇತ್ರ ಎಲ್ಲಿದೆ ಎಂಬುದೇ ನನಗೆ ತಿಳಿದಿರಲಿಲ್ಲ” ಎಂದು ಹೇಳಿದ್ದರು.

ನಾನು ಆ ವಿಧಾನಸಭಾ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದೆ. ನನಗೆ ಪ್ರಚಾರಕ್ಕೆ ಇದ್ದದ್ದು ಕೇವಲ 14 ದಿನಗಳು. ಆದರೆ ನಾನು 7,500 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದೆ. ಆಗ ನನ್ನ ವಿರುದ್ಧ ಇದ್ದದ್ದು ಕಾಂಗ್ರೆಸ್. ಕೊಡಂಗಲ್ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು, ಅಲ್ಲಿ ಐದು ಬಾರಿ ಗೆದ್ದಿತ್ತು - ರೇವಂತ್‌ ರೆಡ್ಡಿ

ರೇವಂತ್‌ ಎರಡನೇ ಬಾರಿಗೆ 2014 ರಲ್ಲಿ ಟಿಡಿಪಿಯಿಂದ ಕೊಡಂಗಲ್ ಗೆದ್ದರು. ಆದರೂ, ಮೇ 2015 ರಲ್ಲಿ, ಎಂಎಲ್‌ಸಿ ಚುನಾವಣೆಯಲ್ಲಿ ಟಿಡಿಪಿ ಅಭ್ಯರ್ಥಿಗೆ ಮತ ಹಾಕಲು ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೀಫನ್‌ಸನ್‌ಗೆ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ರೇವಂತ್‌ ಅವರನ್ನು ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿತು.

2017 ರಲ್ಲಿ ಕಾಂಗ್ರೇಸ್‌ಗೆ!

ಕಾಂಗ್ರೆಸ್‌ ಸೇರಿ ತಮಗೆ ಸಿಕ್ಕಿದ ಟಿಕೆಟ್‌ನಲ್ಲಿ ಕೊಡಂಗಲ್‌ನಿಂದ ಸ್ಪರ್ಧಿಸಿದ ರೇವಂತ್, ಬಿಆರ್‌ಎಸ್‌ನ (ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ) ಪಟ್ನಂ ಮಹೇಂದರ್ ರೆಡ್ಡಿ ವಿರುದ್ಧ ಸೋತರು. 2018 ರ ಚುನಾವಣೆಯ ಸಮಯದಲ್ಲಿ, ಕೆಸಿಆರ್ ಅವರ ರ್ಯಾಲಿಯನ್ನು ತಡೆದು ನಿಲ್ಲಿಸುತ್ತೇನೆ ಎಂದ ರೇವಂತ್ ಅವರನ್ನು ಅವರ ಮನೆಯಿಂದಲೇ ಬಂಧಿಸಲಾಯಿತು.

కొడంగల్ నియోజకవర్గ కాంగ్రెస్ పార్టీ ఎమ్మెల్యేగా విజయం సాధించిన శ్రీ ఎనుముల రేవంత్ రెడ్డి గారికి అభినందనలు.#CongressWinningTelangana2023 pic.twitter.com/Ga0gzFnw4n
— Telangana Congress (@INCTelangana) December 3, 2023

ಅಸೆಂಬ್ಲಿ ಚುನಾವಣೆಯಲ್ಲಿ ಸೋತ ರೇವಂತ್, ಕೆಲವು ತಿಂಗಳ ನಂತರ ಮಲ್ಕಾಜ್‌ಗಿರಿಯಿಂದ 2019 ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದರು.

ರೇವಂತ್ ವಿದ್ಯಾರ್ಥಿಯಾಗಿದ್ದಾಗ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಎಬಿವಿಪಿ ಸದಸ್ಯರಾಗಿದ್ದರು. ಈ ಚುನಾವಣಾ ಪ್ರಚಾರದ ಉದ್ದಕ್ಕೂ, ಎಐಎಂಐಎಂ ಅಧ್ಯಕ್ಷ ಮತ್ತು ಬಿಆರ್‌ಎಸ್‌  ಅನೌಪಚಾರಿಕ ದೋಸ್ತಿ ಅಸಾದುದ್ದೀನ್ ಓವೈಸಿ ರೇವಂತ್‌ರನ್ನು ‘ಆರ್‌ಎಸ್‌ಎಸ್‌ ಅಣ್ಣಾ’ ಎಂದೇ ಕರೆದಿದ್ದರು.

ಈಗಿನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿಯವರಿಗೆ ಆರ್‌ಎಸ್‌ಎಸ್ ಹಿನ್ನೆಲೆ ಇದೆ ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ. ಅವರು ಎಬಿವಿಪಿಯಲ್ಲಿ ಕೆಲಸ ಮಾಡಿದವರು, ಅವರು ಬಿಜೆಪಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಶ್ರೀ ಕಿಶನ್ ರೆಡ್ಡಿ 1999 ರಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಆಗ ಶಾಸಕರಾಗಿದ್ದ ಶ್ರೀ ಸೈಯದ್ ಸಜ್ಜದ್ ವಿರುದ್ಧ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ರೇವಂತ್ ಬಿಜೆಪಿಯಲ್ಲಿ ಕೆಲಸ ಮಾಡುವುದನ್ನು ನಾನು ನೋಡಿದ್ದೆ - ಅಸಾದುದ್ದೀನ್ ಓವೈಸಿ

ರೇವಂತ್ ತಮ್ಮ ರಾಜಕೀಯ ಏರಿಳಿತದ ಸಮಯದಲ್ಲಿಯೂ ಕೆಸಿಆರ್‌ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿ ಫೈರ್‌ಬ್ರಾಂಡ್‌ ನಾಯಕರಾದವರು. ಹಾಗೆಂದು, ಅವರು ಎಲ್ಲಾ ಕಾಂಗ್ರೆಸ್ ನಾಯಕರೊಂದಿಗೆ ಆತ್ಮೀಯತೆಯನ್ನು ಇಟ್ಟುಕೊಂಡಿದ್ದಾರೆ ಎಂದರ್ಥವಲ್ಲ.

ರೇವಂತ್ ವಿರುದ್ಧ ಕಾಂಗ್ರೇಸ್‌ನಲ್ಲೇ ಬಂಡಾಯ!

ತೆಲಂಗಾಣದಲ್ಲಿ ಕಾಂಗ್ರೆಸ್ ಸೋಲಿನ ನಂತರ ರೇವಂತ್ ರೆಡ್ಡಿ ಟಿಪಿಸಿಸಿ ಮುಖ್ಯಸ್ಥರಾದರು. ಸುಮಾರು ಎರಡು ವರ್ಷಗಳ ಹಿಂದಿನವರೆಗೂ ತೆಲಂಗಾಣದಲ್ಲಿ ಕಾಂಗ್ರೆಸ್‌ನ ಸ್ಥಿತಿ ಹೀನಾಯವಾಗಿತ್ತು. 2018 ರಲ್ಲಿ ಕೇವಲ ಶೇ.28 ಮತ ಹಂಚಿಕೆ ಮತ್ತು 119 ಸದಸ್ಯರ ವಿಧಾನಸಭೆಯಲ್ಲಿ 19 ಸ್ಥಾನಗಳನ್ನು ಪಡೆದು ಹೀನಾಯ ಸೋಲನ್ನು ಕಂಡಿತ್ತು. ನಂತರ 2019 ರ ಲೋಕಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ಗಳಿಸಿತ್ತು. ಕಾಂಗ್ರೇಸ್‌ಗೆ ಜೀವ ಉಳಿಸಿಕೊಳ್ಳಲು ಗುಟುಕು ನೀರಿನ ಅಗತ್ಯ ಇತ್ತು.

ಆದರೆ, ನಂತರದ ಉಪಚುನಾವಣೆಗಳಲ್ಲೂ ಅದು ಆಗಲೇ ಇಲ್ಲ. ಹುಜೂರ್‌ನಗರ ಮತ್ತು ನಾಗಾರ್ಜುನ ಸಾಗರ ಸೇರಿದಂತೆ ಕಾಂಗ್ರೆಸ್ ಪ್ರಬಲವಾಗಿದ್ದಲ್ಲೂ ಇದು ಸಾದ್ಯವಾಗಲಿಲ್ಲ. ಜಿಎಚ್‌ಎಂಸಿ ಚುನಾವಣೆಯಲ್ಲಿ ಬಿಜೆಪಿಯ ಏಳಿಗೆಯೊಂದಿಗೆ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.

ತೆಲಂಗಾಣ ಕಾಂಗ್ರೇಸ್‌ ನಾಯಕತ್ವದ ಬದಲಾವಣೆಯನ್ನು ಬಯಸಿತ್ತು, ಆದರೆ 2017 ರಲ್ಲಿ ಪಕ್ಷಕ್ಕೆ ಸೇರಿದ್ದ ರೇವಂತ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದಾಗ, ಹಿರಿಯ ನಾಯಕರಿಗೆ ತೀವ್ರ ಮುಖಭಂಗವಾಯಿತು.2022 ರಲ್ಲಿ ತೆಲಂಗಾಣ ಕಾಂಗ್ರೇಸ್‌ನ ಆಂತರಿಕ ಒಳಜಗಳ ಇನ್ನಷ್ಟು ಹೆಚ್ಚಾಯಿತು. ಹಿರಿಯ ಕಾಂಗ್ರೆಸ್ ನಾಯಕ ದಾಸೋಜು ಶ್ರವಣ್ ರಾಜ್ಯಾಧ್ಯಕ್ಷರನ್ನು ದೂರುತ್ತಲೇ ಪಕ್ಷವನ್ನು ತೊರೆದರು.

ರೇವಂತ್ ಅವರು ಪಕ್ಷವನ್ನು ಹೆಚ್ಚು ಆಕ್ರಮಣಕಾರಿಯಾಗಿ ಸಮರ್ಥಿಸುತ್ತಿದ್ದಾರೆ. ಅವರು ಎಐಸಿಸಿಯ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಫ್ರಾಂಚೈಸಿಯಾಗಿ ಟಿಪಿಸಿಸಿಯನ್ನು(ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ) ನಡೆಸುತ್ತಿದ್ದಾರೆ...ಅವರು ಪಕ್ಷವನ್ನು ತನ್ನ ಖಾಸಗಿ ಆಸ್ತಿ ಎಂದು ಭಾವಿಸಿಕೊಂಡಿದ್ದಾರೆ - ದಾಸೋಜು ಶ್ರವಣ್

ಮಾತ್ರವಲ್ಲ, ರೇವಂತ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದಾದ ಬೆನ್ನಲ್ಲೇ, ರೇವಂತ್ ಅವರನ್ನು ಮತ್ತೊಬ್ಬ ಕಾಂಗ್ರೇಸ್‌ ನಾಯಕ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ (ಮುನುಗೋಡು ಶಾಸಕರಾಗಿದ್ದವರು) ಟೀಕಿಸುತ್ತಾ ಪಕ್ಷವನ್ನು ತೊರೆದರು. ಇವರು “ ರೇವಂತ್ ಅವರ ಆಡಳಿತ ಶೈಲಿ ಕಬ್ಬಿಣದ ಕಡಲೆ ಮತ್ತು ಎಲ್ಲಾ ನಾಯಕರನ್ನು ಹೊಂದಿಸಿಕೊಂಡು ಹೋಗುವ ಕಾಂಗ್ರೆಸ್‌ನ ಸ್ವಭಾವ ಇವರಿಗೆ ಸರಿಹೊಂದುವುದಿಲ್ಲ,” ಎಂದು ಟೀಕಿಸಿದ್ದರು.

ಕರ್ನಾಟಕ ಚುನಾವಣೆಯ ನಂತರ ಬಿಜೆಪಿ ವಿರುದ್ಧ ಕಾಂಗ್ರೆಸ್ ಭಾರಿ ಗೆಲುವು ದಾಖಲಿಸಿದಾಗ ತೆಲಂಗಾಣ ಕಾಂಗ್ರೇಸ್‌ನಲ್ಲಿ ಒಂದು ರೀತಿಯ ಆತ್ಮವಿಶ್ವಾಸ ಬೆಳೆಯಿತು. ಈಗ ತೆಲಂಗಾಣವೂ ಕಾಂಗ್ರೇಸ್‌ ಗೆಲುವನ್ನು ನೋಡಲು ಸಿದ್ದವಾಗಿದೆ. ರೇವಂತ್‌ ರೆಡ್ಡಿ ಮುತಾಲಿಕೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೇಸ್‌ ಗೆಲುವಿನ ಹಾದಿಯಲ್ಲಿ ಸಾಗಿರುವುದರ ಹೆಗ್ಗಳಿಕೆ ರೇವಂತ್‌ ಪಾಲಾಗುತ್ತದೆಯೇ? ಒಂದು ವೇಳೆ ಹಾಗೇನಾದರೂ ಆದರೆ, ಈಗಾಗಲೇ ನಲ್ಗೊಂಡ ವಲಯದ ಮೇಲೆ ಹಿಡಿತ ಹೊಂದಿರುವ ಕೋಮಟಿರೆಡ್ಡಿ ಸಹೋದರರಂತಹ ಕಾಂಗ್ರೇಸ್‌ ನಾಯಕರು ರೇವಂತ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಇವರು ಸುಮ್ಮನೆ ಇರುತ್ತಾರೆಯೇ? ಹೈಕಮಾಂಡ್‌ ಕೃಪಾಶೀರ್ವಾದ ಇರುವ ರೇವಂತ್ ಸಿಎಂ ಸ್ಥಾನ ಅಲಂಕರಿಸುತ್ತಾರೆಯೇ…. ಎಂದು ಕಾದು ನೋಡಬೇಕು.