Team india – Peepal Media

ವಿಶ್ವಕಪ್‌ ಫೈನಲ್:‌ ಆಸ್ಟ್ರೇಲಿಯಾ ತಂಡವನ್ನು ಹಂಗಿಸಿದ್ದೇಕೆ ಐಸ್‌ ಲ್ಯಾಂಡ್‌ ಕ್ರಿಕೆಟ್?
ಆಸ್ಟ್ರೇಲಿಯಾಗೆ ಸಂದೇಶ: ಫೈನಲ್‌ ಗೂ ಮುನ್ನ ಎಲ್ಲವನ್ನು ಒಮ್ಮೆ ಚೆಕ್‌ ಮಾಡಿಕೊಳ್ಳಿ. ಟಾಸ್‌ ಗೆ ಬಳಸುವ ನಾಣ್ಯದ ಲೋಹವನ್ನು ಪರಿಶೀಲಿಸಿ, ಅದರ ಮೇಲಿನ ಮಾರ್ಕ್‌ ಗಳನ್ನು ನೋಡಿಕೊಳ್ಳಿ. ಪಿಚ್‌ ಮೇಲೆ ಉರುಳಿಸುವ ರೋಲರ್‌ ಗಳ ತೂಕವನ್ನೊಮ್ಮೆ ನೋಡಿಕೊಂಡುಬಿಡಿ. ಡ್ರೆಸ್ಸಿಂಗ್‌ ರೂಮ್‌ ನ ಗೋಡೆಗಳಿಗೆ ಬಳಿಯಲಾದ ಪೇಂಟ್‌ ನಲ್ಲಿ ವಿಷಕಾರಿ ವಸ್ತುಗಳು ಇವೆಯಾ ನೋಡಿಕೊಳ್ಳಿ. ಹಾಗೇ ಚಂದ್ರ ಮತ್ತು ಬುಧ ಗ್ರಹಗಳ ಸಂಯೋಜನೆಯನ್ನೂ ಒಮ್ಮೆ ಗಮನಿಸಿಕೊಳ್ಳಿ. ಏನನ್ನೂ ಬಿಡಬೇಡಿ. ಕೊನೆಗೆ ನೀವು ಅಭದ್ರತಾ ಭಾವದಲ್ಲಿ ನರಳುವುದು ಬೇಡ ನೋಡಿ.

ಹೀಗೊಂದು ಪೋಸ್ಟ್‌ ಎಕ್ಸ್‌ (ಟ್ವಿಟರ್)‌ ನಲ್ಲಿ ಸಂಚಲನ ಮೂಡಿಸಿದೆ. ಹೀಗೆ ಪೋಸ್ಟ್‌ ಮಾಡಿರುವುದು ಐಸ್‌ ಲ್ಯಾಂಡ್‌ ಕ್ರಿಕೆಟ್‌ ಸಂಸ್ಥೆ. ನಾಳೆ (19-11-2023)ರಂದು ಅಹಮದಾಬಾದ್‌ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ ನಡೆಯಲಿದೆ. ಇಡೀ ಜಗತ್ತಿನ ಕಣ್ಣು ಇಲ್ಲಿದೆ. ಹೀಗಿರುವಾಗ ಐಸ್‌ ಲ್ಯಾಂಡ್‌ ಇಂಥ ಸಂದೇಶವನ್ನು ನೀಡಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಪಂದ್ಯಾವಳಿ ಸಂದರ್ಭದಲ್ಲಿ ಹಲವು ಬಗೆಯ ವಿವಾದಗಳು ಉದ್ಭವವಾಗಿವೆ. ಭಾರತ ಕ್ರಿಕೆಟ್‌ ತಂಡ ಆಡುವಾಗ ಅದಕ್ಕೆ ವಿಶೇಷ ಚೆಂಡುಗಳನ್ನು ಸಿದ್ಧಪಡಿಸಿ ಕೊಡಲಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ಆಟಗಾರನೊಬ್ಬ ಹೇಳಿದ್ದು ನಗೆಪಾಟಲಿಗೆ ಈಡಾಗಿತ್ತು. ಮುಂಬೈನ ಈಡನ್‌ ಗಾರ್ಡ ನಲ್ಲಿ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ಭಾರತ ತಂಡಕ್ಕೆ ಅನುಕೂಲಕರವಾದ ಹೊಸ ಪಿಚ್‌ ಸಿದ್ಧಪಡಿಸಲಾಯಿತು ಎಂಬ ವಿವಾದವೂ ಸೃಷ್ಟಿಯಾಯಿತು. ಭಾರತ ತಂಡದ ಸೂಚನೆಯ ಮೇರೆಗೆ ಪಿಚ್‌ ರೂಪಿಸಲಾಗಿದೆ ಎಂದು ಕೆಲವು ವರದಿಗಳು ಹೇಳಿದವು. ಇದಾದ ನಂತರ ಇದೇ ಪಂದ್ಯದ ಟಾಸ್‌ ಸಂದರ್ಭದಲ್ಲಿ ರೋಹಿತ್‌ ಶರ್ಮಾ ಟಾಸ್‌ ಎಸೆಯುವಾಗ ಕರಾಮತ್ತು ಮಾಡಿ ಗೆದ್ದರು ಎಂದೂ ಟೀಕೆಗಳು ವ್ಯಕ್ತವಾದವು.

ವಿದೇಶಿ ತಂಡಗಳು ಭಾರತದಲ್ಲಿ ಆಡುವಾಗೆಲ್ಲ ಭಾರತದ ಸ್ಪಿನ್ನರ್‌ ಗಳಿಗೆ ಅನುಕೂಲವಾಗುವ ಪಿಚ್‌ ಗಳನ್ನು ಸಿದ್ಧಪಡಿಸಲಾಗುತ್ತದೆ ಎಂಬ ಆರೋಪ ಇಂದಿನದಲ್ಲ. ಈ ಆರೋಪಕ್ಕೆ ಪ್ರತಿಯಾಗಿ, ನೀವು ವೇಗದ ಬೌಲರ್‌ ಗಳಿಗೆ ನೆರವಾಗುವ ಪಿಚ್‌ (ಬೌನ್ಸ್‌ ಮತ್ತು ಸ್ವಿಂಗ್)‌ ಸಿದ್ಧಪಡಿಸಿಕೊಳ್ಳಬಹುದು ಎಂಬುದಾದರೆ ನಾವೇಕೆ ಸ್ಪಿನ್ನರ್‌ ಗಳಿಗೆ ಅನುಕೂಲವಾಗುವ ಪಿಚ್‌ ಸಿದ್ಧಪಡಿಸಬಾರದು ಎಂಬ ಪ್ರತ್ಯುತ್ತರವೂ ಭಾರತದ ಕಡೆಯಿಂದ ಕೇಳಿಬಂದಿತ್ತು. ಆದರೆ ವಿಶೇಷವೆಂದರೆ ಈ ವಿಶ್ವಕಪ್‌ ನಲ್ಲಿ ಭಾರತದ ಸ್ಪಿನ್ನರ್‌ ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಿರುವುದು ವೇಗದ ಬೌಲರ್‌ ಗಳು. ಮಹಮದ್‌ ಶಮಿ, ಜಸ್ಪೀತ್‌ ಬುಮ್ರಾ ಎದುರಾಳಿ ಬ್ಯಾಟ್ಸ್‌ಮನ್‌ ಗಳ ನಿದ್ದೆಗೆಡಿಸಿದ್ದಾರೆ. ಹಾಗಿದ್ದರೆ ಸ್ಪಿನ್ನರ್‌ ಗಳಿಗೆ ಅನುಕೂಲವಾಗುವ ಪಿಚ್‌ನಲ್ಲಿ ಸೀಮರ್‌ ಗಳು ಹೇಗೆ ಸಫಲರಾಗಲು ಸಾಧ್ಯ ಎಂಬ ಪ್ರಶ್ನೆ ಏಳುತ್ತದೆ. ಹಾಗೆ ನೋಡಿದರೆ ಭಾರತದ ಪಿಚ್‌ ಗಳಲ್ಲಿ ಆರಂಭದ ಓವರುಗಳಲ್ಲಿ ವೇಗಿಗಳಿಗೆ, ಚೆಂಡು ಹಳೆಯದಾದ ಮೇಲೆ ಸ್ಪಿನ್ನರ್‌ ಗಳಿಗೆ ಅನುಕೂಲವಾಗುತ್ತದೆ. ಬುಮ್ರಾ-ಶಮಿ ರಿವರ್ಸ್‌ ಸ್ವಿಂಗ್‌ ಮಾಡುವುದರಿಂದ ಇನ್ನಿಂಗ್ಸ್‌ ಕೊನೆಯಲ್ಲೂ ಅವರು ವಿಕೆಟ್‌ ಗಳನ್ನು ಕೀಳುತ್ತಾರೆ.

ಭಾರತ ಈ ಬಾರಿ ಕ್ರಿಕೆಟ್‌ ವಿಶ್ವಕಪ್‌ ಗೆಲ್ಲಲು ಕುತಂತ್ರ ನಡೆಸುತ್ತಿದೆ ಎಂಬ ಹಲವು ವಿದೇಶಿ ಆಟಗಾರರ ಪ್ರೊಪಗಂಡಗಳಿಗೆ ಉತ್ತರವಾಗಿ ಐಸ್‌ ಲ್ಯಾಂಡ್‌ ಕ್ರಿಕೆಟ್‌ ಮಂಡಳಿ ಅತ್ಯಂತ ವ್ಯಂಗ್ಯವಾಗಿ ಪೋಸ್ಟ್‌ ಮಾಡಿ, ಎಲ್ಲ ಟೀಕಾಕಾರರಿಗೆ ಸರಿಯಾದ ಉತ್ತರ ನೀಡಿದೆ.

Message to the Aussies: check everything before the final. The metal and markings on the coin, the weight of the roller, the toxins in the dressing room's paint, the alignment of the Moon and Venus, etc. Leave nothing to chance, since you don't want to end up feeling insecure.
— Iceland Cricket (@icelandcricket) November 16, 2023

ಐಸ್‌ ಲ್ಯಾಂಡ್‌ ದೇಶ ತನ್ನದೇ ಕ್ರಿಕೆಟ್‌ ಮಂಡಳಿಯನ್ನು ಹೊಂದಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಸದಸ್ಯತ್ವ ಹೊಂದಿದೆ. ಐಸ್‌ ಲ್ಯಾಂಡ್‌ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್‌ ಕೂಡ ಜನಪ್ರಿಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೆಣೆಸಿ ಪ್ರವರ್ಧಮಾನಕ್ಕೆ ಬರುವ ಆಶಯ ಹೊಂದಿದೆ.

ಆಗಸ್ಟ್ 15 ರಂದು ಐರ್ಲೆಂಡ್‌ಗೆ ಹೋಗಲಿದೆ ಟೀಂ ಇಂಡಿಯಾ… ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ.. ಲೈವ್‌ ನೋಡೋದು ಎಲ್ಲಿ?
ಐರ್ಲೆಂಡ್ ವಿರುದ್ಧ ಭಾರತವು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಮೊದಲ ಟಿ20 ಪಂದ್ಯ ಆಗಸ್ಟ್ 18ರಂದು ನಡೆದರೆ, ಎರಡನೇ ಪಂದ್ಯ ಆಗಸ್ಟ್ 20 ರಂದು ನಡೆಯಲಿದೆ.

ಹಾಗೂ ಕೊನೆಯ ಮತ್ತು 3ನೇ ಪಂದ್ಯ ಆಗಸ್ಟ್ 22ರಂದು ನಡೆಯಲಿದೆ. ಡಬ್ಲಿನ್‌ನಲ್ಲಿರುವ ಮಲಾಹಿಡೆ ಕ್ರಿಕೆಟ್ ಸ್ಟೇಡಿಯಂ ಈ ಎಲ್ಲಾ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಐರ್ಲೆಂಡ್ ವಿರುದ್ಧದ ಈ ಟಿ20 ಸರಣಿಗೆ ಬಿಸಿಸಿಐ ಇನ್ನಷ್ಟು ಯುವ ಆಟಗಾರರನ್ನು ಆಯ್ಕೆ ಮಾಡಿದೆ.

ಭಾರತ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಮುಗಿದಿದೆ. ಇಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಗೆದ್ದ ಟೀಂ ಇಂಡಿಯಾ ಟಿ20 ಸರಣಿಯನ್ನು ಕಳೆದುಕೊಂಡಿತ್ತು. ಟಿ20 ಸರಣಿ ಸೋಲಿನಿಂದ ಒಂದಷ್ಟು ಪಾಠ ಕಲಿತಿರುವ ಭಾರತ ಯುವ ತಂಡ ಕೆರಿಬಿಯನ್ ಪ್ರವಾಸ ಮುಗಿಸಿದೆ. ಇದೀಗ ಭಾರತೀಯ ಕ್ರಿಕೆಟ್ ತಂಡ ಐರ್ಲೆಂಡ್‌ಗೆ ತೆರಳಲು ಸಿದ್ಧವಾಗಿದೆ.

ಐರ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ನಾಳೆ, ಆಗಸ್ಟ್ 15, ಸ್ವಾತಂತ್ರ್ಯ ದಿನದಂದು ಟೀಮ್ ಇಂಡಿಯಾ ಐರ್ಲೆಂಡ್‌ಗೆ ಪ್ರಯಾಣಿಸಲಿದೆ. ವೇಗಿ ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ಭಾರತ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಐ ಸರಣಿಯನ್ನು ಆಡಲಿದೆ.

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿ ಆಗಸ್ಟ್ 18ರಿಂದ ಆರಂಭವಾಗಲಿದೆ. ಈ ಉದ್ದೇಶಕ್ಕಾಗಿ ಟೀಂ ಇಂಡಿಯಾ ಆಗಸ್ಟ್ 15ರಂದು ಡಬ್ಲಿನ್‌ಗೆ ಹೋಗಲಿದೆ. ಈ ಟೂರ್ನಿಯಲ್ಲಿ ಭಾರತದ ಹಿರಿಯ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಗೆ ವಿಶ್ರಾಂತಿ ನೀಡಲಾಗಿದೆ.

ಐರ್ಲೆಂಡ್ ವಿರುದ್ಧ ಭಾರತ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಮೊದಲ ಟಿ20 ಪಂದ್ಯ ಆಗಸ್ಟ್ 18 ರಂದು ನಡೆದರೆ, ಎರಡನೇ ಪಂದ್ಯ ಆಗಸ್ಟ್ 20 ರಂದು ನಡೆಯಲಿದೆ. 3ನೇ ಪಂದ್ಯ ಆಗಸ್ಟ್ 22ರಂದು ನಡೆಯಲಿದೆ. ಡಬ್ಲಿನ್‌ನಲ್ಲಿರುವ ಮಲಾಹಿಡೆ ಕ್ರಿಕೆಟ್ ಸ್ಟೇಡಿಯಂ ಈ ಎಲ್ಲಾ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಭಾರತ ಮತ್ತು ಐರ್ಲೆಂಡ್ ನಡುವಿನ T20 ಸರಣಿಯು 7:30 PM IST ಕ್ಕೆ ಪ್ರಾರಂಭವಾಗಲಿದೆ. Viacom 18 ನೇರ ಪ್ರಸಾರ ಹಕ್ಕುಗಳನ್ನು ಹೊಂದಿದೆ. ಸ್ಪೋರ್ಟ್ 18 ನಲ್ಲಿ ಲೈವ್ ವೀಕ್ಷಿಸಬಹುದು.
ಮತ್ತು ಜಿಯೋ ಸ್ಟ್ರೀಮಿಂಗ್ ಹೊಂದಿದೆ.

ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ಇನ್ನಷ್ಟು ಯುವ ಆಟಗಾರರನ್ನು ಆಯ್ಕೆ ಮಾಡಿದೆ. ರುತುರಾಜ್ ಗಾಯಕ್ವಾಡ್ ಅವರಿಗೆ ಉಪನಾಯಕತ್ವ ನೀಡಲಾಗಿದೆ. ಪ್ರಸಿದ್ಧ್ ಕೃಷ್ಣ ಮತ್ತು ಶಿವಂ ದುಬೆ ತಂಡಕ್ಕೆ ಮರಳಿದರೆ, ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾಗೆ ಅವಕಾಶ ಸಿಕ್ಕಿತು. ಮುಂಬರುವ ಏಷ್ಯಾ ಕಪ್, ಐಸಿಸಿ ಏಕದಿನ ವಿಶ್ವಕಪ್‌ಗೆ ತಂಡವನ್ನು ಕಟ್ಟಲು ಇದು ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತ ಟಿ20 ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಶಾಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ವಾಷಿಂಗ್ಟನ್ ಸುಂದರ್ ಸುಂದರ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ.

ಐರ್ಲೆಂಡ್ T20 ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಲ್ಬಿರ್ನಿ, ರಾಸ್ ಅಡೈರ್, ಲೋರ್ಕನ್ ಟಕರ್, ಹ್ಯಾರಿ ಟಕರ್, ಕರ್ಟಿಸ್ ಕಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಥಿಯೋ ವೈಟ್ ವ್ಯಾನ್ ವರ್ಕ್‌ಹ್ಯಾಮ್ .

ಟೀಂ ಇಂಡಿಯಾವನ್ನು ಕಾಡುತ್ತಿರುವ ಭಯ.. ನಾಲ್ಕನೆಯವನಾಗಿ ಈ ಆಟಗಾರನೇ ಸರಿಯೆನ್ನುತ್ತಿವೆ ಅಂಕಿ ಅಂಶಗಳು…
ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಅದಕ್ಕೂ ಮುನ್ನ ಟೀಂ ಇಂಡಿಯಾ ಏಷ್ಯಾಕಪ್ ಗೆ ಸಜ್ಜಾಗಬೇಕಿದೆ. ಆದರೆ ಈ ಎರಡು ಪ್ರತಿಷ್ಠಿತ ಟೂರ್ನಿಗಳಿಗೆ ಭಾರತ ಬಲಿಷ್ಠ ತಂಡ ಕಟ್ಟಬೇಕಿದೆ.

ಅದರಲ್ಲೂ 4ನೇ ಕ್ರಮಾಂಕದಲ್ಲಿ ಬ್ಯಾಟರ್ ಯಾರು ಎಂಬುದು ಸ್ಪಷ್ಟವಾಗಬೇಕಿದೆ. ಏಕೆಂದರೆ ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಶ್ರೇಯಸ್ ಅಯ್ಯರ್ ಈಗ ತಂಡದಲ್ಲಿ ಇಲ್ಲ. ಅವರು ಏಷ್ಯಾಕಪ್‌ನಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏಷ್ಯಾಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಟೀಂ ಇಂಡಿಯಾದ 4ನೇ ಕ್ರಮಾಂಕದ ಬ್ಯಾಟಿಂಗ್ ಇನ್ನೂ ನಿರ್ಧಾರವಾಗಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಅನೇಕ ಆಟಗಾರರು 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೂ ಯಾರೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಇದು ಟೀಂ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾಗೆ ಮರಳುವುದು ಅನಿವಾರ್ಯವಾಗಿದೆ. ಏಕೆಂದರೆ ಅಯ್ಯರ್ ಕಳೆದ ಮೂರು ವರ್ಷಗಳಲ್ಲಿ ಭಾರತದ ಪರ ನಾಲ್ಕನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಅದಕ್ಕಾಗಿಯೇ ಶ್ರೇಯಸ್ ಏಷ್ಯಾಕಪ್‌ನಲ್ಲಿ ಪುನರಾಗಮನಕ್ಕಾಗಿ ಕಾಯುತ್ತಿದ್ದಾರೆ. 2019ರ ಏಕದಿನ ವಿಶ್ವಕಪ್ ಬಳಿಕ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದ 4ನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಶ್ರೇಯಸ್ ಅಯ್ಯರ್ ಬದಲಿಗೆ…

ಅಲ್ಲದೆ, ಕೊನೆಯ ODI ವಿಶ್ವಕಪ್ ನಂತರ, ಅವರು ಭಾರತಕ್ಕಾಗಿ ನಾಲ್ಕನೇ ಕ್ರಮಾಂಕದಲ್ಲಿ ಆಡಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಅಯ್ಯರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 47.35ರ ಸರಾಸರಿಯಲ್ಲಿ ಒಟ್ಟು 805 ರನ್ ಗಳಿಸಿದ್ದರು. ಹಾಗಾಗಿಯೇ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ ಶ್ರೇಯಸ್ ಅಯ್ಯರ್ ಅನಿವಾರ್ಯ ಎಂದೇ ಹೇಳಬಹುದು. ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಕಾರಣ ಕಳೆದ ಐದಾರು ತಿಂಗಳಿನಿಂದ ಭಾರತ ತಂಡದಿಂದ ಹೊರಗುಳಿದಿದ್ದರು. ಈಗಷ್ಟೇ ಚೇತರಿಸಿಕೊಂಡಿರುವ ಅಯ್ಯರ್ ಬ್ಯಾಟಿಂಗ್ ಪ್ರಾಕ್ಟೀಸ್ ಆರಂಭಿಸಿದ್ದಾರೆ. ಆದರೆ ಅವರು 50 ಓವರ್‌ಗಳ ಪಂದ್ಯವನ್ನು ಆಡಲು ಸಂಪೂರ್ಣವಾಗಿ ಫಿಟ್ ಆಗಿದ್ದಾರೆಯೇ‌, ಇಲ್ಲವೇ ಎಂಬ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಅದಕ್ಕಾಗಿಯೇ ಏಷ್ಯಾಕಪ್‌ಗೆ ತಂಡವನ್ನು ಆಯ್ಕೆ ಮಾಡುವ ಮುನ್ನ ಶ್ರೇಯಸ್ ಅಯ್ಯರ್‌ಗೆ ಫಿಟ್‌ನೆಸ್ ಪರೀಕ್ಷೆ ನಡೆಸಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ. ಅಯ್ಯರ್ ಅವರು ಏಷ್ಯಾಕಪ್‌ಗೆ ಫಿಟ್ ಆಗಿದ್ದರೆ ಮಾತ್ರ ಏಕದಿನ ವಿಶ್ವಕಪ್‌ಗೆ ಆಯ್ಕೆಯಾಗುತ್ತಾರೆ. ಸದ್ಯ ಆಯ್ಕೆ ಸಮಿತಿ ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದು, ಈ ವರದಿ ಬಂದ ನಂತರ ಏಷ್ಯಾಕಪ್ ತಂಡದ ಆಯ್ಕೆ ನಡೆಯಲಿದೆ.

ಕಳೆದ ಮೂರು ವರ್ಷಗಳಲ್ಲಿ ಟೀಂ ಇಂಡಿಯಾ ಪರ ನಾಲ್ಕನೇ ಸ್ಥಾನ ಪಡೆದಿದ್ದ ಶ್ರೇಯಸ್ ಅಯ್ಯರ್ ಆಯ್ಕೆ ಸದ್ಯ ಅನುಮಾನವಾಗಿದ್ದು, ಅಯ್ಯರ್ ಅನರ್ಹರಾದರೆ ಬದಲಿ ಆಟಗಾರನನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಟೀಂ ಇಂಡಿಯಾ ಹಿನ್ನಡೆ ಕಂಡರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಶ್ರೇಯಸ್ ಅಯ್ಯರ್ ಅವರಷ್ಟು ಉತ್ತಮ ಪ್ರದರ್ಶನವನ್ನು ಬೇರಾವ ಬ್ಯಾಟ್ಸ್ ಮನ್ ನೀಡುತ್ತಿಲ್ಲ.

ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಟಿ 20 ಪಂದ್ಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಭಾರತ
ಆಸ್ಟ್ರೇಲಿಯಾ ವಿರುದ್ಧದ ಯಶಸ್ವೀ ಸರಣಿಯ ನಂತರ ಈಗ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಟಿ 20 ಪಂದ್ಯಾವಳಿಗೆ ಮುನ್ನ  ಮತ್ತೊಂದು ಪ್ರಾಕ್ಟೀಸ್ ಸರಣಿ ಎದುರಿಸುತ್ತಿದೆ. ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 3 ಪಂದ್ಯಗಳ ಟಿ 20 ಸರಣಿ ಮತ್ತು 3 ಪಂದ್ಯಗಳ ಏಕದಿನ ಪಂದ್ಯಾವಳಿ ಆಡಲಿದೆ ಭಾರತ. ಇಂದಿನಿಂದ ಟಿ 20 ಸರಣಿ ಶುರುವಾಗಿದ್ದು ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಟಿ 20 ಸರಣಿಯಲ್ಲಿ ಭಾರತ ವಿಶ್ವಕಪ್ ಗೆ ಮುನ್ನ ಅಂತಿಮ ಹಂತದ ಅಭ್ಯಾಸ ನಡೆಸಲಿದೆ. ಈ ಪಂದ್ಯಾವಳಿಯಲ್ಲಿ ತನ್ನ ಎಲ್ಲ ಬ್ಯಾಟಿಂಗ್ ಮತ್ತು ಬೋಲಿಂಗ್ ವಿಭಾಗವನ್ನು ಒರೆಗೆ ಹಚ್ಚುವ ಇರಾದೆ ಭಾರತ ತಂಡದ್ದು. ಆದರೆ, ಪಂದ್ಯಾವಳಿಗೆ ಆಯ್ಕೆಯಾಗಿದ್ದ ಭಾರತದ ಬ್ಯಾಟಿಂಗ್ ಸ್ಟಾರ್ ದೀಪಕ್ ಹೂಡಾ ಗಾಯದ ಕಾರಣ ಕೊನೆಯ ಕ್ಷಣದಲ್ಲಿ ತಂಡದಿಂದ ಹೊರಗೆ ಬಿದ್ದಿದ್ದಾರೆ. ಅವರ ಜಾಗದಲ್ಲಿ ಇನ್ನೂ ಯಾರನ್ನೂ ಆಯ್ಕೆ ಮಾಡಿಲ್ಲವಾದ ಕಾರಣ, ಮೊದಲ ಪಂದ್ಯದಲ್ಲಿ ಭಾರತ ಇರುವ ಆರು ಜನ ಬ್ಯಾಟ್ಸ್ ಮನ್ ಗಳೊಂದಿಗೆ ಕಣಕ್ಕಿಳಿಯಬೇಕಾಗಿದೆ. ಇನ್ನು ಐದು ಜನ ಬೋಲರ್ ಗಳ ಆಯ್ಕೆಯಲ್ಲೂ ತಂಡಕ್ಕೆ ಹೆಚ್ಚು ತಲೆನೋವಿಲ್ಲ. ಹಿರಿಯ ಆಟಗಾರ ಭುವನೇಶ್ವರ್ ಕುಮಾರ್ ಈ ಪಂದ್ಯಾವಳಿಯಿಂದ ಹೊರಗೆ ಇರುವ ಕಾರಣ ಬೋಲಿಂಗ್ ಲೈನ್ ಅಪ್ ಅನ್ನು ಊಹೆ ಮಾಡುವುದು ಕಷ್ಟದ ಕೆಲಸವೇನಲ್ಲ. ಒಟ್ಟಿನಲ್ಲಿ ಈ ಬಾರಿ ವಿಶ್ವಕಪ್ ಟಿ 20 ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಭಾರತ ಈ ಪಂದ್ಯಾವಳಿಯಲ್ಲಿ ಇನ್ನಷ್ಟು ಸುಧಾರಿಸಿಕೊಂಡು ತಯಾರಾಗುವ ಪ್ರಯತ್ನ ಮಾಡಲಿದೆ.

ಏಷ್ಯಾ ಕಪ್‌: ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ʼಸೂಪರ್‌ 4ʼ ಹಂತಕ್ಕೆ ಲಗ್ಗೆ ಇಟ್ಟ ಭಾರತ
ದುಬೈ: ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ರ್ಟೂನಿಯಲ್ಲಿ ಬುಧವಾರ ಹಾಂಗ್‌ಕಾಂಗ್‌ ವಿರುದ್ಧ 40 ರನ್‌ಗಳ ಅಂತರದಲ್ಲಿ ಗೆದ್ದ ಟೀಮ್‌ ಇಂಡಿಯಾ ʼಸೂಪರ್‌ ಫೋರ್‌ʼ ಹಂತಕ್ಕೆ ತಲುಪಿದೆ.

ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದ ಹಾಂಗ್‌ಕಾಂಗ್‌ ಬೌಲಿಂಗ್‌ ಆಯ್ದುಕೊಂಡಿತು. ಅದರಂತೆ ಇನ್ನಿಂಗ್ಸ್‌ ಆರಂಭಿಸಿದ ಭಾರತ ತಂಡ 20 ಓವರ್‌ ಗಳಲ್ಲಿ 2 ವಿಕೆಟ್‌ಗಳಿಗೆ 192 ರನ್‌ ಗಳಿಸಿತು.

ಭಾರತ ನೀಡಿದ 193 ರನ್‌ ಗಳ ಗುರಿ ಬೆನ್ನಟ್ಟಿದ ಹಾಂಗ್‌ಕಾಂಗ್ ಐದು ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಗೆ ಶಕ್ತವಾಯಿತು. ಭಾರತದ ಪರ ಔಟಾಗದೆ ವಿರಾಟ್‌ ಕೋಹ್ಲಿ (59) ಮತ್ತು ಸೂರ್ಯಕುಮಾರ್‌ ಯಾದವ್‌ ಗಳಿಸಿದ ಅರ್ಧ ಶತಕದ ಬಲದಿಂದ (68) ತಂಡದ ಗೆಲುವಿನ ರೂವಾರಿಯಾದರು.

ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡದ ನಾಯಕ ರೋಹಿತ್‌ ಶರ್ಮ 21 ಮತ್ತು ಉಪನಾಯಕ ರಾಹುಲ್‌ 36 ರನ್‌ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಫೀಲ್ಡಿಗಿಳಿದ ವಿರಾಟ್‌ ಕೋಹ್ಲಿ ಹಾಗೂ ರಾಹುಲ್‌ ಜೊತೆಯಾಟದಲ್ಲಿ 56 ರನ್‌ಗಳನ್ನು ಕಲೆಹಾಕಿದರು.

ಬಳಿಕ ಸೂರ್ಯಕುಮಾರ್‌ ಯಾದವ್‌ ಕ್ರೀಸಿಗಿಳಿದು ವಿರಾಟ್‌ ಕೋಹ್ಲಿ ಜೊತೆ ಇನ್ನಿಂಗ್ಸ್‌ ಕಟ್ಟಿದರು. ಇವರಿಬ್ಬರ 98 ರನ್‌ ಗಳ ಜೊತೆಯಾಟ ತಂಡದ ಗೆಲುವಿಗೆ ಕಾರಣವಾಯಿತು.

44 ಬಾಲ್‌ಗಳನ್ನು ಎದುರಿಸಿದ ವಿರಾಟ್‌ ಕೋಹ್ಲಿ ಔಟಾಗದೆ ಒಂದು ಬೌಂಡರಿ ಮೂರು ಸಿಕ್ಸರ್‌ ಸಿಡಿಸುವ ಮೂಲಕ 59 ರನ್‌ ಗಳಿಸಿದರು.

ನಂತರದಲ್ಲಿ ಬಿರುಸಿನ ಆಟವಾಡಿದ ಸೂರ್ಯಕುಮಾರ್‌ ಯಾದವ್‌ ಕೇವಲ 26 ಎಸೆತಗಳಲ್ಲಿ ಆರು ಬೌಂಡರಿ ಆರು ಸಿಕ್ಸರ್‌ ಗಳಿಸಿ 68 ರನ್‌ ಮೂಲಕ ಕ್ರೀಡಾಂಗಣದಲ್ಲಿ ಅಬ್ಬರಿಸಿದರು. ಕೊನೆಯ ಇಪ್ಪತ್ತನೇ ಓವರ್‌ ಒಂದರಲ್ಲೇ ಸೂರ್ಯಕುಮಾರ್‌ ಯಾದವ್‌ ನಾಲ್ಕು ಭರ್ಜರಿ ಸಿಕ್ಸರ್‌ ಸಹಿತ 26 ರನ್‌ ಕೊಳ್ಳೆ ಹೊಡೆದರು.

ಹಾಂಗ್‌ಕಾಂಗ್‌ ಪರ ಬಾಬರ್‌ ಹಯಾತ್‌ ಗರಿಷ್ಠ 41, ಕಿಂಚಿತ್ ಶಾ 30 ರನ್‌ ಗಳಿಸಿದರೆ ಹಾಗೂ ಜೀಶನ್‌ ಅಲಿ 26 ರನ್‌ ಗಳಿಸುವ ಮೂಲಕ ಅಜೇಯರಾದರು.

ಭಾರತದ ಪರ ಭುವನೇಶ್ವರ್‌ ಕುಮಾರ್‌, ಹರ್ಷದೀಪ್‌ ಸಿಂಗ್‌, ರವೀಂದ್ರ ಜಡೇಜಾ, ಅವೇಶ್‌ ಖಾನ್‌ ತಲಾ ಒಂದು ವಿಕೆಟ್‌ ಪಡೆದರು.

2022 ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ ಎರಡು ಪಂದ್ಯದಲ್ಲಿ (ಪಾಕಿಸ್ತಾನ ಮತ್ತು ಹಾಂಗ್‌ಕಾಂಗ್‌ ವಿರುದ್ಧ) ಟೀಮ್‌ ಇಂಡಿಯಾ ಜಯಭೇರಿ ಬಾರಿಸಿ ʼಸೂಪರ್‌ 4ʼ ಹಂತಕ್ಕೆ ಲಗ್ಗೆ ಇಟ್ಟಿದೆ.

That's that from our second match at the #AsiaCup2022. #TeamIndia win by 40 runs.

Scorecard – https://t.co/k9H9a0e758 #INDvHK   #AsiaCup2022 pic.twitter.com/fIPq7vPjdz
— BCCI (@BCCI) August 31, 2022

ಏಷ್ಯಾ ಕಪ್:‌ ಪಾಕಿಸ್ತಾನ ವಿರುದ್ಧ ಭಾರತ ಜಯ ಭೇರಿ
ದುಬೈ: ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ತನ್ನ ಮೊದಲ ಟಿ20 ಪಂದ್ಯವನ್ನು ಭಾರತ ತಂಡ 5 ವಿಕೆಟ್‌ ಅಂತರದಿಂದ ಗೆದ್ದು ಬೀಗಿತು.

ದುಬೈನ ಅಂತಾರಾಷ್ಟೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಹಣಾಹಣಿಯಲ್ಲಿ ಭಾರತ ಜಯಗಳಿಸುವುದರೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಟಾಸ್‌ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಭಾರತದ ವೇಗದ ಬೌಲರ್‌ ಗಳ ನಿಖರ ದಾಳಿಗೆ ಸಿಲುಕಿ ನಿಗದಿತ 19.5 ಓವರ್‌ಗಳಲ್ಲಿ 147 ರನ್‌ ಗಳಿಸುವುದರೊಂದಿಗೆ ಸರ್ವಪತನ ಕಂಡಿತು.

ಬಳಿಕ ಗುರಿ ಬೆನ್ನತ್ತಿದ ಭಾರತದ ಪರ ವಿರಾಟ್‌ ಕೋಹ್ಲಿ 35, ರವೀಂದ್ರ ಜಡೇಜಾ 35, ಹಾರ್ದಿಕ್‌ ಪಾಂಡ್ಯ 33 ರನ್‌ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಆಲ್‌ ರೌಂಡ್‌ ಪ್ರದರ್ಶನ ತೋರಿದ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ನಲ್ಲಿ ಮಿಂಚಿ ಮೂರು ವಿಕೆಟ್‌ ಗಳನ್ನು ಪಡೆದಿದ್ದಲ್ಲದೆ, ಬ್ಯಾಂಟಿಂಗ್‌ ನಲ್ಲೂ ಅಬ್ಬರಿಸಿ ಒಂದು ಸಿಕ್ಸರ್‌, ನಾಲ್ಕು ಬೌಂಡರಿಯೊಂದಿಗೆ ಅಜೇಯ 33 ರನ್‌ ಗಳನ್ನು ಗಳಿಸಿ ಗೆಲುವಿಗೆ ಕಾರಣರಾದರು. ಗೆಲುವಿನ ಹೊಡೆತವನ್ನು ಸಿಕ್ಸರ್‌ ನೊಂದಿಗೆ ಬಾರಿಸಿದ ಹಾರ್ದಿಕ್‌ ಪಾಂಡ್ಯ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಭಾರತದ ಪರ ವೇಗದ ಬೌಲರ್‌ ಭುವನೇಶ್ವರ ಕುಮಾರ್‌ ಪಾಕಿಸ್ತಾನದ ಅಪಾಯಕಾರಿ ಆಟಗಾರ ಬಾಬರ್‌ ಅಜಮ್‌ ವಿಕೆಟ್‌ ಸೇರಿದಂತೆ ನಾಲ್ಕು ವಿಕೆಟ್‌ ಗಳನ್ನು ಪಡೆದರು. ಯುವ ಆಟಗಾರ ಅರ್ಷದೀಪ್‌ ಸಿಂಗ್‌ ಎರಡು ವಿಕೆಟ್‌ ಗಳಿಸಿದರು. ಪಾಕಿಸ್ತಾನದ ಎಲ್ಲ ವಿಕೆಟ್‌ ಗಳನ್ನು ವೇಗದ ಬೌಲರ್‌ ಗಳೇ ಪಡೆದಿದ್ದು ವಿಶೇಷವಾಗಿತ್ತು. ಭಾರತದ ಪರ ಟಿ ಟ್ವಿಂಟಿ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಎಲ್ಲ ವಿಕೆಟ್‌ ಗಳನ್ನು ವೇಗದ ಬೌಲರ್‌ ಗಳೇ ಪಡೆದರು.

ಪಾಕಿಸ್ತಾನ ಪೇರಿಸಿದ 147 ರನ್‌ ಗಳ ಸಾಮಾನ್ಯ ಮೊತ್ತವನ್ನು ಬೆನ್ನೆತ್ತಿದ್ದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ತಂಡದ ಉಪನಾಯಕ ಕೆ.ಎಲ್.ರಾಹುಲ್‌ ತಾವು ಎದುರಿಸಿದ ಮೊದಲ ಎಸೆತದಲ್ಲೇ ಬೌಲ್ಡ್‌ ಆಗಿ ಪೆವಿಲಿಯನ್‌ ಗೆ ಮರಳಿದರು. ಚೊಚ್ಚಲ ಟಿ ಟ್ವಿಂಟಿ ಪಂದ್ಯ ಆಡಿದ ನಸೀಮ್‌ ಶಾ ತಾವು ಎಸೆದ ಮೊದಲ ಓವರ್‌ ನಲ್ಲೇ ವಿಕೆಟ್‌ ಪಡೆದು ಸಂಭ್ರಮಿಸಿದರು.

ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಭಾರತದ ಇನ್ನಿಂಗ್ಸ್‌ ಕಟ್ಟಲು ಶ್ರಮಿಸಿದರಾದರೂ, ರೋಹಿತ್‌ ಶರ್ಮ ಸ್ಪಿನ್ನರ್‌ ನವಾಜ್‌ ಎಸೆತದಲ್ಲಿ ದೊಡ್ಡ ಹೊಡೆತ ಬಾರಿಸಲು ಹೋಗಿ ಇಫ್ತಿಕಾರ್‌ ಅವರಿಗೆ ಕ್ಯಾಚಿತ್ತು ಔಟಾದರು. ನಾಯಕ ರೋಹಿತ್‌ 18 ಚೆಂಡುಗಳಲ್ಲಿ ಕೇವಲ 12 ರನ್‌ ಗಳಿಸಲು ಶಕ್ತರಾದರು. ಇನ್ನೊಂದೆಡೆ ತಾಳ್ಮೆಯ ಆಟವಾಡಿದ ವಿರಾಟ್‌ ಕೊಹ್ಲಿ 34 ಎಸೆತಗಳಲ್ಲಿ 35 ರನ್‌ ಗಳಿಸಿ, ನವಾಜ್‌ ಅವರ ಬೌಲಿಂಗ್‌ ನಲ್ಲೇ ಇಫ್ತಿಕಾರ್‌ ಅವರಿಗೆ ಕ್ಯಾಚಿತ್ತು ಔಟಾದರು.

ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಡ್ತಿ ಪಡೆದು ಆಡಲು ಬಂದ ರವೀಂದ್ರ ಜಡೇಜಾ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿ ಇರಿಸಿದ್ದಲ್ಲದೆ, 29 ಎಸೆತಗಳಲ್ಲಿ 35 ರನ್‌ ಗಳಿಸಿದರು. ಕೊನೆಯ ಓವರ್‌ ನಲ್ಲಿ ಗೆಲುವಿಗೆ ಏಳು ರನ್‌ ಗಳು ಬೇಕಾಗಿದ್ದಾಗ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಲ್ಡ್‌ ಆದರು.

ಪಂದ್ಯದ ಹೀರೋ ಹಾರ್ದಿಕ್‌ ಪಾಂಡ್ಯ ಒತ್ತಡದ ಸ್ಥಿತಿಯಲ್ಲಿ ಬ್ಯಾಟ್‌ ಬೀಸಿ ಕೇವಲ 17 ಎಸೆತಗಳಲ್ಲಿ 33 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಹೊಸ ದಾಖಲೆ ನಿರ್ಮಿಸಿದ ಧವನ್‌ ಪಡೆ: ವೆಸ್ಟ್‌ ಇಂಡೀಸ್‌ ʼಕ್ಲೀನ್‌ ಸ್ವೀಪ್‌ ʼ
ಪೋರ್ಟ್ ಆಫ್ ಸ್ಪೇನ್: ಏಕದಿನ ಕ್ರಿಕೆಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ದ 3-0 ಅಂತರದ ಕ್ಲೀನ್‌ಸ್ವೀಪ್ ಜಯಸಾಧಿಸಿದ ಭಾರತೀಯ ಕ್ರಿಕೆಟ್‌ ತಂಡ.

ಮಳೆ ಬಾಧಿತ ಅಂತಿಮ ಏಕದಿನ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ 119 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.1983ರಲ್ಲಿ ಕೆರಿಬಿಯನ್ನರ ನೆಲದಲ್ಲಿ ದ್ವಿಪಕ್ಷೀಯ ಏಕದಿನ ಸರಣಿಯನ್ನು ಆಡಲು ಪ್ರಾರಂಭಿಸಿದ ನಂತರ ಇಲ್ಲಿಯವರೆಗೂ ಸರಣಿಯನ್ನು ಕ್ಲೀನ್‌ ಸ್ವೀಪ್ ಮಾಡಲು ಭಾರತ ತಂಡಕ್ಕೆ ಸಾಧ್ಯವಾಗಿರಲಿಲ್ಲ, ಆದರೆ ಈಗ ಧವನ್ ಪಡೆ ಅದನ್ನು ಸಾಧಿಸಿದ್ದು, ಭರ್ಜರಿಯಾಗಿ ಗೆಲ್ಲುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಟೀಮ್‌ ಇಂಡಿಯಾಗೆ ಮಳೆ ಅಡ್ಡಿಪಡಿಸಿತ್ತು, ಹಾಗಾಗಿ ಮೊದಲು ಪಂದ್ಯವನ್ನು 40 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಭಾರತ 36 ಓವರ್ ಪೂರೈಸಿದ್ದಾಗ ಪುನಃ ಮಳೆ ಬಂದ ಕಾರಣ ಪಂದ್ಯವನ್ನು ಅಷ್ಟಕ್ಕೆ ಸೀಮಿತಗೊಳಿಸಲಾಯಿತು. ಆಗ 98 ರನ್ ಗಳಿಸಿದ್ದ ಶುಭ್‌ಮನ್ ಗಿಲ್ ಮಳೆಯಿಂದಾಗಿ ಶತಕಗಳಿಸುವುದರಿಂದ ವಂಚಿತರಾದರು. ಗಿಲ್, ಧವನ್, ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 36 ಓವರ್ ಗಳಲ್ಲಿ 225 ರನ್ ಗಳಿಸಿತು.ನಂತರ ಇನ್ನಿಂಗ್ಸ್‌ ಅಷ್ಟಕ್ಕೆ ಅಂತ್ಯಗೊಂಡಿತು.

ಡಿಎಲ್‌ಎಸ್‌ ನಿಯಮದಂತೆ ವೆಸ್ಟ್‌ ಇಂಡೀಸ್ ತಂಡ ಗೆಲುವಿಗಾಗಿ 35 ಓವರ್ ಗಳಲ್ಲಿ 257 ರನ್‌ ಗಳಿಸಬೇಕಾಗಿತ್ತು. ಆದರೆ ಭಾರತದ ಬೌಲಿಂಗ್ ದಾಳಿಗೆ ಬೆದರಿದ ವೆಸ್ಟ್ ಇಂಡೀಸ್ 137 ರನ್ ಗಳಿಸಿ ಆಲೌಟ್‌ ಆಯಿತು. ಯುಜುವೇಂದ್ರ ಚಾಹಲ್ ನಾಲ್ಕು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಹಾಗಾಗಿ ಸರಣಿಯ ಕೊನೆ ಪಂದ್ಯವನ್ನು 119 ರನ್‌ಗಳ ಭಾರಿ ಅಂತರದಿಂದ ಗೆದ್ದ ಟೀಮ್ ಇಂಡಿಯಾ ಹೊಸ ದಾಖಲೆ ನಿರ್ಮಿಸಿದೆ.ಈ ಮೂಲಕ ಶುಭಮನ್ ಗಿಲ್ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾದರು.